Wednesday, October 19, 2011



ಗಣಿ ಪ್ರದೇಶದ ಗ್ರಾಮಸ್ಥರಿಂದ ತಲಸ್ಪಶರ್ಿ ಮಾಹಿತಿ ಪಡೆದ ಸಿ.ಇ.ಸಿ ತಂಡಚಿಕ್ಕನಾಯಕನಹಳ್ಳಿ,ಅ.19: ಗಣಿಗಾರಿಕೆ ನಡೆಯ ಬೇಕೋ, ಬೇಡವೋ ಎಂಬ ಪ್ರಶ್ನೆಗೆ ಹಲವರು ಬೇಡವೇ ಬೇಡ ಎಂದರೆ, ಕೆಲವು ಜನ ಗ್ರಾಮಸ್ಥರು ದೊಡ್ಡ ಗಾತ್ರದ ಯಂತ್ರಗಳನ್ನು ಬಳಸಿಕೊಂಡು ಗಣಿಗಾರಿಕೆ ನಡೆಸುವುದಾದರೇ ಬೇಡ. ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ಗಣಿ ಪರವಾನಿಗೆ ನೀಡುವ ಸಂದರ್ಭದಲ್ಲಿ ವಿಧಿಸಿರುವ ನಿಯಮಗಳಂತೆ ನಡೆಯುವುದಾದರೆ ಗಣಿಗಾರಿಕೆ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಗಣಿ ಪ್ರದೇಶಗಳಿಗೆ ಸುಪ್ರಿಂ ಕೋಟರ್್ನ ನಿದರ್ೇಶನದ ಮೇರಿಗೆ ನೇಮಕಕೊಂಡಿರುವ ಸಿ.ಇ.ಸಿ.ತಂಡದ ತಜ್ಞರಾದ ಡಾ.ಅರುಣ ಕುಮಾರ್, ಡಾ.ಸೋಮಶೇಖರ್ ಗ್ರಾಮಸ್ಥರೊಮದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಜನರು ವ್ಯಕ್ತಪಡಿಸದ ಮುಖ್ಯ ಅಭಿಪ್ರಾಯವಿದು. ಗಣಿ ಪ್ರದೇಶದ ಗ್ರಾಮವಾದ ಹೊನ್ನೆಬಾಗಿ, ಗೊಲ್ಲರಹಳ್ಳಿ ಹಾಗೂ ಬುಳ್ಳೇನಹಳ್ಳಿ ಗ್ರಾಮಸ್ಥರಗಳೊಂದಿಗೆ ಸಂವಾದ ನಡೆಸಿದ ಸಿ.ಇ.ಸಿ. ತಂಡ ಈ ಭಾಗದ ಜನರ ಸಮಾಜೋಆಥರ್ಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿತು. ಈ ಸಂದರ್ಭದಲ್ಲಿ ತಜ್ಞರು ಗ್ರಾಮಸ್ಥರಗಳೊಂದಿಗೆ ಮಾತನಾಡಿ, ಇಲ್ಲಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಯುವ ಮೊದಲು ಇಲ್ಲಿನ ಹೊಲಗಳಲ್ಲಿ ಆಹಾರ ಧಾನ್ಯಗಳ ಇಳುವರಿ ಎಕರೆಗೆ ಎಷ್ಟಿತ್ತು, ಈಗ ಎಷ್ಟಿದೆ, ಒಂದು ಎಕರೆ ತೋಟದಲ್ಲಿ ಮೊದಲು ಬೀಳುತ್ತಿದ್ದ ತೆಂಗಿನ ಕಾಯಿಗಳೆಷ್ಟು, ಅಡಿಕೆ ಇಳುವರಿಗಳೆಷ್ಟು, ಈಗ ಎಷ್ಟಿದೆ, ಜನರ ಆರೋಗ್ಯದ ಮೇಲೆ ಗಣಿಗಾರಿಕೆ ಯಾವ ರೀತಿಯ ದುಷ್ಪರಿಣಾಮ ಬೀರಿದೆ, ಜಾನುವಾರಗಳ ಆರೋಗ್ಯದ ಮೇಲೆ ಯಾವ ಪ್ರಮಾಣದಲ್ಲಿ ಕೇಡುವುಂಟು ಮಾಡಿದೆ, ಅಂತರ್ಜಲ ಎಷ್ಟು ಕುಸಿದಿದೆ, ಬ್ಲಾಸ್ಟಿಂಗ್ನಿಂದ ಆಗಿರುವ ಅನಾಹುತಗಳೇನು ಎಂಬ ಹಲವು ರೀತಿಯ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಗ್ರಾಮಸ್ಥರಿಗೆ ಪ್ರಶ್ನೆಗಳನ್ನು ಕೇಳಿ ತಲ ಸ್ಪಶರ್ಿ ವಿವರಗಳನ್ನು ಪಡೆದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮಸ್ಥರು ತಾವು ಕುಡಿಯುತ್ತಿರುವ ನೀರಿನ ಗುಣ ಮಟ್ಟವನ್ನು ತೋರಿಸಿದರಲ್ಲದೆ, ತಮಗಾಗಿರುವ ಚರ್ಮ ರೋಗದ ಬಗ್ಗೆ, ಹೃದ್ರೋಗ, ಉಬ್ಬಸ ಮುಂತಾದ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಜ್ಞರೊಂದಿಗೆ ತೋಟಗಾರಿಕೆ ಇಲಾಖೆಯ ಉಪ ನಿದೇರ್ಶಕ ಪ್ರಸಾದ್, ಸಹಾಯಕ ನಿದೇರ್ಶಕ ರೇಣುಕ ಪ್ರಸಾದ್, ತಹಶೀಲ್ದಾರ್ ಎನ್.ಆರ್. ಉಮೇಶ ಚಂದ್ರ, ಪಿ.ಎಸೈ. ಚಿದಾನಂದ ಮೂತರ್ಿ ಹಾಜರಿದ್ದರು.ಬಾಕ್ಸ್:1ಸಿ.ಇ.ಸಿ ತಂಡ ಗುರುವಾರ ಗಣಿ ಪ್ರದೇಶದ ಉಳಿದ ಗ್ರಾಮಗಳಾದ ಗೋಡೆಕೆರೆ, ಸೊಂಡೇನಹಳ್ಳಿ, ಸೋಮನಹಳ್ಳಿ, ನಡುವನಹಳ್ಳಿ, ಬಗ್ಗನಹಳ್ಳಿ ಭಾಗದ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.ಮಾಹಿತಿಯ ಕೊರತೆ: ಸಿ.ಇ.ಸಿ.ತಂಡ ಗಣಿ ಪ್ರದೇಶಗಳಿಗೆ ಆಗಮಿಸಿ ಜನರಿಂದ ಮಾಹಿತಿ ಪಡೆಯುತ್ತದೆ ಎಂಬು ವಿಷಯ ತಿಳಿದಿತ್ತು ಆದರೆ ಬುಧವಾರವೇ ಹೊನ್ನೆಬಾಗಿ ಭಾಗದ ಹಳ್ಳಿಗಳಿಗೆ ಆಗಮಿಸುತ್ತದೆ ಎಂಬ ಮಾಹಿತಿ ತಮಗೆ ತಿಳಿದಿರಲಿಲ್ಲವೆಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದರು.

No comments:

Post a Comment