Thursday, November 3, 2011


ರಾಜ್ಯದ ಅಭಿವೃದ್ದಿಗೆ ಸಿ.ಎಂ.ಸದಾನಂದಗೌಡ ಒತ್ತು ನೀಡದಿದ್ದರೆ ಅವರ ಮೇಲೂ ತಿರುಗಿ ಬೀಳುತ್ತೇನೆ: ಎಚ್.ಡಿ.ಕೆ.
ಚಿಕ್ಕನಾಯಕನಹಳ್ಳಿ,ನ.02 : ವೇದಿಕೆ ಹಾಗೂ ಮಾಧ್ಯಮಗಳಲ್ಲಿ ನಾನು ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ದಿಗೆ ಮುಂದಾಗದಿದ್ದರೆ ಮುಖ್ಯಮಂತ್ರಿ ಸದಾನಂದಗೌಡರ ಮೇಲೂ ಜೆ.ಡಿ.ಎಸ್ ಪಕ್ಷ ತಿರುಗಿ ಬೀಳುತ್ತದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಎಚ್ಚರಿಸಿದ್ದಾರೆ.
ತಾಲ್ಲೂಕಿನ ಕಾಮಲಾಪುರದಲ್ಲಿ ನಡೆದ ಸಕರ್ಾರಿ ಪ್ರಾಥಮಿಕ ಪಾಠಶಾಲೆ ಹಾಗೂ ಸಕರ್ಾರಿ ಪ್ರೌಡಶಾಲಾ ಕಟ್ಟಡಗಳ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,  ಹಣ ಲೂಟಿ ಮಾಡುವವರು ಹಾಗೂ ಅನುಭವವಿಲ್ಲದವರು ರಾಜ್ಯದ ರಾಜಕಾರಣದ ಚುಕ್ಕಾಣಿ ಹಿಡಿದು ಅಭಿವೃದ್ದಿಯನ್ನು ಮರೆತಿದ್ದಾರೆ. ಪ್ರತಿಯೊಬ್ಬರಿಗೆ ಅಗತ್ಯವಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದೆ ಲೋಡ್ ಶೆಡ್ಡಿಂಗ್ ಹೆಚ್ಚಿಸಿದ್ದಾರೆ. ನಾನು ಮುಖ್ಯಮಂತ್ರಿಯಾದ 20 ತಿಂಗಳಲ್ಲಿ ಯಾವ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಆಗಿರಲಿಲ್ಲ,  ಈಗಿನ ಬಿಜೆಪಿ ಸಕರ್ಾರ  ರಾಯಚೂರಿನಲ್ಲಿರುವ 8 ವಿದ್ಯುತ್ ಶಕ್ತಿ ಘಟಕಗಳಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ಜನತೆಯ 800 ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ ಎಂದರಲ್ಲದೆ,  ಅನುಭವವಿಲ್ಲದವರಿಗೆ ರಾಜ್ಯದ ಅಭಿವೃದ್ದಿ ಹೇಗೆ ಮಾಡಬೇಕೆಂಬುದನ್ನು ಕೇವಲ ಐದು ವರ್ಷಗಳಲ್ಲಿ ಸಾಬೀತುಪಡಿಸುತ್ತೇನೆ, ಇಲ್ಲವಾದರೆ ರಾಷ್ಟ್ರ ರಾಜಕಾರಣದಲ್ಲಿ  ಒಂದು ಕ್ಷಣವೂ ಸಹ ಮುಂದುವರೆಯುವುದಿಲ್ಲ ಎಂದು ಸವಾಲು ಹಾಕಿದ ಅವರು ಗ್ರಾಮಗಳ ಸುವರ್ಣ ಗ್ರಾಮೋದಯಕ್ಕಾಗಿ ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಆಲಿಸಿ ಭಾಗ್ಯಲಕ್ಷ್ಮೀ ಯೋಜನೆಗಳಂತಹವುಗಳನ್ನು ಜಾರಿಗೊಳಿಸದೆ ಆದರೆ ನಾನು ತಂದ ಯೋಜನೆಗಳಿಗೆ ಬಿಜೆಪಿ ಸಕರ್ಾರ ಅಡೆತಡೆಯೊಡ್ಡುತ್ತಿದೆ, ಭಾಗ್ಯಲಕ್ಷ್ಮೀ ಯೋಜನೆಗಳಲ್ಲಿ ಪ್ರತಿಯೊಬ್ಬರಿಗೂ ಯಾವ ನಿಬಂಧನೆಗಳಿಲ್ಲದೆ ಇದರ ಪಲಾಪೇಕ್ಷೇ ನೀಡಿದೆ ಎಂದರು.
 ಬಿಜೆಪಿ ಸಕರ್ಾರ ಈ ಯೋಜನೆ ಪಡೆಯಲು  ಎಸ್.ಎಸ್ಎಲ್.ಸಿ ಅಂಕಪಟ್ಟಿ, ಬಿ.ಪಿ.ಎಲ್ ರೇಷನ್ ಕಾಡರ್್ಗಳನ್ನು ಹೊಂದಿರಲೇಬೇಕೆಂಬ ನಿಯಮ ಜಾರಿಗೊಳಿಸಿದೆ ಇದೇ ರೀತಿ ನಾನು ಜಾರಿಗೊಳಿಸಿದ ಹಲವಾರು ಯೋಜನೆಗಳಿಗೆ ತಡೆಯೊಡ್ಡುತ್ತಿದೆ ಎಂದ ಅವರು ಯಡಿಯೂರಪ್ಪನವರನ್ನು  ಬಂಧಿಸಿದಾಗ ನಾನು ಮರುಕಪಟ್ಟಿದ್ದನ್ನು ಮಾಧ್ಯಮಗಳು ಯಡಿಯೂರಪ್ಪನವರ ಜೊತೆ ಒಂದಾಗಲು ವೇದಿಕೆ ಸಿದ್ದವಾಗುತ್ತಿದೆ ಎಂಬಂತಹ ವರದಿಗಳು ಮೂಡಿಸಿದವು,  ಯಡಿಯೂರಪ್ಪನವರ ಜೊತೆ ಯಾವುದೇ ಕಾರಣಕ್ಕೂ ಒಂದಾಗಿ ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ, ನನ್ನ ಬಗ್ಗೆ ಇದ್ದ ಅನುಮಾನಗಳಿಗೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವ ಮೂಲಕವೇ ನಾನು ನಿದರ್ೋಷಿ ಎಂದು ಸಾಬೀತು ಪಡಿಸಿದ್ದೆ ಆದರೆ ಅದಕ್ಕೆ ನ್ಯಾಯಾಲಯದ ತೀಪರ್ು ಬರುವವರೆಗೂ ಕಾಯಬೇಕಾಯಿತು ನಾನು ಮತ್ತು ನನ್ನ ಕುಟುಂಬದವರು ಎಂದಿಗೂ ಸಹ ರಾಜ್ಯದ ಜನತೆಗೆ ಮೋಸ ಮಾಡಿಲ್ಲ ರಾಜ್ಯಕ್ಕೆ ಹಾಗೂ ರಾಜ್ಯದ ಜನತೆಗೆ ಮೋಸ ಮಾಡುತ್ತಿರುವವರು ಬಿಜೆಪಿ ಸಕರ್ಾರ ಎಂದು ಕಿಡಿಕಾರಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ಕುಮಾರಣ್ಣನವರು 20 ತಿಂಗಳ ತಮ್ಮ ಮುಖ್ಯಮಂತ್ರಿ ಅಧಿಕಾರದ ಅವಧಿಯಲ್ಲಿ ಸಾಮಾನ್ಯರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ ದಿನದ 24 ಗಂಟೆಯೂ ಜನಸಾಮಾನ್ಯರಲ್ಲಿ ಬೆರತು ಕಾರ್ಯನಿರ್ವಹಿಸುತ್ತಿದ್ದರು ಎಂದರು.
ಸಮಾರಂಭದಲ್ಲಿ ಜಿ.ಪಂ.ಅಧ್ಯಕ್ಷ ಡಾ.ರವಿ ನಾಗರಾಜಯ್ಯ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ,  ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ,ತಾ.ಪಂ.ಉಪಾಧ್ಯಕ್ಷೆ  ಬಿಬಿ ಪಾತೀಮ, ತಾ.ಪಂ.ಸದಸ್ಯೆ ಲತಾ, ಉಪಸ್ಥಿತರಿದ್ದರು 

No comments:

Post a Comment