Thursday, November 3, 2011


ಕೊಳಚೆ ನೀರನ್ನು ಜನರಿಗೆ ಕುಡಿಸುತ್ತಿರುವ ಪುರಸಭೆಯವರ ವಿರುದ್ದ ಕ.ರ.ವೇ.ಹೋರಾಟ

ಚಿಕ್ಕನಾಯಕನಹಳ್ಳಿ,ನ.03 : ಜೋಗಿಹಳ್ಳಿ ಗೇಟ್ನ 2ನೇ ವಾಡರ್್ ಹಳ್ಳದಲ್ಲಿ ಪಟ್ಟಣದ ತ್ಯಾಜ್ಯ ವಿಲೇವಾರಿಗಳನ್ನು ಹಾಕುವುದರಿಂದ ಹಳ್ಳದ ನೀರಿನ ಜೊತೆಗೆ ಅಲ್ಲಿನ ತ್ಯಾಜ್ಯ ವಿಲೇವಾರಿ, ಸತ್ತ ಪ್ರಾಣಿಗಳು, ಹಾಗೂ ಮಲಿನಕಾರಿ ವಸ್ತುಗಳು ಹಳ್ಳದ ನೀರಿನಲ್ಲಿ ಸೇರಿ ಪಟ್ಟಣದ ಕೆರೆಗೆ ವಿಲೀನಗೊಳ್ಳುತ್ತಿದೆ , ಪಟ್ಟಣದ ಜನತೆ ಈ ನೀರನ್ನೇ ಕುಡಿಯಲು ಬಳಸುವುದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ ಇದರ ಬಗ್ಗೆ ಪುರಸಭೆ ಶೀಘ್ರ ಗಮನ ಹರಿಸಬೇಕೆಂದು ಕನರ್ಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪರವರಿಗೆ ಮನವಿ ಕೊಟ್ಟು ಮಾತನಾಡಿದ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭೆಯವರು ಪಟ್ಟಣದ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಊರಿನಿಂದ ಹೊರಕ್ಕೆ ಹಾಕುವ ಕಡೆಗೆ ಗಮನಹರಿಸಬೇಕು.  ಸುತ್ತಮುತ್ತಲಿನ ಚರಂಡಿಯ ನೀರು ಹರಿದು ಕೆರೆಯನ್ನು ಸೇರುತ್ತಿದೆ ಹಾಗೂ ಕೆರೆಯ ಸಮೀಪದಲ್ಲೇ ಪಟ್ಟಣದ ಕಸದ ರಾಶಿಗಳಿದ್ದು ಅವುಗಳು ಮಳೆಯ ಜೊತೆ ಹರಿದು ಕೆರೆಗೆ ಸೇರಿ ಕೆರೆಯ ನೀರು ಮಲಿನಗೊಳ್ಳುತ್ತಿದೆ ಇದರಿಂದ ಮಾನವನ ಆರೋಗ್ಯಕ್ಕೆ ಹಾನಿಕಾರವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಇದರ ಬಗ್ಗೆ ಪುರಸಭೆ ಗಮನಹರಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದ ಅವರು,   ಪಟ್ಟಣದ ಹೃದಯಭಾಗವಾದ ನೆಹರು ವೃತ್ತದಲ್ಲಿ ಪ್ರಯಾಣಿಕರು ಹಾಗೂ ಯಾತ್ರಿಕರು ಸದಾ ತಿರುಗಾಡುವ ಪ್ರದೇಶ ಇಲ್ಲಿನ ಸ್ವಚ್ಛತೆಯ ದೃಷ್ಠಿಯಿಂದ ಸಾರ್ವಜನಿಕ ಶೌಚಾಲಯ ನಿಮರ್ಿಸುವುದು ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ನಂಜುಂಡಪ್ಪ, ವಿಶ್ವನಾಥ್, ಸಿ.ಎಚ್.ರೂಪೇಶ್, ಗಿರೀಶ್, ನಾಗರಾಜು, ಭಾಸ್ಕರ್, ಸುಬ್ರಹ್ಮಣ್ಯ(ಸುಪ್ರೀಂ), ಮನ್ಸರ್ಪಾಷ, ನವೀನ್, ಎಸ್.ಆರ್.ಉಮೇಶ್, ಜಾಕಿರ್, ಮಧು ಹಾಜರಿದ್ದರು.

ಕನ್ನಡ ತನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳವಂತೆ-ಕರೆ.
ಚಿಕ್ಕನಾಯಕನಹಳ್ಳಿ,ನ.03 ; ಕನ್ನಡ ಭಾಷೆ ಬೆಳೆಗುವ ದಿಸೆಯಲ್ಲಿ ಕನ್ನಡದ ಭವ್ಯ ಪರಂಪರೆ ಉಳಿಸಲು ಎಲ್ಲಾ ಹಂತಗಳಲ್ಲಿ ಕನ್ನಡತನವನ್ನು ವಿಜೃಂಬಿಸಬೇಕೆಂದು ತಹಶೀಲ್ದಾರ್ ಎನ್.ಆರ್. ಉಮೇಶ್ಚಂದ್ರ ಕರೆ ನೀಡಿದರು.
ಅವರು ತಾಲೂಕು ಕ್ರೀಡಾಂಗಣದಲ್ಲಿ 56ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಧ್ವಜಾ ರೋಹಣ ನೆರವೇರಿಸಿ ಮಾತನಾಡಿ, ಕನ್ನಡನಾಡಿನ ನೆಲ, ಜಲ, ಪುಣ್ಯಭೂಮಿ, ಇಲ್ಲಿ ಬೆಲೆಬಾಳುವ ನೈಸಗರ್ಿಕ ಸಂಪತ್ತನ್ನು ಹೊಂದಿದೆ.  ಐತಿಹಾಸಿಕ ಸ್ಥಳಗಳನ್ನು,   ಸಾಹಿತ್ಯ ಪರಂಪರೆಯನ್ನು ಹೊಂದಿರುವ ನಾಡು ಎಂದರು.
  ವಚನ ಸಾಹಿತ್ಯ, ದಾಸ ಸಾಹಿತ್ಯ ನಮ್ಮ ಸಾಹಿತ್ಯದ ಮೇರು ಕೃತಿಗಳಾದರೆ,  8 ಜ್ಞಾನ ಪೀಠ ಪ್ರಶಸ್ತಿ ಪಡೆಯುವಲ್ಲಿ ಕನ್ನಡ ನಾಡಿನ ಭವ್ಯ ಸಂಸ್ಕೃತಿ ಸರ್ವಶ್ರೇಷ್ಠವಾದದ್ದು ಕನ್ನಡತನ ಉಳಿಸಲು ಪ್ರತಿ ನಾಗರೀಕರು ಸಹಕರಿಸುವಂತೆ ಮನವಿ ಮಾಡಿದರು.
 ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಕನ್ನಡ ಭಾಷೆ ಅತ್ಯಂತ ಸರಳ ಸಮೃದ್ದವೂ ಅಗಿದ್ದು ಇಂತಹ  ಭಾಷೆಯನ್ನು ನಮ್ಮ ಉಸಿರು ಎಂದು ಬಾವಿಸಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
 ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಾಗದೆ ಕುವೆಂಪು ಹೇಳಿದಂತೆ ಬಾರಿಸು ಕನ್ನಡ ಡಿಂ ಡಿಂಮವ  ಓ ಕನರ್ಾಟಕ ಹೃದಯಶಿವಾ ಎಂಬಂತೆ ಪ್ರತಿ ಜನಮನರ ಹೃದಯದಲ್ಲಿ ಕನ್ನಡ ತನ ಬೆಳೆಸಿ ಕಟ್ಟುವ ಕಾರ್ಯ ನಡೆಯಬೇಕು ಎಂದರು.
 ಶಾಸಕ ಸಿ.ಬಿ. ಸುರೇಶ್ ಬಾಬು ಸಮಾರಂಭದಾಧ್ಯಕ್ಷತೆ ವಹಿಸಿ ಮಾತನಾಡುತ್ತ ಕನ್ನಡ ಭಾಷೆ ಅತ್ಯಂತ ಶೇಷ್ಠವಾಗಿದ್ದು ಸುಲಭವಾಗಿ ಕಲಿಯ ಬಲ್ಲ ಸರಳ ಭಾಷೆ ಇದಾಗಿದೆ. ನಮ್ಮ ನಾಡಗುಡಿ ಕಟ್ಟುವ ಕೆಲಸದಲ್ಲಿ ಬಾಗಿಯಾಗಿರುವ ಹಿರಿಯ ಚೇತನಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಯುವ ಕೆಲಸದಲ್ಲಿ ಶ್ರೀಮಂತಗೊಳಿಸಬೇಕಾಗಿದ್ದು ಯಾರಲ್ಲೂ ಕೀಳಿರಿಮೆಯ ಮನೋಭಾವ ಬೆಳೆಯದ ರೀತಿಯಲ್ಲಿ ಮಾತೃ ಭಾಷೆಯ ಬಗ್ಗೆ ಮನದಂಗದಲ್ಲಿ  ಸಾರ್ವಭೌಮ ಭಾಷೆಯಾಗಿ ವಿಜೃಂಬಿಸುವಂತೆ ಕರೆ ನೀಡಿದರು. 
ಈ ಸಂದರ್ಭದ್ಲಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.  ಸಮಾರಂಭದಲ್ಲಿ ಜಿ.ಪಂ. ಸದಸ್ಯ ಲೋಹಿತಾಬಾಯಿ, ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ ಉಪಸ್ಥಿತರಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಸ್ವಾಗತಿಸಿದರು ತಿಮ್ಮರಾಜು ವಂದಿಸಿದರು.
ಇಂದು ಪುಟ್ಟರಾಜ ಗಾವಾಯಿ ಶಿಷ್ಯವೃಂದದವರಿಂದ ಸುಗಮ ಸಂಗೀತ ಕಾರ್ಯಕ್ರ
ಚಿಕ್ಕನಾಯಕನಹಳ್ಳಿ,ನ.03 : ಶ್ರೀ ಪುಟ್ಟರಾಜು ಗಾವಾಯಿರವರ ಶಿಷ್ಯವೃಂದದವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ 56ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಂದು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.   ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಲಿದ್ದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಕನ್ನಡ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಸಿಪಿಐ ಕೆ.ಪ್ರಭಾಕರ್, ಟಿ.ಎ.ಪಿ.ಸಿ.ಎಂ.ಎಸ್ ನಿದರ್ೇಶಕ ಹೆಚ್.ಬಿ.ಪ್ರಕಾಶ್ ಉಪಸ್ಥಿತರಿರುವರು.  





No comments:

Post a Comment