Tuesday, April 27, 2010

ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನೆ ಮನಜ: ಡಾ.ಹಮೀದ್

ಚಿಕ್ಕನಾಯಕನಹಳ್ಳಿ,ಏ.27: ಪ್ರತಿಯೊಬ್ಬ ವ್ಯಕ್ತಿಯು ತಪ್ಪು ಮಾಡುವುದು ಸಹಜ ಆದರೆ ಅದನ್ನು ಸರಿಪಡಿಸಿ ತಿದ್ದಿ ಬಾಳುವುದು ಮುಖ್ಯ ಎಂದು ಶಿಕ್ಷಣ ತಜ್ಞ ಡಾ.ಅಬ್ದುಲ್ ಹಮೀದ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಪದವಿ ಎಂಬುದು ವಿದ್ಯಾಥರ್ಿಗಳ ಮುಂದಿನ ಭವಿಷ್ಯದ ಜವಾಬ್ದಾರಿಯುತ ಜೀವನಕ್ಕೆ ಸಂಕೇತವಾಗಿದ್ದು ಇದರಿಂದ ನಿಮ್ಮ ದಾರಿದೀಪವನ್ನು ನೀವೆ ಬೆಳಗಿಸಬೇಕು ಎಂದ ಅವರು, ಜಗತ್ತು ಪರಿವರ್ತನೆಯುಳ್ಳದ್ದು ಆ ಪರಿವರ್ತನೆಗೆ ತಕ್ಕಂತೆ ನಾವು ಬಾಳುವುದು ಮಖ್ಯ, ಇಲ್ಲದಿದ್ದರೆ ಜಗತ್ತಿನಲ್ಲಿ ಹಲವು ವಿಸ್ಮಯಗಳು ಸಂಭವಿಸಿ ಜೀವಿಗಳು ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಪ್ರತಿಯೊಂದು ಭಾಷೆಗೂ ಒಂದು ಸಂಸ್ಕೃತಿಯಿದೆ ಅದನ್ನು ನಾವು ನಮ್ಮ ತನವನ್ನು ಬಿಡದೆ ಉಳಿಸಿಕೊಳ್ಳಬೇಕು ಮತ್ತು ಎಲ್ಲಾ ಭಾಷೆಗಳ ತಿಳಿದುಕೊಂಡು ಅದರಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ, ಆ ಜ್ಞಾನಕ್ಕೆ ಶ್ರದ್ದೆಯಿದ್ದು ಏಕಾಗ್ರತೆಯಿಂದ ಕಲಿತರೆ ಮಾತ್ರ ಎಂತಹ ಪರಿಸ್ಥಿತಿಯನ್ನು ಎದುರಿಸಬಹುದು ಎಂದ ಅವರು, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಬೆಳಗಿಸಿದೆ, ಅದಕ್ಕೆ ವಿಶ್ವದಲ್ಲಿ ಭಾರತವನ್ನು ಬಹಳ ಎತ್ತರದಲ್ಲಿ ಗುರುತಿಸಿದ್ದು ಮುಂದೆ ಪ್ರತಿ ಕ್ಷೇತ್ರದಲ್ಲೂ ಭಾರತ ಮೊದಲ ಸ್ಥಾನಪಡೆಯುವಂತೆ ಮಾಡುವ ಹೊಣೆಗಾರಿಕೆ ಯುವಶಕ್ತಿಗಳ ಮೇಲಿದೆ ಎಂದರು.
ಸಮಾರಂಭದಲ್ಲಿ ರೋಟರಿ ಟ್ರಸ್ ಕಾರ್ಯದಶರ್ಿ ಎಸ್.ಎ.ನಭಿ, ಪ್ರಾಂಶುಪಾಲ ಎ.ಎನ್.ವಿಶ್ವಶ್ವೇರಯ್ಯ ಉಪಸ್ಥಿತರಿದ್ದರು.
ಅನುಮತಿ ಇಲ್ಲದೆ ಶಿಕ್ಷಕರು ಕಾರ್ಯಸ್ಥಾನ ಬಿಡುವಂತಿಲ್ಲ: ಬಿ.ಇ.ಓ
ಚಿಕ್ಕನಾಯಕನಹಳ್ಳಿ,ಏ.27: ಗ್ರಾಮ ಪಂಚಾಯಿತಿ ಚುನಾವಣೆಗೆ ನೇಮಕಗೊಂಡಿರುವ ಶಿಕ್ಷಕರುಗಳಿಗೆ ಚುನಾವಣಾ ಕಾಯರ್ಾದೇಶವನ್ನು ವಿತರಣೆ ಮಾಡಲು ಹೋದಾಗ ಸಂಬಂದಿಸಿದ ಶಿಕ್ಷಕರು ಕೇಂದ್ರ ಕಾರ್ಯಸ್ಥಾನದಲ್ಲಿರುವುದು ಖಡ್ಡಾಯ ಎಂದು ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಸ್ಪಷ್ಟ ಆದೇಶವನ್ನು ಹೊರಡಿಸಿರುವ ಬಿ.ಇ.ಓ.ರವರು ಗ್ರಾ.ಪಂ.ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಎಲ್ಲಾ ಶಿಕ್ಷಕರು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯದೇ ಕೇಂದ್ರ ಕಾರ್ಯಸ್ಥಾನವನ್ನು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಒಂದು ವೇಳೆ ಕಾರ್ಯಸ್ಥಾನದಲ್ಲಿ ಇಲ್ಲದೇ ಚುನಾವಣಾ ಕಾಯರ್ಾದೇಶ ಸ್ವೀಕರಿಸದೇ ಚುನಾವಣಾ ಕಾರ್ಯಕ್ಕೆ ಗೈರುಹಾಜರಾದಲ್ಲಿ ಅಂತಹ ಶಿಕ್ಷಕರ ವಿರುದ್ದ ನಿದರ್ಾಕ್ಷಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಬಿ.ಇ.ಓ ತಿಳಿಸಿದ್ದಾರೆ.
ಅಕ್ರಮ ಮದ್ಯ ಶೇಖರಣೆಗೆ ಕಡಿವಾಣ
ಚಿಕ್ಕನಾಯಕನಹಳ್ಳಿ,ಏ.27: ತಾಲೂಕು ವ್ಯಾಪ್ತಿಯಲ್ಲಿ ಯಾರಾದರೂ ಅಕ್ರಮವಾಗಿ ಮದ್ಯವನ್ನು ಚುನಾವಣಾ ಉದ್ದೇಶಕ್ಕಾಗಿ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದು ಕಂಡುಬಂದರೆ ಸಾರ್ವಜನಿಕರು ಸ್ಥಳೀಯ ಅಬ್ಕಾಂ ಕಚೇರಿ ಅಥವಾ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಅಬಕಾರಿ ನಿರೀಕ್ಷಕರು ಕೋರಿದ್ದಾರೆ.
ಸಾರ್ವಜನಿಕರು ಅಬ್ಕಾರಿ ಅಧಿಕಾರಿಗಳಿಗೆ ಸುಳಿವು ನೀಡುವುದಕ್ಕೆ ಇಲಾಖೆ ಈ ದೂರವಾಣಿಗಳನ್ನು ಕಾಯ್ದಿರಿಸಿದೆ, ಜಿಲ್ಲಾ ಅಬ್ಕಾರಿ ಉಪ ಆಯುಕ್ತರ ಕಚೇರಿ 0816-2272927, ತಾಲೂಕು ಚುನಾವಣಾ ಅಧಿಕಾರಿಗಳು 9449006421, ಅಬ್ಕಾರಿ ನಿರೀಕ್ಷಕರು 9341464215, ಅಬ್ಕಾರಿ ಉಪನಿರೀಕ್ಷಕರು 9916633811, ಅಬ್ಕಾರಿ ಉಪ ನಿರೀಕ್ಷಕರು2, 9448231303. ಈ ದೂರವಾಣಿಗೆ ಕರೆಮಾಡುವ ಮೂಲಕ ಮಾಹಿತಿ ನೀಡುವಂತೆ ಕೋರಿದ್ದಾರೆ

Monday, April 26, 2010

'ಸುಡುಗಾಡು ಸಿದ್ದ'ರಿಂದ ಗ್ರಾ. ಪಂ.ಚುನಾವಣಾ ಬಹಿಷ್ಕಾರ......?!

(ಚಿಗುರು ಕೊಟಿಗೆಮನೆ)

ಚಿಕ್ಕನಾಯಕನಹಳ್ಳಿ,ಏ.26: ತಾಲೂಕಿನ ನೂರಕ್ಕೂ ಹೆಚ್ಚಿನ ಸುಡಗಾಡು ಸಿದ್ದರ ಕುಟುಂಬಗಳು ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿವೆ.

ಕಳೆದ ಇಪ್ಪತ್ತು ವರ್ಷಗಳಿಂದ ನಾವು ಸಕರ್ಾರಕ್ಕೆ ನಿವೇಶನ ಕೊಡುವಂತೆ ಕೋರಿ ಸಲ್ಲಿಸಿದ ಮನವಿಗೆ ಪುರಸ್ಕಾರ ಸಿಕ್ಕಿಲ್ಲ ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿರ್ಲಕ್ಷ ವಹಿಸಿವೆ, ನಮ್ಮ ಬೇಡಿಕೆ ಪೂರೈಸದ ಜನರಿಗೆ ನಾವೇಕೆ ಓಟು ಹಾಕಬೇಕು ಎಂಬ ನಿಲುವನ್ನು ವ್ಯಕ್ತ ಪಡಿಸುವ ಈ ಜನರು, ಕಳೆದ ಇಪ್ಪತ್ತು ವರ್ಷಗಳಿಂದ ಸಕರ್ಾರಿ ಜಮೀನಿನಲ್ಲೇ ಗುಡಿಸಲುಗಳನ್ನು ಹಾಕಿಕೊಂಡಿದ್ದು, ಈ ಸ್ಥಳಗಳನ್ನೇ ನಮಗೆ ಮಂಜೂರ ಮಾಡಿಕೊಡುವಂತೆ ಕೋರಿ ರಾಜ್ಯಪಾಲರಿಂದ ಹಿಡಿದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ವರೆಗೆ ಎಲ್ಲರಿಗೂ ಅಜರ್ಿ ಕೊಟ್ಟರೂ ನಮ್ಮ ಕೆಲಸವಾಗಿಲ್ಲ ಎಂದು ದೂರಿದ್ದಾರೆ.

ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಬೆಣ್ಣೆಯಂತಹ ಮಾತುಗಳನ್ನು ಹಾಡಿಕೊಂಡು ನಮ್ಮ ಬಳಿ ಬರುವ ಅಭ್ಯಾಥರ್ಿಗಳಿಗೆ ಈ ಭಾರಿ ನಾವು ಎಷ್ಟು ಮುಖ್ಯರು ಎಂಬುದನ್ನು ತೋರಿಸುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.

ತಾಲೂಕಿನ ಕಾತ್ರಿಕೆಹಾಳ್, ಸಿಂಗದಹಳ್ಳಿ, ಕೇದಿಗೆಹಳ್ಳಿ ಪಾಳ್ಯದ ಗುಂಡು ತೋಪು ಹಾಗೂ ಹೊಯ್ಸಲಕಟ್ಟೆಗಳಲ್ಲಿ ವಾಸಿಸುವ ಈ ಜನಾಂಗದವರು ಕಳೆದ 20 ವರ್ಷಗಳಿಂದ ಒಂದೇ ಕಡೆ ನೆಲೆಸಿದ್ದು ಸ್ಥಳೀಯ ತೋಟಗಳಲ್ಲಿ ಹಾಗೂ ಹೋಲಗಳಲ್ಲಿ ಕೃಷಿ ಕಾಮರ್ಿಕರ ಕೆಲಸವನ್ನು ಮಾಡುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಈ ಜನರು, ನಾವು ಕಳೆದ 20 ವರ್ಷಗಳಿಂದ ನಿಗಧಿತ ಸ್ಥಳದಲ್ಲಿ ವಾಸಿಸುತ್ತಿದ್ದೇವೆ ಎಂಬುದಕ್ಕೆ ವಾಸಸ್ಥಳ ಧೃಡೀಕರಣ ಪತ್ರವನ್ನು ಇದೇ ಸ್ಥಳೀಯ ಸಂಸ್ಥೆಗಳು ನೀಡಿವೆ. ಆದರೆ ಉಚಿತ ನಿವೇಶನವನ್ನು ಮಾತ್ರ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕಳೆದ 15 ವರ್ಷಗಳಿಂದ ಅಲೆದಾಟವನ್ನು ಆರಂಭಿಸಿದ್ದು, ನೂರಾರು ಬಾರಿ ಅಜರ್ಿ ಸಲ್ಲಿಸಿದ್ದೇವೆ, ಅಜರ್ಿ ಸಲ್ಲಿಸಿದ್ದಕ್ಕೆ ದಾಖಲೆಗಳನ್ನು ಇಟ್ಟು ಕೊಂಡಿದ್ದೇವೆ ಎನ್ನುವ ಗೌರಮ್ಮ, ಜೋಪಡಿಗಳಲ್ಲಿ ವಾಸ ಮಾಡುವ ನಾವು ನಿದ್ರೆಯಲ್ಲೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಮಲಗಬೇಕಾದ ಸಂದರ್ಭಗಳೂ ಉಂಟು, ಕಾರಣ ನಾವು ಜೀವಿಸುವುದು ಹಾವು, ಜೇಳು, ಮಂಡ್ರಗಪ್ಪೆಗಳು ವಾಸ ಮಾಡುವ ಜಾಗದಲ್ಲಿ, ಅವು ನಮ್ಮ ಪ್ರಾಣಕ್ಕೆ ಯಾವಾಗ ಬೇಕಾದರೂ ಸಂಚಕಾರ ತರಬಲ್ಲವು ಎನ್ನುವ ಸಿಂಗದಹಳ್ಳಿ ಮಾರಯ್ಯ, ಈ ಬಾರಿ ಜೋರಾದ ಗಾಳಿಯೊಂದಿಗೆ ಮಳೆ ಬಂದಂತಹ ಸಂದರ್ಭದಲ್ಲಂತೂ ಜೀವವೇ ಬಾಯಿಗೆ ಬಂದಂತಾಯಿತು ಎನ್ನುವ ಮೂಲಕ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.

ಹೆಂಚು, ಶೀಟುಗಳಿರುವ ಮನೆಗಳೇ ಈ ಮಳೆಯಲ್ಲಿ ಅಧ್ವಾನವಾಗಿ ಹೋಗಿರುವಾಗ, ನಮ್ಮ ಗುಡಿಸಲುಗಳ ಸ್ಥಿತಿ ಹೇಗಾಗಿರಬೇಕೆಂಬುದನ್ನು ನೀವೇ ಊಹಿಸಿಕೊಳ್ಳಿ ಎನ್ನುವ ಕಾತ್ರಿಕೆಹಾಳ್ನ ಶಂಕ್ರಯ್ಯ, ನಮಗೆ ನಿವೇಶನ ನೀಡಿ, ಆಶ್ರಯ ಮನೆಯಲ್ಲಿ ಅವಕಾಶ ಕಲ್ಪಿಸಿ ಎಂದು ಹಲವು ಸಲ ಅಲವತ್ತುಕೊಂಡರೂ ನಮ್ಮ ಬಗ್ಗೆ ಕರುಣೆ ತೋರದ ಜನಪ್ರತಿನಿಧಿಗಳಿಗೆ ನಾವೇಕೆ ಓಟು ಹಾಕಬೇಕು, ನಮ್ಮ ಕಷ್ಠಕ್ಕೆ ಯಾರು ಸ್ಪಂಧಿಸುತ್ತಾರೆ, ನಮ್ಮ ಬೇಡಿಕೆಗಳನ್ನು ಯಾರು ಈಡೇರಿಸಿಯೇ ತೀರುತ್ತೇವೆಂದು ನಮ್ಮ ಬಳಿಗೆ ಬರುವವರೆಗೆ ನಾವು ಚುನಾವಣೆಗಳಲ್ಲಿ ಭಾಗವಹಿಸಬಾರದೆಂಬ ನಿಧರ್ಾರಕ್ಕೆ ಬಂದಿದ್ದೇವೆ ಎಂದು ಕಾತ್ರಿಕೆಹಾಳ್ನ ಅಂಬಿಕಾ ಹೇಳುತ್ತಾರೆ.

ನಾವು ಅಧಿಕೃತವಾಗಿ ಸಕರ್ಾರಿ ಕಛೇರಿಗೆ 1995ರಿಂದಲೂ ಅಜರ್ಿ ಸಲ್ಲಿಸುತ್ತಲೇ ಬಂದಿದ್ದೇವೆ ಎಂದು ದಾಖಲೆ ಸಮೇತ ತೋರಿಸುವ ಇವರು, ಕಳೆದ ಡಿಸೆಂಬರ್ 14 ರಂದು ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ್ಯಪಾಲರಿಗೂ ಮನವಿ ಪತ್ರವನ್ನು ನೀಡಿದ್ದು, ಈ ಸಂಬಂಧ ರಾಜ್ಯಪಾಲರು ಸಹ ಸಕರಾತ್ಮಕವಾಗಿ ಸ್ಪಂದಿಸಿ ಜಿಲ್ಲಾಧಿಕಾರಿಗಳಿಗೆ ಡಿ.17 ರಂದೇ ಪತ್ರ ಬರೆದಿದ್ದಾರೆ ಆದರೂ ಸಹ ಪ್ರಯೋಜನವಾಗಿಲ್ಲ ಎನ್ನುವ ಗುಂಡುತೋಪಿನ ವೆಂಕಟೇಶ್, ರಾಜ್ಯಪಾಲರಿಗೆ ಅಜರ್ಿ ಕೊಟ್ಟ ನಂತರ ನಮಗೆ ನಾವೀಗಿರುವ ಸ್ಥಳದಿಂದ ಎತ್ತಂಗಡಿ ಮಾಡುವಂತೆ ತಹಶೀಲ್ದಾರ್ ನೋಟೀಸ್ ನೀಡಿದ್ದಾರೆ ಎಂದು ಮಮ್ಮಲಮರುಗುವ ವೆಂಕಟೇಶ್, ನಾವು ಈ ದೇಶದ ಪ್ರಜೆಯೇ ಅಲ್ಲವೇ, ನಮಗೆ ಇಲ್ಲಿ ವಾಸಿಸುವ ಹಕ್ಕೇ ಇಲ್ಲವೆ, ನಾವೇನು ಯಾರದೊ ಖಾಸಗಿ ಸ್ವತ್ತಿನಲ್ಲಿ ವಾಸ ಮಾಡುತ್ತಿಲ್ಲ ಎಂದು ಕಣ್ಣಂಚಲಿ ನೀರು ತುಂಬಿಕೊಂಡು ಮಾತನಾಡುವ ವೆಂಕಟೇಶ್, ಈ ಜಾಗ ಗುಂಡಿಗೊಟರುಗಳಿಂದ ಕೂಡಿದ್ದ ಸ್ಥಳ, ಇಲ್ಲಿ ಹಂದಿ-ನಾಯಿ ಮತ್ತಿತರ ಪ್ರಾಣಿಗಳು ವಾಸಿಸುತ್ತಿದ್ದವು, ಅವುಗಳನ್ನೇಲ್ಲಾ ಓಡಿಸಿ ಈಗ ನಾವು ವಾಸಿಸುತ್ತಿದ್ದೇವೆ, ಆ ಪ್ರಾಣಿಗಳು ವಾಸಿಸುತ್ತಿದ್ದಾಗ ಅಧಿಕಾರಿಗಳಿಗೆ ಈ ಜಾಗ ಸಕರ್ಾರಿ ಜಮೀನು ಅನ್ನಿಸರಲಿಲ್ಲವೆ, ಯಾವಾಗ ನಾವು ಇಲ್ಲಿ ಗುಡಿಸಲು ಹಾಕಿಕೊಂಡವೊ ಹಾಗೂ ಈ ಜಾಗದಲ್ಲಿ ನಮಗೂ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ ಎಂದು ಅಧಿಕಾರಿಗಳನ್ನು ಮನವಿ ಮಾಡಿಕೊಂಡೆವೊ, ಆಗ ಈ ಅಧಿಕಾರಿಗಳಿಗೆ ಇದು ಸಕರ್ಾರಿ ಜಾಗ ಎಂಬ ಸುಳಿವು ಸಿಕ್ಕಿತೇ ಎನ್ನುವ ವೆಂಕಟೇಶ್, ಈ ಸವರ್ೇ ನಂಬರಿನಲ್ಲಿರುವ ಜಾಗದಲ್ಲಿ ಬೇರೆ ಜನಕ್ಕೆ ಹಕ್ಕು ಪತ್ರಗಳನ್ನು ಕೊಡಲು ಸಾಧ್ಯವಾಗಿದೆ, ನಾವು ಕೇಳಿದರೆ ಕೊಡಲು ಇಲ್ಲದ ಕಾನೂನುಗಳನ್ನು ಹೇಳುವ ಈ ಅಧಿಕಾರಿಗಳು ನಮ್ಮಂತಹ ಬಡವರು ಇಲ್ಲಿ ವಾಸ ಮಾಡಲು, ಬದುಕು ಕಟ್ಟಿಕೊಳ್ಳಲು ಅವಕಾಶವಿಲ್ಲವೆ ಎಂದು ಮುಗ್ದವಾಗಿ ಪ್ರಶ್ನಿಸುತ್ತಾರೆ. ಇವರ ಪ್ರಶ್ನೆಗೆ ಉತ್ತರ ಕೊಡಬೇಕಾದ ಜನ ಚುನಾವಣೆಯಲ್ಲಿ ತಮ್ಮ 'ನೆಲೆಯನ್ನು' ಕಂಡುಕೊಳ್ಳಲು ಬ್ಯೂಸಿಯಾಗಿದ್ದಾರೆಯೇ..........?




ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ಏ.26: ಲಿಂಗಾಯಿತ ಉಪಜಾತಿಗಳಾದ ಸಾದರ ಪಂಗಡಗಳನ್ನು ಹಿಂದುಳಿದ 2ಎ ಪ್ರಮಾಣ ಪತ್ರ ಕೊಟ್ಟಿರುವುದು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರ ಮೊಟಕುಗೊಳಿಸಿರುವುದನ್ನು ವಿರೋಧಿಸಿ ತುಮಕೂರಿನಲ್ಲಿ ಇದೇ 28ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಹಿಂದಾ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಕೋರಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣಾ ಹಿನ್ನೆಲೆಯಲ್ಲಿ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಂದುಳಿದ 2ಎ ಪ್ರಮಾಣ ಪತ್ರ ಕೊಡುವ ಮೂಲಕ ಮೀಸಲಾತಿ ಖೋಟಾವನ್ನು ದುರುಪಯೋಗ ಪಡಿಸಕೊಳ್ಳಲಾಗುತ್ತಿದೆ ಎಂದಿರುವ ಅವರು, ಅದೇ ರೀತಿ ಜಾತಿವಾರು ಜನಗಣತಿಯಂತಹ ಮಹತ್ವದ ಕೆಲಸವನ್ನು ಕೈಗೆತ್ತಿಕೊಳ್ಳಲು ಇಚ್ಚಾಶಕ್ತಿಯನ್ನು ತೋರಿಸುವಲ್ಲಿ ಹಿಂದೇಟು ಹಾಕುತ್ತಿರುವ ಬಿ.ಜೆ.ಪಿ.ಸಕರ್ಾರ, ಈಗ ಹಿಂದುಳಿದ ಆಯೋಗದ ಅಧಿಕಾರವನ್ನು ಮೊಟಕು ಗೊಳಿಸುವ ಆದೇಶವನ್ನು ಹೊರಡಿಸುವ ಮೂಲಕ ಹಿಂದುಳಿದ ವರ್ಗಗಳ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ, ಈ ಎಲ್ಲಾ ಅಂಶವನ್ನು ಖಂಡಿಸಿ ಹಾಗೂ ಸಕರ್ಾರಕ್ಕೆ ತನ್ನ ತಪ್ಪನ್ನು ಅರಿವು ಮಾಡಿಕೊಡುವ ಸಲುವಾಗಿ ಇದೇ 28ರ ಬುಧವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನಾ ಮೆರವಣಿಗೆಯು ತುಮಕೂರಿನ ಟೌನ್ಹಾಲ್ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಛೇರಿ ತಲುಪಲಿದ್ದು ಅಲ್ಲಿ ಧರಣಿ ನಡೆಸಲಾಗುವುದು ಆದ್ದರಿಂದ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಚಿ.ಲಿಂ.ರವಿಕುಮಾರ್ ಕೋರಿದ್ದಾರೆ.

Saturday, April 24, 2010

ಹೇಮೆಯ ವಿಷಯದಲ್ಲಿ ಮಲತಾಯಿಧೋರಣೆ: ಸೀಮೆಣ್ಣೆ ಕೃಷ್ಣಯ್ಯ ಆರೋಪ

ಚಿಕ್ಕನಾಯಕನಹಳ್ಳಿ,ಏ.24: ತಾಲೂಕಿಗೆ ಹೇಮಾವತಿ ನಾಲೆಯಿಂದ ನೀರು ಬಿಡಬಾರದೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವ ಮೂಲಕ ಜಿಲ್ಲೆಯ ಮೂರು ಜನ ಬಿ.ಜೆ.ಪಿ.ಶಾಸಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಈ ಸಂದರ್ಭದಲ್ಲಿ, ಜಿಲ್ಲೆಯ ಮೂವರು ಬಿ.ಜೆ.ಪಿ.ಶಾಸಕರುಗಳು ಹಾಗೂ ಒಬ್ಬ ಸಚಿವರೂ ಸೇರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಚಿಕ್ಕನಾಯಕನಹಳ್ಳಿಗೆ ಹೇಮಾವತಿಯಿಂದ ನೀರು ಕೊಡಬೇಡಿ ಎಂದು ಒತ್ತಾಯಿಸುತ್ತಿರುವುದಲ್ಲದೆ, ನೀರು ಬಿಟ್ಟರೆ ರಕ್ತ ಪಾತವಾಗುವ ಸಂಭವವಿರುತ್ತದೆ ಎಂದು ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಭಯದ ವಾತಾವರಣವನ್ನು ಸೃಷ್ಠಿಸಲು ಬಿ.ಜೆ.ಪಿ.ಯ ಶಾಸಕರೇ ಹೊರಟಿದ್ದಾರೆ ಎಂದು ಆರೋಪಿಸಿದ ಸೀಮೆಣ್ಣೆ ಕೃಷ್ಣಯ್ಯ, ಜನರಲ್ಲಿ ಸೌಹರ್ದತೆಯನ್ನು ಹುಟ್ಟು ಹಾಕಬೇಕಾದವರೆ ಈ ರೀತಿ ಪತ್ರ ಬರೆದಿರುವುದು ಸರಿಯಲ್ಲ ಎಂದಿದ್ದಾರೆ.
ಹೇಮಾವತಿ ನೀರನ್ನು ತಾಲೂಕಿಗೆ ಹರಿಸುವುದಾಗಿ ತಾಲೂಕಿನ 42 ಸಂಘಟನೆಗಳು ತಿಂಗಳಾದ್ಯಂತ ಹುಳಿಯಾರಿನಲ್ಲಿ ನಡೆಸಿದ ಅಹೋರಾತ್ರಿ ಪ್ರತಿಭಟನೆಗಳು ನಡೆದಿವೆ, ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಜಿಲ್ಲಾ ಮಂತ್ರಿಗಳೇ ಆಶ್ವಾಸನೆ ನೀಡಿ ತಾಲೂಕಿಗೆ ನೀರು ಹರಿಸುವುದಾಗಿ ಹೇಳಿಕೆ ನೀಡಿದ್ದಾರೆ, ಅವೆಲ್ಲವನ್ನೂ ಕಡೆಗಣಿಸಿ ಈಗ ಈ ಶಾಸಕರುಗಳು ಸಿ.ಎಂ.ರವರಿಗೆ ಚಿಕ್ಕನಾಯಕನಹಳ್ಳಿಗೆ ನೀರು ಕೊಡಬೇಡಿ ಎಂದು ಪತ್ರ ಬರೆಯುವ ಅವಶ್ಯಕತೆ ಇದೆಯೇ ಎಂದರು.
ಈ ಎಲ್ಲಾ ಪತ್ರ ವ್ಯವಹಾರಗಳನ್ನು ನೋಡಿದರೆ, ಕೇಂದ್ರ ಸಕರ್ಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸುವ ಬಿ.ಜೆ.ಪಿ. ಪಕ್ಷದವರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ನೀರು ಹರಿಸುವ ವಿಷಯದಲ್ಲಿ ಅನುಸರಿಸುತ್ತಿರುವ ನೀತಿ ಯಾವುದು ಎಂದು ಪ್ರಶ್ನಿಸಿದ ಕೃಷ್ಣಯ್ಯ, ತಾಲೂಕಿಗೆ ನೀರು ಹರಿಸುವ ವಿಷಯದಲ್ಲಿ ಈ ಸಕರ್ಾರ ಮಲತಾಯಿ ಧೋರಣೆ ಅನುಸರಿಸಿದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದರು. ನಮ್ಮ ತಾಲೂಕಿಗೂ ಹೇಮಾವತಿ ನಾಲೆಯಿಂದ ನೀರು ಹರಿಸಲೇಬೇಕು ಎಂದು ಒತ್ತಾಯಿಸಿದರು.
ಪಟ್ಟಣದಲ್ಲಿ ಇತ್ತೀಚಿಗೆ ವಿದ್ಯುತ್ ಅಸಮಪರ್ಕತೆ ಹಾಗೂ ನೀರು ಸರಬರಾಜಿನಲ್ಲಿನ ಅವ್ಯವಸ್ಥೆಯಿಂದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ಉಲ್ಬಣಗೊಳ್ಳವ ಮೊದಲೇ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ಪುರಸಭೆಯವರು ಜನರೇಟರ್ನ್ನು ಖರೀದಿಸಬೇಕು, ಹಾಗೆಯೇ ನೀರು ಸರಬರಾಜಿನ ಜವಬ್ದಾರಿ ಹೊತ್ತವರ ಬಳಿ ಸರಿಯಾಗಿ ಕೆಲಸ ತೆಗೆದುಕೊಳ್ಳುತ್ತಿಲ್ಲ ಎಂದಿರುವ ಕೃಷ್ಣಯ್ಯ, ಈ ಬಗ್ಗೆ ಪುರಸಭೆಯವರು ಬೇಜವಬ್ದಾರಿಯಿಂದ ನಡೆದುಕೊಳ್ಳಬಾರದು ಎಂದರು.
ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಚರಂಡಿ ನಿಮರ್ಾಣಕ್ಕೆ ಮುಂದಾಗಿದ್ದು, ಅಕ್ರಮ ಒತ್ತುವರಿಯನ್ನು ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ, ಈ ರೀತಿ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ, ಯಾರ್ಯಾರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಆ ಎಲ್ಲಾ ಜಾಗವನ್ನು ತೆರವುಗೊಳಿಸಬೇಕು ಎಂದ ಅವರು, ತಾರತಮ್ಯ ನೀತಿ ಅನುಸರಿಸಬಾರದು ಎಂದು ಪುರಸಭಾ ಅಧ್ಯಕ್ಷರನ್ನು ಕೃಷ್ಣಯ್ಯ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು, ಕಿಬ್ಬನಹಳ್ಳಿ ಮಹಾಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಪರಿಶಿಷ್ಟ ಜಾತಿ ಘಟಕದ ಶಿವಕುಮಾರ್, ಸೇವಾದಳದ ಅಧ್ಯಕ್ಷ ಕಾಯಿ ನಾರಾಯಣಸ್ವಾಮಿ, ಸಿ.ಜಿ.ಚಂದ್ರಶೇಖರ್, ಮಲ್ಲೇಶ್ ಉಪಸ್ಥಿತರಿದ್ದರು.

Friday, April 23, 2010


ಜನರ ಮನ ಸೆಳೆದ ಗುರು ಕಿರಣ್ ನೃತ್ಯ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಏ.23: ಸುಗಮ ಸಂಗೀತದಿಂದ ಪಾಶ್ಚಿಮಾತ್ಯ ಸಂಗೀತದ ವರೆಗೆ, ಭರತ ನಾಟ್ಯದಿಂದ ಪಾಪ್ ಡ್ಯಾನ್ಸ್ ವರಗೆ, ಸ್ಟಾರ್ ವ್ಯಾಲ್ಯೂ ಕಲಾವಿದರ ದಂಡೇ ಇಲ್ಲಿಗೆ ಆಗಮಿಸಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ತಾಲೂಕಿನಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಉಂಟು ಮಾಡಿದೆ.


ತಾತಯ್ಯನವರ 50 ನೇ ವರ್ಷದ ಉರಸ್ ಅಂಗವಾಗಿ ಸಂಗೀತ ನಿದರ್ೇಶಕ ಗುರು ಕಿರಣ್ ರವರ ತಂಡ ಇಲ್ಲಿನ ಜನರಿಗೆ ಒದಗಿಸಿದ ಮನರಂಜನೆಯನ್ನು 12 ಸಾವಿರಕ್ಕೂ ಹೆಚ್ಚಿನ ರಸಿಕರು ಮಳೆಯ ನಡುವೆಯೂ ರಾತ್ರಿ 2.30ರವರೆಗೆ ವೀಕ್ಷಿಸಿದೆ.ಗುರು ಕಿರಣ್ ನೇತೃತ್ವದ ತಂಡ ನೀಡಿದ ನೃತ್ಯ ಹಾಗೂ ಶಮಿತಾ ಮಲ್ನಾಡ್, ಜೋಗಿ ಖ್ಯಾತಿಯ ಸುನೀತ, ಲಕ್ಷ್ಮಿ ಯವರ ಹಾಡುಗಾರಿಕೆಗೆ ಇಲ್ಲಿನ ಜನ ತಲೆ ತೂಗಿದ್ದಾರೆ. ಮಿಮಿಕ್ರಿ ದಯಾನಂದ್ ರವರ ಕಜಗುಳಿ ಜನರಿಗೆ ಮನರಂಜನೆಯನ್ನು ನೀಡಿತು.ಜಗಮಗಿಸುವ ರಂಗ ಮಂಟಪದಲ್ಲಿ ನವೀನ ರೀತಿಯ ನೆರಳು ಬೆಳಕಿನ ನಡುವೆ ನಡೆದ ಕಾರ್ಯಕ್ರಮ ರಸಿಕರ ಮನಸೂರೆಗೊಂಡಿದೆ.ಈ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ಬಾಬು, ಸಂಗೀತ ನಿದರ್ೇಶಕ ಗುರುಕಿರಣ್, ಗಾಯಕರುಗಳಾದ ಶಮಿತಾ ಮಲ್ನಾಡ್, ಚೇತನ್ ಕುಮಾರ್, ಸುನೀತ, ನಿರೂಪಕಿ ಅನುಶ್ರೀ ಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಕಲ್ಪವೃಕ್ಷ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜುರವರನ್ನು ಸನ್ಮಾನಿಸಲಾಯಿತು.


ಸಾಂಸ್ಕೃತಿಕ ವಾತಾವರಣದ ಮೆರಗು: ಇತ್ತೀಚಿಗೆ ಇಲ್ಲಿನ ಜನರು ಡಾ.ಸಿ. ಅಶ್ವಥ್ ರವರ ಸುಗಮ ಸಂಗೀತದಿಂದ ಆರಂಭಗೊಂಡು ರಾಜೇಶ್ ಕೃಷ್ಣನ್, ಗುರು ಕಿರಣ್, ಡಾ.ಸಂಜಯ್ ರವರ ಭರತ ನಾಟ್ಯದ ವರೆಗೆ, ಯುವ ಗಾಯಕರುಗಳಾದ ಅಶ್ವಿನ್ ಶಮರ್ಾ, ಮದ್ವೇಶ್ ಭಾರಧ್ವಜ್, ಅನಿರುಧ್, ಸಹನ, ಹಂಸಿಣಿ ವರೆಗಿನ ಯುವ ಪ್ರತಿಭೆಗಳ ಸಂಗೀತವನ್ನು ಇಲ್ಲಿಯ ಜನರು ಆಸ್ವಾದಿಸಿದ್ದಾರೆ.ಕನ್ನಡವೇ ಸತ್ಯ ಕಾರ್ಯಕ್ರಮದ ಮೂಲಕ ಡಾ.ಸಿ.ಅಶ್ವಥ್, ಉರಸ್ನ ಅಂಗವಾಗಿ ರಾಜೇಶ್ ಕೃಷ್ಣನ್, ಚಿಣ್ಣರ ಹಬ್ಬದ ಅಂಗವಾಗಿ ಅಶ್ವಿನ್ ಶರ್ಮ ಸೇರಿದಂತೆ ಝೀ ಟಿ.ವಿ.ಯ ಯುವ ಕಲಾವೃಂದವರಿಂದ ನೃತ್ಯ ಕಾರ್ಯಕ್ರಮ ರಸಿಕರ ಮನ ತಣಿದಿದೆ.


ಗ್ರಾ.ಪಂ.ಚುನಾವಣೆ: 5 ದಿನಕ್ಕೆ 789 ನಾಮಪತ್ರಗಳ ಸಲ್ಲಿಕೆ


ಚಿಕ್ಕನಾಯಕನಹಳ್ಳಿ,ಏ.23: ತಾಲೂಕಿನ 28 ಗ್ರಾ.ಪಂ.ಗಳಲ್ಲಿ ಇಲ್ಲಿಯವರೆಗೆ 789 ಅಜರ್ಿಗಳನ್ನು ಸಲ್ಲಿಸಿದ್ದು ಇದರಲ್ಲಿ 23ರ ಶುಕ್ರವಾರ ಒಂದೇ ದಿನ 560 ನಾಮ ಪತ್ರಗಳು ಸಲ್ಲಿಕೆ ಆಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.


ನಾಮ ಪತ್ರ ಸಲ್ಲಿಸಲು ಆರಂಭಗೊಂಡ ಮೊದಲ ದಿನವಾದ ಹತ್ತೊಂಭತ್ತರಂದು ಮೂರು ಅಜರ್ಿಗಳು ಮಾತ್ರ ಸಲ್ಲಿಕೆಯಾಗಿದ್ದು, 20 ರಂದು 9 ಸಲ್ಲಿಕೆಯಾಗಿದ್ದರೆ, 21 ರಂದು 41 ನಾಮಪತ್ರಗಳು ಸಲ್ಲಿಕೆಯಾಗಿದೆ, 22 ರಂದು 176 ನಾಮಪತ್ರಗಳು, 23 ರಂದು 560 ನಾಮ ಪತ್ರಗಳು ಸಲ್ಲಿಕೆಯಾಗಿದ್ದು 28 ಗ್ರಾ.ಪಂ.ಗಳ ಪೈಕಿ ಅತಿ ಹೆಚ್ಚು ಹುಳಿಯಾರಿನಲ್ಲಿ ಒಂದೇ ದಿನ 52 ನಾಮ ಪತ್ರಗಳು ಸಲ್ಲಿಕೆಯಾಗಿದ್ದರೆ, ಬರಗೂರಿನಲ್ಲಿ 7 ನಾಮಪತ್ರಗಳು ಸಲ್ಲಿಕೆಯಾಗಿವೆ.


ಗಣತಿ ಸಹಾಯ ವಾಣಿ: ತಾಲೂಕಿನಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಗಣತಿಯ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದವರು ಸಹಾಯ ವಾಣಿವನ್ನು ಸಂಪಕರ್ಿಸ ಬಹುದು, ತಾಲೂಕು ಕಛೇರಿ ದೂರವಾಣಿ ಸಂಖ್ಯೆ: 267242, ಗ್ರಾಮಾಂತರ ವಿಭಾಗಕ್ಕೆ ಹೆಚ್ಚುವರಿ ಚಾಜರ್್ ಅಧಿಕಾರಿ ಕೆ.ವಿ.ಕುಮಾರ್ ರವರ ಮೊಬೈಲ್ ಸಂಖ್ಯೆ: 9448747612, ಜನಗಣತಿ ಶಾಖೆಯ ಎಚ್.ಎಸ್.ಗುರುಸಿದ್ದಪ್ಪ ನವರ ಮೊಬೈಲ್ ಸಂಖ್ಯೆ 9844624098 ಇಲ್ಲಿ ಸಂಪಕರ್ಿಸ ಬಹುದು.


ಸ್ವತಂತ್ರ ಹೋರಾಟಗಾರನ ನಿಧನ: ಶೆಟ್ಟೀಕೆರೆಯ ಸ್ವತಂತ್ರ ಹೋರಾಟಗಾರ ಎಸ್.ಸಿ.ರಾಮಲಿಂಗಪ್ಪ(85) ನಿಧನರಾಗಿದ್ದಾರೆ. ಇವರು ಸ್ವತಂತ್ರ ಹೋರಾಟದಲ್ಲಿ ಸಕ್ರಿಯಾವಾಗಿ ಭಾಗವಹಿಸಿದ್ದು ಆರು ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದರು.


ಇವರು ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.


ಮೃತರ ಗೃಹಕ್ಕೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಭೇಟಿ ನೀಡಿ ಸಕರ್ಾರದ ವತಿಯಿಂದ ಸಲ್ಲಬೇಕಾದ ಗೌರವವನ್ನು ಸಲ್ಲಿಸಿದ್ದಾರೆ. ಶಾಸಕ ಸಿ.ಬಿ.ಸುರೇಶ್ ಬಾಬು ರಾಮಲಿಂಗಪ್ಪನವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.







ಸಾಲದ ಮೇಲಿನ ಬಡ್ಡಿ ಇಳಿಕೆ


ಚಿಕ್ಕನಾಯಕನಹಳ್ಳಿ,ಏ.23: ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕಿನಿಂದ ನೀಡುವ ವಿವಿಧ ಸಾಲಗಳ ಬಡ್ಡಿದರವನ್ನು ಕಡಿಮೆ ಮಾಡಿದೆ ಮತ್ತು ನಿತ್ಯನಿಧಿ ಠೇವಣಿಯನ್ನು ಆರು ತಿಂಗಳ ಅವಧಿಗೆ ನಿಗದಿಮಾಡಲಾಗಿದೆ ಎಂದು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಡಿಮೆ ಬಡ್ಡಿ ಮಾಡಿರುವ ಸಾಲಗಳಲ್ಲಿ ಶೇ.15ರಷ್ಟಿದ್ದ ಅಡಿಕೆ ದಾಸ್ತಾನು ಸಾಲವನ್ನು ಶೇ.14 ಇಳಿಸಿದೆ, ಶೇ.13ರಷ್ಟಿದ್ದ ಆಭರಣ ಸಾಲವನ್ನು ಶೇ.10ರಷ್ಟಕ್ಕೆ, ವಾಹನಸಾಲವನ್ನು 13ರಷ್ಟಕ್ಕೆ ಮತ್ತು ಶೇ.16ರಷ್ಟಿದ್ದ ನಗದು ಹಾಗು ವ್ಯಾಪಾರ ಸಾಲವನ್ನು ಶೇ.14ರಷ್ಟಕ್ಕೆ ಇಳಿಸಲಾಗಿದ್ದು ಷೇರುದಾರರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆಯಲು ಕೋರಿದ್ದಾರೆ.

Thursday, April 22, 2010







  1. 50ನೇ ವರ್ಷದ ತಾತಯ್ಯನ ಉರಸ್ನ ವೈಭವದ ಆಚರಣೆ
  2. ದೆಹಲಿ ಮತ್ತು ಕೊಲ್ಲಾಪುರದ ಪಾಟರ್ಿಗಳಿಂದ ಜಿದ್ದಾಜಿದ್ದಿನ ಖಾವಲಿ
  3. ಗಾಯಕ ಗುರುಕಿರಣ್ ತಂಡದವರಿಂದ ರಸ ಸಂಜೆ
  4. ಐವತ್ತು ಸಾವಿರಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ
  5. ಜಗಮಗಿಸುವ ಬಾಣಬಿರುಸುಗಳ ಸಿಡಿ ಮದ್ದು
ಚಿಕ್ಕನಾಯಕನಹಳ್ಳಿ,ಏ.17: ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ 50 ನೇ ವರ್ಷದ ಉರಸ್ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಇದೇ 19 ರಿಂದ 21 ರವರೆಗೆ ನಡೆಯುವ ಈ ಕಾರ್ಯಕ್ರಮವನ್ನು ಸುವರ್ಣ ವಷರ್ಾಚರಣೆಯ ಅಂಗವಾಗಿ ವೈಭವತೆಗೆ ಹೆಚ್ಚು ಒತ್ತು ನೀಡಿರುವ ಉರಸ್ ಕಮಿಟಿ,ಸಂಚಾರಿ ಆಕರ್ೆಸ್ಟ್ರಾ, ದೆಹಲಿ ಮತ್ತು ಕೊಲ್ಲಾಪುರದವರ ಜಿದ್ದಾ ಜಿದ್ದಿನ ಖವ್ವಾಲಿ ಮತ್ತು ಸಂಗೀತ ನಿದರ್ೇಶಕ, ಗಾಯಕ ಗುರು ಕಿರಣ್ ರವರ ಸಂಗೀತ ಸುಧೆ ಮತ್ತು ನೃತ್ಯ ವೈಭವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಇದೇ 19ರ ಸೋಮವಾರ ರಾತ್ರಿ 8ಕ್ಕೆ ವಿದ್ಯುತ್ ದೀಪಗಳಿಂದ ಅಲಂಕೃತವಾದ ಹೂವಿನ ಮಂಟಪದಲ್ಲಿ ತಾತಯ್ಯನವರ ಉತ್ಸವ, ಗೋರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಲಿದೆ, ಈ ಸಂದರ್ಭದಲ್ಲಿ ನ್ಯೂ ಭಾರತ್ ಬ್ಯಾಂಡ್ ಸಂಚಾರಿ ಆಕರ್ೆಸ್ಟ್ರಾ ಮೆರವಣಿಗೆಗೆ ಸಾಥ್ ನೀಡಲಿದೆ.
ಖಾವಲಿ: ಇದೇ 20ರ ಮಂಗಳವಾರ ಸಂಜೆ 7.30ಕ್ಕೆ ಜಿದ್ದಾಜಿದ್ದಿನ ಖಾವಲಿ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ಚಾಂದ್ ಅಪ್ಜಲ್ ಖಾದಿ,್ರ ಪಾಟರ್ಿ ಆಫ್ ದೆಹಲಿ ಮತ್ತು ಚೂಟಿ ತಮ್ಮನ್ನ ಬಾನು, ಪಾಟರ್ಿ ಆಫ್ ಕೊಲ್ಲಾಪುರ ಇವರು ನಡೆಸಿಕೊಡಲಿದ್ದಾರೆ, ಖವ್ವಾಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎಜಾಜುದ್ದೀನ್ ನೆರವೇರಿಸಲಿದ್ದು, ತಾತಯ್ಯ ಗೋರಿ ಕಮಿಟಿಯ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ರಾಜ್ಯ ವಕ್ಪ್ ಬೋಡರ್್ ಆಡಳಿತಾಧಿಕಾರಿ ಎಂ.ಎನ್.ಸಲೀಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಪಿ ಅಹಮದ್, ಜಿಲ್ಲಾ ವಕ್ಪ್ ಬೋಡರ್್ ಅಧ್ಯಕ್ಷ ಮುಷ್ತಾಕ್ ಅಹಮದ್, ಸಾಹಿತಿ ಡಾ. ಅಬ್ದುಲ್ ಹಮೀದ್, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಮಾಜಿ ಶಾಸಕರುಗಳಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಎ.ಸಿ,ಬಸವರಾಜೇಂದ್ರ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಜೆ.ಡಿ.ಎಸ್. ಅಧ್ಯಕ್ಷ ಸಿ.ಪಿ.ಚಂದ್ರಶೇಖರ ಶ್ರೇಷ್ಠಿ, ಭಾ.ಜ.ಪ.ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಿಕಾಡರ್್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಕಲ್ಪವೃಕ್ಷ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಜಾಮಿಯಾ ಮಸೀದಿಯ ಮುತುವಲ್ಲಿ ಉಪಸ್ಥಿತರಿರುವರು.
ಸಂಗೀತ ರಸ ಸಂಜೆ: ಇದೇ 21ರ ಬುಧವಾರ ಸಂಜೆ 7.30ಕ್ಕೆ ಖ್ಯಾತ ಸಂಗೀತ ನಿದರ್ೇಶಕ, ಗಾಯಕ ಗುರುಕಿರಣ್ ಮತ್ತು ಸಂಗಡಿಗರಿಮದ ಸಂಗೀತ ಸುಧೆ ಹಾಗೂ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಡ್ಯ ಸಂಸದ ಎನ್.ಚೆಲುವರಾಯಸ್ವಾಮಿ, ಶಾಸಕರುಗಳಾದ ಜಮೀರ್ ಅಹಮದ್ ಖಾನ್, ಮಾಗಡಿಯ ಎಚ್.ಸಿ.ಬಾಲಕೃಷ್ಣ, ತುರುವೇಕೆರೆಯ ಎಂ.ಟಿ.ಕೃಷ್ಣಪ್ಪ, ಗುಬ್ಬಿಯ ಎಚ್.ಆರ್.ಶ್ರೀನಿವಾಸ್, ಮಧುಗಿರಿಯ ಅನಿತಾ ಕುಮಾರಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಡಿ.ಸಿ, ಡಾ.ಸಿ.ಸೋಮಶೇಖರ್, ಎಸ್.ಪಿ, ಡಾ.ಪಿ.ಎಸ್.ಹರ್ಷ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ಟಿ.ಕೆ.ರುಕ್ಮಿಣಮ್ಮ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಗೋರಿ ಕಮಿಟಿ ಅಧ್ಯಕ್ಷ ಎಚ್.ಜಿ.ನಾರಾಯಣರಾವ್, ಹಾಸನದ ಗುತ್ತಿಗೆದಾರ ಮಹಮದ್ ಗೌಸ್, ಹಿರಿಯ ನಾಗರೀಕ ಪ್ಯಾರೇಜಾನ್ ಸಾಬ್ರವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾತಯ್ಯನ ಗೋರಿ ಕಮಿಟಿಯ ಪದಾಧಿಕಾರಿಗಳಾದ ಟಿ.ರಾಮಯ್ಯ, ಸಿ.ಎಂ.ರಂಗಸ್ವಾಮಯ್ಯ, ಮಹಮದ್ ಖಲಂದರ್, ಜಾಫರ್ ಖಾನ್, ಕಲ್ಪವೃಕ್ಷ ಕೋ ಅಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜ್ ಹಾಜರಿದ್ದರು.
ಕಂಪ್ಯೂಟರ್ ತೊಂದರೆ ಪಹಣಿಗಾಗಿ ರೈತರ ಪರದಾಟ
ಚಿಕ್ಕನಾಯಕನಹಳ್ಳಿ,ಏ.17: ತಾಲೂಕಿನ ಕಂದಾಯ ಇಲಾಖೆಯಲ್ಲಿ ಅಳವಡಿಸಿರುವ ಕಂಪ್ಯೂಟರ್ಗಳು ಕಳಪೆಯಾಗಿದ್ದು ಉಪಯೋಗಕ್ಕೆ ಬರುತ್ತಿಲ್ಲ ಇದರಿಂದ ರೈತರಿಗೆ ಪಹಣೆ ಮುಂತಾದ ದಾಖಲಾತಿಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆಂದು ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಆರೋಪಿಸಿದ್ದಾರೆ.
ರೈತರು ಪಹಣಿ ಮುಂತಾದ ದಾಖಲಾತಿಗಳನ್ನು ಪಡೆಯಲು ದಿನವಿಡಿ 20-30 ಮೈಲಿ ದೂರದೂರುಗಳಿಂದ ಪಟ್ಟಣಕ್ಕೆ ಬಂದು, ದಾಖಲಾತಿಗಾಗಿ ಅಲೆಯುತ್ತಿದ್ದು ಆ ಇಲಾಖೆಯ ನೌಕರರು ನಾಳೆ ಬನ್ನಿ, ಒಂದು ವಾರ ಬಿಟ್ಟು ಬನ್ನಿ ಎಂಬ ಹಾರಿಕೆ ಉತ್ತರಗಳನ್ನು ಕಳೆದ 3-4ತಿಂಗಳಿಂದಲೂ ಹೇಳುತ್ತಿದ್ದಾರೆ, ಇದರ ಬಗ್ಗೆ ಮೇಲಾಧಿಕಾರಿಗಳನ್ನು ವಿಚಾರಿಸಿದರೆ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಉತ್ತರಗಳನ್ನು ಕೇಳಿ ಕೇಳಿ ಸಾಕಾಗಿದೆ ಎಂದಿರುವ ಅವರು, ಬೆಂಗಳೂರಿನ ಬಿ.ಎಂ.ಸಿಯಲ್ಲಿ ವಿಚಾರಿಸಬೇಕು ಎನ್ನುತ್ತಾರೆ, ಅಲ್ಲಿಯ ಅಧಿಕಾರಿ ಗುರುಮೂತರ್ಿ ಎಂಬುವರನ್ನು ವಿಚಾರಿಸಿದರೆ ಇಲಾಖೆಯವರು ಸೂಕ್ತ ಸಮಯದಲ್ಲಿ ಮಾಹಿತಿ ಒದಗಿಸಿಲ್ಲ ಎಂದು ಇಲ್ಲಿಯ ಅಧಿಕಾರಿಗಳ ಮೇಲೆ ದೂರುತ್ತಿದ್ದಾರೆ. ಈ ವಿಷಯಕ್ಕೆ ಸಂಬಂದಿಸಿದ ಮೇಲಧಿಕಾರಿಗಳು ತಕ್ಷಣ ಗಮನ ಹರಿಸಿ ರೈತರಿಗಾಗುತ್ತಿರುವ ತೊಂದರೆ ನಿವಾರಿಸದಿದ್ದರೆ ಇಡೀ ತಾಲೂಕಿನಾದ್ಯಂತ ರೈತರನ್ನು ಸಂಘಟಿಸಿ ಪಕ್ಷ ಉಗ್ರ ಹೋರಾಟ ಮಾಡಬೇಕಾಗುವುದೆಂದು ಎಚ್ಚರಿಸಿದ್ದಾರೆ.

ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉಚಿತ ವಿವಾಹ ಮುಂದೂಡಿಕೆ
ಚಿಕ್ಕನಾಯಕನಹಳ್ಳಿ,ಏ.17: ದುಗರ್ಾ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯ ವಾಷರ್ಿಕೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹವನ್ನು ಮೇ.21ಕ್ಕೆ ಮುಂದೂಡಲಾಗಿದೆ ಎಂದು ಎಂದು ಟ್ರಸ್ಟಿ ತಿಮ್ಮಬೋವಿ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಈ ಮೊದಲು ನಿಗದಿ ಪಡಿಸಿದ ಕಾರ್ಯಕ್ರಮವನ್ನು ಮೇ.21ಕ್ಕೆ ಮುಂದೂಡಿದ್ದು ಉಳಿದಂತೆ ಈ ಮೊದಲು ನಿಗದಿ ಪಡಿಸಿದ ಸ್ಥಳವಾದ ನರುವಗಲ್ ಮಜುರೆ ಹುಲಿಕಲ್ ಬೆಟ್ಟ ಪುಣ್ಯಕ್ಷೇತ್ರದ ದುಗರ್ಾಂಬ ದೇವಸ್ಥಾನದಲ್ಲಿ ನಡೆಸಲಾಗುವುದು, ಸಮಾರಂಭದಲ್ಲಿ ಚಿತ್ರದುರ್ಗ ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ತಮ್ಮಡಿಹಳ್ಳಿ ವಿರಕ್ತಮಠ ಡಾ.ಅಭಿನವ ಮಲ್ಲಿಕಾಜರ್ುನ ಮಹಾಸ್ವಾಮಿ ಆಶೀರ್ವಚನ ನೀಡಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಾಹವಾಗಲಿಚ್ಛಿಸುವವರು ತಮ್ಮ ಹೆಸರನ್ನು ಮೇ 1ರೊಳಗಾಗಿ ದು.ಗ್ರಾ.ಮ.ಶೈ.ಸಂಘದ ಅಧ್ಯಕ್ಷ ಇ.ನಾಗರಾಜು ಮೊ.ನಂ.9880752436 ಅಥವಾ ತಿಮ್ಮಾಬೋವಿ 9535467784 ಇವರನ್ನು ಸಂಪಕರ್ಿಸಲು ಕೋರಿದ್ದಾರೆ.

ಕನಕ ಸೇವಾ ಸಮಿತಿಯ 15 ನೇ ವಾಷರ್ಿಕ ಮಹಾಸಭೆ
ಚಿಕ್ಕನಾಯಕನಹಳ್ಳಿ,ಏ.17: ಕನಕ ಸೇವಾ ಸಮಿತಿಯ ದೈವಾಷರ್ಿಕ ಚುನಾವಣೆ ಮತ್ತು 15ನೇ ವಾಷರ್ಿಕ ಮಹಾಸಭೆಯನ್ನು ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಏಪ್ರಿಲ್ 25ರ ಭಾನುವಾರದಂದು ಪಟ್ಟಣದ ಕನಕ ಭವನದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಸಲು ಸಮಿತಿ ತೀಮರ್ಾನಿಸಲಾಗಿದೆ ಎಂದು ಪ್ರಧಾನ ಕಾರ್ಯದಶರ್ಿ ಶಿವಣ್ಣ(ಮಿಲ್ಟ್ರಿ) ತಿಳಿಸಿದ್ದಾರೆ.
ದೈವಾಷರ್ಿಕ ಚುನಾವಣೆಯ ವೇಳಾಪಟ್ಟಿ: ಈಗಾಗಲೇ ಉಮೇದುವಾರಿಕೆ ಅಜರ್ಿಸಲ್ಲಿಸಿರುವವರು ತಮ್ಮ ಉಮೇದುವಾರಿಕೆ ಹಿಂಪಡೆಯಲು ಏ.18ರಂದು ಕೊನೆಯ ದಿನವಾಗಿರುತ್ತದೆ, ಅಗತ್ಯವಿದ್ದರೆ ಏ. 25ರಂದು ಭಾನುವಾರ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪಡಿತರ ಚೀಟಿ ಪಡೆಯಲು ಸೂಚನೆ
ಚಿಕ್ಕನಾಯಕನಹಳ್ಳಿ,ಏ.17: ತಾಲೂಕಿನಲ್ಲಿ ಈ ಹಿಂದೆ ಭಾವಚಿತ್ರ ಸೆರೆಹಿಡಿಯಲಾದ ಅಂತ್ಯೋದಯ ಅಕ್ಷಯ, ಎಪಿಎಲ್ ಶಾಶ್ವತ ಗಣಕೀಕೃತ ಪಡಿತರ ಚೀಟಿಗಳನ್ನು ಪಡೆಯಲು ಏಪ್ರಿಲ್ 20ರಂದು ಅಂತಿಮ ದಿನಾಂಕವಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
2009ರ ಏಪ್ರಿಲ್ ತಿಂಗಳ ಮೊದಲು ಭಾವಚಿತ್ರ ತೆಗೆಸಿದ ಶಾಶ್ವತ ಪಡಿತರ ಚೀಟಿಗಳು ಕಛೇರಿಯಲ್ಲಿ ಸುಮಾರು 8ಸಾವಿರವಿದ್ದು ವಿತರಣೆಗಾಗಿ ಜನವರಿ 25ರಿಂದಲೇ ಕೌಂಟರ್ ತೆಗೆಯಲಾಗಿದೆ.
ಶಾಶ್ವತ ಪಡಿತರ ಚೀಟಿ ಪಡೆಯುವ ಮೊದಲು ಭಾವಚಿತ್ರ ತೆಗೆಸಿರುವ ಪಡಿತರ ಚೀಟಿದಾರರು ತಮ್ಮಲ್ಲಿರುವ ಪಡಿತರ ಚೀಟಿಯನ್ನು 18ವರ್ಷ ಮೀರಿದ ಸದಸ್ಯರು 15ರೂ ಅನ್ನು ಕೋಮ್ಯಾಟ್ ಏಜೆನ್ಸಿಯವರಿಗೆ ನೀಡಿದಲ್ಲಿ ತಮ್ಮ ಹೆಬ್ಬೆಟ್ಟಿನ ಗುರುತನ್ನು ಪಡೆದು, ಶಾಶ್ವತ ಪಡಿತರ ಚೀಟಿ ವಿತರಿಸಲಾಗುವುದು ಮತ್ತು ಕುಟುಂಬದ ಯಾರೂ ಭಾವಚಿತ್ರ ತೆಗೆಸಿಕೊಳ್ಳದ ಪಡಿತರ ಚೀಟಿದಾರರು ತಾಲೂಕು ಕಛೇರಿಗೆ ತಮ್ಮ ಕುಟುಂಬದ 12ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರೊಂದಿಗೆ ಹಾಜರಾಗಿ ತಮ್ಮ ಪಡಿತರ ಚೀಟಿಯೊಂದಿಗೆ 45ರೂಗಳನ್ನು ಪಾವತಿಸಿ ಜೀವ ಮಾಪಕ ನೀಡಿ ಬಾವಚಿತ್ರ ತೆಗೆಸಿಕೊಳ್ಳಲು ತಹಶೀಲ್ದಾರ್ ತಿಳಿಸಿದ್ದಾರೆ.
ಶಾಶ್ವತ ಪಡಿತರ ಚೀಟಿಗಳಲ್ಲಿ ಹೆಸರು, ವಯಸ್ಸು, ವಿಳಾಸ ಇತರೆ ತಪ್ಪಾಗಿದ್ದಲ್ಲಿ ಕಾಡರ್್ ಪಡೆದ 1ತಿಂಗಳ ನಂತರ ತಾಲೂಕು ಕಛೇರಿಗೆ ಮನವಿ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಮತ್ತು ಏಕ ವ್ಯಕ್ತಿ ಭಾವ ಚಿತ್ರ ತೆಗೆಸಿದ ಕುಟುಂಬದ ಇತರೆ ಸದಸ್ಯರೊಂದಿಗೆ ಭಾವಚಿತ್ರ ತೆಗೆಸಲು ಅವಕಾಶ ಒದಗಿಸಲಾಗಿದ್ದು ಸದಸ್ಯರು ತಮ್ಮ ಚುನಾವಣಾ ಗುರುತಿನ ಚೀಟಿ ವಿದ್ಯಾಥರ್ಿಗಳ ವ್ಯಾಸಾಂಗ ದೃಡೀಕರಣ ಹಾಗೂ ಇತರೆ ದಾಖಲೆಗಳನ್ನು ಹಾಜರುಪಡಿಸಿ ತಾಲೂಕು ಕಛೇರಿಯಲ್ಲಿ ಭಾವಚಿತ್ರ ತೆಗೆಸಿ ಜೀವಮಾಪನ ನೀಡಬಹುದಾಗಿದೆ, ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ತಹಶೀಲ್ದಾರ್ ಕೋರಿದ್ದಾರೆ.

ತಾಲೂಕಿನ 28 ಗ್ರಾ.ಪಂ.ಗಳಲ್ಲಿನ ಮತಗಟ್ಟೆ ಹಾಗೂ ಮತದಾರರ ಮಾಹಿತಿ
ಚಿಕ್ಕನಾಯಕನಹಳ್ಳಿ,ಏ.17: ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು ಇವುಗಳಿಗೆ ಮೇ 8ರಂದು ಚುನಾವಣೆ ನಡೆಸಲಾಗುವುದು.
ತಾಲೂಕಿನ ದಸೂಡಿ ಗ್ರಾಮ ಪಂಚಾಯಿತಿಯಲ್ಲಿ 6ಮತಗಟ್ಟೆಗಳನ್ನು ಸ್ಥಾಪಿಸಲಿದ್ದು ಇದರಲ್ಲಿ 2602 ಗಂಡಸರು, 2387 ಹೆಂಗಸರು, ಒಟ್ಟು 4989 ಮತದಾರರಿದ್ದಾರೆ, ಹೊಯ್ಸಳಕಟ್ಟೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 8, ಗಂ.2736, ಹೆಂ.2557 ಒಟ್ಟು 5293, ಗಾಣದಾಳು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2800, ಹೆಂ.2577 ಒಟ್ಟು 5377, ಕೆಂಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.2571, ಹೆಂ.2461, ಒಟ್ಟು 5032, ಹುಳಿಯಾರು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 13, ಗಂ.4949, ಹೆಂ.4633 ಒಟ್ಟು 9582, ಯಳನಡು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2564, ಹೆಂ.2324 ಒಟ್ಟು 4888, ಕೋರಗೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2175, ಹೆಂ.2090 ಒಟ್ಟು 4265, ದೊಡ್ಡೆಣ್ಣೆಗೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 9, ಗಂ.3067, ಹೆಂ.3016 ಒಟ್ಟು 6083, ಹಂದನಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7 ಗಂ.2687, ಹೆಂ.2676, ಒಟ್ಟು 5363, ಚೌಳಕಟ್ಟೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.2216, ಹೆಂ.2213 ಒಟ್ಟು 4429, ತಿಮ್ಲಾಪುರ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2441, ಹೆಂ.2353 ಒಟ್ಟು 4794, ದೊಡ್ಡಬಿದರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2477, ಹೆಂ.2372 ಒಟ್ಟು 4849, ಬರಕನಾಳು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2163, ಹೆಂ.2073 ಒಟ್ಟು 4236, ತಿಮ್ಮನಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 8, ಗಂ.2905, ಹೆಂ.2917, ಒಟ್ಟು 5822, ರಾಮನಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.1966, ಹೆಂ.1890 ಒಟ್ಟು 3856, ಕಂದಿಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ. 2380, ಹೆಂ.2398 ಒಟ್ಟು 4778, ಬೆಳಗುಲಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2037, ಹೆಂ.2000 ಒಟ್ಟು 4037, ಬರಗೂರು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2029, ಹೆಂ.1851 ಒಟ್ಟು 3880, ಮತಿಘಟ್ಟ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2085, ಹೆಂ.2067 ಒಟ್ಟು 4152, ಮಲ್ಲಿಗೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2290, ಹೆಂ.2313 ಒಟ್ಟು 4603, ಕುಪ್ಪೂರು ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2330, ಹೆಂ.2308 ಒಟ್ಟು 4638, ಶೆಟ್ಟಿಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2264, ಹೆಂ.2281 ಒಟ್ಟು 4545, ದುಗಡಿಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.1691, ಹೆಂ.1676 ಒಟ್ಟು 3367, ಮುದ್ದೇನಹಳ್ಳಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 9, ಗಂ.2852, ಹೆಂ.2812 ಒಟ್ಟು 5664, ಹೊನ್ನೆಬಾಗಿ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.1658, ಹೆಂ.1618 ಒಟ್ಟು 3276, ತೀರ್ಥಪುರ ಗ್ರಾ.ಪಂಯಲ್ಲಿನ ಮತಗಟ್ಟೆಗಳ ಸಂಖ್ಯೆ 6, ಗಂ.2428, ಹೆಂ.2263 ಒಟ್ಟು 4691, ಗೋಡೆಕೆರೆ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 5, ಗಂ.2166, ಹೆಂ.2126 ಒಟ್ಟು 4292, ಜೆ.ಸಿ.ಪುರ ಗ್ರಾ.ಪಂ.ಯಲ್ಲಿನ ಮತಗಟ್ಟೆಗಳ ಸಂಖ್ಯೆ 7, ಗಂ.2339, ಹೆಂ. 2280 ಒಟ್ಟು 4619 ಮತದಾರಿದ್ದಾರೆ.
ತಾಲೂಕಿನ 28 ಗ್ರಾ.ಪಂ.ಗಳಿಂದ ಒಟ್ಟು 135400 ಮತದಾರರಿದ್ದು ಇದರಲ್ಲಿ ಗಂ.68868, ಹೆಂ.66532 ಇದ್ದಾರೆ, ಈ ಚುನಾವಣೆಗೆ ತಾಲೂಕಿನಲ್ಲಿ ಒಟ್ಟು 187 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
  • ಹಂದನಕೆರೆ ಹೋಬಳಿಯಲ್ಲಿ ಭಾರಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ
  • 30 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟ
  • ಆಲಿಕಲ್ಲಿನಿಂದಜೀವಹಾನಿ, ಮನೆಗಳ ಮೇಲ್ಚಾವಣಿ ಗಾಳಿಗೆ, ನಿರಾಶ್ರಿತರಿಗೆ ಗಂಜಿಕೇಂದ್ರ

ಚಿಕ್ಕನಾಯಕನಹಳ್ಳಿ,ಏ.17: ಹಂದನೆಕೆರೆ ಹೋಬಳಿಯಲ್ಲಿ ಬಿದ್ದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಹಸುಗೂಸೊಂದು ಸಾವನ್ನಪ್ಪಿದ್ದು, ನೂರಾರು ತೆಂಗಿನ ಮರಗಳು ಬುಡಮೇಲಾಗಿವೆ, ಹತ್ತಾರು ಮಾವಿನ ಮಾರುಗಳು ನೆಲಕ್ಕುರುಳಿವೆ, ಹತ್ತಾರು ಎಕರೆ ಬಾಳೆ ತೋಟಕ್ಕೆ ಭಾರಿ ನಷ್ಟವಾಗಿದ್ದು, 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ, ಮನೆಗಳ ಮೇಲ್ಚಾವಣಿ ಗಾಳಿಗೆ ತೂರಿ ಹೋಗಿದ್ದು, 30 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟ ಉಂಟಾಗಿದೆ, ತಾಲೂಕು ಆಡಳಿತದ ವತಿಯಿಂದ ನಿರಾಶ್ರಿತರಿಗೆ ಗಂಜಿ ಕೇಂದ್ರವನ್ನು ತೆರಯಲಾಗಿದೆ.
ಶುಕ್ರವಾರ ಸಂಜೆ ಹಂದನಕೆರೆ ಹೋಬಳಿ ಗುಂಗುರಬಾಗಿ, ಚಿಕ್ಕ ಎಣ್ಣೆಗೆರೆ, ಹಳ್ಳಿ ತಿಮ್ಲಾಪುರ, ದೊಡ್ಡ ಎಣ್ಣೆಗೆರೆ, ಯಳ್ಳೇನಹಳ್ಳಿ, ಹುಚ್ಚನಹಳ್ಳಿ, ಸಬ್ಬೇನಹಳ್ಳಿ,ರಂಗೇನಹಳ್ಳಿ, ಚೌಳಕಟ್ಟೆ, ಭೀಮಸಂದ್ರ, ಕಾನ್ಕೆರೆ, ಬಂದ್ರೇಹಳ್ಳಿ, ಕೆಂಗ್ಲಾಪುರ, ರಾಮಘಟ್ಟೆ ಗ್ರಾಮಗಳಲ್ಲಿ ಬಿದ್ದ ಮಳೆ ಹಾಗೂ ಬಿರುಗಾಳಿಯಿಂದ ಸಾವಿರಾರು ಮರಗಳು ಬಿದ್ದಿವೆ. ಗುಂಗುರಬಾಗಿ ಗ್ರಾಮದಲ್ಲಿನ ದಲಿತರ ಮನೆಗಳ ಮೇಲ್ಚಾವಣಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ತಾತ್ಕಾಲಿಕ ನಿರಾಶ್ರಿತರಾಗಿದ್ದಾರೆ, ಆಲಿಕಲ್ಲಿನ ಹೊಡೆತದಿಂದ ಕಿರಣ್ ಎಂಬುವರ ಹಸುಗೂಸು 'ಮಾನ್ಯಶ್ರೀ' ಎಂಬಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಸಾವನ್ನಪ್ಪಿದ್ದಾಳೆ, ಇದೇ ಗ್ರಾಮದ ಪುಟ್ಟಮ್ಮ ಎಂಬಾಕೆ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ನಿತ್ರಾಣಳಾಗಿದ್ದಾಳೆ, ಗುಂಗುರಬಾಗಿ ಕಾಲೋನಿ ಒಂದರಲ್ಲೇ ಸುಮಾರು 10 ರಿಂದ 12 ಲಕ್ಷ ರೂ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟ ಸಂಭವಿಸಿದೆ.
ಇಷ್ಟೆಲ್ಲಾ ಸಾವು,ನೋವು ಉಂಟಾಗಿದ್ದರು ತಕ್ಷಣವೇ ಸ್ಪಂದಿಸಲಿಲ್ಲವೆಂಬ ಆವೇಶದಿಂದ ಇಲ್ಲಿನ ಜನರು ಪ್ರತಿಭಟನೆಯನ್ನು ನೆಡೆಸಿದರು.
ಈ ಗ್ರಾಮದ ವೃದ್ದರು,ಹೆಂಗಸರು ಹಾಗೂ ಮಕ್ಕಳ ಯೋಗ ಕ್ಷೇಮದ ದೃಷ್ಠಿಯಿಂದ ಇವರೆಲ್ಲರಿಗೆ ಹಂದನೆಕೆರೆ ಸಕರ್ಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು ಇಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿದೆ.
ಈ ಘಟನೆಯಿಂದ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದರೆ, ನೂರಾರು ಕುಟುಂಬಗಳಿಗೆ ಭಾರಿ ಹೊಡೆತ ಬಿದ್ದಿದೆ. ಘಟನಾ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ನೀಡಿ ಸಾವನ್ನಪಿರುವ ಮಗುವಿನ ಕುಟುಂಬಕ್ಕೆ ಸಕರ್ಾರದಿಂದ ಒಂದು ಲಕ್ಷ ರೂ ಪರಿಹಾರ ಕೊಡಿಸುವುದಾಗಿ ತಿಳಿಸಿದರಲ್ಲದೆ, ಸದ್ಯದ ಪರಿಹಾರವಾಗಿ ಪ್ರಕೃತಿ ವಿಕೋಪದ ಪರಿಹಾರ ನಿಧಿಯಿಂದ ಸ್ಥಳದಲ್ಲೇ ಒಂದು ಸಾವಿರ ರೂಗಳ ಚೆಕ್ ನೀಡುವುದಾಗಿ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಬಸವರಾಜೇಂದ್ರ ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಸಕರ್ಾರದಿಂದ ಪ್ರಕೃತಿ ವಿಕೋಪ ನಿಧಿಯಲ್ಲಿ ತಕ್ಷಣವೇ ದೊರೆಯುವ ಪರಿಹಾರವನ್ನು ಕೊಡುವುದಲ್ಲದೆ, ಹೆಚ್ಚಿನ ಪರಿಹಾರಕ್ಕೆ ಕಂದಾಯ ಇಲಾಖೆ ಹೋಬಳಿ ಮಟ್ಟದ ಅಧಿಕಾರಿಗಳ ವರದಿ, ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯವರ ಪರಿಶೀಲನೆಯ ನಂತರ ಹೆಚ್ಚಿನ ಪರಿಹಾರವನ್ನು ಸಕರ್ಾರ ದಿಂದ ಕೊಡಿಸುವುದಾಗಿ ತಿಳಿಸಿದರು. ಈ ಸಂಬಂಧ ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ದೊರೆಯುವ ಸಹಕಾರವನ್ನು ಕೊಡಿಸುವುದಾಗಿ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಸಂಸದರ ನಿಧಿಯಲ್ಲಿ ಮನೆಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದರಲ್ಲದೆ, ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚಚರ್ಿಸಿ ಹೆಚ್ಚಿನ ಅನುಧಾನ ಬಿಡುಗಡೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಜಿ.ಪಂ.ಸದಸ್ಯ ಜಿ.ರಘುನಾಥ್, ತಾ.ಪಂ.ಸದಸ್ಯ ದಾಸೇಗೌಡ, ತಾ.ಪಂ.ಮಾಜಿ ಸದಸ್ಯ ಮೋಹನ್, ಕೆ.ಕೆ.ಹನುಮಂತಪ್ಪ, ಲಚ್ಚಾನಾಯ್ಕ, ಉಪ್ಪಾರಳ್ಳಿ ಬಸವರಾಜು, ಕುದುರೆ ರಾಜಣ್ಣ, ಹೊನ್ನಮ್ಮ, ಸಿ.ಪಿ.ಐ. ರವಿಪ್ರಸಾದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ವೇದಮೂತರ್ಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಮುಂಗಾರು ಅಬ್ಬರಕ್ಕೆ ನಲುಗಿದ ರೈತ
ಚಿಕ್ಕನಾಯಕನಹಳ್ಳಿ,ಏ.19: ತಾಲೂಕಿನ ಹಂದನೆಕೆರೆ ಭಾಗದಲ್ಲಿ ಬಿದ್ದ ಭಾರಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ನೊಂದ ರೈತರನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಭೇಟಿ ಮಾಡಿ ಗ್ರಾಮಸ್ಥರ ಸಂಕಷ್ಟವನ್ನು
ಆಲಿಸಿದರು.
ಈ ಭಾಗದ ಗ್ರಾಮಗಳಾದ ಕೆಂಗಾಲಪುರ, ಕೆಂಗಾಲಪುರ ತಾಂಡ್ಯ, ಹುಚ್ಚಿನಹಳ್ಳಿ, ಕಾನ್ಕೆರೆ, ಗುಂಗರಬಾಗಿ, ಸಬ್ಬೇನಹಳ್ಳಿ ಗ್ರಾಮಸ್ಥರೊಂದಿಗೆ ಮಾತನಾಡಿ, ಸಕರ್ಾರ ದಿಂದ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬರುವ ಸವಲತ್ತುಗಳನ್ನು ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಮೂಲಕ ತಮ್ಮ ಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದರಲ್ಲದೆ, ಗುಂಗುರಬಾಗಿಯ ಕಿರಣ್ ಎಂಬವರ ಮನೆಯ ಮೇಲೆ ಆಲಿಕಲ್ಲು ಬಿದ್ದ ಪರಿಣಾಮ 'ಮಾನ್ಯಶ್ರೀ' ಎಂಬ ಹಸುಗೂಸಿನ ಸಾವಿಗೆ ಮಮ್ಮಲಮರುಗಿದ ಕೆ.ಎಸ್.ಕೆ. ಪ್ರಕೃತಿ ವಿಕೋಪ ನಿಧಿಯಿಂದ ಒಂದು ಲಕ್ಷ ರೂಗಳನ್ನು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಪೋಷಕರಿಗೆ ತಿಳಿಸಿದರು.
ಹಾನಿಗೊಳಗಾದ ತೋಟದ ಮಾಲೀಕರಿಗೆ ಹಾಗೂ ಮನೆಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಸೂರನ್ನು ಒದಗಿಸಿಕೊಡಲು ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದರು. ಈ ಭಾಗದಲ್ಲಿ ತೊಂದರೆಗೆ ಸಿಲುಕಿದ ಇಟ್ಟಿಗೆ ಫ್ಯಾಕ್ಟರಿಗಳ ಮಾಲೀಕರಿಗೂ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮುಂಗಾರಿನ ಅಬ್ಬರಕ್ಕೆ ನಲುಗಿದ ತಾಲೂಕು: ತಾಲೂಕಿನಲ್ಲಿ ಮುಂಗಾರು ಮಳೆ ಆರಂಭವಾದಾಗಿನಿಂದ ಕಸಬಾ, ಕಂದಿಕೆರೆ, ಶೆಟ್ಟೀಕೆರೆ ಹಾಗೂ ಹುಳಿಯಾರು ಹೋಬಳಿಗಳಲ್ಲಿ ಸಾಕಷ್ಟು ತೊಂದರೆಗಳಾಗಿದ್ದು ಇದರಿಂದ ರೈತರ ತೆಂಗು,ಅಡಿಕೆ, ಬಾಳೆ ಹಾಗೂ ಮಾವು ಬೆಳೆಗಳಿಗೆ ತೀವ್ರ ಹಾನಿಯಾಗಿದೆ, ಅಲ್ಲದೆ ರಸ್ತೆ ಬದಿಯ ಮರಗಳು ಹಾಗೂ ವಿದ್ಯುತ್ ಕಂಬಗಳು ಹುರಳಿರುವುದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ಮಳೆಯಿಂದ ವಿದ್ಯುತ್ ಅಡಚಣೆಯಿಂದ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಗ್ರಾ.ಪಂ.ಗಳು ದಿವ್ಯ ನಿರ್ಲಕ್ಷ್ಯದಿಂದೆ. ಗ್ರಾ.ಪಂ. ಕಛೇರಿ ಸಂಪೂರ್ಣವಾಗಿ ಚುನಾವಣಾ ರಾಜಕಾರಣದಿಂದ ಕೂಡಿದ್ದು, ಜನ ಸಾಮಾನ್ಯರ ಕಷ್ಟವನ್ನು ಕೇಳುವ ತಾಳ್ಮೆ ಸ್ಥಳೀಯ ಅಧಿಕಾರವರ್ಗಕ್ಕೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.







Wednesday, April 14, 2010

ಜಾತಿಯಿಂದ ಮನುಷ್ಯನನ್ನು ಗುತರ್ಿಸಬೇಡಿ, ಪ್ರತಿಭೆಯಿಂದ ಗುತರ್ಿಸಿ: ಸಿ.ಬಿ.ಎಸ್

ಚಿಕ್ಕನಾಯಕನಹಳ್ಳಿ, ಏ.14: ಯಾವುದೇ ವ್ಯಕ್ತಿಯನ್ನು ಅವರಲ್ಲಿರುವ ಪ್ರತಿಭೆಗಳ ಮೂಲಕ ಗುತರ್ಿಸಬೇಕೆ ಹೊರತು ಜಾತಿಗಳಿಂದಲ್ಲ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡವರ ಪರವಾದ ಕೆಲಸಗಳನ್ನು ಮಾಡಿದರೆ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ರವರನ್ನು ನೆನೆದಂತಾಗುತ್ತದೆ ಎಂದ ಅವರು, ಸಮಾಜದ ಕೆಳಸ್ತರದಲ್ಲಿರುವ ಜನರಿಗೆ ಅವರ ಅಗತ್ಯತೆಯನು ಅರಿತು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರಲ್ಲದೆ, ಅಧಿಕಾರಿಗಳು ಇದನ್ನು ತಿಳಿದು ಕೆಲಸ ಮಾಡಿ ಎಂದರು. ತಾಲೂಕಿನ ಒಂದು ನೂರು ದಲಿತ ಸಂಘಗಳಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡಿಸಲಾಗುವುದು ಎಂದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಜಾತಿ ವರ್ಗಗಳಲ್ಲಿರುವ ಸಣ್ಣತನ ಮರೆಯಾಗಬೇಕು, ದೊಡ್ಡವರ ಆಶಯದಂತೆ ನಡೆಯಬೇಕು, ಆಗ ಮಾತ್ರ ಇಂತಹ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಚಿಕ್ಕಣ್ಣ ಎಳ್ಳೆಕಟ್ಟೆ, ಸಾರ್ವತ್ರಿಕ ಶಿಕ್ಷಣ ಹಾಗೂ ಮಹಿಳಾ ಮೀಸಲಾತಿಯ ಬಗ್ಗೆ ಅಂಬೇಡ್ಕರ್ ರವರು ಅಂದೇ ಪ್ರತಿಪಾದಿಸಿದ್ದರು ಎಂದ ಅವರು, ಯಾರು ಆಥರ್ಿಕವಾಗಿ ಹಿಂದುಳಿದಿದ್ದಾರೆ ಅಂತಹವರೆಲ್ಲಾ ಮೀಸಲಾತಿಗೆ ಅರ್ಹರು ಎಂಬುದೇ ಅಂಬೇಡ್ಕರ್ರವರ ನಿಲುವಾಗಿತ್ತು ಎಂದರು. ತಾವು ರಚಿಸಿದ 63 ಪುಸ್ತಕಗಳಲ್ಲಿ ಮುಂದಿನ ಭಾರತದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಕನಸು ಕಂಡಿದ್ದರು ಎಂದರು. ಅಂಬೇಡ್ಕರ್ ರವರು 'ದಲಿತ ಸೂರ್ಯ' ಎಂದು ಕರಿಸಿಕೊಂಡ ಮಹಾನ್ ನಾಯಕರು ಎಂದರು.
ಬಾಬು ಜಗಜೀವನ್ ರಾಮ್ ರವರು ಭಾಕ್ರಾನಂಗಲ್ ಅಣೆಕಟ್ಟು ಕಟ್ಟುವ ಮೂಲಕ ಆ ಭಾಗದ ರೈತರ ಪಾಲಿಗೆ ವರದಾನವನ್ನು ನೀಡಿದರು ಎಂದರಲ್ಲದೆ, ದೇಶದ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದರು ಕೃಷಿ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯ ಫಲವಾಗಿ ಜಗಜೀವನ್ ರಾಮ್ ರವರು ಹಸಿರು ಕ್ರಾಂತಿಯ ಹರಿಕಾರ ಎಂಬ ಕೀತರ್ಿಗೆ ಭಾಜನಾದರು ಎಂದರು. ಸಂಸ್ಕೃತದ ಬಗ್ಗೆ ವಿಶೇಷ ಒಲವಿಟ್ಟುಕೊಂಡಿದ್ದ ಜಗಜೀವನ್ ರಾಮ್ ರವರು ತುಳಸಿ ರಾಮಾಯಣವನ್ನು ಸುಲಲಿತವಾಗಿ ಪಠಿಸುತ್ತಿದ್ದರು ಎಂದರು.
ಜಿ.ಪಂ.ಸದಸ್ಯ ಜಿ.ರಘುನಾಥ್ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರೆ ಈ ವರ್ಗಗಳಿಗೆ ಇನ್ನಿಷ್ಟು ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿದ್ದು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಸಾಮಾಜಿಕ ನ್ಯಾಯ ಸಿಗದ ಹೊರತು ಕಾನೂನಿನ ಸ್ವಾತಂತ್ರ ದೊರೆಯುವುದಿಲ್ಲವೆಂದು ಅರಿತಿದ್ದ ಈ ನಾಯಕರುಗಳು ಸಾಮಾಜಿಕ ನ್ಯಾಯಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಮ್ಮ, ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ತಿಮ್ಮಕ್ಕ, ಕಮಲಾನಾಯ್ಕ್, ರುದ್ರೇಶ್, ಪುರಸಭಾ ಸದಸ್ಯರುಗಳಾದ ಕೃಷ್ಣಮೂತರ್ಿ, ಲಕ್ಷ್ಮಯ್ಯ, ಸಿ.ಡಿ.ಚಂದ್ರಶೇಖರ್, ಕವಿತಾಚನ್ನಬಸವಯ್ಯ, ಬಿ.ಜೆ.ಪಿ.ಮುಖಂಡ ಶ್ರೀನಿವಾಸಮೂತರ್ಿ, ದಲಿತ ಮುಖಂಡ ನಾರಾಯಣ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಬೇವಿನಹಳ್ಳಿ ಚನ್ನಬಸವಯ್ಯ, ತೀರ್ಥಪುರದ ಕುಮಾರ್, ಲಿಂಗದೇವರು, ಚಿಕ್ಕಣ್ಣ ಎಣ್ಣೆಕಟ್ಟೆಯವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರವನ್ನು ಸಿಂಗರಿಸಿದ ವಾಹನದಲ್ಲಿ ತಾಲೂಕು ಕಛೇರಿಯಿಂದ ವಿವಿಧ ಜಾನಪದ ನೃತ್ಯಗಳೊಂದಿಗೆ ಮೆರವಣಿಗೆಯಲ್ಲಿ ವೇದಿಕೆಯ ಬಳಿ ತರಲಾಯಿತು.

Tuesday, April 13, 2010

ರಜೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಹೆಚ್ಚಲಿ

ಚಿಕ್ಕನಾಯಕನಹಳ್ಳಿ,ಏ.13: ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಂಡು ಪಠ್ಯದ ಜೊತೆಗೆ ನೆನಪನ್ನು ಹೆಚ್ಚಿಸುವಂತಹ ಕ್ರಿಯಾಶೀಲಾ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳು ಖುಷಿಯಿಂದ ಬೇಸಿಗೆ ರಜೆಯನ್ನು ಕಳೆಯಬೇಕು ಎಂದು ಬಿ.ಇ ಓ ಬಿ.ಜೆ.ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಡಿ.ವಿ.ಪಿ ಬಿ.ಎಚ್.ಎಸ್ ಶಾಲಾಯಲ್ಲಿ ನಡೆದ ಸಿ.ಬಿ.ಎಸ್ ಡ್ಯಾನ್ಸ್ ವಲ್ಡರ್್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ 4ನೇ ವರ್ಷದ ಕಾರಂಜಿ-2010 ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಸಬೇಕು, ಮಕ್ಕಳು ನೃತ್ಯ, ಸಂಗೀತ, ಜಾನಪದ, ಚಿತ್ರಕಲೆ, ಸಂಸ್ಕೃತಿಕರಣ, ಕಂಪ್ಯೂಟರ್ ಜ್ಞಾನ, ಇವುಗಳ ಜೊತೆಗೆ ಈಜು ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಕಾರಂಜಿ ಎಂದರೆ ಚೈತನ್ಯ, ಮಕ್ಕಳು ಆ ಚೈತನ್ಯವನ್ನು ಸದಾ ತಮ್ಮದಾಗಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಕ್ಕಳು ರಜೆಯಲ್ಲಿ ವೃಥಾ ಕಾಲ ಕಳೆಯುವ ಬದಲು, ಮಕ್ಕಳ ಶಿಬಿರದಂತಹವುಗಳಿಗೆ ಪಾಲ್ಗೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಭಿವೃದ್ದಿಯನ್ನು ಕಾಣಬಹದು ಎಂದ ಅವರು, ಪೋಷಕರು ತಮ್ಮ ಮಕ್ಕಳ ಪ್ರತಿಭೆಗಳನ್ನು ಗುತರ್ಿಸಿ ಅವುಗಳನ್ನು ಅನಾವರಣಗೊಳಿಸಲು ಇಂತಹ ಶಿಬಿರಗಳು ಒತ್ತು ನೀಡುತ್ತವೆ ಎಂದು ಹೇಳಿದರು.
ಡಿ.ವಿ.ಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜ್, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಸಿ.ಆರ್.ಪಿ ಅಣ್ಣಪ್ಪ, ನೃತ್ಯ ನಿದರ್ೇಶಕ ವಿಶ್ವನಾಥ್, ಮಿಮಿಕ್ರಿ ರಮೇಶ್ ಉಪಸ್ಥಿತರಿದ್ದರು.


Sunday, April 11, 2010

ದೇಶದ ಯೋಜನೆಯನ್ನು ರೂಪಿಸುವಲ್ಲಿ ಜನಗಣತಿ ಮಹತ್ವದ ಪಾತ್ರವಹಿಸುತ್ತದೆ: ಸಿ.ಬಿ.ಎಸ್

ಚಿಕ್ಕನಾಯಕನಹಳ್ಳಿ,ಏ.11; ದೇಶದ ಮುಂದಿನ ಯೋಜನೆಗಳನ್ನು ರೂಪಿಸಿಲು ಜನಗಣತಿ ಪ್ರಮುಖ ಆಧಾರವಾಗಿದ್ದು ಆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವ ಜವಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2010-11ನೇ ಸಾಲಿನ ಜನಗಣತಿ ಕಾರ್ಯಕ್ರಮದ ತರಬೇತಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದ ಅಂಕಿ ಸಂಖ್ಯೆಗಳನ್ನು ಕ್ರೂಢೀಕರಿಸುವ ಈ ಕಾರ್ಯದಲ್ಲಿ ಜನ ಸಾಮಾನ್ಯರು ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಗಣತಿದಾರರಿಗೆ ಸಹಕರಿಸಬೇಕು, ಹಾಗೆಯೇ ಗಣತಿದಾರರು ಜನ ಸಾಮಾನ್ಯರೊಂದಿಗೆ ಸೌಜನ್ಯದಿಂದ ವತರ್ಿಸುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಣತಿ ಕಾರ್ಯವನ್ನು ಯಶಸ್ವಿಯಾಗುವಂತೆ ಮಾಡಬೇಕು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, 10ವರ್ಷಕ್ಕೊಮ್ಮೆ ನಡೆಯುವ ಜನಗಣತಿಗೆ ಶಿಕ್ಷಕರು ಶ್ರದ್ದೆಯಿಂದ, ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿ ಗಣತಿ ದಾಖಲಾತಿಗೆ ಸರಿಯಾದ ಮಾಹಿತಿ ತುಂಬಬೇಕೆಂದರು. ಜನಗಣತಿ ಶಾಸನ ಬದ್ದವಾಗಿದ್ದು, ಕಾರ್ಯ ನಿರ್ವಹಿಸುವ ಶಿಕ್ಷಕರು ಮನೆಗಳಿಗೆ ತೆರಳಿ ವಿಷಯ ಸಂಗ್ರಹಿಸುವಾಗ ಜನರೊಂದಿಗೆ ಅನುಚಿತವಾಗಿ ವತರ್ಿಸದೆ, ಕುಶಲತೆಯಿಂದ ಜನರೊಂದಿಗೆ ಮಾತನಾಡಿ, ಸಂಯಮದಿಂದ ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಸಕರ್ಾರ ಜನಗಣತಿಗಾಗಿ ನೇಮಕ ಮಾಡಿರುವ ಶಿಕ್ಷಕರಿಗೆ 8ರಿಂದ 10ಸಾವಿರ ಸಂಭಾವನೆ ನೀಡಿದ್ದು ಕಾನೂನಿನ ರಕ್ಷಣೆ ಒದಗಿಸಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ ಶಿಕ್ಷಕರು ತಾವು ಕೈಗೊಳ್ಳುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ಕಾರಣದಿಂದ ಶಿಕ್ಷಣ ಇಲಾಖೆಯನ್ನು ಸಂಪೂರ್ಣವಾಗಿ ಈ ಕೆಲಸಕ್ಕೆ ತೊಡಗಿಸಿಕೊಂಡಿದ್ದು ನಮ್ಮ ಸಮರ್ಥವೇನೆಂಬುದನ್ನು ನಾವು ಕೈಗೆತ್ತಿಕೊಂಡಿರುವ ಈ ಜನಗಣತಿ ಕಾರ್ಯದ ಮೂಲಕ ಮತ್ತೊಮ್ಮೆ ಸಾಬೀತು ಮಾಡಬೇಕು ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಶಿರಸ್ತೆದಾರ್ ಕೆ.ವಿ.ಕುಮಾರ್ ಉಪಸ್ಥಿತರಿದ್ದರು.

Friday, April 9, 2010