Tuesday, March 15, 2011


ತಾತಯ್ಯನವರ 51ನೇ ಉರುಸ್ ಮತ್ತು ಉತ್ಸವ
ಚಿಕ್ಕನಾಯಕನಹಳ್ಳಿ,ಮಾ.13: 51ನೇ ವರ್ಷದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ ಉರುಸ್ ಮತ್ತು ತಾತಯ್ಯನವರ ಉತ್ಸವ ಕಾರ್ಯಕ್ರಮವನ್ನು ಇದೇ 21ರಿಂದ 23ರ ವರಗೆ ನಡೆಯಲು ಗೋರಿಯ ಕಮಿಟಿ ನಡೆಸಲು ತಿಮರ್ಾನಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಉತ್ಸವ ನಡೆಯಲಿದ್ದು 21ರಂದು ತಾತಯ್ಯನವರ ಉತ್ಸವ ಗೋರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ, 22ರಂದು ರಾತ್ರಿ ಹೈಸ್ಕೂಲ್ ಮೈದಾನದಲ್ಲಿ ಅಸ್ಲಂ ಅಕ್ರಮ್ ಸಾಬ್ರಿ ಪಾಟರ್ಿ ಮುಜಫ್ಫರ್ ಪುರ್ ಹಾಗೂ ಕರೀಷ್ಮಾ ತಾಜ್ ನಾಗಪುರ್ ಪಾಟರ್ಿ ಯವರಿಂದ ಜಿದ್ದಾ ಜಿದ್ದಿನ ಖವ್ವಾಲಿ ಏರ್ಪಡಿಸಲಾಗಿದ್ದು ಖವ್ವಾಲಿಯ ಉದ್ಘಾಟನೆಯನ್ನು ಖ್ಯಾತ ಸಾಹಿತಿ ರೆಹಮತ್ ತರೀಖೆರೆ ರವರು ಉದ್ಘಾಟನೆ ನೆರವೇರಿಸಲಿದ್ದು ಕಮಿಟಿ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, 23ರಂದು ಅಂತರಾಷ್ಟ್ರೀಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂರವರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ
ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ರಂಗಸ್ವಾಮಯ್ಯ, ಮಹಮದ್ ಖಲಂದರ್, ಟಿ.ರಾಮಯ್ಯ, ಖನ್ನಿಸಾಬ್ ಉಪಸ್ಥಿತರಿದ್ದರು.
.ಸಕರ್ಾರದ ಯೋಜನೆಗಳು ಈಡೇರಲು ಸಫಲವಾಲಿ
ಚಿಕ್ಕನಾಯಕನಹಳ್ಳಿ,ಮಾ.13: ಸಕರ್ಾರಗಳು ತರುವ ಯೋಜನೆಗಳು ಕೇವಲ ಘೋಷಣೆಗಳಾಗುತ್ತವೆಯೇ ಹೊರತು ಫಲನಾಭವಿಗಳಿಗೆ ಸರಿಯಾಗಿ ತಲುಪುವಲ್ಲಿ ವಿಫಲವಾಗಿವೆ ಎಂದು ಕನರ್ಾಟಕ ಜನವಾದಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಕೆ.ಎನ್.ವಿಮಲಾ ವಿಷಾದಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೃಜನಾ ಮಹಿಳಾ ಸಂಘದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಚರ್್ 8ರಂದು ನ್ಯೂಯಾಕರ್್ ನಗರದಲ್ಲಿ ಉತ್ತಮ ವೇತನ, ಶೋಷಣೆಯ ವಿರುದ್ದ, ಸಮನಾದ ಹಕ್ಕುಗಳಿಗಾಗಿ ಮಹಿಳೆಯರು, ಜವಳಿ ಕಾಮರ್ಿಕರು ಸಂಘಟಿತರಾಗಿ ಪ್ರತಿಭಟಿಸಿದ ದಿನ, ಬೀದಿಗೆ ಇಳಿದು ಹೋರಾಟ ಮಾಡಿದ ನೆನಪಿಗಾಗಿ ವಿಶ್ವಸಂಸ್ಥೆಯ ನಿರ್ಣಯದಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಘೋಷಿಸಿದರು, ಮಹಿಳೆಯರಿಗೆ ಶಿಕ್ಷಣ ಉದ್ಯೋಗ, ಸಂವಿದಾನ ದತ್ತವಾದ ಮೀಸಲಾತಿ ಸಿಗುತ್ತಿಲ್ಲ, ಮಹಿಳೆಯರು ಶಿಕ್ಷಣ ಉದ್ಯೋಗದಲ್ಲಿ ಆಥರ್ಿಕವಾಗಿ ಸಫಲರಾದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ, ಹೆಣ್ಣು ಮಕ್ಕಳ ವಿರುದ್ದ ದೌರ್ಜನ್ಯ, ಅತ್ಯಾಚಾರ, ಶೋಷಣೆಗಳು ನೆಡಯುವುದು ಸ್ತ್ರೀ ಜಾತಿಗೆ ಅಪಮಾನ ಇಂತಹ ಘಟನೆಗಳ ನಡೆಯದಂತೆ ಸಕರ್ಾರ ಹಾಗೂ ಜನಪ್ರತಿನಿಧಿಗಳು ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಬೇಕು ಎಂದ ಅವರು ಹುಟ್ಟಿದ ಪ್ರತಿಯೊಂದು ಮಗುವಿಗೂ ಸೌಲಭ್ಯಗಳು ಸಿಗುವಂತಾಗಬೇಕು, ದೇಶದ ಗೋದಾಮುಗಳಲ್ಲಿ ಆಹಾರ ಧಾನ್ಯ ಕೊಳೆಯುತ್ತಿದ್ದರೂ ವಿತರಣೆ ಸರಿಯಾಗಿ ಆಗದೆ ಜನರಿಗೆ ಸಮಯಕ್ಕೆ ಸರಿಯಾಗಿ ಆಹಾರ ದೊರಕದೆ ನರಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಜಾಥಾವನ್ನು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸಿದರು. ಮಹಿಳೆಯರು ನೆಹರು ಸರ್ಕಲ್ ಬಳಿ ಮೆರವಣಿಗೆಯ ಮೂಲಕ ಮಾನವ ಸರಪಳಿ ನಿಮರ್ಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಲಕ್ಷ್ಮಮ್ಮ, ಪೂರ್ಣಮ್ಮ, ಶಾಂತಮ್ಮ, ಪಂಕಜ ಚಂದ್ರಶೇಖರ್, ಗಂಗಮ್ಮರವರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರಿನ ಪ್ರಗತಿಪರ ಬರಹಗಾತರ್ಿ ವಿ.ಗಾಯಿತ್ರಿ, ಜಿ.ಪಂ.ಸದಸ್ಯೆ ಲೋಹಿತಾಬಾಯಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ಪುರಸಭಾ ಸದಸ್ಯರಾದ ಧರಣಿ ಲಕ್ಕಮ್ಮ, ರುಕ್ಮುಣಮ್ಮ, ಸಾವಿತ್ರಿ, ರೇಣುಕಮ್ಮ, ಇಂದ್ರಮ್ಮ ಉಪಸ್ಥಿತರಿದ್ದರು.
ದರ್ಶಗಳನ್ನು ಪಾಲಿಸಲು ವಿದ್ಯಾಥರ್ಿಗಳಿಗೆ ಕರೆ
ಚಿಕ್ಕನಾಯಕನಹಳ್ಳಿ,ಮಾ.14: ವಿದ್ಯಾಥರ್ಿಗಳು ಶಿಕ್ಷಕರ ಆದರ್ಶಗಳನ್ನು ಅನುಸರಿಸಿ ಜೀವನದಲ್ಲಿ ಮುಂದೆ ಬಂದು ಬದುಕನ್ನು ಹಸನುಗೊಳಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ ಅಂತಹ ಶಿಕ್ಷಕರು ನಮ್ಮ ದೇಶಕ್ಕೆ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಶತಮಾನ ಕಂಡ ಕುರುಬರ ಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಪ್ರಥಮ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಓದಿದ ಶಾಲೆ ಹಾಗೂ ಪಾಠಹೇಳಿಕೊಟ್ಟ ಶಿಕ್ಷಕರು ನಮ್ಮನ್ನು ಪೋಷಿಸಿದ ಪೋಷಕರಷ್ಟೇ ಪ್ರಮುಖರು ಎಂದ ಅವರು ತಮಗೆ ಪಾಠ ಹೇಳಿದ ಶಿಕ್ಷಕರ ಆದರ್ಶವೇ ನಮಗೆ ದಿಕ್ಸೂಚಿ ಆಯಿತು ಎಂದರು.
ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳಂತೆ ಇತರ ಶಾಲೆಯ ಹಿರಿಯ ವಿದ್ಯಾಥರ್ಿಗಳು ಸಂಘಟಿತರಾಗಿ ಶಾಲೆಯ ಅಬ್ಯುದಯಕ್ಕೆ ಶ್ರಮಿಸಿದರೆ ಶಾಲೆಗಳು ಸುಂದರಗೊಳಿಸುವ ಜೊತೆಗೆ ಆ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತದೆ ಎಂದರು.
ಕುರುಬರಶ್ರೇಣಿ ಶಾಲೆಗೆ ಆ ಶಾಲೆಯ ಹಿರಿಯ ವಿದ್ಯಾಥರ್ಿಗಳಾದ ಕ್ಯಾಪ್ಟನ್ ಸೋಮಶೇಖರ್ ಹಾಗೂ ಸಿ.ಪಿ.ಮಹೇಶ್ರವರು ಕೊಟ್ಟಿರುವ ನಿವೇಶನಕ್ಕೆ ಅಗತ್ಯ ಅನುದಾನವನ್ನು ನೀಡಿ ಉತ್ತಮ ಕೊಠಡಿ ನಿಮರ್ಿಸಲಾಗುವುದು ಎಂದರು.
ಸಮಾರಂಭದಲ್ಲಿ ಪ್ರತಿಭಾನ್ವಿನ ವಿದ್ಯಾಥರ್ಿಗಳನ್ನು ಪುರಸ್ಕರಿಸಿದ ವಾಣಿಜ್ಯ ತೆರಿಗೆ ಇಲಾಖೆಯ ಎ.ಸಿ.ಕ್ಯಾಪ್ಟನ್ಸೋಮಶೇಖರ್ ಮಾತನಾಡಿ ಹಿರಿಯ ವಿದ್ಯಾಥರ್ಿಗಳೆಲ್ಲಾ ಒಂದು ಕಡೆ ಸೇರಿ ತಾವು ಓದಿದ ಶಾಲೆಯ ಅಭಿವೃದ್ದಿಯ ಬಗ್ಗೆ ಚಿಂತಿಸುವ ಸಲುವಾಗಿ ಈ ಸಂಘ ಅಸ್ತಿತ್ವಕ್ಕೆ ಬಂದಿತು ಎಂದರಲ್ಲದೆ ಈ ಶಾಲೆಯ ಶತಮಾನ ಕಂಡ ಸಂದರ್ಭದಲ್ಲಿ ಎರಡು ಮೂರು ತಂಡಗಳು ಶತಮಾನೋತ್ಸವ ಆಚರಿಸಲು ಮುಂದಾದವು ಆದರೆ ವ್ಯವಸ್ಥಿತವಾಗಿ ಸಂಘಟಿತರಾಗಲು ಸಾಧ್ಯವಾಗಲಿಲ್ಲ, ಆದರೆ ಶತಮಾನೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿತಲ್ಲದೆ, ಪ್ರಥಮ ವಾಷರ್ಿಕೋತ್ಸವವನ್ನು ಆಚರಿಸಿ ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪುರಸ್ಕರಿಸಲಾಗುತ್ತಿದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಇಂದು ಗ್ರಾಮೀಣ ಭಾಗದ ಪೋಷಕರು ಮಕ್ಕಳ ವಿದ್ಯಾಭ್ಯಾಸವನ್ನು ಮುಂದಿಟ್ಟುಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ನಮ್ಮೂರಿನ ಶಾಲೆಗಳು, ವಿದ್ಯಾಥರ್ಿಗಳನ್ನು ಆಕಷರ್ಿಸುವಂತೆ ಮಾಡುವ ಮೂಲಕ ವಲಸೆ ಹೋಗುವ ಪ್ರವೃತ್ತಿ ತಪ್ಪಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ರಂಗಯ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಸಿ.ಎಸ್.ಬನಶಂಕರಯ್ಯ, ಆರ್.ಬಿ.ಐ ಕೆ.ಜಿ.ರಾಜೇಂದ್ರ, ಸಿ.ಗುರುಮೂತರ್ಿ, ಮು.ಶಿ.ಎಸ್.ಗಂಗಾಧರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕುರುಬರಶ್ರೇಣಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಎನ್.ನರಸಿಂಹಯ್ಯ, ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ವೀಣಾ ಹಾಗೂ ಹರೀಶ್ ಎಂಬ ವಿದ್ಯಾಥರ್ಿಗಳನ್ನು ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾಥರ್ಿನಿ ಗೀತಾ ಪ್ರಾಥರ್ಿಸಿದರೆ, ರಾಜೀವ್ ಸ್ವಾಗತಿಸಿ, ದೇವರಾಜ್ ಸಂಘದ ವರದಿ ವಾಚಿಸಿದರು, ಪುರಷೋತ್ತಮ್ ನಿರೂಪಿಸಿ ಬನಶಂಕರಯ್ಯ ವಂದಿಸಿದರು.


ಅರಿವಿನ ಮೂಲಕ ಏಡ್ಸ್ ಗುಣಪಡಿಸಿ
ಚಿಕ್ಕನಾಯಕನಹಳ್ಳಿ,ಮಾ.14: ಏಡ್ಸ್ ರೋಗವನ್ನು ಅರಿವಿನ ಮೂಲಕ ಗುಣ ಪಡಿಸಬಹುದೇ ಹೊರತು ಔಷದಿ ಮೂಲಕ ಗುಣ ಪಡಿಸಲು ಸಾಧ್ಯವಿಲ್ಲ ಎಂದು ಐ.ಸಿ.ಟಿ.ಸಿ ಆಪ್ತ ಸಲಹಾಗಾರ ನವೀನ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಏಡ್ಸ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1983ರಲ್ಲಿ ಅಮೇರಿಕದಲ್ಲಿ ಮೊದಲು ಪತ್ತೆಯಾದ ಏಡ್ಸ್ ರೋಗ ಮನುಷ್ಯನಲ್ಲಿ ಮಾತ್ರ ಕಂಡು ಬಂದಿದೆ, ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಈ ರೋಗ ಬಹಳ ಅಪಾಯಕಾರಿಯಾಗಿ ಸಾವಿನ ದವಡೆಗೆ ಎಳೆದೊಯ್ಯುತ್ತದೆ ಎಂದ ಅವರು ಏಡ್ಸ್ ರೋಗವು ಮನುಷ್ಯನಲ್ಲಿ ಕಂಡು ಬಂದರೆ ಕನಿಷ್ಠ 6ವರ್ಷ ಬದುಕುವ ಸಾಧ್ಯತೆ ಇದ್ದು ಏಡ್ಸ್ ರೋಗದಿಂದ ಹಲವಾರು ಕಾಯಿಲೆಗಳು ಕಾಣದೆ ದೇಹದೊಳಗೆ ಸೇರಿ ಚಿಕಿತ್ಸೆ ಪಡೆದರೂ ಗುಣಪಡಿಸಲಾಗುವುದಿಲ್ಲ ಎಂದರು.
ಈ ರೋಗವು ಲೈಂಗಿಕತೆ, ಏಡ್ಸ್ ರೋಗದವನ ರಕ್ತ ಪಡೆಯುವುದರಿಂದ, ಏಡ್ಸ್ ರೋಗಿ ತಾಯಿಯು ತನ್ನ ಮಗುವಿಗೆ ಹಾಲುಣಿಸುವಾಗ, ಏಡ್ಸ್ ರೋಗಿಗೆ ಬಳಸಿದ ಸಿರಂಜನ್ನು ಬೇರೊಬ್ಬ ವ್ಯಕ್ತಿಗೆ ಬಳಸುವುದರಿಂದ ರೋಗವು ಹರಡಲಿದ್ದು ಈ ರೋಗದ ಬಗ್ಗೆ ಅರಿವನ್ನು ಪಡೆಯಲು ಸಲಹೆ ನೀಡಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಏಡ್ಸ್ ರೋಗದಿಂದ ಆಗುವ ತೊಂದರೆಗಳನ್ನು ತಿಳಿಸಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಶಿವಲಿಂಗಮೂತರ್ಿ, ಸುರೇಶ್, ಚಂದ್ರಶೇಖರ್, ಪ್ರಸನ್ನಕುಮಾರ್, ಮಹೇಶ್ ಉಪಸ್ಥಿತರಿದ್ದರು.
ಗ್ರಾಹಕರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಮೋಸಹೋಗುವುದು ಖಂಡಿತ
ಚಿಕ್ಕನಾಯಕನಹಳ್ಳಿ,ಮಾ.15: ಗ್ರಾಹಕರು ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದಾಗ ಪ್ರತಿಯಾಗಿ ಪ್ರಶ್ನಿಸುವಂತಹ ಮನೋಭಾವ ಬೆಳೆಸಿಕೊಂಡು ನ್ಯಾಯ ದೊರಕಿಸಿಕೊಳ್ಳಬೇಕು, ಪ್ರಶ್ನಿಸಿದರೂ ಮೋಸವಾದರೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಬೇಕು ಎಂದು ಜಿಲ್ಲಾ ಗ್ರಾಹಕ ಜಾಗೃತಿ ಹಕ್ಕು ಕಾರ್ಯದಶರ್ಿ ಟಿ.ಎಸ್.ನಿರಂಜನ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮದ್ಯಮ ಹಾಗೂ ಕೆಳ ವರ್ಗದವರ ಮೇಲೆ ಹೆಚ್ಚು ವಂಚನೆಗಳು ನಡೆಯುತ್ತಿದ್ದು ಈ ವಂಚನೆಗೆ ಒಳಗಾದವರು ಕೇಂದ್ರ ಮತ್ತು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿದರೆ 90ದಿನಗಳ ಒಳಗಾಗಿ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದ ಅವರು ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ರಸೀತಿಗಳನ್ನು ಮರೆಯದೇ ಪಡೆಯಬೇಕು, ಅಲ್ಲಿ ಮೋಸವಾದರೆ ಗ್ರಾಹಕ ನ್ಯಾಯಾಲಯ ಗ್ರಾಹಕರ ನೆರವಿಗೆ ಬರುತ್ತದೆ ಎಂದರು.
ಗ್ರಾಹಕ ದಿನಾಚರಣೆಯನ್ನು ಜನಸಾಮಾನ್ಯರಿಗೆ ಪಸರಿಸುವದಕ್ಕೆ ಕಾಟಾಚಾರಕ್ಕೆ ನಡೆಯುತ್ತಿದ್ದ ಗ್ರಾಹಕ ದಿನಾಚರಣೆಯನ್ನು ಎಲ್ಲೆಡೆ ಸಮಾರಂಭಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಅವರು ನಾವು ಸಕರ್ಾರಕ್ಕೆ ಕಟ್ಟಿದಂತಹ ತೆರಿಗೆ ಹಣವನ್ನು ಹಾಗೂ ಸರಿಯಾಗಿ ಸರಬರಾಜಾಗದಂತಹ ವಿದ್ಯುತ್ ಈ ಎರಡು ಅಂಶಗಳನ್ನು ಜನಸಾಮಾನ್ಯರು ಪ್ರಶ್ನಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಹೆಗಡೆ ನಗರೆ ಮಾತನಾಡಿ, ಸೇವಾ ಕ್ಷೇತ್ರದಲ್ಲಿ ಗ್ರಾಹಕರು ತುಳಿತಕ್ಕೆ ಒಳಗಾಗುತ್ತಿದ್ದಾರೆ, ತುಳಿತಕ್ಕೆ ಒಳಗಾದವರಿಗೆ ಪ್ರತಿ ಜಿಲ್ಲೆಯಲ್ಲಿರುವ ಗ್ರಾಹಕರ ವೇದಿಕೆ ನೆರವಾಗಲಿದೆ ಎಂದ ಅವರು ನಾವು ಸಾರ್ವಜನಿಕರಿಗಾಗಿ ಮಾಡುವ ಕೆಲಸಗಳಿಗೆ ಸಕರ್ಾರ ಬೆಂಬಲವಾಗಿರಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಡಿ.ಶಿವಮಹದೇವಯ್ಯ ಮಾತನಾಡಿ ಗ್ರಾಹಕ ನ್ಯಾಯಾಲಯದಲ್ಲಿ, ಬ್ಯಾಂಕ್ ಖಾತೆದಾರರಾದರೆ ಬ್ಯಾಂಕ್ ಸರಿಯಾದ ಮಾಹಿತಿ ನೀಡದಿದ್ದರೆ, ಎಲ್.ಐ.ಸಿ. ಇತ್ಯಾದಿ ಕೆಲಸಗಳಲ್ಲಿ ಸರಿಯಾದ ಮಾಹಿತಿ ಇದ್ದರೂ ಕೆಲಸ ವಿಳಂಬವಾದರೆ ನ್ಯಾಯಾಲಯ ಸುಲಭ ರೀತಿಯಲ್ಲಿ ಶೀಘ್ರವಾಗಿ ಪರಿಹಾರ ನೀಡಲಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಗಿರಿಜಾ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಭಗೀರಥ ಗ್ರಾಹಕ ಸೇವಾ ಸಂಸ್ಥೆಯ ಡಾ.ನಂದ, ಆಹಾರ ನಾಗರೀಕ ಸರಬರಾಜು ಉಪನಿದರ್ೇಶಕ ಡಿ.ಹೊಂಬಾಳೇಗೌಡ, ಇ.ಓ ಎನ್.ಎಂ.ದಯಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಸಿ.ಗೋವಿಂದಪ್ಪ ಉಪಸ್ಥಿತರಿದ್ದರು
ಹೆಂಜಾರೆ ಭೈರವೇಶ್ವರ ಸ್ವಾಮಿ ರಥೋತ್ಸವ ಹಾಗೂ ದನಗಳ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.15: ಹೆಂಜಾರೆ ಭೈರವೇಶ್ವರಸ್ವಾಮಿ ಮತ್ತು ಸಿದ್ದರಾಮೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮ ದೇವರುಗಳ ರಥೋತ್ಸವ ಮತ್ತು ದನಗಳ ಜಾತ್ರೆಯನ್ನು ಇದೇ 18ರಿಂದ 23ರವರೆಗೆ ಏರ್ಪಡಿಸಲಾಗಿದೆ.
ಶೆಟ್ಟಿಕೆರೆ ಹೋಬಳಿಯ ಸಿದ್ದರಾಮನಗರ, ದುಗಡಿಹಳ್ಳಿ, ಕೊಡಲಾಗರ, ಬಾಚೀಹಲ್ಳಿ, ವಡೇರಹಳ್ಳಿ, ಬಲ್ಲೇನಹಳ್ಳಿ, ಕಾರೇಹಳ್ಳಿ, ಮಾರಸಂದ್ರ ಗ್ರಾಮಗಳಲ್ಲಿ 18ರಿಂದ 20ರವರಗೆ ಸ್ವಾಮಿಯವರಿಗೆ ಉತ್ಸವವನ್ನು ಏರ್ಪಡಿಸಿದ್ದು 21ರಂದು ಮಡಿ ರಥೋತ್ಸವ, ವೀರಗಾಸೆಕುಣಿತ, 22ರಂದು ದೊಡ್ಡರಥೋತ್ಸವ ಹಾಗೂ 23ರಂದು ಸ್ವಾಮಿಯವರು ಗಂಗಾಸ್ನಾನದ ಮೂಲಕ ಮೂಲಸ್ಥಾನಕ್ಕೆ ತೆರಳುತ್ತಾರೆ.
ರೇಣುಕ ಜಯಂತಿ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮಾ.15: 38ನೇ ವರ್ಷದ ಗುರು ರೇಣುಕ ಜಯಂತಿ ಮಹೋತ್ಸವವನ್ನು ಇದೇ 17ರಂದು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ
ಪಟ್ಟಣದ ಗುರು ರೇವಣಸಿದ್ದೇಶ್ವರ ಮಠದಲ್ಲಿ ಏರ್ಪಡಿಸಿರುವ ಜಯಂತಿಯನ್ನು ಮೂರು ದಿನಗಳ ಕಾಲ ನಡೆಸಲಾಗುವುದು, ಈ ಸಂದರ್ಭದಲ್ಲಿ ರೇಣುಕ ಸಾಂಗತ್ಯ ಪೌರಣಿಕ ಕತೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು, 17ರಂದು ಜಯಂತಿಯ ಅಂಗವಾಗಿ ಗುರುರೇವಣಸಿದ್ದೇಶ್ವಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಕನಕದಾಸರ ಉತ್ಸವ ವಿವಿಧ ಜಾನಪದ ಮನರಂಜನೆಗಳೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ನಡೆದು ನಂತರ ಮಠದಲ್ಲಿ ಸ್ವಾಮಿಯವರ ಹೂವಿನ ಉಯ್ಯಾಲೆ ಉತ್ಸವ ಹಮ್ಮಿಕೊಳ್ಳಲಾಗಿದೆ.
ಮಲ್ಲಿಗೆರೆ ಗ್ರಾಮದೇವತೆ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.15: ಮಲ್ಲಿಗೆರೆ ಗ್ರಾಮದ ಗ್ರಾಮದೇವತೆ ಕರಿಯಮ್ಮದೇವಿಯವರ ಜಾತ್ರಾ ಮಹೋತ್ಸವವನ್ನು ಇದೇ 18ರಿಂದ 20ರವರಗೆ ನಡೆಯಲಿದೆ.
18ರಂದು ಧ್ವಜಾರೋಹಣ ಮತ್ತು ಮಡ್ಲಕ್ಕಿ ಸೇವೆ, 19ರಂದು ಬಾನದ ಸೇವೆ, ಮತ್ತು 20ರಂದು ಸಿಡಿಸೇವೆ ಹಾಗೂ ರಾತ್ರಿ 9ಗಂಟೆಗೆ ಕೃಷ್ಣ ಸಂಧಾನ ಪೌರಾಣಿಕ ನಾಟಕವಿದ್ದು 21ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ 7ಕ್ಕೆ ಸುಧಾ ಬರಗೂರು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು 22ರಂದು ಗಂಗಾಸ್ನಾನದೊಂದಿಗೆ ಮಹಾ ರಥೋತ್ಸವ ಹಾಗೂ ಉಯ್ಯಾಲೆ ಉತ್ಸವ ಏರ್ಪಡಿಸಲಾಗಿದೆ.


Friday, March 11, 2011



ಚಿಂತನ 3-ಡಿ ಚಿತ್ರ ರಚನಾ ಸ್ಪಧರ್ೆಯಲ್ಲಿ ವಿಜೇತರು
ಚಿಕ್ಕನಾಯಕನಹಳ್ಳಿ,ಮಾ.11: ತಾಲೂಕಿನ ಶೆಟ್ಟಿಕೆರೆ ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾಥರ್ಿಗಳು ಚಿಂತನ 3-ಡಿ ಚಿತ್ರರಚನಾ ಸ್ಫದರ್ೆಯಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ರ್ಯಾಂಕ್ ಪಡೆದಿದ್ದಾರೆ.
5ನೇ ತರಗತಿಯ ಲೋಕೇಶ್ ಎಸ್. ಬಿಂದುಕುಮಾರಿ, ಸಿಂಧು ಬಿ.ಎಸ್ ಈ ವಿದ್ಯಾಥರ್ಿಗಳನ್ನು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಮಾರ್ಗದಶರ್ಿ ಶಿಕ್ಷಕ ಹೆಚ್. ಜಿ. ಜಗದೀಶ್, ಸಹಶಿಕ್ಷಕರು ಮತ್ತು ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಪಂಚಾಯ್ತಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.
ತಾಲೂಕಿಗೆ ಹೇಮೆ ಹರಿಸಲು ಭಾಜಪ ಒತ್ತಾಯ
ಚಿಕ್ಕನಾಯಕನಹಳ್ಳಿ,ಮಾ.11: ಕೃಷಿ ಪ್ರಧಾನ ಬದುಕನ್ನು ಅವಲಂಬಿಸಿರುವ ಈ ತಾಲೂಕಿಗೆ ಬೇಸಿಗೆ ಹತ್ತಿರವಾದಂತೆ ಜನ, ಜಾನುವಾರಿಗೂ ಕುಡಿಯಲು ನೀರಿಲ್ಲದ ಸ್ಥಿತಿ ನಿಮರ್ಾಣವಾಗಿದ್ದು, ತಾಲೂಕಿನ ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಗೆಹರಿಸಬೇಕೆಂದು ತಾ.ಭಾಜಪಾ ಕಾರ್ಯದಶರ್ಿ ಸುರೇಶ್ ಹಳೇಮನೆ ಒತ್ತಾಯಿಸಿದ್ದಾರೆ.
ಶೆಟ್ಟಿಕೆರೆ ಮಾರ್ಗವಾಗಿ ಬೋರನಕಣಿವೆಗೆ ಹಾಗೂ ರಜತಾದ್ರಿಪುರ ಮೂಲಕ ಚಿಕ್ಕನಾಯಕನಹಳ್ಳಿ ನಂತರ ಬೋರನಕಣಿವೆಗೆ ಹೇಮಾವತಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹರಿಸಲು ಸಾಧ್ಯವಿದ್ದು ಜೀವನಾವಶ್ಯಕವಾದ ಕುಡಿಯುವ ನೀರನ್ನು ಜನ ಜಾನುವಾರುಗಳಿಗಾಗಿ ನೀಡಲು ಮುಂದಾಗಬೇಕೆಂದು ಭಾಜಪಾ ಕಾರ್ಯಕರ್ತರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಯುವ ಕಾಂಗ್ರೆಸ್ಗೆ ಹೆಚ್ಚುತ್ತಿರುವ ಸದಸ್ಯತ್ವ: ಸಂತೋಷ ಜಯಚಂದ್ರ
ಚಿಕ್ಕನಾಯಕನಹಳ್ಳಿ,ಮಾ.11: ತಾಲೂಕಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿತ್ತಿದ್ದಾರೆ, ಕಾಂಗ್ರೆಸ್ ಪಕ್ಷವು ಯುವಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಿದೆ ಎಂದು ಸಂತೋಷ ಜಯಚಂದ್ರ ತಿಳಿಸಿದರು.
ಈ ಕ್ಷೇತ್ರದ ಕಂದಿಕೆರೆ, ತಿಮ್ಮನಹಳ್ಳಿ, ಬುಕ್ಕಾಪಟ್ಣ ಭಾಗದ ಭೂತ್ ಮಟ್ಟದ ಪ್ರವಾಸ ಮುಗಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರತಿ ಭೂತ್ನಲ್ಲಿ ಕನಿಷ್ಟ 25 ಜನರಂತೆ ಸದಸ್ಯತ್ವವನ್ನು ನೊಂದಿಯಿಸಿಕೊಂಡಿದ್ದು, ಈಗಾಗಲೇ 1400 ಯುವಕರು ತಮ್ಮ ಹೆಸರನ್ನು ಪಕ್ಷದಲ್ಲಿ ನೊಂದಿಯಿಸಿಕೊಂಡಿದ್ದಾರೆ. ಇವರೆಲ್ಲಾ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುವುದಾಗಿ ತಿಳಿಸಿದ್ದಾರೆ. ನಾವು ಸದಸ್ಯತ್ವವನ್ನು ನೀಡುವಾಗ ಎಚ್ಚರಿಕೆಯಿಂದ ನೀಡುತ್ತಿದ್ದೇವೆ. ಪಕ್ಷಕ್ಕೆ ನಿಷ್ಠರಾಗಿ ದುಡಿಯುವಂತಹವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದೇವೆ ಎಂದರು.
ಕ್ಷೇತ್ರದಲ್ಲಿ 20 ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದು, ಈ ಅವಧಿಯಲ್ಲಿ 100 ಮತಕೇಂದ್ರಗಳಲ್ಲಿನ ಯುವಕರನ್ನು ನೊಂದಾಯಿಸಿಕೊಳ್ಳುವ ಜೊತೆಗೆ, ಗ್ರಾಮೀಣ ಭಾಗದ ಹಿರಿಯ ಮುಖಂಡರಗಳನ್ನು ಭೇಟಿ ಮಾಡಿ ಅವರೊಂದಿಗೆ ಪಕ್ಷ ಕಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಚಚರ್ಿಸುತ್ತಿದ್ದೇವೆ ಎಂದರು.
ಶೆಟ್ಟೀಕೆರೆ, ಹಂದನಕೆರೆ ಭಾಗಗಳಿಗೆ ವಿಧಾನ ಸಭೆಯ ಉಪನಾಯಕ ಟಿ.ಬಿ.ಜಯಚಂದ್ರ ಪ್ರವಾಸ ಕೈಗೊಳ್ಳಲಿದ್ದು, ಅವರೊಂದಿಗೆ ನಾವೆಲ್ಲಾ ಕೈ ಜೋಡಿಸಲಿದ್ದೇವೆ ಎಂದರು.
ಈ ಭಾಗದ 200 ಭೂತ್ಗಳ ಪೈಕಿ 100 ಭೂತ್ಗಳಿಗೆ ನಮ್ಮ ತಂಡದೊಂದಿಗೆ ಆಯಾ ಭಾಗದ ಮುಖಂಡರು ಪ್ರವಾಸದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದ ಭೂತ್ಗಳಿಗೆ ನಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಸಂತೋಷ್ ಜಯಚಂದ್ರ ತಿಳಿಸಿದರು.


Tuesday, March 8, 2011

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಲಹೆ: ಅನಿತಾಕುಮಾರಸ್ವಾಮಿ
ಚಿಕ್ಕನಾಯಕನಹಳ್ಳಿ,ಮಾ.08: ಹೆಣ್ಣು ಹುಟ್ಟಿದಾಗ ತಾತ್ಸರ ಮಾಡದೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಮಡಿಲು(ಸೀಮಂತ) ತುಂಬುವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗು ಎಣ್ಣೆ ಕಲಿತರೆ ಸ್ವಾವಲಂಬಿಯಾಗಿ ಆಥರ್ಿಕವಾಗಿ ಸಬಲರಾಗಿ ಜೀವನ ನಡೆಸಲು ಸಾಧ್ಯ ಸಕರ್ಾರ ಸ್ತ್ರೀಯರಿಗೆ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆಥರ್ಿಕ ಸ್ವಾವಲಂಬಿಗಳಾಗಿ ಅಂತರಾಷ್ಟ್ರೀ ಮಹಿಳಾ ದಿನಾಚರಣೆ ನಡೆಸುತ್ತಿರುವುದು ಪುರುಷರ ವಿರುದ್ದವಲ್ಲ ಎಂದರು. ನಗರಗಳಲ್ಲಿ ನಡೆಯುತ್ತಿರುವ ಸಿದ್ದ ಉಡುಪು ಕಾಖರ್ಾನೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದರೂ ಇದು ಬಯಲಿಗೆ ಬರುತ್ತಿಲ್ಲ ಕಾರಣ ನಮ್ಮನ್ನು ಕೆಲಸದಿಂದ ಎಲ್ಲಿ ತಗೆಯುತ್ತಾರೋ ಎಂಬ ಭಯ, ಗ್ರಾಮೀಣ ಪ್ರದೇಶದಲ್ಲೂ ಹಾಗೂ ನಗರಗಳಲ್ಲೂ ಮಹಿಳೆಯರ ಮೇಲೆ ಹೆಚ್ಚಿನ ಲೈಂಗಿಕ ದೌರ್ಜನ್ಯ ನಡೆದರೂ ಯಾರೂ ಪೋಲಿಸರಿಗೆ ದೂರು ನೀಡುತ್ತಿಲ್ಲ ಎಲ್ಲಿ ಮಾನ ಹೋಗುತ್ತದೋ ಎಂಬ ಭಯದಿಂದ ಎಂದರು.
ಸ್ತ್ರೀರೋಗ ತಜ್ಞರಾದ ಡಾ.ಪದ್ಮಿನಿ ಪ್ರಸಾದ್ ಮಾತನಾಡಿ ಗಬರ್ಿಣಿ ಸ್ತ್ರೀಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು, ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ತಾರತಮ್ಯವಿದ್ದು ಇದನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಬ್ರೂಣ ಹತ್ಯೆ ಮಾಡದೆ ಯಾವುದೇ ಮಗುವಾದರೂ ತಂದೆ ತಾಯಿ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಹೆಣ್ಣು ಮಕ್ಕಳಿಗೆ ಯಾವುದೇ ತರಹದ ಸಮಸ್ಯೆ ಬಂದಲ್ಲಿ ನಿವಾರಣೆ ಮಾಡುವುದು ಜನ ಪ್ರತಿನಿಧಿಗಳಿಗೆ ಕರ್ತವ್ಯ ಗಭರ್ಿಣಿ ಸ್ತ್ರೀಯರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು, 1800 ಗಭರ್ಿಣಿ ಸ್ತ್ರೀಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಫಾತೀಮ, ಜಿ.ಪಂ.ಸದಸ್ಯೆ ಮಂಜುಳ ಗವಿರಂಗಯ್ಯ, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಉಪಸ್ಥಿತರಿದ್ದರು.

ಜೆ.ಸಿ.ಎಂ ಮೇಲೆ ಅವಹೇಳನಕಾರಿ ಮಾತಿಗೆ ಅಭಿಮಾನಿ ಬಳಗ ಖಂಡನೆ
ಚಿಕ್ಕನಾಯಕನಹಳ್ಳಿ,ಮಾ.08: ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆದಿರುವ ಘಟನೆಗೆ ಭಾಗಿಯಾಗದ ಜಯಣ್ಣನನ್ನು ಬಂಧಿಸಿರುವುದಕ್ಕೆ ವಿರೋಧಿಸುತ್ತೇವೆ ಹೊರತು ನಿಜವಾದ ಆರೋಪಿಗಳನ್ನು ಬೆಂಬಲಿಸುವುದಿಲ್ಲ, ಈ ಘಟನೆಗೆ ದಲಿತರಿಗೆ ಅವಮಾನವಾಗುವಂತೆ ಅವಹೇಳನಕಾರಿಯಾದ ಯಾವುದೇ ಮಾತನ್ನು ಮಾಜಿ ಶಾಸಕರು ಆಡಿರುವುದಿಲ್ಲ ಎಂದು ಮಾಜಿ ಶಾಸಕರ ಅಭಿಮಾನ ಬಳಗ ಹೇಳಿಕೆ ನೀಡಿದ್ದಾರೆ.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲ ದಲಿತ ಮುಖಂಡರು ಈ ಘಟನೆಗೆ ಸಂಬಂಧಿಸಿದಂತೆ ಜೆ.ಸಿ.ಮಾಧುಸ್ವಾಮಿಯರವರ ವಿರುದ್ದ ರಾಜಕೀಯ ಪಿತೂರಿ ಹೇಳಿಕೆ ನೀಡಿ ಅವರನ್ನು ಬಂಧಿಸಿ ಗಡಿಪಾರು ಮಾಡಿ ಎಂಬ ಹೇಳಿಕೆ ನೀಡಿರುವುದನ್ನು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರಾದ ಶಶಧರ್, ನಿರಂಜನಾಮೂತರ್ಿ ಖಂಡಿಸಿದ್ದಾರೆ.
ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿದ್ದಾರೆಂದು 5ಜನರ ಮೇಲೆ ಕೇಸು ದಾಖಲಾಗಿದ್ದು, ಈ ಘಟನೆಗೆ ಯಾವುದೇ ಪ್ರೇರಣೆ ನೀಡಿಲ್ಲದಿದ್ದರೂ ತಿಮ್ಲಾಪುರ ತಾಲೂಕು ಪಂಚಾಯ್ತಿ ಸದಸ್ಯ ಜಯಣ್ಣನವರ ಬಂಧಿಸಿದ್ದನ್ನು ಗ್ರಾಮಸ್ಥರು, ಮತ್ತು ಜೆ.ಡಿ.ಯು ಪಕ್ಷದ ಕಾರ್ಯಕರ್ತರು ಬಂಧಿಸಿರುವುದಕ್ಕೆ ವಿರೋಧಿಸಿ ಪ್ರತಿಭಟಿಸಿದಾಗ ಪೋಲಿಸ್ ಇಲಾಖೆಯವರು ಜಯಣ್ಣನವರನ್ನು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ದಲಿತರಿಗೆ ಅವಮಾನವಾಗುವಂತೆ ಅವಹೇಳನಕಾರಿಯಾದ ಯಾವುದೇ ಮಾತನ್ನು ಆಡಿರುವುದಿಲ್ಲ, ತಾಲೂಕು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಅನೇಕ ದಲಿತ ಪರ ಕೆಲಸಗಳನ್ನು ಮಾಡಿರುವ ಇಂತಹವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ರಾಜಕೀಯ ಪಿತೂರಿ ಮಾಡುವುದನ್ನು ಖಂಡಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಕೆ.ಆರ್.ಶಿವಾನಂದ, ಡಿ.ಎಸ್.ಎಸ್ ಮುಖಂಡ ಆರ್.ಗೋವಿಂದಯ್ಯ, ಗ್ರಾ.ಪಂ.ಸದಸ್ಯೆ ಬಿ.ಎನ್.ಶಶಿಕಲಾ, ದಲಿತ ಮುಖಂಡರಾದ ಬಾಲಾಜಿ, ಶ್ರೀರಂಗಯ್ಯ, ರಂಗಸ್ವಾಮಿ, ವಿಶ್ವನಾಥ್, ಎ.ಪಿ.ಎಂ.ಸಿ ನಿದರ್ೇಶಕ ಮಲ್ಲಿಗೆರೆ ರಾಜಶೇಖರ್, ಜಿ.ಎಸ್.ಬಸವರಾಜು, ಶಿವಣ್ಣ ಉಪಸ್ಥಿತರಿದ್ದರು.
ಆಕಸ್ಮಿಕ ಬೆಂಕಿ: 4ಲಕ್ಷ ರೂ ನಷ್ಠ

ಚಿಕ್ಕನಾಯಕನಹಳ್ಳಿ,ಮಾ.08: ತಾಲೂಕಿನ ಕಸಬಾ ಹೋಬಳಿ ಸಾವೆಶೆಟ್ಟಿ ಹಳ್ಳಿ ಬೆಳೆ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಒಬ್ಬ ಸಾವನ್ನಪ್ಪಿದ್ದಾರೆೆ.
ದೇವರಾಜು ಎಂಬುವರ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 80ಗಿಡ ತೆಂಗು, 30ಅಡಿಕೆ, 30 ಮಾವು, ಸಪೋಟ, ಹಲಸಿನಗಿಡ ಹಾಗೂ ತೆಂಗಿಗೆ ಅಳವಡಿಸಿದ್ದ ಡ್ರಿಪ್ಪೈಪ್ಲೈನ್, ಪಿವಿಸಿ ಪೈಪ್ಗಳು ಸೇರಿ 4ಲಕ್ಷಕ್ಕೂ ಹೆಚ್ಚು ನಷ್ಠವುಂಟಾಗಿದೆ, ಮೃತ ರಾಮಯ್ಯ(65) ಬೆಂಕಿ ಹೊಗೆಗೆ ಆಚೆ ಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Saturday, March 5, 2011

ಬಿಡುಗಡೆಗೊಳಿಸಿರುವವರನ್ನು ಶೀಘ್ರ ಬಂಧಿಸಲು ಒತ್ತಾಯ: ದಸಂಸ
ಚಿಕ್ಕನಾಯಕನಹಳ್ಳಿ,ಮಾ.05: ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿಯ ದಲಿತ ಮುಖಂಡ ಹನುಮಂತಯ್ಯ ಮತ್ತು ನರಸಿಂಹಯ್ಯನವರ ಮೇಲೆ ಇತ್ತೀಚಿಗೆ ಸವಣರ್ಿಯರಿಂದ ದೌರ್ಜನ್ಯ ನಡೆದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹದು ಈ ರೀತಿಯ ಕೃತ್ಯಗಳ ಹುಳಿಯಾರು ಸುತ್ತ ಮುತ್ತ ನಡೆಯುತ್ತಿದ್ದು ಇದರಿಂದ ದಲಿತರಲ್ಲಿ ಕಳವಳ ಉಂಟಾಗಿದೆ ಎಂದು ತಾಲೂಕು ದಸಂಸ ಸಂಘನಾ ಸಂಚಾಲಕ ಪಿ.ಕೃಷ್ಣಮೂತರ್ಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಈ ಸಂಭಂಧವಾಗಿ ಪೋಲಿಸರು ತನಿಖೆ ಮಾಡುತ್ತಿದ್ದು ಮೂರು ಜನ ಆರೋಪಿಗಳ ವಿರುದ್ದ ಎಫ್.ಐ.ಆರ್ ಹಾಕಿ ಬಂದಿಸಿದ್ದು ಉಳಿದ ಆರೋಪಿಗಳ ಶೋಧನೆಯಲ್ಲಿರುವಾಗಲೇ ಏಕಾ ಏಕೀ ಮಾಜಿ ಶಾಸಕರೊಬ್ಬರು ತಮ್ಮ ಅನುಯಾಯಿಗಳೊಂದಿಗೆ ಪೋಲಿಸ್ ಠಾಣೆ ಮುಂದೆ ಧರಣಿ ಮಾಡಿ ಮುಖ್ಯ ಆರೋಪಿಯಾದ ತಾಲ್ಲೂಕು ಪಂಚಾಯ್ತಿ ಸದಸ್ಯ ಜಯಣ್ಣ ಎಂಬುವರನ್ನು ಬಂಧ ಮುಕ್ತಗೊಳಿಸಿರುವುದು ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ, ಪೋಲಿಸರು ಈ ಧರಣಿಗೆ ಹೆದರಿ ರಾಜಕೀಯ ಮುಖಂಡರಿಗೆ ಆರೋಪಿಯನ್ನು ಬಿಡುಗಡೆಗೊಳಿಸಿರುವುದು ದಲಿತರಲ್ಲಿ ಭಯ ಹುಟ್ಟಿಸಿದೆ, ಪೋಲಿಸರು ಈ ರೀತಿ ಮಾಡಿದಲ್ಲಿ ನ್ಯಾಯಾಲಯ ಮತ್ತು ಜೈಲು, ಕಾನೂನಿನ ಗತಿಯೇನು ಎಂದು ಪ್ರಶ್ನಿಸಿರುವ ಅವರು ಮಾಜಿ ಶಾಸಕರಿಂದ ಈ ರೀತಿ ಆಗಿರಬೇಕಾದರೆ ದಲಿತ ಸಮುದಾಯಗಳ ರಕ್ಷಣೆ ಎಲ್ಲಿದೆ, ಸಕರ್ಾರ ಈ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಂಡು ಬಂಧ ಮುಕ್ತಗೊಂಡಿರುವ ಆರೋಪಿಯನ್ನು ತಕ್ಷಣ ಬಂಧಿಸಿ ಇನ್ನಿತರ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ದಸಂಸ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಾರಾಯಣ್, ಕೆಂಚಪ್ಪ ತಿಳಿಸಿದ್ದಾರೆ.



ಚಿಕ್ಕನಾಯಕನಹಳ್ಳಿ,ಮಾ.05: ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ಮೊದಲನೇ ವರ್ಷದ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 13ರ ಭಾನುವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ನಿವರ್ಾಣೇಶ್ವರ ಬಾಲಕಿಯರ ಪ್ರೌಡಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಸಂಘದ ಅಧ್ಯಕ್ಷ ಜಿ.ರಂಗಯ್ಯ ಅಧ್ಯಕ್ಷತೆ ವಹಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ವಾಣಿಜ್ಯ ತೆರಿಗೆ ಸಹಾಯುಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪುರಸ್ಕರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜ್ರಾವ್, ನಿವೃತ್ತ ಸಹಾಯಕ ನಿದರ್ೇಶಕ ಸಿ.ಎಸ್.ನಾಗರಾಜ್, ನಿವೃತ್ತ ಶಿಕ್ಷಕ ಸಿ.ಎಸ್.ಬನಶಂಕರಯ್ಯ, ವೈದ್ಯ ಡಾ.ಸಿ.ಎಲ್.ಪ್ರಹ್ಲಾದ್, ಡಾ.ತಿಪ್ಪೇರುದ್ರಯ್ಯ, ಪ್ರಾಂಶುಪಾಲ ಸಿ.ಕೆ.ಶಿವರಾಜ್, ರಾ.ಅ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ, ಆರ್.ಬಿ.ಐ. ಕೆ.ಜಿ.ರಾಜೇಂದ್ರ, ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ, ಮಾಜಿ ಯೋಧ ಶಿವಣ್ಣ(ಮಿಲ್ಟ್ರಿ), ಮುಖ್ಯ ಶಿಕ್ಷಕ ಎಸ್.ಗಂಗಾಧರಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಎಸ್.ನರಸಿಂಹಮೂತರ್ಿ ಉಪಸ್ಥಿತರಿರುವರು.


Monday, February 21, 2011


ಜಮೀನು ವಿವಾದಕ್ಕೆ ಬೆಂಕಿಗಾಹುತಿಯಾದ ಒಂದೇ ಕುಟುಂಬದ ಐವರು.
ಚಿಕ್ಕನಾಯಕನಹಳ್ಳಿ,ಫೆ.19: ಕುಟುಂಬದಲ್ಲಿನ ಜಮೀನಿನ ವಿವಾದದಿಂದಾಗಿ ಒಂದೇ ಕುಟುಂಬದ 5 ಜನ ಸಜೀವ ದಹನವಾದರೆ, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೊಯ್ಯಲಾಗಿದೆ. ಈ ಘಟನೆ ತಾಲೂಕಿನ ಗೋಡೆಕೆರೆಯ ಸೊಂಡೆನಹಳ್ಳಿಯ ಯಾದವರಹಟ್ಟಿಯ ತೋಟದ ಮನೆಯಲ್ಲಿ ನಡೆದಿದೆ.
ಘಟನೆಯಲ್ಲಿ ಜುಂಜಮ್ಮ(75), ಕೃಷ್ಯಯ್ಯ(60), ಶಿವಮ್ಮ(40), ಜೀವಂತ್(7), ಹೇಮಂತ್(2) ಸಜೀವ ದಹನಗೊಂಡಿದ್ದರೆ, ಕೃಷ್ಣಯ್ಯನ ಮಗ ಜಗದೀಶ್(25) ಎಂಬುವವನನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಘಟನೆಗೆ ಕಾರಣ: ಇಡೀ ಘಟನೆಗೆ ಜಮೀನಿನ ವಿವಾದವೇ ಕಾರಣವೆನ್ನಲಾಗಿದ್ದು, ಮೃತ ಕೃಷ್ಣಯ್ಯನ ಮಾವ ಚಿಕ್ಕಣ್ಣ ಮತ್ತು ಜುಂಜಮ್ಮ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬಾಕೆ ಹಲವು ವರ್ಷಗಳ ಹಿಂದೆಯೇ ಮರಣಹೊಂದಿದ್ದರು, ಚಿಕ್ಕಣ್ಣನ ಎರಡನೇ ಮಗಳು ಶಿವಮ್ಮನಿಗೆ ತಿಪಟೂರು ತಾಲೂಕಿನ ಕೃಷ್ಣಯ್ಯನೊಂದಿಗೆ ಮದುವೆ ಮಾಡಿ, ಮನೆಯ ಅಳಿಯನನ್ನಾಗಿ ಮಾಡಿಕೊಳ್ಳಲಾಗಿತ್ತು. ಕೃಷ್ಣಯ್ಯನ ಅತ್ತೆ, ಈ ಘಟನೆಯಲ್ಲಿ ಮೃತಳಾಗಿರುವ ಜುಂಜಮ್ಮನೊಂದಿಗೆ ಸೊಂಡೆನಹಳ್ಳಿಯ ತೋಟದ ಮನೆಯಲ್ಲಿ ಕುಟುಂಬ ಊಡಿದ್ದು ಚಿಕ್ಕಣ್ಣನ ಸಂಬಂಧಗಳಿಗೆ ಸಮಾಧಾನ ತಂದಿರಲಿಲ್ಲ, ಚಿಕ್ಕಣ್ಣನ ಮರಣಾನಂತರ ಈ ಶೀತಲ ಸಮರ ಕಳೆದ 20 ವರ್ಷಗಳಿಂದ ನಡೆಯುತ್ತಿತ್ತು. ಈ ಮಧ್ಯೆ ಚಿಕ್ಕಣ್ಣನಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರಿಗಿದ್ದ 10 ಎಕರೆ ಜಮೀನನ್ನು ಲಪಟಾಯಿಸಬೇಕೆಂದು ಚಿಕ್ಕಣ್ಣನ ಸಂಬಂಧಿಗಳು ಹೊಂಚು ಹಾಕುತ್ತಿದ್ದರು,
ಕೃಷ್ಣಯ್ಯನಿಗೆ ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು. ಇದರಲ್ಲಿ ಕೃಷ್ಣಯ್ಯನ ಮಗ ನಾಗೇಶ್ ಜಮೀನಿನ ವಿಷಯವಾಗಿ ತಂದೆಯೊಂದಿಗೆ ಜಗಳವಾಡಿಕೊಂಡು ಬೆಂಗಳೂರಿಗೆ ಹೋಗಿದ್ದ, ಈ ಸಂದರ್ಭವನ್ನೇ ಹೊಂಚು ಹಾಕುತ್ತಿದ್ದ ಮಠದ ತಮ್ಮಯ್ಯ, ಜಂಜಪ್ಪ, ಹಾಗೂ ಮಗ ಜಂಜಯ್ಯ, ಬಸವರಾಜ ನಾಗೇಶ್ನ ಜೊತೆಗೂಡಿ ಈ ಕೃತ್ಯ ಎಸೆಗಿರಬಹುದು ಎಂದು ಕೃಷ್ಣಯ್ಯನ ಹೆಣ್ಣು ಮಕ್ಕಳಾದ ರಾಧಮ್ಮ, ರತ್ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಮರಣ ಹೊಂದಿರುವ ಜೀವಂತ್ ಕೃಷ್ಣಯ್ಯನ ಎರಡನೇ ಮಗಳಾದ ರಾಧಮ್ಮನ ಮಗ, ಈತ ತಾತನ ಮನೆಯಲ್ಲಿಯೇ ಇದ್ದು ಎರಡನೇ ತರಗತಿಯಲ್ಲಿ ಓದುತ್ತಿದ್ದರೆ, ಕೊನೆಯ ಮಗಳು ಲತಾಳ ಮಗ ಎರಡು ವರ್ಷದ ಹೇಮಂತನು ಘಟನೆಯ ಹಿಂದಿನ ದಿನ ಅವರ ತಾಯಿ ತವರು ಮನೆಯಾದ ಕೃಷ್ಣಯ್ಯನ ಮನೆಯಲ್ಲಿ ಬಿಟ್ಟಿದ್ದರು. ಕೃಷ್ಣಯ್ಯನ ಮೂರು ಜನ ಹೆಣ್ಣು ಮಕ್ಕಳು ಕೃಷ್ಣಯ್ಯನ ಮೊದಲ ಮಗಳಾದ ರತ್ನಮ್ಮ ವಾಸವಿದ್ದ ಸೊಂಡೆನಹಳ್ಳಿಯ ಊರೊಳಗಿನ ಮನೆಯಲ್ಲಿ ಮಲಗಿದ್ದರಿಂದ ಇವರು ಜೀವಂತವಾಗಿದ್ದಾರೆ.
ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿರಬಹುದೆಂದು ಊಹಿಸಲಾಗಿದ್ದು, ಕೃಷ್ಣಯ್ಯನ ಮನೆಗೆ ಹೊರಗಿನಿಂದ ಬೀಗ ಹಾಕಿ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಸಾವಿನ ಪ್ರಮಾಣ ಹೆಚ್ಚಿದೆ. ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ.
ಘಟನೆಯ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಎಸ್.ಪಿ. ಡಾ.ಹರ್ಷ ಭೇಟಿ ನೀಡಿದ್ದರು.






ಸಕರ್ಾರಿ ನೌಕರರಿಗೆ ಕ್ರೀಡಾ ಕೂಟ ಮತ್ತು ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.21: ರಾಜ್ಯ ಸಕರ್ಾರಿ ನೌಕರರ ಕ್ರೀಡಾ ಕೂಟ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಇದೇ 26ರ ಬೆಳಗ್ಗೆ 9ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಓ.ಓ.ಡಿ. ಸೌಲಭ್ಯವಿದ್ದು, ಶಿಕ್ಷಣ ಇಲಾಖೆ ಉಪನಿದರ್ೇಶಕ ಮೋಹನ್ಕುಮಾರ್ ಸಮಾರಂಭದ ಧ್ವಜಾರೋಹಣ ನೆರವೇರಿಸಲಿದ್ದು ತಾ.ರಾ.ಸ.ನೌ.ಸಂಘದ ಆರ್.ಪರಶಿವಮೂತರ್ಿ ಅಧ್ಯಕ್ಷತೆ ವಹಿಸಲಿದ್ದು ರಾ.ಸ.ನೌ,ಸಂಘದ ಅಧ್ಯಕ್ಷ ಎಲ್.ಭೈರಪ್ಪ ನಿವೃತ್ತ ನೌಕರರಿಗೆ ಸನ್ಮಾನಿಸಲಿದ್ದಾರೆ.
ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್ ಪ್ರತಿಭಾ ಪುರಸ್ಕಾರ ನೀಡಲಿದ್ದು ಜಿಲ್ಲಾ ಕ.ರಾ.ಸ.ನೌ.ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಕ್ರೀಡಾ ಜ್ಯೋತಿ ಮತ್ತು ತಹಶೀಲ್ದಾರ್ ಟಿ.ಸಿ.ಕಾಂತರಾಜು ವಂದನಾ ಸ್ವೀಕರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಕವಿತಾಚನ್ನಬಸವಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಫಾತೀಮ, ಜಿ.ಪಂ.ಸದಸ್ಯೆ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷೆರಿ, ನಿಂಗಮ್ಮರಾಮಯ್ಯ, ಲೋಹಿತಾಬಾಯಿ, ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ರಂಗೇಗೌಡರು, ನಾರಾಯಣಸ್ವಾಮಿ, ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಬಿ.ಭಾಸ್ಕರಾಚಾರ್ಯ, ಡಾ.ಶ್ರೀಧರ್, ಸಿ.ಪಿ.ಐ. ರವಿಪ್ರಸಾದ್, ವಿಶೇಷ ಆಹ್ವಾನಿತರಾಗಿ ಸೈಯದ್ಮುನೀರ್, ರಂಗಸ್ವಾಮಿ, ಹೆಚ್.ಆಂಜನೇಯ, ಅನೀಸ್ಖೈಸರ್, ಡಿ.ಉಮೇಶ್, ರೇಣುಕಪ್ರಸನ್ನ, ಬಿ.ಹೆಚ್.ಮಾರುತಿ, ಆರ್.ಎಂ.ಜಯರಾಮ್, ಹೊನ್ನಪ್ಪ, ತಿಮ್ಮರಾಜು, ನರಸಿಂಹಮೂತರ್ಿ, ಸಿ.ಎಚ್.ಶೋಭಾ, ಹೆಚ್.ಎಂ.ಸುರೇಶ್ ಸಿ.ಎಸ್.ಕುಮಾರಸ್ವಾಮಿ ಉಪಸ್ಥಿತರಿರುವರು.
ಸೊಂಡೇನಹಳ್ಳಿಯ ಹೃದಯ ವಿದ್ರಾವಕ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತ ವಿಷಯ
ಚಿಕ್ಕನಾಯಕನಹಳ್ಳಿ,ಫೆ.21: ಸೊಂಡೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ದ್ವೇಷದಿಂದ ಐವರನ್ನು ಸಜೀವವಾಗಿ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆಯು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ ಎಂದು ಚಿತ್ರದುರ್ಗದ ಯಾದವಾನಂದಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಯಾರಿಗಾದರೂ ಈ ಘಟನೆಯ ಸತ್ಯ ಸಂಗತಿ ಗೊತ್ತಿದ್ದರೂ ಮುಚ್ಚಿಟ್ಟರೆ ಅದು ಕಾನೂನು ಅಪರಾಧವಾಗುತ್ತದೆ, ಸೊಂಡೇನಹಳ್ಳಿಯ ಗೊಲ್ಲರಹಟ್ಟಿ ಘಟನೆಯಿಂದ ಯಾದವ ಸಮಾಜದಲ್ಲಿ ಇಂತಹ ಕ್ರೂರಿಗಳು ಇದ್ದಾರಯೇ ಎಂದು ನನಗೆ ಸಮಾಜದಲ್ಲಿ ಕೇಳುತ್ತಿದ್ದಾರೆ. ಈ ಘಟನೆಗೆ ಕಾರಣರಾದವರ ಬಗ್ಗೆ ಪೋಲಿಸರಿಗಾಗಲಿ ಶಾಸಕರಿಗಾಗಲಿ, ತಮಗಗಾಲಿ ದೂರವಾಣಿಯ ಮುಖೇನ ತಿಳಿಸಿ, ಎಂದ ಅವರು ಸಣ್ಣ ಪುಟ್ಟ ಸಮುದಾಯಗಳಲ್ಲಿ ಇಂತಹ ಘಟನೆಗಳು ನಡೆದರೆ ಹೇಗೆ? ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಎಲ್ಲೂ ಇಂತಹ ಕೃತ್ಯ ನಡೆಯಬಾರದು ಈ ಕೃತ್ಯಕ್ಕೆ ಕಾರಣರಾದವರನ್ನು ಊರಿನ ಒಳಗೆ ಸೇರಿಸಬೇಡಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ, ಸಮಾಜದಲ್ಲಿ ಯಾದವ ಜನಾಂಗ ಮುಗ್ದರು ಎಂಬ ಭಾವನೆ ಇದೆ ಈ ಕೃತ್ಯದ ಬಗ್ಗೆ ಪೋಲಿಸರಿಗೆ ಸಹಕರಿಸಿ, ಯಾರು ಗ್ರಾಮ ಬಿಟ್ಟು ತೆರಳ ಬೇಡಿ ಇದರಿಂದ ಪೋಲಿಸರಿಗೆ ಅನುಮಾನ ಬರುತ್ತದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮುಂದೆ ಇಂತಹ ಕೃತ್ಯ ಎಲ್ಲಿಯೂ ಆಗಬಾರದು ಮಾನವೀಯತೆಯನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.
ಸಿ.ಪಿ.ಐ ರವಿಪ್ರಸಾದ್ ಮಾತನಾಡಿ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ರಕ್ಷಣೆಗೆ ಮಾತ್ರ ಪೋಲಿಸರನ್ನು ನಿಯೋಜಿಸಿದ್ದೇವೆ ಇದರಿಂದ ಜನ ಭೀತಿಗೆ ಒಳಗಾಗಬಾರದು ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಸ್ಥಳೀಯರಿಂದ ತಿಳಿಯಬೇಕಾಗಿದೆ ಅದ್ದರಿಂದ ಗ್ರಾಮಸ್ಥರು ಪೋಲಿಸರ ಆಡಳಿತಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಶಾಂತಿ ಸಭೆಯಲ್ಲಿ ತಿಪಟೂರು ಡಿವೈಎಸ್ಪಿ ಡಾ.ಬೋರಲಿಂಗೇಗೌಡ, ಡಿವೈಎಸ್ಪಿ ಶಿವಣ್ಣ, ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ದಯಾನಂದ್, ಗ್ರಾ.ಪಂ.ಸದಸ್ಯ ತಿಮ್ಮೇಗೌಡ ಮುಂತಾದವರಿದ್ದರು.
ಸೊಂಡೇನಹಳ್ಳಿ ಘಟನೆಯ ಸ್ಥಳಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷರ ಭೇಟಿ
ತಪ್ಪಿತಸ್ಥರನ್ನು ಶೀಘ್ರ ಬಂಧಿಸುವಂತೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಫೆ.21: ಕುಟುಂಬದಲ್ಲಿನ ಸದಸ್ಯರ ವೈಷಮ್ಯ ಇಡೀ ಕುಟುಂಬ ಬೆಂಕಿಗೆ ಆಹುತಿಯಾಗಿರುವುದು ದುರದೃಷ್ಟಕರ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸವಂತೆ ಸಕರ್ಾರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.
ತಾಲೂಕಿನ ಸೊಂಡೇನಹಳ್ಳಿ ಯಾದವರ ಹಟ್ಟಿಯ ಬೆಂಕಿಗೆ ಆಹುತಿಯಾಗಿರುವ ತೋಟದ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಂತರ ಪತ್ರಕರ್ತರ ಜೊತೆ ಮಾತನಾಡಿದರು.
ಈ ದುರ್ಘಟನೆಯಿಂದ ಇಡೀ ಕುಟುಂಬ ಬೆಂಕಿಯಲ್ಲಿ ಬೆಂದಿದ್ದು, ಉಳಿದ ಹೆಣ್ಣು ಮಕ್ಕಳಿಗೆ ಮಾನವೀಯ ದೃಷ್ಠಿಯಲ್ಲಾದರೂ ಸಕರ್ಾರ ಪರಿಹಾರ ನೀಡಬೇಕೆಂದರು.
ಈ ಕುಟುಂಬದ ಸಾವಿಗೆ ಕಾರಣನಾಗಿರಬಹುದೆಂದು ಊಹಿಸಲಾಗಿರುವ ಮೃತ ಕೃಷ್ಣಯ್ಯನ ಸಂಬಂಧಿ ಹಾಗೂ ಅವನ ಸಹಚರರನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದು, ಈ ವಿಷಯವಾಗಿ ಪೊಲೀಸ್ ಇಲಾಖೆಯೂ ಎಚ್ಚರವಾಗಿದೆ ಎಂದರಲ್ಲದೆ, ಎಸ್.ಪಿ.ಯವರ ನೇತೃತ್ವದಲ್ಲಿ ರಚನೆಯಾಗಿರುವ ತಂಡಗಳು ಕಾರ್ಯ ಪ್ರವೃತ್ತವಾಗಿವೆ ಎಂದರಲ್ಲದೆ, ತನಿಖೆಯನ್ನು ಚುರುಕುಗೊಳಿಸಲು ಸಕರ್ಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಮೀನು ವಿಷಯಕ್ಕಾಗಿ ಉಂಟಾಗುತ್ತಿರುವ ಗೊಂದಲಗಳು ಪ್ರಾಣ ಹತ್ಯೆಯಂತಹ ಅಮಾನವೀಯ ಹಂತವನ್ನು ತಲುಪುತ್ತಿರುವುದರ ಹಿನ್ನೆಲೆಯಲ್ಲಿ ಲೋಕ ಅದಾಲತ್, ತಹಶೀಲ್ದಾರ್ರವರ ನೇತೃತ್ವದಲ್ಲಿ ರಚನೆಯಾಗಿರುವ ಪಂಚಾಯ್ತಿಗಳು ರಾಜಿ ಸಂಧಾನದ ಮೂಲಕ ನಡೆಯುವಂತಹ ಜಮೀನು ವಿವಾದದ ಕಾನೂನು ಪ್ರಕ್ರಿಯೆಗಳು ಶೀಘ್ರ ಇತ್ಯಾರ್ಥ ಮಾಡುವ ಮೂಲಕ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಾಗಬೇಕೆಂದರು.
ರಾಜ್ಯದಲ್ಲಿರುವ ಜಮೀನು ವಿವಾದಗಳ ಬಗ್ಗೆ ಪೊಲೀಸರು ಹೆಚ್ಚು ಜಾಗೃತರಾಗಿರಬೇಕೆಂದರು.
ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, ಹೆಣ್ಣು, ಹೊನ್ನು, ಮಣ್ಣು, ಈ ಮೂರು ವಿಷಯಗಳಿಗೆ ಏಳುತ್ತಿರುವ ಗಲಾಟೆಗಳು ಹೆಚ್ಚುತ್ತಿವೆ ಎಂದರಲ್ಲದೆ, ಅದರಲ್ಲೂ ಜಮೀನು ವಿವಾದಗಳು ಇತ್ತೀಚೆಗೆ ಕೊಲೆಯ ಹಂತ ತಲುಪುತ್ತಿರುವುದಕ್ಕೆ ನ್ಯಾಯ ನಿರ್ಣಯಗಳಲ್ಲಿ ಆಗುತ್ತಿರುವ ವಿಳಂಬ ಕಾರಣ, ಇದನ್ನು ತಪ್ಪಿಸಲು ಸಕರ್ಾರ ಚಿಂತನೆ ನಡೆಸಬೇಕೆಂದರು.
ಮೃತ ಕೃಷ್ಣಯ್ಯನ ಕುಟುಂಬದಲ್ಲಿ ಉಳಿದಿರುವ ಮಕ್ಕಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಬೇಕೆಂದರು.
ಸ್ಥಳದಲ್ಲಿದ್ದ ಡಿ.ಸಿ.ಸಿ.ಬ್ಯಾಂಕ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜಮೀನು ವಿವಾದಗಳು ಅತಿಯಾಗುತ್ತಿವೆ, ಜಿಲ್ಲೆಯ ಸಿಂಗೋನಹಳ್ಳಿಯಲ್ಲಿ ಜಮೀನು ವಿವಾದಕ್ಕಾಗಿ ನಡೆದ ಕೊಲೆಯ ಘಟನೆಯ ನಂತರದಲ್ಲಿ ಸೊಂಡೇನಹಳ್ಳಿ ಘಟನೆ ಜನರನ್ನು ಭೀತಿಗೊಳಿಸಿದೆ. ಆಮೀನು ಕಾನೂನಿನಲ್ಲಿ ಆಗುತ್ತಿರುವ ತೊಡಕುಗಳನ್ನು ತಪ್ಪಿಸಲು ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಹಕಾರಯುತವಾಗಿ ವತರ್ಿಸಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೊಡಲಾಗರ ಲೋಕೇಶ್, ರಾಮನಹಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಕೇಶವಮೂತರ್ಿ ಉಪಸ್ಥಿತರಿದ್ದರು.

Friday, February 18, 2011


ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಬಿಜೆಪಿ ಒಂದಾಗಿ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವುದು ರಾಜ್ಯದಲ್ಲಿಯೇ ಪ್ರಥಮ
ಚಿಕ್ಕನಾಯಕನಹಳ್ಳಿ,ಫೆ.18: ಮೈಸೂರಿನಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷ ಒಂದಾಗಿ ಜಿಲ್ಲಾ ಪಂಚಾಯಿತ್ನಲ್ಲಿ ಅಧಿಕಾರ ಹಿಡಿದರೆ, ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವುದು ರಾಜ್ಯದಲ್ಲಿಯೇ ಪ್ರಥಮ.
ಬಿಜೆಪಿ ಮತ್ತು ಜೆಡಿಎಸ್ ಒಂದಾದ ಪರಿಣಾಮ ಬಿಜೆಪಿಯ ಗಾಣದಾಳು ಕ್ಷೇತ್ರದ ಜಿ.ಆರ್.ಸೀತರಾಮಯ್ಯ ಅಧ್ಯಕ್ಷರಾಗಿ, ಜೆ.ಡಿ.ಎಸ್ನ ಹುಳಿಯಾರು ಕ್ಷೇತ್ರದ ಬಿ.ಬಿ.ಫಾತೀಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಯು ರಾಷ್ಟ್ರಮಟ್ಟದಲ್ಲೂ ಹೊಂದಾಣಿಕೆ ಇದ್ದರೂ ಚಿನಾಹಳ್ಳಿಯಲ್ಲಿ ಮಾತ್ರ ಬಿನ್ನವಾಗಿ, ಜೆ.ಡಿ.ಎಸ್ ಮತ್ತು ಬಿ.ಜೆ.ಪಿಯ ತಾ.ಪಂ.ಸದಸ್ಯರು ಒಂದಾಗಿ ಸಂಮ್ಮಿಶ್ರ ಆಡಳಿತಕ್ಕೆ ಮತ ಹಾಕಿದ್ದಾರೆ.
ಒಟ್ಟು 19ಸ್ಥಾನದ ತಾಲೂಕು ಪಂಚಾಯಿತಿಯಲ್ಲಿ ಜೆ.ಡಿ.ಎಸ್ 7ಸ್ಥಾನ, ಬಿ.ಜೆ.ಪಿ 6ಸ್ಥಾನ, ಜೆ.ಡಿ.ಯು 6ಸ್ಥಾನಗಳನ್ನು ಹೊಂದಿದ್ದು ಇದರಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು.
ಈ ಸ್ಥಾನಗಗಳಿಗೆ ಜೆ.ಡಿ.ಎಸ್ನ ಸಿ.ಬಿ.ಸುರೇಶ್ಬಾಬು . ಬಿ.ಜೆ.ಪಿಯ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ತಾ.ಪಂ.ಸದಸ್ಯರು ಸಂಮ್ಮಿಶ್ರ ಆಡಳಿತಕ್ಕೆ ಒಪ್ಪಿಗೆ ಸೂಚಿಸಿ, ಮತ ಹಾಕಿ, ಅಧಿಕ ಮತದಿಂದ 13ಸ್ಥಾನಗಳನ್ನು ಪಡೆದು ಬಿಜೆಪಿಯ ಜಿ.ಆರ್.ಸೀತಾರಾಮಯ್ಯ ಅಧ್ಯಕ್ಷ ಮತ್ತು ಜೆ.ಡಿ.ಎಸ್ನ ಬಿ.ಬಿ.ಫಾತೀಮ ಉಪಾಧ್ಯಕ್ಷ ಸ್ಥಾನಗಳನ್ನು ಪಡೆದರು.
ಜೆಡಿಯುನ ಸ್ಪಧರ್ೆಯಲ್ಲಿ ಜೆಡಿಯು ಪಕ್ಷದ ಚಿಕ್ಕಮ್ಮ ಗಂಗಾಧರಯ್ಯ ಅಧ್ಯಕ್ಷ ಸ್ಥಾನಕ್ಕೂ ಉಪಾಧ್ಯಕ್ಷ ಸ್ಥಾನಕ್ಕೆ ಲತಾ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಎ.ಸಿ. ವೈ.ಎಸ್.ಪಾಟೀಲ್ ಉಪಸ್ಥಿತರಿದ್ದರು.
ರೋಟರಿ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.18: ರೋಟರಿ ಕ್ಲಬ್ ಮತ್ತು ಬ್ರಹ್ಮವಿದ್ಯಾ ಸಮಾಜದ ವತಿಯಿಂದ ಉಚಿತ ಶ್ರವಣ ರೋಗ ತಪಾಸಣಾ ಶಿಬಿರವನ್ನು ಇದೇ 20ರ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರವರಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನ ಬ್ರಹ್ಮ ವಿದ್ಯಾ ಸಮಾಜದ ಕಟ್ಟಡದಲ್ಲಿ ಏರ್ಪಡಿಸಿದ್ದು ವಿಶ್ವರ್ ಹಿಯರಿಂಗ್ ವಡ್ಸ್ನ ಡಾ.ಪುರುಷೋತ್ತಮ್, ನಾಯಕ್ ಹಿಯರಿಂಗ್ ಕೇರ್ನ ಡಾ.ಎಂ.ಎಸ್.ಜೆ.ನಾಯಕ್ ಈ ಶಿಬಿರದಲ್ಲಿ ಭಾಗವಹಿಸುವರು.
ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ
ರೋಟರಿ ಕ್ಲಬ್ ಮತ್ತು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇದೇ 22ರ ಮಂಗಳವಾರ 9ರಿಂದ ಸಂಜೆ 1ರವರಗೆ ತಾಲೂಕಿನ ಬೆಳಗುಲಿ ಗ್ರಾಮದಲ್ಲಿ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

Thursday, February 17, 2011




ಶಾಸಕರನ್ನು ನಾಯಿ, ಕತ್ತೆ, ಹಂದಿಗಳಗೆ ಹೋಲಿಸಿದ ಗುಬ್ಬಿ ಎಂ.ಎಲ್.ಎ ಶ್ರೀನಿವಾಸ
ಚಿಕ್ಕನಾಯಕನಹಳ್ಳಿ,ಫೆ.17: ರಾಜ್ಯದ ಇತ್ತೀಚಿನ ಬೆಳವಣಿಗೆಯಿಂದ ಶಾಸಕರೆಂದರೆ ನಾಯಿ, ಕತ್ತೆ, ಹಂದಿಗಳಿಗಿಂತ ಕಡೆಯಾಗಿ ಹೋಗಿದ್ದೇವೆಂದು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವ್ಸಾ ವಿಶ್ಲೇಷಿಸಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬುರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೇಕ್ಷಕರನ್ನು ರಂಜಿಸಲು ಇನ್ನಿಲ್ಲದ ಮಾತಿನ ಕಸರತ್ತು ನಡೆಸಿದರು.
ಮಾತನಾಡುವ ಭರಾಟೆಯಲ್ಲಿ ಸಭಾ ಮಯರ್ಾದೆಯನ್ನು ಮರೆತು ಮಾತನಾಡಿದ ಶ್ರೀನಿವಾಸ್ ಆಪರೇಶನ್ ಕಮಲದಲ್ಲಿ ಯಡಿಯೂರಪ್ಪ ಶಾಸಕರನ್ನು ಕೊಂಡುಕೊಳ್ಳುವ ರೀತಿಯೇ ಶಾಸಕರ ಬಗ್ಗೆ ಜನರಲ್ಲಿ ಇಂತಹ ಅಭಿಪ್ರಾಯ ಮೂಡಿದೆ ಎಂದರು.
ಈ ಸಕರ್ಾರದಲ್ಲಿ ಪಕ್ಷದ ಶಾಸಕರಿಗೆ ಕನಿಷ್ಠ ರಸ್ತೆಯಲ್ಲಿ ಬಿಟ್ಟಿರುವ ಗುಂಡಿಯನ್ನು ಮುಚ್ಚಿಸಲು ಯೋಗ್ಯತೆ ಇಲ್ಲವಾಗಿದೆ ಎಂದ ಅವರು ರಾಜ್ಯದ ಬಡವರು ತಮ್ಮ ಹೆಂಡತಿಗೆ ಸೀರೆ ಕೊಡಿಸಲಿಕ್ಕೂ ಯೋಗ್ಯತೆ ಇಲ್ಲದವರು ಎಂಬಂತೆ ಬಿಂಬಿಸುತ್ತಿದ್ದಾರೆ, ಹೊರ ರಾಜ್ಯದಲಿ 100 ರೂಗಳಿಗೊಂದು ಸೀರೆ ತಂದು ಅದನ್ನು ಇಲ್ಲಿ ವಿತರಿಸಿ ಸಕರ್ಾರದ ಲೆಕ್ಕದಲ್ಲಿ ಮೂರು ನೂರು ರೂ ಲೆಕ್ಕ ತೋರಿಸುತ್ತಿದ್ದಾರೆ ಎಂದರು.
ಜನರೂ ಅಷ್ಟೇ, ಯಡಿಯೂರಪ್ಪನವರ ಗಿಮಿಕ್ಗಳಿಗೆ ಒಳಗಾಗಿ ಗ್ರಾ.ಪಂ ಹಾಗೂ ಜಿ.ಪಂ.ಗಳಲ್ಲಿ ಅವರ ಪಕ್ಷಕ್ಕೆ ಓಟು ಹಾಕುತ್ತಿದ್ದಾರೆ ಎಂದರು.
ಈ ರಾಜ್ಯವನ್ನು ಕತ್ತಲೆಗೆ ನೂಕಿರುವ ಯಡಿಯೂರಪ್ಪ ರೈತರಿಗೆ ಸಮಪರ್ಕವಾಗಿ ಕರೆಂಟ್ ನೀಡಲಾಗುತ್ತಿಲ್ಲ, ಶೋಭಾ ಮೇಡಂ ಇಂಧನ ಸಚಿವರಾದ ಮೇಲಾದರೂ ಕರೆಂಟಿನ ಸಮಸ್ಯೆ ಬಗೆಹರಿಯಬಹುದೆಂರೆ ನಾವಂದು ಕೊಂಡಿದ್ದು ತಪ್ಪಾಯಿತು, ಈ ಯಡಿಯೂರಪ್ಪನವೇ ಕರೆಂಟ್ ಮುಟ್ಟಿದರೂ ಶಾಕ್ ಹೊಡೆಯುವುದಿಲ್ಲ ಈಗಿದೆ ರಾಜ್ಯದಲ್ಲಿ ಕರೆಂಟ್ನ ವೋಲ್ಟೇಜ್ನ ಸ್ಥಿತಿ ಎಂದು ಹೀಯಾಳಿಸಿದರು.
ಶಾಸಕ ಸಿ.ಬಿ.ಎಸ್ರವರ ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಮಾತನಾಡಿದ ಅವರು, ನಾನು ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳುವುದಿಲ್ಲ, ಏಕೆಂದರ ನನಗೆ ನನ್ನ ಹುಟ್ಟಿದ ದಿನಾಂಕವೇ ಗೊತ್ತಿಲ್ಲ, ಗೆಳೆಯ ಬಾಬುಗೆ ಅವರ ಪೋಷಕರು ಹುಟ್ಟಿದ ದಿನದ ಬಗ್ಗೆ ತಿಳಿಸಿರುವುದರಿಂದ ಅವರು ಆಚರಿಸಿಕೊಳ್ಳುತ್ತಿದ್ದಾರೆ, ನಾವೆಲ್ಲ ಆಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ತುಂಬಾ ಧಾರಾಳಿ, ಈ ಕ್ಷೇತ್ರದ ಜನ ಅವರನ್ನೇ ಹಂದಿ ಕುಯ್ದುಕೊಂಡಂತೆ, ಕೊಯ್ದಿಕೊಂಡರೂ ಸುಮ್ಮನಿರುತ್ತಾರೆ, ಹಾಗಂತ ಅವರು ಯಾವಾಗಲೂ ಬೆಂಗಳೂರಿನಲ್ಲೇ ಇರಬಾರದು, ಕ್ಷೇತ್ರದಲ್ಲಿ ಓಡಾಡಿಕೊಂಡಿರಬೇಕು, ಜನರು ಪೋನ್ ಮಾಡಿದರೆ, ಪೋನೆತ್ತಿ ಜನರೊಂದಿಗೆ ಮಾತನಾಡಬೇಕು, ಜನರು ಸಹ ಬಾಬುನ ಬಳಿ ಸಣ್ಣ ಪುಟ್ಟದಕ್ಕೆಲ್ಲಾ ದುಡ್ಡು ಕೇಳಬಾರದು ಎಂದ ಅವರು , ಈ ಬಗ್ಗೆ ನಮ್ಮ ನಾಯಕ ಕುಮಾರಣ್ಣನವರು ಬಾಬುಗೆ ಬುದ್ದಿ ಹೇಳಿದ್ದಾರೆ.
ನಾನು ಚಿ.ನಾ.ಹಳ್ಳಿಗೆ ಹಿಂದೊಮ್ಮೆ ಕಾರ್ಯಕ್ರಮಕ್ಕೆ ಬಂದಾಗ ಹೆಚ್ಚು ಜನ ಸೇರಿದ್ದರು , ಈಗ ಜನರ ಸಂಖ್ಯೆ ಆಗಿನಷ್ಠು ಇಲ್ಲ, ಇಲ್ಲಿನ ಜನ ಬಾಬುರವರನ್ನು ಬೆಂಬಲಿಸಬೇಕು, ಚುನಾವಣೆಗಳಲ್ಲಿ ಅವರ ಕೈ ಬಲ ಪಡಿಸಬೇಕು, ಮುಂದೆ ಏನಾದರೂ ಅದೃಷ್ಠಕ್ಕೆ ಬಾಬು ಸಚಿವರಾದರೆ ಅದರ ಲಾಭ ಈ ಕ್ಷೇತ್ರದ ಜನಕ್ಕೆ ಎಂದರು.





ಚಿ.ನಾ.ಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಫೆ.17: ಆಥರ್ಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಈ ಎಲ್ಲಾ ಕ್ಷೇತ್ರಗಳಲ್ಲಿ ತಾಲೂಕು ಮುಂದುವರಿಯಬೇಕಾದರೆ ಸಕರ್ಾರ ಹಾಗೂ ಖಾಸಗಿ ಸಂಸ್ಥೆಗಳು ಜೊತೆಗೂಡಿ ಸಾರ್ವಜನಿಕ ಕೆಲಸ ಮಾಡಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಾಲೂಕು ಅಭಿವೃದ್ದಿಯಾಗಬೇಕಾದರೆ ತಾಲೂಕಿನ ಎಲ್ಲಾ ಗ್ರಾಮಗಳು ಶೈಕ್ಷಣಿಕವಾಗಿ ಮುಂದುವರಿಯಬೇಕು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಗ್ರಾಮೀಣ ಕೃಷಿಕರು ಹಾಗೂ ಮಹಿಳೆಯರ ಸಂಘಟನೆಯ ಸಬಲೀಕರಣಕ್ಕಾಗಿ ಮುಂದೆ ಬಂದಿದೆ, ಈ ಯೋಜನೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದ ಅವರು ಉಳಿತಾಯ ಸಾಲ ವಿತರಣೆ ಮೂಲಕ ಆಥರ್ಿಕ ಸಂಪನ್ಮೂಲಗಳನ್ನು ಸ್ವಸಹಾಯ ಪದ್ದತಿಯಲ್ಲಿ ಕ್ರೂಡಿಕರಿಸಿ ಕೃಷಿಕ ಮತ್ತು ಮಹಿಳೆಯರನ್ನು ಆಥರ್ಿಕ, ಸಾಮಾಜಿಕ ಬದಲಾವಣೆ ಮಾಡಲು ಈ ಮೂಲಕ ಪ್ರಯತ್ನಿಸುತ್ತಿರುವುದು ಯೋಜನೆಯ ಉತ್ತಮ ಉದ್ದೇಶವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿದರ್ೇಶಕ ಸಿ.ಪಿ.ಪುರುಷೋತ್ತಮ್ ಮಾತನಾಡಿ ತಾಲೂಕಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳನ್ನು ರೂಪಿಸಿ, ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯತ್ನಿಸುತ್ತೇವೆ ಅಲ್ಲದೆ ಗ್ರಾಮಗಳಲ್ಲಿ ಸಂಘಗಳನ್ನು ರಚಿಸಿ ಅಲ್ಲಿ ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಮೈಕ್ರೋಫೈನಾನ್ಸ್ಗಳ ಬಗ್ಗೆ ತರಬೇತಿ ನೀಡುತ್ತೇವೆ ಎಂದ ಅವರು ಪ್ರತಿ ಜಿಲ್ಲೆಯಲ್ಲಿ ಇರುವ ತಾಲೂಕುಗಳಿಗೆ ಈಗಾಗಲೇ ಈ ಯೋಜನೆ ಮೂಲಕ 850ಕೋಟಿ ಹಣವನ್ನು ಸಂಘಗಳ ಸದಸ್ಯರಿಗೆ ವಿಸ್ತರಿಸಿದ್ದು 250ಕೋಟಿ ಉಳಿತಾಯವಾಗಿದೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನ್ನದಾನ, ಮೆಡಿಕಲ್ ಮತ್ತು ಇಂಜನಿಯರ್ ಕಾಲೇಜುಗಳನ್ನು ಸ್ಥಾಪಿಸಿದ್ದು ಸಂಚಾರಿ ಆಸ್ಪತ್ರೆ, ಉಚಿತ ಔಷದಿಗಳನ್ನು ಶಾಂತವನ ಟ್ರಸ್ಟ್ ವತಿಯ ಮುಖಾಂತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು ಕೃಷಿಯಲ್ಲಿ ತಾಲೂಕು ಮುಂದುವರಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರೈತರಿಗೆ ಬೆಳೆಯ ಮತ್ತು ಮಹಿಳೆಯರಿಗೆ ಸಂಘಗಳ ರಚನೆಯ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೋಹಿತಾಕ್ಷ ಉಪಸ್ಥಿತರಿದ್ದರು.
ಮುಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳು
ಚಿಕ್ಕನಾಯಕನಹಳ್ಳಿ,ಫೆ.17: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳನ್ನು ಸೃಜನ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯೆ ಎನ್.ಇಂದಿರಮ್ಮ ತಿಳಿಸಿದ್ದಾರೆ.
ಇದೇ 19 ಮತ್ತು 20ರಂದು 9.30ಕ್ಕೆ ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿದ್ದು ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ, ಛದ್ಮವೇಶ, ಆಶುಭಾಷಣ ಸ್ಪಧರ್ೆ, ರಂಗೋಲಿ, ಬಕೇಟ್ಗೆ ರಿಂಗ್ ಹಾಕುವುದು, ಮ್ಯೂಸಿಕಲ್ ಛೇರ್, ಮಡಿಕೆ ಒಡೆಯುವುದು, ಚಮಚ ಮತ್ತು ನಿಂಬೆಹಣ್ಣು ಓಟ, ಪಾಸಿಂಗ್ ದಿ ಬಾಲ್, ಬಾಂಬ್ ಇನ್ ದಿ ಸಿಟಿ, ಥ್ರೋಬಾಲ್, ಬಾವಿದಡ ಸ್ಪದರ್ೆಗಳನ್ನು ಹಮ್ಮಿಕೊಂಡಿದ್ದು ಸ್ಪಧರ್ೆಗೆ ಭಾಗವಹಿಸುವವರು ಹೆಚ್ಚಿನ ವಿವರಗಳಿಗಾಗಿ 9448648436, 9980760326 ನಂ.ಗಳಿಗೆ ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.

ಕಂದಿಕೆರೆ ಗವಿಶಾಂತವೀರಸ್ವಾಮಿ ಜಾತ್ರ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.17: ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 21ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ 19ರವರಗೆ ನಡೆಯಲಿದೆ.
18ರಂದು ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲೆಗೆ ಅಭಿಷೇಕ, 19ರಂದು ರಥೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

Wednesday, February 16, 2011



ಖಜಾನೆ ಬರಿದಾಗಿರುವಾಗ ಕೃಷಿ ಬಜೆಟ್ಗೆ ಅನುದಾನ ಎಲ್ಲಿದೆ: ಎಚ್.ಡಿ.ಕೆ. ಬಡವರ ಪರವಾಗಿ ಕೆಲಸ ಮಾಡುವುದು ತಪ್ಪೇ ಎಚ್.ಡಿ.ಕೆ. ಕಣ್ಣಂಚಿನಲ್ಲಿ ನೀರು ನನಗೇನು ರಾಜಕೀಯ ಬೇಡ, ಜನ ಇಂದೇ ರಾಜಕೀಯ ಬಿಡಿ ಎಂದರೆ ಬಿಟ್ಟು
ಬಿಡುತ್ತೇನೆ
ಚಿಕ್ಕನಾಯಕನಹಳ್ಳಿ,ಫೆ.16: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಲಿಂಗಾಯಿತರ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಹಾಗಾದರೆ ನಾನು ಒಕ್ಕಲಿಗರಾಗಿ ಹುಟ್ಟಿದ್ದೇ ತಪ್ಪಾ, ಬಡವರ ಪರ ಕೆಲಸ ಮಾಡುವುದೇ ತಪ್ಪಾ, ನಾನು ಹೋರಾಡುತ್ತಿರುವುದು ರಾಜ್ಯದ ಜನತೆಗಾಗಿ, ಜನ ನನ್ನು ರಾಜಕೀಯ ಬಿಡಿ ಎಂದರೆ ಇವತ್ತೇ ಬಿಟ್ಟು ಬಿಡುತ್ತೇನೆ, ಎಂದು ಹುಮ್ಮಳಿಸಿ ಬಂದ ದುಃಖವನ್ನು ತಡೆಯಲಾರದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣಂಚಿನಲ್ಲಿ ನೀರು ಸುರಿಸುತ್ತಾ ಗದ್ಗದಿತರಾಗಿ ನುಡಿದರು.
ಬಡವರ ಬಗ್ಗೆ, ದೀನ ದಲಿತರ ಬಗ್ಗೆ, ಹಗಲಿರುಳ ದುಡಿಯುತ್ತಿದ್ದೇನೆ, ಜನತಾ ದರ್ಶನ, ಗ್ರಾಮವಾಸ್ಥವ್ಯದ ಮೂಲಕ ಜನರ ಸಂಕಷ್ಟುಗಳನ್ನು ಹತ್ತಿರದಿಂದ ನೋಡಿದ ಮೇಲೆ, ನನಗಿರುವ ಹೃದಯ ರೋಗದ ತೊಂದರೆಯನ್ನು ಲೆಕ್ಕಿಸಿದೆ ಜನರ ಸಂಕಷ್ಟವನ್ನು ಆಲಿಸಿ ಅವರಿಗೆ ಪರಿಹಾರವನ್ನು ನೀಡುತ್ತಿದ್ದೇನೆ ಎನ್ನುವ ಸಂದರ್ಭಕ್ಕಾಗಲೇ ಮುಂದೆ ಮಾತನಾಡದೆ ದುಃಖದಿಂದ ಮುಖ ಮುಚ್ಚಿಕೊಂಡು ಕ್ಷಣಕಾಲ ಮಾತನ್ನು ನಿಲ್ಲಿಸಿದರು. ನಂತರದಲ್ಲಿ ಮುಂದೆ ಕಂಠ ಸರಿ ಪಡಿಸಿಕೊಂಡು ಮಾತನಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ಉಚ್ಚಾರಣೆ ಬಾರದೆ ಭಾಷಣವನ್ನು ಮೊಟಕು ಮಾಡಿ ಕರವಸ್ತ್ರದಲ್ಲಿ ಕಣ್ಣು ಒರಿಸಿಕೊಂಡು ತಮ್ಮ ಕುಚರ್ಿಯಲ್ಲಿ ಕುಣಿತೇ ಬಿಟ್ಟರು.
ಇದಿಷ್ಟು ನಡೆದಿದ್ದು ಪಟ್ಟಣದ ಸಕರ್ಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ.
ಯಡಿಯೂರಪ್ಪನವರು ಕಳೆದ ಬಜೆಟ್ನ ಯೋಜನೆಗಳೇ ಸಮರ್ಪಕವಾಗಿ ಅನುಷ್ಠಾನಗೊಳಿಸಲ್ಲ ಎಂದು ದೂರಿದ ಅವರು, ಈಗ ಕೃಷಿ ಬಜೆಟ್ ನೀಡುತ್ತೇನೆ ಎನ್ನುವ ಯಡಿಯೂರಪ್ಪ ಹಣವಿಲ್ಲದೆ ಖಜಾನೆ ಬರಿದು ಮಾಡಿಕೊಂಡಿರುವ ಇವರು, ಏನೇ ವಾಗ್ದಾನ ಮಾಡಿದರೂ ಅದನ್ನು ಅನುಷ್ಠಾನಗೊಳಿಸಲು ಹಣವಿಲ್ಲದ ಮೇಲೆ ಇವರು ಬಜೆಟ್ ನೀಡಿ ಏನು ಉಪಯೋಗ ಎಂದರಲ್ಲದೆ, 2009ರಲ್ಲಿ ಉತ್ತರ ಕನರ್ಾಟಕದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ಪರಿಹಾರವಾಗಿ ನೀಡಿದ ಚೆಕ್ಗಳ ನಗದು ಮಾಡಿಸಿಕೊಳ್ಳಲಾಗಿಲ್ಲ, ಈ ಚೆಕ್ಗಳ ಸಂಬಂಧ ಅಲ್ಲಿನ ತಹಶೀಲ್ದಾರ್ ಈ ಚೆಕ್ಗಳಿಗೆ ಸಕರ್ಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಹಿಂಬರ ನೀಡುತ್ತಾರೆ ಇಂತಹ ಸಕರ್ಾರಕ್ಕೆ ಕೃಷಿ ಬಜೆಟ್ನಲ್ಲಿ ವಿಶೇಷವಾಗಿ ಅನುದಾನ ನೀಡಲು ಹಣವೆಲ್ಲಿದೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಯಡಿಯೂರಪ್ಪ 45 ಸಾವಿರ ಕೋಟಿ ಸಾಲವನ್ನು ಈ ರಾಜ್ಯದ ಜನತೆಯ ಮೇಲೆ ಹೊರೆಸಿದ್ದಾರೆ ಎಂದರು.
ಯಡಿಯೂರಪ್ಪನವರು ಯಾವೊಬ್ಬ ಸಚಿವರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಎಲ್ಲರೂ ಅವರಿಗೆ ಅಸಹಕಾರ ತೋರಿಸುತ್ತಿದ್ದಾರೆ, ಸಕರ್ಾರದಲ್ಲಿ ಉತ್ತಮ ಕೆಲಸಗಳನ್ನು ನಡೆಯುತ್ತಿಲ್ಲ, ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ದೂರುವುದು ಸರಿಯಲ್ಲ ಎಂದ ಎಚ್.ಡಿ.ಕೆ, ಅವರೇ ವಿಧಾನ ಸೌಧದ ಅಧಿಕಾರಿಗಳ ಸಭೆಯೊಂದರಲ್ಲಿ ಮಾತನಾಡುತ್ತಾ ನಾವು ನೀವು ತಿಂದದ್ದು ಸಾಕು, ಇನ್ನಾದರೂ ಜನರ ಪರವಾಗಿ ಕೆಲಸ ಮಾಡೋಣ ಎನ್ನುವ ಮೂಲಕ ಅವರ ಯೋಗ್ಯತೆಯನ್ನು ಪರಾಮಶರ್ಿಸಿಕೊಂಡಿದ್ದಾರೆ ಎಂದರು. ಯಡಿಯೂರಪ್ಪನವರು ಒಬ್ಬ ಬಡವನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ, ಅವರಿಗೆ ಮಾನವೀಯ ಸ್ಪಂದನೆ ಎಂಬುದೇ ಇಲ್ಲವೆಂದರು.
ಇಷ್ಟೊಂದು ಭ್ರಷ್ಟಾಚಾರ ನಡೆಸುತ್ತಿರುವ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ನನ್ನನ್ನು ಲಿಂಗಾಯಿತರ ವಿರೋಧಿ ಇನ್ನುತ್ತಾರೆ. ನಾನು ಕೇಳುವುದು ಇಷ್ಟೇ, ಈ ರಾಜ್ಯ ಉಳಿಯಬೇಕಾ ಅಥವಾ ಯಡಿಯೂರಪ್ಪ ಉಳಿಯಬೇಕಾ ನಿರ್ಧರಿಸಿ ಎಂದರು.
ಗ್ರಾಮೀಣ ಬಡ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಬೇಕಾದ ಕೆಲಸ ಸಕರ್ಾರದ ಜವಬ್ದಾರಿ, ಈ ಕೆಲಸವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಮಾಡುತ್ತಿರುವುದು ಶ್ಲಾಘನೀಯ, ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದ ಅವರು, ಮುಂದೆ ಯಾವುದೇ ಚುನಾವಣೆಗಳು ಬಂದರೂ ಸುರೇಶ್ ಬಾಬು ರವರ ಕೈಬಲ ಪಡಿಸಿ ಎಂದರಲ್ಲದೆ, ಸುರೇಶ್ ಬಾಬುರವರಿಗೆ ಸಚಿವರಾಗುವ ಲಕ್ಷಣ ಹಾಗೂ ಅವಕಾಶಗಳು ಹೆಚ್ಚಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನನ್ನ ಹುಟ್ಟು ಹಬ್ಬವನ್ನು ಆಡಂಬರಕ್ಕಾಗಿ ಆಚರಣೆ ಮಾಡಿಕೊಳ್ಳುತ್ತಿಲ್ಲ, ಜನತೆಯ ಆರೋಗ್ಯ ಮತ್ತು ಉದ್ಯೋಗದ ಸಮಸ್ಯೆಗಳನ್ನು ಈಡೇರಿಸುವ ಪ್ರಯತ್ನವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದರು.
ಮಾಚರ್ಿ ಎಂಟರಂದು ಮಹಿಳಾ ದಿನಾಚರಣೆ ಅಂಗವಾಗಿ ಈ ತಾಲೂಕಿನಲ್ಲಿ ಪ್ರಥಮವಾಗಿ 2001 ಗಭರ್ಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಶ್ರೀನಿವಾಸ, ಜೆ.ಡಿ.ಎಸ್. ಮುಖಂಡ ಮುದ್ದುಹನುಮೇಗೌಡ ಮಾತನಾಡಿದರು.
ಜಿ.ಪಂ.ಅಧ್ಯಕ್ಷ ಡಾ.ರವಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ ಉಪಸ್ಥಿತರಿದ್ದರು.

Saturday, February 12, 2011




ಬೀದಿಗೆ ಬಿದ್ದ ವ್ಯಾಪಾರಿಗಳ ನೆರವಿಗೆ ಪುರಸಭೆ ಬರುತ್ತದೆಯೇ...?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಫೆ.11: ಆಡಳಿತ ಸಭೆಗೆ ದೂರದೃಷ್ಠಿ ಇಲ್ಲದೆ ಇದ್ದರೆ ಯಾರು ಬೇಕಾದರೂ ಬೀದಿಗೆ ಬೀಳಬಹುದು, ಎಂಬುದಕ್ಕೆ ಸ್ಪಷ್ಠ ನಿದರ್ಶನ ಪಟ್ಟಣದ ಖಾಸಗಿ ಬಸ್ಸ್ಟಾಂಡ್ ವ್ಯಾಪಾರಿಗಳ ಇಂದಿನ ಸ್ಥಿತಿ.
ಪಟ್ಟಣದ ಖಾಸಗಿ ಬಸ್ಸ್ಟ್ಯಾಂಡ್ ಸುಂದರವಾಗಿ ಕಾಣಬೇಕು, ನಾಗರೀಕ ಸೌಲಭ್ಯಗಳು ಪ್ರಯಾಣಿಕರಿಗೆ ಕಣ್ಣೋಟದಷ್ಠು ದೂರದಲ್ಲಿರಬೇಕು. ಪಟ್ಟಣಕ್ಕೆ ಹೊಸಬರು ಬಂದಾಗ ಬಸ್ಟಾಂಡ್ ಮೊದಲ ನೋಟಕ್ಕೆ ಆಕಷರ್ಿಸಬೇಕು ಸರಿ, ಎಲ್ಲವೂ ಸರಿ, ಅಟ್ ದ ಸೇಮ್ ಟೈಮ್ ಬಸ್ಟಾಂಡ್ ವ್ಯಾಪಾರಿಗಳ ಬದುಕು ಬೀದಿಗೆ ಬೀಳಬಾರದಲ್ಲವೆ?.
ಕಳೆದ 45ವರ್ಷಗಳಿಂದ ವ್ಯಾಪಾರ ವಹಿವಾಟನ್ನು ನಡೆಸುತ್ತಾ ತಮ್ಮ ಬಾಳಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದ ಜನರ ಅನ್ನಕ್ಕೆ ಮಣ್ಣಾಕಬಾರದಲ್ಲವೇ?. ಈಗ ಆಗಿರುವುದು ಇದೇ ಸ್ಥಿತಿ, ಬಸ್ಟ್ಯಾಂಡ್ನಲ್ಲಿ ಶೌಚಾಲಯ ನಿಮರ್ಿಸಬೇಕೆಂದು ಅಲ್ಲಿದ್ದ 27 ವಿವಿಧ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಕಾನೂನು ಪ್ರಕಾರ ಪುರಸಭೆಯ ದಿಟ್ಟ ಕ್ರಮ ಓ.ಕೆ, ಆದರೆ ಅದರಾಚೆಗೆ ಮಾನವೀಯತೆ ಎಂಬುದೊಂದು ಇರುತ್ತದೆ. ಅದು ಕಾನೂನು ಕಟ್ಟಲೆಗಳಾಚೆಗೆ ಇರುವ ಮನುಷ್ಯ ಪ್ರೀತಿಯ ಬಾಂಧವ್ಯ, ಅದನ್ನೇ ಮರೆತರೆ , ಈ ವಿಶ್ವಾಸ, ನಂಬಿಕೆ. ಕಷ್ಠಕಾರ್ಪಣ್ಯಗಳ ಸಂಕೋಲೆ ಅದನ್ನು ಪರಿಹರಿಸುವ ಪುರಪಿತೃಗಳು, ಜನಪ್ರತಿನಿಧಿಗಳ ಸಂಬಂಧ, ಇವೆಲ್ಲವೂ ಈ ವ್ಯಾಪಾರಿಗಳ ಪಾಲಿಗೆ ಇಲ್ಲವಾಗಿದೆ.
ಕಾರಣ ಇಷ್ಠೆ, ಇಲ್ಲಿ ಶೌಚಾಲಯ ನಿಮರ್ಿಸಬೇಕು, ಉದ್ಯಾನವನ್ನು ಮಾಡಬೇಕು ಎಂಬ ಯೋಜನೆ, ಹಲವು ವರ್ಷಗಳಿಂದ ಪುರಸಭೆಯ ಪುರಪಿತೃಗಳ ಮುಂದೆ ಇದ್ದ ಪ್ರಾಜೆಕ್ಟ್. ಈ ಪ್ರಾಜೆಕ್ಟ್ಗೆ ಆಡಳಿತ ಮಂಜೂರಾತಿಗೆ ಕಳುಹಿಸುವಾಗಲೇ ಈ ವ್ಯಾಪಾರಿಗಳ ಬಗ್ಗೆ ಪುರಸಭೆ ಕನಿಷ್ಠ ಹತ್ತು ನಿಮಿಷ ಯೋಚಿಸಿದ್ದರೂ ಈ ರೀತಿಯ ಸ್ಥಿತಿಯಲ್ಲಿ ವ್ಯಾಪಾರಿಗಳು ಇರಬೇಕಾಗಿರಲಿಲ್ಲ.
ಈ ವ್ಯಾಪಾರಿಗಳ ವಹಿವಾಟಿಗೆ ಬೇರೊಂದು ಸ್ಥಳವನ್ನು ಕಲ್ಪಿಸಿ ಅಲ್ಲಿಗೆ ವ್ಯಾಪಾರಿಗಳನ್ನು ಶಿಪ್ಟ್ ಮಾಡಿಸಿದ್ದರೆ, ಅವರು ಅಲ್ಲಿಗೆ ತಮ್ಮ ಸಾಮಾನು ಸರಂಜಾಮಗಳನ್ನು ಎತ್ತಿಕೊಂಡು ಎಂದಿನಂತೆ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ತುತ್ತಿನ ಚೀಲಕ್ಕೆ ಮಾರ್ಗ ಮಾಡಿಕೊಳ್ಳುತ್ತಿದ್ದ್ದರೆ. ಆದರೆ ಈಗ ಆ ಜನ ಪುರಸಭೆಯ ಆಡಳಿತಕ್ಕೆ ಹಿಡಿ ಶಾಪವಾಕುತ್ತಿದ್ದಾರೆ. ಅದರಲ್ಲಿ 45ವರ್ಷಗಳಿಂದ ಈ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವ ವೆಂಕಟಪ್ಪ, ನನ್ನ 70ವರ್ಷಗಳ ಇತಿಹಾಸದಲ್ಲಿ ಈ ರೀತಿ ಕರುಣೆ ಇಲ್ಲದ ಆಡಳಿತವನ್ನು ನೋಡಿಲ್ಲ ಎನ್ನುವ ಅವರು, ಹಿಂದೆ ಮೂರು ಬಾರಿ ಇಲ್ಲಿನ ಅಂಗಡಿಗಳಿಗೆ ಬೆಂಕಿ ಬಿದ್ದಾಗಲೂ ಇಷ್ಟು ನೋವಾಗಿರಲಿಲ್ಲ. ಇರಲಿ ಬಿಡು ನಮ್ಮ ಅಂಗಡಿಗಳಿಗಷ್ಟೇ ಬೆಂಕಿ ಬಿದ್ದಿರುವುದು. ಎರಡು ದಿನಗಳಲ್ಲಿ ಮತ್ತೇ ಅದೇ ಜಾಗದಲ್ಲಿ ನಮ್ಮ ಬದುಕು ಕಟ್ಟಿ ಕೊಳ್ಳುತ್ತೇವೆಂಬ ವಿಶ್ವಾಸವಿತ್ತು. ಆದರೆ ಈಗ ನಾವು ಕುಳಿತುಕೊಳ್ಳಲು ಜಾಗವೇ ಇಲ್ಲದಾಗ, ನಾವು ನಿಂತ ಜಾಗವೇ ಬೆಂಕಿ ಹತ್ತಿ ಹುರಿಯುವಾಗ ನಿಲ್ಲವುದಾದರೂ ಎಲ್ಲಿ ? ಎಂಬ ಚಿಂತೆಯಿಂದ ಕಳೆದು ಎರಡು ದಿನಗಳಿಂದ ಹೊಟ್ಟೆಗೆ ಊಟ ಸೇರಿಲ್ಲವೆಂದು ಕಣ್ಣಂಚಿನಲ್ಲಿ ನೀರು ಸುರಿಸುತ್ತಾರೆ.
ಈ ಶೌಚಾಲಯವನ್ನು ಇಲ್ಲಿಯೇ ಕಟ್ಟಲಿ, ಆದರೆ ನಮಗೂ ಒಂದೈದಡಿ ಜಾಗ ತೋರಿಸಿ, ಅಲ್ಲಿ ನಾವು ನಮ್ಮ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆಂದರೆ ಅದೆಲ್ಲಾ ನಮಗೆ ಗೊತ್ತಿಲ್ಲ, ನಾವು ಈ ಮಾಚರ್ಿ ಒಳಗೆ ಶೌಚಾಲಯ ನಿಮರ್ಿಸದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಮೊದಲು ನಾವು ಶೌಚಾಲಯದ ಬಿಲ್ ಮಾಡಿಯಾದ ಮೇಲೆ ನಿಮಗೆ ಜಾಗ ತೋರಿಸುವುದರ ಬಗ್ಗೆ ಆಲೋಚಿಸುತ್ತೇವೆಂದು ಪುರಸಭೆಯ ಅಧಿಕಾರಿಗಳು ಕರುಣೆ ಇಲ್ಲದಂತೆ ಮಾತನಾಡಿ ಇಲ್ಲಿದ್ದ ಮರ ಮಂಡಿಯನ್ನೇಲ್ಲಾ ಜೆ.ಸಿ.ಬಿಯಲ್ಲಿ ತಳ್ಳಿ ಬಿಟ್ರು ಎಂದು ವೆಂಕಟಪ್ಪ ಆ ಚಿತ್ರಣವನ್ನು ನೊಂದ ಧ್ವನಿಯಲ್ಲಿ ಚಿತ್ರಿಸುತ್ತಾರೆ.
ಈ ಜಾಗವನ್ನು ತೆರವುಗೊಳಿಸಲು ಇಡೀ ತಾಲೂಕು ಆಡಳಿತವೇ ಮುಂದೆ ನಿಂತು ಕಾಯರ್ಾಚರಣೆ ನಡೆಸುತ್ತಿದ್ದರಿಂದ ನಾವೇನು ಮಾಡಲಾಗದೇ ಮೂಕ ಪ್ರೇಕ್ಷಕರಂತೆ ನಿಂತಿದ್ದೆವು ಎನ್ನುತ್ತಾರೆ ವ್ಯಾಪಾರಿ ಲೋಕೇಶ್.
ನಮ್ಮದು ಈಗಲೂ ಒಂದೇ ಮನವಿ, ನಾವಿರುವುದು 27ಜನ ವ್ಯಾಪಾರಿಗಳು, ನಮಗೆ ತಲಾ ಐದಡಿಯಷ್ಟು ಜಾಗವನ್ನು ಕಲ್ಪಿಸಿಕೊಟ್ಟರೆ ಈ ಪುರಸಭೆಗೆ ಋಣಿಯಾಗಿರುತ್ತೇವೆ. ಈ ಹಿಂದೆ ಕೆ.ಎಸ್.ಆರ್.ಟಿ.ಸಿ ಸ್ಟಾಂಡ್ನ ಜಾಗದಲ್ಲಿ ಮನೆ ಕಟ್ಟಿ ಕೊಂಡವರಿಗೆ ಅನುಸರಿಸಿದರಲ್ಲಾ, ಆ ನಿಯಮವನ್ನೇ ನಮಗೂ ಅನ್ವಯಿಸಿದರೆ ನಾವು ಪುರಸಭೆಗೆ ಹಣವನ್ನು ಕಟ್ಟಲು ಸಿದ್ದರಿದ್ದೇವೆ ಎನ್ನುತ್ತಾರೆ. ಈ ವ್ಯಾಪಾರಿಗಳು ಆದರೆ ಪುರಸಭೆಯ ಆಡಳಿತವರ್ಗ ಈ ಬಡ ವ್ಯಾಪಾರಿಗಳ ಕೂಗು ಕೇಳಿಸಿಕೊಳ್ಳುತ್ತಿದೆಯೇ..?



ಕುರುಬರಶ್ರೇಣಿ ಶಾಲೆಯಲ್ಲಿ ಓದಿ,ಎಸ್.ಎಸ್ಎಲ್.ಸಿ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.11: ಕುರುಬರಶ್ರೇಣಿ ಶಾಲೆಯಲ್ಲಿ ಓದಿದ ವಿದ್ಯಾಥರ್ಿಗಳು 200-10ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರವನ್ನು ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದೆ.
ಕುರುಬರಶ್ರೇಣಿ ಶಾಲೆಯಲ್ಲಿ 1ರಿಂದ 7ನೇ ತರಗತಿವರಗೆ ಓದಿದ್ದರೆ ಆ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಇದೇ 13ರ ಭಾನುವಾರ ಬೆಳಗ್ಗೆ 10.30ಕ್ಕೆ ನೀಡಲಿದ್ದು, ಅರ್ಹ ವಿದ್ಯಾಥರ್ಿಗಳು ಸಂಘದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದಶರ್ಿಗಳಲ್ಲಿ ಮಾಚರ್್ 1ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಿದ್ದಾರೆ.

ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.11: ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯದ ಪ್ರಾರಂಭೊತ್ಸವ ಹಾಗೂ ನೂತನ ಶಿಲಾಮೂತರ್ಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶಿಖರ ಕಳಸ ಸ್ಥಾಪನೆ ಮತ್ತು ಧಾಮರ್ಿಕ ಸಮಾರಂಭವನ್ನು ಇದೇ 16 ಮತ್ತು 17ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿಯಲ್ಲಿ ಏರ್ಪಡಿಸಿದ್ದು ರಂಗಾಪುರದ ಸುಕ್ಷೇತ್ರಾಧ್ಯಕ್ಷರಾದ ಗುರು ಪರದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಸ್ವಾಮಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮಿ, ಇಮ್ಮಡಿ ಕರಿಬಸವದೇಶೀಕೇಂದ್ರಸ್ವಾಮಿ, ಮೃಂತ್ಯುಂಜಯದೇಶೀಕೇಂದ್ರ ಸ್ವಾಮಿ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಆಶೀರ್ವಚನ ನೀಡಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ದೇವಾಲಯ ನಿಮರ್ಾಣ ಸಮಿತಿ ಅಧ್ಯಕ್ಷ ಅಗಸರಹಳ್ಳಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತು.ಹಾ.ಒ.ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ರಮೇಶ್ಕುಮಾರ್, ಮಾಜಿ.ಜಿ.ಪಂ.ಸದಸ್ಯ ಸುಶೀಲಸುರೇಂದ್ರಯ್ಯ, ಗ್ರಾ.ಪಂ.ಅಧ್ಯಕ್ಷ ಪಾರ್ವತಮ್ಮ, ಗ್ರಾ.ಪಂ.ಸದಸ್ಯರಾದ ಎ.ಎಸ್.ಮಲ್ಲಿಕಾಜರ್ುನಯ್ಯ, ಶಶಿಧರ್, ಉಪಸ್ಥಿತರಿರುವರು.


ರೈತರು ಮತ್ತು ಸಂಘಗಳಿಗೆ ತಿಳುವಳಿಗೆ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.11: ಸ್ವಸಹಾಯ ಸಂಘಗಳಿಗೆ, ರೈತರ ಇತರ ಚಟುವಟಿಕೆಗಳಿಗೆ ತಿಳುವಳಿಕೆ ನೀಡುವ ಸಲುವಾಗಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಗೋಡೆಕೆರೆ ಗ್ರಾಮದಲ್ಲಿ ಶಿಬಿರವನ್ನು ಇದೇ 14ರ ಸೋಮವಾರ ಹಮ್ಮಿಕೊಂಡಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್.ಸ್ವಾಮಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರಗೆ ನಡೆಯುವ ಶಿಬಿರದಲ್ಲಿ ಭಾರತೀಯ ರಿಸವರ್್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಶ್ಯಾಮಲಾ ಗೋಪಿನಾಥ್, ಎಸ್.ಬಿ.ಎಂನ ವ್ಯವಸ್ಥಾಪಕ ನಿದರ್ೇಶಕ ಪಿ.ವಿಜಯ್ಭಾಸ್ಕರ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಎಲ್.ಟಿ.ಅಂಬುಜಾಕ್ಷಿ ಉಪಸ್ಥಿತರಿರುವರು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಫೆ.12: ನವೋದಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾಷರ್ಿಕ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 14ರ ಸೋಮವಾರ ಸಂಜೆ 6-30ಕ್ಕೆ ನಡೆಯಲಿದೆ.
ಸಮಾರಂಭವನ್ನು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಗದ್ದಿಗೆ ಮಠದ ಪೀಠಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಗಾಟನೆ ನೆರವೇರಿಸಲಿದ್ದು ತಮ್ಮಡಿಹಳ್ಳಿಯ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಆಶೀರ್ವಚನ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನವೋದಯ ವಿದ್ಯಾಸಂಸ್ಥೆ ನಿದರ್ೇಶಕ ಮಹದೇವಣ್ಣ, ಖಜಾಂಚಿ ಎಸ್.ಜಿ.ಸಿದ್ದಲಿಂಗಪ್ಪ, ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಈಶ್ವರಮೂತರ್ಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ವರದಿಗಾರರಾದ ಕೆ.ಜಿ.ರಾಜೀವ್, ಸಿದ್ದರಾಮಣ್ಣ ಅಣೇಕಟ್ಟೆ, ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿರುವರು.
ಶಿಕ್ಷಕರಿಗೆ ಬಡ್ತಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾ.ಪ್ರಾ.ಶಾ.ಶಿ.ಸಂಘದಿಂದ ಅಬಿನಂದನೆ
ಚಿಕ್ಕನಾಯಕನಹಳ್ಳಿ,ಫೆ.12: ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಣೆಗೊಂಡ ಸಕರ್ಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರುಗಳಿಗೆ ಹೆಚ್ಚುವರಿ ಬಡ್ತಿ ಮಂಜೂರು ಮಾಡಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜಾಧ್ಯಕ್ಷ ಬಸವರಾಜ್ ಗುರಿಕಾರ್, ಪ್ರಧಾನ ಕಾರ್ಯದಶರ್ಿ ನಾರಾಯಣಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಆರ್.ಪರಶಿವಮೂತರ್ಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಗೋಪಾಲಕೃಷ್ಣರವರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Thursday, February 10, 2011


ಫೆ.16ರಂದು 3 ಸಾವಿರ ಯುವಕರಿಗೆ ಸ್ಥಳದಲ್ಲೇ ನೇಮಕಾತಿ ಆದೇಶ: ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಫೆ.10: ಕನಿಷ್ಟ ಮೂರು ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಆದೇಶ ಪತ್ರ ವಿತರಿಸಲಾಗುವುದಲ್ಲದೆ, ಅಬಾಲ ವೃದ್ದರಾಗಿ ಎಲ್ಲಾ ವರ್ಗದ ಜನರ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಸಿ.ಬಿ.ಎಸ್. ಸಮಾಜ ಸೇವಾ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಭಾಗದ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು, ತನ್ಮೂಲಕ ಬಡ ಕುಟುಂಬಗಳು ಆಥರ್ಿಕವಾಗಿ ಸದೃಢಗೊಳ್ಳಬೇಕು ಎಂಬ ಉದ್ದೇಶ ಅದೇ ರೀತಿ, ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಯ ದೃಷ್ಠಿಯನ್ನಿಟ್ಟುಕೊಂಡು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಾಮಾನ್ಯ ಜನತೆಗೂ ತಲುಪುವಂತಾಗಲಿ ಎಂಬ ಸದುದ್ದೇಶದಿಂದ, ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯ ಸಹಕಾರದಲ್ಲಿ ನಮ್ಮ ಹುಟ್ಟು ಹಬ್ಬದಂದು ಈ ಎರಡೂ ಕಾರ್ಯಕ್ರಮಗಳನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ 16 ರಂದು ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯಾದ್ಯಂತ ಯುವಕರು ಭಾಗವಹಿಸಲಿದ್ದು, 12 ರಿಂದ 15 ಸಾವಿರ ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸ್ಥಳೀಯ ತಾ.ಪಂ.ಯ ಕಾರ್ಯನಿವರ್ಾಹಣಾಧಿಕಾರಿಗಳ ಮೂಲಕ ಎಲ್ಲಾ ಪಂಚಾಯ್ತಿಯ ನಿರುದ್ಯೋಗಿಗಳಿಗೆ ವಿಷಯ ತಿಳಿಸಿದ್ದು, ಇದೇ ಸಂದರ್ಭದಲ್ಲಿ ನಿರುದ್ಯೋಗಿ ಯುವಕರ ವೈಯಕ್ತಿಕ ವಿವರಗಳ ದಾಖಲೀಕರಣವನ್ನು ಮಾಡಲಾಗುವುದು ಎಂದರು.
ಉದ್ಯೋಗಾಂಕ್ಷಿಗಳು ತಮ್ಮ ಬಯೋಡೇಟಾ ಹಾಗೂ ಇತ್ತೀಚಿನ ಮೂರು ಭಾವಚಿತ್ರಗಳನ್ನು ಕಡ್ಡಾಯವಾಗಿ ಮೇಳಕ್ಕೆ ತರಬೇಕು ಎಂದರಲ್ಲದೆ, ಈ ಮೇಳ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟನಲ್ಲಿ ಸಾಗುವುದರ ಜೊತೆಗೆ ಉದ್ಯೋಗ ಹುಡುಕಿಕೊಂಡ ಹೊರಟವರಿಗೆ ಮಾರ್ಗ ಸೂಚಿಯಾಗಿಯೂ ಕೆಲಸ ನಿರ್ವಹಿಸುವುದು.
ಈ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಟಫೇ, ವಿಡಿಯೋಕಾನ್ ವಿಕ್ರಾಂತ್ ಟೈರ್ಸ್, ಜೆ.ಕೆ.ಟೈರ್ಸ್, ರಿಲೆಯಾನ್ಸ್ ಫ್ರೆಶ್, ಅಪೊಲೋ ಪವರ್ ಸಿಸ್ಟಂ, ಮೋರ್ ಆದಿತ್ಯ ಬಿಲರ್ಾ, ಹಿಂದೂಜಾ, ವಿನ್ನರ್ ಗ್ರೂಪ್, ಶ್ರೀಸಾಯಿ ಟೆಲಿಕಮ್ಯುನಿಕೇಶನ್, ಸೇರಿದಂತೆ 45 ರಿಂದ 50 ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಮೇಳದಲ್ಲಿ ಭಾಗವಹಿಸುವರು ಎಂದರು.
ಸಕರ್ಾರ ತಾಲೂಕಿನ ಸಾಲ್ಕಟ್ಟೆ ಬಳಿ ಒಂದು ಸಾವಿರ ಎಕರೆ ಭೂ ಪ್ರದೇಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜಿಸಿದ್ದು, ಅಲ್ಲಿ ಗಾಮರ್ೆಂಟ್ಸ್ ಫ್ಯಾಕ್ಟರಿ ಅಥವಾ ಐರನ್ ಸ್ಪಾಂಜಸ್ ಕಾಖರ್ಾನೆಗೆ ಅವಕಾಶ ನೀಡಬಹುದು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರಕ್ಕೆ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಸುಮಾರು 130 ತಜ್ಞ ವೈದ್ಯರ ಸಿಬ್ಬಂದಿ ಭಾಗವಹಿಸುತ್ತಾರೆ, ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ ಮತ್ತು ಮೂತ್ರಾಂಗಗಳ ಕಲ್ಲು, ಸಕ್ಕರೆ ರೋಗ, ಗಭರ್ಿಣ ಮತ್ತು ಸ್ತ್ರೀರೋಗ, ಕೀಲು ಮತ್ತು ಮೂಳೆ, ಕಿವಿ ಮೂಗು ಗಂಟಲು, ಕಣ್ಣು, ಚರ್ಮ, ಮಕ್ಕಳ ತಜ್ಞರು ಸೇರಿದಂತೆ ಮಾನಸಿಕ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ವೈದ್ಯಕೀಯ ತಪಾಸಣೆ ನಡೆಸಿದ ನಂತರ, ಗಂಭೀರ ವ್ಯಾಧಿಗಳಿಗೆ ತಜ್ಞ ವೈದ್ಯರುಗಳಿಂದ ಚಿಕಿತ್ಸೆಗಳನ್ನು ನೀಡಿ ಅಗತ್ಯ ಬಂದಲ್ಲಿ ಆದಿ ಚುಂಚುನಗಿರಿ ಆಸ್ಪತ್ರೆಗೆ ಹೋಗಲು ಗುರುತಿನ ಚೀಟಿ ನೀಡಲಾಗುವುದು ಹಾಗೂ ಆಸ್ಪತ್ರೆ ವಾಹನದಲ್ಲಿ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ ಪುನಃ ವಾಪಸ್ಸು ಕರೆತರಲಾಗುವುದು. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತವಾಗಿ ಆಪರೇಷನ್ ಮಾಡಲಾಗುವುದು, ರೋಗಿಗೆ ಊಟದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಜನರಲ್ ವಾಡರ್್ಗಳ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು.
ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಹಾಗೂ ಉಚಿತ ಕನ್ನಡಕವನ್ನು ನೀಡಲಾಗುವುದು ಎಂದರು.
ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಸಿ.ಬಿ.ಎಸ್. ಅಭಿಮಾನಿ ಬಳಗದ ವತಿಯಿಂದ ಬಸವೇಶ್ವರ ನಗರ ಹಾಗೂ ಕೇದಿಗೆಹಳ್ಳಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಉಚಿತವಾಗಿ ಸಿದ್ದ ಉಡುಪುಗಳನ್ನು ವಿತರಿಸಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಮಾಯಸಂದ್ರ ಆದಿಚುಂಚನ ಗಿರಿ ಮಠದ ಶಿವಕುಮಾರ ನಾಥ ಸ್ವಾಮಿ, ಆದಿಚುಂಚನಗಿರಿ ಮಠದ ಕಾರ್ಯದಶರ್ಿ ನಿರ್ಮಲಾನಂದನಾಥಸ್ವಾಮಿ, ಎ.ಐ.ಎಂ.ಎಸ್.ನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ವೈದ್ಯಾಧೀಕ್ಷಕ ಡಾ.ಎಸ್.ಬಿ.ವಸಂತಕುಮಾರ್ ಉಪಸ್ಥಿತರಿರುವರು ಎಂದು ಸಿ.ಬಿ.ಸುರೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಗೋಷ್ಠಿಯಿಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಕೊ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ಸದಸ್ಯರುಗಳಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರವಿ(ಮೈನ್ಸ್) ಹಾಜರಿದ್ದರು.

ಹಂದನಕೆರೆಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 1.50 ಕೋಟಿ ರೂ ಬಿಡುಗಡೆ
ಚಿಕ್ಕನಾಯಕನಹಳ್ಳಿ,ಫೆ.10: ಸಕರ್ಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಾನಗಳಲ್ಲಿ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಅಭಿವೃದ್ದಿಯಾಗುತ್ತದೆ ಎಂದು ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್ ಹೇಳಿದರು.
ತಾಲೂಕಿನ ಹಂದನಕೆರೆಯಲ್ಲಿ ನಡೆದ ಸುವರ್ಣ ಗ್ರಾಮೋದಯ ಯೋಜನೆ ಹಾಗೂ ಶಿಕ್ಷಕರು ವಸತಿ ನಿಲಯ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರವಾಗಿರುವ ಹಂದನಕೆರೆ ಒಂದೇ ಮನೆಯಲ್ಲಿ 5ರಿಂದ 6ಜನ ವಾಸಿ ಮಾಡುವುದರಿಂದ ಮನೆಗಳು ಕಿಸ್ಕಿಂದೆಯಾಗಿದೆ, ಆದ್ದರಿಂದ ಶಾಸಕರು ಈ ಗ್ರಾಮದ ಜನತೆಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು. ಜಿ.ಪಂ.ಅಧ್ಯಕ್ಷರಾದ ಸಮಯದಲ್ಲಿ 28ಗ್ರಾಮ ಪಂಚಾಯ್ತಿಗಳಿಗೆ ತಲಾ 29 ನಿವೇಶನ ಹಂಚಿದ್ದಾಗಿ ತಿಳಿಸಿದ ಅವರು, ಈಗ ಪ್ರತಿ ಗ್ರಾ.ಪಂ.ಗಳಿಗೆ 50 ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ರಾಜೀವ್ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡಬೇಕಾದೆರೆ, ನಿವೇಶನ ಬೇಕು, ಆದರೆ ಶಾಸಕರಿಗೆ ಮನೆ ನೀಡುವ ಅಧಿಕಾರವಿಲ್ಲ ಎಂದು ವಿಷಾದಿಸಿದರು.
ಎಲ್ಲವೂ ಸಕರ್ಾರದ ಕೈಯಲ್ಲಿದೆ, ಹಿಂದೆ ಶಾಸಕರಿಗೆ ಮನೆ ಹಾಗೂ ನಿವೇಶನ ನೀಡುವ ಅಧಿಕಾರವಿತ್ತು. ಇದನ್ನು ಸಕರ್ಾರ ಕಿತ್ತುಕೊಂಡಿದೆ, ಈ ಭಾಗದಲ್ಲಿನ ಜನ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಪ್ರತಿ ಮನೆಯಲ್ಲಿ 5ರಿಂದ 6ಜನ ವಾಸಿಸುತ್ತಿದ್ದಾರೆ ಆದ್ದರಿಂದ ಈ ಹಂದನಕೆರೆ ಗ್ರಾಮದ ಬಡವರಿಗೆ ನಿವೇಶನ ಹಾಗೂ ಮನೆ ನಿಮರ್ಿಸಿ ಕೊಡುವ ಕಡೆ ಸಕರ್ಾರ ಶಾಸಕರು ಗಮನ ಹರಿಸುವಂತೆ ತಿಳಿಸಿದರು.
ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಗುತ್ತಿಗೆದರರು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಗೆ ಬೇಗನೇ ಕಾಮಗಾರಿ ಪೂರೈಸಿಕೊಡಬೇಕು ಇದಕ್ಕೆ ಗ್ರಾಮಸ್ಥರೆಲ್ಲರೂ ಸಹಕಾರ ನೀಡುತ್ತೇವೆಂದರು, ಹಂದನಕೆರೆ ಸಮುದಾಯ ಭವನಕ್ಕೆ 22ಲಕ್ಷ ಮಂಜೂರಾಗಿದೆ, ಇಲ್ಲಿ ಮದುವೆ, ಮುಂಜಿ ಮಾಡಲು ಈ ಸಮುದಾಯ ಭವನ ಚಿಕ್ಕದಾಗುತ್ತದೆ ಆದ್ದರಿಂದ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ದೊಡ್ಡ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳಬೇಕೆಂದು ರಘುನಾಥ್ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸುವರ್ಣ ಗ್ರಾಮದ ಯೋಜನೆ ಅಡಿಯಲ್ಲಿ ಹಂದನಕೆರೆಗೆ 1.48.ಕೋಟಿ ರೂ ಬಿಡುಗಡೆಯಾಗಿದ್ದು, ಕಾಂಕ್ರಿಟ್ ರಸ್ತೆ ನಿಮರ್ಾಣಕ್ಕೆ 20.35 ಲಕ್ಷ, ಡಾಂಬರು ರಸ್ತೆ ನಿಮರ್ಾಣಕ್ಕೆ 42.65 ಲಕ್ಷ, ಸಿಮೆಂಟ್ ಕಾಂಕ್ರಿಕಟ್ ಚರಂಡಿ ನಿಮರ್ಾಣಕ್ಕೆ ಹಾಗೂ 8ಸೇತುವೆ ನಿಮರ್ಾಣಕ್ಕೆ 36ಲಕ್ಷ, ಸಮುದಾಯ ಭವನ್ಕೆ 22ಲಕ್ಷ, ಅಂಗನವಾಡಿ ಕಟ್ಟಡಕ್ಕೆ 5ಲಕ್ಷ ತ್ಯಾಜ್ಯ ವಸ್ತು ವಿಲೇವಾರಿಗಾಗಿ 10ಲಕ್ಷ, ತರಬೇತಿಗಾಗಿ 9.2ಲಕ್ಷ, ವಿದ್ಯುತ್ ಸಲಕರಣೆಗೆ 1.48ಲಕ್ಷ ಐ.ಇ ಗೆ 1.48ಲಕ್ಷ ಬಿಡುಗಡೆಯಾಗಿದ್ದು ಸಕರ್ಾರ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಕೋಂಟ್ಯಾಂತರ ರೂ ಹಣ ಬಿಡುಗಡೆ ಮಾಡಿದೆ, ಇದರ ಸದುಪಯೋಗ ಪಡಿಸಿಕೊಂಡು ಗುಣ ಮಟ್ಟದ ಕಾಮಗಾರಿಯ ಕಡೆ ಜನರು ಗಮನ ಹರಿಸಿ ಎಂದರಲ್ಲದೆ, ಹಂದನಕೆರೆಗೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಾಗೂ ಕೃಷಿ ಮಾರುಕಟ್ಟೆ ತರಲು ಅಧಿವೇಶನದಲ್ಲಿ ಪ್ರಾಸ್ತಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸೂತಿ ಹಾಗೂ ಜನನಿ ರಕ್ಷ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರ ವಸತಿ ಗೃಹ ಕೆಲವು ಕಡೆ ಪಾಳು ಬಿದ್ದಿವೆ, ಹಂದನಕೆರೆ ಹೃದಯ ಭಾಗದಲ್ಲಿ ನಿಮರ್ಿಸುತ್ತಿರುವ 8ವಸತಿ ಗೃಹಗಳಲ್ಲಿ ಶಿಕ್ಷಕರು ವಾಸಮಾಡುವ ಮೂಲಕ ಶಿಕ್ಷಣದ ಅಭಿವೃದ್ದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯರಾದ ಹೇಮಾವತಿ, ಮಂಜುನಾಥ್, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಈರಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು ಇ.ಓ ದಯಾನಂದ್ ಉಪಸ್ಥಿತರಿದ್ದರು.

Wednesday, February 9, 2011


ಬೇಡಿಕೆ ಈಡೇರುವ ತನಕ ಹೋರಾಟ ನಿರಂತರ: ಆರ್.ಪರಶಿವಮೂತರ್ಿ
ಚಿಕ್ಕನಾಯಕನಹಳ್ಳಿ.ಫೆ.09: ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರ ವೇತನ, ಭತ್ಯೆಗಳಲ್ಲಿ ಅಘಾದವಾದ ವ್ಯತ್ಯಾಸವಿದ್ದು, ಇಬ್ಬರಿಗೂ ಒಂದೇ ರೀತಿಯ ವೇತನವನ್ನು ನೀಡುವ ಮೂಲಕ ಇದನ್ನು ಸರಿಪಡಿಸುವುದರ ಜೊತೆಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು, ಶೀಘ್ರವಾಗಿ ಸಕರ್ಾರ ಈಡೇರಿಸಬೇಕೆಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಕೋರಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ನಡೆದ ಸಕರ್ಾರಿ ನೌಕರರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ಇತರೆ ರಾಜ್ಯ ಸಕರ್ಾರಿ ನೌಕರರ ವೇತನ ಹಾಗೂ ಭತ್ಯೆಗಳಿಗೆ ಹೊಲಿಸಿದರೆ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರು ಸುಮಾರು ಶೇ.40 ರಷ್ಟು ವೇತನದ ವ್ಯತ್ಯಾಸವನ್ನು ಹೊಂದಿದ್ದು ಇದರಿಂದ ರಾಜ್ಯ ಸಕರ್ಾರಿ ನೌಕರರು ಆಥರ್ಿಕವಾಗಿ ನಷ್ಠವನ್ನು ಅನುಭವಿಸುತ್ತಿದ್ದಾರೆ, ಅಲ್ಲದೆ ಕೇಂದ್ರ ಸಕರ್ಾರಿ ನೌಕರರು ಪ್ರತಿ 10ವರ್ಷಗಳಿಗೊಮ್ಮೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸುವ ಪರಿಪಾಠ ಹೊಂದಿದ್ದಾರೆ. ಇದನ್ನು ರಾಜ್ಯ ಸಕರ್ಾರಿ ನೌಕರರಿಗೂ ಅನ್ವಯಿಸಬೇಕೆಂದರು.
ಕೇಂದ್ರ ಸಕರ್ಾರ 1998ರ 5ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸಿದ ನಂತರ 6ನೇ ವೇತನ ಆಯೋಗವನ್ನು ರಚಿಸುವ ಪೂರ್ವದಲ್ಲಿ ನೌಕರರಿಗೆ ಶೇಕಡ 50ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಿಲೀನಗೊಂಡ ಮೂಲ ವೇತನಕ್ಕನುಗುಣವಾಗಿ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿತ್ತು ಆದರೆ ರಾಜ್ಯ ಸಕರ್ಾರ ಇಂತಹ ಯಾವುದೇ ಸೌಲಭ್ಯಗಳನ್ನು ನೌಕರರಿಗೆ ಕಲ್ಪಿಸಿಲ್ಲ, ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದ ಅವರು, 2001ರ ಜನಗಣತಿಯ ಆಧಾರದ ಮೇಲೆ ಕೇಂದ್ರ ಸಕರ್ಾರ ತನ್ನ ನೌಕರರಗೆ ಜಿಲ್ಲಾ ಮತ್ತು ತಾಲೂಕುಗಳನ್ನು ಪುನರ್ ವಿಂಗಡಿಸಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಮತ್ತು ಇತರ ಸೌಲಭ್ಯ ನೀಡಿದೆ ಅದೇ ಮಾದರಿಯಲ್ಲಿ ರಾಜ್ಯ ಸಕರ್ಾರಿ ನೌಕರರಿಗೂ ಭತ್ಯೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ನಮ್ಮ ಬೇಡಿಕೆಗಳು ಈಡೇರುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದರಲ್ಲದೆ, ಈ ಹೋರಾಟದ ವಿರುದ್ದವಾಗಿ ನಾವು ನೌಕರಿಯಿಂದ ವಜಾಗೊಳಿಸಿದರೂ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸಕರ್ಾರಿ ನೌಕರರು ಶಿರಸ್ತೆದಾರ್ ಕೆ.ವಿ.ಕುಮಾರ್ರವರಿಗೆ ಮನವಿ ಅಪರ್ಿಸಿದರು.
ಸಭೆಯಲ್ಲಿ ಎಸ್.ಸಿ.ನಟರಾಜು, ನೌಕರರ ಸಂಘದ ತಿಮ್ಮಾಬೋವಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ಕುಮಾರಸ್ವಾಮಿ, ನರಸಿಂಹಮೂತರ್ಿ, ಬಸವರಾಜು ಮಾತನಾಡಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶೋಭಾ, ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.