Friday, July 18, 2014


ಹೇಮಾವತಿ ಕುಡಿಯುವ ನೀರಿನ ಯೋಜನೆ:

ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಅಂತಿಮಗೊಳ್ಳದಿದ್ದರೆ  ಹೋರಾಟದ ಹಾದಿ ಅನಿವಾರ್ಯ: ಮಾಜಿ ಶಾಸಕ ಕೆ.ಎಸ್.ಕೆ.
ಚಿಕ್ಕನಾಯಕನಹಳ್ಳಿ,ಜು.17 : ತಾಲ್ಲೂಕಿನ 26 ಕೆರೆಗಳಿಗೆ  ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂ ಸಕರ್ಾರದ ನಿರ್ಲಕ್ಷ, ಅಧಿಕಾರಿಗಳ ವಿಳಂಬ ನೀತಿ ಹಾಗೂ  ಗುತ್ತಿಗೆದಾರರ ಬೇಜವಬ್ದಾರಿಯಿಂದ ನೆನೆಗುದಿಗೆ ಬಿದ್ದಿದೆ ಇನ್ನೆರಡು ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಗೊಳ್ಳದಿದ್ದರೆ ಬಿ.ಜೆ.ಪಿ. ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು. 
ತಾಲ್ಲೂಕಿಗೆ 28 ಗ್ರಾಮಗಳ ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಗೆ ಸಂಬಂಧಪಟ್ಟಂತೆ ತಾಲ್ಲೂಕು ಬಿಜೆಪಿ ಘಟಕದೊಂದಿಗೆ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದ ತಂಡ ಕುಂದೂರು, ಕಡಬನಹಳ್ಳಿ, ಬಿಳಿಗೆರೆ, ಗ್ಯಾರೆಹಳ್ಳಿಪಾಳ್ಯ ಸೇರಿದಂತೆ ತಾಲ್ಲೂಕಿನ ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ನಂತರ  ಪಟ್ಟಣದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಬಂಧ ಇದೇ 19ರಂದು ತುಮಕೂರಿಗೆ ಬಿ.ಜೆ.ಪಿ. ನಿಯೋಗ ತೆರಳಲಿದ್ದು, ಅಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅಂತಿಮ ಹಂತಕ್ಕೆ ತರುವಂತೆ ಒತ್ತಾಯಿಸಲಾಗುವುದು ಎಂದರು.
ತಾಲ್ಲೂಕಿನ ಅಂತರ್ಜಲ ಮಟ್ಟ ಕುಸಿದಿದ್ದು, ಮಳೆಯ ಪ್ರಮಾಣವು ಕುಂಠಿತಗೊಂಡಿದೆ,  ಇದರಿಂದ ತಾಲ್ಲೂಕಿನ ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ, ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಯುತ್ತದೆ ಎಂದು ಕೆಲವು ರೈತರು ತಮ್ಮ ಜಮೀನುಗಳನ್ನು ಕೊಟ್ಟು ಕಾಮಗಾರಿ ಆರಂಭಿಸಲು ಸಹಕರಿಸಿದರೂ ಸಕರ್ಾರ ಇದುವರೆವಿಗೂ ಯಾವುದೇ ಪರಿಹಾರ ನೀಡದೆ ರೈತರ ಜೀವನಕ್ಕೆ ತೊಡಕುಂಟು ಮಾಡುತ್ತಿದೆ, ಜಮೀನು ಕೊಟ್ಟು ಸಹಕರಿಸಿದ ರೈತರಿಗೆ ಇದುವರೆವಿಗೂ ಪರಿಹಾರ ನೀಡದೆ ಇರುವುದರಿಂದ ಉಳಿದ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಲು ಜಮೀನು ನೀಡಬೇಕಾದ ರೈತರು ಜಮೀನು ಬಿಟ್ಟುಕೊಡಲು ಯೋಚನೆ ಮಾಡುತ್ತಿದ್ದಾರೆ ಇದರಿಂದಲೂ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಆರು ತಿಂಗಳ ಹಿಂದೆಯೇ ಸಂಬಂಧ ಪಟ್ಟವರಿಗೆ ತಿಳಿಸುತ್ತಿದ್ದೆವು ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಳಂಬಧೋರಣೆ ತೋರಿದ್ದಾರೆ ಎಂದರು,  ಕಾಮಗಾರಿ ಆರಂಭಗೊಂಡು ಒಂದುವರೆ ವರ್ಷ ಕಳೆದರೂ ಇನ್ನೂ ಕಾಮಗಾರಿ ಪ್ರದೇಶದ ರೈತರು ಜಮೀನುಗಳು 6(1)( ಭೂ ಪರಿಹಾರ) ಆಗದೇ ಇರುವುದರಿಂದ ಜಮೀನಿನ ಮಾಲೀಕರು ಕಾಮಗಾರಿ ಆರಂಭಿಸಲು ಬಿಡುತ್ತಿಲ್ಲ ಎಂದು ಹೇಮಾವತಿ ನಾಲಾ ಇಂಜನಿಯರ್ ತಿಳಿಸಿದ್ದಾರೆ ಎಂದರು.
  ಕಳೆದ ವರ್ಷ ಯಾವ ಹಂತದಲ್ಲಿ  ಕಾಮಗಾರಿಗಳ ನಡೆಯುತ್ತಿದ್ದವೂ ಅದೇ ಹಂತದಲ್ಲಿದೆ, ಸ್ವಲ್ಪವೂ ಪ್ರಗತಿ ಕಂಡಿಲ್ಲ,  ಸಕರ್ಾರದ ವಿಳಂಬ ನೀತಿಯಿಂದ ಕಾಮಗಾರಿ ನಡೆಯುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕರ್ಾರಕ್ಕೆ ಮನವಿ ಮಾಡಲಿದ್ದು ಇವರ ಪ್ರತಿಕ್ರಿಯೆ ನೋಡಿಕೊಂಡು ರೈತರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಬಿಜೆಪಿ ಘಟಕ ಮುಂದಿನ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.
ಸಕರ್ಾರ ಯೋಜನೆಗೆ ಮಂಜೂರು ಮಾಡಿರುವ  102 ಕೋಟಿ ರೂ ಹಣದಲ್ಲಿ 35 ಕೋಟಿ ಹಣ ಬಿಡುಗಡೆಯಾಗಿದೆ ಆದರೂ ಕಾಮಗಾರಿ ವಿಳಂಬವಾಗುತ್ತಿದೆ ಅಲ್ಲದೆ 102 ಕೋಟಿ ರೂ ಹಣದಲ್ಲಿ 13 ಕೋಟಿ ರೂ ಹಣ ಜಮೀನು ನೀಡಿರುವ ರೈತರಿಗೆ ಪರಿಹಾರ ನೀಡಲು ಮೀಸಲಿಟ್ಟು ಇದಕ್ಕಿಂತಲೂ ಹೆಚ್ಚಿಗೆ ಪರಿಹಾರ ನೀಡಬೇಕೆಂದಾದರೆ ಅದಕ್ಕೂ ಸಕರ್ಾರ ಬದ್ದವಾಗಬೇಕು  ಎಂದರು.
 ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ರೈತರು ಜಮೀನು ನೀಡಲು ಮುಂದಾದರೂ ಇತರೆ ಜಮೀನು ನೀಡಿರುವ ರೈತರಿಗೆ ಪರಿಹಾರ ಧನ ನೀಡದಿರುವುದರಿಂದ ಮುಂದೆ ಬಂದಿರುವ ರೈತರು ಜಮೀನು ನೀಡಲು ನಿರಾಕರಿಸುತ್ತಿದ್ದಾರೆ ಈ ಬಗ್ಗೆ ಸಕರ್ಾರ ಸೂಕ್ತ ತೀಮರ್ಾನ ಕೈಗೊಳ್ಳದಿದ್ದರೆ ಯೋಜನಾ ಕಾಮಗಾರಿಯೂ ಸ್ಥಗಿತವಾಗುವ ಸಂಭವವಿದೆ ಆದ್ದರಿಂದ ಜಮೀನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ತಿಳಿಸಿದರು.
 ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಹೇಮಾವತಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲು  ಸಕರ್ಾರ ನೀಡಿರುವ 24 ತಿಂಗಳ ಅವಧಿಯಲ್ಲಿ  ಇನ್ನೂ ಕೇವಲ 6 ತಿಂಗಳು ಮಾತ್ರ ಬಾಕಿಯಿದ್ದು ಕಾಮಗಾರಿಯ ವೇಗ ಆಶಾದಾಯಕವಾಗಿಲ್ಲ,  ಹೀಗಾದರೆ ಜಮೀನು ನೀಡಿರುವ ರೈತರ ಪರಿಸ್ಥಿತಿ ಹೇಳತೀರಲಾಗವುದು ಎಂದರು.
 ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ವಸಂತಯ್ಯ, ಸದಸ್ಯರುಗಳಾದ ನವೀನ್ಕೆಂಕೆರೆ, ಎ.ಬಿ.ರಮೇಶ್ಕುಮಾರ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಲಕ್ಷ್ಮಯ್ಯ, ಶೆಟ್ಟಿಕೆರೆ ಅರುಣ್, ಶೆಟ್ಟಿಕೆರೆ ಮಂಡಳ ಕಾರ್ಯದಶರ್ಿ ಪ್ರಭುಲಿಂಗಯ್ಯ, ನೀರಾವರಿ ಹೋರಾಟಗಾರ ಎ.ಬಿ. ಶರತ್ಕುಮಾರ್,  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಜಿ ಶಾಸಕ, ಕೆ.ಎಸ್.ಕಿರಣ್ಕುಮಾರ್
ನೂರಾರು ತೆಂಗಿನ ಮರವಿರುವ ರೈತರು ಹೇಮಾವತಿ ನೀರಿಗಾಗಿ ತಮ್ಮ ಜಮೀನುಗಳನ್ನು ಯೋಜನೆಗೆ ಬಿಟ್ಟುಕೊಟ್ಟಿರು ಆದರೆ ಪರಿಹಾರದ ಹಣ ದೊರಕದೆ ಇತ್ತ ಫಸಲೂ ಇಲ್ಲ, ಹಣವೂ ಇಲ್ಲದಂತಾಗಿದೆ ಈ ಬಗ್ಗೆ ಸಕರ್ಾರ, ಜಿಲ್ಲಾಧಿಕಾರಿಗಳು ಗಮನ ಹರಿಸದಿದ್ದರೆ ಬಿಜೆಪಿ ಘಟಕದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು.     
 
ಸುದ್ದಿ: 2
ಚಿ.ನಾ.ಹಳ್ಳಿ ತಾಲೂಕು ಗಾಂಧಿನಗರದಲ್ಲಿ ಡೆಂಗ್ಯೂ ಶಂಕೆ: ಮೂವರು ಅಪಾಯದ ಸ್ಥಿತಿಯಲ್ಲಿ
ಚಿಕ್ಕನಾಯಕನಹಳ್ಳಿ,ಜು.17: ತಾಲೂಕಿನ ಹಂದನಕೆರೆ ಹೋಬಳಿಯ ಗಾಂಧಿನಗರದಲ್ಲಿ ಮೂವರು ಡೆಂಗ್ಯೂ ಜ್ವರಕ್ಕೆ ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 15ಕ್ಕೂ ಅಧಿಕ ಜನ ಜ್ವರದಿಂದ ನರಳುತ್ತಿದ್ದಾರೆ, ಇಷ್ಟಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ, ಗ್ರಾ.ಪಂ.ಯ ಅಧಿಕಾರಿಗಳಾಗಲಿ ಜ್ವರ ನಿಯಂತ್ರಣಕ್ಕೆ  ಶೀಘ್ರಗತಿಯ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
 ಗಾಂಧಿನಗರದ ರೇಣುಕಯ್ಯ(37), ಕರಿಯಮ್ಮ(49), ಭಾಗ್ಯಮ್ಮ(40) ಡೆಂಗ್ಯೂ ಪಾಸಿಟಿವ್ ಎಂದು ಪ್ರಯೋಗಾಲಯದ ವರದಿ ಬಂದಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅಲ್ಲಿಯವರು ಬೆಂಗಳೂರಿಗೆ ರೆಫರ್ ಮಾಡಿದ್ದರಿಂದಾಗಿ, ಕೂಲಿ ಮಾಡಿ ಬದುಕುತ್ತಿರುವ ಇವರುಗಳು ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಹಣವಿಲ್ಲದ್ದರಿಂದ ಇಬ್ಬರು ಸಿದ್ದಾರ್ಥ ಆಸ್ಪತ್ರೆಯಲ್ಲಿ, ಮೊತ್ತೋರ್ವರು ಶ್ರೀದೇವಿ ಆಸ್ಪತ್ರೆಯಲ್ಲಿ ಉಚಿತ ಔಷದೋಪಚಾರ ಪಡೆಯುತ್ತಿದ್ದಾರೆ.
 ಅಲ್ಲದೆ ಗಾಂಧಿನಗರದ 15ಕ್ಕೂ ಹೆಚ್ಚಿನ ಜನರು ಜ್ವರದಿಂದ ನರಳುತ್ತಿದ್ದರೆ, ಇಲ್ಲಿಗೆ ಇಬ್ಬರು ಆರೋಗ್ಯ ಸಹಾಯಕಿಯರು ಬಿಟ್ಟರೆ ಆರೋಗ್ಯ ಇಲಾಖೆಯ ವೈದ್ಯರಾಗಲಿ, ತಾಲೂಕು ವೈದ್ಯಾಧಿಕಾರಿಗಳಾಗಲಿ ಭೇಟಿ ನೀಡಿ ಹೆಚ್ಚಿನ ಜಾಗ್ರತ ಕ್ರಮಗಳನ್ನು ಕೈಗೊಳ್ಳದೆ, ರೋಗದ ಉಲ್ಬಣಕ್ಕೆ ಕಾರಣರಾಗಿದ್ದಾರೆ, ಗ್ರಾ.ಪಂ.ಅಧಿಕಾರಿಗಳೂ ಈ ಬಗ್ಗೆ ಹೆಚ್ಚಿನ ಮುತುವಜರ್ಿ ವಹಿಸಿಲ್ಲವೆಂಬ ಆರೋಪ ಗ್ರಾಮಸ್ಥರದ್ದಾಗಿದೆ.
ರಸ್ತೆ ಸರಿಯಾಗವವರೆಗೂ ಟ್ರಾನ್ಸ್ಪೋಟರ್್ನ್ನು ಸ್ಥಗಿತ

ಚಿಕ್ಕನಾಯಕನಹಳ್ಳಿ,ಜು.18: ತಾಲ್ಲೂಕಿನ ಗಣಿ ಪ್ರದೇಶವಾದ ಸೊಂಡೇನಹಳ್ಳಿ ಗಣಿ ಭಾಗದಲ್ಲಿನ ಗ್ರಾಮದ ಸುತ್ತಮುತ್ತಲಿನ ರಸ್ತೆಯು ಗುಂಡಿಗಳಿಂದ ಆವೃತವಾಗಿ ಸಂಚರಿಸುವುದೇ ದುಸ್ಥರ ಎನ್ನುವಂತಾಗಿದೆ,  ಕಷ್ಟಪಟ್ಟು ಓಡಾಡುವ ವಾಹನಗಳಿಂದ ಏಳುವ ಧೂಳಿನಿಂದ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಇದು ಆ ಭಾಗದ ಗ್ರಾಮಸ್ಥರ ಸಮಸ್ಯೆ ಮಾತ್ರವಲ್ಲ,  ವಾಹನದ ಲಾರಿ ಚಾಲಕರಿಗೂ ಇದರ ಪರಿಣಾಮ ಬೀರುತ್ತಿದ್ದು ರಸ್ತೆ ಸರಿಯಾಗವವರೆಗೂ ಟ್ರಾನ್ಸ್ಪೋಟರ್್ನ್ನು ಸ್ಥಗಿತಗೊಳಿಸಲಾಗುವುದು ಎಂದು ಲಾರಿ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
  ತಾಲ್ಲೂಕಿನ ಗಣಿಯಿಂದ ಅಧಿರನ್ನು ತೆಗೆದುಕೊಂಡು ಹೋಗಲು ಹಲವಾರು ಲಾರಿಗಳು ಗಣಿ ಭಾಗದ ಗ್ರಾಮಗಳ  ಮೂಲಕ ಹಾದು ಹೋಗುತ್ತವೆ, ಲಾರಿಗಳು ಸಂಚರಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆಗಳು ಇನ್ನಷ್ಟು ಹಾಳಾಗುತ್ತಿವೆ ಅಲ್ಲದೆ ಗುಂಡಿಗಳು ರಸ್ತೆಯಲ್ಲೆಲ್ಲಾ ಉಂಟಾಗಿ ಅದರಿಂದ ಬರುವ ಧೂಳು ಗ್ರಾಮದ ಜನರಿಗೂ ತಗುಲಿತ್ತಿದೆ ಅಲ್ಲದೆ ಗಣಿ ಭಾಗದ ಗ್ರಾಮಗಳಿಗೆ ಸಂಚರಿಸುವ ಪ್ರತಿ ಸವಾರರೂ ಕೂಡ ದಿನನಿತ್ಯ ಆಸ್ಪತ್ರೆಗೆ ಎಡತಾಕುವಂತಾಗಿದೆ.
ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆ ಹಾಗೂ ಗುಂಡಿಗಳಿಂದ ಸವಾರರಿಗೆ ಆರೋಗ್ಯ ಸಮಸ್ಯೆಯೂ ಹಾಗೂ ವಾಹನಗಳು ಕೆಟ್ಟು ನಿಲ್ಲುತ್ತಿವೆ ಇದರ ರಿಪೇರಿಗಾಗಿಯೇ ಅವರು ಪಡೆಯುವ ಸಂಬಳವನ್ನೆಲ್ಲಾ ರಿಪೇರಿಗೆ ಬಳಸಲಾಗುತ್ತಿದೆ ಎಂದು ಪ್ರತಿಭಟನಾ ಲಾರಿ ಚಾಲಕರು ಮಾಧ್ಯಮದೆದರು ತಮ್ಮ ಅಳಲು ತೋಡಿಕೊಂಡರು.
ಸಾಮಾಜಿಕ ಕಾರ್ಯಕರ್ತ ನಂಜುಂಡಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಗಣಿ ಭಾಗದ ಗ್ರಾಮಗಳ ಅಭಿವೃದ್ದಿಗೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ, ಗ್ರಾಮಗಳ ಸಮಸ್ಯೆ ಬಗ್ಗೆ ತಹಶೀಲ್ದಾರ್ರವರೂ ಸೇರಿದಂತೆ ಗಣಿ ಅಭಿವೃದ್ದಿಯ ಜವಬ್ದಾರಿ ಹೊತ್ತ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂದರಲ್ಲದೆ ಗಣಿ ಭಾಗದಲ್ಲಿ ಕೆಲಸಗಾರರು ಹಾಗೂ ಬಿಡ್ಡರ್ಗಳ ನಡುವೆ ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿದೆ, ಕೃಷಿ, ತೋಟಗಾರಿಕೆಗಳ ಮೇಲೆ ಗಣಿಯ ಪರಿಣಾಮ ಹೆಚ್ಚಾಗಿ ಬೀರುತ್ತಿದೆ ಹಾಗೂ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ಜನಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದರು.
 ಗಣಿ ಭಾಗದ ಪರಿಸರ ಅಭಿವೃದ್ದಿಗಾಗಿ 9ಕೋಟಿ ರೂ ಹಣವನ್ನು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕರಿಗಳ ಖಾತೆಯಲ್ಲಿ ಇಡಲಾಗಿತ್ತು ಆದರೂ ಗಣಿ ಭಾಗದ ಗ್ರಾಮಗಳ ಪರಿಸರ ಅಭಿವೃದ್ದಿಗಾಗಿ ಹಣವು ಬಳಕೆಯಾಗುತ್ತಿಲ್ಲ ಈ ಹಣದ ವಿವರವೂ ತಿಳಿಯುತ್ತಿಲ್ಲ, ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ, ತಾಪಮಾನ ಹೆಚ್ಚಾಗಿದೆ ಎಂದರಲ್ಲದೆ ನೀರಾವರಿಗಾಗಿ 5ಕೋಟಿ ಹಣ ಮೀಸಲಿಡಲಾಗಿತ್ತು ಆದರೆ ಸಕರ್ಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ ಈ ಹಣವನ್ನು ಗಣಿ ಭಾಗದ ಗ್ರಾಮಗಳ ಅಭಿವೃಧಿಗಾಗಿ ಬಳಸಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ.ಸದಸ್ಯ ತಿಮ್ಮೇಗೌಡ ಮಾತನಾಡಿ ಗಣಿ ಭಾಗದ ರಸ್ತೆಯ ಸಮಸ್ಯೆಯಿಂದ ಜನರಲ್ಲಿ ಸಂಚಾರರಿಗೆ ಹಾಗೂ ಗ್ರಾಮದವರಿಗೆ ಆರೋಗ್ಯದ ಸಮಸ್ಯೆ ಎದುರಾಗುತ್ತಿದೆ, ರಸ್ತೆ ಸರಿಯಾಗುವವರೆಗೂ ಇಲ್ಲಿನ ಅಧಿರು ಸಾಗಾಣಿಕೆಯ ವಾಹನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.
 ಲಾರಿ ಚಾಲಕ ಸಾದತ್ ಮಾತನಾಡಿ ಈ  ರಸ್ತೆಯಲ್ಲಿ ಲಾರಿಯನ್ನು ಚಲಾಯಿಸಿದರೆ ದಿನನಿತ್ಯ ರಿಪೇರಿಗೆ ಹೋಗುತ್ತದೆ ನಾವು ದುಡಿಯುವ 500ರೂಗೆ 5ಸಾವಿರ ಹಣ ರಿಪೇರಿಗೆ ಖಚರ್ು ಮಾಡಬೇಕಾಗುತ್ತದೆ ಅಲ್ಲದೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಜೊತೆಯಲ್ಲಿ ಶರೀರದ ಮೂಳೆಗಳು ಮುರಿಯುವ ಸಂಭವ ಹೆಚ್ಚಾಗಿದೆ ಎಂದರಲ್ಲದೆ ಈ ಭಾಗದಲ್ಲಿ ಇರುವ 13ಮೈನ್ಸ್ನವರು ಸ್ವಲ್ಪ ಸ್ವಲ್ಪ ಹಣ ಹಾಕಿದರೂ ರಸ್ತೆ ಅಭಿವೃದ್ದಿಯಾಗುತ್ತದೆ ಎಂದರು.
 ಪ್ರತಿಭಟನೆಯಲ್ಲಿ ಲಾರಿ ಚಾಲಕರಾದ ಸಾದತ್, ಶಿವಕುಮಾರ್, ಸಾಧಿಕ್ ರಹಮತ್, ರಚಿತ್, ವೆಂಕಜಮೀರ್ಸೈಯದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟೇಶನಾಯ್ಡು, ಸಲೀಂ, ಚಿಕ್ಕಣ್ಣ, ಕೌಫಿಕ್ಪಾಷ, ಮಂಜುನಾಥ್, ಅಮೀರ್ಜಾನ್,
ಗ್ರಾಮೀಣ ಮಕ್ಕಳಲ್ಲಿ ಕಲಿಕಾ ಕೌಶಲ, ಧಾರಣಶಕಿ ಅಧಿಕ:

ಚಿಕ್ಕನಾಯಕನಹಳ್ಳಿ,ಜು.16: ಗ್ರಾಮೀಣ ಶಾಲೆಯ ಮಕ್ಕಳಲ್ಲಿ ಪಟ್ಟಣದ ಕಾನ್ವೆಂಟ್ ಶಾಲೆಗಳ ಮಕ್ಕಳಿಗಿಂತ ಹೆಚ್ಚಿನ ಧಾರಣಶಕ್ತಿ, ಕಲಿಕ ಕೌಶಲ ವಿರುತ್ತದೆ ಎಂದು ಶಿಕ್ಷಕ ಹಾಗು  ಲೇಖಕ ಸಿ. ಗುರುಮೂತರ್ಿ ಕೊಟಿಗೆಮನೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಳಿಗೆಹಳ್ಳಿಯ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟ ಏರ್ಪಡಿಸಿದ್ದ ನೋಟ್ಪುಸ್ತಕ ಹಾಗು ಲೇಖನ ಸಾಮಾಗ್ರಿಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಶಾಲೆಯ ಮಕ್ಕಳಿಗೆ ಪರಿಸರ ಹಾಗೂ ಗಿಡಮರಗಳನ್ನು ಬೆಳೆಸುವ ಪರಿಚಯದ ಜೊತೆಯಲ್ಲಿ ಕಾಳಜಿ ಇರುತ್ತದೆ.
 ನೈಸಗರ್ಿಕವಾಗಿ ಬೆಳೆಯುವ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಉಪಯೋಗಿಸುವುದರಿಂದ ಧಾರಣಶಕ್ತಿ ಗ್ರಾಮೀಣ ಮಕ್ಕಳಲ್ಲಿ ಬೆಳೆದಿರುತ್ತದೆ, ಸಂಸ್ಕೃತಿ ಹಾಗೂ ಕಲೆಯ ಜೊತೆಗೆ ಸಂಸ್ಕಾರದ ಕೌಶಲ್ಯ ಮೈಗೂಡಿಸಿಕೋಂಡಿರುತ್ತಾರೆ, ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಪ್ರಶ್ನೆಗೆ ಉತ್ತರ ಬಿಟ್ಟರೆ ನೈಸಗರ್ಿಕ ಕೌಶ್ಯಲ್ಯಗಳು ಅಷ್ಟಾಗಿ ತಿಳಿದಿರುವುದಿಲ್ಲ, ಎರಡು ದಶಕಗಳ ಹಿಂದೆ ಸಕರ್ಾರಿ ಶಾಲೆಗಳಲ್ಲಿ ಸವಲತ್ತುಗಳು ಕಡಿಮೆ ಇದ್ದು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದವು. ಪ್ರಸ್ತುತ ಕಾಲದಲ್ಲಿ ಸರಕಾರದಿಂದ ಅನೇಕ ಸೌಲಭ್ಯಗಳು ಇವೆ ಆದರೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದರಲ್ಲದೆ ಪಟ್ಟಣದ ಕಾನ್ವಂಟ್ ಶಾಲೆಗಳಲ್ಲಿ ಬಾಹ್ಯ ಸೌಂದರ್ಯದ ಆಕರ್ಷಣೆಯಿಂದ ಆಂತರಿಕ ಸೌದರ್ಯತೆ ಕಡಿಮೆಯಾಗಿದೆ ಎಂದರು.
 ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯ ಮಾತನಾಡಿ, ಸಕರ್ಾರಿ ಶಾಲೆಯ ವಿದ್ಯಾಥರ್ಿಗಳು ಖಾಸಗಿ ಶಾಲೆಯ ಮಕ್ಕಳಿಗಿಂತ ಪ್ರತಿಯೊಂದು ವಿಷಯದಲ್ಲೂ ಮುಂದಿದ್ದಾರ, ಹಳ್ಳಿ ಭಾಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು  ದನ ಹಾಗೂ ಕುರಿ ಕಾಯಲು ತಮ್ಮ ಮಕ್ಕಳನ್ನು ಕಳುಹಿಸುವುದರಿಂದ ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ತಾವೇ ಹಾಳು ಮಾಡಿದಂತಾಗುತ್ತದೆ ಎಂದರು..
ಸ್ಪಂದನ ಜನವೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್ ಮಾತನಾಡಿ  ಸಕರ್ಾರಿ ಶಾಲೆಯ ಬಡವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೋಟ್ಬುಕ್, ಲೇಖನಿಯನ್ನು ಸಂಘವು ಪ್ರತಿವರ್ಷ ನೀಡುತ್ತಿದೆ ಎಂದು ಹೇಳಿದರು. 
 ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿನೋದಬಾಯಿ, ಎಸ್.ಡಿ.ಎಂ.ಸಿ.ಸದಸ್ಯ ನಿವರ್ಾಣಯ್ಯ, ಸ್ಪಂದನ ಜನಸೇವಾ ಒಕ್ಕೂಟದ ತ್ಯಾಗರಾಜು, ಸಿ.ಮಲ್ಲಿಕಾಜರ್ುನಸ್ವಾಮಿ, ಕಿರಣ್ಕುಮಾರ್, ಶಿವಣ್ಣ, ಜಾಕೀರ್ಹುಸೇನ್, ಶಿಕ್ಷಕಿ ಉಪಸ್ಥಿತರಿದ್ದರು.
 
        ಎಳೆ ಹಲಸಿನ ಮರವೊಂದನ್ನು ಅಕ್ರಮವಾಗಿ ಕಡಿದು ಹಾಕಿರುವ ಘಟನೆ    
                                       
ಚಿಕ್ಕನಾಯಕನಹಳ್ಳಿ,ಜೂ.18 : ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೈದಾನದಲ್ಲಿದ್ದ ಎಳೆ ಹಲಸಿನ ಮರವೊಂದನ್ನು ಅಕ್ರಮವಾಗಿ ಕಡಿದು ಹಾಕಿರುವ ಘಟನೆ ನಡೆದಿದೆ.
ಇಲ್ಲಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ಸೇರಿದ ಮೈದಾನದ ಜಾಗದಲ್ಲಿ ಬೆಳೆಸಿದ್ದ ಹಲಸಿನ ಮರವೊಂದನ್ನು ಬೆಳಗಿನ ಜಾವ ದುಷ್ಕಮರ್ಿಗಳು ಕಡಿದುರುಳಿಸಿದ್ದಾರೆ. ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ ವಿದ್ಯಾಥರ್ಿಗಳು ಈ ಕೃತ್ಯವನ್ನು ಪ್ರಾಂಶುಪಾಲರ ಗಮನಕ್ಕೆ ತಂದರು. ಕಾಲೇಜಿನ ಪೂರ್ವ ಭಾಗದ ಮೈದಾನದ ಅಂಜಿನಲ್ಲಿದ್ದ ಈ ಹಲಸಿನ ಮರವನ್ನು ಕಟಿಂಕ್ ಮಿಷನ್ ನಿಂದ ಕಡಿಯಲಾಗಿದೆ. ಈ ಕೃತ್ಯದ ಹಿಂದೆ ಭೂಗಳ್ಳರ ಕೈವಾಡ ವಿದೆ ಎಂದು ಶಂಕಿಸಲಾಗಿದೆ. ಐದು ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ಈ ಕಾಲೇಜಿನ ಆಟದ ಮೈದಾನದಲ್ಲಿ ನೂರಾರು ಅರಣ್ಯ ಸಸಿಗಳನ್ನು ಜತನವಾಗಿ ಬೆಳಸಲಾಗುತ್ತಿದೆ. ಈ ಹಿಂದೆ ಕಾಲೇಜಿ ಸಿಬ್ಬಂದಿ ತಮ್ಮ ಜಾಗದ ಗಡಿಗಳನ್ನು ಗುರುತಿಸಿ ಕಲ್ಲು ಕಂಬ ನೆಡುತ್ತಿದ್ದಾಗ ಅನಗತ್ಯವಾಗಿ ಸುತ್ತಮುತ್ತಲಿನ ಕೆಲವರು ವಿವಾದ ಎಬ್ಬಿಸಿದ್ದರು. ಈ ಕಾಲೇಜಿನ ಸನಿಹದ  ಮನೆಗಳಿಗೆ ಕಾಲೇಜಿನ ಮೈದಾನದ ಮೂಲಕ ರಸ್ತೆಗೆ ಜಾಗಬಿಡಿ ಎಂದು ತಕರಾರು ಎಬ್ಬಿಸಿದ್ದರು. ಈ ಕೃತ್ಯದ ಬಗ್ಗೆ ಆಗ ತಹಸೀಲ್ದಾರ್ರಿಗೆ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ತಹಸೀಲ್ದಾರ್ರು ನೋಟೀಸು ಜಾರಿ ಮಾಡಿದ್ದರೂ ಈವರೆಗೂ ಯಾರಿಂದಲೂ ತಕರಾರು ಅಜರ್ಿ ಬಂದಿರಲಿಲ್ಲ. ಆದರೆ ಈಗ ಏಕಾಏಕಿ ಅಕ್ರಮವಾಗಿ ಮರವನ್ನು ಕಡಿಯುವುದರ ಮೂಲಕ ದುಷ್ಕಮರ್ಿಗಳು ವಿವಾದ ಎಬ್ಬಿಸಿದ್ದಾರೆ. ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ವಿ.ವರದರಾಜು ಇಲ್ಲಿನ ಪೊಲೀಸ್ ಠಾಣೆಗೆ, ತಹಸೀಲ್ದಾರ್ರಿಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಸುಮಾರು ಒಂದು ಸಾವಿರ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನ ಆಸ್ತಿ ರಕ್ಷಣೆಗಾಗಿ  ಕನಿಷ್ಠ ತಂತಿ ಬೇಲಿಯೂ ಇಲ್ಲದಿರುವುದು ಶೋಚನೀಯವೆನಿಸಿದೆ. ಕಾಂಪೌಂಡ್ಗಾಗಿ ಶಾಸಕರಿಂದ ಹಿಡಿದು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸಲ್ಲಿಸಿದ ಮನವಿಗೆ ಯಾರೂ ಕಿವಿಗೊಟ್ಟಿಲ್ಲ ಎಂದು ಪ್ರಾಂಶುಪಾಲರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.
ತಾಲ್ಲೂಕು ಪ್ರೌಢಶಾಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷರು, ನಿದರ್ೇಶಕರ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.18 : ಚಿಕ್ಕನಾಯಕನಹಳ್ಳಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸಾಸಲು ಸಕರ್ಾರಿ ಪ್ರೌಢಶಾಲೆಯ ಸಿ.ಎ.ಕುಮಾರಸ್ವಾಮಿರವರು ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
 ಉಪಾಧ್ಯಕ್ಷರಾಗಿ ಬರಕನಾಳ್ ವಿಶ್ವಭಾರತಿ ಪ್ರೌಢಶಾಲೆಯ ಸುಧಾಕರ್, ಕಾರ್ಯದಶರ್ಿಯಾಗಿ ಚಿ.ನಾ.ಹಳ್ಳಿ ಡಿವಿಪಿ ಶಾಲೆಯ ಎಂ.ಜಿ.ಗುರುಸ್ವಾಮಿನಾಯ್ಡು, ಸಹಕಾರ್ಯದಶರ್ಿಯಾಗಿ ದಬ್ಬಗುಂಟೆ ಜಿ.ಹೆಚ್.ಎಸ್ ಗಿರೀಶ್, ಖಜಾಂಚಿಯಾಗಿ ಅಣೆಕಟ್ಟೆ ಬಸವೇಶ್ವರ ಪ್ರೌಡಶಾಲೆಯ ಆರ್.ಎಂ.ರಾಜ್ಕುಮಾರ್, ಗೌರವ ಅಧ್ಯಕ್ಷರಾಗಿ ಬೋರನಕಣಿವೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಎಸ್.ಮಂಜಮ್ಮ, ಸಂಚಾಲಕರಾಗಿ ಜೆ.ಸಿ.ಪುರ ಜಿ.ಎಚ್.ಎಸ್ ಅನಿತ, ನಿದರ್ೇಶಕರುಗಳಾಗಿ ಗೋಪಾಲಯ್ಯ, ಕಾಂತರಾಜು, ಬಿ.ಆರ್.ಮಂಜುನಾಥ್, ಆರ್.ರಂಗನಾಯ್ಕ್, ಅರುಣ್ಕುಮಾರ್, ಎಂ.ರಾಜಶೇಖರಪ್ಪ, ವಹೀದಾಬಾನು, ಸೌಭಾಗ್ಯಮ್ಮ, ಮಂಜುಳ, ಪುಟ್ಟಮ್ಮ, ರಮೇಶನಾಯ್ಕ, ರೇಣುಕರಾಧ್ಯ, ಕಮಲ ಆಯ್ಕೆಯಾಗಿದ್ದಾರೆ.

 

Tuesday, July 15, 2014

ಮಕ್ಕಳಿಗೆ ಕೃಷಿಯಲ್ಲಿ ತೊಡಗುವಂತೆ ಸಲಹೆ ನೀಡಿ
ಚಿಕ್ಕನಾಯಕನಹಳ್ಳಿ,ಜು.15 : ನಮ್ಮ ಮಕ್ಕಳಿಗೆ ಕೃಷಿಯಲ್ಲಿ ತೊಡಗುವಂತೆ ಸಲಹೆ ನೀಡಿ ಅವರಿಗೆ ಕೃಷಿ ಬಗ್ಗೆ ಒಲವು ಬರುವಂತೆ ಮಾಡಬೇಕು ಎಂದು ಸಾವಯವ ಕೃಷಿ ಪರಿವಾರದ ಜಿಲ್ಲಾ ಅಧ್ಯಕ್ಷ ಸದಾಶಿವಯ್ಯ ಹೇಳಿದರು.
ತಾಲ್ಲೂಕಿನ ಹಂದನಕೆರೆ ವಲಯದ ದೊಡ್ಡಎಣ್ಣೆಗೆರೆಯ ಗವಿರಂಗನಾಥ ವಿದ್ಯಾಪೀಠ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಆಧುನಿಕ ದಾಳಿಂಬೆ ಕೃಷಿ ವಿಧಾನಗಳು ಮತ್ತು ಮಹತ್ವದ ಕುರಿತು ಮಾತನಾಡಿದ ಅವರು, ರೈತರು ದಾಳಿಂಬೆ ಕೃಷಿಯನ್ನು ಮಾಡುವ ಪೂರ್ವದಲ್ಲಿ ತಳಿಗಳ ಆಯ್ಕೆ ಮಾಡುವುದರ ಮೇಲೆ ಕೃಷಿ ಅವಲಂಬಿತವಾಗಿರುತ್ತದೆ ಆದ್ದರಿಂದ ಟೀಷುಕಲ್ಚರ್ ದಾಳಿಂಬೆ ಕೃಷಿ ಆಯ್ಕೆ ಮಾಡಿದರೆ ಸೂಕ್ತ ಅದರಲ್ಲಿ ರೋಗ ನಿರೋಧಕ ಶಕ್ತಿ ತುಂಬಿರುತ್ತದೆ ಎಂದರಲ್ಲದೆ ರೈತರು ಸಾವಯವ ಕೃಷಿಗೆ ಉತ್ತೇಜನ ನೀಡಿದರೆ ಕಡಿಮೆ ಖಚರ್ಾಗುತ್ತದೆ, ಇಲ್ಲವಾದರೆ ರಸಾಯನಿಕ ಗೊಬ್ಬರ ಹಾಕುವುದರಿಂದ ಖಚರ್ು ಹೆಚ್ಚಾಗುತ್ತದೆ ಇದರಿಂದ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.
ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ತಜ್ಞ ನವೀನ್ಕುಮಾರ್,  ರೈತರು ರಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವಗೊಬ್ಬರಕ್ಕೆ ಒತ್ತು ನೀಡಬೇಕು, ಇದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಇಲ್ಲವಾದರೆ ಮಣ್ಣು ಸತ್ತು ಹೋಗುತ್ತದೆ ಇದರಿಂದ ಕೃಷಿಯಲ್ಲಿ ಲಾಭ ಇಲ್ಲ ಎಂದು ರೈತರು ವಲಸೆ ಹೋಗುತ್ತಿದ್ದಾರೆ ಆದ್ದರಿಂದ ತೋಟಗಾರಿಕೆ ಬೆಳೆಯಾದ, ತೆಂಗು ಕೃಷಿ ಮಧ್ಯಭಾಗದಲ್ಲಿ ದಾಳಿಂಬೆ ಕೃಷಿ ಮಾಡಬಹುದು ಎಂದರಲ್ಲದೆ ಬಯಲು ಸೀಮೆ ಪ್ರದೇಶದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ದಾಳಿಂಬೆ ಕೃಷಿ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಕೃಷಿಗೆ ಬೆಲೆ ಏರಿಕೆಯಿಂದ ರೈತರು ದಾಳಿಂಬೆ ಕೃಷಿಗೆ ಒಲವು ತೋರುತ್ತಿದ್ದಾರೆ ಎಂದರು.
ಪ್ರಗತಿಪರ ಕೃಷಿಕ ಯೋಗಿಶ್ ಮಾತನಾಡಿ ದಾಳಿಂಬೆ ಕೃಷಿಗೆ ಹನಿನೀರಾವರಿ ಅಳವಡಿಸುವುದು ಸೂಕ್ತ ಇದರಿಂದ ಜಲ ಸಂರಕ್ಷಣೆ ಮಾಡಬಹುದು, ಈಗಿನ ನೀರಿನ ಅಭಾವದಲ್ಲಿ ಹನಿ ನೀರಾವರಿ ಮಾಡಿದರೆ ತೋಟಗಾರಿಕೆ ಇಲಾಖೆಯಿಂದ ಶೇ.85 ರಷ್ಟು ಸಹಾಯಧನ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಇಂದ್ರಮ್ಮ, ಯೋಜನಾಧಿಕಾರಿಗಳಾದ ರೋಹಿತಾಕ್ಷ, ಶಾಲಾ ಶಿಕ್ಷಕರಾದ ಹೇಮಾವತಿ, ಮಂಜುನಾಥ , ತಾಲೂಕು ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗಪ್ಪ.ಎಚ್.ಎಸ್ ನಿರೂಪಿಸಿದರು. ಕೃಷಿ ಅಧಿಕಾರಿಗಳಾದ ಹರೀಶ್, ಸ್ವಾಗತಿದ್ದರು. ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಪರೀಕ್ಷೆಯಲ್ಲಿ ಫೇಲಾಗಿದ್ದೇನೆಂದು ನೇಣಿಗೆ ಶರಣಾದ ಯುವಕ
ಚಿಕ್ಕನಾಯಕನಹಳ್ಳಿ,ಜು.15 : ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದರಿಂದ ಮನನೊಂದು ಅಕ್ಷಯ್ ಎಂಬ ವಿದ್ಯಾಥರ್ಿ ಮನೆಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಅಕ್ಷಯ್ ಬಿಎಸ್ಸಿ ಪದವಿಯನ್ನು ಮುಗಿಸಿದ್ದನಾದರೂ  ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡರೂ ಪರೀಕ್ಷೆಯಲ್ಲಿ ಅನುತ್ತೀರ್ಣನಾದ್ದರಿಂದ ಮನೆಯಲ್ಲಿನ ರೂಮಿನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಕೊಡಿಸಿದ ತಪ್ಪಿಗೆ ಮಾವನಿಂದಲೇ ಹೆಣವಾದ ರವಿಕುಮಾರ್
ಚಿಕ್ಕನಾಯಕನಹಳ್ಳಿ,ಜು.15 : ಕೊಡಿಸಿದ್ದ ಸಾಲವನ್ನು  ವಾಪಸ್ ಕೇಳಿದ್ದಕ್ಕೆ ಅಳಿಯನನ್ನೇ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದರಿಂದ  ಭೈರಲಿಂಗನಹಳ್ಳಿಯ ರವಿಕುಮಾರ್ ಸಾವನ್ನಪ್ಪಿದ್ದಾನೆ ಎಂದು ಚಿ.ನಾ.ಹಳ್ಳಿ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಮೃತ ರವಿಕುಮಾರ್ ತನ್ನ ಹೆಂಡತಿಯ ಚಿಕ್ಕಪ್ಪನ ಮಗಳಾದ ಮಂಜುಳಾ ಎಂಬವವರಿಗೆ ಮನೆ ಕಟ್ಟಲು  15 ಸಾವಿರ ರೂಗಳನ್ನು ಸಾಲವಾಗಿ ಕೊಡಿಸಿದ್ದನ್ನು, ಈ ಸಾಲವನ್ನು ವಾಪಸ್ ಮಾಡುವಂತೆ ಕೇಳಿದ್ದಕ್ಕೆ ಮಂಜುಳಾರವರ ತಂದೆ ತಮ್ಮಯ್ಯ(ಆರೋಪಿ) ರವಿಕುಮಾರ್ ಮೇಲೆ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾನೆ. ಹೊಡೆತದ ಸ್ವರೂಪ ಬಲವಾಗಿದ್ದರಿಂದ ಎದೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು ರವಿಕುಮಾರ್ ಆಸ್ಪತ್ರೆಗೆಂದು ಬಂದ ಸಂದರ್ಭದಲ್ಲಿ ತನ್ನ ಬಂಧುಗಳ ಮನೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ದೂರು ನೀಡಿರುವ ಮೃತನ ಹೆಂಡತಿ ಬಿ.ಸಿ.ಗಂಗಮ್ಮ ತನ್ನ ಗಂಡನ ಸಾವಿಗೆ ತನ್ನ ಚಿಕ್ಕಪ್ಪ ತಮ್ಮಯ್ಯನೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.   ಚಿ.ನಾ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ತನಿಖೆ ಕೈಗೊಂಡಿದ್ದಾರೆ.

Saturday, May 24, 2014

ಲಂಚ ಕೊಡಲು ನಿರಾಕರಿಸಿದ್ದಕ್ಕೆ ಕಳೆಪೆ ಕಾಮಗಾರಿ ಎಂದು ವರದಿ ನೀಡಿರುವ ಅಧಿಕಾರಿಯ ವರ್ತನೆಯ ವಿರುದ್ದ ಆಕ್ರೋಶ.
 ಚಿಕ್ಕನಾಯಕನಹಳ್ಳಿ,ಮೇ.24 : 2013-14ನೇ ಸಾಲಿನ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿನ ಎನ್.ಆರ್.ಇ.ಜಿ. ಯೋಜನೆಯ ಕಡತ ಮತ್ತು ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋದನಾ ಸಂಯೋಜಕ ಕೇಳಿದ ಹಣ ನೀಡದೆ ಇದ್ದುದರಿಂದ ಯೋಜನೆಯಲ್ಲಿ ಜೆ.ಸಿ.ಬಿ ಬಳಕೆ, ಕಳಪೆ ಕಾಮಗಾರಿ, ಹಳೆಯ ಕಾಮಗಾರಿಗಳ ಮೂಲಕ ಕೆಲಸ ನಿರ್ವಹಿಸಲಾಗಿದೆ ಎಂದು ಸಕರ್ಾರಕ್ಕೆ ತಪ್ಪು ವರದಿ ಸಲ್ಲಿಸಿದ್ದಾರೆ ಎಂದು ತಾ.ಪಂ..ಸದಸ್ಯ ಎ.ಬಿ.ರಮೇಶ್ಕುಮಾರ್ ಆರೋಪಿಸಿದರು.
  ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟಿಕೆರೆ ಗ್ರಾಮ ಪಂಚಾಯ್ತಿ ಎಂ.ಜಿ.ಎನ್.ಆರ್.ಜಿ. ಕಾಮಗಾರಿಗಳ ತನಿಖೆಗೆಂದು ಬಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಮಂಜುನಾಥ್ ಪಾಟೀಲ್ ಎಂಬುವರು ತನಿಖೆಗೆ ಬಂದಾಗ ಉತ್ತಮವಾದ ವರದಿ ನೀಡಲು ಐವತ್ತು ಸಾವಿರ ರೂ ಲಂಚ ಕೇಳಿದರು, ಲಂಚವನ್ನು ಕೊಡಲು ನಿರಾಕರಿಸಿದ್ದಕ್ಕೆ ಆ ಅಧಿಕಾರಿ ಸಕರ್ಾರಕ್ಕೆ ತಪ್ಪು ವರದಿ ನೀಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಇದೇ ಕಾಮಗಾರಿಯ  ಬಗ್ಗೆ ಫೆಬ್ರವರಿ 23ರಂದು ನಿವೃತ್ತ ಚೀಪ್ ಇಂಜನಿಯರ್ ಸುಲ್ತಾನ್ ಷರೀಪ್ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟ ಉತ್ತಮವಾಗಿದೆ ಎಂದು ಸಕರ್ಾರಕ್ಕೆ ವರದಿ ನೀಡಿದ್ದಾರೆ, ಆದರೆ  ನಂತರ ಬಂದ ಅಂದರೆ ಫೆಬ್ರವರಿ 25 ಮತ್ತು 26ರಂದು ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋದನಾ ಸಂಯೋಜಕ ಆರ್.ಮಂಜುನಾಥ್ ಪಾಟೀಲ್ ನೇತೃತ್ವದ ತಂಡ ಶೆಟ್ಟೀಕೆರೆ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗೆ ಬಂದು ಮಾಡಿದ ತನಿಖೆಯ ವರದಿಯಲ್ಲಿ  ಕಾಮಗಾರಿಗಳು ಕಳಪೆ ಮತ್ತು ಹಳೆಯದಾಗಿವೆ ಅಲ್ಲದೆ ಕಾಂಪೌಂಡ್ ನಿಮರ್ಾಣಕ್ಕೆ ಜೆ.ಸಿ.ಬಿ ಬಳಕೆ ಮಾಡಿ ಕೆಲಸ ನಿರ್ವಹಿಸಲಾಗಿದೆ ಎಂದು ವರದಿ ಸಲ್ಲಿಸಿ 21,45,181ರೂಗಳನ್ನು ವಸೂಲಿ ಮಾಡಿ ಸಕರ್ಾರಕ್ಕೆ ಜಮಾ ಮಾಡಲು ತಿಳಿಸಿದ್ದಾರೆ ಆದರೆ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ಕಟ್ಟಿರುವ ಶಾಲಾ ರಕ್ಷಣಾ ಗೋಡೆ, ತಡೆ ಗೋಡೆ ಸೇತುವೆ ಕಾಮಗಾರಿ ಇವುಗಳಿಗೆ ಯಾವುದೇ ಜೆ.ಸಿ.ಬಿ ಬಳಸದೆ ಕೂಲಿ ಕಾಮರ್ಿಕರಿಂದ ಕೆಲಸ ನಿರ್ವಹಿಸಲಾಗಿದೆ ಎಂದರಲ್ಲದೆ ನಿಮರ್ಿಸಿರುವ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿದೆ ಎಂದಿದ್ದಾರೆ.
ಸಕರ್ಾರಕ್ಕೆ ವರದಿ ಸಲ್ಲಿಸಿರುವ ವರದಿಯ ಪುಟ ಸಂಖ್ಯೆ 37ರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಮಾಡಲಾದ ಕಾಮಗಾರಿಗಳಲ್ಲಿ ಒಂದು ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಮಗಾರಿಗಳು ಉತ್ತಮವಾಗಿ ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದ್ದು ಒಂದೇ ವರದಿಯಲ್ಲಿ ಅದೇ ಕಾಮಗಾರಿಗಳನ್ನು ಕಳಪೆ/ಹಳಯದು ಎಂದು ಒಂದು ಕಡೆ ತಿಳಿಸಿ, ಮತ್ತದೇ  ಕಾಮಗಾರಿಗಳನ್ನು ಉತ್ತಮ ಎಂದು ತಿಳಿಸಿರುವುದರಿಂದ ಇವರು ವರದಿಯ ಸತ್ಯಾ ಸತ್ಯತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ ಎಂದರಲ್ಲದೆ, ಅವರ ಅರ್ಹತೆ, ಅನುಭವದ ಬಗ್ಗೆಯೂ ಅನುಮಾನಗಳು ಹುಟ್ಟುತ್ತವೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಸಕರ್ಾರಕ್ಕೆ ವರದಿ ಸಲ್ಲಿಸಿರುವಂತೆ ಕೂಲಿ ಕಾಮರ್ಿಕರಿಗೆ ಕೆಲಸ ನೀಡದೆ ಕಾಮಗಾರಿಯ ಬುನಾದಿಯನ್ನು ಗುತ್ತಿಗೆದಾರರಿಂದ ಮತ್ತು ಜೆ.ಸಿ.ಬಿ ಯಂತ್ರೋಪಕರಣಗಳಿಂದ ಅನುಷ್ಠಾನ ಮಾಡಲಾಗಿದೆ ಎಂದು ವರದಿ ಸಲ್ಲಿಸಿದ್ದು ಈ ಬಗ್ಗೆ ಸ್ಥಳೀಯ ಕೂಲಿ ಕಾಮರ್ಿಕರನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲಿ ಎಂದು ಸವಾಲೆಸೆದರು.
ಶೆಟ್ಟಿಕೆರೆ ಗ್ರಾ.ಪಂ.ಅಧ್ಯಕ್ಷೆ ದಾಕ್ಷಾಯಿಣಿ ರಮೇಶ್ ಮಾತನಾಡಿ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಒಂದು ಕಡೆ ಕಳಪೆ ಎಂದು ಮತ್ತೊಂದು ಕಡೆ ಉತ್ತಮ ಎಂದು ಸಕರ್ಾರಕ್ಕೆ ವರದಿ ನೀಡಿರುವುದು  ಅಧಿಕಾರಿಗಳ ಸತ್ಯಕ್ಕೆ ದೂರವಾದ ವರದಿ ಎಂದಿರುವ ಅವರು,  ಕೆಲಸ ನಿರ್ವಹಿಸಿರುವ ಕಾಮಗಾರಿಗಳಿಗೆ ನಾಮಪಲಕ ಹಾಕಿದ್ದರೂ ಹಾಕಿಲ್ಲ ಎಂದು, ಜೆಸಿಬಿ ಬಳಸಲು ಅವಕಾಶವೆ ಇಲ್ಲದಿರುವಾಗ ಜೆಸಿಬಿ ಬಳಸಿದ್ದಾರೆಂದು ವರದಿ ನೀಡಿದ್ದಾರೆ, ಈ ರೀತಿ ಬೇಜವಬ್ದಾರಿ ವರದಿ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತಿರುವ, ಸಕರ್ಾರದ ಯೋಜನೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿರುವ ಅನೇಕ ಗ್ರಾಮ ಪಂಚಾಯ್ತಿಗಳಿಗೆ ಮುಂದೆ ಕೆಲಸಗಳನ್ನೇ ಮಾಡಬಾರದು ಎಂಬ ನಿಧರ್ಾರಕ್ಕೆ ಬರಬೇಕಾದಂತಹ ಅನಿವಾರ್ಯತೆ ಎದುರಾಗುತ್ತದೆ ಎಂದರು.
ಶೆಟ್ಟಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಜಿ.ಎಂ.ನಾಗರಾಜು ಮಾತನಾಡಿ ಶೆಟ್ಟಿಕೆರೆ ಗ್ರಾ.ಪಂ.ನಲ್ಲಿ ಮಾಡಲಾಗಿರುವ ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕ ಹಾಕಿರುವ ಬಗ್ಗೆ ಅವರ ವರದಿಯಲ್ಲೇ ಅನೇಕ ಪೋಟೋಗಳು ಸಾಕ್ಷಿ ಇದ್ದರೂ ನಾಮಫಲಕ ಹಾಕದೆ ಯೋಜನೆಯ ಕಾಯ್ದೆ ಉಲ್ಲಂಘಿಸಿದ್ದಾರೆಂದು ವರದಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Tuesday, May 20, 2014

ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಬ್ಯಾಂಕ್ಗಳ ಸೇವೆಯನ್ನು ಪಡೆಯಬೇಕು
ಚಿಕ್ಕನಾಯಕನಹಳ್ಳಿ,ಮೇ.20: ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಬ್ಯಾಂಕ್ಗಳ ಸೇವೆಯನ್ನು ಪಡೆದು ತನ್ನ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಡಿ.ಸಿ.ಸಿ.ಬ್ಯಾಂಕ್ ಸಣ್ಣಪುಟ್ಟ ಸಮಾಜದವರನ್ನು ಗುತರ್ಿಸಿ ಅವರನ್ನು ಆಥರ್ಿಕವಾಗಿ ಸದೃಢರನ್ನಾಗಿಸಲು ಮುಂದಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲೂಕಿನ ಬಂಗಾರಗೆರೆ ತಾಂಡ್ಯದಲ್ಲಿ ಶ್ರೀ ಸೇವಾಲಾಲ್ ಸ್ವಸಹಾಯ ಸಂಘದವರು ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಅಲೆಮಾರಿ ಬುಡಕಟ್ಟುಗಳಾದ ದಕ್ಕಲಿಗರು, ದೊಂಬಿದಾಸರು, ಸಿಳ್ಳೇಕ್ಯಾತರು ಸೇರಿದಂತೆ ಹಮ್ಮಾಮ್ ಕೋಮಿನ ತಮ್ಮಾಮ್ ಜನರನ್ನು ಗುತರ್ಿಸಿ ಅವರು ಇಚ್ಚಿಸುವ ವ್ಯಾಪಾರ ವ್ಯವಹಾರಗಳನ್ನು ಮಾಡಲು ಸ್ವಸಹಾಯ ಸಂಘಗಳ ಮೂಲಕ ಹಣಕಾಸಿನ ನೆರವನ್ನು ನೀಡಿದ್ದು ಈ ಎಲ್ಲಾ ಸಮಾಜದವರು ನಿಷ್ಠೆಯಿಂದ ಸಾಲವನ್ನು ಮರುಪಾವತಿ ಮಾಡಿ ತಮ್ಮ ವ್ಯವಹಾರಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವ ಮೂಲಕ ಬ್ಯಾಂಕ್ನ ಬೆಳವಣಿಗೆಗೂ ಸಹಕರಿಸುತ್ತಿದ್ದಾರೆ ಎಂದರು.
ಬಂಗಾರಗೆರೆ ತಾಂಡ್ಯದಲ್ಲಿನ ಇಪ್ಪತ್ತು ಜನ ಸದಸ್ಯರಿರುವ ಸ್ವಸಹಾಯ ಸಂಘಕ್ಕೆ ಇಲ್ಲಿಯವರೆಗೂ ಐದು ಲಕ್ಷ ರೂ ಸಾಲ ನೀಡಿದ್ದು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡರೆ ಆ ಸಂಘಗಳಿಗೂ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದರು, ಆಲದಕಟ್ಟೆ ತಾಂಡ್ಯದ ಸೇವಾಲಾಲ್ ಸಂಘವೂ ಇದೇ ರೀತಿ ಉತ್ತಮ ಪ್ರಗತಿ ಹೊಂದಿದ್ದರಿಂದ ಆ ಸಂಘಕ್ಕೆ ಡಿ.ಸಿ.ಸಿ.ಬ್ಯಾಂಕ್ ಉಚಿತವಾಗಿ ಸೇಫ್ ಲಾಕರ್ನ್ನು ನೀಡಿದೆ ಎಂದರಲ್ಲದೆ, ತಾಲೂಕಿನಲ್ಲಿರುವ ಸ್ವಸಹಾಯ ಸಂಘಗಳಿಗೆ 13 ಕೋಟಿ ರೂಗಳಷ್ಟು ಸಾಲ ನೀಡಲಾಗಿದೆ ಎಂದು ಎಸ್.ಆರ್.ರಾಜ್ಕುಮಾರ್ ತಿಳಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಲಂಬಾಣಿ ಜನಾಂಗದ ಬಾಂಧವರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು, ಹಿಂದೆ ಮಕ್ಕಳಿಗೆ ಆಸ್ತಿ ಮಾಡಬೇಕೆಂಬ ಕಾಲ ಒಂದಿತ್ತು, ಈಗ ಮಕ್ಕಳನ್ನೇ ಆಸ್ತಿ ಮಾಡುವ ಕಾಲ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರಲ್ಲದೆ, ಸಮಾಜದ ಬಡ ಬಂಧುಗಳು ಸಕರ್ಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ಪಡೆಯುವ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸೇವಾಲಾಲ್ ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಈ ಊರಿಗೆ ನ್ಯಾಯಬೆಲೆ ಅಂಗಡಿ ಮುಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.
ತಾ.ಪಂ.ಸದಸ್ಯೆ ಚೇತನ ಗಂಗಾಧರ್ ಮಾತನಾಡಿ ಇಲ್ಲಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಮುಜರಾಯಿ ಇಲಾಖೆಯಿಂದ ದೇವಸ್ಥಾನ ನಿಮರ್ಾಣ, ತಾಂಡ್ಯಕ್ಕೊಂದು ಸಮುದಾಯ ಭವನ, ಬಡವರಿಗೆ ಉಚಿತ ನಿವೇಶನ ನೀಡುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಗ್ರಾ.ಪಂ.ಯಿಂದ ಮಾತ್ರ ಸಾಧ್ಯ ಆದ್ದರಿಂದ ಇ.ಓ.ರವರು ಈ ಬಗ್ಗೆ ಹೆಚ್ಚು ಗಮನ ನೀಡಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ಇಚ್ಚಾಶಕ್ತಿಯನ್ನು ತೋರಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಬರಗೂರು ಬಸವರಾಜು, ಬರಗೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಬಿ.ಎನ್.ನಾಗರಾಜು, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ, ಮ್ಯಾನೇಜರ್ ಟಿ.ಎನ್.ನಾಗರಾಜು, ವಿ.ಎಸ್.ಎಸ್.ಎನ್. ಸಿ.ಇ.ಓ. ಬಿ.ಸಣ್ಣಕರಿಯಪ್ಪ, ನಿದರ್ೇಶಕ ಜಾಫರ್ ಸಾಧಿಕ್ ಸೇರಿದಂತೆ ಹಲವರಿದ್ದರು.
ಸಮಾರಂಭದಲ್ಲಿ ವಕೀಲ ಯತೀಶ್ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಿಕ್ಷಕ ರಂಗನಾಥ್ ಸ್ವಾಗತಿಸಿದರು.

ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ವರ ರಸ್ತೆ ಅಪಘಾತದಲ್ಲಿ ಮರಣ
 ಚಿಕ್ಕನಾಯಕನಹಳ್ಳಿ,ಮೇ.20: ಮದುವೆಯ ಲಗ್ನಪತ್ರಿಕೆ ವಿತರಿಸಿಸಲು ಹೋಗಿದ್ದ ವರ ತನ್ನದಲ್ಲದ ತಪ್ಪಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡುರಾತ್ರಿಯಲ್ಲಿ ನಡೆದಿದೆ.
 ತಾಲೂಕಿನ ಸಾಲಕಟ್ಟೆ ಕ್ರಾಸ್ ಮತ್ತು ಮುದ್ದೇನಹಳ್ಳಿ ಗೇಟ್ ಮಧ್ಯೆ ನಡು ರಸ್ತೆಯಲ್ಲಿ  ಕೆಟ್ಟು ನಿಂತಿದ್ದ ಲಾರಿಗೆ ಬೈಕ್ನಲ್ಲಿ ಬಂದ ದೊಡ್ಡ ಬಿದರೆ ತೋಟದ ಮನೆ ವಾಸಿ ಡಿ.ಎನ್.ಸೋಮಶೇಖರಯ್ಯ ಉರುಫ್ ಸುರೇಶ್ ಮತ್ತು ಹೊಸಹಟ್ಟಿಯ ನಿಂಗರಾಜು ಢಿಕ್ಕಿ ಹೊಡೆದ ಪರಿಣಾಮ ಡಿ.ಎನ್.ಸೋಮಶೇಖರ್ ಸಾವನ್ನಪ್ಪಿದ್ದರೆ ನಿಂಗರಾಜು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಸೋಮಶೇಖರಯ್ಯನ ಮದುವೆ ತನ್ನ ಅಕ್ಕನ ಮಗಳೊಂದಿಗೆ ಇದೇ 24, 25ರಂದು ನಡೆಯಬೇಕಿತ್ತು, ಈ ಸಂಬಂಧ ತನ್ನ ಬಂಧುಬಳಗದವರಿಗೆ ಲಗ್ನ ಪತ್ರಿಕೆಯೊಂದಿಗೆ ಕೊಡಲು  ತನ್ನ ಸ್ನೇಹಿತನೊಂದಿಗೆ ತೆರಳಿದ್ದ ಮೃತ ಸೋಮಶೇಖರ್, ಸೋಮವಾರ ರಾತ್ರಿ ತಡ ರಾತ್ರಿ ಮುದ್ದೇನಹಳ್ಳಿ ಗೇಟ್ ಬಳಿ ಬರುತ್ತಿರುವಾಗ ರಸ್ತೆ ಮಧ್ಯೆ ಲಾರಿಯೊಂದ ಕೆಟ್ಟು ನಿಂತಿತ್ತು, ಈ ಬಗ್ಗೆ  ಯಾವುದೇ ರೀತಿಯ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳದ ಲಾರಿ ಡ್ರೈವರ್ನ ಅಜಾಗರೂಕತೆಯಿಂದಾಗಿ  ಬೈಕ್ನ ಸವಾರ ಸೋಮಶೇಖರ್ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೋರ್ವ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಲಾರಿ ಚಾಲಕ ಘಟನೆ ನಡೆಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾನೆ.

ಎಸ್.ಪಿ.ಎಂ.ರವರನ್ನು ಗೆಲ್ಲಿಸುವ ಮೂಲಕ ಮತದಾರರು ಪ್ರೌಢಿಮೆ ಮೆರೆದಿದ್ದಾರೆ. :  ಡಾ.ಡಿ.ಆರ್. ನಾಗೇಶ್ 
ಚಿಕ್ಕನಾಯಕನಹಳ್ಳಿ,ಮೇ.20: ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ಪ್ರೌಢಿಮೆ ಮೆರೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕೃಷಿ ಮತ್ತು ಕೃಷಿ ಕಾಮರ್ಿಕ ಘಟಕದ ಬೆಂಗಳೂರು ವಿಭಾಗದ ಪ್ರಧಾನ ಕಾರ್ಯದಶರ್ಿ ಡಾ.ಡಿ.ಆರ್. ನಾಗೇಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ.ಸಿದ್ದರಾಮಯ್ಯನವರ ಸಮಾಜಿಕ ಕಳಕಳಿ, ಪಕ್ಷದ ರಾಜ್ಯಾಧ್ಯಕ ಡಾ.ಜಿ.ಪರಮೇಶ್ವರ ರವರ ಸಂಘಟನಾ ಚಾತುರ್ಯ ಹಾಗೂ ಅಬ್ಯಾಥರ್ಿ ಎಸ್.ಪಿ.ಎಂ.ಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಮತದಾರರು ಮನಸೋತು ಹೆಚ್ಚಿನ ಮತ ನೀಡಿ ಅವರ ಜಯಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ.
ಸ್ಪಧರ್ೆ ಚುನಾವಣೆಯ ಸಂದರ್ಭಕ್ಕೆ ಸೀಮಿತವಾಗಿರಬೇಕು, ಗೆದ್ದ ನಂತರ ಕ್ಷೇತ್ರದ ಎಲ್ಲಾ ಜನರ ಪ್ರತಿನಿಧಿಯಾಗುವುದರಿಂದ ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ದುಡಿಯಬೇಕು ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ಮತದಾರರು ಯಾವುದೇ ರಾಗ ದ್ವೇಷಗಳಿಗೆ ಬಲಿಯಾಗದೆ ಸಹೌರ್ಧತೆಯಿಂದ  ಅಭಿವೃದ್ದಿಯ ನಿಟ್ಟಿನಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.




ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡದ ಪಿ.ಡಿ.ಓ.: ಕಾಮಗಾರಿ ದಾಖಲೆಗಳ ಬಗ್ಗೆ ತನಿಖೆಗೆ ಒತ್ತಾಯ.
ಚಿಕ್ಕನಾಯಕನಹಳ್ಳಿ : ಗೋಡೆಕೆರೆ ಗ್ರಾಮ ಪಂಚಾಯ್ತಿಯಲ್ಲಿ 2010-11ರಿಂದ 2013-14ರವರೆಗೆ ನಡೆದಿರುವ ಎನ್.ಆರ್.ಇ.ಜಿ ಕಾಮಗಾರಿ, ಶೌಚಾಲಯ ಮತ್ತು ಪಂಚಾಯ್ತಿ ಕರವಸೂಲಾತಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು  ಪಂಚಾಯ್ತಿ ಸದಸ್ಯರೇ ತನಿಖೆಗೆ  ಒತ್ತಾಯಿಸಿದ್ದಾರೆ.
ಪಟ್ಟಣದ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸದಸ್ಯರುಗಳು, ಗೋಡೆಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಪಂಚಾಯ್ತಿಯ ಪಿಡಿಓ ಕೋಕಿಲರವರಲ್ಲಿ ಕೇಳಿದರೂ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ, ಈ ಬಗ್ಗೆ ಪಂಚಾಯ್ತಿಯಲ್ಲಿನ ಹಾಲಿ ಸದಸ್ಯರಿಗೆ ಅವಮಾನ ಮಾಡಿರುವುದಲ್ಲದೆ,  ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರವ ಬಗ್ಗೆ ಅನುಮಾನ ಬರುವಂತೆ ವತರ್ಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2010-11ನೇ ಸಾಲಿನಿಂದ 2013-14ನೇ ಸಾಲಿನವರೆ ಗ್ರಾಮ ಪಂಚಾಯ್ತಿಗೆ ಸಕರ್ಾರದಿಂದ ಬಂದ ಹಣದ ಲೆಕ್ಕ ಹಾಗೂ ಈ ಹಣ ಯಾವ ಯಾವ ಬಾಬ್ತಿಗೆ ಖಚರ್ು ಮಾಡಲಾಗಿದೆ ಎಂಬುದರ ಬಗ್ಗೆ ಪಂಚಾಯ್ತಿ ಪಾಸ್ಪುಸ್ತಕದ ನಕಲಿನ ಸಮೇತ ಮಾಹಿತಿ ನೀಡಲು ಕೋರಲಾಗಿತ್ತು ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡುತ್ತಿಲ್ಲ,  ಅಲ್ಲದೆ ಪಂಚಾಯ್ತಿ ಬಿಲ್ ಕಲೆಕ್ಟರ್ 2010ರಿಂದ 2013-14ನೇ ಸಾಲಿನವರೆಗೆ ವಸೂಲಿ ಮಾಡಿರುವ ಕಂದಾಯದ ವಿವರವನ್ನು ನೀಡುವಂತೆ  ಮನವಿ ಮಾಡಲಾಗಿತ್ತು ಆದರೆ ಪಿಡಿಓರವರು ಈ ಬಗ್ಗೆಯೂ ಸದಸ್ಯರಿಗೆ ಮಾಹಿತಿ ನೀಡಿಲ್ಲವೆಂದು ಆಪಾದಿಸಿದ್ದಾರೆ. 
 ಈ ಬಗ್ಗೆ ಮಾಚರ್್ 11ರ 2014 ಹಾಗೂ ಏಪ್ರಿಲ್ 28 2014ರಂದು ಪುನಃ ಮನವಿ ಸಲ್ಲಿಸಿ 13ನೇ ಹಣಕಾಸು ಯೋಜನೆಯಲ್ಲಿ 2010ರಿಂದ 2014ರವರೆಗೆ ಶೌಚಾಲಯ ಮತ್ತು ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ ಹಣಕಾಸಿನ ವಿವರಗಳನ್ನು ಫಲಾನುಭವಿಗಳ ವಿಳಾಸದೊಂದಿಗೆ ಮಾಹಿತಿ ಕೇಳಿದರೂ ಸಹ ಮಾಹಿತಿ ನೀಡಿರುವುದಿಲ್ಲ, ಪಿಡಿಓರವರನ್ನು ಈ ಬಗ್ಗೆ ಮೌಖಿಕವಾಗಿ ಕೇಳಿದಾಗ ಅಧ್ಯಕ್ಷರು ಪಂಚಾಯ್ತಿ ರೆಕಾಡರ್್ಗಳನ್ನು ಪಂಚಾಯ್ತಿ ಕಛೇರಿಯಲ್ಲಿಯೇ ಪರಿಶೀಲಿಸಲು ತಿಳಿಸಿರುತ್ತಾರೆ ಎಂದು ಹೇಳುತ್ತಾರೆ ಆದರೆ ಸದಸ್ಯರು ಕೇಳುವ ಯಾವುದೇ ದಾಖಲೆಗಳನ್ನು ನೀಡದೆ ಬೇಜವ್ದಾರಿಯಿಂದ ನಡೆದುಕೊಳ್ಳುತ್ತಾರೆಂದು ಆರೋಪಿಸುತ್ತಾರೆ.  
ಪಿಡಿಓರವರು ಯಾವುದೇ ಮಾಹಿತಿ ಹಾಗೂ ದಾಖಲೆಗಳನ್ನು ನೀಡುತ್ತಿಲ್ಲವೆಂದಿರುವ ಸದಸ್ಯರುಗಳಾದ ಗೋ.ನಿ.ವಸಂತಯ್ಯ ಜಿ.ಪಿ.ಲೋಕೇಶ್, ತಿಮ್ಮೇಗೌಡೃ, ಬಸವಲಿಂಗಯ್ಯ ಪಂಚಾಯ್ತಿಯಲ್ಲಿನ ಎಲ್ಲಾ ವ್ಯವಹಾರಗಳ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲದೆ ಹಾಲಿ ಸದಸ್ಯರಿಗೆ ಲಿಖಿತವಾಗಿ ಮಾಹಿತಿ ನೀಡದೆ ಇರುವ ಪಿಡಿಓರವರ ಮೇಲೆ ಕ್ರಮ ಕೈಗೊಳ್ಳುವಂತೆ  ಸಕರ್ಾರವನ್ನು ಒತ್ತಾಯಿಸಿದ್ದಾರೆ.

Saturday, May 17, 2014


ಲೋಕಸಭಾ ಫಲಿತಾಂಶ: ಜೆ.ಸಿ.ಎಂ, ಕೆ.ಎಸ್.ಕೆ. ಹೊಂದಾಣಿಕೆ ಮತದಾರನಿಗೆ ಸಮಾಧಾನ ತಂದಿಲ್ಲವೆ...?!
  • ಶಾಸಕ ಸಿ.ಬಿ.ಎಸ್. ನಿರೀಕ್ಷೆಗಳು ಹುಸಿಯಾಯಿತೇ ?
  • ಎರಡು ಜಾತಿಗಳ ನಡುವಿನ ರಾಜಕಾರಣ ಇನ್ನು ಇತಿಹಾಸವೇ ?
  • ಅಹಿಂದ ಜಾತಿಗಳು ನಿಣರ್ಾಯಕವೆನಿಸುತ್ತವಯೇ 
  • ಕಾಂಗ್ರೆಸ್ಗೆ ಇಲ್ಲಿ ನಿಜವಾದ ಶಕ್ತಿ ಇದೆಯೇ 
  • ಈ ಶಕ್ತಿಯನ್ನು ಚುನಾವಣೆಯ ಸಂದರ್ಭದಲ್ಲಿ ನಾಯಕರೇ ಹಾಳು ಮಾಡುತ್ತಿದ್ದರೆ?

ಚಿಕ್ಕನಾಯಕನಹಳ್ಳಿ,ಮೇ: ಈ ಭಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಈ ವಿಧಾನ ಸಭಾ ಕ್ಷೇತ್ರದ ಮಟ್ಟಿನ ಹಲವು ವಿದ್ಯಮಾನಗಳಿಗೆ ಜನಾದೇಶ ನೀಡಿದೆ. 
ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ, ಜನಪ್ರತಿನಿಧಿಗಳಾಗ ಬಯಸುವವರು ಕೇವಲ ತಮ್ಮ ಜಾತಿಗಳನ್ನಷ್ಟೇ ತೃಪ್ತಿ ಪಡಿಸಿದರೆ ಸಾಕಾಗುವುದಿಲ್ಲ, ಬೇರೆ ಜಾತಿಯ ಮತದಾರರನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಸ್ಪಷ್ಟ ಪಡಿಸಿದೆ.  ಅಲ್ಲದೆ  ಶಾಸಕ ಸಿ.ಬಿ.ಸುರೇಶ್ ಬಾಬು ಇಟ್ಟ ನಿರೀಕ್ಷೆ ಹುಸಿಯಾಗಿರುವುದು, ಮಾಜಿ ಶಾಸಕರಿಬ್ಬರು ಒಂದೇ ಪಕ್ಷದಡಿಗೆ ಬಂದಿರುವುದಕ್ಕೆ ಅಸಮಧಾನ ತೋರ್ಪಡಿಸಿರುವುದು, ಕಾಂಗ್ರೆಸ್ ಪಕ್ಷದ ಬಲವರ್ಧನೆಗೊಂಡಿರುವುದು, ಮತದಾರರ ಎಲ್ಲಾ ಚುನಾವಣೆಗಳಲ್ಲೂ ಒಂದೇ ರೀತಿ ಆಲೋಚಿಸಿದೆ ತನ್ನ ಪ್ರಜ್ಞಾವಂತಿಕೆಯನ್ನು ಮೆರೆದಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.
 ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದೀಚೆಗಿನ ಚುನಾವಣೆಗಳನ್ನು ಹೋಲಿಕೆ ಮಾಡಿದರೆ ಇರುವ ಇಬ್ಬರಲ್ಲಿ ಯಾರು ಹಿತವರು ಎಂಬಂತೆ ಆಯ್ಕೆ ಮಾಡುತ್ತಿದ್ದರು, ಮತ್ತು ಇಲ್ಲಿ ಆಯ್ಕೆಯಾಗುತ್ತಿದ್ದು ಒಮ್ಮೆ ಕುರುಬರು ಗೆದ್ದರೆ ಮತ್ತೊಮ್ಮೆ ಲಿಂಗಾಯಿತರು ಗೆಲ್ಲುತ್ತಿದ್ದರು,  ಇವರಿಬ್ಬರನ್ನು ಬಿಟ್ಟರೆ ಬೇರೆಯವರಿಗೆ ಈ ಕ್ಷೇತ್ರದಲ್ಲಿ ಅವಕಾಶವೇ ಇಲ್ಲ, ಮಿಕ್ಕ ಜಾತಿಗಳಿರುವುದು ಕೇವಲ ಮತ ಹಾಕಲಿಕ್ಕೆ ಹೊರತು ಆಯ್ಕೆ ಯಾಗುವುದಕ್ಕಲ್ಲವೇನೋ ಎಂಬಂತೆ ತೋರುತ್ತಿದ್ದು ಆದರೆ 2013ರ ವಿಧಾನ ಸಭಾ ಚುನಾವಣೆಯ ನಂತರ ಆ ಕಾಲ ಬದಲಾಗಿದೆ, ಈ ವಾದವನ್ನು 2014ರ ಲೋಕಸಭಾ ಚುನಾವಣೆ ಇನ್ನಷ್ಟು ಬಲಪಡಿಸಿದೆ. ಇಲ್ಲಿನ ನಾಯಕರು ತಮಗೆ ನಿರ್ಣಯಕ ಮತಗಳೆಂದರೆ, ಅಹಿಂದ ವರ್ಗವೂ ಸೇರಿದಂತೆ ಒಕ್ಕಲಿಗ ಮತದಾರರಿಗೂ ಮನ್ನಣೆ ನೀಡಬೇಕೆಂಬ ಆದೇಶವನ್ನು ನೀಡಿದೆ.  
 ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷಕ್ಕೆ  ನಿರೀಕ್ಷೆಗಿಂತ ಹೆಚ್ಚಿನ ಮುನ್ನಡೆ ಪಡೆದಿರುವುದು ಕಾಂಗ್ರೆಸಿಗರಲ್ಲಿ ಅದರಲ್ಲೂ ಯುವ ಕಾರ್ಯಕರ್ತರಲ್ಲಿ ಭಾರಿ ಉತ್ಸಹವನ್ನು ಮೂಡಿಸಿದ್ದರೆ, ಬಿ.ಜೆ.ಪಿ.ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ, ಇಲ್ಲಿನ ಬಿ.ಜೆ.ಪಿ. ಲೋಕಸಭಾ ಚುನಾವಣೆಗೂ ಮುನ್ನ  ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುತ್ತಿದ್ದರು ಆದರೆ ಕೆ.ಜೆ.ಪಿ. ಬಿ.ಜೆ.ಪಿ. ರಾಜ್ಯದಲ್ಲಿ ವಿಲೀನಗೊಂಡ ಬಳಿಕ ಇಲ್ಲಿಯೂ ವಿಲೀನಗೊಂಡವು,  ಕೆ.ಜೆ.ಪಿ.ಯಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ,  ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು. ಸೇರ್ಪಡೆ ಕಾರ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಾದ್ದರಿಂದ ಸಂಧಾನ ಕಾರ್ಯ ಸ್ಪಷ್ಟವಾಗಿ ನಡೆಯದೆ ಇದ್ದುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು, ಕಾರಣ ಹುಳಿಯಾರು, ಬುಕ್ಕಾಪಟ್ಟಣ ಭಾಗದಲ್ಲಿ ಕೆ.ಎಸ್.ಕೆ. ಪರವಾದ ಬೆಂಬಲಿಗರಿಗೂ, ಉಳಿದ ಭಾಗದಲ್ಲಿನ ಜೆ.ಸಿ.ಎಂ. ಅಭಿಮಾನಿಗಳಿಗೂ ತೆರದ ಹೃದಯದ ಹೊಂದಾಣಿಕೆ ಯಾಗದೆ,  ತೆರೆಯ ಮರೆಯ ಗೊಂದಲಗಳು ಹಾಗಿಯೇ ಉಳಿದುಕೊಂಡವು,  ಲೋಕಸಭಾ ಚುನಾವಣೆಯ ನಂತರ ಆ ಗೊಂದಲ ಇನ್ನಷ್ಟು ಜಾಸ್ತಿಯಾಯಿತು ಎನ್ನುತ್ತಾರೆ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತ ಧನಂಜಯ. 
  ಮತದಾರನೂ ಈ ಇಬ್ಬರ ಹೊಂದಾಣಕೆಿಯನ್ನು ನೇರವಾಗಿ ಒಪ್ಪಿಕೊಂಡಿಲ್ಲವೆಂಬುದನ್ನು ಈ ಚುನಾವಣೆಯಲ್ಲಿ ಅಲ್ಲಲ್ಲಿ ಕಂಡು ಬಂದಿತು. ಈ ಅಭಿಪ್ರಾಯ ಹೌದೇನೆ ಎಂಬಂತೆ ಫಲಿತಾಂಶವೂ ಬಂದಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಉಳಿದ ಅಬ್ಯಾಥರ್ಿಗಳಿಗಿಂತ 11.999 ಮತಗಳಷ್ಟು ಹೆಚ್ಚಿಗೆ ನೀಡುವ ಮೂಲಕ ಇದನ್ನು ಪುಷ್ಟಿಗೊಳಿಸಿದ್ದಾರೆ. 
ಈ ಚುನಾವಣೆಯಲ್ಲಿ ಬಿ.ಜೆ.ಪಿ. ಅಬ್ಯಾಥರ್ಿ ಜಿ.ಎಸ್.ಬಸವರಾಜು ಪಡೆದಿರುವ ಮತಗಳು 45.863 ಮತಗಳು ಮಾತ್ರ, ಈ ಅಂಕಿಯನ್ನು ನೋಡಿದರೆ ಜೆ.ಸಿ.ಎಂ. ಮತ್ತು ಕೆ.ಎಸ್.ಕೆ. ಹೊಂದಾಣಿಕೆ ಅಷ್ಟೇನು ಜಿ.ಎಸ್.ಬಿ. ಪರವಾಗಿ ಕೆಲಸ ಮಾಡಿಲ್ಲವೆನಿಸುತ್ತದೆ, ಕಾರಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಸಿ.ಎಂ. 49.620 ಮತಗಳನ್ನು ಪಡೆದಿದ್ದರು, ಕೆ.ಎಸ್.ಕಿರಣ್ಕುಮಾರ್ 29.150 ಮತಗಳನ್ನು ಪಡೆದಿದ್ದರು ಇವರಿಬ್ಬರ ಮತಗಳು ಸೇರಿಸಿದರೆ 78.770 ಮತಗಳಾಗುತ್ತವೆ ಆದರೆ ಇದರಲ್ಲಿ ಶೇ.60 ರಷ್ಟು  ಮತಗಳು ಜಿ.ಎಸ್.ಬಿ. ಬೀಳದಿರುವುದು ಇವರಿಬ್ಬರ ಹೊಂದಾಣಿಕೆ  ಮತದಾರರಿಗೂ  ಸಮಾಧಾನ ತಂದಿಲ್ಲವೆಂಬುದನ್ನು  ಸ್ಪಷ್ಟ ಪಡಿಸುತ್ತದೆ.
ಇನ್ನೂ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೆತ್ರ ವಾಲುತ್ತಿದೆ ಎಂಬುದಕ್ಕೆ ಈ ಫಲಿತಾಂಶ ಒಂದು ಒಳನೋಟವನ್ನು ಕೊಡುತ್ತದೆ. ಅಲ್ಲದೆ ಚುನಾವಣೆಯಲ್ಲಿ ವಿಜಿಯಿಯಾಗಿರುವ ಮುದ್ದುಹನುಮೇಗೌಡರು ಹಲವು ಸಲ ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ಈ ಕ್ಷೇತ್ರವನ್ನು ನಾನು ದತ್ತು ಪಡೆಯುತ್ತೇನೆ, ಈ ಕ್ಷೇತ್ರಕ್ಕೆ ಆಗಬೇಕಾಗಿರುವ ಜನೋಪಯೋಗಿ ಕೆಲಸಗಳಿಗೆ ಒತ್ತುಕೊಟ್ಟಂತೆ  ಸಕರ್ಾರದ ಮಟ್ಟದಲ್ಲಿ ಕೆಲಸ ಮಾಡಿ ಹೆಚ್ಚಿನ ಅಭಿವೃದ್ದಿ ಕೆಲಸಕ್ಕೆ ಅನುದಾನ ತರುತ್ತೇನೆ.  ನನ್ನೆಲ್ಲಾ ಕಾರ್ಯಗಳಿಗೆ ಹೆಗಲಿಗೆ ಹೆಗಲು ಕೊಟ್ಟಿರುವ ಕಾಂಗ್ರೆಸ್ನ ಯುವ ಮುಂದಾಳು ಎಸ್.ಎನ್.ಸತೀಶ್ ಈ ಕ್ಷೇತ್ರದ ಅಭಿವೃದ್ದಿಗೆ ದುಡಿಯಲು ತೋರಿಸುತ್ತಿರುವ ಉತ್ಸಾಹ ಈ ಕ್ಷೇತ್ರವನ್ನು ಹೆಚ್ಚು ಹೆಚ್ಚು ಅಭಿವೃದ್ದಿ ಪಡಿಸಲು ಸ್ಫೂತರ್ಿ ನೀಡಿದೆ ಎನ್ನುವ ಮಾತಗಳನ್ನಾಡಿದ್ದಾರೆ.  ಈ ಎಲ್ಲವನ್ನು ಅವಲೋಕಿಸಿದಾಗ ಇಲ್ಲಿನ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಗೊಳುವ ವಿಶ್ವಾಸ ಮೂಡುತ್ತಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಗುಂಪುಗಾರಿಕೆ ಮಾಡದೆ ಒಟ್ಟಾಗಿ ಕೆಲಸ ಮಾಡಿದರೆ ಮುಂದೆ ಭವಿಷ್ಯವಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಅತಿ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿರುವ ಈ ತಾಲೂಕಿಗೆ ಸಕರ್ಾರದಿಂದ ಹೆಚ್ಚಿನ ಅನುದಾನ ತಂದು, ಇಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸುವ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ಕುಡಿಯಲು ಶುದ್ದ ನೀರು ಕೊಡುವ ಕಾರ್ಯಗಳು ಸೇರಿದಂತೆ ಕ್ಷೇತ್ರದ  ಅಭಿವೃದ್ದಿಗೆ ಎಲ್ಲರೂ  ಒಂದಾಗಿ ಕೆಲಸ ಮಾಡಿದರೆ ಕ್ಷೇತ್ರಕ್ಕೂ ಒಳ್ಳೆಯದು ಜನರು ಮತ ಹಾಕಿದ್ದಕ್ಕೂ ಸಾರ್ಥಕವೆನಿಸುತ್ತದೆ ಆದರೆ ಆಗಾಗುತ್ತದೆಯೇ . . . ?!

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು  ವಿಜಯೋತ್ಸವ

ಚಿಕ್ಕನಾಯಕನಹಳ್ಳಿ,: ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲೂ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು,  ಈ ಫಲಿತಾಂಶವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ನೆಹರು ಸರ್ಕಲ್ನಲ್ಲಿ ಎಂ.ಪಿ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಮುದ್ದುಹನುಮೇಗೌಡರು ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡರಿಗೆ ಕ್ಷೇತ್ರದಲ್ಲಿ 11999 ಹೆಚ್ಚು ಮತ ಪಡೆದಿರುವುದು ನೋಡಿದರೆ ಮುಂದಿನ ಬಾರಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ, ಮುದ್ದಹನುಮೇವಗೌಡರೇ ನಮಗೆ ಶಾಸಕರು,  ಅವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಬಲಪಡಿಸಲು ಎಲ್ಲರೂ ಒಂದಾಗಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. 
ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಮಾತನಾಡಿ ಮುದ್ದಹನುಮೇಗೌಡರ ಪರವಾಗಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ರಾಜ್ಯದ ನಾಯಕತ್ವ ಹಾಗೂ ರಾಜ್ಯ ಸಕರ್ಾರ ಹಮ್ಮಿಕೊಂಡಿರುವ ಅಭಿವೃದ್ದಿ ಯೋಜನಾ ಕಾಯಕ್ರಮಗಳಿಗೆ ತಾಲ್ಲೂಕಿನ ಹಾಗೂ ಜಿಲ್ಲಯ ಜನತೆ ಕಾಂಗ್ರೆಸ್ನ್ನು ಬೆಂಬಲಿಸಿದ್ದಾರೆ ಎಂದರು. 
ಕಾಂಗ್ರೆಸ್ ಮುಖಂಡರಾದ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಜನತೆ ಅತಿ ಹೆಚ್ಚು ಮತ ನೀಡಿ  ಕಾಂಗ್ರೆಸ್ ಅಭ್ಯಥರ್ಿ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಹೊಸಹಳ್ಳಿ ಅಶೋಕ್, ಸಿ.ಎಂ.ಬೀರಲಿಂಗಯ್ಯ, ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ರಾಜಣ್ಣ, ತೀರ್ಥಪುರದ ವಾಸು, ವಕೀಲ ಪರಮೇಶ್ವರ್, ಸಜ್ಜಾದ್, ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತಿದ್ದರು.

Wednesday, April 23, 2014

ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಏ.23 : ತಾಲ್ಲೂಕಿನ ಕಂದಿಕೆರೆಯ ಶ್ರೀ ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಆರಂಭಗೊಂಡಿದ್ದು ಬುಧವಾರ ದೇವಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾಯ್ದರು.
ಬುಧವಾರ ರೇಣುಕಾಯಲ್ಲಮ್ಮದೇವಿಯವರ ಮಂಗಳಸ್ನಾನದೊಂದಿಗೆ ಗಂಗಾಪೂಜೆ ನೆರವೇರಿತು. ಈ ಜಾತ್ರೆಗೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದು, ಭಕ್ತರ ಹಷರ್ೋದ್ಘಾರದಿಂದ ದೇವಿಯ ಸ್ತುತಿ ಮಾಡುತ್ತಿದ್ದರು. 
24ರಂದು ಸಂಜೆ 6.30ಕ್ಕೆ ಸಿಡಿಮದ್ದಿನ ಸೇವೆಯೊಂದಿಗೆ ರೇಣುಕಯಲ್ಲಮ್ಮದೇವಿ, ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯಸ್ವಾಮಿವರ ಪ್ರಸನ್ನೋತ್ಸವ ನಡೆಯಲಿದೆ. 25ರಂದು ಶ್ರೀ ರೇಣುಕಯಲ್ಲಮ್ಮದೇವಿಯ ರಥೋತ್ಸವ ಮಧ್ಯಾಹ್ನ 3.30ಕ್ಕೆ ಭಕ್ತಾಧಿಗಳಿಂದ ಪ್ರಸಾದ ವಿನಿಯೋಗ ಮತ್ತು ಮಜ್ಜಿಗೆ ವಿತರಣೆ, 4.30ಕ್ಕೆ ಪಾತಪ್ಪಸ್ವಾಮಿಯವರಿಂದ ಗಾವಿನ ಸೇವೆ ಹಾಗೂ ರಾತ್ರಿ 8.30ಕ್ಕೆ ಶ್ರೀ ರಾಮ ಕಲಾಸಂಘದವರಿಂದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಲಿದೆ. 26ರಂದು ಸಂಜೆ 6ರಿಂದ 8ರವರೆಗೆ ಆರತಿಬಾನ, 6.30ಕ್ಕೆ ಶನೇಶ್ವರಸ್ವಾಮಿ ಉತ್ಸವ, ರಾತ್ರಿ 9ಕ್ಕೆ ಸಿಡಿಸೇವೆ ನಡೆಯಲಿದೆ.  27ರ ಭಾನುವಾರ ರಾತ್ರಿ 7ಕ್ಕೆ ಗುಗ್ಗರಿ ಮಾರಮ್ಮನವರ ಉತ್ಸವ, ರಾತ್ರಿ 8.30ಕ್ಕೆ ಕಂದಿಕೆರೆ ಗೆಳೆಯರ ಬಳಗದವರಿಂದ ಶ್ರೀ ರೇಣುಕಾಯಲ್ಲಮ್ಮದೇವಿಯವರ ಉಯ್ಯಾಲೋತ್ಸವ ಹಮ್ಮಿಕೊಳ್ಳಲಾಗಿದೆ.
28ರ ಬೆಳಗ್ಗೆ ರೇಣುಕಾಯಲ್ಲಮ್ಮದೇವಿಯವರೊಂದಿಗೆ ಶ್ರೀ ರಂಗನಾಥಸ್ವಾಮಿ, ಸಾದರಹಳ್ಳಿ ಶ್ರೀ ಆಂಜನೇಯಸ್ವಾಮಿ, ಸಂಗೇನಹಳ್ಳಿ, ಶ್ರೀ ಬಯಲಪ್ಪಸ್ವಾಮಿ, ಆಂಜನೇಯಸ್ವಾಮಿ ಮತ್ತು ಶ್ರೀ ಮೈಲಾರಲಿಂಗಸ್ವಾಮಿಯವರುಗಳ ಉತ್ಸವ ಹಾಗೂ ಮಧ್ಯಾಹ್ನ 3.30ಕ್ಕೆ ಕರಿಯಮ್ಮದೇವಿಯವರೊಂದಿಗೆ ಶ್ರೀ ಪಾತಪ್ಪಸ್ವಾಮಿಯವರ ಬಂಡಾರಸೇವಾ ಉತ್ಸವ ನಡೆಯಲಿದ್ದು 28ರ ಸೋಮವಾರ ಮಧ್ಯಾಹ್ನ 3.30ಕ್ಕೆ ಧ್ವಜಾವರೋಹಣ ರಾತ್ರಿ 8.30ಕ್ಕೆ ಜೋಗಿನ ಊಟ ಹಾಗೂ ಹಾಲು ಒಕ್ಕೂಟದವರಿಂದ ಮಜ್ಜಿಗೆ ವಿತರಣೆ ನಡೆಯಲಿದೆ.

ಖಾಸಗಿ ಬಸ್ಗಳ ಸಂಚಾರ ರದ್ದು: ಕೆ.ಎಸ್.ಆರ್.ಟಿ.ಸಿ.ಬಸ್ಗಳ ಕೊರತೆ, ಪ್ರಯಾಣಿಕರ ಪರದಾಟ.
ಚಿಕ್ಕನಾಯಕನಹಳ್ಳಿ,ಏ.23  : ಬಸ್ಗಾಗಿ ಕಾದೂ ಕಾದೂ ಸಾಕಾಗೋಯ್ತು, ಬಸ್ ಬಂದರೂ ಕಾಲಿಡಲು ಸ್ಥಳವಿಲ್ಲದಂತೆ ತುಂಬಿ ತುಳುಕುತ್ತಿರುತ್ತದೆಯಾದರೂ ಅದೇ ಬಸ್ನೊಳಗೆ ನುಗ್ಗಿ ಅವರಿವರನ್ನು ಗೊಣಗಿಕೊಂಡು ನಿಂತರೆ ನಮ್ಮೂರಿಗೆ ತೆರಳುವುದರೊಳಗೆ ಸಾಕಪ್ಪ ಬಸ್ನ ಸಹವಾಸ ಎನ್ನುವಷ್ಟು ಸಾಕಾಗಿ ಹೋಗುತ್ತದೆ ಎಂಬುದು ತುಮಕೂರಿನಿಂದ ಚಿಕ್ಕನಾಯಕನಹಳ್ಳಿ, ಹುಳಿಯಾರು, ಹೊಸದುರ್ಗ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ದಿನನಿತ್ಯದ ಸಮಸ್ಯೆಯಿದು.
ಪ್ರತಿನಿತ್ಯ ಸಾವಿರಾರು ಜನರು ಚಿಕ್ಕನಾಯಕನಹಳ್ಳಿ, ಹುಳಿಯಾರು ಹಾಗೂ ಹೊಸದುರ್ಗ ಮಾರ್ಗವಾಗಿ ತುಮಕೂರು ಹಾಗೂ ಬೆಂಗಳೂರಿಗೆ ಸಂಚರಿಸುವವರು ಈ ಮಾರ್ಗದಲ್ಲಿನ ಬಸ್ಗಳ ಸಮಸ್ಯೆಯ ವ್ಯವಸ್ಥೆ ಕಂಡು ಮಮ್ಮಲ ಮರುಗುತ್ತಿದ್ದಾರೆ.
ಬೆಂಗಳೂರಿನಿಂದ ಹೊಸದುರ್ಗ ಮಾರ್ಗವಾಗಿ ಹೆಚ್ಚಿನ ಖಾಸಗಿ ಬಸ್ಗಳು ಓಡಾಡುತ್ತಿದ್ದವು ಆದರೆ ಜಿಲ್ಲಾಡಳಿತದ ಬಿಗಿ ಕ್ರಮದಿಂದಾಗಿ ಖಾಸಗಿ ಬಸ್ಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ, ತುಮಕೂರಿನಿಂದ ಹೊಸದುರ್ಗ ಮಾರ್ಗವಾಗಿ ಸಂಚರಿಸಬೇಕಾದರೆ ಕೆ.ಎಸ್.ಆರ್.ಟಿ.ಸಿ ಬಸ್ಗಳನ್ನೇ ಪ್ರಯಾಣಿಕರು ಅವಲಂಬಿಸಬೇಕಾಗಿದ್ದು ತುಮಕೂರಿನಿಂದ ಈ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ಗಳು ಅಧಿಕವಾಗಿ ಇಲ್ಲದಿರುವುದರಿಂದ  ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಂತೆ ತುಂಬಿ ತುಳುಕುತ್ತಿರುತ್ತವೆ.
ಬೆಳಗಿನ ಸಮಯದಲ್ಲೂ ತಾಲ್ಲೂಕಿನ ಹಲವು ಗ್ರಾಮಗಳಿಂದ  ವಿದ್ಯಾಥರ್ಿಗಳು ತುಮಕೂರಿಗೆ ಸಂಚರಿಸಲು ಪರಿತಪಿಸುತ್ತಾರೆ, ಪರೀಕ್ಷೆ ಸಮಯದಲ್ಲಂತೂ ವಿದ್ಯಾಥರ್ಿಗಳ ಪರಿಸ್ಥಿತಿ ಹೇಳತೀರದು, ವ್ಯಾಪಾರಸ್ಥರು, ರೈತರ ಲಗೇಜುಗಳನ್ನು ಬಸ್ನಲ್ಲಿ ಹಾಕಲಾಗದೇ ಬೆಂಗಳೂರಿಗೆ ಪ್ರಯಾಣಿಸಲು ಮೇಲ್ಚಾವಣಿ(ಟಾಪ್ ಕ್ಯಾರಿಯರ್) ಖಾಲಿಯಾಗಿರುವ ಬಸ್ಗಳು ಬರುವವರೆಗೆ ಕಾಯುತ್ತಾರೆ, ಹಬ್ಬ-ಹರಿದಿನ, ಸಕರ್ಾರಿ ರಜೆ ಇನ್ನಿತರ ಜಾತ್ರಾ ಮಹೋತ್ಸವದಲ್ಲಂತೂ ಬಸ್ಗಳಿಗಾಗಿ ಪರಿತಪಿಸುವ ತಾಲ್ಲೂಕಿನ ಜನತೆ ಹಿಡಿಶಾಪ ಹಾಕುತ್ತಾರೆ. 
ಇನ್ನೂ ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರು, ಹಂದನಕೆರೆ, ತಿಮ್ಮನಹಳ್ಳಿ, ಕಾತ್ರಿಕೆಹಾಳ್ ಹಾಗೂ ಮುದ್ದೇನಹಳ್ಳಿ ಭಾಗಗಳಿಗೆ ಸಂಚರಿಸಲು ಬಸ್ಗಳ ಸಮಸ್ಯೆಯಿದೆ, ಈ ಭಾಗದಿಂದ ಬರುವ ವಿದ್ಯಾಥರ್ಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರಿಗೆ ಬಸ್ಗಳ ಚಿಂತೆಯಾಗಿದ್ದು ಈ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಹಲವಾರು ದಿನಗಳಿಂದ ಪ್ರತಿಭಟನೆ, ಮನವಿ ಅಪರ್ಿಸುತ್ತಲೇ ಇದ್ದಾರೆ. ಪ್ರಯೋಜನ ಮಾತ್ರ ಶೂನ್ಯ.

Tuesday, April 22, 2014

                                                                                                raveeshpiksp@gmail.com        
raveeshpiksp@gmail.com 


    ಏಪ್ರಿಲ್  ೨೪  ಅಣ್ಣಾವ್ರ  ಜನ್ಮ  ದಿನ ,   ಅವರು  ಚಿರಾಯುವಾಗಲಿ
ಡಾ . ರಾಜ್ ಕುಮಾರ್ - ಭಾರತ ದೇಶದಲ್ಲಿಯೇ ಚಲನ ಚಿತ್ರ ನಟನೆಗೆ ಡಾಕ್ಟರೇಟ್ ಪದವಿ ಪಡೆದವರಲ್ಲಿ ( ಮೈಸೂರು ವಿಶ್ವವಿದ್ಯಾನಿಲಯದಿಂದ ) ಮೊದಲಿಗರು   . ಡಾ . ರಾಜ್ ಕುಮಾರ್ - ಅಮೇರಿಕಾ ದೇಶದಿಂದ ಕೊಡಲ್ಪಡುವ ಉನ್ನತ ಪ್ರಶಸ್ತಿ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ರಷ್ಯಾ ಮತ್ತು ಬ್ರಿಟನ್ ಪ್ರಧಾನಮಂತ್ರಿಗಳಿಗೆ ಹೊರತಪಡಿಸಿ ನಟನೆಗೆ ಪಡೆದವರಲ್ಲಿ ಜಗತ್ತಿನಲ್ಲೇ ಇವರೊಬ್ಬರು   . ಡಾ . ರಾಜ ಕುಮಾರ್ - ದೇಶದಲ್ಲಿ ಒಂದೇ ಭಾಷೆಯಲ್ಲಿ ಸುಮಾರು   ೫೦ ವರ್ಷಗಳ ಕಾಲ ನಟನೆ ಮಾಡಿದ ಅದ್ಬುತವಾದ ವ್ಯಕ್ತಿತ್ವ  . ಡಾ . ರಾಜ್ ಕುಮಾರ್ - ಬದುಕಿದ್ದಾಗಲೇ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಏಕೈಕ ಕಲಾವಿದ    . ಡಾ . ರಾಜ ಕುಮಾರ್ - ರಾಜ್ಯದಲ್ಲಿ ಸುಮಾರು ೫೦೦೦ ಅಭಿಮಾನಿ ಸಂಘ ಹೊಂದೊದ್ದ ಅದ್ಬತವಾದ ನಾಯಕ ನಟ  . ಡಾ . ರಾಜ್ ಕುಮಾರ್ - ನಟನೆ ಮತ್ತು ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ದೇಶದಲ್ಲಿಯೇ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್ - ಪ್ರಥಮ ಚಿತ್ರದಲ್ಲಿಯೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್   - ಕನ್ನಡ ಚಿತ್ರ ರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ತಾರೆ  . ಡಾ . ರಾಜ ಕುಮಾರ್ - ಹತ್ತಕ್ಕೂ ಹೆಚ್ಚು ಬಿರುದಾವಳಿಯನ್ನು ಪಡೆದಿರಿವ ಭಾರತ ದೇಶದ ಏಕೈಕ ನಟ ( ರಸಿಕರರಾಜ , ಗಾನಗಂಧರ್ವ , ಕನ್ನಡ ಕಣ್ಮಣಿ , ವರಪುತ್ರ , ವರನಟ , ಪದ್ಮಭೂಷಣ , ನಟಸಾರ್ವಬೌಮ , ಕೆಂಟುಕಿ ಕರ್ನಲ್ , ಡಾಕ್ಟರೇಟ್ ಮುಂತಾದವುಗಳು ) ೧೦ . ಡಾ . ರಾಜ ಕುಮಾರ್ - ಕನ್ನಡದಲ್ಲಿ ಪದ್ಮಭೂಷಣ ಪ್ರಶ್ತಿ ಪಡೆದ ಕನ್ನಡ ತಾಯಿಯ ಹೆಮ್ಮೆಯ ಪುತ್ರ  ೧೧ . ಡಾ . ರಾಜಕುಮಾರ್ - ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ರಾಜ್ಯ ಪ್ರಶಸ್ತಿ , ೧೦ ಫಿಲ್ಮ ಫೇರ್ ಅವಾರ್ಡ , ಹಾಡುಗಾರಿಕೆಗೆ ಪ್ರಶಸ್ತಿ ಪಡೆದ ಏಕೈಕ ನಟ  ೧೨ . ಒಂದೇ ವರ್ಷದಲ್ಲಿ ೧೪ ಚಲನಚಿತ್ರಗಳಿಗೆ ನಾಯಕ ನಟನಾದ ಏಕೈಕ ನಟ  ೧೩ . ಡಾ . ರಾಜ್ - ಆಂದ್ರದಿಂದ ನೀಡುವ NTR award ಪಡೆದ ಇತರೆ ಭಾಷೆಯ ಪ್ರಥಮ ನಟ  ೧೪ . ಡಾ . ರಾಜಕುಮಾರ್ - ಕನ್ನಡ ಚಲನಚಿತ್ರರಂಗದ ಹಿತಿಹಾಸದಲ್ಲಿ ಸುದೀರ್ಘವಾಗಿ ಓಡಿದ ಬಂಗಾರದಮನುಷ್ಯ ಚಿತ್ರದ ನಾಯಕ ನಟ  ೧೫ . ಡಾ . ರಾಜಕುಮಾರ್ - ಇವರ ಚಿತ್ರಗಳ ಸಕ್ಸಸ್ ರೇಟ್ ೯೫ , ಇದು ದೇಶದಲ್ಲಿಯೇ ಪ್ರಥಮ  ೧೬ . ಅಭಿಮಾನಿಗಲಿಂದ ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಸಿಕೊಳ್ಳುವ ಏಕೈಕ ನಟರು 


raveeshpiksp@gmail.com 

ತುಮಕೂರು ಜಿಲ್ಲೆಯ ಒಂದು ಶಾಪಗ್ರಸ್ತ ತಾಲ್ಲೂಕು ಕೇಂದ್ರ ಎಂದರೆ ಅದು ಚಿಕ್ಕನಾಯಕನ ಹಳ್ಳಿ ಎಂದು ಹೇಳಿದರೂ ಅದು ಅತಿಶಯೋಕ್ತಿಯೇನಲ್ಲ, ಕಾರಣ ನನ್ನ ಊರು ಹೆಸರಿಗೆ ತಾಲ್ಲೂಕು ಕೇಂದ್ರವಾದರೂ ಯಾವುದೇ ಸವಲತ್ತು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕು ಕೇಂದ್ರ. ಬೀದರ್ -ಶ್ರೀರಂಗಪಟ್ಟಣ ರಾಹೆ ಹಾದುಹೋಗಿದ್ದರೂ, ಯಾವುದೇ ರೀತಿಯಲ್ಲಿಯೂ ಏಳಿಗೆಯನ್ನು ಕಾಣಲಾರದ ಪರಿಸ್ಥಿತಿಯಲ್ಲಿ ಇದೆ ನನ್ನ ಊರು, ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳಂತೂ ಮರಿಚಿಕೆಯೇ ಸರಿ, ಚಿ ನಾ ಹಳ್ಳಿಯಲ್ಲಿ ಹಳೆಯ ಬಸ್ ನಿಲ್ದಾಣದಿಂದ ನೆಹರೂ ವೃತ್ತದ ವರೆಗೆ ಇರುವ ನಾಲ್ಕು ವ್ಯಾಪಾರ ನಡೆಸುವ ಮಂದಿಯಿಂದ ಊರು ಕಾಣುತ್ತದೆಯೇ ಹೋರತು ಮತ್ತೇನನ್ನು ಕಾಣದ ಅಸಹಜ ವ್ಯವಸ್ಸೆಗೆ ಊರು ಮೂಕ ಸಾಕ್ಷಿಯಾಗಿದೆ, ಚಿಕ್ಕನಾಯಕನ ಹಳ್ಳಿಯ ಇಂದಿನ ಪರಿಸ್ಥಿತಿಯ ಬಗ್ಗೆ ಕೆಳಗಿನಂತೆ ಕೆಲವು ನ್ಯೂನ್ಯತೆಗಳನ್ನು ನೋಡಬಹುದು . ಕೆ ಎಸ್ ಆರ್ ಟಿ ಸಿ ನಿಲ್38;ಾಣವಿದೆ ಆದರೆ ಬಸ್ಸುಗಳು ಅಲ್ಲಿ ಹೋಗಲ್ಲ . ಸರ್ಕಾರಿ ಆಸ್ಪತ್ರೆ ಇದೆ ಚಿಕಿತ್ಸೆಗೆ ಜನರು ಹೋಗಲ್ಲ, ಕಾರಣ ವೈದ್ಯರಿಲ್ಲ . ಕ್ರೀಡಾಂಗಣವಿದೆ ಆದರೆ ಅಲ್ಲಿ ಆಟ ಆಡಲು ಬಿಡಲ್ಲ .ವಾಯುವಿಹಾರಕ್ಕೆ ಉದ್ಯಾನವನವೇ ಇಲ್ಲ . ತಾಲ್ಲೂಕು ಕೇಂದ್ರವಾದರೂ ಯು ಜಿ ಡಿ ವ್ಯವಸ್ಥೆ ಇಲ್ಲ, ಈಗಲೂ ಊರಿನಲ್ಲಿ ಕೆಲವು ಅನಿಷ್ಠ ಪದ್ದತಿಗಳ ಮುಂದುವರಿಕೆ . ಕೊಳಾಯಿಗಳಿವೆ ೧೫ ದಿನಕ್ಕೋಮ್ಮೆಯೂ ನೀರು ಬರೊಲ್ಲ . ರಸ್ತೆಗಳಿವೆ ಆದರೆ ಡಾಮರಿಕರಣ ಕಂಡಿಲ್ಲ . ಪೋಲೀಸ್ ಠಾಣೆ ಇದೆ, ಆದರೆ ಪ್ರಕರಣ ದಾಖಲಿಸಲ್ಲ . ಪುರಸಭೆ ಇದೆ ಆದರೆ ಒತ್ತುವರಿ ತಗೆಸೊಲ್ಲ ೧೦. ಸರ್ಕಾರಿ ಕಾಲೇಜು ಇದೆ, ಆದರೆ ಬೋದಕರು ಮತ್ತು ವಿದ್ಯಾರ್ಥಿಗಳೇ ಇಲ್ಲ ೧೧. ಉತ್ತಮ ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಆದರೆ ಅಭಿವೃದ್ದಿ ಇಲ್ಲ ೧೨. ಓದುವ ಮಕ್ಕಳಿದ್ದಾರೆ ಆದರೆ ಐಟಿಐ, ಟಿಸಿಎಚ್, ಬಿಎಡ್ ಗಳಿಲ್ಲ ೧೩. ಅತ್ಯಂತ ಹೆಚ್ಚು ಕೊಬರಿ ಬೆಳೆಯುವ ನಾಡು ಆದರೆ ಮಾರುಕಟ್ಟೆ ಇಲ್ಲ (ನಮ್ಮ ರಾಜಕಾರಣಿಗಲ ಔದಾರ್ಯದಿಂದ ;ುಳಿಯಾರಿಗೆ ವರ್ಗಾವಣೆಯಾಯಿತು) ೧೪.ಶಿಕ್ಷಣದ ಬಗ್ಗೆ ಅಹವಾಲು ಸ್ವೀಕರಿಸಲು ಅಧಿಕಾರಿಗಳಿಲ್ಲ (ನಮ್ಮ ರಾಜಕಾರಣಿಗಳ ಔದಾರ್ಯದಿಂದ ಮಧುಗಿರಿಗೆ ಸ್ಥಳಾಂತರವಾಯಿತು) ೧೫.ಖಾಸಗೀ ಬಸ್ ನಿಲ್ದಾಣದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ. ೧೬. ಜನರು ಕೂಲಿಗಾಗಿ ಬೆಂಗಳೂರು, ತುಮಕೂರು ಕಡೆ ಹೋಗುತ್ತಾರೆ ಆದರೆ ಊರಿಗೆ ಒಂದು ಉದ್ಯಮ ತರುವ ತಾಕತ್ತು ನಮ್ಮಲಿಲ್ಲ ೧೭. ಕೆ ಎಸ್ ಆರ್ ಟಿ ಸಿ ಡಿಪೋವನ್ನು ಚಿಕ್ಕನಾಯಕನ ಹಳ್ಳಿಗೆ ನೀಡಿದರೂ ನಮ್ಮ ರಾಜಕಾರಣಿಗಳ ಔದಾರ್ಯದಿಂದ ಅದು ಹಿಂದೆ ತುರುವೇಕೆರೆಗೂ, ತಿಪಟೂರಿಗೂ, ಈಗ ಹುಳಿಯಾರಿಗೂ ಸ್ಥಳಾಂತರವಾಗಿದೆ( ಇದು ಮಾಹಿತಿ) ಹೀಗೆ ಪಟ್ಟಿ ಮಾಡುತಾತಾ ಹೋದಲ್ಲಿ ಅದು ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಹೋಗುತ್ತವೆ, ನಮ್ಮ ಜನಪ್ರತಿನಿಧಿಗಳಿಗೆ ರೀತಿಯ ಅವ್ಯವಸ್ಥೆ ಕಣ್ಣಿಗೆ ರಾಚುವ ರೀತಿಯಲ್ಲಿ ಇದ್ದರೂ ತಾವು ಮೌನದಿಂದ ಕೇವಲ ನಗುಮುಖದಿಂದ ಮಾತನಾಡಿಸುವುದೇ ಊರಿನ ಅಭಿವೃದ್ದಿ ಎಂದುಕೊಂಡಿರುವುದು, ;ಮ್ಮ ಪಿರಪಿತ್ೃಗಳಿಗೆ ಇಲ್ಲದ ಇಚ್ಚಾಶಕ್ತಿ, ಇಷ್ಟಾದರೂ ನಮಗೇಕೆ ಬೇಕು ಎನ್ನು ನನ್ನೂರಿನ ಸತ್ ಪ್ರಜೆಗಳು, ಅಬ್ಬಾ ಚಿಕ್ಕನಾಯಕನಹಳ್ಳಿ ನಿನಗೆ ಜೈ, ಜೈ, ಜೈ