Tuesday, February 16, 2016

ಶಾಸಕ ಸಿ.ಬಿ.ಸುರೇಶ್ಬಾಬುರವರ 46ನೇ ವರ್ಷದ ಹುಟ್ಟುಹಬ್ಬ ಆಚರಣೆ





ಚಿಕ್ಕನಾಯಕನಹಳ್ಳಿ : ವೈದ್ಯರ ನಡೆ ಹಳ್ಳಿಯ ಕಡೆಗೆ ಎಂಬ ಘೋಷಣೆಯನ್ನು ಸಮಾಜಕ್ಕೆ ನೀಡಿ ಐಕ್ಯರಾಗಿರುವ ಬಾಲಗಂಗಾಧರನಾಥಸ್ವಾಮಿಜಿಗಳ ಆಶಯದಂತೆ ನಮ್ಮ ಆಸ್ಪತ್ರೆ ನಡೆದುಕೊಳ್ಳುತ್ತಿದೆ ಎಂದು ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧೀಕ್ಷಕ ಡಾ.ಮನೋಹರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಹುಟ್ಟಹಬ್ಬದ ಅಂಗವಾಗಿ, ಕಿದ್ವಾಯಿ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ರೇಡಿಯೆಂಟ್ ಕ್ಯಾನ್ಸರ್ ಆಸ್ಪತ್ರೆ, ಕಾಲಭೈರವೇಶ್ವರ ಆಯುವರ್ೇದಿಕ್ ಆಸ್ಪತ್ರೆ ಹಾಗೂ ಸಿ.ಬಿ.ಸುರೇಶ್ಬಾಬು ವೆಲ್ಫೆರ್ ಟ್ರಸ್ಟ್ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
8ವರ್ಷಗಳಿಂದ ಸಿ.ಬಿ.ಸುರೇಶ್ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಚಿಕಿತ್ಸೆ ಹಾಗೂ ವೈದ್ಯಕೀಯ ಶಿಬಿರ ನಡೆಸುತ್ತಿದ್ದು ಈ ಶಿಬಿರದಲ್ಲಿ 75ಜನ ವೈದ್ಯರ ತಂಡ ಹಾಗೂ 40ಕ್ಕೂ ಹೆಚ್ಚು ಸೇವಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಇಲ್ಲಿ ಪರೀಕ್ಷೆಗೆ ಒಳಪಟ್ಟು ರೋಗದ ಲಕ್ಷಣಕಂಡವರಿಗೆ  ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿರುವುದೂ ಇದೆ, ಅದೇರೀತಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿದ್ದೇವೆ ಎಂದರು.
 ಶಿಬಿರದಲ್ಲಿ ಹೃದ್ರೋಗ ತಜ್ಞರು, ನರರೋಗ, ಮೂತ್ರಪಿಂಡ, ಮಧುಮೇಹ, ಇಎನ್ಟಿ,  ಮಕ್ಕಳ, ಕಣ್ಣಿನ, ಚರ್ಮರೋಗ ತಜ್ಞರು ಭಾಗವಹಿಸಿದ್ದಾರೆ ಎಂದರು, ಈ ಶಿಬಿರದಲ್ಲಿ ಸ್ಕ್ಯಾನಿಂಗ್, ಇ.ಸಿ.ಜಿ, ರಕ್ತಮೂತ್ರ ಪರೀಕ್ಷೆ ನೀಡಲಾಗುತ್ತಿದೆ ಹಾಗೂ ಉಚಿತವಾಗಿ ಔಷಧಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಧಮರ್ೇಂದ್ರ, ಮೈಸೂರಿನ ವಿಕ್ರಮ್ ಆಸ್ಪತ್ರೆಯ ರಮೇಶ್ಕುಮಾರ್, ಶಿವಕುಮಾರ್ ಮತ್ತಿತರರರು ಉಪಸ್ಥಿತರಿದ್ದರು.
ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ :  ಶಾಸಕ ಸಿ.ಬಿ.ಸುರೇಶ್ಬಾಬು  ಪಟ್ಟಣದ  ಸಕರ್ಾರಿ ಎನ್.ಬಿ. ಶಾಲೆ ವಿದ್ಯಾಥರ್ಿಗಳು ಹಾಗೂ  ಅಂಗನವಾಡಿ  ಮಕ್ಕಳ ಜೊತೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು, ನಂತರ ಮಕ್ಕಳಿಗೆ  ಸಮವಸ್ತ್ರ ವಿತರಿಸಿದರು. 
ಮಾಜಿ ಜಿ.ಪಂ.ಸದಸ್ಯ ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯ ರಾಜಶೇಖರ್, ಹೆಚ್.ಬಿ.ಪಪ್ರಕಾಶ್, ರವಿಚಂದ್ರ, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಸಿ.ಎಲ್.ದೊಡ್ಡಯ್ಯ, ಮುಖಂಡ ಪುಟ್ಟಣ್ಣ, ಚೇತನಗಂಗಾಧರ್, ಸಿ.ಎಂ.ರಮೇಶ್,  ನಿವೃತ್ತ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ಶೆಟ್ಟಿ, ಬಿಇಓ ಕೃಷ್ಣಮೂತರ್ಿ, ತಹಶೀಲ್ದಾರ್ ಗಂಗೇಶ್, ಎಸಿಡಿಪಿಒ ಪರಮೇಶ್ವರಪ್ಪ, ಮುಖಂಡ ಸಿ.ಎಸ್.ನಟರಾಜು, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ದೊರೆಮುದ್ದಯ್ಯ, ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಆಗಮಿಸಿ ಶಾಸಕರಿಗೆ ಪುಷ್ಪಗುಚ್ಚವನ್ನು  ನೀಡುವ ಮೂಲಕ ಹುಟ್ಟುಹಬ್ಬದ ಶುಭಾಷಯ ಕೋರಿದರು.
ಮಡಿಲು ತುಂಬವ ಕಾರ್ಯಕ್ರಮ ಟೀಕಿಸುವವರಿಗೆ ಟಾಂಗ್:  ಗಭರ್ಿಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದ ಆಶಯವನ್ನು  ತಿಳಿಯದ ಕೆಲವು ಮೂಡರು ಬೇರೆ ಅರ್ಥದಲ್ಲಿ ಅಥ್ರ್ಯಸುತ್ತಿದ್ದಾರೆ, ಮಡಿಲು ತುಂಬವ ಕಾರ್ಯಕ್ರಮ ಅಣ್ಣತಂಗಿಯರ ವಾತ್ಸಲ್ಯದ ಕಾರ್ಯಕ್ರಮ ಇದು ಸಕರ್ಾರಿ ಕಾರ್ಯಕ್ರಮವೂ ಆಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ  ಸಕರ್ಾರಿ ಫ್ರೌಢಶಾಲಾ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ 46ನೇ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಮಾತನಾಡಿ, ಕೇಂದ್ರ ಸಕರ್ಾರ ಗಣಿ ಪರಿಹಾರವಾಗಿ 10ಸಾವಿರ ಕೋಟಿ ರೂಗಳನ್ನು ಗಣಿಬಾಧಿತ ಪ್ರದೇಶಗಳಿಗೆ ತೆಗೆದಿಟ್ಟಿದೆ, ಹಣ ಬಿಡುಗಡೆಯಾದ ನಂತರ ಕೆ.ಬಿ.ಕ್ರಾಸ್ನಲ್ಲಿ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಶ್ರಮಿಸುವುದಾಗಿ ತಿಳಿಸಿದರು,  ಮನುಷ್ಯನಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯ, ಹಣವಿದ್ದಾಗ ಆರೋಗ್ಯವಿಲ್ಲದಿದ್ದರೆ ಏನೂ ಪ್ರಯೋಜನವಿಲ್ಲ ಎಂದರು.
ಈಗ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಸಕರ್ಾರಿ ಸೌಲಭ್ಯ ವಿತರಿಸಲಾಗುತ್ತಿಲ್ಲ, ನೀತಿ ಸಂಹಿತೆ ಮುಗಿದ ತಕ್ಷಣ ಸಕರ್ಾರ ನೀಡುವ ಸವಲತ್ತುಗಳನ್ನು ವಿತರಿಸಲಾಗುವುದು ಎಂದರಲ್ಲದೆ,  ಬಡವ, ಬಲ್ಲಿದ ಪಕ್ಷ ಬೇದ ಮರೆತು ಎಲ್ಲರಿಗೂ ಸಹಾಯ ಮಾಡುವುದಾಗಿ ತಿಳಿಸಿದರು,  ಸಕರ್ಾರ ಬಿಪಿಎಲ್ ಕಾಡರ್್ ಹೊಂದಿರುವ ಫಲಾನುಭವಿಗಳಿಗೆ 1.5ಲಕ್ಷದವರಗೆ ಶಸ್ತ್ರಚಿಕಿತ್ಸೆಗೆ ನೀಡಿದಂತೆ ಅನೇಕ ಸಲವತ್ತುಗಳನ್ನು ನೀಡುತ್ತಿದ್ದು ಇದನ್ನು ಉಪಯೋಗಿಸಿಕೊಂಡು ಆರೋಗ್ಯವಾಗಿರುವಂತೆ ಸಲಹೆ ನೀಡಿದರು.
ಈ ಸಮಯದಲ್ಲಿ ಡೆವರಿಗೆ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದಿಂದ ಉಚಿತ ಸ್ಮಾಟರ್್ ಕಾಡರ್್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸಂಶೋಧನ ಕೇಂದ್ರದ ಡಾ.ಮಂಜುನಾಥ್, ಡಾ.ಮನೋಹರ್, ಜೆಡಿಎಸ್ ಮುಖಂಡರುಗಳಾದ ಬೇವಿನಹಳ್ಳಿಚನ್ನಬಸವಯ್ಯ, ಬಿ.ಎನ್.ಶಿವಪ್ರಕಾಶ್, ಪ್ರೇಮದೇವರಾಜು, ರೇಣುಕಮ್ಮ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಸಿ.ಎಸ್.ನಟರಾಜು, ಕಲ್ಲೇಶ್, ಸಿ.ಎಸ್.ರಮೇಶ್, ಮಲ್ಲೇಶ್ಟಿಂಬರ್, ಮಹಮದ್ಖಲಂದರ್, ಸಿ.ಡಿ.ಚಂದ್ರಶೇಖರ್, ಸಿ.ಪಿ.ಚಂದ್ರಶೇಖರಶೆಟ್ಟಿ, ಇಂದಿರಾಪ್ರಕಾಶ್, ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Saturday, February 13, 2016


ತಾಲ್ಲೂಕಿನಲ್ಲಿ ಸಣ್ಣಪುಟ್ಟ ಗಲಾಟೆಗಳು, ಶಾಂತಿಯುತ ಮತದಾನ 
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಲವೆಡೆ ಬೆಳಗ್ಗೆ ಮಂದಗತಿಯಲ್ಲಿ ಮತದಾನ ನಡೆಯಿತು, 3ಗಂಟೆಯ ನಂತರ ಮತದಾನ ಚುರುಕುಗೊಂಡ 5ಗಂಟೆ ವೇಳೆಗೆ ಜನರು ಮತಕೇಂದ್ರಗಳತ್ತ ಧಾವಿಸಿದರು, ಕುಪ್ಪೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ 5ಗಂಟೆಯಾದರೂ 50ಕ್ಕೂ ಹೆಚ್ಚು ಜನರು ಸಾಲು ಕಂಡುಬಂದಿತು, ಮೂರನಾಲ್ಕು ಕಡೆ ಸಣ್ಣಪುಟ್ಟ ಗಲಾಟೆಗಳು ಬಿಟ್ಟು ಉಳಿದಡೆ ಶಾಂತಯುತ ಮತದಾನ ನಡೆದಿದೆ.
ಸಂಜೆ ಆರು ಗಂಟೆಯಾದರೂ ಇಪ್ಪತ್ತು ಕೇಂದ್ರಗಳಿಗೂ ಹೆಚ್ಚು ಕಡೆ ಮತದಾರರ ಸಂಖ್ಯೆ ಹೆಚ್ಚಿದ್ದರಿಂದ ಅವರಿಗೆ ಟೋಕನ್ ನೀಡಿದ್ದರು. ಆದ್ದರಿಂದ ಆರು ಮೂವತ್ತರವರೆಗೂ ನಿಧರ್ಿಷ್ಠವಾಗಿ ಶೇಕಡ ಮತದಾನ ನಿಖರವಾಗಿ ತಿಳಿಯಲಿಲ್ಲ, ಅಂದಾಜು ಶೇ.ಎಪ್ಪತ್ತರಿಂದ ಎಪ್ಪತೈದು ಆಗಬಹುದೆಂದು ಚುನಾವಣಾ ಶಾಖೆ ತಿಳಿಸಿದೆ. 
ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆಗಳು: ತಾಲ್ಲೂಕಿನ ಕಂದಿಕೆರೆಹೋಬಳಿಯ ಮತಗಟ್ಟೆ 3ರಲ್ಲಿ ನಕಲಿ ಮತದಾನ ನಡೆಯುತ್ತಿದೆ ಎಂದು ಜೆ.ಡಿ.ಎಸ್. ಮತ್ತು ಬಿ.ಜೆ.ಪಿ ಪಕ್ಷಗಳ ನಡುವೆ ಘರ್ಷಣೆಯಿಂದಾಗಿ ಮತದಾನ ಕೆಲ ಕಾಲ ಸ್ಥಗಿತಗೊಂಡ ಘಟನೆ ನಡೆಯಿತು. ಕೂಡಲೇ ವಿಷಯ ತಿಳಿದ ಚಿಕ್ಕನಾಯಕನಹಳ್ಳಿ ವೃತ್ತದ ಸಿ.ಪಿ.ಐ. ಎ.ಮಾರಪ್ಪ, ಮೀಸಲು ಪಡೆಯೊಂದಿಗೆ ಕಂದಿಕೆರೆ ಗ್ರಾಮದ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಗುಂಪುಗಳನ್ನು  ಚದುರಿಸಿ ಮತದಾನ ಕಾರ್ಯ ನಡೆಸುವಂತೆ ಮನವೊಲಿಸಿಲಾಯಿತು.
ಹುಳಿಯಾರಿನ ಕೆಂಕೆರೆ 42 ಮತಗಟ್ಟೆ ಕೇಂದ್ರದ ಬಳಿ ಹಾಗೂ ಆಲದಕಟ್ಟೆ ಮತಕೇಂದ್ರದ ಬಳಿ  ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದವರ ಮೇಲೆ ಶಾಂತಿ ಕಾಪಾಡಲು ಲಘು ಲಾಟಿ ಪ್ರಹಾರ ಮಾಡುವ ಮೂಲಕ ಪರಸ್ಥಿತಿಯನ್ನು ಹತೋಟಿಗೆ ತರಲಾಯಿತು. ಹುಳಿಯಾರಿನ ಮತಗಟ್ಟೆ 10ರಲ್ಲಿ ಬಲಗೈಯಿನ ಹೆಬ್ಬಟಿಗೆ ಶಾಹಿ ಹಾಕುವ ಬದಲು ತೊರು ಬೆರಳಿಗೆ ಹಾಕುತ್ತಿದ್ದನ್ನೂ ಕಂಡು ವಿಷಯ ಬಹಿರಂಗಗೊಂಡ ಕೂಡಲೇ ಅಧಿಕಾರಿಗಳು ಸೂಕ್ತ ಮಾರ್ಗದರ್ಶನದಿಂದ ಬಲಗೈ ಹೆಬ್ಬೆರಿಳಿಗೆ ಶಾಹಿ ಹಾಕಲು ಮುಂದಾದರು.  
ಬಿ.ಜೆ.ಪಿ.ಯ ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ ಕೆ.ಎಸ್. ಕಿರಣ್ಕುಮಾರ್ ಕಾಂಗ್ರೆಸ್ ಮಾಜಿ ಶಾಸಕ ಬಿ.ಲಕ್ಕಪ್ಪ ಮುಖಂಡರುಗಳಾದ ಸಾಸಲು ಸತೀಶ್,  ಸೀಮೆಎಣ್ಣೆಕೃಷ್ಣಯ್ಯ ತಾಲ್ಲೂಕಿನ ಅನೇಕ ಮತಕಟ್ಟೆಗಳಿಗೆ ಬಿರುಸಿನ ಭೇಟಿ ನೀಡಿದರೆ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಅಭ್ಯಥರ್ಿಗಳ ಕಾರ್ಯಕರ್ತರು ಜನರನ್ನು ಕರೆತರುವ ಮೂಲಕ ಮತ ಚಲಾವಣೆ ಮಾಡಿಸುತ್ತಿದ್ದರು.
ಆರಂಭದಲ್ಲಿ ಅಲ್ಲಲ್ಲಿ ಕೆಂಪುಪಟ್ಟಿ ಹೊಳಗೆ ಚುನಾವಣಾ ಪ್ರಚಾರ ಮಾಡುವ ಕಾರ್ಯಕರ್ತರೊಂದಿಗೆ ಸಣ್ಣಪುಟ್ಟ ಗೊಂದಲಗಳು ಸೃಷ್ಠಿಯಾದವು ಮತದಾನ ಕೇಂದ್ರಗಳಲ್ಲಿ ಜಿ.ಪಂ.ಮತಯಂತ್ರ ತಾ.ಪಂ.ಮತಯಂತ್ರಗಳ ಬಗ್ಗೆ ಅರಿವಿಲ್ಲದೆ. ಕೆಲವು ವ್ಯತ್ಯಯಗಳು ಸೃಷ್ಠಿಯಾಗಿದ್ದವು ಎಲ್ಲಾ ವಯಸ್ಸಿನ ಮತದಾರರ ಜೊತೆಗೆ ನೂತನವಾಗಿ ಮತದಾನದ ಹಕ್ಕು ಪಡೆದ ಮಾಜಿ ಶಾಸಕರ ಪುತ್ರಿ ಕುಟುಂಬದ ಜೊತೆಗೆ ಬಂದು ತನ್ನ ಹಕ್ಕು ಚಲಾಯಿಸಿ ಸಂಭ್ರಮಿಸಿದರು ಕೆಲವು ಕಡೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 12ಗಂಟೆ ಹೊತ್ತಿಗೆ ಶೇ. 30 ಮೀರಿತ್ತು, ಮದ್ಯಾಹ್ನ 3ಗಂಟೆ ಹೊತ್ತಿಗೆ ಶೇ.50ರಷ್ಟು ಮತದಾನ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. 
ಮತಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಡಾ||ಯತೀಶ್ವರಶಿವಾಚಾರ್ಯಸ್ವಾಮೀಜಿ ಮಾತನಾಡಿ ಮತದಾನ ಪವಿತ್ರವಾದದು ಜಿ.ಪಂ. ತಾ.ಪಂ ಗ್ರಾಮ ಪಂಚಾಯಿತಿ ಚುನಾವಣೆಗಳು ಮೂಲಕ ಜನಪ್ರತಿನಿಧಿಯ ಆಯ್ಕೆ ಗ್ರಾಮದ ಅಬಿವೃದ್ದಿಗೆ ಸಹಕಾರವಾದದ್ದು,   ಸೂಕ್ತ ವ್ಯಕ್ತಿಯ ಆಯ್ಕೆಯಾದರೆ ಗ್ರಾಮಾಭಿವೃದ್ದಿಗೆ ಪೂರಕವಾಗಿರುತ್ತದೆ. 
ಮಾಜಿ ಶಾಸಕ ಜೆ.ಸಿ ಮಾಧುಸ್ವಾಮಿ ಮಾತನಾಡಿ. ಮತ ಕೇಂದ್ರದ ವ್ಯಾಪ್ತಿಯಲ್ಲಿರುವುದರಿಂದ ರಾಜಕೀಯ ಮಾತನಾಡುವುದು ಅಪ್ರಸ್ತುತ ಎನ್ನುತ್ತಲ್ಲೆ,  ಈ ಚುನಾವಣೆಗಳಲ್ಲಿ ಬಿ.ಪಾರಂ ವಿಚಾರವಾಗಿ ಪಕ್ಷದಲ್ಲಿ ಚಚರ್ೆಗಳು ಆಗುವುದು ಸಾಮಾನ್ಯ ಆದರೆ ಅಭ್ಯಥರ್ಿ ಸೂಚಿಸಿದ ನಂತರ ಒಟ್ಟಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ,  ಈಗಾಗಿ ಪಕ್ಷದ ಚಿಹ್ನೆಯ ಮೇಲೆ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಆ ನಂಬಿಕೆಯ ಮೇಲೆ ನಮ್ಮ ಪಕ್ಷ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ಗೋಡೆಕೆರೆ ಮಠದ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ,  ಮತದಾನ ಚಲಾಯಿಸಿದ್ದು ಖುಷಿ ತಂದಿದೆ ಸಮಾಜ ಸೇವೆ ಮನೋಬಾವದ ಅಭ್ಯಥರ್ಿಯನ್ನು ಗೆಲ್ಲಿಸಿದರೆ ಮಾತ್ರ ದೇಶದ ಪ್ರಗತಿಗೆ ಆದ್ಯತೆ ಸಿಗುತ್ತದೆ, ಹಣಕ್ಕಾಗಿ ಚುನಾವಣೆಗಳು ನಡೆಯಬಾರದು ಪ್ರಮಾಣಿಕ ಅಭ್ಯಥರ್ಿಗಳಿಂದ ಮಾತ್ರ ಭ್ರಷ್ಠಾಚಾರ ನಿಮರ್ೂಲನೆ ಸಾಧ್ಯವಾಗುತ್ತದೆ ಎಂದರು.
 ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಹಾಗೂ 19 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
  ತಾಲ್ಲೂಕಿನಲ್ಲಿ ಒಟ್ಟು 40 ಸೂಕ್ಷ್ಮ ಹಾಗೂ 43 ಅತೀ ಸೂಕ್ಷ್ಮ ಮತಗಟೆಗಳಿದ್ದವು, 123 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಒಟ್ಟು 205 ಮತಗಟ್ಟೆಗಳಿಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯ ಮತದಾನ ಬೆಳಗ್ಗೆ 7 ರಿಂದಲೇ ಆರಂಭವಾಯಿತು.
ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ 19 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ  77373 ಮಹಿಳಾ ಮತದಾರರರು, 77955 ಪುರುಷ ಮತದಾರರನ್ನು ಹೊಂದಿದ್ದು ಒಟ್ಟು 155328 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ತಾಲೂಕಿನಲ್ಲಿ 205 ಮತಗಟ್ಟೆಗಳನು ತೆರೆಯಲಾಗಿತ್ತು.

Saturday, February 6, 2016


ಮತಗಟ್ಟೆ ಅಧಿಕಾರಿಗಳ ಕರ್ತವ್ಯ ಅತ್ಯಂತ ಜವಾಬ್ಧಾರಿಯುತ

ಚಿಕ್ಕನಾಯಕನಹಳ್ಳಿ : ಮತಗಟ್ಟೆ ಅಧಿಕಾರಿಗಳ ಕರ್ತವ್ಯ ಅತ್ಯಂತ ಜವಾಬ್ಧಾರಿಯುತವಾಗಿದ್ದು ಮತದಾರರ ಜತೆ ಅಧಿಕಾರಿಗಳು ಸೌಹಾರ್ದಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ತಹಶಿಲ್ದಾರ್ ಗಂಗೇಶ್ ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮುಖ್ಯ ಹಾಗೂ 1ನೇ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೆ ಒಟ್ಟಿಗೆ ಮತದಾನ ನಡೆಯುತ್ತಿರುವುರಿಂದ ಮತದಾನದ ವೇಳೆ ಗೊಂದಲ ಸೃಷ್ಠಿಯಾಗುವ ಸಂಭವವಿದೆ, ಆದ್ದರಿಂದ ಪೂರ್ವತಯಾರಿ ಚನ್ನಾಗಿ ಇರಲಿ ಹೇಳಿದರು.
   ಮಾಸ್ಟರ್ ಟ್ರೈನರ್ ಶಿವಪ್ರಸಾದ್ ಮಾತನಾಡಿ, ಮತದಾನದ ಸಂದರ್ಭದಲ್ಲಿ ಮುಖ್ಯ ಮತಗಟ್ಟೆ ಅಧಿಕಾರಿ ಸಂದರ್ಭಕ್ಕೆ ಅನುಗುಣವಾಗಿ ನಿಧರ್ಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಇದೆ, ಆದರೆ ಮತಗಟ್ಟೆಯನ್ನು ಬದಲಿಸುವ ಅಧಿಕಾರ ಇಲ್ಲ, ನಿಗಧಿಯಾಗಿರುವ ಕೊಠಡಿಯಲ್ಲೇ ಮತದಾನ ನಡೆಯಬೇಕು, ಮೂಲಭೂತ ಸವಲತ್ತುಗಳು ಇಲ್ಲದಿದ್ದರೂ ಕೊಠಡಿ ಬದಲಿಸುವ ಅಧಿಕಾರ ಪಿಆರ್ಓಗಳಿಗೆ ಇಲ್ಲ ಎಂದರು.
    ಅಳಿಸಲಾಗದ ನೀಲಿ ಶಾಯಿಯನ್ನು ಎಡಗೈ ತೋರುಬೆರಳಿಗೆ ಬದಲಾಗಿ ಬಲಗೈ ಹೆಬ್ಬೆರಳಿಗೆ ಹಾಕಬೇಕು, ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯಲ್ಲಿ ಸಂಭವಿಸಬಹುದಾದ ಗೊಂದಲವನ್ನು ತಪ್ಪಿಸಲು ಮೊದಲು ಜಿಲ್ಲೆ ನಂತರ ತಾಲ್ಲೂಕು ಪಂಚಾಯ್ತಿ ಮತದಾನಕ್ಕೆ ಅನುವು ಮಾಡಿಕೊಡಬೇಕು, ನಾಲ್ಕು ಮತ್ತು ಐದನೇ ಮತಗಟ್ಟೆ ಅಧಿಕಾರಿಗಳು ಮತಯಂತ್ರವನ್ನು ನಿರ್ವಹಿಸಬೇಕು ಎಂದರು.
   ಅಣಕು ಮತದಾನ ಕಡ್ಡಾಯವಾಗಿದು ಬೆಳಗ್ಗೆ 7 ಗಂಟೆ ಒಳಗೆ ಮುಗಿಸಿ ಮತಯಂತ್ರಗಳನ್ನು ಮತದಾನಕ್ಕೆ ಸಿದ್ಧಪಡಿಸಿಕೊಂಡಿರಬೇಕು, ಯಾವುದೇ ಕಾರಣಕ್ಕೂ ಬೆಳಗ್ಗೆ 7ರ ಒಳಗೆ ಮತದಾನ ಪ್ರಾರಂಭಿಸಬಾರದು ಎಂದರು.
  ಮಧ್ಯಾಹ್ನದ ನಂತರ ಮತಗಟ್ಟೆ ಅಧಿಕಾರಿಗಳಿಗೆ ನೀಡುವ ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯ ಪ್ರಾತ್ಯಕ್ಷಿಕೆ ತರಬೇತಿಯಲ್ಲಿ 20 ಮಾಸ್ಟರ್ ಟ್ರೈನೀಸ್ಗಳು ಇದ್ದರು, ಬಳಿಕ ಅಧಿಕಾರಿಗಳ ನಿಯೋಜನಾ ಪತ್ರ ನೀಡಲಾಯಿತು.
  205 ಮತಕಟ್ಟೆ: ತಾಲ್ಲೂಕಿನಲ್ಲಿ 205 ಮತಕಟ್ಟೆಗಳನ್ನು ಗುರುತಿಸಲಾಗಿದೆ, 5 ಜಿಪಂ ಕ್ಷೇತ್ರಗಳಿಗೆ ತಲಾ ಒಬ್ಬರು ಚುನಾವಣಾಧಿಕಾರಿ ಮತ್ತು ಉಪಚುನಾವಣಾಧಿಕಾರಿ ಹಾಗೂ 19 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ತಲಾ ಇಬ್ಬರು ಚುನಾವಣಾಧಿಕಾರಿ ಮತ್ತು ಉಪಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೆ ಹೋಬಳಿವಾರು 5 ವಲಯ ಅಧಿಕಾರಿಗಳು 20 ಮಾರ್ಗದ ಅಧಿಕಾರಿಗಳು ಹಾಗೂ 1230 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಹಶಿಲ್ದಾರ್ ಗಂಗೇಶ್ ಮಾಹಿತಿ ನೀಡಿದರು. 

Friday, February 5, 2016

ಸಾಹಿತಿ ಸಾ.ಶಿ.ಮರುಳಯ್ಯನವರು ನಿಧನ ತಾಲ್ಲೂಕಿಗೂ ತುಂಬಲಾರದ ನಷ್ಟ
ಚಿಕ್ಕನಾಯಕನಹಳ್ಳಿ: ಸಾಹಿತಿ ಸಾ.ಶಿ.ಮರುಳಯ್ಯನವರು ನಿಧನದಿಂದ ಒಬ್ಬ ಶ್ರೇಷ್ಟ ಕವಿ ಹಾಗೂ ಸಾಹಿತಿಯನ್ನು ಕಳೆದುಕೊಂಡಿರುವುದು ರಾಜ್ಯಕ್ಕೂ ಹಾಗೂ ತಾಲ್ಲೂಕಿಗೂ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಎಮ್.ವಿ.ನಾಗರಾಜ ರಾವ್ ವಿಷಾದಿಸಿದರು.
ಪಟ್ಟಣದ ನೆಹರು ವೃತ್ತದಲ್ಲಿ ನಡೆದ ಸಾಹಿತಿ ಸಾಶಿ. ಮರುಳಯ್ಯನವರ ಶ್ರದ್ದಾಂಜಲಿ ಸಭೆಯಲ್ಲಿ ಮಾತಾನಾಡಿ,  85 ವರ್ಷ ತುಂಬು ಜೀವನ ನಡೆಸಿದ ಡಾ|| ಸಾ.ಶಿ.ಮರುಳಯ್ಯನವರು  ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತರಿಸಲು ರಾಜ್ಯಾದ್ಯಾಂತ ಓಡಾಡಿದ ಮೇರು ಚೇತನವಾಗಿದ್ದರು. ಡಾ|| ಸಾ.ಶಿ.ಮರುಳಯ್ಯನವರು ಸಾಹಿತಿಯಾಗಿ ಕವಿಯಾಗಿ, ವಾಗ್ಮಿಯಾಗಿ, ಉತ್ತಮ ಆಡಳಿತಗಾರರಾಗಿ ಜನಪ್ರಿಯರಾಗಿದ್ದರು. ಕುಪ್ಪೂರು ಮಠದ ಬಗ್ಗೆ ಸಾ.ಶಿ.ಮರುಳಯ್ಯರವರು ಅವಿನಾಭಾವ ಸಂಬಂಧ ಹೊಂದಿದ್ದರು ಅವರ ನಿಧನದಿಂದ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಸಾ.ಶಿ.ಮರವರ ಆತ್ಮಕ್ಕೆ ಶಾಂತಿ ಕೋರಿದರು ಅವರ ಕುಟುಂಬ ದುಃಖ ಭರಿಸುವಂತಾಗಲಿ ಎಂದರು..
ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಸಾ.ಶಿ.ಮರುಳಯ್ಯನವರು ಇಡೀ ತಾಲ್ಲೂಕು ಹೆಮ್ಮೆ ಪಡುವಂತಹ ವ್ಯಕ್ತಿತ್ವ ಹೊಂದಿದ್ದರು ಅವರ ಸಾಧನೆಯಿಂದ ತಾಲ್ಲೂಕಿನ ಹೆಸರು ರಾಜ್ಯಾದ್ಯಂತ ಚಾಲ್ತಿಯಲ್ಲಿತ್ತು, ಸಾಶಿಮರವರು ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಅವರು ಭಾಗವಹಿಸಿದ ಸಮ್ಮೇಳನ, ಗೋಷ್ಠಿಗಳಲ್ಲಿ ಯುವ ಸಾಹಿತಿಗಳಿಗೆ ಸಂಚಲನ ಮೂಡುತ್ತಿತ್ತು ಹಾಗೂ ಅವರಿಗೆ ಸ್ಪೂತರ್ಿಯಾಗಿದ್ದರು ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಸಾ.ಶಿ.ಮ.ರವರ ಜನ್ಮದಿನದಂದು ಶೆಟ್ಟೀಕೆರೆಯಲ್ಲಿ ತಾ.ಕಸಾಪ ವತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ನೆನೆಸಿಕೊಂಡರು.
ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ಸಾ.ಶಿ.ಮರುಳಯ್ಯನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯ ಬೆಳೆಯಲು ಅವರ ಕೊಡುಗೆಯೂ ಇದೆ,  ಅಮೇರಿಕಾ ಹಾಗೂ ಶ್ರೀಲಂಕದಲ್ಲೂ ಕನ್ನಡವನ್ನು ವಿಸ್ತರಿಸುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗೂ ಪ್ರಪ್ರಥಮವಾಗಿ ಐ.ಎ.ಎಸ್.ನ್ನು ಕನ್ನಡ ಮಾಧ್ಯಮದಲ್ಲಿ ಬರೆಯುವವರಿಗೆ ತರಬೇತಿಯನ್ನು ನೀಡಿದ್ದರು, ಅದರ ಮೌಲ್ಯಮಾಪಕರಾಗಿಯೂ ಕೆಲಸ ಮಾಡಿದ್ದಾರೆ  ಮತ್ತು ಕೆ.ಎ.ಎಸ್ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವನ್ನು ಮಾಡಿದ್ದಾರೆ., ತಮ್ಮ ಹುಟ್ಟೂರಾದ ಸಾಸಲಿನಲ್ಲಿ  'ತವರೂರ ಬಾಗಿನ' ಎಂಬ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸಾ.ಶಿ.ಮರುಳಯ್ಯನವರು ಸಾವಿನಲ್ಲೂ ತಮ್ಮ ಮೇರು ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಜಿ.ಎಸ್.ಎಸ್ ವೈದ್ಯಕೀಯ ಮಹಾವಿಶ್ವ ವಿದ್ಯಾನಿಲಯಕ್ಕೆ ತಮ್ಮ ದೇಹವನ್ನು ದಾನ ಮಾಡಿದ್ದಾರೆ.ಕುಪ್ಪೂರು ಗದಿಗೆ ಮಠದ ಭಕ್ತಾರಾಗಿ ಸಾಸಲು ಗ್ರಾಮಕ್ಕೆ ಭೇಟಿ ನೀಡಿದಾಗ ಗದ್ದಿಗೆಗೆ ಬಂದು ತಪ್ಪದೇ ಹೋಗುತ್ತಿದ್ದರು, ತಾಲ್ಲೂಕು ಸಾಸಲುನಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷರಾಗಿ ಸಮರ್ಥವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ,  ಸದಸ್ಯ ಹೆಚ್.ಬಿ.ಪ್ರಕಾಶ್, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಸಂತಾಪ ಸೂಚಿಸಿದರು.
ಸಂತಾಪ ಸಭೆಯಲ್ಲಿ ಕುಂಚಾಕುಂಕರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್, ಪತ್ರಕರ್ತರುಗಳಾದ ವಿ.ಆರ್.ಮೇರುನಾಥ್, ಮಂಜುನಾಥ್ರಾಜ್ಅರಸ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸವಿತಾ ಸಮಾಜದ ಅಧ್ಯಕ್ಷ ಸುಪ್ರಿಂಸುಬ್ರಹ್ಮಣ್ಯ, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಕಸಾಪ ಹೆಚ್.ಬಿ.ಕುಮಾರ್, ಶ್ರೀನಿವಾಸಮೂತರ್ಿ, ಕೆ.ಜಿ.ಕೃಷ್ಣೆಗೌಡ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹುಟ್ಟೂರಿನ ವರದಿ:  ನಾಡಿನ ಹೆಮ್ಮೆಯ ಪುತ್ರ ಸಾ.ಶಿ.ಮರಳಯ್ಯ ನವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯ ಗ್ರಾಮಸ್ಥರು ನೀರವ ಮೌನಕ್ಕೆ ಶರಣಾಯಿತು, ಅಬಾಲ ವೃದ್ದರಾಗಿ ಎಲ್ಲರೂ ಸಾಶಿಮ ಹುಟ್ಟಿದ ಮನೆಯ ಬಳಿ ಬಂದು ಕಂಬನಿ ಮಿಡಿದರು, ದುಃಖ ಮುಡುಗಟ್ಟಿತ್ತು. ಹಿರಿಯ ಜೀವಗಳು ಅಲ್ಲಿನ ಜನರೊಂದಿಗೆ ತಮ್ಮ ಹಳೆಯ ನೆನಪಿನಂಗಣದ ನುಡಿಯನ್ನು ಹಂಚಿಕೊಳ್ಳುತ್ತಿದ್ದರು.
ಗ್ರಾಮದ ಸಕರ್ಾರಿ ಪ್ರೌಢಶಾಲೆ ಕಟ್ಟಿಸುವಲ್ಲಿ ಅವರ ತೆಗೆದುಕೊಂಡ ಕಾಳಜಿ ಹಾಗೂ ದಾನಿಗಳಿಂದ ಕಾಮಗಾರಿ ಕೊಡಿಸಿದ ಧನಸಹಾಯದ ನೆರವನ್ನು ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು ಸ್ಮರಿಸಿಕೊಂಡರೆ, ಶಾಲಾ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಮೌನ ಆಚರಿಸಿ ಶಾಲೆಗೆ ರಜೆ ಘೋಷಿಸಿದರು. ಸಾಶಿಮರವರ ಇಚ್ಚೆಯಂತೆ ಅವರ ಪಾಥರ್ಿವ ಶರೀರವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜ್ಗೆ ದಾನ ಮಾಡುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಹಲವರು ಪಾಥರ್ಿವ ಶರೀರರದ ಅಂತಿಮ ದರ್ಶನ ಪಡೆಯಲು ಬೆಂಗಳೂರಿನ ಕಡೆ ಹೊರಟರು.
ಗಣ್ಯರ ನುಡಿ ನಮನ: 
ಡಾ.ಸಾ.ಶಿ.ಮರುಳಯ್ಯನವರು ತಮ್ಮ ಅಪಾರ ಪಾಂಡಿತ್ಯದಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇಡೀ ರಾಷ್ಟ್ರದಲ್ಲಿ ಹೆಸರು ಮಾಡಿದ ವ್ಯಕ್ತಿತ್ವ ಅವರದ್ದು, ಅವರಿಂದಾಗಿ ನಮ್ಮ ತಾಲೂಕು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ, ಅವರು ದೈಹಿಕವಾಗಿ ಇಲ್ಲವೆಂಬದು  ಸಾಕಷ್ಟು ನೋವು ತಂದಿದೆ. ಅವರ ಹೆಸರು ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿದೆ ಅದೇ ರೀತಿ  ತಾಲೂಕಿನಲ್ಲೂ ಅವರ ನೆನಪು  ಶಾಶ್ವತವಾಗಿ ಉಳಿಯವಂತೆ ಮಾಡುವ ಕರ್ತವ್ಯ ನಮ್ಮದು.
ಸಿ.ಬಿ.ಸುರೇಶ್ಬಾಬು,  ಶಾಸಕರು. ಚಿಕ್ಕನಾಯಕನಹಳ್ಳಿ.

ಡಾ.ಸಾ.ಶಿ.ಮರುಳಯ್ಯನವರು ಸಾಹಿತ್ಯ, ಶಿಕ್ಷಣ ಹಾಗೂ ಗ್ರಾಮೀಣ ವಿದ್ಯಾಥರ್ಿಗಳಿಗೆ ರಾಷ್ಟ್ರ, ರಾಜ್ಯ ಮಟ್ಟದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವ ವಿದ್ವಾಂಸರಾಗಿದ್ದರು,  ಅವರ ಸಾವು ಈ ಎಲ್ಲಾ ಕ್ಷೇತ್ರಗಳಿಗೆ ಅಷ್ಟೇ ಅಲ್ಲ, ನಾಡಿಗೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ, ಕುಪ್ಪೂರು ಗದ್ದಿಗೆ ಮರಳಸಿದ್ದೇಶ್ವರ ಮಠದ ಶ್ರೀರಕ್ಷೆಯಲ್ಲಿ ಬೆಳೆದ ಅವರ ವ್ಯಕ್ತಿತ್ವ  ಮತ್ತು ಕೌಟಂಬಿಕ ಜೀವನದಿಂದಾಗಿ ಶ್ರೀಮಠದ ನಿಕಟ ಸಂಪರ್ಕದಲ್ಲಿದ್ದರು. ಅವರ ಸೇವೆ ನಾಡಿನ ಅನೇಕ ಮಠಗಳಿಗೂ ಸಂದಿದೆ. 
    ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ. ಕುಪ್ಪೂರು ಗದ್ದಿಗೆ ಶ್ರೀಮರಳುಸಿದ್ದೇಶ್ವರ ಮಠ. 
ಸಾ.ಶಿ. ಮರುಳಯ್ಯನವರ ನಿಧನದಿಂದ ಕನ್ನಡ ಸರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಘಿದೆ ರಾಜ್ಯದ  ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸಾಶಿಮ ಮಿತ ಭಾಷೆಯಾಗಿ ಆದರ್ಶವಾದ ವ್ಯಕ್ತಿತ್ವವನ್ನು ಹೊಂದಿದ್ದರು ಇಂದಿನ ಯುವ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು ಇನ್ನೂ ಹಲವಾರು ವರ್ಷಗಳ ಕಾಲ ನಮ್ಮ ಜೊತೆಯಲ್ಲಿದ್ದು ಸಾಹಿತ್ಯ ಕೃಷಿಯನ್ನು ಮಾಡಬೇಕಾಗಿತ್ತು.              

                           ತಮ್ಮಡಿಹಳ್ಳಿ ,ವಿರಕ್ತ ಮಠದ ಡಾ|| ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮೀಜಿ.
ಸಾಶಿಮರುಳಯ್ಯರವರು ಬಡತನದಿಂದ ಬಂದವರು ವಾರನ್ನ ಮಾಡಿಕೊಂಡು ವಿದ್ಯಾಬ್ಯಾಸ ಮಾಡಿದ್ದರು ಕುಪ್ಪೂರು ಗದ್ದಿಗೆ ಮಠ ತಿಪಟೂರು ಗುರುಕುಲ ಹಾಗೂ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು ರಾಜ್ಯ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಐಎ.ಎಸ್. ಹಾಗೂ ಕೆ.ಎ.ಎಸ್ ವಿದ್ಯಾಥರ್ಿಗಳಿಗೆ ಪಾಠ ಮಾಡಿದ್ದಾರೆ ಇವರ ಸಾಹಿತ್ಯ ಕೃಷಿ ಮಾಡಿ  ರಾಜ್ಯದಲ್ಲಿ ಉತ್ತಮ ಸಾಹಿತಿಗಳಾಗಿದ್ದಾರೆ. ಚಿ.ನಾಹಳ್ಳಿ ತಾಲ್ಲೂಖಿನ ತಿ.ನಂ.ಶ್ರೀ ಕಂಠಯ್ಯ ಬಿಟ್ಟರೇ. ಸಾಶಿಮರುಳಯ್ಯನವರು ತಾಲ್ಲೂಕಿಗೆ ಉತ್ತಮ ಹೆಸರು ತಂದುಕೊಟ್ಟವರು. 

                                         ಜೆ.ಸಿ ಮಾಧುಸ್ವಾಮಿ ಮಾಜಿ ಶಾಸಕರು, ಚಿಕ್ಕನಾಯಕನಹಳ್ಳಿ.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಡಾ.ಸಾ.ಶಿ.ಮರುಳಯ್ಯನವರು,  ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿದ್ದಾಗ ಪ್ರಥಮವಾಗಿ ಅವರ ಹುಟ್ಟೂರಿನ ಸಾಸಲು ಗ್ರಾಮದಲ್ಲಿ ಸಮ್ಮೇಳನ ನಡೆಸಲಾಗಿತ್ತು, ಸಾ.ಶಿ.ಮರುಳಯ್ಯನವರು ಊರಿನ ಸ್ನೇಹಿತರಾಗಿ, ಗ್ರಾಮದ ಆಸ್ತಿಯಾಗಿದ್ದರು, ಚಿಕ್ಕಮಗುವಿನಿಂದ ಹಿಡಿದು ದೊಡ್ಡವರಿಗೂ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲಾ ಜನಾಂಗದ ಮಕ್ಕಳನ್ನು ಎತ್ತಿ ಆಡಿಸುತ್ತಿದ್ದರು, ಹಳ್ಳಿಗೆ ಬಂದಾಗ ನಾಟಕ, ಮನೋರಂಜನೆ ಹಾಗೂ ಎಲ್ಲರ ಜೊತೆಯಲ್ಲಿ ಹರಟೆ ಹೊಡೆಯುತ್ತಿದ್ದರು ಸಾಸಲು ಗ್ರಾಮಕ್ಕೆ ಸಕರ್ಾರಿ ಪ್ರೌಡಶಾಲೆಯನ್ನು ತರಲು ಶ್ರಮಿಸಿದರು, ಗ್ರಾಮದ ಹಳೇ ಬನಶಂಕರಿ ದೇವಾಲಯವನ್ನು 3ಕೋಟಿ ವೆಚ್ಚದಲ್ಲಿ ಮರುನಿಮರ್ಾಣಕ್ಕೆ ತುಂಬ ಸಹಕಾರ ನೀಡಿದರು, ಇವರ ಅಗಲಿಕೆಯಿಂದ ತಾಲ್ಲೂಕು ಒಬ್ಬ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಂತಾಗಿದೆ.
                              ಆಡಿಟರ್ ಚಂದ್ರಶೇಖರ್, ಗ್ರಾಮಸ್ಥರು, ಸಾಸಲು. 



ರಾಜ್ಯದ ಹೆಸರಾಂತ ಸಾಹಿತಿ ಡಾ.ಸಾ.ಶಿ.ಮರುಳಯ್ಯನವರು
ಚಿಕ್ಕನಾಯಕನಹಳ್ಳಿ : ರಾಜ್ಯದ ಹೆಸರಾಂತ ಸಾಹಿತಿಯಾಗಿದ್ದ ತಾಲ್ಲೂಕಿನ ಸಾಸಲು ಗ್ರಾಮದ ಡಾ.ಸಾ.ಶಿ.ಮರುಳಯ್ಯನವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನ ಹೊಂದಿದ್ದಾರೆ.
ಸಾ.ಶಿ.ಮರುಳಯ್ಯನವರು ಸಾಸಲು ಗ್ರಾಮದಲ್ಲಿ 1931ರಲ್ಲಿ ತಂದೆ ಶಿವರುದ್ರಪ್ಪ, ತಾಯಿ ಸಿದ್ದಮ್ಮನವರ ಮಗನಾಗಿ ಜನಿಸಿದರು, ಸಾಸಲು ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಶೆಟ್ಟಿಕೆರೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ತಿಪಟೂರಿನಲ್ಲಿ ಪ್ರೌಡಶಿಕ್ಷಣ, ಚಿತ್ರದುರ್ಗದಲ್ಲಿ ಪಿ.ಯು.ಸಿ, ಮೈಸೂರು ಮಹರಾಜ ಕಾಲೇಜಿನಲ್ಲಿ ಬಿ.ಎ, ಹಾನರ್ಸ್, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ ಪದವಿ ನಂತರ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದು ನಂತರ ತುಮಕೂರು ದಾವಣಗೆರೆ, ಮಂಗಳೂರು, ಬೆಂಗಳೂರು ಸೇರಿದಂತೆ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ, 1995ರಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 1998ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಡಾ.ಸಾ.ಶಿ.ಮರುಳಯ್ಯನವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ದೇವರಾಜು ಬಹದ್ದೂರು ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ 2015ರಲ್ಲಿ ನಾಡಪ್ರಭು ಕೆಂಪೆಗೌಡ ಪ್ರಶಸ್ತಿಯನ್ನು ಪಡೆದಿದ್ದಾರೆ.
ಡಾ.ಸಾ.ಶಿ.ಮರುಳಯ್ಯನವರಿಗೆ ಎರಡು ಗಂಡು, ಒಬ್ಬ ಮಗಳಿದ್ದು, ಮೊದಲನೆ ಮಗ ಶಿವಪ್ರಸಾದ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಎರಡನೇ ಮಗ ರವಿ ಅಮೇರಿಕಾದ ಕ್ಯಾಲಿಪೋನರ್ಿಯಾದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಮಗಳು ರಾಗಿಣಿ ಅಮೇರಿಕಾದಲ್ಲಿ ಗಂಡನ ಮನೆಯಲ್ಲಿದ್ದಾರೆ.


Thursday, February 4, 2016


ಜಿಲ್ಲಾ ಪಂಚಾಯಿತಿಗೆ 23ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಫೆ.04 : ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಒಟ್ಟು 41 ಜನ ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದರು ಆದರೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಫೆ.4ರಂದು  18 ಅಭ್ಯಥರ್ಿಗಳು ನಾಮಪತ್ರ ವಾಪಸ್ಸು ಪಡೆದು 23 ಜನ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಕಣದಲ್ಲಿ ಉಳಿದಿರುವ ಅಭ್ಯಥರ್ಿಗಳು :
ಹುಳಿಯಾರು.ಜಿ.ಪಂ :  ಹೆಚ್.ಜಯಣ್ಣ ಬಿ.ಜೆ.ಪಿ,  ವೈ.ಸಿ ಸಿದ್ದರಾಮಯ್ಯ ಕಾಂಗ್ರೇಸ್, ಸೈಯದ್.ಎಜಾಸ್ ಪಾಷಾ ಜೆಡಿಎಸ್, ಪಕ್ಷೇತರಾಗಿ ಧನಂಜಯ.ಎನ್.ಜಿ,  ಶಿವಣ್ಣ.ಹೆಚ್ ಹುನುಮಂತಪ್ಪ. ಕಣದಲ್ಲಿದ್ದಾರೆ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರ. ಎಸ್,ಟಿ ಮಹಾಲಿಂಗಯ್ಯ ಬಿ.ಜೆ.ಪಿ, ವೀರಸಿಂಗನಾಯ್ಕ್ ಕಾಂಗ್ರೇಸ್, ಈರಯ್ಯ ಜೆ.ಡಿ.ಎಸ್, ಪಕ್ಷೇತರರಾಗಿ ಲಾ.ಪು.ಕರಿಯಪ್ಪ ಹಾಗೂ ರೇವನಾಯ್ಕ್, 
ಕಂದಿಕೆರೆ ಜಿ.ಪಂ ಕ್ಷೇತ್ರ :  ಪದ್ಮಮ್ಮ ಕಾಂಗ್ರೇಸ್, ಮಂಜುಳಾ ಬಿ.ಜೆ.ಪಿ, ಆರ್ ಸುನೀತಾ ಜೆ.ಡಿ.ಎಸ್, ಡಿ.ಶೈಲಜಾ. ಪಕ್ಷೇತರ.
ಹಂದನಕೆರೆ ಜಿ.ಪಂ ಕ್ಷೇತ್ರ : ಬರಗೂರು ಬಸವರಾಜು ಬಿ.ಜೆ.ಪಿ,  ಜಿ.ರಘುನಾಥ್ ಕಾಂಗ್ರೇಸ್, ಆರ್.ರಾಮಚಂದ್ರಯ್ಯ ಜೆ.ಡಿ.ಎಸ್, ಬಸವರಾಜು ಪಕ್ಷೇತರ.
ಶೆಟ್ಟಿಕೆರೆ ಜಿ.ಪಂ ಕ್ಷೇತ್ರ :  ಸಿ.ಬಸವರಾಜ್ ಕಾಂಗ್ರೇಸ್, ಎ.ಬಿ.ರಮೇಶ್ಕುಮಾರ್ ಬಿ.ಜೆ.ಪಿ, ಕಲ್ಲೇಶ್ ಜೆ.ಡಿ.ಎಸ್. ಪಕ್ಷೇತರ ಎ.ಬಿ.ಶರತ್ಕುಮಾರ್ ಕಣದಲ್ಲಿದ್ದಾರೆ.


ತಾಲ್ಲೂಕು ಪಂಚಾಯಿತಿಗೆ 78ಜನ ಅಭ್ಯಥರ್ಿಗಳು 
ಚಿಕ್ಕನಾಯಕನಹಳ್ಳಿ,ಫೆ.04 :  ತಾಲ್ಲೂಕು ಪಂಚಾಯಿತಿಯ 19 ಕ್ಷೇತ್ರಗಳಿಗೆ ಒಟ್ಟು 107 ಜನ ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದು 29 ಉಮೇದಾರರು ನಾಮಪತ್ರ ವಾಪಸ್ಸು ಪಡೆದು ಅಂತಿಮ ಕಣದಲ್ಲಿ 78 ಜನ ಆಭ್ಯಥರ್ಿಗಳು ಚುನಾವಣಾ ಕಣದಲ್ಲಿದ್ದಾರೆ.
ಹೊನ್ನೆಬಾಗಿ ತಾ.ಪಂ : ಶೈಲಾ ಶಶಿಧರ ಬಿ.ಜೆ.ಪಿ, ಸುಧಾ ಬ್ರಹ್ಮನಂದ ಕಾಂಗ್ರೇಸ್. ಅನ್ನಪೂರ್ಣ ಬುಳ್ಳೇನಹಳ್ಳಿ ಪ್ರಕಾಶ್ ಜೆ.ಡಿ.ಎಸ್. 
ಜೆ.ಸಿಪುರ ತಾ.ಪಂ :ವಿ.ಕೆ.ಗಂಗಾಮಣಿ ಕಾಂಗ್ರೇಸ್, ಎಸ್,ಪ್ರೇಮಾಕುಮಾರಿ ಬಿ.ಜೆ.ಪಿ, ಕೆ.ಹೊನ್ನಮ್ಮ ಶೇಷಯ್ಯ(ಪೂಜಾರ್) ಜೆ.ಡಿ.ಎಸ್.
ಶೆಟ್ಟಿಕೆರೆ ತಾ.ಪಂ : ಎಮ್.ಜಿ.ಮಂಜುಳ ಬಿ.ಜೆ.ಪಿ, ಹೆಚ್.ಬಿ.ಶಶಿಕಲಾ ದಯಾನಂದ ಕಾಂಗ್ರೇಸ್. ಜಯಮ್ಮ  ಈಶ್ವರಯ್ಯ ಜೆ.ಡಿ.ಎಸ್, 
ಕುಪ್ಪೂರು ತಾ.ಪಂ : ಕೆ.ಎಸ್.ಅಶೋಕ್ಕುಮಾರ್ ಬಿ.ಜೆ.ಪಿ, ಎ.ಪಿ.ಮುರುಳಿಧರ ಕಾಂಗ್ರೇಸ್. ಜಿ.ಚಂದ್ರಶೆಖರ್(ಸಚಿನ್) ಜೆ.ಡಿ.ಎಸ್,  ಕುಮಾರಸ್ವಾಮಿ ಪಕ್ಷೇತರ.
ಮತಿಘಟ್ಟ ತಾ.ಪಂ : ಪಾಲಾಕ್ಷಮ್ಮ ಕಾಂಗ್ರೇಸ್, ಸುವರ್ಣ ಪುಟ್ಟರಾಜು ಬಿ.ಜೆ.ಪಿ. ಗಂಗಮ್ಮ ಚಂದ್ರಯ್ಯ ಜೆ.ಡಿ.ಎಸ್. ಯಶೋಧಮ್ಮ ಪಕ್ಷೇತರ.
ಬರಗೂರು.ತಾ.ಪಂ : ಎಸ್.ಗೀತಾ ಬಿ.ಜೆ.ಪಿ,  ಎಸ್.ಯಶೋದ ಕಾಂಗ್ರೇಸ್, ಕೆ.ಆರ್.ಚೇತನಾಗಂಗಾಧರ್ ಜಿ.ಡಿ.ಎಸ್, 
ಹಂದನಕೆರೆ ತಾ.ಪಂ :  ಗಾಯಿತ್ರಿ ಚಂದ್ರಯ್ಯ ಕಾಂಗ್ರೇಸ್, ಪವಿತ್ರ ಲಿಂಗರಾಜು ಬಿ.ಜೆ.ಪಿ, ಎಸ್.ಎಲ್.ವಿ.ಚಂದ್ರಕಲಾ ಜೆ.ಡಿ.ಎಸ್. 
ದೊಡ್ಡೆಣ್ಣೆಗೆರೆ ತಾ.ಪಂ :  ಡಿ.ಬಿ.ಬಸವರಾಜು ಕಾಂಗ್ರೇಸ್. ಶ್ರೀಹರ್ಷ ಬಿ.ಜೆ.ಪಿ, ಬಿ.ತಮ್ಮಯ್ಯ ಜೆ,ಡಿ,ಎಸ್,  ಡಿ.ಎಸ್.ಪ್ರಶಾಂತ್ ಪಕ್ಷೇತರ.
ದಸೂಡಿ ತಾ.ಪಂ :  ಜಿ.ರಮೇಶ ಬಿ.ಜೆ.ಪಿ,  ವಿ.ರಂಗನಾಥ್ ಕಾಂಗ್ರೇಸ್. ಸಿ.ಪ್ರಸನ್ನಕುಮಾರ್ ಜೆ.ಡಿ.ಎಸ್, ಚಂದ್ರನಾಯ್ಕ್. ಟಿ.ಆರ್.ರುದ್ರೇಶ, ಸುಂದರಮೂತರ್ಿ. ಎಮ್.ಟಿ.ಸಣ್ಣಕರಿಯಪ್ಪ ಪಕ್ಷೇತರರು.
ಹುಳಿಯಾರು ತಾಪಂ : ಹೆಚ್.ಎನ್.ಕಿರಣ್ಕುಮಾರ್ ಕಾಂಗ್ರೇಸ್,  ಹೆಚ್. ಚಂದ್ರಶೇಖರರಾವ್ ಬಿ.ಜೆ.ಪಿ. ಹೆಚ್.ಎನ್.ಕುಮಾರ್ ಜೆ.ಡಿ.ಎಸ್. 
ಯಳನಡು ತಾ.ಪಂ :  ಕದರೇಗೌಡಯಾದವ್ ಕಾಂಗ್ರೇಸ್, ವಿಶ್ವೇಶ್ವರಯ್ಯ ಬಿ.ಜೆ.ಪಿ. ಯತೀಶಸೋಮಯ್ಯ ಜೆ.ಡಿ.ಎಸ್, ಚಂದ್ರಶೇಖರಯ್ಯ ಪಕ್ಷೇತರ. 
ತೀಮ್ಲಾಪುರ ತಾ.ಪಂ : ಕಮಲಬಾಯಿ ಬಿ.ಜೆ.ಪಿ, ಗೌರಿಬಾಯಿ ಕಾಂಗ್ರೇಸ್, ಕಲ್ಯಾಣಬಾಯಿ ಜೆ,ಡಿ.ಎಸ್. ರೇಣುಕಮ್ಮ ಪಕ್ಷೇತರ.
ಕೆಂಕೆರೆ ತಾ.ಪಂ : ಭಾಗ್ಯಮ್ಮ ಬಿ.ಜೆ.ಪಿ, ಕೆ.ಎನ್.ಮಂಜುಳ ಕಾಂಗ್ರೇಸ್. ಕೆ.ಆರ್. ಕವಿತಾ ಪಕ್ಷೇತರ.
ಗಾಣದಾಳು ತಾ.ಪಂ :  ಕೆ.ಆರ್.ಕಲಾವತಿ ಕಾಂಗ್ರೇಸ್, ಸಿದ್ದಗಂಗಾಬಾಯಿ ಬಿ.ಜೆ.ಪಿ, ಕೆ.ವಿ.ರಾಧಮ್ಮಜೆ.ಡಿ.ಎಸ್, ಕಮಲಬಾಯಿ, ನೀಲಾಬಾಯಿ, ಬಿ.ಎಸ್.ಲಕ್ಷ್ಮೀಬಾಯಿ ಪಕ್ಷೇತರರು.
ಹೊಯ್ಸಳಕಟ್ಟೆ ತಾ.ಪಂ : ಕೆ.ಮಧು ಬಿ.ಜೆ.ಪಿ, ಹೆಚ್ಆರ್.ರಂಗರಾಜು ಕಾಂಗ್ರೇಸ್. ಕೆ.ಎಮ್.ಮಂಜುನಾಥ್ ಜೆ.ಡಿ.ಎಸ್. ಲಾ.ಪು.ಕರಿಯಪ್ಪ, ಆರ್.ಕುಮಾರ್. ಹೆಚ್.ಎನ್.ದೇವರಾಜು(ಆಟೋ) ಪಕ್ಷೇತರರು.
ತಿಮ್ಮನಹಳ್ಳಿ ತಾ.ಪಂ :  ಇಂದ್ರಕುಮಾರಿ ಬಿ.ಜೆ.ಪಿ, ಕೆ.ಶಿವಮ್ಮ ಕಾಂಗ್ರೆಸ್, ಲೋಲಾಕ್ಷಮ್ಮ ಜೆ.ಡಿ.ಎಸ್. ಮೀನಾ ಪಕ್ಷೇತರ.
ತೀರ್ಥಪುರ.ತಾ.ಪಂ :  ಕೆ.ಸಿ.ಪರಮೇಶ್ ಕಾಂಗ್ರೇಸ್, ಎಸ್.ಆರ್.ರಾಜ್ಕುಮಾರ್ ಬಿ.ಜೆ.ಪಿ, ಗೋವಿಂದರಾಜು.ವಿ ಜೆ.ಡಿ.ಎಸ್, ಬಿ.ಮೂತರ್ಿ, ಹೆಚ್.ಆರ್.ಮೋಹನ್ಕುಮಾರ್. ಪಕ್ಷೇತರರು.
ಕಂದಿಕೆರೆ.ತಾ.ಪಂ :  ಆರ್.ಕೇಶವಮೂತರ್ಿ ಬಿ.ಜೆ.ಪಿ, ಬಿ.ಸಣ್ಣಯ್ಯ ಕಾಂಗ್ರೇಸ್. ತೇಜಶಂಕರಓಡೆಯರ್ ಜೆ.ಡಿ.ಎಸ್. ಆರ್.ಕೆ.ಬಾಳೇಗೌಡ. ಬಿ.ಕೆ.ಶ್ರೀಕಾಂತ್ ಪಕ್ಷೇತರರು.
ಮಾಳೀಗೆಹಳ್ಳಿ ತಾ.ಪಂ : ರಾಮದಾಸ.ಹೆಚ್. ಕಾಂಗ್ರೇಸ್, ಎಸ್.ರಂಗಸ್ವಾಮಿ ಬಿ.ಜೆ.ಪಿ, ಟಿ.ಜಿ.ತಿಮ್ಮಯ್ಯ. ಜೆ.ಡಿಎಸ್, ಶಿವಕುಮಾರಸ್ವಾಮಿ ಪಕ್ಷೇತರ.

ಹೇಮಾವತಿ ನೀರಾವರಿಗೆ ಚುನಾವಣೆ ನಂತರ ಚಾಲನೆಗೆ ಮುಖ್ಯಮಂತ್ರಿಗಳಲ್ಲಿ ಮನವಿ : ಸಿ.ಬಸವರಾಝು 
ಚಿಕ್ಕನಾಯಕನಹಳ್ಳಿ : ಜಿಲ್ಲಾ ಪಂಚಾಯಿತಿ ಚುನಾವಣೆ ಮುಗಿಯುತ್ತಿದ್ದ ನಂತರ ಸ್ಥಗಿತಗೊಂಡಿರುವ ಹೇಮಾವತಿ ನೀರಾವರಿ ಯೋಜನೆಗೆ ಪುನರಾರಂಬಿಸಲು ಹಾಗೂ ಶೆಟ್ಟಿಕೆರೆ ಭಾಗದಲ್ಲಿ ಹದಗೆಟ್ಟಿರುವ ರಸ್ತೆ ಸರಿಪಡಿಸಲು ಮುಖ್ಯಮಂತ್ರಿಗಳಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಲಾಗುವುದು ಎಂದು ಶೆಟ್ಟಿಕೆರೆ ಜಿ.ಪಂ.ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಸಿ.ಬಸವರಾಜು ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ, ಹೇಮಾವತಿ ನಾಲಾ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಯನೆಗೆ ಚಾಲನೆ ನೀಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಒಂದು ವರ್ಷದೊಳಗೆ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಸಂಸತ್ ಚುನಾವಣೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟಾಗಿ ಹೋರಾಟ ಮಾಡಿದ ಫಲವಾಗಿ ತಾಲ್ಲೂಕಿನಲ್ಲಿ 58ಸಾವಿರಕ್ಕೂ ಹೆಚ್ಚು ಮತಗಳು ಬಂದಿದ್ದವು ಎಂದರಲ್ಲದೆ ಈಗಿರುವ ಕಾಂಗ್ರೆಸ್ ಕಛೇರಿಯಲ್ಲಿ ಜಾಗ ಚಿಕ್ಕದಾಗಿರುವುದರಿಂದ ಪಕ್ಷದ ಸಭೆ ನಡೆಸಲಾಗುತ್ತಿರಲಿಲ್ಲ ಪತ್ರಿಕೆಗಳಿಲ್ಲ ಆರೋಪ ಬಂದಿರುವುದರಿಂದ ಮುಂದೆ ಕಛೇರಿಯಲ್ಲಿಯೇ ಪಕ್ಷದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಹಾಗೂ ಪಟ್ಟಣದಲ್ಲಿ ಕಾಂಗ್ರೆಸ್ ಕಛೇರಿಯನ್ನು ಕಟ್ಟಿಸಿ ಕಛೇರಿಯಲ್ಲಿಯೇ ಸಭೆ ಸಮಾರಂಭಗಳನ್ನು ಮಾಡಲಾಗುವುದು ಹಾಗೂ ತಾಲ್ಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಳಜಗಳಗಳಿಲ್ಲದೆ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದ್ದೇವೆ ಹಾಗೂ ಪಕ್ಷದ ಪರವಾಗಿ ಉತ್ತಮ ಫಲಿತಾಂಶ ದೊರಕಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನಾರಾಯಣಗೌಡ, ಚಿ.ಲಿಂ.ರವಿಕುಮಾರ್, ಸಿ.ಎಂ.ಬೀರಲಿಂಗಯ್ಯ, ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.

ಫೆ.6ರಂದು ಸಂಸ್ಕಾರ ಭಾರತಿಯ ಭಾರತಮಾತಾ ಪೂಜಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಫೆ.04 : ಪಟ್ಟಣದ ರೋಟರಿ ಕನ್ವೆಷನ್ ಹಾಲ್ನಲ್ಲಿ ಫೆ.6ರಂದು ಸಂಜೆ 5.30ಕ್ಕೆ ಸಂಸ್ಕಾರ ಭಾರತಿ ವತಿಯಿಂದ ಭಾರತಮಾತಾ ಪೂಜಾ ಕಾರ್ಯಕ್ರಮ ನಡೆಯಲಿದೆ.
ಸಂಸ್ಕಾರ ಭಾರತಿ ಅಧ್ಯಕ್ಷ ರಮೇಶ್ಕೆಂಬಾಳ್ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಆರ್.ಗಂಗೇಶ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ತಿಪಟೂರು ಸ್ವದೇಶಿ ಜಾಗರಣ ಮಂಚ್ನ ತಾಲ್ಲೂಕು ಕಾರ್ಯದಶರ್ಿ ಪ್ರತಾಪ್ಸಿಂಗ್ ಬೌದ್ದಿಕ್ ಕಾರ್ಯಕ್ರಮ ನೆರವೇರಿಸುವರು.




Tuesday, February 2, 2016



ತಾಲ್ಲೂಕಿನ ಬಿಜೆಪಿ ಪಾಳಯದಲ್ಲಿ ಮುಸುಕಿನ ಗುದ್ದಾಟ
ಚಿಕ್ಕನಾಯಕನಹಳ್ಳಿ.ಫೆ.2: ತಾಲ್ಲೂಕಿನ ಬಿ.ಜೆ.ಪಿ. ಪಾಳಯದಲ್ಲಿ ಗಮನ ಸೇಳೆದಿದ್ದ ಶೆಟ್ಟಿಕೆರೆ ಜಿಲ್ಲಾ ಪಂಚಾಯತ್ ಕ್ಷೇತ್ರ, ಹುಳಿಯಾರು ಜಿ.ಪಂ. ಕ್ಷೇತ್ರಗಳು ಇಬ್ಬರು ಮಾಜಿ ಶಾಸಕರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದು, ಗುದ್ದಾಟದಲ್ಲಿ ಇಬ್ಬರೂ  ಸಮಬಲ ಸಾಧಿಸಿದಂತಾಗಿದೆ.
 ಶೆಟ್ಟೀಕೆರೆ ಕ್ಷೇತ್ರದಲ್ಲಿ ಕೆ.ಎಸ್.ಕಿರಣ್ಕುಮಾರ್ ರವರ ಬೆಂಬಲಿಗ  ಎ.ಬಿ.ರಮೇಶ್ಕುಮಾರ್ ಬಿಜೆಪಿ ಪಕ್ಷದ ಅಧಿಕೃತ ಅಭ್ಯಥರ್ಿ ಎಂದು ಘೋಷಿಸಿದರೆ, ಹುಳಿಯಾರು ಜಿ.ಪಂ.ಕ್ಷೇತ್ರದಲ್ಲಿ ಜೆ.ಸಿ.ಮಾಧುಸ್ವಾಮಿ ಬೆಂಬಲಿಗ ಎಚ್.ಜಯಣ್ಣ ನವರು ಅಧಿಕೃತ ಅಬ್ಯಾಥರ್ಿ ಎಂದು ಘೋಷಿಸಿದೆ. 
ತಾಲ್ಲೂಕು ಕಛೇರಿಯಲ್ಲಿ ನಡೆದ ನಾಮಪತ್ರ ಪರಿಶಿಲನೆ ವೇಳೆ ಶೆಟ್ಟಿಕೆರೆ ಜಿ.ಪಂ.ಕ್ಷೇತ್ರಕ್ಕೆ ಎ.ಬಿ.ರಮೇಶ್ಕುಮಾರ್, ಹಾಗೂ ಗಿರೀಶ್ ಇಬ್ಬರು ಬಿಜೆಪಿ ಪಕ್ಷದಿಂದ ಸ್ಪಧರ್ಿಸುವುದಾಗಿ ನಾಮಪತ್ರದಲ್ಲಿ ನಮೂದು ಮಾಡಿದ್ದು,  ಪಕ್ಷದ ಬಿ ಫಾರಂ ರಮೇಶ್ ಕೈಸೇರಿದ್ದರಿಂದ ಗಿರೀಶ್ ಪಕ್ಷೇತರ ಅಭ್ಯಥರ್ಿಯಾಗಲಿರುವರೊ ಅಥವಾ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬೆಂಬಲಿತ ಅಭ್ಯಥರ್ಿಯಾಗಿ ಚುನಾವಣೆಯನ್ನು ಎದುರಿಸುತ್ತಾರೊ ತಿಳಿಯುತ್ತಿಲ್ಲ, ಕೊನೆಗಳಿಗೆಯಲ್ಲಿ ಪಕ್ಷದ ಸಿದ್ದಾಂತಗಳಿಗೆ ಮಣಿದು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆಯುತ್ತಾರೊ ಕಾದು ನೋಡಬೇಕಿದೆ.
ಇದೇ ರೀತಿ ಹುಳಿಯಾರು ಜಿ.ಪಂ.ಕ್ಷೇತ್ರದಲ್ಲೂ ಮುಂದುವರೆದಿದ್ದು ಹನುಮಂತಯ್ಯ ಬಿಜೆಪಿ ಪಕ್ಷದ ಬಿ ಫಾರಂ ಪಡೆಯುವಲ್ಲಿ ವಿಫಲರಾದರು, ಜೆ.ಸಿ. ಮಾಧುಸ್ವಾಮಿ ಬೆಂಬಲಿತ ಬಿಜೆಪಿ ಅಭ್ಯಥರ್ಿ ಜಯಣ್ಣನಿಗೆ  ಬಿಜೆಪಿ ಪಕ್ಷದ ಬಿ ಫಾರಂ ದೊರೆತ ಕಾರಣ ಹನುಮಂತಯ್ಯ ಪಕ್ಷೇತರ ಅಭ್ಯಥರ್ಿ ಎಂದು ಘೋಷಿಸಲಾಯಿತು, ಇಲ್ಲೂ ಸಹ ಕೆ.ಎಸ್.ಕಿರಣ್ಕುಮಾರ್ ಬೆಂಬಲಿತ ಅಬ್ಯಾಥರ್ಿಯಾಗಿ ಹನುಮಂತಯ್ಯ ಕಣದಲ್ಲಿ ಉಳಿಯುತ್ತಾರೊ ಅಥವಾ ಕೊನೆಗಳಿಗೆಯಲ್ಲಿ ಪಕ್ಷದ ಸಿದ್ದಾಂತಗಳಿಗೆ ಮಣಿದು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆಯುತ್ತಾರೊ ಕಾದು ನೋಡಬೇಕಿದೆ.
 ತಾಲ್ಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ ಒಟ್ಟು 39 ಜನ ನಾಮಪತ್ರ ಸಲ್ಲಿಸಿದಂತಾಗಿದ್ದು  ತಾಲ್ಲೂಕು ಪಂಚಾಯಿತಿಗೆ 107 ಜನ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು  ಫೆ.4ಕೊನೆಯ ದಿನಾಂಕವಾಗಿದ್ದು ಈ ಅವಧಿಯೊಳಗೆ  ಯಾರು ನಾಮಪತ್ರ ಹಿಂಪಡೆಯುತ್ತಾರೆ ಎಂಬುದು ಕುತುಹಲಕಾರಿಯಾಗಿದೆ.

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು 
ಚಿಕ್ಕನಾಯಕನಹಳ್ಳಿ,ಫೆ.02 : ಟ್ರಾನ್ಸ್ಫಾರಂನ ತಂತಿ ಹರಿದು ವ್ಯಕ್ತಿಯ ಕಾಲ ಮೇಲೆ ಬಿದ್ದ ಪರಿಣಾಮ ಆತನ ಪಾದ ಸುಟ್ಟು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗೋಡೆಕೆರೆಯ ನಡುವನಹಳ್ಳಿಯಲ್ಲಿ ನಡೆದಿದೆ.
ಗೋಡೆಕೆರೆ ವಾಸಿ ಸಿದ್ದಲಿಂಗಮೂತರ್ಿ(28) ಎಂಬುವವರು ನಡುವನಹಳ್ಳಿ ಬಳಿ ಇರುವ ತಮ್ಮ ತೋಟದಲ್ಲಿ ನೀರು ಹಾಯಿಸಲು ತೆರಳಿದ ಸಂದರ್ಭದಲ್ಲಿ ವಿದ್ಯುತ್ ತಂತಿ ಹರಿದು ಈತನ ಪಾದದಮೇಲೆ ಬಿದ್ದ ಪರಿಣಾಮ  ಮೃತಪಟ್ಟಿದ್ದಾರೆ,  ಮೃತ ವ್ಯಕ್ತಿ ಗೋಡೆಕೆರೆಯಲ್ಲಿ ಆಟೋಡ್ರೈವರ್ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಹಾಲು ಉತ್ಪಾದಕರ ಸಂಘದ ನಿದರ್ೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಿದ್ಯುತ್ ಶಾಕ್ ಹೊಡೆದು ಮೃತಮಟ್ಟ ವ್ಯಕ್ತಿಯನ್ನು ನೋಡಲು ಹೋದ ಬೆಸ್ಕಾಂ ಎ.ಇ.ಇ. ರಾಜಶೇಖರ್ರವರಿಗೆ,  ಸ್ಥಳೀಯರು  ಮುತ್ತಿಗೆ ಹಾಕಿ ಈ ಬಗ್ಗೆ ನಾವು  ಹಲವು ಸಲ  ಮನವಿ ಮಾಡಿದ್ದರೂ ನಿರ್ಲಕ್ಷ ವಹಿಸಿದ್ದ ಪರಿಣಾಮ ಸಿದ್ದಲಿಂಗಮೂತರ್ಿ ಸಾವಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಇಂಜನಿಯರ್ವರನ್ನು ತರಾಟೆಗೆ ತೆಗೆದುಕೊಂಡರು.  
ಗೋಡೆಕೆರೆ ಗ್ರಾಮಸ್ಥ ಮರಿಯಣ್ಣ ಘಟನೆ ಬಗ್ಗೆ ಮಾತನಾಡಿ, ಈ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ವಿದ್ಯುತ್ ಲೈನ್ಗಳ ಪ್ರೈಮರಿ ಲೈನ್ ಬದಲಾಯಿಸಿ ರ್ಯಾಬಿಟ್ ವೈರ್ ಅಳವಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ, ಯಾರೊಬ್ಬರೂ ಇತ್ತ ಗಮನ ಹರಿಸಲಿಲ್ಲ, ವರ್ಷಕ್ಕೆ ನಾಲ್ಕು ಬಾರಿ ವೈರ್ಗಳು ಕೆಳಗೆ ಬೀಳುತ್ತವೆ ಇದರಿಂದ ವಿದ್ಯುತ್ ಅವಘಡಗಳು ಉಂಟಾಗಿವೆ, ಇದೇ ರೀತಿ ಕೆಳಗೆ ಬಿದ್ದ  ವಿದ್ಯುತ್ ಲೈನ್ನಿಂದ  ಸಾವನ್ನಪ್ಪಿರುವ ಸಿದ್ದಲಿಂಗಮೂತರ್ಿ ಸಾವು ಗ್ರಾಮದ ಜನರಿಗೆ ನೋವು ತಂದಿದೆ ಎಂದಿದ್ದಾರೆ.
 ಜನಪ್ರತಿನಿಧಿಗಳು ಗ್ರಾಮದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ,  ಚುನಾವಣೆ ಸಮಯದಲ್ಲಿ ಮಾತ್ರ ಆಗಮಿಸಿ ಭರವಸೆ ನೀಡುತ್ತಾರೆ ಎಂದರಲ್ಲದೆ,  ಮುಂಚೆಯೇ ಹಳ್ಳಿಯಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆ ಪರಿಹರಿಸಿದ್ದರೆ ಸಾವುನೋವು ಉಂಟಾಗುತ್ತಿರಲಿಲ್ಲ ಹಾಗೂ ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ವ್ಯಕ್ತಿಗೆ 10ಲಕ್ಷ ರೂ. ಪರಿಹಾರ ನೀಡಿ ಎಂದರು.
ಗೋಡೆಕೆರೆ ಗ್ರಾಮದ ಎಂ.ಸಿದ್ದರಾಮಯ್ಯ ಮಾತನಾಡಿ, 25ವರ್ಷದ ಹಿಂದೆ ಆರಂಭವಾದ ಟ್ರಾನ್ಸ್ಫಾರಂನ ಮೂಲಕ ಹೋಗಿರುವ ವೈರ್ನಿಂದ ವಿದ್ಯುತ್ ಶಾಕ್ ತಗಲಿ ಘಟನೆ ಸಂಭವಿಸಿದೆ, ಈ ಟ್ರಾನ್ಸ್ಫಾರಂನಲ್ಲಿನ ವಸ್ತುಗಳನ್ನು ಬದಲಾಯಿಸಿ ಹೊಸ ವಸ್ತುಗಳನ್ನು ಅಳವಡಿಸಲು ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತು ಆದರೆ ಅಧಿಕಾರಿಗಳ ನಿರಾಸಕ್ತಿಯೋ, ಹಣ ಹೊಡೆಯುವ ಆಸೆಯೋ ಯಾವುದೇ ರೀತಿಯ ಕಾಮಗಾರಿಯೂ ನಡೆಯಲಿಲ್ಲ, ಟ್ರಾನ್ಸ್ಫಾರಂನಲ್ಲಿದ್ದ ಹಳೆಯ ಪ್ರೈಮರಿ ವೈರ್ ಕೆಳಗೆ ಬಿದ್ದುದ್ದರಿಂದ ಹಾಗೂ ಬೆಸ್ಕಾಂ ಇಲಾಖೆಯವರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದರಿಂದ ವ್ಯಕ್ತಿ ಸಾವು ಉಂಟಾಗಿದೆ ಈಗಲಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗೋಡೆಕೆರೆಯಲ್ಲಿ ಆಗಾಗ್ಗೆ ಉಂಟಾಗುತ್ತಿರವ ವಿದ್ಯುತ್ ಸಮಸ್ಯೆ ಪರಿಹರಿಸಿ ಎಂದರು.
ಸ್ಥಳಕ್ಕೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಎಇಇ ರಾಜಶೇಖರ್, ಮುಖಂಡರುಗಳಾದ  ಸಿ.ಬಸವರಾಜು, ಎಂ.ಎಂ.ಜಗದೀಶ್, ಎ.ಬಿ.ರಮೇಶ್ಕುಮಾರ್, ಹೆಚ್.ಬಿ.ಪಂಚಾಕ್ಷರಿ ಬಿ.ಎನ್.ಶಿವಪ್ರಕಾಶ್, ಸಿ.ಎಂ.ರಂಗಸ್ವಾಮಯ್ಯ, ಹಾಗೂ ನೂರಾರು ಜನರು ಸೇರಿದ್ದರು.
ವಿಕಲಚೇತನರಿಗೆ ತ್ರಿಚಕ್ರ ವಾಹನ : ಸಿಬಿಎಸ್ 
ಚಿಕ್ಕನಾಯಕನಹಳ್ಳಿ,ಫೆ.02: ಕಾಲಿನ ನ್ಯೂನ್ಯತೆ ಹೊಂದಿರುವ ಓಡಾಡಲು ತೊಂದರೆ ಅನುಭವಿಸುತ್ತಿರುವ ವಿಕಲಚೇತನರಿಗೆ ಶಾಸಕರ ನಿಧಿಯಿಂದ ತ್ರಿಚಕ್ರ ವಾಹನ ಕೊಡಿಸುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಪುರಸಭಾ ಕಛೇರಿ ಆವರಣದಲ್ಲಿ ನಡೆದ 2014-15ನೇ ಸಾಲಿನ ವಿಕಲಚೇತನರ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರಿಗೆ ಸಕರ್ಾರದ ವತಿಯಿಂದ ಉಚಿತ ಬಸ್ಪಾಸ್ ಹಾಗೂ ಸ್ಮಾಟರ್್ಕಾಡರ್್ ನೀಡುವ ಬಗ್ಗೆ ಈಗಾಗಲೇ ಸಕರ್ಾರದ ಮಟ್ಟದಲ್ಲಿ ಚಚರ್ಿತವಾಗಿದೆ ಈ ಬಗ್ಗೆ ಸದನದಲ್ಲೂ ಮಾತನಾಡಲಿದ್ದು ವಿಕಲಚೇತನರ ಇಲಾಖೆಯ ಆಯುಕ್ತರೂ ಈ ಬಗ್ಗೆ ಸ್ಪಂದನೆ ಹೊಂದಿದ್ದಾರೆ ಎಂದರು.
ವಿಕಲಚೇತನರು ಸಕರ್ಾರದಿಂದ ಬರುವಂತಹ ಸೌಲಭ್ಯಗಳನ್ನು ಉಪಯೋಗ ಪಡಿಸಿಕೊಳ್ಳಿ, ವಿಕಲಚೇತನರ ಸಮಸ್ಯೆಯ ಸ್ಪಂದನೆಗೆ ನಾವಿದ್ದೇವೆ, ಈಗಾಗಲೇ ಸಕರ್ಾರ ಪೋಲಿಯೋ ಮುಕ್ತ ರಾಷ್ಟ್ರ ಮಾಡಲು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸುತ್ತಿದೆ ಈ ಕಾರ್ಯಕ್ರಮವನ್ನು ಎಲ್ಲಾ ಮಕ್ಕಳಿಗೂ ತಲುಪಿಸುವುದು ಎಲ್ಲರ ಕರ್ತವ್ಯ ಎಂದರು.
ಪುರಸಭಾಧ್ಯಕ್ಷೆ ಪ್ರೇಮದೇವರಾಜು ಮಾತನಾಡಿ, ವಿಕಲಚೇತನರು ಅಂಗವಿಕಲರು ಎಂದು ಬೇಸರದಲ್ಲಿರದೆ ಸದಾ ಚೇತನವಾಗಿರಿ, ಪುರಸಭೆ ವತಿಯಿಂದ ಶೇ.3%ರ ಅನುದಾನದಲ್ಲಿ ವಿಕಲಚೇತನರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ವಿಕಲಚೇತನ ಮಕ್ಕಳು ತಮ್ಮಲ್ಲಿರುವ ಸಮಸ್ಯೆಯನ್ನು ನೆನಪಿಸಿಕೊಂಡು ಕೊರಗಬೇಡಿ, ವಿಕಲಚೇತನ ಮಕ್ಕಳಲ್ಲಿಯೇ ಹೆಚ್ಚಿನ ಪ್ರತಿಭೆಯಿರುತ್ತದೆ ಆ ಪ್ರತಿಭೆ ಹೊರತರಬೇಕು, ಅಂಗವಿಕಲರ ಮಕ್ಕಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಪೋಷಕ ಹಾಗೂ ಶಿಕ್ಷಕರದ್ದಾಗಿರಬೇಕು ಎಂದರಲ್ಲದೆ ಅಪೌಷ್ಠಿಕತೆಯಿಂದ ಮಕ್ಕಳು ಅಂಗವಿಕಲತೆಗೆ ತುತ್ತಾಗುತ್ತಿದ್ದಾರೆ ಈ ಬಗ್ಗೆ ಪೋಷಕರು ಗಮನ ಹರಿಸಿ ಎಂದರು.
ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಮಾತನಾಡಿ, ಪುರಸಭೆ ವತಿಯಿಂದ ಈಗಾಗಲೇ ಪಟ್ಟಣದಲ್ಲಿರುವ ವಿಕಲಚೇತನರಿಗೆ ಸೌಲಭ್ಯ ನೀಡಲಾಗುತ್ತಿದ್ದು ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ತಿಳಿಸಿದ ಅವರು ವಿಕಲಚೇತನರಿಗೆ ನೀಡುತ್ತಿರುವ ಮಾಶಾಸನವನ್ನು 3ಸಾವಿರ ರೂಗೆ ಸಕರ್ಾರ ಹೆಚ್ಚಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಬಿ.ಇಂದಿರಾ, ಪುಷ್ಪ.ಟಿ.ರಾಮಯ್ಯ, ಎಂ.ಕೆ.ರವಿಚಂದ್ರ, ಧರಣಿ.ಬಿ.ಲಕ್ಕಪ್ಪ, ಸಿ.ಎಂ.ರಾಜಶೇಖರ್, ರೇಣುಕಮ್ಮ, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಮಹಮದ್ಖಲಂದರ್, ಸಿ.ಟಿ.ದಯಾನಂದ್, ಎಂ.ಕೆ.ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಎಸಿಡಿಪಿಓ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.





Monday, February 1, 2016


ಚಿ.ನಾ.ಹಳ್ಳಿ ಪಂಚಾಯ್ತಿ ಚುನಾವಣೆಗಳಿಗೆ ಅಭ್ಯಥರ್ಿಗಳಿಂದ ನಾಮಪತ್ರ ಸಲ್ಲಿಕೆ
3
ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿಯ ಐದು ಕ್ಷೇತ್ರಗಳಿಗೆ 41,  ತಾಲ್ಲೂಕು ಪಂಚಾಯಿತಿಯ 19 ಸ್ಥಾನಗಳಿಗೆ 106  ನಾಮಪತ್ರಗಳು ಸಲ್ಲಿಕೆಯಾಗಿವೆ, ನಾಮಪತ್ರ  ಸಲ್ಲಿಸಲು ಫೆ.1ರಂದು ಕೊನೆಯ ದಿನವಾದ್ದರಿಂದ ಚುನಾವಣಾ ಅಭ್ಯಥರ್ಿಗಳು ತಮ್ಮ ಬೆಂಬಲಿಗರೊಂದಿಗೆ ನಾಯಕರುಗಳ ಜೈಕಾರ ಕೂಗುತ್ತಾ ಮೆರವಣಿಗೆ ಮೂಲಕ ಸಂಚರಿಸಿ ನಾಮಪತ್ರ ಸಲ್ಲಿಸಿದರು.
ಕೊನೆಯ ದಿನವಾದ ಫೆ.1ರಂದು ಐದು ಜಿ.ಪಂ.ಕ್ಷೇತ್ರಗಳಿಗೆ 25 ನಾಮ ಪತ್ರ ಸಲ್ಲಿಕೆಯಾದವು, ಉಳಿದ 16 ನಾಮಪತ್ರಗಳನ್ನು  ಈ ಮೊದಲೇ ಸಲ್ಲಿಸಲಾಗಿತ್ತು, ತಾ.ಪಂ. 19 ಕ್ಷೇತ್ರಗಳಿಗೆ ಫೆ.1ರಂದು 60 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಫೆ.1ರಂದು ಐದು ಜಿ.ಪಂ.ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದವರು:
ಹುಳಿಯಾರು ಜಿ.ಪಂ. ಕ್ಷೇತ್ರಕ್ಕೆ: ಕಾಂಗ್ರೆಸ್ನಿಂದ ವೈ.ಸಿ.ಸಿದ್ದರಾಮಯ್ಯ, ಬಿ.ಜೆ.ಪಿ.ಯಿಂದ ಎಚ್.ಜಯಣ್ಣ, ಜೆ.ಡಿ.ಎಸ್.ನಿಂದ ಸಯದ್ ಏಜಾಜ್ ಪಾಷ ಸ್ಪಧರ್ಿಸಿದ್ದರೆ, ಬಿ.ಜೆ.ಪಿ. ಬಂಡಾಯ ಅಬ್ಯಾಥರ್ಿಯಾಗಿ ಎಚ್.ಹನುಮಂತಯ್ಯ, ಜೆ.ಡಿ.ಎಸ್.ಬಂಡಾಯ ಅಬ್ಯಾಥರ್ಿಯಾಗಿ ಎನ್.ಜಿ.ಶಿವಣ್ಣ, ಸಯದ್ ಜಹೀರಾಖಾನ್,  ಕಾಂಗ್ರೆಸ್ ಬಂಡಾಯ ಅಬ್ಯಾಥರ್ಿಯಾಗಿ ಎಚ್.ವಿ.ಶಾರದ, ಪಕ್ಷೇತರರಾಗಿ ಎಸ್.ಪುಟ್ಟರಾಜು, ಬಿ.ಎಸ್.ಧನಂಜಯ, ನಾಸಿರ್ಬೇಗ್ ಅಜರ್ಿ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರದಿಂದ ಬಿ.ಜೆ.ಪಿ.ಯಿಂದ ಎಸ್.ಟಿ.ಮಹಾಲಿಂಗಯ್ಯ(ಕಬ್ಬಡಿ), ಜೆ.ಡಿ.ಎಸ್.ನಿಂದ ಈರಯ್ಯ, ಪಕ್ಷೇತರರಾಗಿ ಲ.ಪು.ಕರಿಯಪ್ಪ. ಕೆ.ಮರಿಯಪ್ಪ, ಲಚ್ಚಾನಾಯ್ಕ, ರಾಮನಾಯ್ಕ.
ಕಂದಿಕೆರೆ ಜಿ.ಪಂ.ಕ್ಷೇತ್ರದಿಂದ:  ಕಾಂಗ್ರೆಸ್ ಪದ್ಮಮ್ಮ ಲಿಂಗರಾಜ್, ಜೆ.ಡಿ.ಎಸ್.ಸುನಿತಾ,  ಪಕ್ಷೇತರರಾಗಿ  ಡಿ.ಶೈಲಜಾ, ವೀಣಾ, ಸಿ.ರೇಣುಕಮ್ಮ
ಹಂದನಕೆರೆ ಜಿ.ಪಂ.ಕ್ಷೇತ್ರದಿಂದ: ಪಕ್ಷೇತರರಾಗಿ ದಬ್ಬೆಘಟ್ಟ ಬಸವರಾಜು, ಬಸವರಾಜು 
ಶೆಟ್ಟೀಕೆರೆ ಜಿ.ಪಂ.ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಎ.ಬಿ.ಶರತ್ಕುಮಾರ್, ಬಂಡಾಯವಾಗಿ ಸಿ.ಆರ್.ಗಿರೀಶ್, ಪಕ್ಷೇತರರಾಗಿ ಬಸವರಾಜು ಅಜರ್ಿ ಸಲ್ಲಿಸಿದ್ದಾರೆ.
19 ತಾ.ಪಂ. ಕ್ಷೇತ್ರಗಳಿಗೆ  ಫೆ.1ರಂದು ಅಜರ್ಿ ಸಲ್ಲಿಸಿದವರ ವಿವರ:
ಜೆ.ಸಿ.ಪುರ ಕ್ಷೇತ್ರ: ಬಿ.ಜೆ.ಪಿ.ಪ್ರೇಮಕುಮಾರಿ, ಶೆಟ್ಟೀಕೆರೆ ತಾ.ಪಂ.ಕ್ಷೇತ್ರ ವಿ.ಬಿ.ವೀಣಾ ಪಕ್ಷೇತರ, 
ಕುಪ್ಪೂರು ಕ್ಷೇತ್ರ:  ಬಿ.ಜೆ.ಪಿಯಿಂದ ಕೆ.ಎಸ್.ಅಶೋಕ್ಕುಮಾರ್, ಪಕ್ಷೇತರರಾಗಿ ಟಿ.ಆರ್.ಮಹೇಶ್, ಕರಿಬಸವಯ್ಯ, ಕುಮಾರಸ್ವಾಮಿ, 
ದಸೂಡಿ ಕ್ಷೇತ್ರದಿಂದ: ಕಾಂಗ್ರೆಸ್ನಿಂದ ಓಂಕಾರನಾಯ್ಕ್, ಬಿ.ಜೆ.ಪಿಯಿಂದ ಜಿ.ರಮೇಶ್, ಜೆ.ಡಿ.ಎಸ್.ನಿಂದ ಪ್ರಸನ್ನಕುಮಾರ್, ಪಕ್ಷೇತರರಾಗಿ ಎಂ.ಟಿ.ಸಣ್ಣಕರಿಯಪ್ಪ, ಚಂದ್ರನಾಯ್ಕ್, ಹುಳಿಯಾರು ಕ್ಷೇತ್ರದಿಂದ: ಜೆ.ಡಿ.ಎಸ್.ನಿಂದ ಎಚ್.ಎನ್.ಕುಮಾರ್ ಕಾಂಗ್ರೆಸ್ನಿಂದ ಎಚ್.ಎನ್.ಕಿರಣ್ಕುಮಾರ್, ಬಿ.ಜೆ.ಪಿಯಿಂದ ಎಚ್.ಚಂದ್ರಶೇಖರ್, 
ತೀರ್ಥಪುರ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಸಿಂಗದಹಳ್ಳಿ ರಾಜ್ಕುಮಾರ್, ಕಾಂಗ್ರೆಸ್ನಿಂದ ಕೆ.ಸಿ.ಪರಮೇಶ್, ಜೆ.ಡಿ.ಎಸ್.ಗೋವಿಂದರಾಜು, ಪಕ್ಷೇತರರಾಗಿ ಶಿಡ್ಲಯ್ಯ, ಬಿ.ಮೂತರ್ಿ. ಬಿ.ಎಸ್.ಪಿ.ಯಿಂದ ಬಸವರಾಜು, 
ಮಾಳಿಗೆಹಳ್ಳಿ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಎಸ್.ರಂಗಸ್ವಾಮಿ, ಜೆ.ಡಿ.ಎಸ್.ನಿಂದ ಟಿ.ಜಿ.ತಿಮ್ಮಯ್ಯ, ಪಕ್ಷೇತರರಾಗಿ ಶಿವಕುಮಾರಸ್ವಾಮಿ, ಕರಿಯಾನಾಯ್ಕ್, ಎಸ್.ಯೋಗೀಶ್. ಹೋಯ್ಸಳಕಟ್ಟೆ ಕ್ಷೇತ್ರದಿಂದ: ಕಾಂಗ್ರೆಸ್ನಿಂದ ಎಚ್.ಎನ್.ದೇವರಾಜು, ಎಚ್.ಆರ್.ರಂಗರಾಜು, ಆರ್.ಕುಮಾರಸ್ವಾಮಿ, ಬಿ.ಜೆ.ಪಿ.ಯಿಂದ ಬಿ.ಮಧು, ಜೆ.ಡಿ.ಎಸ್ನಿಂದ ಮಂಜುನಾಥ್, ಪಕ್ಷೇತರರಾಗಿ ಕರಿಯಪ್ಪ,
ಕೆಂಕೆರೆ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಭಾಗ್ಯಮ್ಮ, ಆರ್.ಕವಿತ, ಜೆ.ಡಿ.ಎಸ್.ನಿಂದ ಬಿ.ಬಿ.ಫಾತಿಮಾ, ಮುನೀರ್ಉನ್ನೀಸಾ, ತಿಮ್ಮನಹಳ್ಳಿ ಕ್ಷೇತ್ರ: ಜೆ.ಡಿ.ಎಸ್.ನಿಂದ ಲೋಲಾಕ್ಷಮ್ಮ, ಕಾಂಗ್ರೆಸ್ನಿಂದ ಕೆ.ಶಿವಮ್ಮ, ಬಿ.ಜೆ.ಪಿ.ಯಿಂದ ಇಂದಿರಾ ಕುಮಾರ್, ಪಕ್ಷೇತರ ಮೀನಾ ಶ್ರೀನಿವಾಸ್,
 ಕಂದಿಕೆರೆ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಆರ್.ಕೇಶವಮೂತರ್ಿ, ಜೆ.ಡಿ.ಎಸ್.ನಿಂದ ತೇಜಕುಮಾರ್ ಒಡೆಯರ್, ಪಕ್ಷೇತರರಾಗಿ ಆರ್.ಕೆ.ಬಾಳೇಗೌಡ, ಬಿ.ಕೆ.ಶ್ರೀಕಾಂತ್, ಬಿ.ಕೆ.ಜಯಣ್ಣ, ಬಸವರಾಜು. 
ಗಾಣಧಾಳ್ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಲಕ್ಷ್ಮಿಬಾಯಿ, ಸಿದ್ದಗಂಗಾಬಾಯಿ,  ಜೆ.ಡಿ.ಎಸ್.ನಿಂದ ಕೆ.ವಿ.ರಾಧಮ್ಮ, ಪಕ್ಷೇತರರಾಗಿ ಲಲಿತಾಬಾಯಿ, ಕಮಲಾಬಾಯಿ, ಲಚ್ಚಾನಾಯ್ಕ್. 
ತಿಮ್ಲಾಪುರ ಕ್ಷೇತ್ರದಿಂದ: ಕಾಂಗ್ರೆಸ್ನಿಂದ ಗೌರಮ್ಮ, ಜೆ.ಡಿ.ಎಸ್ನಿಂದ ರೇಣುಕಮ್ಮ, ಕಲ್ಯಾಣಬಾಯಿ, ಬಿ.ಜೆ.ಪಿಯಿಂದ ಕಮಲಾಬಾಯಿ.
 ಯಳನಡು ಕ್ಷೇತ್ರದಿಂದ: ಜೆ.ಡಿ.ಎಸ್.ನಿಂದ ಯತೀಶ, ಬಿ.ಜೆ.ಪಿಯಿಂದ ವಿಶ್ವೇಶ್ವರಯ್ಯ, ಕಾಂಗ್ರೆಸ್ನಿಂದ ಕದರೇಗೌಡ ಯಾದವ್. ಇವರಿಷ್ಟು ಜನ ಫೆ.1ರಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯಥರ್ಿಗಳು ತಮ್ಮ ಬೆಂಬಲಗರನ್ನು ವಾಹನಗಳ ಮೂಲಕ ಕರೆದುಕೊಂಡು ನೆಹರು ಸರ್ಕಲ್ ಮೂಲಕ ತಾಲ್ಲೂಕು ಕಛೇರಿವರೆಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವದಕ್ಕೂ ಮೊದಲು ಅಭ್ಯಥರ್ಿಗಳು ತಮ್ಮ ಇಷ್ಟ ದೇವರುಗಳಿಗೆ ಪೂಜೆ ಸಲ್ಲಿಸಿ ಆಗಮಿಸಿದ್ದು ವಿಶೇಷವಾಗಿತ್ತು.

 

ಜಲಸಂಗ್ರಹಗಾರದ ಘಟಕಕ್ಕೆ ಶಾಸಕರಿಂದ ಶಂಕುಸ್ಥಾಪನೆ 
ಚಿಕ್ಕನಾಯಕನಹಳ್ಳಿ,ಫೆ.01 : ಪಟ್ಟಣದ ಮಾರುಕಟ್ಟೆ ಹಾಗೂ ಜೋಗಿಹಳ್ಳಿ ಬಳಿ ಪುರಸಭೆ ವತಿಯಿಂದ ನೂತನವಾಗಿ ನಿಮರ್ಿಸಲಾಗುವ ನೆಲಮಟ್ಟದ ಜಲಸಂಗ್ರಹಗಾರದ ಘಟಕಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಗುದ್ದಲಿ ಪೂಜೆ ನೆರವೇರಿದ ಘಟಕಗಳಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸರಬರಾಜಿಗೆ ಸಹಾಯವಾಗಲಿದೆ, ಮಾರುಕಟ್ಟೆ ಬಳಿ ನಿಮರ್ಾಣವಾಗುತ್ತಿರುವ ಘಟಕ 10.15ಲಕ್ಷ ಹಾಗೂ ಜೋಗಿಹಳ್ಳಿ ಆದಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಿಮರ್ಾಣವಾಗುತ್ತಿರುವ ಘಟಕ 10.15ಲಕ್ಷ.ರೂ ವೆಚ್ವವಾಗಲಿದೆ ಎಂದರು.  
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಬಿ.ಇಂದಿರಾ, ಸಿ.ಡಿ.ಚಂದ್ರಶೇಖರ್,  ಪುಷ್ಪ.ಟಿ.ರಾಮಯ್ಯ, ರೂಪ, ಎಂ.ಕೆ.ರವಿಚಂದ್ರ, ಸಿ.ಎಂ.ರಾಜಶೇಖರ್, ಧರಣಿ.ಬಿ.ಲಕ್ಕಪ್ಪ, ರೇಣುಕಮ್ಮ, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಮಹಮದ್ಖಲಂದರ್, ಸಿ.ಟಿ.ದಯಾನಂದ್, ಎಂ.ಕೆ.ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.


Friday, January 29, 2016

ವಿವಾಹ ಒಂದರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,: ವಿವಾಹ ಒಂದರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹೊಸ ಬಾಳಿಗೆ ಅಡಿಯಿಟ್ಟ ದಂಪತಿಗಳಿಗೆ ಹಾಜರಿದ್ದ ಜನರು ಮನದುಂಬಿ ಶುಭ ಹಾರೈಸಿದ ಘಟನೆ ತಾಲೂಕಿನ ಜಾಣೇಹಾರ್ನಲ್ಲಿ ನಡೆಯಿತು.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಜಾಣೆಹಾರ್ ಗ್ರಾಮದ ತೋಟದ ಮನೆಯಲ್ಲಿ  ಜಯಲಕ್ಷ್ಮಮ್ಮ ಮತ್ತು ನಾಗರಾಜು ರವರ ಪುತ್ರರಾದ ರಾಮಚಂದ್ರ ಮತ್ತು ಪುಷ್ಪ ರವರ ವಿವಾಹ ಮಹೋತ್ಸವದಲ್ಲಿ ಅಂತರ್ಜಲ ಹೆಚ್ಚಿಸುವ ಅರಿವು ಮೂಡಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಳೆನೀರು ಕೊಯ್ಲು ಮತ್ತು ಕೊಳೆವೆಬಾವಿಗೆ ಜಲಮರುಪೂಣದ ಬಗ್ಗೆ ಉಪನ್ಯಾಸ ಏರ್ಪಡಿಸಿದ್ದರು.
ಜಾಗೃತಿ ಸಭೆಯಲ್ಲಿ ರಾಜ್ಯದ ಖ್ಯಾತ ಅಂತರ್ಜಲ ಮಳೆ ನೀರು ಕೊಯ್ಲು ತಜ್ಞರು ಹಾಗೂ ಕೃಷಿ ಪಂಡಿತರಾದ ಎನ್.ಜೆ ದೇವರಾಜರೆಡ್ಡಿ ಮಾತನಾಡಿ, ಹೆಚ್ಚು ಅಂತರ್ಜಲ ಇರುವಂತಹ ಕ್ಷೇತ್ರಗಳಲ್ಲೇ ಅಂತರ್ಜಲ ಬರಿದಾಗುತ್ತಿದ್ದರೆ ಮುಂದೊಂದು ದಿನ ಇಡೀ ನಾಡೆ ಜಲಕ್ಷಾಮದಿಂದ ತತ್ತರವಾಗುತ್ತದೆ ಆದ್ದರಿಂದ ಅಂತರ್ಜಲವನ್ನು ಹೆಚ್ಚು ಮಾಡುವಂತಹ ಜಲಪೂರಣ ಕಾರ್ಯವನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗದಂತಹ ಕ್ಷೇತ್ರದಲ್ಲಿ ಆಗಿರುವಷ್ಟು ಈ ಭಾಗದಲ್ಲಿ ಅಂತರ್ಜಲದ ಮಟ್ಟ ಕುಸಿದಿಲ್ಲ ಅಂತಹ ಕ್ಷೇತ್ರದಲ್ಲಿ ಜಲಪೂರಣ ವ್ಯವಸ್ಥೆಯಿಂಧ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಬರುವಂತಾಗಿದ್ದು ಇಂತಹ ಭಾಗಗಳಲ್ಲಿ ಈಗಲೇ ಮಳೆ ಕೂಯ್ಲು, ಕೊಳವೆ ಬಾವಿಗೆ ಜಲ ಪೂರಣದಿಂದ ಅಂತರ್ಜಲವನ್ನು ಹೆಚ್ಚಿಸಬಹುದಾಗಿದೆ ಎಂದ ಅವರು ಕೃಷಿಯಲ್ಲಿ ನೀರನ್ನು ಹಾಳುಮಾಡದೇ ಇರುವಷ್ಟು ನೀರನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಬೇಕು ಎಂಬುದನ್ನು  ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳ ನಿಮರ್ಾಣ, ಸೇರಿದಂತೆ ಅನೇಕ ವಿಚಾರಗಳನ್ನು ತಿಳಿಸಿ ನೀರಿನ ಗುಣ ಪರೀಕ್ಷೆಯ ಬಗ್ಗೆ ಹಾಗೂ ಮಳೆಕುಯ್ಲು, ಕೊಳವೆ ಬಾವಿಗಳಿಗೆ ಜಲ ಪೂರಣದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ,  ಜಿಲ್ಲೆಯಲ್ಲೇ ಮಲೆನಾಡಿನಂತಿರುವ ಈ ಭಾಗದಲ್ಲಿ ಅರಣ್ಯಗಳನ್ನು ರಕ್ಷಿಸವುದು ನಮ್ಮ ಕರ್ತವ್ಯವಾಗಿದ್ದು ಗುಡ್ಡಗಾಡು ಪ್ರದೇಶವಾದ ಅಂತರ್ಜಲ ಕುಸಿಯಲು ಅರಣ್ಯಗಳ ನಾಶವೇ ಕಾರಣವಾಗಿದೆ ಆದ್ದರಿಂದ ಅರಣ್ಯವನ್ನು ಬೆಳೆಸುವಂತಹ ಮನಸ್ಸನ್ನು ಪ್ರತಿಯೊಬ್ಬ ರೈತರು ಮಾಡಬೇಕು ಎಂದರು.
ಸಭೆಯಲ್ಲಿ ಕಾತ್ರಿಕೆಹಾಳ್ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯರು ಎನ್.ಇಂದಿರಮ್ಮ ಮಾತನಾಡಿ ಅರಣ್ಯಗಳಿಗೆ ಬೇಸಿಗೆಯಲ್ಲಿ ಬೆಂಕಿಯನ್ನು ಇಟ್ಟು ಸುಟ್ಟುಹಾಕುವಂತಹ ಪ್ರೌವೃತ್ತಿಯನ್ನು ನಮ್ಮ ಜನ ಬಿಡಬೇಕು ಅರಣ್ಯವನ್ನು ರಕ್ಷಿಸಿದರೆ ಮಳೆ ಬೆಳೆ ಸಕಾಲಕ್ಕಾಗುತ್ತದೆ ಹಾಗೂ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಬರಹಗಾರ ಮಲ್ಲಿಕಾಜರ್ುನ್ ಹೊಸಪಾಳ್ಯ, ಗದಗಿನ ಸಮಾಜ ಸೇವಕ ಚಂದ್ರಪ್ಪ, ಶಿಕ್ಷಕ ಜಯಣ್ಣ, ಹಾಗೂ ಸಂಘಟಕ ಮಾಜಿ ಗ್ರಾ.ಪಂ.ಅಧ್ಯಕ್ಷ ನಾಗರಾಜು ಸೇರಿದಂತೆ ಕಾತ್ರಿಕೆಹಾಳ್, ಕೆಂಪರಾಯನಹಟ್ಟಿ, ದೊಡ್ಡರಾಂಪುರ, ಅಜ್ಜಿಗುಡ್ಡೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಪಾಲ್ಗೊಂಡು ಜಲಪೂರಣದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ವಧುವರರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

Thursday, January 28, 2016


ಹಂದನಕೆರೆ ಜಿಲ್ಲಾ ಪಂಚಾಯಿತಿಯಲ್ಲಿ ಗೆಲುವು ಸಾಧಿಸುತ್ತೇನೆ : ರಾಮಚಂದ್ರಯ್ಯ
ಚಿಕ್ಕನಾಯಕನಹಳ್ಳಿ : ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಎದುರಾಳಿಗಳೇ ಯಾರೂ ಇಲ್ಲ, ಜನಬೆಂಬಲ ಪಡೆದು ನಾನೇ ವಿಜಯ ಪತಾಕೆ ಹಾರಿಸುತ್ತೇನೆ ಎಂದು ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜೆಡಿಎಸ್ ಅಭ್ಯಥರ್ಿ ರಾಮಚಂದ್ರಯ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಹೆಂಡತಿ ಜಾನಮ್ಮ ತಾ.ಪಂ.ಸದಸ್ಯರಾಗಿ, ಜಿ.ಪಂ.ಉಪಾಧ್ಯಕ್ಷರಾದ ಸಂದರ್ಭದಲ್ಲಿ ಹಂದನಕೆರೆ ಕ್ಷೇತ್ರದಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು, ಶಿಕ್ಷಣ, ಅಂಗನವಾಡಿ ಕಟ್ಟಡಗಳು, ಸುವರ್ಣಗ್ರಾಮಯೋಜನೆ, ಸ್ವಚ್ಛ ಗ್ರಾಮಯೋಜನೆ, ಕಾಂಕ್ರಿಟ್ ರಸ್ತೆ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಇನ್ನೂ ಹಂದನಕೆರೆ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಾಗಿದೆ ಆದ್ದರಿಂದ ನನಗೆ ಕ್ಷೇತ್ರದ ಮತದಾರರ ಬಗ್ಗೆ ವಿಶ್ವಾಸವಿದ್ದು ಚುನಾವಣೆಯಲ್ಲಿ ನನ್ನನ್ನೇ ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದ ಅವರು ಕ್ಷೇತ್ರದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ ವರ್ಚಸ್ಸು ಹಾಗೂ  ಅವರ ಅಭಿವೃದ್ದಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದ್ದು ಈ ಬಾರಿಯೂ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದರು.
ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಾಲ್ಕು ಕ್ಷೇತ್ರಗಳ ಜೆ.ಡಿ.ಎಸ್. ಅಬ್ಯಾಥರ್ಿಗಳು ಒಟ್ಟಿಗೆ ನಾಮಪತ್ರ ಸಲ್ಲಿಸಿದರು,  ಮತಿಘಟ್ಟ.ತಾ.ಪಂ. ಕ್ಷೇತ್ರಕ್ಕೆ ಗಂಗಮ್ಮ, ಬರಗೂರು.ತಾ.ಪಂ. ಕ್ಷೇತ್ರಕ್ಕೆ ಚೇತನಗಂಗಾಧರ್, ಹಂದನಕೆರೆ.ತಾ.ಪಂ. ಕ್ಷೇತ್ರಕ್ಕೆ ಚಂದ್ರಕಲಾ, ದೊಡ್ಡೆಣ್ಣೆಗೆರೆ. ತಾ.ಪಂ. ಕ್ಷೇತ್ರಕ್ಕೆ ತಮ್ಮಯ್ಯ ಎಂಬುವವರು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಹಂದನಕೆರೆ ಕ್ಷೇತ್ರದಿಂದ ನೂರಾರು ಜೆಡಿಎಸ್ ಬೆಂಬಲಿಗರು ತಮ್ಮ ಮುಖಂಡರುಗಳೊಂದಿಗೆ ಆಗಮಿಸಿ, ಜೆಡಿಎಸ್ ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಉಪಾಧ್ಯಕ್ಷೆ ಜಾನಮ್ಮ, ಮಾಜಿ ತಾ.ಪಂ.ಸದಸ್ಯೆ ಹೇಮಾವತಿ, ಜೆಡಿಎಸ್ ಮುಖಂಡ ಸಿ.ಎಸ್.ನಟರಾಜು, ಮತಿಘಟ್ಟ ಗ್ರಾಮ.ಪಂ.ಮಾಜಿ ಅಧ್ಯಕ್ಷ ಸಿದ್ದರಾಮಣ್ಣ , ದಾಸಿಹಳ್ಳಿ ಶಿವಣ್ಣ, ನಾಗರಾಜು ಸೇರಿಂತೆ ನೂರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಇಬ್ಬರು ಅಭ್ಯಥರ್ಿಗಳು, ಆರು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಆರು ಅಭ್ಯಥರ್ಿಗಳು ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ,ಜ.28 : ತಾಲ್ಲೂಕಿನ ಎರಡು ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಇಬ್ಬರು ಅಭ್ಯಥರ್ಿಗಳು, ಆರು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಆರು ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ನಿಂದ ಹಂದನಕೆರೆ ಕ್ಷೇತ್ರ ರಾಮಚಂದ್ರಯ್ಯ ಹಾಗೂ ಶೆಟ್ಟಿಕೆರೆ ಜಿ.ಪಂ.ಕ್ಷೇತ್ರಕ್ಕೆ ಪಕ್ಷೇತರ ಅಭ್ಯಥರ್ಿಯಾಗಿ ಲಿಂಗಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕಿನ ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಾಲ್ಕು ಕ್ಷೇತ್ರಗಳಾದ ಮತಿಘಟ್ಟ.ತಾ.ಪಂ. ಕ್ಷೇತ್ರಕ್ಕೆ ಗಂಗಮ್ಮ, ಬರಗೂರು.ತಾ.ಪಂ. ಕ್ಷೇತ್ರಕ್ಕೆ ಚೇತನಗಂಗಾಧರ್, ಹಂದನಕೆರೆ.ತಾ.ಪಂ. ಕ್ಷೇತ್ರಕ್ಕೆ ಚಂದ್ರಕಲಾ, ದೊಡ್ಡೆಣ್ಣೆಗೆರೆ. ತಾ.ಪಂ. ಕ್ಷೇತ್ರಕ್ಕೆ ತಮ್ಮಯ್ಯ ಎಂಬುವವರು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು ಹಾಗೂ ಇಬ್ಬರು ಪಕ್ಷೇತ್ರ ಅಭ್ಯಥರ್ಿಗಳಾಗಿ ಕುಪ್ಪೂರು ತಾ.ಪಂ.ಕ್ಷೇತ್ರಕ್ಕೆ ಶಿವಶಂಕರಯ್ಯ ಹಾಗೂ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.








Tuesday, January 26, 2016

ರಾಷ್ಟ್ರದ ಭದ್ರತೆಯನ್ನು ಹೆಚ್ಚಿಸುವ ಜವಬ್ದಾರಿ ನಮ್ಮ ಮೇಲಿದೆ
ಚಿಕ್ಕನಾಯಕನಹಳ್ಳಿ,ಜ.26 : ರಾಷ್ಟ್ರದ ಏಕತೆ ಸಮಗ್ರತೆ ಹಾಗೂ ಭದ್ರತೆಯನ್ನು ರಾಷ್ಟ್ರಕ್ಕೆ ಒದಗಿಸುವ ಬೃಹತ್ ಕೈಗನ್ನಡಿಯೇ ಸಂವಿಧಾನ ಎಂದು ತಹಸೀಲ್ದಾರ್ ಆರ್.ಗಂಗೇಶ್ ಹೇಳಿದರು.
ಪಟ್ಟಣದ ಎನ್. ಬಸವಯ್ಯ ಕ್ರೀಡಾಂಗಣದಲ್ಲಿ ನಡೆದ 67ನೇ ಗಣರಾಜ್ಯೋತವ್ಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಹಲವು ಧರ್ಮ, ಜಾತಿ, ಪಂಥ ಭಾಷೆಗಳ ಸಂಗಮವಾಗಿ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಅಖಂಡ ಭಾರತದ ಏಕತೆ, ಭಾರತ ಸ್ವತಂತ್ರ್ಯವಾದಾಗ 500ಕ್ಕೂ ಹೆಚ್ಚು ರಾಜ ಸಂಸ್ಥಾನಗಳಿದ್ದವವು, ಆಗ 7 ರಾಜ್ಯಗಳು ಮಾತ್ರ ಅಸ್ಥಿತ್ವದಲ್ಲಿದ್ದವು ಇಂತಹ ಸಂದರ್ಭದಲ್ಲಿ ಭಾರತದ ನಿಮರ್ಾತೃಗಳಾದ, ಮಹತ್ಮಗಾಂಧಿ, ಸರದಾರವಲ್ಲಭಾಯಿಪಟೇಲ್, ರಾಜಗೋಪಾಲಚಾರಿ ಮುಂತಾದವರು ಸಂವಿಧಾನ ರಚನಾ ಸಮಿತಿಯನ್ನು ರಚಿಸಿ. ಡಾ|| ಬಾಬು ರಾಜೇಂದ್ರಪ್ರಸಾದ್ ಸಮಿತಿಯ ಅಧ್ಯಕ್ಷರನ್ನಾಗಿ,  ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ರವರನ್ನು ನೇಮಿಸಿದರು  ಎಂದ ಅವರು,  ರಾಷ್ಟ್ರೀಯ  ಸಮಸ್ಯೆಗಳಾದ ಅನರಕ್ಷತೆ, ಅಂಧಕಾರ ಮೂಡನಂಬಿಕೆ. ನಿರುದ್ಯೋಗ, ಬಡತನ, ಭಾಷೆಯಂತಹ ಸಮಸ್ಯೆಗಳನ್ನು ಭಾರತ ಎದುರಿಸುವ ಜವಬ್ದಾರಿ ನಮ್ಮ ಮೇಲಿತ್ತು ಇದನ್ನು ಹೋಗಲಾಡಿಸುವ ಮೂಲಕ ಸಂವಿಧಾನ ತನ್ನ ಅಶಯಗಳನ್ನು ಈಡೇರಿಸಿದೆ ಈಗ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿ ಜಗತ್ತಿನ ಶಕ್ತಿ ರಾಷ್ಟ್ರವಾಗಿದ್ದೇವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು  ಮಾತನಾಡಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹನೀಯರನ್ನು ನಾವು ನೆನೆಯುವುದು ನಮ್ಮ ಕರ್ತವ್ಯ ದೇಶಾಕ್ಕಾಗಿ ಪ್ರತಿಯೊಬ್ಬ ಪ್ರಜೆಯು ಸೇವೆ ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್,ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಾದ ಸ್ವಾಮಿ. ಚೀರಂಜೀವಿ, ಹೆಚ್.ಆರ್.ಸ್ವಾತಿ, ಬಿ,ವಿದ್ಯಾ, ರಾಕೇಶ್. ಗೃಹರಕ್ಷಕದಳದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮಂಜುನಾಥರಾಜಅರಸ್. ಕಲಾವಿದ ಖಲಂದರ್ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಪ್ರೇಮದೇವರಾಜ್. ಸಿ.ಪಿ.ಐ ಮಾರಪ್ಪ, ಪುರಸಭಾ ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ. ಬಿ.ಇ.ಓ ಕೃಷ್ಣಮೂತರ್ಿ, ತಾ.ಪಂ ಕಾರ್ಯನಿವರ್ಾಹಣಾಧಿಕಾರಿ ಕೃಷ್ಣಮೂತರ್ಿ ಮತ್ತಿತ್ತರರು ಉಪಸ್ಥಿತರಿದ್ದರು. 


ಸಕರ್ಾರದ ಸವಲತ್ತುಗಳನ್ನು ಬಳಸಿಕೊಳ್ಳಲು ಶಿಕ್ಷಣದ ಅವಶ್ಯತಕೆ ಇದೆ
ಚಿಕ್ಕನಾಯಕನಹಳ್ಳಿ,ಜ.26 : ಸಕರ್ಾರದ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಅದ್ದರಿಂದ ಎಲ್ಲರೂ ಶಿಕ್ಷಿತರಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಲಿಂಗದೇವರು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಹೋಬಳಿ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಹಾಗೂ ಸಕರ್ಾರದ ಸವಲತ್ತು ಪಡೆಯಲು ಸಂಘಟಿತರಾಗಬೇಕು, ಸಮಾಜದ ಮಕ್ಕಳನ್ನು ವಿದ್ಯಾವಂತರಾನ್ನಾಗಿ ಮಾಡುವುದರ ಮೂಲಕ ಮುಖ್ಯವಾಹಿನಿಗೆ ತರುವ ಅವಶ್ಯಕತೆ ಇದೆ ಎಂದರು.
ದಲಿತ ಮುಖಂಡ ಗೋ.ನಿ.ವಸಂತಕುಮಾರ್ ಮಾತನಾಡಿ, ದೇಶದ ಶೇ%80ರಷ್ಟು ದಲಿತರು ಅವಿದ್ಯಾವಂತರು, ಇಂದಿಗೂ ಕೂಡ ದಲಿತರಿಗೆ ಅಕ್ಷರ ಸಂಪರ್ಕ ತಪ್ಪಿಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ದಲಿತರು ನಿಕೃಷ್ಠ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಣ ಪಡೆದು ವಿದ್ಯಾವಂತರಾದ 20%ರಷ್ಟು ದಲಿತರು ಉದ್ಯೋಗ ಪಡೆದು ತಾವು ಬೆಳೆದು ಬಂದ ಊರು ಹಾಗೂ ಸಮಾಜವನ್ನು ಮರೆಯುತ್ತಿದ್ದಾರೆ ಎಂದರು.    
ಶೆಟ್ಟಿಕೆರೆ ದಲಿತ ಸಂಘರ್ಷ ಸಮಿತಿ ಶಾಖೆಗೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಮೂಲಕ ಮರು ಚಾಲನೆ ನೀಡಲಾಯಿತು.
 ಕಾರ್ಯಕ್ರಮದ ಉದ್ಘಾಟನೆಯನ್ನು ದಸಂಸದ ಹಿರಿಯ ಹೋರಾಟಗಾರ ನಾರಾಯಣರಾಜು ನೆರವೇರಿಸಿದರು. ಸಭೆಯಲ್ಲಿ ಆರ್.ಗೋವಿಂದಯ್ಯ, ಶೆಟ್ಟಿಕೆರೆ ಗ್ರಾ.ಪಂ.ಸದಸ್ಯ ದೇವರಾಜು, ಬ್ಯಾಡರಹಳ್ಳಿ ಮಹಾದೇವಯ್ಯ, ಅಗಸರಹಳ್ಳಿ ನರಸಿಂಹಮೂತರ್ಿ, ಗಿರೀಶ್, ಹಾಲುಗೋಣ ಆರ್.ನರಸಿಂಹಮೂತರ್ಿ ಹಾಜರಿದ್ದರು.
ಜಂಗಮರ ಜೋಳಿಗೆಯಲ್ಲಿ ಸಾಹಿತ್ಯ ತುಂಬಿದೆ
ಚಿಕ್ಕನಾಯಕನಹಳ್ಳಿ,ಜ.26 : ಜಂಗಮರ ಜೋಳಿಗೆಯಲ್ಲಿ ಸಾಹಿತ್ಯ ತುಂಬಿದ್ದು ಮಹಾನ್ ಪುರಷರ ಮಾರ್ಗದರ್ಶನಗಳು ಅಡಕವಾಗಿವೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಹಾಗೂ ಸೇವಾದೀಕ್ಷಾ ಸ್ವೀಕಾರ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು,  ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸುವಂತಹ ಬದುಕನ್ನು ಕಲಿಸುವ ಜಂಗಮರ ಶರಣರ ವಚನಗಳನ್ನು ನಾವು ಸಾಮಾನ್ಯರಿಗೆ ಉಣಬಡಿಸ ಬೇಕಾಗಿದ್ದು ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಸಮಾಜದ ಬಂಧುಗಳಿಗೆ ನಾವು ಮನವರಿಕೆ ಮಾಡಬೇಕಾಗಿದೆ,  ಆದರ್ಶ ಜೀವನದ ಗುಣಗಳನ್ನು ಶರಣ ಸಾಹಿತ್ಯದ ಮೂಲಕ ತಿಳಿಸಬೇಕಾಗಿರುವುದು ಶರಣ ಸಾಹಿತ್ಯ ಪರಿಷತ್ತಿನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬದುಕನ್ನು ಅರ್ಥಮಾಡಿಕೊಂಡು ಬಂದಂತಹ ಸಾಹಿತ್ಯ, ವಚನ ಸಾಹಿತ್ಯ ಮನುಷ್ಯನಿಗೆ ಸ್ವಲ್ಪಮಟ್ಟಿನ ಶಾಂತಿ ನೆಮ್ಮದಿಯನ್ನು ನೀಡುವುದೆಂದರೆ ಅಧ್ಯಯನದಿಂದ ಹಾಗೂ ಸಂಗೀತದಿಂದ ಇಂತಹ ಅಧ್ಯಯನ ಮಾಡುವುದನ್ನು ನಾವು ರೂಪಿಸಿಕೊಳ್ಳಬೇಕಾಗಿದೆ, ಈ ಅಧ್ಯಯನಕ್ಕೆ ವಚನಗಳು ತಮ್ಮದೇ ಆದಂತಹ ದಾರಿದೀಪವಾಗಿದ್ದು ಇಂತಹ ವಚನಗಳು ಮತ್ತು ಶರಣ ಸಾಹಿತ್ಯ ಕೇವಲ ಲಿಂಗಾಯಿತ, ವೀರಶೈವ ಧರ್ಮಕ್ಕೆ ಮಾತ್ರ ಸೇರಿದವಲ್ಲ ಹಾಗೂ ಲಿಂಗಾಯಿತ ವೀರಶೈವ ಎಂಬುದು ಜಾತಿಯೂ  ಅಲ್ಲ ಇವು ವೀರಶೈವ ಧರ್ಮವಾಗಿದ್ದು ಸಮಾಜದಲ್ಲಿ ಕೆಳಹಂತದವರ ದೀನ ದಲಿತರನ್ನು ಮೇಲೆತ್ತುವ ಹಾಗೂ ಸಮಾಜದಲ್ಲಿ ಬದುಕುವುದನ್ನು ಕಲಿಸುವಂತಹ ಧರ್ಮವಾಗಿದೆ, ಬಸವಣ್ಣನವರು ಹೇಳಿರುವಂತೆ ಅರಿವೇ ಗುರುವಾಗಿದ್ದು ಇಂತಹ ಜೀವನದ ಅನುಭವನ್ನು ತಿಳಿಸಿರುವಂತಹ ವಚನ ಸಾಹಿತ್ಯಗಳನ್ನು ಮನೆ ಮನಗಳಿಗೆ ಮುಟ್ಟಿಸುವಂತಹ ಕಾರ್ಯ ಈ ಶರಣ ಸಾಹಿತ್ಯ ಪರಿಷತ್ತಿನಿಂದ ಆಗಬೇಕಾಗಿದೆ ನಮ್ಮ ಜೀವನಕ್ಕೆ ಶಾಂತಿ ಸಿಗಬೇಕದಾರೆ ಅದು ಓದುವ ಹಾಗೂ ಇಂತಹ ಸಾಹಿತ್ಯಗಳ ವಿಚಾರದಾರೆಗಳಿಂದ ಮಾತ್ರ ಸಾದ್ಯವಾಗಿದ್ದು ನಾವು ಇಂತಹವುಗಳನ್ನು ಉಳಿಸ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಸುತ್ತೂರಿನಲ್ಲಿ ಸುಮಾರು 30ವರ್ಷಗಳಹಿಂದ ಉದ್ಘಾಟನೆಯಾದ ಈ ಶರಣ ಸಾಹಿತ್ಯ ಪರಿಷತ್ತು 30 ಜಿಲ್ಲೆ, 175ತಾಲ್ಲೂಕುಗಳಲ್ಲೂ ತನ್ನ ಶಾಖೆಯನ್ನು ಹೊಂದಿದೆ, ಕದಳಿ ಮಹಿಳಾ ವೇದಿಕೆ ಎಂಬ ಹೆಸರಿನ ಶರಣೆಯರ ತಂಡವು ಸಹ ಇದರಡಿಯಲ್ಲಿ ತನ್ನ ಕೆಲಸ ಮಾಡುತ್ತಿದ್ದು ಶರಣ ಸಾಹಿತ್ಯ ಪರಿಷತ್ತು ಎಂದರೆ ಕೇವಲ ಲಿಂಗಾಯಿತ ವೀರಶೈವರ ಪರಿಷತ್ತಲ್ಲ,  ಪರಿಷತ್ತಿನಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಯವರು ಸಹ ಇದ್ದಾರೆ,  ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ನೀಡುವ ಉದ್ದೇಶದಿಂದ ಹಾಗೂ ಜೀವನ ಮೌಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದ್ದು ರಾಷ್ಟ್ರಕ್ಕೆ ರಾಷ್ಟ್ರಪತಿ ಎಂಬಂತಹ ನಾಮಂಕಿತವನ್ನು ನೀಡಿದಂತಹ ತೀನಂಶ್ರೀಯವರು ಇದ್ದಂತಹ ಈ ತಾಲ್ಲೂಕಿನಲ್ಲಿ ಶರಣಸಾಹಿತ್ಯ ಪರಿಷತ್ತು ತನ್ನ ಕೇಲಸವನ್ನು ಕ್ರೀಯಾಶಿಲತೆಯಿಂದ ಮಾಡುಲಿದೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಸಾಸಲಿನ ಆಡಿಟರ್ ಚಂದ್ರಣ್ಣ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಚನ್ನಬಸವಯ್ಯ, ಸದಸ್ಯೆ ಶಶಿಕಲಾಜಯದೇವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಿ.ರವಿಕುಮಾರ್ ನಿರೂಪಿಸಿದರೆ, ಪರಿಷತ್ತಿನ ಅಧ್ಯಕ್ಷ ಟಿ.ಬಿ.ಮಲ್ಲಿಕಾಜರ್ುನ್ ಎಲ್ಲರನ್ನು ಸ್ವಾಗತಿಸಿದರು. ಮಲ್ಲಿಗೆ ಪ್ರಾಥರ್ಿಸಿದರು.








Saturday, January 23, 2016

ರೋಹಿತ್ ವೇಮುಲು ಪ್ರಕರಣವನ್ನು ಸಿಬಿಐಗೆ ವಹಿಸಲು ದಲಿತ ವಿದ್ಯಾಥರ್ಿ ಒಕ್ಕೂಟದ ಒತ್ತಾಯ
ಚಿಕ್ಕನಾಯಕನಹಳ್ಳಿ,ಜ.23 : ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲುರವರ ಆತ್ಮಹತ್ಯೆ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸುವಂತೆ ಆಗ್ರಹಿಸಿ ತಾಲ್ಲೂಕು ದಲಿತ ವಿದ್ಯಾಥರ್ಿ ಒಕ್ಕೂಟದ ವಿದ್ಯಾಥರ್ಿಗಳು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊಸ ಬಸ್ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನೆಹರು ಸರ್ಕಲ್ನಲ್ಲಿ ಮಾನವ ಸರಪಳಿ ನಿಮರ್ಿಸಲಾಯಿತು. ಪ್ರತಿಭಟನಾ ಮೆರವಣಿಗೆ ಶೆಟ್ಟಿಕೆರೆ ಗೇಟ್,ಜೋಗಿಹಳ್ಳಿ ಗೇಟ್ ಮೂಲಕ ಸಾಗಿ ತಾಲ್ಲೂಕು ಕಛೇರಿಯಲ್ಲಿ ಸಮಾವೇಶಗೊಂಡಿತು. ತಹಶೀಲ್ದಾರ್ ಗಂಗೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
   ಜಿಲ್ಲಾ ದಲಿತ ವಿದ್ಯಾಥರ್ಿ ಒಕ್ಕೂಟದ ಸಂಚಾಲಕ ಜಿ.ಸಿ.ರಂಗಧಾಮಯ್ಯ ಮಾತನಾಡಿ, ಸ್ವತಂತ್ರ್ಯ ಬಂದು 69 ವರ್ಷ ಕಳೆದರೂ ದೇಶದಲ್ಲಿ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ನಡೆಯುತ್ತಲೇ ಇರುವುದು ದುರದೃಷ್ಠಕರ. ಪ್ರಜಾಪ್ರಭುತ್ವ ಉಳ್ಳವರ ಪಾಲಾಗುತ್ತಿದೆ. ಹೈದರಾಬಾದಿನ ಕೇಂದ್ರೀಯ ವಿ.ವಿ.ಯಲ್ಲಿ ಜಾತಿ ವ್ಯವಸ್ಥೆ ವಿಜೃಂಭಿಸುತ್ತಿರುವುದು ಅಪಾಯದ ಸೂಚನೆ. ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ನ 5 ಅಮಾಯಕ ದಲಿತ ವಿದ್ಯಾಥರ್ಿಗಳನ್ನು ಉಚ್ಛಾಟಸಿದ್ದ ಕುಲಪತಿ ಪ್ರೊ.ಅಪ್ಪಾರಾವ್ ಅವರನ್ನು ಕೂಡಲೇ ವಜಾಗೊಳಿಸಬೇಕು ಹಾಗೂ ರೋಹಿತ್ ವೇಮುಲು ಸಾವಿಗೆ ಕಾರಣರಾಗಿರುವ ಕೇಂದ್ರ ಸಚಿವರಾದ ಸಚಿವೆ ಸ್ಮೃತಿ ಇರಾನಿ ಮತ್ತು ಭಂಡಾರ ದತ್ತಾತ್ರೇಯ ಅವರನ್ನು  ಕೂಡಲೆ ಕೇಮದ್ರ ಸಂಪುಟದಿಂದ ಹೊರಗಿಡಬೇಕು  ಎಂದು ಒತ್ತಾಯಿಸಿದರು.
   ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಬಲಪಂತೀಯ ರಾಜಕೀಯ ಪ್ರೇರಿತ ಎಬಿವಿಪಿಯಂತಹ ಸಂಘಟನೆಯನ್ನು ಕಾಲೇಜು ಕ್ಯಾಂಪಸ್ಗಳಿಂದ ದೂರವಿಡಬೇಕು. ಹಾಗೂ ಮೃತ ರೋಹಿತ್ ಕುಟುಂಬಕ್ಕೆ ರೂ.50ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ಮುಖಂಡರಾದ ಲಿಂಗದೇವರು,ನಾರಾಯಣರಾಜು, ವಿದ್ಯಾಥರ್ಿಗಳಾದ ಮಣಿಕಂಠ, ವಿನಯ್ಕುಮಾರ್, ಮಂಜುನಾಥ್, ರೇಣುಕಪ್ರಸಾದ್, ಮಂಜುಳ, ಉಷಾ ಮತ್ತಿತರರು ಉಪಸ್ಥಿತರಿದ್ದರು.


67ನೇ ಭಾರತ ಗಣರಾಜ್ಯೋತ್ಸವ ದಿನಾಚಾರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜ.23 : 67ನೇ ಭಾರತ ಗಣರಾಜ್ಯೋತ್ಸವ ದಿನಾಚಾರಣೆಯು ಪಟ್ಟಣದಲ್ಲಿ ಜನವರಿ 26ರಂದು ಬೆಳಗ್ಗೆ 9ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಗಂಗೇಶ್ ಧ್ವಜಾರೋಹಣ ನೆರವೇರಿಸುವರು.
ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಾದ ಸ್ವಾಮಿ, ಚಿರಂಜೀವಿ, ಸ್ವಾತಿ.ಹೆಚ್.ಆರ್, ಬಿ.ವಿದ್ಯಾ, ರಾಕೇಶ್, ಗೃಹ ರಕ್ಷಕ ದಳದ ಘಟಕಾಧಿಕಾರಿ ಮಂಜುನಾಥ್ರಾಜ್ಅರಸ್, ಕಲಾವಿದ ಖಲಂದರ್ರವರಿಗೆ ಸನ್ಮಾನಿಸಲಾಗುವುದು.

ಬಿಜೆಪಿ ಪಕ್ಷದಲ್ಲಿ ತಾ.ಪಂ, ಜಿ.ಪಂ ಚುನಾವಣೆಗೆ ಅಭ್ಯಥರ್ಿಗಳ ಆಯ್ಕೆಗೆ ಗೊಂದಲ
ಚಿಕ್ಕನಾಯಕನಹಳ್ಳಿ, : ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಾಣೆಯ ಅಭ್ಯಥರ್ಿಗಳ ಆಯ್ಕೆ ವಿಚಾರದಲ್ಲಿ ತಾಲ್ಲೂಕು ಬಿಜೆಪಿಯಲ್ಲಿ ಗೊಂದಲ ಮುಂದುವರೆದಿದೆ, ಪಕ್ಷದ ಕಛೇರಿಯಲ್ಲಿ ಶನಿವಾರ ಸಂಜೆ ಕರೆಯಲಾಗಿದ್ದ ಕೋರ್ ಕಮಿಟಿ ಸಭೆಯೂ ಗೊಂದಲಕ್ಕೆ ತೆರೆ ಎಳೆಯುವಲ್ಲಿ ವಿಫಲವಾಗಿದೆ.
   ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ, ಗೊಂದಲ ನಿವಾರಣೆ ಉದ್ದೇಶದಿಂದ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಎನ್.ಬಿ.ನಂದೀಶ್, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಹಾಗೂ ಸ್ಥಳೀಯ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಒಮ್ಮತ ಮೂಡದ ಕಾರಣ  ಭಾನುವಾರ ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಯಿತು ಎಂದು ಹೇಳಿದರು.
  ಸಭೆಗೂ ಮುನ್ನ ತುಮಕೂರಿನಿಂದ ಬಂದಿದ್ದ ನಾಯಕರುಗಳು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಮನೆಗೆ ತೆರಳಿ ಮನ ಒಲಿಸಲು ಪ್ರಯತ್ನಿಸಿದರು ಆದರೂ ಜೆಸಿಎಂ ಸಭೆಗೆ ಹಾಜರಾಗಲಿಲ್ಲ ಎಂದು ತಿಳಿದು ಬಂದಿದೆ.
   ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ಕುಮಾರ್ ಇಬ್ಬರೂ ತಮ್ಮ ಬೆಂಬಲಿತ ಅಭ್ಯಥರ್ಿಗಳಿಗೆ ಟಿಕೆಟ್ ಕೊಡಿಸಬೇಕು ಎಂದು ಜಿದ್ದಿಗೆ ಬಿದ್ದಿರುವುದೇ ಈ ಗೊಂದಲಕ್ಕೆ ಕಾರಣ ಎಂದು ಹೆಸರು ಹೇಳಲು ಇಚ್ಚಿಸದ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.



Thursday, January 21, 2016


5ನೇ ವಾಡರ್್ನಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ : ಸಾರ್ವಜನಿಕರ ಆರೋಪ 
ಚಿಕ್ಕನಾಯಕನಹಳ್ಳಿಜ.21 : ಪಟ್ಟಣದ 5ನೇ ವಾಡರ್್ನ ಪೋಲಿಸ್ ಕ್ವಾಟ್ರಸ್ ಬಳಿಯಿಂದ ರೋಟರಿ ಶಾಲೆಯ ಸುತ್ತಮುತ್ತಲೂ ಸ್ವಚ್ಛತೆಯಿಲ್ಲದೆ ಅನೈರ್ಮಲ್ಯ ಹೆಚ್ಚಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.
  ಪಟ್ಟಣಕ್ಕೆ ಹೊಂದಿಕೊಂಡಂತೆ ವಿಸ್ತಾರಗೊಂಡಿರುವ  ಪೋಲಿಸ್ ಕ್ವಾಟ್ರಸ್ ಬಳಿ  ಯಾವುದೇ ಮೂಲಭೂತ  ಸೌಕಾರ್ಯವಿಲ್ಲದೆ ಇಲ್ಲಿನ ನಾಗರೀಕರು ಪರದಾಡುವಂತಾಗಿದೆ, ಈ ಭಾಗಕ್ಕೆ ಪುರಸಭೆ ವತಿಯಿಂದ ಸರಸ್ವತಿಪುರ ಎಂಬ ಹೆಸರಿಡಲಾಗಿದೆ.  ಇಲ್ಲಿ ಸುಮಾರು 6 ರಿಂದ 8 ಶಾಲಾ ಕಾಲೇಜುಗಳಿದ್ದು ಪ್ರತಿನಿತ್ಯ ಈ ಶೆಟ್ಟಿಕೆರೆ ರಸ್ತೆಯಲ್ಲಿ ಸುಮಾರು 5000ಮಕ್ಕಳು ಶಾಲಾ ಕಾಲೇಜಿಗೆ ಬಂದು ಹೋಗುತ್ತಾರೆ. ಹಾಗೂ ತಿಪಟೂರು ರಸ್ತೆಯಾದ್ದರಿಂದ ಹೆಚ್ಚಿನ ವಾಹನಗಳು ಶಾಲಾ ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ ಜೊತೆಗೆ ತಾಲ್ಲೂಕು ಸಬ್ ರಿಜಿಸ್ಟಾರ್ರವರ  ಕಛೇರಿಯು ಸಹ ಈ ವಾಡರ್್ನಲ್ಲಿದ್ದು ಗ್ರಾಮಾಂತರ ಜನರು ಸಹ ಹೆಚ್ಚಿನದಾಗಿ ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಬಂದು ಹೋಗುವ ಜಾಗವಾಗಿದೆ.
 ಈ ವಾಡರ್್ನಲ್ಲಿ ಪುರಸಭಾ ವತಿಯಿಂದ ಯಾವುದೇ ಚರಂಡಿಗಳ ವ್ಯವಸ್ಥೆಯಾಗಲಿ ರಸ್ತೆ ದೀಪಗಳ ವ್ಯವಸ್ಥೆಯಾಗಲಿ ನೀರಿನ ವ್ಯವಸ್ಥೇಯಾಗಲಿ ಇಲ್ಲವಾಗಿದೆ, ಕಾರಣ ವಾಡರ್್ನಲ್ಲಿರುವ ಜನರು ತಮ್ಮ ಮನೆಗಳ, ಹೋಟೆಲ್ಗಳ ಹಾಗೂ ಗ್ಯಾರೇಜ್ಗಳ ಕಲುಷಿತ ನೀರನ್ನು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬಿಡುವುದರಿಂದ ವಾಹನ ಸವಾರರು ರಸ್ತೆ ಮೇಲಿನ ಚರಂಡಿ ನೀರಿನಲ್ಲಿ ವಾಹನ ಹರಿಸಿದಾಗ ಆ ಕಲುಷಿತ ನೀರು ಪಾದಚಾರಿಗಳಿಗೆ ಸಿಡಿಯುತ್ತದೆ. ಇನ್ನು ಶಾಲಾ ಮಕ್ಕಳೂ ಸ್ವಚ್ಛತೆಯಿಂದ ಶಾಲೆಗೆ ಹೋಗಬೇಕಾದರೆ ಆ ನೀರನ್ನು ಮೈಗೆ ಸಿಡಿಸಿಕೊಂಡು ಸಮವಸ್ತ್ರ ಕೊಳಕು ಮಾಡಿಕೊಂಡು ಉದಾಹರಣೆಗಳೆಷ್ಟೊ,  ಶಾಲಾ ಆವರಣವಾಗಿದ್ದರು ಯಾವುದೇ ಸೂಚನಾ ಫಲಕಗಳಿಲ್ಲದಿರುವುದರಿಂದ,  ವಾಹನ ಸವಾರರು ಅಡ್ಡದಿಡ್ಡಿಯಾಗಿ ಚಲಿಸುವುದರಿಂದ ಈ ಭಾಗದಲ್ಲಿ ಅಪಘಾತಗಳು ಸವರ್ೆ ಸಾಮಾನ್ಯವಾಗಿದೆ ಇನ್ನೂ ಹೊಸ ಬಡಾವಣೆಗಳಾಗಿದ್ದು ಬೀದಿ ದೀಪಗಳ ವ್ಯವಸ್ಥೆ ಹಾಗೂ ಅವುಗಳ ನಿರ್ವಹಣೆ ಯಾರು ಕೇಳದಂತಾಗಿದೆ. ಇನ್ನೂ ಕುಡಿಯುವ ನೀರಿನ ಸರಬರಾಜು  10 ರಿಂದ 15 ದಿನಗಳಿಗೊಮ್ಮೆಬಿಡುತ್ತಾರೆ,  ಬೀದಿದೀಪ ಸರಿಪಡಿಸಿ ಎಂದು ಪುರಸಭೆಯವರಿಗೆ ತಿಳಿಸಿದರೆ 1 ತಿಂಗಳಾದರೂ ಈ ಕಡೆ ಬರುವುದಿಲ್ಲ ಇಲ್ಲಿ ಉಳಉಪ್ಪಟಗಳ ಕಾಟ ಹೆಚ್ಚಾಗಿದ್ದು ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು  ಕಾಯುವಂತಾಗಿದೆ ಒಟ್ಟಾರೆ ಸರಸ್ವತಿ ಪುರದ ಜನರ ಕಷ್ಟ ಹೇಳತೀರದಾಗಿದೆ ಈಗಲಾದರೂ ಸಂಬಂದಿಸಿದವರು ಇತ್ತ ಗಮನ ಹರಿಸುವರೇ ಎಂದು ಆ ಭಾಗದ ನಿವಾಸಿಗಳು ತಮ್ಮ ಅಳಲನ್ನು ಮಾಧ್ಯಮದವರೆದರು ತೋಡಿಕೊಂಡಿದ್ದಾರೆ. 

ಜ.24ರಂದು ಬನದ ಹುಣ್ಣಿಮೆ
ಚಿಕ್ಕನಾಯಕನಹಳ್ಳಿ,ಜ,21 : ಶ್ರೀ ಬನಶಂಕರಿ ಮತ್ತು ಚೌಡೇಶ್ವರಿ ಅಮ್ಮನವರ ಬನದ ಹುಣ್ಣಿಮೆ ಹಾಗೂ ಬೆಳ್ಳಿ ಕವಚ ಅಲಂಕಾರ ಮಹೋತ್ಸವವನ್ನು ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಇದೇ 24ರ ಭಾನುವಾರ ನಡೆಯಲಿದೆ ಎಂದು ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್ ತಿಳಿಸಿದ್ದಾರೆ.
ಬನದ ಹುಣ್ಣಿಮೆ ಪ್ರಯುಕ್ತ ಕೆರೆ ಬಾವಿಯಿಂದ ಅಮ್ಮನವರ ಕಳಸವನ್ನು ಮಂಗಳವಾದ್ಯದೊಂದಿಗೆ ವೀರಮಕ್ಕಳ ಜೊತೆಗೂಡಿ ದೇವಾಲಯಕ್ಕೆ ಕರೆತರುವುದು ನಂತರ ಬನಶಂಕರಿ ಅಮ್ಮನವರ ರಥೋತ್ಸವ ನಡೆಯಲಿದೆ, ಮಧ್ಯಾಹ್ನ 2.30ಕ್ಕೆ ಶ್ರೀ ಬನಶಂಕರಿ ಅಮ್ಮನವರ ಉಯ್ಯಾಲೆ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಂಗ ಸಂಘದ ನಿದರ್ೇಶಕ ನಟರಾಜು ತಿಳಿಸಿದ್ದಾರೆ.

ದೇಶ ಸುತ್ತಿ ನೋಡು ಇಲ್ಲ ಕೋಶ ಓದಿ ನೋಡು : ಬಿಇಓ ಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಜ.20 : ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಓದಿನ ಜತೆಗೆ ಪ್ರವಾಸ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
  ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಿಂದ ಉತ್ತರ ಕನರ್ಾಟಕ ಪ್ರವಾಸ ಹೊರಟ ಮಕ್ಕಳ ತಂಡಕ್ಕೆ ಶುಭಕೋರಿ ಮಾತನಾಡಿ, ಪರಿಶಿಷ್ಠ ಜಾತಿ ಹಾಗೂ ಪಂಗಡದ ಪ್ರೌಢಶಾಲಾ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗೆ ಸಕರ್ಾರ ಹಲವಾರು ಕಾರ್ಯಕ್ರಮ ಹಾಕಿಕೊಂಡಿದೆ, ಮಕ್ಕಳು ಸವಲತ್ತುಗಳನ್ನು ಬಳಸಿಕೊಂಡು ಜವಾಬ್ಧಾರಿಯುತ ಪ್ರಜೆಗಳಾಗಿ ಬೆಳೆಯಬೇಕು ಎಂದರು.
  ತಾಲ್ಲೂಕಿನ ಸಕರ್ಾರಿ ಶಾಲೆಗಳಿಂದ ಆಯ್ಧ 98 ಪ್ರೌಢಶಾಲೆ ಮಕ್ಕಳು ಪ್ರವಾಸಕ್ಕೆ ತೆರಳಿದರು. 4 ಶಿಕ್ಷಕರು, 2 ಮಾರ್ಗದಶರ್ಿಗಳು, 2 ಸಹಾಯಕರು ತಂಡದಲ್ಲಿ ಇದ್ದರು.


 ವಿವೇಕಾನಂದರ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಿದ ಶಾಲಾ ಮಕ್ಕಳು 
ಚಿಕ್ಕನಾಯಕನಹಳ್ಳಿ,ಜ.21 : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಸಾಸಲು ಸಕರ್ಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಾಂಪ್ರದಾಯಿಕ ಉಡುಗೆ ಹಾಗೂ ಪೂರ್ಣಕುಂಭದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ಭಾವಚಿತ್ರ ಹಿಡಿದು ಮೆರವಣಿಗೆ ಮಾಡುವ ಮೂಲಕ  ವಿವೇಕಾನಂದರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
 ವಿದ್ಯಾಥರ್ಿಗಳು ಸೀರೆ, ಶೆಲ್ಯ, ಪಂಚೆ ತೊಟ್ಟು ಗಮನ ಸೆಳೆದರು. ದೊಡ್ಡವರು ಹಾಗೂ ಶಿಕ್ಷಕರು ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಗ್ರಾಮಸ್ಥರು ವಿವೇಕಾನಂದರ ಭಾವಚಿತ್ರಕ್ಕೆ ಆರತಿ ಬೆಳಗಿದರು. ವಿವೇಕಾನಂದರ ಸ್ಫೂತರ್ಿ ಘೋಷಗಳನ್ನು ಕೂಗುತ್ತ ಮಕ್ಕಳು ಮೆರವಣಿಗೆಯಲ್ಲಿ ಸಾಗಿಬಂದರು.
   ನಂತರ ನಡೆದ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಜಿ.ಸಂತೋಷ್ ಮಾತನಾಡಿ, ದೀನ ದಲಿತರಲ್ಲಿ ದೇವರನ್ನು ಕಾಣು ಎಂದು ಹೇಳಿದ ವಿವೇಕಾನಂದರ ಮಾತನ್ನು ಪ್ರತಿಯೊಬ್ಬ ಬಾಲ್ಯದಲ್ಲೇ ಅರ್ಥಮಾಡಿಕೊಂಡರೆ ಸಮಾಜ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಗ್ರಾಮದ ಮುಖಂಡ ಆಡಿಟರ್ ಚಂದ್ರಣ್ಣ ಮಾತನಾಡಿ, ವಿವೇಕಾನಂದರ ವಿಚಾರಧಾರೆಯನ್ನು ಯುವಕರಿಗೆ ದಾಟಿಸುವುದು ಮುಖ್ಯ ಎಂದರು. ತಮ್ಮಡಿಹಳ್ಳಿ ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಟಿ.ಜಯಣ್ಣ ಮಾತನಾಡಿದರು. ಶಿಕ್ಷಕರಾದ ರಾಜಶೇಖರಯ್ಯ ನಿರೂಪಿಸಿ, ಲೋಕೇಶ್ ಸ್ವಾಗತಿಸಿದರು. ಕುಮಾರಸ್ವಾಮಿ ಪ್ರಗತಿ ವರದಿ ವಾಚಿಸಿದರು. ಜೆ.ಪ್ರವೀಣ್ ವಂದಿಸಿದರು.

ಹಿಂದಿ ಭಾಷೆ ನೆಪದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರ ಧಾವಿಸುತ್ತಿದ್ದರು
ಚಿಕ್ಕನಾಯಕನಹಳ್ಳಿ,ಜ.21 : ಮಹಾತ್ಮಾಗಾಂಧೀಜಿ 1914ರಿಂದಲೂ ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಮುಂದಾದವರು, ಏಕೆಂದರೆ ಭಾರತದಲ್ಲಿ ಹಿಂದಿ ಭಾಷೆ ಹೆಚ್ಚಿನ ಜನ ಮಾತನಾಡುತ್ತಿದ್ದರು, ಭಾಷೆಯ ನೆಪದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿ ಜನರನ್ನು ಕರೆತರುತ್ತಿದ್ದರು  ಎಂದು ಬಿ.ಇ.ಓ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಡಿವಿಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಹಿಂದಿ ಶಿಕ್ಷಕರಿಗೆ ಕಾಯರ್ಾಗಾರ, ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ರವರು ಬರೆದಿರುವ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಹಿಂದಿ ಭಾಷೆಯ ಸಿ.ಡಿ.ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿರುವ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಹಿಂದಿ ಶಿಕ್ಷಕರು ಕಡ್ಡಾಯವಾಗಿ ಖರೀದಿಸಿ ಪುಸ್ತಕದಲ್ಲಿರುವ ಅಂಶಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧಿಸಿ ಎಂದು ಸಲಹೆ ನೀಡಿದರು.
ಎಂ.ವಿ.ನಾಗರಾಜ್ರವರು ಹಿರಿಯರು, ಅನುಭವಸ್ಥರು ಅವರು ಬರೆದಿರುವ ಪುಸ್ತಕ ಕನ್ನಡದಲ್ಲಿ ಉತ್ತಮವಾಗಿ ಮೂಡಿ ಬಂದಿದ್ದು ಪ್ರತಿಯೊಬ್ಬರಿಗೂ ಅರ್ಥವಾಗಲಿದೆ, ಶಾಲಾ ಶಿಕ್ಷಕರು ಪುಸ್ತಕವನ್ನು ಖರೀದಿಸಿ, ಕಛೇರಿಗೆ ಅಜರ್ಿ ನೀಡಿದರೆ ಶಾಲಾ ಸಂಚಿತ ನಿಧಿಯಿಂದ ಪುಸ್ತಕ ತೆಗೆದುಕೊಳ್ಳಲು ಅನುಮತಿ ನೀಡುತ್ತೇನೆ ಎಂದ ಅವರು ತಾಲ್ಲೂಕಿನ ಹಿಂದಿ ಭಾಷಾ ಬೋಧಕರ ಸಂಘ ಕ್ರಿಯಾಶೀಲವಾಗಿದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆಯಾಗಿ ಸಾವಿರ ಪ್ರತಿಗಳು ಖಚರ್ಾಗಿವೆ, ಈಗ ಬಿಡುಗಡೆಯಾಗುತ್ತಿರುವ ಪುಸ್ತಕ ಎರಡನೇ ಮುದ್ರಣವಾಗಿದೆ, ಪುಸ್ತಕದಲ್ಲಿರುವ ಅಂಶಗಳನ್ನು ತಿಳಿದುಕೊಂಡು ಶಿಕ್ಷಕರು ಟೀಕೆ, ಪ್ರಶಂಸೆ ಮಾಡಬಹುದಾಗಿದೆ ಎಂದರು.
ಬಿಆರ್ಸಿ ತಿಮ್ಮರಾಯಪ್ಪ ಮಾತನಾಡಿ, ಹಿಂದಿ ಭಾಷೆ ಜೋಡಣೆ ಭಾಷೆ, ಶಿಕ್ಷಕರು ಮಕ್ಕಳಿಗೆ ಮನಮುಟ್ಟುವಂತೆ ಭಾಷೆಯ ಬಗ್ಗೆ ಬೋಧನೆ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಸಿ.ಜಿ.ಸುರೇಶ್, ನೋಡಲ್ ಅಧಿಕಾರಿ ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಬೋಧನೆ ಬಗ್ಗೆ ಇರುವ ಸಿ.ಡಿ.ಬಿಡುಗಡೆ ಮಾಡಲಾಯಿತು. ತಾಲ್ಲೂಕು ಪ್ರೌಡಶಾಲಾ ಹಿಂದಿ ಭಾಷಾ ಬೋಧಕರ ಸಂಘದ ವತಿಯಿಂದ ತಾಲ್ಲೂಕಿನ ಹಿಂದಿ ಶಿಕ್ಷಕರುಗಳಿಗೆ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರೌಡಶಾಲಾ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪುಟ್ಟಣ್ಣ ಸ್ವಾಗತಿಸಿದರು. ಸೌಭಾಗ್ಯಮ್ಮ ನಿರೂಪಿಸಿದರು, ಗಂಗಾಧರ್ ವಂದಿಸಿದರು. ಶಿಕ್ಷಕರಾದ ಅರುಣ್, ಗುರುಸ್ವಾಮಿನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ವಿದ್ಯುತ್ ಉಳಿಸಿ ತರಬೇತಿ ಕಾಯರ್ಾಗಾರ



ಚಿಕ್ಕನಾಯಕನಹಳ್ಳಿ,ಜ.21 : ಜನಸಂಖ್ಯೆ ಹೆಚ್ಚಳ, ಕೈಗಾರಿಕೀಕರಣ ಹಾಗೂ ಯಾಂತ್ರಿಕ ಬಳಕೆಯಿಂದ ದಿನದಿಂದ ದಿನಕ್ಕೆ ವಿದ್ಯುತ್ ಉತ್ಪಾದನೆಗಿಂತ ಬಳಕೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಅವಶ್ಯಕತೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಕೆ ಮಾಡುವುದನ್ನು ಕಲಿತು ವಿದ್ಯುತ್ ಉಳಿತಾಯ ಮಾಡಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿ ಈರಣ್ಣ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಸ್ಕಾಂ ಮತ್ತು ಮಹಾತ್ಮಗಾಂಧಿ ರೂರಲ್ ಡೆವಲಪ್ಮೆಂಟ್ ಅಂಡ್ ಯೂತ್ ವೆಲ್ಫೇರ್ ಸೆಂಟರ್ ವತಿಯಿಂದ ವಿದ್ಯುತ್ ಸುರಕ್ಷತೆ ಹಾಗೂ ಉಳಿತಾಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಮನುಷ್ಯನಿಗೆ ಆಹಾರ, ನೀರು, ಗಾಳಿ ಬೆಳಕು ಹೇಗೆ ಮೂಲಭೂತ ಅವಶ್ಯಕತೆಗಳಾಗಿದೆ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಇಲ್ಲದೇ ಸಾರ್ವಜನಿಕರು ಬದುಕುವುದು ಕಷ್ಟವಾಗಿದೆ, ಆಧುನಿಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಮನುಷ್ಯನ ದಿನನಿತ್ಯದ ಪ್ರತಿಯೊಂದು ಚಟುವಟಿಕೆಗೂ ವಿದ್ಯುತ್ ಅಗತ್ಯವಾಗಿದೆ, ಗೃಹಬಳಕೆಗೆ, ಕೃಷಿ ವಲಯಕ್ಕೆ, ಸಾರ್ವಜನಿಕ ಉಪಯೋಗಕ್ಕೆ, ರಕ್ಷಣಾ ವಲಯಕ್ಕೆ, ಕೈಗಾರಿಕೆಗೆ, ಶೈಕ್ಷಣಿಕ ವಲಯಕ್ಕೆ, ವಾಣಿಜ್ಯೋದ್ಯಮಕ್ಕೆ ಹೀಗೆ ಪ್ರತಿಯೊಂದಕ್ಕೂ ವಿದ್ಯುತ್ ಅವಲಂಬಿತರಾಗಿದ್ದೇವೆ ಆದ್ದರಿಂದ ವಿದ್ಯುತ್ ಉಳಿತಾಯ ಮಾಡುವುದು ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಶೈಲೇಂದ್ರಕುಮಾರ್ ಮಾತನಾಡಿ, ವಿದ್ಯುತ್ ಮಿತವಾಗಿ ಬಳಕೆ ಮಾಡುವುದರ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭವಾನಿ ಸ್ತ್ರೀಶಕ್ತಿ ಸಂಘದ ಶುಭಾ, ವಿದ್ಯಾಥರ್ಿನಿ ಜ್ಯೋತಿ, ಗ್ರಾ.ಪಂ.ನೌಕರ ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ನಟೇಶ್ಬಾಬು, ರವೀಂದ್ರಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.





Tuesday, January 19, 2016


ವಿವೇಕಾನಂದರು ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ  ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ
 ಚಿಕ್ಕನಾಯಕನಹಳ್ಳಿ,: ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು, ನಮ್ಮ ಸಂಸ್ಕೃತಿ, ಗುರುಹಿರಿಯರು ಹಾಗೂ ಪೂರ್ವಜರನ್ನು ಮರೆತಾಗ ಭಾರತ ನಾಶವಾದಂತೆ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಅಭಾವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 154ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಯುವ ಘರ್ಜನೆಯ ಸಮಾವೇಶದಲ್ಲಿ ಮಾತನಾಡಿ, ವಿದ್ಯಾಥರ್ಿಗಳು ತಮ್ಮಲ್ಲಿರುವ ಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೇ ದೇಶಕ್ಕಾಗಿ ಉಪಯೋಗಿಸಿ, ದೇಶ ನಮಗೆ ಏನು ಮಾಡಿದೆ ಎಂಬುವುದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಮೂಡಿಬರಬೇಕಾಗಿದೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುಲು ಶ್ರಮಿಸಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು ಎಂದರು. ವಿಶ್ವದಾದ್ಯಂತ ತಮ್ಮ ಅಪಾರ ಪಾಂಡಿತ್ಯದ ಮೂಲಕ ಜ್ಞಾನವನ್ನು ವಿಶ್ವಕ್ಕೆ ಹರಡಿ ಮಾದರಿಯಾದವರು ಸ್ವಾಮಿವಿವೇಕಾನಂದರು
ಅಂಕಣಕಾರ ಗಿರೀಶ್ಭಾರಧ್ವಾಜ್ ಮಾತನಾಡಿ, ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಚಂದ್ರಶೇಖರ್ ಆಜಾದ್, ಮದನ್ಲಾಲ್ದಿಂಗ್ರ, ದಿ.ರಾಷ್ಟ್ರಪತಿ ಅಬ್ದುಲ್ಕಲಾಂ, ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೂ ಸ್ವಾಮಿ ವಿವೇಕಾನಂದರು ಆದರ್ಶವಾಗಿದ್ದಾರೆ, ಸ್ವಾಮಿ ವಿವೇಕಾನಂದರು ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ, ಸ್ವಾಮಿ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚರಿಸಿ ಇಲ್ಲಿನ ಬಡತನವನ್ನು ನೆನೆದು ಕಣ್ಣೀರಿಟ್ಟು ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಪ್ರಪಂಚದಾದ್ಯಂತ ಸಂಚರಿಸಿ ಭಾರತದ ಸಂಸ್ಕೃತಿಯನ್ನು ಬೆಳೆಸಿದರು, ಭಾರತ ಇಂಗ್ಲೀಷರ ಮೆಕಾಲೆ ಶಿಕ್ಷಣ ಪದ್ದತಿ ಜಾರಿಗೆ ಇದೆ ಇದನ್ನು ತೊಡೆದು ಹಾಕಿ ಸ್ವಾಮಿವಿವೇಕಾನಂದರ ಶಿಕ್ಷಣ ಪದ್ದತಿಯನ್ನು ತಂದಾಗ ಮಾತ್ರ ಭಾರತ ಪುನಹ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಎಬಿವಿಪಿ ಸಂಘಟನಾ ಕಾರ್ಯದಶರ್ಿ ಸಿದ್ದುಮದನಕಂಡಿ ಮಾತನಾಡಿ, ಯುವಕರು ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಚಿಂತಿಸಬೇಕಾಗಿದೆ, ಮಹಿಳೆಯರನ್ನು ಗೌರವಿಸಬೇಕು, ಮಹಿಳೆಯರು ವಿಶ್ವಸುಂದರಿಯಾಗುವ ಬದಲು ವಿಶ್ವಕ್ಕೆ ಮಾದರಿಯಾಗಬೇಕು, ಯುವಕರು ಸಿನಿಮಾದಲ್ಲಿ ನಾಯಕರಾಗುವ ಬದಲು ದೇಶ ಕಟ್ಟುವ ನಾಯಕರಾಗಬೇಕು ಎಂದರು.
ಉಪನ್ಯಾಸಕ ಧನಂಜಯ್ ಮಾತನಾಡಿ, ಇನ್ನೂರು ವರ್ಷಗಳು ನಾವು ಪರಕೀಯರ ಅಡಿಯಾಳಾಗಿ ಬದುಕಿರುವುದರಿಂದ ಇನ್ನೂ ನಾವು ವಿದೇಶಿ ಸಂಸ್ಕೃತಿಯಿಂದ ಹೊರಬಂದಿಲ್ಲ, ಪ್ರಪಂಚದ ಹಲವಾರು ನಾಗರೀಕತೆಗಳು ನಶಿಸಿಹೋಗಿದ್ದರೂ,  ಭಾರತ ಮಾತ್ರ ಹಿಂದೂ ನಾಗರೀಕತೆಯನ್ನು ಉಳಿಸಿಕೊಂಡು ಬಂದಿದ್ದೇವೆ, ದೇಶದಲ್ಲಿ ಸಂತರು, ಋಷಿ ಮುನಿಗಳು ಮಹನೀಯರು ನಮ್ಮ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ಸ್ವತಂತ್ರ್ಯ ತಂದುಕೊಟ್ಟಿದ್ದಾರೆ, ಹಿಂದು ದೇಶ ಕಟ್ಟವು ಜವಬ್ದಾರಿ ಯುವಕರ ಮೇಲಿದೆ ಎಂದರು.
ಸಬ್ಇನ್ಸ್ಪೆಕ್ಟರ್ ವಿಜಯಕುಮಾರ್,  ಕಾಶಿಪ್ರಜ್ವಲ್, ದರ್ಶನ್, ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಜಾಗತೀಕರಣದ ಬದುಕಿನಲ್ಲಿ ಕೃಷಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ
ಚಿಕ್ಕನಾಯಕನಹಳ್ಳಿ,ಜ.19:   ಮಿತಿಮೀರಿ ಬೆಳೆಯುತ್ತಿರುವ ಜಾಗತೀಕರಣದ ಬದುಕು ಹಾಗೂ ಮನುಷ್ಯನ ವೇಗದ ಬದುಕಿನ ನಡುವೆ ಸುಸ್ಥಿರ ಕೃಷಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಹುಳಿಯಾರು ಬಿ.ಎಂ.ಎಸ್. ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂತರ್ಿ ಬಿಳಿಗೆರೆ ಹೇಳಿದರು.
       ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಯುವಸಪ್ತಾಹ ದಿನದ ಸಮಾರೋಪ ಸಮಾರಂಭದಲ್ಲಿ ಸುಸ್ಥಿರ ಕೃಷಿ-ಸುಸ್ಥಿರ ಜೀವನ ವಿಷಯವನ್ನು ಕುರಿತು ಮಾತನಾಡಿದರು.  ವಿದ್ಯಾಥರ್ಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಬದಲಾಗಲು ಸಾಧ್ಯ.  ನಮ್ಮಲ್ಲಿನ ಆಲೋಚನಾ ಕ್ರಮಗಳು ಬದಲಾಗಿ ನಾವು ಸಾಗುತ್ತಿರುವ ದಾರಿ ಮುಖ್ಯವಾಗುವ ಜೊತೆ ಗುರಿಯೂ ಬಹಳ ಮುಖ್ಯ ಎಂದು ತಿಳಿಸಿದರು.  ಎಲ್ಲರನ್ನು ಬದುಕಲು ಬಿಡುವುದೇ ಸುಸ್ಥಿರ ಜೀವನದ ಉದ್ದೇಶವಾಗಿದ್ದು, ಇಂದು ನೀರಾವರಿ ಭೂಮಿ ಕಣ್ಮರೆಯಾಗುತ್ತಿದ್ದು, ನಾವು ಸೇವಿಸುವ ಗಾಳಿ, ನೀರು ಮಲೀನಗೊಳ್ಳುತ್ತಿದ್ದು ಅನ್ನದ ಗುಣ ಸರ್ವನಾಶವಾಗಿದೆ ಎಂದು ಹೇಳುತ್ತಾ, ಮುಂದಿನ ಯುವ ಸಮುದಾಯ ಕೃಷಿಯುತ್ತ ತಮ್ಮ ಗಮನವನ್ನು ಹರಿಸಿದ್ದಲ್ಲಿ ಮುಂದಿನ ದಿನದಲ್ಲಿ ಆಶಾದಾಯಕ ಬೆಳವಣಿಗೆಯಾಗುತ್ತದೆ.  ಇಂತಹ ಆಲೋಚನೆಯನ್ನು ಇವತ್ತಿನ ಯುವಕರು ಮಾಡಬೇಕು ಎಂದು ತಿಳಿಸಿದರು.
       ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ಎಸ್. ಶಿವಕುಮಾರಸ್ವಾಮಿ ಮಾತನಾಡಿ ವಿದ್ಯಾಥರ್ಿಗಳಿಗೆ ಬದುಕಿನ ಪಾಠ ಅತ್ಯಗತ್ಯ.  ಅವರು ತಮ್ಮ ನೈತಿಕವಾದ ಹಕ್ಕುಗಳನ್ನು ತಿಳಿದುಕೊಂಡು ಮನುಷ್ಯತ್ವದ ಗುಣ ಬೆಳೆಸಿಕೊಂಡು ವಿವೇಕ ಕುರಿತು ಬದುಕಿನಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ನುಡಿದರು.
       ಸಮಾರಂಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹೆಚ್.ಎಸ್. ಶಿವಯೋಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ರವಿಕುಮಾರ್. ಸಿ ಮತ್ತು ಡಾ. ಸಿ.ಕೆ. ಶೇಖರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದು, ಕು. ರೋಜಾ ನಿರೂಪಿಸಿ, ಕು. ಜಯಲಕ್ಷ್ಮಿ ಸ್ವಾಗತಿಸಿ, ಶ್ರೀನಿವಾಸ. ಎ.ಎನ್ ವಂದಿಸಿದರು.