Thursday, June 9, 2016


ಗಾಳಿಮಳೆಗೆ ಹೆಂಚುಗಳು ಪುಡಿಪುಡಿ
ಚಿಕ್ಕನಾಯಕನಹಳ್ಳಿ,ಜೂ.09 : ತಾಲ್ಲೂಕಿನ ಹಂದನಕೆರೆ ಹೋಬಳಿ ಬಂದ್ರೆಹಳ್ಳಿ ತಾಂಡ್ಯದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ 16ಕ್ಕೂ ಹೆಚ್ಚು ಮನೆಗಳ ಹೆಂಚು ಹಾಗೂ ತಗಡಿನ ಶೀಟು ಹಾರಿ ಹೋಗಿದೆ.
 ಬಂದ್ರೆಹಳ್ಳಿ ತಾಂಡ್ಯದ  ಗಂಗಾಧರನಾಯ್ಕ, ಸೋಮ್ಲಾನಾಯ್ಕ, ಸೋಮ್ಲಬಾಯಿ, ರೂಪಾಬಾಯಿ, ಚಂದ್ರನಾಯ್ಕ, ಕರಿಯಾನಾಯ್ಕ, ರಾಮಾನಾಯ್ಕ, ರಾಜಾನಾಯ್ಕ, ಗೌರಿಬಾಯಿ, ಕವಿತಬಾಯಿ, ಸಾವಿತ್ರಿಬಾಯಿ, ರಾಜಾನಾಯ್ಕ, ಉಮೇಶ್ನಾಯ್ಕ, ಕಾಳಾನಾಯ್ಕ, ಇವರು  ವಾಸಿಸುತ್ತಿದ್ದ ಜನರು ಮಳೆಗಾಳಿಯಿಂದಾಗಿ ರಾತ್ರೆಯೆಲ್ಲಾ ಪರದಾಡುವಂತಾಯಿತು, ಇವರ ಮನೆಗಳ ಹೆಂಚುಗಳು ಭಾಗಶಃ ಹಾರಿಹೋಗಿದೆ. ಈ ಸಂಬಂಧ ಹಂದನಕೆರೆ ಕಂದಾಯಾಧಿಕಾರಿ ತಿಪ್ಪೇಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಸುರಿದ ಮಳೆಯ ವಿವರ: ತಾಲ್ಲೂಕಿನಲ್ಲಿ ಬುಧವಾರ ತಾಲೂಕಿನ 7ಕಡೆ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ.
ಚಿಕ್ಕನಾಯಕನಹಳ್ಳಿ-13..ಮಿಮೀ, ಸಿಂಗದಹಳ್ಳಿ-10.2..ಮಿಮೀ, ಶೆಟ್ಟಿಕೆರೆ..13.ಮಿಮೀ, ದೊಡ್ಡ ಎಣ್ಣೆಗೆರೆ 50.2.ಮಿಮೀ, ಮತಿಘಟ್ಟ 25.4.ಮಿಮೀ,, ಬೋರನಕಣಿವೆ 33.4, ಹುಳಿಯಾರು.50.3.ಮಿಮೀ ಮಳೆಯಾಗಿದೆ.  ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿವೆ.
ಚಿಕ್ಕನಾಯಕನಹಳ್ಳಿ,ಜೂ.9: ಬುಧವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪಟ್ಟಣದ 6ನೇ ವಾಡ್ ಕೇದಿಗೆಹಳ್ಳಿ ಗುಂಡು ತೋಪಿನಲ್ಲಿ ವಾಸವಾಗಿರುವ ಅಲೆಮಾರಿ ಸುಡುಗಾಡು ಸಿದ್ಧರ ಗುಡಿಸಲಿಗೆ ನೀರು ನುಗ್ಗಿದೆ.
  ಅಖಿಲ ಕನರ್ಾಟಕ ಸುಡುಗಾಡು ಸಿದ್ಧ ಮಹಾಸಭಾದ ಜಿಲ್ಲಾ ಅಧ್ಯಕ್ಷ ವೆಂಕಟೇಶಯ್ಯ ಮಾತನಾಡಿ, ಪ್ರತೀ ಮಳೆಗಾಲ ಬಂತೆಂದರೆ ನಮಗೆ ಜೀವ ಭಯ ಶುರುವಾಗುತ್ತದೆ. ಮಳೆ ನೀರು ವಾಸದ ಗುಡಿಸಲುಗಳಿಗೆ ನುಗ್ಗುತ್ತದೆ. ಕಳೆದ ಮಂಗಳವಾರ ರಾತ್ರಿ ಸುರಿದ ಮಳೆಗೆ ಏಕಾ ಏಕಿ ನೀರು ನುಗ್ಗಿ ಗುಡಿಸಲುಗಳು ಜಲಾವೃತವಾದವು. ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. ಗುರುವಾರ ಬೆಳಗಿನಿಂದಲೂ ಮಳೆ ಬಿಟ್ಟೂ ಬಿಟ್ಟು ಸುರಿಯುತ್ತಿದ್ದು ಮತ್ತೆ ಗುಡಿಸಲುಗಳಿಗೆ ನೀರು ನುಗ್ಗುವ ಭಯ ಕಾಡುತ್ತಿದೆ.
    ಗುಡಿಸಲುಗಳ ಮೇಲೆ ವಿದ್ಯುತ್ ತಂತಿಗಳು ಆದು ಹೋಗಿದ್ದು  ಮಳೆಗಾಲದಲ್ಲಿ ಅನಾಹುತ ಆಗುವ ಸಂಭವವಿದೆ. ಅಲ್ಲದೆ ಪಕ್ಕದಲ್ಲೇ ಇರುವ ದೊಡ್ಡ ಹುಣುಸೇಮರ ಮಳೆಗಾಳಿಗೆ ಉರುಳಿದರೆ ಜೀವ ಹಾನಿ ಸಂಭವಿಸುವ ಅಪಾಯ ಇದೆ ಎಂದರು.
   ಮಳೆ ಬಂದ ತಕ್ಷಣ ವಿಷ ಜಂತುಗಳು ಗುಡಿಸಲು ಒಳಗೆ ನುಗ್ಗುತ್ತವೆ. ಕಳೆದ 25 ವರ್ಷಗಳಿಂದ 15 ಸುಡುಗಾಡು ಸಿದ್ಧರ ಕುಟುಂಬಗಳು ಇಲ್ಲೇ ವಾಸವಾಗಿವೆ. ಪುರಸಭೆಯಿಂದ ನಿವೇಶನ ಒದಗಿಸಿ ಒಂದು ಸೂರು ಕಟ್ಟಿಕೊಳ್ಳಲು ಅನುವು ಮಾಡಿ ಕೊಡುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ನಿವೇಶನ ಹಾಗೂ ಆಶ್ರಯ ಮನೆ ಒದಗಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದೇವೆ ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.

ವಕೀಲರಿಂದ ನ್ಯಾಯಾಲಯ ಬಹಿಷ್ಕಾರ
ಚಿಕ್ಕನಾಯಕನಹಳ್ಳಿ,ಜೂ.9: ಉತ್ತಮ ಸಮಾಜ ನಿಮರ್ಾಣಕ್ಕೆ ನ್ಯಾಯದಾನ ಮಾಡುವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಕೀಲರಿಗೇ ನ್ಯಾಯಾಲಯದಲ್ಲಿ ಕೂರಲು ಸ್ಥಳಾವಕಾಶ ಹಾಗೂ ಮೂಲ ಸೌಕರ್ಯಗಳು ಇಲ್ಲದ ಕಾರಣ ವಕೀಲರು ಬೇಸತ್ತು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದು ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ನ್ಯಾಯಾಲಯದ ಆವರಣದಿಂದ ತಾಲೂಕು ಕಛೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ವಕೀಲರು,  ತಾಲೂಕು ಕಛೇರಿ ತಲುಪಿ ಘೋಷಣೆ ಕೂಗಿದರು. ನ್ಯಾಯಾಲಯದ ಕಳೆದ 10 ವರ್ಷಗಳ ಹಿಂದೆ ನೂತನವಾಗಿ ನಿಮರ್ಾಣಗೊಂಡ ನ್ಯಾಯಾಲಯ ಕಟ್ಟಡದಲ್ಲಿ ಮೂರು ಹಂತದ ನ್ಯಾಯಾಲಯಗಳಿದ್ದು,  ಇಲ್ಲಿ 70ಕ್ಕೂ ಹೆಚ್ಚು ವಕೀಲರು ಹಾಗೂ ಮಹಿಳಾ ವಕೀಲರು ದಿನನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು,  ವಕೀಲರುಗಳಿಗೆ ಕೂರಲು ಸರಿಯಾದ ಸ್ಥಳವಕಾಶವಿಲ್ಲದಿರುವುದರಿಂದ ಬೇಸತ್ತು ಜೂನ್ 9 ರಂದು ಸಾಂಕೇತಿಕವಾಗಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ಹಾಜರಾಗದೇ ವಕೀಲರು ಪ್ರತಿಭಟಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
 ಕೂರಲು ಸೂಕ್ತವಾದ ಕಟ್ಟಡ ನಿಮರ್ಿಸಬೇಕು ಹಾಗೂ ಸಾರ್ವಜನಿಕರು ನ್ಯಾಯಾಲಯಕ್ಕೆ ಬಂದರೆ ಅವರಿಗೂ ಕೂರಲು ಸರಿಯಾದ ವ್ಯವಸ್ಥೆ, ವಕೀಲರ ಭವನ ಸೇರಿದಂತೆ  ಇತರೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಮಾತನಾಡಿ, ಕಾನೂನು ಸಂಸದೀಯ ಸಚಿವರು ನಮ್ಮ ವಕೀಲರ ಸಂಘವೇ ಅವರಿಗೆ ಮಾತೃ ಸ್ಥಾನದಲ್ಲಿದ್ದು,  ಈ ಸಂಘದ ಮೂಲಕವೇ ಅವರು ಹಂತಹಂತವಾಗಿ ಮೇಲೇರಿದ್ದಾರೆ,  ಜೊತೆಗೆ ಸ್ವಕ್ಷೇತ್ರದವರಾಗಿದ್ದು ಅವರು ಈ ಕೂಡಲೇ ಇತ್ತ ಗಮನ ಹರಿಸಿ ವಕೀಲರ ಭವನ ನಿಮರ್ಾಣ ಕಾರ್ಯಕ್ಕೆ ಕೂಡಲೇ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ. 
 ಕಳೆದ 8 ವರ್ಷಗಳಿಂದ ವಕೀಲರ ಭವನ ನಿಮರ್ಿಸುವಂತೆ ಸಚಿವರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಶೀಘ್ರ ಈ ಕಾರ್ಯ ಕೈಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಕೀಲರ ಸಂಘ ಎಚ್ಚರಿಸಿದೆ ಎಂದರು.
ನಂತರ  ತಹಶೀಲ್ದಾರ್ ಆರ್. ಗಂಗೇಶ್ರವರಿಗೆ  ಮನವಿ ಅಪರ್ಿಸಿದರು. ಈ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಜಶೇಖರ್, ಕಾರ್ಯದಶರ್ಿ ಕೆ.ಎಂ. ಷಡಾಕ್ಷರಿ, ಎಸ್.ದಿಲೀಪ್, ಬಿ.ಕೆ.ಸದಾಶಿವಯ್ಯ, ಎಸ್.ಗೋಪಾಲಕೃಷ್ಣ, ಸಿ.ಎನ್. ಕೃಷ್ಣಮೂತರ್ಿ, ಕೆ.ಆರ್. ಚನ್ನಬಸವಯ್ಯ, ಎಂ.ಬಿ.ನಾಗರಾಜು, ಎಚ್.ಎಸ್.ಜ್ಞಾನಮೂತರ್ಿ ಡಿ.ಎಂ. ಸ್ವಾಮಿ,  ಜಿ. ಪರಮೇಶ್ವರ್, ಹನುಮಂತಯ್ಯ, ಟಿ.ಶಶಿಧರ್, ರತ್ನರಂಜನಿ, ಮಂಜುನಾಥ್, ರವಿ, , ರವಿ, , ಮೊದಲಾದವರು ಹಾಜರಿದ್ದರು. 

ಬೋಧಿವೃಕ್ಷದ ವತಿಯಿಂದ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ,9: ಮಹಾತ್ಮ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಮುದ್ರಿತ ಭಾಷಣದ ಆಲಿಸುವಿಕೆ ಮತ್ತು ಚಚರ್ೆಯನ್ನು ಇದೇ 11ರಂದು ಹಮ್ಮಿಕೊಳ್ಳಲಾಗಿದೆ.
ಬೋಧಿವೃಕ್ಷ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಈ ಕಾರ್ಯಕ್ರಮವನ್ನು ಪಟ್ಟಣದ ಡಿ.ವಿ.ಜಿ.ಎಚ್.ಎಸ್.ಶಾಲೆಯ ಆವರಣದಲ್ಲಿ ಮಧ್ಯಾಹ್ನ 1.30ಕ್ಕೆ ಹಮ್ಮಿಕೊಂಡಿದೆ. ಚಚರ್ೆಯಲ್ಲಿ ಕುಂದೂರು ತಿಮ್ಮಯ್ಯ, ನಾರಾಯಣರಾಜು, ಲಿಂಗದೇವರು, ಬೇವಿನಹಳ್ಳಿ ಚನ್ನಬಸವಯ್ಯ, ಸಿ.ಡಿ.ಚಂದ್ರಶೇಖರ್, ಎನ್.ಇಂದಿರಮ್ಮ, ಸಿಂಗದಹಳ್ಳಿ ರಾಜ್ಕುಮಾರ್, ಸುಪ್ರಿಂ ಸುಬ್ರಹ್ಮಣ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಟ್ರಸ್ಟ್ನ ಕಂಟಲಗೆರೆ ಗುರುಪ್ರಸಾದ್ ತಿಳಿಸಿದ್ದಾರೆ.

ಬಿಇಓ ಕಛೇರಿಯ ಪ್ರಕಟಣೆ
ಚಿಕ್ಕನಾಯಕನಹಳ್ಳಿ,ಜೂ.9: ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯವಾರು ಜೇಷ್ಠತಾ ಪಟ್ಟಿಯನ್ನು ಕಛೇರಿಯಾ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ.ಕೃಷ್ಣಮೂತರ್ಿ ತಿಳಿಸಿದ್ದಾರೆ.
ಸದರಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಶಿಕ್ಷಕರುಗಳು ಮತ್ತು ದಿನಾಂಕ 01.01.15 ರಿಂದ 31.12.15ರ ಅವಧಿಯಲ್ಲಿ ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರುವ ಸೇವಾನಿರತ ಶಿಕ್ಷಕರು ತಮ್ಮ ವಿದ್ಯಾರ್ಹತೆಯ ಪೂರಕ ದಾಖಲೆಗಳೊಂದಿಗೆ ಹಾಗೂ ರೆಗ್ಯೂಲರ್ ಆಗಿ ಪದವಿ ಪಡೆದಿದ್ದಲ್ಲಿ ಇಲಾಖಾ ಅನುಮತಿ ಪತ್ರದೊಂದಿಗೆ ದಿನಾಂಕ 11.06.216ರೊಳಗೆ ಕಛೇರಿಯ ವ್ಯವಸ್ಥಾಪಕರಿಗೆ ಮುದ್ದಾಂ ಸಲ್ಲಿಸುವುದು ತಡವಾಗಿ ಬಂದ ಮನವಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, June 8, 2016

ಸ್ಥಳಾಂತರಗೊಂಡ ವಿಜಯಬ್ಯಾಂಕ್ಗೆ ಉದ್ಘಾಟನೆ 
ಚಿಕ್ಕನಾಯಕನಹಳ್ಳಿ,ಜೂ.08 : 1931ರ ವಿಜಯದಶಮಿ ದಿನದಂದು ಪ್ರಾರಂಭವಾದ ವಿಜಯಬ್ಯಾಂಕ್ ದೇಶಾದ್ಯಂತ 1860ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಎಂದು ಬ್ಯಾಂಕಿನ ಸಹಾಯಕ ನಿದರ್ೇಶಕ ಬಿ.ಎಸ್.ರಾಮರಾವ್ ಹೇಳಿದರು.
ಪಟ್ಟಣದ ವಿಜಯಬ್ಯಾಂಕ್ ಶಾಖೆಯ ನೂತನ ಕಟ್ಟಡಕ್ಕೆ ಬುಧವಾರ ಸ್ಥಳಾಂತರಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ವಿಜಯ ಬ್ಯಾಂಕ್ ಒಟ್ಟು ರೂ.2.16 ಲಕ್ಷ ಕೋಟಿ ಮೀರಿ ವ್ಯವಹಾರ ನಡೆಸಿದೆ. ರೂ.1.25 ಲಕ್ಷ ಕೋಟಿ ಠೇವಣಿ ಹೊಂದಿದೆ.ರೂ. 91ಸಾವಿರ ಕೋಟಿ ಸಾಲ ನೀಡಲಾಗಿದೆ ಎಂದರು.
   ಕೃಷಿ, ಆಧ್ಯತಾ ವಲಯಗಳು, ಸಣ್ಣ ಉದ್ಯಮಗಳು, ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗಿದೆ. ರಾಜ್ಯದಲ್ಲಿ 555 ಶಾಖೆಗಳಿವೆ, ತುಮಕೂರು ಜಿಲ್ಲೆಯಲ್ಲಿ 11 ವಿಜಯ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 11 ಶಾಖೆಗಳಿಂದ ರೂ.333 ಕೋಟಿ ಠೇವಣಿ ಸಂಗ್ರಹವಾಗಿದೆ.ರೂ. 220 ಕೋಟಿ ಸಾಲ ನೀಡಲಾಗಿದೆ. ಕೃಷಿಗೆ  ಹೆಚ್ಚು ಆಧ್ಯತೆ ನೀಡಲಾಗಿದೆ ಎಂದರು. 
ಪ್ರಧಾನಮಂತ್ರಿಗಳ ಜನದನ್ ಯೋಜನೆ ಸೇರಿದಂತೆ ಅನಾಥಾಶ್ರಮ, ಕ್ಯಾನ್ಸರ್ ಆಸ್ಪತ್ರೆ, ಆಂಬುಲೆನ್ಸ್ ಹೀಗೆ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ವಿಜಯ ಬ್ಯಾಂಕ್ ತೊಡಗಿಸಿಕೊಂಡಿದೆ. ಮಂಡ್ಯ, ಹಾವೇರಿ ಹಾಗೂ ಇಂದೂರ್ಗಳಲ್ಲಿ ಸ್ವ ಉದ್ಯೋಗ ತರಬೇತಿ ಸಂಸ್ಥೆ ಪ್ರಾರಂಭಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗದ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೀಜಿನಲ್ ಮ್ಯಾನೇಜರ್ ಬಲ್ಲಾಳ್, ಸಿದ್ದೇಶ್ವರಪತ್ರ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜಯ ಬ್ಯಾಂಕ್ನ ಮ್ಯಾನೇಜರ್ ಕೃಷ್ಣಮೂತರ್ಿ ಪಂಕಜ್ ನೂತನ ಎಟಿಎಮ್ ಉದ್ಘಾಟಿಸಿದರು.


ತಾಲ್ಲೂಕಿನಲ್ಲಿ ಸುರಿದ ಮಳೆ ಮಾಪನದ ವಿವರ 
ಚಿಕ್ಕನಾಯಕನಹಳ್ಳಿ,ಜೂ.08 : ತಾಲ್ಲೂಕಿನಲ್ಲಿ ಮಂಗಳವಾರ ವಿವಿಧ 7ಕಡೆ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ.
ಚಿಕ್ಕನಾಯಕನಹಳ್ಳಿ-80.4.ಮಿಮೀ, ಸಿಂಗದಹಳ್ಳಿ-20.4..ಮಿಮೀ, ಶೆಟ್ಟಿಕೆರೆ.10.2. .ಮಿಮೀ, ದೊಡ್ಡ ಎಣ್ಣೆಗೆರೆ 8.4.ಮಿಮೀ, ಮತಿಘಟ್ಟ 8.2.ಮಿಮೀ,, ಬೋರನಕಣಿವೆ ಮಳೆ ದಾಖಲಾಗಿಲ್ಲ, ಹುಳಿಯಾರು.1.2.ಮಿಮೀ ಮಳೆಯಾಗಿದೆ ಇದುವರೆಗೂ ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಾಗದೇ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಮಂಗಳವಾರ ಬಿದ್ದ ಮಳೆಯಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ತಾಲ್ಲೂಕಿನ ಸಿಂಗದಹಳ್ಳಿ ದೊಡ್ಡಕೆರೆಗೆ 3ಅಡಿ ನೀರು ಬಂದಿದೆ. ಪಟ್ಟಣದ ಸುತ್ತಮುತ್ತಲಿರುವ ಸಣ್ಣಪುಟ್ಟ ಕಟ್ಟೆಗಳು ತುಂಬಿರುವುದರಿಂದ ದನಕರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.
ಮಂಗಳವಾರ ಸುರಿದ ಮಳೆಗೆ ಕೇದಿಗೆಹಳ್ಳಿ ಬಳಿಯಿರುವ ದಕ್ಕಲಿಗರ ಕಾಲೋನಿಯ ಗುಡಿಸಲುಗಳಿಗೆ ನೀರು ನುಗ್ಗಿ ಇಲ್ಲಿ ವಾಸಿಸುತ್ತಿದ್ದ ಜನರಿಗೆ ತೀವ್ರ ತೊಂದರೆಯಾಗಿತ್ತು.

ಮೊರಾಜರ್ಿ, ಕಿತ್ತೂರು ರಾಣಿ ಪ್ರವೇಶ ವಸತಿ ನಿಲಯಕ್ಕೆ ಅಜರ್ಿ ಆಹ್ವಾನ 
ಚಿಕ್ಕನಾಯಕನಹಳ್ಳಿ,ಜೂ.08 :  7 ಮತ್ತು 8ನೇ ತರಗತಿಯ ಜಿಲ್ಲಾ ಮಟ್ಟದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಅಜರ್ಿ ಆಹ್ಪಾನಿಸಲಾಗಿದೆ ಎಂದು ಮುರಾಜರ್ಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊರಾಜರ್ಿ  ಹಾಗೂ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಅಜರ್ಿ ದೊರೆಯುತ್ತಿದ್ದು ಜೂನ್ 15 ಅಜರ್ಿ ಸಲ್ಲಿಸಲು ಕೊನೆಯ ದಿನ. ಜೂನ್ 19ರಂದು ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.  

Tuesday, June 7, 2016

ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.07 : ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ 2016-17ನೇ ಸಾಲಿನ ಪ್ರವೇಶ ಪಡೆಯಲು ಅರ್ಹ ವಿದ್ಯಾಥರ್ಿನಿಯರಿಂದ ಅಜರ್ಿ ಆಹ್ವಾನಿಸಲಾಗಿದೆ.
ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶ್ರೀ ಮರಿರಂಗನಾಥ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ವಸತಿ ನಿಲಯಕ್ಕೆ ಎಲ್ಲಾ ಜಾತಿ, ವರ್ಗದವರಿಗೂ ಅವಕಾಶವಿರುತ್ತದೆ, ವಿದ್ಯಾಥರ್ಿನಿಯರು ನಿಲಯ ಪ್ರವೇಶಕ್ಕೆ ಅಜರ್ಿ ಸಲ್ಲಿಸಬಹುದಾಗಿದ್ದು ಆಯ್ಕೆಯಾದ ವಿದ್ಯಾಥರ್ಿಗಳಿಗೆ ಉಚಿತ ಊಟ, ವಸತಿ ಸೌಕರ್ಯವಿರುತ್ತದೆ, ನಿಗಧಿತ ನಮೂನೆಯನ್ನು ವಸತಿ ನಿಲಯದಿಂದ ಅಜರ್ಿ ಪಡೆದು ಜೂನ್ 15ರೊಳಗೆ ವಸತಿ ನಿಲಯದ ಮೇಲ್ವಿಚಾರಕರಿಗೆ ಸಲ್ಲಿಸಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08133267776, ಮೊ.ನಂ. : 9535044254 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.

ಪರಿಸರ ರಕ್ಷಿಸಿ : ನ್ಯಾಯಾಧೀಶ
ಚಿಕ್ಕನಾಯಕನಹಳ್ಳಿ,ಜೂ.07 : ಮನುಷ್ಯ ಪರಿಸರ ಹಾಳು ಮಾಡಿರುವುದರಿಂದ ಪ್ರಕೃತಿಯಲ್ಲಿ ಏರುಪೇರು ಉಂಟಾಗಿ ವಾತಾವರಣ ಕಲುಷಿತಗೊಂಡಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ವಿಷಾಧಿಸಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪರಿಸರ ದಿನಾಚಾರಣೆಯಲ್ಲಿ ಮಾತನಾಡಿ, ಶಬ್ದ ಮಾಲಿನ್ಯ, ವಾಯುಮಾಲಿನ್ಯದಿಂದ ಪ್ರಕೃತಿಯಲ್ಲಿನ ವಾತಾವರಣ ಬದಲಾವಣೆಯಾಗಿದೆ ಇದೇ ರೀತಿ ಪರಿಸರವನ್ನು ಹಾಳು ಮಾಡಿದರೆ ಮುಂದೊಂದು ದಿನ ನಾವು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ವಿವಿಧ ಇಲಾಖೆಗಳು ಪರಿಸರ ಉಳಿವಿಗಾಗಿ ಸಸಿ ನೆಡಬೇಕು, ಪರಿಸರವನ್ನು ಸಂರಕ್ಷಿಸಬೇಕಾಗಿದೆ, ನಾವು ಉಸಿರಾಡುವ ಗಾಳಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು ಇದನ್ನು ತಪ್ಪಿಸಲು ಪರಿಸರ ಉಳಿಸಬೇಕಾಗಿದೆ ಎಂದರು.
ಬಿಇಓ ಕೃಷ್ಣಮೂತರ್ಿ ಮಾತನಾಡಿ, ವೈವಿಧ್ಯಮಯ ಜೀವ ಸಂಪತ್ತು ಪ್ರಕೃತಿಯಲ್ಲಿದೆ, ಈ ಜೀವ ಸಂಪತ್ತನ್ನು ಬೆಳೆಸಿ ರಕ್ಷಿಸುವ ಕರ್ತವ್ಯ ನಮ್ಮದಾಗಿದೆ, ಮುಂದೆ ಪರಿಸರವನ್ನು ರಕ್ಷಿಸದಿದ್ದರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಶಾಲಾ ಕಾಲೇಜುಗಳ ಮೈದಾನ, ಮನೆಗಳಲ್ಲಿ, ಜಮೀನುಗಳಲ್ಲಿ ಸಸಿ ನೆಡುವ ಅವಕಾಶ ಎಲ್ಲಲ್ಲಿ ಇದೆಯೋ, ಅಲ್ಲಲ್ಲಿ ಸಸಿ ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿದ್ದಾರಾಜನಾಯಕ, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರ್, ಅರಣ್ಯ ಉಪ ವಲಯಾಧಿಕಾರಿ ಅನಿಲ್ ಕುಮಾರ್, ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ, ಹನುಮಂತಯ್ಯ, ಚಿಕ್ಕಣ್ಣ, ದಿಲೀಪ್, ಮತ್ತಿತರರು ಉಪಸ್ಥಿತರಿದ್ದರು.

ಕೆರೆಗೆ ಎಸೆದಿರುವ ನವಜಾತ ಶಿಶು
ಚಿಕ್ಕನಾಯಕನಹಳ್ಳಿ,ಜೂ.7: ನವಜಾತ ಶಿಶುವೊಂದನ್ನು ಯಾರೋ ಕೆರೆಯಲ್ಲಿ ಎಸೆದು ಹೋಗಿದ್ದು,ದೇಹವನ್ನು ಮೀನುಗಳು ಕಿತ್ತು ತಿಂದಿರುವ ಅಮಾನವೀಯ ಘಟನೆ ತಾಲ್ಲೂಕಿನ ಅವಳಗೆರೆ ಕೆರೆಯಲ್ಲಿ ಕಂಡು ಬಂದಿದೆ.
  ಮಂಗಳವಾರ ಬೆಳಗ್ಗೆ ಕೆರೆ ಕಡೆ ಹೋಗಿದ್ದ ಕೆಲವರು ಮಗುವಿನ ಕಳಬರ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಪತ್ರಿಕೆಗೆ ವಿಷಯ ಮುಟ್ಟಿಸಿದ್ದಾರೆ.ಸುತ್ತಮುತ್ತಲಿನ ಗ್ರಾಮಗಳಾದ ರಾಮನಗರ,ದೇವರಹಳ್ಳಿ,ಅವಳಗೆರೆ,ಅವಳಗೆರೆಹಟ್ಟಿ,ಮೂಡಲಹಟ್ಟಿಗಳಿಂದ ಜನ ಬಂದು ನೋಡಿ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು.ಸೋಮವಾರ ರಾತ್ರಿ ಯಾರೋ ಮಗುವನ್ನು ತಂದು ಕೆರೆಯಲ್ಲಿ ಹಾಕಿರಬಹುದು ಎಂಬುದು ಜನರ ಊಹೆ.






Friday, June 3, 2016



ಸಾಲ್ಕಟ್ಟೆ ತಾಂಡ್ಯಕ್ಕೆ ಕಂದಾಯಾಧಿಕಾರಿಗಳ ತಂಡ ಭೇಟಿ.
ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡ ಬಹಿಷ್ಕಾರಕ್ಕೆ ಒಳಗಾದ ಕುಟುಂಬ
ಅಧಿಕಾರಿಗಳೊಂದಿಗೆ ಗ್ರಾಮದ ಮುಖಂಡ ಪತ್ಯೇಕ ಹೇಳಿಕೆ.
ಹೌದು, ದೇವಸ್ಥಾನದ ಖಚರ್ು ಕೊಡುವವರೆಗೆ ಅವರೊಂದಿಗೆ ನಮ್ಮದು ಇದೇ ಸ್ಥಿತಿ.
ನಮ್ಮ ಸಂಘದವರೇ ಏನು ಮಾಡಲಾಗಿಲ್ಲ, ಯಾರು ಬಂದರೂ ಏನು ನಮ್ಮನ್ನೇನು ಮಾಡಲಾಗದು:  ಗ್ರಾಮದ ಮುಖಂಡನ ಹೇಳಿಕೆ.
ಚಿಕ್ಕನಾಯಕನಹಳ್ಳಿ,ಜೂ.03 : ಸಾಲ್ಕಟ್ಟೆ ತಾಂಡ್ಯದಲ್ಲಿ ಶಂಕರನಾಯ್ಕ ಮತ್ತು ಮೂತರ್ಿನಾಯ್ಕ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಕುರಿತು ಪರಿಶೀಲನೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ  ಕಂದಾಯಾಧಿಕಾರಿಗೆ, ಗ್ರಾಮಸ್ಥರು ಹೇಳಿಕೆ ನೀಡಿ ಆ ಎರಡೂ ಕುಟುಂಬಗಳು ದೇವಸ್ಥಾನ ಕಟ್ಟಲು ಹಣ ನೀಡದೇ ಇರುವುದರಿಂದ ಅವರನ್ನು ದೂರ ಇಟ್ಟಿರುವುದಾಗಿ ತಿಳಿಸಿದ್ದಾರೆ.  
ತಾಲ್ಲೂಕಿನ ಸಾಲ್ಕಟ್ಟೆ ಲಂಬಾಣಿ ತಾಂಡ್ಯದಲ್ಲಿ ಎರಡು ಕುಟುಂಬಗಳಿಗೆ ಕಳೆದ ಐದು ವರ್ಷಗಳಿಂದ ಬಹಿಷ್ಕಾರ ಹಾಕಿರುವ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಕಂದಾಯಾಧಿಕಾರಿ ವಿ.ಕೃಷ್ಣಪ್ಪ ಹಾಗೂ ಗ್ರಾಮಲೆಕ್ಕಾಧಿಕಾರಿ ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅವರು ತಾಂಡ್ಯದ ಮುಖಂಡರೊಂದಿಗೆ ಹಾಗೂ   ಬಹಿಷ್ಕಾರಕ್ಕೆ ಒಳಗಾಗಿರುವ ಎರಡು ಕುಟುಂಬದವರೊಂದಿಗೆ  ಮಾತನಾಡಿದ್ದು, ಈರ್ವರ ವರದಿಯನ್ನು ತಹಶೀಲ್ದಾರ್ಗೆ ಸಲ್ಲಿಸಲಿದ್ದೇವೆ ಎಂದು ಆರ್.ಐ.ಕೃಷ್ಣಪ್ಪ ತಿಳಿಸಿದರು.  
ಅಧಿಕಾರಿಗಳ ತಂಡದೊಂದಿಗೆ ಮಾತನಾಡಿದ ಬಹಿಷ್ಕಾರಕ್ಕೆ ಒಳಗಾಗಿರುವ ಶಂಕರ್ನಾಯ್ಕ್, ಗ್ರಾಮದಲ್ಲಿ ನಮಗೆ ಬಹಿಷ್ಕಾರ ಹಾಕಿರುವುದರಿಂದ ನಮ್ಮ ಮನೆಗೆ ಕೆಲಸಕ್ಕೆ ಬರುವ ಜನರಿಗೂ ದಂಡ ವಿಧಿಸಿದ್ದಾರೆ, ನಮ್ಮ ಕುಟುಂಬದವರು ತೀರಿ ಹೋದಾಗ ಗ್ರಾಮದ ಯಾರೊಬ್ಬರೂ ನೆರವಿಗೆ ಬಾರದೇ ಕುಟುಂಬದವರೇ ಎಲ್ಲಾ ಕಾರ್ಯ ಮುಗಿಸಿದ್ದೇವೆ,  ಸಣ್ಣ ಗಲಾಟೆಯಲ್ಲಿ ಶುರುವಾದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡರೂ ಕರಿಯಾನಾಯ್ಕ, ಗೋಪ್ಯಾನಾಯ್ಕ, ಗುಂಡಾನಾಯ್ಕ, ಕೃಷ್ಣನಾಯ್ಕ ಎಂಬುವವರೇ ದೇವರ ಹೆಸರಿನಲ್ಲಿ ದಂಡ ವಿಧಿಸಿ ಹಣ ಕೊಟ್ಟರೆ ಗ್ರಾಮದ ಕೆಲಸಗಳಿಗೆ ಸೇರಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಎಂದರು.
ಬಹಿಷ್ಕಾರಕ್ಕೆ ಒಳಗಾಗಿರುವ ನಾಗರತ್ನಮ್ಮ ಮಾತನಾಡಿ, ಕೂಲಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಕುಟುಂಬ ನಮ್ಮದು, ನಮ್ಮ ಮನೆಗೆ ಗ್ರಾಮದ ಸಣ್ಣ ಮಕ್ಕಳು ಬರುವಂತಿಲ್ಲ, ಹಿರಿಯರೂ ಬರುವಂತಿಲ್ಲ ಬಂದರೆ ಅವರಿಗೂ ದಂಡ ವಿಧಿಸುತ್ತಾರೆ, ಅಂಗಡಿಗೆ ಹೋದರೆ ಅಲ್ಲಿಯೂ ನಮಗೆ ಬರಬೇಡಿ ನಿಮ್ಮಿಂದ ನಮಗೂ ದಂಡ ವಿಧಿಸುತ್ತಾರೆ, ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡಬೇಕು ಬಹಿಷ್ಕಾರ ಹಾಕಿರುವುದರಿಂದ ನಮ್ಮ ಮನೆಗೆ ಯಾರೇ ಬಂದರೂ ಅವರಿಗೆ ಇಲ್ಲಸಲ್ಲದನ್ನು ಹೇಳಿ ವಾಪಾಸ್ ಕಳುಹಿಸುತ್ತಿದ್ದಾರೆ,  ನಮಗೆ ನ್ಯಾಯ ದೊರಕಿಸಿಕೊಡಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.  
ದೇವಸ್ಥಾನಕ್ಕೆ ಹಣ ಕೊಡುವವರಿಗೂ ಆ ಕುಟುಂಬಗಳಿಗೆ ಇದೇ ಸ್ಥಿತಿ: ಗ್ರಾಮದ ಮುಖಂಡ  ಗೋಪ್ಯಾನಾಯ್ಕ ಮಾತನಾಡಿ, ಈರ್ವರಿಗೆ ನಾವು ಬಹಿಷ್ಕಾರ ಹಾಕಿಲ್ಲ, ಗ್ರಾಮದ ದೇವಸ್ಥಾನಕ್ಕೆ ಹಣ ಕೇಳಿದೆವು ಅವರು ಕೊಟ್ಟಿಲ್ಲ, ದೇವಸ್ಥಾನಕ್ಕೆ ಹಣ ನೀಡದಿದ್ದ ಮೇಲೆ ಅವರು ನಮ್ಮೊಂದಿಗೆ ಮಾತನಾಡಿ ಏನಾಗಬೇಕಾಗಿದೆ, ಅವರೊಂದಿಗೆ ಒಕ್ಕುಬಳಕೆ ಮಾಡಿಕೊಂಡು ಎನಾಗಬೇಕಿದೆ ಎಂದು ಠೇಕರಿಸಿ ಮಾತನಾಡಿದರಲ್ಲದೆ,  ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ರಘುನಾಥ್ ಬಂದು ಸಭೆ ಮಾಡಿದರೂ ಏನೂ ಮಾಡಲಿಕ್ಕೆ ಆಗಲಿಲ್ಲ ಎಂದರು. 

ಕಸಾಪ ವತಿಯಿಂದ ಪರಿಸರ ದಿನಾಚಾರಣೆ
ಚಿಕ್ಕನಾಯಕನಹಳ್ಳಿ,ಜೂ.03: ತಾ.ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಪರಿಸರ ದಿನಾಚಾರಣೆ, ಪ್ರತಿಭಾ ಪುರಸ್ಕಾರ ಮತ್ತು ಕಸಾಪ ಮುನ್ನೋಟ-ಒಂದು ಅನುಸಂಧಾನ ಕ.ಸಾ.ಪ.ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಚೈತನ್ಯ ಪೂರಣ ಕಾರ್ಯಕ್ರಮವನ್ನು ಜೂನ್ 5ರ ಭಾನುವಾರ ಏರ್ಪಡಿಸಲಾಗಿದೆ.
ಪಟ್ಟಣದ ಜಗಜೀವನರರಾಂ ನಗರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಜಿ.ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ನಾಗೇಂದ್ರರಾವ್ ಪರಿಸರ ದಿನದ ಆಶಯ ಬಗ್ಗೆ ಮಾತನಾಡಲಿದ್ದಾರೆ. ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಕಸಾಪ ನೂತನ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ತಾರಕೇಶ್ವರ, ವಲಯ ಅರಣ್ಯ ಅಧಿಕಾರಿ ಲಕ್ಷ್ಮೀನಾರಾಯಣ ಉಪಸ್ಥಿತರಿರುವರು. ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. 
ಇದೇ ಸಂದರ್ಭದಲ್ಲಿ ಎಸ್.ಎಸ್ಎಲ್.ಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ನೂರು ಅಂಕ ಪಡೆದ ತಾಲ್ಲೂಕಿನ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಮಧ್ಯಾಹ್ನ ಹೋಬಳಿ ಮಟ್ಟದ ಸಮಿತಿಗಳ ಅಧ್ಯಕ್ಷರಿಂದ ಕನ್ನಡದ ಸವಾಲು ಮತ್ತು ಸಾಧ್ಯತೆಗಳ ಮಂಡನೆಯ ಅಧಿವೇಶನ ನಡೆಯಲಿದೆ.


ನಿವೃತ್ತ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ಅಸ್ಥಿತ್ವಕ್ಕೆ
ಚಿಕ್ಕನಾಯಕನಹಳ್ಳಿ,ಜೂ.03 : ತಾಲ್ಲೂಕು ಸಕರ್ಾರಿ ನಿವೃತ್ತ ನೌಕರರ ಸಂಘದ 2016ರಿಂದ 2020ರವರೆಗೆ ನೂತನ ಕಾರ್ಯಕಾರಿ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.
ಗೌರವಾಧ್ಯಕ್ಷರಾಗಿ ಸಿ.ರಾಮಯ್ಯ, ಅಧ್ಯಕ್ಷರಾಗಿ ಸಿ.ಡಿ.ರುದ್ರಮುನಿ, ಉಪಾಧ್ಯಕ್ಷರಾಗಿ ಎನ್.ಬಿ.ನಂಜುಂಡಯ್ಯ, ಕೆ.ರಂಗನಾಥ್, ಸಿ.ಎಲ್.ಜಯಮ್ಮ, ಪ್ರಧಾನ ಕಾರ್ಯದಶರ್ಿ ರಾಜಪ್ಪ, ಸಹ ಕಾರ್ಯದಶರ್ಿ ವಿಶ್ವನಾಥ್, ಖಜಾಂಚಿ ಬಟ್ಲೇರಿ ಶಂಕರಪ್ಪ, ಲೆಕ್ಕ ಪರಿಶೋಧಕರಾಗಿ ಅನಂತಯ್ಯ, ಸಾಂಸ್ಕೃತಿಕ ಕಾರ್ಯದಶರ್ಿ ಆರ್.ಆಂಜನೇಯ, ಸಂಘಟನಾ ಕಾರ್ಯದಶರ್ಿ ರಾಜಶೇಖರಯ್ಯ ಎಂ.ವಿ., ಹಿರಿಯ ಸಲಹೆಗಾರರು ಜಿ.ಪುಟ್ಟಯ್ಯ, ರಾಮಕೃಷ್ಣಯ್ಯ, ವಿಶ್ವೇಶ್ವರಯ್ಯ ಸಿ.ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿಯ ನಿದರ್ೇಶಕರುಗಳಾಗಿ ಮಹಲಿಂಗಯ್ಯ(ಸವರ್ೆ), ವೆಂಕಟಮ್ಮ, ಹನುಮಂತಯ್ಯ, ಅಡವಪ್ಪ, ಗಂಗಾಧರಯ್ಯ, ಕೆ.ಹೆಚ್.ರಾಮಯ್ಯ, ಕೆ.ಸಿ.ಬಸವಯ್ಯ, ಎಸ್.ಆರ್.ನರಸಿಂಹಯ್ಯ, ಶ್ರೀನಿವಾಸಶ್ರೇಷ್ಠಿ, ಎಸ್.ಆರ್.ಶಾಂತಪ್ಪ, ಶಿವಣ್ಣ, ವಿಶ್ವೇಶ್ವರಯ್ಯ ಆಯ್ಕೆಯಾಗಿದ್ದಾರೆ.



Thursday, June 2, 2016

 ಸಕರ್ಾರಿ ಇಲಾಖೆ ನೌಕರರ ಮುಷ್ಕರ  : ಸಾರ್ವಜನಿಕರಿಗೆ ಸಮಸ್ಯೆ

ಚಿಕ್ಕನಾಯಕನಹಳ್ಳಿ,ಜೂ.02 : ಸಕರ್ಾರಿ ಕಛೇರಿಗಳು ತೆರೆದಿದೆ,  ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಕಛೇರಿಗಳು ಬಣಗುಡುತ್ತಿವೆ, ಸಾರ್ವಜನಿಕರು ಕೆಲಸಗಳಿಗೆ ಕಛೇರಿಗೆ ಆಗಮಿಸಿ ಕೆಲಸವಾಗದೆ ಹಿಂತಿರುಗತ್ತಿದ್ದು ಸವರ್ೆ ಸಾಮಾನ್ಯವಾಗಿತ್ತು.
ರಾಜ್ಯ ಸಕರ್ಾರಿ ನೌಕರರ ಸಂಘ ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕರೆಕೊಟ್ಟಿದ್ದ ಮುಷ್ಕರಕ್ಕೆ ಬೆಂಬಲಿಸಿ ತಾಲೂಕಿನ ಸಕರ್ಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ,  ತಾಲೂಕು ಕೇಂದ್ರದ  ಎಲ್ಲಾ ಸಕರ್ಾರಿ ಕಛೇರಿಗಳು ಬಿಕೋ ಎನ್ನುತ್ತಿದ್ದರೆ,  ಶಾಲಾ ಕಾಲೇಜ್ಗಳು ಬಾಗಿಲನ್ನೇ ತೆರೆದಿರಲಿಲ್ಲ.
 ತಮ್ಮ ಬೇಡಿಕೆಯಾದ  ಕೇಂದ್ರ ಸಕರ್ಾರಿ ನೌಕರರಿಗೆ ನೀಡುವಂತಹ ವೇತನ ಸೌಲಭ್ಯವನ್ನು ರಾಜ್ಯ ಸಕರ್ಾರಿ ನೌಕರರಿಗೂ ನೀಡಬೇಕೆಂದು ರಾಜ್ಯ ಸಕರ್ಾರಿ ನೌಕರರುಗಳು ಗುರುವಾರ ಮುಷ್ಕರವನ್ನು ಆರಂಭಿಸಿದ್ದರು, ಈ ವೇಳೆ ನೌಕರರು ಕಛೇರಿಗಳಿಗೆ ತೆರಳಿದ್ದರೂ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ದೂರದೂರುಗಳಿಂದ ಆಗಮಿಸಿದ್ದ ರೈತರು, ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸಾಗುತ್ತಿದ್ದರು.
ತಾಲ್ಲೂಕು ಕಛೇರಿಯಲ್ಲಿ ಅಜರ್ಿ ಪಡೆಯಲು ಬಂದಿದ್ದ ರೈತರು ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಮಕ್ಕಳಿಗೆ ಶಾಲೆಗೆ ಸೇರಿಸುವುದಕ್ಕೋಸ್ಕರ ಜಾತಿ ಆದಾಯ ಪ್ರಮಾಣ ಪತ್ರ ಹಾಗೂ ಪಹಣಿ ಪಡೆಯಲು ಕಛೇರಿಗಳಿಗೆ ಆಗಮಿಸಿದ್ದೇವೆ, ಇಲ್ಲಿ ನೋಡಿದರೆ ಕಛೇರಿಗಳಲ್ಲಿ ಯಾವ ನೌಕರರು, ಅಧಿಕಾರಿಗಳು ಸಿಗುತ್ತಿಲ್ಲ, ಕಛೇರಿಗೆ ನೌಕರರು ಆಗಮಿಸುವುದಿಲ್ಲ ಎಂದು ಮೂರು ದಿನಗಳ ಹಿಂದೆಯೇ ಕಛೇರಿಗಳಲ್ಲಿ ನಾಮಫಲಕ ಹಾಕಿದ್ದರೆ ಯಾರಿಗೂ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದರು.
ತಾಲೂಕ ಕಛೇರಿ ಮುಂದೆ ಪ್ರತಿಭಟನೆ: ತಾಲ್ಲೂಕು ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದ ಮಾದರಿಯಲ್ಲೇ ರಾಜ್ಯ ಸಕರ್ಾರವೂ ನೌಕರರಿಗೆ ವೇತನ ಹಾಗೂ ಸವಲತ್ತುಗಳನ್ನು ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಕರ್ಾರ ಇದುವರೆಗೂ ವೇತನ ತಾರತಮ್ಯ ನಿವಾರಿಸಿಲ್ಲ,  ರಾಜ್ಯ ಸಕರ್ಾರ ಜಾರಿಗೆ ತಂದಿರುವ ಅನೇಕ ಯೋಜನೆಗಳನ್ನು ಸಕರ್ಾರಿ ನೌಕರರು ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ ಆದರೂ ಸಕರ್ಾರ ರಾಜ್ಯ ಸಕರ್ಾರಿ ನೌಕರರ ಮನವಿಯನ್ನು ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದರು.
ತಾಲ್ಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೊಯ್ಸಲಕಟ್ಟೆ ಪ್ರಕಾಶ್ ಮಾತನಾಡಿ, ಸಕರ್ಾರಿ ನೌಕರರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ, ಅನೇಕ ಬಾರಿ ಪದಾಧಿಕಾರಿಗಳು ಮಾತುಕತೆಗೆ ಮುಂದಾದರೂ ಸಕರ್ಾರ ಸ್ಪಂದಿಸುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯದಶರ್ಿ ಎಸ್.ಕೆ.ಈರಯ್ಯ, ರಾಜ್ಯ ಪರಿಷತ್ ಪ್ರತಿನಿಧಿ ಅಜಯ್, ಬಸವರಾಜ್(ಪಲ್ಲಕ್ಕಿ), ಸಿ.ಜಿ.ಶಂಕರ್, ಉಪಧ್ಯಾಯರ ಸಹಕಾರ ಸಂಘದ ಕಾರ್ಯದಶರ್ಿ ಶಿವಕುಮಾರ್ ಸೇರಿದಂತೆ ಸಕರ್ಾರಿ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಎಂ.ಎಸ್.ಈಶ್ವರಪ್ಪ, ಸಿ.ವೀಣಾ, ಕೆ.ಆರ್.ರಮೇಶ್, ಎಂ.ಎಸ್.ಲೋಕೇಶ್, ಲಕ್ಷಮ್ಮ, ರೂಪ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು  ಉಪಸ್ಥಿತರಿದ್ದರು.
ಬಾಕ್ಸ್ ಐಟಂ-1
ಎರಡು ಬಣಗಳಾದ ನೌಕರರು, ಪತ್ಯೇಕವಾಗಿ ಮನವಿ ಪತ್ರ ಅಪರ್ಿಸಿದರು.

ರಾಜ್ಯ ಸಕರ್ಾರಿ ನೌಕರರ ಸಂಘ ಕರೆಕೊಟ್ಟ ಮುಷ್ಕರಕ್ಕೆ ಎಲ್ಲಾ ಇಲಾಖೆಯವರು ಒಮ್ಮದಿಂದ ಮುಷ್ಕರಕ್ಕೆ ಬೆಂಬಲಿಸಿದರು. ಶಿಕ್ಷಕರ ಸಂಘ, ಅನುದಾನಿತ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು. ಆದರೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್  ಹಾಗೂ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ನೇತೃತ್ವದಲ್ಲಿ ಎರಡು ತಂಡಗಳೂ ಪ್ರತ್ಯೇಕವಾಗಿ  ತಹಶೀಲ್ದಾರ್ ಮನವಿ ಪತ್ರ ಸಲ್ಲಿಸಿದರು.  ಇದು ಶಿಕ್ಷಕರಲ್ಲೇ ಎರಡು ಗುಂಪುಗಳಾಗಿರುವುದನ್ನು ಎತ್ತಿ ತೋರಿಸಿತು.
ವಿವಿಧ ಇಲಾಖೆಯ ನೌಕರರು,  ಸಕರ್ಾರಿ ನೌಕರರ ಸಂಘದ ಕಛೇರಿಯಿಂದ ತಾ.ನೌಕರರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಆರ್.ಪರಶಿವಮೂತರ್ಿ ನೇತೃತ್ವದಲ್ಲಿ ತಾಲ್ಲೂಕು ಕಛೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದರು.
ಇತ್ತ ತಾ.ಶಿಕ್ಷಕರ ಸಂಘದ ಅಧ್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್ ನೇತೃತ್ವದ ತಂಡ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ಎರಡೂ ತಂಡಗಳು ಪ್ರತ್ಯೇಕವಾಗಿ  ತಹಶೀಲ್ದಾರ್ ರವರಿಗೆ   ಮನವಿ ಪತ್ರ ಅಪರ್ಿಸಿದರು.

ಸಾಲ್ಕಟ್ಟೆ ಗ್ರಾಮದಲ್ಲಿ ಬಹಿಷ್ಕಾರ ; ತಹಶೀಲ್ದಾರ್ಗೆ ಮನವಿ

ಚಿಕ್ಕನಾಯಕನಹಳ್ಳಿ,ಜೂ.02 : ತಾಲ್ಲೂಕಿನ ಸಾಲ್ಕಟ್ಟೆ ಲಂಬಾಣಿ ತಾಂಡ್ಯದಲ್ಲಿ ಎರಡು ಕುಟುಂಬಗಳಿಗೆ ಕಳೆದ ಐದು ವರ್ಷಗಳಿಂದ ಬಹಿಷ್ಕಾರ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು,   ಈಗಲೂ ಕೆಲವು ಗ್ರಾಮಗಳಲ್ಲಿ  ಸಾಮಾಜಿಕ ಬಹಿಷ್ಕಾರದಂತಹ ಹೇಯ ಕೃತ್ಯ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ತಾಲ್ಲೂಕಿನ ಸಾಲ್ಕಟ್ಟೆ ಲಂಬಾಣಿ ತಾಂಡ್ಯದ ಶಂಕರನಾಯ್ಕ ಮತ್ತು ಮೂತರ್ಿನಾಯ್ಕ, ಕುಟುಂಬದವರಿಗೆ  ಬಹಿಷ್ಕಾರ ಹಾಕಿದ್ದಾರೆ, ಈ ಕುರಿತು ತಹಶೀಲ್ದಾರ್ರವರಿಗೆ ಮನವಿ ಪತ್ರವನ್ನು  ಸಲ್ಲಿಸಲಾಗಿದೆ.
ಕಳೆದ ಐದು ವರ್ಷಗಳ ಹಿಂದ ಸಣ್ಣ ಗಲಾಟೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು, ನಂತರ ನ್ಯಾಯಾಲಯ ಮೊಕದ್ದಮೆ ವಜಾ ಮಾಡಿತ್ತು, ಆಗಲೇ ಗ್ರಾಮದಿಂದ ಬಹಿಷ್ಕಾರ ಹಾಕಲಾಯಿತು. ಆಗಿನಿಂದಲೂ ಈ ಎರಡೂ ಕುಟುಂಬದವರನ್ನು ತಾಂಡ್ಯದ ಜನ ಮಾತನಾಡಿಸುವಂತಿಲ್ಲ, ಊರಿನಲ್ಲಿ ಯಾವೊಂದು ಕಾರ್ಯಕ್ಕೂ ಇವರು ಭಾಗವಹಿಸುವಂತಿಲ್ಲ, ಇವರಿಗೆ ಕುಡಿಯಲು ನೀರು ಕೊಡುವಂತಿಲ್ಲ, ಇವರೇ ಹಾಕಿಸಿಕೊಂಡಿದ್ದ ನಲ್ಲಿಯ ಸಂಪರ್ಕವನ್ನು ಕಡಿತ ಮಾಡಿಸುವ ಅಮಾನವೀಯ ವರ್ತನೆಯಿಂದ ಬೆಂದು ಬಸವಳಿದು ಕೊನೆಗೆ ತಹಶೀಲ್ದಾರ್ ರವರಿಗೆ ಮನವಿ ಅಪರ್ಿಸಿದ್ದಾರೆ.
 ಈ ಬಗ್ಗೆ ಎರಡೂ ಕುಟುಂಬದವರು ತಮಗಾಗಿರು ಅನ್ಯಾಯದ ಬಗ್ಗೆ  ತಾಲ್ಲೂಕು ಬಂಜಾರ ಸಂಘಕ್ಕೆ ಮನವಿ ನೀಡಿದ್ದಾರೆ. ಸಂಘದ ಅಧ್ಯಕ್ಷ ಜಿ.ರಘುನಾಥ್ ತಮ್ಮ ಗ್ರಾಮದಲ್ಲಿ ಹಿರಿಯರು, ತಾಂಡ್ಯದ  ನಾಯಕ್,  ಡಾವ್ ಕಾರಬಾರಿ ಮತ್ತು ಗ್ರಾಮಸ್ಥರನ್ನು ಸೇರಿಕೊಂಡು ನ್ಯಾಯ ಮಾಡಿದರೆ ಒಳ್ಳೆಯ ಬೆಳವಣಿಗೆ ಎಂದು ಸಲಹೆ ನೀಡಿದ್ದರು. ಇದರಂತೆ ಸಾಲ್ಕಟ್ಟೆ ಲಂಬಾಣಿ ತಾಂಡ್ಯದಲ್ಲಿರುವ ಸ್ಥಳೀಐ ಸಂಘಕ್ಕೆ ಅಜರ್ಿ ನೀಡಿ ಎಲ್ಲರೂ ಒಂದಾಗಿ ಹೋಗಲು ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದೆವು.
ನ್ಯಾಯಕ್ಕೆ ಸೇರಿಸಿದಾಗ ದಂಡಕ್ಕಟುವಂತೆ ಒತ್ತಾಯಿಸಿದರು,  ದೇವಸ್ಥಾನದ ಖಚರ್ು 10ಸಾವಿರ ದಂಡ ಕಟ್ಟಿದರೆ ಗ್ರಾಮಕ್ಕೆ ಸೇರಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ, ಕಡು ಬಡವರಾದ ನಾವು ಕೂಲಿ ನಾಲಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇವೆ, ಗ್ರಾಮದಲ್ಲಿ ಕುಡಿಯುವ ನೀರು, ತಿರುಗಾಡುವ ದಾರಿಯ ವಿಚಾರದಲ್ಲಿ ಮಾನಸಿಕ ಕಿರುಕುಳವಾಗುತ್ತಿದ್ದು ಇದರಿಂದ ಬದುಕಲು ಹಿಂಸೆಯಾಗುತ್ತಿದೆ, ಹೆಣ್ಣು ಮಕ್ಕಳು ತಿರುಗಾಡಲು ಭಯದ ವಾತಾವರಣವಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಪಘಾತವಲ್ಲ ಕೊಲೆ : ಮೃತನ ಕುಟುಂಬಸ್ಥರ ಆರೋಪ 

ಚಿಕ್ಕನಾಯಕನಹಳ್ಳಿ,ಜೂ.02 : ತಾಲ್ಲೂಕಿನ ಹಂದನಕೆರೆ ಹೋಬಳಿಯ ದವಣದಹೊಸಹಳ್ಳಿ ಬಳಿಯ ಸೋಮಜ್ಜನಕಟ್ಟೆಯಲ್ಲಿ ಕಳೆದ ಭಾನುವಾರ ರಾತ್ರಿ  ಕಾರು ಸಮೇತ ನೀರಿಗೆ ಬಿದ್ದು  ಮೃತನಾಗಿರುವ ಮೋಹನ್ಕುಮಾರ್(35) ಅಪಘಾತದಲ್ಲಿ ಸಾವನ್ನಪ್ಪಿಲ್ಲ,  ಅದು ಪೂರ್ವಯೋಜಿತ  ಕೊಲೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೃತ ಮೋಹನ್ಕುಮಾರ್ನ ತಾಯಿ ತಿಮ್ಮಕ್ಕ  ಮಾತನಾಡಿ, ಮೇ 29ರ ಭಾನುವಾರ ರಾತ್ರಿ 10ಗಂಟೆಯ ಸಮಯದಲ್ಲಿ, ಅದೇ ಗ್ರಾಮದ ಪರಮೇಶ್ ಎಂಬುವವರು ಕಾರಿನಲ್ಲಿ ಬಂದು ಮೋಹನ್ಕುಮಾರ್ರವರನ್ನು ಕರೆದು ಕೊಂಡು ಹೋದ ನಂತರ ಮತ್ತೆ ಮನೆಗೆ ಹಿಂತಿರುಗಿಲ್ಲ, ಜೊತೆಯಲ್ಲಿ ತೆರಳಿದ್ದ ಪರಮೇಶ್ ಅಪಘಾತವಾಗಿದೆ ಎಂದು ಬೇರೆಯವರಿಗೆ ಹೇಳಿ ತಲೆಮರೆಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಹೇಳಿದರು.
ಮೃತನ ಹೆಂಡತಿ ಪರಿಮಳ ಮಾತನಾಡಿ, ಅಂದು ನಾನು ಊರಿನಲ್ಲಿ ಇರಲಿಲ್ಲ, ಮೋಹನ್ಕುಮಾರ್ ಮೃತಪಟ್ಟಿದ್ದಾರೆ ಎಂದು ತಿಳಿದ ಮೇಲೆ ನೋಡೋಕೆ ಕೆರೆ ಬಳಿ ಹೋದಾಗ ಅವರ ಮೈ, ಕೈಯ ಮೇಲೆ ಹೊಡೆದಿರುವ ಗಾಯದ ಗುರುತುಗಳಿದ್ದವು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿಕರಾದ ದವನದಹೊಸಹಳ್ಳಿಯ ಕೃಷ್ಣಪ್ಪ, ಕುಮಾರಯ್ಯ, ಹೆಚ್.ಆರ್.ತಿಮ್ಮಯ್ಯ, ಮಹಾಲಿಂಗಯ್ಯ, ಮೋಹನ್ಕುಮಾರ್, ಈಶ್ವರಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂಬಂಧ ಹಂದನಕೆರೆ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.


Tuesday, May 31, 2016


ಮಕ್ಕಳ ಶಿಕ್ಷಣಕ್ಕೆ ಪೋಷಕರು ಪ್ರೋತ್ಸಾಹಿಸಿ
ಚಿಕ್ಕನಾಯಕನಹಳ್ಳಿ,ಮೇ.31 : ಸಕರ್ಾರಿ ಶಾಲೆಗಳ ಮಕ್ಕಳಿಗಾಗಿ ಸಕರ್ಾರ ಬಿಸಿಯೂಟ, ಕ್ಷೀರಭಾಗ್ಯದಂತಹ ಯೋಜನೆಗಳನ್ನು ರೂಪಿಸುವ ಮೂಲಕ ವಿದ್ಯಾಥರ್ಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುತ್ತಿದೆ, ಈ ಕಾರ್ಯಕ್ಕೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಪ್ರೋತ್ಸಾಹಿಸಬೇಕು ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಆರನೇ ವರ್ಷದ ವಾಷರ್ಿಕೋತ್ಸವ ಮತ್ತು ಶಾಲಾ ವಿದ್ಯಾಥರ್ಿಗಳಿಗೆ ಉಚಿತ ಸ್ಕೂಲ್ಬ್ಯಾಗ್, ನೋಟ್ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳ ಕಲಿಕೆಯನ್ನು ಗಮನಿಸುತ್ತಿರಬೇಕು, ಈ ಬಗ್ಗೆ ಶಿಕ್ಷಕರಲ್ಲಿ ಚಚರ್ಿಸಿ, ಕಲಿಕೆಯಲ್ಲಿ ಹಿಂದುಳಿಯಲು ಕಾರಣವೇನು, ಯಾವ ರೀತಿಯ ಪ್ರೋತ್ಸಾಹವನ್ನು ಮನೆಯಲ್ಲಿ ನೀಡಬೇಕು, ಶಿಸ್ತು, ಸಮಯ, ಸಂಯಮ ರೂಡಿಸಿಕೊಳ್ಳುವಂತಹಗಳನ್ನು ತಿಳುವಳಿಕೆ ಹೇಳಿಕೊಡುವಂತೆ ತಿಳಿಸಿದ ಅವರು ನಿರಂತರವಾಗಿ ಪೋಷಕರು ಶಾಲೆಯ ಸಂಪರ್ಕ ಹೊಂದಿರುವಂತೆ ಸಲಹೆ ನೀಡಿದರು. 
ಶಾಲೆ ಹಿರಿಯ ವಿದ್ಯಾಥರ್ಿ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ನನಗೀಗ 75 ವರ್ಷ, 5ನೇ ವಯಸ್ಸಿನಲ್ಲಿದ್ದಾಗ ಶಾಲೆಗೆ ಸೇರಿದ್ದೆ ಅಂದರೆ 70ವರ್ಷದ ಹಿಂದೆ ಈ ಶಾಲೆಯ ವಿದ್ಯಾಥರ್ಿಯಾಗಿ ವಿದ್ಯಾಭ್ಯಾಸ ಮಾಡಿದ್ದೇನೆ ಇದೇ ರೀತಿ ಕುರುಬರಶ್ರೇಣಿ ಿಶಾಲೆಯಲ್ಲಿ ಓದಿದಂತಹ ವಿದ್ಯಾಥರ್ಿಗಳು ಇಂದು ಉನ್ನತ ಅಧಿಕಾರಿಗಳಾಗಿ, ದೇಶ-ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಈ ಶಾಲೆಯಲ್ಲಿ ಓದಿದ ಮಕ್ಕಳು ಎತ್ತರೆತ್ತರಕ್ಕೆ ಬೆಳೆದಿದ್ದಾರೆ ಎಂದರಲ್ಲದೆ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಸ್ಥಾಪಕ ಅಧ್ಯಕ್ಷ ಕ್ಯಾಪ್ಟನ್ಸೋಮಶೇಖರ್ ಮಾತನಾಡಿ, ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಅನುಕೂಲವಾಗಲು ಹಾಗೂ ಕಾರ್ಯಕ್ರಮ, ಸಮಾರಂಭ ನಡೆದರೆ ಉಪಯೋಗಕ್ಕಾಗಿ ಉತ್ತಮವಾದ ಕೊಠಡಿ ಕಟ್ಟಿಸಲು ಈಗಾಗಲೇ ಯೋಜನೆ ರೂಪಿಸಿದ್ದೇವೆ, ಹಿರಿಯ ವಿದ್ಯಾಥರ್ಿಗಳಾದ ಎಂ.ವಿ.ನಾಗರಾಜ್ರಾವ್ರವರ ನೇತೃತ್ವದಲ್ಲಿ ಹಿರಿಯ ವಿದ್ಯಾಥರ್ಿಗಳ ಸಂಘ ಈ ಕಾರ್ಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ, ಶಾಲೆಗೆ 100ವರ್ಷ ತುಂಬಿದ ಹಿನ್ನಲೆಯಲ್ಲಿ ಶಾಲೆಯಲ್ಲಿ ಓದಿದ ವಿದ್ಯಾಥರ್ಿಗಳು ಜೊತೆಗೂಡಿ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಸೃಷ್ಠಿಯಾದ ಹಿರಿಯ ವಿದ್ಯಾಥರ್ಿಗಳ ಸಂಘ ಇಂದು ಆರನೇ ವರ್ಷದ ವಾಷರ್ಿಕೋತ್ಸವ ಆಚರಿಸಿಕೊಳ್ಳುತ್ತಿದೆ ಸಂಘದ ಮೂಲಕ ವಿದ್ಯಾಥರ್ಿಗಳಿಗೆ ಬ್ಯಾಗ್ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕ ತಿಮ್ಮಾಬೋವಿ ಮಾತನಾಡಿ, ತಾಲ್ಲೂಕಿನ ಹಿರಿಯ ವಿದ್ಯಾಥರ್ಿ ಸಂಘವೊಂದು ಶಾಲೆಯ ಅಭಿವೃದ್ದಿಗಾಗಿ ಹಿರಿಯ ವಿದ್ಯಾಥರ್ಿಗಳು ಒಗ್ಗಟ್ಟಾಗಿ ಸಲಕರಣೆ ವಿತರಿಸುತ್ತಿರುವುದು ಶ್ಲಾಘನೀಯವಾದದು, ಈಗಾಗಲೇ ಕುರುಬರಶ್ರೇಣಿಯ ಶಾಲೆಯಲ್ಲಿ ವಿದ್ಯಾಥರ್ಿಗಳಿಗಾಗಿ ಶಾಲಾಬ್ಯಾಗ್, ನೋಟ್ಬುಕ್, ಸಮವಸ್ತ್ರ ನೀಡಲಾಗುತ್ತಿದೆ ಎಂದ ಅವರು,  ಬಡತನದಿಂದಲೇ ಓದಿದಂತಹ ನಾವುಗಳು ಸಕರ್ಾರಿ ಶಾಲೆಯಲ್ಲಿ ಓದುವ ಬಡವಿದ್ಯಾಥರ್ಿಗಳಿಗೆ ಅನುಕೂಲವಾಗಲು ಇಂತಹ ಕಾರ್ಯಕ್ರಮವನ್ನು ಪ್ರತಿದಿನ ಕುರುಬರಶ್ರೇಣಿ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡಲಿದ್ದಾರೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಯುತ್ತದೆ ಇಂತಹ ಕಾರ್ಯಕ್ರಮಕ್ಕೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿ ಪ್ರೋತ್ಸಾಹ ನೀಡಬೇಕು ಎಂದರು. 
ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜಶೇಖರ್, ಹಿರಿಯ ವಿದ್ಯಾಥರ್ಿಗಳು ಶಿಕ್ಷಕರುಗಳಾದ ಶಿವಕುಮಾರ್, ಸುರೇಶ್, ಪಾಂಡುರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕೋಟ್-1
ಕುರುಬರಶ್ರೇಣಿ ಶಾಲೆಯಲ್ಲಿ ಓದುವ ವಿದ್ಯಾಥರ್ಿಗಳಿಗೆ ಅನುಕೂಲವಾಗಲು  ಪ್ರತಿದಿನ ಬೆಳಗಿನ ಜಾವ 5.30ಕ್ಕೆ ಶಾಲೆಯನ್ನು ಆರಂಭ ಮಾಡುತ್ತೇವೆ, ಆ ಸಮಯದಲ್ಲಿ ಮಕ್ಕಳಿಗಾಗಿ ವ್ಯಾಯಾಮ, ಕ್ರೀಡೆ ಬಗ್ಗೆ ತಿಳಿಸುತ್ತೇವೆ ನಂತರ ಸಂಜೆ ವೇಳೆ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾಥರ್ಿಗಳಿಗಾಗಿ ಕಲಿತಾ ತರಬೇತಿ ಮಾಡುತ್ತೇವೆ ಇದಕ್ಕೆ ಪೋಷಕರು ಮಕ್ಕಳನ್ನು ಕಳುಹಿಸಿ ಸಹಕರಿಸಬೇಕು.
ತಿಮ್ಮಾಬೋವಿ, ಮುಖ್ಯೋಪಾಧ್ಯಾಯರು, ಕುರುಬರಶ್ರೇಣಿ ಶಾಲೆ. ಚಿ.ನಾ.ಹಳ್ಳಿ.

ಜೂನ್ 2ರಂದು ನಡೆಯುವ ಸಕರ್ಾರಿ ನೌಕರರ ಮುಷ್ಕರಕ್ಕೆ ನೌಕರರು ಬೆಂಬಲಿಸಿ
ಚಿಕ್ಕನಾಯಕನಹಳ್ಳಿ,ಮೇ.31 : ಜೂನ್ 2ರಂದು ನಡೆಯುವ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಮುಷ್ಕರಕ್ಕೆ ತಾಲ್ಲೂಕಿನ ಎಲ್ಲಾ ಸಕರ್ಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಯಶಸ್ವಿಗೊಳಿಸುವಂತೆ ತಾ.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಪ್ಪ ತಿಳಿಸಿದ್ದಾರೆ.
ಕೇಂದ್ರ ಸಕರ್ಾರಿ ನೌಕರರಿಗೆ ನೀಡುವ ವೇತನದಂತೆ ರಾಜ್ಯ ಸಕರ್ಾರಿ ನೌಕರರಿಗೂ ಸಮಾನ ವೇತನ ನೀಡುವಂತೆ ಜೂನ್ 2ರಂದು ರಾಜ್ಯಾದ್ಯಂತ ಸಕರ್ಾರಿ ನೌಕರರು ಕೆಲಸಕ್ಕೆ ಗೈರುಹಾಜರಾಗುವ ಮೂಲಕ ಮುಷ್ಕರ ನಡೆಸುತ್ತಿದ್ದಾರೆ ಇದಕ್ಕೆ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕ ನೌಕರರು ಸಹಕರಿಸಬೇಕು ಎಂದು ತಾ.ಪ್ರೌ.ಶಾ.ಸ.ಶಿ.ಸಂಘದ ಕಾರ್ಯದಶರ್ಿ ಸಿ.ಗವಿರಂಗಯ್ಯ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಷ್ಕರ : ಕೇಂದ್ರ ಸಕರ್ಾರ, ಕೇಂದ್ರ ಸಕರ್ಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗಳಿಸಿದ್ದು ರಾಜ್ಯ ಸಕರ್ಾರಿ ನೌಕರರಿಗೂ 7ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸುವಂತೆ ರಾಜ್ಯ ಸಕರ್ಾರಕ್ಕೆ ರಾಜ್ಯ ಸಕರ್ಾರಿ ನೌಕರರ ಸಂಘ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಸಕರ್ಾರ ವೇತನ ಆಯೋಗ ರಚಿಸುವ ತೀಮರ್ಾನ ಮಾಡಿರುವುದಿಲ್ಲ, ಇದರಿಂದ ರಾಜ್ಯ ಸಕರ್ಾರಿ ನೌಕರರಲ್ಲಿ ಅತಿ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿದ್ದು ನಮಗೆ ವೇತನ ಹಾಗೂ ಭತ್ಯೆ ನೀಡಿಕೆಯಲ್ಲಿ ಬಹಳಷ್ಟು ತಾರತಮ್ಯವಾಗಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸಕರ್ಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸಕರ್ಾರಿ ನೌಕರರ ಸಂಘವು ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ಬೆಂಬಲಿಸು ಎಲ್ಲಾ ಶಿಕ್ಷಕರು ಜೂನ್ 2ರಂದು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ತಾ.ಪ್ರಾ.ಶಾ.ಶಿ.ಸಂಘ ಕೋರಿದೆ.

ಮಾನವೀಯತೆ ಮರೆಯುತ್ತಿರುವುದರಿಂದ ವೃದ್ದಾಶ್ರಮಗಳು ಹೆಚ್ಚುತ್ತಿವೆ
ಚಿಕ್ಕನಾಯಕನಹಳ್ಳಿಮೇ.31. : ಮನುಷ್ಯ ಮಾನವೀಯತೆಯಿಂದ ದೂರ ಸರಿಯುತ್ತಿರುವುದರಿಂದ  ವೃದ್ದಾ ಶ್ರಮಗಳು ಹೆಚ್ಚಾಗುತ್ತಿವೆ ಎಂದು ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ವಿಷಾಧಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನಡೆದ ಸಾಹಿತಿ ಸಾ.ಶಿ. ಮರುಳಯ್ಯ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿ, ರಾಜ್ಯದಲ್ಲಿ ಸಾಸಲು ಗ್ರಾಮವನ್ನು ಗುರುತಿಸಲು ಸಾಹಿತಿ ಸಾ.ಶಿ ಮರುಳಯ್ಯನವರು ಕಾರಣ, ಬಸವಾದಿ ಶರಣರು ಮನುಷ್ಯ ಬದುಕನ್ನು ಕಟ್ಟಿಕೊಳ್ಳುವಂತೆ  ಉಪದೇಶಿಸಿದರು, ಈಗ ನಾವು ಮಾನವೀಯತೆಯನ್ನು ಮರೆತು ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ ಎಂದ ಅವರು  ಜ್ಞಾನದಿಂದ  ಅಳಿಯಬೇಕು ಹೊರತು ಜಾತಿಯಿಂದ ಅಳಿಯಬಾರದು,  ಈಗ ಜಾತಿ ಜಾತಿಗಳಲ್ಲಿ ವೈರತ್ವ  ಹೆಚ್ಚಾಗುತ್ತಿದ್ದು ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರತಿಷ್ಠಿಗೆ ಜಾತಿಗಳನ್ನು ಎತ್ತಿಕಟ್ಟಿ ಶೋಷಣೆ ಮಾಡುತ್ತಿದ್ದಾನೆ, ಸರ್ವಧರ್ಮ ಸಮಾರಂಭದಲ್ಲಿ ಎಲ್ಲ ಸ್ವಾಮೀಜಿಗಳು ಒಂದೇ ವೇದಿಕೆಯನ್ನು ಕುಳಿತು ಸಂಗಮವಾಗಿದ್ದೇವೆ ಅದೇ ರೀತಿ ಎಲ್ಲರೂ ಒಂದಾಗಿ ಬಾಳಿದರೆ ಸಾ.ಶಿ, ಮರುಳಯ್ಯನವರಿಗೆ ಗೌರವ ತರುತ್ತದೆ, ಮನುಷ್ಯನ ಮನಸ್ಸುಗಳು ಮೈಲಿಗೆಯಾಗುತ್ತಿವೆ  ಅಂತಹ ಮನಸ್ಸುಗಳಿಗೆ ಗಂಗಾ ಸ್ನಾನವಾಗಬೇಕಾಗಿದೆ, ಕನಿಷ್ಟ, ಶ್ರೇಷ್ಠ ಎಂಬ ಭಾವನೆ ಯಾರಲ್ಲೂ ಬರಬಾರದು ಎಂದರು.
ಚಿತ್ರದುರ್ಗದ ಮಾಚಿದೇವರ ಮಠದ ಬಸವಮಾಚೀದೇವಸ್ವಾಮೀಜಿ ಮಾತನಾಡಿ ಡಾ.ಸಾ.ಶಿ.ಮರುಳಯ್ಯನವರ ಬದುಕು ಬರಹ ಅನಾವರಣ ಮಾಡಲು ಧಾಮರ್ಿಕ ಸಮಾರಂಭದಲ್ಲಿ ಮಾಡುತ್ತಿರುವುದು ಸಂತಸ ತಂದಿದೆ, ಸಾಹಿತ್ಯ ಕ್ಷೇತ್ರಕ್ಕೆ ಮಾತನಾಡುವ ಶಕ್ತಿಯ ಜೊತೆಯಲ್ಲಿ ಬದುಕನ್ನು ರೂಪಿಸುವ ಶಕ್ತಿ ಇದೆ, ಸ್ವಾಮೀಜಿಗಳು ಸಮಾಜದಲ್ಲಿ ಒಂದಾದ ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು ಎಂದರು.
ಉಪನ್ಯಾಸಕಿ ಸುಕನ್ಯ ಮಾತನಾಡಿ 1913ರಲ್ಲಿ ಜನಿಸಿದ ಡಾ||ಸಾಹಿತಿ ಸಾ.ಶಿ ಮರುಳಯ್ಯನವರು ಸಾಸಲಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮೈಸೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿ ಶಿಕ್ಷಕರಾಗಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸಾಹಿತಿಯಾಗಿ ಗುರುತಿಸಿಕೊಂಡು ನಾಡಿನ ಶ್ರೇಷ್ಠ ಸಾಹಿತಿಯಾಗಿದ್ದರೂ ಗುರುಪರಂಪರೆಯನ್ನು ಹೊಂದಿದ ಸಾ.ಶಿ.ಮರುಳಯ್ಯನವರು ಸಾಮರಸ್ಯ. ಶಿಲ್ಪ ಶಿವತಾಂಡವ ಪುರುಷ ಸಿಂಹ ಎಂಬ ಅನೇಕ ನಾಟಕಗಳು ಪುಸ್ತಕಗಳನ್ನು ಬರೆದಿದ್ದಾರೆ ಅದರಲ್ಲೂ ತಮ್ಮ ದೇಹವನ್ನು ಜೆ.ಎಸ್.ಎಸ್. ಆಸ್ಪತ್ರೆಗೆ ದಾನ ಮಾಡುವ ಮೂಲಕ ಮಾನವೀಯತೆ  ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ  ಡಾ.ಸಾಹಿತಿ  ಸಾ.ಶಿ.ಮರುಳಯ್ಯ ಹಾಗೂ ಸಾಹಿತಿ ದೇ. ಜವರೇಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
 ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯಸ್ವಾಮೀಜಿ, ಅರೇಮಾದನಹಳ್ಳಿ ಸುಜ್ಞಾನ ಗುರುಪೀಠದ ಶಿವಸುಜ್ಞಾನತೀರ್ಥಸ್ವಾಮೀಜಿ, ಸಿಡ್ಲೆಕೋಣ ವಾಲ್ಮೀಕಿ ಗುರುಪೀಠದ ಸಂಜಯಕುಮಾರಾನಂದಸ್ವಾಮೀಜಿ, ಅಲ್ಬೂರು ಶನೀಶ್ವರಾಮಠದ ನರಸಿಂಹಸ್ವಾಮೀಜಿ, ಕೋಡಿಹಳ್ಳಿ ಅಧಿಜಾಂಬವ ಮಠದ ಷಡಾಕ್ಷರಿಮುನಿಸ್ವಾಮೀಜಿ, ಕರಿಸಿದ್ದೇಶ್ವರ ಮಠದ ಶಿವಪ್ರಕಾಶಶಿವಾಚಾರ್ಯಸ್ವಾಮೀಜಿ. ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್, ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ ಮತ್ತಿತ್ತರರು ಉಪಸ್ಥಿತರಿದ್ದರು.


ಸಾಹಿತಿ ದೇ.ಜವರೇಗೌಡರ ನಿಧನಕ್ಕೆ ಕಸಾಪ ಸಂತಾಪ 
ಚಿಕ್ಕನಾಯಕನಹಳ್ಳಿ.ಮೇ.31 : ದೇ.ಜವರೇಗೌಡರು ಸಾಹಿತಿ ತೀ.ನಂ.ಶ್ರೀರವರ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದರಿಂದಲೇ ತಾಲ್ಲೂಕಿಗೆ ಭೇಟಿ ನೀಡಲು ಸಂತಸ ಪಡುತ್ತಿದ್ದರು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಸಂಘದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದೇ.ಜವರೇಗೌಡರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. 
ಎಂ.ವಿ.ನಾಗರಾಜ್ರಾವ್ ಮಾತನಾಡಿ, ದಿ.ದೇ.ಜವರೇಗೌಡರು ತೀ.ನಂ.ಶ್ರೀರವರನ್ನು ತನ್ನ ಗುರುಗಳು ಎಂದು ಭಾವಿಸಿದ್ದರು ಅದಕ್ಕಾಗಿ ತೀ.ನಂ.ಶ್ರೀರವರ ಸ್ವಸ್ಥಳಕ್ಕೆ ತೆರಳಿ ಅವರು ಸಂಚರಿಸುತ್ತಿದ್ದ ಕಡೆಗಳಿಗೆಲ್ಲಾ ಭೇಟಿ ನೀಡುತ್ತಿದ್ದರು ಹಾಗೂ ಚಿಕ್ಕನಾಯಕನಹಳ್ಳಿಗೆ ಕರೆದಾಗಲೂ ಖುಷಿಯಿಂದ ಬರುತ್ತಿದ್ದರು ಎಂದ ಅವರು ಜವರೇಗೌಡರು ರಚಿಸಿರುವ ಪುಸ್ತಕವೊಂದರಲ್ಲಿ ಚಿಕ್ಕನಾಯಕನಹಳ್ಳಿಗೆ ಬಂದು ಹೋದ ಘಟನೆ ಬಗ್ಗೆ ವಿವರಿಸಿದ್ದಾರೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಜಾನಪದವನ್ನು ಸಂಗ್ರಹಿಸುವಲ್ಲಿ ದೇ.ಜವರೇಗೌಡರ ಕೊಡುಗೆ ಅಪಾರ ಹಾಗೂ ಜವರೇಗೌಡರು ವೈಚಾರಿಕ ಪರಂಪರೆ ಕಟ್ಟಿದವರು ಎಂದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಜವರೇಗೌಡರು ಕುವೆಂಪುರವರ ಶಿಷ್ಯರಾಗಿ ಸಾಹಿತ್ಯದ ರುಚಿ ಕಂಡವರು ಈ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದ ಅವರು  ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಎನ್.ಇಂದಿರಮ್ಮ, ಕಸಾಪ ಪದಾಧಿಕಾರಿಗಳಾದ ನಾಗಕುಮಾರ್, ರಾಮಕೃಷ್ಣಪ್ಪ, ಜಯಮ್ಮ, ರಾಮ್ಕುಮಾರ್, ಸಿ.ಟಿ.ಗುರುಮೂತರ್ಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು. 






ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭೆಯಲ್ಲಿ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕಂದಾಯಾಧಿಕಾರಿ ಹನುಮಂತೇಗೌಡ, ದ್ವಿತಿಯ ದಜರ್ೆ ಸಹಾಯಕ ಜಯಶಂಕರ್ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಈರ್ವರನ್ನು ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಬೀಳ್ಕೊಟ್ಟರು.

Saturday, May 28, 2016


ಹಸಿವಿನಿಂದ ಬಲಳುತ್ತಿರುವ ದನಕರುಗಳಿಗೆ ಮೇವನ್ನು ಒದಗಿಸಿ : ರೈತನ ಅಳಲು 


ಚಿಕ್ಕನಾಯಕನಹಳ್ಳಿ, :  ತಾಲ್ಲೂಕಿಗೆ ಮಳೆ ಬಾರದೇ ತಾಲ್ಲೂಕಿನ ರೈತ ಕಂಗಾಲಾಗಿದ್ದು, ದನ ಕರುಗಳನ್ನು ಕಾಪಾಡಿಕೊಳ್ಳಲು ಒದ್ದಾಡುವಂತಾಗಿದೆ ನವಿಲೆ ಪಾಳ್ಯದ ರೈತ ಮಾರಮರ್ಧನ್ ತಾವು ಸಾಕಿರುವ 31 ರಾಸು ದನ ಹಾಗೂ 13 ಎಮ್ಮೆ,7 ಮೇಕೆಗಳು  ನಿತ್ಯ ಹಸಿವಿನಿಂದ ಬಳಲುತ್ತಿವೆ,  ತಾಲ್ಲೂಕು ಆಡಳಿತ ಮೇವಿನ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡದಿದ್ದರೆ.  ತಾಲ್ಲೂಕು ಕಛೇರಿ ಬಳಿ ತನ್ನ ಸಮಸ್ತ ರಾಸುಗಳೊಂದಿಗೆ ಧರಣಿ ಮಾಡುವುದಾಗಿ ತಿಳಿಸಿದ್ದಾರೆ.
ರೈತ ಮಾರಮರ್ಧನ್ ಮೊದಲು ವಕೀಲ ವೃತ್ತಿ ಆಯ್ಕೆ ಮಾಡಿಕೊಂಡಿದ್ದರೂ,  ಕೃಷಿ ಮಾಡುವ ಸೆಳೆತಕ್ಕೆ ಒಳಗಾಗಿ, ವಕೀಲ ವೃತ್ತಿ ಬಿಟ್ಟು, ಮಣ್ಣಿನ ಮಗನಾದವರು. ಅವರು ಸಾಕಿದ ರಾಸುಗಳನ್ನು ಮಾರದೇ, ಕಟುಕರ ಪಾಲು ಮಾಡದೇ, ಪಶುಗಳು ಸತ್ತರೇ ಅವುಗಳನ್ನು ಅಂತ್ಯಕ್ರಿಯೆ ಮಾಡುವಂತವರು,  ಆದರೇ ಸಕಾಲಕ್ಕೆ ಮಳೆ ಬಾರದೇ ತನ್ನ ಜಮೀನಿನಲ್ಲಿರುವ ಬೋರು ಓಡದೇ ತೀವ್ರ ನೀರಿನ ಸಮಸ್ಯೆಯಿಂದ ದನಗಳಿಗೆ ಕುಡಿಯುವ ನೀರು ಹಾಗೂ ಹುಲ್ಲು ಹೊಂಚಲಾಗದೆ ಈ ನಿಧರ್ಾರಕ್ಕೆ ಬಂದಿದ್ದಾರೆ.
ತಾಲ್ಲೂಕಿನ ಮಹತ್ವಾಂಕಾಕ್ಷಿ ಯೋಜನೆಯಾದ 23 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಅನುಷ್ಠಾನಗೊಂಡಿದ್ದರೇ ಅಂತರ್ಜಲ ಹೆಚ್ಚಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರೈತರು ನಿಟ್ಟಿಸುರು ಬಿಡುತ್ತಿದ್ದರು,  ಆದರೇ ಕೇಂದ್ರ ಸಕರ್ಾರದ ಭೂ ಸ್ವಾಧೀನ ಕಾಯಿದೆಯಿಂದ ಸ್ಥಳೀಯ ರಾಜಕಾರಣಿಗಳ ನಿಲ್ರ್ಯಕ್ಷತನ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ತನ್ನ ಜಾನವಾರುಗಳನ್ನು ಉಳಿಸಿಕೊಳ್ಳಲು ಹೆಣಗುವಂತಾಗಿದೆ ಎನ್ನುತ್ತಾರೆ ಮಾರಮರ್ಧನ್.
 ರೈತರ ಮೂಲ ಸೌಕರ್ಯಗಳಾದ ನೀರು, ವಿದ್ಯುತ್, ಜಮೀನುಗಳನ್ನು ಒದಗಿಸಿಕೊಟ್ಟರೇ ರೈತ ಶ್ರಮ ಹಾಕಿ ದುಡಿಯಲು ತೊಡಗುತ್ತಾನೆ. ಆದರೇ ಸಕರ್ಾರದ ಕೆಲವು ನೀತಿಗಳಾದ ರೈತ ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸದರೆ  ರೈತರ ಬೆಳೆಗೆ ಬೆಲೆ ಸಿಕ್ಕಿ ಬಾಳು ಹಸನಾಗುತ್ತಿದ್ದು,  ರೈತರು ಬೆಳೆದಿರುವ ಕೊಬ್ಬರಿ ಮಾರಲು ಬೆಲೆ ಕಡಿಮೆ ಇರುವುದರಿಂದ ಹಣಕಾಸಿನ ತೊಂದರೇ ಎದುರಾಗಿದೆ, ನಮ್ಮ ರಾಸುಗಳಿಗೆ ಮೇವು ಕೊಳ್ಳಲು ಕಷ್ಟವಾಗಿದೆ.  ತನ್ನಲ್ಲಿರುವ 31 ರಾಸು ದನಗಳಿಗೆ ಹಾಗೂ 13 ಎಮ್ಮೆ, ಮೇಕೆಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡದಿದ್ದರೇ ತಾಲ್ಲೂಕು ಕಛೇರಿ ಮುಂದೆ ತನ್ನ ರಾಸುಗಳೊಂದಿಗೆ ಹಾಗೂ ನನ್ನಂತೆ ಪರಿತಪಿಸುತ್ತಿರುವ ರೈತರೊಂದಿಗೆ ತಾಲೂಕು ಕಛೇರಿ ಮುಂದೆ ಧರಣಿ ಕೂರುವುದಾಗಿ ರೈತ ಮಾರಮರ್ಧನ್ ತಿಳಿಸಿದ್ದಾರೆ.

ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ನೂತನ ಕೊಠಡಿಗೆ ಗುದ್ದಲಿ ಪೂಜೆ

ಚಿಕ್ಕನಾಯಕನಹಳ್ಳಿ,: ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ಕೊಠಡಿಯ ಕೊರತೆಯಿದ್ದದರಿಂದ 2ಕೊಠಡಿಯನ್ನು 54ಲಕ್ಷರೂಗಳಿಗೆ ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ವಿದ್ಯಾಥರ್ಿಗಳ ಉಪಯೋಗಕ್ಕೆ ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನ ಕೊಠಡಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆರ್.ಎ.ಡಿ.ಎಫ್-19ರ ಯೋಜನೆಯ ಅಡಿಯಲ್ಲಿ 54ಲಕ್ಷ ರೂ ವೆಚ್ಚದಲ್ಲಿ ಕೊಠಡಿ ನಿಮರ್ಿಸಲಾಗುತ್ತಿದ್ದು ಕಾಲೇಜಿನ ವ್ಯವಸ್ಥೆಗೆ ಅನುಕೂಲವಾಗುವಂತೆ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
54ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಕಾಮಗಾರಿಗೆ ಯೋಜನೆ ರೂಪಿಸಿದ್ದು, ಕಟ್ಟಡದಲ್ಲಿ ಎರಡು ಕೊಠಡಿ, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯವನ್ನು ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತೆ ನಿಮರ್ಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ದೊರೆಮುದ್ದಯ್ಯ, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಪ್ರಾಂಶುಪಾಲ ಸಿದ್ದಗಂಗಯ್ಯ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಅಂಜನಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕಿನ 14ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ 
ಚಿಕ್ಕನಾಯಕನಹಳ್ಳಿ,ಮೇ.27 : ತಾಲ್ಲೂಕಿನ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 14ವಿದ್ಯಾಥರ್ಿಗಳು 125ಕ್ಕೆ 125ಅಂಕಗಳನ್ನು ಪಡೆದಿದ್ದಾರೆ.
ಪಟ್ಟಣದ ನವೋದಯ ಶಾಲೆಯ ಸ್ಪೂತರ್ಿ, ಸ್ವಾತಿ, ರೋಟರಿ ಶಾಲೆಯ ಧನುಷ್.ಎನ್.ನಾಯ್ಕ್, ಚಿ.ನಾ.ಹಳ್ಳಿ ಸಕರ್ಾರಿ ಪ್ರೌಢಶಾಲೆಯ ದಿಲೀಪ್.ಬಿ.ಗೌಡ,  ಮೇಲನಹಳ್ಳಿ ಮೊರಾಜರ್ಿ ಪ್ರೌಢಶಾಲೆಯ ದರ್ಶನ್, ದೇವರಾಜು.ಹೆಚ್.ಎಂ, ಕೀತರ್ಿ.ಡಿ.ಆರ್, ಜೆ.ಸಿ.ಪುರ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಲಕ್ಷ್ಮೀ.ಹೆಚ್.ಎಂ, ಹುಳಿಯಾರು-ಕೆಂಕೆರೆಯ ಸ.ಪ.ಪೂ.ಕಾಲೇಜಿನ ಸಂಜಯ್.ಎಲ್.ಎನ್, ಜ್ಯೋತಿ ಹೆಚ್,  ಸ್ವಾತಿ ಹೆಚ್.ಎಲ್, ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಯ ಲಕ್ಷ್ಮೀದೇವಿ.ಎಸ್, ಕುಪ್ಪೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸೌಮ್ಯ.ಜಿ, ದೊಡ್ಡೇಣೆಗೆರೆ ಶ್ರೀ ಗವಿರಂಗನಾಥ ಪ್ರೌಢಶಾಲೆಯ ಕಾವ್ಯ.ಎನ್.ಆರ್. ಈ ವಿದ್ಯಾಥರ್ಿಗಳು ಕನ್ನಡ ವಿಷಯದಲ್ಲಿ  ಪೂರ್ಣ ಅಂಕಗಳಿಸುವುದರೊಂದಿಗೆ ಕನ್ನಡಾಭಿಮಾನವನ್ನು ಮೆರಿದಿರುವ ಜೊತೆಗೆ  ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.

ಆಕಸ್ಮಿಕವಾಗಿ ಮೃತಪಟ್ಟ ಕೋತಿಗೆ ಅಂತ್ಯಸಂಸ್ಕಾರ

ಚಿಕ್ಕನಾಯಕನಹಳ್ಳಿ,ಮೇ.28: ಆಕಸ್ಮಿಕವಾಗಿ ರಸ್ತೆಯಲ್ಲಿ ಸಾವನ್ನಪ್ಪಿದ್ದ ಕೋತಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಮನುಷ್ಯರು ಅಂತ್ಯಕ್ರಿಯೆ ರೀತಿಯೇ ಕೋತಿಯ ಅಂತ್ಯಕ್ರಿಯೆಯನ್ನು  ನೆರವೇರಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಶ್ಯಾವಿಗೆಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಕೋತಿ ಸಾವನ್ನಪ್ಪಿದ್ದನ್ನು ನೋಡಿದ ಗ್ರಾಮಸ್ಥರು ಕೋತಿಯ ಅಂತ್ಯಕ್ರಿಯೆ ಮಾಡಲು ತೀಮರ್ಾನಿಸಿದರು. ಕೋತಿ ಸಾವನ್ನಪ್ಪಿದ್ದ ಸ್ಥಳದಿಂದ ಶ್ಯಾವಿಗೆಹಳ್ಳಿ ಊರಿನ ಸುತ್ತಾಮುತ್ತಾ ಕೋತಿಯ ಶವದ ಮೆರವಣಿಗೆ ಮಾಡಿ ನಂತರ ಊರಿನ ಒಳಗಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಸಮಾಧಿ ಮಾಡಲಾಗುವುದು. ಮೆರವಣಿಗೆಯ ವೇಳೆ ಕರಡೇವು, ನಗಾರಿ, ಓಲಗದ ಮೂಲಕ ಕೋತಿಯನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು.
ಕೋತಿಯ ಸಂಸ್ಕಾರದ ನಂತರ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಪಾನಕ, ಫಲಹಾರ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರಯ್ಯ, ವೆಂಕಟೇಶ್, ರಂಗಮ್ಮ, ಚರಣ್, ಸುನಂದಮ್ಮ, ರಾಧಮ್ಮ, ನೇತ್ರಾವತಿ, ರಾಜೇಶ್, ಓಬಳೇಶ್, ರಂಗಸ್ವಾಮಿ, ಪವನ್, ಮನು, ಗಿರೀಶ್ ಸೇರಿದಂತೆ ಗ್ರಾಮಸ್ಥರು ಕೋತಿಯ ಸಮಾಧಿಕಟ್ಟಿ ನಿತ್ಯವೂ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.  




Friday, May 27, 2016


ಶಾಲೆಗಳಿಗೆ ಪಠ್ಯಪುಸ್ತಕ ಕೊಂಡೊಯ್ದ ಶಿಕ್ಷಕರು
ಚಿಕ್ಕನಾಯಕನಹಳ್ಳಿ,ಮೇ.27 : 2016-17ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಅಧಿಕೃತವಾಗಿ ಶನಿವಾರ ಪ್ರಾರಂಭವಾಗುತ್ತಿದ್ದು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ಶಿಕ್ಷಕರು ತಮ್ಮ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಕೊಂಡೊಯ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಮಾತನಾಡಿ,ಶಿಕ್ಷಕರು ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳ ಸ್ವಾಗತಕ್ಕೆ ಅಣಿಗೊಳಿಸಿಕೊಳ್ಳಬೇಕು.ಪಠ್ಯಪುಸ್ತಕ ಹಾಗೂ ಸಮವಸ್ತ್ರ ವನ್ನು ಶಾಲೆಗಳಿಗೆ ತಲುಪಿಸಲಾಗುತ್ತಿದೆ.ವಿದ್ಯಾಥರ್ಿಗಳು ದಾಖಲಾದ ತಕ್ಷಣ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲು ಸೂಚಿಸಲಾಗಿದೆ ಎಂದರು.
  ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಈಗಾಗಲೇ ಶಾಲಾ ದಾಖಲಾತಿ ಆಂದೋಲನವನ್ನು ತಾಲ್ಲೂಕಿನಾದ್ಯಂತ ನಡೆಸಲಾಗಿದೆ. ಬೇಸಿಗೆಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ ಎಂದರು.
 ಹುಳಿಯಾರು ಹೋಬಳಿ ಸಮನ್ವಯಾಧಿಕಾರಿ ಶಾಂತಪ್ಪ ಮಾತನಾಡಿ,ಈಗಾಗಲೇ ಶೇ.95ಭಾಗ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ.ಸಕರ್ಾರಿ ಶಾಲೆಗಳಿಗೆ ಈಗಾಗಲೆ ಪುಸ್ತಕಗಳು ತಲುಪಿದ್ದು, ಅನುದಾನಿತ ಶಾಲೆಗಳಿಗೆ ಇಂದು ವಿತರಿಸಲಾಗುತ್ತಿದೆ ಎಂದರು.
ಉದರ್ು ಪಠ್ಯಪುಸ್ತಕಗಳ ಕೊರತೆ : ಐದನೇ ತರಗತಿಯ ಕೋಸರ್್-1, ಉದರ್ು ಮಾಧ್ಯಮದ 6ನೇ ತರಗತಿಯ ಇಂಗ್ಲೀಷ್ ಮಾಧ್ಯಮದ ಕೋಸರ್್-2, ಉದರ್ು ಪ್ರಥಮ ಭಾಷೆ, 9ನೇ ತರಗತಿಯ ಉದರ್ು ಪ್ರಥಮ ಭಾಷೆ, ಗಣಿತ, ವಿಜ್ಞಾನ, ಸಮಾಜವಿಜ್ಞಾನ ಹಾಗೂ 10ನೇ ತರಗತಿ ಆಂಗ್ಲ ಭಾಷೆ ಗಣಿತ ಮತ್ತು ವಿಜ್ಞಾನ ಪುಸ್ತಕಗಳು ಸರಬರಾಜಾಗಿಲ್ಲ ಎಂದು ವಿವರ ನೀಡಿದರು.

ಕಾಳಿದಾಸ ಪತ್ತಿನ ಸಹಕಾರ ಸಂಘದ ಆಡಳಿತ ರದ್ದಿಗೆ ಹೈಕೋಟರ್್ ತಡೆಯಾಜ್ಞೆ
ಚಿಕ್ಕನಾಯಕನಹಳ್ಳಿ:,ಮೇ.27 :  ಪಟ್ಟಣದ ಕಾಳಿದಾಸ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ತಿಪಟೂರು ಸಹಕಾರ ಸಂಘಗಳ ಸಹಾಯಕ ನಿರ್ಭಂದಕರು ರದ್ದುಪಡಿಸಿ ಹೊರಡಿಸಿದ್ದ ಆದೇಶಕ್ಕೆ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸಂಘದ ಅಧ್ಯಕ್ಷ ಸಿ.ಪಿ.ಜಯದೇವ್ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಚರ್್ 23ರಂದು  ಸಹಕಾರ ಸಂಘಕ್ಕೆ 11 ನಿದರ್ೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಏಪ್ರಿಲ್ 10ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಪಿ.ಜಯದೇವ್ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಮಂಜುಳ ಆಯ್ಕೆಯಾಗಿದ್ದರು.
 ಏಪ್ರಿಲ್ 13ರಂದು ಸಂಘದ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಎಸ್.ಭಾಸ್ಕರಪ್ಪ, ಸಿ.ಕೆ.ಮಲ್ಲಿಕಾಜರ್ುನಸ್ವಾಮಿ, ರಾಜಮ್ಮ, ಸಿ.ಹೆಚ್.ದಯಾನಂದ, ಎ.ಸೋಮಶೇಖರ್ ಇವರುಗಳು ರಾಜೀನಾಮೆ ನೀಡಿದ್ದರು. ಮಂಡಳಿ ಸದಸ್ಯರ ಸಂಖ್ಯೆ 5ಕ್ಕೆ ಕುಸಿದಿದ್ದರ ಹಿನ್ನೆಲೆಯಲ್ಲಿ ತಿಪಟೂರು ಸಹಕಾರ ಸಂಘಗಳ ಸಹಾಯಕ ನಿರ್ಭಂದಕರು ಮಂಡಳಿಯನ್ನು ಮೇ.6ರಂದು ರದ್ದುಪಡಿಸಿ ಆದೇಶ ಹೊರಡಿಸಿದ್ದರು.
ಉಳಿದ 5 ಸದಸ್ಯ ಬಲದ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಉಚ್ಛನ್ಯಾಯಾಲಯ ಮೇ.25ರಂದು ಮಂಡಳಿ ರದ್ದತಿಗೆ  ಆರು ವಾರಗಳ ತಡೆಯಾಜ್ಞೆ ಹೊರಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ..

ಕನ್ನಡ ಶಾಲೆ ಉಳಿಸಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮೇ.27 ; ಕನ್ನಡ ಶಾಲೆಗಳನ್ನು ಉಳಿಸಿ ಕಾರ್ಯಕ್ರಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅತಿ ಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ ಸಾಹಿತ್ಯ ಪರಿಷತ್ ಸಕರ್ಾರಿ ಶಾಲೆಗಳ ದಾಖಲಾತಿ ಆಂದೋಲನದಲ್ಲಿ ಭಾಗಿಯಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಎನ್.ಇಂದಿರಮ್ಮ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿಗೆ 'ಕನ್ನಡ ಶಾಲೆಗಳನ್ನು ಉಳಿಸಿ' ಕರಪತ್ರ ಹಸ್ತಾಂತರಿಸಿ ಮಾತನಾಡಿದರು.
  ಕ್ಷೇತ್ರ ಶಿಕ್ಷಣಾಧಿಕಾರಿ ಕೃಷಮೂತರ್ಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಆಂದೋಲನ ಸಹಕಾರಿಯಾಗಲಿದೆ. ತಾಲ್ಲೂಕು ಕಸಾಪ ಘಟಕ ದಾಖಲಾತಿ ಆಂದೋಲನಕ್ಕೆ ಕೈಜೋಡಿಸಿರುವುದು ಸಂತಸದ ವಿಚಾರ ಎಂದರು.
 ತಾಲ್ಲೂಕಿನ ಹಂದನಕೆರೆ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹಂದನಕೆರೆ ಹೋಬಳಿ ಘಟಕ: ಅಧ್ಯಕ್ಷ ಎಚ್.ಅನಂತಯ್ಯ, ಕಾರ್ಯದಶರ್ಿಗಳು  ಎ.ಸೋಮಶೇಖರಯ್ಯ, ಆರ್.ಶಿವಣ್ಣ. ಖಜಾಂಚಿ : ಲಕ್ಷ್ಮೀಕಾಂತರಾಜು. ಮಹಿಳಾ ಪ್ರತಿನಿಧಿ : ಗೌರಮ್ಮ. ಇಲಾಖೆಗಳ ಪ್ರತಿನಿಧಿ ಎನ್.ಪಿ.ಕುಮಾರಸ್ವಾಮಿ. ಸಂಘಸಂಸ್ಥೆಗಳ ಪ್ರತಿನಿಧಿ : ಎಚ್.:ಹನುಮಂತಯ್ಯ, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಪ್ರತಿನಿಧಿ :ಎಚ್.ದುರ್ಗಯ್ಯ. ಸದಸ್ಯರುಗಳು: ಹೆಚ್.ಬಿ.ರಂಗನಾಥ್, ವೈ.ನಾಗರಾಜು, ಕೆ.ಯೋಗಮೂತರ್ಿ, ದೇವರಹಳ್ಳಿಶ್ರೀಧರ್, ಕೆ.ಪಿ.ಪ್ರಹ್ಲಾದ್, ಹೆಚ್.ಆರ್.ವೆಂಕಟೇಶ್. 
ಸಮಿತಿ ಸದಸ್ಯರುಗಳು: ಕನ್ನಡ ಭವನ : ಎನ್.ಭೋಜಪ್ಪ, ಸಿ.ದಾನಪ್ಪ, ಡಿ.ಕೆ.ಗಜೇಂದ್ರಕುಮಾರ್, ಸಾಹಿತ್ಯ: ಎಸ್.ಆರ್.ನಾಗರಾಜ್, ಜಿ.ಧನಂಜಯ, ಎಂ.ಆರ್.ಜಯದೇವ್, ಸಂಘಟನಾ ಸಮಿತಿ : ಎಸ್.ಸೋಮಶೇಖರಯ್ಯ, ಎಂ.ಕಾಂತರಾಜ್, ಎಚ್.ವಿ.ಸಿದ್ದಯ್ಯ, ಎಂ.ಜಯರಾಂ, ಎಚ್.ಕೃಷ್ಣಪ್ಪ, ಕನ್ನಡ ಶಾಲೆ ಉಳಿಸಿ ಸಮಿತಿ : ಎನ್.ತಮ್ಮಯ್ಯ, ಎಂ.ಮಂಜುನಾಥ್, ಎಚ್.ಪಿ.ರಮೇಶ್, ಮಹಿಳಾ ಸಬಲೀಕರಣ ಸಮಿತಿ : ರೇಣುಕಮ್ಮ, ಮಂಗಳಗೌರಮ್ಮ, ಮಹಾಲಕ್ಷ್ಮಮ್ಮ, ಲಕ್ಕಮ್ಮ ಆಯ್ಕೆಯಾಗಿದ್ದಾರೆ. 

ಮಳೆಗಾಗಿ ಮುಸ್ಲಿಂ ಬಾಂಧವರ ಪ್ರಾರ್ಥನೆ
ಚಿಕ್ಕನಾಯಕನಹಳ್ಳಿ,ಮೇ.27 : ಭೂಮಿ ತಂಪಾಗಿ ಸಕಲ ಜೀವರಾಶಿಗಳಿಗೂ ನೀರನ್ನು ಒದಗಿಸುವ ಮಳೆಯು ಅತ್ಯವಶ್ಯಕವಾಗಿದ್ದು ಮಳೆರಾಯನ ಆಗಮನಕ್ಕಾಗಿ ಪಟ್ಟಣದ ಮುಸ್ಲಿಂ ಬಾಂಧವರು ಪಟ್ಟಣದ ಕೆರೆಯ ಅಂಗಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಕೆರೆಯ ಅಂಗಳದಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯ ಮಸೀದಿಯ ಗುರುಗಳಾದ ಮುಜಾವಿದ್ ಆಲಂ, ಎಲ್ಲ ಜೀವಿಗಳಿಗೂ ನೀರು ಅಗತ್ಯವಾಗಿ ಬೇಕಾಗಿದ್ದು ಈ ಬಾರಿ ಮಳೆಯು ಇದುವರೆಗೆ ಬಾರದ ಕಾರಣ ನಾವೆಲ್ಲರೂ ಸಾಮೂಹಿಕವಾಗಿ ದೇವರನ್ನು ಪ್ರಾಥರ್ಿಸುತ್ತಿದ್ದು ಇನ್ನುಮಂದಾದರು ಆ ದೇವರು ಸಕಾಲದಲ್ಲಿ ಮಳೆಯನ್ನು ಕರುಣಿಸಲಿ ಎಂದರು.
ಪುರಸಭಾಸದಸ್ಯ ಖಲಂದರ್ ಸಾಬ್ ಮಾತನಾಡಿ, ಮಳೆಯು ಕೇವಲ ರೈತರಿಗಷ್ಟೇ ಬೇಕಾಗಿಲ್ಲ, ಎಲ್ಲರಿಗೂ ನೀರಿನ ಅವಶ್ಯಕತೆ ಇದ್ದು ಇಂತಹ ನೀರನ್ನು ನೀಡುವ ಮಳೆ ಈ ಬಾರಿ ಕೈಕೊಟ್ಟಿದೆ ಅದ್ದರಿಂದ ನಾವೆಲ್ಲ ಮುಸ್ಲೀಂರು ಸೇರಿ ನಮ್ಮ ದೇವರನ್ನು ಪ್ರಾಥರ್ಿಸುತ್ತಿದ್ದೇವೆ ಈಗಾಗಲೇ ಬೋರ್ವೆಲ್ಗಳಲ್ಲಿ ಸಾವಿರ ಅಡಿಗಳಷ್ಟು ಆಳಕ್ಕೆ ನೀರು ಹೋಗಿದ್ದು ಅಂತರ್ಜಲ ಬತ್ತಿದೆ ಈಗಿನ ವಾತವರಣವೇ ಮುಂದುವರೆದರೆ ಮುಂದೆ ಭಿಕರ ಬರಗಾಲವನ್ನು ಎದುರಿಸಬೇಕಾಗುತ್ತದೆ ಅದ್ದರಿಂದ ಆದೇವರು ಮಳೆಯನ್ನು ನೀಡಲೀ ಎಂದು ಪ್ರಾಥರ್ಿಸಿದರು.
ಪ್ರಾರ್ಥನೆಯ ವೇಳೆ ಜಾಮೀಯ ಮಸೀದಿಯ ಅಧ್ಯಕ್ಷ ಆಲಂಸಾಬ್, ಕಾರ್ಯದಶರ್ಿ ಜಹೀರ್ಅಹಮದ್ ಸೇರಿದಂತೆ ಪಟ್ಟಣದ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ಒಣ ಹುಲ್ಲಿನ ಬಣವೆಗೆ ಬೆಂಕಿ
ಚಿಕ್ಕನಾಯಕನಹಳ್ಳಿ,ಮೇ.27 : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ನಾಗೇನಹಳ್ಳಿಯ ರೈತ ಜಗದೀಶ್ ಎಂಬುವವರ ಒಣ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಠವಾಗಿದೆ.
ಸುಮಾರು 2ಟ್ರಾಕ್ಟರ್ನಷ್ಟು ರಾಗಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಪಕ್ಕದಲ್ಲಿದ್ದ ಒಂದು ಹುಣಸೆ ಮರ, ಒಂದು ತಪಸ್ವಿ ಮರ ಸುಟ್ಟು ಹೋಗಿದ್ದು ಸುಮಾರು ರೂ.25ಸಾವಿರ ನಷ್ಠ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಚಿ.ನಾ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, May 26, 2016

Wednesday, May 25, 2016


 ತಾ.ಪಂ  ಸದಸ್ಯರು ಕೇಳಿದ ಪ್ರಶ್ನೆಗಳಿಗೆ ತಬ್ಬಿಬ್ಬಾದ ಅಧಿಕಾರಿಗಳು
ಒಂದು ಗಂಟೆ ತಡವಾಗಿ ಆರಂಭವಾದ ಸಭೆ.
ಸಭೆ ಪ್ರಾರಂಭಿಸಲು ಸದಸ್ಯರ ಒತ್ತಾಯ, ಅಧ್ಯಕ್ಷರು ಮಾತ್ರ   ಉಪಾಧ್ಯಕ್ಷರನ್ನು ಕಾದು ಕುಳಿತರು.
ಸಂಚಾರಿ ಪಶು ಆಸ್ಪತ್ರೆಯನ್ನು ಮುಚ್ಚಲು ಅನುಮತಿ ಕೇಳಿದ ಅಧಿಕಾರಿ,  ಮುಚ್ಚದಂತೆ ತಾಕೀತು ಮಾಡಿದ ಸದಸ್ಯರು.
ಚಿಕ್ಕನಾಯಕನಹಳ್ಳಿ,ಮೇ.25 : ತಾಲ್ಲೂಕಿನ ತಾ.ಪಂ, ಗ್ರಾ.ಪಂ ವ್ಯಾಪ್ತಿಯಲ್ಲಿ ಉದ್ಭವಿಸಿರುವ ಸಮಸ್ಯೆಗಳು ಯಾವುವು ಅದಕ್ಕೆ ಇಲಾಖೆ ಏನು ಪರಿಹಾರ ಕಂಡುಕೊಂಡಿದೆ, ಇಲಾಖೆಗಳಲ್ಲಿ ಯಾವ ಯಾವ ಕಾರ್ಯಕ್ರಮಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಖಚರ್ಾಗಿರುವ ಹಣದ ದಾಖಲೆ, ಅಂಕಿ-ಅಂಶದ ಸಮಗ್ರ ವರದಿಯನ್ನು ನೀಡಿ ಎಂಬ ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್ಕುಮಾರ್ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಾಗದೆ ತಡಬಡಾಯಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಹೊನ್ನಮ್ಮಶೇಷಯ್ಯರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ, ನಿಮ್ಮ ಇಲಾಖೆಗಳಲ್ಲಿ ಎಷ್ಟು ಜನ ನೌಕರರಿದ್ದಾರೆ ಅವರು ಸರಿಯಾಗಿ ಕೆಲಸಕ್ಕೆ ಆಗಮಿಸುತ್ತಾರೆಯೇ?, ಇಲಾಖೆಗಳಲ್ಲಿ ಮಂಜೂರಾರಿಗಿರುವ ಕಾಮಗಾರಿಗಳು ಎಷ್ಟು ಪೂರ್ಣಗೊಂಡಿದೆ, ಅದಕ್ಕೆ ವೆಚ್ಚವಾಗಿರುವ ಹಣ ಎಷ್ಟು, ಉಳಿದಿರುವ ಹಣಕ್ಕೆ ದಾಖಲೆ ಎಲ್ಲಿ, ಇಲಾಖೆಗೆ ಒಳಪಡುವ ಯೋಜನೆಗಳ ಮಾಹಿತಿ ಯಾರ್ಯಾರಿಗೆ ತಲುಪಿದೆ ಅದಕ್ಕೆ ಕೈಗೊಂಡಿರುವ ಕ್ರಮಗಳೇನು, ಸಕರ್ಾರದ ಯೋಜನೆಗಳು ಫಲಾನುಭವಿಗೆ ತಲುಪಿದಿಯೇ, ತಲುಪದಿರಲು ಕಾರಣವೇನು ಈ ರೀತಿಯ ಅನೇಕ ಪ್ರಶ್ನೆಗಳು ಅಧಿಕಾರಿಗಳನ್ನು ಬೆವರಿಳಿಸುವಂತೆ ಮಾಡಿತು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ರಾಜ್ಕುಮಾರ್ ಸಮಸ್ಯೆಗಳ ಬಗ್ಗೆ  ಒಂದೊಂದಾಗಿ ಪ್ರಶ್ನೆಗಳನ್ನು ಸಭೆಯ ಮುಂದಿಡುತ್ತಾ ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಲಾಗದೆ ಅಧಿಕಾರಿಗಳು ತಬ್ಬಿಬ್ಬಾಗಿ,  ಗೊತ್ತಿಲ್ಲ, ತಲುಪಿಸುತ್ತೇನೆ ಎಂಬ ಉತ್ತರಗಳನ್ನು ನೀಡಿದರು. ಮುಂದಿನ ಸಭೆಯಲ್ಲಿ ಇದೇ ರೀತಿ ಹಾರಿಕೆ ಉತ್ತರಗಳು ಮರುಕಳಿಸುವಂತಿಲ್ಲ ಎಂದು ಸದಸ್ಯ ಸಿಂಗದಹಳ್ಳಿರಾಜ್ಕುಮಾರ್ ಎಚ್ಚರಿಸಿದರು.
ಮೀನುಗಾರಿಕೆ ಇಲಾಖೆಯ ಕಛೇರಿ ಬೀಗ ಹಾಕಿಯೇ ಇರುತ್ತದೆ, ಯಾವಾಗ ಕಛೇರಿ ತೆರೆದಿರುತ್ತದೆ, ಅಧಿಕಾರಿಯಾದ ನಿಮ್ಮ ಬರುವಿಕೆ ಏನು ಎಂದು ಕೇಳಿದ ಪ್ರಶ್ನೆಗೆ. ಉತ್ತರಿಸಿದ ಅಧಿಕಾರಿ ಎರಡು ತಾಲ್ಲೂಕಿಗೆ ಇನ್ಛಾಜರ್್ ಆಗಿರುವುದರಿಂದ ಸಮಸ್ಯೆ ಉದ್ಬವಿಸಿದೆ,  ಸೋಮವಾರ ತಾಲ್ಲೂಕಿನಲ್ಲಿ ಸಂತೆ ಇರುವುದರಿಂದ ಹಾಗೂ ಎರಡು ದಿನಕ್ಕೊಮ್ಮ ಹಾಜರಿರುತ್ತೇನೆ ಎಂದರು. ಸಾರ್ವಜನಿಕರು ಅಧಿಕಾರಿಗಳನ್ನು ಕಾಯುತ್ತಿರುತ್ತಾರೆ, ತಾಲ್ಲೂಕಿನಲ್ಲಿ ನಿಮ್ಮ ಹಾಜರಿ ಯಾವ ಯಾವ ದಿನವಿರುತ್ತದೆ ಎಂಬುದನ್ನು ತಿಳಿಸುವಂತೆ ಅಧಿಕಾರಿಗೆ ತಿಳಿಸಿದರು.
ತಾ.ಪಂ.ಸದಸ್ಯೆ ಚೇತನಗಂಗಾಧರ್ ಮಾತನಾಡಿ, ಸಭೆಗೆ ತಾಲ್ಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸುತ್ತಿಲ್ಲ, ಅವರ ಸಹಾಯಕರೇ ಆಗಮಿಸುತ್ತಾರೆ, ಅಧಿಕಾರಿ ಹಾಜರಾಗದಿರುವ ಬಗ್ಗೆ ಕೇಳಿದರೆ ಮೀಟಿಂಗ್ ಇದೆ ತುಮಕೂರಿಗೆ ತೆರಳಿದ್ದಾರೆ ಎಂಬ ಉತ್ತರವನ್ನು ಪದೇ ಪದೇ ನೀಡುತ್ತಲೇ ಇರುತ್ತಾರೆ, ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಆಗಮಿಸಿರುವ ಸದಸ್ಯರಿಗೆ ಉತ್ತರವೇ ಗೊತ್ತಿರುವುದಿಲ್ಲ ಎಂದು ಆರೋಪಿಸಿದರು.
ತಾ.ಪಂ.ಸದಸ್ಯೆ ಶೈಲಾಶಶಿಧರ್ ಮಾತನಾಡಿ, ಸಭೆಗೆ ಅಧಿಕಾರಿಗಳೇ ಆಗಮಿಸಬೇಕು, ಅಧಿಕಾರಿಗಳು ಅವರ ಸಹಾಯಕರನ್ನು ಕಳುಹಿಸುವುದಾದರೆ ಸರಿಯಾದ ದಾಖಲೆ ಇಟ್ಟುಕೊಂಡಿರಬೇಕು ಹಾಗೂ ನಾವು ಕೇಳಿದ ಪ್ರಶ್ನೆಗೆ ಉತ್ತರಿಸಿರುವಂತಹವರನ್ನು ಮಾತ್ರ ಕಳುಹಿಸಬೇಕು ಎಂದು ತಾಕೀತು ಮಾಡಿದರಲ್ಲದೆ, ಪ್ರತಿ ಇಲಾಖೆಯವರು  ಸಾರ್ವಜನಿಕರ ಸಮಸ್ಯೆಯ ಬಗ್ಗೆ  ಕೇಳುವ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂಬ ಸಬೂಬು ಹೇಳದಂತೆ ವರದಿ ಸಿದ್ದಪಡಿಸಿರಬೇಕು ಎಂದು ಆಗ್ರಹಿಸಿದರು.
ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ ಮಾತನಾಡಿ, ಪಟ್ಟಣದ ಆಸ್ಪತ್ರೆಯಲ್ಲಿ 108 ತುತರ್ು ವಾಹನ ಕರೆ ಮಾಡಿದರೆ ಅದರ ವ್ಯವಸ್ಥೆಯೇ ಸರಿಯಾಗಿ ಇರುವುದಿಲ್ಲ ಎಂದರು.
ಆಸ್ಪತ್ರೆಯಲ್ಲಿ ನಡೆದ ಹೃದಯ ತಪಾಸಣೆ ಶಿಬಿರದ ಪ್ರಚಾರ ಸರಿಯಾಗಿ ನಡೆದಿಲ್ಲ, ತಪಾಸಣೆ ಎಷ್ಟು ಜನರಿಗೆ ನಡೆದಿದೆ ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡುತ್ತಿಲ್ಲ ಎಂದು ಸದಸ್ಯ ರಾಜ್ಕುಮಾರ್ ಹೇಳಿದರು.
ದಸೂಡಿ ಭಾಗದಲ್ಲಿ ಶಾಲಾ ಶಿಕ್ಷಕರ ಸಮಸ್ಯೆ ಹೆಚ್ಚಾಗಿದೆ ಅಲ್ಲಿಗೆ ತುತರ್ಾಗಿ ಶಿಕ್ಷಕರನ್ನು ನಿಯೋಜಿಸಿ ಆ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಎಂದು ಸದಸ್ಯ ಪ್ರಸನ್ನಕುಮಾರ್ ಹೇಳಿದರು.
ತಾಲ್ಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಕಳೆದ ಬಾರಿಗಿಂತ ಈ ಬಾರಿ ಕಡಿಮೆಯಾಗಿದೆ ಅದಕ್ಕಾಗಿ ಹೆಚ್ಚಿನ ಪರಿಹಾರ ಬೋಧನೆ ನಡೆಸುವಂತೆ ಬಿಇಓರವರಿಗೆ ತಿಳಿಸಿದರು.
ಬಿಇಓ ಕೃಷ್ಣಮೂತರ್ಿ ಮಾತನಾಡಿ, ದಸೂಡಿ, ತಾರೀಕಟ್ಟೆ, ಯರೇಕಟ್ಟೆ, ಬೋಜಿಹಳ್ಳಿ, ಅಣೆಕಟ್ಟೆ, ಓಟಿಕೆರೆ ಈ ಭಾಗದ ಆರು ಶಾಲೆಗಳಲ್ಲಿ ಶಿಕ್ಷಕರಿಲ್ಲ ಅದಕ್ಕಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದ ಅವರು,  ತಾಲ್ಲೂಕಿನಲ್ಲಿ ಆರ್.ಟಿ.ಇ ಅಡಿಯಲ್ಲಿ 19ಶಾಲೆಗಳಲ್ಲಿ ಖಾಲಿ ಇರುವ 163 ಮಕ್ಕಳ ಸೀಟ್ಗಳನ್ನು ತುಂಬಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ತಾಲ್ಲೂಕಿನಲ್ಲಿನ ನಿರಂತರ ಜ್ಯೋತಿ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಮಾಹಿತಿ ನೀಡಿ, ತಿಮ್ಮನಹಳ್ಳಿ ಭಾಗದಲ್ಲಿ ವಿದ್ಯುತ್ ಶಾಕ್ನಿಂದ ಮೃತಪಟ್ಟ ವ್ಯಕ್ತಿಗೆ ಪರಿಹಾರವೇನಾದರೂ ಬಂದಿದೆಯೇ ಹಾಗೂ ತಾಲ್ಲೂಕಿನ ಗ್ರಾಮೀಣ ಮಟ್ಟದ ಲೈನ್ಮೆನ್ಗಳು ಯೂನಿಫಾರಂ ಹಾಕದೇ ಇದ್ದಾರೆ ಇದರಿಂದ ಸಾರ್ವಜನಿಕರಿಗೆ ಲೈನ್ಮೆನ್ಗಳು ಯಾರೆಂಬುದು ಸರಿಯಾಗಿ ತಿಳಿಯುತ್ತಿಲ್ಲ ಹಾಗೂ ಸಾರ್ವಜನಿಕರಿಗೆ ವಿದ್ಯುತ್ ಲೈನ್ಗಳಿಂದ ತೊಂದರೆಯಾಗುತ್ತಿರುವ ಭಾಗಗಳಲ್ಲಿ ಸರಿಯಾದ ಕ್ರಮಕೈಗೊಳ್ಳಿ, ಮುರಿದು ಬೀಳುತ್ತಿರುವ ವಿದ್ಯುತ್ ಕಂಬಗಳನ್ನು ಬದಲಿಸುವಂತೆ ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್ ಬೆಸ್ಕಾಂ ಅಧಿಕಾರಿ ರಾಜಶೇಖರ್ರವರಿಗೆ ಸೂಚಿಸಿದರು. ಹೊಸಹಟಟಿ, ಕೆಂಪರಾಯನಹಟ್ಟಿ ಭಾಗಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ವಿದ್ಯುತ್ ಇಲ್ಲದ ತಾಲ್ಲೂಕಿನ ಬಡವಾಣೆಗಳಿಗೆ ವಿದ್ಯುತ್ ನೀಡುವ ಸೌಲಭ್ಯ ಹಾಗೂ ತಾಲ್ಲೂಕಿನಲ್ಲಿ ಎಷ್ಟು ಜನ ಲೈನ್ಮೆನ್ಗಳು ಯಾವ ಯಾವ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಎಸ್.ಸಿ, ಎಸ್.ಟಿ ಜನಾಂಗದವರನ್ನು ಅಂತರಜಾತಿ ವಿವಾಹವಾಗಿರುವವರು  ಎಷ್ಟು ಜನವಿದ್ದಾರೆ, ಅಸ್ಪೃಷ್ಯತಾ ನಿವಾರಣಾ ಕಾರ್ಯಕ್ರಮಗಳನ್ನು ನಡೆಸಿದ ಹಾಗೂ ಅದಕ್ಕೆ ವೆಚ್ಚವಾದ, ಉಳಿದ ಹಣದ ಬಗ್ಗೆ ಅಂಕಿ-ಅಂಶದ ವರದಿ ಹಾಗೂ ಹುಳಿಯಾರಿನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ವರದಿಯ ಬಗ್ಗೆ ನೀಡುವಂತೆ ಸದಸ್ಯರು ತಿಳಿಸಿದರು. 
ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಸದಸ್ಯರುಗಳಾದ ಮಧು, ಕೇಶವಮೂತರ್ಿ, ಪ್ರಸನ್ನ, ಜಯಮ್ಮ, ಚೇತನಗಂಗಾಧರ್, ಹೆಚ್.ಎನ್.ಕುಮಾರ್, ಯತೀಶ್, ಕಲ್ಯಾಣಿಬಾಯಿ, ಆರ್.ಕಲಾವತಿ, ಇಂದ್ರಕುಮಾರಿ, ಜಯಮ್ಮ, ಚಂದ್ರಶೇಖರ್, ಚಂದ್ರಕಲಾ, ಹರ್ಷ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್-1
ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಸಂಚಾರಿ ಪಶುಆಸ್ಪತ್ರೆಯ ಸಂಚಾರಿ ಘಟಕವನ್ನು ಸ್ಥಗಿಸಗೊಳಿಸಲು ತಾಲ್ಲೂಕು ಪಂಚಾಯ್ತಿ ಸಭೆ ಅನುಮೋದಿಸಬೇಕು ಎಂದು ಸಹಾಯಕ ಪಶುವೈದ್ಯಾಧಿಕಾರಯೇ ಮನವಿ ಸಲ್ಲಿಸಿದ ಅಪರೂಪದ ಘಟನೆ ನಡೆಯಿತು.
ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆ ಇದೆ. ಒಬ್ಬೊಬ್ಬ ಪಶುವೈದ್ಯರು ನಾಲ್ಕು ಪಶು ಆಸ್ಪತ್ರೆಯನ್ನು ನೋಡಿಕೊಳ್ಳುವ ಸ್ಥಿತಿ ಇದೆ. ಆದ್ದರಿಂದ ಸಂಚಾರಿ ಘಟಕವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದರು. ಸಿಟ್ಟಿಗೆದ್ದ ಸದಸ್ಯರು ಗ್ರಾಮಾಂತರ ಕುರಿಗಾಹಿ ಹಾಗೂ ಪಶುಸಾಗಣೆದಾರಿಗೆ ವರದಾನವಾಗಿರುವ ಯೋಜನೆಯನ್ನು ರದ್ದುಪಡಿಸಲು ಕೇಳುತ್ತೀರಲ್ಲ, ಕಾರ್ಯಬಾರ ಸರಿದೂಗಿಸಿಕೊಂಡು ಯೋಜನೆ ಮುಂದುವರೆಸಿ ಎಂದರು.

ಬಾಕ್ಸ್-2
ತಾಲ್ಲೂಕು ಪಂಚಾಯಿತಿ ಸಭೆ 11ಗಂಟೆಗೆ ನಿಗಧಿಯಾಗಿತ್ತು ಆದರೆ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ 12ಗಂಟೆಯಾದರೂ ಬಾರದಿದ್ದಕ್ಕೆ ಅಧ್ಯಕ್ಷರು,  ಉಪಾಧ್ಯಕ್ಷರನ್ನು ಕಾದು ಕುಳಿತರು, ಸದಸ್ಯರು ಕೋರಂ ಇದೆಯಲ್ಲಾ, ಸದಸ್ಯರೆಲ್ಲಾ ಒಂದು ಗಂಟೆಯಿಂದ ಕಾಯುತ್ತಿದ್ದೇವೆ  ಸಭೆ ಪ್ರಾರಂಭಿಸಿ ಎಂದಿದಕ್ಕೆ,  ಅಧ್ಯಕ್ಷರು ಮಾತ್ರ ಸಭೆಯನ್ನು ಪ್ರಾರಂಭಿಸಿದೆ, ಉಪಾಧ್ಯಕ್ಷರು ಬರಲಿ ಪ್ರಾರಂಭಿಸೋಣ ಎನ್ನುತ್ತಾ, ಉಪಾಧ್ಯಕ್ಷರಿಗೆ  ದೂರವಾಣಿ ಕರೆ ಮಾಡಿದ ನಂತರ ಉಪಾಧ್ಯಕ್ಷರು ಸಭೆಗೆ ಹಾಜರಾದರು. ಆಗ ಸಭೆ ಪ್ರಾರಂಭವಾಯಿತು.

Tuesday, May 24, 2016



ಬೆಳ್ಳಿಪಲ್ಲಕ್ಕಿ ಉತ್ಸವದೊಂದಿಗೆ ಮುಕ್ತಾಯಗೊಂಡ ಗುರುಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.24 : ವರ್ಷಗಳ ನಂತರ ಸಂಪನ್ನಗೊಂಡ ತಾಲ್ಲೂಕಿನ ಗೋಡೆಕೆರೆ ಶ್ರೀ ಸಿದ್ದರಾಮೇಶ್ವರಸ್ವಾಮಿಯ ಮಹಾರಥೋತ್ಸವ (ದೊಡ್ಡಜಾತ್ರೆ) ಗುರುಸಿದ್ದರಾಮೇಶ್ವರರ ಬೆಳ್ಳಿಪಲ್ಲಕ್ಕಿಯ ಉತ್ಸವದೊಂದಿಗೆ ತೆರೆಕಂಡಿತು.
ಮಂಗಳವಾರ ನಸುಕಿನಲ್ಲಿ ನಡೆದ ಬೆಳ್ಳೀಪಲ್ಲಕ್ಕಿ ಉತ್ಸವದಲ್ಲಿ ಸಿದ್ಧರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ,ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಭಾಗಿಯಾಗಿದ್ದರು. ಬೆಳ್ಳಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೋಮವಾರ ರಾತ್ರಿ 10ಕ್ಕೆ ಪ್ರಾರಂಭವಾಗಿ ಮಂಗಳವಾರ ಬೆಳಗ್ಗೆ 6ಗಂಟೆಯವರೆಗೆ ನಡೆಯಿತು.
   ಒಂದು ವಾರದ ಕಾಲ ಪ್ರತೀ ಸಂಜೆ ಜಾತ್ರೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳು ಜಾತ್ರೆಗೆ ಮೆರುಗು ತಂದವು. ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
   ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಶ್ರೀ ಗುರುಸಿದ್ದರಾಮೇಶ್ವರ ದೇವಾಲಯದ ಜೀಣರ್ೋದ್ದಾರ ಮಹಾಪೋಷಕರಾದ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಶಾಸಕ ಸಿ.ಬಿ.ಸುರೇಶ್ಬಾಬು ಸೇರಿದಂತೆ ಭಕ್ತಾಧಿಗಳು ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.
ಮುಕ್ತಾಯ ಸಮಾರಂಭ :   109ಅಡಿ ಎತ್ತರದ ರಾಜಗೋಪುರ ನಿಮರ್ಾಣಕ್ಕೆ ತನುಮನದಿಂದ ಧನ ಸಹಾಯ ಮಡುವಂತೆ ಹಾಗೂ ಗೋಡೆಕೆರೆ ಯಾತ್ರಾ ಸ್ಥಳವಾಗದೇ ಒಂದು ವಿಶ್ವ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಎಲ್ಲರೂ ಕೈಜೋಡಿಸುವಂತೆ ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ತಾಲ್ಲೂಕಿನ ಗೋಡೆಕೆರೆಯ ಶ್ರೀಸಿದ್ದರಾಮೇಶ್ವರ ಮಹಾಸ್ವಾಮಿಯವರ ದೊಡ್ಡಜಾತ್ರೆಯ ಕೊನೆಯ ದಿನವಾದ ಸೋಮವಾರ ರಾತ್ರಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ದಾಸೋಹ ತತ್ವ ಭೋದಕ, ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ ಜಾತ್ರೆಯು ಒಂದು ವಾರಗಳಕಾಲ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ, ವಿವಿಧ ಸಾಧಕರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎಲ್ಲ ವರ್ಗದ ಜನರು ತಾರತಮ್ಯವಿಲ್ಲದೇ ಪಾಲ್ಗೊಂಡು ಯಾವುದೇ ಬಿನ್ನಾಬಿಪ್ರಾಯಗಳು ಬರದಂತೆ ನಡೆದುಕೊಂಡು ಬಂದಿದ್ದು ಈ ಜಾತ್ರೆಯು ಅದ್ದೂರಿಯಾಗಿ ಜಾತ್ರೆಯು ಯಶಸ್ವಿಯಾಗಿದೆ, ಈ ಯಶ್ವಸಿಗೆ ಕಾರಣರಾದ ಎಲ್ಲಾ ಸಕರ್ಾರಿ ಇಲಾಖೆಗಳಿಗೆ ಹಾಗೂ ಎಲ್ಲಾ ಭಕ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಸುಮಾರು ಎರಡುವರೆ ಎಕರೆ ವಿಸ್ತೀರ್ಣವಿರುವಂತಹ ಶ್ರೀಸಿದ್ದರಾಮೇಶ್ವರಸ್ವಾಮಿ ದೇವಾಲಯದ ಜೀಣರ್ೋದ್ದಾರ ಕಾರ್ಯ ನಡೆಯುತ್ತಿದ್ದು ಈ ಕ್ಷೇತ್ರದಲ್ಲಿ ಸುಮಾರು ಒಟ್ಟಾರೆ 25ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಮಾಡಬೇಕಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತ್ರೆಯ ಯಶ್ವಸಿಗೆ ಕಾರಣರಾದ ಸಿದ್ದರಾಮೇಶ್ವರ ಸ್ವಾಮಿಯ ಭಕ್ತರಿಗೆ ಹಾಗೂ ಜಾತ್ರೆಯಲ್ಲಿ ತೊಡಗಿಸಿಕೊಂಡಂತಹ ಎಲ್ಲರನ್ನು ಪ್ರಶಂಸಿದ ಅವರು ಸಿದ್ದರಾಮೇಶ್ವರಸ್ವಾಮಿ ದೇವಾಲಯದ ನಿಮರ್ಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು, ಮುಂದಿನ ವರ್ಷ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲು ಅನುಮತಿ ನೀಡಿದರೆ ಗೋಡೆಕೆರೆಯಲ್ಲೇ ಆಚರಿಸಲು ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು ಗಣಿ ಬಾದಿತ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಈ ಕ್ಷೇತ್ರದ ಅಭಿವೃದ್ದಿಗಾಗಿ ಹೆಚ್ಚು ಹಣವನ್ನು ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಾತ್ರೆಯ ಯಶಸ್ವಿಯಾಗಲು ಕಾರಣರಾದಂತಹ ದೇವರ ಜೊತೆಯಲ್ಲಿ ಓಡಾಡಿದವರು, ದಾಸೋಹವನ್ನು ನೋಡಿಕೊಂಡವರು, ಬೆಳಕಿನ ವ್ಯವಸ್ಥೆ ಮಾಡಿದವರು, ರಸ್ತೆ, ಕಲ್ಯಾಣಿ, ದೇವಾಲಯದ ಸ್ವಚ್ಚತೆ, ತಪೋವನದ ಸ್ವಚ್ಛತೆ, ನೀರಿನ ವ್ಯವಸ್ಥೆ ಮಾಡಿದ್ದಂತಹವರನ್ನು  ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಡೆಕೆರೆಯ ಮೃತ್ಯುಂಜಯದೇಶೀಕೇಂದ್ರ ಸ್ವಾಮಿಜಿ, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಗುಬ್ಬಿ ಜಿ.ಪಂ.ಸದಸ್ಯ ಕೃಷ್ಣಪ್ಪ, ರಾಜ್ಯ ಹಾಲುಒಕ್ಕೂಟದ ಸದಸ್ಯರಾದ ಚಂದ್ರಶೇಖರ್, ತಿಪ್ಪೂರು ಶಿವಯ್ಯ, ಜಗಜ್ಯೋತಿ ಸಿದ್ದರಾಮಯ್ಯ, ಬೆಣ್ಣೆಹಳ್ಳಿ ಸಿದ್ದರಾಮಯ್ಯ ಗುರುಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Saturday, May 21, 2016




ಗುರುಸಿದ್ದರಾಮೇಶ್ವರ ಜಾತ್ರೆಗೆ ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಮೇ.21 : ಪ್ರಧಾನಮಂತ್ರಿ ಮೋದಿಯವರ ಆಶಯವನ್ನು ಈಡೇರಿಸುವುದು ನನ್ನ ಆದ್ಯತೆ, 40-50 ವರ್ಷಗಳ ನಂತರ ರಾಜ್ಯದಲ್ಲಿ ಭೀಕರ ಬರಗಾಲದಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಳೆಯಿಲ್ಲದೆ ದನಗಳಿಗೆ, ಮೇವಿಲ್ಲದೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಳೆಯ ಜನ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಎಂದು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಗೋಡೆಕೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೇಶ್ವರರ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ, ನದಿ ಜೋಡಣೆಗೆ ವಿನೂತನ ಬೆಳೆವಿಮೆಗೆ ಜಾರಿಗೆ ತಂದಿದ್ದಾರೆ, ರೈತರು ಶೇ.2%ರಷ್ಟು ಬೆಳೆವಿಮೆಯ ಪ್ರೀಮಿಯಂ ಕಟ್ಟಿದ್ದರೆ ಸಾಕು, ಶೇ.35%ರಷ್ಟು ಬೆಳೆ ನಾಶವಾದರೆ, ಸೆಟ್ಲೈಟ್ ಮುಖಾಂತರ ವೀಕ್ಷಿಸಿ ಸಂಪೂರ್ಣ ವಿಮೆ ನೀಡಲಾಗುತ್ತಿದೆ, ಕೆರೆ ಹೂಳು ತೆಗೆಯುವುದು, ರಾಜ್ಯದಲ್ಲಿ 12ರಿಂದ 15ಗಂಟೆ ಉಚಿತ ವಿದ್ಯುತ್ ನೀಡುವ ಅಪೇಕ್ಷೆ ಇದೆ, ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಿ ದೇಶದ ಆಥರ್ಿಕ ಸ್ಥಿತಿ ಸುಧಾರಣೆ ತಂದಿದ್ದಾರೆ, ರೈಲ್ವೆ, ರಸ್ತೆ, ಸುಧಾರಣೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದ ಅವರು, ಚೀನಾ, ಅಮೇರಿಕಾಗಿಂತಲೂ ಭಾರತ ಆಥರ್ಿಕವಾಗಿ ಬಲಿಷ್ಠವಾಗುತಿದೆ, ಭಾರತ ಶತಮಾನದ ಆಥರ್ಿಕವಾಗಿ ಬಲಿಷ್ಠವಾಗುತ್ತಿದೆ ಎಂದರು.
 ಹಿಂದಿನ ಸಕರ್ಾರಗಳು ಅನ್ನದಾತ  ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಸರಿಯಾದ ವಿದ್ಯುತ್ ಸಮನ್ವಯ ಬಗ್ಗೆ ಗಮನ ಹರಿಸಿಲ್ಲ ಎಂದ ಅವರು,  ತಾವು ಮುಖ್ಯಮಂತ್ರಿಯಾದಾಗ ರೈತರಿಗೆ ಉಚಿತ ವಿದ್ಯುತ್, ಸುವರ್ಣಗ್ರಾಮ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪಕ್ಷಬೇಧ ಮರೆತು ರಾಜ್ಯದ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ ಎಂದರು.
ಕಾಯಕಯೋಗಿ ಸಿದ್ದರಾಮರು ಕೆರೆಕಟ್ಟೆಗಳನ್ನು ಕಟ್ಟಿ ಅವುಗಳ ಸಂರಕ್ಷಣೆ ಜನರಲ್ಲಿ ಕಾಯಕದ ಬಗ್ಗೆ ಜಾಗೃತಿ ಮೂಡಿಸಲು ನಾಲ್ಕು ಸಾವಿರ ಶಿಷ್ಯರ ಮೂಲಕ ಕೆರೆ ಕಟ್ಟೆಗಳನ್ನು ಕಟ್ಟಲು ತೊಡಗಿಸಿಕೊಂಡಿದ್ದರು, ಶರಣರು ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸದೃಢರಾಗಬೇಕು ಎಂದು ಆಶಯ ಹೊಂದಿದ್ದರು ಎಂದರು.
ಮಾಜಿ ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಲ್ಲಿ ನೀರಿಲ್ಲ ಅನೇಕ ನಾಯಕರ ಹೋರಾಟದ ಫಲವಾಗಿ ಇಂದು ಜಿಲ್ಲೆಗೆ ನೀರಾವರಿ ಯೋಜನೆಗಳಿಂದ ನೀರು ಬಂದಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಮೊದಲ ಆದ್ಯತೆಯನ್ನು ನೀರಾವರಿಗೆ ನೀಡಿ ಕೃಷ್ಣನದಿ ಪಾತ್ರದ ಮಧ್ಯಕನರ್ಾಟಕದ ಹಾಗೂ ತುಮಕೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವ ಕಾರ್ಯಕ್ರಮ ರೂಪಿಸಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಚಿ.ನಾ.ಹಳ್ಳಿ ತಾ.ಹೇಮಾವತಿ ನಾಲೆಯಿಂದ 28ಕೆರೆಗಳಿಗೆ ನೀರು ಹರಿಸಿ ಯೋಜನೆಗೆ ಹಣ ಬಿಡುಗಡೆ ಮಾಡಿದರು. 
ಈಗ ನಾನಾ ಕಾರಣಗಳಿಂದ ಕಾಮಗಾರಿ ಕುಂಠಿತಗೊಂಡಿದೆ, ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಜಾರಿಗೆ ತರುವ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಸಕರ್ಾರವನ್ನು ಆಗ್ರಹಿಸಿದರು. ಗೋಡೆಕೆರೆಯ ಶ್ರೀ ಸಿದ್ದರಾಮೇಶ್ವರ ತಾಲ್ಲೂಕಿನ ವನ ವಿಶ್ವ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ, ಈ ಭಾಗದ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಇಲ್ಲಿನ ಅಂತರ್ಜಲ ಮಟ್ಟ ಸುಧಾರಿಸಿದೆ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಶರಣರ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು ನಮಗಾಗಿ ಬಿಟ್ಟು ಹೋದ ಸಂದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಸಿದ್ದರಾಮೇಶ್ವರರು ಕೆರೆ-ಕಟ್ಟೆ ದೇವಾಲಯಗಳನ್ನು ಕಟ್ಟುವ ಮೂಲಕ ಕಾಯಕ ಯೋಗಿಯಾಗಿ ಸಮಾಜಕ್ಕೆ ಮಾರ್ಗದರ್ಶನವಾದರೂ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು 21ನೇ ಶತಮಾನ ಮಾನವ ಧರ್ಮವಾಗಬೇಕು ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಒಂದು ವಾರ ಕಾಲ ನಡೆಯುವ ಜಾತ್ರೆಯ ದಾಸೋಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಬಸವರಾಜು ಬೊಮ್ಮಾಯಿರುವರು ನೀರಾವರಿ ಸಚಿವರಾಗಿದ್ದಾಗಿ ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗೆ 102ಕೋಟಿ ಬಿಡುಗಡೆ ಮಾಡಿದ್ದರು, ನಡುವನಹಳ್ಳಿ, ಜೆ.ಸಿ.ಪುರ ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸಲು 12ಕೋಟಿ ರೂ ಬಿಡುಗಡೆ ಮಾಡಿ ಈ ಭಾಗದ ಕೆರೆಗಳಿಗೆ ನೀರು ಹರಿಸಿರುವುದರಿಂದ ಅಂತರ್ಜಲ ಹೆಚ್ಚಾಗಿದೆ ಎಂದ ಅವರು, ಶ್ರೀ ಸಿದ್ದರಾಮೇಶ್ವರರ ದೇವಾಲಯ ಜೀಣರ್ೋದ್ದಾರ ಕಾರ್ಯಕ್ರಮಕ್ಕೆ 15ಕೋಟಿ ವೆಚ್ಚವಾಗುತ್ತಿದ್ದು ರಾಜಗೋಪುರ ನಿಮರ್ಿಸಲು 5 ರಿಂದ 6ಕೋಟಿ ರೂಪಾಯಿ ಭಕ್ತರು ನೀಡುತ್ತಿದ್ದಾರೆ, ಗೋಡೆಕೆರೆಯಲ್ಲಿ ಯಾತ್ರಿ ನಿವಾಸ ಹಾಗೂ ಸಮುದಾಯ ಭವನ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಅಂದಿನ ಜಿಲ್ಲಾಧಿಕಾರಿಗಳ ನಿರ್ಲಕ್ಷದಿಂದ ಹಣ ವಾಪಸ್ ಹೋಯಿತು, ತಾಲ್ಲೂಕಿನ ಗಣಿಗಾರಿಕೆಯಿಂದ ಬರುವ ಹಣವನ್ನು ಗೋಡೆಕೆರೆ ಭಾಗಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕಾಯಕವೇ ಜೀವನ, ಕೆರೆ-ಕಟ್ಟೆಗಳನ್ನು ನಿಮರ್ಿಸುವುದು, ಗೋವುಗಳ ರಕ್ಷಣೆ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳಿಗೆ ಸಿದ್ದರಾಮೇಶ್ವರರು ಆದ್ಯತೆ ನೀಡಿ ಕಾಯಕ ಯೋಗಿಗಳಾದರು, ಪೂಜೆ ಶ್ರೇಷ್ಠವಲ್ಲ ಕಾಯಕ ಧರ್ಮ ಶ್ರೇಷ್ಠ ಎಂದ ಅವರು ಈಗ ಹಣ ಶ್ರೇಷ್ಠವಾಗಿದೆ ಹಣದಿಂದಲೇ ಗುರುತಿಸಿಕೊಳ್ಳುವುದು ಶ್ರೇಷ್ಠವಲ್ಲ, ಸಾಧನೆಯಿಂದ ಮೇಲೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಮಾಜಿ ಶಾಸಕರಾದ ಬಿ.ಸಿ.ನಾಗೇಶ್, ಕೆ.ಎಸ್.ಕಿರಣ್ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮಸಾಲೆಜಯರಾಂ, ಎಂ.ಎಂ.ಜಗದೀಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಕಲ್ಲೇಶ್, ತಾ.ಪಂ.ಸದಸ್ಯೆ ಶೈಲಶಶಿಧರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎನ್.ವಿ.ಅನಘ ವಿರಚಿತ ಮಕ್ಕಳ ಕಥೆಗಳ ಆಕೃತಿ ಪುಸ್ತಕವನ್ನು ಮಾಜಿ ಸಚಿವ ಸೊಗಡು ಶಿವಣ್ಣ ಬಿಡುಗಡೆ ಮಾಡಿದರು.
ಬಾಕ್ಸ್-1
ರಾಜ್ಯಾಧ್ಯಕ್ಷ ಸ್ಥಾನ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರ ಸ್ಥಾನ ಹೊಂದಿರುವ ನಿಮ್ಮನ್ನು ಈ ರಾಜ್ಯದ  ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿಲ್ಲ ಕೇವಲ ರಾಜ್ಯಾದ್ಯಕ್ಷ ಸ್ಥಾನಕ್ಕೆ ತೃಪ್ತಿಪಡುವಿರಾ ಇಲ್ಲ ನೀವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂಘೋಷಣೆ ಪಡಿಸಿಕೊಳ್ಳುವಿರಾ ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ರಾಜ್ಯದ ಜನರ ಆಶಿವರ್ಾದ ಮತ್ತು ದೈವ ಬಲ ಇದ್ದಂತೆ ಎಂದು ಹೇಳಿದರು.
ಐದು ರಾಜ್ಯಗಳ ಚುನಾವಣಾ ಫಲಿತಾಂಶ ಒಳ್ಳೆಯ ಫಲಿತಾಂಶ ಬಂದಿದೆ ಬಿಜೆಪಿ ಪಕ್ಷಕ್ಕೆ ಹಾಗೂ ಭವಿಷ್ಯದಲ್ಲಿ ರಾಜ್ಯದ ಗೆಲುವಿಗೆ ಸಹಕಾರಿಯಾಗಲಿದೆ, ಈ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
 ಇದೊಂದು ಬಹಳ ಒಳ್ಳೆಯ ಗೆಲುವು ಆಗಿದೆ, ಕೇರಳ ರಾಜ್ಯದಲ್ಲಿ ಮೊದಲ ಬಾರಿಗೆ ಬಿ.ಜೆ.ಪಿ ಖಾತೆ ತೆರೆಯುವ ಮೂಲಕ ಹೊಸ ಮುನ್ನುಡಿ ಬರೆದಿದೆ, ಈ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ನಾಶವಾಗಲಿದೆ ಕನರ್ಾಟಕ ರಾಜ್ಯದಲ್ಲಿ ಕೂಡ ಬಿ.ಜೆ.ಪಿ ಅಧಿಕಾರ ಹಿಡಿಯಲಿದೆ ಎಂದರು. 
ಬಿ.ಎಸ್.ಯಡಿಯೂರಪ್ಪ,  ಬಿಜೆಪಿ ರಾಜ್ಯಾಧ್ಯಕ್ಷ

ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಪತ್ರಿಕಾಗೋಷ್ಠಿ 
ಚಿಕ್ಕನಾಯಕನಹಳ್ಳಿ,ಮೇ.21 : ಫೆಬ್ರವರಿ ತಿಂಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವವಿದ್ದುದರಿಂದ ತುತರ್ಾಗಿ ನೀರು ಸರಬರಾಜು ಮಾಡುವ ಹಿನ್ನಲೆಯಲ್ಲಿ ಅಂದಿನ ಅಧ್ಯಕ್ಷರಾದ ಪ್ರೇಮಾರವರ ಅವಧಿಯಲ್ಲಿ ಚೆಕ್ನೆಟ್, ವಾಲ್ಡ್ರಾಡ್ ರಿಪೇರಿ ಸೇರಿದಂತೆ ದಬ್ಬೆಘಟ್ಟದ ಕೊಳವೆ ಬಾವಿಗೆ ಕೇಬಲ್ ಅಳವಡಿಸಲು 1.78ಲಕ್ಷ ರೂ ನೀಡಿದ್ದೇನೆ ಉಪವಿಭಾಗಾಧಿಕಾರಿಗಳ ಆಡಳಿತಾವಧಿಯಲ್ಲಿ ಅಲ್ಲ ಎಂದು ಪುರಸಬಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸ್ಪಷ್ಟಪಡಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸದಸ್ಯರು ವಾಲ್ರಾಡ್, ಚೆಕ್ನೆಟ್ಗೆ 500 ರೂ ಬೆಲೆ ಬಾಳುತ್ತದೆ ಎಂದು ಆರೋಪಿಸಿದ್ದಾರೆ ಆದರೆ ವಾಸ್ತವ ಇದರ ಬೆಲೆ ನಾಲ್ಕು ಸಾವಿರಕ್ಕೂ ಹೆಚ್ಚಾಗಿದೆ, ಸಂಬಂಧಪಟ್ಟ ಗುತ್ತಿಗೆದಾರರಿಗೆ ಚೆಕ್ ನೀಡಿದ್ದೇವೆ ಹೊರತು ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು. ಪಟ್ಟಣದಲ್ಲಿ ಹೊಸದಾಗಿ 19ಕೊಳವೆ ಬಾವಿಗಳನ್ನು ಕೊರೆದಿದ್ದು 12ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಲಾಗಿದೆ ಇನ್ನು 7ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಬಂದ ತಕ್ಷಣ 2 ರಿಂದ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದರು.
  ಪುರಸಭೆಯಲ್ಲಿ ಮಧ್ಯವತರ್ಿಗಳ ಹಾವಳಿ ಇಲ್ಲ, ಕೆಲವು ಮಧ್ಯವತರ್ಿಗಳು ಹಣ ಮಾಡಲು ಬಂದರೆ ಅಂತಹವರ ಬಗ್ಗೆ ನಮ್ಮ ಗಮನಕ್ಕೆ ತರುವಂತೆ ಹಾಗೂ ಪುರಸಭಾ ಸಿಬ್ಬಂದಿಗಳು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಸಿಬ್ಬಂದಿಗಳು ಯಾರದೇ ಒತ್ತಡಕ್ಕೆ ಮಣಿಯಬಾರದು ಹಾಗೇನಾದರೂ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿ ಆಸ್ತಿಗಳ ಖಾತೆ ಮಾಡಿದರೆ ಅದಕ್ಕೆ ಅವರೇ ಜವಬ್ದಾರರು ಅಂತಹವರ ಮೇಲೆ ಸಾರ್ವಜನಿಕರು ತಮ್ಮ ಗಮನಕ್ಕೆ ತಂದರೆ ನಿದರ್ಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಕಿರಿಯ ಅಭಿಯಂತರರುಗಳಾದ ಯೋಗಾನಂದ್ಬಾಬು, ಮಹೇಶ್, ಸಿಬ್ಬಂದಿಗಳಾದ ನಾಗರಾಜು, ಶಿವಣ್ಣ, ಜಯಶಂಕರ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಹೆಚ್.ಡಿ.ದೇವೇಗೌಡ ಪತ್ರಿಕಾಗೋಷ್ಠಿ
ಚಿಕ್ಕನಾಯಕನಹಳ್ಳಿ,ಮೇ.21 : ಕೇಂದ್ರದ ಬಿ.ಜೆ.ಪಿ ಸಕರ್ಾರ  ರೈತರಿಗೆ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನೀಡಿಲ್ಲ, ರಾಜ್ಯ ಸಕರ್ಾರ ಸಮರ್ಥವಾಗಿ ಬರ ಪರಿಸ್ಥಿತಿಯನ್ನು ನಿಭಾಯಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆರೋಪಿಸಿದರು.
ತಾಲ್ಲೂಕಿನ ಯಳನಡು ಸಿದ್ದರಾಮೇಶ್ವರ ಜಾತ್ರೆಗೆ ಪಾಲ್ಗೋಳ್ಳಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿದರು. ಇತ್ತೀಚೆಗೆ ನಡೆದ ಐದು ರಾಜ್ಯಗಳ ಫಲಿತಾಂಶ ಪ್ರಾದೇಶಿಕ ಪಕ್ಷಗಳ ಸಾಮಥ್ರ್ಯವನ್ನು ತೋರಿಸಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳೇ ರಾಷ್ಟ್ರ ರಾಜಕಾರಣದಲ್ಲಿ ನಿಣರ್ಾಯಕ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಸ್ಸಾಂನ ವಲಸಿಗರ ಸಮಸ್ಯೆಯನ್ನು ಕಾಂಗ್ರೆಸ್ ಸೂಕ್ಷವಾಗಿ ಗ್ರಹಿಸದೇ ಎಡವಿದ್ದರ ಪರಿಣಾಮವಾಗಿ ಬಿ.ಜೆ.ಪಿ ಅಧಿಕಾರಕ್ಕೆ ಬಂದಿತು. ಅಸ್ಸಾಂನ ಜನತೆ ಮೋದಿಯವರ ಮೇಲೆ ನಂಬಿಕೆ ಇಟ್ಟು ಪಕ್ಷವನ್ನು ಗೆಲ್ಲಿಸಿದ್ದಾರೆ. ಅವರ ಅಶೋತ್ತರವನ್ನು ಈಡೇರಿಸುವ ಜವಬ್ದಾರಿ ನರೇಂದ್ರ ಮೋದಿಯವರ ಮೇಲಿದೆ ಎಂದರು.
ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸಕರ್ಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಹಾಯ ಮಾಡಿಲ್ಲ ಬಿಜೆ.ಪಿ ನಾಯಕರು ರಾಜ್ಯ ಸುತ್ತಿ ಸಾಂತ್ವಾನ ಹೇಳುವ ನಾಟಕ ಮಾಡಿದ್ದಾರೆ. ಸ್ವಂತಹ ಸಿದ್ದರಾಮಯ್ಯ ಅವರೇ ಸಂತ್ರಸ್ಥರ ಮನೆಗೆ ಹೋಗಿ ಬಂದಿದ್ದಾರೆ, ಸಾಂತ್ವನ ಸಮಸ್ಯೆಗಳಿಗೆ ಪರಿಹಾರವಲ್ಲ. ಬರಗಾಲವನ್ನು ಎದುರಿಸುವ ಬದ್ದತೆಯನ್ನು ಎರಡು ಸಕರ್ಾರಗಳು ತೋರುತ್ತಿಲ್ಲ ಎಂದರು.
ಮಂಡ್ಯದ ಕಬ್ಬ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಾಗ ರೈತರ ಮನೆಗೆ ಮೊದಲು ಹೋದವನು ನಾನು, ನಂತರ ಕೃಷ್ಣ ಬಂದರು, ಆಮೇಲೆ ಸಕರ್ಾರ, ನನ್ನ ರೈತ ಪರ ಕಾಳಜಿ ಏತಹದು ಎಂದು ಹೇಳಲು ಇಷ್ಟು ಸಾಕು ಎಂದರು.
ಈಗ ನನಗೆ 83ವರ್ಷ ಈಗಾಗಲೇ ರಾಜ್ಯದಾದ್ಯಂತ ಸುತ್ತಿ ಪಕ್ಷ ಸಂಘಟಿಸಿದ್ದೇನೆ, ಪುನಃ ಮತ್ತೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಬಲಗೊಳಿಸುತ್ತೇನೆ, ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ರೂ.50ಸಾವಿರದಿಂದ 1ಲಕ್ಷದವರೆವಿಗೆ ವೈಯಕ್ತಿಕ ಪರಿಹಾರ ನೀಡಿದ್ದಾರೆ, ಕೇಂದ್ರ ಸಕರ್ಾರದಿಂದ ರಾಜ್ಯ ಸಕರ್ಾರ ಪರಿಹಾರದ ಹಣ ಬಂದಿಲ್ಲ ಎಂದು ಆರೋಪಿಸಿದರೆ, ರಾಜ್ಯ ಬಿಜೆಪಿ ನಾಯಕರುಗಳು ಬಿಡುಗಡೆಯಾಗಿರುವ ಹಣವನ್ನು ಸರಿಯಾಗಿ ಖಚರ್ು ಮಾಡಿಲ್ಲ ಎಂದು ಆರೋಪ, ಪ್ರತ್ಯಾರೋಪ ಮಾಡುವ ಮೂಲಕ ಬರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆಗಳ ರಾಜಕೀಯ ಮೈತ್ರಿಯನ್ನು  ರಾಜ್ಯ ಹಾಗೂ ರಾಷ್ಟ್ರರಾಜಕಾರಣಕ್ಕೆ ತಳಕು ಹಾಕಬಾರದು, ಸ್ಥಳೀಯ ನಾಯಕರುಗಳ ಸಲಹೆಯಂತೆ ತುಮಕೂರು ಮತ್ತು ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್






ಹಾಗೂ ಶಿವಮೊಗ್ಗ ಮತ್ತು ಬೆಂಗಳೂರು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರುಗಳಾದ ಹೆಚ್.ಬಿ.ಪ್ರಕಾಶ್, ಸಿ.ಡಿ.ಚಂದ್ರಶೇಖರ್, ಸಿ.ಎಸ್.ರಮೇಶ್,   ಮುಖಂಡರುಗಳಾದ ಸಿ.ಎಸ್.ನಟರಾಜು, ಸಿ.ಡಿ.ಸುರೇಶ್, ಎಂ.ಎನ್.ಸುರೇಶ್, ಸಿ.ಎಲ್.ದೊಡ್ಡಯ್ಯ, ಸಿ.ಹೆಚ್.ದೊರೆಮುದ್ದಯ್ಯ, ಪುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬಾಲಕ ಮತ್ತು ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.21 : ತಾಲ್ಲೂಕಿನ ಹಾಗೂ ಪಟ್ಟಣದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಮೆಟ್ರಿಕ್ ನಂತರದ ಕೋಸರ್್ಗಳಲ್ಲಿ ಅಧ್ಯಯನ ಮಾಡುತ್ತಿರುವ ಪ.ಜಾತಿ, ಪ.ವರ್ಗದ ವಿದ್ಯಾಥರ್ಿಗಳಿಗಾಗಿ ಅಜರ್ಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ(ಗ್ರೇಡ್-2) ತಿಳಿಸಿದ್ದಾರೆ.
ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಗುರುವಾಪುರ, ಚಿಕ್ಕನಾಯಕನಹಳ್ಳಿ ಟೌನ್, ದಸೂಡಿ, ಹುಳಿಯಾರು, ಬರಕನಹಾಳ್, ಬೆಳಗುಲಿಗಳಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯ ಮತ್ತು ಚಿಕ್ಕನಾಯಕನಹಳ್ಳಿ ಟೌನ್ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಈ ಸಾಲಿಗಾಗಿ 5 ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಅರ್ಹ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ತಾಲ್ಲೂಕಿನ ಗೋಡೆಕೆರೆ ಗೇಟ್ನಲ್ಲಿರುವ ಪರಿಶಿಷ್ಠ ವರ್ಗದ ಆಶ್ರಮ ಶಾಲೆಗೆ 1 ರಿಂದ 5ನೇ ತರಗತಿಯ ಪರಿಶಿಷ್ಟ ವರ್ಗ / ಪ.ಜಾತಿ / ಹಿಂದುಳಿದ ವರ್ಗದ ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ನಿಲಯ ಮೇಲ್ವಿಚಾರಕರು ಅಥವಾ ಸಹಾಯಕ ನಿದರ್ೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆರವರನ್ನು ಸಂಪಕರ್ಿಸಲು ಕೋರಿದ್ದಾರೆ.