Friday, June 24, 2016


ಜಮೀನು  ವಶಪಡಿಸಿಕೊಂಡು ನಿವೇಶನ ನೀಡಿ : ಸಿಬಿಎಸ್
ಚಿಕ್ಕನಾಯಕನಹಳ್ಳಿ : ಪಟ್ಟಣದ ಜನತೆಗೆ ಆಶ್ರಯ ಸಮಿತಿವತಿಯಿಂದ ಉಚಿತವಾಗಿ ನೀಡುವವ  ನಿವೇಶನ ವಿಚಾರದಲ್ಲಿ ದಾರಿಯ ಸಂಬಂಧವಾಗಿ ಆಗಿರುವ ತೊಂದರೆಯನ್ನು ನಿವಾರಿಸಲು ಅಗತ್ಯವಿರುವ ಜಮೀನನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ಜನತೆಗೆ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಾವನಹಳ್ಳಿ ಬಳಿ ನಿವೇಶನಗಳನ್ನು ಪುರಸಭಾ ವತಿಯಿಂದ ವಿಂಗಡಿಸಿದ್ದು ಹಲವು ಕಾರಣಗಳಿಂದ ನಿವೇಶನ ನೀಡಲು ಸಾಧ್ಯವಾಗಿಲ್ಲ, ನಿವೇಶನಕ್ಕೆ ಹೋಗಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ನಿವೇಶನದ ಮಧ್ಯೆ ಇರುವ ಜಮೀನುಗಳನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ನಿವೇಶನ ನೀಡಲು ಶಾಸಕರು ಸೂಚಿಸಿದರು.
 ಈಗಾಗಲೇ ಜಮೀನು ಮಾಲೀಕರಿಗೆ ಹಲವಾರು ಬಾರಿ ಸಂಧಾನದ ಮೂಲಕ ನಿವೇಶನ ಮಧ್ಯೆ ಬರುವ ಜಮೀನಿನ ಮಾಲೀಕರು ಈಗಾಗಲೇ ಪುರಸಭೆಗೆ ಕರಾರು ಒಪ್ಪಂದ ಮಾಡಿಕೊಟ್ಟಿದ್ದರೂ ಇದುವರೆಗೆ ಜಮೀನು ಬಿಟ್ಟುಕೊಟ್ಟಿಲ್ಲದ ಕಾರಣ ನಿವೇಶನಕ್ಕೆ ಹೋಗಲು ದಾರಿ ಇಲ್ಲದ ಪ್ರಯುಕ್ತ ನಿವೇಶನವನ್ನು ನೀಡಲು ತೊಂದರೆಯಾಗಿದ್ದು ಇದಕ್ಕೆ ಅಧಿಕಾರಿಗಳು ಶೀಘ್ರವೇ ಕಾನೂನು ಪ್ರಕಾರ ಜಮೀನು ವಶಪಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ವಿಂಗಡಣೆ ಮಾಡಿ ನಿವೇಶನ ನೀಡಲು ಸೂಚಿಸಿದರು. 
ಇಂಜನಿಯರ್ ಯೋಗಾನಂದ್ಬಾಬು ಮಾತನಾಡಿ, ಬಾವನಹಳ್ಳಿ ಸಮೀಪ 271 ನಿವೇಶನಗಳಿವೆ ಹಾಗೆಯೇ ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿಸಿ ನಂತರ ಸಭೆಗೆ ತಿಳಿಸಲಾಗುವುದು ಎಂದರು. 
ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, 2015-16ನೇ ಸಾಲಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಮನೆ ನಿಮರ್ಿಸಿಕೊಳ್ಳಲು ಪರಿಶಿಷ್ಠ ಜಾತಿ, ಪಂಗಡದಿಂದ 50ಜನರಿಗೆ ಮಂಜೂರು ಮಾಡಲಾಗಿದೆ, 75 ಮಂದಿ ಪ.ಜಾ, ಪ.ಪಂ ದವರಿಗೆ ಮನೆ ಕಟ್ಟಲು ಅವಕಾಶವಿದ್ದು ಪಟ್ಟಣ ತೊರೆದು ಬೇರೆ ಊರುಗಳಿಗೆ ವಲಸೆ ಹೋಗಿದ್ದು ಈಗ 50ಜನಕ್ಕೆ ಮನೆ ನಿಮರ್ಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಪಟ್ಟಣ ಆಶ್ರಯ ಸಮಿತಿ ಸದಸ್ಯ ಸಿ.ಬಸವರಾಜು ಮಾತನಾಡಿ, ಪಟ್ಟಣದ ಜನತೆಗೆ ನಿವೇಶನ ನೀಡಲು ಹಲವು ಬಾರಿ ಸಭೆ ನಡೆಸಿ ಜಮೀನು ಮಾಲೀಕರಿಗೆ ನೋಟಿಸ್ ನೀಡಿದ್ದರೂ ಬಿಟ್ಟುಕೊಡದೆ ಇರುವುದರಿಂದ ನಿವೇಶನ ಇಲ್ಲದ ಬಡವರಿಗೆ ಶೀಘ್ರ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯನಂದ್, ಪಟ್ಟಣ ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಬಾಬುಸಾಹೇಬ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಾಲ ಕಟ್ಟಲು ಎರಡು ವರ್ಷ ಕಾಲಾವಕಾಶ ನೀಡಿ 
ಚಿಕ್ಕನಾಯಕನಹಳ್ಳಿ,ಜೂ.24 : ಬ್ಯಾಂಕನಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬಂದಿರುವ ತಗಾದೆ ನೋಟಿಸ್ಗಳನ್ನು ವಾಪಸ್ ಪಡೆಯುವಂತೆ  ರೈತ ಸಂಘದವರು  ಪಟ್ಟಣದ ಬ್ಯಾಂಕ್ಗಳಿಗೆ ತೆರಳಿ ಬರಗಾಲವಿರುವುದರಿಂದ ಸಾಲ ಕಟ್ಟಲು ತೊಂದರೆಯಾಗುತ್ತಿದ್ದು ಸಾಲ ಮರುಪಾವತಿ ಮಾಡಲು ಎರಡು ವರ್ಷ ಕಾಲಾವಕಾಶ ನೀಡುವಂತೆ ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿರುವ ಎಸ್.ಬಿ.ಎಂ ಹಾಗೂ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ಗಳಿಗೆ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತೆರಳಿ ಬ್ಯಾಂಕ್ ಅಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡ ಕೆಂಕೆರೆ ಸತೀಶ್ ಮಾತನಾಡಿ, ಕಳೆದ ವರ್ಷ, ಈ ವರ್ಷ ಎರಡೂ ವರ್ಷಗಳಿಂದ ಬರಗಾಲ ಎದುರಾಗಿದೆ, ರೈತರಿಗೆ ಉತ್ತಮ ಬೆಳೆಯಾಗದೆ ಆಥರ್ಿಕವಾಗಿ ಸಂಕಷ್ಠಕ್ಕೆ ಸಿಲುಕಿದ್ದಾರೆ, ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಹೆದರಿ ಮರುಪಾವತಿ ಮಾಡಲಾಗದೆ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ತಮ್ಮ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿಕೊಂಡರು.
ಎಸ್ಬಿಎಂ ಬ್ಯಾಂಕ್ನ ಪ್ರಭಾರ ಮ್ಯಾನೇಜರ್ ಭಾರ್ಗವ್ ದಾಸ್ ಮಾತನಾಡಿ,  ರೈತರು ಇರುವುದರಿಂದ ಬ್ಯಾಂಕ್ಗಳಿರುವುದು, ರೈತರಿಗೆ ಬಂದಿರುವ ನೋಟಿಸ್ಗಳು ಬ್ಯಾಂಕಿನಿಂದ ಬಂದಂತಹವುಗಳಲ್ಲ ಅದು ನ್ಯಾಯಾಲಯದಿಂದ ಬಂದಿರುವುದಾಗಿದೆ, ನಿಮ್ಮ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ದಬ್ಬೆಘಟ್ಟ ಜಗದೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಚಿ.ನಾ.ಹಳ್ಳಿ ವಸತಿ 

ನಿಲಯಕ್ಕೆ ಭೇಟಿ 
ಚಿಕ್ಕನಾಯಕನಹಳ್ಳಿ,ಜೂ.24: ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಪಟ್ಟಣದ ಹಿಂದುಳಿದ ವರ್ಗಗಳ ಬಾಲಕ ಹಾಗೂ ಬಾಲಕಿಯರ ಮೇಟ್ರಿಕ್ ಪೂರ್ವ ಹಾಗೂ ನಂತರ ವಸತಿ ನಿಲಯಗಳಿಗೆ ಧಿಡೀರಿ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಹೊನ್ನೇಬಾಗಿ ಬಳಿ ಇರುವ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಮಾರ್ಗಮಧ್ಯೆ ಇರುವ ವಿದ್ಯಾಥರ್ಿನಿಯರ ಹಾಗೂ ವಿದ್ಯಾಥರ್ಿಗಳ ಹಾಸ್ಟೇಲ್ಗಳಿಗೆ ಭೇಟಿ ನೀಡಿ,  ಬಾಲಕಿಯರ ಹಾಸ್ಟೆಲ್ಗಳ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿ ಹಾಸ್ಟೆಲ್ಗಳ ಕೊಠಡಿಗಳನ್ನು  ಪರೀಶೀಲಿಸಿದರು,  ನಂತರ ಹಾಸ್ಟೆಲ್ನಲ್ಲಿರುವ ಶುದ್ದ ಕುಡಿಯುವ ನೀರಿನ್ನು ಸ್ವತಃ ಅವರೇ ಕುಡಿದು ಪರಿಶೀಲಿಸಿ,  ಓವರ್ಹೆಡ್ ಟ್ಯಾಂಕ್ನ್ನು ತಿಂಗಳಿಗೆ ಎಷ್ಟು ಬಾರಿ ಸ್ವಚ್ಛಗೊಳಿಸುತ್ತೀರಿ ಎಂದು ವಾಡರ್್ನ್ಗೆ ಪ್ರಶ್ನಿಸಿದರು. ತಿಂಗಳಿಗೆ ಎರಡು ಬಾರಿ ಸ್ವಚ್ಛಗೊಳಿಸುವುದಾಗಿ ತಿಳಿಸಿದರು. ನಂತರ ಹಾಸ್ಟೆಲ್ ವಿದ್ಯಾಥರ್ಿನಿಯರ ಜೊತೆಯಲ್ಲಿ ಮಾತನಾಡಿ ವಸತಿ ನಿಲಯದಲ್ಲಿ ಯಾವುದಾದರೂ ಕುಂದು  ಕೊರತೆಗಳ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು  ನಂತರ ಜಿಲ್ಲಾಧಿಕಾರಿಗಳು ವಿದ್ಯಾಥರ್ಿನಿಯರ ಜೊತೆಯಲ್ಲಿ ಊಟ ಮಾಡಿ ನಂತರ ಮಕ್ಕಳಿಗೆ ಇದೇ ರೀತಿಯಲ್ಲಿ ಉತ್ತಮ ಆಹಾರ ನೀಡುವಂತೆ ವಾಡರ್್ನ್ ಜ್ಯೋತಿಯವರಿಗೆ ಸಲಹೆ ನೀಡಿದರು.
ಹಾಸ್ಟೆಲ್ ವಿದ್ಯಾಥರ್ಿನಿಯರಿಗೆ ತಮ್ಮ ಸಮಸ್ಯೆ ಏನಾದರೂ ಇದೆಯೇ ಎಂದು ಪ್ರಶ್ನಿಸಿದ ನಂತರ ವಿದ್ಯಾಥರ್ಿನಿಯರು ಡೈನಿಂಗ್ ಟೇಬಲ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ .ಉತ್ತರಿಸಿದ ಜಿಲ್ಲಾಧಿಕಾರಿಗಳು ಹಾಸಿಗೆ, ದಿಂಬಿನ ಕವರ್ಗಳು, ಹಾಗೂ ಸೊಳ್ಳೆಪರದೆ ಹಾಗೂ ಡೈನಿಂಗ್ ಟೇಬಲ್ ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.


Thursday, June 23, 2016




ಚಿ.ನಾ.ಹಳ್ಳಿ ಗಣಿಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿನ ಗಣಿಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
 ತಾಲ್ಲೂಕಿನಲ್ಲಿ ಸ್ಥಗಿತವಾಗಿರುವ ಗಣಿಗಾರಿಕೆಯನ್ನು  ಪುನರಾರಂಭಿಸಲು ಹಾಗೂ ಗಣಿಗಾರಿಕೆ ಪ್ರದೇಶಗಳ ಸ್ಥಿತಿಗತಿಯ ಸೂಕ್ತ ಮಾಹಿತಿಯನ್ನು ಆರು ವಾರಗಳೊಳಗೆ ನೀಡುವಂತೆ  ಸವರ್ೋಚ್ಛ ನ್ಯಾಯಾಲಯ ಗಡುವು ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
   ತಾಲ್ಲೂಕಿನ ಗಣಿಬಾದಿತ ಪ್ರದೇಶವಾದ ಗೊಲ್ಲರಹಟ್ಟಿ, ಹೊನ್ನೆಬಾಗಿ, ಬುಳ್ಳೇನಹಳ್ಳಿ, ಯರೆಕಟ್ಟೆ ರೆಡ್ಹಿಲ್ಸ್ ಭಾಗಗಳಿಗೆ ಬೇಟಿ ನೀಡಿಪರಿಶೀಲಿಸಿದರು. ಶೀಘ್ರ ವರದಿ ತಯಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೆಟ್ಟಿಕೆರೆ ಶಾಲೆಗೆ ಸಂಸದ ಭೇಟಿ 
ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿನ ಶೆಟ್ಟಿಕೆರೆಯ ಸಕರ್ಾರಿ ಪ್ರಾಥಮಿಕ ಪಾಠಶಾಲಾ ಬಳಿ ಇರುವ ಮೊಬೈಲ್ ಟವರ್ನಿಂದ ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಗುರುವಾರ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಎಸ್ಎನ್ಎಲ್ ಹಾಗೂ ಟ್ರಾಯ್ ಅಧಿಕಾರಿಗಳ ಸಭೆ ಕರೆದು ತರಂಗಾಂತರಗಳ ಪರಿಣಾಮದ ಬಗ್ಗೆ ಚಚರ್ಿಸಿ ಟವರ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. 
ಬಿಎಸ್ಎನ್ಎಲ್, ಏರ್ಟೆಲ್, ವೋಡಾಪೋನ್ ಕಂಪನಿಗಳಿಗೆ ಸಂಪರ್ಕ ಸೇವೆ ಒದಗಿಸುತ್ತಿರುವ ಟವರ್ ಶಾಲೆಯ ಬಳಿಯಿದೆ. ಐವರ್ ಹೊರಹಾಕುತ್ತಿರುವ ಅಪಾಯಕಾರಿ ತರಂಗಾಂತರಗಳಿಂದಾಗಿ  ಶಾಲಾ ಮಕ್ಕಳಿಗೆ ತಲೆನೋವು  ಶುರುವಾಗಿದೆ ಎಂದು ಮಕ್ಕಳು, ಪೋಷಕರು, ಸಾರ್ವಜನಿಕರು ದೂರಿದ್ದರು.
ದೂರುದಾರ ಶಶಿಧರ್ ಮಾತನಾಡಿ, ಶೆಟ್ಟಿಕೆರೆ ಶಾಲೆ ಬಳಿಯಲ್ಲಿ ಟವರ್ ನಿಮರ್ಾಣ ಮಾಡಿರುವುದರಿಂದ ಸುತ್ತಮುತ್ತಲಿನ ಜನರಿಗೆ, ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ತಿಪಟೂರು ಉಪವಿಭಾಗಾಧಿಕಾರಿ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ, ವೈದ್ಯಾಧಿಕಾರಿ ಶಿವಕುಮಾರ್, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಸರ್ಕಲ್ನಲ್ಲಿ ಬೆಳಗದ ಹೈಮಾಸ್ಕ್ ದೀಪ 
ಚಿಕ್ಕನಾಯಕನಹಳ್ಳಿ,ಜ.23 : ಪಟ್ಟಣದ ಹಲವು ಬಡಾವಣೆಗಳಲಿ ಹಗಲೆಲ್ಲಾ ಬೀದಿ ದೀಪಗಳು ಉರಿಯುತ್ತವೆ ಆದರೆ ಪಟ್ಟಣದ ಹೃದಯ ಭಾಗವಾದ ನೆಹರು ಸರ್ಕಲ್ ನಲ್ಲಿ ಇರುವ ಹೈಮಾಸ್ಕ್ ದೀಪ ಸೇರಿದಂತೆ ತಾಲ್ಲೂಕು ಕಛೇರಿಯಿಂದ ಹುಳಿಯಾರು ಗೇಟ್ ವರೆಗಿನ 30ಕ್ಕೂ ಹೆಚ್ಚು ಬೀದಿ ದೀಪಗಳು ರಾತ್ರಿಯೂ ಉರಿಯುವುದಿಲ್ಲ.
ನೆಹರು ಸರ್ಕಲ್ನ ಹೈಮಾಸ್ಕ್ ದೀಪ 3ತಿಂಗಳ ಹಿಂದೆಯೇ ಕೆಟ್ಟು ಹೋಗಿದ್ದು ಪಟ್ಟಣದ ಹೃದಯಭಾಗ ಕತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿ 11ರ ವರೆಗೂ ಸರ್ಕಲ್ನಲ್ಲಿ ಜನ ಸಂದಣೆ ಅಧಿಕವಾಗಿದ್ದು ಕತ್ತಲೆಯ ಕಾರಣಕ್ಕೆ ಹಲವು ಅಪಘಾತಗಳು ಸಂಭವಿಸುತ್ತಿವೆ. ಹಲವು ಅಪರಾಧ ಚಟುವಟಿಕೆಗಳೂ ನಡೆಯುತ್ತಿವೆ. ಇದೇ ಸ್ಥಿತಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್, ತಾಲ್ಲೂಕು ಕ್ರೀಡಾಂಗಣ, ತಾಲ್ಲೂಕು ಪಂಚಾಯ್ತಿ ಹಿಂಭಾಗ, ಡಿವಿಪಿ ಶಾಲೆ ಆವರಣ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯ್ತಿ ಎದುರು, ಶೆಟ್ಟಿಕೆರೆ ಗೇಟ್ನಲ್ಲಿಯೂ ಬೀದಿ ದೀಪಗಳು ಕಾರ್ಯನಿರ್ವಹಿಸದೆ ಕತ್ತಲು ಆವರಿಸಿದೆ. 
ನೆಹರು ಸರ್ಕಲ್ ಮೂಲಕ ಚಾಮರಾಜನಗರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಾತ್ರಯಾದರೆ ಭಾರಿ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಾತ್ರಿಯಿಡೀ ಹೊಸದುರ್ಗ-ಬೆಂಗಳೂರಿಗೆ ಈ ಮಾರ್ಗವಾಗಿ ಸಕರ್ಾರಿ ಹಾಗೂ ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ರಾತ್ರಿ ಸಂಚರಿಸುವ ಪ್ರಯಾಣಿಕರಿಗೆ ಸರ್ಕಲ್ನಲ್ಲಿ ಬೆಳಕು ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ ಎಂದು  ಪಾಂಡುರಂಗಯ್ಯ ಹೇಳಿದರು.
  ಸರ್ಕಲ್ ಮೂಲಕ ನೂರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದಿಂದ ನಾಲ್ಕು ದಿಕ್ಕಿಗೆ ರಸ್ತೆಯಿದ್ದು ತಿರುವು ಇದೆ. ಕತ್ತಲಾದರೆ ವಿದ್ಯುತ್ನ ಬೆಳಕಿಲ್ಲದೆ ಅಪಘಾತಗಳಾಗುವ ಸಂಭವವಿದೆ ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಬೀದಿ ದೀಪ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಟೆಂಡರ್ ಕರೆದ ನಂತರ ಹೈಮಾಸ್ಕ್ ಲೈಟ್ ಸರಿ ಮಾಡುತ್ತಾರೆ ಎಂದು ಉತ್ತರಿಸುತ್ತಾರೆ. ಕೂಡಲೇ ಹೈಮಾಸ್ಕ್ ದೀಪ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
  ಮತ್ತೊಂದೆಡೆ ಜೋಗಿಹಳ್ಳಿ, ಅಂಬೇಡ್ಕರ್ ನಗರ, ನಾಯಕರ ಬೀದಿ ಸೇರಿದಂತೆ ಹಲವು ಕಡೆ ವಿದ್ಯುತ್ ದೀಪಗಳು ಹಗಲಿನಲ್ಲೂ ಉರಿಯುತ್ತವೆ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅವೈಜ್ಞಾನಿಕ ರಸ್ತೆಗೆ ನಾಗರೀಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜೂ.23 : ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ಹಾಕುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಗುರುವಾರ ನಾಗರಿಕರು ಕಾಮಗಾರಿ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಗೌರಸಾಗರ ಗೇಟ್ ಬಳಿ ನಡೆದಿದೆ.
   ಚಾಮರಾಜನಗರ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಮೂಲಕ ಹಾದು ಹೋಗಿದ್ದು ಕಿಬ್ಬನಹಳ್ಳಿ ಕ್ರಾಸ್ನಿಂದ ಹುಳಿಯಾರುವರೆಗೆ 35 ಕಿಮೀ ರಸ್ತೆ ದುರಸ್ಥಿಕಾರ್ಯ ನಡೆಯುತ್ತಿದೆ. ಈಗಾಗಲೆ ಕಾಮಗಾರಿ ಕಡೆ ಹಂತ ತಲುಪಿದೆ. ರಸ್ತೆಗೆ ಡಾಂಬಾರ್ ಹಾಕಲಾಗಿದ್ದು ಎರಡೂ ಬದಿಗೆ ಗ್ರಾವೆಲ್ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.
 ತಾಲ್ಲೂಕಿನ ಅವಳಗೆರೆ, ದೇವರಹಳ್ಳಿ, ಭೈರಾಪುರ, ಅವಳಗೆರೆ ಗೊಲ್ಲರಹಟ್ಟಿ, ಅವಳಗೆರೆ ಭೋವಿ ಕಾಲೋನಿ ಕೆಲ ಗ್ರಾಮಸ್ಥರು ಧಾವಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರುವ ವರೆಗೆ ಕಾಮಗಾರಿ ಮುಂದುವರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
    ಅವಳಗೆರೆ ಕಾಂತರಾಜು ಮಾತನಾಡಿ, ರಸ್ತೆ ಬದಿಗೆ, ಪಕ್ಕದ ಚೌಳು ಮಣ್ಣನ್ನು ಜೆಸಿಪಿ ಯಂತ್ರ ಬಳಸಿ ಹಾಕಲಾಗುತ್ತಿದೆ. ಪಕ್ಕದ ಜಂಗಲ್ ತೆಗೆಯುತ್ತಿಲ್ಲ. ಜಲ್ಲಿಕಲ್ಲ ಬಳಸಿ ಗ್ರಾವೆಲ್ ತಯಾರಿಸಿ ರಸ್ತೆಗಿಂತ ಎರಡು ಅಡಿ ಎತ್ತರಕ್ಕೆ ಗ್ರಾವೆಲ್ ಮಿಶ್ರಿತ ಮಣ್ಣು ಹಾಕಬೇಕೆಂಬ ನಿಯಮವಿದೆ, ಗುತ್ತಿಗೆದಾರರು ಯಾವುದೇ ನಿಯಮವನ್ನು ಪಾಲಿಸದೆ ಕಾಟಾಚಾರಕ್ಕೆ ಮಣ್ಣು ಹಾಕಿಸುತ್ತಿದ್ದಾರೆ. ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆ ಕೊಚ್ಚಿ ಹೋಗುವ ಸಂಭವವಿದೆ, ಅಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.
  ದೇವರಹಳ್ಳಿ ನಾಗರಾಜು ಮಾತನಾಡಿ, ರಸ್ತೆ ಬದಿಗೆ ಮಣ್ಣು ಹಾಕಲು ಲಕ್ಷಾಂತರ ರೂಪಾಯಿ ಹಣ ಮೀಸಲಿಡಲಾಗಿದೆ. ಬೆಂಗಳೂರಿನ ಗುತ್ತಿಗೆದಾರ ಸೂರ್ಯಪ್ರಕಾಶ್ ಎಂಬುವರು ಕಾಮಗಾರಿ ಹೊಣೆ ಹೊತ್ತಿದ್ದು ಒಂದು ಬಾರಿಯೂ ಸ್ಥಳಕ್ಕೆ ಬಂದಿಲ್ಲ. ಬದಲಿಗೆ ರಾತ್ರಿ ಹಾಗೂ ಸಂಜೆ ವೇಳೆ ಜೆಸಿಬಿ ಯಂತ್ರಗಳನ್ನು ಬಿಟ್ಟು ಕಳ್ಳತನದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ಕೊಟ್ಯಾಂತರ ರೂಪಾಯಿ ಹಣ ಮಣ್ಣು ಪಾಲಾಗುತ್ತಿದೆ ಎಂದು ಆರೋಪಿಸಿದರು.
  ಪ್ರತಿಭಟನೆಯಲ್ಲಿ ನಾಗರಿಕರಾದ ಶ್ರೀನಿವಾಸ್, ಶಿವಣ್ಣ, ಸ್ವಾಮಿ, ರಾಮಯ್ಯ, ಗುರುಶಾಂತಪ್ಪ, ಕೃಷ್ಣಮೂತರ್ಿ ಮುಂತಾದವರು ಉಪಸ್ಥಿತರಿದ್ದರು. 





Wednesday, June 22, 2016


ವಿದ್ಯುತ್ ತಗುಲಿ ಹಸು ಸಾವು 

ಚಿಕ್ಕನಾಯಕನಹಳ್ಳಿ,: ಬೆಸ್ಕಾಂ ಬೇಜವಬ್ದಾರಿಯಿಂದ ಹಸುವೊಂದಕ್ಕೆ ಶಾಟರ್್ಸಕ್ಯರ್ೂಟ್ನಿಂದ ವಿದ್ಯುತ್ ತಾಕಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಶೆಟ್ಟಿಕೆರೆ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬುಧವಾರ ನಡೆದಿದೆ.
ಬೆಸ್ಕಾಂ ಇಲಾಖೆಯವರು ರಸ್ತೆಗೆ ಹೊಂದಿಕೊಂಡಿರುವಂತೆ ವಿದ್ಯುತ್ ಪರಿವರ್ತಕವನ್ನು ಅಳವಡಿಸಿದೆ, ಮಧ್ಯಾಹ್ನ ಬಿದ್ದ ಮಳೆಯಿಂದ ನೆಲಕ್ಕೆ ವಿದ್ಯುತ್ ಪ್ರವಹಿಸಿ ಪಕ್ಕದಲ್ಲೇ ಮೇಯುತ್ತಿದ್ದ ಆರು ವರ್ಷ ಪ್ರಾಯದ ನಾಟಿಹಸುಗೆ ವಿದ್ಯುತ್ ತಾಗಿದ್ದರಿಂದ ಸ್ಥಳದಲ್ಲೇ ಹಸು ಸಾವನ್ನಪ್ಪಿದೆ.
ಹಸು ಮಾಲೀಕ ಕುರುಬರಹಳ್ಳಿ ಕಲ್ಲೇಶ್ವರ ಮಾತನಾಡಿ, ಹಸು ಆರು ವರ್ಷದ ಪ್ರಾಯದಾಗಿತ್ತು, ಪ್ರತಿನಿತ್ಯ ಆರು ಲೀಟರ್ ಹಾಲು ನೀಡುತ್ತಿತ್ತು, ಹಸು ಹಾಲು ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದೆವು ಈ ಘಟನೆಯಿಂದ ದಿಕ್ಕತೋಚದಂತಾಗಿದೆ, ನಷ್ಟವನ್ನು ಬೆಸ್ಕಾಂ ಇಲಾಖೆಯಲ್ಲೇ ಭರಿಸಬೇಕು ಎಂದು ಆಗ್ರಹಿಸಿದರು.
ನಿತ್ಯ ನೂರಾರು ವಾಹನಗಳು ಹಾಗೂ ಜನರು ಸಂಚರಿಸುವ ರಸ್ತೆಯ ಸಮೀಪ ಘಟನೆ ಸಂಭವಿಸಿದ್ದು ಬೆಸ್ಕಾಂ ಬೇಜವಬ್ದಾರಿಗೆ ಕನ್ನಡಿ ಹಿಡಿದಂತಾಗಿದೆ.
ೆಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಿಂದ ಹೆಚ್ಚಿದ ಅಂಕ
ಚಿಕ್ಕನಾಯಕನಹಳ್ಳಿ,ಜೂ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ಬಳಿಕ ಪಟ್ಟಣದ ನವೋದಯ ಪ್ರೌಢಶಾಲೆಯ ವಿದ್ಯಾಥರ್ಿ ಎಂ.ಚಂದನ್ ಪಟ್ಟಣ ಪ್ರದೇಶದ ವಿದ್ಯಾಥರ್ಿಗಳಿಗೆ ಮೊದಲಿಗನಾಗಿ ಹೊರಹೊಮ್ಮಿದ್ದಾನೆ.
ಮೊದಲು 625ಕ್ಕೆ 599 ಅಂಕ ಬಂದಿತ್ತು, ಮರುಮೌಲ್ಯಮಾಪನದ ಬಳಿಕ 10ಅಂಕಗಳು ಹೆಚ್ಚಾಗಿ ಒಟ್ಟು 609ಅಂಕಗಳು ಲಭ್ಯವಾಗಿದೆ, ಈ ಮೊದಲು ಪಟ್ಟಣದ ವ್ಯಾಪ್ತಿಯಲ್ಲಿ 606ಅಂಕ ಅತಿ ಹೆಚ್ಚು ಅಂಕವಾಗಿದ್ದು ಎಂ.ಚಂದನ್ 609ಅಂಕ ಪಡೆಯುವ ಮೂಲಕ ಮೊದಲಿಗನಾಗಿ ಹೊರಹೊಮ್ಮಿದ್ದಾನೆ. ಕನ್ನಡದಲ್ಲಿ ಈ ಮೊದಲು 125ಕ್ಕೆ 115ಬಂದಿತ್ತು ಮರುಮೌಲ್ಯಪಾನದಲ್ಲಿ 120ಅಂಕ, ಸಮಾಜದಲ್ಲಿ 4ಅಂಕ ಹಾಗೂ ಹಿಂದಿಯಲ್ಲಿ 1ಅಂಕ ಸೇರಿ ಒಟ್ಟು 10ಅಂಕ ಹೆಚ್ಚಿದೆ. ತಂದೆ ಎಂ.ಎಸ್.ಮೋಹನ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾ ಹಾಗೂ ಸಿಬ್ಬಂದಿ ವಿದ್ಯಾಥರ್ಿಯನ್ನು ಶ್ಲಾಘಿಸಿದ್ದಾರೆ.



ಸಕರ್ಾರಿ ಶಾಲೆಗೆ ಹಳೆ ವಿದ್ಯಾಥರ್ಿಗಳು, ಸಾರ್ವಜನಿಕರಿಂದ ಮರುಜೀವ 

ಚಿಕ್ಕನಾಯಕನಹಳ್ಳಿ,ಜೂ.21 : ಮುಚ್ಚುವ ಹಂತದಲ್ಲಿದ್ದ 8 ದಶಕಗಳ ಇತಿಹಾಸ ಹೊಂದಿರುವ ಸಕರ್ಾರಿ ಶಾಲೆಯೊಂದು ಹಳೆ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮರುಜೀವ ಪಡೆದಿದೆ.
 ತಾಲ್ಲೂಕಿನ ಗಡಿಗ್ರಾಮ ಗೋಪಾಲನಹಳ್ಳಿ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದ್ದು 1935ರಲ್ಲಿ ಮೊದಲು ಶಾಲೆಯಲ್ಲಿ ವಿದ್ಯಾಥರ್ಿಗಳು ಕಿಕ್ಕಿರಿದಿರುತ್ತಿದ್ದರು. ಇಂಗ್ಲೀಷ್ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಪಕ್ಕದ ತಿಪಟೂರು ಪಟ್ಟಣಕ್ಕೆ ಕಳಿಸಲು ಪ್ರಾರಂಭಿಸಿದಾಗ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗತೊಡಗಿತು. ಕಳೆದ 5 ವರ್ಷಗಳಿಂದ ಮಕ್ಕಳ ಸಂಖ್ಯೆ 10ರ ಒಳಕ್ಕೆ ಇಳಿಯಿತು. ಇದರಿಂದ ಶಾಲೆ ಮುಚ್ಚುವ ಭೀತಿ ಎದುರಾಯಿತು. ಆಗ ಶಾಲೆಯ ಹಳೆ ವಿದ್ಯಾಥರ್ಿಗಳು, ಗ್ರಾಮಸ್ಥರು ಮುಂದೆ ಬಂದು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದರು. ಇದರ ಫಲವಾಗಿ ಈ ವರ್ಷ 4 ಮಕ್ಕಳನ್ನು ಪೋಷಕರು ಕಾನ್ವೆಂಟ್ ಬಿಡಿಸಿ ಶಾಲೆಗೆ ದಾಖಲಿಸಿದ್ದಾರೆ. ಅಕ್ಕ ಪಕ್ಕದ ಊರುಗಳಿಂದಲೂ ವಿದ್ಯಾಥರ್ಿಗಳು ದಾಖಲಾಗುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಕಲಾ ಸಂತಸದಿಂದ ಹೇಳುತ್ತಾರೆ.
   ಶಾಲಾಭಿವೃದ್ಧಿ ಸಮಿತಿ, ಸಾರ್ವಜನಿಕರು ಹಾಗೂ ಹಳೆ ವಿದ್ಯಾಥರ್ಿಗಳ ಸಹಕಾರದಿಂದ ಹೊರಗಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ, ಇಂಗ್ಲಿಷ್ ಸಂವಹನ ಕೌಶಲ್ಯ, ಕ್ಯಾಲಿಗ್ರಫಿ, ಯೋಗ ತರಗತಿಗಳು ಹಾಗೂ ಕಂಪ್ಯೂಟರ್ ತರಗತಿಗಳನ್ನು ಕಲಿಸಲಾಗುತ್ತಿದೆ. ಯಾವ ಕಾನ್ವೆಂಟ್ಗಳಿಗೂ ಕಡಿಮೆ ಇಲ್ಲದಂತೆ ಪ್ರತೀ ವರ್ಷ ನಡೆಸುವ 'ಮನೋಲ್ಲಾಸ' ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಿಕ್ಷಕ ನವೀನ್ ಹೇಳುತ್ತಾರೆ.
   ಹಳೆ ವಿದ್ಯಾಥರ್ಿಗಳಿಂದ ಸವಲತ್ತು ವಿತರಣೆ: ಕಳೆದ ನಾಲ್ಕು ವರ್ಷಗಳಿಂದ ಹಳೆ ವಿದ್ಯಾಥರ್ಿಗಳು ಶಾಲೆಗೆ ವಿವಿಧ ಸವಲತ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಗ್ರಾಮಸ್ಥರೇ ಮುಂದಾಗಿ ಕಟ್ಟಡ ದುರಸ್ತಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ 1ಲಕ್ಷ ಅನುದಾನ ಹಾಕಿಸಿದ್ದಾರೆ. ತಿಪಟೂರಿನ ಸಂಗೀತ ಟೆಕ್ಸ್ಟೋರಿಯಂ ಮಾಲೀಕ ಉತ್ತಮ್ ಪ್ರತೀ ವರ್ಷ ಮಕ್ಕಳಿಗೆ ಹೆಚ್ಚುವರಿ ಸಮವಸ್ತ್ರಗಳನ್ನು ಒದಗಿಸುತ್ತಾ ಬರುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಹಳೆ ವಿದ್ಯಾಥರ್ಿಯೂ ಆಗಿರುವ ನಿವೃತ್ತ ಉಪನ್ಯಾಸಕ ರಾಜಶೇಖರ್ ರೂ.7ಸಾವಿರ ಮೌಲ್ಯದ ಪಾಠೋಪಕರಣಗಳನ್ನು ಮಕ್ಕಳಿಗೆ ವಿತರಿಸಿದ್ದಾರೆ. ಹಳೆ ವಿದ್ಯಾಥರ್ಿನಿ ಪ್ರಮೀಳ 2ಸ್ಮಾಟರ್್ ಬೋಡರ್್ ಕೊಡಿಸಿದ್ದಾರೆ. ರಘು ಕಂಪ್ಯೂಟರ್ ಸ್ಟಾಂಡ್ ನೀಡಿದ್ದು ಸವಲತ್ತುಗಳ ವಿತರಣಾ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ನಾಗರಾಜ್, ಇಂಗ್ಲಿಷ್ ವಿಷಯ ಪರಿವೀಕ್ಷಕಿ ರೂಪಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷೆ ಶಂಕರಮಣಿ, ಸದಸ್ಯರಾದ ರಮೇಶ್, ಉಮಾ, ಮುಖ್ಯೋಪಾಧ್ಯಾಯಿನಿ ಕಲಾ, ಶಿಕ್ಷಕ ನವೀನ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.

Tuesday, June 21, 2016



ಚಿ.ನಾ.ಹಳ್ಳಿ ಪಟ್ಟಣದಲ್ಲಿ ಯೋಗ ದಿನಾಚಾರಣೆ 
ಚಿಕ್ಕನಾಯಕನಹಳ್ಳಿ,ಜೂ.21 : ಯೋಗ ಒಂದು ಧರ್ಮಕ್ಕೆ ಸೀಮಿತವಾದುದಲ್ಲ ಅದು ಮನುಷ್ಯನ ಒಳಿತಿಗಾಗಿ ಇರುವ ಉತ್ತಮವಾದ ಜೀವನ ಕ್ರಮ  ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷ ರಮೇಶ್ ಕೆಂಬಾಳ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮುಂಜಾನೆ 5.30ಕ್ಕೆ ಪತಂಜಲಿ ಯೋಗ, ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆದ ವಿಶ್ವ ಯೋಗ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಗ ಹುಟ್ಟಿದ್ದೆ ಭಾರತದಲ್ಲಿ ಎಂದ ಅವರು ಭಾರತ ಪ್ರಪಂಚಕ್ಕೆ ಅಪಾರವಾದ ಕೊಡುಗೆ ನೀಡಿದೆ. ಯೋಗ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದದ್ದು, ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು ಯೋಗದಿಂದ ಎಲ್ಲರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀನಿವಾಸಮೂತರ್ಿ ಮಾತನಾಡಿ,  ಯೋಗಾಭ್ಯಾಸವು ನಿರಂತರವಾಗಿರಬೇಕು ಇದರಿಂದ ಉತ್ತಮ ಆರೋಗ್ಯವನ್ನು ಪಡೆಯ ಬೇಕು ಎಂದ ಅವರು ಇಂತಹ ಯೋಗಾಭ್ಯಾಸಕ್ಕೆ ಒಂದು ಯೋಗ ಮಂದಿರವನ್ನು ನಿಮರ್ಿಸಿಕೊಡುವಂತೆ ಶಾಸಕರ ಅನುಪಸ್ಥಿತಿಯಲ್ಲಿ ಮನವಿ ಮಾಡಿದರು.
ಮುಂಜಾನೆ 5.30ಕ್ಕೆ ಆರಂಭವಾದ ಯೋಗಶಿಬಿರ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಯುವಕರು, ಮಹಿಳೆಯರು, ವಯಸ್ಕರು ಭಾಗವಹಿಸಿದ್ದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತ ಮಾತೆ, ಹಾಗೂ ಸ್ವಾಮಿವಿವೇಕಾನಂದರ ವೇಷ ಧರಿಸಿದ ಮಕ್ಕಳೊಂದಿಗೆ ನೂರಾರು ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಯೋಗ ಉಚಿತ ರೋಗ ಖಚಿತ. ಎಂಬ ಘೋಷಣೆ ಕೂಗುತ್ತ ಕನ್ನಡ ಸಂಘದ ವೇದಿಕೆಗೆ ಆಗಮಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ,ರೋಟರಿ ಅಧ್ಯಕ್ಷ ಸಿಎನ್ ಪ್ರಸನ್ನಕುಮಾರ್ ಗಂಗಾಧರ್,ಡಾ||ಪ್ರಶಾಂತ್ಕುಮಾರ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು. 
     ಅಬ್ಬಿಗೆ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಮಳೆಗಾಗಿ                                     ವಿಶೇಷ ಪೂಜೆ
ಚಿಕ್ಕನಾಯಕನಹಳ್ಳಿ,ಜೂ.21 : ನಾಡಿಗೆ ಉತ್ತಮ ಮಳೆ-ಬೆಳೆ ಆಗಲೆಂದು ನೂರಾರು ರೈತರು ಹಾಗೂ ಸಾರ್ವಜನಿಕರು ಹೊನ್ನೆಬಾಗಿ ಬಳಿಯ ಗಣಿಪ್ರದೇಶದಲ್ಲಿರುವ ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಹಾಗೂ ಭಕ್ತರಿಗೆ ಒಂದು ವಾರ ಕಾಲ ದಾಸೋಹ ವ್ಯವಸ್ಥೆ ಮಾಡಿದ್ದರು. 
  ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸರಿಯಾಗಿ ಮಳೆ ಬಾರದ ಕಾರಣ, ಸೋಮವಾರ ನೂರಾರು ರೈತರು ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ರುದ್ರಾಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿನಿತ್ಯ ಗುರು ನಿವರ್ಾಣಸ್ವಾಮಿ ಹಾಗೂ ಗ್ರಾಮ ದೇವತೆ ದುರ್ಗಮ್ಮ ದೇವರುಗಳ ಅಬ್ಬಿಗೆ ಮಲ್ಲೇಶ್ವರ ಬೆಟ್ಟಕ್ಕೆ ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಪೂಜೆ ಸಲ್ಲಿಸಿದರು.
   ಶ್ರೀ ಅಭ್ಬಿಗೆ ಮಲ್ಲೇಶ್ವರಸ್ವಾಮಿ ಸನ್ನಿಧಿಯಲ್ಲಿ 9ದಿನಗಳ ಕಾಲ ಅಖಂಡ ಸೇವೆ, ರುದ್ರಾಭಿಷೇಕ ನಂದಾದೀಪ, ಅಖಂಡ ಭಜನೆ, ನಿರಂತರ ಶಿವಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
   ಚಿಕ್ಕನಾಯಕನಹಳ್ಳಿ ಸುತ್ತಮುತ್ತಲ ಕೇದಿಗೆಹಳ್ಳಿ, ಜೋಗಿಹಳ್ಳಿ, ಹೊನ್ನೇಬಾಗಿ, ಬುಳ್ಳೇನಹಳ್ಳಿ, ಗೊಲ್ಲರಹಟ್ಟಿ, ಹೊಸಹಳ್ಳಿ, ಬಾವನಹಳ್ಳಿ, ಗೋಡೆಕೆರೆ, ಕಾಡೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತಾಧಿಗಳು ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಾಸೋಹ ನಡೆಯಿತು.
  ಈ ಸಂದರ್ಭದಲ್ಲಿ ನಿವರ್ಾಣಸ್ವಾಮಿ ಮಠದ ಗುಡಿ ಗೌಡರಾದ ಗೋಪಾಲಗೌಡರು, ಪ್ರಾಥಮಿಕ ಕೃಷಿ ಪತ್ತಿನ ಉಪಾಧ್ಯಕ್ಷ ಜಯದೇವ್ಕುಮಾರ್, ಜಿ.ಪಂ ಮಾಜಿ ಸದಸ್ಯ ಬುಳ್ಳೇನಹಳ್ಳಿ ಶಿವಪ್ರಕಾಶ್, ಇಟ್ಟಿಗೆ ರಂಗಸ್ವಾಮಯ್ಯ, ಕರವೇ ಗುರುಮೂತರ್ಿ, ಮಲ್ಲೇಶಯ್ಯ, ಇತರರು ಹಾಜರಿದ್ದರು.     


ಶೆಟ್ಟಿಕೆರೆಯಲ್ಲಿ ಯೋಗ ದಿನಾಚಾರಣೆ 
ಚಿಕ್ಕನಾಯಕನಹಳ್ಳಿ,ಜೂ.21 : ದೇಹ ಮತ್ತು ಮನಸ್ಸಿನ ಸುಸ್ಥಿರ ಆರೋಗ್ಯಕ್ಕೆ ಯೋಗ ಸಾಧನ ಎಂದು ದಿಬ್ಬದಹಳ್ಳಿ ಶಾಮಸುಂದರ್ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಜನತಾ ಯುವಕ ಸಂಘ ಹಾಗೂ ಜನತಾ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವ್ಯಾಯಾಮ ಹಾಗೂ ಯೋಗಕ್ಕೆ ವ್ಯತ್ಯಾಸವಿದೆ. ವ್ಯಾಯಾಮ ದೇಹವನ್ನು ಸದೃಢವಾಗಿಸಿದರೆ ಯೋಗ ಮನಸ್ಸನ್ನು ಸದೃಢವಾಗಿಸುತ್ತದೆ ಎಂದರು.
  ಸಾಮಾನ್ಯ ಉಸಿರಾಟದಲ್ಲಿ ಶೇ.30 ಭಾಗ ಆಮ್ಲಜನಕ ಬಳಕೆಯಾದರೆ ಯೋಗದ ಮೂಲಕ ಮಾಡುವ ದೀರ್ಘ ಉಸಿರಾಟದಿಂದ ದೇಹದೊಳಗಿನ 77 ಸಾವಿರ ಗಾಳಿ ಚೀಲಗಳು ಜಾಗೃತವಾಗುತ್ತವೆ ಇದರಿಂದ ಶೇ.100ರಷ್ಟು ಆಮ್ಲಜನಕ ಶಕ್ತಿಯಾಗಿ ಮಾರ್ಪಡುತ್ತದೆ ಎಂದರು.
   ತಾಲ್ಲೂಕು ಪಂಚಾಯ್ತಿ ಸದಸ್ಯೆ ಜಯಮ್ಮ ಮಾತನಾಡಿ, ಹಿಂದೆ ಬದುಕೇ ಒಂದು ಯೋಗವಾಗಿತ್ತು. ಕುಟ್ಟುವ, ಬೀಸುವ ಹಾಗೂ ಕೃಷಿ ಕಾಯಕದಲ್ಲಿ ತಂತಾನೆ ಆರೋಗ್ಯ ವೃದ್ಧಿಯಾಗುತ್ತಿತ್ತು, ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಯೋಗಕ್ಕೆ ಮೊರೆ ಹೋಗುವ ಅನಿವಾರ್ಯತೆ ಇದೆ ಎಂದರು.
 ಕಾರ್ಯಕ್ರಮದಲ್ಲಿ ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಕೆ.ದಯಾಶಂಕರ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ಚಂದ್ರಮೌಳಿ, ಎಚ್.ಎಸ್.ಕುಮಾರಸ್ವಾಮಿ ಭಾಗವಹಿಸಿದ್ದರು. 150ಕ್ಕೂ ಹೆಚ್ಚು ಮಕ್ಕಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು.







Monday, June 20, 2016



ರೈತರು ಸಕರ್ಾರದ ಯೋಜನೆಗಳನ್ನು ತಿಳಿಯಬೇಕು : ತಾ.ಪಂ.ಸದಸ್ಯೆ ಶೈಲಾಶಶಿಧರ್
ಚಿಕ್ಕನಾಯಕನಹಳ್ಳಿ,ಜೂ.20 : ಇಲಾಖಾ ಮಟ್ಟ ಶಿಬಿರ, ಸಭೆ, ಕಾಯರ್ಾಗಾರಗಳಿಗೆ ರೈತರು ಭಾಗವಹಿಸಿ ಹಾಗೂ ಆಗಾಗ್ಗೆ ಕಛೇರಿಗಳಿಗೆ ತೆರಳಿ ಸಕರ್ಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಿರಿ ಎಂದು ತಾ.ಪಂ.ಸದಸ್ಯೆ ಶೈಲಶಶಿಧರ್ ಹೇಳಿದರು.
ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸೋಮವಾರ ನಡೆದ ಕೃಷಿ ಅಭಿಯಾನ-ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಂವಾದದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯರು, ಇಂಜನಿಯರ್ಗಳಿಗಿಂತ ರೈತರು ಕಡಿಮೆಯೇನಲ್ಲ, ದೇಶಕ್ಕೆ ಅನ್ನ ನೀಡುವ ರೈತ ದೇಶ ಕಾಯುವ ಸೈನಿಕರಿಗಿಂತ ಶ್ರೇಷ್ಠ ಎಂದರು.
   ಅಧಿಕಾರಿಗಳು ಯೋಜನೆಗಳ ಬಗ್ಗೆ ರೈತರಿಗೆ  ಸರಿಯಾದ ಮಾಹಿತಿ ನೀಡದೇ ಸಕರ್ಾರದ ಯೋಜನೆಗಳು ನಿಜವಾದ ರೈತರಿಗೆ ತಲುಪುತ್ತಿಲ್ಲ. ಹಿಂದೆ ಮನುಷ್ಯರಿಗೆ ಮಾತ್ರ ಜೀವವಿಮೆ ಮಾಡಿಸಲಾಗುತ್ತಿತ್ತು ಈಗ ಬೆಳೆಗಳಿಗೂ ವಿಮೆ ಮಾಡಿಸುವ ಅವಕಾಶವಿದೆ ಇಂತಹ ಸಕರ್ಾರದ ಹೊಸ ಯೋಜನೆಗಳನ್ನು ಬಳಸಿಕೊಳ್ಳಿ ಎಂದರು.
ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಹೊನ್ನದಾಸೇಗೌಡ ಮಾತನಾಡಿ, ರೈತರಿಗೆ ಸಕರ್ಾರದಿಂದ ಬರುವಂತಹ ವಿವಿಧ ಯೋಜನೆಗಳ ಮಾಹಿತಿ ನೀಡುತ್ತಿದ್ದೇವೆ. ಈಗಾಗಲೇ ಇಲಾಖಾವಾರು ಬೀಜ, ಗೊಬ್ಬರ, ಯಂತ್ರೋಪಕರಣಗಳು, ಲಘು ಪೋಷಕಾಂಷಗಳ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಕೃಷಿ ಇಲಾಖೆಗೆ 2016-17ನೇ ಸಾಲಿನಲ್ಲಿ ಕನರ್ಾಟಕ ಸುರಕ್ಷಾ ರೈತ ಫಸಲ್ ಭೀಮ ಯೋಜನೆ ಎಂಬ ಹೊಸ ಕಾರ್ಯಕ್ರಮ ಆರಂಭವಾಗಿದೆ.ಈ ಯೋಜನೆಗೆ ರೈತರು ಬಳಸಿಕೊಳ್ಳಬೇಕು. ಬ್ಯಾಂಕ್ಗಳಿಗೆ ಬೆಳೆ ವಿಮಾ ಕಂತನ್ನು  ಪಾವತಿಸಿದರೆ ಬೆಳೆ ನಷ್ಟದ ಪರಿಹಾರ ಈ ಯೋಜನೆ ಮೂಲಕ ದೊರಕಲಿದೆ ಎಂದರು.  
ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಹನುಮಂತಯ್ಯ ಮಾತನಾಡಿ, ಕೃಷಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಕೃಷಿಯಲ್ಲಿ ದೊರಕುವ ವಿಮೆಯಿಂದಲೇ ನಷ್ಟ ಪರಿಹಾರ ದೊರಕಲಿದೆ. ಇಂತಹ ಯೋಜನೆಗಳ ಬಗ್ಗೆ ರೈತರು ಮಾಹಿತಿ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ತಾರಕೇಶ್ವರಿ, ರೇಷ್ಮೆ ಇಲಾಖೆ ಅಧಿಕಾರಿ ಇಂದ್ರಾಣಿ, ಹೊನ್ನೆಬಾಗಿ ಗ್ರಾ.ಪಂ.ಅಧ್ಯಕ್ಷೆ ಲೋಕಮ್ಮ, ಸದಸ್ಯ ಮಲ್ಲೇಶಯ್ಯ, ಗ್ರಾ.ಪಂ.ಉಪಾಧ್ಯಕ್ಷೆ ಅನುಸೂಯಮ್ಮ, ಸದಸ್ಯ ರಾಜೇಶ್ವರಿ, ಜಿಕೆವಿಕೆಯ ನೋಡಲ್ ಆಫೀಸರ್ ಹನುಮಂತಪ್ಪ, ತೋಟಗಾರಿಕಾ ಇಲಾಖೆ ಅಧಿಕಾರಿ ಮಂಜು ಮತ್ತಿತರರು ಉಪಸ್ಥಿತರಿದ್ದರು.


ಪುರಸಭೆ ಮುಂದೆ ದಲಿತ ಸಂಘಟನೆಗಳ ಪ್ರತಿಭಟನೆ 
ಚಿಕ್ಕನಾಯಕನಹಳ್ಳಿ,ಜೂ.20 :  ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ವಗರ್ಾವಣೆ ಹಾಗೂ ಪುರಸಭೆಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ಪುರಸಭೆಯ ಕಚೇರಿಯ ಮುಂಭಾಗದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ, ಧರಣಿ ನಡೆಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಸಿ.ಎಸ್.ಲಿಂಗದೇವರು ಮಾತನಾಡಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಕ್ಷ ಅಧಿಕಾರಿಯಾಗಿದ್ದ ಮುಖ್ಯಾಧಿಕಾರಿ ಪಿ.ಶಿವಕುಮಾರ್ರನ್ನು ವಗರ್ಾವಾಣೆ ಮಾಡಿಸಿದ್ದಾರೆ. ಕೂಡಲೇ ವಗರ್ಾವಣೆಯನ್ನು ರದ್ದುಗೊಳಿಸಬೇಕು. ಪುರಸಭೆಯಲ್ಲಿ ಸುಮಾರು ಹತ್ತಾರು ವರ್ಷಗಳಿಂದ ಇಲ್ಲೇ ಕೆಲಸ ನಿರ್ವಹಿಸುತ್ತಿರುವ ಕೆಲವು ನೌಕರರನ್ನು ವಗರ್ಾವಣೆ ಮಾಡಬೇಕು ಹಾಗೂ ಪುರಸಭೆ  ವ್ಯಾಪ್ತಿಯಲ್ಲಿ ನಡೆದಿರುವಂತಹ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
 ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪೌರಕಾಮರ್ಿಕರ ಪಿ.ಎಫ್.ಹಣವನ್ನು ಖಾತೆಗೆ ಜಮಾ ಮಾಡಬೇಕು, ಪೌರ ಕಾಮರ್ಿಕರಿಗೆ ಮೂಲಭೂತ ಸವಲತ್ತುಗಳನ್ನು ಕೂಡಲೇ  ಕೊಡಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಎಂಟು ದಿನಗಳ ಅವಧಿಯಲ್ಲಿ  ಈಡೇರಿಸಬೇಕು, ಇಲ್ಲವಾದರೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಪಟ್ಟಣದ ಕನ್ನಡ ಸಂಘದ ವೇಧಿಕೆಯಿಂದ ಮೆರವಣಿಗೆ ಹೊರಟು ಪುರಸಭಾ ಕಚೇರಿ ಮುಂಭಾಗ ಧರಣಿ ಕುಳಿತರು. ಪ್ರತಿಭಟನಾ ಸ್ಥಳಕ್ಕೆ ತಹಶಿಲ್ದಾರ್ ಆರ್.ಗಂಗೇಶ್ ತೆರಳಿ ಮನವಿ ಸ್ವೀಕರಿಸಿ, ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. 
ಪ್ರತಿಭಟನೆಯಲ್ಲಿ ದಲಿತ ಮುಖಂಡರುಗಳಾದ ಕಂಟಲಗೆರೆ ರಂಗಸ್ವಾಮಿ, ನಾರಾಯಣರಾಜು, ಗೋ.ನಿ.ವಸಂತ್ಕುಮಾರ್, ಕೃಷ್ಣಮೂತರ್ಿ, ಗೋವಿಂದರಾಜು, ಪ್ರಸನ್ನಕುಮಾರ್, ಲೋಕೇಶ್, ಶಿವಣ್ಣ, ಗಿರೀಶ್, ದಲಿತ ವಿದ್ಯಾಥರ್ಿ ಒಕ್ಕೂಟದ ಮುಖಂಡ ಮುರುಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಕೊಡಿ : ಹೊಸೂರಪ್ಪ
ಚಿಕ್ಕನಾಯಕನಹಳ್ಳಿ,ಜೂ.20 : ಹಲವರಿಂದ ದೊರೆತ ಸಲಹೆ ಸಹಕಾರದಿಂದ ವ್ಯಕ್ತಿತ್ವ ರೂಪುಗೊಂಡಿರುತ್ತದೆ.ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಹಿಂದಿರುಗಿಸುವ ಮೂಲಕ ಸಮಾಜದ ಋಣ ತೀರಿಸಬೇಕು, ಆಗ ಮಾತ್ರ ಮನುಷ್ಯರಾಗಿ ಹುಟ್ಟದ್ದಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಎವರ್ಗ್ರೀನ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಹೇಳಿದರು.
ಪಟ್ಟಣದ ಕುರುಬರಶ್ರೇಣಿ ಶಾಲೆಯಲ್ಲಿ ಎವರ್ಗ್ರೀನ್ ಚಾರಿಟಬಲ್ ಟ್ರಸ್ಟ್, ಮಮತೆಯ ಮಡಿಲು ಅನಾಥಾಶ್ರಮ ವತಿಯಿಂದ ಸೋಮವಾರ ಏರ್ಪಡಿಸಿದ್ದ ಉಚಿತ ನೋಟ್ಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ, ದುಡಿಮೆಯ ಒಂದಂಶ ಸೇವೆಗೆ ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಸಮಾಜದ ಉನ್ನತಿಗೆ ತನ್ನದೂ ಪುಟ್ಟ ಪಾಲಿದೆ ಎಂಬ ನೆಮ್ಮದಿ ದೊರೆಯುತ್ತದೆ, ಸೇವೆಗೆ ಬಹಳ ಮಹತ್ವದ ಸ್ಥಾನವಿದೆ. ಜೀವನದಲ್ಲಿ ಸೇವೆಗೆ ಸಮಯವನ್ನು ನೀಡಬೇಕು ಎಂದರು.
ಮುಖ್ಯೋಪಾಧ್ಯಾಯ ತಿಮ್ಮಾಬೋವಿ ಮಾತನಾಡಿ, ಎವರ್ಗ್ರೀನ್ ಟ್ರಸ್ಟ್ ಚಾರಿಟಬಲ್ ಟ್ರಸ್ಟ್, ಹಳೆ ವಿದ್ಯಾಥರ್ಿಗಳ ಸಂಘ ಹಾಗೂ ಮಮತೆಯ ಮಡಿಲು ಸಂಸ್ಥೆಗಳು ಸಹಾಯ ಹಸ್ತ ನೀಡುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿವೆ ಎಂದರು.
ಶಾಲಾ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಶ್, ಶಿಕ್ಷಕರಾದ ಶಿವಕುಮಾರ್, ಮೋಹನ್, ಚಂದ್ರಮತಿ, ಸಿ.ಟಿ.ರೇಖಾ, ಶಾಂತಮ್ಮ, ಸಾಕಮ್ಮ ಹಾಗೂ ಎವರ್ಗ್ರೀನ್ ಚಾರಿಟಬಲ್ ಟ್ರಸ್ಟ್ನ ಚನ್ನಬಸವಯ್ಯ, ಗಣೇಶ್ಕುಮಾರ್, ಹನುಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜೃಂಭಣೆಯಾಗಿ ನೆರವೇರಿದ ಕಾರಬ್ಬ

ಚಿಕ್ಕನಾಯಕನಹಳ್ಳಿ,ಜೂ.20 : ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಸೋಮವಾರ ಕಾರಬ್ಬದ ಸಂಭ್ರಮ ಕಂಡುಬಂದಿತು.
ಸೋಮವಾರ ಸಂಜೆ ಪಟ್ಟಣದ ರೈತರು ಉಳುಮೆ ರಾಸುಗಳನ್ನು ಸಿಂಗರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಿವರ್ಾಣೇಶ್ವರ ಮಠ, ಸಿದ್ದೇಶ್ವರ ಮಠ, ರೇವಣ್ಣಪ್ಪನ ಮಠಗಳಿಂದ ಹೊರಟ ರಾಸುಗಳು ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡವು, ಬಳಿಕ ನಾಲ್ಕು ಬೀದಿಗಳಲ್ಲಿ ಒಟ್ಟಾಗಿ ರಾಸುಗಳ ಮೆರವಣಿಗೆ ನಡೆಯಿತು. 
ಶೆಟ್ಟಿಕೆರೆ : ಸುಪ್ರಸಿದ್ದ ಶೆಟ್ಟಿಕೆರೆ ಕಾರಬ್ಬ ಸಂಪನ್ನಗೊಂಡಿತು, ಕರುಗಲ್ಲಿಗೆ ಕೆರೆ, ಸೊಪ್ಪು ಕಟ್ಟುವುದು, ಮಿಣಿ ಸೇವೆ, ಕರಗ ಸ್ಥಾಪನೆ, ಬ್ರಹ್ಮಲಿಂಗಕ್ಕೆ 101ಪೂಜೆ, ಬಲಿಶಾಂತಿ, ಕರಗಪೂಜೆ ಹಾಗೂ ಕಾಲಭೈರವೇಶ್ವರಸ್ವಾಮಿ, ಕೆಂಪಮ್ಮದೇವಿ, ಬಸವೇಶ್ವರಸ್ವಾಮಿ ದೇವರುಗಳ ಉತ್ಸವ ನಡೆಯಿತು.
ಕರಗ ಹೊಡೆಯುವ ಆಚರಣೆ : ಜನರೆಲ್ಲಾ ರಾತ್ರಿ ಊರ ಮಧ್ಯದ ಕರುಗಲ್ಲು ಮಂಟಪದ ಬಳಿ ನೆರೆದರು. ಕರುಗಲ್ಲು ಮಂಟಪದ ಕೆಳಗೆ ಇರಿಸಿದ್ದ ಮಡಿಕೆಯಲ್ಲಿ ನೀರು ತುಂಬಿ ಭತ್ತ, ರಾಗಿ ಸಿರಿಧಾನ್ಯಗಳು, ದ್ವಿದಳ ಧಾನ್ಯಗಳನ್ನು ತುಂಬಿಸಲಾಯಿತು. ಬಳಿಕ ಮದಲಿಂಗನನ್ನು ಕರೆತಂದು ನೇಗಿಲು ಹೂಡಿ ಕರಗದ ಮೇಲೆ ಊಡಿದ್ದ ನೇಗಿಲನ್ನು ಆಯಿಸಲಾಯಿತು. ನೇಗಿಲು ಆಯಿಸಿದಾಗ ಯಾವ ಧಾನ್ಯ ಮುಂದಕ್ಕೆ ಚಿಮ್ಮಲ್ಪಡುತ್ತದೋ ಆ ಬೆಳೆ  ಸುಭಿಕ್ಷವಾಗುತ್ತದೆ ಎಂಬ ನಂಬಿಕದೆ ಇದೆ.  ಇದಲ್ಲದೆ ತಾಲ್ಲೂಕಿನ ಕಂದಿಕೆರೆ ಹಂದನಕೆರೆ ಹಾಗೂ ಹುಳಿಯಾರು ಭಾಗಗಳಲ್ಲಿ ಕಾರಬ್ಬ ವಿಜೃಂಭಣೆಯಿಂದ ನೆರವೇರಿತು




ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಲಿಜ ಸಮಾಜದ ವತಿಯಿಂದ, ಎಂ.ಆರ್.ಸೀತಾರಾಂರವರ ರಾಜ್ಯ ಸಕರ್ಾರದ ನೂತನ ಸಚಿವರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಲಿಜ ಸಮಾಜದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸದರು.



ಚಿಕ್ಕನಾಯಕನಹಳ್ಳಿಯಲ್ಲಿ ಮಲೇರಿಯ ವಿರೋಧಿ ಮಾಸಾಚರಣೆ ಅಂಗವಾಗಿ ವಿದ್ಯಾಥರ್ಿಗಳಿಂದ ಜಾಥಾ ಮೆರವಣಿಗೆ ನಡೆಸಲಾಯಿತು. ವೈದ್ಯಾಧಿಕಾರಿ ಶಿವಕುಮಾರ್, ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







Thursday, June 16, 2016



ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಕೆಡಿಪಿ ಸಭೆ 
 ಚಿಕ್ಕನಾಯಕನಹಳ್ಳಿ : ಕೆ.ಡಿ.ಪಿ ಸಭೆಯಲ್ಲಿ ಕುಡಿಯುವ ನೀರು ಸಮಸ್ಯೆ, ಕೃಷಿ ಇಲಾಖೆಯಲ್ಲಿ ಅನುದಾನ ಹಂಚಿಕೆಯಲ್ಲಿ ಅಸಮರ್ಪಕ ನಿರ್ವಹಣೆ, ಆಸ್ಪತ್ರೆಗಳಲ್ಲಿ ಅನೈರ್ಮಲ್ಯ,  ಶಾಲಾ ಮೈದಾನವನ್ನು ಕಬಳಿಸಿ ಕಟ್ಟಿರುವ ಬಗ್ಗೆ ಒತ್ತುವರಿ ತೆರವು ಹಾಗೂ ರೈತರಿಗೆ ಸರಿಯಾಗಿ ಪರಿಕರಗಳನ್ನು ವಿತರಿಸದೇ ಇರುವ ಬಗ್ಗೆ ಸಭೆಯಲ್ಲಿ ಚಚರ್ೆ ನಡೆಯಿತು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕ ಸಿ.ಬಿಸುರೇಶ್ಬಾಬು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಸುಮಾರು ಐದು ಕೋಟಿ ಹದಿನಾರು ಲಕ್ಷ ರೂಗಳ ಅನುಧಾನ ಬಳಕೆಯ ಬಗ್ಗೆ ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್ ಕೇಳಿದ ಪ್ರಶ್ನೆಗೆ ಕೃಷಿ ಅಧಿಕಾರಿ ಸಮರ್ಪಕವಾಗಿ ಉತ್ತರ ನೀಡುವಲ್ಲಿ ವಿಫಲರಾದರು. ರೈತರಿಗೆ ಕೃಷಿ ಇಲಾಖೆಯಿಂದ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ, ಜನಪ್ರತಿನಿಧಿಗಳಿಗೂ ಸರಿಯಾದ ಮಾಹಿತಿ ಇಲ್ಲ, ಗುಣಮಟ್ಟದ ಪರಿಕರಗಳನ್ನು ನೀಡುತ್ತಿಲ್ಲ ಎಂದು ಹೇಳಿದರು.
ಬಾಡಿಗೆ ಆಧಾರಿತ ಕೃಷಿ ಸೇವಾ ಕೇಂದ್ರಗಳು ಎಷ್ಟಿವೆ, ಯಂತ್ರಗಳಿಂದ ಎಷ್ಟು ಬಾಡಿಗೆ ಬರುತ್ತಿದೆ, ಸಾವಯವ ಕೃಷಿ ಯೋಜನೆಯಲ್ಲಿ ಇಪ್ಪತ್ತಾರು ಲಕ್ಷಗೂ ಅಧಿಕ ಹಣ ಖಚರ್ು ಮಾಡಿದ್ದೀರಾ ಅದರ ಪ್ರಗತಿ ಏನು, ಫಲಾನುಭವಿಗಳ ಹಂಚಿಕೆಯಲ್ಲಿನ ಮಾನದಂಡವನ್ನು ಸರಿಯಾಗಿ ಅನುಸರಿಸಲಾಗಿದಯೇ, ಪಾಲಿ ಹೌಸ್ ಫಲಾನುಭವಿಗಳ ಬಗ್ಗೆ ಮಾಹಿತಿ ನೀಡಿ, ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಪರಿಕರಗಳ ಗುಣಮಟ್ಟ ಉತ್ತಮವಾಗಿಲ್ಲ ಇದನ್ನು ಪರೀಕ್ಷಿಸಿದ್ದೀರಾ ಎಂಬ ಪ್ರಶ್ನೆಗಳಿಗೆ ಅಧಿಕಾರಿ ಎಲ್ಲಾ ಮಾಡಿದ್ದಾನೆ ಎಂದರೆ ಹೊರತು ಆ ಬಗ್ಗೆ ಮಾಹಿತಿಯನ್ನು ಸಭೆಗೆ ಒದಗಿಸುವಲ್ಲಿ ವಿಫಲರಾದರು.
ಕೃಷಿ ಅಭಿಯಾನದ ಅಡಿಯಲ್ಲಿ ಆರು ಇಲಾಖೆಗಳ ಜೊತೆಯಲ್ಲಿ ಸಭೆ ನಡೆಸಬೇಕಾಗಿತ್ತು ಹಾಗಾಗಿಲ್ಲ ಹಾಗೂ ಸಭೆಗೆ ಜನಪ್ರತಿನಿಧಿಗಳನ್ನು ಕರೆಯದೇ ಕೃಷಿ ಅಭಿಯಾನದ ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ, 2014ರಲ್ಲಿ ಜಲಾನಯನ ಇಲಾಖೆ ಕೃಷಿ ಇಲಾಖೆ ವಿಲೀನವಾಗಿದ್ದು ಜಲಾನಯನ ಇಲಾಖೆಯ ಬಗ್ಗೆ ಮಾಹಿತಿ ನೀಡಿಲ್ಲ ಎಷ್ಟು ಹಣ ಬಂದಿದೆ, ಎಷ್ಟು ಖಚರ್ಾಗಿದೆ ಎಂಬ ಮಾಹಿತಿಯನ್ನು ಸಿಂಗದಹಳ್ಳಿ ರಾಜ್ಕುಮಾರ್ ಕೇಳಿದರು.
ತಾಲ್ಲೂಕಿನಲ್ಲಿ ಎಷ್ಟು ಹೆಚ್.ಐ.ವಿ ಪೀಡಿತರಿದ್ದಾರೆ ಎಂಬ ಅಂಕಿ ಅಂಶವನ್ನು ನೀಡುವಂತೆ ಶಾಸಕರು ಕೇಳಿದ ಪ್ರಶ್ನೆಗೆ,  ಡಾ.ಶಿವಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ 600ಕ್ಕೂ ಹೆಚ್ಚು ಜನರಿಗೆ ಹೆಚ್.ಐ.ವಿ ಸೊಂಕು ತಗುಲಿದೆ, ಅತಿ ಹೆಚ್ಚು ಪೀಡಿತರು ಹುಳಿಯಾರು ಭಾಗದಲ್ಲಿದ್ದಾರೆ ಎಂದರು.
ಹುಳಿಯಾರು  ಸಕರ್ಾರಿ ಆಸ್ಪತ್ರೆಯ ಮೈದಾನದಲ್ಲಿ ಹಂದಿಗಳ ದ್ವಿಚಕ್ರವಾಹನಗಳ ಪಾಕರ್ಿಂಗ್ ಆಗಿದೆ,  ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,  ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಹೊರಗಡೆಯಿಂದ ಕುಡಿಯುವ ನೀರು ತಂದು ಕೊಡಬೇಕಾಗಿದೆ. ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ ಎಂದು ಜಿ.ಪಂ  ಸದಸ್ಯ ಸಿದ್ದರಾಮಯ್ಯ ತಾ|| ವೈದ್ಯಾಧಿಕಾರಿ ಶಿವಕುಮಾರ್ರವರನ್ನು ಪ್ರಶ್ನಿಸಿದರು. ಡಾ.ಶಿವಕುಮಾರ್ ಮಾತನಾಡಿ, ಈಗಾಗೇ ಕುಡಿಯುವ ನೀರಿಗೆ ಆರ್.ಓ ಪ್ಲಾಂಟ್ ಹಾಕಲಾಗಿದೆ ಆಸ್ಪತ್ರೆಯ ಸುತ್ತ ಇರುವ ಗೇಟ್ಗಳನ್ನು ಭದ್ರಪಡಿಸಲಾಗುವುದು  ಪ್ರಾಣಿಗಳು ಆಸ್ಪತ್ರೆಯ ಮೈದಾನಕ್ಕೆ ಬರದಂತೆ ಮುಳ್ಳುತಂತಿಯನ್ನು ಹಾಕಲಾಗುವುದು ಹಾಗೂ ರಿವಾಲ್ವಿಂಗ್ ಗೇಟ್ ಅಳವಡಿಸಲಾಗುವುದು ಎಂದರು, ಇದಕ್ಕೆ ಪ್ರತಿಕ್ರಯಿಸಿದ ಶಾಸಕರು,  ತಮ್ಮ ಸ್ಥಳೀಯಾಭಿವೃದ್ದಿ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದರು. 
ಸಭೆಗೆ ಗೈರು ಹಾಜರಾಗಿದ್ದ ಅಬಕಾರಿ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಧ್ಯಕ್ಷರು ತಾ.ಪಂ.ಇ.ಓರವರಿಗೆ ಸೂಚಿಸಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿರುವ ದಸೂಡಿ, ದಬ್ಬಗುಂಟೆ, ಹೊಯ್ಸಳಟ್ಟೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದಾಗ ಬಿಇಓ ಕೃಷ್ಣಮೂತರ್ಿ ಮಾತನಾಡಿ, ಪ್ರೌಡಶಾಲೆಗಳಿಗೆ ಸಕರ್ಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಕೊಂಡಿದೆ,  ಅತಿಥಿ ಶಿಕ್ಷಕರು ನೇಮಕವಾದಾಗ ಗಡಿ ಭಾಗದ ಹಳ್ಳಿಗಳಿಗೆ ನಿಯೋಜನ ಮಾಡಲಾಗುವುದು ಎಂದರಲ್ಲದೆ ದಸೂಡಿ ಭಾಗಕ್ಕೆ 108 ಆಂಬುಲೆನ್ಸ್ನ ಅವಶ್ಯಕತೆ ಇದ್ದು ಶೀಘ್ರ ಆ ಭಾಗಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರಾದ ರಾಮಚಂದ್ರಯ್ಯ, ಮಂಜುಳಮ್ಮ, ಮಹಲಿಂಗಯ್ಯ, ತಾ.ಪಂ.ಅಧ್ಯಕ್ಷೆ ಕೆ.ಹೊನ್ನಮ್ಮ, ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎನ್.ಎನ್.ಶ್ರೀಧರ್, ತಹಶೀಲ್ದಾರ್ ಗಂಗೇಶ್, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಮತ್ತಿತರರು ಉಪಸ್ಥಿತರಿದ್ದರು. 

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ವಿಶೇಷ ಅರಿವು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.16 : ಮಲೇರಿಯಾ ರೋಗವು ಪ್ಲಾಸ್ಮೋಡಿಯಂ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುವ ರೋಗವಾಗಿದ್ದು,  ಅನಾಫೀಲಿಸ್ ಹೆಣ್ಣು ಸೊಳ್ಳೆಯಿಂದ ಹರಡಲಿದೆ ಈ ಸೊಳ್ಳೆಯೂ ಮನುಷ್ಯರನ್ನು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ ಎಂದು ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಚಂದ್ರಪ್ಪ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಡೆಂಗ್ಯು ಮತ್ತು ಚಿಕನ್ಗುನ್ಯ ಜ್ವರ  ವೈರಸ್ನಿಂದ ಉಂಟಾಗುವ ಖಾಯಿಲೆ, ಈ ಖಾಯಿಲೆ ಕಚ್ಚುವ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ, ತೀವ್ರಜ್ವರ ಕಣ್ಣುಗಳು ಕೆಂಪಾಗುವಿಕೆ, ಸ್ನಾಯುನೋವು, ಕೀಲುಗಳಲ್ಲಿ ನೋವು, ಮೈ ನೋವಾಗುವಿಕೆ ರೀತಿಯ ರೋಗ ಕಂಡುಬರಲಿದೆ ಹಾಗೂ ಕುಷ್ಟರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರಿ ಎಂಬ ರೋಗಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು ಇದು ಯಾವ ವಯಸ್ಸಿನಲ್ಲಾದರೂ ಬರಬಹುದು, ಕೈಕಾಲುಗಳಲ್ಲಿ ಸ್ಪರ್ಶ ಜ್ಞಾನವಿಲ್ಲದಿರುವುದು, ಕತ್ತು, ಮೊಣಕೈ ಹಾಗೂ ಮೊಣಕಾಲಿನ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವಿದ್ದರೆ ಅದು ಕುಷ್ಟರೋಗವಾಗುತ್ತದೆ, ಅದಕ್ಕಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಈ ರೋಗಗಳ ಚಿಕಿತ್ಸೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಕರ್ಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಇಲಾಖೆಯ ಕ್ಷೇತ್ರ ವ್ಯವಸ್ಥಾಪಕ ಸಿ.ಎನ್.ಮಧು, ಕುಮಾರ್, ಎಸ್.ಟಿ.ಶ್ರೀನಿವಾಸ್, ಉಮಾಶಂಕರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Wednesday, June 15, 2016


ಬಡತನ, ಅಸಮಾನತೆ, ದೌರ್ಜನ್ಯಕ್ಕೆ ಒಳಗಾದ ಮಕ್ಕಳೇ ಬಾಲಕಾಮರ್ಿಕರಾಗುತ್ತಿರುವುದು : ನ್ಯಾಯಾಧೀಶ
ಚಿಕ್ಕನಾಯಕನಹಳ್ಳಿ,ಜೂ.15 : ಬಡತನ, ಅಸಮಾನತೆ, ದೌರ್ಜನ್ಯಕ್ಕೆ ಒಳಗಾದ ಮಕ್ಕಳೇ ಹೆಚ್ಚು ಬಾಲಕಾಮರ್ಿಕರಾಗಿ ಪರಿವರ್ತನೆಯಾಗುತ್ತಿದ್ದಾರೆ ಇದರಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ದಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ವಿಷಾಧಿಸಿದರು.
ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಬಾಲಕಾಮರ್ಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಗಳಲ್ಲಿ ಆಥರ್ಿಕ ಪರಿಸ್ಥಿತಿಯನ್ನು ಸುಧಾರಿಸಲಾಗದೆ ಪೋಷಕರು ತಮ್ಮ ಮಕ್ಕಳನ್ನು ದುಡಿಯಲು ಕಳುಹಿಸುತ್ತಾರೆ,  ಇದರಿಂದ  ಬಾಲಕಾಮರ್ಿಕ ಪದ್ದತಿ ಬೆಳೆದು,  ಮಕ್ಕಳ ಜೀವನದ ಸ್ಥಿತಿ ಏರುಪೇರಾಗಲಿದೆ ಜೊತೆಗೆ  ಶಿಕ್ಷಣ ವಂಚಿತರಾಗಿ ದುಶ್ಚಟಗಳ ದಾಸರಾಗುತ್ತಾರೆ ಇದರಿಂದ ಅವರ ಆರೋಗ್ಯದಲ್ಲಿ ತೊಂದರೆಯಾಗಲಿದೆ, ಮಕ್ಕಳು ಶಾಲೆಗೆ ಹೋಗುವಂತಾದರೆ ಮುಂದೆ ಅವರ ಜೀವನ ಮಟ್ಟವೂ ಸುಧಾರಣೆಯಾಗಲಿದೆ,  ಸಕರ್ಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಆದ್ದರಿಂದ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದರು.
ವಕೀಲ ದಿಲೀಪ್ ಬಾಲ ಕಾಮರ್ಿಕ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿ, ಆಥರ್ಿಕ ಪರಿಸ್ಥಿತಿಯನ್ನು ಸರಿದೂಗಿಸಲು ಮಕ್ಕಳು ಬಾಲ ಕಾಮರ್ಿಕ ಪದ್ದತಿಗೆ ಒಳಗಾಗುತ್ತಿದ್ದಾರೆ, 14ವರ್ಷದ ಒಳಗಿನ ಮಕ್ಕಳು ಕಾಖರ್ಾನೆಗಳು, ಗಾಮರ್ೆಟ್ಸ್ ಅಂಗಡಿಗಳು ಇನ್ನಿತರ ಕಡೆ ಕೆಲಸ ಮಾಡುತ್ತಿದ್ದರೆ, ಈ ರೀತಿಯಲ್ಲಿ ತಮ್ಮ ಅಕ್ಕಪಕ್ಕದಲ್ಲಿ ಮಕ್ಕಳು ಕೆಲಸ ನಿರ್ವಹಿಸುತ್ತಿದ್ದರೆ ಆ ಬಗ್ಗೆ ಹತ್ತಿರದ ಅಂಗನವಾಡಿ ಕಾರ್ಯಕತರ್ೆಯರಿಗಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಾಗಲಿ, ಪೋಲಿಸ್ ಠಾಣೆಗಾಗಲಿ ತಿಳಿಸಬಹುದು ಎಂದರಲ್ಲದೆ ಮಕ್ಕಳು ಜನನ-ಮರಣ ಪತ್ರವನ್ನು ಪಡೆದು ಜೋಪಾನವಾಗಿಟ್ಟುಕೊಳ್ಳಿ ತಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದರು.
ವಕೀಲ ಹೆಚ್.ಟಿ.ಹನುಮಂತರಾಯಪ್ಪ ಮಾತನಾಡಿ, 16ವರ್ಷದ ಒಳಗಿನ ಮಕ್ಕಳು ಅಪರಾಧದಲ್ಲಿ ಬಾಗಿಯಾದರೆ ಅದು ಬಾಲಪರಾಧ ಎನಿಸಿಕೊಳ್ಳುತ್ತದೆ, ಚಿಕ್ಕಪುಟ್ಟ ಗುಂಪು ಕಟ್ಟಿಕೊಂಡು ಕೆಟ್ಟ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಮಕ್ಕಳು ಬಾಲಪರಾಧಿಗಳಾಗುತ್ತಿದ್ದಾರೆ ಈ ಬಗ್ಗೆ ಪೋಷಕರು ಎಚ್ಚರವಹಿಸಿ ತಮ್ಮ ಮಕ್ಕಳ ಭವಿಷ್ಯದ ಕಡೆ ಗಮನ ಹರಿಸಿ ಎಂದರು.
ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿ ಟಿ. ಕಮಲಮ್ಮ ಮಾತನಾಡಿ, ಬಡತನದಿಂದ ಮಕ್ಕಳು ಶಿಕ್ಷಣ ವಂಚಿತರಾಗಿ ಬಾಲಕಾಮರ್ಿಕ ಪದ್ದತಿಗೆ ಸಿಲುಕುತ್ತಿದ್ದಾರೆ ಇದರಿಂದ ಮಕ್ಕಳ ಭವಿಷ್ಯವೇ ಹಾಳಾಗುವುದು ಈ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ಜಾಗೃತಿ ನೀಡುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ವಕೀಲರ ಸಂಘದ ಕಾರ್ಯದಶರ್ಿ ಕೆ.ಎಂ.ಷಡಕ್ಷರಿ, ವಕೀಲರುಗಳಾದ ಟಿ.ಆರ್.ರವೀಂದ್ರಕುಮಾರ್, ರತ್ನರಂಜಿನಿ, ತೇಜಸ್ವಿನಿ ಉಪಸ್ಥಿತರಿದ್ದರು.

ಸರಕಳ್ಳತನ 

ಚಿಕ್ಕನಾಯಕನಹಳ್ಳಿ,ಜೂ.15 : ಕಪ್ಪು ವೇಷಧಾರಿಗಳಿಬ್ಬರು ಪಲ್ಸರ್ ಬೈಕ್ನಲ್ಲಿ ಬಂದು ಮಹಿಳೆಯರ ಸರ ಅಪಹರಣ ಮಾಡಿರುವ ಘಟನೆ ತಾಲ್ಲೂಕಿನ ಎರಡು ಕಡೆ ನಡೆದಿದ್ದು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ.
ತಾಲ್ಲೂಕಿನ ಹಂದನಕೆರೆ ಹೋಬಳಿ ಬೊಮ್ಮೇನಹಳ್ಳಿ ಬಳಿ ಬೆಳಗ್ಗೆ 9ರ ಸುಮಾರಿನಲ್ಲಿ ಹೊಲದಲ್ಲಿ ಒಂಟಿಯಾಗಿ ಕೆಲಸ ಮಾಡುತ್ತಿದ್ದ ಗೌರಮ್ಮ ಎಂಬುವವರ ಬಳಿ ವಿಳಾಸ ಕೇಳುವ ನೆಪದಲ್ಲಿ ತೆರಳಿ ಗೌರಮ್ಮನಿಗೆ ಬೆದರಿಸಿ 35ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಬೆಳಗ್ಗೆ 11ರ ಸುಮಾರಿನಲ್ಲಿ ಕುಪ್ಪೂರು-ತಮ್ಮಡಿಹಳ್ಳಿ ಹಳ್ಳದ ಬಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಎಂಬುವರನ್ನು ಬೆದರಿಸಿ 40ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ತಿಪಟೂರು ವಲಯದ ಪೋಲಿಸ್ ಉಪಅಧೀಕ್ಷಕರಾದ ರವಿಕುಮಾರ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು ಅಪಹರಣ ಸ್ಥಳಗಳಿಗೆ ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ನರಸಿಂಹಮೂತರ್ಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕ ರಮೇಶ್, ಚಿ.ನಾ.ಹಳ್ಳಿ ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್, ಹುಳಿಯಾರ್ ಸಬ್ಇನ್ಸ್ಪೆಕ್ಟರ್ ಪ್ರವೀಣ್, ಹಂದನಕೆರೆ ಸಬ್ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಈ ಸಂಬಂಧ ಹಂದನಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Tuesday, June 14, 2016


ಸಕರ್ಾರ ಸೌಲಭ್ಯಗಳು ಬಡವರ ಪಾಲಾಗಲಿ; ಜಿ.ಪಂ.ಸದಸ್ಯ ಕಲ್ಲೇಶ್ 
ಚಿಕ್ಕನಾಯಕನಹಳ್ಳಿ,ಜೂ.14  : ಸಕರ್ಾರದ ಸೌಲಭ್ಯಗಳನ್ನು ಉಳ್ಳವರ ಸ್ವತ್ತಾಗದೇ ಬಡವರ ಪಾಲಾಗುವಂತೆ ಅಧಿಕಾರಿಗಳು ಎಚ್ಚರವಹಿಸಿ ಕೆಲಸ ಮಾಡಿ ಬಡ ರೈತರನ್ನು ಆಥರ್ಿಕವಾಗಿ ಮೇಲೆತ್ತಬೇಕು ಎಂದು ಜಿ.ಪಂ ಸದಸ್ಯ ಕಲ್ಲೇಶ್ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಶ್ರೀ ಮುರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ, ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಸಕರ್ಾರ ನೀಡುವ ಸೌಲಭ್ಯಗಳ ಮಾಹಿತಿಗಳನ್ನು ಸಹ ಅರಿಯುವಷ್ಟು ಸಮರ್ಥರಲ್ಲ, ಸಕರ್ಾರಿ ಸವಲತ್ತು ಕೇವಲ ಉಳ್ಳವರ ಪಾಲಾಗದಂತೆ ಅಧಿಕಾರಿಗಳು ಹೆಚ್ಚು ನಿಗಾವಹಿಸಿ ಸೂಕ್ತ ಬಡವ ಫಲಾನುಭವಿಯನ್ನು ಪತ್ತೆ ಮಾಡಿ ಸವಲತ್ತು ವಿತರಿಸಿ ಎಂದರು. 
ಸಹಾಯಕ ಕೃಷಿ ನಿದರ್ೇಶಕ ಹೊನ್ನೇದಾಸೇಗೌಡ ಪ್ರಾಸ್ತಾವಿಕ ಮಾತನಾಡಿ,  ರೈತರು ಸಹ ವಿಜ್ಞಾನಿಗಳಿದ್ದಂತೆ ಸಕಾಲಕ್ಕೆ ಸರಿಯಾಗಿ ಭೂಮಿಯ ಫಲವತ್ತತೆಗನುಗಣವಾಗಿ ಬೆಳೆ ಬೆಳೆದರೆ ಲಾಭ ಕಾಣಲು ಸಾಧ್ಯ ಎಂಬುದರ ಬಗ್ಗೆ ರೈತರಿಗೆ ಸಲಹೆ ಅನಿವಾರ್ಯವಾಗಿದ್ದು ಅದಕ್ಕಾಗಿಯೇ ರೈತರ ಬಾಗಿಲಿಗೆ ಕೃಷಿ ಅಭಿಯಾನ ಹೊರಟಿದೆ, ರೈತರು ಕೇವಲ ಏಕ ಬೆಳೆ ಪದ್ದತಿಗೆ ಮಾರು ಹೋಗಬೇಡಿ ಬಹು ಬೆಳೆಗಳ ಬೆಳೆಯಲು ಮಿಶ್ರ ಬೇಸಾಯ ಪದ್ದತಿಯನ್ನು ಅನುಸರಿಸಿ, ಹಸು ಕುರಿ. ರೇಷ್ಮೇ ತೋಟಗಾರಿಕೆ ಕೃಷಿ ತೊಡಗಿಸಿಕೊಂಡು ಸಮಗ್ರ ಕೃಷಿ ಅವಲಂಬಿಸಿದರೆ ರೈತರ ಆಥರ್ಿಕ ಸ್ಥಿತಿ ಕೂಡ ಸುದಾರಿಸುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಕೀಟನಾಶಕ ತಜ್ಞ ಡಾ.ಶ್ರೀನಿವಾಸ ಮಾತನಾಡಿ, ರೈತರು ಮೊದಲು ಕೃಷಿ ಭೂಮಿಯ ಫಲವತ್ತತೆಯನ್ನರಿಯಬೇಕು, ಇಳುವರಿ ತುಂಬಿದ ಗುಣಮಟ್ಟದ ಹೈಬ್ರಿಡ್ ಬೀಜ ಹೊಂದಿರಬೇಕು, ನೀರಿನ ನಿರ್ವಹಣೆ ಅತಿಮುಖ್ಯವಾಗಿರಬೇಕು, ಲಘು ಪೋಷ್ಠಿಕಾಂಶದ ಮೂಲಕ ಇಳುವರಿ ಹೆಚ್ಚಿಸಿಕೊಳ್ಳುವ ವಿಧಾನಗಳಿಗೆ ಮಾರು ಹೋಗಬೇಕು, ಜನಸಂಖ್ಯೆಗನುಗುಣವಾಗಿ ಭೂಮಿಯ ವಿಸ್ತಾರ ಅಗಲಾರದು ಕೃಷಿ ಭೂಮಿ ಕೂಡ ಕಡಿಮೆ ಆಗಿದ್ದು ಕೇವಲ ಸಾವಯವದ ಮೂಲಕ ಕೃಷಿ ಪ್ರೌವೃತ್ತಿ ಆಗದೆ ರಸಗೊಬ್ಬರ ಸಾವಯವ ಎರಡನ್ನೂ ಒಳಗೊಂಡ ರೀತಿಯ ಸಮಗ್ರ ಕೃಷಿ ಅಳವಡಿಸಿಕೊಂಡರೆ ಮಾತ್ರ ಇಡೀ ದೇಶಕ್ಕೆ ಆಹಾರ ಒದಗಿಸಲು ಸಾಧ್ಯ ಎಂದರು. 
ಸಂವಾದ ಕಾರ್ಯಕ್ರಮದಲ್ಲಿ ಅರಳೀಮರದ ಪಾಳ್ಯದಹಿರಿಯ ರೈತ ರಾಮಲಿಂಗಯ್ಯ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸವಿತ, ಶಶಿಧರ,ಎಂ.ಎನ್.ಸುರೇಶ್, ಎ.ಬಿ.ಮಹೇಶ್, ಇಂದ್ರಾಣಿ, ಮುನಿಸ್ವಾಮಿ, ವಿವೇಕಾನಂದ, ಮಲ್ಲಿಕಾಜರ್ುನಯ್ಯ ಮತ್ತಿತರರು ಉಪಸ್ಥಿತರಿದ್ದರು.


ಯೋಗ ದಿನಾಚಾರಣೆ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ.14 : ಉಚಿತ ಯೋಗಾಸನ ಶಿಬಿರ ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಇದೇ ಜೂನ್ 15ರ ಬುಧವಾರ ಬೆಳಗ್ಗೆ 6ಕ್ಕೆ ತಾಲ್ಲೂಕಿನ ಶೆಟ್ಟಿಕೆರೆ ಜನತಾ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನತಾ ಪ್ರೌಢಶಾಲೆ ಮತ್ತು ಜನತಾ ಯುವ ಕ್ರೀಡಾ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ವೈದ್ಯ ಪ್ರಶಾಂತ್ಕುಮಾರ್ಶೆಟ್ಟಿ ಶಿಬಿರ ಉದ್ಘಾಟಿಸಲಿದ್ದಾರೆ. ಹಿರಿಯ ಶಿಕ್ಷಕ ದಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು ಹಾಸನ ಜಿಲ್ಲೆ ದೈ.ಶಿಕ್ಷಣ ಶಿಕ್ಷಕ ಅಧೀಕ್ಷಕ ಹೆಚ್.ಟಿ.ವೆಂಕಟೇಶಮೂತರ್ಿ ಉಪನ್ಯಾಸ ನೀಡಲಿದ್ದಾರೆ.
ಶಿಬಿರವು ಜೂನ್ 15ರಿಂದ ಜುಲೈ 15ರವರೆಗೆ ನಡೆಯಲಿದ್ದು ಶಾಲಾ ಮಕ್ಕಳು, ಪೋಷಕರು, ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಯೋಗಾಭ್ಯಾಸವನ್ನು ಮಾಡಬಹುದು, ಶಿಬಿರವು ಬೆಳಗ್ಗೆ 6ರಿಂದ 7.30ರವರೆಗೆ ನಡೆಯಲಿದ್ದು ಶಿಬಿರಕ್ಕೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ : ಜೂನ್ 21ರ ಮಂಗಳವಾರ ಬೆಳಗ್ಗೆ 8ಕ್ಕೆ  ಶೆಟ್ಟಿಕೆರೆ ಜನತಾ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಿ.ಪಂ.ಸದಸ್ಯ ಕಲ್ಲೇಶ್ ಉದ್ಘಾಟಿಸಲಿದ್ದಾರೆ. ತಾ.ಪಂ.ಸದಸ್ಯೆ ಜಯಮ್ಮ ಪತಂಜಲಿ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ಶಿಕ್ಷಕ ದಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು ಯುವಜನ ಕ್ರೀಡಾ ಯೋಜನಾಧಿಕಾರಿ ಸಿ.ಬಿ.ಲಿಂಗಯ್ಯ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕರುಗಳಾದ ಶ್ಯಾಮ್ಸುಂದರ್, ವನಜಾಕ್ಷಿ, ಸಾವಿತ್ರಮ್ಮ, ಪದ್ಮ ಉಪಸ್ಥಿತರಿರುವರು.

ಬಾಲಕಾಮರ್ಿಕರ ವಿರೋಧಿ ದಿನಾಚಾರಣೆ 
ಚಿಕ್ಕನಾಯಕನಹಳ್ಳಿ,ಜೂ.14 : ಬಾಲಕಾಮರ್ಿಕರ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜೂನ್ 15(ಇಂದು) ರ ಬುಧವಾರ ಮಧ್ಯಾಹ್ನ 2.30ಕ್ಕೆ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ಉದ್ಘಾಟಿಸಲಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಕಮಲಮ್ಮ, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಉಪಸ್ಥಿತರಿರುವರು. ವಕೀಲ ದಿಲೀಪ್ ಬಾಲ ಕಾಮರ್ಿಕ ನಿಷೇಧ ಕಾಯ್ದೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.



Monday, June 13, 2016


ಎಲ್ಲಾ ಸಮಾಜದ ಮಕ್ಕಳು ಶಿಕ್ಷಣ ಪಡೆಯುವುದು ಅಗತ್ಯ 
ಚಿಕ್ಕನಾಯಕನಹಳ್ಳಿ,ಜೂ.13 ; ಸ್ವಾಮಿಜಿಗಳು ಮಠದ ಅಭಿವೃದ್ದಿಗೆ ಸಂಚರಿಸುವಾಗ ಆಯಾ ಸಮಾಜದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಬೇಕು, ಎಲ್ಲಾ ಸ್ಥರದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಅರಿತು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಬೇಕೆಂದು ತುಮಕೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಆಡಳಿತ ಉಪ್ಪಾರ ಸಂಘ ಆಶ್ರಯದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರೆ ಅವರೇನು ನಮ್ಮನ್ನು ಸಾಕುತ್ತಾರೆಯೇ, ಮದುವೆ ಮಾಡಿಕೊಂಡು ಗಂಡನ ಮನೆಗೆ ತೆರಳುತ್ತಾರೆ, ಇದರಿಂದ ನಮಗೇನು ಲಾಭ ಎಂಬ ದುರಾಲೋಚನೆಯನ್ನು ಪೋಷಕರು ಬಿಟ್ಟು ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಲೋಚನೆ ಬೆಳೆಸಿಕೊಳ್ಳಿ ಎಂದರು. 
, ಉಪ್ಪಾರ ಜನಾಂಗ ತಮ್ಮ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ನೀಡಿದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಸರಕಾರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿತ್ತಿದೆ ಇದನ್ನೂ ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಶೇ.50ರಷ್ಟು ಮಹಿಳೆಯರಿಗೆ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.
ಹೊಸದುರ್ಗ ಭಗೀರಥ ಪೀಠದ  ಶ್ರೀ ಪುರುಷೋತ್ತಮಾನಂದ ಪುರಿಸ್ವಾಮೀಜಿ  ಮಾತನಾಡಿ,  ಆಯಾ ಸಮುದಾಯಗಳ ಮಹನೀಯರ  ಜಯಂತಿ ಮಾಡುವ ಉದ್ದೇಶ ಅವರ ಸಾಧನೆ ಸ್ಪೂತರ್ಿ ಪಡೆದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಜಯಂತಿ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದ ಅವರು,  ಸಿದ್ದರಾಮಯ್ಯ ಸಕರ್ಾರ 2 ವರ್ಷಗಳ ಹಿಂದೆ ಭಗೀರಥ ಜಯಂತಿ ಆಚರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದ ಅವರು ಉಪ್ಪಾರ ಜನಾಂಗ ನಮ್ಮಲ್ಲಿರುವ ಸಣ್ಣ ಪುಟ್ಟ ಭೇದಗಳನ್ನು ಮರೆತು ಎಲ್ಲರೂ ಒಂದಾಗಬೇಕು ಎಂದರು 
ರಾಜ್ಯ ಸಂಸದೀಯ ವ್ಯವಹಾರಗಳ ಕಾರ್ಯದಶರ್ಿ ಪುಟ್ಟರಂಗ ಶೆಟ್ಟಿ ಮಾತನಾಡಿ, ನಮ್ಮ ಪೂರ್ವಜನರನ್ನು ನೆನೆಸಿಕೊಳ್ಳಲು ಜಯಂತಿಗಳನ್ನು ಮಾಡಲಾಗುತ್ತದೆ ರಾಜಕೀಯವಾಗಿ ಉಪ್ಪಾರ ಜನಾಂಗ ಬೆಳೆಯಬೇಕಾದರೆ ಶಿಕ್ಷಣ ಅಗತ್ಯ,  1973ರಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅತಿ ಹಿಂದುಳಿದ ಜನಾಂಗವಾದ  ಉಪ್ಪಾರ ಜನಾಂಗವನ್ನು ಗುರುತಿಸಿ ರಾಜಕೀಯ ಪ್ರತಿನಿಧ್ಯ ನೀಡಿದರು ಸಂಘಟನೆ ಶಿಕ್ಷಣ ಹೋರಾಟದ ಮೂಲಕ  ನಾವು ಮುಂದೆ ಬರಬೇಕಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಒಳ್ಳೆಯ ಮನಸ್ಸಿನಿಂದ ಮಠ ಮಂದಿರಗಳನ್ನು ಕಟ್ಟುವುದರಿಂದ ಎಲ್ಲರ ಮನಸ್ಸು ಕಟ್ಟದಂತಹ ಸಾರ್ಥಕತೆ ಬರುತ್ತದೆ, ಉಪ್ಪಾರ ಸಮಾಜಕ್ಕೆ ಚಿ.ನಾ.ಹಳ್ಳಿ ಪಟ್ಟಣದಲ್ಲಿ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳವುದಾಗಿ ಹೇಳಿದರು. ಶೆಟ್ಟೀಕೆರೆ ಜಿ.ಪಂ.ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಉಪ್ಪಾರ ಜನಾಂಗವಿದ್ದರೂ ಎಲ್ಲಾ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ಕಲ್ಲೇಶರವರನ್ನು ಜಿ.ಪಂ.ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿದ್ದೇವೆ ಎಂದರು. 
ಕಾರ್ಯಕ್ರಮದಲ್ಲಿ ತಾ||ಪಂ ಅಧ್ಯಕ್ಷೆ ಕೆ. ಹೊನ್ನಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪುನರ್ವಸತಿ ನಿಗಮದ ಅಧ್ಯಕ್ಷ ವೆಂಕೋಬ, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ಮಹಾಲಿಂಗಪ್ಪ, ಮತ್ತಿತ್ತರರು ಉಪಸ್ಥಿತರಿದ್ದರು.
ತಾಲ್ಲೂಕು ಕಛೇರಿಯಿಂದ ಹೊರಟ ಭಗೀರಥ ಜಯಂತಿಯ ಮೆರವಣಿಗೆ ಬಿ.ಹೆಚ್ ರಸ್ತೆ ನೆಹರು ವೃತ್ತದ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ಕುಣಿತ, ನಾಸಿಕ್ ಡೊಳ್ಳು, ವಿವಿಧ ಕಲಾ ತಂಡಗಳು ಉಪಸ್ಥಿತರಿದ್ದವು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಾದ ದೇವಿಕರಿಯಪ್ಪ, ಈರಲಕ್ಕಪ್ಪ, ಹನುಮಂತಯ್ಯ,ಪುಟ್ಟಯ್ಯ,ಮತ್ತಿತ್ತರರನ್ನು ಸನ್ಮಾನಿಸಲಾಯಿತು.

ಅಲೆಮಾರಿ ಮುಖಂಡನ ಹೋರಾಟದ ಮಕ್ಕಳು ಫಲವಾಗಿ ನೇರವಾಗಿ ವಸತಿ ಶಾಲೆಗೆ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.13 :  ಅಲೆಮಾರಿ ಮುಖಂಡರೊಬ್ಬರ ಹೋರಾಟದಫಲವಾಗಿ 7 ಅಲೆಮಾರಿ ಹಾಗೂ ಅರೆ ಅಲೆಮಾರಿ ಮಕ್ಕಳು ಪ್ರವೇಶ ಪರೀಕ್ಷೆ ಬರೆಯದೇ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.
   ಮಕ್ಕಳ ಪ್ರವೇಶಾತಿಗೆ ಶ್ರಮಿಸಿರುವ ಅಲೆಮಾರಿ ಮುಖಂಡ ಹುಳಿಯಾರ್ ರಾಜಪ್ಪ ಮಾತನಾಡಿ,ವಸತಿ  ಶಾಲೆಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಮಕ್ಕಳಿಗೆ  ಪ್ರವೇಶ ಪರೀಕ್ಷೆ ಎದುರಿಸದೇ ಶೇ.10ರಷ್ಟು ನೇರಪ್ರವೇಶಾತಿ ನೀಡಬೇಕು ಎಂಬ ನಿಯಮ 2011ರಲ್ಲಿ ಆದೇಶಿಸಲಾಗಿದೆ, ಆದರೂ ಅರಿವಿಲ್ಲದ ಅಲೆಮಾರಿಗಳು ಈ ವಿಶೇಷ ಸವಲತ್ತುನ್ನು ಪಡೆದು ಕೊಳ್ಳಲು ವಿಫಲರಾಗಿದ್ದರು. ಮನವರಿಕೆ ಮಾಡಿಕೊಟ್ಟ ಬಳಿಕ ಪ್ರವೇಶ ಪಡೆಯಲು ಮುಂದಾದರು.ನೇರವಾಗಿ ವಸತಿಶಾಲೆಗಳ ಪ್ರಾಧಿಕಾರಕ್ಕೆ ಬರೆದು 7 ವಿದ್ಯಾಥರ್ಿಗಳಿಗೆ ಪ್ರವೇಶ ಗಿಟ್ಟಿಸಿಕೊಡಲಾಯಿತು ಎಂದರು.
    ವಿಶೇಷ ಪ್ರವೇಶಾತಿ ಅಡಿಯಲ್ಲಿ ಸಿರಾದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 5 ವಿದ್ಯಾಥರ್ಿಗಳು, ತುರುವೇಕೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಒಬ್ಬ ಹಾಗೂ ಮೇಲನಹಳ್ಳಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಒಬ್ಬ ವಿದ್ಯಾಥರ್ಿ ವಿಶೇಷ ಪ್ರವೇಶಾತಿ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ ಎಂದರು.
   ಅರೆ ಅಲೆಮಾರಿ ಕಾಡುಗೊಲ್ಲ ಸಮುದಾಯದ ತಮ್ಮಡಿಹಳ್ಳಿ ಮೋಹನ್ಕುಮಾರ್ ಹಾಗೂ ಅಕ್ಷತಾ, ಅಲೆಮಾರಿ ಜನಾಂಗದ  ಚನ್ನದಾಸ ಸಮುದಾಯದ .ಎಂ.ಶ್ರೀರಾಮು, ಸಿಳ್ಳೆಕ್ಯಾತ ಸಮುದಾಯದವರಾದ ಎಚ್.ಕೆ.ನವೀನ್ಕುಮಾರ್, ರಾಜು ಮತ್ತು ಕೆ.ಶೋಭಾ, ದೊಂಬಿದಾಸ ಸಮುದಾಯದ ಸಿ.ಆರ್.ಸೀಬಾ ಹಾಗೂ ಹಂದಿಜೋಗಿ ಸಮುದಾಯದ ಕೆ.ಸುಜಾತ ಪ್ರವೇಶ ಪರೀಕ್ಷೆ ಇಲ್ಲದೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
  ಅಲೆ ಮಾರಿ,  ಅರೆ ಅಲೆಮಾರಿ ಕುಟುಂಬಗಳು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುತ್ತಾ ಸಣ್ಣಪುಟ್ಟ ವ್ಯಾಪಾರ ಮಾಡುತ್ತ ದುಸ್ತರ ಬದುಕು ಸಾಗಿಸುತ್ತಿದ್ದಾರೆ. ಬಹುತೇಕ ಅನಕ್ಷರಸ್ಥರೇ ಹೆಚ್ಚಿರುವ ಈ ಸಮುದಾಯಗಳು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ತೆರೆದುಕೊಳ್ಳು ವಂತೆ ಮಾಡಬೇಕು.ಅಲೇ ಮಾರಿಗಳಿಗೇ ಇರುವ ವಿಶೇಷ ಸವಲತ್ತುಗಳನ್ನು ಬಳಸಿಕೊಳ್ಳಬೇಕು.ಇಲಾಖೆ ಹಾಗೂ ಅಧಿಕಾರಿಗಳು ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.






ಪುರಸಭೆ ಮುಖ್ಯಾಧಿಕಾರಿ ವಗರ್ಾವಣೆ ರದ್ದುಪಡಿಸಿ : ದಸಂಸ 
ಚಿಕ್ಕನಾಯಕನಹಳ್ಳಿ,ಜೂ.12: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಏಕಾಏಕಿ ವಗರ್ಾವಣೆ ಮಾಡಿದ್ದು ತಕ್ಷಣ ವಗರ್ಾವಣೆಯನ್ನು ರದ್ದುಗೊಳಿಸಿ ಮೂಲಸ್ಥಾನದಲ್ಲೇ ಮುಂದುವರೆಸಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಸಿ.ಎಸ್.ಲಿಂಗದೇವರು ಹೇಳಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಸಾರ್ವಜನಿಕರು ಹಾಗೂ ಪೌರ ಕಾಮರ್ಿಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್,  ಸದಸ್ಯರುಗಳು ಸೂಚಿಸಿದ ಕಾನೂನು ಬಾಹೀರ ಕೆಲಸಗಳಿಗೆ ಮಣೆ ಹಾಕಲಿಲ್ಲ ಎಂಬ ಉದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಪ್ರಭಾವ ಬಳಸಿ ಎತ್ತಂಗಡಿ ಮಾಡಿಸಿದ್ದಾರೆ.ಈ ಕ್ರಮವನ್ನು ದಸಂಸ ಖಂಡಿಸುತ್ತದೆ ಎಂದರು.
  ಪರಿಶಿಷ್ಠ ಜಾತಿಗೆ ಸೇರಿರುವ ಪಿ.ಶಿವಪ್ರಸಾದ್ ದಕ್ಷ ಆಡಳಿತಗಾರರಾಗಿದ್ದರು.ಅವರು ಅಧಿಕಾರ ವಹಿಸಿಕೊಂಡಾಗ ಪುರಸಭೆ ಖಾತೆಯಲ್ಲಿ ಕೇವಲ ರೂ.13520 ಹಣ ಇತ್ತು.10 ತಿಂಗಳಲ್ಲಿ ಸೋರಿಕೆಯನ್ನು ತಡೆಗಟ್ಟಿ ಖಾತೆಗೆ ರೂ.40ಲಕ್ಷ ಹಣ ಸಂದಾಯವಾಗುವಂತೆ ಮಾಡಿದರು.6ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೂ.43 ಲಕ್ಷದಷ್ಟು ಪೌರ ಕಾಮರ್ಿಕರ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗೆ ವಗರ್ಾಯಿಸಿದ್ದರು. ಇಷ್ಟೆಲ್ಲಾ ಜನಪರವಾಗಿದ್ದ ಅಧಿಕಾರಿಗೆ ಜಿಲ್ಲಾಧಿಕಾರಿಗಳು ತಾತ್ಕಾಲಿಕ ವಗರ್ಾವಣೆ ಆದೇಶ ನೀಡಿರುವುದು ಸರಿಯಲ್ಲ.ಪ್ರಾಮಾಣಿಕ ಅಧಿಕಾರಿಯ ದಿಢೀರ್ ವಗರ್ಾವಣೆಯನ್ನು ಕಂಡಿಸಿ ಜೂನ್.13 ಸೋಮವಾರ ಜಿಲ್ಲಾಧೀಕಾರಿ ಕಛೇರಿ ಮುಂದೆ ಧರಣಿ ನಡೆಸಲಾಗುವುದು ಎಂದರು.
ಕನಿಷ್ಟ 2 ವರ್ಷಗಳ ಕಾಲ ಆಡಳಿತ ಅಧಿಕಾರಿಯನ್ನು ವಗರ್ಾವಣೆ ಮಾಡಬಾರದು ಎಂಬ ನಿಯಮವಿದೆ. 10 ತಿಂಗಳಲ್ಲೇ ವಗರ್ಾವಣೆ ಮಾಡಿರುವುದು ಸರಿಯಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಹಾಗೂ ಅಕ್ರಮಕ್ಕೆ ಅವಕಾಶ ಕೊಡುತ್ತಿಲ್ಲ ಎಂಬ ಉದ್ದೇಶದಿಂದ ಪಿ.ಶಿವಪ್ರಸಾದ್ ಅವರನ್ನು ವಗರ್ಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
  ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಕೆ.ಎಚ್.ರಂಗನಾಥ್, ಪಿ.ಕೃಷ್ಣಮೂತರ್ಿ, ಶಿವಕುಮಾರ್, ಜೆ.ಸಿ.ಪುರ ಗೋವಿಂದರಾಜು, ಕಂಟಲಗೆರೆ ರಂಗಸ್ವಾಮಿ, ಸಂತೋಷ್, ಪ್ರವೀಣ್ ಇದ್ದರು. 

ಕೆಟ್ಟು ಹೋದ ಶುದ್ದ ಕುಡಿಯುವ ನೀರಿನ ಘಟಕ 
 ಚಿಕ್ಕನಾಯಕನಹಳ್ಳಿ,ಜೂ12; ಪಟ್ಟಣದಲ್ಲಿ ಎರಡು ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ 3 ತಿಂಗಳಲ್ಲೇ ಎರಡು ಶುದ್ದ ನೀರಿನ ಘಟಕಗಳು ಕೆಟ್ಟು ಹೋಗಿ ಜನರು ಶುದ್ದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ 
ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಮನುಷ್ಯನ ಅರೋಗ್ಯ ಸುಧಾರಣೆಗೆ ಕೋಟ್ಯಾಂತರ  ರೂಪಾಯಿ ಖಚರ್ು ಮಾಡಿ,  ಪುರಸಭೆ ಮೇಲ್ವಿಚಾರಣೆಯಲ್ಲಿ  ಪಟ್ಟಣ  ರುದ್ರನ ಗುಡಿ ಹತ್ತಿರ ಹಾಗೂ ಪುರಸಭೆಯ ಹಿಂಭಾಗದಲ್ಲಿ ಸ್ಥಾಪಿಸಿರುವ ಎರಡು ಕುಡಿಯುವ ನೀರಿನ ಘಟಕಗಳನ್ನು ಹುಬ್ಬಳ್ಳಿ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಿದ್ದು, ಪ್ರತಿ ಬಾರಿ ಕೆಟ್ಟು ಹೋದಾಗ ಗುತ್ತಿಗೆದಾರರಿಗೆ ದೂರವಾಣಿ ಮುಖಾಂತರ ತಿಳಿಸುತ್ತಾರೆ. ಆದರೆ ಗುತ್ತಿಗೆ ಪಡೆದ ವ್ಯಕ್ತಿ ದೂರು ನೀಡಿದರೆ ಸರಿ ಪಡಿಸಲು ತಿಂಗಳಾನುಗಟ್ಟಲೆ ತೆಗೆದುಕೊಳ್ಳತ್ತಾರೆ,  ಸಮಯಕ್ಕೆ ಸರಿಯಾಗಿ ಬರದೇ ಇರುವುದರಿಂದ ಪಟ್ಟಣದ ಜನತೆಗೆ ಶುದ್ದಕುಡಿಯುವ ಲಭ್ಯವಿಲ್ಲದಂತಾಗಿದೆ.
 ರುದ್ರನಗುಡಿ ಹತ್ತಿರದ ಘಟಕ ಕೆಟ್ಟು ಹೋಗಿ ತಿಂಗಳುಗಳೇ ಕಳೆದಿದ್ದರೂ ಪುರಸಭೆ ಅಧಿಕಾರಿಗಳಾಗಲಿ, ಪುರಸಭಾ ಸದಸ್ಯರಾಗಲಿ, ಗುತ್ತಿಗೆದಾರನನ್ನು ಕರೆದು ದುರಸ್ತಿ ಮಾಡಿಸದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ. ಜನರು ಶುದ್ದ ಕುಡಿಯುವ ನೀರಿಗೆ 6 ತಿಂಗಳಿಂದ ಬೆಳಂಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗಿ ಮಕ್ಕಳು ದೊಡ್ಡವರು ಎನ್ನದೇ ಶುದ್ದ ಕುಡಿಯುವ ನೀರಿನ  ಘಟಕದ ಹತ್ತಿರ ಜನರು ಸಾಲಾಗಿ ನಿಂತು ತೆಗೆದುಕೊಂಡು ಹೋಗುತ್ತಾರೆ. ಶುದ್ದ ಕುಡಿಯುವ ನೀರಿನ ಘಟಕ ಮುಚ್ಚಿರುವುದರಿಂದ ಪಟ್ಟಣದಿಂದ 3 ಕಿ.ಮೀ ದೂರ ಇರುವ ಮೇಲನಹಳ್ಳಿ ಹಾಗೂ ಹೊಸಹಳ್ಳಿಯ ಹತ್ತಿರವಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಹೋಗಿ ನೀರನ್ನು ತರಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಹಾಗೂ ಪುರಸಭಾ ಸದಸ್ಯರನ್ನು ವಿಚಾರಿಸದರೆ ಗುತ್ತಿಗೆದಾರನಿಗೆ ದೂರವಾಣಿ ಮೂಲಕ ತಿಳಿಸಿದ್ದೇವೆ. ಹಾಗೂ ನೋಟೀಸ್ ನೀಡಿದ್ದೇವೆ ಎನ್ನುತ್ತಾರೆ ಹೊರತು ಮುತುವಜರ್ಿವಹಿಸಿ ಕೆಲಸ ಮಾಡಿಸಿವುದಿಲ್ಲ  ಎಂದು  ತಾ.ಬಿ.ಜೆ.ಪಿ. ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಆರೋಪಿಸಿದ್ದಾರೆ.

ಅಪಘಾತ ವ್ಯಕ್ತಿ ಸಾವು
ಚಿಕ್ಕನಾಯಕನಹಳ್ಳಿ,ಜೂ.12: ರಬಸದಿಂದ ಬಂದ ಕಾರು ಪಾದಾಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ  ವ್ಯಕ್ತಿಯೊಬ್ಬರಿಗೆ ಗುದ್ದಿಕೊಂಡು ಹೋದ ಪರಿಣಾಮ ಸಿ.ಕೆ.ಪ್ರಕಾಶ್ಕುಮಾರ್ (55) ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಪಟ್ಟಣದ ಮಾರುತಿನಗರದ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ಚಿಕ್ಕನಾಯಕನಹಳಿ ಪ್ರಕಾಶ್ ರವರಿಗೆ,  ಪಟ್ಟಣದ ಕಡೆಯಿಂದ ಹುಳಿಯಾರು ಮಾರ್ಗವಾಗಿ ಸಾಗುತ್ತಿದ್ದ  ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವ ಸಂಭವಿಸಿದೆ. ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿಗೆ ಕರೆಯ್ದೊಯ್ಯುವಾಗ ಮಾರ್ಗ ಮದ್ಯೆ ಮರಣ ಹೊಂದಿದ್ದಾರೆ. ಮೃತ ವ್ಯಕ್ತಿ ಗೃಹರಕ್ಷಕ ದಳದ ಸದಸ್ಯನಾಗಿದ್ದರು,  ಹೆಂಡತಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಸಲಹೆ 

ಚಿಕ್ಕನಾಯಕನಹಳ್ಳಿ,ಜೂ.12: ಸಮಗ್ರ  ಬೇಸಾಯಕ್ರಮದಿಂದ ರೈತರು ಆಥರ್ಿಕ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಹೊನ್ನದಾಸೇಗೌಡ ಹೇಳಿದರು.
ತಾಲ್ಲೂಕಿನ ಕಂದಿಕೆರೆಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕೃಷಿ ಅಭಿಯಾನ -ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರೈತರು ಋತುಮಾನ ಹಾಗೂ ಪ್ರಾದೇಶಿಕ ಹವಮಾನಕ್ಕೆ ಅನುಗುಣವಾಗಿ ಬೇಸಾಯ ಮಾಡಿ ಹಾಗೂ  ತಳಿ ವೈವಿಧ್ಯದ ಬಿತ್ತನೆ ಬೀಜವನ್ನು ಸಂಗ್ರಹಿಸಿಕೊಳ್ಳಿ ಎಂದು ಸಲಹೆ ನೀಡಿದರು. 
ಕಂದಿಕೆರೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ಇಲಾಖೆಯಿಂದ ರೈತರಿಗೆ ದೊರಕುತ್ತಿರುವ ಸವಲತ್ತುಗಳು ಹಾಗೂ ಯೋಜನೆಗಳ ಬಗ್ಗೆ  ಅಧಿಕಾರಿಗಳು ಅರಿವು ಮೂಡಿಸಬೇಕು. ಇಂಥ ಕಾರ್ಯಕ್ರಮಗಳು ಔಪಚಾರಿಕವಾಗಿ ಹೆಸರಿಗಷ್ಟೇ ಆಗದೆ ರೈತರಿಗೆ ಲಾಭವಾಗಬೇಕು ಎಂದರು.
  ಕಂದಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ಯಾಮಲ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ದತ್ತಾತ್ರೇಯಭಟ್ ತಾಂತ್ರಿಕ ಸಲಹೆ ನೀಡಿದರು.  ಮುಖ್ಯ ಅತಿಥಿಗಳಾಗಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಎನ್.ಲೋಕೇಶ್ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು. ಕಂದಿಕೆರೆ ಕೃಷಿ ಅಧಿಕಾರಿಗಳಾದ ಕೆ.ಬಿ.ಉಮಾಶಂಕರ್ ನಿರೂಪಿಸಿ ವಿ.ಬಿ.ಕಿರಣ್ ಸ್ವಾಗತಿಸಿದರು. ಡಿ.ನಿಂಗಯ್ಯ ವಂದಿಸಿದರು. 




Saturday, June 11, 2016


ಕನಕ ವಿದ್ಯಾಭಿವೃದ್ದಿ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ 
ಚಿಕ್ಕನಾಯಕನಹಳ್ಳಿ,ಜೂ.11 : ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂದು ಪೋಷಕರು ಆಸೆ ಪಡುವ ಜೊತೆಗೆ, ಮಕ್ಕಳು ಯಾವ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ ಎಂದು ಗಮನ ಹರಿಸಿ ಆ ವಿಷಯದಲ್ಲಿ ಅವರಿಗೆ ಪ್ರೋತ್ಸಾಹಿಸುವುದು ಅವಶ್ಯಕ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗಂಗಾಧರ ಕೊಡ್ಲಿಯವರ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಉಚಿತ ನೋಟ್ಬುಕ್ ವಿತರಣೆ, ಕಾಲೇಜು ಶುಲ್ಕ ಪಾವತಿ, ಸಹಾಯ ಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತ ಗ್ರಾಮದ ಬಡ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವುದು ಅವಶ್ಯಕ ಅಂತಹ ಕೆಲಸವನ್ನು ಕನಕ ವಿದ್ಯಾಭಿವೃದ್ದಿ ಸಮಿತಿ ಮಾಡುತ್ತಿರುವುದು ಶ್ಲಾಘನೀಯ, ಈ ಸಮಿತಿ ಬೆಳೆಯಲು ದಿವಂಗತ ಕಣ್ಣಯ್ಯನವರ ಪಾತ್ರ ಬಹು ದೊಡ್ಡದು ಅವರ ಶ್ರಮ ಮತ್ತು ಬಡ ವಿದ್ಯಾಥರ್ಿಗಳ ಏಳಿಗೆಗೆ ಶ್ರಮಿಸುತ್ತಿದ್ದ ರೀತಿಯಿಂದಲೇ ಸಮಿತಿ ಪ್ರತಿ ವರ್ಷ ನೂರಾರು ವಿದ್ಯಾಥರ್ಿಗಳಿಗೆ ನಗದು ಹಾಗೂ ನೋಟ್ಬುಕ್ ವಿತರಣೆ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದರು.
ಶಿಕ್ಷಣವನ್ನು ಬಹಳ ಎಚ್ಚರಿಕೆಯಿಂದ ಬೋಧಿಸುವುದು ಅಗತ್ಯವಾಗಿದೆ, ಉತ್ತಮ ದಾರಿ ಹಾಗೂ ಒಳ್ಳೆಯ ಪರಿಸರವನ್ನು ಶಿಕ್ಷಣದಿಂದ ಮಾತ್ರ ನೀಡಲು ಸಾಧ್ಯ, ದೇಶಕ್ಕಾಗಿ ದುಡಿಯುವದು, ಸಮಾಜಮುಖಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ ಎಂದರಲ್ಲದೆ ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ, ಶಿರಾ, ಪಾವಗಡ ಶೈಕ್ಷಣಿಕವಾಗಿ ಬೆಳೆದಿದೆ ಎಂದರು.
ಬಿಇಓ ಕೃಷ್ಣಮೂತರ್ಿ ಮಾತನಾಡಿ, ವಿದ್ಯಾಥರ್ಿಗಳು ದಿನನಿತ್ಯ ಶಿಕ್ಷಣದಲ್ಲಿ ಬದಲಾವಣೆ ಕಾಣಬೇಕು, ಸ್ಮಧರ್ಾತ್ಮಕ ಯುಗಕ್ಕೆ ತಕ್ಕಂತೆ ಓದುವುದು ವಿದ್ಯಾಥರ್ಿಗಳು ಕಲಿಯಬೇಕು ಆಗಲೇ ಬೆಳೆಯಲು ಸಾಧ್ಯ, ಹುಳಿಯಾರಿನ ವಿದ್ಯಾಥರ್ಿಯೊಬ್ಬ ಪಿಸಿಎಂಬಿ ಯಲ್ಲಿ ಶೇ.100% ಅಂಕ ಪಡೆದರೂ ಸಿಇಟಿಯಲ್ಲಿ ಕಡಿಮೆ ಅಂಕ ಪಡೆದದ್ದರಿಂದ ಮೆಡಿಕಲ್ ಸೀಟ್ ದೊರೆತಿಲ್ಲ ಎಂದರಲ್ಲದೆ ಶ್ರಮ, ಶ್ರದ್ದೆ ಇದ್ದರೆ ಯಾವ ಕೆಲಸವಾದರೂ ಸುಲಭವಾಗುತ್ತದೆ ಎಂದರು.
ಕನಕ ವಿದ್ಯಾಭಿವೃದ್ದಿ ಸಮಿತಿಯ ಕಾರ್ಯದಶರ್ಿ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಬಡಮಕ್ಕಳ ಸ್ಥಿತಿ ಅರಿತು 2003ರಲ್ಲಿ ಆರಂಭವಾದ ವಿದ್ಯಾಭಿವೃದ್ದಿ ಸಮಿತಿ ಸಾವಿರಾರು ವಿದ್ಯಾಥರ್ಿಗಳಿಗೆ ನೆರವಾಗಿದೆ ಅಂದಿನಿಂದಲೂ ಇಂದಿನವರೆಗೆ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸುತ್ತಾ, ವಿದ್ಯಾಥರ್ಿಗಳಿಗೆ ಉಚಿತ ನೋಟ್ಬುಕ್ ವಿತರಿಸುತ್ತಾ ಕಾರ್ಯ ಮಾಡುತ್ತಿದೆ ಎಂದರಲ್ಲದೆ ಈ ಸಮಿತಿಯಿಂದ ಅನುಕೂಲ ಪಡೆದ ಉನ್ನತ ಮಟ್ಟದಲ್ಲಿರುವ ವಿದ್ಯಾಥರ್ಿಗಳು ಸಮಿತಿಗೆ ಸಹಾಯ ಮಾಡಿದರೆ ಮುಂದಿನ ಮಕ್ಕಳ ಭವಿಷ್ಯಕ್ಕೆ ನೆರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. 
ಸಮಾರಂಭದಲ್ಲಿ ಕನಕ ವಿದ್ಯಾಭಿವೃದ್ದಿ ಸಮಿತಿಯ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಸಿ.ಡಿ.ರಾಮಲಿಂಗಯ್ಯ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕಂಬಳಿ ಸೊಸೈಟಿ ಅಧ್ಯಕ್ಷ ಕೆ.ಪಿ.ಧೃವಕುಮಾರ್  ಮತ್ತಿತರರು ಉಪಸ್ಥಿತರಿದ್ದರು.

ಭಗೀರಥ ಜಯಂತಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ.11 :ತಾಲ್ಲೂಕು ಆಡಳಿತ ಮತ್ತು ಉಪ್ಪಾರ ಸಂಘ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 13ರಂದು ಮಧ್ಯಾಹ್ನ 12.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ಶ್ರೀ ಭಗೀರಥ ಜಯಂತಿ ನಡೆಯಲಿದೆ.
ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮನಂದ ಪುರಿ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸುವರು. ಶಾಸಕ ಸಿ.ಬಿಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ ಅಧ್ಯಕ್ಷೆ ಕೆ.ಹೊನ್ನಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಭಗೀರಥರ ಭಾವಚಿತ್ರ ಆನಾವರಣಗೊಳಿಸುವರು. ತುಮಕೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಾಸಂತಿಉಪ್ಪಾರ ಉಪನ್ಯಾಸ ನೀಡುವರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನೇಕಾರ ದೇವಿಕರಿಯಪ್ಪ, ಉಪ್ಪಾರ ಸಂಘದ ಉಪಾಧ್ಯಕ್ಷ ಈರಲಕ್ಕಪ್ಪ, ಕುಂಬಾರ ಸಮಾಜದ ಹನುಮಂತಯ್ಯ, ಮಾಜಿ. ಜಿ.ಪಂ.ಸದಸ್ಯ ಕೆಂಚಪ್ಪ, ನಾಟಿ ವೈದ್ಯ ಪುಟ್ಟಯ್ಯ ಇವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಡಾ|ಜಿ ಪರಮೇಶ್ವರ್, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸಂಸದೀಯ ಕಾರ್ಯದಶರ್ಿ ಪುಟ್ಟರಂಗಶೆಟ್ಟಿ, ತುಮಕೂರು ಜಿ.ಪಂ ಅಧ್ಯಕ್ಷೆ ಎಮ್.ಲತಾ ಮತ್ತಿತ್ತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಭೋಧಿವೃಕ್ಷ ಸಾಂಸ್ಕೃತಿಕ ಬಳಗದ ವತಿಯಿಂದ ಕಾರ್ಯಕ್ರಮ  

ಚಿಕ್ಕನಾಯಕನಹಳ್ಳಿ,ಜೂ.11 : ಹೆಂಡ ಬೇಡ, ಕಂಡ ಬೇಡ ತಬ್ಬಲಿ ಜಾತಿಗಳಿಗೆ ವಸತಿ ಶಾಲೆಗಳನ್ನು ಕೊಡಿ ಎಂದು ಎಪ್ಪತ್ತರ ದಶಕದಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ಹೋರಾಡಿದ ಫಲವಾಗಿ ಮೊರಾಜರ್ಿ, ಕಿತ್ತೂರು ರಾಣಿ ಚೆನ್ನಮ್ಮ, ವಾಜಪೇಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಹೇಳಿದರು. 
ಪಟ್ಟಣದ ಡಿವಿಪಿ ಪ್ರೌಢಶಾಲೆಯಲ್ಲಿ ಬೋಧಿವೃಕ್ಷ ಸಾಂಸ್ಕೃತಿಕ ಬಳಗದ ವತಿಯಿಂದ ನಡೆದ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಮಾನತೆಯ ಫಲವಾಗಿ ದಲಿತ ಸಂಘರ್ಷ ಸಮಿತಿ ಜನ್ಮ ತಾಳಿತು, ತಬ್ಬಲಿ ಜಾತಿಗಳು ರಾಜಕೀಯವಾಗಿ ಸದೃಡವಾದಾಗ ಮಾತ್ರ ಪ್ರೊ.ಬಿ.ಕೃಷ್ಣಪ್ಪನವರ ಕನಸು ಹಾಗೂ ಡಿಎಸ್ಎಸ್ ಹೋರಾಟಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದರು.
ಇಂದು ಬಿ.ಕೃಷ್ಣಪ್ಪನವರು ಬದುಕಿದ್ದರೆ ಕನರ್ಾಟಕದ ರಾಜಕೀಯ ಚಿತ್ರಣ ಬದಲಾಗುತ್ತಿತ್ತು, ಬಿ.ಕೆ ಇಲ್ಲದ ದಲಿತ ಸಂಘರ್ಷ ಸಮಿತಿ ತಬ್ಬಲಿಯಾಗಿದೆ, ದಲಿತ ಸಂಘರ್ಷ ಸಮಿತಿಯ ಲಕ್ಷಾಂತರ ಕಾರ್ಯಕರ್ತರು ಸಂಘಟನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜದಲ್ಲಿ ನೆಲೆಯೂರುವ ಅಸ್ಪೃಶ್ಯತೆ, ಬಂಡವಾಳ ಶಾಹಿ ಹಾಗೂ ಭೂಮಾಲೀಕರ ದಬ್ಬಾಳಿಕೆಯ ವಿರುದ್ದ ಹೋರಾಟ ಮುಂದುವರೆಸಬೇಕು ಎಂದರು.
ಡಿಎಸ್ಎಸ್ ತಾಲ್ಲೂಕು ಸಂಚಾಲಕ ಲಿಂಗದೇವರು ಮಾತನಾಡಿ, ದಲಿತ ಸಂಘರ್ಷ ಸಮಿತಿಯನ್ನು ಬಿ.ಕೃಷ್ಣಪ್ಪನವರು ಎಲ್ಲಾ ಜಾತಿಯ ಬಡವರ ಧ್ವನಿಯಾಗಿ ಕಟ್ಟಿದ್ದರು, ಬಿ.ಕೆಯವರು ನಿಧನ ಹೊಂದಿದಾಗ ಅವರ ಸಂಸ್ಕಾರಕ್ಕೂ ಜಾಗ ಇರಲಿಲ್ಲ, ಡಿಎಸ್ಎಸ್ನ ಪದಾಧಿಕಾರಿಗಳು ಇದನ್ನು ಅರ್ಥಮಾಡಿಕೊಂಡು ಅರ್ಥಪೂರ್ಣ ಹೋರಾಟವನ್ನು ಮುಂದುವರೆಸಬೇಕು ಎಂದರು.
ಬೋಧಿವೃಕ್ಷ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಅಶ್ವತ್ಥ್ನಾರಾಯಣ್ ಮಾತನಾಡಿ, ಇಂದು ಸಂಘಟನೆಗಳು ಜೀವಸತ್ವವನ್ನು ಕಳೆದುಕೊಂಡಿವೆ, ಬಿ.ಕೃಷ್ಣಪ್ಪನವರ ತಾತ್ವಿಕ ಒಳನೋಟವನ್ನು ಅರ್ಥಮಾಡಿಕೊಂಡು ಹೋರಾಟಗಾರರು ಮುಂದುವರೆಯಬೇಕು ಎಲ್ಲಾ ಜಾತಿಯ ಮಾನವೀಯ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಡಿಎಸ್ಎಸ್ ಕಟ್ಟುವ ಅವಶ್ಯಕತೆ ಇದೆ ಎಂದರು.
ಬಿ.ಕೃಷ್ಣಪ್ಪನವರು ರಾಯಚೂರಿನಲ್ಲಿ ನಡೆದಿದ್ದ ಬೋಳು ಬಂಡಪ್ಪರವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣದ ಧ್ವನಿಮುದ್ರಿಕೆಯನ್ನು ಕೇಳಿಸಿ ಅದರ ಮೇಲೆ ಚಚರ್ೆ, ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರುಗಳಾದ ಜೆ.ಸಿ.ಪುರ ಗೋವಿಂದರಾಜು, ಕೆ.ನಂಜುಂಡಯ್ಯ, ಕೆ.ಆರ್.ರಂಗಸ್ವಾಮಿ, ಬಿಳಿಗೆಹಳ್ಳಿ ರಾಜು, ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್, ಕಟ್ಟೆಮನೆ ರಂಗಸ್ವಾಮಿ, ಶೆಟ್ಟಿಕೆರೆ ದೇವರಾಜು, ತಮ್ಮಡಿಹಳ್ಳಿ ರವಿ, ಸಿ.ಎನ್.ಹನುಮಯ್ಯ, ಹುಳಿಯಾರು ರಾಜಪ್ಪ, ಡಾ.ಮಲ್ಲಿಕಾಜರ್ುನ್, ಮುಖ್ಯೋಪಾಧ್ಯಾಯ.ಜಿ.ನರಸಿಂಹಮೂತರ್ಿ, ಕಂಟಲಗೆರೆ ಗುರುಪ್ರಸಾದ್ ಮುಂತಾದವರು ಹಾಜರಿದ್ದರು.

ಬಿ.ಕೆ.ಸಂಪರ್ಕಕ್ಕೆ ಬಾರದಿದ್ದರೆ ನಾನು ರೌಡಿಯಾಗುತ್ತಿದ್ದೆ: ನಾನು ಕಗ್ಗಲ್ಲು ಬಿ.ಕೆ.ಎಂಬ ಶಿಲ್ಪಿ ನನ್ನನ್ನು ಶಿಲೆಯಾಗಿಸಿದರು. ಈ ಕುಂದೂರು ತಿಮ್ಮಯ್ಯನಿಗೆ ಸಾಮಾಜಿಕವಾಗಿ ಒಂದಿಷ್ಟು ಘನತೆ,ಗೌರವ ಸಿಕ್ಕಿದ್ದರೆ ಅದು ಪ್ರೊ.ಬಿ.ಕೃಷ್ಣಪ್ಪ ಅವರಿಂದ ನಾನು ಬೆಂಗಳೂರಿನಲ್ಲಿದ್ದಾಗ ಭೂಗತ ಪಾತಕಿ ಶ್ರೀರಾಂಪುರ ಕಿಟ್ಟಿ ಪರಿಚಯವಾಯಿತು. ಆ ಮೂಲಕ ಕೊತ್ವಾಲ್ ರಾಮಚಂದ್ರ ಹಾಗೂ ಜಯರಾಜ್ ಸಂಪರ್ಕವೂ ಸಿಕ್ಕಿತು. ನಾನು ಭೂಗತ ಜಗತ್ತಿ ಜಾರುತ್ತಿದ್ದಾಗ ಆಕಸ್ಮಿಕವಾಗಿ ಪ್ರೂ.ಬಿ.ಕೃಷ್ಣಪ್ಪ ಅವರ ಪರಿಚಯವಾಯಿತು. ಅವರು ನೀಡಿದ ಸಾಮಾಜಿಕ ಪ್ರಜ್ಞೆ ನನ್ನನ್ನು ಭೂಗತ ಲೋಕದಿಂದ ಹೊರಬರುವಂತೆ ಮಾಡಿತು. ಬಿ.ಕೆ.ಇಲ್ಲದಿದ್ದರೆ ನಾನು ರೌಡಿಯಾಗಿರುತ್ತಿದ್ದೆ ಎಂದು ಕುಂದೂರು ತಿಮ್ಮಯ್ಯ ಹೇಳಿದರು.




Thursday, June 9, 2016


ಗಾಳಿಮಳೆಗೆ ಹೆಂಚುಗಳು ಪುಡಿಪುಡಿ
ಚಿಕ್ಕನಾಯಕನಹಳ್ಳಿ,ಜೂ.09 : ತಾಲ್ಲೂಕಿನ ಹಂದನಕೆರೆ ಹೋಬಳಿ ಬಂದ್ರೆಹಳ್ಳಿ ತಾಂಡ್ಯದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ 16ಕ್ಕೂ ಹೆಚ್ಚು ಮನೆಗಳ ಹೆಂಚು ಹಾಗೂ ತಗಡಿನ ಶೀಟು ಹಾರಿ ಹೋಗಿದೆ.
 ಬಂದ್ರೆಹಳ್ಳಿ ತಾಂಡ್ಯದ  ಗಂಗಾಧರನಾಯ್ಕ, ಸೋಮ್ಲಾನಾಯ್ಕ, ಸೋಮ್ಲಬಾಯಿ, ರೂಪಾಬಾಯಿ, ಚಂದ್ರನಾಯ್ಕ, ಕರಿಯಾನಾಯ್ಕ, ರಾಮಾನಾಯ್ಕ, ರಾಜಾನಾಯ್ಕ, ಗೌರಿಬಾಯಿ, ಕವಿತಬಾಯಿ, ಸಾವಿತ್ರಿಬಾಯಿ, ರಾಜಾನಾಯ್ಕ, ಉಮೇಶ್ನಾಯ್ಕ, ಕಾಳಾನಾಯ್ಕ, ಇವರು  ವಾಸಿಸುತ್ತಿದ್ದ ಜನರು ಮಳೆಗಾಳಿಯಿಂದಾಗಿ ರಾತ್ರೆಯೆಲ್ಲಾ ಪರದಾಡುವಂತಾಯಿತು, ಇವರ ಮನೆಗಳ ಹೆಂಚುಗಳು ಭಾಗಶಃ ಹಾರಿಹೋಗಿದೆ. ಈ ಸಂಬಂಧ ಹಂದನಕೆರೆ ಕಂದಾಯಾಧಿಕಾರಿ ತಿಪ್ಪೇಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಸುರಿದ ಮಳೆಯ ವಿವರ: ತಾಲ್ಲೂಕಿನಲ್ಲಿ ಬುಧವಾರ ತಾಲೂಕಿನ 7ಕಡೆ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ.
ಚಿಕ್ಕನಾಯಕನಹಳ್ಳಿ-13..ಮಿಮೀ, ಸಿಂಗದಹಳ್ಳಿ-10.2..ಮಿಮೀ, ಶೆಟ್ಟಿಕೆರೆ..13.ಮಿಮೀ, ದೊಡ್ಡ ಎಣ್ಣೆಗೆರೆ 50.2.ಮಿಮೀ, ಮತಿಘಟ್ಟ 25.4.ಮಿಮೀ,, ಬೋರನಕಣಿವೆ 33.4, ಹುಳಿಯಾರು.50.3.ಮಿಮೀ ಮಳೆಯಾಗಿದೆ.  ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿವೆ.
ಚಿಕ್ಕನಾಯಕನಹಳ್ಳಿ,ಜೂ.9: ಬುಧವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪಟ್ಟಣದ 6ನೇ ವಾಡ್ ಕೇದಿಗೆಹಳ್ಳಿ ಗುಂಡು ತೋಪಿನಲ್ಲಿ ವಾಸವಾಗಿರುವ ಅಲೆಮಾರಿ ಸುಡುಗಾಡು ಸಿದ್ಧರ ಗುಡಿಸಲಿಗೆ ನೀರು ನುಗ್ಗಿದೆ.
  ಅಖಿಲ ಕನರ್ಾಟಕ ಸುಡುಗಾಡು ಸಿದ್ಧ ಮಹಾಸಭಾದ ಜಿಲ್ಲಾ ಅಧ್ಯಕ್ಷ ವೆಂಕಟೇಶಯ್ಯ ಮಾತನಾಡಿ, ಪ್ರತೀ ಮಳೆಗಾಲ ಬಂತೆಂದರೆ ನಮಗೆ ಜೀವ ಭಯ ಶುರುವಾಗುತ್ತದೆ. ಮಳೆ ನೀರು ವಾಸದ ಗುಡಿಸಲುಗಳಿಗೆ ನುಗ್ಗುತ್ತದೆ. ಕಳೆದ ಮಂಗಳವಾರ ರಾತ್ರಿ ಸುರಿದ ಮಳೆಗೆ ಏಕಾ ಏಕಿ ನೀರು ನುಗ್ಗಿ ಗುಡಿಸಲುಗಳು ಜಲಾವೃತವಾದವು. ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. ಗುರುವಾರ ಬೆಳಗಿನಿಂದಲೂ ಮಳೆ ಬಿಟ್ಟೂ ಬಿಟ್ಟು ಸುರಿಯುತ್ತಿದ್ದು ಮತ್ತೆ ಗುಡಿಸಲುಗಳಿಗೆ ನೀರು ನುಗ್ಗುವ ಭಯ ಕಾಡುತ್ತಿದೆ.
    ಗುಡಿಸಲುಗಳ ಮೇಲೆ ವಿದ್ಯುತ್ ತಂತಿಗಳು ಆದು ಹೋಗಿದ್ದು  ಮಳೆಗಾಲದಲ್ಲಿ ಅನಾಹುತ ಆಗುವ ಸಂಭವವಿದೆ. ಅಲ್ಲದೆ ಪಕ್ಕದಲ್ಲೇ ಇರುವ ದೊಡ್ಡ ಹುಣುಸೇಮರ ಮಳೆಗಾಳಿಗೆ ಉರುಳಿದರೆ ಜೀವ ಹಾನಿ ಸಂಭವಿಸುವ ಅಪಾಯ ಇದೆ ಎಂದರು.
   ಮಳೆ ಬಂದ ತಕ್ಷಣ ವಿಷ ಜಂತುಗಳು ಗುಡಿಸಲು ಒಳಗೆ ನುಗ್ಗುತ್ತವೆ. ಕಳೆದ 25 ವರ್ಷಗಳಿಂದ 15 ಸುಡುಗಾಡು ಸಿದ್ಧರ ಕುಟುಂಬಗಳು ಇಲ್ಲೇ ವಾಸವಾಗಿವೆ. ಪುರಸಭೆಯಿಂದ ನಿವೇಶನ ಒದಗಿಸಿ ಒಂದು ಸೂರು ಕಟ್ಟಿಕೊಳ್ಳಲು ಅನುವು ಮಾಡಿ ಕೊಡುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ನಿವೇಶನ ಹಾಗೂ ಆಶ್ರಯ ಮನೆ ಒದಗಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದೇವೆ ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.

ವಕೀಲರಿಂದ ನ್ಯಾಯಾಲಯ ಬಹಿಷ್ಕಾರ
ಚಿಕ್ಕನಾಯಕನಹಳ್ಳಿ,ಜೂ.9: ಉತ್ತಮ ಸಮಾಜ ನಿಮರ್ಾಣಕ್ಕೆ ನ್ಯಾಯದಾನ ಮಾಡುವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಕೀಲರಿಗೇ ನ್ಯಾಯಾಲಯದಲ್ಲಿ ಕೂರಲು ಸ್ಥಳಾವಕಾಶ ಹಾಗೂ ಮೂಲ ಸೌಕರ್ಯಗಳು ಇಲ್ಲದ ಕಾರಣ ವಕೀಲರು ಬೇಸತ್ತು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದು ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ನ್ಯಾಯಾಲಯದ ಆವರಣದಿಂದ ತಾಲೂಕು ಕಛೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ವಕೀಲರು,  ತಾಲೂಕು ಕಛೇರಿ ತಲುಪಿ ಘೋಷಣೆ ಕೂಗಿದರು. ನ್ಯಾಯಾಲಯದ ಕಳೆದ 10 ವರ್ಷಗಳ ಹಿಂದೆ ನೂತನವಾಗಿ ನಿಮರ್ಾಣಗೊಂಡ ನ್ಯಾಯಾಲಯ ಕಟ್ಟಡದಲ್ಲಿ ಮೂರು ಹಂತದ ನ್ಯಾಯಾಲಯಗಳಿದ್ದು,  ಇಲ್ಲಿ 70ಕ್ಕೂ ಹೆಚ್ಚು ವಕೀಲರು ಹಾಗೂ ಮಹಿಳಾ ವಕೀಲರು ದಿನನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು,  ವಕೀಲರುಗಳಿಗೆ ಕೂರಲು ಸರಿಯಾದ ಸ್ಥಳವಕಾಶವಿಲ್ಲದಿರುವುದರಿಂದ ಬೇಸತ್ತು ಜೂನ್ 9 ರಂದು ಸಾಂಕೇತಿಕವಾಗಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ಹಾಜರಾಗದೇ ವಕೀಲರು ಪ್ರತಿಭಟಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
 ಕೂರಲು ಸೂಕ್ತವಾದ ಕಟ್ಟಡ ನಿಮರ್ಿಸಬೇಕು ಹಾಗೂ ಸಾರ್ವಜನಿಕರು ನ್ಯಾಯಾಲಯಕ್ಕೆ ಬಂದರೆ ಅವರಿಗೂ ಕೂರಲು ಸರಿಯಾದ ವ್ಯವಸ್ಥೆ, ವಕೀಲರ ಭವನ ಸೇರಿದಂತೆ  ಇತರೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಮಾತನಾಡಿ, ಕಾನೂನು ಸಂಸದೀಯ ಸಚಿವರು ನಮ್ಮ ವಕೀಲರ ಸಂಘವೇ ಅವರಿಗೆ ಮಾತೃ ಸ್ಥಾನದಲ್ಲಿದ್ದು,  ಈ ಸಂಘದ ಮೂಲಕವೇ ಅವರು ಹಂತಹಂತವಾಗಿ ಮೇಲೇರಿದ್ದಾರೆ,  ಜೊತೆಗೆ ಸ್ವಕ್ಷೇತ್ರದವರಾಗಿದ್ದು ಅವರು ಈ ಕೂಡಲೇ ಇತ್ತ ಗಮನ ಹರಿಸಿ ವಕೀಲರ ಭವನ ನಿಮರ್ಾಣ ಕಾರ್ಯಕ್ಕೆ ಕೂಡಲೇ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ. 
 ಕಳೆದ 8 ವರ್ಷಗಳಿಂದ ವಕೀಲರ ಭವನ ನಿಮರ್ಿಸುವಂತೆ ಸಚಿವರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಶೀಘ್ರ ಈ ಕಾರ್ಯ ಕೈಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಕೀಲರ ಸಂಘ ಎಚ್ಚರಿಸಿದೆ ಎಂದರು.
ನಂತರ  ತಹಶೀಲ್ದಾರ್ ಆರ್. ಗಂಗೇಶ್ರವರಿಗೆ  ಮನವಿ ಅಪರ್ಿಸಿದರು. ಈ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಜಶೇಖರ್, ಕಾರ್ಯದಶರ್ಿ ಕೆ.ಎಂ. ಷಡಾಕ್ಷರಿ, ಎಸ್.ದಿಲೀಪ್, ಬಿ.ಕೆ.ಸದಾಶಿವಯ್ಯ, ಎಸ್.ಗೋಪಾಲಕೃಷ್ಣ, ಸಿ.ಎನ್. ಕೃಷ್ಣಮೂತರ್ಿ, ಕೆ.ಆರ್. ಚನ್ನಬಸವಯ್ಯ, ಎಂ.ಬಿ.ನಾಗರಾಜು, ಎಚ್.ಎಸ್.ಜ್ಞಾನಮೂತರ್ಿ ಡಿ.ಎಂ. ಸ್ವಾಮಿ,  ಜಿ. ಪರಮೇಶ್ವರ್, ಹನುಮಂತಯ್ಯ, ಟಿ.ಶಶಿಧರ್, ರತ್ನರಂಜನಿ, ಮಂಜುನಾಥ್, ರವಿ, , ರವಿ, , ಮೊದಲಾದವರು ಹಾಜರಿದ್ದರು. 

ಬೋಧಿವೃಕ್ಷದ ವತಿಯಿಂದ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ,9: ಮಹಾತ್ಮ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಮುದ್ರಿತ ಭಾಷಣದ ಆಲಿಸುವಿಕೆ ಮತ್ತು ಚಚರ್ೆಯನ್ನು ಇದೇ 11ರಂದು ಹಮ್ಮಿಕೊಳ್ಳಲಾಗಿದೆ.
ಬೋಧಿವೃಕ್ಷ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಈ ಕಾರ್ಯಕ್ರಮವನ್ನು ಪಟ್ಟಣದ ಡಿ.ವಿ.ಜಿ.ಎಚ್.ಎಸ್.ಶಾಲೆಯ ಆವರಣದಲ್ಲಿ ಮಧ್ಯಾಹ್ನ 1.30ಕ್ಕೆ ಹಮ್ಮಿಕೊಂಡಿದೆ. ಚಚರ್ೆಯಲ್ಲಿ ಕುಂದೂರು ತಿಮ್ಮಯ್ಯ, ನಾರಾಯಣರಾಜು, ಲಿಂಗದೇವರು, ಬೇವಿನಹಳ್ಳಿ ಚನ್ನಬಸವಯ್ಯ, ಸಿ.ಡಿ.ಚಂದ್ರಶೇಖರ್, ಎನ್.ಇಂದಿರಮ್ಮ, ಸಿಂಗದಹಳ್ಳಿ ರಾಜ್ಕುಮಾರ್, ಸುಪ್ರಿಂ ಸುಬ್ರಹ್ಮಣ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಟ್ರಸ್ಟ್ನ ಕಂಟಲಗೆರೆ ಗುರುಪ್ರಸಾದ್ ತಿಳಿಸಿದ್ದಾರೆ.

ಬಿಇಓ ಕಛೇರಿಯ ಪ್ರಕಟಣೆ
ಚಿಕ್ಕನಾಯಕನಹಳ್ಳಿ,ಜೂ.9: ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯವಾರು ಜೇಷ್ಠತಾ ಪಟ್ಟಿಯನ್ನು ಕಛೇರಿಯಾ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ.ಕೃಷ್ಣಮೂತರ್ಿ ತಿಳಿಸಿದ್ದಾರೆ.
ಸದರಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಶಿಕ್ಷಕರುಗಳು ಮತ್ತು ದಿನಾಂಕ 01.01.15 ರಿಂದ 31.12.15ರ ಅವಧಿಯಲ್ಲಿ ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರುವ ಸೇವಾನಿರತ ಶಿಕ್ಷಕರು ತಮ್ಮ ವಿದ್ಯಾರ್ಹತೆಯ ಪೂರಕ ದಾಖಲೆಗಳೊಂದಿಗೆ ಹಾಗೂ ರೆಗ್ಯೂಲರ್ ಆಗಿ ಪದವಿ ಪಡೆದಿದ್ದಲ್ಲಿ ಇಲಾಖಾ ಅನುಮತಿ ಪತ್ರದೊಂದಿಗೆ ದಿನಾಂಕ 11.06.216ರೊಳಗೆ ಕಛೇರಿಯ ವ್ಯವಸ್ಥಾಪಕರಿಗೆ ಮುದ್ದಾಂ ಸಲ್ಲಿಸುವುದು ತಡವಾಗಿ ಬಂದ ಮನವಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.