Saturday, March 28, 2015


ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ : ಪ್ರಾಂಶುಪಾಲ ವರದರಾಜು
                                  
ಚಿಕ್ಕನಾಯಕನಹಳ್ಳಿ,ಮಾ. : ಕೊಠಡಿಗಳಲ್ಲಿ ಕಲಿಯುವ ಶಿಕ್ಷಣದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಜೀವನ ಅರ್ಥವಾಗುತ್ತದೆ ಎಂದು ಪ್ರಾಚಾರ್ಯ ವಿ.ವರದರಾಜು ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರಿಸರದ ಸ್ವಚ್ಛತೆ, ಸಮಾಜ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಎಲ್ಲವೂ ವಿದ್ಯಾಥರ್ಿಗಳು ತಿಳಿದುಕೊಳ್ಳಬೇಕಾಗಿದೆ, ಅದಕ್ಕೋಸ್ಕರ ಗ್ರಾಮಗಳಲ್ಲಿ ನಡೆಯುವ ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಹಳ್ಳಿಗಳ ಜೀವನದ ಕಷ್ಟ ಸುಖಗಳು ತಿಳಿಯುತ್ತವೆ, ಅದಕ್ಕೋಸ್ಕರ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಡಾ.ಶಿವಲಿಂಗಮೂತರ್ಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ, ಹಳ್ಳಿಗಳು ಸಹ ಆಧುನಿಕ ಜೀವನಕ್ಕೆ ಒಳಗಾಗುತ್ತಿರುವುದು ವಿಷಾಧನೀಯ, ನಮ್ಮ ಮೂಲ ಸಂಸ್ಕೃತಿಯನ್ನು ಬೆಳಸಿ ಸಂಸ್ಕಾರವಂತರನ್ನಾಗಿ ಮಾಡಬೇಕಾಗಿದೆ, ಕೈಗಾರಿಕೆಗಳು ಕೇವಲ ಹಣ ಮಾಡುವ ಕಾಖರ್ಾನೆಗಳಾಗಿದ್ದು ಇದರ ಹಿಂದೆ ಓದರೆ ನಮ್ಮ ಗ್ರಾಮೀಣ ಕೃಷಿ ಬದುಕು ನಾಶವಾಗುತ್ತದೆ ಆದ್ದರಿಂದ ನಮ್ಮ ಕೃಷಿ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ  ಗ್ರಾ.ಪಂ.ಅಧ್ಯಕ್ಷೆ ವಿನೋದಬಾಯಿ, ಉಪಾಧ್ಯಕ್ಷ ಗುರುಶಾಂತಪ್ಪ, ಶಿಬಿರಾಧಿಕಾರಿಗಳಾದ ಚಂದ್ರಶೇಖರ್, ಶಿವರಾಮಯ್ಯ, ಮುಖ್ಯಶಿಕ್ಷಕಿ ಪಾರ್ವತಮ್ಮ, ಕಾರ್ಯದಶರ್ಿ ಶಿವರ್ಣಣ, ಶಂಕರಪ್ಪ, ಲೋಕೇಶನಾಯ್ಕ, ಅಭಿವೃದ್ದಿ ಅಧಿಕಾರಿ ಭೈರಪ್ಪ, ಪ್ರೊ.ಪ್ರಸನ್ನಕುಮಾರ್, ಸುರೇಶ್, ಪ್ರಸನ್ನ, ಶೈಲೇಂದ್ರಕುಮಾರ್, ಅಧೀಕ್ಷಕ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.



ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ : ವಕೀಲ ಎಂ.ಕೆ.ರವಿಚಂದ್ರ,
ಚಿಕ್ಕನಾಯಕನಹಳ್ಳಿ,ಮಾ.27 : ಮಹಿಳೆಯರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇದ, ಬ್ರೂಣ ಹತ್ಯೆ ನಿಷೇಧ, ಜೀವನಾಂಶ ವಿವಾವ ವಿಚ್ಛೇದನ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ತಮ್ಮ ರಕ್ಷಣೆಗಾಗಿ ಬಳಸಬೇಕೇ ಹೊರತು ದ್ವೇಷಕ್ಕೆ ಉಪಯೋಗಿಸಿ ಕಾನೂನನ್ನು ದುರ್ಬಳಕೆ ಮಾಡಬಾರದೆಂದು ಚಿ.ನಾ.ಹಳ್ಳಿ ಜೆ.ಎಂ.ಎಫ್.ಸಿ ಸಹಾಯಕ ಸಕರ್ಾರಿ ಅಭಿಯೋಜಕ ಎಂ.ಕೆ.ರವಿಚಂದ್ರ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಸ್ಥಿತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಸ್ಥಿತಿಯಲ್ಲಿದ್ದಾರೆ, ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ವೈಜ್ಞಾನಿಕವಾಗಿ ಪುರುಷರಿಗೆ ಸರಿಸಮನಾಗಿ ಭಾಗವಹಿಸುವಂತೆ ಮತ್ತು ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರಲ್ಲದೆ ಅಶಕ್ತ, ಆಥರ್ಿಕ ದುರ್ಬಲರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತವಾಗಿ ಕಾನೂನು ನೆರವನ್ನು ಪಡೆಯಬಹುದೆಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005ರ ನಿಯಮ 2006 ರ ಬಗ್ಗೆ ಮಾಹಿತಿ ನೀಡಿದರು. ಒಂದೇ ಸೂರಿನಡಿ ಕುಟುಂಬದ ಯಾವುದೇ ಸದಸ್ಯರಿಂದ ಆಥರ್ಿಕ ಲೈಂಗಿಕ ಬೌದ್ದಿಕ ಮಾನಸಿಕ ದೌರ್ಜನ್ಯಗೊಳಗಾದಲ್ಲಿ ಈ ಕಾಯ್ದೆಯಡಿ ರಕ್ಷಣೆಯನ್ನು ಪಡೆಯಬಹುದಾಗಿರುತ್ತದೆ. ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಕೌಟುಂಬಿಕ ದೌರ್ಜನ್ಯ ಹಿಂಸೆ ಸಂರಕ್ಷಣಾಧಿಕಾರಿ, ಸಕರ್ಾರದಿಂದ ಮಾನ್ಯತೆ ಪಡೆದ ಸೇವಾ ಕೇಂದ್ರ, (ಸಾಂತ್ವಾನ ಕೇಂದ್ರ) ಪೋಲಿಸ್ ಠಾಣೆ, ನ್ಯಾಯಾಲಯ ಈ ನಾಲ್ಕು ಕಡೆ ಸಂದರ್ಭನುಸಾರ ದೂರನ್ನು ಸಲ್ಲಿಸಬಹುದಾಗಿರುತ್ತದೆ, ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಈ ಕಾಯ್ದೆಯಲ್ಲಿ ವೈದ್ಯಕೀಯ ಚಿಕಿತ್ಸೆ, ವಸತಿ ಸೌಲಭ್ಯ, ತುತರ್ು ಅಗತ್ಯಗಳನ್ನು ಸಮಯೋಚಿತವಾಗಿ ಒದಗಿಸಲಾಗುವುದು ಎಂದರಲ್ಲದೆ ಆಧ್ಯತೆ ಮೇಲೆ ಈ ಕೇಸನ್ನು 60ದಿನದಲ್ಲಿ ಇತ್ಯರ್ಥಪಡಿಸಬೇಕಾಗಿದೆ, ಅನಿವಾರ್ಯ ಸಂದರ್ಭಗಳಲ್ಲಿ ತಾತ್ಕಾಲಿಕ ಆದೇಶ ಮಾಡಿ ನಂತರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ಈ ಕಾಯ್ದೆಯಡಿ ರಕ್ಷಣೆಯನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಬಾಲ್ಯವಿವಾಹದ ಬಗ್ಗೆ ಮಾಹಿತಿ ನೀಡಿದರು. ವಕೀಲ ವೈ.ಜಿ.ಲೋಕೇಶ್ ಆಸ್ತಿ ಕ್ಕು ಮತ್ತು ವರದಕ್ಷಿಣೆ ನಿಷೇದ ಕಾಯ್ದೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಲಯದ ಸಿಬ್ಬಂದಿ , ಸಿಡಿಪಿಓ ಕಛೇರಿ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಸದಸ್ಯರುಗಳು, ಭಾಗ್ಯಲಕ್ಷ್ಮಿ ತಾಯಂದಿರು, ಅಂಗನವಾಡಿ ಕಾರ್ಯಕತರ್ೆಯರು, ಸಹಾಯಕಿಯರು ಭಾಗವಹಿಸಿದ್ದರು.




                                             ಚಿತ್ರ ಶೀಷರ್ಿಕೆ :
                                   
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿ ಗ್ರಾಮದ ಶ್ರೀ ಕಂಚೀರಾಯಸ್ವಾಮಿ ಜಾತ್ರೆ ರಥೋತ್ಸವವು ವಿಜೃಂಭಣೆಯಾಗಿ ನೆರವೇರಿತು.  ಕಂಚೀರಾಯಸ್ವಾಮಿ ಮತ್ತು ಬ್ಯಾಲದಕೆರೆ ಶ್ರೀ ಕೆಂಪಮ್ಮದೇವಿಯ ಜಾತ್ರೆ ರಥೋತ್ಸವು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.


                                      
ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ದೇವರ ದಾಸಿಮಯ್ಯ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೆ.ಟಿ.ತಿಮ್ಮರಾಯಪ್ಪ, ಸಿ.ಎಂ.ಅನಂತಯ್ಯ ಹಾಗೂ ಮತ್ತಿತರರನ್ನು ಶಾಸಕ ಸಿ.ಬಿ.ಸುರೇಶ್ಬಾಬು ಸನ್ಮಾನಿಸಿದರು. ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ, ಸಿ.ಡಿ.ಚಂದ್ರಶೇಖರ್ ಮತ್ತಿತತರರು ಉಪಸ್ಥಿತರಿದ್ದರು.



ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು. ಪುರಸಭಾಧ್ಯಕ್ಷೆ ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದ ಓದಿನ ಮನೆ ವಿಶ್ವವಿದ್ಯಾನಿಲಯವಿದ್ದಂತೆ : ವಿಮರ್ಷಕ ನಟರಾಜ್ ಬೂದಾಳ್
                                    
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದಲ್ಲಿ ಅಕ್ಷರ ಜ್ಞಾನವನ್ನು ವೃದ್ದಿಸುವುದಕ್ಕಾಗಿ ಓದಿನ ಮನೆ ಎಂಬ ಹೆಸರನ್ನಿಟ್ಟು ಪತ್ರಿಕೆಗಳು, ಪುಸ್ತಕಗಳನ್ನು ಹಳ್ಳಿಗಳ ಜನರಿಗೆ ತಲುಪಿಸುವ ಮೂಲಕ ಗ್ರಾಮೀಣ ಭಾಗದಲ್ಲಿ  ವಿಶ್ವವಿದ್ಯಾನಿಲಯಕ್ಕೆ ಸರಿಸಮಾನವಾಗಿ ಕೆಲಸ ಮಾಡುತ್ತಿದೆ  ಎಂದು ಕನರ್ಾಟಕ ಸಮಗ್ರ ತತ್ವಪದ ಪ್ರಕಟಣಾ ಯೋಜನೆಯ ರಾಜ್ಯ ಸಂಯೋಜಕ  ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಕುವಳ್ಳಿ ಗ್ರಾಮದಲ್ಲಿನ ಓದಿನ ಮನೆ ಪ್ರಾರಂಭವಾಗಿ ಮಾಸ ಪೂರೈಸುವ ಹೊತ್ತಿಗೆ, ಓದಿನ ಮನೆ, ಅರಿವಿನ ಮನೆಯಾಗಿ ಪರಿವತರ್ಿಸುವಲ್ಲಿ ನಡೆದಿರುವ ಆಗುಹೋಗಗಳ ಬಗ್ಗೆ ನಡೆದ ಆತ್ಮ ವಿಮಶರ್ಾ ಸಭೆ ಹಾಗೂ ತತ್ವಪದ ಹಾಡುಗಾರಿಕೆ ಪ್ರಸ್ತುತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು,  ಜನರಿಗೆ, ವಿದ್ಯಾಥರ್ಿಗಳಿಗೆ ದೇಶದಲ್ಲಿ ದಿನನಿತ್ಯ ನಡೆಯುವ ಘಟನೆಗಳನ್ನು ಹಾಗೂ ಜ್ಞಾನವೃದ್ದಿಸಿಕೊಳ್ಳಲು ಉಪಯೋಗವಾಗುವಂತ ಪತ್ರಿಕೆಗಳು, ಪುಸ್ತಕಗಳನ್ನು ಜನರಿಗೆ ತಲುಪಿಸುವ ಮೂಲಕ ಓದಿನ ಮನೆ, ಅರಿವಿನ ಮನೆಯಾಗಿದೆ ಎಂದರಲ್ಲದೆ,  ವಿಶ್ವವಿದ್ಯಾನಿಲಯಗಳು ವಿದ್ಯಾಥರ್ಿಗಳಿಗೆ ಜ್ಞಾನವನ್ನು ನೀಡುವ ರೀತಿಯಲ್ಲೇ  ಇಲ್ಲಿನ ಜನರಿಗೆ ಓದಿನ ಮನೆ ಜ್ಞಾನವನ್ನು ಒಬ್ಬರಿಂದ ಮತ್ತೊಬರಿಗೆ ಪ್ರಚುರ ಪಡೆಸಲು ಕಂಡು ಕೊಂಡ ಉತ್ತಮ ದಾರಿಯಾಗಿದೆ ಎಂದರು.
  ಓದಿನ ಮನೆ ಹಳ್ಳಿಯ ಜನರನ್ನೆಲ್ಲಾ ಒಂದು ಕಡೆ ಸೇರಿಸಿ ಸಮಾಜದಲ್ಲಿನ ಆಗುಹೋಗುಗಳನ್ನು ತಿಳಿಸುತ್ತಿದೆ, ಹಳ್ಳಿಯಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂದರಲ್ಲದೆ  ಕನ್ನಡದ ನಿಜವಾದ ಸಂಪತ್ತು ಇರುವುದು ಹಳ್ಳಿಗಳಲ್ಲಿ, ಹಳ್ಳಿಗಳ ಪ್ರತಿಭೆಗಳೇ ಇಂದು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು, ಅಂತಹವರ ಸಾಲಿನಲ್ಲಿ ನಿಲ್ಲಲು ಪ್ರಪಂಚದ ಜ್ಞಾನ ಅವಶ್ಯಕವಾಗಿದ್ದು ದಿನನಿತ್ಯ  ಪತ್ರಿಕೆಗಳು, ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ದಿಸಿಕೊಳ್ಳಬಹುದು ಎಂದರು. ಹಿಂದೆ ಅಕ್ಷರ ದೊರಕಲಿಲ್ಲ ಎಂಬ ಒಂದೇ ಕಾರಣಕ್ಕೆ ಅರ್ಧ ಚೈತನ್ಯಗಳು ಹೊರಬರಲಾಗದೇ ಕಳೆಗುಂದಿದವು ಆದರೆ ಈಗಿನ ಮಕ್ಕಳಿಗೆ ಅಕ್ಷರ ಜ್ಞಾನದ ಅವಶ್ಯಕತೆ ಹೆಚ್ಚಿನದಾಗಿದೆ, ಮಕ್ಕಳಿಗೆ ಇಂತಹ ಓದಿನ ಮನೆಗಳು ಹೆಚ್ಚಿದಷ್ಟು ಮಕ್ಕಳಿಗೆ ಸಣ್ಣವಯಸ್ಸಿನಿಂದಲೇ ಸ್ಪಧರ್ಾತ್ಮಕ ವೇದಿಕೆ ತಯಾರಿ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
 ಈ ಗ್ರಾಮದಲ್ಲಿ ತತ್ವಪದಕಾರರ ತಂಡವಿದ್ದು ಮಕ್ಕಳಿಗೆ ಈ ವೇದಿಕೆಯ ಮೂಲಕ ಸಾಂಸ್ಕೃತಿಕ ಕೌಶಲ್ಯವೂ ದೊರಕತ್ತದೆ ಆದ್ದರಿಂದ ಗುರು ಹಿರಿಯರು ನಮಗೆ ಉತ್ತಮ ದಾರಿಯನ್ನು ತೋರಿಸಿದ್ದು ಆ ದಾರಿಯನ್ನು ನಾವು ಪಾಲಿಸಬೇಕು ಎಂದರು.
  ಸಾಹಿತಿ ಎಸ್.ಗಂಗಾಧರಯ್ಯ ಮಾತನಾಡಿ, ಹಳ್ಳಿಗಳಲ್ಲಿ ಅಕ್ಷರ ಜ್ಞಾನ ತುಂಬುವ, ಸಾಹಿತ್ಯದ ಚಟುವಟಿಕೆ ಬೆಳೆಸುವ ಯೋಚನೆ ಇದ್ದಿದ್ದರಿಂದಲೇ ಈ ಓದಿನ ಮನೆ ಆರಂಭಿಸಲಾಯಿತು, ಓದಿನ ಮನೆ ಅರಿವಿನ ಮನೆಯಾಗಿಯೂ ಕಾಣಲಿದೆ, ಆರಂಭವಾದ ಒಂದು ತಿಂಗಳಿನಲ್ಲಿಯೇ ಓದಿನ ಮನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಿರಿಯರಿಂದ, ದೊಡ್ಡವರವರೆಗೂ ಓದಿನ ಮನೆಗೆ ದಿನನಿತ್ಯ ಬಂದು ಹೋಗುತ್ತಿದ್ದಾರೆ, ಇದರಿಂದ ಇಲ್ಲಿನ ಜನತೆಗೆ ಸಮಾಜದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ, ಮುಂದೇನು ಮಾಡಬೇಕೆಂಬ ಆಲೋಚನೆಗಳು ಮೂಡುತ್ತಿವೆ, ಈ ಓದಿನ ಮನೆ ನಮ್ಮ ನಂತರದ ಪೀಳಿಗೆಗೆ ಅವಶ್ಯಕವಾಗಿದ್ದು ಪ್ರತಿಯೊಬ್ಬರು ಅಕ್ಷರ ಜ್ಞಾನ ಪಡೆಯಬೇಕೆಂಬುದೇ ಓದಿನ ಮನೆಯ ಉದ್ದೇಶವಾಗಿದೆ ಎಂದರು.
ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಕಲಿಕೆಗೆ ದಾರಿಯಾಗಿರುವ ಓದಿನ ಮನೆಗೆ ಪೋಷಕರು ಮಕ್ಕಳನ್ನು ಕಳಿಸುವುದರ ಜೊತೆಗೆ ಅವರೂ ಆಗಮಿಸಿ ಅಕ್ಷರ ಜ್ಞಾನ ಪಡೆದುಕೊಳ್ಳಬೇಕು ಈ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು, ಓದಿನ ಮನೆಯಂತಹ ಉತ್ತಮ ವೇದಿಕೆ ಮಾಕುವಳ್ಳಿಯಲ್ಲಿ ಬಿಟ್ಟರೆ ಜಿಲ್ಲೆಯಲ್ಲಿ ಎಲ್ಲಿಯೂ ಇದುವರೆವಿಗೂ ಆರಂಭವಾಗಿಲ್ಲ, ಈ ಓದಿನ ಮನೆ ಎಲ್ಲಾ ಕಡೆಗೂ ವ್ಯಾಪಿಸಿ ಹಳ್ಳಿ ಜನತೆಗೆ ಅನುಕೂಲವಾಗಲಿ ಎಂದರು.
ಕನರ್ಾಟಕ ಸಮಗ್ರ ತತ್ವಪದ ಪ್ರಕಟಣಾ ಯೋಜನೆಯ ಜಿಲ್ಲಾ ಸಂಪಾದಕ ಹಾಗೂ ಕ್ಷೇತ್ರ ತಜ್ಞ ಉಜ್ಜಜ್ಜಿರಾಜಣ್ಣ ಮಾತನಾಡಿ, ಓದಿನ ಮನೆ ಎಂಬ ವೇದಿಕೆ ಮಾಕುವಳ್ಳಿಯಲ್ಲಿ ಆರಂಭವಾದ ನಂತರ ಹಲವಾರು ಹಳ್ಳಿಗಳಲ್ಲಿ ಓದಿನ ಮನೆ ಆರಂಭಿಸಲು ಸಲಹೆ ಸೂಚನೆಗಳನ್ನು ಕೇಳುತ್ತಿದ್ದಾರೆ, ತಿಪಟೂರಿನ ಪಕ್ಕದ ಮಂಜುನಾಥನಗರ ಹಳ್ಳಿಯೊಂದರಲ್ಲಿ ಓದಿನ ಮನೆ ಆರಂಭಿಸಲು ಕೇಳಿದ್ದಾರೆ ಅದೇ ರೀತಿ ಚಿ.ನಾ.ಹಳ್ಳಿಯ ಸೋರಲಮಾವು ಹಾಗೂ ಮತ್ತಿತರರ ಕಡೆಯಲ್ಲೂ ಓದಿನ ಮನೆಗಾಗಿ ಸಲಹೆಗಳನ್ನು ಕೇಳುತ್ತಿದ್ದಾರೆ ಎಂದರು.
ವಿದ್ಯಾಥರ್ಿ ಉಮೇಶ್ ಮಾತನಾಡಿ, ಡಿ.ಕೆ.ರವಿ ಎಂಬ ಅಧಿಕಾರಿಯ ಬಗ್ಗೆ ನಮಗೆ ತಿಳಿದೇ ಇರಲಿಲ್ಲ ಓದಿನ ಮನೆಗೆ ಪತ್ರಿಕೆಯನ್ನು ಓದಲು ಆಗಮಿಸಿದಾಗಲೇ ಅವರ ಪ್ರಾಮಾಣಿಕ ಕೆಲಸದ ಬಗ್ಗೆ ಅರಿವಾಗಿದ್ದು, ಅದೇ ರೀತಿಯ ಸಮಾಜದ ಆಗುಹೋಗುಗಳನ್ನು ತಿಳಿಯಲು ಸಹಕಾರಿಯಾಯಿತು ಎಂದು ತನ್ನ ಅಭಿಪ್ರಾಯ ಹಂಚಿಕೊಂಡರು. 
ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಾದ ಭೈರೇಶ್, ಕಾವ್ಯ, ಕುಸುಮ ಸೇರಿದಂತೆ ಹಲವರು ಓದಿನ ಮನೆಯಿಂದ ತಮಗಾದ  ಅನುಭವಗಳನ್ನು ಹಂಚಿಕೊಂಡರು,   ಮಾಕುವಳ್ಳಿ ಗ್ರಾಮದ ತತ್ವಪದಕಾರರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡುರಗಳಾದ ನಿಜಾನಂದಮೂತರ್ಿ, ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.


ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಸಾಲ ಸೌಲಭ್ಯ ವಿತರಣೆ
ಚಿಕ್ಕನಾಯಕನಹಳ್ಳಿ,ಮಾ.28: ಕನರ್ಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ 2014-15ನೇ ಸಾಲಿಗೆ ಈ ವಿಧಾನ ಸಭಾ ಕ್ಷೇತ್ರದಲ್ಲಿ ಮೂವತ್ತೆಂಟು ಲಕ್ಷ ರೂಗಳನ್ನು ವಿತರಿಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಈ ವಿಧಾನ ಸಭಾ ಕ್ಷೇತ್ರದ ಎಂಟು ಸ್ವಸಹಾಯ ಸಂಘಗಳ 86 ಫಲಾನುಭವಿಗಳಿಗೆ ತಲಾ ಹತ್ತು ಸಾವಿರದಂತೆ  ಒಟ್ಟು ಎಂಟು ಲಕ್ಷದ ಅರವತ್ತು ಸಾವಿರ ರೂಗಳನ್ನು ಹಾಗೂ ಶ್ರಮ ಶಕ್ತಿ ಯೋಜನೆ ಅಡಿಯಲ್ಲಿ 150 ಫಲಾನುಭವಿಗಳಿಗೆ ತಲಾ ಇಪ್ಪತ್ತು ಸಾವಿರದಂತೆ ಒಟ್ಟು ಮೂವತ್ತು ಲಕ್ಷ ರೂಗಳನ್ನು ವಿತರಲಾಗಿದೆ ಹಾಗೂ ಹದಿನೇಳು ಕೊಳವೆ ಬಾವಿಗಳನ್ನು ಮಂಜೂರು ಮಾಡಿ,   ನನ್ನ ಕ್ಷೇತ್ರಕ್ಕೆ ಹೆಚ್ಚು ಅನುಧಾನ ನೀಡಿದ ವ್ಯವಸ್ಥಾಪಕ ನಿದರ್ೇಶಕರಾದ ಸಲೀಂ ಅಹಮದ್ ರವರಿಗೆ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಬೂಬ್ ಕಲಾಂ ರವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

.


Thursday, March 26, 2015



ಪುರಸಭೆಯಲ್ಲಿ ಟ್ರಾಕ್ಟರ್ ಹಾಗೂ ಜೆಸಿಬಿಗೆ ಹಾಕಿಸುವ ಆಯಿಲ್, ಗ್ರೀಸ್ನಲ್ಲಿ ಅವ್ಯವಹಾರ ನಡೆದಿದೆ ಪುರಸಭಾ ಸದಸ್ಯರು, :  ತನಿಖೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಮಾ.26 : ಪುರಸಭೆಯಲ್ಲಿನ ಟ್ರಾಕ್ಟರ್ ಹಾಗೂ ಜೆ.ಸಿ.ಬಿಗೆ ಹಾಕಿಸುವ ಡೀಸೆಲ್, ಆಯಿಲ್ ಹಾಗೂ ಗ್ರೀಸ್ನಲ್ಲಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ತನಿಖೆ ನಡೆಸುವಂತೆ ಪುರಸಭಾ ಸದಸ್ಯರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ರೇಣುಕಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಪ್ರತಿ ತಿಂಗಳು ಮಾಡಬೇಕಾದ ಜಮಾಖಚರ್ಿನ ಸಭೆಯನ್ನು ಐದು ತಿಂಗಳ ನಂತರ ಮಾಡುತ್ತಿರುವುದು ಸರಿಯಲ್ಲ ಆದ್ದರಿಂದ ಆಯವ್ಯಯ ಮಂಡಣೆ ಮಾಡುವ ಮೊದಲು ಜಮಾಖರ್ಚನ್ನು ಮಂಡಿಸಿ  ನಂತರ ವಾಷರ್ಿಕ ಆಯವ್ಯಯ ಮಂಡಿಸುವಂತೆ ಸದಸ್ಯರು ಪುರಸಭಾ ಅಧ್ಯಕ್ಷರಿಗೆ ಹೇಳಿದರು.
ಪುರಸಭೆಯ ವಾಹನಗಳಿಗೆ ಹಾಕಿಸುವ ಡೀಸೆಲ್ನಲ್ಲಿ ಐದು ತಿಂಗಳಿನಲ್ಲೂ ಅವ್ಯವಹಾರ ನಡೆದಿದೆ ಎಂದು ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಭೆ ನಿರ್ಧರಿಸಿತು.
ಡೀಸೆಲ್ ಅವ್ಯವಹಾರದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ರವರಿಂದ ಲೋಪವಾಗಿದ್ದು ಅವರ ಸಂಬಳದಲ್ಲಿ ವಸೂಲು ಮಾಡುವಂತೆ ಸದಸ್ಯ ಮಹಮದ್ ಖಲಂದರ್, ಸಿ.ಪಿ.ಮಹೇಶ್ ಆಗ್ರಹಿಸಿದರು.
ಆರೋಗ್ಯ ನಿರೀಕ್ಷಕರು ಈ ಹುದ್ದೆಯಲ್ಲಿ ಇರಲು ನಾಲಾಯ್ಕ ಇವರನ್ನು ಬೇರೆ ಕಡೆ ವಗರ್ಾಯಿಸಿ ಇಲ್ಲದೆ ಹೋದರೆ ಪುರಸಭೆಯ ಮುಂದೆ ಧರಣಿ ನಡೆಸುವುದಾಗಿ ಸದಸ್ಯ ಮಹಮದ್ ಖಲಂದರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿ ತಿಂಗಳು 35 ರಿಂದ 40 ಸಾವಿರ ರೂಪಾಯಿ ಡೀಸೆಲ್ಗೆಂದು ಖಚರ್ು ಹಾಕುತ್ತೀರಿ, ಜೆ.ಸಿ.ಬಿ, ಆಟೋ ಟಿಪ್ಪರ್, ಸಕ್ಕಿಂಗ್ಯಂತ್ರ ಕಳದೆ ಆರು ತಿಂಗಳಿಂದ ಮೂಲೆ ಸೇರಿವೆ, ಇರುವ ಒಂದೇ ಟ್ರಾಕ್ಟರ್ ಹಾಗೂ ಆಟೋ ಟಿಪ್ಪರ್ಗೆ ಎಷ್ಟು  ಡೀಸೆಲ್ ಬೇಕು, ನಿತ್ಯ ಟ್ರಾಕ್ಟರ್ ಎಷ್ಟು ಕಿಲೋಮೀಟರ್ ಓಡಿದೆ ಇದರ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.
ಲಾರಿ ರಿಪೇರಿಗೆ 15ರಿಂದ 20 ಸಾವಿರ ರೂ ಖಚರ್ು ಬರುವುದಿಲ್ಲ, ಟ್ರಾಕ್ಟರ್ ರಿಪೇರಿಗೆ 15 ಸಾವಿರ ರೂ ಎಂದು ಜಮಾ ಖಚರ್ಿನಲ್ಲಿ ನಮೂದು ಮಾಡಿದ್ದೀರಿ ಇಷ್ಟು ಹಣ ಖಚರ್ು ಹೇಗೆ ಬರುತ್ತದೆ ಎಂದು ಮಹಮದ್ ಖಲಂದರ್ ಪ್ರಶ್ನಿಸಿದರು, ಒಂದು ತಿಂಗಳಿಗೆ ಖಾಸಗಿ ಟ್ರಾಕ್ಟರ್ನವರು 10 ರಿಂದ 12 ಸಾವಿರ ರೂಗೆ ಬಾಡಿಗೆಗೆ ಬರುತ್ತಾರೆ, ಆದರೆ ಪುರಸಭೆ ಟ್ರಾಕ್ಟರ್ ರಿಪೇರಿ ಹಾಗೂ ಡೀಸೆಲ್ ಖಚರ್ು ಸೇರಿ 50 ರಿಂದ 60 ಸಾವಿರ ಖಚರ್ು ಬರುತ್ತಿದೆ ಹೀಗಾದರೆ ಹೇಗೆ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಶೆಟ್ಟಿಕೆರೆ ರಸ್ತೆಯಲ್ಲಿರುವ ವೆಂಕಣ್ಣನಕಟ್ಟೆ ಪಾಕರ್್ ಮಾಡಲು ಹಣ ನೀಡಿದ್ದೀರಿ ಇಲ್ಲಿ ಒಂದು ಭಾಗದಲ್ಲಿ ಪುಟ್ಪಾತ್ ಮಾಡಿ ಅರ್ಧಕ್ಕೆ ನಿಂತಿದೆ, ವೆಂಕಣ್ಣನ ಕಟ್ಟೆಯ ತಗ್ಗು ಪ್ರದೇಶವಿರುವುದರಿಂದ ಅಲ್ಲೇ ಊರಿನ ಕಸ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ ಇದರಿಂದ ಸುತ್ತಮುತ್ತಲ ಮನೆಗಳಿಗೆ ಪ್ಲಾಸ್ಟಿಕ್ ವಾಸನೆ ಹರಡಿ ಅನಾರೋಗ್ಯದಿಂದ ಬಳಲುವಂತಾಗಿದೆ, ಈ ಜಾಗದಲ್ಲಿ ಕಸ ಹಾಕುವಂತೆ ಯಾರು ಹೇಳಿದ್ದೀರಿ ಎಂದು ಅಧಿಕಾರಿಗಳನ್ನು ಸದಸ್ಯ ಎಂ.ಕೆ.ರವಿಚಂದ್ರ ಹೆಲ್ತ್ ಇನ್ಸ್ಪೆಕ್ಟರ್ ಜಯರಾಂರವರನ್ನು ಪ್ರಶ್ನಿಸಿದರು.
ಹೆಲ್ತ್ ಇನ್ಸ್ಪೆಕ್ಟರ್ ಮಾತನಾಡಿ ಯಾರು ವೆಂಕಣ್ಣನ ಕಟ್ಟೆಗೆ ಕಸ ಹಾಕುವಂತೆ ಹೇಳಿಲ್ಲ ಇನ್ನು ಮುಂದೆ ಕಸ ಹಾಕದಂತೆ ನೋಡಿಕೊಳ್ಳುತ್ತೇವೆ ಎಂದರು.
ಪಟ್ಟಣದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ ಸರಿಯಾಗಿ ಕುಡಿಯುವ ನೀರಿ ಬಿಡುತ್ತಿಲ್ಲ, ಚರಂಡಿಗಳಿಗೆ ಬ್ಲಿಚಿಂಗ್ ಪೌಡರ್, ಫೆನಾಯಿಲ್ ಹಾಕುತ್ತಿಲ್ಲ ಇದರಿಂದ ಊರು ಸ್ವಚ್ಛವಾಗಿರಲು ಸಾಧ್ಯವೇ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಚರಂಡಿ ಹಾಗೂ ರಸ್ತೆ ಪಕ್ಕದಲ್ಲಿ ಕೊಳಚೆ ಜಾಗಗಳಲ್ಲಿ ಫೆನಾಯಿಲ್ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದೇವೆ ಎಂದು ಹೆಲ್ತ್ ಇನ್ಸ್ಪೆಕ್ಟರ್ರವರೇ ಪ್ರತಿ ವಾಡರ್್ಗಳಿಗೆ ಭೇಟಿ ನೀಡೋಣ ತೋರಿಸುತ್ತೀರಾ ಎಂದು ಸದಸ್ಯರು ಪ್ರಶ್ನಿಸಿದರು. ಹೆಲ್ತ್ ಇನ್ಸ್ಪೆಕ್ಟರ್ ಮೌನವಾಗಿದ್ದರು.
ಪಟ್ಟಣದ ಕೋಳಿ ಘನತ್ಯಾಜ್ಯ ವಿಲೇವಾರಿ ಮಾಡಲು ಘನತ್ಯಾಜ್ಯ ವಿಲೇವಾರಿ ಕೇಂದ್ರವಿದೆ, ಆದರೆ ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯವನ್ನು ಭಾವನಹಳ್ಳಿ ಹತ್ತಿರ ಹಾಕುತ್ತಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸದಸ್ಯ ಮಲ್ಲೇಶಯ್ಯ ಒತ್ತಾಯಿಸಿದರು.
ಪುರಸಭೆಯಲ್ಲಿ ಸಕ್ಕಿಂಗ್ಯಂತ್ರ, ಜೆ.ಸಿ.ಬಿ ಎರಡೂ  ಕೆಟ್ಟು ಹೋಗಿ ಆರು ತಿಂಗಳಾಗಿದೆ,  ಕೆಟ್ಟು ನಿಂತ ಸ್ಥಳದಲ್ಲಿಯೇ ನಿಂತಿದೆ ಇದುವರೆಗೆ ರಿಪೇರಿ ಮಾಡಿಸಲಾಗಿಲ್ಲ, ಬೇರೆ ಬೇರೆ ಬಾಬ್ತುಗಳಿಗೆ ಹಣ ಖಚರ್ು ಮಾಡುತ್ತೀರಿ ರಿಪೇರಿಗೆ ಏಕೆ ಹಣ ಖಚರ್ು ಮಾಡಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಸದಸ್ಯರುಗಳಾದ ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ರಾಜಶೇಖರ್, ಅಶೋಕ್, ಇಂದಿರಾಪ್ರಕಾಶ್, ಧರಣಿಲಕ್ಕಪ್ಪ, ರೇಣುಕಾಗುರುಮತರ್ಿ, ಪ್ರೇಮದೇವರಾಜು, ಗೀತಾರಮೇಶ್, ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



 ಕೇಂದ್ರ ಸಕರ್ಾರದ ಭೂಸ್ವಾಧೀನ ಕಾಯ್ದೆಗೆ ರೈತರ ವಿರೋಧ
ಚಿಕ್ಕನಾಯಕನಹಳ್ಳಿ, : ಕೇಂದ್ರ ಸರ್ಕರ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ನೀತಿಯು  ಸಾರ್ವಜನಿಕ ಮತ್ತು ದೇಶದ ರೈತರ ಹಿತರಕ್ಷಣೆಗೆ ಕಾಳಜಿ ಇಲ್ಲದ ಸಕರ್ಾರದ ಪ್ರಯೋಗವಾಗಿದೆ ಎಂದು ರಾಜ್ಯ ಹಸಿರು ಸೇನೆಯ ರಾಜ್ಯ ಕಾರ್ಯದಶರ್ಿ  ಸತೀಶ್ಕೆಂಕೆರೆ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇಂದ್ರ ಸಕರ್ಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಕೆಂಕೆರೆ,  ಬ್ರಿಟೀಷರ ಕಾಲದ 1894ರ ಭೂಸ್ವಾಧೀನ ಕಾಯ್ದೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೇಶಾದ್ಯಂತ ಹಲವು ದಶಕಗಳ ಕಾಲ ಎಷ್ಟೋ ಚಳುವಳಿಗಳು ನಡೆದ ಫಲವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾದರೆ ರೈತರ ಒಪ್ಪಿಗೆ, ಸಂತ್ರಸ್ಥರಾದ ರೈತರಿಗೆ ಪುನಶ್ಚೇತನ ಮತ್ತು ಪುನರ್ ವಸತಿ ನ್ಯಾಯಯುತ ಪರಿಹಾರ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕೆಂದು 2013ರಲ್ಲಿ ಜಾರಿಗೆ ತರಲಾಯಿತು,  ಈ  ಭೂಸ್ವಾಧೀನ ಕಾಯ್ದೆಗೆ ಕೇಂದ್ರದಲ್ಲಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸಕರ್ಾರವು ತಿದ್ದುಪಡಿಯನ್ನು  ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವುದು ದೇಶದ ರೈತರಿಗೆ ಬಗೆದ ದ್ರೋಹವಾಗಿದೆ, ಹೀಗಾಗಿ ಈ ಸುಗ್ರೀವಾಜ್ಞೆಯನ್ನು ಕೇವಲ ತಿದ್ದುಪಡಿಯೆಂದು ಕರೆಯಲಾಗುವುದು ಎಂದ ಅವರು, ಈ ತಿದ್ದುಪಡಿ  2013ರ ಮೂಲ ಆಶಯ ಮತ್ತು ಉದ್ದೇಶವನ್ನು ನಿರಾರ್ಥಕಗೊಳಿಸುತ್ತದೆ ಎಂದರು.
1894ರ ಕಾಯ್ದೆಯಲ್ಲಿ ಸಂತ್ರಸ್ಥ ಭೂಪಾಲಕರಿಗೆ ಆಕ್ಷೇಪಣೆ ಸಲ್ಲಿಸಲು, ತಮ್ಮ ಕಷ್ಠ ಹೇಳಿಕೊಳ್ಳುವ ಅವಕಾಶವಾದರು ಇತ್ತು,  ಆದರೆ ಈಗ ಸುಗ್ರಿವಾಜ್ಞೆಯಲ್ಲಿ ವಿಧಿ ವಿಧಾನದ ಅಗತ್ಯೆತಗಳನ್ನು ಬೈಪಾಸ್ ಮಾಡಿರುವುದರಿಂದ ಜಮೀನು ಮಾಲೀಕರಿಗೆ ಕನಿಷ್ಠ ರಕ್ಷಣೆ ಇಲ್ಲದಂತೆ ಆಗಿದೆ, ಒಟ್ಟಾರೆ ಇದು ರಿಯಲ್ ಏಸ್ಟೇಟ್ನವರು,  ಉದ್ದಿಮೆದಾರರು,  ಕಾಪರ್ೋರೇಟ್ಗಳ ಹಿತರಕ್ಷಣೆಗಾಗಿ ನಡೆಯುತ್ತಿರುವ ಪೈಪೋಟಿ ಆಗಿದೆ, ಈ ಪೈಪೋಟಿಯ ಹಿಂದೆ ಒಂದೆಡೆ ಪ್ರಭಾವಿಗಳು ಇದ್ದಾರೆ,  ಯಾವುದೇ ಪ್ರಭಾವ ಇಲ್ಲದ ರೈತ ಸಮುದಾಯದ ಪರವಾಗಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇರುತ್ತದೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರುಗಳಾದ ಶಿವಕುಮಾರ್, ಲೋಕಣ್ಣ ತಿಮ್ಮನಹಳ್ಳಿ, ವಿರೂಪಾಕ್ಷಯ್ಯ, ಮನು, ಉಮೇಶ್ಗೌಡ, ದಬ್ಬೆಘಟ್ಟ ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.


ಎಲ್.ಜಿ.ಹಾವನೂರುರವರ ಜನ್ಮದಿನಾಚಾರಣೆ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಮಾ.26: ಪ್ರತಿಯೊಬ್ಬರಿಗೂ ಮೀಸಲಾತಿ ದೊರಕಬೇಕೆಂಬ ಎಲ್.ಜಿ.ಹಾವನೂರುರವರ ಸಿದ್ದಾಂತಗಳು ಹಾಗೂ  ಹೋರಾಟಗಳ  ಬಗ್ಗೆ ನಾಡಿನ ಪ್ರತಿಯೊಬ್ಬರಿಗೂ ತಿಳಿಸುವುದು ಅವಶ್ಯಕ ಎಂದು ಕನರ್ಾಟಕ ವಾಲ್ಮಿಕಿ ಸೇನೆಯ ರಾಜ್ಯಾಧ್ಯಕ್ಷ ಪ್ರತಾಪ್ಮದಕರಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನರ್ಾಟಕ ವಾಲ್ಮೀಕಿ ಸೇನೆಯ ವತಿಯಿಂದ ಏರ್ಪಡಿಸಿದ್ದ ಎಲ್.ಜಿ.ಹಾವನೂರುರವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್.ಜಿ.ಹಾವನೂರುರವರು ದಕ್ಷಿಣ ಭಾರತದ ಜನತೆಗೆ ಅನುಕೂಲವಾಗಲು ಸಿದ್ದಾಂತಗಳನ್ನು ರಚಿಸಿದರು, ಪ್ರತಿಯೊಬ್ಬರಿಗೂ ಮೀಸಲಾತಿ ದೊರಕಬೇಕೆಂಬುದೇ ಅವರ ಆಶಯವಾಗಿತ್ತು ಎಂದರು.
 ಕನರ್ಾಟಕ ವಾಲ್ಮೀಕಿ ಸೇನೆಯ ಮಹಿಳಾ ಪತ್ತಿನ ಸಹಕಾರ ಸಂಘ ಅಸ್ಥಿತ್ವಕ್ಕೆ ಬರಬೇಕು, ಈ ಘಟಕ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಆರಂಭವಾಗಬೇಕು, ಮಹಿಳೆಯರ ಸಂಘಟನೆಯ ಶಕ್ತಿ ಏನೆಂಬುದು ಜನತೆಗೆ ತಿಳಿದಿದ್ದು ವಾಲ್ಮೀಕಿ ಸೇನೆಯ ಮಹಿಳಾ ಸಂಘಟನೆಗಳೇ ಒಗ್ಗಟ್ಟಿನಿಂದ ಸಂಘ ರಚಿಸಿ ವ್ಯವಹಾರ ನಡೆಸಬೇಕು,  ಕನರ್ಾಟಕ ವಾಲ್ಮೀಕಿ ಸೇನೆ ಸಂಘಟನೆಯಿಂದ ಹಳ್ಳಿಗಳ ಮೂಲಕ ರಾಜ್ಯವ್ಯಾಪಿ ಹರಡಬೇಕು ಎಂದರು.
ಈ ಸಂಧರ್ಭದಲ್ಲಿ ಕನರ್ಾಟಕ ವಾಲ್ಮೀಕಿ ಸೇನೆಯ ಮಲ್ಲೇಶಣ್ಣ, ನಾಗಣ್ಣ, ಶಿವಣ್ಣ, ನಾಗರಾಜ್, ಶಿವಮ್ಮಕೊಡಿಹಳ್ಳಿ, ಪುಷ್ಪಾವತಿ ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ: ಜಾತಿಗಣತಿ ತರಬೇತಿ ಸ್ಥಳಾಂತರ
ಚಿಕ್ಕನಾಯಕನಹಳ್ಳಿ: ಜಾತಿ ಗಣತಿಯ ಎರಡನೇ ಹಂತದ ತರಬೇತಿಯು ಇದೇ 28 ಮತ್ತು 29 ರಂದು ನಡೆಯಲಿದ್ದು, ತರಬೇತಿಯು ಪಟ್ಟಣದ ಶ್ರೀ ನಿವರ್ಾಣೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದರು.
ಈ ಮೊದಲು ತರಬೇತಿಯು ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಎಂದು ನಿಗಧಿಪಡಿಸಲಾಗಿತ್ತು, ಆದರೆ ಅಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಈ ಸ್ಥಳದ ಬದಲಾಗಿ, ಶ್ರೀ ನಿವರ್ಾಣೇಶ್ವರ ಪ್ರೌಢಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Wednesday, March 25, 2015


ದೇವರ ದಾಸಿಮಯ್ಯ ಜಯಂತಿ
ಚಿಕ್ಕನಾಯಕನಹಳ್ಳಿ : ದೇವರ ದಾಸಿಮಯ್ಯನವರು ಕಾವ್ಯವನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ, ಗದ್ಯಪದ್ಯ ಮಿಶ್ರಿತ ಸಾಹಿತ್ಯವನ್ನು ರಚಿಸಿದ ಅವರು, ಭಕ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡರು, ದಾಸಿಮಯ್ಯ ಹೆಚ್ಚಿನ ಅಧ್ಯಯನಕ್ಕಾಗಿ ಮದನೂರಿನಿಂದ ಶ್ರೀಶೈಲಕ್ಕೆ ಹೋಗುವ  ಮಾರ್ಗಮಧ್ಯದಲ್ಲಿ ಜನರಿಗೆ ಭಕ್ತಿಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದು ನಿವೃತ್ತ ಶಿಕ್ಷಕ ಬನಶಂಕರಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ದೇವರ ದಾಸಿಮಯ್ಯ ವಚನಕಾರರಲ್ಲಿ ಮೊದಲಿಗರು,  ವಸ್ತ್ರ ತಯಾರಿಕೆಯಲ್ಲಿ 7ನೇಯವರು ಎಂದರು,  ದೇವರ ದಾಸಿಮಯ್ಯ ಜಯಂತ್ಯೋತ್ಸವಕ್ಕೆ ಹಿಂದಿನ ಸಕರ್ಾರವೂ ಕಾರಣವಾಗಿದ್ದು ದಾಸಿಮಯ್ಯನವರ ಹೆಸರಿನಲ್ಲಿ ಅಧ್ಯಯನ ಪೀಠ ರಚಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಕರ್ಾರ ಬಿಡುಗಡೆ ಮಾಡಿದೆ, ಈಗಿರುವ ಸಕರ್ಾರ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲು ತೀಮರ್ಾನಿಸಿಸುವ ಹಂತದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಸಕರ್ಾರದ ಮೇಲೆ ಒತ್ತಡ ತಂದಿರುವುದು ಗಮನಾರ್ಹ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ದೇವರ ದಾಸಿಮಯ್ಯನವರು ಸಮಾಜ ಸುಧಾರಣೆಗೋಸ್ಕರ ಶ್ರಮಿಸಿದ ಮಹಾನ್ ಪುರುಷ ಎಂದು ಹೇಳಿದರಲ್ಲದೆ, ಸಕರ್ಾರ ಪ್ರಥಮವಾಗಿ ದೇವರ ದಾಸಿಮಯ್ಯ ಕಾರ್ಯಕ್ರಮವನ್ನು ಸಕರ್ಾರದ ಮಟ್ಟದಲ್ಲಿ ಆಚರಿಸುತ್ತಿರುವುದು  ಸಂತಸ ತಂದಿದ್ದು ದೇವರ ದಾಸಿಮಯ್ಯನವರ ಮಾರ್ಗದರ್ಶನ ಇಂದಿನ ಯುವಪೀಳಿಗೆಗೆ ಅವಶ್ಯವಾಗಿದ್ದು ಅವರ ಆದರ್ಶ ತತ್ವಗಳನ್ನು ರೂಡಿಸಿಕೊಂಡಾಗ ಮಾತ್ರ ಇಂತಹ ಜಯಂತ್ಯೋತ್ಸವಗಳಿಗೆ ಅರ್ಥ ಬರುತ್ತದೆ, ಅದೇ ರೀತಿ ಭೋವಿ ಜನಾಂಗದವರಿಗೂ ಸಿದ್ದರಾಮಜಯಂತಿ ಮಾಡಲು ಸಕರ್ಾರ ತೀಮರ್ಾನಿದೆ ಎಂದರು.
ಪುರಸಭಾಧ್ಯಕ್ಷೆ ರೇಣುಕಮ್ಮ ಮಾತನಾಡಿ, ವೃತ್ತಿಯ ಎಳೆಯಲ್ಲಿಯೇ ದೇವರನ್ನು ಕಂಡ ದಾಸಿಮಯ್ಯನವರ ತತ್ವ ಚಿಂತನೆಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.   
ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಮಾತನಾಡಿ, ದೇವರ ದಾಸಿಮಯ್ಯನವರು ಮೇಲು ಕೀಳು ಎಂದು ಭಾವನೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾಪುರುಷ, ಕಾಯಕವೇ ಕೈಲಾಸ ಎಂದು ತಿಳಿದು ವಸ್ತ್ರವಿನ್ಯಾಸ ಮಾಡಿ ಜೀವನ ನಡೆಸುತ್ತಿದ್ದ ದೇವರ ದಾಸಿಮಯ್ಯ ಭಕ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದರು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಕೆ.ಟಿ.ತಿಮ್ಮರಾಯಪ್ಪ, ಸಿ.ಎಂ.ಅನಂತಯ್ಯ, ಶಂಕರಶೆಟ್ಟಿ, ಸಿ.ಎಲ್.ನಾರಾಯಣಪ್ಪ, ಹೆಚ್.ಜಿ.ಶಂಕರಯ್ಯ, ರೇವಣ್ಣ, ರಂಗಶೆಟ್ಟಿರವರಿಗೆ ಸನ್ಮಾನಿಸಲಾಯಿತು.
ತಹಶೀಲ್ದಾ ಕಾಮಾಕ್ಷಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ   ಜಿ.ಪಂ.ಸದಸ್ಯೆ ಲೋಹಿತಬಾಯಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಸಿ.ಡಿ.ಚಂದ್ರಶೇಖರ್, ಇಂದಿರಾಪ್ರಕಾಶ್, ಅಶೋಕ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ತಿಮ್ಮರಾಜು, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ, ಹುಳಿಯಾರು ಅನಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ದಾಸಿಮಯ್ಯನವರ ಭಾವಚಿತ್ರ ಹಾಗೂ ನೇಯ್ಗೆಯ ಸಾಕ್ಷ್ಯಚಿತ್ರದೊಂದಿಗೆ ಮಹಿಳಾ ಭಜನಾ ತಂಡ, ಗಾರುಡಿಗ, ಕರಡಿಗೆ, ವಾದ್ಯಗೋಷ್ಠಿಯು ನೆಹರು ಸರ್ಕಲ್ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಂಚರಿಸಿತು.

ಕಿಡಿಗೇಡಿಗಳಿಂದ ಫ್ಲೆಕ್ಸ್ ಹರಿದಿರುವ ಘಟನೆ
ಚಿಕ್ಕನಾಯಕನಹಳ್ಳಿ,ಮಾ.25 : ರಾಜ್ಯಾದ್ಯಂತ ದೇವರ ದಾಸಿಮಯ್ಯನವರ ಜಯಂತ್ಯೋತ್ಸವವನ್ನು ಸಕರ್ಾರದ ವತಿಯಿಂದ ವಿಜೃಂಭಣೆಯಿಂದ ಆಚರಿಸಲು ತೀಮರ್ಾನಿಸಿದ ಹಿನ್ನಲೆಯಲ್ಲಿ ಪಟ್ಟಣದ ದೇವಾಂಗ ಸಮಾಜದವರು ಸಕರ್ಾರದ ತೀಮರ್ಾನಕ್ಕೆ ಖುಷಿ ಪಟ್ಟು ಪ್ಲೆಕ್ಸ್ ಹಾಕಿಸಿ ಸಂತಸ ವ್ಯಕ್ತಪಡಿಸಿದ್ದ ಬ್ಯಾನರ್ಗೆ ಕಿಡಿಗೇಡಿಗಳು ಸಮುದಾಯದ ಮುಖಂಡರ ಭಾವಚಿತ್ರವನ್ನು ಹರಿದಿರುವ ಘಟನೆ ನಡೆದಿದೆ.
ಪಟ್ಟಣದ ಸಿವಿಲ್ ಬಸ್ಟ್ಯಾಂಡ್ನ ಹೊಸಬಾಗಿಲುಮೂಲೆ ಬಳಿ ಈ ಘಟನೆ ನಡೆದಿದ್ದು ಈ ಭಾಗದಲ್ಲಿ ದೇವಾಂಗ ಸಮುದಾಯದವರು ಹಾಕಿದ ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದಿರುವ ಘಟನೆ ನಡೆದಿತ್ತು, ಬುಧವಾರದಂದು ದೇವರ ದಾಸಿಮಯ್ಯನವರ ಜಯಂತಿ ಹಿನ್ನಲೆಯಲ್ಲಿ ದೇವಾಂಗ ಸಮುದಾಯದ ಮುಖಂಡರು ದಾಸಿಮಯ್ಯನವರ ಜಯಂತಿಗೆ ಶುಭಾಷಯ ಕೋರಿ ಬ್ಯಾನರ್ ಹಾಕಿದ್ದರು ಆದರೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಬ್ಯಾನರ್ನ್ನು ಹರಿದ ಪರಿಣಾಮ ಸಮುದಾಯದ ಮುಖಂಡರು ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಳ್ಳಂಬೆಳಗ್ಗೆ ಪೋಲಿಸ್ ಠಾಣೆಗೆ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಮಾತನಾಡಿ, ಸಕರ್ಾರದ ವತಿಯಿಂದ ದಾಸಿಮಯ್ಯನವರ ಜಯಂತಿ ಆಚರಣೆ ಮಾಡುವಾಗ ಕಿಡಿಗೇಡಿಗಳು ಬ್ಯಾನರ್ನ್ನು ಹರಿದು ಹಾಕಿರುವುದು ಖಂಡನೀಯವಾಗಿದೆ, ಈ ಭಾಗದಲ್ಲಿ ಮೂರು ನಾಲ್ಕು ಬಾರಿ ಕಿಡಿಗೇಡಿಗಳು ಬ್ಯಾನರ್ನ್ನು ಹರಿದಿದ್ದು ಪೋಲಿಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ, ಕಿಡಿಗೇಡಿಗಳ ಬ್ಯಾನರ್ ಹರಿದಿರುವ ಕೃತ್ಯದಿಂದಾಗ ದಾಸಿಮಯ್ಯನವರ ಜಯಂತಿಗೆ ಅಪಮಾನವಾದಂತಾಗಿದೆ, ಈ ಬಗ್ಗೆ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು ಮಾತನಾಡಿ, ಈ ಭಾಗದಲ್ಲಿ ಹಲವಾರು ಬಾರಿ ಶುಭಾಷಯಕ್ಕೆ ಸಂಬಂಧಪಟ್ಟ ಬ್ಯಾನರ್ಗಳು ಹರಿದಿವೆ, ದಾಸಿಮಯ್ಯನವರ ಜಯಂತಿಯಂದು ಸಮಾಜದ ಮುಖಂಡರು ಹಾಕಿರುವ ಶುಭಾಷಯ ಬ್ಯಾನರ್ನ್ನು ಹರಿದಿರುವ ದುಷ್ಕಮರ್ಿಗಳ ಪತ್ತೆಯನ್ನು ಪೋಲಿಸ್ ಇಲಾಖೆ ಮಾಡಬೇಕಿದೆ ಎಂದ ಅವರು ಬ್ಯಾನರ್ ಹಾಕಿರುವ ಪಕ್ಕದಲ್ಲೇ ಮನೆಯೊಂದರಲ್ಲಿ ಸಿಸಿಟಿವಿ ಇದ್ದು ಇದರ ಮೂಲಕ ಬ್ಯಾನರ್ ಹರಿದ ದುಷ್ಕಮರ್ಿಗಳನ್ನು ಪತ್ತೆಹಚ್ಚಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಮುಖಂಡರುಗಳಾದ ಸಿ.ಎ.ಕೋದಂಡರಾಮಯ್ಯ, ಸಿ.ವಿ.ಪ್ರಕಾಶ್, ಸಿ.ಎಸ್.ಗಿರೀಶ್, ನಟರಾಜು ಹಾಗೂ ದೇವಾಂಗ ಸಮುದಾಯದವರು ಉಪಸ್ಥಿತರಿದ್ದರು.
ಅಬಕಾರಿ ಕಾಯ್ದೆ ಬರುವವರೆಗೆ ನೀರಾ ಇಳಿಸಬೇಡಿ : ಲಿಂಗರಾಜು 
ಚಿಕ್ಕನಾಯಕನಹಳ್ಳಿ,ಮಾ.25 : ಸಕರ್ಾರ ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ತನಕ ರೈತರು ನೀರಾವನ್ನು ಇಳಿಸದೆ ಏಪ್ರಿಲ್ ತಿಂಗಳವರೆವಿಗೂ ಕಾಯುವಂತೆ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು ಮನವಿ ಮಾಡಿದ್ದಾರೆ.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿ ಅಬಕಾರಿ ಕಾಯ್ದೆಯನ್ನು ಸಡಿಲಗೊಳಿಸಿದ್ದಾರೆಂದು ಹುಳಿಯಾರಿನಲ್ಲಿ ರೈತರೊಬ್ಬರು  ತೆಂಗಿನ ಮರದಿಂದ ನೀರಾ ಇಳಿಸಿ, ಮಾರುತ್ತಿರುವ ಸಂದರ್ಭದಲ್ಲಿ ಪೋಲಿಸ್ನವರು ಆ ರೈತನನ್ನು ಬಂಧಿಸಿದ್ದಾರೆ, ಇದರ ವಿರುದ್ದ ತಾಲ್ಲೂಕಿನ ರೈತರು ಒಗ್ಗಟ್ಟಾಗಿ ಬಂಧನಕ್ಕೊಳಗಾದ ರೈತನ ಪರವಾಗಿ ನಿಂತಿದ್ದರು ಆದ್ದರಿಂದ ರೈತರು ಅಬಕಾರಿ ಕಾಯ್ದೆಯ ನೀರಾ ಪಾಲಿಸಿ ಬಂದ ನಂತರ ನೀರಾ ಇಳಿಸುವಂತೆ ಸಲಹೆ ನೀಡಿದ ಅವರು, ರಾಜ್ಯದಲ್ಲಿ ತೆಂಗು ಬೆಳೆಗಾರರ ಸಂಘದ 5 ಕಂಪನಿಗಳು ಇದೆ, ತಾಲ್ಲೂಕಿನಲ್ಲಿ ತೆಂಗು ಬೆಳೆಗಾರರ ಕಂಪನಿ ರಚಿಸಲು ಸಿದ್ದತೆ ನಡೆಸುತ್ತಿದ್ದು 6ನೇ ತೆಂಗು ಬೆಳೆಗಾರರ ಸಂಘದ ಕಂಪನಿಯು ಚಿಕ್ಕನಾಯಕನಹಳ್ಳಿಯಲ್ಲಿ ಆಗಲಿದೆ ಇದರಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ವಕೀಲ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿಯೇ 6ನೇ ತೆಂಗು ಬೆಳೆಗಾರರ ಸಂಘದ ಆರಂಭಕ್ಕಾಗಿ ಸಿದ್ದತೆ ನಡೆಯುತ್ತಿದೆ ಎಂದರಲ್ಲದೆ ರೈತರು ನೀರಾ ಇಳಿಸಲು ಸಡಿಲತೆ ನೀಡಿರುವುದಕ್ಕೆ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು ಅದೇ ರೀತಿ ನೀರಾ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಗರ್ಹುಕುಂ ಸಾಗುವಳಿದಾರರಿಂದ ಕನರ್ಾಟಕ ಉಚ್ಛ ನ್ಯಾಯಾಲಯಕ್ಕೆ ಅಜರ್ಿ 
ಚಿಕ್ಕನಾಯಕನಹಳ್ಳಿ,ಮಾ.23 : ಬಗರ್ಹುಕುಂ ಸಾಗುವಳಿಯಲ್ಲಿ ಭೂಮಿಯನ್ನು ಉಳುಮೆ ಮಾಡಿದವರಿಗೆ ಸಕರ್ಾರ ಹಕ್ಕುಪತ್ರ ವಿತರಿಸುತ್ತೇವೆಂದು ಸುಳ್ಳು ಆಶ್ವಾಸನೆಗಳನ್ನು ನೀಡಿ ಹಕ್ಕುಪತ್ರ ವಿತರಿಸದೆ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದರಿಂದ 60 ವರ್ಷಗಳಿಂದ ಸಕರ್ಾರಿ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರು ಬೀದಿಗೆ ಬೀಳಲಿದ್ದು ರೈತರ ಉಳಿವಿಗಾಗಿ ಅವರ ರಕ್ಷಣೆ ಮಾಡುವಂತೆ ಒತ್ತಾಯಿಸಿ ಕನರ್ಾಟಕ ಉಚ್ಛ ನ್ಯಾಯಾಲಕ್ಕೆ ಅಜರ್ಿ ಸಲ್ಲಿಸುತ್ತಿದ್ದೇವೆಂದು ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಹೇಳಿದರು.
ಭೂಸ್ವಾಧಿನ ಕಾಯ್ದೆಗೆ ಬಹುರಾಷ್ಟ್ರೀಯ ಕಂಪನಿಗಳ ಪರ ತಿದ್ದುಪಡಿಯನ್ನು ವಿರೋಧಿಸಿ, ನೈಸ್ ಹಾಗೂ ಇತರೇ ಕಂಪನಿಗಳ ಭೂ ಅಕ್ರಮಕ್ಕೆ ಶಿಕ್ಷೆಗೆ ಒತ್ತಾಯಿಸಿ, ನಿವೇಶನ ಸಹಿತ ಮನೆಗಾಗಿ, ಶುದ್ದ ಕುಡಿಯುವ ನೀರಿಗಾಗಿ, ಬಗರಹುಕ್ಕುಂ ಗೋಮಳ ಹಾಗೂ ಅರಣ್ಯ ಭೂಮಿ, ಗೋಮಾಳ, ಅರಣ್ಯ ಭೂಮಿ, ಸೇಂದಿವನ, ಹುಲ್ಲುಬನಿ ಕಾವಲ್ ಮುಂತಾದ ಭೂಮಿಯನ್ನೇ ನಂಬಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಾ ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪರವಾದ ಭೂ ಮಸೂದೆ ಕಾಯ್ದೆಯನ್ನು ಕನರ್ಾಟಕ ಪ್ರಾಂತ ರೈತ ಸಂಘ ವಿರೋಧಿಸುತ್ತದೆ ಎಂದಿದ್ದಾರೆ.
ಭೂಮಿಯಲ್ಲಿ ವ್ಯವಸಾಯ ಮಾಡುವುದರ ಮೂಲಕ ಜೀವನ ನಡೆಸುತ್ತಿರುತ್ತೇವೆ, ಜಮೀನು ಮಂಜುರಾತಿಗೆ ಅರ್ಹರಾಗಿರುತ್ತೇವೆ, ಆದುದರಿಂದ ನ್ಯಾಯಾಲಯದ ಪ್ರಕರಣದ ನೆಪದಲ್ಲಿ ನಾವು ಸ್ವಾಧೀನದಲ್ಲಿರುವ ಜಮೀನಿನಿಂದ ಹೊರದೂಡಿದರೆ ನಮ್ಮ ಬದುಕು ಬೀದಿಪಾಲಾಗುತ್ತದೆ, ಕನರ್ಾಟಕ ಕಂದಾಯದ ನಿಯಮದ ಪ್ರಕಾರ ಜಮೀನು ಮಂಜೂರು ಮಾಡಲು ನಾವು ಅರ್ಹರಿದ್ದು ಸಕರ್ಾರವು ತನ್ನ ಜಮೀನು ಮಂಜೂರು ಮಾಡವ ಕೆಲಸವನ್ನು ನಿರ್ವಹಿಸದೆ, ನಮ್ಮಂತಹ ಬಡ ರೈತರು ವ್ಯವಸಾಯ ಮಾಡಿಕೊಂಡು ಬದುಕುವವರನ್ನು ಹೊರದೂಡುವುದು ಅನ್ಯಾಯವಾಗುತ್ತದೆ, ಇದು ಭಾರತ ಸಂವಿಧಾನದಲ್ಲಿ ನೀಡಿರುವ ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ, ಅಧಿಕಾರಿಗಳು ಈ ಮೇಲ್ಕಂಡ ನ್ಯಾಯಾಲಯದ ಅಜರ್ಿ ಸಂಖ್ಯೆ ಮತ್ತು ಇತರೆ ಪ್ರಕರಣಗಳ ನೆಪವೊಡ್ಡಿ ರೈತರನ್ನು ಹೊರದೂಡುವ ಪ್ರಯತ್ನದಲ್ಲಿರುವುದರಿಂದ ರೈತರ ಸುಬಧರ್ಿನಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ಸಣ್ಣ ರೈತರು ವ್ಯಾಪಾರಕ್ಕಾಗಿ ಜಮೀನುಗಳನ್ನು ಅತಿಕ್ರಮಿಸಿಕೊಂಡಿರುವುದಿಲ್ಲ ಆದ್ದರಿಂದ ರೈತರ ಜಮೀನುಗಳನ್ನು ತೆರವು ಮಾಡದಂತೆ ಹಾಗೂ ಹಕ್ಕುಪತ್ರ ನೀಡಲು ಸಕರ್ಾರ ಆದೇಶಿಸಬೇಕು ಎಂದು ಕನರ್ಾಟಕ ಉಚ್ಛನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರುಗಳಾದ ಪರಮೇಶ್, ನಟರಾಜ್ಹೊಸಹಳ್ಳಿ, ಕಂಟಯ್ಯ, ಓಬಳಗಿರಿಯಪ್ಪ, ಶ್ರೀನಿವಾಸ್, ರಾಮದಾಸಪ್ಪ, ಲೋಕೇಶ್, ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Tuesday, March 24, 2015


        ಶಾಸಕರಿಂದ ಸಾರ್ವಜನಿಕ ಕುಂದುಕೊರತೆಗಳ ಸಭೆ
                          
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ ಕುಂದುಕೊರತೆಗಳ ಸಭೆ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.
ತಾ.ಪಂ.ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿ ಎಂ.ಎಚ್.ಕಾವಲ್ ಹಾಗೂ ಗೊಲ್ಲರ ಹಟ್ಟಿ ಗ್ರಾಮಗಳಿಗೆ ಸವರ್ೆ ನಂ. 28ರ ಸಕರ್ಾರ ಖರಾಬ್ನಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ ಕೊರೆಸಿದ್ದು ಈ ಸ್ಥಳ ನಮಗೆ ಸೇರಿದೆ ಎಂದು ಅದೇ ಗ್ರಾಮದ ರವಿ ಎನ್ನುವವರು ಗ್ರಾಮ ಪಂಚಾಯ್ತಿಯಿಂದ ಕೊಳವೆ ಬಾವಿಗೆ ಮೋಟಾರು ಅಳವಡಿಸಲು ಹೋದಾಗ ಅಡ್ಡಿಪಡಿಸುತ್ತಿದ್ದಾರೆ ಇದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ, ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಹೆಚ್.ಎಂ.ಕಾವಲು ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರ ಅಪರ್ಿಸಿದರು. ಸ್ಥಳಕ್ಕೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಶಾಸಕರು ಇ.ಓ ರವರಿಗೆ ಸೂಚಿಸಿದರು.
ಬಡಕೆಗುಡ್ಲು ಗ್ರಾಮಕ್ಕೆ ಸ್ವಚ್ಛ ಕುಡಿಯುವ ನೀರಿನ ಘಟಕವನ್ನು ಆರ್.ಓ ಸ್ಥಾಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ದೊಡ್ಡಬಿದರೆ ಗ್ರಾಮಕ್ಕೆ ರಸ್ತೆ, ಡಾಂಬರೀಕರಣಗೊಳಿಸುವಂತೆ ಕೊಳವೆ ಬಾವಿ ಕೊರೆಸಿಕೊಡುವಂತೆ ದೊಡ್ಡಬಿದರೆ ಗ್ರಾಮಸ್ಥರು ಮನವಿ ಮಾಡಿದರು.
ಕುಂದುಕೊರತೆಯ ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ತಹಶೀಲ್ದಾರ್ ಕಾಮಾಕ್ಷಮ್ಮ ಮತ್ತಿತರರು ಉಪಸ್ಥಿತರಿದ್ದರು.

 ಅಕ್ರಮ ಮರಳು ಸಾಗಾಣಿಕೆ ಮಾಡದಂತೆ ಚೆಕ್ಪೋಸ್ಟ್ಗಳು
ಚಿಕ್ಕನಾಯಕನಹಳ್ಳಿ,ಮಾ.24: ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡದಂತೆ ತಡೆಯಲು ತಿಪಟೂರು ತಾಲ್ಲೂಕಿನ ಕೊಡಿಗೆಹಳ್ಳಿ ಸೇರಿದಂತೆ ಒಂಬತ್ತು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ 50 ಟಿಪ್ಪರ್ಲಾರಿ ಹಾಗೂ 29 ಟ್ರಾಕ್ಟರ್ ಮರಳನ್ನು ವಶಪಡಿಸಿಕೊಂಡು ಹನ್ನೊಂದು ಲಕ್ಷ ಅರವತ್ತು ಸಾವಿರ ರೂ ದಂಡ ವಿಧಿಸಲಾಗಿದೆ ಎಂದ ಅವರು, ತಾಲ್ಲೂಕಿನ ಬಾಚಿಹಳ್ಳಿ, ಅಣೆಕಟ್ಟೆ, ಹರೇನಹಳ್ಳಿಗೇಟ್, ತಿಮ್ಮನಹಳ್ಳಿ, ಹುಳಿಯಾರ್ ಗೇಟ್, ಕಣಿವೆಕ್ರಾಸ್, ಬೆಳ್ಳಾರ ಕ್ರಾಸ್, ನಂದಿಹಳ್ಳಿ ರಸ್ತೆ, ಮತಿಘಟ್ಟ ಕೈಮರದ ಬಳಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಪ್ರತಿಯೊಂದು ಚೆಕ್ಪೋಸ್ಟ್ ಬಳಿ ವಿಲೇಜ್ ಅಕೌಂಟೆಂಟ್, ಒಬ್ಬ ಪೋಲಿಸ್, ಒಬ್ಬರು ಹೋಮ್ಗಾಡರ್್ ನಿಯೋಜಿಸಲು ತೀಮರ್ಾನಿಸಲಾಗಿದೆ, ಈಗಾಗಲೇ ಮರಳು ತೆಗೆಯುವುದರಿಂದ ಅಂತರ್ಜಲ ಕುಸಿದಿದ್ದು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಶಪಡಿಸಿಕೊಂಡಿರುವ ಮರಳನ್ನು ಹರಾಜು ಮಾಡಲು ಲೋಕೋಪಯೋಗಿ ಅಧಿಕಾರಿಗಳಿಗೆ ವಹಿಸಲಾಗಿದ್ದು ಸಕರ್ಾರ ನಿಗಧಿಪಡಿಸಿದ ದರದಲ್ಲಿ ಈ ಮರಳನ್ನು ಮನೆ ನಿಮರ್ಿಸಿ ಕೊಳ್ಳುವವರಿಗೆ ನೀಡಲಾಗುತ್ತಿದೆ ಎಂದರು,  ಇದುವರೆಗೆ ತಾಲ್ಲೂಕಿನ ವಿವಿಧ ಪೋಲಸ್ ಠಾಣಾ ವ್ಯಾಪ್ತಿಯಲ್ಲಿ 100 ಮೊಕದ್ದಮೆಗಳು ಹಾಕಿದ್ದು 2013ರಿಂದ 2015ರವರೆಗೆ 52 ಜನರಿಗೆ ಮರಳು ಪರವಾನಗಿ ನೀಡಲಾಗಿದೆ, 313.40 ಘನ ಮೀಟರ್ ಮರಳನ್ನು ಹರಾಜು ಮಾಡಲಾಗಿದೆ ಎಂದರು.
ರಾಜ್ಯ ಸಕರ್ಾರ ಮರಳು ನೀತಿಯನ್ನು ಜಾರಿಗೆ ತರಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಉಪತಹಶೀಲ್ದಾರ್ ಶಿವಶಂಕರ್ ಉಪಸ್ಥಿತರಿದ್ದರು.

ಹೈನುಗಾರಿಕೆಯ ಸಹಾಯಧನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕರೆ : ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಮಾ.24: ಕುಟುಂಬವು ಆಥರ್ಿಕವಾಗಿ ಸದೃಡಗೊಳ್ಳಲು ಸಕರ್ಾರ ಹೈನುಗಾರಿಕೆಯ ಮೂಲಕ ನೀಡುತ್ತಿರುವ ಸಹಾಯ ಧನವನ್ನು  ಫಲಾನುಭವಿಗಳು  ಸಮರ್ಪಕವಾಗಿ ಹೈನುಗಾರಿಕೆಗೆ ತೊಡಗಿಸಿಕೊಂಡು ಕುಟುಂಬದ ಆಥರ್ಿಕ ಬಲವರ್ದನೆಗೆ ಹೊತ್ತು ನೀಡಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. 
   ಇಂದು ಪಟ್ಟಣದ ಪಶು ಆಸ್ವತ್ರೆಯ ಸಭಾಂಗಣದಲ್ಲಿ 14-15 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆಥರ್ಿಕ ಸಬಲೀಕರಣಕ್ಕಾಗಿ ಹೈನುಗಾರಿಕೆಗೆ ಪ್ರೋತ್ಸಾಹಿಸಲು ಕುಟುಂಬಕ್ಕೆ ನೀಡುವ 75 ಸಾವಿರ ಸಹಾಯ ಧನ ಚೆಕ್ ವಿತರಿಸಿ ಮಾತನಾಡುವಾಗ ಕುಟುಂಬದಲ್ಲಿ ಹಸುಹೊಂದಿದ್ದರೆ ಆ ಹಸುವಿನಿಂದ ಕುಟುಂಬವೇ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆ ಉಪಯೋಗ ಪಡೆಯಲು 108 ಕ್ಕೂ ಅಧಿಕ ಅಜರ್ಿಗಳು ಬಂದಿದ್ದವು ಆದರೆ ಈ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 9 ಪರಿಶಿಷ್ಟ ಪಂಗಡಕ್ಕೆ 4  ಒಟ್ಟು 13 ಫಲಾನುಭವಿಗಳನ್ನು ಆಯ್ಕೆ ಮಾಡಲು ಸಕರ್ಾರ ಅನುಮೋದನೆ ನೀಡಿತ್ತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಯ್ಕೆ ಮಾಡಲಾಗುವುದು. ಈ ಯೋಜನೆಯ ಉದ್ದೇಶ ಇಡೇರಬೇಕಾದರೆ ಫಲಾನುಭವಿಗಳು ಹೈನುಗಾರಿಕೆಗೆ ಉತ್ತೇಜನ ನೀಡಿ ಸಾರ್ಥಕತೆ ಪಡೆದುಕೊಳ್ಳಬೇಕು. ಈಗಾಗಲೇ ಪಶು ಆಸ್ವತ್ರೆಗಳನ್ನು ಹೊಸದಾಗಿ ನಿಮರ್ಾಣ ಮಾಡಲು ಕೈಗೆತ್ತಿಕೊಂಡ  100 ಆಸ್ವತ್ರೆಗಳ ಪೈಕಿ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೋಡೆಕೆರೆ ಹೊಯ್ಸಲಕಟ್ಟೆ, ಬೆಂಚೆಗೇಟ್, ಗಳಿಗೆ 3 ಆಸ್ಟತ್ರೆ ನೀಡಿದ್ದು ತೀರ್ಥಪುರ ಪಶು ಆಸ್ವತ್ರೆಯನ್ನು ಮೇಲ್ದಜರ್ೆಗೇರಿಸಿರುವ  ಸಚಿವರಿಗೂ ಮತ್ತು ಸಕರ್ಾರಕ್ಕೂ ಕೃತಘ್ಞತೆ ಸಲ್ಲಿಸುತ್ತೇನೆ ಎಂದರು. 
     ತಾಲ್ಲೂಕು ಪಶು ಇಲಾಖಾ ಸಹಾಯಕ ನಿದರ್ೇಶಕ ಎಂ.ಪಿ.ಶಶಿಕುಮಾರ್ ಮಾತನಾಡಿ ಪ್ರತಿ ಫಲಾನುಭವಿ ರ್ಯತರಿಗೆ ಹಸು ಸಾಕಾಣಿಕೆಗೆಂದು 75 ಸಾವಿರ ಸಹಾಯ ಧನ ನೀಡಲಾಗುವುದು. ಫಲಾನುಭವಿ ವಂತಿಕೆ 25 ಸಾವಿರ ಸೇರಿ 1 ಲಕ್ಷ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಮೊತ್ತವನ್ನು 2 ಹಂತದಲ್ಲಿ ಬ್ಯಾಂಕ್ ಮೂಲಕ ಹಣವನ್ನು  ವಿತರಿಸಲಾಗುವುದು. ಫಲಾನುಭವಿ ಹೈನುಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಬಂದ ಫಲಾನುಭವಿಗೆ ಉಳಿದ ಕಂತನ್ನು ಅರ್ಧವಾಷರ್ಿಕದಲ್ಲಿ ವಿತರಿಸಲಾಗುವುದು. ಪ್ರತಿ ಹಸುವಿಗೂ ಜೀವ ವಿಮೆ  ನಿವರ್ಹಣೆ ಮತ್ತು ಆಹಾರ ಇವುಗಳು ಕೂಡ ಈ ಯೊಜನೆಯ್ಲಲಿಯೇ ಸೇರಿದ್ದು ಪ್ರತಿ ಲೀಟರ್ ಗೆ ನಿಡುವ 4 ರೂ ಪ್ರೊತ್ಸಾಹ ಧನ ಬಳೆಸಿಕೊಂಡು ಉತ್ತಮವಾಗಿ ಹ್ಯನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದರು.  
  ಪಶು ಇಲಾಖೆಯ ವಿಸ್ತರಣಾಧಿಖಾರಿ ಡಾ||ಕಾಂತರಾಜು ಮಾತನಾಡಿ ಸಕರ್ಾರ ಸದುದ್ದೇಶದಿಂದ ರೈತರು ಆಥರ್ಿಕವಾಗಿ ಸದೃಡರಾಗಲೆಂದೇ ನೀಡುವ ಸಹಾಯದಿಂದ  ಪಡೆದ ಹಸುಗಳ ಮುಂದಿನ ದಿನಗಳಲ್ಲಿ ಅದರ ಉತ್ವನ್ನವಾಗುವಂತೆ ಇರಬೇಕು ಎಂದರಲ್ಲದೆ,  ನೀಡುವ ಸಹಾಯಗಳು ಕೆಲವೇ ದಿನಗಳಲ್ಲಿ ಅದರ ಉಪಯೋಗವಿಲ್ಲದಂತೆ ಆಗುತ್ತಿರುವುದು ಆತಂಕಕಾರಿ ಸಂಗತಿ . ಇಂತಹ ಸದುಪಯೋಗ ಪಡಿಸಿಕೊಂಡು ಸ್ವತ್ತಿನ ಉತ್ವತ್ತಿಯಿಂದ ನಿಮ್ಮ ಆಥರ್ೀಕ ಅಭಿವೃದ್ಧಿ ಹೊಂದಲು ಫಲಾನಿಭವಿಗಳು ಕಾಯರ್ೋನ್ಮುಕರಾಗುವಂತೆ  ಕರೆನೀಡಿದರು.
        ಈ ಸಂದರ್ಭದಲ್ಲಿ  ಮಂಜುನಾಥ್, ರಾಮಚಂದ್ರಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಮತ್ತಿತರರು ಉಪಸ್ಥಿತರಿದ್ದು ಫಲಾನುಭವಿಗಳಿಗೆ 75 ಸಾವಿರ ಸಹಾಯ ಧನದ ಚೆಕ್ನ್ನು ವಿತರಿಸಿದರು. 


Monday, March 23, 2015

ಕೇಂದ್ರ ಸಕರ್ಾರದ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಆಂದೋಲನ : ಸೀಮೆಎಣ್ಣೆ ಕೃಷ್ಣಯ್ಯ
ಚಿತ್ರ ಶೀಷರ್ಿಕೆ :
                            

ಚಿಕ್ಕನಾಯಕನಹಳ್ಳಿ ಪಟ್ಟಣದ ಸೀಮೆಎಣ್ಣೆ ಕೃಷ್ಣಯ್ಯನವರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದಶರ್ಿಯಾಗಿ ನೇಮಕವಾಗಿರುವುದಕ್ಕೆ ತಾಲ್ಲೂಕು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಮುಖಂಡರಾದ ಹೆಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೆಗೌಡ, ಉದ್ರಿಲೋಕೇಶ್, ಚಂದ್ರಶೇಖರ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,ಮಾ. : ಕೇಂದ್ರ ಸಕರ್ಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ರೈತರಿಗೆ ಮಾರಕವಾಗಲಿದೆ ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಆಂದೋಲನವನ್ನು ಕೈಗೆತ್ತಿಕೊಳ್ಳುವುದಾಗಿ  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರಲ್ಲದೆ,  ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಏಪ್ರಿಲ್ ತಿಂಗಳ ಮೊದಲ ವಾರದಲಿ ಯೋಜನೆ ರೂಪಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೊಂದಾವಣಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಬದ್ದನಾಗಿ ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವುದರಿಂದ ನನ್ನನ್ನು ಜಿಲ್ಲಾ ಪ್ರಧಾನ ಕಾರ್ಯದಶರ್ಿಯನ್ನಾಗಿ ಆಯ್ಕೆ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನಲ್ಲಿ ಪಕ್ಷದ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದ್ದು ಮುಂದಿನ ತಿಂಗಳು ತಾಲ್ಲೂಕಿನ ಕಾಂಗ್ರೆಸ್ ಕಾರ್ಯರ್ತರ ಸಮಾವೇಶ ನಡೆಸಲಾಗುವುದು, ನನ್ನನ್ನು ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯದಶರ್ಿಯಾಗಿ ಮಾಡಿರುವ ಜಿಲ್ಲಾ ಅಧ್ಯಕ್ಷರು  ಹಾಗೂ ರಾಜ್ಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಯ್ಯನವರು ಹಾಗೂ ರಾಜ್ಯಾಧ್ಯಕ್ಷ ಆರ್.ಪರಮೇಶ್ವರ್ ನೇತೃತ್ವದಲ್ಲಿ ಸದೃಢವಾಗುತ್ತಿದ್ದು ಜಿಲ್ಲೆಯಲ್ಲಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಪಿಅಹಮದ್ರವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹೆಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೆಗೌಡ, ಉದ್ರಿಲೋಕೇಶ್, ಚಂದ್ರಶೇಖರ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.



ದೇವಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನ
ಚಿತ್ರ ಶೀಷರ್ಿಕೆ :
                                     

ಚಿಕ್ಕನಾಯಕನಹಳ್ಳಿ ಪಟ್ಟಣದ ಕೆಂಪಮ್ಮದೇವಿ ಬಯಲು ನಾಟಕ ಕಲಾಸಂಘದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ನಡೆದ ದೇವಿ ಮಹಾತ್ಮೆ ನಾಟಕದ ಒಂದು ದೃಶ್ಯ.


: ಚಿಕ್ಕನಾಯಕನಹಳ್ಳಿ : ್ಟಣದ ಶ್ರೀ ಕೆಂಪಮ್ಮದೇವಿ ಬಯಲು ನಾಟಕ ಕಲಾಸಂಘದ ವತಿಯಿಂದ 71ನೇ ವರ್ಷದ ಶ್ರೀದೇವಿ ಮಹಾತ್ಮೆ ಅಥವಾ ರಕ್ತಬಿಜಾಸುರವ ವಧೆ ಎಂಬ ಪೌರಾಣಿಕ ನಾಟಕವನ್ನು ಯುಗಾದಿ ಹಬ್ಬದ ಅಂಗವಾಗಿ ಪ್ರದಶರ್ಿಸಲಾಯಿತು.
ನಾಟಕವನ್ನು ಪಟ್ಟಣದ ಕಾಳಮ್ಮನಗುಡಿ ಬೀದಿಯಲ್ಲಿರುವ ಶ್ರೀ ಸಿದ್ದೇಶ್ವರಸ್ವಾಮಿ ಮಠದ ಮುಂಭಾಗದ  ಶ್ರೀ ಕೆಂಪಮ್ಮದೇವಿ ಬಯಲು ರಂಗಮಂದಿರದಲ್ಲಿ ತುಮಕೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶನಾಲಯದ ಸಹಯೋಗದೊಂದಿಗೆ ಯುಗಾದಿ ಹಬ್ಬದ ರಾತ್ರಿ ಪ್ರದಶರ್ಿಸಲಾಯಿತು.
ನಾಟಕವನ್ನು ನೋಡಲು ಪಟ್ಟಣದ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿ ರಾತ್ರಿಯಿಡೀ ನಡೆದ ನಾಟಕವನ್ನು ವೀಕ್ಷಿಸಿದರು. ನಾಟಕವು ರಕ್ತಬಿಜಾಸುರನು ತನ್ನ ಅಹಂಕಾರದಿಂದ ಲೋಕವನ್ನು ಅಲ್ಲೋಲಕಲ್ಲೋಲ ಮಾಡಲು ಯತ್ನಿಸಿದಾಗಿ ತ್ರಿಮೂತರ್ಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪಾರ್ವತಿ ದೇವಿಗೆ ಶಕ್ತಿಯನ್ನು ನೀಡಿ ರಕ್ತಬಿಜಾಸುರನನ್ನು ಸಂಹರಿಸುವುದೇ ನಾಟಕದ ಸಾರಂಶವಾಗಿದೆ.





ಅಕ್ರಮ ಮರಳು ಮಾಫಿಯಾ: ಹಂದನಕೆರೆ ಹೋಬಳಿಯಲ್ಲಿ ಬಲು ಜೋರು, ಕಡಿವಾಣ ಹಾಕುವವರು ಯಾರು...!?
-ಸಿ.ಗುರುಮೂತರ್ಿ ಕೊಟಿಗೆಮನೆ.

                                                      ಚಿತ್ರ ಶೀಷರ್ಿಕೆ: 
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾದವರು ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಕಂದಾಯ ಅಧಿಕಾರಿಗಳು ಸಕರ್ಾರದ ವಶಕ್ಕೆ ಪಡೆದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶೇಖರಿಸಿರುವ ಚಿತ್ರ.

ಚಿಕ್ಕನಾಯಕನಹಳ್ಳಿ, : ತಾಲೂಕಿನ ಹಂದನಕೆರೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಲೂಟಿ ಪ್ರಕರಣ ಈಗ ಇಡೀ ಜಿಲ್ಲಾಡಳಿತ ಜಾಗೃತಗೊಳ್ಳುವಂತೆ ಮಾಡಿದೆಯಲ್ಲದೆ, ಸಂಬಂಧಿಸಿದ ಅಧಿಕಾರಗಳಲ್ಲಿ ತಲ್ಲಣ ಮೂಡಿಸಿದೆ, ಇದರಿಂದ ಅಕ್ರಮ ಮರಳು ಸಾಗಾಣೆಕೆದಾರರ ಮತ್ತು ಕೆಲವು ಪೊಲೀಸರ ನಿತ್ಯದ ಆದಾಯಕ್ಕೆ ಕಡಿವಾಣಬಿದ್ದಿದೆ.
ತಾಲೂಕಿನ ಸುವರ್ಣಮುಖಿ ನದಿಯ ಹಳ್ಳಗಳಲ್ಲಿ ಸಿಗುತ್ತಿದ್ದ ಮರಳನ್ನು ಕೆಲವು ಕಾಳಸಂತೆ ಕೋರರು  ಅಕ್ರಮವಾಗಿ ಮಾರಾಟ ಮಾಡಿಕೊಳ್ಳುವ ಮೂಲಕ ತಮ್ಮ ದಂಧೆಯನ್ನು ಏಗ್ಗು ಸಿಗ್ಗಿಲ್ಲದೆ ನಡೆಸುತ್ತಿದ್ದರು, ಈ ಅಕ್ರಮ ದಂಧೆಯೋಪಾದಿಯಲ್ಲಿ ನಡೆಯುತ್ತಿದ್ದರೂ  ಹಂದನೆಕೆರೆ ಪೊಲೀಸರು ಈ ಬಗ್ಗೆ ಹೆಚ್ಚು ತಲೆ ಕಡೆಸಿಕೊಳ್ಳುತ್ತಿರಲಿಲ್ಲ,  ಕಾರಣ ಅವರಿಗೆ ಸಲ್ಲಬೇಕಾದ ಎಲ್ಲಾವಿಧದ ಗೌರವಗಳನ್ನು ಈ ಅಕ್ರಮ ದಂಧೆ ಕೋರರು ಚಾಚೂತಪ್ಪದೆ ಸಲ್ಲಿಸುತ್ತಿದ್ದರು. ಹೀಗಾಗಿ ಈ ಅಕ್ರಮಕ್ಕೆ ಬೆಂಗಾವಲಾಗಿ ನಿಂತಿದ್ದ ಹಂದನಕೆರೆಯ ಕೆಲವು ಪೊಲೀಸರಿಗೆ  ಮರಳು ಖಾಲಿ ಆದಷ್ಟು ಅವರ ಖಜಾನೆ ಭತರ್ಿಯಾಗುತ್ತಿದ್ದರಿಂದ ಈ ಅಕ್ರಮ ಹೆಚ್ಚಲಿ, ಹೆಚ್ಚಲಿ, ಎನ್ನುತ್ತಿದ್ದರೆ ಹೊರತು, ಅದನ್ನು ತಡೆಯುವ ದುಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ...!?
  ಹೀಗೆ ಸಾಂಗೋಪಾಂಗವಾಗಿ ನಡೆಯುತ್ತಿದ್ದ ಈ ಅಕ್ರಮವನ್ನು ಬಯಲುಗೊಂಡಿದ್ದು, ಹಂದನಕೆರೆ  ಎಸ್.ಐ. ಸುನಿಲ್ ಮತ್ತು ತಿಪಟೂರು ಎ.ಸಿ. ಪ್ರಜ್ಞಾ ಅಮ್ಮೆಂಬಾಳ್ ರವರ ನಡುವಿನ ಮಾತನ ಚಕಮಕಿ, ಇಡೀ ದಂಧೆಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿತಲ್ಲದೆ, ದಂಧೆಕೋರರಿಗೆ ನಿದ್ದೆಗೆಡಿಸಿತು. 
ಹಂನದಕೆರೆ ಎಸ್.ಐ. ಮತ್ತು ಎ.ಸಿ.ಯವರ ಸಂಘರ್ಷ ಯಾವಾಗ ವಾಟ್ಸ್ ಅಪ್ನಲ್ಲಿ ಓಡಾಡಿ, ರಾಜ್ಯದ ಎಲ್ಲಾ ಟಿ.ವಿ.ಚಾನೆಲ್ಗಳಲ್ಲಿ ಭಿತ್ತರವಾಯಿತು ಆಗಿನಿಂದ ಬೆಂಗಳೂರಿನಲ್ಲಿ ಕುಳಿತು ಈ ಅಕ್ರಮವನ್ನು ಡೀಲ್ ಮಾಡುತ್ತಿದ್ದ ಅಕ್ರಮಕೋರರ ತೊಳ್ಳೆ ನಡುಗುವಂತಾಗಿದೆ. ಕಾರಣ  ಎ.ಸಿ. ಪ್ರಜ್ಞಾ, ತಹಶೀಲ್ದಾರ್ ಕಾಮಾಕ್ಷಮ್ಮ ನೇತೃತ್ವದ ತಂಡ ಈ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕುತ್ತಿದ್ದಾರೆ, ಅಲ್ಲದೆ ತಮ್ಮ ಜಮೀನುಗಳಲ್ಲಿ ಲೋಡ್ಗಟ್ಟಲೆ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಮರಳನ್ನೇಲ್ಲಾ ಸಕರ್ಾರದ ವಶಕ್ಕೆ ಪಡೆದಿದ್ದಾರೆ,  ಅಷ್ಟೇ ಅಲ್ಲ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಜಮೀನುಗಳ ಮಾಲೀಕರಿಗೆ ನಿಮ್ಮ ಜಮೀನುಗಳನ್ನು ಏಕೆ ಸಕರ್ಾರ ತನ್ನ ಸುಬಧರ್ಿಗೆ ತೆಗೆದುಕೊಳ್ಳಬಾರದು ಎಂಬ ಸಂದೇಶವನ್ನು ರವಾನಿಸಿದ್ದಾರೆ. 
ಇಷ್ಟೇ ಆಗಿದ್ದರೆ ಆ ಕಳ್ಳಕಾಕರು ತಲೆ ಗೆಡಿಸಿಕೊಳ್ಳುತ್ತಿರಲಿಲ್ಲ ಏಕೆಂದರೆ ಹಣದ ಹಮ್ಮು ಅವರನ್ನು ಏನನ್ನಾದರೂ ಮಾಡಿದರೂ ಜಯಸಿಕೊಂಡು ಬರುತ್ತೇವೆಂಬ ಹುಮ್ಮಸ್ಸನ್ನು ಮೂಡಿಸಿದೆ. ಆದರೆ ಅವರಿಗೆ ಸಂಕಟ ಎದುರಾಗಿರುವುದು ಇಡೀ ಅಕ್ರಮಕ್ಕೆ ಕಡಿವಾಣ ಹಾಕಲು ಹೋರಟಿರುವ ಎ.ಸಿ. ಮತ್ತು ತಹಶೀಲ್ದಾರ್ ರವರ ಕ್ರಮ ಹಾಗೂ ತಮಗೆ  ಬೆನ್ನೆಲುಬಾಗಿದ್ದ ಎಸ್.ಐ. ರವರು ಠಾಣೆಯ ಆಡಳಿತದಲಿಲ್ಲವೆಂಬ ಕೊರಗು.
ಜಿಲ್ಲಾಡಳಿತದಿಂದ ರಾಜೀ ಸಂಧಾನದ ಸಭೆ:  ಎ.ಸಿ. ಮತ್ತು ಎಸ್.ಐ.ರವರ ಮಾತಿನ ಚಕಮಕಿ ರಾಜ್ಯದ ತುಂಬೆಲ್ಲಾ ಸದ್ದು ಮಾಡುತ್ತಿದ್ದಂತೆಯೇ ಎಸ್.ಪಿ.ಕಾತರ್ಿಕ ರೆಡ್ಡಿಯವರು ತಕ್ಷಣವೇ ಎಸ್.ಐ. ಸುನಿಲ್ ರವರನ್ನು ಹಂದನಕೆರೆ ಠಾಣೆಯ ಛಾಜರ್್ನ್ನು ಎ.ಎಸ್.ಐ.ರವರಿಗೆ ನೀಡಿ ಎಸ್.ಪಿ.ಕಛೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ಸುನಿಲ್ ಕಳೆದ ಒಂದು ವಾರದಿಂದ ಎಸ್.ಪಿ.ಕಛೇರಿಯಲ್ಲಿ ಇದ್ದಾರೆ.
ಈ ಮಧ್ಯೆ ಡಿ.ಸಿ, ಎಸ್.ಪಿ. ನೇತೃತ್ವದಲ್ಲಿ ಎ.ಸಿ. ಮತ್ತು ಎಸ್.ಐ.ರವರ ನಡುವೆ ರಾಜಿ ಸಂಧಾನ ಕಾರ್ಯವೂ ನಡೆದಿದೆ, ಎ.ಸಿ. ಪ್ರಜ್ಞಾರವರನ್ನು ಎಸ್.ಐ.ರವರು ಸಾರಿ ಕೇಳಿರುವ ಪ್ರಹಸನವು ಆಗಿದೆ,  ಆದರೆ ಅದೆಲ್ಲಾ ಕಣ್ಣೊರಿಸುವ ಮಟ್ಟಿಗೆ ಮಾತ್ರ ಪ್ರಯೋಜನವಾಗಿದೆ ಹೊರತು ಮತ್ತೇನೂ ಅಲ್ಲ.
ಮರುದಿನವೇ ಎ.ಸಿ. ಪ್ರಜ್ಞಾರವರು ತಹಶೀಲ್ದಾರ್ ಜೊತೆಗೂಡಿ ಅಕ್ರಮ ಮರಳು ಸಂಗ್ರಹಗೊಂಡಿರುವ ನಿರುವಗಲ್, ಅಂಕಸಂದ್ರ ಸೇರಿದಂತೆ ಹಲವು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಲ್ಲಿ ಲೋಡು ಗಟ್ಟಲೆ ಮರಳು ಇರುವುದನ್ನು ಕಂಡು ಕೆಂಡಾಮಂಡಲಾವಾಗಿದ್ದಾರೆ. ಆ ಮರಳನ್ನೆಲ್ಲಾ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇಲ್ಲಿಂದ ಶುರವಾಯಿತು ಅಸಲಿ ಮಸಲತ್ತು. ಇದರಿಂದ ಕುಪಿತಗೊಂಡಿರುವ ಮರಳು ಮಾಫಿಯಾ ಎಸ್.ಐರವರನ್ನು ನಾವು ರಕ್ಷಿಸಿಕೊಂಡರೆ ಮಾತ್ರ ನಮ್ಮ ಉಳಿವು ಅಲ್ಲದೆ,  ಈ ಎ.ಸಿ. ಮತ್ತು ತಹಶೀಲ್ದಾರ್ ರವರಿಗೆ ನಾವೇನೆಂದು ತೋರಿಸಲೇ ಬೇಕೆಂದು ಪಣ ತೊಟ್ಟವರಂತೆ ಸಂಘಟಿತರಾಗುತ್ತಿದ್ದಾರೆ.
ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಲಾರಿ ಢಿಕ್ಕಿ ಯತ್ನ:  ಕಂದಾಯ ಅಧಿಕಾರಿಗಳ ಕಾಯರ್ಾಚರಣೆ ತೀವ್ರಗೊಂಡಂತೆ ಮರಳು ಮಾಫಿಯಾದ ಜನರೂ ರೊಚ್ಚಿಗೆದ್ದರು, ಇದರ ಫಲವೇ ಅಕ್ರಮ ಮರಳು ಪರಿಶೀಲನೆಗೆಂದು ಹೋದ ಸಂದರ್ಭದಲ್ಲಿ ಎ.ಸಿ. ಪ್ರಜ್ಞಾರವರ ಸಮ್ಮುಖದಲ್ಲೇ ನಂಬರ್ ಇಲ್ಲದ ಹೊಸ ಲಾರಿಯೊಂದು ತಹಶೀಲ್ದಾರ್ ಕಾಮಾಕ್ಷಮ್ಮ ಮತ್ತು ಹಂದನಕೆರೆ ಕಂದಾಯ ಅಧಿಕಾರಿ ವಿಜಯ ನರಸಿಂಹರವರ ಮೇಲೆರಗಿದೆ ಅದೃಷ್ಟ ವಶಾತ್ ಅವರಿಬ್ಬರು ಅಪಾಯದಿಂದ ಪರಾಗಿದ್ದಾರೆ. 
ಈ ಅಕ್ರಮ ದಂಧೆ ಇಂದು ನೆನ್ನೆಯದಲ್ಲ, ಕಳೆದ ಐದಾರು ವರ್ಷಗಳಿಂದ ನಡೆಯುತ್ತಿರುವ ಕಾಳಸಂತೆ,  ಆದರೆ ಆಗೆಲ್ಲಾ ಕದ್ದು ಮುಚ್ಚಿ ಟ್ರಾಕ್ಟರ್ಗಳಲ್ಲಿ ಹಂಗೂ- ಇಂಗೂ ನಡೆಯುತ್ತಿದ್ದು, ಕಂದಾಯ ಅಧಿಕಾರಿಗಳ ಕೈಗೆ ಸಿಕ್ಕಾಗ  ದಂಢ ಕಟ್ಟಿಸಿಕೊಂಡು ಬಿಡುತ್ತಿದ್ದರು, ಸ್ವಲ್ಪ ಜಾಸ್ತಿ ಏನಿಸಿದಾಗ ಹಂಗೊಂದು ಇಗೊಂದು ಕೇಸುಗಳನ್ನು ಹಾಕುತ್ತಿದ್ದರು,  
ಆಗೆಲ್ಲಾ ಇಲ್ಲಿನ ಮರಳುಗೆ ಅಷ್ಟೋಂದು ಬೇಡಿಕೆ ಇರಲಿಲ್ಲ ಏಕೆಂದರೆ ಶಿರಾ, ಹೊಸದುರ್ಗ ಮತ್ತಿತರಕಡೆಯಿಂದ ಮರಳು ಇಲ್ಲಿನ ಜನರಿಗೆ ದೊರೆಯುತ್ತಿದ್ದರಿಂದ ಈ ಮರಳನ್ನು ಇಲ್ಲಿನ ಜನ ಅಷ್ಟೇ ಬಳಸಿಕೊಳ್ಳುತ್ತಿದ್ದರು. 
ಆದರೆ ರಾಜ್ಯದ ಎಲ್ಲಾ ಕಡೆ ಮರಳು ಸಾಗಣಿಕೆಯ ಮೇಲೆ ನಿರ್ಬಂಧ ಹೆಚ್ಚಾದಾಗ ಇಲ್ಲಿನ ಮರಳು ಅಗತ್ಯ ತೀರ ಕಂಡು ಬಂದಿತು. ಅಷ್ಟೇ ಅಲ್ಲ ನವಿಲೆ ಕೆರೆ ಬಳಿ ಇದ್ದ ಮರಳನ್ನು  ಒಮ್ಮೆ ಸಕರ್ಾರ ಹರಾಜು ಮಾಡುವ ಪ್ರಕ್ರಿಯೆ ನಡೆಸಿತು, ಆ ಸಂದಂರ್ಭದಲ್ಲಿ ಬೆಂಗಳೂರು ಕಡೆಯ ಒಂದಷ್ಟು ಜನ ಈ ಕಡೆ ಮುಖ ಮಾಡಿದರು, ಆಗ ಶುರವಾಯಿತು ನೋಡಿ ಇಲ್ಲಿಯ ಮರಳು ದಂಧೆಯ ಕರಾಮತ್ತು.
ಹಲವು ಮರಳು ಮಾಫಿಯಾದ ಜನ ಇಲ್ಲಿಗೆ ಬಂದು ಸುವರ್ಣಮುಖಿ ನದಿಯ 25 ಕಿ.ಮೀ. ಉದ್ದಕ್ಕೂ ಇರುವ ಅಗಾಧ ಮರಳನ್ನು ನೋಡಿ ಸ್ವರ್ಗಕ್ಕೆ ಮೂರು ಗೇಣು ಎಂಬಂತಾಡಿಕೊಂಡು ಹೋದರು ಆಗಿನಿಂದ ಶುರವಾಯಿತು ಇಲ್ಲಿನ ಮರಳು ಮಾಫಿಯಾ.
ಮರಳು ಮಾಫಿಯಾದ ಮೇಲೆ ಪೊಲೀಸರ ಕೇಸುಗಳು: ಟ್ರ್ಯಾಕ್ಟರ್ಗಳ ಜಾಗಕ್ಕೆ ಟಿಪ್ಪರ್ಗಳು, ಹತ್ತು, ಹನ್ನೆರಡು ಚಕ್ರದ ಲಾರಿಗಳು ಬಂದವು, ಹಂದನಕೆರೆಯ ಕೆಲವರು ಬೆಂಗಳೂರಿನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದವರು, ಈ ಮಾಫಿಯಾಕ್ಕೆ ಎಂಟ್ರಿಯಾದರು. ಅಲ್ಲಿದ್ದುಕೊಂಡೆ ಇಲ್ಲಿ ತಮ್ಮ ಕಡೆಯ ಕೆಲವರನ್ನು ಬಿಟ್ಟು ಅಕ್ರಮ ಮರಳು ಹೊಡೆಸಲು ಆರಂಭಿಸಿದರು, ಮರಳು ತುಂಬಲು ಜೆ.ಸಿ.ಬಿ.ಗಳು ಬಂದವು, ಹಳ್ಳಗಳಲ್ಲಿ ಮರಳು ಇರುವ ಭಾಗದಲ್ಲಿನ ತೋಟದವರಿಗೆ ಆರಂಭದಲ್ಲಿ ನೂರರ ಲೆಕ್ಕದಲ್ಲಿ ನೀಡುತ್ತಿದ್ದ ಹಣ ಸಾವಿರಕ್ಕೆ ಏರಿಕೆಯಾಯಿತು, ಹಗಲು ರಾತ್ರಿ ಎಂಬ ವ್ಯತ್ಯಾಸಗಳು ಮಾಫಿಯಾದ ಜನರಿಗೆ ಮಾಯವಾದವು, ರಾತ್ರಿಯ ಕಾಯರ್ಾಚರಣೆಗಳು ಚುರುಕುಗೊಂಡವು, ಬೀಟ್ನಲ್ಲಿದ್ದ ಪೊಲೀಸರ ಕಿರಿಕಿರಿ ತಪ್ಪಿಸಲು ಅವರಿಗೂ ಪುಡಿನೋಟುಗಳ ವಾಸನೆ ಹಿಡಿಸಿದರು. ಇದಕ್ಕೆ ಬಗ್ಗದ ಕೆಲವರಿಗೆ 'ಕನಕಾಂಬರ' ಬಣ್ಣದ ನೋಟುಗಳೂ ಚಾಲ್ತಿಗೆ ಬಂದವು, ಹೀಗೆ  ವೇಗವನ್ನು ಪಡೆದಕೊಂಡ ಮಾಫಿಯಾ ತನ್ನ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರಿಂದ ಆಗಾಗ ಒಂದೊಂದು ಪೊಲೀಸ್ ಕೇಸುಗಳು ಆರಂಭಗೊಂಡವು. ಈ ಸಂಬಂಧ 2013 ರಿಂದ ಪೊಲೀಸ್ ಕೇಸುಗಳು ಆರಂಭಗೊಂಡಿವೆ, 2013ರ ಅಕ್ಟೋಬರ್ ಮೂರ ರಂದು, ಅದೇ ತಿಂಗಳು ಇಪ್ಪತ್ತೈದರಂದು ಎರಡು ಎಫ್.ಐ.ಆರ್.ಗಳು ಹಾಕಿರುವುದಕ್ಕೆ ದಾಖಲೆಗಳಿವೆ.
ಈ ಕೇಸುಗಳಲ್ಲಿ ನಿರುವಗಲ್ ಸೀತರಾಮಾಯ್ಯ ಮತ್ತು ಆತನ ಮಗ ಮಧುಚಂದ್ರನ ಮೇಲೆ ಆರೋಪಗಳು ಅತಿಯಾಗಿ ಕೇಳಿ ಬಂದವು. ಈಗ ಈ ಕೇಸುಗಳು ವಿಚಾರಣೆ ಹಂತದಲ್ಲಿದೆ. 
ಈಗ ಈ ಮಾಫಿಯಾ ತಾಲೂಕಿನಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮರಳನ್ನು ಸಂಗ್ರಹಿಸಿದ್ದ ನಿರುವಗಲ್ ಗ್ರಾಮದ ಎನ್.ಸೀತರಾಮಯ್ಯನವರ ಆರು ಎಕರೆ ಮೂವತ್ತೆರೆಡು ಗುಂಟೆ,  ಎಚ್.ಆರ್.ಶಾರದಮ್ಮ ನವರ ಆರು ಎಕರೆ ಮೂವತ್ತೊಂದು ಗುಂಟೆ ಸೇರಿದಂತೆ ಅದೇ ಗ್ರಾಮದ ಸವರ್ೆನಂಬರ್ನಲ್ಲಿರುವ  ನಾಗಪ್ಪ, ಪುಟ್ಟಯ್ಯ, ವರದಯ್ಯ, ಮರಿರಂಗಯ್ಯ ಎಂಬುವರ ಜಮೀನುಗಳನ್ನು ಸಕರ್ಾರ ತನ್ನ ಸುಬಧರ್ಿಗೆ ಪಡೆಯಲು ಮುಂದಾಗಿದೆ, 
ಈ ಎಲ್ಲಾ ವಿಚಾರದ ಬೆಳಕು ಚೆಲ್ಲುವ ವಿಚಾರವಾಗಿ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವ ವಿಷಯವಾಗಿ ಇದೇ 23(ಇಂದು) ಮರಳು ನಿಯಂತ್ರಣದ ಕಾಯರ್ಾಚರಣೆ ಪಡೆಯ ಸಭೆಯನ್ನು ಶಾಸಕರು ಕರೆದಿದ್ದಾರೆ, ಈ ಸಭೆ ಕಡಿವಾಣ ಹಾಕುವಲ್ಲಿ ಏನೇನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. . .!



Friday, March 20, 2015

ಡಿ.ಕೆ.ರವಿಯವರ ಸಾವನ್ನು ಸಿಬಿಐಗೆ ವಹಿಸದಿದ್ದರೆ ಉಗ್ರಹೋರಾಟ : ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಪರಮೇಶ್ವರ್

ಚಿಕ್ಕನಾಯಕನಹಳ್ಳಿ, : ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಸಾವಿನ ಬಗ್ಗೆ ಸಕರ್ಾರ ಸಿಬಿಐಗೆ ವಹಿಸುವ ಬಗ್ಗೆ ದೃಢ ನಿಧರ್ಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಉಗ್ರಹೋರಾಟ ಕೈಗೊಳ್ಳಲಾಗುವುದು ಎಂದು ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಪರಮೇಶ್ವರ್ ಹೇಳಿದರು.
ಪಟ್ಟಣದ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಐಎಎಸ್ ಅಧಿಕಾರಿ ಡಿ.ಕೆ.ರವಿರವರ ನಿಧನಕ್ಕೆ ಶ್ರದ್ದಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿ.ಕೆ.ರವಿರವರು ಜಾತಿಗೆ ಮೀರಿ ಬೆಳೆದ ವ್ಯಕ್ತಿಯಾಗಿದ್ದರು ಅವರ ಸಾವಿನಿಂದ ಕನರ್ಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಮುಖಂಡ ನಾರಾಯಣಗೌಡ ಮಾತನಾಡಿ, ಮುಖ್ಯಮಂತ್ರಿಗಳು ಜನರ ಭಾವನೆಗೆ ತಕ್ಕಂತೆ ನಿಧರ್ಾರ ಕೈಗೊಳ್ಳಬೇಕು, ಡಿ.ಕೆ.ರವಿರವರ ಸಾವಿನ ಬಗ್ಗೆ ಇಡೀ ರಾಜ್ಯವೇ ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದ್ದರೂ ಸಕರ್ಾರ ಮಾತ್ರ ಸಿಬಿಐಗೆ ವಹಿಸುಲು ಹಿಂದೇಟು ಹಾಕಲು ಕಾರಣವೇನು ಎಂದರು.
ಈ ಸಂದರ್ಭದಲ್ಲಿ ತಾ.ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂತರ್ಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಬೆಳಗುಲಿವೆಂಕಟೇಶ್, ಕೆ.ಜಿ.ಕೃಷ್ಣೆಗೌಡ, ಸತೀಶ್, ರಾಜಣ್ಣ, ಗಂಗಯ್ಯ, ನಿಶಾನಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Thursday, March 19, 2015

ಹಂದಿ ಹಿಡಿಯಲು ಜಗಳ : ಪೋಲಿಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ



ಚಿಕ್ಕನಾಯಕನಹಳ್ಳಿ,ಮಾ.19 :  ಹಂದಿ ಹಿಡಿಯಲು ಹೋದವರ ಮೇಲೆ ಹಂದಿ ಸಾಕಿದ್ದ ಮಹಿಳೆಯರು ಕೈ ಕಚ್ಚಿದರಲ್ಲದೆ,  ಪುರಸಭಾ ಅಧ್ಯಕ್ಷೆ ರೇಣುಕರೊಂದಿಗೆ ಮಾತಿನ ಚಕಮಕಿ ನಡೆದ ಪರಿಣಾಮ ಪೋಲಿಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
ಹೆಚ್1 ಎನ್1  ಕಾಯಿಲೆ ಹರಡುತ್ತಿರುವುದರ ಹಿನ್ನಲೆಯಲಿ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಹಂದಿ ಹಿಡಿಯುವ ಕಾಯರ್ಾಚರಣೆ ನಡೆಸುತ್ತಿದೆ, ಇದರಿಂದ ಕುಪಿತಗೊಂಡಿರುವ ಹಂದಿ ಸಾಕಿರುವ ಜನರು ಆಕ್ರೋಶಗೊಂಡಿದ್ದು, ಈ ಸಿಟ್ಟು ಇಂದು ಬುಗಿಲೆದ್ದು, ಹಂದಿ ಹಿಡಿಯುವವರ ಕೈ ಕಚ್ಚಿದರು.
ಇದರಿಂದ ಕುಪಿತಗೊಂಡ ಹಂದಿ ಹಿಡಿಯುವವರು, ಪುರಸಭೆಯ ಅಧ್ಯಕ್ಷರಾದಿಯಾಗಿ, ಸದಸ್ಯರು,  ಸಿಬ್ಬಂದಿ ಒಂದಡೆಯಾದರೆ ಹಂದಿ ಸಾಕಿರುವವರು, ಅವರ ಬೆಂಬಲಿಗರು ಪೊಲೀಸ್ ಠಾಣೆಯ ಎದುರೇ ವಾಗ್ವಾದಕ್ಕೆ ಬಿದ್ದರು.
ಈ ಸಂದರ್ಭದಲ್ಲಿ ಹಂದಿ ಸಾಕಿರುವ ಮಹಿಳೆಯರು ಮಾತನಾಡಿ, ಹಂದಿ ಹಿಡಿಯಲು ಬಂದ ಕೆಲವರು ಕುಡಿದು ಬಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದರೆ.
ಪುರಸಭಾಧ್ಯಕ್ಷೆ ರೇಣುಕಮ್ಮ ಮಾತನಾಡಿ, ಸಾರ್ವಜನಿಕರು ಹಂದಿಗಳನ್ನು ಹಿಡಿದು ಆರೋಗ್ಯ ಕಾಪಾಡುವಂತೆ ಹಲವು ಬಾರಿ ನಮಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಹಂದಿ ಹಿಡಿಯಲು ಕ್ರಮ ಕೈಗೊಳ್ಳಲಾಯಿತು, ಈ ಸಂಬಂಧ ಹಂದಿ ಸಾಕಿರುವವರಿಗೆ ಹಂದಿಗಳನ್ನು ಬೇರೆ ಕಡೆ ಸಾಗಿಸಿ ಎಂದು ಎರಡು ತಿಂಗಳ ಹಿಂದೆಯೇ ನೋಟಿಸ್ ನೀಡಿದ್ದೆವು ಅದರಂತೆ ಹಂದಿ ಹಿಡಿಯುವವರು ಹಂದಿಗಳನ್ನು ತರಿಸುವುದಿಲ್ಲ, ಊರಿನ ಒಳಗಡೆಯೂ ಬಿಡುವುದಿಲ್ಲ ಎಂದಿದ್ದರು ಆದರೂ ಮತ್ತೆ ಮತ್ತೆ ಹಂದಿಗಳು ಪಟ್ಟಣದೊಳಗೆ ಸಂಚರಿಸಿದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು, ಇದರಿಂದ ಮೂರನೇ ಬಾರಿಗೆ ಪಟ್ಟಣದಲ್ಲಿ ಹಂದಿ ಹಿಡಿಯುವ ಕಾಯರ್ಾಚರಣೆ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಹಂದಿ ಹಿಡಿಯುವವರ ಮೇಲೆ ದಾಳಿ ನೆಡಯಿತು, ಹಂದಿ ಹಿಡಿಯುವವರು ಎಲ್ಲಿಯವರೆಗೂ ಹಂದಿಗಳನ್ನು ತರುತ್ತಾರೆ ಅಲ್ಲಿಯವರೆಗೂ ಹಂದಿಗಳನ್ನು ಹಿಡಿಸುತ್ತಲೇ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಿ, ಮಲ್ಲೇಶಯ್ಯ ಪುರಸಭಾ ಅಧ್ಯಕ್ಷರ ಬೆಂಬಲಕ್ಕೆ ನಿಂತರು.
ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಮಾತನಾಡಿ, ಹಂದಿ ಸಾಕಾಣಿಕೆ ಮಾಡಲು ಪುರಸಭೆ ವತಿಯಿಂದ ಅನುಮತಿ ಪಡೆಯಿರಿ ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಪುರಸಭೆ ಆರೋಗ್ಯ ನಿರೀಕ್ಷಕರಿಂದಲೂ ಸಟರ್ಿಫಿಕೇಟ್ ಪಡೆದು ನಿಮ್ಮಗಳ ಕೆಲಸ ಮಾಡಿಕೊಳ್ಳಿ  ಅದನ್ನು ಬಿಟ್ಟು ಹಠ ಸಾಧನೆಗಾಗಿ ಕಾನೂನನ್ನು ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.


ಸಿಬಿಐ ಅಧಿಕಾರಿ ಡಿ.ಕೆ.ರವಿ ನಿಧನಕ್ಕೆ ಶ್ರದ್ದಾಂಜಲಿ
                                  





ಚಿಕ್ಕನಾಯಕನಹಳ್ಳಿ,ಮಾ.19 : ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿರವರ ಅನುಮಾನಾಸ್ಪದ ಸಾವು ಸಿ.ಬಿ.ಐ ತನಿಖೆಯಿಂದ ಮಾತ್ರ ಹೊರಬೀಳಲಿದೆ ಎಂದು ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯ ಬಳಿ ಪ್ರಗತಿ ಸ್ಟುಡಿಯೋ ಆವರಣದಲ್ಲಿ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿರವರ ನಿಧನಕ್ಕೆ ಶ್ರದ್ದಾಂಜಲಿ ಅಪರ್ಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಅಧಿಕಾರಿಯಾಗಿದ್ದರು ಆದರೆ ಇವರಿಗೆ ಭೂಮಾಫಿಯ ಹಾಗೂ ರಾಜಕಾರಣಿಗಳ ಹಿತಕಾಯಲು ಇವರು ವಿರೋಧಿಸಿದ್ದಕ್ಕೆ ಇಂತಹ ಕೃತ್ಯ ನಡೆದಿದೆ, ಇವರ ಅನುಮಾನಾಸ್ಪದ ಸಾವು ರಾಜ್ಯದ ಆರು ಕೋಟಿ ಜನರಿಗೂ ದಿಗ್ಬ್ರಾಂತಿಯನ್ನು ಉಂಟು ಮಾಡಿದೆ, ಸಕರ್ಾರ ಇವರ ಸಾವಿನ ಸತ್ಯಾಸತ್ಯತೆ ಹೊರಬರಬೇಕಾದರೆ ಕೂಡಲೇ ಸಿಬಿಐಗೆ ವಹಿಸಿ ಸಾಮಾಜಿಕ ನ್ಯಾಯ ಕೊಡುವಲ್ಲಿ ಮುಂದಾಗಬೇಕು ಎಂದರು.
ಮಾಜಿ ಪುರಸಭಾ ಸದಸ್ಯ ರೇಣುಕಮೂತರ್ಿ ಮಾತನಾಡಿ, ಡಿ.ಕೆ.ರವಿರವರು ಕೋಲಾರದಿಂದ ಬೆಂಗಳೂರಿಗೆ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿ ಬಂದ ನಂತರ ತೆರಿಗೆ ವಂಚಿಸುತ್ತಿದ್ದ 67 ಬಂಗಾರದ ಅಂಗಡಿ, ಸಿನಿಮಾ ಮಂದಿರಗಳ ದಾಳಿ ಸೇರಿದಂತೆ ಕೋಟ್ಯಾಂತರ ತೆರಿಗೆ ಹಣವನ್ನು ಸಕರ್ಾರಕ್ಕೆ ಕೊಡಿಸುವಲ್ಲಿ ಮುಂದಾದ ಇವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಈ ಬಗ್ಗೆ ಸಕರ್ಾರ ಸಿ.ಬಿ.ಐಗೆ ಒಪ್ಪಿಸುವ ಮೂಲಕ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ಸತ್ಯಾಸತ್ಯತೆಗೆ ಮುಂದಾಗಬೇಕು, ಮುಂದಿನ ದಿನಗಳಲ್ಲಿ ಇಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆ ಸಕರ್ಾರ ಹಾಗೂ ನಮ್ಮೆಲ್ಲರ ಜವಬ್ದಾರಿ ಎಂದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ದೊರೆಮುದ್ದಯ್ಯ, ಸಿ.ಬಿ.ಲೋಕೇಶ್, ಸಿ.ಕೆ.ಹರೀಶ್,  ಕೆ.ಜಿ.ಕೃಷ್ಣೆಗೌಡ, ಮೋಹನ್ಕುಮಾರ್, ರವಿ, ಗೋವಿಂದರಯ್ಯ,  ಡಿ.ಲಕ್ಷ್ಮಣ್, ಕೃಷ್ಣಮೂತರ್ಿ, ರಾಮಣ್ಣ, ಮತ್ತಿತರರು ಉಪಸ್ಥಿತರಿದ್ದರು.

Wednesday, March 18, 2015


ಚಿಕ್ಕನಾಯಕನಹಳ್ಳಿ :ಕೆ.ಬಿ.ಕ್ರಾಸ್ ಕಡೆಯಿಂದ ಹುಳಿಯಾರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಮಾಳಿಗೆಹಳ್ಳಿ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ

ಚಿಕ್ಕನಾಯಕನಹಳ್ಳಿ : ಕೆ.ಬಿ.ಕ್ರಾಸ್ ಕಡೆಯಿಂದ ಹುಳಿಯಾರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಮಾಳಿಗೆಹಳ್ಳಿ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಿನಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಲಾರಿ ಚಾಲಕ ಸೇರಿದಂತೆ ನಾಲ್ಕು ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಗಾಯಗೊಂಡ ಅಂಕನಬಾವಿ ಪುಟ್ಟನಾಯ್ಕ(24) ಹುಳಿಯಾರು ಬಳ್ಳೆಕಟ್ಟೆ ಗ್ರಾಮದ ಪ್ರದೀಪ (18), ವೆಂಕಟೇಶ (29) ಚಂದ್ರಯ್ಯ(46) ಇವರನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋಟೋ 
ಚಿಕ್ಕನಾಯಕನಹಳ್ಳಿ ಮೂಲಕ ಹುಳಿಯಾರಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಮಾಳಿಗೆಹಳ್ಳಿ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. 



Wednesday, January 14, 2015


ಆರ್.ಟಿ.ಐ. ಖೋಟಾದಡಿಯಲ್ಲಿ ಪೋಷಕರಿಂದ  ಅಜರ್ಿ ಆಹ್ವಾನ: ಬಿ.ಇ.ಓ.ಕೃಷ್ಣಮೂತರ್ಿ
  • ಶೇ.25 ಸೀಟುಗಳು ಲಭ್ಯ , ವಾಷರ್ಿಕ 3.5 ಲಕ್ಷ ರೂ ಆದಾಯವಿರುವವರು ಅಜರ್ಿ ಸಲ್ಲಿಸಬಹುದು.
  • ಜ.18 ರಿಂದ ಫೆ.19ರವರೆಗೆ ಅಜರ್ಿ ಸಲ್ಲಿಸಬಹದು, ಫೆ.26 ಅರ್ಹ ಮಕ್ಕಳ ಪಟ್ಟಿ ಪ್ರಕಟ
  • ಮಾ.3 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ, ಮಾ.9 ಆನ್ಲೈನ್ ಲಾಟರಿ ಮೂಲಕ ಆಯ್ಕೆ.

ಚಿಕ್ಕನಾಯಕನಹಳ್ಳಿ,ಜ.14 : 2015-16ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯಗೆ ಜನವರಿ 18ರಿಂದ ಫೆಬ್ರವರಿ 19ರವರೆಗೆ ಪೋಷಕರು ಆನ್ಲೈನ್ ಅಥವಾ ಆಫ್ಲೈನ್ ಮುಖಾಂತರ ದಾಖಲೆಗಳ ಸಮೇತ ಶಾಲೆಗೆ ಅಜರ್ಿ ಸಲ್ಲಿಸಬಹುದಾಗಿದೆ ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಆರ್.ಟಿ.ಇ ಅಡಿಯಲ್ಲಿ ಶಾಲೆಗಳ ನೊಂದಣಿಯನ್ನು ಮಾಡಲಾಗಿದ್ದು ನೆರೆಹೊರೆಯ ಶಾಲೆಗಳ ಪಟ್ಟಿ, ಶಾಲೆಗಳಿಗೆ ನಿಗಧಿ                                                                                                                                                                                                                       ಚಿಕ್ಕನಾಯಕನಹಳ್ಳಿ ಬಿ.ಇ.ಓ ಕೃಷ್ಣಮೂತರ್ಿ 
ಪಡಿಸಿರುವ ಆರ್.ಟಿ.ಇ ದಾಖಲಾತಿ, ಸೌಲಭ್ಯ ಮತ್ತು ತರಗತಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯ ವೆಬ್ಸೈಟ್ ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ ನಲ್ಲಿ ಪ್ರಕಟಿಸಲಾಗಿದೆ, ಸಾರ್ವಜನಿಕರು 2015-16ನೇ ಸಾಲಿಗೆ ಆರ್.ಟಿ.ಇ ಅಡಿಯಲ್ಲಿ ದಾಖಲಾತಿಗಾಗಿ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅಜರ್ಿಯನ್ನು ದಾಖಲೆಗಳ ಸಮೇತ ನೆರೆಹೊರೆಯ ಅಂದರೆ ಗ್ರಾಮಾಂತರ ಪ್ರದೇಶದಲ್ಲಿ ಕಂದಾಯ ಗ್ರಾಮ ಮತ್ತು ನಗರ ಪ್ರದೇಶದಲ್ಲಿ ವಾಡರ್್ ಒಳಗಿನ ಶಾಲೆಯಲ್ಲಿ ಮಾತ್ರ ಅಜರ್ಿ ಸಲ್ಲಿಸಬೇಕಾಗಿರುತ್ತದೆ ಹಾಗೂ ಆನ್ಲೈನ್ನಲ್ಲಿ ಸೀಟುಗಳ ಆಯ್ಕೆ ಮಾಡಲಾಗುತ್ತದೆ ಎಂದ ಅವರು ಆರ್.ಟಿ.ಇ ಅಡಿಯಲ್ಲಿ ಶೇ.25ರಷ್ಟು ಮೀಸಲಾತಿ ಕೋಟಾದಡಿ ಪೂರ್ವ ಪ್ರಾಥಮಿಕ(ಎಲ್.ಕೆ.ಜಿ) ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ನಿಗಧಿಪಡಿಸಿರುವ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಅನುದಾನರಹಿತ ಶಾಲೆಯಲ್ಲಿ ಲಭ್ಯವಿರುವ ಶೇ.25 ಸೀಟುಗಳನ್ನು ಜನವರಿ 17ರಂದು ಪ್ರಕಟಿಸಲಿದ್ದಾರೆ,  ಪೋಷಕರು ಶಾಲಾ ದಾಖಲಾತಿ ಕೋರಿ ಜನವರಿ 18ರಿಂದ ಫೆಬ್ರವರಿ 19ರವರೆಗೆ ದಾಖಲೆಗಳ ಸಮೇತ ಆಯಾ ಖಾಸಗಿ ಶಾಲೆಗಳಲ್ಲಿ ಅಜರ್ಿ ಸಲ್ಲಿಸಬಹುದಾಗಿದೆ, ಫೆಬ್ರವರಿ 26ರಂದು ಅರ್ಹ ಅಭ್ಯಥರ್ಿಗಳ ಪಟ್ಟಿಯನ್ನು ಶಿಕ್ಷಣ ಇಲಾಖೆಯ ಆಯುಕ್ತರು  ಪ್ರಕಟಿಸಲಿದ್ದಾರೆ,  ಫೆಬ್ರವರಿ 27ರಿಂದ ಮಾಚರ್್ 2ರವರೆಗೆ ಅರ್ಹ ಅಭ್ಯಥರ್ಿಗಳ ಆಯ್ಕೆ ಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳ ಸ್ವೀಕಾರ ಮತ್ತು ವಿಲೇವಾರಿ ನಡೆಯಲಿದೆ, ಮಾಚರ್್ 9 ರಂದು ಆನ್ಲೈನ್ ಲಾಟರಿ ಮೂಲಕ ಆಯ್ಕೆ ಮಾಡಿದ ಮಕ್ಕಳ ಪಟ್ಟಿ ಪ್ರಕಟಿಸಲಾಗುವುದು. ಮಾಚರ್್ 10ರಿಂದ ಮಾಚರ್್ 13ರವರೆಗೆ ಆಯ್ಕೆ ಪಟ್ಟಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಕ್ಷೇಪಣೆ ವಿಲೇವಾರಿಸುವ ಅವಧಿ ನಿಗಧಿಪಡಿಸಲಾಗಿದೆ. ಮಾಚರ್್ 19ರಂದು ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಣೆಯಾಗಲಿದೆ, ಮಾಚರ್್ 20ರಿಂದ ಸಂಬಂಧಿಸಿದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.
ಅಜರ್ಿ ಸಲ್ಲಿಸಲು ಬೇಕಾದ ದಾಖಲೆಗಳು : ಜನ್ಮದಿನಾಂಕದ ದಾಖಲೆ, ಮಗುವಿನ ಭಾವಚಿತ್ರ, ವಾಸಸ್ಥಳದ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅನಾಥ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ/ ವಿಶೇಷ ಆದ್ಯತೆವುಳ್ಳ ಮಗು, ಎಚ್.ಐ.ವಿ ಪೀಡಿತ ಮಗು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಪ್ರಮಾಣ ಪತ್ರ ಸಲ್ಲಿಸುವುದು.

ಲೋಕಾಯುಕ್ತರು ಬೀಸಿದ ಬಲೆಗೆ ಬೆಳಗುಲಿ ಗ್ರಾ.ಪಂ.ಬಿಲ್ ಕಲೆಕ್ಟರ್ ಸೆರೆ.
ಚಿಕ್ಕನಾಯಕನಹಳ್ಳಿ,ಜ.14: ಬೆಳಗುಲಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ರಂಗಸ್ವಾಮಿ ಎನ್ನುವವರು ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟಟರ್ ಬಿಸಿದ ಬಲೆಗೆ  ಸಿಲುಕಿ ವಿಚಾರಣಾ ಬಂಧಿಯಾಗಿದ್ದಾರೆ.  
ನಿರುವಗಲ್ ಗ್ರಾಮದ ಶಂಕರಮ್ಮ ಎನ್ನುವವರು ಇಂದಿರಾ ಅವಾಜ್ ಯೋಜನೆಯಡಿಯಲ್ಲಿ ಮನೆ ಮಂಜೂರಾತಿಯಾಗಿ ಒಂದು ಬಿಲ್ಲಿನ ಮೊತ್ತವನ್ನು ಗ್ರಾಮ ಪಂಚಾಯ್ತಿಯವರು ನೀಡಿದ್ದು ಪುನಃ ಇನ್ನೊಂದು ಬಿಲ್ಲನ್ನು ಮಂಜೂರು ಮಾಡುವಂತೆ  ಶಂಕರಮ್ಮ ಕೇಳಿಕೊಂಡಾಗ ಮನೆ 'ನಾಟ್ ಓಕೆ'( ಕಂಪ್ಯೂಟರ್ ಭಾಷೆ) ಆಗಿದೆ ಆದ್ದರಿಂದ ಇದನ್ನು ಸರಿಪಡಿಸಿ ಬಿಲ್ನ್ನು ನೀಡಲು 500 ರೂ ಲಂಚ ಕೇಳಿದ್ದರು ಎಂದು ನಿರುವಗಲ್ ಶಂಕರಮ್ಮನವರ ಪತಿ ರಾಮಾಚಾರ್ ಲೋಕಾಯುಕ್ತರಿಗೆ ದೂರು ನೀಡಿದ್ದು, ಬುಧವಾರ ಪಟ್ಟಣದ ಹೊಸಬಸ್ಟಾಂಡ್ ಬಳಿ ಇರುವ ಬೆಳಗುಲಿ ಗ್ರಾಮ ಪಂಚಾಯ್ತಿಯ ಕಂಪ್ಯೂಟರ್ ಸೆಂಟರ್ನಲ್ಲಿ ಶಂಕರಮ್ಮನ ಮಗ ಬಸವರಾಜು ಬಿಲ್ಕಲೆಕ್ಟರ್ ರಂಗಸ್ವಾಮಿಗೆ 200 ರೂ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಗೌತಮ್ ಹಾಗೂ ಸಿಬ್ಬಂದಿ ಬಲೆ ಬೀಸಿ 200 ರೂ ವಶಪಡಿಸಿಕೊಂಡು ರಂಗಸ್ವಾಮಿಯನ್ನು ಬಂಧಿಸಲಾಗಿದೆ.






Tuesday, December 23, 2014


ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ 


ಚಿಕ್ಕನಾಯಕನಹಳ್ಳಿ,: ಸುಪ್ರಿಂ ಕೋಟರ್್ನ ನೇಮಿಸಿದ ಸಿ.ಇ.ಸಿ.ಶಿಫಾರಸ್ಸಿನಂತೆ, ತಾಲ್ಲೂಕಿನ ಗಣಿ ಭಾದಿತ ಪ್ರದೇಶಗಳಿಗೆ ಕೇಂದ್ರ ಸಕರ್ಾರ 94.77 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಕೃಷಿ ಇಲಾಖೆಗೆ 3.54 ಕೋಟಿ ರೂ ನೀಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕೃಷಿ ಇಲಾಖಾ ವತಿಯಿಂದಿ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ರೈತರಿಗಾಗಿ ರೈತರಿಂದ ರೈತರಿಗೋಸ್ಕರ 2014ನೇ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಅನುದಾನ ಒಂದು ವರ್ಷದ ಅವಧಿಗೆ ನೀಡಿದ್ದು, ಈ ಹಣದಲ್ಲಿ ಕೃಷಿ ಇಲಾಖೆಯಿಂದ ಚೆಕ್ಡ್ಯಾಂ, ಹಿಂಗುಗುಂಡಿ, ತಡೆಅಣೆ ನಿಮರ್ಿಸುವ ಮೂಲಕ ಬಿದ್ದ ಮಳೆಯನ್ನು  ಹಿಂಗಿಸಲು ಸಹಾಯವಾಗುತ್ತದೆ ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಎಂದರು.
ರೈತರು ದೇಶದ ಬೆನ್ನೆಲುಬು ರೈತರಿಲ್ಲದೆ ಬದುಕಲು ಸಾಧ್ಯವಿಲ್ಲ, ಶೇ.80ರಷ್ಟು ರೈತರು ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಡಿಸಿಕೊಂಡಿದ್ದಾರೆ ಸಕರ್ಾರ ರೈತರು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಯಂತ್ರೋಪಕರಣ ಹಾಗೂ ಔಷಧಿ, ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಇದರ ಉಪಯೋಗ ಪಡೆಯುವಂತೆ ಸಲಹೆ ನೀಡಿದ ಅವರು, ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ, ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ನಮ್ಮ ಹಿಂದಿನ ಕೃಷಿ ಪದ್ದತಿಯನ್ನು ಅವಲಂಬಿಸಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು ಸಕರ್ಾರ ರೈತರಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮೂಲಕ ಶೇ.75ರಷ್ಟು ಹಣ ನೀಡುತ್ತಿದೆ ಉಳಿದ ಶೇ.25 ರಷ್ಟು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವಿನಿಯೋಗಿಸಿ ರೈತರಿಗೆ ಯಂತ್ರೋಪಕರಣವನ್ನು ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ನೀಡುತ್ತಿದೆ, ರೈತರು ಇದರ ಉಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಯುವುದರಿಂದ ಶಟ್ಟಿಕೆರೆ, ಹಂದನಕೆರೆ, ಕಸಬಾ ಹೋಬಳಿಗಳಿಗೆ ಕುಡಿಯುವ ನೀರು ಲಭಿಸಲಿದೆ ಮಹಿಳೆಯರಿಗೆ ಕೃಷಿ ಹಾಗೂ ಡೈರಿ ನಡೆಸಲು ಹಸುಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳಲಾಗುತ್ತದೆ, ಇದರಿಂದ ಮಹಿಳೆಯರು ತಮ್ಮ ಕುಟುಂಬಗಳ ಆಥರ್ಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಕರ್ಾರ ರಾಗಿ, ಭತ್ತಕ್ಕೆ ಬೆಂಬಲ ಬೆಲೆ ನೀಡಲು ತೀಮರ್ಾನಿಸಿದೆ, ಬಿಳಿಗೆರೆ, ದೊಡ್ಡ ಎಣ್ಣೆಗೆರೆ, ಕಾತ್ರಿಕೆಹಲ್ನಲ್ಲಿ ವಿದ್ಯುತ್ ಉಪಸ್ಥಾವರಗಳನ್ನು ನಿಮರ್ಿಸಿ ಕಾಯರ್ಾರಂಭ ಮಾಡಿದ್ದು ಸಾಲ್ಕಟ್ಟೆ ಬಳಿ ವಿದ್ಯುತ್ ಸೆಬ್ ಸ್ಟೇಷನ್ ಮಾಡಲು ಸಕರ್ಾರ ಮಂಜೂರಾತಿ ನೀಡಿದೆ ಇದರಿಂದ ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ಕಡಿಮೆಯಾಗಲಿದೆ ಎಂದರು.
ಕೃಷಿ ತಜ್ಞಾ ಡಾ||ಕೆ.ಜಿ.ಬೋರಯ್ಯ ಮಾತನಾಡಿ ರೈತರು ಬೇಸಾಯ ಮಾಡುವಾಗ ನಾಲ್ಕು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಮಾಗಿ ಉಳುಮೆ ಮಾಡಿ,  ಬಿಜೋಪಚಾರ, ನೀರು ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಬಿಜೋಪಚಾರ ಮಾಡಿದರೆ ಫಸಲಿಗೆ ಮುಂದೆ ಬರುವಂತಹ ರೋಗ ಹಾಗೂ ಮಳೆ ಕಡಿಮೆಯಾದರೂ ಸಹ ಪೈರು ತಡೆಯುತ್ತದೆ. ಮಳೆ ನೀರು ಸಂರಕ್ಷಣೆ ಮಾಡುವುದರಿಂದ ಭೂಮಿಯಲ್ಲಿ ನೀರು ಹಿಂಗಿ ಅಂತರ್ಜಲ ಹೆಚ್ಚುತ್ತದೆ. ರೈತರು ತಮ್ಮ ಹೊಲಗಳಲ್ಲಿ ಬೆಳೆದ ಮಣ್ಣು ಕೊಚ್ಚಿಕೊಂಡು ಹೋಗದಂತೆ ನೋಡಿಕೋಳ್ಳಬೇಕು ಇದಕ್ಕೆ ರೈತರಿಗೆ ಆಸಕ್ತಿ ಇರಬೇಕು ಎಂದರು.
ಕೃಷಿ ತಜ್ಞ ಡಾ.ಪಾಲಣ್ಣ ಮಾತನಾಡಿ ರೈತರು ತಾವು ಬೆಳೆದ ಬೆಳೆಗೆ ರೋಗ ಬಂದಾಗ ಔಷಧಿ ಸಿಂಪಡಿಸುವುದು. ಮುಖ್ಯವಾಗಿ ಅದು ಹೇಗೆ ಬಂದಿದೆ ಇದ್ಕಕೆ ಪರಿಹಾರವೇನು ಎಂದು ಕೃಷಿ ತಜ್ಞರ ಜೊತೆಯಲ್ಲಿ ಚಚರ್ಿಸಿ ಪರಿಹಾರ ಪಡೆದುಕೊಳ್ಳುವಂತೆ ಸೂಚಿಸಿದರು, ರೈತರು ಬೆಳೆ ಬೆಳೆಯುವ ಮುನ್ನ ತಮ್ಮ ಜಮೀನಿನಲ್ಲಿರುವ ಮಣ್ಣನ್ನು ಪರಿಕ್ಷಿಸಿ ಬೆಳೆ ಬೆಳೆಯುವುದರಿಂದ ರೈತರಿಗೆ ಅನೂಕೂಲದ ಜೊತೆಯಲ್ಲಿ ಆಥರ್ಿಕವಾಗಿ ಲಾಭ ಹೊಂದಬಹುದು ಎಂದರಲ್ಲದೆ  ಕೃಷಿ ಭೂಮಿ ಕಡಿಮೆಯಾಗುತ್ತಿದ್ದು ಹೆಚ್ಚು ಹೆಚ್ಚು ಆಹಾರ ಬೆಳೆಯುವ ರಭಸದಲ್ಲಿ ರಸಗೊಬ್ಬರವನ್ನು ಹಾಕುವುದರಿಂದ ಭೂಮಿ ಬರಡಾಗುವುದರ ಜೊತೆಯಲ್ಲಿ ಬೆಳೆಗಳಿಗೆ ರೋಗಗಳು ಹೆಚ್ಚಾಗುತ್ತವೆ ಸಾವಯವ ಗೊಬ್ಬರ ಬಳಕೆ ಕಡಿಮೆಯಾಗುವುದರಿಂದಲೂ ಬೆಳೆಗಳಿಗೆ ಕೀಟಬಾಧೆ ಜಾಸ್ತಿಯಾಗುತ್ತದೆ ಎಂದರು.
     ಸಹಾಯಕ ಕ್ಷéಷಿ ಉಪನಿದರ್ೇಶಕ ಹೆಚ್.ಹೊನ್ನೇದಾಸೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ,  ಚೌದ್ರಿ ಚರಣ್ಸಿಂಗ್ ಭೂ ಸುಧಾರಣೆಯಂತಹ ಕಾರ್ಯಕ್ರಮಗಳನ್ನು ತಂದಿದ್ದಾರೆ,  ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಅನೇಕ ಕೃಷಿಗೆ ಸಂಭಂದಿಸಿದ ಪುಸ್ತಕಗಳನ್ನು ರಚಿಸಿದ್ದಾರೆ, ಇವರ ಜನ್ಮ ದಿನಾಚರಣೆ ಅಂಗವಾಗಿ ಕೃಷಿ ಉತ್ಸವ ಹಾಗೂ ರೈತರ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
     ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ, ತಾಲ್ಲೂಕ್ ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ ,ಲತಾ ವಿಶ್ವೇಶ್ವರಯ್ಯ, ಕವಿತಾಪ್ರಕಾಶ್, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಟರಾಜ್, ಉಪಾದ್ಯಕ್ಷ ನಾಗರಾಜಪ್ಪ, ಜಿಲ್ಲಾ ಪ್ರತಿನಿಧಿಸಿ.ಬಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. 
  ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ಕಾಂತರಾಜ್, ಬಿ.ಎನ್.ಲೋಕೇಶ್, ಜಗದಾಂಬ, ಬಸವರಾಜುರವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಎ.ಪಿ.ಎಂ.ಸಿ ಸದಸ್ಯರ  ಉತ್ತರ ಭಾರತದ ರಾಜ್ಯದ ಎ.ಪಿ.ಎಂ.ಸಿ. ಸ್ಥಳಗಳಿಗೆ ಪ್ರವಾಸ 

ಚಿಕ್ಕನಾಯಕನಹಳ್ಳಿ,ಡಿ.23 : ತಾಲ್ಲೂಕಿನ ಎ.ಪಿ.ಎಂ.ಸಿ ಸದಸ್ಯರು ಸಕರ್ಾರದ ವತಿಯಿಂದ  ಉತ್ತರ ಭಾರತದ ರಾಜ್ಯದ ಎ.ಪಿ.ಎಂ.ಸಿ. ಸ್ಥಳಗಳಿಗೆ ಪ್ರವಾಸ ತೆರಳುವ ಮುನ್ನ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿರವರ ಮಾರ್ಗದರ್ಶನ ಪಡೆಯಲು ಅವರ ನಿವಾಸಕ್ಕೆ ತೆರಳಿದ್ದರು. 
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಉತ್ತರ ಭಾರತದಲ್ಲಿನ ಕೃಷಿ ಮಾರುಕಟ್ಟೆಗಳು ಉತ್ತಮವಾಗಿವೆ ಅಲ್ಲಿನ ಸೇವೆಗಳು ಜನರಿಗೆ ಹತ್ತಿರವಾಗಿದ್ದು ಅಲ್ಲಿನ ಸೇವೆಗಳನ್ನು, ಆಡಳಿತವನ್ನು ತಿಳಿದು ಉತ್ತಮವಾಗಿರುವುದನ್ನು ಚಿಕ್ಕನಾಯಕನಹಳ್ಳಿಗೆ ಜನತೆಗೆ ನೀಡುವಂತೆ ಎ.ಪಿ.ಎಂ.ಸಿ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಎ.ಪಿ.ಎಂ.ಸಿ ಸದಸ್ಯ ಶಿವರಾಜು ಮಾತನಾಡಿ, ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಎರಡು ವರ್ಷಗಳಾಗಿದ್ದು ಜನತೆಗೆ ಉತ್ತಮ ಆಡಳಿತ ನೀಡುತ್ತಿದ್ದೇವೆ, ಉತ್ತರ ಭಾರತ ರಾಜ್ಯಗಳಾದ ದೆಹಲಿ, ಚಂಡಿಗಡ, ಜೈಪುರ, ರಿಶಿಕೇಶ, ಆಗ್ರ, ಹರಿದ್ವಾರ, ಅಮೃತಸರ, ಪ್ರದೇಶಗಳ ಕೃಷಿ ಮಾರುಕಟ್ಟೆಗಳ ಅಧ್ಯಯನಕ್ಕಾಗಿ ಹಾಗೂ ಪ್ರವಾಸವಕ್ಕಾಗಿ 15ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು ಈ ಪ್ರವಾಸಕ್ಕಾಗಿ ಮಾಜಿ ಶಾಸಕರು ಹೆಚ್ಚು ಬೆಂಬಲ ವ್ಯಕ್ತಪಡಿಸಿದ್ದರಲ್ಲದೆ ಅವರ ಮಾರ್ಗದರ್ಶನ ಪಡೆಯುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಸಣ್ಣಯ್ಯ, ದ್ರಾಕ್ಷಾಯಣಮ್ಮ, ಸಿಂಗದಹಳ್ಳಿ ರಾಜ್ಕುಮಾರ್  ಮತ್ತಿತರರು ಉಪಸ್ಥಿತರಿದ್ದರು

Monday, December 22, 2014

ಜಿಲ್ಲೆಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ
ಚಿಕ್ಕನಾಯಕನಹಳ್ಳಿ,ಡಿ.22 :  ಜಿಲ್ಲೆಯ ಮೂರು ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕುಗಳಿಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ ರೂಪಾಯಿ ಬಿ  
ಡುಗಡೆಯಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
    ಪಟ್ಟಣದ ತಾಲ್ಲೂಕು ಕಛೇರಿಯ ಸಭಾಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ 157.88 ಕೋಟಿ ರೂಪಾಯಿಗಳಲ್ಲಿ ಚಿಕ್ಕನಾಯಕನಹಳ್ಳಿಗೆ ಶೇಕಡ 60 ರಷ್ಟು ಅಂದರೆ 95.77ಲಕ್ಷ ರೂಗಳು ಬರಲಿದೆ. ತಿಪಟೂರು ಹಾಗೂ ಗುಬ್ಬಿ ತಾಲ್ಲೂಕುಗಳಿಗೆ ತಲಾ ಶೇಕಡ 20 ರಷ್ಷು ಹಣ ಬಿಡುಗಡೆಯಾಗಿದೆ ಎಂದರು.
ಅಧಿಕಾರಿಗಳು ತಾಲ್ಲೂಕಿನ ಅಭಿವೃದ್ದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುವಂತೆ  ಅಧಿಕಾರಿಗೆ ಸಲಹೆ ನೀಡಿದರಲ್ಲದೆ  ಸಮಯಕ್ಕೆ ಸರಿಯಾಗಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಸರಿಯಾದ ವರದಿ ನೀಡಿದರೆ ಪ್ರತಿ ವರ್ಷ 400 ರಿಂದ 500 ಕೋಟಿ ರೂ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಗೆ  5 ಕೋಟಿ 74 ಲಕ್ಷ ಬಿಡುಗಡೆಯಾಗಿದ್ದು ಈ ಹಣದಲ್ಲಿ ಹೆಚ್ಚುವರಿ ಶಾಲಾ ಕೊಟ್ಟಡಿ ನಿಮರ್ಾಣಕ್ಕೆ 3ಕೋಟಿ 80 ಲಕ್ಷ ರೂಪಾಯಿ, ಶೌಚಾಲಯ ನಿಮರ್ಾಣಕ್ಕೆ 56.22 ಲಕ್ಷ.ರೂ,  ಶಾಲೆಗಳ ಸುತ್ತ ಮುತ್ತ ಕಾಂಪೌಂಡ್ ನಿಮರ್ಾಣಕ್ಕೆ 78.5.ರೂ ಲಕ್ಷ ಶಾಲಾ ಮಕ್ಕಳ ಶುದ್ದ ಕುಡಿಯುವ ನೀರಿನ ಆರ್.ಓ.ಯೋಜನೆಗೆ  84.ಲಕ್ಷ.ರೂ ಹಾಗೂ ದೊಡ್ಡ ಕೊಠಡಿಗಳ ರಿಪೇರಿಗೆ 58.5 ಲಕ್ಷ.ರೂ ಬಿಡುಗಡೆಯಾಗಿದೆ. 
    ಕೃಷಿ ಇಲಾಖೆಯ ವಿವಿಧ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ 3 ಕೋಟಿ 54 ಲಕ್ಷ ಬಿಡುಗಡೆಯಾಗಿದ್ದು 9 ಗ್ರಾಮ ಪಂಚಾಯ್ತಿಗಳ 17 ಹಳ್ಳಿಗಳ 1565 ಹೆಕ್ಟರ್ ಪ್ರದೇಶಗಳಲ್ಲಿ ಕೃಷಿ ಜಲನಯನ ಅಭಿವೃದ್ದಿ ಕಾಮಗರಿಗಳಾದ ಕೃಷಿ ಜಮೀನುಗಳಲ್ಲಿ ಸ್ಥಳದಲ್ಲೇ ಮಣ್ಣು, ನೀರು ಸಂರಕ್ಷಣೆ, ಕೃಷಿ ಹೊಂಡ, ತಡೆಹಣೆಗಳು, ಹಳೇ ಕಟ್ಟಡಗಳ ದುರಸ್ತಿ, ನಾಲ ಬದು ಕಾಮಗರಿಗಳು ಕೈಗೆತ್ತಿಕೋಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಸಣ್ಣಹೊನ್ನೇಗೌಡ ತಿಳಿಸಿದರು.
    ಪಶು ಸಂಗೋಪನಾ ಇಲಾಖೆಗೆ 81 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದ್ದು ಪಶು ಆರೋಗ್ಯ ಶಿಬಿರಗಳಿಗೆ ಕುರಿ, ಮೇಕೆ, ಜಂತುಹುಳ ನಾಶ ಔಷದಿಗೆ, ಜಾನುವಾರಗಳಿಗೆ ಚಿಕಿತ್ಸೆ ಮಾಡುವ ಪಿಲ್ಟರ್ ಕಟ್ಟಡಗಳ ದುರಸ್ಥಿ ಹಾಗೂ ಕಾಂಪೌಂಡ್ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಶಶಿಕುಮಾರ್ ತಿಳಿಸಿದರು. 
    ಸಾರಿಗೆ ಮತ್ತು ಸಂಪರ್ಕ ರಸ್ತೆ ನಿಮರ್ಾಣಕ್ಕೆ 60 ಕೋಟಿ ಹಣ ಬಿಡುಗಡೆಯಾಗಿದ್ದು ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿಗಳ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದು ಜೋಗಿಹಳ್ಳಿಯಿಂದ ಹೋನ್ನೆಬಾಗಿ, ಬುಳ್ಳೆನಹಳ್ಳಿ ಮೂಲಕ ಗುಡ್ಡದ ಪಾಳ್ಯದ ಗ್ರಾಮದವರೆಗೆ 12 ಕಿ.ಮಿವರೆಗೆ ಕಾಕ್ರೆಟ್ ರಸ್ತೆ,  ಗೋಡೆಕೆರೆ, ಬಾಣದೇವರಹಟ್ಟಿ ಮೂಲಕ ಸೋಂಡೆನಹಳ್ಳಿಗೊಲ್ಲರಹಟ್ಟಿ, ಹಾಗೂ ಸೊಂಡೆನಹಳ್ಳಿಯವರಿಗೆ ಗೋಡೆಕೆರೆ, ರಂಗನಾಥಪುರ, ನಡುವನಹಳ್ಳಿ, ಬಗ್ಗನಹಳ್ಳಿಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಜೋಗಿಹಳ್ಳಿಯಿಂದ ಗೊಲ್ಲರಹಳ್ಳಿ ಮುಖಾಂತರ ಗಣಿಗಾರಿಕೆ ನಡೆಯುವ ಅಬ್ಬಿಗೆ ಗುಡ್ಡ ರಸ್ತೆ ನಿಮರ್ಾಣ. ಹಾಗೂ                  ತೀರ್ಥಪುರ, ದೊಡ್ಡರಾಂಪುರ, ಯರೇಕಟ್ಟೆ ಮೂಲಕ ತೀರ್ಥರಾಮೇಶ್ವರ ದೇವಾಲಯದವರೆಗೆ ಕಾಕ್ರಿಂಟ್ ರಸ್ತೆ, ಬರಸಿಡ್ಲಹಳ್ಳಿಯಿಂದ ಚಿಕ್ಕರಾಂಪುರದ ಮೂಲಕ ಎಲ್.ಎಸ್.ಕೋರೆಯವರೆಗೆ ಕಾಂಕ್ರೇಟ್ ರಸ್ತೆ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರು.. 
    ಪರಿಸರ ಹಾಗೂ ಅರಣ್ಯ ಇಲಾಖೆಗೆ 18 ಕೋಟಿ ಬಿಡುಗಡೆಯಾಗಿದ್ದು ಜಾಣೇಹಾರ್,  ಕಾಮನಹಳ್ಳಿ, ತೀರ್ಥರಾಮೇಶ್ವರ ದೇವಾಲಯ ಭಾಗಗಳ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಸಸಿ ನೆಡುವ ಕಾರ್ಯಕ್ರಮ ಜಾಣೇಹಾರ್ ಬಳಿ ಮಿನಿ ಮೃಗಾಲಯ ಹಾಗೂ ಜಾಣೇಹಾರ್ ಬಳಿ ಇರುವ ಬೆಟ್ಟದ ಮೇಲೆ ಪ್ರವಾಸಿ ಮಂದಿರ ನಿಮರ್ಿಸಲು ರೂಪುರೇಶೆ ರಚಿಸಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿ ಕೃಷ್ಣ ನಾಯಕ್ ತಿಳಿಸಿದರು. 
ಜಾಣೇಹಾರ್ ಬೆಟ್ಟದ ಮೇಲೆ ಉತ್ತಮ ಪರಿಸರ ಇರುವುದರಿಂದ ಆ ಸ್ಥಳದಲ್ಲಿ ಪ್ರವಾಸಿ ಮಂದಿರ ನಿಮರ್ಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅರಣ್ಯ ಇಲಾಖೆ ಅಧಿಕಾರಿ ಕೃಷ್ಣನಾಯ್ಕ್ ಸೂಚಿಸದ ಶಾಸಕರು ಗಣಿ ಭಾಗ ಗುಡ್ಡ ಪ್ರದೇಶವಾಗಿರುವುದರಿಂದ ಗುಡ್ಡ ಭಾಗಗಳ ಮಧ್ಯೆ ಅಣೆಕಟ್ಟು (ಡ್ಯಾಂ) ನಿಮರ್ಿಸಿದರೆ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿದರೆ ಎರಡು ಹೋಬಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಲಿದೆ ಎಂದರು .
ಹಾಗೂ ಹೊಸಹಳ್ಳಿಯಿಂದ ಗೊಲ್ಲರಹಳ್ಳಿ, ದಿಬ್ಬದಹಳ್ಳಿ, ಭಾವನಹಳ್ಳಿ ಮುಖಾಂತರ ಹೊನ್ನೆಬಾಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೈಗೆತ್ತಿಕೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗೆ ಸೂಚಿಸಿದ ಅವರು ತಾಲ್ಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆ, ಹೊನ್ನೆಬಾಗಿಯಲ್ಲಿ ನೂತನ ಸಕರ್ಾರಿ ಆಸ್ಪತ್ರೆ  ಹಾಗೂ ಪ್ರಯೋಗ ಶಾಲೆ ಮಾಡಲು ಕ್ರಮಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ರವರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಲೇಜು ಹೆಣ್ಣು ಮಕ್ಕಳ ಹಾಸ್ಟಲ್, ನಿವೇಶನ, ಕಟ್ಟಡ ನಿಮರ್ಾಣಕ್ಕೆ ಹಾಗೂ ದುರಸ್ತಿ, ಮೂಲಭೂತ ಸೌಕರ್ಯಗಳಿಗೆ ಮತ್ತು ಕಾತ್ರಿಕೆಹಾಲ್ ಭಾಗದಲ್ಲಿ ಶಾಲೆ ತೆರೆಯಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಕೆಪಿಟಿಸಿಎಲ್ ಅಧಿಕಾರಿ ರಾಜಶೇಖರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Saturday, December 20, 2014

ಪೋಲಿಸರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿಡಿ. : ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿರವರು ಕರೆ ನೀಡಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಪೋಲಿಸ್ ಇಲಾಖೆ ವತಿಯಿಂದ ತಾಲ್ಲೂಕಿನ ದುಗಡಿಹಳ್ಳಿ ಗ್ರಾಮ ಪಂಚಾಯ್ತಿಯ ಹರಿಜನ ಕಾಲೋನಿಯ ಗ್ರಾಮವನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ತಿಳಿಸಿದರು.
   ಚಿಕ್ಕನಾಯಕನಹಳ್ಳಿಯ 23ಮಂದಿ ಪೋಲಿಸ್ ಸಿಬ್ಬಂದಿ, ಗ್ರಾಮದ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮ ಪಂಚಾಯ್ತಿಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮರವರ ನೇತೃತ್ವದಲ್ಲಿ ದುಗಡಿಹಳ್ಳಿ ಗ್ರಾಮವನ್ನು ಪೋಲಿಸ್ ಸಿಬ್ಬಂದಿಗಳು ಸ್ವಪ್ರೇರಿತರಾಗಿ ಸ್ವಚ್ಛಗಳಿಸಿದರು.
  ದುಗಡಿಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಪೋಲಿಸ್ ಸಿಬ್ಬಂದಿ ಮತ್ತು ಗ್ರಾಮಸ್ಥರೊಂದಿಗೆ ಗ್ರಾಮದ ಚರಂಡಿ, ದೇವಸ್ಥಾನ, ಬೀದಿಗಳಲ್ಲಿದ್ದ ಕಸವನ್ನು ತೆಗೆದು ಸ್ವಚ್ಚಗೊಳಿಸುತ್ತಿದ್ದು ಈ ಬಗ್ಗೆ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿರವರಿಗೂ ತಿಳಿಸಿದ್ದು ಅವರೂ ಗ್ರಾಮದ ಸ್ವಚ್ಛತೆಯನ್ನು ಕಾಪಾಡುವದರ ಬಗ್ಗೆ ತಿಳಿಸಿದ್ದಾರೆ ಎಂದರು.
 ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಗಾಯಿತ್ರಿ, ಕಲಾವತಿ, ಮಲ್ಲಿಕಾಜರ್ುನ್, ವೆಂಕಟೇಶ್, ಬಾಲ್ಕುಮಾರ್, ಮಂಜುನಾಥ್, ನರಸಿಂಹಸ್ವಾಮಿ, ಚನ್ನೆಗೌಡ, ಕುಮಾರ್, ರಮೇಶ್, ಹೋಂ ಗಾಡರ್್ ರವಿಕುಮಾರ್, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆ.ಜಿ.ಬಸವೇಗೌಡ, ಸದಸ್ಯೆ ಶಾರದಮ್ಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


ನಿವೃತ್ತ ನೌಕರರ ದಿನಾಚಾರಣೆ
ಚಿಕ್ಕನಾಯಕನಹಳ್ಳಿ,ಡಿ.20 ; ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿವೃತ್ತ ನೌಕರರ ಸಂಘಟನೆಯು ಬಲಿಷ್ಠವಾಗಿದ್ದು, ಸಂಘಟನೆಯು ಜನಸಾಮಾನ್ಯರ ವಿಶ್ವಾಸ ಗಳಿಸಿ ಜನಮೆಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬಾಬಡೆ ಹೇಳಿದರು.
ಪಟ್ಟಣದಲ್ಲಿ ನೆಡೆದ ನಕರ ರವರ ನಿವೃತ್ತ ನೌಕರರ ದಿನಾಚಾರಣೆ ಹಾಗೂ 29ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರು ಸಂಘಟನೆಗಳನ್ನು ಮಾಡುವುದರ ಜೊತೆಗೆ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು, ನಿವೃತ್ತ ನೌಕರರಲ್ಲಿ ಬಹುಪಾಲು ಮಂದಿ ಶಿಕ್ಷಕರಿದ್ದು ನಿವೃತ್ತ ಶಿಕ್ಷಕರು ಕಮಿಟಿಯೊಂದನ್ನು  ರಚಿಸಿ ಹಿಂದುಳಿದ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಯ ಜನಕ್ಕೆ ಶಿಕ್ಷಣ, ಮಾರ್ಗದರ್ಶನ, ನೀಡಿ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದರು. ನಕರ ರವರು ನಿವೃತ್ತ ನೌಕರರ ಪಿಂಚಣೆಯ ವಿಷಯವಾಗಿ ಕೇಂದ್ರ ಸಕರ್ಾರದ ವಿರುದ್ದ ಸುಪ್ರೀಂ ಕೋಟರ್್ನಲ್ಲಿ ಹೋರಾಟ ನೆಡಸಿದರ ಪರಿಣಾಮ ನ್ಯಾಯಾಲಯವು ಸಕರ್ಾರಿ ನಿವೃತ್ತರಿಗೆ ಪಿಂಚಣಿ ಒಂದು ಹಕ್ಕು ಇದು ಪ್ರತಿಯೊಬ್ಬರಿಗೂ ಸಿಗಬೇಕೆಂದು ತೀಪರ್ು ನೀಡಿದ್ದು ಈ ತೀಪರ್ಿನ ಕೀತರ್ಿ ನಕರರವರಿಗೆ ಸಲ್ಲುತ್ತದೆ ಎಂದರಲ್ಲದೆ ಈ ಕುರುಹಾಗಿ ನಕರ ಮತ್ತು ನಿವೃತ್ತ ನೌಕರರ ದಿನಾಚಾರಣೆಯನ್ನು ನೆಡಸಲಾಗುತ್ತದೆ ಎಂದರು.
  ತುಮಕೂರಿನ ಸ.ಶಿ.ಇಲಾಖೆಯ ಉಪನಿದರ್ೇಶಕರಾದ ಈಶ್ವರಪ್ಪ ಮಾತನಾಡಿ ವಯಸ್ಸು ದೇಹಕ್ಕೆ ಮತ್ರ ಮನಸಿಗೆ ಅಲ್ಲ, ನಿವೃತ್ತಿ ಹೊದಿದ್ದರು ಸಮಾಜಮುಖಿಯಾಗಿ ಕೆಲಸ ಮಾಡುವ ಹುಮ್ಮುಸ್ಸನ್ನು ನಿವೃತ್ತ ನೌಕರರು ಹೊಂದಿದ್ದಾರೆ, ಗ್ರಾಮೀಣಾ ಭಾಗದಲ್ಲಿರುವ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಆವರಣಗಳು ಸ್ವಚ್ಛತೆಯಿಂದ ದೂರವಿದ್ದು ಆ ಭಾಗದ ಪಿ.ಡಿ.ಒ. ಮತ್ತು ಎಸ್.ಡಿ.ಎಮ್.ಸಿ. ಹಾಗೂ ಶಿಕ್ಷಕರು ಜವಾಬ್ದಾರಿ ವಹಿಸಿ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳಿಗೆ ಸುಂದರ ಪರಿಸರವನ್ನು ರೂಪಿಸಬೇಕು ಎಂದರು. 
ಕಾರ್ಯಕ್ರಮದಲ್ಲಿ 75ವರ್ಷ ತುಂಬಿದ ನಿವೃತ್ತ ಹಿರಿಯ ನೌಕರರಿಗೆ ಮತ್ತು ಎಸ್.ಎಸ್.ಎಲ್.ಸಿ ಹಾಗು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು.
ತಾ.ನಿ.ನೌ.ಸಂಘದ ಅಧ್ಯಕ್ಷ ಸಿ.ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜರಾವ್, ಗುಬ್ಬಿಯ ಸಂಘದ ಅಧ್ಯಕ್ಷ ರಾಮಯ್ಯ, ಸಂಘದ ಉಪಾಧ್ಯಕ್ಷೆ ಶಾರದಮ್ಮ, ಸಹ ಕಾರ್ಯದಶರ್ಿ ರಾಜಪ್ಪ, ಕಾಸಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ , ಜಿ.ಪಂ.ಮಾಜಿ ಅಧ್ಯಕ್ಷೆ ಜಯಮ್ಮದಾನಪ್ಪ, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು. ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಂಗನಾಥ್ ನಿರೂಪಿಸಿದರು. ಸಿ.ಕೆ.ವಿಶ್ವೇಶ್ವರಯ್ಯ ವಂದಿಸಿದರು.


Friday, December 19, 2014


ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ 
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ 28 ಗ್ರಾಮ ಪಂಚಾಯ್ತಿಗಳಲ್ಲಿ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಾದ ಕುರಿಶೆಡ್, ದನದ ಕೊಟ್ಟಿಗೆ, ಕೋಳಿಫಾರಂ ಹಾಗೂ ಶೌಚಾಲಯಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ಗೋವಿಂದರಾಜುರವರನ್ನು ಫಲಾನುಭವಿಗಳು ಮನವಿ ಸಲ್ಲಿಸಿದರು.
ಪಟ್ಟಣದ  ತಾ.ಪಂ.ಸಭಾಂಗಣದಲ್ಲಿ ನಡೆದ ತಿಪಟೂರು ಉಪವಿಭಾಗದ ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ ಫಲಾನುಭವಿಗಳು, ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಿಮರ್ಿಸಿಕೊಂಡು ಒಂದು ವರ್ಷ ಕಳೆದರೂ ಹಣ ಬಿಡುಗಡೆ ಯಾಗಿಲ್ಲವೆಂದು ಒತ್ತಾಯಿಸಿದರು ಇದಕ್ಕೆ   ಪ್ರತಿಕ್ರಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲೆಯ 82 ಗ್ರಾಮ ಪಂಚಾಯ್ತಿಗಳಲ್ಲಿ ಶೌಚಾಲಯಗಳು ನಿಮರ್ಿಸಿಕೊಳ್ಳಲು ಗುತ್ತಿಗೆದಾರರು ಕೂಲಿ ಕಾಮರ್ಿಕರಿಗೆ ಉದ್ಯೋಗ ಖಾತ್ರಿ ಕಾಡರ್್ನ್ನು ತಮ್ಮ ಬಳಿಯೇ ಇಟ್ಟುಕೊಂಡು ಜೆ.ಸಿ.ಬಿ ಮತ್ತಿತರ ಯಂತ್ರಗಳ ಮೂಲಕ ಕಾಮಗಾರಿಗಳನ್ನು ಮಾಡಿರುವುದರಿಂದ 60 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ವರದಿಯ ಹಿನ್ನಲೆಯಲ್ಲಿ ಸಕರ್ಾರ ಎನ್.ಆರ್.ಇ.ಜಿ ಯೋಜನೆಯಲ್ಲಿ ಕಂಪ್ಯೂಟರ್ನ್ನು ಸ್ಥಗಿತಗೊಳಿಸಿದೆ ಆದ್ದರಿಂದ ಈಗ ವೈಯಕ್ತಿಕವಾಗಿ ನಿಮರ್ಿಸಿಕೊಂಡಿರುವ ಶೌಚಾಲಯಗಳು, ಕುರಿಶೆಡ್, ಕೊಟ್ಟಿಗೆ, ಕೋಳಿಫಾರಂಗಳ ಬಗ್ಗೆ ಪಟ್ಟಿ ನೀಡಿದರೆ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಶಿವಾನಂದ್, ಮುದ್ದೇನಹಳ್ಳಿ ಮಾಜಿ ಗ್ರಾ.ಪಂ.ಅಧ್ಯಕ್ಷ ಸಾಲ್ಕಟ್ಟೆಸ್ವಾಮಿ, ನಾಗರಾಜನಾಯ್ಕ, ಎಂ.ಎಲ್.ಗಂಗಾಧರಯ್ಯ, ದಲಿತ ಮುಖಂಡ ಗೋವಿಂದರಾಜು, ತಾ.ಬಂಜಾರ ಸಮಾಜದ ಸಂಘದ ಕಾರ್ಯದಶರ್ಿ ಶಶಿಧರನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.



ಡಿಸಂಬರ್ 23ರಂದು ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : 2014-15 ನೇ ಸಾಲಿನ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮವನ್ನು ಡಿಸಂಬರ್ 23ರಂದು ಬೆಳಗ್ಗೆ 11ಕ್ಕೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಲಾಗಿದೆ ಎಂದು ಕೃಷಿ ಅಧಿಕಾರಿ ಹೆಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸಮಗ್ರ ಕೃಷಿ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಾಗೂ ಕೃಷಿ ನಿದರ್ೇಶಕರ ಕಛೇರಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪೆಡದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹ : ಡಾ|| ಜಿ. ಪರಮೇಶ್ವರ್  

ಚಿಕ್ಕನಾಯಕನಹಳ್ಳಿ:  ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹರಾಗಿರುತ್ತೇವೆ ಇಲ್ಲದಿದ್ದರೆ ಏಕಮುಖಿ ಜೀವನ ಅನುಭವಿಸಬೇಕಾಗುತ್ತದೆ ಎಂದು ಹೃದ್ರೋಗ ತಜ್ಞ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಡಾ|| ಜಿ. ಪರಮೇಶ್ವರ್ ಹೇಳಿದರು.
ಪಟ್ಟಣದಲ್ಲಿ ತಾ|| ಒಕ್ಕಲಿಗ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬದುಕಿನ ದಿನನಿತ್ಯದಾಟದಲ್ಲಿ ಕೇವಲ ತಮ್ಮ ಬದುಕಿಗೆ ಒತ್ತು ನೀಡುವ ಜೊತೆಗೆ ಸಮಾಜದಲ್ಲಿನ ನಿರ್ಗತಿಕರಿಗೆ ಸ್ವಲ್ಪ ಮಟ್ಟಿನ ಸೇವೆ ಸಲ್ಲಿಸಿ ಸಮಾಜದ ಏಳಿಗೆಗೆ ಒತ್ತು ನೀಡಬೇಕು ಆಗ ನಮ್ಮನ್ನು ಅನ್ಯ ಸಮಾಜದವರು ಕೂಡ ಗೌರವಿಸುತ್ತಾರೆ ನಮ್ಮನ್ನು ಪುರಸ್ಕಾರ ಭಾವದಿಂದ ನೋಡುತ್ತಾರೆ  ಎಂದರು.
ಕೃಷಿ ಬದುಕನ್ನೇ ಅವಲಂಬಿಸಿಕೊಂಡು ಬಂದಿದ್ದ ಒಕ್ಕಲಿಗ ಸಮಾಜ ಬೇರೆ ಬೇರೆ ಕ್ಷೇತ್ರದಲ್ಲೂ ದುಡಿಯುತ್ತಾ ಬರುತ್ತಿದೆ ಅದಕ್ಕೆ ಸಾಮಾಜಿಕ ಸೇವೆ ಕೃಷಿಕ್ಷೇತ್ರ ಶಿಕ್ಷಣ ಕ್ಷೇತ್ರದ ಈ ಮೂಲಕ ಗುರುತಿಸಿಕೊಂಡಿರುವ ನಮ್ಮ ಸಮಾಜದ ಬಂಧುಗಳನ್ನು ಸನ್ಮಾನಿಸುತ್ತಿರುವುದು ಖುಷಿ ತಂದಿದೆ. ತಾಲ್ಲೂಕಿನಲ್ಲಿ ನಮ್ಮ ಸಂಘ ಅಸ್ತಿತ್ವಕ್ಕೆ ಬಂದು 1 ವರ್ಷವಾಗಿದ್ದು ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಸದಸ್ಯತ್ವದ ನೊಂದಣಿ ಕಾರ್ಯ ಆಗಬೇಕಿದೆ ಮುಂದಿನ ದಿನದಲ್ಲಿ ಕೆಂಪೇಗೌಡ ಬಡಾವಣೆ ಸಮುದಾಯ ಭವನ ನಿಮರ್ಾಣಕಾರ್ಯಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ತಾ|| ಒಕ್ಕಲಿಗ ಸಂಘದ ಕಾರ್ಯದಶರ್ಿ ಬಿ.ಜಿ.ರಾಜಣ್ಣ ಮಾತನಾಡಿ,  ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆವುಳ್ಳ ಸಮಾಜವಾದರೂ ಸಂಘ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ನಮ್ಮ ಸಮಾಜದ ಬಂಧುಗಳಾದ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಬಿ.ಪ್ರಕಾಶ್ , ಜಿಲ್ಲಾ ಕೃಷಿ ಪ್ರಶಸ್ತಿ ಪಡೆದ ಬಿ.ಎನ್.ಲೋಕೇಶ್ ತಾ|| ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಹೆಚ್.ಪ್ರಕಾಶ್ ಇವರುಗಳನ್ನು ಉತ್ತಮ ಸ್ಥಾನಕ್ಕೇರಿಸಲು ಸಹಕರಿಸಿದ ಎಲ್ಲರನ್ನೂ ನಾವು ಸ್ಮರಿಸಬೇಕು ಇವರನ್ನು ನಮ್ಮ ಸಂಘ ಸನ್ಮಾನಿಸುತ್ತಿರುವುದು ಕೂಡ ಇವರುಗಳ ಜವಬ್ದಾರಿಯನ್ನು ಹೆಚ್ಚಿಸುವ ಕರೆ ಗಂಟೆ ಎಂದು ಭಾವಿಸಿ ಇವರಿಂದ ಎಲ್ಲಾ ಸಮಾಜದ ಬಂದುಗಳಿಗೆ ಸೇವೆ ಲಭಿಸಲಿ ಎಂದರು.
ಈ ಸಮಾರಂಭದಲ್ಲಿ ಜಿ.ಶಾಂತ್ರಾಜು, ಪುರಸಭಾ ಸದಸ್ಯ ರಾಜಶೇಖರ್, ವಕೀಲ ಶ್ರೀನಿವಾಸಮೂತರ್ಿ, ಕೆ.ಜಿ.ಕೃಷ್ಣೇಗೌಡ ಮೊದಲಾದವರು ಉಪಸ್ಥಿತರಿದ್ದರು.


Thursday, December 11, 2014

ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿ : ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್

                                
ಚಿಕ್ಕನಾಯಕನಹಳ್ಳಿ,ಡಿ.11 : ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿದರೆ ಅವಸರದಲ್ಲಿ ತಮ್ಮ ವಸ್ತುಗಳನ್ನು ಬಿಟ್ಟು ಹೋಗಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಹಿಂಪಡೆಯಲು ಸಹಾಯವಾಗುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಪೋಲಿಸ್ ಇಲಾಖೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಹನ ಚಾಲನೆ ಮಾಡುವವರು ಡಿ.ಎಲ್, ಇನ್ಸುರೆನ್ಸ್, ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯವಾಗಿದೆ ಇದರಿಂದ ವಾಹನ ಚಾಲಕರಿಗೆ ಹೆಚ್ಚಿನ ಅನುಕೂಲವಿದೆ ಎಂದರಲ್ಲದೆ, ವಾಹನ ಚಾಲನೆ ಮಾಡುವವರು ಡಿ.ಎಲ್ ಹೊಂದಿರದಿದ್ದರೆ ಆಕಸ್ಮಿಕವಾಗಿ ಅಪಘಾತವಾದಾಗ ವಾಹನ ಚಾಲನೆ ಮಾಡುತ್ತಿದ್ದವನ ಹಾಗೂ ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಾಗುತ್ತದೆ ಹಾಗೂ ವಾಹನಕ್ಕೆ ಇನ್ಸುರೆನ್ಸ್ ಮತ್ತು ರಿಜಿಸ್ಟ್ರೇಷನ್ ಮಾಡಿಸಿದ್ದರೆ ಅಪಘಾತವಾದಾಗ ನೊಂದ ವ್ಯಕ್ತಿಯ ಚಿಕಿತ್ಸೆಗೆ ಇನ್ಸುರೆನ್ಸ್, ರಿಜಿಸ್ಟ್ರೇಷನ್ ಸಹಾಯವಾಗಲಿದೆ ಎಂದರು. 
ಇನ್ಸುರೆನ್ಸ್ ಮಾಡಿಸುವವರು ಪೂತರ್ಿ ಮಾಡಿಸಿದರೆ ವಾಹನವು ಜಖಂಗೊಂಡಾಗ, ಸ್ಪೋಟಗೊಂಡಾಗ  ಚಾಲಕರಿಗೆ ಇನ್ಸುರೆನ್ಸ್ ಪೂತರ್ಿ ಹಣ ದೊರಯಲಿದೆ ಅಲ್ಲದೆ ಎಲ್ಲಾ ರೀತಿಯಲ್ಲೂ  ಅನುಕೂಲವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಶಾಲಾ ಮಕ್ಕಳನ್ನು ಆಟೋದಲ್ಲಿ ಶಾಲೆಗೆ ಕರೆದಯ್ಯುವಾಗ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಒಂದು ಬಾರಿಯಲ್ಲದಿದ್ದರೆ ಎರಡು ಬಾರಿ ಟ್ರಿಪ್ ಮಾಡಿರಿ ಆದರೆ ಮಕ್ಕಳಿಗೆ ತೊಂದರೆ ಮಾಡಬೇಡಿ ಎಂದರು.
ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ಪೈಪೋಟಿ ಮಾಡದೆ ತಮ್ಮ ವಾಹನವನ್ನು ನಿಲುಗಡೆ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ ಒಬ್ಬರ ನಂತರ ಒಬ್ಬರಂತೆ ಪ್ರಯಾಣಿಕರನ್ನು ಕರೆದಯ್ಯಲು ಸಲಹೆ ನೀಡಿದ ಅವರು ತಾಲ್ಲೂಕು ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ತಾಲ್ಲೂಕಿನ ರಸ್ತೆಯ ಮೂಲಕ ಯಾರು ಸಂಚರಿಸುತ್ತಾರೆ ಎಂಬುದು ನಮಗೆ ತಿಳಿಯುವುದಿಲ್ಲ ಸದಾ ಸಂಚರಿಸುತ್ತಿರುವ ವಾಹನ ಚಾಲಕರು ಶಂಕಿತ ವ್ಯಕ್ತಿಗಳ ಮಾಹಿತಿಯನ್ನು ಪೋಲಿಸರಿಗೆ ನೀಡುವಂತೆ ತಿಳಿಸಿದರು.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರತಿ ಇಲಾಖೆಗಳಿಗೂ ಸಾರ್ವಜನಿಕರ ಸಹಾಯ ಅಗತ್ಯವಾಗಿದ್ದು ಸಾರ್ವಜನಿಕರು ಅಧಿಕಾರಿಗಳ ಜೊತೆ ಕೈಜೋಡಿಸುವ ಮೂಲಕ ಅವರ ಕರ್ತವ್ಯಕ್ಕೆ ನೆರವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ, ಪುರಸಭಾ ಸದಸ್ಯ ಸಿ.ರಾಜಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.