Tuesday, August 16, 2011







ಸೆ.17ರಂದು ಚಿ.ನಾ.ಹಳ್ಳಿ ತಾ.4ನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಆ.16 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೆಪ್ಟಂಬರ್ 17ರ ಶನಿವಾರದಂದು ಪಟ್ಟಣದಲ್ಲಿ ನಡೆಸಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.ಇತ್ತೀಚಿಗೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮತಿಯಲ್ಲಿ ಸಂತ ಜೋಸೆಫರ ಕಾಲೇಜು ಬೆಂಗಳೂರಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಿದ್ದು ಇವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಮಾನ ಪ್ರಭುತ್ವವುಳ್ಳವರಾಗಿದ್ದು ಎರಡೂ ಭಾಷೆಯಲ್ಲಿ ಸುಮಾರು 26 ಕೃತಿಗಳನ್ನು ರಚಿಸಿದ್ದಾರೆ. ಕವಿ ಹೃದಯದ ದಯಾನಂದರವರು 10 ಕವನ ಸಂಕಲನಗಳಲ್ಲದೆ, ಅನುವಾದ ಮತ್ತು ಮೂಲ ಜೀವನ ಚಿತ್ರಣವನ್ನು ರಚಿಸಿ ಖ್ಯಾತರಾಗಿದ್ದು ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮೇಜರ್ ಡಿ.ಚಂದ್ರಪ್ಪರವರು ಉಪಸ್ಥಿತರಿದ್ದು ಇವರನ್ನು ಆಯ್ಕೆಗೆ ಅನುಮೋದಿಸಿ ಶುಭಾಷಯಗಳನ್ನು ತಿಳಿಸಿದ್ದಾರೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.






ಚಿಕ್ಕನಾಯಕನಹಳ್ಳಿ,ಆ.16 : ರಾಷ್ಟ್ರದ ಮುಂದಿರುವ ಸವಾಲುಗಳನ್ನು ಎದುರಿಸುವಲ್ಲಿ ಸತ್ಯ ಅಹಿಂಸೆ ಮತ್ತು ನ್ಯಾಯ ಪ್ರತಿಪಾದಿಸಬೇಕೆಂದು ಪ್ರೊ.ಸಿ.ಚನ್ನಬಸಪ್ಪ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇನಲ್ಲಿ 64ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಪ್ರಾಂಶುಪಾಲ ಕೆ.ಸಿ.ಬಸಪ್ಪರವರು ಮಾತನಾಡಿ ಸ್ವಾತಂತ್ರದ ಅಗತ್ಯತೆ ಮತ್ತು ಅದರ ಪ್ರಭಾವವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕದಿಂದ ವಿದ್ಯಾಥರ್ಿಗಳು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನ ಕಾರ್ಯವನ್ನು ಎನ್.ಎಸ್.ಎಸ್ ಅಧಿಕಾರಿಗಳಾದ ಸಿ.ಚನ್ನಬಸಪ್ಪ, ಡಿ.ಎಸ್.ಲೋಕೇಶ್ರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು.

Monday, August 15, 2011







ಸಾಂಸ್ಕೃತಿಕ, ಕ್ರೀಡಾ, ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆ ಸಮಾರಂಭಚಿಕ್ಕನಾಯಕನಹಳ್ಳಿ,ಆ.15 : ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 18ರ ಗುರುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ರಾಮಕೃಷ್ಣ ವಿವೇಕಾನಂದಾಶ್ರಮದ ಮುಖ್ಯಸ್ಥರಾದ ವೀರೇಶಾನಂದ ಸರಸ್ವತಿ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ(ಮೈನ್ಸ್) ಆಗಮಿಸುವರು.ಈ ಸಂದರ್ಭದಲ್ಲಿ ಪಾಂಡವಪುರ ವಿಜ್ಞಾನ ಕೇಂದ್ರದ ಜೆ.ಬಿ.ಸಂತೋಷ್ಕುಮಾರ್ ಪವಾಡ ರಹಸ್ಯ ಬಯಲು ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.15 : ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಡಶಾಲೆಗಳ ಕ್ರೀಡಾಕೂಟ ಸಮಾರಂಭವನ್ನು ಇದೇ 17 ಮತ್ತು 18 ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣ ಹಾಗೂ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದು ಇ.ಓ ಎನ್.ಎಂ.ದಯಾನಂದ್ ವಂದನಾ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾ.ಶಿ.ಇ ಉಪನಿದರ್ೇಶಕ ಬಿ.ಮೋಹನ್ಕುಮಾರ್, ಜಿ.ಪಂ.ಸದಸ್ಯರಾದ ಮಂಜುಳ ಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾರಂಗಸ್ವಾಮಿ, ನಿಂಗಮ್ಮರಾಮಯ್ಯ, ಎಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತಿಮ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಪ್ರೌ,ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಸಿ.ಪಿ.ಐ ಕೆ.ಪ್ರಭಾಕರ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಶೋಭಾ ಸಿ.ಬಸವರಾಜು, ಉಪಸ್ಥಿತರಿರುವರು.

Saturday, August 13, 2011



ಸಂಘಟನೆ ಹಿಂದುಳಿವಿಕೆಗೆ ಸಂಘಟನೆಯ ಮುಖಂಡರೇ ಕಾರಣಚಿಕ್ಕನಾಯಕನಹಳ್ಳಿ,ಆ.13 :

ಪ್ರತಿಯೊಂದು ಸಮಾಜದಲ್ಲೂ ಸಂಘಟನೆ ಬೆಳೆದಿದೆ ಆದರೆ ಸಂಘಟನೆಯಲ್ಲಿನ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ತಳ ಮಟ್ಟದಲ್ಲಿ ಸಂಘಟನೆ ಬೆಳೆಸುತ್ತಿಲ್ಲ ಎಂದು ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ವಿಷಾಧಿಸಿದರು. ಪಟ್ಟಣದ ಕನಕ ಭವನದಲ್ಲಿ ನಡೆದ ಕನಕ ಭವನದ ಮೊದಲನೇ ಹಂತದ ಕಾಮಗಾರಿ ಚಾಲನಾ ಸಮಾರಂಭ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯ ಮೇಲ್ವಿಚಾರಣೆ ವಹಿಸಿಕೊಳ್ಳುವವರು, ಸಂಘಟನೆಯ ನಿರ್ವಹಣೆ ನೆರವೇರಿಸುವವರು ಸ್ವಾರ್ಥವನ್ನು ಬಿಟ್ಟು ಸಮಾಜದ ಸಂಘಟನೆಗಾಗಿ ಶ್ರಮಿಸಿದರೆ ಸಂಘಟನೆ ತಾನಾಗಿಯೇ ಒಗ್ಗೂಡುತ್ತದೆ, ಅವರು ಅಸೂಹೆ, ದ್ವೇಷ, ಕೆಡುಕುಗಳನ್ನು ಬಿಡಬೇಕು ಎಂದರಲ್ಲದೆ, ಸ್ವಾಥರ್ಿಗಳು ಹೆಚ್ಚಾಗಿ ಕೆಡುಕುಗಳನ್ನು ಉಂಟು ಮಾಡುತ್ತಾರೆ ಅವರು ಸರಿದಾರಿಯಲ್ಲಿ ನಡೆದರೆ ಸಂಘಟನೆಯು ಸಮಾಜದ ಎಲ್ಲರೊಂದಿಗೆ ಬೆರೆಯುತ್ತದೆ ಎಂದ ಅವರು ಕನಕ ಭವನವು ತಾಲ್ಲೂಕಿನಲ್ಲಿ ಬಿಟ್ಟರೆ ಜಿಲ್ಲೆಯ ಬೇರೆ ಯಾವ ಭಾಗದಲ್ಲೂ ಇಲ್ಲದಿರುವುದು ತಾಲ್ಲೂಕುಗಳಲ್ಲಿನ ಸಂಘಟನೆಯ ಕೊರತೆಯನ್ನು ಎತ್ತಿತೋರುತ್ತದೆ ಎಂದು ವಿಷಾದಿಸಿದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಸಂಗೊಳ್ಳಿರಾಯಣ್ಣನು ಸ್ವಾಮಿನಿಷ್ಠೆ, ದೇಶಭಿಮಾನದಿಂದ ಸ್ವಾತಂತ್ರಕ್ಕಾಗಿ ದುಡಿದವರು, ರಾಯಣ್ಣ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ತಮ್ಮ ಸ್ವಂತ ಛಲ, ನಂಬಿಕೆಯಿಂದ ಹೋರಾಡಿದವರು, ಅವರಂತೆ ಆತ್ಮಸ್ಥೈರ್ಯದಿಂದ ದುಡಿದಾಗಲೇ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿ ವ್ಯಕ್ತಿ ಏಳಿಗೆ ಕಾಣಲು ಸಾಧ್ಯ ಎಂದ ಅವರು ಕನಕ ಭವನದ ಕಾಮಗಾರಿಗೆ 5 ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದ ಅವರು, ಮೊದಲ ಕಂತಿನಲ್ಲಿ 3 ಲಕ್ಷ ರೂ ಹಾಗೂ ಡಿಸಂಬರ್ ನಂತರ 2 ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ ಜವಳಿ ಉದ್ಯಮದಲ್ಲಿ ಬಟ್ಟೆಗೆ ಸಿಗುವ ಬೆಲೆಯಂತೆ ಉಣ್ಣಗೆ ಸಿಗುತ್ತಿಲ್ಲ ಇದರಿಂದ ಉಣ್ಣೆ ಉತ್ಪಾದನೆ ಮಾಡುವವರು ಆಥರ್ಿಕ ಸಬಲತೆಯಿಂದ ದೂರವಿದ್ದಾರೆ, ನೇಕಾರರು ತಮ್ಮ ಏಳಿಗೆಗಾಗಿ ಸಂಘಟನೆಯ ಮೂಲಕ ಹೋರಾಡಬೇಕು ಎಂದರು. ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಸಮಾಜದಲ್ಲಿ ಸಂಘಟನೆ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣ ಕೀಳರಿಮೆ, ಹಿಂಜರಿತನ ಇವುಗಳನ್ನು ಮೀರಿ ನಮ್ಮನ್ನು ನಾವು ಮೇಲು ಎಂದು ಭಾವಿಸಿದಾಗಲೇ ಸಂಘಟನೆ ಬೆಳೆಯುತ್ತದೆ ಎಂದ ಅವರು ತಾಲ್ಲೂಕಿನಲ್ಲಿ ಸಾಂಘಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಜಾತಿ ವಿಷಯಗಳು ಬಂದಾಗ ಸಂಘಟನೆ ಹಿಂದುಳಿಯುತ್ತದೆ ಎಂದ ಅವರು, ಜಾತಿ ಸಂಘಟನೆ ಮಾಡಬೇಕೆಂದಾಗ ಬೇರೆ ಜಾತಿಯನ್ನು ಹಿಂದಿಕ್ಕಬೇಕು ಎಂಬ ಭಾವನೆ ಬರಬಾರದು ಬೇರೆ ಜಾತಿಯ ಜೊತೆಗೆ ಅವರವರ ಜಾತಿಯನ್ನು ಮುಖ್ಯವಾಹಿನಿಗೆ ತರುವ ಮಾರ್ಗಗಳನ್ನು ಸಂಘಟನೆಯ ಮೂಲಕ ಬೆಳಸಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಂಘಟನೆ ಎಂದ ಮೇಲೆ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಅಭಿವೃದ್ದಿಯತ್ತ ಕೊಂಡೊಯ್ಯಬೇಕಾಗಿದೆ, ಕನಕ ಭವನದ ಕಾಮಗಾರಿಗಾಗಿ ತಮ್ಮ ಅನುದಾನದಲ್ಲಿ 10 ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಭಾಜಪ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಜಿ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಭೈರವ ಮೈನ್ಸ್ ಮಾಲೀಕ ಸಿ.ಡಿ.ಸುರೇಶ್, ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಾಜಣ್ಣ, ರಂಗಸ್ವಾಮಯ್ಯ , ರೇವಣ್ಣ ಒಡೆಯರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪಲ್ಲಕ್ಕಿ ಬಸವರಾಜು ಸ್ವಾಗತಿಸಿದರೆ, ರವಿಕುಮಾರ್ ನಿರೂಪಿಸಿ, ವಂದಿಸಿದರು.

Friday, August 12, 2011

ವೀರಶೈವನೌ.ಕ್ಷೇ.ಸಂಘದಿಂದಪ್ರತಿಭಾ ರಸ್ಕಾರಚಿಕ್ಕನಾಯಕನಹಳ್ಳಿ,ಆ.12 : ತಾಲ್ಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವೀರಶೈವ ವಿದ್ಯಾಥರ್ಿಗಳಿಗೆ 2010-11ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ , ದ್ವಿತೀಯ ಪಿಯುಸಿ, ಹಾಗೂ ಬಿ.ಎ, ಬಿಎಸ್.ಸಿ. ಬಿಕಾಂಗಳಲ್ಲಿ ಶೇ.80 ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅಜರ್ಿ ಆಹ್ವಾನಿಸಲಾಗಿದೆ.ತಾಲ್ಲೂಕಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು ಮಾತ್ರ ಆಗಸ್ಟ್ 20ರೊಳಗೆ ಅಜರ್ಿಗಳನ್ನು ಜೆರಾಕ್ಸ್ ಅಂಕಪಟ್ಟಿಯನ್ನು ಮುಖ್ಯ ಶಿಕ್ಷಕರ ದೃಡೀಕರಣದೊಂದಿಗೆ ಟಿ.ಬಿ.ಮಲ್ಲಿಕಾಜರ್ುನಯ್ಯ ಸಂಸ್ಕೃತ ಶಿಕ್ಷಕರು, ಜ್ಞಾನಪೀಠ ಪ್ರೌಡಶಾಲೆ, ಚಿಕ್ಕನಾಯಕನಹಳ್ಳಿ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ 9880672343, 9448049821 ದೂರವಾಣಿಗೆ ಸಂಪಕರ್ಿಸಲು ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾ.ಅ.ಯೋಜನೆ ರೈತರಿಗೆ ಆಥರ್ಿಕ ಶಿಸ್ತು ಮೂಡಿಸುತ್ತಿದೆ.ಚಿಕ್ಕನಾಯಕನಹಳ್ಳಿ,ಆ.12 : ಗ್ರಾಮಗಳ ಅಭಿವೃದ್ದಿಯ ಜೊತೆಗೆ ಜನರಲ್ಲಿ ಶಿಸ್ತು, ಬದ್ದತೆ, ವ್ಯವಹಾರ ಚಟುವಟಿಕೆ ಹಾಗೂ ಬದುಕುವ ಕಲೆಯನ್ನು ಬದಲಾಯಿಸುವ ಗುರಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಯೋಜನೆಯಾಗಿದೆ ಎಂದು ಸಂಘದ ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ಹೇಳಿದರು.ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು ಸಾಮಾಜಿಕ ಬದುಕಿನಲ್ಲಿ ಆಥರ್ಿಕ ಅಭಿವೃದ್ದಿಯೊಂದಿಗೆ ಸರ್ವತೋಮುಖ ಬೆಳವಣಿಗೆ ಹೊಂದಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಸಮಾರಂಭದಲ್ಲಿ ತಾ.ಪಂ.ಸದಸ್ಯ ನಿರಂಜನಮೂತರ್ಿ, ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರವಿಚಂದ್ರ ನಿರೂಪಿಸಿದರೆ ಸೇವಾ ಪ್ರತಿನಿಧಿ ಶಂಕರಪ್ಪ ವಂದಿಸಿದರು.

ಸ್ವತಂತ್ರ ದಿನಾಚರಣೆ ಸಂಭ್ರಮಚಿಕ್ಕನಾಯಕನಹಳ್ಳಿ,ಆ.12 : ಸ್ವಾತಂತ್ರ್ಯ ದಿನಾಚರಣಾ ಸಮಾರಂಭವನ್ನು ಆಗಸ್ಟ್ 15ರ ಬೆಳಗ್ಗೆ 8.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಧ್ವಜಾರೋಹಣದ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ರೈತ ಮುಖಂಡ ಸತೀಶ್ ಕೆಂಕೆರೆ, ಆಂಜನೇಯ ದೇವಾಸ್ಥನದ ಕನ್ವೀನರ್ ಚಂದ್ರಶೇಖರಶೆಟ್ಟರು, ಶ್ರಮಿಕ ಜೀವಿ ಶಿವಣ್ಣರವರಿಗೆ ಸನ್ಮಾನಿಸಲಾಗುವುದು.ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷ ಬಿಬಿಪಾತೀಮ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್.ನಾರಾಯಣರಾವ್ ಉಪಸ್ಥಿತರಿರುವರು.ವಿ
ಕನಕ ಭವನದ ಕಾಮಗಾರಿ ಚಾಲನೆ, ಸಂಗೊಳ್ಳಿ ರಾಯಣ್ಣನ 215ನೇ ಜಯಂತೋತ್ಸವಚಿಕ್ಕನಾಯಕನಹಳ್ಳಿ,ಆ.12: ಕನಕ ಸೇವಾ ಸಮಿತಿಯ ವತಿಯಿಂದ ಕನಕ ಭವನದ ಮೊದಲನೇ ಹಂತದ ಕಾಮಗಾರಿ ಚಾಲನಾ ಸಮಾರಂಭ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215 ಜಯಂತೋತ್ಸವವನ್ನು ಇದೇ 13 ರ ಶನಿವಾರ ಬೆಳಿಗ್ಗೆ 10.30ಕ್ಕೆ ಕನಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದಶರ್ಿ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದಾರೆ, ಉದ್ಘಾಟನೆಯನ್ನು ಸಂಸದ ಜಿ.ಎಸ್.ಬಸವರಾಜು ನೆರವೇರಿಸಲಿದ್ದಾರೆ.ಬಡಮಕ್ಕಳಿಗೆ ವಸ್ತ್ರವಿತರಣೆಯನ್ನು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ನೆರವೇರಿಸಲಿದ್ದು, ಎಂ.ಎಲ್.ಸಿ. ಡಾ. ಎಂ.ಆರ್.ಹುಲಿನಾಯ್ಕರ್ ಪುಸ್ತಕ ವಿತರಣೆ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ರಾಜ್ಯ ಕುರುಬರ ಸಂಘದ ಕಾರ್ಯದಶರ್ಿ ಕೆ.ಎಂ.ರಾಮಚಂದ್ರಪ್ಪ, ಕೋಶಾಧಿಕಾರಿ ಆರ್.ರಾಮಕೃಷ್ಣಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಸಂಪಾದಕ ಎಸ್.ನಾಗಣ್ಣ, ಆನಂದ್ ಬಿ. ಅಪ್ಪುಗೋಳ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

Thursday, August 11, 2011







ಜಾಗತೀಕರಣ ಶೋಷಣೆ ಆಧಾರಿತ ಸಮಾಜವನ್ನು ಕಟ್ಟುತ್ತಿದೆ.ಚಿಕ್ಕನಾಯಕನಹಳ್ಳಿ,ಆ.11 : ಜಾಗತೀಕರಣ ಹುಟ್ಟು ಹಾಕುತ್ತಿರುವುದು ಹಣಕಾಸು ಬಂಡವಾಳಶಾಹಿಯೇ ವಿನಾಃ, ವಿಸ್ತೃತ ನೆಲೆಯ ಬಂಡವಾಳ ಶಾಹಿಯಲ್ಲ, ಅದು ದುಡಿಯುವ ವರ್ಗವನ್ನು ನಿರ್ಲಕ್ಷಿಸಿ ಅಧಿಕಾರದ ಶ್ರೇಣೀಕರಣವನ್ನು ಒಳಗೊಂಡು ಅಸಮಾನತೆಯ ಆಧಾರವನ್ನು ಎತ್ತಿಹಿಡಿದಿದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾಗತಿಕ ವೇದಿಕೆಯಲ್ಲಿ ಸ್ಥಳೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಅನಾವರಣ ಉಳಿವಿನ ಸಾಧ್ಯತೆ ಹಾಗೂ ಸವಾಲುಗಳು ಎಂಬ ವಿಷಯವಾಗಿ ಯು.ಜಿ.ಸಿ. ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಸಂಪತ್ತು, ಹಣ, ಉತ್ಪಾದನೆಗಳು ಮಾತ್ರ ಅಭಿವೃದ್ದಿಯೆನಿಸಿಕೊಂಡಿವೆ, ಇದರಿಮದ ಸಾಮಾಜಿಕ ನ್ಯಾಯವು ದೂರವಾಗುತ್ತಿದೆ ಎಂದರಲ್ಲದೆ, ಎನ್.ಆರ್.ನಾರಾಯಣಮೂತರ್ಿ, ಅಜೀಮ್ ಪ್ರೇಮ್ಜಿ, ವಿಜಯಮಲ್ಯ, ಅಶೋಕ್ಖೇಣಿ, ಪಿಈಎಸ್ ದೊರೆಸ್ವಾಮಿ ಮುಂತಾದವರಿಗೆ ಸಾಮಾಜಿಕ ನ್ಯಾಯದ ಅರ್ಥ ತಿಳಿಯಬೇಕಿದ್ದು ಸಾಮಾಜಿಕ ನ್ಯಾಯವು ಮೀಸಲಾತಿಗಿಂತ ವಿಸ್ತೃತವಾದ ಸಂಗತಿಯಾಗಿದೆ ಎಂದರು. ಮನುಷ್ಯ ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಕ್ರಮ ಸಾಮಾಜಿಕ ನ್ಯಾಯವಾಗಿದೆ, ಅಂತಹ ಸಮಾಜವನ್ನು ನಾವು ಕಟ್ಟಬೇಕು ಆದರೆ ಜಾಗತೀಕರಣ ಸ್ಥಳೀಯತೆಯನ್ನು ನಾಶಮಾಡಿ ಶೋಷಣೆಯನ್ನು ಆಧರಿಸಿದ ಸಮಾಜವನ್ನು ಕಟ್ಟುತ್ತಿದೆ ಎಂದು ವಿಷಾದಿಸಿದರಲ್ಲದೆ ಸ್ಥಳೀಯತೆ ಮತ್ತು ಜಾಗತೀಕರಣಗಳು ಸೇರಿ ಮಹಿಳೆಯರನ್ನು ಶೋಷಿಸುತ್ತಿವೆ ಇದರಿಂದ ದುಡಿಮೆಯು ಮಹಿಳೀಕರಣಕ್ಕೆ ಒಳಗಾಗಿದೆ ಎಂದರು. ಉದ್ದಿಮೆಗಳು ಮಹಿಳೆಯರನ್ನು ಹೆಚ್ಚು ಹೆಚ್ಚು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಬಯಸುತ್ತವೆ, ಇದರ ಹಿಂದಿನ ಉದ್ದೇಶ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುವುದಲ್ಲ, ಅವರು ಸಂಘಟಿತರಾಗುವುದಿಲ್ಲ, ಅವರಿಗೆ ದುಡಿಮೆಯೆನ್ನುವುದು ಪೂರಕವಾದ ಸಂಗತಿಯಾಗಿದ್ದು ಅವರ ಕುಟುಂಬದಲ್ಲಿ ವರಮಾನ ಗಳಿಸುವವರಲ್ಲ, ಇದರಿಂದಾಗಿ ಉದ್ದಿಮೆಗಳು ಅವರಿಗೆ ಎಷ್ಟು ಕೂಲಿ ನೀಡಿದರೂ, ಎಷ್ಟು ಗಂಟೆಗಳ ಕಾಲ ದುಡಿಸಿಕೊಂಡರೂ ನಡೆಯುತ್ತದೆ, ಅವರು ಮುಷ್ಕರ ಮಾಡುವುದಿಲ್ಲ ಇದರಿಂದ ಲಿಂಗ ಅಸಮಾನತೆ ವ್ಯವಸ್ಥೆ ಸಾಮಾನ್ಯವಾಗಿದೆ ಎಂದ ಅವರು ಜಾಗತೀಕರಣದಿಂದ ಬದಲಾವಣೆಗಳು ತೀವ್ರಗತಿಯಲ್ಲಿ ನೆಡೆಯುತ್ತಿದೆ, ಸ್ಥಳೀಯತೆಗೆ ಅಪಾಯ ಬಂದಿದ್ದು ಕನ್ನಡ ಅಂದರೆ ಸ್ಥಳೀಯ ಭಾಷೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ, ಈಗ ಜಾಗತೀಕರಣ ತಡೆಯುವುದು ಅಸಾಧ್ಯವಾಗಿದೆ ಈಗ ನಮ್ಮ ಮುಂದಿರುವ ದಾರಿಯೆಂದರೆ ಅದನ್ನು ಅರ್ಥ ಮಾಡಿಕೊಳ್ಳುವುದು, ಅದರಿಂದ ಉಂಟಾಗುತ್ತಿರುವ ಬದಲಾವಣೆಯ ಗತಿ ಸ್ವರೂಪವನ್ನು ತಿಳಿದುಕೊಳ್ಳವುದಕ್ಕೆ ಪ್ರಯತ್ನಿಸುವುದಾಗಿದೆ ಎಂದರು. ಜಾಗತೀಕರಣದಿಂದ ಸ್ಥಳೀಯ ಸಂಸ್ಕೃತಿ ಸಾಹಿತ್ಯ ನಮ್ಮ ಭಾಷೆ ಕಳೆದುಹೋಗುವುದಿಲ್ಲ ಅದರ ಬಗ್ಗೆ ನಾವು ನಿರಾಶಾವಾದಿಗಳಾಗುವ ಅಗತ್ಯವಿಲ್ಲ ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸ್ಥಳೀಯತೆಯನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆ ನಾವು ಜಾಗೃತರಾಗಬೇಕು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಜಾಗತಿಕ ವೇದಿಕೆಯ ಮೂಲಕ ಪ್ರಬಲರು ದುರ್ಬಲರ ಮೇಲೆ ತಮ್ಮ ಆಕ್ರಮಣವನ್ನು ಹೇರುತ್ತಿದ್ದಾರೆ, ಏಷ್ಯನ್ ಜನರ ಮೇಲೆ ಯೂರೋಪ್ ಜನರು ಹೇರುವ ಆಕ್ರಮಣವನ್ನು ನಾವು ಕಣ್ಣಾರೆ ನೋಡಿರುವುದಾಗಿದೆ ಎಂದ ಅವರು ವಿದೇಶದಲ್ಲಿರುವ ಭಾರತೀಯ ಹೆಣ್ಣು ಮಕ್ಕಳ ಸಮಸ್ಯೆಯನ್ನು ವಿವರಿಸಿದರು.ಕೆಲವು ಸಾಹಿತಿಗಳು ತೆಲುಗು, ಇಂಗ್ಲೀಷ್ ಕಲಿತ ನಂತರ ಕನ್ನಡಕ್ಕೆ ಅನುವಾದ ಮಾಡಿಕೊಂಡು ಬರುತ್ತಿದ್ದಾರೆ ಇದಕ್ಕೆ ಕಾರಣ ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಇರುವ ಧೋರಣಾ ಮನೋಭಾವವಾಗಿದೆ ಎಂದ ಅವರು, ಸಾಹಿತಿಗಳಾದ ಲಿಂಗದೇವರು ಹಳೇಮನೆ, ಸಾ.ಶಿ.ಮರುಳಯ್ಯರವರು ಕನ್ನಡದಲ್ಲಿ ಸಾಹಿತ್ಯವನ್ನು ಬರೆದರೂ ಸರಿಯಾದ ಸ್ಥಾನಮಾನ ಅವರಿಗೆ ಸಿಗಲಿಲ್ಲ ಎಂದರಲ್ಲದೆ ಇಂದು ಎಲೆಕ್ಟ್ರಾನಿಕ್ ವಸ್ತುಗಳಿಂದಲೇ ಹೆಚ್ಚಾಗಿ ಜಾಗತಿಕ ವ್ಯವಸ್ಥೆ ಬದಲಾಗಿರುವುದು, ಕೇವಲ ಬಣ್ಣದಿಂದ ಯಾರನ್ನು ಅಳೆಯಬಾರದು ಅವರ ಗುಣದ ಬಗ್ಗೆ ಅರಿಯಬೇಕು ಎಂದರು. ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ, ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ಸಂಘಟನಾ ಕಾರ್ಯದಶರ್ಿ ಬಿ.ಎಸ್.ಬಸವಲಿಂಗಯ್ಯ ಉಪಸ್ಥಿತರಿದ್ದರು.

Wednesday, August 10, 2011













ಹೊಯ್ಸಳ ಶಿಲ್ಪ ಕೇಂದ್ರದ ವತಿಯಿಂದ ಬಿ.ಎಫ್.ಎ. ಪದವಿಗೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಆ.10 : ಜಕಣ ಶಿಲ್ಪ ಗುರುಕುಲ ಶಿಲ್ಪಕಲಾ ಕಾಲೇಜು ವತಿಯಿಂದ ಆಸಕ್ತ ಚಿತ್ರಕಲಾ ಹಾಗೂ ಕಲಾ ವಿದ್ಯಾಥರ್ಿಗಳಿಗೆ ಬಿ.ಎಫ್.ಎ. ಕೋಸರ್್ಗೆ ಅಜರ್ಿ ಆಹ್ವಾನಿಸಲಾಗಿದೆ.ಹೊಯ್ಸಳ ಶಿಲ್ಪಕೇಂದ್ರ ಹಾಗೂ ಕನರ್ಾಟಕ ಸಕರ್ಾರದ ಸಹಯೋಗದೊಂದಿಗೆ ಪ್ರಾರಂಭವಾಗಿರುವ ಕಾಲೇಜಿಗೆ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಬಹುದಾಗಿದೆ, ಬಿ.ಎಫ್.ಎ. ಕೋಸರ್್ ಮೂರು ವರ್ಷದ ಅವಧಿಯಾಗಿದ್ದು ಈ ಕೋಸರ್್ನಲ್ಲಿ ಚಾಲುಕ್ಯ, ಚೋಳ, ಹೊಯ್ಸಳ ಶೈಲಿಯ ಶಿಲ್ಪಕೆತ್ತನೆಯ ತರಬೇತಿ ನೀಡಲಾಗುವುದು, ಆಸಕ್ತರು ಶಿಲ್ಪಿ ವಿಶ್ವನಾಥ್ ಹೊಯ್ಸಳ ಶಿಲ್ಪಿಕೇಂದ್ರ ಕೃಷಿ ಇಲಾಖೆ ಹಿಂಭಾಗ ದೂರವಾಣಿ ಸಂಖ್ಯೆ 9845279517, 9141092238ಗೆ ಸಂಪಕರ್ಿಸಲು ಕೋರಲಾಗಿದೆ.

Tuesday, August 9, 2011







ಚಿ.ನಾ.ಹಳ್ಳಿಗೆ ಸಿ.ಇ.ಸಿ ತಂಡ ಭೇಟಿ
ಚಿಕ್ಕನಾಯಕನಹಳ್ಳಿ,ಆ.09 : ಸುಪ್ರೀಂ ಕೋಟರ್್ ಆದೇಶದ ಮೇರೆಗೆ ರಾಜ್ಯದ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಆಗಮಿಸಿರುವ ಕೇಂದ್ರದ ಉನ್ನತಾಧಿಕಾರಿಗಳ ತನಿಖಾ ಸಮಿತಿಯ (ಸಿ.ಇ.ಸಿ)ತಂಡ ಮಂಗಳವಾರ ತಾಲ್ಲೂಕಿಗೆ ಭೇಟಿ ನೀಡಿತು.ಈ ಸಂದರ್ಭದಲ್ಲಿ ಗಣಿ ಪ್ರದೇಶಗಳಿಗೆ ತೆರಳಿದ ತಂಡ ಕನರ್ಾಟಕ ಮೈನ್ಸ್, ಸುದರ್ಶನ್ಸಿಂಗ್ ಮೈನ್ಸ್, ಗಣಪತಿ ಸಿಂಗ್ ಮೈನ್ಸ್, ಪೋಧಾರ್ ಮೈನ್ಸ್ಗಳಿಗೆ ಭೇಟಿ ನೀಡಿ ವಿವರವನ್ನು ಪಡೆದರು. ತಾಲ್ಲೂಕಿನ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸಲು ತನಿಖಾ ತಂಡದ ಛೇರ್ಮನ್ ಪಿ.ವಿ.ಜಯಕೃಷ್ಣನ್, ತಂಡದ ಸದಸ್ಯ ಮಹೇಂದ್ರ ವ್ಯಾಸನ್, ದೀಪಕ್ ಶಮರ್ಾ, ರಾಜ್ಯದ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಯು.ವಿ.ಸಿಂಗ್ ಒಳಗೊಂಡ ತಂಡ ಮಧ್ಯಾಹ್ನ 3.30ರ ಸುಮಾರಿಗೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡು ನಂತರ ಗಣಿ ಪ್ರದೇಶಗಳಿಗೆ ತೆರಳಿದರು. ಸಿ.ಇ.ಸಿ ತಂಡದೊಂದಿಗೆ ತೆರಳಲು ಮುಂದಾದ ಮಾಧ್ಯಮದವರಿಗೆ ಗಣಿ ಮಾಲೀಕರು ನೇಮಿಸಿಕೊಂಡ ಬಾಡಿಗೆ ಬಂಟರು ಹಾಗೂ ಪೋಲಿಸಿನವರು ತಡೆಯೊಡ್ಡಿದರು.

Monday, August 8, 2011







ತಾತಯ್ಯನ ಗೋರಿಯನ್ನು ಅಭಿವೃದ್ದಿಗೊಳಿಸುವ ಮೂಲಕ ಪ್ರವಾಸಿ ತಾಣವನ್ನಾಗಿಸಿಚಿಕ್ಕನಾಯಕನಹಳ್ಳಿ,ಆ.08 : ಕೋಮು ಸೌಹಾರ್ಧತೆಗೆ ಹೆಸರುವಾಸಿಯಾಗಿರುವ ನಮ್ಮ ತಾಲೂಕಿನಲ್ಲಿ ಶಾದಿ ಮಹಲ್ ಕಾಮಗಾರಿಗೆ ಅಲ್ಪಸಂಖ್ಯಾತರ ಇಲಾಖೆ ನೀಡಿರುವ ಇಪ್ಪತ್ತು ಲಕ್ಷ ಅನುದಾನದ ಜೊತೆಗೆ ಶಾಸಕರ ನಿಧಿಯಿಂದಲೂ ಅನುದಾನ ನೀಡಲಿದ್ದು, ಇಲ್ಲೊಂದು ಸುಂದರ ಕಲ್ಯಾಣ ಭವನ ನಿಮರ್ಾಣವಾಗಬೇಕೆಂದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ದಗರ್ಾ(ತಾತಯ್ಯನ ಗೋರಿ) ಕಮಿಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶಾದಿ ಮಹಲ್ ಕಟ್ಟಡದ ಶಂಖುಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನವು ತಾಲ್ಲೂಕಿನ ಅಲ್ಪಸಂಖ್ಯಾತ ಜನತೆಯ ಅಲ್ಪ ಭಾಗದ ಆಸೆ ಮಾತ್ರ ನೆರವೇರಿದಂತಾಗಿದೆ ಎಂದರಲ್ಲದೆ, ಸಾರ್ವಜನಿಕರು ಈ ಭವನವನ್ನು ಉತ್ತಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದರಲ್ಲದೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಲವು ಅನುದಾನಗಳು ಬಿಡುಗಡೆಯಾಗಲಿವೆ, ನಾನೂ ಸಹ ಈ ಇಲಾಖೆ ಸಮಿತಿಯ ಸದಸ್ಯನಾಗಿರುವುದರಿಂದ ತಾಲ್ಲೂಕಿನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಶಂಖುಸ್ಥಾಪನೆಗೊಂಡ ಶಾದಿಮಹಲ್ ಸರ್ವಧಮರ್ಿಯರು ಕೋಮುಸೌಹಾರ್ಧತೆಯಿಂದ ಬಳಸಿಕೊಳ್ಳಿ ಎಂದರಲ್ಲದೆ, ಇದೊಂದು ಪುಣ್ಯಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ತಾತಯ್ಯನವರ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಪರ್ಾಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು, ಶಾದಿ ಮಹಲ್ಗೆ 20ಲಕ್ಷರೂ ಇಲಾಖೆಯಿಂದ ಬಿಡುಗಡೆಯಾಗಿದ್ದು 5ಲಕ್ಷರೂಗಳ ಚೆಕ್ಕನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇವೆ ಎಂದರು.ಜಿಲ್ಲಾ ವಕ್ಪ್ ಬೋಡರ್್ ಮಾಜಿ ಅಧ್ಯಕ್ಷ ಮುಸ್ತಾಕ ಅಹಮದ್ ಮಾತನಾಡಿ ವಿಭಿನ್ನತೆಯಲ್ಲಿ ಐಕ್ಯತೆ ಹೊಂದಿರುವ ತಾಲ್ಲೂಕಿನಲ್ಲಿ ಹಲವು ಧರ್ಮದವರು ಸಮಾನತೆಯಿಂದ ಕಾರ್ಯನಿರ್ವಹಿಸುತ್ತಿರುವುದು ತಾಲ್ಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಕನ್ನಡ ಸಂಘದ ವೇದಿಕೆಯ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಬಾಬುಸಾಹೇಬ್, ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷ ರವಿ(ಮೈನ್ಸ್), ಗೋರಿ ಕಮಿಟಿ ಕಾಯರ್ಾಧ್ಯಕ್ಷ ಟಿ.ರಾಮಯ್ಯ, ಗೋರಿ ಕೆಲಸಗಳ ಉಸ್ತುವಾರಿ ಸಿ.ಕೆ.ಘನ್ನಿಸಾಬ್, ಮಹಮದ್ ಖಲಂದರ್, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಮರ ಕಡಿಯುವುದನ್ನು ನಿಲ್ಲಿಸಿ,ಸಸಿ ಬೆಳೆಸಲು ಪ್ರೋತ್ಸಾಹಿಸಿಚಿಕ್ಕನಾಯಕನಹಳ್ಳಿ,ಆ.08 : ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ಆಹಾರ, ನೀರು ಮುಖ್ಯವಾಗಿದ್ದು ಆಹಾರ ನೀರು ಇಲ್ಲದೆ ವಾರಗಟ್ಟಲೆ ಬದುಕಿರುವವರಿದ್ದಾರೆ ಆದರೆ ಗಾಳಿ ಇಲ್ಲದೆ ಯಾರೊಬ್ಬರು ಬದುಕಲಾರರು ಎಂದು ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವದಿಕೆಯ ಮುಂಭಾಗದಲ್ಲಿ ಸವರ್ೋದಯ ಪೈನ್ಸಾನ್ಸ್ ಪ್ರಾರೋಂಭೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವಿಗೆ ಆಮ್ಲಜನಕ ಅವಶ್ಯವಾಗಿದ್ದು ಉಸಿರಾಡುವುದಕ್ಕಾಗಿಯಾದರೂ ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿಬೇಕಿದೆ ಮರಗಳನ್ನು ಕಡಿಯುತ್ತಿರುವುದು ಇತ್ತೀಚಿಗೆ ಹೆಚ್ಚಿದ್ದು ಮರಗಳ ರಕ್ಷಣೆಗಾಗಿ ನಾವು ಮುಂದಾಗಬೇಕು ಎಂದರಲ್ಲದೆ ಗಣಿಗಾರಿಕೆಯಿಂದ ಗಿಡಮರಗಳು ನಾಶವಾಗುತ್ತಿದ್ದು ಪ್ರತಿಯೊಬ್ಬರು ಗಿಡನೆಟ್ಟುಬೆಳೆಸಬೇಕಾಗಿದೆ ಎಂದ ಅವರು ಈ ಸಂಘವು ಯಶಸ್ವಿಯಾಗಿ ಬೆಳೆಯಲಿ ಬಡವರಿಗೆ ಅನೂಕೂಲವಾಗಿರಲಿ ಯಾರೇ ಆಗಿರಲಿ ನಮಗೆ ಸಹಾಯಮಾಡಿದವರನ್ನು ಕೊನೆಯವರೆಗೆ ಮರೆಯಾಬಾರದು ಎಂದರು. ಪುರಸಭೆಯ ಸದಸ್ಯರಾದ ರೇಣುಕಾ ಗುರುಮೂತರ್ಿ ಮಾತನಾಡುತ್ತಾ ಅತಿ ಹೆಚ್ಚು ಮಹಿಳೆಯರೆ ಸಂಘ ಸಂಸ್ಥೆಗಳಲ್ಲಿ ಹೆಚ್ಚಾಗಿದ್ದಾರೆ, ಸಂಘವು ಮೊದಲು ಸ್ವಸಹಾಯ ಸಂಘದಿಂದ ನೆಡೆದುಕೊಂಡು ಬಂದು ಮೂರನೇ ವರ್ಷದ ನಂತರ ಸವರ್ೋದಯ ಪೈನ್ಸಾನ್ಸ್ ಮಾಡಿರುವುದು ಬಡವರಿಗೆ ಅನೂಕೂಲವಾಗಬೇಕಾಗಿದೆ ಎಂದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಧ್ಯಕ್ಷ ರವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್ ನಟರಾಜು, ಸಹಕಾರಭಿವೃದ್ದಿ ಅಧಿಕಾರಿ ಮುಕುಂದಯ್ಯ ರಾಮಕೃಷ್ಣಯ್ಯ, ಮಹಲಿಂಗಯ್ಯ ,ಮಂಜುನಾಥ್ ಉಪಸ್ಥಿತರಿದ್ದರು.

Sunday, August 7, 2011

ಚಿಕ್ಕನಾಯಕನಹಳ್ಳಿ,ಆ.07 : ಜಾಗತಿಕ ವೇದಿಕೆಯಲ್ಲಿ ಸ್ಥಳೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಅನಾವರಣ ಉಳಿವಿನ ಸಾಧ್ಯತೆ ಹಾಗೂ ಸವಾಲುಗಳು ಎಂಬ ಕಾರ್ಯಕ್ರಮವನ್ನು ಇದೇ 11ರ ಗುರುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಸಮನ್ವಯ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕ ಹೆಚ್.ಕೆ.ಕುಮಾರರಾಜ್ ಅರಸ್ ಉದ್ಘಾಟನೆ ನೆರವೇರಿಸಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಆಶಯ ಭಾಷಣ ಮಂಡಿಸಲಿದ್ದಾರೆ. ಗೋಷ್ಠಿ 1 : ಬೆಳಗ್ಗೆ 11ರಿಂದ 12.30ರವರೆಗೆ ನಡೆಯುವ ಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಚಂದ್ರಶೇಖರ ನಂಗಲಿ ಜಾಗತೀಕರಣ ಮತ್ತು ಗ್ರಾಮೀಣ ಸ್ತ್ರೀ ಸ್ವಾಯತ್ತತೆಯ ನೆಲೆಗಳು, ಹಂಪಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾದ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಬಹುಸ್ತರೀಯ ವಸಾಹತು ಶಾಹಿಗಳಿಂದ ಸ್ಥಳೀಯ ನೆಲೆಗಳ ಉಳಿವಿನ ಸಾಧ್ಯತೆಗಳ ವಿಷಯದ ಬಗ್ಗೆ ಪ್ರಬಂಧ ಮಂಡಿಸಲಿದ್ದು ಡಾ.ಎಸ್.ಗುರುಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿ2: ಮಧ್ಯಾಹ್ನ 12.30ರಿಂದ 2ರವರೆಗೆ ನಡೆಯುವ ಗೋಷ್ಠಿಯಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ.ವಿಜಯ್ ಅಂಗಡಿ ನಮ್ಮ ಅನ್ನ ಆರಂಬ ಪ್ರಸ್ತುತ ಪರಿಸ್ಥಿತಿ ಬಗ್ಗೆ, ಡಾ.ನಟರಾಜ್ ಬೂದಾಳ್ ಈ ನೆಲದ ಕಾವ್ಯ ಮೀಮಾಂಸೆಯ ಹೊಸ ಸಾಧ್ಯತೆಗಳು ಬಗ್ಗೆ ಪ್ರಬಂದ ಮಂಡಿಸಲಿದ್ದು ಡಾ.ಬಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಗೋಷ್ಠಿ 3 : 2.30ರಿಂದ ನಡೆಯಲಿದ್ದು ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ ನಡೆಯಲಿದ್ದು ಅಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ ಸಮಾರೋಪ ಭಾಷಣ ಮಾಡಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಆ.07 : ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ ರಾಷ್ಟ್ರೀಯ ಸೇವಾ ಘಟಕದ ಉದ್ಘಾಟನಾ ಸಮಾರಂಭವನ್ನು ಇದೇ 9ರ ಮಂಗಳವಾರ ಬೆಳಗ್ಗೆ 11ಕ್ಕೆಏರ್ಪಡಿಸಲಾಗಿದೆ.ಸಮಾರಂಭವನ್ನು ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಯವರು ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ.ಪೂ.ಶಿ ಉಪನಿದರ್ೇಶಕ ಕೆ.ಎನ್.ರಂಗನಾಥ್, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ವಿಶೇಷ ಆಹ್ವಾನಿತರಾಗಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಮಾಜಿ ಪುರಸಭಾಧ್ಯಕ್ಷ ಮಹಮದ್ ಇಕ್ಬಾಲ್, ಪುರಸಭೆ ಸದಸ್ಯೆ ಕವಿತಾಚನ್ನಬಸವಯ್ಯ, ಇಂದಿರಪ್ರಕಾಶ್ ಉಪಸ್ಥಿತರಿರುವರು.

Saturday, August 6, 2011

Friday, August 5, 2011







ಧರ್ಮದ ಪವಿತ್ರತೆಯಿಂದಿರಲಿ ರಕ್ಷಾಬಂಧನಚಿಕ್ಕನಾಯಕನಹಳ್ಳಿ,ಆ.05 : ಧರ್ಮದ, ಸದ್ಗುಣ ಬಂಧನವನ್ನು ಪವಿತ್ರತೆಯಿಂದ ಕಂಡುಕೊಂಡಾಗ ಸೋದರ ಸೋದರಿಯರ ರಕ್ಷಾಬಂಧನಕ್ಕೆ ಅರ್ಥಕಂಡುಬರುತ್ತದೆ ಎಂದು ದಾವಣಗೆರೆಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಲೀಲಕ್ಕನವರು ಹೇಳಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ರಕ್ಷಾಬಂಧನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೋದರ, ಸೋದರಿಯರು ರಕ್ಷಾಬಂಧನವನ್ನು ಕಟ್ಟಿವುದರ ಮೂಲಕ ಕಾಮ, ಕ್ರೋಧ, ಅಹಂಕಾರವನ್ನು ತ್ಯಜಿಸುತ್ತಾ ಉಡುಗೊರೆ ನೀಡಿದರೆ ರಕ್ಷಾಬಂಧನಕ್ಕೆ ರಕ್ಷಣೆಯೆಂಬ ನಿಜವಾದ ಅರ್ಥ ದೊರಕುತ್ತದೆ ಎಂದ ಅವರು ರಕ್ಷಾ ಬಂಧನವು ಕೇವಲ ಒಡ ಹುಟ್ಟಿದವರು ಮಾತ್ರ ಆಚರಿಸುವುದಲ್ಲ ಅದನ್ನು ನೆರೆಹೊರೆಯರ ಜೊತೆಯಲ್ಲಿ ಆಚರಿಸಬೇಕು ಎಂದರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ರಕ್ಷಾಬಂಧನವು ರಕ್ಷಣೆಯ, ಬಾಂದವ್ಯದ ಸಂಕೇತವಾಗಿದ್ದು ರಕ್ಷಾಬಂಧನವು ಸೋದರ, ಸೋದರಿಯರ ಹಾಗೂ ನೆರೆಹೊರೆಯವರೊಂದಿಗೆ ಆತ್ಮೀಯತೆಯನ್ನು ಬೆಳೆಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬ್ರಹ್ಮವಿದ್ಯಾಸಮಾಜದ ಅನ್ನಪೂರ್ಣಕ್ಕ, ಸುಹಾಸಿನಿಯವರು ಭಾಗವಹಿಸಿದ್ದರು.
ತಾಯಂದಿರು ಹಾಲುಣಿಸದಿದ್ದರೆ, ದುಶ್ಚಟಗಳಿಗೆ ದಾರಿಚಿಕ್ಕನಾಯಕನಹಳ್ಳಿ,ಆ.04 : ಆಧುನಿಕತೆಗೆ ಮಾರು ಹೋಗಿ ತಮ್ಮ ಮಕ್ಕಳಿಗೆ ತಾಯಂದಿರು ಹಾಲುಣಿಸುತ್ತಿಲ್ಲ ಇದರಿಂದ ಮಗುವು ದುಶ್ಚಟಗಳಿಗೆ ಬಲಿಪಶುವಾಗುವ ಸಂಭವ ಹೆಚ್ಚಾಗಿದೆ ಎಂದು ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಅಭಿಪ್ರಾಯಪಟ್ಟರು. ಪಟ್ಟಣದ ವಿನಾಯಕ ನಗರದ ಅಂಗನವಾಡಿಯಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ತನ್ಯಪಾನ ವಷರ್ಾಚರಣೆಯು 22 ವರ್ಷಗಳಿಂದ ನಡೆದುಕೊಂಡು ಬಂದು ಹಲವರಿಗೆ ಈ ಕಾರ್ಯಕ್ರಮದ ಮೂಲಕ ತಿಳುವಳಿಕೆ ನೀಡಿದರೂ ತಾಯಂದಿರು ಈಗಿನ ಆಧುನಿಕತೆಗೆ ಮಾರು ಹೋಗಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ಹಾಲುಣಿಸಲು ಬೇಜಾವಬ್ದಾರಿತನ ತೋರುತ್ತಿದ್ದು ಈಗೆ ತಾಯಂದಿರು ಹಾಲುಣಿಸದಿದ್ದರೆ ತಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ತಾವೇ ದುಶ್ಚಟಗಳಿಗೆ ದಾರಿ ತೋರಿದಂತಾಗುತ್ತದೆ ಎಂದ ಅವರು ಮಗುವಾದ ನಂತರ ಸುಮಾರು 6ತಿಂಗಳವರೆವಿಗೂ ತಮ್ಮ ಮಕ್ಕಳಿಗೆ ತಾಯಂದಿರು ಹಾಲುಣಸಬೇಕು ಎಂದು ಸಲಹೆ ನೀಡಿದರು. ಶಿಶು ಅಭಿವೃದ್ದಿ ಮೇಲ್ವಿಚಾರಕಿ ನಾಗರತ್ನ ಮಾತನಾಡಿ ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಂದಿರು ಮಗುವಿಗೆ ಹಾಲುಣಿಸಿದರೆ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ, ತಾಯಂದಿರು 2ವರ್ಷಗಳ ತನಕ ಮಗುವಿಗೆ ಹಾಲುಣಿಸಿದರೆ ಮಗುವು ಆರೋಗ್ಯವಾಗಿ ಬೆಳೆಯುತ್ತದೆ ಎಂದ ಅವರು ಆಗಷ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು ಇಂತಹ ಕಾರ್ಯಕ್ರಮಗಳಿಗೆ ತಾಯಂದಿರು ಭಾಗವಹಿಸಿ ಸೂಕ್ತ ಸಲಹೆ ಪಡೆಯಬೇಕು ಎಂದರು. ಪುರಸಭೆ ಸದಸ್ಯೆ ಶಾರದ ಶಂಕರಬಾಬು ಮಾತನಾಡಿ ತಾಯಿಯ ಎದೆ ಹಾಲಿನಿಂದ ಮಗುವು ರೋಗ ನಿರೋಧಕ ಶಕ್ತಿ ಪಡೆಯಲಿದೆ ಹಾಗೂ ಮಗುವಿಗೆ ಹಾಲುಣಿಸುವುದರಿಂದ ತಾಯಿಯ ಹಾಗೂ ಮಗುವ ಭಾಂದವ್ಯ ಹೆಚ್ಚತ್ತದೆ ಎಂದರು.ಸಮಾರಂಭದಲ್ಲಿ ಪುರಸಭೆ ಸದಸ್ಯ ಧರಣಿಲಕ್ಕಪ್ಪ ಉಪಸ್ಥಿತರಿದ್ದರು.
ಆರಂಭಗೊಂಡ ದಕ್ಕಲಿಗ ಜಾತಿ ಸಮುದಾಯದ ರಾಜ್ಯ ಸಂಘಟನೆ ಚಿಕ್ಕನಾಯಕನಹಳ್ಳಿ,ಆ.04 : ತಾಲ್ಲೂಕಿನ ಚಿಕ್ಕೇನಹಳ್ಳಿ ಮಠದಲ್ಲಿ ನಡೆದ ಅಲೆಮಾರಿ ಬುಡಕಟ್ಟು ಮಹಾಸಭಾದ ಸಭೆಯಲ್ಲಿ ದಕ್ಕಲಿಗ ಜಾತಿ ಸಮುದಾಯದ ರಾಜ್ಯ ಸಂಘಟನೆ ಆರಂಭಗೊಂಡಿತು.ದಕ್ಕಲಿಗರ ರಾಜ್ಯ ಸಂಘಟನೆಯ ಸಂಚಾಲಕರಾಗಿ ಚಿಕ್ಕನಾಯಕನಹಳ್ಳಿ ಡಿ.ಶಾಂತರಾಜು, ಯಾದಗಿರಿಯ ಜಿಲ್ಲೆಯ ಮಲಕಪ್ಪ, ರಾಯಚೂರು ಜಿಲ್ಲೆಯ ಮಾರುತಿ ಆಯ್ಕೆಯಾದರು.ಬೆಂಗಳೂರಿನಲ್ಲಿ ಆಗಸ್ಟ್ನಲ್ಲಿ ನಡೆಯುವ ದಕ್ಕಲಿಗರ ಮಹಾ ಸಮಾವೇಶವನ್ನು ಸಂಗಟಿಸಲು ಸಭೆಯಲ್ಲಿ ತೀಮರ್ಾನಿಸಿದ್ದು ಜಿಲ್ಲಾ ಸಂಘಟನೆಗೆ ಡಾ.ರಘುಪತಿಯವರನ್ನು ಗೌರವ ಅಧ್ಯಕ್ಷರನ್ನಾಗಿ, ದೊರೈರಾಜ್ರವರನ್ನು ಸಂಘಟನೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಯಿತು.

Wednesday, August 3, 2011

Tuesday, August 2, 2011




ಪ್ರೌಢಶಾಲಾ ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತರಾಗಿ
ಚಿಕ್ಕನಾಯಕನಹಳ್ಳಿ,ಆ.02: ಪ್ರೌಢಾಶಾಲಾ ಹಂತ ಮಕ್ಕಳ ಶೈಕ್ಷಣಿಕ ಜೀವನದ ಬಹು ಮುಖ್ಯ ಘಟ್ಟ ಇಂತಹ ಸಮಯದಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು ್ಲ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಸಾಸಲು ಪ್ರೌಡಶಾಲಾ ನೂತನ ಕೊಠಡಿ, ಬೈಸಿಕಲ್ ಹಾಗೂ ಶೆಟ್ಟಿಕೆರೆ ಹೋಬಳಿ ಮಟ್ಟದ ಕ್ರೀಡಾ ಕೂಟ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಮಾತನಾಡಿ ಸಕರ್ಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೇಕ ಯೋಜನೆಗಳನ್ನು ತಂದಿದ್ದು ಇದರ ಪ್ರಯೋಜನ ಪಡೆದು ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದರು.
ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ 26 ಕೆರೆಗಳಿಗೆ ನೀರು ಹರಿಸಲು ಸಕರ್ಾರ 102 ಕೋಟಿ ರೂ ಮಂಜೂರಾತಿ ನೀಡಿದ್ದು ಇದಕ್ಕೆ ಶ್ರಮಿಸಿದ ಸಂಸದ ಜಿ.ಎಸ್.ಬಸವರಾಜು ಹಾಗೂ ಕೆ.ಎಸ್.ಕಿರಣ್ಕುಮಾರ್, ವಿವಿಧ ಮಠಾಧಿಪತಿಗಳಿಗೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಈ ಕೀತರ್ಿ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಇ.ಓ ದಯಾನಂದ್, ತಾ.ಪಂ.ಸದಸ್ಯ ರಮೇಶ್, ಗ್ರಾ.ಪಂ.ಸದಸ್ಯರಾದ ರವಿಕುಮಾರ್, ದಿನೇಶ್, ಕುಮಾರಯ್ಯ, ಲಲಿತಮ್ಮ, ಇಂಜಿನಿಯರ್, ಸಾಸಲು ಮಹೇಶ್, ಶಾಂತಕುಮಾರ್ ಮುಂತಾದವರಿದ್ದರು.
ಹಾಲಿ/ಮಾಜಿ ಯೋಧರ ಸಭೆ
ಚಿಕ್ಕನಾಯಕನಹಳ್ಳಿ,ಆ.02 : ತಾಲ್ಲೂಕು ವ್ಯಾಪ್ತಿಯಲ್ಲಿ ನೆಲಸಿರುವ ಮಾಜಿ ಸೈನಿಕರು ಹಾಗೂ ಹಾಲಿ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರುಗಳಿಗಾಗಿ ಇದೇ 15ರ ಸೋಮವಾರ ಮಧ್ಯಾಹ್ನ 3.30ಕ್ಕೆ ್ಲಜೋಗಿಹಳ್ಳಿ ಗೇಟ್ ದಕ್ಷಿಣ ಬಡಾವಣೆಯಲ್ಲಿರುವ ಮಾಜಿ ಯೋಧರಾದ ಶಿವಣ್ಣನವರ ನಿವಾಸದಲಿ ್ಲ ಚಹಾಕೂಟವನ್ನು ಏರ್ಪಡಿಸಿದ್ದು ಎಲ್ಲಾ ಹಾಲಿ ಮತ್ತು ಮಾಜಿ ಯೋಧರುಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಾಜಿ ಯೋಧರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಕೋರಿದ್ದಾರೆ.
ಗಣಿಗಾರಿಕೆಗಾಗಿ ಅಕ್ರಮ ರಸ್ತೆ ನಿಮರ್ಾಣ: ಬಿ.ಎಲ್.ಆರೋಪ
ಚಿಕ್ಕನಾಯಕನಹಳ್ಳಿ,ಆ.02: ಹತ್ಯಾಳ್ ಬೆಟ್ಟದಿಂದ ಅಬ್ಬಿಗೆ ಗುಡ್ಡದವರೆಗೆ ಗಣಿಗಾರಿಕೆಗಾಗಿ ಸಕರ್ಾರ ಅಕ್ರಮವಾಗಿ ರಸ್ತೆ ನಿಮರ್ಾಣ ಮಾಡುತ್ತಿದೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ಆರೋಪಿಸಿದ್ದಾರೆ.
ಗಣಿ ಧಣಿಗಳ ಅನುಕೂಲಕ್ಕಾಗಿ ಹತ್ಯಾಳ್ ಬೆಟ್ಟದ ತಪ್ಪಲಿನಿಂದ ಅಬ್ಬಿಗೆ ಗುಡ್ಡದ ವರೆಗೆ ಸುಮಾರು 30 ಅಡಿ ಅಗಲದ 12 ಕಿ.ಮೀ. ದೂರ ಈ ರಸ್ತೆ ನಿಮರ್ಿಸುತ್ತಿದ್ದು, ರಸ್ತೆಗಾಗಿ ಹುಲ್ಲುಬಂದಿ ಖರಾಬ್ ಜಮೀನುಗಳು, ಅರಣ್ಯ ಪ್ರದೇಶ, ಗುಂಡುತೋಪುಗಳು ಸೇರಿದಂತೆ ಆ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಿಟ್ಟಿರುವ ಎಲ್ಲಾ ಜಮೀನುಗಳನ್ನು ರಸ್ತೆ ನಿಮರ್ಾಣ ಕಾರ್ಯಕ್ಕೆ ಬಳಿಸಕೊಳ್ಳಲಾಗುತ್ತಿದ್ದು ಇದು ಸಕರ್ಾರವೇ ಮಾಡುತ್ತಿರುವ ಅಕ್ರಮ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರಿಗೆ ಉಪಯೋಗವಲ್ಲದೆ ರಸ್ತೆ ನಿಮರ್ಾಣಕ್ಕೆ ತಮ್ಮ ವಿರೋಧವಿದೆ ಎಂದರು . ಕನರ್ಾಟಕ ದಲಿತ ಪರಿಸರ ಮತ್ತು ಮೀಸಲಾತಿ ರಕ್ಷಣಾ ಸಮಿತಿಯ ಅಧ್ಯಕ್ಷ ನಾರಾಯಣ್ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈಚೆಗೆ ವಿಶ್ವಪರಿಸರ ದಿನವನ್ನು ಈ ಭಾಗದ ಗಡಿ ಅಕ್ರಮದಲ್ಲಿ ಭಾಗಿಗಳಾದ ಮೈನಿಂಗ್ ಕಂಪನಿಯ ಜೊತೆಗೂಡಿ ಆಚರಿಸಿದೆ ಎಂದು ಆರೋಪಿಸಿದರು.
ತಾ.ಪಂ. ನೂತನ ಮಳಿಗೆಗಳನ್ನು ಬಾಡಿಗೆಗೆ ಕೊಡಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಆ.02 : ತಾಲ್ಲೂಕು ಪಂಚಾಯಿತಿ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಮುಂಬಾಗ 5 ಅಂಗಡಿ ಮಳಿಗೆಗಳನ್ನು ಕಟ್ಟಿದ್ದು ಮಳಿಗೆಗಳು ಉದ್ಘಾಟನೆಯಾಗಿ ಒಂದು ವರ್ಷವಾದರೂ ಯಾರಿಗೂ ಬಾಡಿಗೆ ಕೊಡದೆ ನಿರ್ಲಕ್ಷ ಮಾಡಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕೃಷ್ಣೆಗೌಡ ಆರೋಪಿಸಿದ್ದಾರೆ.
ಈ ಮಳಿಗೆಗಳನ್ನು ಕಟ್ಟಲು ಲಕ್ಷಾಂತರ ರೂಗಳು ಖಚರ್ಾಗಿದೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ.ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರುಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ್ ಒತ್ತಾಯಿಸಿದ್ದಾರೆ.
ಕ್ರೀಡಾಕೂಟಗಳು ಮುಂದೂಡಿದೆ: ತಾ.ದೈ.ಶಿ.ಸಂಘ
ಚಿಕ್ಕನಾಯಕನಹಳ್ಳಿ,ಆ.02: ದೈಹಿಕ ಶಿಕ್ಷಕರ ಬೇಡಿಕೆ ಈಡೇರುವವರೆಗೆ ತಾಲ್ಲೂಕಿನಲ್ಲಿ ನಡೆಯುವ ಎಲ್ಲಾ ಹಂತಗಳ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಎಸ್.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿದರ್ೇಶನದ ಮೇರೆಗೆ ಕ್ರೀಡಾಕೂಟಗಳಲ್ಲಿ ದೈಹಿಕ ಶಿಕ್ಷಕರು ಅಸಹಕಾರ ತೋರಲಿದ್ದಾರೆ ಎಂದಿರುವ ಅವರು ನಮ್ಮ ಬೇಡಿಕೆಗಳಾದ ಪ್ರೊ.ಎಲ್.ಆರ್.ವೈದ್ಯನಾಥನ್ ಸಮಿತಿ ವರದಿ ಅನುಷ್ಠಾನ ಆಗದೇ ಇರುವುದು, 1967ರಿಂದ ಇಲ್ಲಿಯವರೆಗೆ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆಯಾಗದಿರುವ ಕುರಿತು, ದೈಹಿಕ ಶಿಕ್ಷಣ ಶಿಕ್ಷಕರ ಮುಂಬಡ್ತಿಯ ಬಗ್ಗೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಾತಿ ಆಗಿರುವುದಿಲ್ಲ ಈ ಬೇಡಿಕೆಗಳು ಅನುಷ್ಠಾನವಾಗಲೆಂದು ಕೋರಿದ್ದಾರೆ.




Saturday, July 30, 2011






ಬಡವರ ಬಗ್ಗೆ ಕಾಳಜಿವಹಿಸುವುದು ಪತ್ರಕರ್ತನ ಧ್ಯೇಯವಾಗಬೇಕು: ಡಾ.ಸ್ವರೂಪ್ಚಿಕ್ಕನಾಯಕನಹಳ್ಳಿ,ಜು.30 : ದೇಶದ ಎಲ್ಲಾ ವ್ಯಕ್ತಿಗೆ ಶಿಕ್ಷಣ, ಆಹಾರ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವುದು ಸಕರ್ಾರದ ಕೆಲಸ, ಈ ಕೆಲಸ ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿಮರ್ಾಣ ಮಾಡುವ ಕೆಲಸವನ್ನು ಪತ್ರಿಕೆ, ಪತ್ರಕರ್ತ ಮಾಡಬೇಕಾದ ಕೆಲಸ ಎಂದು ಸಿದ್ದಾರ್ಥ ಮಾಧ್ಯಮ ಕೇಂದ್ರ ನಿದರ್ೇಶಕ ಡಾ.ಸುಚೇತನ್ ಸ್ವರೂಪ್ ಹೇಳಿದರು. ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಕಾಯರ್ಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಳ್ಳಸಾಗಾಣಿಕೆ, ವ್ಯಭಿಚಾರ ಹಾಗೂ ಅರಿಯದ ಜನರನ್ನು ಮೋಸದ ಮೂಲಕ ವಂಚಿಸಿ ಬಂಡವಾಳ ಮಾಡುತ್ತಿರುವುದು ಹೆಚ್ಚಾಗಿರುವ ಸಮಾಜದಲ್ಲಿ ಪತ್ರಕರ್ತ ಜಾಗೃತನಾಗರಿಬೇಕು ಎಂದರು. ಈ ವ್ಯವಸ್ಥೆಯಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗಿ ದೇಶದ ಪ್ರಜಾಸತ್ತಾತ್ಮಕತೆ ನಾಶವಾಗುತ್ತಿದೆ ಎಂದು ವಿಶ್ಲೇಷಿಸಿದ ಅವರು, ಪತ್ರಿಕೆ ನಡೆಸುವುದು ಬಹಳ ಕಷ್ಠ ಒಂದು ಪತ್ರಿಕೆಯ ಮುದ್ರಣಗೊಂಡ ಹೊರಬರುವ ಹೊತ್ತಿಗೆ ಹತ್ತು ರೂಗಳಷ್ಟು ವೆಚ್ಚ ತಗುಲಲಿದೆ, ಪತ್ರಿಕೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಕೇವಲ ಮೂರು ರೂಗಳಿಗೆ ಮಾರಾಟ ಮಾಡಲಾಗುತ್ತದೆ ಉಳಿದ ಹಣವನ್ನು ಪತ್ರಿಕೆಯವರು ಜಾಹಿರಾತಿನಿಂದ ನಷ್ಟ ತುಂಬಬೇಕಾಗಿದೆ, ನಷ್ಟವನ್ನು ತುಂಬಿಕೊಟ್ಟ ಜಾಹೀರಾತುದಾರರ ಹಿತಕ್ಕೆ ತಕ್ಕಂತೆ ಕೆಲವೊಮ್ಮೆ ಪತ್ರಿಕೆ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ನಿಮರ್ಾಣವಾಗಿರುವುದನ್ನು ನಾವು ನೋಡುತ್ತಿದ್ದೇವೆ ಎಂದರು. ಜನಸಾಮಾನ್ಯರು ಪತ್ರಿಕೆಯನ್ನು ಕೊಂಡು ಓದುವ ಮೂಲಕ ಪತ್ರಿಕೆಗೆ ಆಗುವ ನಷ್ಠವನ್ನು ತಪ್ಪಿಸಬೇಕಾಗಿದೆ ಎಂದರಲ್ಲದೆ, ಪತ್ರಕರ್ತನಾಗಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ ಅವನಿಗೆ ತನ್ನ ಬರವಣಿಗೆಯೆ ಪದವಿ ಎಂದರಲ್ಲದೆ ತನ್ನ ಲೇಖನದ ಮೂಲಕ ಸಮಾಜವನ್ನು ತಿದ್ದುವ ಹಾಗೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಪತ್ರಕರ್ತನ ಬರವಣಿಗೆಯು ಕತ್ತಿಗಿಂತ ಹರಿತವಾದದ್ದು ಎಂಬುದನ್ನು ನಾವೆಲ್ಲ ಬಲ್ಲವು, ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ತಮ್ಮ ಬರವಣಿಗೆಯ ಮೂಲಕ ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಬೇಕೆಂದರು, ರಾಜಕಾರಣಿ, ಅಧಿಕಾರಿ ಹಾಗೂ ಕಿಡಿಗೇಡಿಗಳು ಮಾಡುವ ತಪ್ಪುಗಳನ್ನು ಪತ್ರಿಕೆಯವರು ತಮ್ಮ ಬರವಣಿಗೆಯಿಂದ ತಿಳಿಸಬೇಕು ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ ನಕಲಿ ಪತ್ರಕರ್ತರ ಹಾವಳಿಯನ್ನು ತಪ್ಪಿಸಲು ಸಂಘ ಚಿಂತಿಸುತ್ತಿದ್ದು ಅದಕ್ಕಾಗಿ ಪೋಲಿಸ್ ಇಲಾಖೆ ಪತ್ರಕರ್ತರಿಗೆ ಗುರುತಿನ ಕಾಡರ್್ನ್ನು ಕೆಲವೇ ದಿನಗಳಲ್ಲಿ ನೀಡಲಿದೆ ಎಂದರಲ್ಲದೆ, ಪತ್ರಕರ್ತರಿಗೆ ವಿಮೆ, ಆರೋಗ್ಯ ವಿಮೆ, ನಿವೇಶನ, ಬಸ್ಪಾಸ್ ಸೌಲಭ್ಯವನ್ನು ಸಕರ್ಾರ ನೀಡಬೇಕೆಂದರು. ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು. ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಕ್ಷಣ ಕ್ಷಣಕ್ಕೂ ಜನಸಾಮಾನ್ಯರಿಗೆ ಮಾಹಿತಿ ನೀಡುವ ಪತ್ರಕರ್ತರು ಬಡವರ ಏಳಿಗೆಗೆ ಶ್ರಮಿಸಬೇಕು ಎಂದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ , ಜಿಲ್ಲಾ ಪತ್ರಕರ್ತರ ಸಂಘಧ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾಲೂಕು ಸಂಘದ ಕಾರ್ಯದಶರ್ಿ ಸಿ.ಎಚ್.ಚಿದಾನಂದ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾಥರ್ಿನಿಗಳಾದ ಫ್ಹರಾನಾ, ರೂಪ ಪ್ರಾಥರ್ಿಸಿದರೆ, ಗೋವಿಂದರಾಜು ಸ್ವಾಗತಿಸಿದರು, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿದರೆ ಆರ್.ಸಿ.ಮಹೇಶ್ ವಂದಿಸಿದರು.
ಎನ್.ಎಫ್.ಜಿ.ಸಿ.ಯಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಚಿಕ್ಕನಾಯಕನಹಳ್ಳಿ,ಜು.30: 2011-12ನೇ ಸಾಲಿನ ನವೋದಯ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ ಆಗಸ್ಟ್ 5ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಜಂಟಿ ನಿದರ್ೇಶಕ ಪ್ರೊ.ಟಿ.ಗಂಗಾಧರಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣಯಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿರುವರು.

Thursday, July 28, 2011





ತನು ಭತ್ತ ಸೋನಾಮಸೂರಿಗಿಂತ ಉತ್ಕೃಷ್ಟ: ಕೃಷಿ ತಜ್ಞರ ಅಭಿಮತ
ಚಿಕ್ಕನಾಯಕನಹಳ್ಳಿ,ಜು.28 : ಕಡಿಮೆ ಖಚರ್ಿನಲ್ಲಿ ಅಧಿಕ ಇಳುವರಿ ಪಡೆಯಲು ಮಧ್ಯಮಾವಧಿ ತಳಿ ತನು(ಕೆ.ಎಮ್.ಪಿ.101)ವನ್ನು ಬೆಳೆಯಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ವೈ.ಎನ್. ಶಿವಲಿಂಗಯ್ಯ ಸೂಚಿಸಿದರು
ತಾಲ್ಲೂಕಿನ ಹಂದನಕೆರೆ ಹೋಬಳಿಯ ತಾರೀಕಟ್ಟೆ ಗ್ರಾಮದ ವೀರಭದ್ರ ನಿಶಾನಿಯವರ ಜಮೀನಿನಲ್ಲಿ ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ. ತುಮಕೂರು ಕೃಷಿ ವಿಜ್ಙಾನ ಕೇಂದದ ವತಿಯಿಂದ ನಡೆದ 'ತನು ಭತ್ತ'ದ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು,
ಈ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೇ, ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಯಲು ಸೂಕ್ತವಾಗಿದೆ ಎಂದು ತಿಳಿಸಿದರು. ಭತ್ತವು ಸೋನಾ ಮುಸ್ಸೂರಿಯಂತೆ ಉತ್ಕೃಷ್ಟವಾಗಿದ್ದು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿರುವುದರಿಂದ ರೈತರು ಈ ತಳಿಯನ್ನು ಬೆಳೆಯಬಹುದೆಂದು ತಿಳಿಸಿದರು. ಪ್ರತಿ ಎಕರೆಗೆ 27 ರಿಂದ 28 ಕ್ವಿಂಟಾಲ್ ಧಾನ್ಯವನ್ನು ನಿರೀಕ್ಷಣೆ ಮಾಡಬಹುದಾಗಿದ್ದು ಸುಧಾರಿತ ತಂತ್ರಜ್ಞಾನಗಳಿಂದ ಉತ್ತಮ ಬೀಜ ಸರಿಯಾದ ಕಾಲದಲ್ಲಿ ನಾಟಿ ಸಾವಯವ ಗೊಬ್ಬರ ಬಳಕೆ, ಟ್ರೈ ಕೋಡರ್ಮದಿಂದ ಬೀಜೋಪಚಾರ ನೀರು ನಿರ್ವಹಣೆ ಕಳೆ ನಿರ್ವಹಣೆಯಿಂದ ಹೆಚ್ಚು ಇಳುವರಿ ಪಡೆಯಬಹುದೆಂದು ತಿಳಿಸಿದರು.
ಕೀಟಶಾಸ್ರ್ತಜ್ಞರಾದ ಡಾ. ಶ್ರೀ ನಿವಾಸ ರೆಡ್ಡಿಯವರು ಮಾತನಾಡಿ ಭತ್ತಕ್ಕೆ ಬರುವ ಕೀಟ ಹಾಗೂ ರೋಗಗಳ ಬಗ್ಗೆ ಭತ್ತಕ್ಕೆ ತಗಲುವ ಮಾರಕ ರೋಗವಾದ ಬೆಂಕಿ ರೋಗದ ಲಕ್ಷಣಗಳು ಹಾಗೂ ಅದರ ಸಮಗ್ರ ಕೀಟ ಹತೋಟಿಯ ಬಗ್ಗೆ ಮಾಹಿತಿ ನೀಡಿದರು, ಅಲ್ಲದೇ ಭತ್ತಕ್ಕೆ ಬೀಳುವ ಕೀಟಗಳಾದ ಹಳದಿ ಕಾಂಡ ಕೊರಕ, ಗರಿಸುತ್ತುವ ಹುಳು ಹಾಗೂ ಕೊಳವೆ ಹುಳುವಿನ ಸಮಗ್ರ ಹತೋಟಿಯ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ತಾರೇಕಟ್ಟೆ ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆ ಬೆಳೆಯುವಾಗ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು, ಇಲ್ಲದಿದ್ದರೆ ಬೆಳೆಯ ಇಳುವರಿ ಕಡಿಮೆಯಾಗಿ ರೈತರಿಗೆ ಆಥರ್ಿಕವಾಗಿ ನಷ್ಠವುಂಟಾಗುತ್ತದೆ ಎಂದರು. ರೈತರ ಜೀವನ ಬಳಹ ಕಷ್ಟವಾಗಿರುವುದರಿಂದ ಕೇವಲ ಭೂಮಿಯನ್ನು ನಂಬಿಕೊಂಡರೆ ಸಾಲದು ಪಶುಗಳ ಸಾಕಾಣಿಕೆ, ಗುಡಿಕೈಗಾರಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು ರೈತರು ಪ್ರಾಣಿಗಳಿಗೆ, ಜನುವಾರಗಳಿಗೆ ಆದ್ಯತೆ ನೀಡಿ ಅವರ ಗೊಬ್ಬರವನ್ನು ಕೃಷಿಗೆ ಅಳವಡಿಸಿ ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪ್ರಾಣಿತಜ್ಞ ಮಂಜುನಾಥ್, ಕೃಷಿ ಇಲಾಖೆ ರಂಗಯ್ಯ, ತೋಟಗಾರಿಕೆ ಹರೀಶ್ ನಾಯ್ಕ್, ಗ್ರಾಮಪಂಚಾಯ್ತಿ ಸದಸ್ಯ ನಾಗರಾಜು, ವೀರಭದ್ರ ಸ್ವಾಮಿ ನಿಶಾನಿ, ಸಾವಯವ ಕೃಷಿ ನಿದರ್ೇಶಕ ಮಲ್ಲೇಶ್ಯ್ಯ, ಮಾತಾನಾಡಿದರು.
ಸಮಾರಂಭದಲ್ಲಿ ತೇಜಾಸ್ವಿ ಪ್ರಾಥರ್ಿಸಿ, ಮಲ್ಲೇಶ್ಯ್ಯ ಸ್ವಾಗತಿಸಿದರೆ ವೀರಭದ್ರ ಸ್ವಾಮಿ ನಿಶಾನಿ ವಂದಿಸಿದರು.


Wednesday, July 27, 2011




ವಿದ್ಯಾಥರ್ಿಗಳನ್ನು ಪ್ರತಿಭಾನ್ವಿತರನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆ : ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಜು.27 : ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದರೆ ಬೇರೆ ವಿದ್ಯಾಥರ್ಿಗಳು ನಾವು ಪ್ರತಿಭಾನ್ವಿತರಾಗಬೇಕೆಂಬ ಹುಮ್ಮಸ್ಸು, ಆತ್ಮವಿಶ್ವಾಸ ಅವರ ಮನಸ್ಸಿನಲ್ಲಿ ಚಿಗುರಿ ಶೈಕ್ಷಣಿಕವಾಗಿ ಮುಂದೆ ಬರುತ್ತಾರೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶೈಕ್ಷಣಿಕ ಸಮಾವೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ತಮ್ಮ ಮುಂದಿನ ಉತ್ತಮ ವಿದ್ಯಾಭ್ಯಾಸದ ಭವಿಷ್ಯವನ್ನು ರೂಪಿಸಿಕೊಳ್ಳಲು ಈಗಿನಿಂದಲೇ ಶ್ರಮ ವಹಿಸಬೇಕಾಗಿದೆ ಎಂದ ಅವರು ತಾಲ್ಲೂಕಿನಲ್ಲಿ 150 ಶಾಲೆಗಳ ಕಾಂಪೌಂಡ್ ವ್ಯವಸ್ಥೆ ಸರಿಯಿಲ್ಲದಿದ್ದು ಕಾಂಪೌಂಡ್ ವ್ಯವಸ್ಥೆ ಶೀಘ್ರ ಸರಿಮಾಡಲಾಗುವುದು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಪೋಷಕರು ಹೆಣ್ಣು ಮಕ್ಕಳ ಓದಿಗೆ ಕಡಿವಾಣ ಹಾಕುವುದನ್ನು ತಪ್ಪಿಸಬೇಕು, ಹೆಣ್ಣು ಮಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಅಂಕಗಳಿಸುತ್ತಿದ್ದು ಹೆಣ್ಣು ಮಕ್ಕಳಿಗಾಗಿ ಸಕರ್ಾರ ಹಲವಾರು ರೀತಿಯ ಸೌಲಭ್ಯವನ್ನು ನೀಡುತ್ತಿದೆ ಪೋಷಕರು ಸಕರ್ಾರ ನೀಡುವ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳದೆ ಮಕ್ಕಳ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಡಯಟ್ ಪ್ರಾಂಶುಪಾಲ ಈಶ್ವರಯ್ಯ ಮಾತನಾಡಿ ವಿದ್ಯಾಥರ್ಿಗಳ ಓದಿನಲ್ಲಿ ಸಹನೆ ಅಗತ್ಯವಾಗಿದ್ದು ಸಹನೆ, ಪ್ರೀತಿಯಿಂದಲೇ ಯಾವ ಸಾಧನೆಯನ್ನಾದರೂ ಮಾಡಬಹುದಾಗಿದ್ದು ತಮ್ಮ ಸಾಧನೆಗೆ ಶ್ರಮಿಸಿದ ಎಲ್ಲರನ್ನು ನೆನಪಿಸಿಕೊಳ್ಳುವುದು ಉತ್ತಮ ಕ್ರಿಯಾಶೀಲವಾಗಿದೆ ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು.
ಸಮಾರಂಭದಲ್ಲಿ ತಾಲ್ಲೂಕಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕೆ.ಎಸ್.ಹರೀಶ್, ಎಂ.ಮೇಘನರವರನ್ನು ಹಾಗೂ ತಾಲ್ಲೂಕಿನ ಎಲ್ಲಾ ಪ್ರೌಡಶಾಲೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಬೆಳ್ಳಿಪದಕದೊಂದಿಗೆ ಪುರಸ್ಕರಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಜಿ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಇ.ಓ ಎನ್.ಎಂ.ದಯಾನಂದ್, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹಾಲಿಂಗಯ್ಯ ನಿರೂಪಿಸಿದರೆ, ಗೋವಿಂದರಾಜು ವಂದಿಸಿದರು.
ಮಾನಸಿಕ ಬಲಕ್ಕೆ ಶಿಕ್ಷಣದ ಅಗತ್ಯ
ಚಿಕ್ಕನಾಯಕನಹಳ್ಳಿ,ಜು.27 : ಶಿಕ್ಷಣದಿಂದ ಬುದ್ದಿ ವಿಕಾಗೊಂಡು ಚಾರಿತ್ರ್ಯದ ಮೂಲಕ ಮಾನಸಿಕ ಬಲ ಹೆಚ್ಚಾಗಬೇಕು ಆಗ ಮಾತ್ರ ಶಿಕ್ಷಣದ ಅಧ್ಯಯನ ಸಾರ್ಥಕವಾಗುತ್ತದೆ ಎಂದು ತುಮಕೂರಿನ ಶ್ರೀ ವಿರೇಶಾನಂದ ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ನಾಲ್ಕನೇ ಶೈಕ್ಷಣಿಕ ಸಮಾವೇಶದ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು ಶಿಕ್ಷಕರು ನೈತಿಕ ಜಾಗೃತಿಯಿಂದ, ಸನ್ನಡತೆಯಿಂದ ಸಮಾಜದಲ್ಲಿ ಗುರುತರ ಜವಾಬ್ದಾರಿ ನಿರ್ವಹಿಸಬೇಕು, ಶಿಕ್ಷಕರನ್ನು ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವರು ಕೇವಲ ಅಂಕ ತರಿಸುವ ಶಿಕ್ಷಕರಾಗದೆ ಸಮಾಜದಲ್ಲಿ ಒಳ್ಳೆಯ ಸತ್ಪ್ರಜೆಗಳನ್ನು ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿದೆ, ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಯಬೇಕಾದರೆ ವಿದ್ಯಾಥರ್ಿಗಳು ಸಕರ್ಾರಿ ಶಾಲೆಗೆ ಬರುವಂತಾಗಬೇಕು ಸಕರ್ಾರಿ ಮೂಲಭೂತ ಸೌಲಭ್ಯವಿರುವ ಗ್ರಂಥಾಲಯ, ವಿಜ್ಞಾನೋಪಕರಣ ಬೋಧನೋಪಕರಣಗಳು ಮತ್ತು ಶಾಲಾ ಪರಿಸರ ಖಾಸಗಿ ಶಾಲೆಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮವಾಗಿದೆ ಜವಬ್ದಾರಿಯುತ ಯುವಕ ಪಡೆಯನ್ನು ರೂಪಿಸುವಲ್ಲಿ ಶಿಕ್ಷಣರಂಗದ ಪಾತ್ರ ಮಹತ್ವದಾದುದು ಎಂದು ವಿವರಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರು ಬೋಧನೆಯವಧಿಯಲ್ಲಿ ಹೊಸತನ ರೊಪಿಸಿ ಸಂಶೋಧಕರಾಗಬೇಕು, ಶಿಕ್ಷಣವನ್ನು ಅಥರ್ೈಸಿಕೊಂಡು ಬೋಧಿಸುವ ಶಿಕ್ಷಕ ಅತ್ಯುತ್ತಮ ಶಿಕ್ಷಕ, ಶಿಕ್ಷಕರು ಯಾವಾಗಲೂ ಅಧ್ಯಯನ ಶೀಲರಾಗಬೇಕು ಮಕ್ಕಳಿಗೆ ವಿಮಷರ್ೆ,ವಿಶ್ಲೇಷಣೆ,ಪ್ರಶ್ನೆ ಮಾಡುವುದನ್ನು ಕಲಿಸಬೇಕು, ಅವರ ಬುದ್ದಿಯನ್ನು ಚುರುಕು ಮಾಡಿ ಸಾಮಥ್ರ್ಯದಲ್ಲಿ ಶಕ್ತಿಶಾಲಿಯನ್ನಾಗಿ ರೂಪಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸಕರ್ಾರಿ ಪ್ರೌಢಶಾಲೆ ಜೆ.ಸಿ. ಪುರಕ್ಕೆ ನಾಲ್ಕ ಹೋಲಿಗೆ ಯಂತ್ರ ಕೊಡಿಗೆಯಾಗಿ ನೀಡಿಲಾಯಿತು.
ಸಮಾರಂಭದಲ್ಲಿ ತುಮಕೂರು ದಕ್ಷಿಣ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಬೋದಕರ ಸಂಘದ ಅಧ್ಯಕ್ಷರಾದ ಮಾದಪುರ ಶಿವಪ್ಪನವರು ಮತ್ತು ಚಿ.ನಾ.ಹಳ್ಳಿ ತಾಲ್ಲೋಕ್ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಸಂಘದ ಅಧ್ಯಕ್ಷರಾದ ಗೋವಿಂದರಾಜುರವರು ಮಾತನಾಡಿದರು
ಈ ಸಂದರ್ಭದಲ್ಲಿ ನಿವೃತ್ತ, ವಗರ್ಾಯುತ, ಹಾಗೂ ಮುಂಬಡ್ತಿ ಪಡೆದ ಕನ್ನಡ ಶಿಕ್ಷಕರನ್ನು, ಶೇ100 ರಷ್ಟು ಫಲಿತಾಂಶ ತಂದ ಶಿಕ್ಷಕರನ್ನು ಮತ್ತು ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ನಿರ್ಮಲ ಸ್ವಾಗತಿಸಿ ಎಲ್. ರೇವಣ್ಣ ವಂದಿಸಿ ಹೆಚ್.ಆರ್..ರೇಖಾ ನಿರೂಪಿಸಿದರು.

Saturday, July 23, 2011



ಮಂಡಲ ಬಿ.ಜೆ.ಪಿ.ಯಲ್ಲಿರುವ ಗೊಂದಲ ನಿವಾರಣೆಯಾಗಲಿ: ಮೈಸೂರಪ್ಪ
ಚಿಕ್ಕನಾಯಕನಹಳ್ಳಿ,ಜು.19 : ಮಂಡಲ ಬಿ.ಜೆ.ಪಿ.ಪಕ್ಷ, ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದೆ ಇದರಿಂದ ಪಕ್ಷದ ಸಂಘಟನೆ ದುರ್ಬಲವಾಗುತ್ತಿದೆ ಎಂದು ಮಂಡಲ ಬಿ.ಜೆ.ಪಿ. ಉಪಾಧ್ಯಕ್ಷ ಎಂ.ಎಸ್.ಮೈಸೂರಪ್ಪ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿ ತಾಲ್ಲೂಕು ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ, ಆದರೂ ಗೆದ್ದಂತಹ ಜನಪ್ರತಿನಿಧಿಗಳನ್ನು ಕರೆದು ಅಭಿನಂದಿಸುವ ಕನಿಷ್ಠ ಸೌಜನ್ಯವು ಪಕ್ಷದ ಮುಖಂಡರಿಗಿಲ್ಲ ಎಂದರು.
ತಾಲ್ಲೂಕಿಗೆ ನೀರಾವರಿ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲು ತಾಲ್ಲೂಕು ಸಮಿತಿ ಸಭೆ ಕರೆದು ನಿಶ್ಚಯ ಮಾಡಿ ಪಕ್ಷದ ವತಿಯಿಂದ ನಿಯೋಗ ಕರೆದೊಯ್ಯಬೇಕಾಗಿತ್ತು, ಆದರೆ ತಾಲ್ಲೂಕು ಅಧ್ಯಕ್ಷರು ಪಕ್ಷಪಾತ ಧೋರಣೆಯಿಂದ ತಮಗೆ ಬೇಕಾದವರನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಭೇಟಿಗೆ ಹೋಗಿದ್ದಾರೆ ಎಂದು ಆರೋಪಿಸಿರುವ ಅವರು ತಾಲ್ಲೂಕಿಗೆ ಮಂಜೂರಾಗಿರುವ ನೀರಾವರಿ ಯೋಜನೆಯು ಕ್ಷೇತ್ರದ ಕಾರ್ಯಕರ್ತರಿಗೆ ಹರ್ಷ ತಂದಿದೆ, ವಿಶೇಷವಾಗಿ ಶೆಟ್ಟಿಕೆರೆ ಹೋಬಳಿ ಕಾರ್ಯಕರ್ತರ ಪಕ್ಷ ಸಂಘಟನೆಗೆ ಹೆಚ್ಚು ಉತ್ಸಾಹತಂದಿದೆ ಎಂದಿದ್ದಾರೆ.
ಗೋಷ್ಠಿಯಲ್ಲಿ ಜಿ.ಪಂ,ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ರಮೇಶ್ಕುಮಾರ್, ಬೂತ್ ಕಮಿಟಿ ಅಧ್ಯಕ್ಷ ಶಂಕರಪ್ಪ, ಪ್ರಭು, ಮಹೇಶ್, ಶಿವಶಂಕರ್, ನಾಗರಾಜು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟಿಸುವಂತಹ ಅಬ್ಯಾಥರ್ಿಯನ್ನು ಹುಡುಕುತ್ತಿದ್ದೇವೆ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.23 : ತಾಲ್ಲೂಕಿನಲ್ಲಿ ಪಕ್ಷ ಸಂಘಟಿಸುವಂತಹ ಚಾಕಚಕ್ಯತೆ ಇರುವ ಅಭ್ಯಥರ್ಿಯನ್ನು ಹುಡುಕುತ್ತಿದ್ದೇವೆ ಎಂದರಲ್ಲದೆ, ಕಾಂಗ್ರೇಸ್ ನಡೆಗೆ ಜನರ ಕಡೆಗೆ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಆಗಸ್ಟ್ 15ರೊಳಗೆ ನಡೆಯಲಿದ್ದು ಯುವ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ಹಾಗೂ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಂಘಟಿಸುವ ಸಲುವಾಗಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಗ್ರಾಮೀಣ ಮಟ್ಟದಲ್ಲಿ ನಮ್ಮ ಪಕ್ಷವನ್ನು ಈ ನಡಿಗೆ ಬಲಿಷ್ಠಗೊಳಿಸುತ್ತಿದ್ದು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ರವರು ನಮಗೆ ಜವಾಬ್ದಾರಿ ವಹಿಸಿದ್ದಾರೆ ಎಂದ ಅವರು, ಈಗಾಗಲೇ ಜಿಲ್ಲೆಯಲ್ಲಿ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ತುರುವೇಕೆರೆ, ಕುಣಿಗಲ್, ತಿಪಟೂರು ತಾಲ್ಲೂಕುಗಳಲ್ಲ ಕಾರ್ಯಕ್ರಮ ಯಶಸ್ವಿಯಾಗಿದೆ ತಾಲ್ಲೂಕಿನಲ್ಲಿ ಆಗಸ್ಟ್ 15ರೊಳಗೆ ಕಾರ್ಯಕ್ರಮ ನಡೆಯಲಿದ್ದು
ಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಬ್ಲಾಕ್ ಸಮಿತಿ ಅಧ್ಯಕ್ಷ ಸಿ.ಬಸವರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದರು.

Friday, July 22, 2011



ಸ್ತ್ರೀಶಕ್ತಿ ಹಾಗೂ ಸ್ವಸಹಾಯಗಳಿಗೆ 50 ಕೋಟಿ ಸಾಲ ವಿತರಣೆ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.22 : ಜಿಲ್ಲೆಯಾದ್ಯಂತ ಹಲವು ಸ್ತ್ರೀ ಶಕ್ತಿ ಸಂಘಗಳಿಗೆ, ಸ್ವಸಹಾಯ ಸಂಘಗಳಿಗೆ ಸುಮಾರು 40ರಿಂದ 50ಕೋಟಿವರೆಗೆ ಡಿ.ಸಿ.ಸಿ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡಿರುವುದಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘಗಳ, ಗ್ರಾಮೀಣ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುತ್ತಿದ್ದೇವೆ, ಬ್ಯಾಂಕ್ ಹೆಚ್ಚಾಗಿ ಮಹಿಳೆಯರ ಮೇಲಿನ ನಂಬಿಕೆಯಿಂದ ಸಾಲ ನೀಡುತ್ತಿದೆ, ಮಹಿಳೆಯರ ಆಥರ್ಿಕ ಅಭಿವೃದ್ದಿಗೋಸ್ಕರ ಬ್ಯಾಂಕ್ ಶೇ.4ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದು ಸಾಲ ಪಡೆದವರು ಉಳಿತಾಯದ ಮನೋಭಾವನೆಯನ್ನು ಹೊಂದುವುದರ ಜೊತೆಗೆ ಅದೇ ರೀತಿ ಸಾಲ ಮರುಪಾವತಿ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರದ ನಬಾಡರ್್ನ ನಿಯಮದಂತೆ ಪ್ರಥಮ ಬಾರಿಗೆ ಸಾಲ ಪಡೆದ ವ್ಯಕ್ತಿಯು ಶೀಘ್ರವಾಗಿ ಸಾಲ ಮರುಪಾವತಿ ಮಾಡಿದರೆ ಎರಡನೇ ಬಾರಿ ದುಪ್ಪಟ್ಟು, ಮೂರನೇ ಬಾರಿ ಮೂರರಷ್ಟು ಸಾಲವನ್ನು ನೀಡವ ನಿಯಮವಿದ್ದು ಸಾಲ ಪಡೆದ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಅಂತಹವರಿಗೆ ಈ ನಿಯಮ ಅಳವಡಿಕೆಯಾಗಲಿದೆ ಎಂದರಲ್ಲದೆ ಮಧುಗಿರಿ ತಾಲ್ಲೂಕಿಗೆ ಸಾಲ ಸೌಲಭ್ಯದಲ್ಲಿ ಪ್ರೋತ್ಸಾಹಿಸಿದಂತೆ ಚಿ.ನಾ.ಹಳ್ಳಿ ತಾಲ್ಲೂಕಿಗೆ ಜೆ.ಸಿ.ಮಾಧುಸ್ವಾಮಿಯವರಿಗೋಸ್ಕರವಾದರೂ ಸಾಲವನ್ನು ಹೆಚ್ಚಾಗಿ ನೀಡುತ್ತಾ ಬಡವರ ಆಥರ್ಿಕ ನೆರವಿಗ ಆಂದೋಲನ ಕೈಗೊಳ್ಳಲಿದ್ದೇವೆ ಎಂದರು.
ತಾವು ಸದೃಡವಾಗಲು ಮತ್ತೊಬ್ಬರ ಬಳಿ ಹಣಕ್ಕಾಗಿ ಪರದಾಡುವ ಬಡವರಿಗೆ ಬ್ಯಾಂಕ್ ಸಾಲ ಸೌಲಭ್ಯ ನೀಡಿ ನೆರವಾಗಲಿದೆ, ಅಲ್ಲದೆ ವ್ಯವಸಾಯೇತರ ಕಾರ್ಯಗಳಿಗೂ ಬ್ಯಾಂಕ್ ಸಾಲ ನೀಡುತ್ತಿದ್ದು ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ಹೆಚ್ಚು ಅವಕಾಶವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಸಂಘ ಸಂಸ್ಥೆಗಳ ಸದಸ್ಯರು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಅಭಿವೃದ್ದಿ ಸಾಧ್ಯವಾಗುವುದು ಎಂದರಲ್ಲದೆ, ಈಗಿನ ಕಾಲಮಾನಕ್ಕೆ ತಕ್ಕಂತೆ ಮಹಿಳೆಯರು ಮುಂದೆ ಬಂದು ಆಥರ್ಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಬಲೀಕರಣ ಹೊಂದಬೇಕಾಗಿದೆ ಎಂದರು. ಜಿಲ್ಲಾ ಬ್ಯಾಂಕಿನಿಂದ ಸಾಲ ಪಡೆದವರು ತಮ್ಮ ಹಲವು ಸಮಸ್ಯೆಗಳನ್ನು ನಿವಾರಿಸಿ ನೆರವು ಪಡೆದುಕೊಂಡಿದ್ದಾರೆ ತಮ್ಮ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿ ಸಂಘ ಸಂಸ್ಥೆಗಳಿಗೆ ಜಿಲ್ಲಾ ಬ್ಯಾಂಕ್ ನೀಡುವ ಸಾಲವನ್ನು ಪಡೆದು ಉತ್ತಮ ಕಾರ್ಯಗಳಿಗೆ ಬಳಸಿಕೊಂಡು ಸಾಲವನ್ನು ಮರುಪಾವತಿ ಮಾಡಬೇಕು ಹಾಗೂ ಮಹಿಳೆಯರು ಚೀಟಿ ಮಾಡುವುದನ್ನು ಬಿಡಬೇಕು ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜಿಲ್ಲಾ ಬ್ಯಾಂಕ್ ತಾಲ್ಲೂಕಿನ ಎಲ್ಲಾ ಕೃಷಿ ಅವಲಂಬಿತ ಸಂಘ ಸಂಸ್ಥೆಗಳಿಗೆ ಸಾಲ ನೀಡಿದ್ದು ಕನಿಷ್ಠ 5 ಲಕ್ಷದ ವರೆಗೆ ಸಂಘಗಳಿಗೆ ಸಾಲ ವಿತರಣೆ ಮಾಡಿದೆ, ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಸಾಲ ವಿತರಣೆ ಮಾಡಲಿದ್ದೇವೆ ಎಂದ ಅವರು ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎನ್.ರಾಜಣ್ಣನವರ ಆಲೋಚನೆಗಳು ಒಂದೇ ಅವರಿಂದ ಜಿಲ್ಲೆ ಉತ್ತಮ ಅಭಿವೃದ್ದಿಯಾಗಲಿದೆ ಎಂದರು.
ಸಮಾರಂಭದಲ್ಲಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಪಿ.ರವಿಶಂಕರ್, ಕಾಂತರಾಜು, ದಯಾನಂದ್ , ಪಾರ್ವತಮ್ಮ, ಜಿ.ಎಸ್.ಕುಶಲ ಮುಂತಾದವರಿದ್ದರು.
ಹೇಮೆ ಹರಿಯಲು ಹೋರಾಡಿದ ಸಂಘ ಸಂಸ್ಥೆಗಳಿಗೆ ಅಭಿನಂದನೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜು.22: ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ 26 ಕೆರೆಗಳ ನೀರು ಹಾಯಿಸಲು ಸಕರ್ಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಹಲವು ಸಂಘ ಸಂಸ್ಥೆಗಳು, ಹೋರಾಟಗಾರರು ಹಾಗೂ ಮಠಾಧೀಶರ ಪರವಾಗಿ ಸಕರ್ಾರದ ನೀರಾವರಿ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘ, ಕ.ರ.ವೇ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಮಾತನಾಡಿ, ಸಕರ್ಾರ ಹೇಮಾವತಿ ನಾಲೆಯಿಂದ 0.80 ಟಿ.ಎಂ.ಸಿ.ನೀರನ್ನು ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತೀಮರ್ಾನಿಸಿದ್ದು, ಈ ಕಾಮಗಾರಿ ಕೈಗೆತ್ತಿಕೊಳ್ಳಲು 102 ಕೋಟಿ ರೂಗಳ ಮಂಜೂರಾತಿ ಆದೇಶವನ್ನು ನೀಡಿದೆ. ಇದರಿಂದಾಗಿ ತಾಲೂಕಿನ 22 ಕೆರೆಗಳಿಗೆ ಗುರುತ್ವಾಕರ್ಷಣ ಬಲದಲ್ಲಿ ನೀರು ಹರಿಯಲಿದ್ದು, ಉಳಿದ ನಾಲ್ಕು ಕೆರೆಗಳಾದ ನಡುವನಹಳ್ಳಿ, ಜೆ.ಸಿ.ಪುರ, ಗೋಡೆಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದ ಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸಲು ತೀಮರ್ಾನಿಸಿರುವುದು ಸಂತೋಷದಾಯಕ ಕಾರ್ಯ ಎಂದರಲ್ಲದೆ ತಾಲೂಕಿನ ಜನತೆಯ ಬಹು ದಿನಗಳ ಆಸೆ ಈಡೇರಿದಂತಾಗಿದೆ ಎಂದರು. ಕುಡಿಯುವ ನೀರಿಗಾಗಿ ತಾಲೂಕಿನಲ್ಲಿ ಕಳೆದ 2006ರಿಂದ ವಿವಿಧ ರೀತಿಯ ಹೋರಾಟಗಳು ಹಾಗೂ ಈ ಭಾಗದ ಮಠಾಧೀಶ್ವರರ ನೈತಿಕ ಬೆಂಬಲದ ಫಲವಾಗಿ ಈ ಯೋಜನೆಗೆ ಸಕರ್ಾರ ಅನುಮೋದನೆ ನೀಡಿದೆ ಎಂದರು.
ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ಬೋರನ ಕಣಿವೆ ಜಲಾಶಯ ಹೊರತುಪಡಿಸಿ 22 ಕೆರೆಗಳಿಗೆ ಮಾತ್ರ ಸಕರ್ಾರ ನೀರು ಹರಿಸಲು ಒಪ್ಪಿಗೆ ನೀಡಿದೆ, ಇದರಿಂದಾಗಿ ನಮ್ಮ ಹೋರಾಟ ಇನ್ನು ಮುಂದೆ ಸಾಗಬೇಕಾಗಿದೆ, ನಮ್ಮ ಹೋರಾಟವಿರುವುದು ಬೋರನಕಣಿವೆ ಜಲಾಶಯಕ್ಕೆ ನೀರು ತರುವುದೇ ನಮ್ಮ ಅಂತಿಮ ಗುರಿ ಎಂದರು.
ಹುಳಿಯಾರಿನಲ್ಲಿ ಸುಮಾರು 2 ತಿಂಗಳ ಕಾಲ ನಡೆಸಿದ ಧರಣಿಗೆ ಬೆಂಬಲಿಸಿದ 63 ಸಂಘಟನೆಗಳಿಗೆ ಹಾಗೂ ತುಮಕೂರಿನ ಹೃದ್ರೋಗ ತಜ್ಞ ಜಿ.ಪರಮೇಶ್ವರಪ್ಪ ನವರ ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ನಾವು ಹುಳಿಯಾರಿನಲ್ಲಿ ನಡೆಸಿದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ರವರು ಅಂದು ನೀಡಿ ಹೋದ ಭರವಸೆಯನ್ನು ಭಾಗಶಃ ಪೂರೈಸಿದ್ದಾರೆ ಎಂದರು.
ಈ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಈಗಿನ ಉಸ್ತುವಾರಿ ಸಚಿವ ವಿ.ಸೋಮಣ್ಣನವರನ್ನು ತಾಲೂಕಿನ ಜನತೆಯ ಪರವಾಗಿ ಅಭಿನಂದಿಸಿದರು.
ಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತಿಮಾ, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್).ತಾ.ಪಂ. ಸದಸ್ಯರುಗಳಾದ ಲತಾ ವಿಶ್ವನಾಥ್, ಚೇತನ ಗಂಗಾಧರಯ್ಯ, ಹೇಮಾವತಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಪುರಸಭಾ ಸದಸ್ಯರುಗಳಾದ ಸಿ.ಎಸ್.ರಮೇಶ್, ರಾಜಣ್ಣ, ಸಿ.ಟಿ.ವರದರಾಜು, ಕೃಷ್ಣಮೂತರ್ಿ, ಎಂ.ಎನ್.ಸುರೇಶ್, ಜೆ.ಡಿ.ಎಸ್. ಕಾರ್ಯಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಕ.ರ.ವೇ. ಅಧ್ಯಕ್ಷ ಸಿ.ಟಿ.ಗುರುಮೂತರ್ಿ ರುದ್ರೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Wednesday, July 20, 2011




ವಿಧವಾ ವೇತನ ಸೇರಿದಂತೆ ಎಲ್ಲಾ ಸಕರ್ಾರಿ ಪಿಂಚಣಿಗಳನ್ನು ಬ್ಯಾಂಕ್ ಖಾತೆಗೆ ಜಮಾಯಿಸಿ
ಚಿಕ್ಕನಾಯಕನಹಳ್ಳಿ,ಜು.20 : ವಿಧವಾ ವೇತನಾ, ಅಂಗವಿಕಲರ ವೇತನ ಸೇರಿದಂತೆ ಸಕರ್ಾರ ನೀಡುವ ಪಿಂಚಣಿಯ ಹಣವನ್ನು ಪ್ರತಿ ಫಲನಾಭವಿಯು ಸಕರ್ಾರದಿಂದ ನೇರಪಡೆಯುವಂತಾಗಲು ಬ್ಯಾಂಕ್ ಖಾತೆಗಳ ಮೂಲಕ ಪಡೆಯುವಂತಾಗಲು ಅಧಿಕಾರಿಗಳು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಇಲಾಖಾ ಪ್ರಗತಿಯ ಬಗ್ಗೆ ಚಚರ್ಿಸಿದ ಅವರು ಸಕರ್ಾರದಿಂದ ಪಿಂಚಣಿ ಸೌಲಭ್ಯವನ್ನು ಪಡೆಯವವರು ತಮ್ಮ ಹತ್ತಿರದಲ್ಲಿರುವ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದು ಬ್ಯಾಂಕ್ಗಳ ಮೂಲಕ ತಮ್ಮ ಹಣವನ್ನು ಪಡೆದುಕೊಳ್ಳಬೇಕು, ಪೋಸ್ಟ್ಮ್ಯಾನ್ಗಳು ಫಲಾನುಭವಿಗಳಿಗೆ ನೀಡವ ಹಣದಲ್ಲಿ ಪ್ರತಿಯೊಬ್ಬರಿಂದ 25 ರೂ ಹಣವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಇದನ್ನು ತಪ್ಪಿಸಲು ಖಜಾನಾಧಿಕಾರಿಗಳು ಫಲಾನುಭವಿಗಳಿಂದ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆಸಬೇಕು ಎಂದರು.
ತಾಲ್ಲೂಕಿನ 149 ಅಂಗನವಾಡಿ ಕೇಂದ್ರಗಳಲ್ಲಿನ ಕೊಠಡಿಗಳು ದುರಸ್ತಿಯಿರುವುದರಿಂದ, ಆ ಕೊಠಡಿಗಳು ಸರಿಯಾಗುವವರೆಗೆ ಮಕ್ಕಳಿಗೆ ಭೋದನೆಯನ್ನು ಬೇರೆ ಸ್ಥಳಗಳಲ್ಲಿ ಮಾಡಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ತಾಲ್ಲೂಕಿನ ಇಲಾಖೆಗಳಲ್ಲಿನ ಅಧಿಕಾರಿಗಳು ಬೇಜವಬ್ದಾರಿತನದಿಂದ ವತರ್ಿಸುತ್ತಾ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಸಣ್ಣ ಪುಟ್ಟ ಕೆಲಸಗಳನ್ನೂ ವ್ಯವಸ್ಥಿತವಾಗಿ ಮಾಡುತ್ತಿಲ್ಲ ಎಂದ ಅವರು, ಕೃಷಿ ಇಲಾಖೆಯಲ್ಲಿ ರೈತರಿಗೆ ಸೂಕ್ತಮಾರ್ಗದರ್ಶನ ದೊರೆಯುತ್ತಿಲ್ಲವೆಂದರು, ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ಸರಿಯಾಗಿ ಉಪಚರಿಸುತ್ತಿಲ್ಲ, ಪಶು ಇಲಾಖಾ ಕಛೇರಿ ಅವ್ಯವಸ್ಥೆಯ ಬಗ್ಗೆ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬೀಬಿ ಪಾತೀಮ, ಚೇತನಗಂಗಾಧರ್, ಕುಮಾರರುದ್ರ, ಇ.ಓ ಎನ್.ಎಂ.ದಯಾನಂದ್, ತಾಲ್ಲೂಕಿನ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿ.ಎಸ್.ಬಿ.ಯವರು ಸಿ.ಎಂ.ರವರನ್ನು ಮೂದಲಿಸುವುದನ್ನು ಬಿಡಲಿ.
ಚಿಕ್ಕನಾಯಕನಹಳ್ಳಿ,ಜು.20: ಬಿಜೆಪಿ ನಾಮಬಲ, ಕಾರ್ಯಕರ್ತರ ಶ್ರಮದಿಂದ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಜಿ.ಎಸ್.ಬಸವರಾಜುರವರು ಕಾಂಗ್ರೆಸ್ನ ಸಂಸದರಂತೆ ವತರ್ಿಸುತ್ತಾ, ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ನಾಯಕರನ್ನು ಅವಹೇಳನಕಾರಿಯಾಗಿ ಟೀಕಿಸುತ್ತಿರುವುದನ್ನು ಭಾಜಪಾ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ಎಂ.ಎಸ್.ರವಿಕುಮಾರ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಸದರಾಗಿ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಚಿಂತಿಸುವ ಬದಲು ಪಕ್ಷದ ವರ್ಚಸ್ಸನ್ನು ಹಾಳುಮಾಡುತ್ತಿದ್ದಾರೆ, ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಈ ಉಪ ವಿಭಾಗದ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯಥರ್ಿಯ ವಿರುದ್ದ ತಮ್ಮ ಬೆಂಬಲಿಗರಿಗೆ ಪ್ರಚಾರ ಮಾಡಿದರೆ ಗುಬ್ಬಿಯಲ್ಲಿ ತಮ್ಮ ಬೆಂಬಲಿಗನಿಗೆ ಗೆಲವು ದೊರಕಿಸಿಕೊಡಲು ಬಹಿರಂಗವಾಗಿಯೇ ಪಕ್ಷದ ಅಭ್ಯಥರ್ಿಯ ವಿರುದ್ದ ತೊಡೆ ತಟ್ಟಿದ್ದರು ಎಂದ ಅವರು ಕೇಂದ್ರದ ಕಾಂಗ್ರೆಸ್ ಸಕರ್ಾರವನ್ನು ಹೊಗಳುತ್ತಾ ರಾಜ್ಯ ಸಕರ್ಾರವನ್ನು ತೆಗಳುತ್ತಾ ತಮ್ಮ ಅನುಕೂಲಕ್ಕೆ ರಾಜ್ಯ ಸಕರ್ಾರವನ್ನು ಬಳಸಿಕೊಳ್ಳುತ್ತಾ ಪಕ್ಷ ವಿರೋದಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ
ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯ ನಾಗರಾಜು, ಭಾಜಪ ಸ್ಥಾನೀಯ ಸಮಿತಿ ಕಾರ್ಯದಶರ್ಿ ಭೈರೇಶ್, ನಗರ ಕಾರ್ಯದಶರ್ಿ ನಂದೀಶ್, ಮಂಜುನಾಥ್ ಉಪಸ್ಥಿತರಿದ್ದರು.

Tuesday, July 19, 2011




ಪಟ್ಟಣದ ಕಸವಿಲೇವಾರಿ ಕಾರ್ಯಕ್ಕೆ ಸ್ತ್ರೀಶಕ್ತಿ ಸಂಘಗಳು ಆಸಕ್ತಿ
ಚಿಕ್ಕನಾಯಕನಹಳ್ಳಿ,ಜು.19: ಪಟ್ಟಣದ ಕಸ ವಿಲೇವಾರಿ ಮಾಡಲು ಆಸಕ್ತ ಸ್ತ್ರೀಶಕ್ತಿ ಸಂಘಗಳಿಗೆ ಅವಕಾಶ ಕಲ್ಪಿಸುಲಾಗುವುದು, ಈ ಸಂಬಂಧ ಈಗಾಗಲೇ ಕೆಲವು ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿವೆ ಎಂದು ಪುರಸಭೆಯ ಪರಿಸರ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದ್ದಾರೆ.
ಪಟ್ಟಣದ 9ನೇ ವಾಡರ್ಿನಲ್ಲಿ ಪುರಸಭೆ ಹಾಗೂ ಸೃಜನಾ ಮಹಿಳಾ ಸಂಘಟನೆ ಸಂಯುಕ್ತವಾಗಿ ಏರ್ಪಡಿಸಿದ್ದ ಮಹಿಳೆಯರಿಗಾಗಿ ಪರಿಸರ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣದ ಪ್ರತಿ ಮನೆಯಲ್ಲಿನ ಘನತ್ಯಾಜ್ಯ ವಿಲೇವಾರಿಯನ್ನು ಸುಲಭಗೊಳಿಸಲು ಕಸವನ್ನು, ಕರಗದ ಕಸ ಮತ್ತು ಕರಗುವ ಕಸ ಎಂದು ವಿಂಗಡಿಸುವಂತೆ ಮಹಿಳೆಯರಿಗೆ ತಿಳುವಳಿಕೆ ಮೂಡಿಸುವುದು ಇಂತಹ ಜಾಗೃತಿ ಸಭೆಯ ಉದ್ದೇಶ ಎಂದರು. ಕಸವನ್ನು ಸಂಗ್ರಹಿಸಲು ಆಟೋರಿಕ್ಷಾ ಹಾಗೂ ತಳ್ಳುವಗಾಡಿಯನ್ನು ಬಳಸಲಾಗುವುದು, ಬೀದಿ ಕಸವನ್ನು ಎತ್ತಿಹಾಕಲು ತಳ್ಳುವಗಾಡಿಯನ್ನು ಈಗಾಗಲೇ ಬಳಸಲಾಗುತ್ತಿದ್ದು, ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಲು ಆಟೋರಿಕ್ಷಾ ವಾಹನವನ್ನು ಬಳಸಲಾಗುವುದು ಎಂದರು.
ಪುರಸಭಾ ಸದಸ್ಯೆ ಸಿ.ಎಂ.ರೇಣುಕ ಗುರುಮೂತರ್ಿ ಮಾತನಾಡಿ, ಕಸ ವಿಲೇವಾರಿ ಜವಬ್ದಾರಿಯನ್ನು ತೆಗೆದುಕೊಳ್ಳಲು ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿರುವುದು ಸ್ತ್ರೀಯರು ಮನೆಯ ಸ್ವಚ್ಚತೆಗಷ್ಟೇ ಸೀಮಿತವಲ್ಲ, ಊರಿನ ಸ್ವಚ್ಚತೆಗೂ ಸೈ ಎನ್ನಿಸಿಕೊಳ್ಳುವ ಕಾಲ ದೂರವಿಲ್ಲವೆಂದರು.
ಪರಿಶಿಷ್ಟ ಜಾತಿಯವರಿಗೆ ಸಕರ್ಾರ ಅಡಿಗೆ ಅನಿಲ ಸಂಪರ್ಕ ಕಲ್ಪಿಸಲು ಮುಂದಾಗಿದ್ದು ಎಲ್ಲಾ ಪರಿಶಿಷ್ಟರು ತಮ್ಮ ಹೆಸರುಗಳನ್ನು ನೊಂದಾಯಿಸಲು ಪುರಸಭೆಯಲ್ಲಿ ಸೂಕ್ತ ಮಾಹಿತಿ ಪಡೆಯುವಂತೆ ಮಹಿಳೆಯರಿಗೆ ತಿಳಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರುಗಳಾದ ಶುಭ ಬಸವರಾಜು, ಸೃಜನಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಯಮ್ಮ, ಕಾರ್ಯದಶರ್ಿ ಎನ್.ಇಂದಿರಮ್ಮ ಸೇರಿದಂತೆ ಸ್ಥಳೀಯ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
'ಅಲೆಮಾರಿ ಬುಡಕಟ್ಟು ಮಹಾಸಭಾ'ದ ಸಭೆ
ಚಿಕ್ಕನಾಯಕನಹಳ್ಳಿ,ಜು.19 : ತುಮಕೂರು ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಅಲೆಮಾರಿ ಬುಡಕಟ್ಟು ಮಹಾಸಭಾ ಅಡಿಯಲ್ಲಿ ಸಂಘಟನೆಗಳ್ಳಲು ಇದೇ 23ರ ಶನಿವಾರ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ.
ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳಿಗೆ ಇರುವ ಅಡ್ಡಿ ಆತಂಕಗಳನ್ನು ಹೋಗಲಾಡಿಸಲು ಸಂಘಟನೆ ಆದ್ಯತೆ ನೀಡಿದ್ದು, ರಾಜ್ಯಮಟ್ಟದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದು ಈ ಸಂಘಟನೆ ಅಡಿಯಲ್ಲಿ ನಮ್ಮ ಜಿಲ್ಲೆಯ ಜನರು ನೊಂದಾಯಿಸಿಕೊಳ್ಳಲು ತೀಮರ್ಾನಿಸಲಾಗಿದೆ, ಜಿಲ್ಲೆಯಲ್ಲಿ ಎಲ್ಲಾ ಅಲೆಮಾರಿ ಸಮುದಾಯಗಳ ಪೂರ್ವಭಾವಿ ಸಭೆ ನಡೆಸುತ್ತಿದ್ದು ಸಮುದಾಯದ ಪ್ರತಿನಿಧಿಗಳು ಸಭೆಗೆ ಹಾಜರಾಗಲು ಕೋರಿದ್ದಾರೆ ಹೆಚ್ಚಿನ ವಿವರಗಳಿಗಾಗಿ ಶಾಂತರಾಜ್-8453474230, ರಾಜಪ್ಪ-9901084703 ನಂಬರ್ಗೆ ಸಂಪಕರ್ಿಸಲು ಕೋರಿದ್ದಾರೆ.
ವಿವಿಧ ವರ್ಗದ ಜನರಿಗೆ ಡಿ.ಸಿ.ಸಿ.ಬ್ಯಾಂಕ್ ಸಾಲದ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜು.19 : ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣಾ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2010-11ನೇ ಸಾಲಿನ ಸರ್ವಸದಸ್ಯರ ವಾಷರ್ಿಕ ಮಹಾಸಭೆಯ ಸಮಾರಂಭವನ್ನು ಇದೇ 22ರ ಶುಕ್ರವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ಜಯಚಾಮರಾಜಪುರದ ಸಹಕಾರ ಸಂಘದ ಕಟ್ಟಡದಲ್ಲಿ ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿದ್ದು ಜಿಲ್ಲಾ ಸಹಕಾರ ಕೇಂದ್ರದ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಲ ವಿತರಣೆ ಮಾಡಲಿದ್ದು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.