Tuesday, February 8, 2011





ಚಿಕ್ಕನಾಯಕನಹಳ್ಳಿ.ಫೆ.08: ಮಹಿಳೆಯರು ತಮಗೆ ಸಿಗಬೇಕಾದ ಹಕ್ಕು, ಮೀಸಲಾತಿ ಹಾಗೂ ಕಾನೂನಿನ ಅರಿವಿನ ಬಗ್ಗೆ ತಿಳಿದುಕೊಳ್ಳಲು ಮಹಿಳೆಯರಿಗಾಗಿ ನಡೆಯುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಕಾನೂನಿನ ಅರಿವಿನ ನೆರವನ್ನು ಪಡೆದುಕೊಳ್ಳಬೇಕು ಎಂದು ಸಿವಿಲ್ ಹಿರಿಯ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಕರೆ ನೀಡಿದರು.
ತಾಲೂಕಿನ ಹಂದನಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಟುಂಬಿಕ ದೌರ್ಜನ್ಯ ಸಂ ರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೌಂಟುಬಿಕ ಸಮಸ್ಯೆಯನ್ನು ಬಗೆಹರಿಸಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ದೂರಿನ ಅಜರ್ಿಯನ್ನು ಸಲ್ಲಿಸಿ, ರಾಜಿ ಸಂದಾನದ ಮೂಲಕ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು, ಸಮಸ್ಯೆ ರಾಜಿ ಸಂದಾನದ ಮೂಲಕ ಇತ್ಯರ್ಥವಾಗದೆ ಇದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ, ಶೀಘ್ರವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
ವಕೀಲ ವೈ.ಜಿ.ಲೋಕೇಶ್ ಮಾತನಾಡಿ ಮಹಿಳೆಯರು ಕಾಖರ್ಾನೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಹೆರಿಗೆ ರಜೆ, ತಂದೆ ಆಸ್ತಿಯಲ್ಲಿನ ಹಕ್ಕು, ಜೀವನಾಂಶದ ಬಗ್ಗೆ ಆಸ್ತಿಯನ್ನು ಮಾರಾಟಮಾಡುವುದು ಹಾಗೂ ಆಸ್ತಿಯನ್ನು ವಿಲ್ ಮಾಡುವ ಬಗ್ಗೆ ಇರುವ ಕಾನೂನುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದ ಅವರು ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಂಬಳ ಸಾರಿಗೆಯನ್ನು ಹಣದ ರೂಪದಲ್ಲಿಯೇ ನೀಡಬೇಕೇ ಹೊರತು ವಸ್ತು ರೂಪದಲ್ಲಿ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ವಕೀಲ ಎಂ.ಎನ್.ಶೇಖರ್ ಮಾತನಾಡಿ ಕುಟುಂಬದಲ್ಲಿನ ಸದಸ್ಯರಲ್ಲಿ ನಡೆಯುವ ಹಿಂಸೆ, ದೈಹಿಕ ಹಿಂಸೆ, ಲೈಂಗಿಕ ಹಿಂಸೆ, ಅಶ್ಲೀಲ ಚಿತ್ರ ಪ್ರದರ್ಶನ, ಭಾವನಾತ್ಮಕ ಹಿಂಸೆ ಮತ್ತು ಆಥರ್ಿಕ ಹಿಂಸೆ ಇವೆಲ್ಲಾ ಕೌಟುಂಬಿಕ ಹಿಂಸೆಯಡಿಯಲ್ಲಿದ್ದು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು ಇಂತಹ ಪ್ರಕರಣಗಳ ಬಗ್ಗೆ, ದೂರಿನ ಅಜರ್ಿಯನ್ನು ಸಲ್ಲಿಸಿ ನ್ಯಾಯವನ್ನು ದೊರಕಿಸಿಕೊಳ್ಳಬೇಕು ಮತ್ತು ಪ್ರಕರಣಗಳು ಇತ್ಯರ್ಥವಾಗದಿದ್ದಲ್ಲಿ ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನಿನ ನೆರವು ಪಡೆದು 60ದಿನಗಳ ಒಳಗಾಗಿ ನ್ಯಾಯವನ್ನು ಪಡೆಯುವಂತೆ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ..ಪರ್ವತಯ್ಯ ಮಾತನಾಡಿ ಮಹಿಳೆಯ ಮೇಲಿನ ಕೌಟುಂಬಿಕ ದೌರ್ಜನ್ಯಗಳು ಹಾಗೂ 2005-06 ಕಾನೂನಿನ ಬಗ್ಗೆ ವಿವರವಾಗಿ ತಿಳಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಪರಿಹಾರಗಳನ್ನು ಪಡೆಯುವಂತೆ ತಿಳಿಸಿದ ಅವರು ಭಾಗ್ಯಲಕ್ಷ್ಮಿ ಯೋಜನೆಯಡಿ ಬಂದಿರುವ ಬಾಂಡ್ಗಳ ಸಂಖ್ಯೆಗಳನ್ನು ಆಧಾರ್ ಯೋಜನೆಯಡಿ ಅಳವಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಬಿ.ಸಿ.ಹೇಮಾವತಿ, ವಕೀಲರ ಸಂಘದ ಗೋಪಾಲಕೃಷ್ಣ, ಸಹಾಯಕ ಸಕರ್ಾರಿ ಅಭಿಯೋಜಕ ಕೆ.ಎಲ್.ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ, ವಕೀಲರಾದ ಎಂ.ಕೆ.ಸುಲೋಚನ ಸ್ವಾಗತಿಸಿ, ಆರ್.ಎಲ್. ಎಲಿಜಬೆತ್ ರಾಣಿ ನಿರೂಪಿಸಿ, ವೈ.ಜಿ.ಲೋಕೇಶ್ವರ ವಂದಿಸಿದರು.


Monday, February 7, 2011

ಅಧಿಕಗೊಂಡಿರುವ ಸರಣಿ ಕಳ್ಳತನ, ಆತಂಕದಲ್ಲಿ ಜನತೆ: ರಾತ್ರಿ ಪಹರೆಯಲ್ಲಿ ಯುವಕರು.
ಚಿಕ್ಕನಾಯಕನಹಳ್ಳಿ.ಫೆ.07: ತಾಲೂಕಿನ ಕುಪ್ಪೂರು ಸೇರಿದಂತೆ ಹಲವು ಭಾಗಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಪೋಲೀಸ್ನ ಪೇದೆಯೊಬ್ಬರ ಮನೆಯ ಬೀಗ ಹೊಡೆದಿರುವುದರಿಂದ ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಭಾರಿ ಪ್ರಮಾಣದಲ್ಲಿ ಆದ ಕಳ್ಳತನವಿನ್ನು ಜನರ ಮನದಲ್ಲಿ ಹಸಿರಾಗಿರುವಾಗಲೇ, ಅದೇ ಕುಪ್ಪೂರಿನಲ್ಲಿ ಒಂದೇ ರಾತ್ರಿ 10 ಕಡೆ ಬೀಗ ಮುರಿದಿದ್ದಾರೆ, ಇದರಲ್ಲಿ ಒಂದು ದೇವಸ್ಥಾನವೂ ಸೇರಿದೆ. ಮಲ್ಲಿಗೆರೆಯಲ್ಲಿ ಮೂರು ಮನೆ ಬೀಗ ಹೊಡೆದಿದ್ದಾರೆ ಇದರಲ್ಲಿ ಒಂದು ಪೋಲೀಸ್ನವರ ಮನೆಯೂ ಸೇರಿದೆ, ಮತಿಘಟ್ಟದಲ್ಲಿ 2 ಮನೆ, ಅಣೆಕಟ್ಟೆಯಲ್ಲಿ ಒಂದು ಅಂಗಡಿ, ಚಿನಾಹಳ್ಳಿ ಪಟ್ಟಣದಲ್ಲಿ ಮೂರು ಅಂಗಡಿ, ಹಂದನಕೆರೆಯಲ್ಲಿ ಹಗಲಿನ ಸಮಯದಲ್ಲೇ ಕಳವು ಮಾಡಿರುವ ಪ್ರಕರಣಗಳು ನಡೆದಿವೆ.
ಕುಪ್ಪೂರಿನ ಜನ ಕಳ್ಳರ ಭಯಕ್ಕೆ ರೋಸಿ, ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ಪ್ರತಿ ರಾತ್ರಿ ಐದಾರು ಜನರ ಗುಂಪು ಪ್ರತಿದಿನ ರಾತ್ರಿ ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ರಾತ್ರಿ ಐದಾರು ಜನರ ಗುಂಪು ಪೋಲಿಸನವರೊಂದಿಗೆ ಪಹರೆ ಮಾಡುತ್ತಿದ್ದಾರೆ.
ಮೊನ್ನೆ ರಾತ್ರಿ ಅಣೆಕಟ್ಟೆ, ಕುಪ್ಪೂರು, ಮತಿಘಟ್ಟ ಮಲ್ಲಿಗೆರೆ ಈ ನಾಲ್ಕು ಊರುಗಳಲ್ಲಿ ಒಂದೇ ರಾತ್ರಿ ಬೀಗ ಮುರಿದಿರುವುದು ಹಲವು ಅನುಮಾನಗಳಿಗೆ ಗ್ರಾಸವಾಗಿದೆ. ಅಣೆಕಟ್ಟೆಯಲ್ಲಿ ಅಂಗಡಿಯೊಂದರ ಬೀಗ ಮುರಿದು ಕೈಗೆ ಸಿಕ್ಕಿದ್ದು ತೆಗೆದುಕೊಂಡು ಹೋಗಿದ್ದಾರೆ. ಕುಪ್ಪೂರಿನಲ್ಲಿ ಬ್ರಹ್ಮದೇವರ ದೇವಸ್ಥಾನದ ಬೀಗ ಮುರಿದಿದ್ದು ಎರಡು ಹೊಸ ಸೈಕಲ್ಗಳನ್ನು ಕದಿದ್ದಾರಲ್ಲದೆ, ಅಲ್ಲಿದ್ದ ಟೈರು, ಟ್ಯೂಬ್, ಆಯಿಲ್ ಸೇರಿದಂತೆ 25 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕದಿದ್ದಾರೆ. ರಾಮು ಟೈಲರ್ ಅಂಗಡಿಗೆ ನುಗ್ಗಿರುವ ಕಳ್ಳರು ಬಟ್ಟೆ ಬರೆಗಳನ್ನು ಹೊತ್ತು ಹೊಯ್ದಿದ್ದಾರೆ. ಇದಲ್ಲದೆ ಕುಪ್ಪೂರಿನ ಗೋವಿಂದಪ್ಪ ಬಿನ್ ನಾರಾಯಣಪ್ಪ, ಪೋಸ್ಟಮನ್ ಮರುಳಯ್ಯ, ಸಿದ್ದಮರಿ, ನರಸಿಂಹಯ್ಯ, ಲಕ್ಕಮ್ಮ, ರಾಮಣ್ಣ ಎಂಬುವರ ಮನೆಗಳ ಬೀಗ ಮುರಿದಿದ್ದಾರೆ.
ಮಲ್ಲಿಗೆರೆ ಮೂಲ ನಿವಾಸಿ ಮತ್ತಿಘಟ್ಟ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿರುವ ರವಿ ಎಂಬುವರ ಮನೆಯ ಬೀಗವನ್ನು ಹೊಡೆದಿದ್ದಾರೆ, ಅದೇ ಗ್ರಾಮದ ಸಿದ್ದರಾಮಣ್ಣ ಎಂಬುವರ ಮನೆಯ ಬೀಗವನ್ನು ಮುರಿದಿದ್ದಾರೆ.
ಒಟ್ಟಿನಲ್ಲಿ ಈ ಕಳ್ಳರ ಗುಂಪು ಮನೆ ಬಾಗಿಲಿನ ಚಿಲಕಕ್ಕೆ ಬೀಗ ಹಾಕಿರುವ ಮನೆಗಳನ್ನು ಹುಡುಕಿಕೊಂಡು ಅಂತಹ ಮನೆಗಳ ಬೀಗವನ್ನೇ ಹೊಡಿದಿದ್ದಾರೆ.
ಈ ಮೇಲಿನ ವಿಷಯಗಳು ಒಂದೇ ರಾತ್ರಿ ಬೀಗ ಮುರಿದ ಪ್ರಕರಣಗಳಾದರೆ, ಈ ಭಾಗದಲ್ಲಿ ಎರಡು ತಿಂಗಳಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಮೊದಲು ಆರಂಭಗೊಂಡಿದ್ದು ದೇವಸ್ಥಾನಗಳ ಬೀಗ ಮುರಿಯುವ ಹಾಗೂ ದೇವರ ಆಭರಣಗಳನ್ನು ಕದ್ದು ಹೊಯ್ಯುವ ಪ್ರಕರಣಗಳು, ಆರಂಭದಲ್ಲಿ ಸೋರಲಮಾವಿನಲ್ಲಿ ಗ್ರಾಮದೇವರ ದೇವಸ್ಥಾನದ ಬೀಗಹೊಡೆದು ಅಲ್ಲಿದ್ದ ಸಣ್ಣಪುಟ್ಟ ವಸ್ತಗಳನ್ನು ಕದ್ದಿರುವುದು, ನಂತರ ಹೊಸಕೆರೆಯಲ್ಲಿನ ತೋಟದಲ್ಲಿನ ದೇವಸ್ಥಾನ, ತದನಂತರ ಕುಪ್ಪೂರು ಬಳಿಯ ತೋಟದಲ್ಲಿರುವ ಆಂಜನೇಯ ದೇವಸ್ಥಾನ, ಇದಾದನಂತರ ತಮ್ಮಡಿಹಳ್ಳಿಯಲ್ಲಿ, ನಂತರದಲ್ಲಿ ಬಹುದೊಡ್ಡ ಮಟ್ಟದ ಕಳ್ಳತನವೆಂದರೆ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಮಠದಲ್ಲಿ ಲಕ್ಷಗಟ್ಟಲೆ ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಹೊಯ್ದಿರುವುದು. ತಾಲೂಕಿನ ಇತಿಹಾಸದಲ್ಲೇ ಮಠ ಒಂದಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಬೆಳ್ಳಿ ಆಭರಣಗಳನ್ನು ಕದ್ದಿರುವುದು ಇದೇ ಪ್ರಥಮ.
ಇವಿಷ್ಟು ತಾಲೂಕಿನ ಗ್ರಾಮಾಂತರ ಮಟ್ಟದಲ್ಲಾದರೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೂ ಒಂದೇ ದಿನ ಮೂರು ಅಂಗಡಿಗಳಿಗೆ ನುಗ್ಗಿ ಅಲ್ಲಿದ್ದ ಸಾಮಾನು ಸರಂಜಾಮುಗಳನ್ನು ಹಾಗೂ ನಗದನ್ನು ಹೊತ್ತು ಹೊಯ್ದಿರುವ ಘಟನೆಯೂ ನಡೆದಿದೆ. ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಗುರು ಬಾರ್ ರೆಸ್ಟೋರೆಂಟ್ಗೆ ನುಗ್ಗಿ ಅಲ್ಲಿದ್ದ ಮಧ್ಯವನ್ನು ಕದ್ದು ಅದೇ ರಸ್ತೆಯಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿ ಬಳಿಯ ಪ್ರಕಾಶ್ ಎಂಬುವರ ಅಂಗಡಿಗೆ ನುಗ್ಗಿ ಅಲ್ಲೇ ಮಧ್ಯೆವನ್ನು ಕುಡಿದು, ಸಿಕ್ಕ ಕುರುಕಲು ತಿಂಡಿಯನ್ನು ತಿಂದ್ದು ಬಾಟಲಿ ಮತ್ತಿತರ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಅದೇ ದಿನ ಆ ರಸ್ತೆಯ ಹಿಂಭಾಗದ ಬೀದಿಯಲ್ಲಿ ಸೋಮಶೇಖರ್ ಎಂಬುವರಿಗೆ ಸೇರಿದ ಅಂಗಡಿಯಲ್ಲೂ ನಗದು ಮತ್ತು ದಿನ ಬಳಕೆಯ ವಸ್ತುಗಳನ್ನು ಕದಿದ್ದಾರೆ.
ಪಟ್ಟಣದ ಯುನಿವರ್ಸಲ್ ಕಂಪ್ಯೂಟರ್ ಕೇಂದ್ರದಲ್ಲಿ 6 ಸಿ.ಪಿ.ಯು, ಯು.ಪಿ.ಎಸ್ ಸೇರಿದಂತೆ ಕಂಪ್ಯೂಟರ್ಗಳ ಬಿಡಿ ಭಾಗಗಳನ್ನು ಕದಿದ್ದಾರೆ
ಪಟ್ಟಣದ ಹೊರ ವಲಯದ ಮಸಾಲ್ತಿಗುಡ್ಲುವಿನಲ್ಲಿ ಶಿವಣ್ಣ ಎಂಬವರಿಗೆ ಸೇರಿದ ತೆಂಗಿನ ಕಾಯಿ ಗೋಡೌನ್ನಿನ ಬೀಗ ಹೊಡೆದಿದ್ದಾರೆ.
ಈ ಎಲ್ಲಾ ಪ್ರಕರಣಗಳಿಂದ ಜನ ಆತಂಕದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕುಪ್ಪೂರು ಮಠದ ಕಳ್ಳತನ ಮಾಡಿರುವವರು ಹೈಟೆಕ್ ಕಳ್ಳರು, ಈಗ ಬೀಗ ಮುರಿದಿರುವವರು ಸಣ್ಣ ಪುಟ್ಟ ಕಳ್ಳರು, ಈ ಇಬ್ಬರನ್ನು ಹಿಡಿಯಲು ತಂತ್ರ ರೂಪಿಸಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದೇವೆ. ನಮ್ಮಲ್ಲೂ ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತರಾಗುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ.
ಆದರೆ ಜನತೆ ಪೊಲೀಸಿನವರ ಸಬೂಬು ಕೇಳುವ ಸ್ಥಿತಿಯಲಿಲ್ಲ, ನಮಗೆ ರಾತ್ರಿ ಹೊತ್ತು ನಿದ್ದೆ ಬಾರದೆ ಸದಾ ಎಚ್ಚರದಲ್ಲಿರುವಂತಾಗಿದೆ. ಪೊಲೀಸ್ ಅಧಿಕಾರಿಗಳು ಹೇಗಾದರೂ ಸರಿಯೇ ಆ ಕಳ್ಳರನ್ನು ಹಿಡಿದು ನಮಗೆ ಕಣ್ಣು ತುಂಬಾ ನಿದ್ದೆ ಮಾಡುವಂತಹ ವಾತಾವರಣ ನಿಮರ್ಿಸುವಂತಾಗಬೇಕು ಎನ್ನುತ್ತಿದ್ದಾರೆ.
ಇದಕ್ಕೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಏನೆನ್ನುತ್ತಾರೆ.
ಆರೋಗ್ಯಕ್ಕಾಗಿ ಸತ್ಸಂಗ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಫೆ.07: ಆರೋಗ್ಯಕ್ಕಾಗಿ ಸತ್ಸಂಗ ಎಂಬ ಉಪನ್ಯಾಸವನ್ನು (ಇಂದು) ಪೆ.8ರಿಂದ ಪ್ರತಿ ಮಂಗಳವಾರ ಸಂಜೆ 6ರಿಂದ 7ರವರಗೆ ಹಮ್ಮಿಕೊಳ್ಳಲಾಗಿದೆ ಎಂದು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಉಪನ್ಯಾಸವನ್ನು ಪಟ್ಟಣದ ಬ್ರಹ್ಮ ವಿದ್ಯಾ ಸಮಾಜದಲ್ಲಿ ಏರ್ಪಡಿಸಲಾಗಿದ್ದು ಆರೋಗ್ಯಸಕ್ತರಿಗೆ ಯೋಗವಿಜ್ಷಾನ ,ಧ್ಯಾನಗಳ ಬಗ್ಗೆ ಶಿಬಿರದಲ್ಲಿ ಹೆಚ್ಚಿನ ವಿವರ ನೀಡಲಿದ್ದು ಪ್ರವೇಶ ಉಚಿತವಾಗಿರುವುದರಿಂದ ಎಲ್ಲಾ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದ್ದಾರೆ.

Sunday, February 6, 2011


ತಾಲೂಕಿನಲ್ಲಿ ರಾಜ್ಯ ಸಕರ್ಾರಿ ನೌಕರರ ಸಂಘದ ಬೃಹತ್ ಬಹಿರಂಗ ಸಭೆ
ಚಿಕ್ಕನಾಯಕನಹಳ್ಳಿ,ಫೆ.06: ತಾಲೂಕು ಸಕರ್ಾರಿ ನೌಕರರ ಬೃಹತ್ ಬಹಿರಂಗ ಸಭೆಯನ್ನು ಇದೇ 9ರ ಬುಧವಾರ ಮಧ್ಯಾಹ್ನ 1.35ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ತಿಳಿಸಿದ್ದಾರೆ.
ಬಹಿರಂಗ ಸಭೆಯನ್ನು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ನೌಕರರ ಹಲವು ಬೇಡಿಕೆಗಳಾದ ಕೇಂದ್ರ ಸಕರ್ಾರ ತನ್ನ ನೌಕರರಿಗೆ ಜಾರಿಗೊಳಿಸಿರುವ ವೇತನ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ರಾಜ್ಯ ಸಕರ್ಾರಿ ನೌಕರರಿಗೂ ಜಾರಿಗೊಳಿಸುವುದು, ಕೇಂದ್ರ ಸಕರ್ಾರಕ್ಕನುಗುಣವಾಗಿ ರಾಜ್ಯ ಸಕರ್ಾರಿ ನೌಕರರಿಗೂ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಮಂಜೂರು ಮಾಡುವುದು, ವಗರ್ಾವಣೆ ಬಗ್ಗೆ ಕಾಯಿದೆ ರೂಪಿಸುವುದು, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಸಕರ್ಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಮಾಡುವುದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಕರ್ಾರಿ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಸುವುದು, ರಾಜ್ಯ ಸಕರ್ಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಮೀಸಲಾತಿ ಪಡೆಯಲು ವರಮಾನದ ಮಿತಿ ಬಹಳ ಹಿಂದೆ ನಿಗದಿಪಡಿಸಲಾಗಿದ್ದು ಕೇಂದ್ರ ಸಕರ್ಾರದ ಮಾದರಿಯಲ್ಲಿಯೇ ವರಮಾನ ಮಿತಿ ಹೆಚ್ಚಿಸುವುದು, ಸೇವಾವಧಿಯ ಅಂತಿಮ ವರ್ಷದ ಸೇವೆಯನ್ನು ಪರಿಗಣಿಸಿ ವಾಷರ್ಿಕ ಮುಂಬಡ್ತಿಯನ್ನು ನೀಡುವುದು, ಸ್ಥಗಿತ ವೇತನ ಬಡ್ತಿಗಳನ್ನು ಹೆಚ್ಚಿಸುವುದು, ಸ್ಥಗಿತ ವೇತನ ಮುಂಬಡ್ತಿಗಳನ್ನು ವೇತನ ಶ್ರೇಣಯ ಕೊನೆಯ ಹಂತದ ವಾಷರ್ಿಕ ಮುಂಬಡ್ತಿಯನ್ನು ನೀಡುವುದರ ಬದಲು ಮುಖ್ಯ ವೇತನ ಶ್ರೇಣಿಯನ್ವಯ ನಂತರದ ಮುಂದಿನ ಹಂತಕ್ಕೆ ಸಮನಾದ ಮುಂಬಡ್ತಿಯನ್ನು ನೀಡುವುದು, ಸಕರ್ಾರಿ ನೌಕರರ ತಂದೆ-ತಾಯಿಗಳು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ನಿಗದಿಪಡಿಸಿದ್ದ 4ಸಾವಿರ ಮಾಸಿಕ ಪಿಂಚಣಿ ನಿರ್ಭಂದವನ್ನು ಸಡಿಲಿಸಿ ಪಿಂಚಣಿ ಪರಿಷ್ಕರಿಸಿದಂತೆ ಅವರ ಮಾಸಿಕ ಆದಾಯವನ್ನು ಪರಿಷ್ಕರಿಸುವುದು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯ ಸಂದರ್ಭದಲ್ಲಿ ಅವಲಂಬಿತರು ಎಂಬ ಬಗ್ಗೆ ದೃಡೀಕರಣಕ್ಕಾಗಿ ಕುಟುಂಬ ಆಹಾರ ಪಡಿತರ ಚೀಟಿಯನ್ನು ಪರಿಗಣಿಸವುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಿದ್ದಾರೆ ಹಾಗೂ ಪಟ್ಟಣದ ನೌಕರರು ಮಧ್ಯಾಹ್ನ ಉಪಹಾರದ ಸಮಯದಲ್ಲಿ ಮಾತ್ರ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಕುಪ್ಪೂರ್ ಗೋಪಾಲ್ ನಿಧನಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಶ್ರೀಗಳ ಸಂತಾಪ
ಚಿಕ್ಕನಾಯಕನಹಳ್ಳಿ,ಫೆ.6: ಸ್ವತಂತ್ರ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲ್ ರವರ ನಿಧನಕ್ಕೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಅಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವಿದ್ಯಾಥರ್ಿ ದೆಸೆಯಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನವನ್ನು ಬೆಳಸಿಕೊಂಡಿದ್ದ ಶ್ರೀಯುತರು ಸ್ವಾತಂತ್ರಾನಂತರದಲ್ಲಿ ಪತ್ರಿಕೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಆಳುವ ವರ್ಗದ ಕಣ್ಣು ತೆರೆಸಿದ್ದ ಇವರ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ತಾಲೂಕಿನ ಹಿರಿಯ ಪತ್ರಕರ್ತರ ಗುಂಪಿನಲ್ಲಿ ಕೊನೆಯ ಕೊಂಡಿಯೊಂದು ಕಳಜಿದಂತಾಗಿದೆ ಎಂದಿದ್ದಾರೆ.
60 ವರ್ಷಗಳ ಸುದೀರ್ಘಕಾಲ ಪತ್ರಿಕಾ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಗೋಪಾಲ್ ಅವರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ದಯಾಮಯನಾದ ಭಗವಂತ ಅವರ ಕುಟುಂಬಕ್ಕೆ ಹಾಗೂ ಅವರ ಹಿತೈಷಿಗಳಿಗೆ ಅವರ ಅಗಲಿಕೆಯ ದುಃಕಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.



ಹಿರಿಯಪತ್ರಕರ್ತ ಕುಪ್ಪೂರು ಗೋಪಾಲ್ರಾವ್ ಇನ್ನಿಲ್ಲ
ಚಿಕ್ಕನಾಯಕನಹಳ್ಳಿ: 06.02.11: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲರಾವ್ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದವರಾಗಿದ್ದು, ಇವರು ವಿದ್ಯಾಭ್ಯಾಸಕ್ಕಾಗಿ ತಿಪಟೂರಿಗೆ ತೆರಳಿ, ಅಲ್ಲಿ ಶ್ರೀ ರಾಮಾಜೋಯಿಸ್ ರವರ ಆಶ್ರಯ ಪಡೆದು, ಅವರು ನಡೆಸುತ್ತಿದ್ದ ಪತ್ರಿಕಾ ಏಜೆನ್ಸಿಯಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹಂಚಿಕೊಂಡು ವಿದ್ಯಾಭ್ಯಾಸ ಪಡೆದರು, ಆ ಸಂದರ್ಭದಲ್ಲೇ ಶೇಷಪ್ಪನವರ ಕಿಡಿ ಪತ್ರಿಕೆ ಹಾಗೂ ಗಾಂಧೀಜಿಯವರು ಲೇಖನ ಬರೆಯುತ್ತಿದ್ದ ಹರಿಜನ ಪತ್ರಿಕೆ ಓದುವ ಮುಖಾಂತರ ಪ್ರಭಾವಿತರಾಗಿ ವಿದ್ಯಾಥರ್ಿ ಯೂನಿಯನ್ ಮುಖಂಡರಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟ ಚಳುವಳಿಗೆ ಧುಮುಕಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಬಂಧನಕ್ಕೊಳಗಾದರು ಬಾಲಕ ಎಂಬ ಕಾರಣಕ್ಕೆ ಬ್ರಿಟಿಷ್ ಸಕರ್ಾರ ಬಂಧಿಸುತ್ತಿರಲಿಲ್ಲ, ಆನಂತರ ಇವರು ಜವಾಬ್ದಾರಿ ಸಕರ್ಾರ ರಚನೆಯ ಸಂದರ್ಭದಲ್ಲಿ ಮರು ಹೋರಾಟಕ್ಕೆ ಧುಮುಕಿದಾಗ ತಿಪಟೂರಿನಲ್ಲಿ ಬಂಧಿಸಿ ಇವರನ್ನು ಬೆಂಗಳೂರಿನ ಕಾರಾಗೃಹದಲ್ಲಿ 45 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ಈ ಸಂದರ್ಭದಲ್ಲಿ ಹೆಚ್. ಎಸ್. ದೊರೆ ಸ್ವಾಮಿ ಹಾಗೂ ಎಂ. ಎಸ್. ಹನುಮಂತರಾವ್ ರವರ ಪರಿಚಯ ಪಡೆದು ಇನ್ನು ಉತ್ಸಾಹದಿಂದ ಹೋರಾಟ ನಡೆಸಿದವರು. ಇವರು ವಿದ್ಯಾಥರ್ಿ ಜೀವನದ ನಂತರ ಬದುಕಿಗಾಗಿ ಚಿಕ್ಕನಾಯಕನಹಳ್ಳಿಯನ್ನು ಹರಸಿ ಬಂದ ಇವರು, ವೃತ್ತಿಯಲ್ಲಿ ಬಸ್ ಎಜೆಂಟ್, ಬೀಡಾ ಅಂಗಡಿ, ಚಿಲ್ಲರೆ ವ್ಯಾಪಾರ, ಗೃಹ ಕೈಗಾರಿಕೆ ವಸ್ತು ತಯಾರಿಕೆಯ ಮೂಲಕ ಪತ್ರಿಕಾ ಜೀವನಕ್ಕೆ ಧುಮುಕಿ ಪ್ರಜಾವಾಣಿ ಪತ್ರಿಕೆಯ ಪ್ರತಿನಿಧಿಯಾಗಿ 60 ವರ್ಷಗಳ ಕಾಲ ಸೇವೆ ಸಲ್ಲಿಸಿ, 50 ವರ್ಷಗಳ ಕಾಲ ಇದೇ ಪತ್ರಿಕೆ ವರದಿಗಾರರಾಗಿ ಇವರ ನಿರಂತರ ಸೇವೆಯ ಮುಖಾಂತರ ಹೆಚ್ಚು ಮನ್ನಣೆಗೆ ಒಳಗಾದವರು. ಪಾಮರ ಎಂಬ ನಾಮಧೇಯದಲ್ಲಿ ಹಲವು ಪತ್ರಿಕೆಗಳಿಗೆ ಕವನಗಳನ್ನು ಬರೆದಿದ್ದಾರೆ. ನೆಹರು ಕುಟುಂಬಕ್ಕೆ ನಿಷ್ಠರಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿಯಾಗಿ ಸೇವೆ ಮಾಡಿ ಕಾಂಗ್ರೆಸ್ ಅನ್ನು ಸುಭದ್ರವಾಗಿ ಕಟ್ಟಿ ಬೆಳೆಸಿದವರು.
ಇವರು ತಾಲ್ಲೂಕಿನ ಟೌನ್ ಕೋ-ಆಪರೇಟೀವ್ ಬ್ಯಾಂಕ್, ಗೃಹ ನಿಮರ್ಾಣ ಸಹಕಾರಿ ಸಂಘ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿಯೂಕಾಡ ಸೇವೆ ಸಲ್ಲಿಸಿದ್ದರು, ಕೈಗಾರಿಕ ಸಹಕಾರಿ ಸಂಘ, ದೇಶೀಯ ವಿದ್ಯಾಪೀಠ ಪ್ರೌಢಶಾಲೆ, ತಾಲ್ಲೂಕು ಕೃಷಿಕ ಸಮಾಜ. ಇವುಗಳಲ್ಲಿ ನಿದರ್ೇಶಕರಾಗಿ ಸೇವೆ ಸಲ್ಲಿಸದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಘದ ಹಾಲಿ ಅಧ್ಯಕ್ಷರಾಗಿದ್ದರು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದರಲ್ಲದೆ, ಪುರಸಭೆಯ ನಾಮಿನಿ ಸದಸ್ಯರಾಗಿದ್ದರು. ಇವರು ದಿ|| ಮಾಜಿ ಶಾಸಕರಾದ ಸಿ.ಕೆ. ರಾಜಯ್ಯ ಶೆಟ್ಟಿ, ದಿ|| ಮಾಜಿ ಸಚಿವ ಎನ್ ಬಸವಯ್ಯ, ಮಾಜಿ ಶಾಸಕ ಬಿ ಲಕ್ಕಪ್ಪ ಇವರ ನಿಕಟವತರ್ಿಯಾಗಿದ್ದರು ಮೃತರು ಪತ್ನಿ ರಾಧಾಲಕ್ಷ್ಮಿ, 4ಜನ ಮಕ್ಕಳಾದ ರಾಜೇಂದ್ರ, ಚಿದಾನಂದ, ಭಾಸ್ಕರ, ರಾಜೀವಲೋಚನ, 4 ಸಹೋದರರು, 3ಸಹೋದರಿಯರು, 8 ಮೊಮ್ಮಕ್ಕಳು ಅಲ್ಲದೇ ಅಪಾರ ಬಂಧುಗಳನ್ನು ಅಗಲಿದ್ದಾರೆ.
ತಾಲ್ಲೂಕ ಆಡಳಿತ ವತಿಯಿಂದ ಕಂದಾಯ ನಿರೀಕ್ಷಕ ಚಿಂತಾಮಣಿ ಗೌರವ ವಂದನೆ ಸಲ್ಲಿಸಿದರು. ಮೃತರ ಅಂತಿಮ ದರ್ಶನವನ್ನು ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಬಿ.ಲಕ್ಕಪ್ಪ, ತಾಲೂಕು ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸ್ವತಂತ್ರ ಹೋರಾಟಗಾರ ಕಲ್ಲೇನಹಳ್ಳಿ ಶಿವಣ್ಣ, ಪುರಸಭಾ ಅಧ್ಯಕ್ಷ ರಾಜಣ್ಣ, ಸಿ. ಎಸ್. ರಮೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಬಸವರಾಜು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಕ್ಯಾಪ್ಟನ್ ಸೋಮಶೇಖರ್, ಎಸ್.ಆರ್.ಎಸ್ ಸಹಕಾರ ಸಂಘದ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್, ಕೃಷಿಕ ಸಮಾಜದ ಕಾರ್ಯದಶರ್ಿ ರಂಗನಕೆರೆ ಮಹೇಶ್ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಸಂತಾಪ ಸೂಚಿಸಿತು ಹಾಗೂ ತಾಲ್ಲುಕಿನ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಇವರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆಯನ್ನು ಪಟ್ಟಣದ ಹೊರವಲಯದ ಬ್ರಾಹ್ಮಣ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ರಕ್ಷಣಾ ವೇದಿಕೆ
ಚಿಕ್ಕನಾಯಕನಹಳ್ಳಿ, ಫೆ.6: ನಾಡಿನಲ್ಲಿ ಕನ್ನಡದ ಜಾತ್ರೆ ನಡೆಯುವ ಸಂದರ್ಭದಲ್ಲಿ ತೆಲಗು ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಚಿತ್ರ ಮಂದಿರದ ಬಳಿ ಪ್ರತಿಭಟಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕನ್ನಡ ಚಿತ್ರ ಪ್ರದರ್ಶನಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ನಾಡಿನಲ್ಲಿ ಕನ್ನಡ ಜಾತ್ರೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಮಂದಿರವೊಂದು ಶನಿವಾರ ರಾತ್ರಿ ಎರಡನೇ ಪ್ರದರ್ಶನಕ್ಕೆ ತೆಲಗು ಚಿತ್ರ ಪ್ರದಶರ್ಿಸಲು ಮುಂದಾಗಿರುವುದನ್ನು ಮನಗಂಡ ಕನ್ನಡ ಪರ ಸಂಘಟನೆಗಳು ಚಿತ್ರ ಮಂದಿರದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಚಿತ್ರ ಮಂದಿರವನ್ನು ಗುತ್ತಿಗೆ ಪಡೆದಿದ್ದವರು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರಾದರೂ, ಅಂತಿಮವಾಗಿ ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿ ಕನ್ನಡ ಚಿತ್ರವಾದ ಮೈಲಾರಿಯನ್ನು ಪ್ರದಶರ್ಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಸಿ.ಟಿ.ಗುರುಮೂತರ್ಿ, ನಿಂಗರಾಜು ಎಸ್.ಎಂ., ವಾಸು, ಸಿ.ಡಿ.ಸುರೇಶ್, ಸಿ.ಎನ್.ಮೋಹನ್ ಶಾಸ್ತ್ರಿ, ಪುರುಷೋತ್ತಮ್ ಭಾಗವಹಿಸಿದ್ದರು.
ಚಿ.ಮೂ. ಗೌರವ ಡಾಕ್ಟರೇಟ್ಗೆ ಅರ್ಹ ವಿದ್ವಾಂಸ: ಎಂ.ವಿ.ಎನ್. ಚಿಕ್ಕನಾಯಕನಹಳ್ಳಿ,ಫೆ.6: ಹಿರಿಯ ಸಂಶೋಧಕ, ಕನ್ನಡ ಸರಸ್ವತಾ ಲೋಕದ ಗಣ್ಯ ಎಂ.ಚಿದಾನಂದ ಮೂತರ್ಿಯವರಿಗೆ ಗೌರವ ಡಾಕ್ಟರೇಟ್ ನಿಡಲು ಅಡ್ಡಿಪಡಿಸಿದ ರಾಜ್ಯಪಾಲರ ಕ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಾಡಿನ ಹೆಸರಾಂತ ವಿದ್ವಾಂಸ ಹಾಗೂ ಹಿರಿಯ ಸಂಶೋಧಕ ಎಂ.ಚಿದಾನಂದ ಮೂತರ್ಿಯವರಿಗೆ ಬೆಂಗಳೂರು ವಿ.ವಿ.ಯ ಸಿಂಡಿಕೇಟ್ ಸಭೆ ಗೌರವ ಡಾಕ್ಟರೇಟ್ ನೀಡುವ ಸಂಬಂಧ ನಿರ್ಣಯವೊಂದನ್ನು ಕೈಗೊಂಡು ಅದನ್ನು ರಾಜ್ಯಪಾಲರ ಅನುಮೋದನೆ ಕಳುಹಿಸಿದ ಸಂದರ್ಭದಲ್ಲಿ ರಾಜ್ಯಪಾಲರ ಕಛೇರಿ ಅವರಿಗೆ ಡಾಕ್ಟರೇಟ್ ಗೌರವವನ್ನು ನೀಡಲು ಅನುಮತಿಸದ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ಭಾಷೆಗೆ ನೀಡಿದ ಸೇವೆ ಮುಖ್ಯವೇ ಹೊರತು, ಅವರ ವೈಚಾರಿಕ ವಿಚಾರ ಪ್ರಧಾನವಲ್ಲ, ಸಾಹಿತ್ಯ ಲೋಕದಲ್ಲಿ ವೈಚಾರಿಕ ಬಿನ್ನಭಿಪ್ರಾಯಗಳು ಸಹಜ ಅದನ್ನೇ ಮುಂದಿಟ್ಟುಕೊಂಡು ಈ ರೀತಿಯ ತೀಮರ್ಾನವನ್ನು ರಾಜ್ಯಪಾಲರ ಕಛೇರಿ ಕೈಗೊಂಡಿದ್ದರೆ ಅದು ಸರ್ವತ ಅಕ್ಷಮ್ಯವೆಂದಿದ್ದಾರೆ.

Saturday, February 5, 2011

Friday, February 4, 2011

ಚಿಕ್ಕನಾಯಕನಹಳ್ಳಿ,ಫೆ.03: ತಾಲೂಕು ಪಂಚಾಯ್ತಿಯಲ್ಲಿ ಪಕ್ಷ ಭೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಶ್ಲಾಘಿಸಿದರು.
ಬುಧವಾರ ತಾಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ಕಳೆದ ಬಾರಿಯಾಗಿ ಅವಧಿ ಮುಕ್ತಾಯವಾದ 19ಜನ ತಾ.ಪಂ.ಸದಸ್ಯರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಸಮಸ್ಯೆ ಬಂದರು ಪಕ್ಷಬೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಕಡಿಮೆ ಅನುದಾನದಲ್ಲೂ ತಮ್ಮ ಕೈಲಾದ ಸೇವೆ ಜನತೆಗೆ ಮಾಡಿದ್ದೀರಿ ಅಧಿಕಾರವಿದ್ದಾಗ ಸಾರ್ವಜನಿಕ ಕೆಲಸ ಮಾಡುವುದು ಮುಖ್ಯವಲ್ಲ ಅಧಿಕಾರದ ನಂತರ ಜನರ ಸೇವೆ ಮಾಡುವುದು ಮುಖ್ಯ, ಎಂದ ಅವರು ಮುಂದೆ ಬರುವ ತಾ.ಪಂ.ಸದಸ್ಯರು ಎಲ್ಲರ ಜೊತೆಗೂಡಿ ಹೊಂದಣಿಕೆ ಮಾಡಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನ್ಯಯ ಮಾತನಾಡಿ ಕಳೆದ ಸಕರ್ಾರ ತಾ.ಪಂ.ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದ್ದರೂ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕು ಅಭಿವೃದ್ದಿಗೆ ಶ್ರಮಿಸಿದ್ದೇವೆ ಎಂದ ಅವರು ಸದಸ್ಯರಿಂದ ಅಧಿಕಾರಿಗಳ ಬಗ್ಗೆ ಕಠಿಣವಾಗಿ ವತರ್ಿಸಿದರೆ ಕ್ಷಮೆ ಇರಲಿ, ನಾವು ಅಭಿವೃದ್ದಿಗೆ ಕಾರ್ಯಕಗಳಿಗೆ ಮಾತ್ರ ಕಠಿಣವಾಗಿ ವತರ್ಿಸುತ್ತಿದ್ದೆವೆ ಹೊರತು ನಿಮ್ಮ ಬಗ್ಗೆ ನಮಗೆ ದ್ವೇಶ ಇರಲಿಲ್ಲ ಎಂದರು.
ಮಾಜಿ ಅಧ್ಯಕ್ಷೆ ಶಾರದ ಸೀತರಾಮಯ್ಯ ಮಾತನಾಡಿ ಕಳೆದ ಬಾರಿ ನಾವು ತಾ.ಪಂ.ಗೆ ಆಯ್ಕೆಯಾದ ಸಂದರ್ಭದಲ್ಲಿ ತಾಲೂಕನ್ನು ಅಭಿವೃದ್ದಿ ಮಾಡಬೇಕು, ಜನತೆಯ ಸಮಸ್ಯೆಗಳನ್ನು ಈಡೇರಿಸಬಹುದು ಎಂದು ಅಧಿಕಾರಕ್ಕೆ ಬಂದಿದ್ದು ಸಕರ್ಾರ ತಾ.ಪಂ.ಗಳಿಗೆ ಅನುದಾನ ಬಿಡುಗಡೆ ಮಾಡದೆ ಇದ್ದುದನ್ನು ನೋಡಿ ನಮಗೆ ನಿರಾಸೆಯಾಯಿತು ಎಂದ ಅವರು ಸಕರ್ಾರ ಹಣ ಬಿಡುಗಡೆ ಮಾಡುವಂತೆ ಅನೇಕ ಬಾರಿ ರಾಜ್ಯ ಮಟ್ಟದಲ್ಲಿ ಎಲ್ಲಾ ತಾ.ಪಂ.ಸದಸ್ಯರು ಹೋರಾಟ ಮಾಡಿದರೂ ಏನು ಪ್ರಯೋಜನವಾಗಲಿಲ್ಲ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಇ.ಓ ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ಪಿ.ರವಿಪ್ರಸಾದ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.





Wednesday, February 2, 2011





ರೈತರು ತಮ್ಮ ಹೆಸರಗಳನ್ನು ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಲು ಸೂಚನೆ
ಚಿಕ್ಕನಾಯಕನಹಳ್ಳಿ. ಫೆ.2: ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸವಲತ್ತುಗಳನ್ನು ನೀಡಲು ತಾಲ್ಲೂಕಿನಾದ್ಯಂತ ಇರುವ ರೈತರ ಸಮಗ್ರ ಮಾಹಿತಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ನಲ್ಲಿ ದಾಖಲಿಸುವ ಈ ಕಾರ್ಯವನ್ನು ಉಚಿತವಾಗಿ ಇಲಾಖೆ ಕೈಗೊಂಡಿದ್ದು, ರೈತರಿಗೆ ಯಾವುದೇ ಆಥರ್ಿಕ ಹೊರೆ ಇರುವುದಿಲ್ಲ, ಆದ್ದರಿಂದ ಎಲ್ಲಾ ರೈತಬಾಂಧವರು ಇಲಾಖೆಯಲ್ಲಿ ಮುಂದೆ ಸಕರ್ಾರ ನೀಡುವ ಸವಲತ್ತುಗಳನ್ನು ಪಡೆಯಲು ತಮ್ಮ ಹೆಸರಗಳನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಮೊದಲ ಹಂತವಾಗಿ ತಾಲೂಕಿನ ಕಸಬ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದಿರುವ ಅವರು, ಸಂಬಂಧಪಟ್ಟ ಹೋಬಳಿಯ ರೈತರುಗಳು ತಮ್ಮ ಜಮೀನಿನ (ಪಟ್ಟೆ ಪಹಣಿ ಜಮೀನಿಗೆ ಸೇರಿದ) ದಾಖಲಾತಿಗಳನ್ನು ತಂದು ದಾಖಲಿಸುವಂತೆ ಸಹಾಯಕ ಕೃಷಿ ನಿದರ್ೇಶಕರು ಮನವಿ ಮಾಡಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಇಲಾಖೆಯ ಯಾವುದೇ ಸವಲತ್ತುಗಳನ್ನು ಈ ದಾಖಲೆಯ ಆಧಾರದ ಮೇಲೆ ವಿತರಣೆ ಕೈಗೊಳ್ಳುವುದರಿಂದ ಸದರಿ ಪ್ರ್ರಕ್ರಿಯೆಯನ್ನು ಅರಿತು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಗ್ರಾಮಸ್ಥರ ಮನವಿಗೆ ಶೀಘ್ರ ಸ್ಪಂಧಿಸಿದ ತಹಶೀಲ್ದಾರ್ರವರೆಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಫೆ.2: ತಾಲೂಕಿನ ಶೆಟ್ಟೀಕೆರೆಯ ಗ್ರಾಮಸ್ಥರ ಮನವಿಯ ಮೇರೆಗೆ ಸ್ಥಳಕ್ಕೆ ಆಗಮಿಸಿ ದೊಡ್ಡಕೆರೆ ತೂಬನ್ನೆತ್ತಲು ಅವಕಾಶ ಮಾಡಿಕೊಟ್ಟ ತಹಶೀಲ್ದಾರ್ ಟಿ.ಸಿ.ಕಾಂತರಾಜು ರವರ ಕಾರ್ಯಶೈಲಿಗೆ ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಶೆಟ್ಟೀಕೆರೆ ದೊಡ್ಡಕೆರೆ ತುಂಬಿ ಕಾಲುವೆಯಲ್ಲಿ ಸೀಪೆಜ್ ಹೋಗುತ್ತಿದ್ದು, ತೂಬನ್ನೆತ್ತಲು ಗ್ರಾಮಸ್ಥರು ಹಲವು ಸಲ ಸಕರ್ಾರದ ಮೊರೆಹೊಗಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆಯ ಅಚ್ಚುಕಟ್ಟುದಾರರು ಹಾಗೂ ಗ್ರಾಮಸ್ಥರು ಕೆರೆಯ ಕಾಲುವೆಯ ಬಳಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ತಹಶೀಲ್ದಾರ್ರವರು ಆಗಮಿಸಿ ತೂಬೆತ್ತಲು ಅವಕಾಶ ಕೊಡುವವರೆಗೆ ಸ್ಥಳವನ್ನು ಬಿಟ್ಟು ಕದಲುವುದಿಲ್ಲವೆಂದು ಹಠ ಹಿಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಾಂತರಾಜು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಶಶಿಧರ್ ಈ ಭಾಗದಲ್ಲಿ 250 ಹೆಕ್ಟೇರ್ಗೂ ಅಧಿಕ ಜಮೀನಿನ ರೈತರು ಈ ಕೆರೆಯ ತೊಬನ್ನೆತ್ತುವುದರಿಂದ ಭತ್ತ ಬೆಳೆಯಲು ಅವಕಾಶವಾಗುತ್ತದೆ, ಯಾರದೋ ಕೆಲವೇ ಬೆರಳಿಕೆಯಷ್ಟು ಜನರ ಹಿತಾಸಕ್ತಿಗೋಸ್ಕರ ನೂರಾರು ಜನರಿಗೆ ಆಗುವ ಅನುಕೂಲವನ್ನು ತಪ್ಪಿಸುವುದು ಸರಿಯಲ್ಲ, ನಮ್ಮ ಮನವಿಯನ್ನು ಪರಿಗಣಿಸಿ ತೊಬನ್ನೆತ್ತಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಹಾಗೂ ಕೆರೆ ಅಚ್ಚುಕಟ್ಟುದಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರವರು, ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಈ ನೀರು ಬಳಕೆಯ ಬಗ್ಗೆ ತೀಮರ್ಾನಿಸಲು ಎ.ಸಿ.ಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಇದೆ, ಆ ಸಮಿತಿಯ ಸದಸ್ಯನಾಗಿರುವ ನಾನು, ಸಮಿತಿಯ ತೀಮರ್ಾನದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ತಕ್ಷಣವೇ ಪ್ರತಿಭಟನಾಕಾರರು ತಿಪಟೂರು ಎ.ಸಿ.ಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿದ ಹಿನ್ನೆಲೆಯಲ್ಲಿ ಎ.ಸಿ.ಯವರು ಜಿಲ್ಲಾಧಿಕಾರಿಗಳ ಸಭೆಯೊಂದರ ನಡಾವಳಿಯಂತೆ ತಹಶೀಲ್ದಾರ್ರವರೆಗೆ ಸೂಚಿಸಿದ್ದಾರೆ. ತಹಶೀಲ್ದಾರ್ರವರು ಅಚ್ಚುಕಟ್ಟುದಾರರು ಕೆರೆ ನೀರನ್ನು ಉಪಯೋಗಿಸಿಕೊಳ್ಳಲು ತಿಳಿಸಿದ್ದಾರೆ.
ಈ ಕೆರೆಯ ಕಾಲುವೆಯ ದುರಸ್ಥಿಗಾಗಿ ತಂದಿದ್ದ ಪರಿಕರಗಳನ್ನು ಕಿಡಿಗೇಡಿಗಳು ಕದ್ದು ಹೋಯ್ದಿದ್ದಾರೆಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ತಹಶೀಲ್ದಾರ್ರವರೆಗೆ ದೂರಿದರು.
ತಹಶೀಲ್ದಾರ್ರವರ ಶೀಘ್ರ ಸ್ಪಂದನೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ, ಈ ಪ್ರತಿಭಟನೆಯಲ್ಲಿ ಭೈರೇಶ್, ಅರುಣ, ರಾಮಕೃಷ್ಣ ಜೋಯಿಸ್, ತೋಂಟಧಾರ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.


Tuesday, February 1, 2011




ತು.ಹಾ.ಒಕ್ಕೂಟಕ್ಕೆ ಮೂರು ತಿಂಗಳಲ್ಲಿ 3.89 ಕೋಟಿ ಲಾಭ
ಚಿಕ್ಕನಾಯಕನಹಳ್ಳಿ,ಫೆ.01: ತುಮಕೂರು ಹಾಲು ಒಕ್ಕೂಟದ ಕಳೆದ ತ್ರೈಮಾಸಿಕ ವಹಿವಾಟಿನಲ್ಲಿ ಸುಮಾರು 3.89 ಕೋಟಿ ಲಾಭ ಬಂದಿದೆ ಎಂದು ಹಾಲು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಬೆನಕನಕಟ್ಟೆ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಅಳೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷನಾಗಿ ಎರಡನೇ ಬಾರಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಆರಂಭದ ತಿಂಗಳಲ್ಲೇ ಒಕ್ಕೂಟಕ್ಕೆ 1.40ಕೋಟಿ ಲಾಭ ಬಂದಿತು. ನಂತರ ನವೆಂಬರ್ನಲ್ಲಿ ಒಂದು ಕೋಟಿ ಲಾಭ ಬಂದಿದೆ, ಡಿಸೆಂಬರ್ನಲ್ಲಿ 45ಲಕ್ಷ ಲಾಭ ತಂದು ಕೊಡುವ ಮೂಲಕ ತುಮಕೂರು ಹಾಲು ಒಕ್ಕೂಟ ಲಾಭದಾಯಕ ಒಕ್ಕೂಟವಾಗುವಲ್ಲಿ ನಮ್ಮೆಲ್ಲ ನಿದರ್ೇಶಕರ ಸಹಕಾರ ಮಹತ್ವ ಪೂರ್ಣವಾದದ್ದು ಎಂದರು.
ಗ್ರಾಮೀಣ ಭಾಗದಲ್ಲಿ ಹಾಲು ಉತ್ಪಾದನೆ ಒಂದು ಉದ್ಯಮವಾಗಿ ಬೆಳೆದಿದ್ದು, ತೋಟಕ್ಕೆ ಬಂಡವಾಳ ಹಾಕುವುದಕ್ಕಿಂತ ಸೀಮೆ ಹಸು ಮೇಲೆ ಬಂಡವಾಳ ಹೂಡುವುದು ಹೆಚ್ಚು ಲಾಭದಾಯಕ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ ಎಂದರಲ್ಲದೆ, ಹಾಲು ಉತ್ಪಾದಕರು ತಮ್ಮ ಗ್ರಾಮಗಳಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಮೂಲಕ ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸ್ಥಳೀಯವಾಗಿ ದೊರೆಯುವಂತೆ ಮಾಡಿಕೊಳ್ಳಲು ಮುಂದಾಗುವಂತೆ ಸಲಹೆ ನೀಡಿದರು.
ಪ್ರಸ್ತುತ ಚಿಕ್ಕನಾಯಕನಹಳ್ಳಿಯಲ್ಲಿ 86 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಈ ಸಂಖ್ಯೆಯನ್ನು ಅಧಿಕಗೊಳಿಸಬೇಕಾಗಿದೆ ಎಂದರಲ್ಲದೆ, ನನ್ನ ಅಧ್ಯಕ್ಷಾವಧಿ ಮುಗಿಯುವುದರೊಳಗೆ ಈ ತಾಲೂಕಿನಲ್ಲಿ 101 ಸಂಘಗಳನ್ನು ಸ್ಥಾಪಿಸಬೇಕೆಂಬ ಹಂಬಲ ಹೊಂದಿದ್ದೇನೆ ಎಂದರು.
ಹಸುಗಳಿಗೆ ನೀಡುವ ಆಹಾರದಲ್ಲಿ ಹಸಿರು ಮೇವಿಗೆ ಹೆಚ್ಚು ಒತ್ತು ನೀಡಿ, ಅದರ ಜೊತೆಗೆ ಅಜೋಲಾವನ್ನು ಹಸುಗಳಿಗೆ ನೀಡಿ ಎಂದರಲ್ಲದೆ, ಬೂಸದ ಉತ್ಪಾದನೆ ಕಡಿಮೆಯಾಗಿರುವುದರಿಂದ ಅದರ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಶೆಟ್ಟಿಕೆರೆ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ ಮಾತನಾಡಿ, ಹಾಲು ಉತ್ಪಾದಕರ ಸಂಘದ ಅಳಿವು-ಉಳಿವು ಉತ್ಪಾದಕರ ಕೈಯಲ್ಲಿದ್ದು ಯಾವ ಸಂಘ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ ಅಂತಹ ಸಂಘ ಅಭಿವೃದ್ದಿ ಶೀಲವಾಗಿರುತ್ತದೆ ಎಂದರು. ನಾನು ಸಹ ಆರಂಭದಲ್ಲಿ ಹಾಲುಗೊಣ ಹಾಲು ಉತ್ಪಾದಕರ ಸಂಘದ ಕಾರ್ಯದಶರ್ಿಯಾಗಿ ದುಡಿದ ಅನುಭವವನ್ನು ಹಂಚಿಕೊಂಡರು.
ಬೆನಕನಕಟ್ಟೆ ಗ್ರಾಮ ನನ್ನ ರಾಜಕೀಯ ಬೆಳವಣಿಗೆಗೆ ಸ್ಪಂದಿಸಿದೆ, ಚುನಾವಣೆಗೆ ಮುನ್ನ ನಾನು ಈ ಊರಿಗೆ ಭೇಟಿ ನೀಡಿದಾಗ, ಊರಿನ ಕೆರೆಯ ಅಭಿವೃದ್ದಿ ಬಗ್ಗೆ ಹಾಗೂ ಅಲ್ಲಿಗೆ ಮಲ್ಲಿಕಾಜರ್ುನ ಸ್ವಾಮಿ ಬೆಟ್ಟದಿಂದ ನೀರು ಹರಿಸುವ ಬಗ್ಗೆ ಗ್ರಾಮಸ್ಥರು ಚಚರ್ಿಸಿದ್ದರು, ಆ ದಿನ ನಾನು ಏನು ಮಾತು ಕೊಟ್ಟಿದ್ದೆನೋ, ಅದೇ ಮಾತಿಗೆ ಇಂದು ಕಟಿಬದ್ದನಾಗಿದ್ದೇನೆ. ಗ್ರಾಮಸ್ಥರೆಲ್ಲಾ ಯಾವ ಸಂದರ್ಭದಲ್ಲೇ ಈ ಕಾರ್ಯಕ್ಕೆ ಕೈಯಾಕಿದರು ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದರು. ಈ ಗ್ರಾಮದ ಆಂಜನೇಯ ದೇವಸ್ಥಾನ ಜೀಣರ್ೋದ್ದಾರ ಕಾರ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತು.ಹಾ.ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸುಬ್ರಾಯ್ಭಟ್ರು ಮಾತನಾಡಿ, ಹಸು ಸಾಕುವವರು ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಹಸುಗಳಿಗೆ ಕಾಲಕಾಲಕ್ಕೆ ಚುಚ್ಚು ಮದ್ದುಗಳನ್ನು ಹಾಕಿಸುವುದರ ಕಡೆ ಹೆಚ್ಚು ಗಮನ ನೀಡಿದರೆ ಹಸುಗಳು ಆರೋಗ್ಯ ಪೂರ್ಣವಾಗಿರುವುದರ ಜೊತೆಗೆ ಹೆಚ್ಚು ಹಾಲು ಕೊಡುವ ಮೂಲಕ, ಹೆಚ್ಚು ಆದಾಯವನ್ನು ತಂದು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ, ನಮ್ಮೂರಿನ ಹಲವು ದಿನಗಳ ಬೇಡಿಕೆಯಾಗಿದ್ದ ಹಾಲಿನ ಕೇಂದ್ರ ಆರಂಭಗೊಂಡಿರುವುದು ನಮಗೆಲ್ಲಾ ಹರ್ಷ ತಂದಿದೆ ಎಂದರಲ್ಲದೆ, ಈ ಸಂಘದ ಅಭಿವೃದ್ದಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ದೊರೆಯುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ನಮ್ಮ ಪಂಚಾಯಿತಿ ಮುಂದಾಗುವುದಾಗಿ ತಿಳಿಸಿದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಂಗಾಧರಪ್ಪ, ತು.ಹಾ.ಒಕ್ಕೂಟದ ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ ಕುಪ್ಪೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ.ಕೃಷ್ಣಮೂತರ್ಿ, ಕಾರ್ಯದಶರ್ಿ ಕೆ.ಎಂ.ಕುಮಾರಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಪ್ಪೂರು ತಾ.ಪಂಸದಸ್ಯೆ ಚಿಕ್ಕಮ್ಮಗಂಗಾಧರಪ್ಪ, ಗ್ರಾ.ಪಂ.ಸದಸ್ಯರುಗಳಾದ ಬಿ.ಆರ್.ಕೃಷ್ಣಮೂತರ್ಿ, ಪೂಣರ್ಿಮ ಆನಂದ್. ಉಮೇಶ್, ಕುಪ್ಪೂರು ಗದ್ದಿಗೆ ಮಠದ ಏಜೆಂಟ್ ವಾಗೀಶ್ ಪಂಡಿತಾರಾಧ್ಯ, ಕುಪ್ಪೂರು ಹಾ.ಉ.ಸ.ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಂಘದ ಕಾರ್ಯದಶರ್ಿ ಬಿ.ಸಿ.ವೆಂಕಟೇಶ್ ಮೂತರ್ಿ ಸ್ವಾಗತಿಸಿ, ಶಿಕ್ಷಕ ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ ವಂದಿಸಿದರು.


ಅಲ್ಪಸಂಖ್ಯಾತರ ಮಕ್ಕಳು ಗೈರು ಹಾಜರಾದರೆ ಶಿಕ್ಷಕರೆ ಹೊಣೆ
ಚಿಕ್ಕನಾಯಕನಹಳ್ಳಿ.ಫೆ.02: ಅಲ್ಪಸಂಖ್ಯಾತ ವರ್ಗಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಹೆಚ್ಚು ಜವಬ್ದಾರಿ ಹೊರಬೇಕೆಂದು ತುಮಕೂರು ದಕ್ಷಿಣ ಜೆಲ್ಲೆಯ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಮೋಹನ್ಕುಮಾರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಅಲ್ಪಸಂಖ್ಯಾತರ ಮಕ್ಕಳ ನಾವಿನ್ಯಯುತ ಕಾರ್ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಮಕ್ಕಳು ಶಾಲೆಗೆ ಗೈರು ಹಾಜರಾಗುವ ಪ್ರಮಾಣ ಹೆಚ್ಚುತ್ತಿದೆ, ಇಂತಹ ಮಕ್ಕಳ ಗೈರು ಹಾಜರಿಯನ್ನು ತಪ್ಪಿಸಲು ಸಕರ್ಾರ ಹಲವು ಉತ್ತೇಜಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವರ ಗೈರು ಹಾಜರಿ ತಪ್ಪಿಸಲು ಪ್ರಯತ್ನಿಸುತ್ತಿದೆ, ಇದಕ್ಕೆ ಈ ವರ್ಗದ ಶಿಕ್ಷಕರ ಪ್ರಯತ್ನವೂ ಬಹಳ ಮುಖ್ಯ ಎಂದರು.
ಅಲ್ಪಸಂಖ್ಯಾತರ ಶಾಲೆಗಳಲ್ಲಿ ವಿಜ್ಞಾನ ಉಪಕರಣ ಕೊಳ್ಳಲು ತಾಲೂಕಿಗೆ ಒಂದು ಲಕ್ಷರೂಗಳನ್ನು ನೀಡಲಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳ ಶಿಕ್ಷಕರು ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ತಾವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕೆಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳಲ್ಲಿನ ಶಿಕ್ಷಕರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಗೈರು ಹಾಜರಿಯನ್ನು ಕಡಿಮೆ ಮಾಡಬೇಕು, ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ದಾಖಲಾಗದ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿಯನ್ನು ನಿರ್ವಹಿಸಬೇಕು, ಅಲ್ಪಸಂಖ್ಯಾತರ ಶಾಲೆಗಳಿರುವ ಸ್ಥಳಗಳಲ್ಲಿ ದಾಖಲಾಗದ ಹಾಗೂ ದೀರ್ಘಕಾಲದ ಮಕ್ಕಳು ಕಂಡುಬಂದರೆ ಆ ಶಾಲೆಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದರ್ು ಸಿ.ಆರ್.ಪಿ. ಅಪ್ರೋಜ್ ಉನ್ನೀಸಾ ಪ್ರಾಥರ್ಿಸಿದರೆ, ಬಿ.ಆರ್.ಸಿ.ಸುಧಾಕರ್ ಸ್ವಾಗತಿಸಿದರು, ದುರ್ಗಯ್ಯ ನಿರೂಪಿಸಿ, ಪುಟ್ಟಮಾದಯ್ಯ ವಂದಿಸಿದರು.


Monday, January 31, 2011

ಬಡವರ್ಗದ ಜನರಿಗೆ ಉಚಿತ ಕಾನೂನು ನೆರವು ಮಾಹಿತಿ: ಜಿ.ಎಂ.ಶೀನಪ್ಪ
ಚಿಕ್ಕನಾಯಕನಹಳ್ಳಿ,ಜ.31: 50 ಸಾವಿರಕ್ಕಿಂತ ಕಡಿಮೆ ಆದಾಯವಿರುವಂತಹ ಸಾರ್ವಜನಿಕರು ಕಾನೂನು ಅಧಿಕಾರದ ಪ್ರಾಧಿಕಾರಕ್ಕೆ ಅಜರ್ಿ ಸಲ್ಲಿಸಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಂ. ಸೀನಪ್ಪ ತಿಳಿಸಿದರು.
ನಗರದ ಸಿ.ಡಿ.ಪಿ.ಒ. ಕಛೇರಿ ಆವರಣದಲ್ಲಿ ನಡೆದ ಕೌಟುಂಬಿಕ ಮಹಿಳಾ ಸಂರಕ್ಷಣಾ ಕಾನೂನು ಅರಿವು ಕಾರ್ಯಗಾರವನ್ನು ಉದ್ಗಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವಿವಾಹ ವಿಚ್ಛೇದನ ಜಾಸ್ತಿಯಾಗುತ್ತಿದೆ ನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುವ ಮುಂಚಿತವಾಗಿ ಇಂತಹ ಪ್ರಕರಣಗಳನ್ನು ರಾಜಿ ಸಂಧಾನ ಮುಖಾಂತರ ಬಗೆಹರಿಸಿಕೊಂಡು ಸುಖ ನೆಮ್ಮದಿಯಿಂದ ಬಾಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿ.ಡಿ.ಪಿ.ಒ ಅನಿಸ್ ಖೈಸರ್, ಕರುಣೆ ಇರುವ ಕಡೆ ಜೀವನದಲ್ಲಿ ಸ್ವರ್ಗವನ್ನು ಕಾಣಬಹುದಾಗಿದೆ ಎಂದರು. ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಸಕರ್ಾರದಿಂದ ನಿಗದಿಪಡಿಸಿರುವ ದಾಖಲಾತಿಗಳನ್ನು ಸಕಾಲಕ್ಕೆ ಸಕರ್ಾರಕ್ಕೆ ಸಲ್ಲಿಸಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ತಿಳಿಸಿದರಲ್ಲದೆ ಆಧಾರ್ ಯೋಜನೆಯಡಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡಿನಲ್ಲಿರುವ ಠೇವಣಿ ಸಂಖ್ಯೆಯನ್ನು ಪೋಷಕರು ನಮೂದಿ ಮಾಡಿಸದೇ ಇದ್ದಲ್ಲಿ ಯೋಜನೆಯ ಸೌಲಭ್ಯ ವಂಚಿತರಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎನ್.ಶೀಲಾ, ಎ.ಜಿ.ಶಿಲ್ಪ, ಸಕರ್ಾರಿ ವಕೀಲರಾದ ಆಶಾ ಮಾತನಾಡಿದರು.
ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಮಹಾಲಿಂಗಯ್ಯ, ಎನ್.ಎನ್. ಶ್ರೀಧರ್, ಪಿ.ಎಲ್.ಡಿ. ಬ್ಯಾಂಕ್ನ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕತರ್ೆ ಸಾವಿತ್ರಮ್ಮ ಪ್ರಾರ್ಥಸಿ , ವಕೀಲ ಆದಶರ್್ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ಗಳಿಕೆ ರಜೆಯನ್ನು ನಗಧೀಕರಿಸಲು ಸಹಕರಿಸಿದ ಬಿ.ಇ.ಓರವರಿಗೆ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಜ.31: ತಾಲೂಕಿನ 640ಕ್ಕೂ ಹೆಚ್ಚಿನ ಶಿಕ್ಷಕ ಬಂಧುಗಳಿಗೆ ಪಾರದರ್ಶಕವಾಗಿ ಗಳಿಕೆ ರಜೆಯನ್ನು ನಗದೀಕರಿಸಿಕೊಡಲು ಸಹಕರಿಸಿದ ಬಿ.ಇ.ಓ ಸಾ.ಚಿ.ನಾಗೇಶ್ರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದ್ದ.
ಇದೇ ಸಂದರ್ಭದಲ್ಲಿ ಅಂತರ ಜಿಲ್ಲೆಯಿಂದ ವಗರ್ಾವಣೆಗೊಂಡ ಶಿಕ್ಷಕರಿಗೆ 10.15. ವರ್ಷದ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡಿದ ಶಿಕ್ಷಣ ಸಚಿವರನ್ನು ಅಬಿನಂದಿಸಿದ್ದಾರೆ.


Sunday, January 30, 2011

Saturday, January 29, 2011

ತಾಲೂಕಿನ ಕೆಲವು ಗ್ರಾಮಗಳಿಗೆ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನ
ಚಿಕ್ಕನಾಯಕನಹಳ್ಳಿ,ಜ.29: ಬರಸಿಡ್ಲಹಳ್ಳಿ, ದೊಡ್ಡರಾಂಪುರ, ಗೊಲ್ಲರಹಟ್ಟಿ, ಭಾಗಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ 77ಲಕ್ಷ ರೂ, ತೀರ್ಥಪುರ ಸಕರ್ಾರಿ ಪ್ರೌಡಶಾಲೆಗೆ 25ಲಕ್ಷ ರೂ ಸಕರ್ಾರ ಬಿಡುಗಡೆ ಮಡಿದ್ದು ಬಸವ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ 1000 ಮನೆ ನಿಮರ್ಿಸಲು ಮಂಜೂರಾತಿ ನೀಡಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲೂಕಿನ ಕಾತ್ರಿಕೆಹಾಳ್ನಲ್ಲಿ ಜಿ.ಪಂ. ತಾ.ಪಂ. ಲೋಕೋಪಯೋಗಿ,ಸಾರ್ವಜನಿಕ ಶಿಕ್ಷಣ ಇಲಾಖೆ, ಜಲಾನಯನ ಇಲಾಖೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಕಾಮಗಾರಿಗಳ ಹಾಗೂ ಶಂಕುಸ್ಥಾಪನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೀರ್ಥಪುರ ಗ್ರಾಮ ವ್ಯಾಪ್ತಿಯ ನಿವೇಶನ ರಹಿತರಿಗೆ 1200 ನಿವೇಶನ ನೀಡಲು ತೀಮರ್ಾನಿಸಿದ್ದೇವೆ, ಕಾತ್ರಿಕೆಹಾಳ್, ತೀರ್ಥಪುರ, ಹಾಗಲವಾಡಿ, ಡಾಂಬರು ನಿಮರ್ಿಸಲು 78ಲಕ್ಷ ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದರಲ್ಲದೆ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಜಾಣೆಹಾರ್, ಕಾತ್ರಿಕೆಹಾಳ್ ಮಧ್ಯ ಇರುವ ಸೇತುವೆಯು ಮಾಚರ್್ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಹಳ್ಳಿಗಳು ದೇಶದ ಬೆನ್ನೆಲುಬು, ಹಳ್ಳಿಗಳ ಸವರ್ಾಂಗೀಣ ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗುವುದು ಖಂಡಿತ, ಮಹಾತ್ಮಾಗಾಂಧೀಜಿಯವರು ಕಂಡಂತಹ ರಾಮರಾಜ್ಯ ನನಸು ಮಾಡಲು ಯುವ ಜನತೆ ಮುಂದೆ ಬರಬೇಕಾಗಿದೆ ಎಂದ ಅವರು, ಅತಿ ಹಿಂದುಳಿದ ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಕರ್ಾರ ಅನೇಕ ಯೋಜನೆ ಹಾಕಿಕೊಂಡು ಶಿಕ್ಷಣ, ರಸ್ತೆ ಅಭಿವೃದ್ದಿ, ಸಮುದಾಯಭವನ, ಪದವಿ ಪೂರ್ವ ಕಟ್ಟಡ ನಿಮರ್ಿಸಿ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಗುಡ್ಡಗಾಡು ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ಭಾಗದಲ್ಲಿ ವಾಹನ ಸೌಕರ್ಯವಿಲ್ಲದೆ ವಿದ್ಯಾಥರ್ಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದು ಈ ಸ್ಥಳದಲಿ ಪದವಿ ಪೂರ್ವ ಕಾಲೇಜು ಸ್ಥಾಪಿಸಿ ಹೆಣ್ಣುಮಕ್ಕಳು ಕ್ರಿಯಾಶೀಲರಾಗಲು ಮತ್ತು ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಸಕರ್ಾರ ಸ್ಪಂದಿಸುತ್ತಿದೆ ಎಂದರು.
ಮಹಿಳೆಯರಿಗೆ

ಜನಗಣತಿ ಕಾರ್ಯಕ್ರಮದ ನಿಮಿತ್ತ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ರಜೆ
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜನಲ್ಲಿ ಇದೇ ಜನವರಿ 31ರ ಸೋಮವಾರ ದಂದು ಜನಗಣತಿ ಕಾರ್ಯಕ್ರಮವನ್ನು ಏರ್ಪಡಿಸಿರುವುದರಿಂದ ಅಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಿರಲು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕೊಠಡಿಗಳನ್ನು ಜನಗಣತಿ ಕಾರ್ಯಕ್ಕೆ ಬಿಟ್ಟುಕೊಡಲಾಗಿದ್ದು ಅಂದು ವಿದ್ಯಾಥರ್ಿಗಳ ತರಗತಿಗಳಿಗೆ ಅಡಚಣೆ ಉಂಟಾಗುತ್ತದೆ ಎಂಬ ಮುಂದಾಲೋಚನೆಯಿಂದ ತರಗತಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ದಿಗೆ ಜನಗಣತಿಯ ಆಧಾರ ಮುಖ್ಯ: ಡಿ.ಡಿ.ಪಿ.ಐ ಮೋಹನ್ಕುಮಾರ್
ಚಿಕ್ಕನಾಯಕನಹಳ್ಳಿ,ಜ.29: ಒಂದು ದೇಶ ಅಭಿವೃದ್ದಿಯಾಗ ಬೇಕಾದರೆ ಅದು ದೇಶದ ಜನಗಣತಿಯ ಆಧಾರದ ಮೇಲೆ ದೇಶದ ಯೋಜನೆಗಳು ರೂಪುಗೊಳ್ಳುತ್ತದೆ ಎಂದು ಡಿ.ಡಿ.ಪಿ.ಈ ಮೋಹನ್ಕುಮಾರ್ ಹೇಳಿದರು.
ಶನಿವಾರ ಪಟ್ಟಣದ ಸಕರ್ಾರಿ ಪದವಿ ಕಾಲೇಜನಿಲ್ಲಿ ನಡೆದ 2010-11ನೇ ಸಾಲಿನ 3ದಿನದ ಜನಗಣತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ದೇಶದ ರಾಜ್ಯ,ಜಿಲ್ಲೆ ತಾಲೂಕು ಅಭಿವೃದ್ದಿಯಾಗಬೇಕದಾರರೆ ಜನಗಣತಿಯ ಆಧಾರದ ಮೇಲೆ ಪಂಚವಾಷರ್ಿಕ ಯೋಜನೆಗಳನ್ನು ಸಕರ್ಾರ ರೂಪಿಸುತ್ತದೆ. ಆಥರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಯಶಸ್ವಿಯಾಗ ಬೇಕಾದರೆ ಜನಗಣತಿ ಅಗತ್ಯ ಎಂದರು.
ಸರ್ವ ಶಿಕ್ಷಣ ಅಭಿಯಾನದ ಹಾಗೆ ಪ್ರೌಡಶಾಲೆಗಗಳಿಗೆ ಆರ್.ಎಮ್.ಇ.ಸಿ ಯೋಜನೆಯಡಿಯಲ್ಲಿ ಸಕರ್ಾರಿ ಪ್ರೌಡಶಾಲೆಗಳ ಅಭಿವೃದ್ದಿಗೆ 25ರಿಂದ 40ಸಾವಿರ ರೂಪಾಯಿಗಳನ್ನು ಪ್ರೌಡಶಾಲಾ ಮುಖ್ಯೋಪಾಧ್ಯಾರ ಖಾತೆಗೆ ಜಮಾ ಮಡಲಾಗಿದ್ದು ಈ ಹಣವನ್ನು ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ 10ವರ್ಷಕ್ಕೊಮ್ಮೆ ಒಮ್ಮೆ ನಡೆಯುವ ಜನಗಣತಿಯ ಕಾರ್ಯಕ್ರಮದಲ್ಲಿ ಶಿಕ್ಷಕರು ವ್ಯವಸ್ಥಿತವಾಗಿ ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ಭಾರತದ ಸಕರ್ಾರಿ ಯೋಜನೆಗಳ ಶೈಕ್ಷಣಿಕವಾಗಿ ಆಥರ್ಿಕ ಸಾಮಾಜಿಕ ವೈಜ್ಞಾನಿಕವಾಗಿ ಕ್ಷೇತ್ರಗಳಲ್ಲಿ ಹಾಗೂ ವಸತಿ ರಹಿತರಿಗೆ ಶೌಚಾಲಯ ಹಾಗೂ ಮಕ್ಕಳ ಶೈಕ್ಷಣಿಕ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಜನಗಣತಿ ಆಧಾರದ ಮೇಲೆ ನಿಂತಿದೆ ಎಂದ ಅವರು ಎರಡನೇ ಹಂತದ ಜನಗಣತಿ ಕಾರ್ಯಕ್ರಮ ಫೆಬ್ರವರಿ 6ರಿಂದ 28ರವರಗೆ ನಡೆಯಲಿದೆ ಜನಗಣತಿ ಕಾರ್ಯಕ್ರಮದಲ್ಲಿ ಶಿಕ್ಷಕರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾನಂದ್, ಸಿ.ಡಿ.ಪಿ.ಓ ಅನೀಸ್ಖೈಸರ್, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಸಮಾಜ ಕಲ್ಯಾಣಅಧಿಕಾರಿ ಸಯದ್ಮುನೀರ್ ಹಾಜರಿದ್ದರು
ಗಣತಿ ಕಾರ್ಯಕ್ಕೆ ಗೈರಾದರೆ ಶಿಸ್ತು ಕ್ರಮ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಜನಗಣತಿಯ ಗಣತಿ ಕಾರ್ಯಕ್ರಮವು ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಆಗಿರುವ ತೊಂದರೆಯನ್ನು ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದ ಅವರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 11ಗಂಟೆ ವೇಳೆಗೆ ಮುಗಿಸಿ ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ

Friday, January 28, 2011





ಕುಷ್ಠ ರೋಗದ ನಿಮರ್ೂಲನೆಗೆ ಸಹಕರಿಸಿ
ಚಿಕ್ಕನಾಯಕನಹಳ್ಳಿ,ಜ.28: ಕುಷ್ಠರೋಗದ ಲಕ್ಷಣಗಳು ಕಂಡ ಬಂದ ಮೇಲೆಯೂ ರೋಗಿ ಶೀಘ್ರ ಚಿಕಿತ್ಸೆ ಪಡೆಯದೇ ರೋಗದ ಬಗ್ಗೆ ನಿಗಾವಹಿಸದಿದ್ದಲ್ಲಿ ರೋಗಿಯು ಅಂಗವಿಕಲತೆಗೆ ತುತ್ತಾಗುತ್ತಾನೆ ಎಂದು ಆರೋಗ್ಯಾಧಿಕಾರಿ ಶಿವಕುಮಾರ್ ಹೇಳಿದರು.
ಪಟ್ಟಣದ ಜ್ಞಾನಪೀಠ ಪ್ರೌಡಶಾಲಾ ಆವರಣದಲ್ಲಿ ರೋಟರಿ ಕ್ಚಬ್ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಡೆದ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಷ್ಠರೋಗವನ್ನು ಸಾರ್ವಜನಿಕರು ತಮ್ಮ ನೆರಹೊರೆಯವರಲ್ಲಿ ಅರಿವು ಮೂಡಿಸಿ ಕುಷ್ಠರೋಗ ನಿಮರ್ೂಲನೆ ಮಾಡಬೇಕು ಎಂದರು.
ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಕಾರ್ಯದಶರ್ಿ ಅಶ್ವತ್ಥ್ನಾರಾಯಣ್ ಮಾತನಾಡಿದರು.
ಸಮಾರಂಭದಲ್ಲಿ ರೋಟರಿ ಸಂಸ್ಥೆಯಿಂದ ಕುಷ್ಠರೋಗಿಗಳಿಗೆ ಕಂಬಳಿ ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ಗೋವಿಂದರಾಜ್, ಆರೋಗ್ಯ ಕಾರ್ಯಕರ್ತರಾದ ರೇಣುಕಾರಾಧ್ಯ, ರಂಗನಾಥ್, ಶಂಕರ್ ಉಪಸ್ಥಿತರಿದ್ದರು. ಜನಗಣತಿ ಕಾರ್ಯಕ್ಕೆ ಗೈರು ಹಾಜರಾಗುವ ನೌಕರರ ಮೇಲೆ ನಿದ್ಯರ್ಾಕ್ಷಣ್ಯ ಕ್ರಮ
ಚಿಕ್ಕನಾಯಕನಹಳ್ಳಿ,ಜ.28: ತಾಲೂಕಿನ ಜನಗಣತಿಯ ಗಣತಿ ಕಾರ್ಯದ ತರಬೇತಿ ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು, ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 8ಕ್ಕೆ ಆರಂಭಿಸಿ 11ಗಂಟೆ ವೇಳೆಗೆ ಮುಗಿಸಿ ಶಾಲೆಗಳಿಗೆ ಹಾಜರಾಗಬೇಕು ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸ್ತ್ರೀಶಕ್ತಿ ಭವನವನ್ನು ಮಹಿಳೆಯರ ಅಭಿವೃದ್ದಿಗಾಗಿ ಬಳಸಿ
ಚಿಕ್ಕನಾಯಕನಹಳ್ಳಿ,ಜ.28: ಸ್ತ್ರೀಯರ ಮೇಲಿನ ನಂಬಿಕೆಯಿಂದ ಸ್ತ್ರಿ ಶಕ್ತಿ ಸಂಘಗಳಿಗೆ, ಸಹಕಾರ ಸಂಘಗಳು ಸೇರಿದಂತೆ ಬ್ಯಾಂಕುಗಳು ಸಾಲವನ್ನು ನೀಡಿ ಅವರಿಗೆ ಆಥರ್ಿಕವಾಗಿ ಸಹಕರಿಸಿತ್ತಿರುವುದರ ಜೊತೆಗೆ ಬೇರೊಂದು ರೀತಿಯಲ್ಲಿ ನಮ್ಮ ಬೆಂಬಲ ಮಹಿಳೆಯರಿಗೆ ನಿರಂತರವಾಗಿರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸ್ತ್ರೀ ಶಕ್ತಿಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಥರ್ಿಕ ಸಂಸ್ಥೆಗಳು ನೀಡಿದ ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಿ ಪುನಃ ಮತ್ತೊಬ್ಬರಿಗೆ ಹಣದ ನೆರವು ನೀಡಲು ಮಹಿಳೆಯರು ಸಹಕರಿಸಿ, ನೀಡಿದ ಹಣವನ್ನು ಒಳ್ಳೆ ರೀತಿಯ ಕೆಲಸ ಕಾರ್ಯಗಳಿಗೆ ಬಳಸಿ ಉತ್ತಮ ಲಾಭವನ್ನು ಪಡೆಯಬೇಕು ಎಂದ ಅವರು, ತಾಲೂಕಿನಲ್ಲಿ 1035 ಸ್ತ್ರೀ ಶಕ್ತಿ ಸಂಘಗಳಿದ್ದು ಈ ಸಂಘಗಳ ಬೆಳವಣಿಗೆಯಿಂದಲೇ ಮಹಿಳೆಯರು ರಾಜಕೀಯವಾಗಿ, ಸಾಮಾಜಿಕವಾಗಿ ಪ್ರೇರಿತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು. ಮುಂದಿನ ಫೆಬ್ರವರಿ 16ರಂದು ನಗರದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು 7ನೇ ತರಗತಿಯಿಂದ ಪದವಿ ವರೆಗೆ ಓದಿರುವ 3000 ವಿದ್ಯಾಥರ್ಿಗಳಿಗೆ ಉದ್ಯೋಗವನ್ನು ವಿವಿಧ ಕಂಪನಿಗಳಿಂದ ಕೊಡಿಸುವ ನಿರೀಕ್ಷೆ ವ್ಯಕ್ತಪಡಿಸಿದರು, ಆದಿಚುಂನಚಗಿರಿಯ ವೈದ್ಯಕೀಯ ಕಾಲೇಜಿನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಟಿ.ರಾಮು ಮಾತನಾಡಿ, ಸ್ತ್ರೀಯರು ಜೀವನದ ಮುಂದಿನ ರೂಪುರೇಷೆಗಾಗಿ ಮಿತಿವಾಗಿ ಹಣವನ್ನು ಬಳಸಿ, ಉಳಿಸಿದ ಹಣವನ್ನು ಸದ್ಬಳಕೆಗೆ ಉಪಯೋಗಿಸಿ ಜೀವನ ನಿರ್ವಹಣೆಯನ್ನು ಸುಗಮಗೊಳಿಸಬೇಕು ಎಂದರು. ಸ್ತ್ರೀ ಶಕ್ತಿ ಭವನವು ಸ್ತ್ರೀಯರಿಗಾಗಿದ್ದು ಅವರ ವಿಶ್ರಾಂತಿ, ಉದ್ಯೋಗ ಇನ್ನೂ ಹಲವಾರು ಉಪಯೋಗಕ್ಕಾಗಿ ಬಳಸಿಕೊಳ್ಳಬಹುದು ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಉಪಾದ್ಯಕ್ಷೆ ಕವಿತಾಚನ್ನಬಸವಯ್ಯ, ಅಂಬಿಕಾ ಮಲ್ಲಿಕಾಜರ್ುನಯ್ಯ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಸದಸ್ಯರಾದ ಲತಾ, ಚೇತನ, ಉಮಾದೇವಿ, ಇ.ಓ ದಯಾನಂದ್, ಪುರಸಭಾ ಸದಸ್ಯರಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರುಕ್ಮಿಣಮ್ಮ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಡಿ.ಪಿ.ಓ ಅನೀಸ್ಖೈಸರ್ ಪ್ರಾಸ್ತಾವಿಕ ಮಾತನಾಡಿ, ಪರಮೇಶ್ವರಪ್ಪ ಸ್ವಾಗತಿಸಿ ವಂದಿಸಿದರು.



Thursday, January 27, 2011


ಚಿಕ್ಕನಾಯಕನಹಳ್ಳಿ,ಜ.27: ಹಿಂದುಳಿದ ವರ್ಗಗಳ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕೆಂದರೆ ಮೊದಲು ಸಂಘಟಿತರಾಗಬೇಕೆಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಉಣ್ಣೆ ಮತ್ತು ಕಂಬಳಿ ಉತ್ಪಾದನಾ ಸಹಕಾರ ಸಂಘದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೊಳ್ಳಿರಾಯಣ್ಣನ 180ನೇ ಪುಣ್ಯಸ್ಮರಣೆ ಜಿ.ಪಂ. ಹಾಗೂ ತಾ.ಪಂನಲ್ಲಿ ಜಯಗಳಿಸಿದ ತಾಲೂಕಿನ ನೇಕಾರ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ, ನೇಕಾರರಿಗೆ ಗುರುತು ಪತ್ರ ವಿತರಣೆ ಹಾಗೂ ಷೇರು ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕೆಂದರೆ ಮೊದಲು ತಮ್ಮೊಳಗಿನ ಭಿನ್ನಭೇದಬಿಟ್ಟು ಎಲ್ಲರೂ ಒಂದು ಎಂಬ ಮನೋಭಾವ ಬೆಳಸಿಕೊಂಡು ಅಸಾಹಯಕರನ್ನು ಮೇಲುತ್ತುವ ಕೆಲಸ ಮಾಡಬೇಕೆಂದರು.
ಕಾಳಿದಾಸ ಬ್ಯಾಂಕ್, ಕಾಳಿದಾಸ ವಿದ್ಯಾವರ್ದಕ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿನ ದುರ್ಬಲವರ್ಗದವರಿಗೆ ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ನೆರವು ನೀಡಿದ ಎನ್ ಮಲ್ಲಪ್ಪನವರು ನಮ್ಮ ತಂದೆ ಎಂಬುದು ಹೆಮ್ಮೆಯ ವಿಷಯ ಎಂದ ಅವರು, ಕೇಂದ್ರ ಉಣ್ಣೆ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಹಲವು ಉಣ್ಣೆ ಸಂಘಗಳ ಸ್ಥಾಪನೆಗೆ ಪ್ರೇಕರಕರಾಗಿದ್ದರು, ಅವರ ಶತಮಾನೋತ್ಸವದ ವಷರ್ಾಚರಣೆಯ ಸಂದರ್ಭದಲ್ಲಿ ಈ ವೇದಿಕೆಗೆ ನಮ್ಮ ತಂದೆಯ ಹೆಸರನ್ನಿಟ್ಟಿರುವುದು ಹರ್ಷ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಗೊಳ್ಳಿರಾಯಣ್ಣನ 180ನೇ ಪುಣ್ಯ ಸ್ಮರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಗಾಂ ಜಿಲ್ಲೆಯ ನಂದಗಡದಲ್ಲಿರುವ ಅವರ ಸಮಾಧಿಯನ್ನು ಅಭಿವೃದ್ದಿ ಪಡಿಸಬೇಕೆಬುದು ನಮ್ಮ ಒತ್ತಾಯ, ಈ ಬಗ್ಗೆ ಸಕರ್ಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದೇವೆ ಎಂದರಲ್ಲದೆ, ಈ ಬಜೆಟ್ನ ಮಂಡನೆಯ ಈ ಸಂದರ್ಭದಲ್ಲಾದರೂ ರಾಯಣ್ಣನ ಸಮಾಧಿ ಅಭಿವೃದ್ದಿಗೆ ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ನಮ್ಮ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿನ ಅಮಾಮ್ ಕೋಮಿನ ಜನರಿಗೆ ತಮಾಮ್ ಆಗಿ ಜಮೀನು ಹಂಚಿದವರು ಮಲ್ಲಪ್ಪನವರು, ಅವರು ಅಧಿಕಾರದಲ್ಲಿದ್ದಾಗ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಮಡಿಕೊಟ್ಟರು ಎಂದರು.
ಇತ್ತೀಚಿಗೆ ಸಕರ್ಾರ ನೇಕಾರರ ನೆರವಿಗೆ ಬರುವಂತಹ ಯೋಜನೆಯನ್ನು ರೂಪಿಸುತ್ತಿದ್ದು ಕ್ಲಷ್ಟರ್ ಯೋಜನೆಯಲ್ಲಿ 5ವರ್ಷಗಳ ಅವಧಿಗೆ 50 ಲಕ್ಷರೂಗಳನ್ನು ನಮ್ಮ ಸೊಸೈಟಿಗೆ ನೀಡಿದೆ ಎಂದರಲ್ಲದೆ, ಉಣ್ಣೆಯಲ್ಲಿ ಮೌಲ್ಯವಧರ್ಿತ ಉತ್ಪನ್ನಗಳ ತರಬೇತಿಗೆ ಪುರಸಭೆಯವರು ಹಣ ಮೀಸಲಿಟ್ಟಿರುವುದು ನೇಕಾರಿಕೆಯಲ್ಲಿ ನವೀನ ರೀತಿಯ ವಸ್ತುಗಳ ಉತ್ಪಾದನಾ ತರಬೇತಿಗೆ ಅನುಕೂಲಕರವಾಗಲಿದೆ ಎಂದರು.
ಕಂಬಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಕರ್ಾರ ಮುಂದಾಗಬೇಕು ಅದಕ್ಕಾಗಿ ಎಲ್ಲಾ ಸಕರ್ಾರಿ ಆಸ್ಪತ್ರೆ ಹಾಗೂ ಹಾಸ್ಟಲ್ಗಳಿಗೆ ಬೆಡ್ಶೀಟ್ ಬದಲಾಗಿ ಕಂಬಳಿಗಳನ್ನು ವಿತರಿಸಬೇಕೆಂದರು.
ಬಿ.ಸಿ.ಎಂ ಇಲಖೆಯಲ್ಲಿ ನಮ್ಮ ಸೊಸೈಟಿಯ ಕಟ್ಟಡದಕ್ಕಾಗಿ 5ಲಕ್ಷರೂ ಅನುದಾನ ನೀಡಲು ಅವಕಾಶವಿದ್ದು ಈ ಹಣವನ್ನು ಪಡೆಯುವುದಕ್ಕೆ ನಮ್ಮ ಸೊಸೈಟಿಯ 5ಲಕ್ಷ ರೂಗಳನ್ನು ತುಂಬಿದರೆ 10ಲಕ್ಷ ರೂಗಳಲ್ಲಿ ಕಟ್ಟಡವನ್ನು ಕಟ್ಟಲು ಅವಕಾಶವಿದೆ, ಈ ನಿಟ್ಟಿನಲ್ಲಿ ನಮ್ಮ ಸೊಸೈಟಿ ಕಾಯರ್ೋನ್ಮುಕವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿದರ್ೇಶಕ ಕುಮಾರಸ್ವಾಮಿ, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಕಾರ್ಯದಶರ್ಿ ಸಿ.ಪಿ.ಗಿರೀಶ್ ಸ್ವಾಗತಿಸಿದರೆ, ಶಿಕ್ಷಕ ದೇವರಾಜು ನಿರೂಪಿಸಿದರು, ಸಿ.ಎಚ್.ಗಂಗಾಧರ್ ವಂದಿಸಿದರು.









Tuesday, January 25, 2011







ಮತದಾರರು ಚುನಾವಣಾ ಘನತೆಯನ್ನು ಎತ್ತಿಹಿಡಿಯಬೇಕು: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.25: ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರು ಪ್ರತಿಯೊಂದು ಚುನಾವಣೆಯಲ್ಲಿ ನಿಭರ್ೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತಭಾಷೆಗಳ ಯಾವುದೇ ಪ್ರೇರೇಪಣೆಗಳಿಂದ ದೂರವಿದ್ದು, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕೆಂದು ತಮ್ಮ ಪ್ರತಿಜ್ಷಾ ವಿಧಿಯಲ್ಲಿ ತಿಳಿಸಿದರು.
ಸಿ.ಡಿ.ಪಿ.ಓ ಅನೀಸ್ ಖೈಸರ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು, ಚುನಾವಣಾ ಪ್ರಕ್ರಿಯೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳಲು ಚುನಾವಣಾ ಗುರುತಿನ ಚೀಟಿ ಮುಖ್ಯವಾಗಿದೆ ಎಂದರಲ್ಲದೆ, ಚುನಾವಣೆಯ ಸಂದರ್ಭದಲ್ಲಿ ಮತ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದಾಗ ಮತದಾರರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು. 18ವರ್ಷ ವಯಸ್ಸಿನ ಎಲ್ಲಾ ವಯಸ್ಕರಿಗೂ ಮತದಾರರ ಗುರುತಿನ ಚೀಟಿ ಪಡೆಯ ಬೇಕೆಂದರು.
ಸಮಾರಂಭದಲ್ಲಿ ತಾಪಂ,ಇ.ಓ. ಎನ್.ಎಂ.ದಯಾನಂದ್, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ ಉಪಸ್ಥಿತರಿದ್ದರು.
ಲೋಕ ಶಿಕ್ಷಣ ಕೇಂದ್ರಗಳು, ಗ್ರಾಮದ ಮಾಹಿತಿ ಕೇಂದ್ರಗಳು
ಚಿಕ್ಕನಾಯಕನಹಳ್ಳಿ,ಜ.25: ಗ್ರಾಮಗಳ ಅಭಿವೃದ್ದಿಗಾಗಿ ಗ್ರಾಮಗಳ ವಯಸ್ಕರಿಗೆ ಸಾಕ್ಷರತೆ ಮತ್ತು ಕೌಶಲ್ಯಾಭಿವೃದ್ದಿ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸಕರ್ಾರ ಸಾಕ್ಷರ್ ಭಾರತ್ ಎಂಬ ಕಾರ್ಯಕ್ರಮ ಏರ್ಪಡಿಸಿದೆ ಎಂದು ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಕ್ಷರ್ ಭಾರತ್ 2012 ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಮಾಹಿತಿ ಪತ್ರ ಮುಂತಾದವುಗಳನ್ನೊಳಗೊಂಡ ಗ್ರಂಥಾಲಯವನ್ನು ತೆರೆಯಲಾಗಿದ್ದು ಆಧುನಿಕ ಸೌಲಭ್ಯಗಳನ್ನು ಸುಸಜ್ಜಿತಗೊಳಿಸಲಾಗುತ್ತದೆ ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಗ್ರಾಮಗಳಲ್ಲಿರುವ ಜನರು ತಮ್ಮ ಹಳ್ಳಿಗಳಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕ್ಷರರಾಗಲು ತಿಳಿಸಿದ ಅವರು ದೇಶ ಪ್ರಗತಿ ಹೊಂದಲು ಸಹಕರಿಸಬೇಕು ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ,ಇ.ಓ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್ ಸಿ.ಡಿ.ಪಿ.ಓ ಅನೀಸ್ಖೈಸರ್ ಉಪಸ್ಥಿತರಿದ್ದರು.

Sunday, January 23, 2011

ಸಂಗೊಳ್ಳಿರಾಯಣ್ಣ ಹುತಾತ್ಮ ದಿನದ ನೆನಪಿಗಾಗಿ ನೇಕಾರರಿಗೆ ಸವಲತ್ತು ವಿತರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.23: ಸಂಗೊಳ್ಳಿರಾಯಣ್ಣ ಹುತಾತ್ಮ ದಿನದ ನೆನಪಿನ ಅಂಗವಾಗಿ ನೇಕಾರರಿಗೆ ವಿವಿಧ ಸವಲತ್ತುಗಳ ವಿತರಣೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಇದೇ 26ರ ಮಧ್ಯಾಹ್ನ 3ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೇವಣಸಿದ್ದೇಶ್ವರ ಕಂಬಳಿ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ಚುನಾಯಿತರಿಗೆ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಕುಮಾರಸ್ವಾಮಿ ನೇಕಾರರ ಗುತರ್ಿನ ಚೀಟಿ ವಿತರಿಸಲಿದ್ದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಸಾಪ ಕಾರ್ಯದಶರ್ಿ ಸಿ.ಗುರುಮೂತರ್ಿ ನುಡಿ ನಮನ ಮಾಡಲಿದ್ದು ಪುರಸಭಾಧ್ಯಕ್ಷ ರಾಜಣ್ಣ ಷೇರು ಪತ್ರ ವಿತರಿಸಲಿದ್ದು ರೋಟರಿ ಕ್ಲಬ್ ಅಧ್ಯಕ್ಷ ಎನ್.ಶ್ರೀಕಂಠಯ್ಯ ನೋಟ್ ಪುಸ್ತಕ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರೀ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್, ತಾ.ಪ.ಕಾ.ನಿ. ಸಂಘದ ಕಾರ್ಯದಶರ್ಿ ಸಿ.ಹೆಚ್.ಚಿದಾನಂದ್, ಜಿಲ್ಲಾ,ಕ.ರ.ವೇ ಕಾರ್ಯದಶರ್ಿ ಟಿ.ಈ.ರಘುರಾಮ್, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸ.ನೌ.ಸಂ.ಅಧ್ಯಕ್ಷ ಪರಶಿವಮೂತರ್ಿ, ಕ.ಭ.ಸಮಿತಿ ಅಧ್ಯಕ್ಷ ಸಿ.ಎಸ್.ಬಸವರಾಜು, ಕ.ಯು.ಕ್ರೀ.ಕ.ಸಂಘದ ಅಧ್ಯಕ್ಷ ಸಿ.ಬಿ.ಲೋಕೇಶ್, ಕಂಬಳಿ ಸೊಸೈಟಿ ಉಪಾಧ್ಯಕ್ಷ ಸಿ.ಕೆ.ಲೋಕೇಶ್, ನಿದರ್ೇಶಕರುಗಳಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಎನ್.ವಿಜಯ್ಕುಮಾರ್, ಆರ್.ಜಿ.ಗಂಗಾಧರಯ್ಯ, ಗೋವಿಂದಯ್ಯ, ಭಾರತಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ನೇಕಾರ ಸಮಾಜದ ಪ್ರತಿನಿಧಿಗಳಾದ ಜಿ.ಪಂ.ಸದಸ್ಯೆ ಎನ್.ಜಿ.ಮಂಜುಳ, ತಾ.ಪಂ.ಸದಸ್ಯರುಗಾಳದ ಡಿ.ಶಿವರಾಜು, ಎ.ಬಿ.ರಮೇಶ್ಕುಮಾರ್, ಉಮಾದೇವಿ, ಜಯಲಕ್ಷಮ್ಮ ರವರಿಗೆ ಸನ್ಮಾನಿಸಲಾಗುವುದು.
ಜಿಲ್ಲಾ ಮಟ್ಟದ ಜಾನಪದ, ಭಾವಗೀತೆ ಹಾಗೂ ಚಲನಚಿತ್ರ ಗೀತೆ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಜ.22: ಜಿಲ್ಲಾ ಮಟ್ಟದ ಜಾನಪದ ಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆ ಸ್ಪಧರ್ೆಯನ್ನು ಇದೇ 26ರ ಬುಧವಾರ ಸಂಜೆ 4ಗಂಟೆಗೆ ಏರ್ಪಡಿಸಲಾಗಿದೆ.
62ನೇ ಗಣರಾಜ್ಯೋತ್ಸವದ ಅಂಗವಾಗಿ ಹಾಗೂ ಭುವನೇಶ್ವರ ಯುವಕ ಸಂಘದ 30ನೇ ವರ್ಷದ ವಾಷರ್ಿಕೋತ್ಸವದ ಸವಿನೆನಪಿಗಾಗಿ ಸ್ಪಧರ್ೆಗಳನ್ನು ಏರ್ಪಡಿಸಿದ್ದು ಜಾನಪದ ಗೀತೆ 1ರಿಂದ 7ನೇ ತರಗತಿ, ಭಾವಗೀತೆ ಸ್ಪಧರ್ೆ 8ರಿಂದ 10ನೇ ತರಗತಿ ಮತ್ತು ಚಲನಚಿತ್ರಗೀತೆ ಸ್ಪಧರ್ೆಯನ್ನು ಪದವಿ ಪೂರ್ವ ಕಾಲೇಜು ವಿದ್ಯಾಥರ್ಿಗಳಿಗೆ ಏರ್ಪಡಿಸಿದ್ದು ಆಸಕ್ತರು 9980163152 ನಂ.ಗೆ ಸಂಪಕರ್ಿಸಬಹುದು ಎಂದು ಕೋರಿದ್ದಾರೆ.



Saturday, January 22, 2011



ಚಿ.ನಾ.ಹಳ್ಳಿ ಬಂದ್ ಯಶಸ್ವಿ: ಜನ ಸಾಮಾನ್ಯರ ಪರದಾಟ
ಚಿಕ್ಕನಾಯಕನಹಳ್ಳಿ,ಜ.22: ರಾಜ್ಯದ ಬಿ.ಜೆ.ಪಿ ನೀಡಿದ್ದ ದಿಢೀರ್ ಬಂದ್ನಿಂದಾಗಿ ಕಾರ್ಯಕರ್ತರು ರೊಚಿಗೆದ್ದು ಬಸ್ ಒಂದಕ್ಕೆ ಕಲ್ಲು ಹೊಡೆದೆದ್ದಲ್ಲದೆ, ಆರು ಆಟೋಗಳಿಗೆ ಹಾನಿ ಮಾಡಿದ್ದಾರೆ, ವ್ಯಾಪಾರಸ್ಥರಿಗೆ, ಶಾಲಾ-ಕಾಲೇಜು ಮಕ್ಕಳಿಗೆ, ವಿವಿಧ ಕ್ಷೇತ್ರದ ನೌಕರರಿಗೆ ತೊಂದರೆಯಾಗಿರುವುದಲ್ಲದೆ ಬಂದ್ನ ವಿಷಯ ತಿಳಿಯದ ವಾಹನ ಚಾಲಕರು ಜನರನ್ನು ಪ್ರಾಯಣದ ಮಧ್ಯೆದಲ್ಲಿ ಇಳಿಸಿ ಪ್ರಯಾಣಿಕರು ತಿಂಡಿ ಊಟಕ್ಕೆ ಪರದಾಡುವಂತಹ ಸ್ಥಿತಿ ನಿಮರ್ಾಣವಾಯಿತು.
ಮುಂಜಾನೆಯಿಂದ ಆರಂಭಗೊಂಡ ಬಂದ್ನಿಂದ ಬಿ.ಜೆ.ಪಿ. ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಒಂದು ಸುತ್ತು ಪ್ರದಕ್ಷಣೆ ಬಂದು, ಹೊಟೇಲ್, ಪೆಟ್ಟಿಗೆ ಅಂಗಡಿಗಳನ್ನು ಬಂದ್ ಮಾಡಿಸಿದರು. ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ಜಿ.ಪಂ.ಸದಸ್ಯ ಪಂಚಾಕ್ಷರಯ್ಯ ಮಾಜಿ ಅಧ್ಯಕ್ಷರುಗಳಾದ ರಾಜಣ್ಣ, ಶ್ರೀನಿವಾಸಮೂತರ್ಿ ಹಾಗೂ ಬಿ.ಜೆ.ಪಿ ಮುಖಂಡರುಗಳಾದ ಮೈಸೂರಪ್ಪ, ತಮ್ಮಡಿಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಮೆರವಣಿಗೆ ನಡೆಸಿದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ, ರಾಜ್ಯ ಪಾಲರು ಸಕರ್ಾರದ ಪ್ರತಿನಿಧಿಯಂತೆ ನಡೆಯಬೇಕಾಗಿತ್ತು ಆದರೆ ದುರಾದೃಷ್ಟವಶಾತ್ ವಿರೋಧ ಪಕ್ಷದ ನಾಯಕರಂತೆ ವತರ್ಿಸುತ್ತಿರುವುದು ಸಂವಿಧಾನಕ್ಕೆ ಅಪಮಾನವೆಸಗಿದಂತೆ ಎಂದರಲ್ಲದೆ, ರಾಜ್ಯಪಾಲರಾದ ಹಂಸರಾಜ್ ಭಾರಧ್ವಜ್ ಹಂಸದ ರೀತಿ ಒಳ್ಳೆಯದನ್ನು ತೆಗೆದುಕೊಳ್ಳಬೇಕು, ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ ಎಂದರು.
ಬಂದ್ನಿಂದ ಪರದಾಡಿದ ಜನ ಸಾಮಾನ್ಯರ ಅಳಲು: ಬೆಳಗ್ಗೆ ದಿಡೀರ್ ಬಂದ್ನಿಂದ ಹಲವು ಊರುಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ ಬಂದಿದ್ದ ಜನಸಾಮಾನ್ಯರು ವಾಹನಗಳಿಗಾಗಿ ಕಾಯುತ್ತಾ ಬಸ್ಸ್ಟಾಪ್ನಲ್ಲೇ ಕುಳಿತರು. ತಮ್ಮ ಊರುಗಳಿಗೆ ವಾಪಾಸ್ ಆಗಲು ಆಗದೆ ಪರದಾಡುತ್ತಿದ್ದ ಜನರನ್ನು ಪತ್ರಿಕೆ ಸಂದಶರ್ಿಸಿದಾಗ ಇವರ ಕುಚರ್ಿ ಉಳಿಸಿಕೊಳ್ಳುವುದಕ್ಕಾಗಿ ಬಂದ್ನ ನೆಪವೊಡ್ಡಿ ಜನರಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ'. ತಮ್ಮ ಸಂಬಂಧಿಕರೊಬ್ಬರ ತಿಥಿಗಾಗಿ ಧವಸ ದಾನ್ಯಗಳನ್ನು ಬೇರೊಂದು ಸ್ಥಳಕ್ಕೆ ಕೊಂಡೊಯ್ಯಬೇಕಿತ್ತು ಆದರೆ ಬಂದ್ನಿಂದಾಗಿ ಇಲ್ಲೇ ವಾಸ್ತವ್ಯ ಹೂಡಬೇಕಾಗಿದೆ, ಇದರಿಂದ ನನ್ನ ಬರುವಿಕೆಗಾಗಿ ಕಾಯುತ್ತಿರುವ ಸಂಬಂದಿಕರು ತಿಥಿಗಾಗಿ ಪರದಾಡುತ್ತಿದ್ದಾರೆ ಎಂದು ರಂಗನಾಥ್ ಎಂಬ ವ್ಯಕ್ತಿ ಹೇಳಿದರೆ, ಸೊಪ್ಪನ್ನು ಮಾರಲು ಪಟ್ಟಣಕ್ಕೆ ಹೋಗಬೇಕಾಗಿತ್ತು ಆದರೆ ಬಂದ್ ನಿಂದ ಇಲ್ಲೇ ವಾಸ್ತವ್ಯ ಹೂಡಿದ್ದು ಸೊಪ್ಪ ಸಂಜೆ ವೇಳೆಗೆ ಒಣಗುತ್ತದೆ ನಮ್ಮ ಜೀವನ ನಡೆಯುವುದೇ ಈ ಸೊಪ್ಪಿನಿಂದ ಇದಕ್ಕೆಲ್ಲ ಯಾರು ಹೊಣೆಗಾರರೆಂದು ಮೊಹಬೂಬಿರವರು ಪ್ರಶ್ನಿಸಿದರು.
ಇದೇ ಸಮಯದಲ್ಲಿ ಬಂದ್ನ ವಿಷಯ ತಿಳಿಯದ ಆಟೋ ಚಾಲಕನೊಬ್ಬ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಕಿಡಿಗೇಡಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಇದರ ವಿರುದ್ದ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಸಾರ್ವಜನಿಕರಿಗೆ ಬಂದ್ನ ಬಗ್ಗೆ ಮುಂಚಿತವಾಗಿ ಸರಿಯಾದ ಮಾಹಿತಿ ನೀಡದೆ ಏಕಾಏಕಿ ಬಂದ್ ಏರ್ಪಡಿಸಿದ್ದಾರೆ, ಇದರಿಂದ, ಸಾರ್ವಜನಿಕ ಆಸ್ತಿಯ ನಷ್ಠಕ್ಕೆ ಯಾರು ಜವಾಬ್ದಾರಿಯಾಗುತ್ತಾರೆಂದು ಸಕರ್ಾರದ ವಿರುದ್ದ ಕಿಡಿಕಾರಿದರು.

ಮಹಿಳೆಯರು ಕೌಟಂಬಿಕವಾಗಿ ನೆಮ್ಮದಿಯಿಂದಿದ್ದರೆ ಜೀವನ ಮೌಲ್ಯ ಅರ್ಥ ಪೂರ್ಣ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆಯರು ಸಾಮಾಜಿಕವಾಗಿ ಕುಟುಂಬಗಳಲ್ಲಿ ಶಾಂತಿ ಮತ್ತು ನೆಮ್ಮದಿ ಜೀವನ ಹೊಂದಿದಾಗ ಮಾತ್ರ ಜೀವನದ ಮೌಲ್ಯ ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಹೇಳಿದರು.
ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಂಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ಹಿಂಸೆ ತಡೆಯಲು ಮಹಿಳೆಯರು ಕಾನೂನಿನ ಅರಿವು ತಿಳಿಯುವುದು ಒಳಿತು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಹಿಳೆಯರು ಕಾನೂನು ಅರಿವು ಪಡೆಯುವುದು ಬಹುಮುಖ್ಯ ಕುಟುಂಬದಲ್ಲಿ ಮಹಿಳೆಯರ ಪಾತ್ರ ಜವಾಬ್ದಾರಿಯುತವಾಗಿದ್ದು ಸಮಾಜದ ಪಿಡುಗುಗಳಾದ ವರದಕ್ಷಿಣೆ, ಬಾಲ ಕಾಮರ್ಿಕತೆ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಮೂಡನಂಭಿಕೆಯನ್ನು ತೊರೆದು ಕಾನೂನಿನ ಅರಿವು ಪಡೆಯಲು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಕೈಸರ್ ಮಾತನಾಡಿ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಯಾರು ಸಹಾ ಸಮಸ್ಯೆಗೆ ಹೆದರದೇ ಸಮಸ್ಯೆಯನ್ನು ಹೆದರಿಸಿ ಬದುಕಬೇಕು ಎಂದ ಅವರು ಕಾನೂನಿನ ಅರಿವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತೆ ಹೇಳಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಎನ್.ಶೀಲ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಹೆಚ್.ಎಸ್.ಚಂದ್ರಶೇಖರಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ, ಟಿ.ದಯಾನಂದ್, ಕೆ.ಎಲ್.ಭಾಗ್ಯಲಕ್ಷ್ಮೀ, ನಾರಾಯಣರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ,ಕೆ.ಎಂ.ರಾಜಶೇಖರಪ್ಪ ಸ್ವಾಗತಿಸಿ, ಕೆ.ಎಂ.ಷಡಾಕ್ಷರಿ ನಿರೂಪಿಸಿ, ಕೆ.ಸಿ.ವಿಶ್ವನಾಥ್ ವಂದಿಸಿದರು.

ಮಹಿಳೆಯರನ್ನು ಕೆ.ಕೆ.ಜಿ.ಬ್ಯಾಂಕ್ ಆಥರ್ಿಕವಾಗಿ ಸಬಲಗೊಳಿಸುತ್ತಿದೆ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆ ಸಾಮಾಜಿಕ, ಆಥರ್ಿಕ ಹಾಗೂ ರಾಜಕೀಯದ ಎಲ್ಲಾ ಕ್ಷೇತ್ರಗಳಲ್ಲಿ ಪುರಷರಿಗಿಂತ ಮೇಲುಗೈ ಸಾಧಿಸುತ್ತಿದ್ದು ಮಹಿಳೆಯರು ಸಬಲೆಯಾಗಿ ಪ್ರತಿ ಕ್ಷೇತ್ರದಲ್ಲೂ ಮುನ್ನುಗುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪನಿದರ್ೇಶಕರಾದ ಚಿದಾನಂದ್ ತಿಳಿಸಿದರು.
ತಾಲೂಕಿನ ಕಂದಿಕೆರೆಯ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ನೂತನ ಕಟ್ಟಡದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಸಲುವಾಗಿ ನಮ್ಮ ಇಲಾಖೆ ಸ್ತ್ರೀ ಶಕ್ತಿ ಭವನವನ್ನು ಎಲ್ಲಾ ತಾಲೂಕುಗಳಲ್ಲಿ ಸ್ಥಾಪಿಸಲಾಗಿದೆ ಎಂದರು.
ನಬಾಡರ್್ನ ಸಹಾಯಕ ವ್ಯವಸ್ಥಾಪಕ ಜಿ.ಅನಂತಕೃಷ್ಣ ಮಾತನಾಡಿ ಕೋರ್ ಬ್ಯಾಂಕಿಂಗ್ನ ಅನುಕೂಲಗಳ ಬಗ್ಗೆ ಮಾತನಾಡುತ್ತ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸಾಲ ಸೌಲಭ್ಯ ನೀಡುವಲ್ಲಿ ನಮ್ಮ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಲೋಹಿತಬಾಹಿ ಮಾತನಾಡಿ ಬ್ಯಾಂಕ್ ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಸಾಕಷ್ಟು ಸಾಲ ಸೌಲಭ್ಯ ನೀಡಿದೆ ಆದರೆ ಖಾತೆದಾರರು ಸರಿಯಾದ ವೇಳೆಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡಬೇಕೆಂದು ಕೋರಿದರು.
ಕಾವೇರಿ ಕಲ್ಪತರು ಬ್ಯಾಂಕ್ ಮ್ಯಾನೇಜರ್ ಪಿ.ಎನ್.ಸ್ವಾಮಿ ಮಾತನಾಡಿ ಕಂದಿಕೆರೆಯ 180ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ 2.50ಕೋಟಿಗೂ ಹೆಚ್ಚು ಸಾಲ ನೀಡಿದ್ದು ಗ್ರಾಮೀಣ ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಉಮಾದೇವಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಜಯಣ್ಣ, ತಾ.ಪಂ.ಮೇನೇಜರ್ ನರಸಿಂಹಯ್ಯ, ಪಿಡಿ.ಓ ಶಿವಕುಮಾರ್, ವ್ಯವಸ್ಥಾಪಕ ಆರ್.ಎಮ್.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೆ.ಮಾಧವ್ ಸ್ವಾಗತಿಸಿ, ಕೆ.ಜಿ.ಪ್ರಭಾಕರ್ ನಿರೂಪಿಸಿ, ಚಂದ್ರಶೇಖರ್ ವಂದಿಸಿದರು.

ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜ.22: ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭವನ್ನು ಇದೇ 24ರ ಸೋಮವಾರ ಬೆಳಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಸಮಾರಂಭವನ್ನು ಸಂಘದ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ನ.ಪ.ಸ.ಸಂ.ಅಧ್ಯಕ್ಷ ಸಿ.ಪಿ.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿ.ಕೇ.ಸ.ಬ್ಯಾಂಕ್ನ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ.ಬಿ.ಕೆ.ರವಿ ಸಹಾಕರ ಸಂಘಗಳ ಉಪನಿದರ್ೇಶಕ ರಂಗಸ್ವಾಮಿ, ನವಚೇತನ ಪ.ಸ.ಸಂ. ಮಾಜಿ ಅಧ್ಯಕ್ಷರಾದ ಸಿ.ಎಸ್.ರಾಜಣ್ಣ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿರುವರು.

Friday, January 21, 2011

ದಾಸ್ಯ ಗುಲಾಮಗಿರಿಯ ಬದ್ದ ವೈರಿ ವಿವೇಕಾನಂದ
ಚಿಕ್ಕನಾಯಕನಹಳ್ಳಿ,ಜ.21: ಕಾಲೇಜು ಮಟ್ಟದಲ್ಲಿನ ಯುವಕರ ಚಲ, ಹುಮ್ಮಸ್ಸಿನ ಹೋರಾಟವನ್ನು ನಮ್ಮ ದೇಶವನ್ನು ಕಟ್ಟುವುದಕ್ಕಾಗಿ ಉಪಯೋಗಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಯುವಕರಿಗೆ ಕರೆ ನೀಡಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕೇವಲ ಮಾತಿನಿಂದ ಈಡೀ ವಿಶ್ವವನ್ನೇ ಗೆದ್ದ ಸ್ವಾಮಿ ವಿವೇಕಾನಂದರು, ಮೊದಲು ತಮ್ಮನ್ನು ತಾನು ಗೆಲ್ಲುತ್ತಿದ್ದರು ಈ ರೀತಿ ಯುವಕರು ತಮ್ಮ ಸ್ವಂತಿಕೆ ಗೆಲ್ಲಲು ಮುಂದಾಗಬೇಕು ಯುವಕರು ಮುಂದಿನ ಗುರಿಗಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದ ಅವರು ಅಭಾವಿಪ ದೇಶ ಭಕ್ತ ವಿದ್ಯಾಥರ್ಿ ಸಂಘಟನೆಯಾಗಿದ್ದು ಸಂಘಟನೆಯ ಶಿಸ್ತು ಉತ್ತಮ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂದರು
ಉಪನ್ಯಾಸಕ ರವೀಶ್ ಮಾತನಾಡಿ ಕೇವಲ ಪರೀಕ್ಷೆಗಳ ಅಂಕಗಳಿಗಾಗಿ ಮಾತ್ರ ಶಿಕ್ಷಣವಲ್ಲ, ಸಮಾಜ ಅಭಿವೃದ್ದಿಗೆ ಪೂರಕವಾಗುವಂತಹ ಶಿಕ್ಷಣವನ್ನು ವಿದ್ಯಾಥರ್ಿಗಳು ಪಡೆಯಬೇಕು ಎಂದ ಅವರು, ಭಯೋತ್ಪಾದನೆಯಂತಹ ಹೀನ ಕೃತ್ಯಗಳಿಗೆ ಯುವಕರು ಒಳಗಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳು ಮಡಿಕೊಳ್ಳುತ್ತಿದ್ದಾರೆ ಇದರಿಂದ ದೇಶದ ಕೀತರ್ಿ, ಸಾಂಸ್ಕೃತಿಕತೆ ಹಾಳಾಗುವುದಲ್ಲದೆ ದೇಶದ ಕೀತರ್ಿಗೂ ಮಂಕು ಬಳಿದಂತಾಗುತ್ತದೆ ಎಂದರು. ವಿವೇಕಾನಂದರಂತಹ ಮಹಾನ್ ದಾರ್ಶನಿಕರು ಮತ್ತೊಮ್ಮೆ ಹುಟ್ಟಿ ಬರಬೇಕೆಂದ ಅವರು, ಭಾರತವನ್ನು ಎಲ್ಲಾ ದೇಶಗಳು ಕೀಳರಿಮೆಯಿಂದ ಕಾಣುತ್ತಿದ್ದ ಸಮಯದಲ್ಲಿ ತನ್ನ ಜಾಣ್ಮೆಯಿಂದಲೇ ದೇಶದ ಕೀತರ್ಿಯನ್ನು ಬೆಳಗುತ್ತಿದ್ದರು ಎಂದರು. ವಿವೇಕಾನಂದರು ದಾಸ್ಯ, ಗುಲಾಮಗಿರಿಯನ್ನು ಕಿತ್ತೊಗೆಯಲು ಸ್ವತಂತ್ರಕ್ಕಾಗಿ ಹೋರಾಡುವ ವ್ಯಕ್ತಿಯನ್ನು ತಯಾರಿ ಮಾಡುಲು ಹಂಬಲಿಸುತ್ತಿದ್ದರು ಎಂದರು.
ನಗರ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸಾವಿರಾರು ವಿದ್ಯಾಥರ್ಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ತು.ಹಾ.ಒ.ಅಧ್ಯಕ್ಷ ಶಿವನಂಜಪ್ಪ ಹಳೇಮನೆ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ. ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಪ್ರಾಂಶುಪಾಲ ಶಿವಕುಮಾರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ನಗರ ಸಹ ಕಾರ್ಯದಶರ್ಿ ದಿಲೀಪ್ ಸ್ವಾಗತಿಸಿದರೆ, ವಿಜಯ್ ನಿರೂಪಿಸಿ, ಮನೋಹರ್ ವಂದಿಸಿ, ಕಾರ್ಯರ್ತರಾದ ರವಿ, ಮಧು, ಜಯರಾಜ್, ನವೀನ್, ಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: 2010-11ನೇ ಸಾಲಿನ ಸಕರ್ಾರಿ, ಖಾಸಗಿ, ಅನುದಾನ, ಅನುದಾನ ರಹಿತ ಪ್ರೌಡಶಾಲಾ ವಿದ್ಯಾಥರ್ಿಗಳಿಗೆ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಶಾಲೆಯಿಂದಾ 2 ವಿದ್ಯಾಥರ್ಿಗಳ 1 ತಂಡ ಈ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವುದು ಹಾಗೂ ಈ ಪರೀಕ್ಷಾ ಕಾರ್ಯಕ್ಕೆ ಒಬ್ಬರು ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಲು ಎಲ್ಲಾ ಪ್ರೌಡಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ.
ಸಾಕ್ಷಾರ ಮಿತ್ರರಿಗೆ ತರಬೇತಿ
ಚಿಕ್ಕನಾಯಕನಹಳ್ಳಿ,ಜ.21: ತಾಲೂಕಿನಲ್ಲಿರವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಕ್ಷರ ಭಾರತ್ 2012ನ್ನು ಅನುಷ್ಠಾನ ಗೊಳಿಸಲು ಇದೇ 25ರಂದು ಬೆಳಗ್ಗೆ 10 ಗಂಟೆಗೆ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಲಾಗಿದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ್ ತಿಳಿಸಿದ್ದಾರೆ.
ಜಿಲ್ಲಾ ಲೋಕ ಶಿಕ್ಷಣ ಸಮಿತಿ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅಧ್ಯಕ್ಷರುಗಳು ಶಿಬಿರದಲ್ಲಿ ಭಾಹವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚಿ.ತಾ.ಮೂ.ಗೆಳೆಯರ ಒಕ್ಕೂಟದ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: ಬೆಂಗಳೂರಿನ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 23ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದು ಬಿ.ಬಿ.ಎಂ.ಪಿ ಸೂಪರಿಟೆಂಡೆಂಟ್ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ಸಮಾರಂಭ ಉದ್ಘಾಟಿಸಿಲಿದ್ದು ಚಿ.ನಾ.ಹಳ್ಳಿ ತಾ.ಮೂ.ಗೆ.ಬಳಗದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಸುಜಯ ಮಹಲಿಂಗಪ್ಪ, ವಕೀಲ ಎಸ್.ಹನುಮಂತಯ್ಯ, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್. ಎಚ್.ಎಸ್.ಶಿವಲಿಂಗಯ್ಯ, ಕ.ಪ್ರ.ಜನತಾದಳ ಕಾರ್ಯದಶರ್ಿ ರಮೇಶ್ಬಾಬು, ಚಾಟರ್್ರ್ಡ್ ಅಕೌಂಟೆಂಟ್ ಹೆಚ್.ಸಿ.ಗುರುದತ್, ಸಿವಿಲ್ ಗುತ್ತಿಗೆದಾರ ಸಿ.ಎನ್.ಎಸ್.ಮೂತರ್ಿ, ಸಬ್ರಿಜಿಸ್ಟಾರ್ ಶ್ರೀದೇವಿರಾಮಯ್ಯ, ಆಕರ್ಿಟೆಕ್ಟ್ ಉದಯ್ಕುಮಾರ್, ವಿಜ್ಞಾನಿ ಎಸ್.ಎನ್.ರಾಮಯ್ಯ ಉಪಸ್ಥಿತರಿರುವರು.
ಕುಷ್ಠರೋಗ ಕಂಡುಬಂದರೆ ಉಚಿತ ಚಿಕಿತ್ಸೆಗಾಗಿ ಆರೋಗ್ಯಾಧಿಕಾರಿಗಳನ್ನು ಸಂಪಕರ್ಿಸಲು ಮನವಿ
ಚಿಕ್ಕನಾಯಕನಹಳ್ಳಿ.ಜ.21: ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ ಇದು ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಕಡಿತ, ನವೆ ಇಲ್ಲದ ಮಚ್ಚೆಗಳೇ ಕುಷ್ಠರೋಗ ಇರಬಹುದು. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ಕ್ರಿಮಿಯಿಂದ ಬರುತ್ತದೆ. ಇದು ಪಾಪಕರ್ಮಗಳಿಂದ ಬರುವುದಿಲ್ಲ ಮತ್ತು ವಂಶ ಪಾರಂಪರ್ಯವಲ್ಲ, ಜನ್ಮತ ಯಾರೂ ಕುಷ್ಟರೋಗಿಗಳಾಗಿ ಹುಟ್ಟುವುದಿಲ್ಲ. ಈ ರೋಗವು ಯಾರಿಗಾದರೂ ಯಾವ ವಯಸ್ಸಿನಲ್ಲಾದರೂ ಬರಬಹುದು. ಕುಷ್ಠರೋಗದ ಲಕ್ಷಣಗಳು ಕಂಡು ಬಂದ ಮೇಲೆಯಾದರೂ ಚಿಕಿತ್ಸೆ ಪಡೆಯದೇ ಹೋದಲ್ಲಿ ಅಂಗವಿಕಲತೆ ಉಂಟಾಗಬಹುದೇ ಹೊರತು ರೋಗದಿಂದ ಅಂಗವಿಕಲತೆ ಬರುವುದಿಲ್ಲ ಕುಷ್ಠರೋಗದ ಬಗ್ಗೆ ಸಲಹೆ ಮತ್ತು ಉಚಿತ ಚಿಕಿತ್ಸೆಗಾಗಿ ನಿಮ್ಮ ಹತ್ತಿರದ ಸಕರ್ಾರಿ ಆಸ್ಪತ್ರೆಗಳಲ್ಲಿ ಮತ್ತು ಸಿಬ್ಬಂದಿ ವರ್ಗದವರನ್ನು ಸಂಪಕರ್ಿಸಬಹದು ಎಂದು ತಾಲೂಕು ಆರೋಗ್ಯಾಧಿಕಾರಿಗಳ ಸಂಪಕರ್ಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿರುತ್ತಾರೆ.

Thursday, January 20, 2011

ಪುರಸಭಾ ಆಡಳಿತ ಪಕ್ಷದ ಸದಸ್ಯನಿಗೆ ಕಪಾಳ ಮೋಕ್ಷ
ಚಿಕ್ಕನಾಯಕನಹಳ್ಳಿ,ಜ.19: ಇಲ್ಲಿನ ವಿರೋಧ ಪಕ್ಷದ ಸದಸ್ಯರೊಬ್ಬರು ಆಡಳಿತ ಪಕ್ಷದ ಸದಸ್ಯರಿಗೆ ಕಪಾಳ ಮೋಕ್ಷ ಮಾಡಿದ ಪೂರ್ಣ ಸರಿಹೊಂದಿಸುಅಪರೂಪದ ಘಟನೆ ನಡೆಯಿತು.
ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂತಹ ಅಪರೂಪದ ಘಟನೆ ಕಪ್ಪು ಚುಕ್ಕಿಯಾಗಿ ಉಳಿಯಿತು. ಸಭೆಯ ಅಜಾಂಡಾದಲ್ಲಿ ಸೇರ್ಪಡೆಯಾಗದಿರುವ ಆಶ್ರಯದ ಸಮಿತಿಯ ಹಕ್ಕು ಮತ್ತು ಜವಬ್ದಾರಿಯ ಬಗ್ಗೆ ಬಂದ ವಿಷಯದ ಮೇಲೆ ವಿರೋಧ ಪಕ್ಷವಾದ ಕಾಂಗ್ರೆಸ್ನ ಸಿ.ಬಸವರಾಜು ಮಾತನಾಡುತ್ತಾ, ನಾವು ಚುನಾಯಿತರಾಗುವ ಮುನ್ನ ಜನರಿಗೆ ಸೈಟ್ ಕೊಡಿಸುತ್ತೇವೆ, ಮನೆ ಕೊಡಿಸುತ್ತೇವೆ ಎಂದೆಲ್ಲಾ ಭರವಸೆ ನೀಡಿ ಗೆದ್ದು ಬಂದಿರುತ್ತೇವೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಜವಬ್ದಾರಿ ನಮ್ಮದು, ಆದರೆ ಆಶ್ರಯ ಸಮಿತಿಯಲ್ಲಿ ನಮ್ಮ ಮಾತು ನಡೆಯದಿದ್ದರೆ ಹೇಗೆ ?. ಆ ಸಮಿತಿಯಲ್ಲಿ ಶಾಸಕರು ತಹಶೀಲ್ದಾರ್ ಪುರಸಭಾ ಅಧ್ಯಕ್ಷರು ಅಷ್ಟೇ ಜನರು ನಿಧರ್ಾರ ತೆಗೆದುಕೊಂಡರೆ ಹೇಗೆ ನಮ್ಮ ಮಾತಿಗೂ ಅಲ್ಲಿ ಬೆಲೆ ಇರಬೇಕು, ಆಗಾಗಿ ಆಶ್ರಯ ಸಮಿತಿ ಸಭೆ ಸೇರುವುದಕ್ಕಿಂತ ಮೊದಲು ಶಾಸಕರು ಮತ್ತು ಪುರಸಭಾ ಅಧ್ಯಕ್ಷರು ಸದಸೆರೆಲ್ಲರ ಸಭೆ ಕರೆದು ಸಭೆಯಲ್ಲಿ ಪ್ರತಿ ವಾಡರ್್ಗೆ ಇಂತಿಷ್ಟು ಸೈಟ್ಗಳೆಂದು ಎತ್ತಿಡಿ, ನಾವು ಫಲಾನುಭವಿಗಳ ಪಟ್ಟಿ ಕೊಡುತ್ತೇವೆ, ನಮ್ಮ ಈ ಸಭೆಯಲ್ಲಿ ಸಿದ್ದ ಪಡಿಸಿದ ಪಟ್ಟಿಯನ್ನು ಪುರಸಭಾಧ್ಯಕ್ಷರು ಆಶ್ರಯ ಸಮಿತಿಯ ಸಭೆಯಲ್ಲಿ ಮಂಡಿಸಲಿ ಸಭೆ ಅದಕ್ಕೆ ಅನುಮೋದನೆ ನೀಡಿದರೆ ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಂತಾಗುತ್ತದೆ ಎಂದು ಕಾಂಗ್ರೆಸ್ನ ಸದಸ್ಯ ಸಿ.ಬಸವರಾಜು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ ಹಾಗೂ ಕೆಲವು ಆಡಳಿತ ಪಕ್ಷದ ಸದಸ್ಯರು ಸಭೆಯ ಗಮನಕ್ಕೆ ತಂದರು ಈ ಸಂದರ್ಭದಲ್ಲಿ ಜೆ.ಡಿ.ಯುನ ಸದಸ್ಯ ಸಿ.ಡಿ.ಚಂದ್ರಶೇಖರ್ ತನ್ನ ಕುಚರ್ಿಯಿಂದ ಎದ್ದು ಬಂದು ನೇರ ಅಧಿಕಾರಿ ವರ್ಗ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದ ಟೇಬಲ್ ಬಳಿ ಬಂದು, ಎಲ್ರಿ ಕೊಡ್ರಿ ಇಲ್ಲಿ ಆಶ್ರಯ ಸಮಿತಿ ನಡಾವಳಿ ಪುಸ್ತಕವನ್ನು ಎನ್ನುತ್ತಲೆ ಪುಸ್ತಕವನ್ನು ತೆಗೆದು ಎತ್ತಿ ತೋರಿಸಿದರು. ಮತ್ತೋರ್ವ ಕಾಂಗ್ರೆಸ್ ಸದಸ್ಯ ಸಿ.ಪಿ ಮಹೇಶ್ ಈ ಪುಸ್ತಕದಲ್ಲಿ ಸಮಿತಿಯಲ್ಲಿದ್ದವರ್ಯಾರು ಸಹಿಯನ್ನೇ ಹಾಕಿಲ್ಲ ನೋಡಿ ಎಂದು ತೋರಿಸಿದರು.
ಈ ಸಮಯಕ್ಕೆ ಸರಿಯಾಗಿ ಅಧ್ಯಕ್ಷರ ಟೇಬಲ್ ಬಳಿ ಇದ್ದ ಇನ್ನೊಂದು ನಡಾವಳಿ ಪುಸ್ತಕವನ್ನು ಕೈಗೆತ್ತಿಕೊಂಡ ಆಡಳಿತ ಪಕ್ಷದ ಸದಸ್ಯ ಎಂ.ಎನ್.ಸುರೇಶ್ ಈ ಪುಸ್ತಕದಲ್ಲಿ ಸಹಿ ಇದೆ ನೋಡಿ ಎನ್ನುತ್ತಾ ಇನ್ನೊಂದು ಪುಸ್ತಕವನ್ನು ಎತ್ತಿ ತೋರಿಸುತ್ತಾ ರೀ ಅಧ್ಯಕ್ಷಕರೆ ಸದಸ್ಯರಿಗೆ ಸರಿಯಾಗಿ ಮಾಹಿತಿ ಕೊಡಿ ಎನ್ನುವ ಮಾತು ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ರಕರ್ತರಾದಿಯಾಗಿ ಮುಂದೆ ಕುಳಿತಿದ್ದವರಿಗೆ ಕೇಳಿಸಿದ ಮಾತು.
ಆದರೆ ವಿರೋಧ ಪಕ್ಷದವರ ಕಡೆ ಕುಳಿತಿದ್ದ ನಾಮಿನಿ ಸದಸ್ಯರೊಬ್ಬರು ಕುರಿ ಕಾಯೋರಿಗೆ ಅಧ್ಯಕ್ಷಗಿರಿ ಕೊಟ್ರೆ ಹೀಗೆ ಎಂದು, ಸುರೇಶ್ ಹೇಳಿದರು ಎಂದು ಚಿತಾವಣೆ ಮಾಡಿ ಸಿ.ಬಸವರಾಜು ಸಿಟ್ಟಿಗೇಳುವಂತೆ ಮಾಡಿದರು. ಈ ಹಂತದಲ್ಲಿ ಕುಪಿತರಾದ ಸಿ.ಬಸವರಾಜು ನಿನ್ನ ಅಧ್ಯಕ್ಷ ಮಾಡಿದವರು ಕುರಿಕಾಯೋರು ಗೊತ್ತಾ! ನಮಗೆ ಆದೇಶ ನೀಡಲು ಬರುತ್ತೀಯ ಎನ್ನುತ್ತಲೇ ಸುರೇಶ್ ಮೇಲೆ ಎರಗಿ ಕಪಾಳಕ್ಕೆ ಒಂದು ತಟ್ಟೆ ಬಿಟ್ರು, ಈ ಸಂದರ್ಭದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದವರು ಕೆಲಕಾಲ ವಾದ ವಿವಾದ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಎರಡೂ ಪಕ್ಷದವರನ್ನು ಸಮಾಧಾನ ಪಡಿಸಿದರು. ಈ ಸಭೆಯ ಅಜಾಂಡದಲ್ಲಿ ಇಲ್ಲದ ವಿಷಯ ಚಚರ್ಿಸೋದು ಬೇಡ ಮುಂದಿನ ದಿನ ಈ ವಿಷಯವಾಗಿ ಚಚರ್ಿಸೋಣ ಎಂದು ಎಲ್ಲರನ್ನು ಸಮಾಧಾನಿಸಿ ಸಭೆ ನಡೆಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್ ವಿರೋಧ ಪಕ್ಷದ ಬಾಬು ಸಾಹೇಬ್, ನಾಮಿನಿ ಸದಸ್ಯರುಗಳು ಇಂತಹ ದುರ್ಘಟನೆಗೆ ಸಾಕ್ಷಿಯಾಗಿದ್ದರು.


Tuesday, January 18, 2011

Monday, January 17, 2011





ಕುವೆಂಪುರವರಿಗೆ ಶಿಕ್ಷಣ, ವಿವಾಹ, ಕೆಲಸ, ಎಲ್ಲವನ್ನು ನೀಡಿದ್ದು ರಾಮಕೃಷ್ಣಾಶ್ರಮ: ವಿರೇಶನಂದಜೀ.
ಚಿಕ್ಕನಾಯಕನಹಳ್ಳಿ,ಜ.17: ರಾಷ್ಟ್ರ ಕವಿ ಕು.ವೆಂ.ಪು.ರವರಿಗೆ ವಿದ್ಯಾಭ್ಯಾಸವನ್ನು ಕೊಡಿಸಿ, ಕೆಲಸಕ್ಕೆ ಸೇರಿಸಿದ್ದು, ಅವರ ವಿವಾಹವನ್ನು ಮಾಡಿಸಿದ್ದು ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಸಿದ್ದೇಶ್ವರಾನಂದರು ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಸ್ವಾಮಿ ವಿರೇಶನಂದಜೀರವರು ತಿಳಿಸಿದರು.
ಪಟ್ಟಣದ ಬಿ.ಆರ್.ಸಿ. ಸಭಾಂಗಣದಲ್ಲಿ ತಾಲೂಕು ಕಾಸಾಪ, ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಕಂಡಂತೆ ರಾಮಕೃಷ್ಣ ವಿವೇಕನಂದರು ಎಂಬ ವಿಷಯವಾಗಿ ಮಾತನಾಡಿದರು.
ಕುಪ್ಪಳಿಯಿಂದ ಮೈಸೂರಿಗೆ ವಿದ್ಯಾಭ್ಯಾಸದ ಸಲುವಾಗಿ ಬಂದ ಪುಟ್ಟಪ್ಪ ಎಂಬ ಬಾಲಕನ ಮೈತುಂಬಾ ಗಾಯಗಳೆದ್ದು ವ್ರಣವಾಗಿದ್ದು, ದೇಹಕ್ಕೆ ಆರೈಕೆ ನೀಡಿ, ಅವರ ವ್ಯಕ್ತಿತ್ವವನ್ನು ರೂಪಿಸಿ ಕೊನೆಗೆ ಸ್ವಾಮಿಜಿಗಳೇ ತಮ್ಮ ಭಕ್ತರ ಮನೆಯ ಮಗಳೊಂದಿಗೆ ಮದುವೆ ಮಾಡಿಸಿದ್ದು ಸ್ವಾಮಿ ಸಿದ್ದೇಶ್ವರನಂದರು ಎಂದರು, ರಾಮಕೃಷ್ಣಾಶ್ರಮ ಧರ್ಮವನ್ನು ಬೋಧಿಸುತ್ತದೆ ಹೊರತು ಮತವನ್ನಲ್ಲ ಎಂದ ಅವರು, ಧರ್ಮದ ಹೆಸರಿನಲ್ಲಿ ಮೋಸವಾಗಿದೆಯೇ ಹೊರತು ಧರ್ಮವೇ ಮೋಸವಲ್ಲ, ಧರ್ಮವು ಬುದ್ದಿ ಹಾಗೂ ಹೃದಯದ ಸಂಸ್ಕಾರಕ್ಕೆ ಹೆಸರಾಗಿದೆ.
ಭಾರತೀಯರು ಸರ್ವಧರ್ಮ ಸಮನ್ವತೆಯಿಂದ ಕೂಡಿದ್ದು ಅವರ ಆಧ್ಮಾತ್ಮಿಕ ಸಂಸ್ಕೃತಿಯನ್ನು ಬೇರ್ಪಡಿವುದು ಅಸಾಧ್ಯವಾಗಿದೆ, ಅಮೇರಿಕ, ಜಪಾನ್ ವಾಣಿಜ್ಯ ಮತ್ತು ತಾಂತ್ರಿಕತೆಯನ್ನು ಬಿಡುವುದಿಲ್ಲವೋ, ಭಾರತ ಧರ್ಮದ ಸಂಸ್ಕೃತಿಯನ್ನು ಮರೆತು ದೂರವಾಗುವುದಿಲ್ಲ ಎಂದರು. ಕುವೆಂಪುರವರು ವಿವೇಕಾನಂದರ ಬಗ್ಗೆ ತಿಳಿಸಿದಂತೆ ಕಷ್ಟಗಳೇ ನಮ್ಮನ್ನು ರೂಪಿಸುವುದು, ಕೇವಲ ಮೋಜಿಗಾಗಿ, ಶೋಕಿಗಾಗಿ ನೈತಿಕ ಮಟ್ಟದಿಂದ ಕುಸಿಯುತ್ತಿರುವ ಯುವಕರು ವೈಚಾರಿಕತೆ, ಆದರ್ಶಗಳನ್ನು ರೂಪಿಸಿಕೊಂಡು ಸ್ವಪ್ರಯತ್ನದಿಂದ ಹೋರಾಡುವ ಮನೋಭಾವ ಬೆಳಸಿಕೊಳ್ಳಬೇಕೆಂದರು.
ಎಲ್ಲಿ ಅಪಾರವಾದ ಪ್ರೀತಿ ಇರುತ್ತದೆಯೋ ಅಲ್ಲಿ ಉತ್ಸಾಹದ ಮನಸ್ಸಿರುತ್ತದೆ ಇದು ರಾಮಕೃಷ್ಣರು ವಿವೇಕಾನಂದರಿಗೆ ನೀಡಿ ಅವರ ಗುರಿಗೆ ದಾರಿಯಾಗಲು ಮುಖ್ಯ ಕಾರಣ ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ರಾಮಕೃಷ್ಣ ಆಶ್ರಮದಲ್ಲಿನ ಸಮಯ ಪ್ರಜ್ಞೆ ಹಾಗೂ ಆಧ್ಮಾತ್ಮಿಕ ವಾತಾವರಣ ಅನುಕರಣೀಯ ಮಠದ ಒಡನಾಟ ಇಟ್ಟು ಕೊಂಡವರ ಜೀವನ ಶೈಲಿ ವಿಶೇಷವಾಗಿರುತ್ತದೆ ಎಂದ ಅವರು, ವಿವೇಕಾನಂದರ ಆದರ್ಶಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು, ಉತ್ತಮ ರಾಷ್ಟ್ರ ನಿಮರ್ಾಣದ ಅನುಷ್ಠಾನಕ್ಕಾಗಿ ವಿವೇಕಾನಂದರು ಸಾಕಷ್ಟು ಶ್ರಮಿಸಿದರು. ಯುವಕರ ಪಡೆಯನ್ನು ಕಟ್ಟಿ ಉತ್ತಮ ದೇಶ ನಿಮರ್ಾಣದ ಗುರಿ ಹೊಂದಿದವರು ವಿವೇಕಾನಂದರು ಅವರ ಆದರ್ಶವನ್ನು ಮೈಗೂಡಿಸಿಕೊಂಡ ಕುವೆಂಪುರವರು ರಾಷ್ಟ್ರಕವಿಯ ಹಿರಿಮೆಗೆ ಪಾತ್ರರಾದರು ಎಂದರು.
ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಮಲ್ಲಿಕಾಜರ್ುನ ಡಿ.ಇಡಿ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಬಿ.ಆರ್.ಸಿ ಎನ್.ಎಸ್.ಸುಧಾಕರ್ ಮಾತನಾಡಿದರು.
ಸಮಾರಂಭದಲ್ಲಿ ತಾಲೂಕಿನ ಕೀರ್ತಯನ್ನು ಬೆಳಗಿಸಿದ ಪ್ರತಿಭಾವಂತ ವಿದ್ಯಾಥರ್ಿನಿಯರಾದ ಆರ್.ಭವ್ಯ, ಜ್ಯೋತಿ, ಆರ್.ವೀಣಾ, ಕರಣಾರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಲಿಂಗರಾಜು ನಿರೂಪಿಸಿ, ಚಿದಾನಂದ್ ವಂದಿಸಿದರು.

ಅಧಿಕಾರಿಗಳ ಅಜ್ಞಾನದಿಂದ ನೂರಾರು ಯುವಕರು ಉದ್ಯೋಗದಿಂದ ವಂಚಿತ
ಚಿಕ್ಕನಾಯಕನಹಳ್ಳಿ,ಜ.17: ಅಧಿಕಾರಿಗಳ ಅಜ್ಞಾನದಿಂದ ಪಟ್ಟಣದ ನೂರಾರು ವಿದ್ಯಾಥರ್ಿಗಳು ಗ್ರಾಮೀಣ ಖೋಟಾದಡಿ ಉದ್ಯೊಗ ಅವಕಾಶದಿಂದ ವಂಚಿತವಾಗುತ್ತಿರುವ ಅಂಶ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಚಿಕ್ಕನಾಯಕನಹಳ್ಳಿಪಟ್ಟಣದಲ್ಲಿ 1995-96ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾಥರ್ಿಗಳಿಗೂ ಗ್ರಾಮೀಣ ಖೋಟಾದ ಸವಲತ್ತು ಸಿಗುತ್ತದೆ, ಆದರೆ 1996ರ ನಂತರ ಇಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಈ ಸವಲತ್ತು ಸಿಗುವುದಿಲ್ಲ ಕಾರಣ ಚಿಕ್ಕನಾಯಕನಹಳ್ಳಿಯನ್ನು ನಗರ ಪ್ರದೇಶವೆಂದು ಸಕರ್ಾರ ಘೋಷಣೆ ಮಾಡಿದೆ. ಆದರೆ ಕೆಲವು ಅಧಿಕಾರಿಗಳು ಈ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ಕಳೆದ 10 ವರ್ಷಗಳಿಂದ ಗ್ರಾಮೀಣ ವಿದ್ಯಾಥರ್ಿ ಖೋಟಾವನ್ನು ಇಲ್ಲಿಯ ವಿದ್ಯಾಥರ್ಿಗಳಿಗೆ ದೊರಕದಂತೆ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ನಗರ ಪ್ರದೇಶವೆಂದು 1995ರಲ್ಲಿ ಘೋಷಣೆಯಾಗಿದೆ ಆದ್ದರಿಂದ ನಿಮಗೆ ಗ್ರಾಮೀಣ ಪ್ರದೇಶವೆಂದು ಕೊಡಲು ಬರುವುದಿಲ್ಲವೆಂದು ಹೇಳಿ ನೂರಾರು ವಿದ್ಯಾಥರ್ಿಗಳಿಗೆ ಅನ್ಯಾಯವೆಸಗಿದ್ದಾರೆ.
ಎಷ್ಟೋ ವಿದ್ಯಾಥರ್ಿಗಳು ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಾವು 1995ಕ್ಕಿಂತ ಹಿಂದೆ ಇಲ್ಲಿ ಓದಿದವರು, ನಮಗೆ ಈ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಿದರೂ ಅಥೈಸಿಕೊಳ್ಳದ ಅಧಿಕಾರಿಗಳು ಬೇಜವಬ್ದಾರಿಯಿಂದ ವತರ್ಿಸಿ ಉದ್ಯೋಗಾಂಕ್ಷಿಗಳಿಗೆ ಉತ್ಸಾಹಕ್ಕೆ ತಣ್ಣೀರ್ರೆಚಿದ್ದಾರೆ.
ಈ ವಿಷಯವನ್ನು ಜಿ.ಆರ್.ಶ್ರೀನಿವಾಸ ಎಂಬವರು ಹೈಕೋಟರ್್ನಲ್ಲಿ ಪ್ರಶ್ನಿಸಿದ್ದರಿಂದ, ಹೈಕೋಟರ್್ನ ನ್ಯಾಯ ಮೂತರ್ಿ ಎನ್.ಕುಮಾರ್ ಈ ವಿಷಯವಾಗಿ ತೀಪರ್ುನೀಡಿ, 1995-96ಕ್ಕಿಂತ ಹಿಂದೆ ಒಂದರಿಂದ ಹತ್ತನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಓದಿದ್ದರೆ ಅವರಿಗೆ ಗ್ರಾಮೀಣ ವಿದ್ಯಾಥರ್ಿ ಖೋಟಾ ನೀಡಬಹುದೆಂದು ಕಳೆದ ಡಿಸೆಂಬರ್6 ರಂದು ಆದೇಶ ನೀಡಿದ್ದಾರೆ.
ಈ ಆದೇಶ ಈಗಿನ ಉದ್ಯೋಗಾಕ್ಷಿಗಳಿಗೆ ಅನುಕೂಲವಾಗುತ್ತದೆ, ಆದರೆ ಇಲ್ಲಿಯವರೆಗೆ ಇದರಿಂದ ನೊಂದವರಿಗೆ ಅಧಿಕಾರಿಗಳು ಏನು ಪರಿಹಾರ ನೀಡುತ್ತಾರೆ. . . .?
30 ವರ್ಷಗಳಿಂದ ರಾತ್ರಿ ಸಮಯದಲ್ಲಿ ಬೆಳಕನ್ನೇಕಾಣದ ಬೀದಿ ಇಲ್ಲಿದೆ.
ಚಿಕ್ಕನಾಯಕನಹಳ್ಳಿ,ಜ.17: ಪಟ್ಟಣದ ಎಸ್.ಬಿ.ಎಂ. ಕಟ್ಟಡದ ಪಕ್ಕದ ಬೀದಿಯಲ್ಲಿ ಕಳೆದ 30 ವರ್ಷಗಳಿಂದ ಬೀದಿ ದೀಪದ ವ್ಯವಸ್ಥೆಯೇ ಇಲ್ಲವೆಂದರೆ, ಇದು ಪುರಸಭೆಯವರಿಗೆ ನಾಚಿಕೆಯಾಗಬೇಕಾದ ವಿಷಯ.
ಇಲ್ಲಿಯ ನಿವಾಸಿಗಳು ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ, ಈ ರಸ್ತೆ ಪಟ್ಟಣದ ಹೃದಯದ ಭಾಗದಲ್ಲಿದೆ, ಅಷ್ಟೇ ಅಲ್ಲ ನಿಮರ್ಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಕೂಗಳತೆಯಷ್ಟು ದೂರು, ಪಟ್ಟಣದ ಹೆಸರಾಂತ ಅಭಿಯಂತರ ದೊರೆಸ್ವಾಮಿ ಇಲ್ಲಿಯ ನಿವಾಸಿ, ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕೀ ಪೋಸ್ಟ್ನಲ್ಲಿರುವ ಲಕ್ಷ್ಮಣಪ್ಪ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಇಲ್ಲಿಯ ನಿವಾಸಿ. ಇವರೆಲ್ಲಾ ಹತ್ತಾರು ಭಾರಿ ಈ ವಿಷಯವನ್ನು ಪುರಸಭೆಯವರ ಗಮನಕ್ಕೆ ತಂದರು ಇಲ್ಲಿಗೆ ಬೀದಿ ದೀಪದ ವ್ಯವಸ್ಥೆ ಆಗಿಲ್ಲ, ಇನ್ನೊಂದು ವಿಶೇಷವೆಂದರೆ ಈ ವಾಡರ್್ನ ಸದಸ್ಯೆ ಈಗಿನ ಪುರಸಭಾ ಉಪಾಧ್ಯಕ್ಷೆ, ಅವರಿಗೂ ಇಲ್ಲಿಯ ಜನ ತಮ್ಮ ಬೇಡಿಕೆಯನ್ನು ಅನೇಕ ಭಾರಿ ಸಲ್ಲಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲವೆಂಬುದು ಖೇದಕರ.
ಈ ಬೀದಿಯ ಹಿಂಬದಿಯ ಬೀದಿ, ಇತ್ತೀಚೆಗೆ ನಿಮರ್ಾಣಗೊಂಡದ್ದು. ಕಳೆದ 10 ವರ್ಷಗಳ ಹಿಂದೆ ಈ ಪ್ರದೇಶ ಜನ ನಿಭೀಡ ಪ್ರದೇಶ. ಇತ್ತೀಚೆಗಷ್ಟೇ ಇಲ್ಲಿ ಹೊಸ ಮನೆಗಳು ನಿಮರ್ಾಣವಾಗಿದ್ದು ಇವರಿಗೆ ಬೀದಿ ದೀಪದ ವ್ಯವಸ್ಥೆ ದೊರೆತಿದೆ, ಆದರೆ ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿರುವ ದೊರೆಸ್ವಾಮಿಯವರ ಬೀದಿಗೆ ದೀಪದ ವ್ಯವಸ್ಥೆ ಇಲ್ಲವೆಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪುರಸಭೆಯವರು ತಕ್ಷಣವೇ ಅಲ್ಲಿಗೆ ಬೀದಿ ದೀಪ ಅಳವಡಿಸಿ ತಮ್ಮ ಮಯರ್ಾದೆಯನ್ನು ಕಾಪಾಡಿಕೊಳ್ಳುವರೇ ? ಕಾದು ನೋಡಬೇಕು.



Friday, January 14, 2011

ಪಲ್ಸ್ ಪೊಲೀಯೊ ಯಶಸ್ವಿಗೆ ಸಕಲ ಸಿದ್ದತೆ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ.ಜ.14: ಇದೇ 23 ಹಾಗೂ ಫೆಬ್ರವರಿ 27 ಈ ಎರಡು ದಿನಗಳು ಪೊಲೀಯೋ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುವುದು, ಈ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇದರ ಯಶಸ್ವಿಗೆ ಸಾರ್ವಜನಿಕರು, ಸಕರ್ಾರಿ ಇಲಾಖೆಗಳು, ಸಂಘಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕೆಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕೋರಿದರು.
ಪಲ್ಸ್ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನೂರಕ್ಕೆ ನೂರರಷ್ಟು ಪೋಲಿಯೋ ಹನಿಯನ್ನು ಹಾಕಿಸಲು ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು, ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಾಗರೀಕರು ಸಹಕರಿಸಬೇಕೆಂದು ಕೋರಿದ ಅವರು, ಅಂಗನವಾಡಿ ಕೇಂದ್ರದ ಸಿಬ್ಬಂದಿ, ಬೆಸ್ಕಾಂನವರು ಹಾಗೂ ಲಸಿಕೆಗೆ ಸರಬರಾಜು ಮಾಡುವ ಆರೋಗ್ಯ ಇಲಾಖೆಯವರು, ವಾಕ್ಸನ್ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ವಾಹನಗಳನ್ನು ಹೊಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಲಾಯಿತು. ವಾಹನಗಳು 22ರ ಸಂಜೆಯೇ ತಾಲೂಕು ಆರೋಗ್ಯಾಧಿಕಾರಿಗಳ ಬಳಿ ಹಾಜರಾಗುವಂತೆ ತಿಳಿಸಲಾಯಿತು.
ಯಾವ ಅಂಗನವಾಡಿ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಬೂತ್ಗಳನ್ನು ಸ್ಥಾಪಿಸಲಾಗುವುದೋ ಅಂತಹ ಕೇಂದ್ರಗಳಲ್ಲಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಒಬ್ಬರು ಖಡ್ಡಾಯವಾಗಿ ಹಾಜರಿದ್ದರು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಡೆಸಬೇಕೆಂದು ಸಭೆಯಲ್ಲಿ ತೀಮರ್ಾನಿಸಲಾಯಿತು.
ತಾ.ಪಂ. ಇ.ಓ, ನಡೆಯುವ ಪಲ್ಸ್ ಪೋಲಿಯೋ ಬೂತ್ಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಊಟದ ತೊಂದರೆಯಾಗುವುದರಿಂದ ಗ್ರಾಮ ಪಂಚಾಯತಿಯವರು ಈ ಜವಬ್ಚಾರಿಯನ್ನು ಹೊತ್ತು ಆಹಾರ ಸರಬರಾಜು ಮಾಡುವಂತೆ ತೀಮರ್ಾನಿಸಲಾಯಿತು.
ಬೂತ್ ಹಾಗೂ ಮನೆಗಳ ಸವರ್ೆ ಕಾರ್ಯ ನಿರ್ವಹಣೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಆಶಾ ಕಾರ್ಯಕತರ್ೆಯರ ನಿಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆ ನಿವಾರಣೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಶಿಶು ಅಭಿವೃದ್ದಿ ಅಧಿಕಾರಿಗಳು ಚಚರ್ಿಸಿ ತೀಮರ್ಾನ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಲೆಯ ಮಕ್ಕಳನ್ನು ಸೇರಿಸಿ ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಜಾಥಾವನ್ನು ಮಾಡಲು ಮತ್ತು ಪ್ರತಿ ಹೋಬಳಿ ಮಟ್ಟದ ಶಾಲೆಗಳಲ್ಲೂ ಬಿ.ಇಓ ರವರ ಅನುಮತಿ ಪಡೆದು ಶಾಲಾ ಮಕ್ಕಳಿಂದ ಜಾಥಾ ಕಾರ್ಯಮಾಡಿ ಜಾಗೃತಿ ಮೂಡಿಸಲು ತೀಮರ್ಾನಿಸಲಾಯಿತು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯ ಕರ ಪತ್ರಗಳನ್ನು ಮುದ್ರಿಸಿ ಸರಬರಾಜು ಮಾಡುವ ಜವಬ್ದಾರಿಯನ್ನು ಪುರಸಭೆಗೆ ವಹಿಸಲಾಯಿತು ಮತ್ತು ಸ್ಕೌಟ್ಸ್ ಗೈಡ್ಸ್ ವಿದ್ಯಾಥರ್ಿಗಳನ್ನು ಬಳಸಿಕೊಳ್ಳುವಂತೆ ತೀಮರ್ಾನಿಸಲಾಯಿತು.
ಸಭೆಯಲ್ಲಿ ಡಾ.ಶಿವಕುಮಾರ್,


ಚಿಕ್ಕನಾಯಕನಹಳ್ಳಿ,ಜ.14: ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ 17ರಸೋಮವಾರ ತಾ.ಕಸಾಪ, ಹಾಗೂ ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ಇವರಗಳ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಬಿ.ಆರ್.ಸಿ ಸಭಾಂಗಣದಲ್ಲಿ ಏರ್ಪಡಿಸಿದ್ದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀ ವಿರೇಶಾನಂದಜೀ ಕುವೆಂಪು ಕಂಡಂತೆ ರಾಮಕೃಷ್ಣ-ವಿವೇಕಾನಂದರು ಎಂಬ ವಿಷಯವಾಗಿ ಮಾತನಾಡಲಿದ್ದಾರೆ.
ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ, ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ತಾ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮತ್ತು ಬಿ.ಆರ್.ಸಿ ಎನ್.ಎಸ್.ಸುಧಾಕರ್ರವರು ಪ್ರತಿಭಾ ಸನ್ಮಾನವನ್ನು ನಡೆಸಿಕೊಡಲಿದ್ದಾರೆ.

Thursday, January 13, 2011

ರಾಜ್ಯದ ವಿಧಾನ ಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ
ಚಿಕ್ಕನಾಯಕನಹಳ್ಳಿ,ಜ.13: ಸಕರ್ಾರವನ್ನು ರಚಿಸಿ, ಸಕರ್ಾರದ ಹಲವು ಯೋಜನೆಗಳಿಂದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿ ತಮ್ಮ ಸ್ಚಂತಕ್ಕೆ ಮತ್ತು ಚುನಾವಣೆ ಸಮಯದಲ್ಲಿ ಬಳಸಿ ಇಂತಿಷ್ಟು ಹಣವೆಂದು ಹಂಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ್ನು ಬಹಿರಂಗವಾಗಿ ರಾಜ್ಯದ ಲೂಟಿಕೋರ ಪಕ್ಷಗಳು ಹರಾಜು ಮಾಡುತ್ತಿದ್ದಾರೆ ಎಂದು ಜೆ.ಡಿ.ಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ಯಾದವ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಜನತಾದಳ ಸಂಯುಕ್ತ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ನಂತೆ ಜನತೆಗೆ ತಲಾ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ಇಲ್ಲಿನ ಪ್ರಜೆಗಳನ್ನು ಓಟಿಗಾಗಿ ಕೊಂಡುಕೊಳ್ಳುತ್ತಿದ್ದಾರೆ, ಇದರಿಂದ ರಾಜ್ಯದಲ್ಲಿ ಪ್ರಜಾತಂತ್ರ ಮತ್ತು ಲೋಕತಂತ್ರ ವ್ಯವಸ್ಥೆಯು ಬದಲಾವಣೆಯಾಗಿ ಹಣ ನೀಡಿದವನಿಗೆ ಮಾತ್ರ ಓಟು ಎಂಬ ವಾತಾವರಣ ಸೃಷ್ಟಿಯಾಗಿದೆ, ಅನ್ಯಾಯ ಎದರಿಸುವಂತಹ ನಾಯಕರಾದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಯಂತಹ ಹಲವರ ನಾಯಕರ ಸಿದ್ದಾಂತ ಎಲ್ಲೆಡೆ ಪಸರಿಸಿ ರಾಜಕೀಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಒಂದು ಕಾಲದಲ್ಲಿ ಇತ್ತು, ಆದರೆ ಇತ್ತಿಚಿನ ದಿನಗಳಲ್ಲಿ ರಾಜಕೀಯಕ್ಕೆ ಲೂಟಿಕೋರರ ಆಗಮನವಾಗುತ್ತಾ ರಾಜ್ಯದ ಜನತೆಗೆ ಕಷ್ಟದ ದಿನಗಳು ಎದುರಾಗುತ್ತಿವೆ ಎಂದ ಅವರು ಸುಂದರವಾದ ಕನರ್ಾಟಕ ರಾಜ್ಯ ಈಡೀ ದೇಶಕ್ಕೆ ರಾಜಕೀಯವಾಗಿ ಮಾದರಿಯಾಗಿತ್ತು. ಆದರೆ ಈಗ ಈ ರಾಜ್ಯ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಮಾದರಿಯಾಗಿದೆ ಎಂದ ಅವರು ಕನರ್ಾಟಕದ ಪರಂಪರೆಯನ್ನು ಹೊಸ ಅಧ್ಯಯನದಿಂದ ರೂಪಿಸಲು ಜೆ.ಡಿ.ಯು ಪಕ್ಷಕ್ಕೆ ಸಹಕರಿಸಬೇಕು ಎಂದರು.
ಜೆ.ಡಿ.ಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ ಈ ಸಭೆ ಕನರ್ಾಟಕದಲ್ಲಿ ಹೊಸ ದಿಕ್ಕನ್ನು ನೀಡಲಿದ್ದು, ತತ್ವ ಸಿದ್ದಾಂತಗಳನ್ನು ಬಿಟ್ಟು ರಾಜಕಾರಣ ಮಾಡುತ್ತಿರುವ ನಾಯಕರಿಲ್ಲದ ಪಕ್ಷಗಳಿಗೆ ಸವಾಲಾಗಿದೆ ಎಂದ ಅವರು ವಿಧಾನಸಭೆಗಳಲ್ಲಿ ವಿರೋದ ಪಕ್ಷಗಳಿಲ್ಲದೆ ಆಡಳಿತ ಪಕ್ಷಗಳು ಏನು ಮಾಡಿದರೂ ಕೇಳುವವರಿಲ್ಲದಂತಾಗಿದೆ ಎಂದರು. ಮಾಧುಸ್ವಾಮಿಯವರಿಗೆ ರಾಜ್ಯವನ್ನು ರಕ್ಷಣೆ ಮಾಡುವ ಸಮಥ್ರ್ಯವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗಣಿ ಉದ್ಯಮದಲ್ಲಿ ಬಳ್ಳಾರಿಗೆ ಸಮಾನಾಗಿರುವ ತಾಲೂಕು, ಜನರ ಕಷ್ಟಗಳನ್ನು ಕೇಳದೆ, ಜನತೆಗೆ ಸೇವೆ ಮಾಡದೆ, ಮನೆ ಮನೆಗೆ ಹೋಗಿ ತಮ್ಮ ಪರವಾಗಿ ಪ್ರಚಾರಮಾಡದೆ ಕೇವಲ ಹಣದ ಮೇಲೆ ಚುನಾವಣೆ ನಡೆಯುತ್ತಿದ್ದು ಎಂದರಲ್ಲದೆ, ರಾಜಕೀಯ ವ್ಯಾಪಾರವಾಗಿದೆ ಎಂದರು. ಜನರ ತಮ್ಮ ಓಟುಗಳನ್ನು ರಾಜಕೀಯ ಪಕ್ಷಗಳಿಗೆ ನಿಡದೆ, ಅಬ್ಯಾಥರ್ಿಗಳು ನೀಡುವ ಹಣ, ಹೆಂಡಕ್ಕೆ ಇಂತಿಷ್ಟು ಎಂಬಂತೆ ಹಂಚಿಕೆಯಾಗಿದೆ. ಈ ರೀತಿ ಹಂಚಿಕೆಯಾದರೂ ಜೆ.ಡಿ.ಯು ತಾಲೂಕಿನಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದು ಮುಂದೆ ತಾಲೂಕಿನಾದ್ಯಂತ ಜೆ.ಡಿ.ಯು ಪಕ್ಷ ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂದರು.
ಮಧ್ಯಮ ಕುಟುಂಬದಿಂದ ಬಂದು 3ಬಾರಿ ಶಾಸಕನಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮ ಪಟ್ಟರೂ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷ ಸ್ಥಾನ ಉಳಿಸಿಕೊಳ್ಳದಿದ್ದರೆ ರಾಜಕೀಯದಲ್ಲಿ ಇದೇ ನನ್ನ ಕೊನೇ ಹೋರಾಟವಾಗಿರುತ್ತಿತ್ತು ಎಂದ ಅವರು, ಜೆ.ಡಿ.ಎಸ್, ಬಿ.ಜೆ.ಪಿ ಕಾಲ ಮುಗಿಯುವ ಸಂದರ್ಭ ಬಂದಿದ್ದು ಕಾಂಗ್ರೆಸ್ ಆಗಲೇ ಮುಳುಗಿ ಹೋಗಿರುವ ಹಡಗಾಗಿದೆ, ತಾಲೂಕು ಮತ್ತು ರಾಜ್ಯದ ಆಡಳಿತ ಕೆಳಸ್ಥರಕ್ಕೆ ಹೋಗಿದೆ. ತಾಲೂಕಿನಿಂದಲೇ ಜೆ.ಡಿ.ಯು ಪಕ್ಷ ಅಸ್ಥಿತ್ವಗೊಳಿಸಿ ಹೋರಾಟಕ್ಕೆ ಮುಂದಾಗುತ್ತದೆ ಪಕ್ಷ, ಈ ರೀತಿಯಾಗಿ ಬಾಣದ ದಿಕ್ಕನ್ನು ರಾಜ್ಯಾದ್ಯಂತ ವಿಸ್ತರಿಸಿ ರೈತ ಪರವಾಗಿ ರಾಜ್ಯ ಕಟ್ಟಲಿದೆ ಎಂದರು.
ಸಮಾರಂಭದಲ್ಲಿ ಜೆ.ಡಿ.ಯು.ನ ಜಿ.ಪಂ.ಸದಸ್ಯೆ ಲೋಹಿತಾ ಬಾಯಿ ಮತ್ತು ತಾ.ಪಂ.ಸದಸ್ಯರುಗಳಾದ ಚಿಕ್ಕಮ್ಮ, ನಿರಂಜನಮೂತರ್ಿ, ಸುಮಿತ್ರ, ಲತಾ, ಶಶಿಧರ್, ಸಾವಿತ್ರಿರವರನ್ನು ಸನ್ಮಾನಿಸಲಾಯಿತು, ಚುನಾವಣೆಗಳಲ್ಲಿ ಸ್ಪಧರ್ಿಸಿದ್ದ ಅಬ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೇಣುಕಮೂತರ್ಿ ಸ್ವಾಗತಿಸಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ನಿರೂಪಿಸಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ವಂದಿಸಿದರು.

ಕುಪ್ಪೂರು ಮಠದಲ್ಲಿ 6 ಲಕ್ಷರೂಗಳ ಬೆಳ್ಳಿ ಆಭರಣ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.13: ತಾಲೂಕಿನ ಸುಪ್ರಿಸಿದ್ದ ಕ್ಷೇತ್ರವಾದ ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಗುರುವಾರ ನಸುಕಿನಲ್ಲಿ ಕಳ್ಳತನ ನಡೆದಿದ್ದು ಮಠದ ಗರ್ಭಗುಡಿಯಲ್ಲಿದ್ದ ಸುಮಾರು 15 ಕೆ.ಜಿ.ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
ಮಠದ ಕಟ್ಟಡದಲ್ಲಿನ ಕರೆಂಟ್ ಕಟ್ಮಾಡಿ, ಮಠದ ಆವರಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದವರು ಹೊರಬಾರದಂತೆ ಹೊರಗಿನಿಂದ ಬೋಲ್ಟ್ಗಳನ್ನು ಭದ್ರ ಪಡಿಸಿ, ಮಠದ ಮೇಲ್ಚಾವಣಿಯ ಹೆಂಚನ್ನು ತೆಗೆದು ಗರ್ಭಗುಡಿಯಲ್ಲಿನ ಬೊಲ್ಟ್ನ್ನು ಬಲವಾದ ಅಸ್ತ್ರದಿಂದ ಮೀಟಿ ಬೀಗ ಹೊಡೆದು ಸುಮಾರು 5 ಕೆ.ಜಿ.ತೂಕದ ಶ್ರೀ ಮರಳಸಿದ್ದೇಶ್ವರರ ಮುಖ ಪದ್ಮ ನಾಗಭಾರಣ ಸಮೇತ, ಒಂದು ಕೆ.ಜಿ.ತೂಕದ ಮೂರು ಜೊತೆ ಪಾದುಕೆ, ಕಳಸ, ಪಾನ್ ಬಟ್ಲು, ಪಂಚಾರತಿ, ಬೆಳ್ಳಿಕಾಯಿನ್, ಬೆಳ್ಳಿ ರುದ್ರದೇವರು, ಎರಡು ರೇಣುಕರ ವಿಗ್ರಹ, ಗಣಪತಿ ವಿಗ್ರಹ, ನಟರಾಜನ ನಾಟ್ಯ ವಿಗ್ರಹ, ಆರತಿ ತಟ್ಟೆ, 108 ಬೆಳ್ಳಿ ರುದ್ರಾಕ್ಷಿ, 12 ಬೆಳ್ಳಿ ಭಿಲ್ವ ಪತ್ರೆ ಸೇರಿದಂತೆ ಸುಮಾರು 6 ಲಕ್ಷರೂಗಳ ಬೆಳ್ಳಿಯ ಆಭರಣಗಳು ಹಾಗೂ ಎರಡು ಕಾಣಿಕೆ ಹುಂಡಿಯನ್ನು ಹೊತ್ತು ಹೊಯ್ದಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಡಾ.ಹರ್ಷ, ಕುಣಿಗಲ್ ಎ.ಎಸ್.ಪಿ. ಶಶಿಕುಮಾರ್, ಸಿ.ಪಿ.ಐ.ರವಿಪ್ರಸಾದ್, ಬೆರಳಚ್ಚು ತಜ್ಞರು, ಶ್ವಾನ ದಳ ತನಿಖೆ ನಡೆಸಿದರು.
ಹಂದನಕೆರೆ ಪಿ.ಎಸ್.ಐ. ರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಳ್ಳತನ ಹೆಚ್ಚುತ್ತಿದ್ದು, ಪಟ್ಟಣದ ಪಂಚಮುಖಿ ದೇವಾಸ್ಥಾನದಲ್ಲಿನ ಕಾಣಿಕೆ ಹುಂಡಿ ಕಳವು, ಸೊರಲಮಾವು, ತಮ್ಮಡಿಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುವವರ ತಂಡವೇ ಇಲ್ಲಿಗೆ ಬಂದಿರ ಬಹುದೆಂಬ ಅನುಮಾನಗಳಿವೆ.

Wednesday, January 12, 2011

Monday, January 10, 2011


ನೂತನ ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಕಛೇರಿಗೆ ಚಾಲನೆ:ಚಿಕ್ಕನಾಯಕನಹಳ್ಳಿ,ಜ.10: ಪ್ರತಿ ತಾಲೂಕುಗಳಲ್ಲೂ ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಪ್ರತ್ಯೇಕವಾಗಿ ಸ್ಥಾಪಿಸುವಂತೆ ಸಕರ್ಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಈ ತಾಲೂಕಿನಲ್ಲಿ ಕಛೇರಿ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ ತಿಳಿಸಿದರು.ಪಟ್ಟಣದ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ತಾಲೂಕು ವಿಸ್ತರಣಾಧಿಕಾರಿಗಳ ಕಛೇರಿ ಆರಂಭದ ಅಂಗವಾಗಿ ದಿ.ದೇವರಾಜ ಅರಸ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ವಿಸ್ತರಣಾಧಿಕಾರಿಗಳ ಕಛೇರಿ ತಾ.ಪಂ.ಯ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಛೇರಿ ಇನ್ನು ಮುಂದೆ ಪ್ರತ್ಯೇಕವಾದ ಕಟ್ಟಡದಲ್ಲಿ ನಡೆಯಲಿದೆ ಎಂದ ಅವರು, ನಮ್ಮ ಇಲಾಖೆಯಲ್ಲಿ ಈ ಬೇಡಿಕೆ ಕಳೆದ 20 ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಬಂದಿದೆ ಎಂದರು. ಏಪ್ರಿಲ್ ತಿಂಗಳ ಆರಂಭದಿಂದ ಈ ಕಛೇರಿಗೆ ಡ್ರಾಯಿಂಗ್ ಪವರ್ ಬರಲಿದೆ. ಗುಮಾಸ್ತರು ಸೇರಿದಂತೆ ಕಛೇರಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿ.ಸಿ.ಎಂ.ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್, ಮೆಟ್ರಿಕ್ ನಂತರ ವಿದ್ಯಾಥರ್ಿನಿಲಯದ ನಿಲಯ ಪಾಲಕಿ ಭಾನುಮತಿ, ಜೆ.ಸಿ.ಪುರ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಮೇಲ್ವಿಚಾರಕ ದೇವರಾಜಯ್ಯ, ತಾಲೂಕಿನ ವಿವಿಧ ಹಾಸ್ಟೆಲ್ಗಳ ಮೇಲ್ವಿಚಾರಕರುಗಳಾದ ಅಶ್ವತ್ಥ್ನಾರಾಯಣ, ಶಿವಮೂತರ್ಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿ.ನಾ.ಹಳ್ಳಿಯ ಜೆ.ಡಿ.ಯು.ಸಭೆಗೆ ಶರದ್ಯಾದವ್ಚಿಕ್ಕನಾಯಕನಹಳ್ಳಿ,ಜ.10: ಇಲ್ಲಿನ ಜನತಾದಳ(ಸಂಯುಕ್ತ) ಕಾರ್ಯಕರ್ತರ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶರದ್ಯಾದವ್, ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ಪಿ. ನಾಡಗೌಡ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಚಿ.ನಾ.ಹಳ್ಳಿಯ ನವೋದಯ ಪ್ರಥಮ ದಜರ್ೆ ಕಾಲೇಜ್ನ ಆವರಣದಲ್ಲಿ ಇದೇ 13ರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿರುವ ಈ ಸಭೆಯಲ್ಲಿ, ಈ ಸಲದ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಅಭಿನಂದಿಸುವುದರ ಜೊತೆಗೆ ಜಯಶೀಲರಾದ ಸದಸ್ಯರನ್ನು ಸನ್ಮಾನಿಸಲಾಗುವುದು ಹಾಗೂ ಸ್ಪಧಿಸಿದ್ದ ಪಕ್ಷದ ಎಲ್ಲಾ ಅಭ್ಯಾಥರ್ಿಗಳು ಹಾಗೂ ತಾಲೂಕು ಮಟ್ಟದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.