Monday, October 17, 2011







ಬರಗೂರು ಪಿ.ಡಿ.ಓ. ಅಮಾನತ್ತಿಗೆ ಒತ್ತಾಯಿಸಿ ತಾ.ಪಂ.ಕಛೇರಿ ಮುಂದೆ ಪ್ರತಿಭಟನೆಚಿಕ್ಕನಾಯಕನಹಳ್ಳಿ,ಅ.17: ಬರಗೂರು ಪಂಚಾಯಿತಿ ಪಿ.ಡಿ.ಓ. ಶಿವಕುಮಾರ್ರವರನ್ನು ಕರ್ತವ್ಯದಿಂದಲೇ ವಿಮುಕ್ತಿಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಬಸವರಾಜು ರವರ ನೇತೃತ್ವದಲ್ಲಿ ಹಲವು ಪಂಚಾಯಿತಿಗಳ ಅಧ್ಯಕ್ಷರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ಒತ್ತಾಯಿಸಿದರು. ತಾಲೂಕಿನ ಬರಗೂರು ಗ್ರಾ.ಪಂ.ಯಲ್ಲಿ ಗಾಂಧಿಜಯಂತಿಯಂದು ನಡೆದ ಸ್ವಚ್ಚತಾ ಕಾರ್ಯಕ್ರಮದ ಗ್ರಾಮ ಸಭೆಯಲ್ಲಿ ಪಿ.ಡಿ.ಓ. ಶಿವಕುಮಾರ್ ಹಾಗೂ ಅಧ್ಯಕ್ಷ ಬರಗೂರು ಬಸವರಾಜು ಇಬ್ಬರೂ ಕೈ ಕೈ ಮೀಲಾಯಿಸಿದ್ದರು, ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಈಗ ಅಧ್ಯಕ್ಷ ಬಸವರಾಜು, ಸದಸ್ಯರು, ತಾಲೂಕಿನ ವಿವಿಧ ಗ್ರಾ.ಪಂ.ಅಧ್ಯಕ್ಷರು ಹಾಗೂ ಗ್ರಾಮಸ್ಥರು ತಾ.ಪಂ. ಕಛೇರಿ ಮುಂದೆ ಪಿ.ಡಿ.ಓ. ಶಿವಕುಮಾರ್ ರವರ ದೌರ್ಜನ್ಯ ಖಂಡಿಸಿ ಮತ್ತು ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಬಸವರಾಜು, ಪಿ.ಡಿ.ಓ. ಶಿವಕುಮಾರ್ ರವರ ಮೇಲೆ 8 ಗುರುತರ ಆರೋಪಗಳಿದ್ದು, ಆರೆ, ಗುದ್ದಲಿ, ಸಿ.ಎಫ್.ಎಲ್ ಬಲ್ಪ್ಗಳ ಖರೀದಿಯಲ್ಲಿ, ವಸತಿ ಯೋಜನೆಗಳಲ್ಲೂ ಭ್ರಷ್ಟಾಚಾರ ನಡೆಸಿದ್ದರು, ಈ ಬಗ್ಗೆ ಸಾರ್ವಜನಿಕರೆದರು ಕೇಳಿದಾಗ ಏಕಾಏಕಿ ನನ್ನ ಮೇಲೆರಗಿದರು ಎಂದು ಆರೋಪಿಸಿದರಲ್ಲದೆ, ಜನಪ್ರತಿನಿಧಿಗಳಿಗೆ ಗೌರವವನ್ನು ಕೊಡುವ ಪ್ರವೃತ್ತಿಯನ್ನು ಬೆಳಿಸಿಕೊಂಡಿದ್ದಾರೆ ಎಂದರು.ತಾಲೂಕು ಗ್ರಾ.ಪಂ.ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷೆ ಹಾಗೂ ಗೋಡೆಕೆರೆ ಗ್ರಾ.ಪಂ. ಅಧ್ಯಕ್ಷೆ ಕುಶಲ ಮರಿಸ್ವಾಮಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಸದಾ ಜನರ ಬಳಿಯೇ ಇರುವುದರಿಂದ ನೀರು, ಸ್ವಚ್ಚತೆ ಹಾದಿಯಾಗಿ ಎಲ್ಲಾ ಸಮಸ್ಯೆಗಳಿಗೆ ನಾವು ತಕ್ಷಣ ಪ್ರತಿಕ್ರಿಯಿಸಿ ಸಮಸ್ಯೆ ಬಗೆಹರಿಸಬೇಕು, ಇಂತಹ ಸಂದರ್ಭಗಳಲ್ಲಿ ಪಿ.ಡಿ.ಓ.ಗಳು ಸ್ಥಳದಲ್ಲಿ ವಾಸ್ತವ್ಯವಿದ್ದರೆ ಜನರ ಸಮಸ್ಯೆಗಳನ್ನು ನಾವು ಶೀಘ್ರ ಪರಿಹರಿಸಲು ಸಹಾಯಕವಾಗುತ್ತದೆ ಇದನ್ನು ಅರಿತು ಕೆಲಸ ಮಾಡಬೇಕು ಎಂದರಲ್ಲದೆ, ಸಕರ್ಾರದಿಂದ ಬರುವ ಪ್ರತಿಯೊಂದು ಆದೇಶವನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಆದರೆ, ಅನುದಾನಗಳ ಬಗ್ಗೆ ಬರುವ ಆದೇಶವನ್ನು ಪಿ.ಡಿ.ಓ.ಗಳು ತಮ್ಮ ಬಳಿ ಇಟ್ಟುಕೊಂಡು ನಮ್ಮನ್ನು ಕತ್ತಲಿಯಲ್ಲಿಟ್ಟಿರುತ್ತಾರೆ ಎಂದರು. ಕುಪ್ಪೂರು ಗ್ರಾ.ಪಂ. ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ತಾಲೂಕಿನ ಪಿ.ಡಿ.ಓ. ಗಳು ಸರಿಯಾದ ಸಮಯಕ್ಕೆ ಗ್ರಾ.ಪಂ.ಕಾಯರ್ಾಲಯಕ್ಕೆ ಬರುವುದಿಲ್ಲ ಸದಾ ತಾ.ಪಂ. ಕಛೇರಿಯಲ್ಲಿ ಬೀಡುಬಿಟ್ಟಿರುತ್ತಾರೆ, ಕೇಳಿದರೆ ಆ ಸಭೆ, ಈ ಸಭೆ ಇತ್ತು ಎಂದು ಸಬೂಬು ಹೇಳುತ್ತಾರೆ ಎಂದರು. ಮತ್ತಿಘಟ್ಟ ಗ್ರಾ.ಪಂ.ಅಧ್ಯಕ್ಷ ಮಹೇಶ್ ಮಾತನಾಡಿ ಅಧಿಕಾರ ವಿಕೆಂದ್ರೀಕರಣದಿಂದ ಗ್ರಾಮ ಮಟ್ಟಕ್ಕೆ ಅಧಿಕಾರ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸೇವೆ ಮಾಡಲು ಮುಂದಾದರೆ ನಮ್ಮನ್ನು ನಿಯಂತ್ರಿಸುವವರು ಹಲವು ಮಂದಿ ಅದರ ಜೊತೆಗೆ ಅಧಿಕಾರ ಶಾಹಿಯೂ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ಅಧಿಕಾರದಲ್ಲಿದ್ದು ಜನರಿಗೆ ಯಾವ ರೀತಿಯ ಸೇವೆಯನ್ನು ಕೊಟ್ಟಂತಾಗುತ್ತದೆ ಎಂದರು. ಕೆಂಕೆರೆ ತಾ.ಪಂ.ಸ್ಯದಸ್ಯ ನವೀನ್ ಮಾತನಾಡಿ, ಪಿ.ಡಿ.ಓಗಳು ಹಾಗೂ ಕಾರ್ಯದಶರ್ಿಗಳನ್ನು ಗ್ರಾ.ಪಂ.ಯಲ್ಲಿ ಹುಡುಕಿದರೂ ಸಿಗುವುದಿಲ್ಲ, ಅವರನ್ನು ನೋಡಬೇಕೆಂದರೆ ಚಿ.ನಾ.ಹಳ್ಳಿ.ಯ ಮಿಲ್ಟ್ರಿ ಹೋಟೆಲ್ ಹಾಗೂ ಬಾರ್ಗಳ ಬಳಿ ಬಂದರೆ ತಕ್ಷಣವೇ ಸಿಗುತ್ತಾರೆ ಎಂದರು. ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಬಸವರಾಜು ತಮ್ಮ ಮನವಿ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ ರವರಿಗೆ ಸಲ್ಲಿಸಿದರು. ಇ.ಓ.ದಯಾನಂದ ಮನವಿ ಸ್ವೀಕರಿಸಿ ಮಾತನಾಡಿ, ಪಿ.ಡಿ.ಓ.ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಇ.ಓ.ಗಳಿಗೆ ಅಧಿಕಾರವಿರುವುದಿಲ್ಲ, ನಾನು ನಿಮ್ಮ ಮನವಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ.ಸದಸ್ಯೆ ಬಿ.ಎನ್.ಶಿವಪ್ರಕಾಶ್, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಹುಳಿಯಾರ್ ಗ್ರಾ.ಪಂ.ಅಧ್ಯಕ್ಷ ಮಹಮದ್ ಸಯದ್ ಅನ್ಸರ್ ಆಲಿ ಸೇರಿದಂತೆ ಹಲವು ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


ಸಿಇಸಿಯ ಮೂರನೇ ತಂಡ ಚಿ.ನಾ.ಹಳ್ಳಿ ಗಣಿ ಪ್ರದೇಶಕ್ಕೆ ಭೇಟಿಚಿಕ್ಕನಾಯಕನಹಳ್ಳಿ,

ಅ.17: ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಪರಿಣಾಮ/ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಸುಪ್ರೀಂಕೋಟರ್್ ನೇಮಿಸಿರುವ ಸಿಇಸಿ ತಂಡದ ಸದಸ್ಯರು ಸೋಮವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಗಣಿ ಪ್ರದೇಶಕ್ಕೆ ಭೇಟಿ, ನೀರಿನ ಮೂಲಗಳ ಮೇಲೆ ಆಗಿರುವ ಪರಿಣಾಮ ಶೋಧಿಸಿತು.ಬೆಳಗ್ಗೆ 11.30ರ ಸುಮಾರಿಗೆ ಸಿಇಸಿ ತಂಡದ ನಾಲ್ಕೈದು ಮಂದಿ ಸದಸ್ಯರು ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಬಳಿಕ ಗಣಿ ಹೊನ್ನೆಬಾಗಿ, ಬುಳ್ಳೇನಹಳ್ಳಿ ಮಾರ್ಗದಲ್ಲಿ ಗಣಿ ಪ್ರದೇಶಕ್ಕೆ ತೆರಳಿದರು. ಅಬ್ಬಿಗೆ ಗುಡ್ಡದಲ್ಲಿ ನಡೆದಿರುವ ಗಣಿಗಳಿಗೆ ಭೇಟಿ ನೀಡಿದ ಸದಸ್ಯರು, ಪುನಾಃ ಪ್ರವಾಸಿ ಮಂದಿರಕ್ಕೆ ಆಗಮಿಸಿ ವಾಪಸಾದರು.ಇದರಿಂದಾಗಿ ಸಿಇಸಿ ತಂಡದ ಪೈಕಿ 3ನೇ ಉಪ ತಂಡ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಕ್ಕೆ ಭೇಟಿ ನೀಡಿದಂತಾಗಿದೆ. ನೀರಿನ ಮೂಲ ಶೋಧ:ಸೋಮವಾರ ಭೇಟಿ ನೀಡಿದ್ದ ತಂಡ ಕೇವಲ ನೀರಿನ ಮೂಲದ ಮೇಲಾಗಿರುವ ಪರಿಣಾಮ ಶೋಧಿಸಿತು. ಬುಳ್ಳೇನಹಳ್ಳಿ, ಹೊನ್ನೆಬಾಗಿ ಸೇರಿದಂತೆ ಈ ಬೆಟ್ಟದ ತಳ ಭಾಗದಲ್ಲಿರುವ ಕೆರೆ, ಕೊಳವೆ ಬಾವಿಗಳ ನೀರು ಸಂಗ್ರಹಿಸಿದ ತಂಡ, ಗಣಿಗಾರಿಕೆಯಿಂದ ನೀರಿನ ಮೇಲೆ ದುಷ್ಪರಿಣಾಮವಾಗಿದೆಯೇ ಎಂದು ತಲೆ ಕೆಡಿಸಿಕೊಂಡಿತು. ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಿಇಸಿ ತಂಡದ ಜೊತೆಯಲ್ಲಿದ್ದರು.ಬಾಲಾಜಿ ಮೈನ್ಸ್ ಸಮೀಕ್ಷೆ:ಈ ಹಿಂದೆ ಎಲ್ಲ ಗಣಿಗಳ ಸವರ್ೆ ಕಾರ್ಯ ನಡೆದಿತ್ತು. ಅಬ್ಬಿಗೆ ಗುಡ್ಡದ ತುದಿಯಲ್ಲಿರುವ ಬಾಲಾಜಿ ಮೈನ್ಸ್ ಸವರ್ೆ ಕಾರ್ಯ ಮಾತ್ರ ಉಳಿದಿತ್ತು. ಸೋಮವಾರ ಅರಣ್ಯ, ಗಣಿ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ ಸವರ್ೆ ಕಾರ್ಯ ನಡೆಸಿದವು.ಬಾಕ್ಸ್-1ಮಳೆಗಾಲದಲ್ಲಿ ಶೋಧ ಸರಿಯೇ?ಕಳೆದ ಜೂನ್ ಅಂತ್ಯದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಆರಂಭವಾಗಿದೆ. ಈವರೆಗೂ ವಾಡಿಕೆ ಮಳೆ ಸಂಪೂರ್ಣವಾಗಿ ಆಗಿಲ್ಲ. ಆದರೂ ಶೇ.40ರಷ್ಟು ಮಳೆಯಾಗಿದೆ.ಗಣಿಗಾರಿಕೆ ಪ್ರದೇಶವಾದ ಅಬ್ಬಿಗೆ ಗುಡ್ಡ, ಸೊಪ್ಪಿನ ಗುಡ್ಡ ಪ್ರದೇಶಗಳ ಸುತ್ತಮುತ್ತಲ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳ ನೀರು ಮಳೆಯಿಂದಾಗಿ ಹೊಸ ನೀರು ಬಂದು ತಿಳಿಯಾಗಿದೆ. ಅದರಲ್ಲೂ ತಾಲೂಕಿನೆಲ್ಲೆಡೆಗಿಂತ ಈ ಗಣಿ ಗುಡ್ಡಗಳ ಪ್ರದೇಶದಲ್ಲೇ ಅತಿ ಹೆಚ್ಚು ಮಳೆಯಾಗುತ್ತದೆ. ಇದರಿಂದ ಗಣಿ ಗುಡ್ಡದ ಧೂಳೆಲ್ಲ ಜೂನ್ ಅಂತ್ಯದಿಂದ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಪರಿಸರ, ಗಿಡ, ಮರ, ಗಣಿ ಲಾರಿಗಳು ಸಾಗುವ ದಾರಿಗಳ ಇಕ್ಕೆಗಳ ಹಸಿರು ಗಿಡಗಳೆಲ್ಲ ಮಳೆ ನೀರಿನಿಂದ ತೊಳೆದು ಸ್ವಚ್ಛ ಪರಿಸರ ಉಂಟಾಗಿದೆ.ಮೊದಲ ಮಳೆಗೇ ಎಲ್ಲ ಧೂಳು ಕೊಚ್ಚಿಕೊಂಡು ಹೋಗಿದ್ದು, ಆ ಬಳಿಕ ಸುರಿದ ಮಳೆಯ ತಿಳಿಯಾದ, ಸ್ವಚ್ಛ ನೀರು ಈಗ ಕೆರೆ, ಕಟ್ಟೆಗಳಲ್ಲಿವೆ. ಬೇಸಿಗೆಯಲ್ಲಿ ಧೂಳು ಹಿಡಿದು ಕೆರೆ ನೀರು ಹಾಳಾಗಿರುತ್ತವೆ. ಆಗ ನೀರಿನ ಮೇಲಾಗಿರುವ ಪರಿಣಾಮ ಶೋಧಿಸದೇ ಮಳೆಗಾಲದಲ್ಲಿ ನೀರಿನ ಮೇಲಾಗಿರುವ ಪರಿಣಾಮ ಶೋಧಿಸುತ್ತಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.ಆದರೆ ಮಳೆ ನೀರು ಅಂತರ್ಜಲ ಸೇರುವುದರಿಂದ ಅಂತರ್ಜಲದ ಮೇಲಾಗಿರುವ ಪರಿಣಾಮವನ್ನು ಶೋಧಿಸಲು ಈಗ ಸಕಾಲ ಎಂಬ ಅಭಿಪ್ರಾಯವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

Wednesday, October 12, 2011

Friday, October 7, 2011


ಚಿ.ನಾ..ಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಒಗ್ಗೂಡಿಸಿ ಉಗ್ರಹೋರಾಟ
ಚಿಕ್ಕನಾಯಕನಹಳ್ಳಿ,ಸೆ.07 : ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ತಾಲ್ಲೂಕಿನ ಪ್ರತಿ ಹಳ್ಳಿಹಳ್ಳಿಯಲ್ಲೂ ಎಲ್ಲಾ ಪಕ್ಷ, ರೈತರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರಹೋರಾಟ ನಡೆಸುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಸಕರ್ಾರಕ್ಕೆ ಎಚ್ಚರಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವ ಬಗ್ಗೆ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ತಾಲ್ಲೂಕು ಕಛೇರಿ ಆವರಣದಲ್ಲಿ ಮಾತನಾಡಿದರು.
ಡಾ.ನಂಜುಡಪ್ಪರವರ ವರದಿಯನ್ವಯ ತಾಲ್ಲೂಕು ಅತಿಹಿಂದುಳಿದ ಪ್ರದೇಶವಾಗಿದ್ದು ಇಲ್ಲಿನ ರೈತರು ಮಳೆಯನ್ನು ತಮ್ಮ ಬದುಕಿಗೆ ಅಳವಡಿಸಿಕೊಂಡು ಜೀವನ ನಡೆಸುತ್ತಿರುವವರು ಮುಂಗಾರು ಮತ್ತು ಹಿಂಗಾರು ಮಳೆಯಿಲ್ಲದೆ ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ ಅಲ್ಲದೆ ತಾಲ್ಲೂಕಿನಲ್ಲಿರುವ 195600 ಜಾನುವಾರುಗಳಿಗೆ ಮೇವಿನ ಸಮಸ್ಯ ಎದುರಾಗಿದ್ದು ರೈತರು ತೀವ್ರ ಆಥರ್ಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ, ಈ ಪ್ರದೇಶದಲ್ಲಿ ಬರಗಾಲ ಕಾಣಿಸಿಕೊಂಡಿರುವುದರಿಂದ ಹಿಂಗಾರು, ಮುಂಗಾರು ಬೆಳೆಯ ವೈಪಲ್ಯದ ಬಗ್ಗೆ ಈಗಾಗಲೇ ಸಕರ್ಾರಕ್ಕೆ ವರದಿ ನೀಡಲಾಗಿದೆ ಆದರೂ ಬರಪ್ರದೇಶದ ಹೆಸರಿನಿಂದ ತಾಲ್ಲೂಕನ್ನು ಕೈಬಿಟ್ಟಿರುವುದರಿಂದ ಜನತೆ ಮುಂದಿನ ದಿನಗಳಲ್ಲಿ ಆಥರ್ಿಕ ಸಂಕಷ್ಟ ಎದುರಿಸಲಿದ್ದಾರೆ ಎಂದ ಅವರು ತಾಲ್ಲೂಕಿನಲ್ಲಿ ನೀರಿನ ಜೊತೆಗೆ ವಿದ್ಯುತ್ ಸಮಸ್ಯೆಯೂ ಎದುರಾಗಿದೆ ತಾಲ್ಲೂಕಿನಲ್ಲಿ ವ್ಯಾಪ್ತಿಯಲ್ಲಿ ಸುಮಾರು 19000 ಐ.ಪಿ.ಸೆಟ್ಟುಗಳು ಚಾಲನೆಯಲ್ಲಿದ್ದು ಐ.ಪಿ.ಸೆಟ್ ಹೊಂದಿರುವ ರೈತರಿಗೆ ಉತ್ತಮ ವೋಲ್ಟೇಜ್ ಒದಗಿಸಲು ತೊಂದರೆಯಾಗಿರುತ್ತದೆ ಅಲ್ಲದೆ ಇತ್ತೀಚಿನ ಅನಿಯಮಿತ ಲೋಡ್ಶೆಡ್ಡಿಂಗ್ನಿಂದ ಸಾಕಷ್ಟು ತೊಂದರೆಯಾಗುತ್ತಿದ್ದು ಬಡರೈತರ ಹಿತದೃಷ್ಠಿಯಿಂದ ಇವುಗಳನ್ನು ತಪ್ಪಿಸಲು ಹೋರಾಟ ಆರಂಬಿಸಿದ್ದು ತಕ್ಷಣಕ್ಕೆ ಪಕ್ಷದ ಜನಪ್ರತಿನಿಧಿಗಳ ವತಿಯಿಂದ ನಡೆಯುತ್ತಿರುವ ಈ ಪ್ರತಿಭಟನೆಯು ತಾಲ್ಲೂಕನ್ನು ಸಕರ್ಾರ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಎಲ್ಲಾ ಪಕ್ಷಗಳ ಜೊತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಈಗಾಗಲೇ ಮಳೆಯಿಲ್ಲದೇ ಆಹಾರ ಧಾನ್ಯ ಬೆಳೆಯು ಇಳಿಮುಖವಾಗಿದ್ದು ರೈತರು ಕಂಗಾಲಾಗಿದ್ದಾರೆ, ನೀರಿಗಾಗಿ ಪರದಾಡುತ್ತಿದ್ದಾರೆ ಇದರ ಕೂಲಂಕುಶವಾಗಿ ಜಿಲ್ಲಾಧಿಕಾರಿಗಳು ಅರಿತು ತಾಲ್ಲೂಕನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ಹೇಳಿದರು.
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂಬಿ.ನಾಗರಾಜು, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಚಂದ್ರಶೇಖರಶೆಟ್ಟರು ಮಾತನಾಡಿದರು.
ಪ್ರತಿಭಟನೆಯಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ಸಿ.ಎಸ್.ರಮೇಶ್, ಎಂ.ಎನ್.ಸುರೇಶ್, ಸಿ.ಕೆ.ಕೃಷ್ಣಮೂತರ್ಿ, ರಾಜಣ್ಣ, ರುಕ್ಮಿಣಮ್ಮ, ಮಾಜಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ , ತಾ.ಪಂ.ಸದಸ್ಯರಾದ ಲತಾ, ಚೇತನಗಂಗಾಧರ್ ಮುಂತಾದವರಿದ್ದರು.

Friday, September 30, 2011






ತಂದೆಗೆ ತಕ್ಕ ಮಗ ಶಾಸಕ ಸಿ.ಬಿ.ಎಸ್: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ಸೆ.26 : ನಮ್ಮ ತಂದೆಯವರು ತೋರಿಸಿಕೊಟ್ಟ ಉತ್ತಮ ಹಾದಿಯಲ್ಲೇ ನಾವು ಈಗಲೂ ನಡೆಯುತ್ತಿದ್ದು, ಮುಂದೆಯೂ ಅದೇ ರೀತಿ ಜನರ ಮಧ್ಯೆ ಇರುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ದಿ.ಎನ್.ಬಸವಯ್ಯನವರ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂದೆಯವರಂತೆಯೇ ನಾವು ಸಾರ್ವಜನಿಕರಲ್ಲಿ ಬೆರೆತು ಅವರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ, ಬಡವರ್ಗದ ಹಾಗೂ ಹಿಂದುಳಿದ ಜನಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಬಸವಯ್ಯನವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ತೀಪರ್ು ನೀಡುವ ಮೂಲಕ ಅವರನ್ನು ನ್ಯಾಯಾಲಯದ ಮೆಟ್ಟಿಲನ್ನು ತುಳಿಯದಂತೆ ನೋಡಿಕೊಳ್ಳುತ್ತಿದ್ದರಲ್ಲದೆ, ಜನರ ಕಷ್ಠ ಸುಖಗಳಿಗೆ ಸ್ಪಂದಿಸುತ್ತಿದ್ದರು ಅದೇ ಗುಣ ಅವರ ಮಗನಾದ ಸುರೇಶ್ ಬಾಬುವಿಗೂ ಇದೆ, ತಂದೆಯಂತೆ ಮಗ ಎಂಬ ಗಾದೆಯನ್ನು ಇವರು ನಿಜ ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಂಗಸ್ವಾಮಯ್ಯ, ರಾಜಣ್ಣ ಉಪಸ್ಥಿತರಿದ್ದರು.

ಗಾಂಧಿಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಗ್ರಾ.ಪಂ.ಅಧ್ಯಕ್ಷರ ಬಹಿಷ್ಕಾರ: ಒಕ್ಕೂಟದ ಹೇಳಿಕೆ
ಚಿಕ್ಕನಾಯಕನಹಳ್ಗ್ಭಿ,ಸೆ.26 : ಗ್ರಾಮಪಂಚಾಯ್ತಿಗಳ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಯು 3 ವರ್ಷದಿಂದ ವಿಳಂಬಗತಿಯಲ್ಲಿರುವುದರಿಂದ ಗಾಂಧಿಜಯಂತಿಯಂದು ಕ್ರಿಯಾ ಯೋಜನೆಗೆ ನಡೆಸುವ ಗ್ರಾಮಸಭೆಗೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ಸಭೆಯನ್ನು ಬಹಿಷ್ಕರಿಸತ್ತೇವೆ ಎಂದು ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷೆ ಕುಶಾಲಮರಿಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಯಂತಿ ದಿನ ಗ್ರಾಮಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಉದ್ಯೋಗ ಖಾತ್ರಿ ಯೋಜನೆ ಕರಡು ತಯಾರಿಸಲು ಸುತ್ತೋಲೆ ಬಂದಿದೆ, ಕಳೆದ 2010-11ನೇ ಸಾಲಿನಲ್ಲಿ ತಯಾರಿಸಿದ್ದ ಕ್ರಿಯಾ ಯೋಜನೆಯೇ ಇನ್ನೂ ಪರಿಪೂರ್ಣವಾಗಿಲ್ಲ, 11-12ನೇ ಸಾಲಿನಲ್ಲಿ ತಯಾರಿಸಿದ ಯೋಜನೆ ಪ್ರಾರಂಭಿಸಿಯೇ ಇಲ್ಲ, ಈಗ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ತಯಾರಿಸಲು ಗ್ರಾ.ಪಂ.ಗಳಿಗೆ ಅಸಮಾಧಾನವಾಗಿದೆ ಎಂದು ತಿಳಿಸಿದವ ಅವರು, ಈ ಹಿಂದಿನ ಕ್ರಿಯಾ ಯೋಜನೆಗಳ ವಿಚಾರದಲ್ಲಿ ಗ್ರಾ.ಪಂ. ಪಿಡಿಓ ಮತ್ತು ಕಾಯರ್ಾದಶರ್ಿಗಳನ್ನು ವಿಚಾರಿಸಿದರೆ ನಮಗೆ ಸಕರ್ಾರದಿಂದ ಆದೇಶ ಬಂದಿಲ್ಲ ಎಂದು ಮೇಲಧಿಕಾರಿಗಳನ್ನು ತೋರಿಸಿ ಕೈ ತೊಳೆದಕೊಳ್ಳುತ್ತಾರೆ ಎಂದರು. 10-11ನೇ ಸಾಲಿನ ಮತ್ತು 11-12ನೇ ಸಾಲಿನ ಕ್ರಿಯಾ ಯೋಜನೆ ಪೂರ್ಣಗೊಳ್ಳದೆ 12-13ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಸಭೆಗಳಿಗೆ ಸುತ್ತೋಲೆ ಕಳುಹಿಸಿರುವುದನ್ನು ಗ್ರಾ.ಪಂ. ಒಕ್ಕೂಟ ತಿರಸ್ಕರಿಸುತ್ತದೆ. ಹೊರ ರಾಜ್ಯಗಳಲ್ಲಿ ಗ್ರಾ.ಪಂ.ಅಭಿವೃದ್ದಿಗೆ ಕೇಂದ್ರ ಸಕರ್ಾರದಿಂದ 15 ರಿಂದ 16 ಸಾವಿರ ಕೋಟಿ ರೂ ಬಳಕೆಯಾಗುತ್ತದೆ, ಆದರೆ ನಮ್ಮ ರಾಜ್ಯದಲ್ಲಿ ಕೇಂದ್ರ ಸಕರ್ಾರ ಬಿಡುಗಡೆಗೊಳಿಸುವ ಗ್ರಾಮೀಣ ಅಭಿವೃದ್ದಿ ಅನುದಾನವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಇನ್ನೆರಡು ಮೂರು ದಿನಗಳೊಳಗೆ ಹಿಂದಿನ ಕ್ರಿಯಾ ಯೋಜನೆಗಳ ಅನುಷ್ಠಾನ ಪೂರ್ಣಗೊಳ್ಳದಿದ್ದರೆ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಕರಡು ತಯಾರಿಸುವುದನ್ನು ಗ್ರಾಮಸಭೆಗಳಲ್ಲಿ ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬರಗೂರು ಬಸವರಾಜು, ಉಷಾ, ಕಲ್ಪನಾ ಉಪಸ್ಥಿತರಿದ್ದರು.

ಶೈಕ್ಷಣಿಕ ಪ್ರಗತಿಗಾಗಿ ಎಲ್ಲರ ಒಲವು ಅಗತ್ಯ
ಚಿಕ್ಕನಾಯಕನಹಳ್ಳಿ,ಸೆ.30 : ವಿದ್ಯಾಥರ್ಿಗಳು ಎಸ್.ಡಿ.ಎಂ.ಸಿ, ಶಿಕ್ಷಕವರ್ಗ ಹಾಗೂ ಪೋಷಕರ ಒಲವನ್ನು ಗಳಿಸಿ ಅವರ ಮಾರ್ಗದರ್ಶನದಂತೆ ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿ.ನಂಜಯ್ಯ ಸಲಹೆ ನೀಡಿದರು.
ಪಟ್ಟಣದ ಎಂ.ಎಚ್.ಪಿ.ಎಸ್ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರು ಆಯಾ ಮಕ್ಕಳ ಉತ್ತರ ಪತ್ರಿಕೆಗಳೊಂದಿಗೆ ಚಚರ್ೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿಗೆ ಶ್ರಮಿಸಬೇಕೆಂದು ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಹಲವು ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪತ್ರಕರ್ತ ಸಿ.ಬಿ.ಲೋಕೇಶ್ ಮಾತನಾಡಿ ಶೇ.75ರಷ್ಟು ರೈತರ ಹಾಗೂ ಬಡಕೂಲಿ ಕಾಮರ್ಿಕರ ಮಕ್ಕಳು ಸಕರ್ಾರಿ ಶಾಲೆಯಲ್ಲಿ ಓದುತ್ತಿರುವುದರಿಂದಲೇ ಸಕರ್ಾರಿ ಶಾಲೆಗಳು ಈಗಲೂ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡಿರುವುದು ಎಂದ ಅವರು ಪೋಷಕರು ಶಾಲೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಆಗಮಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕ್ರೀಡೆ, ಇನ್ನಿತರ ಚಟುವಟಿಕೆಗಳ ಬಗ್ಗೆ ಶಿಕ್ಷಕರೊಂದಿಗೆ ಚಚರ್ಿಸಬೇಕು ಮತ್ತು ಪೋಷಕರು ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಿ ಸಕರ್ಾರಿ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ ಅವರು ಮಕ್ಕಳು ಅತಿ ಹೆಚ್ಚಾಗಿ ಟಿವಿ ನೋಡುವುದನ್ನು ತಪ್ಪಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಿಸುತ್ತಾ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವನ್ನು ಪೋಷಕರು ಮನೆಯಲ್ಲಿ ಮತ್ತೊಮ್ಮೆ ತಿಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶರವರು ಆಗಮಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪರಿಶೀಲಿಸಿ, ವಸ್ತು ಪ್ರದರ್ಶನ ವೀಕ್ಷಿಸಿ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಮುಖ್ಯಶಿಕ್ಷಕರಾದ ಕೆ.ಪಿ.ಚೇತನ, ಧನಪಾಲ್, ಮಾರ್ಗದಶರ್ಿ ಶಿಕ್ಷಕ ಬಸವರಾಜು, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಗದೀಶ್ ಹೆಚ್.ಸ್ವಾಗತಿಸಿದರೆ, ಎಸ್.ಕೆ.ವಿಜಯ್ಕುಮಾರ್ ನಿರೂಪಿಸಿದರು.


ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೆ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಸೆ.30 : ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೇ ವರ್ಷದ ವಾಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು (ಇಂದು) ಅಕ್ಟೋಬರ್ 1ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದು ಖುಷಿ ಸಂಸ್ಕೃತಿ ಕೇಂದ್ರದ ಆಚಾರ್ಯ ರಂಗಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಉಮೇಶ್ಚಂದ್ರ, ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮರಾಮಯ್ಯ, ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ವಿಶೇಷ ಆಹ್ವಾನಿತರಾಗಿ ರಾ.ಸ.ಪ್ರಾ.ಶಾ.ಶಿ.ಶಿಸಂಘದ ಅಧ್ಯಕ್ಷ ರಮಾದೇವಿ, ಕಾರ್ಯದಶರ್ಿ ಶಂಕರಮೂತರ್ಿ, ಖಜಾಂಚಿ ಟಿ.ಮನೋರಮಾ, ಮುಖ್ಯಶಿಕ್ಷಕರಾದ ಗೊವಿಂದರಾಜು, ತಾ.ಪ್ರೌ.ಶಾ.ಸ.ಶಿ.ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಪ್ರೌ.ಶಾ.ಶಿ.ಸಂಘದ ಕಾರ್ಯದಶರ್ಿ ತಿಮ್ಮಯ್ಯ ಉಪಸ್ಥಿತರಿರುವರು.

Saturday, September 24, 2011



ನೈತಿಕತೆ ಕಳೆದುಕೊಳ್ಳುತ್ತಿರುವ ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳು: ಕೋಡಿಹಳ್ಳಿ ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ,ಸೆ.24 : ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳಾದ ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಹಾಗೂ ಸಮೂಹ ಮಾಧ್ಯಮಗಳು ತಮ್ಮ ನೈತಿಕತೆ ಕಳೆದುಕೊಂಡು ದೇಶವನ್ನು ದಿವಾಳಿ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪಟ್ಟಣದಲ್ಲಿ ರೈತ ಸಂಘ ಕಛೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕನರ್ಾಟಕ ಭ್ರಷ್ಠಾಚಾರದಲ್ಲಿ ರಾಷ್ಟ್ರದಲ್ಲೇ ಅಗ್ರ ಸ್ಥಾನ ಪಡೆದಿದೆ, ಇದು ಕೇವಲ ರಾಜಕೀಯ ನಾಯಕರಿಗೆ ಬಂದಿಲ್ಲ ಇಡೀ ನಾಡಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋಟರ್್ ಕನರ್ಾಟಕದ ಗಣಿಗಾರಿಕೆಯ ಬಗ್ಗೆ ತನಿಖೆಗೆ ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸಕರ್ಾರ 2ಜಿ ಸೆಕ್ಟ್ರಂ ಹಗರಣದಲ್ಲಿ ಸಿಲುಕಿದೆ ಅಷ್ಟೇಅಲ್ಲ, ರಾಷ್ಟ್ರದ ಎಲ್ಲಾ ಪಕ್ಷಗಳೂ ನೈತಿಕತೆ ಕಳೆದುಕೊಳ್ಳುತ್ತಿವೆ ಇದನ್ನು ಸರಿದಾರಿಗೆ ತರಲು ಪ್ರಜ್ಞಾವಂತ ನಾಗರೀಕರು ಸತ್ಯಾಗ್ರಹ, ಚಳುವಳಿಗಳನ್ನು ಕೈಗೊಳ್ಳಲು ರೈತಸಂಘ ಹಾಗೂ ಸಾರ್ವಜನಿಕರು ಸಂಘಟನೆಗೊಂಡು ಸರಿ ದಾರಿಗೆತರಬೇಕಿದೆ. ಕಳೆದ ಮೂರು ದಶಕಗಳಿಂದ ನಮ್ಮ ಸಂಘ ರಾಜಕೀಯ ವ್ಯಕ್ತಿಗಳ ವಿರುದ್ದ ಹೋರಾಟ ನಡೆಸುತ್ತಲೇ ಇದ್ದು ಮುಂದಿನ ದಿನಗಳಲ್ಲೂ ಈ ಕಾರ್ಯ ಮುಂದುವರಿಯಲಿದೆ ಎಂದರು.
ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಮಳೆಯಿಂದ ಹಾನಿಯಾದರೆ ಬಯಲು ಪ್ರದೇಶದಲ್ಲಿ ಮಳೆಯಿಲ್ಲದೆ ಬರಗಾಲ ಬಂದಿದೆ, ರಾಜ್ಯ ಸಕರ್ಾರ ಈ ಭಾಗದ ಪ್ರದೇಶವನ್ನು ಬರಗಾಲವೆಂದು ಘೋಷಿಸಿ ಜನಜಾನುವಾರಗಳನ್ನು ರಕ್ಷಿಸಬೇಕು ಎಂದರು.
ಸಭೆಯಲ್ಲಿ ರಾಜ್ಯ ರೈತ ಸಂಘದ ಸೋಮಗುದ್ದ ರಂಗಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಕಾರ್ಯದಶರ್ಿ ದೇವರಾಜು. ಜಿಲ್ಲಾ ಸಂಚಾಲಕ ಶಂಕರಣ್ಣ, ಹಸಿರುಸೇನೆ ಜಿಲ್ಲಾ ಸಂಚಾಲಕ ಕೆ.ಎಸ್.ಸತೀಶ್, ತಾಲ್ಲೂಕು ಉಪಾಧ್ಯಕ್ಷ ಗಂಗಾಧರ್, ತಿಮ್ಮನಹಳ್ಳಿ ಲೋಕೇಶ್, ಕೆ.ಪಿ.ಮಲ್ಲೇಶ್, ಎ.ಬಿ.ಪ್ರಕಾಶಯ್ಯ, ಮರುಳಸಿದ್ದಪ್ಪ, ಮಲ್ಲಿಕಾಜರ್ುನಯ್ಯ ಮುಂತಾದವರಿದ್ದರು.

ಚಿಕ್ಕನಾಯಕನಹಳ್ಳಿ,ಸೆ.24: ಚಂದ್ರಶೇಖರ್ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡದ ಹಿರಿಮೆಯನ್ನು ಅಂತರರéಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಬಿಂಬಿಸಿದಂತಾಗಿದೆ ಎಂದು ತಾಲ್ಲೂಕು ಕಸಾಪ ಹರ್ಷವ್ಯಕ್ತ ಪಡಿಸಿದೆ.
ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಈ ಬಗ್ಗೆ ಪ್ರತಿಕ್ರಿಯಿಸಿ ದೇಶೀ ಸಂಸ್ಕೃತಿಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡು ಕನ್ನಡ ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದಿದ್ದಾರೆ.

Friday, September 23, 2011






ಸಕರ್ಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಶ್ರಮಿಸಲು ಕರೆ
ಚಿಕ್ಕನಾಯಕನಹಳ್ಳಿ,ಸೆ.23 : ಸಕರ್ಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಸಮುದಾಯ ಶ್ರಮಿಸುವಂತೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಬಿ.ಲೋಕೇಶ್ ಕರೆ ನೀಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ 2011-12ನೇ ಸಾಲಿನ ಎಸ್.ಡಿ.ಎಂ.ಸಿ ಹಾಗೂ ಸಿ.ಎ.ಸಿ ಸದಸ್ಯರಿಗೆ ನಡೆದ ಎರಡು ದಿನದ ಸಂಕಲ್ಪ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕರ್ಾರಿ ಅಧಿಕಾರಿಗಳು, ಸಕರ್ಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಿಂದ ದೂರವಿರಿಸಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಇದರಿಂದ ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದೆ ಎಂದ ಅವರು, ಸಕರ್ಾರಿ ಅಧಿಕಾರಿಗಳು ಮೊದಲು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಿಗೆ ಕಳುಹಿಸಿದರೆ ಸಕರ್ಾರಿ ಶಾಲೆಗಳು ಅಭಿವೃದ್ದಿ ಹೊಂದುತ್ತವೆ, ಅಲ್ಲದೆ ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಸಕರ್ಾರ ಗುಣಾತ್ಮಕ ಶಾಲಾ ಶಿಕ್ಷಣದತ್ತ ಸಮುದಾಯ ಎಂಬಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಹಾಗಾಗಿ ಸಮುದಾಯ ಸಕರ್ಾರಿ ಶಾಲೆಗಳ ಅಭಿವೃದ್ದಿಯಲ್ಲಿ ಶಿಕ್ಷಕರ ಜೊತೆ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸಕರ್ಾರದ ವತಿಯಿಂದ ಎಸ್.ಎಸ್.ಎ ಬಂದಾಗಿನಿಂದ ಎಸ್.ಡಿ.ಎಂ.ಸಿ ರಚಿಸಲಾಗಿ ಶಾಲೆಗಳ ಗುಣಾತ್ಮಕ ಶಿಕ್ಷಣ ಹಾಗೂ ಶಾಲಾ ಭೌತಿಕ ಅಭಿವೃದ್ದಿಯತ್ತ ಗಮನ ಹರಿಸಲಾಗಿದ್ದು ಇದಕ್ಕೆ ಎಲ್ಲಾ ಪೋಷಕರು ಸಹಕಾರ ಅಗತ್ಯವಾಗಿದೆ. ಸಕರ್ಾರಿ ಶಾಲೆಗಳನ್ನು ಓದಿದ ಹಲವರು ಇಂದು ಸಕರ್ಾರದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸದೆ ಸಕರ್ಾರಿ ಶಾಲೆಗಳಿಗೆ ಕಳುಹಿಸುವಂತೆ ಮನವಿ ನೀಡಿದರು.
ಮುಖ್ಯ ಅತಿಥಿಗಳಾದ ಶಿಕ್ಷಣ ಸಂಯೋಜಕರಾದ ಮರುಳಾನಾಯ್ಕ ಮಾತನಾಡಿ ಎಸ್.ಡಿ.ಎಂ.ಸಿ.ಸದಸ್ಯರ ಸಹಕಾರದಿಂದ ಇಂದು ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಗಣನೀಯ ಹೆಚ್ಚಳ ಕಂಡಿದ್ದು ಪ್ರಶಂಸನೀಯ ಎಂದರು. ಹಿಂದೆ ಶಿಕ್ಷಕರಿಗೆ ಗುರುಸ್ಥಾನ ನೀಡಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ಗೌರವಿಸಿ ಸ್ವಾಗತಿಸುತ್ತಿದ್ದರು. ಆದರೆ ಖಾಸಗಿ ಶಾಲೆಗಳ ಬಗ್ಗೆ ಜನರಲಿ ವ್ಯಾಮೋಹ ಹೆಚ್ಚಾಗಿದೆ ಎಂದರಲ್ಲದೆ, ಸಕರ್ಾರಿ ಶಾಲೆಗಳಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಂದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಚೇತನ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾಥರ್ಿಸಿದರು. ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿದರೆ, ಜಗದೀಶ್ ನಿರೂಪಿಸಿ, ಎಚ್.ಆರ್.ಹೊನ್ನಲಿಂಗಯ್ಯ ವಂದಿಸಿದರು.



ರೈತ ಸಂಘದ ಉದ್ಘಾಟನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಸೆ.23 : ರೈತ ಸಂಘಗಳ ಉದ್ಘಾಟನಾ ಸಮಾರಂಭ ಹಾಗೂ ತಾಲ್ಲೂಕು ರೈತಸಂಘ ಕಾಯರ್ಾಯಲದ ಉದ್ಘಾಟನೆಯನ್ನು 24ರ(ಇಂದು) ಶನಿವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ರೈತ ಸಂಘದ ಕಾಯರ್ಾಲಯದ ಉದ್ಘಾಟನೆ ನೆರವೇರಿಸಲು ರಾಜ್ಯ ರೈತ ಸಂಘದ ಕಾಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸುತ್ತಿದ್ದು ಪಟ್ಟಣದ ಅರಣ್ಯ ಇಲಾಖೆ ಎದುರು ನೂತನವಾಗಿ ಆರಂಭಿಸಿರುವ ಕಾಯರ್ಾಲಯ, ಶೆಟ್ಟಿಕೆರೆ ಹೋಬಳಿ ಮಾಕುವಳ್ಳಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಹಾಗೂ ದಬ್ಬೇಘಟ್ಟ ಗ್ರಾಮದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ರೈತ ಸಂಘದ ಉದ್ಘಾಟನೆ ನೆರವೇರಿಸಲಿದ್ದಾರೆ.

Monday, September 19, 2011



ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಧುರೀಣರೇ ಹಾಳುಮಾಡುತ್ತಿರುವುದು
ಚಿಕ್ಕನಾಯಕನಹಳ್ಳಿ,ಸೆ.18 : ನಮ್ಮ ಪ್ರಜಾಪ್ರಭುತ್ವದ ರಾಜಕೀಯದ ಧುರೀಣರು, ಜಾತಿ ಅಂಕುಶ, ಶ್ರೀಮಂತ ವರ್ಗಗಳ ಪ್ರಭಾವ ಹಾಗೂ ಆಮಿಷಗಳ ಅಂಕುಶಗಳಿಗೆ ಒಳಗಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಇನ್ನೊಬ್ಬರ ಅಡಿಯಾಳಾಗಿ ಪ್ರಜಾಪ್ರಭುತ್ವದ ರಾಜಕಾರಣವನ್ನು ಹಾಳುಮಾಡುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆ ತರುತ್ತಿದಾರೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಹೇಳಿದರು.
ಪಟ್ಟಣದಲ್ಲಿ ನಡದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ಪ್ರಾಬಲ್ಯಕ್ಕಾಗಿ ಬದುಕಿನ ಅಸ್ಥಿರತೆ, ಅಶಾಂತಿ, ಗೊಂದಲಗಳು ಸ್ಥಷ್ಠಿಗೊಂಡು ನಿರುದ್ಯೋಗ, ಮತಧರ್ಮ ಸಂಸ್ಥೆಗಳ ದುರ್ಬಳಕೆ, ಶಿಕ್ಷಣದ ವೈರುಧ್ಯಗಳು, ವ್ಯಕ್ತಿ ಸಮಾಜದ ಮುಖಾಮುಖಿಯು ಮಾನವೀಯ ಸಂಬಂಧಗಳ ಅರ್ಥಹೀನತೆ ದಾರಿ ಕಾಣುತ್ತದೆ. ರಾಜಕೀಯ ಧುರೀಣರು ಕ್ರಿಯಾಶೀಲತೆಯನ್ನು ಪ್ರಕಟಗೊಳಿಸಿ ಸರಕಾರ ಮತ್ತು ಸಮುದಾಯ ಮಟ್ಟದಲ್ಲಿ ಮುಂದಾಲೋಚನೆಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ. ನಿರಪೇಕ್ಷ ಸೇವೆ ಮತ್ತು ಪ್ರೀತಿಯು ಬಾಳಿನಲ್ಲಿ ಮಿಂಚಿನಂತೆ, ಹೊಳೆದಾಗಲೇ ಸಾಹಿತ್ಯ ಸಂಕೀರ್ಣ ಶುರುವಾಗಿ ಜಗತ್ತಿನ ವೈರುಧ್ಯಗಳ ಸಂಘರ್ಷವನ್ನು ಬಿಂಬಿಸಿ ಬದುಕಿನ ಆಶಯವನ್ನು ಕಟ್ಟಿಕೊಡಲು ಪ್ರಾರಂಭಿಸುತ್ತದೆ. ಈಗೆ ಬದುಕು ಸಮುದಾಯಗಳ ಬಿನ್ನಭಿಪ್ರಾಯವಿದ್ದರೂ ವಿರೋಧದಿಂದ ಕೂಡಿರದೆ ಪ್ರಾಕೃತಿಕ ಸಂಪನ್ಮೂಲ ವಿತರಣೆ, ರಕ್ಷಣೆ ಮೊದಲಾದವನ್ನು ಎಲ್ಲರ ಅಭ್ಯುದಯಕ್ಕೆ, ಸುಖಕ್ಕೆ ಬಳಕೆ ಮಾಡುವ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗುವ ಆಲೋಚನೆಯೇ ಆಗಿರುತ್ತದೆ, ಹೀಗೆ ಜೀವನವನ್ನು ಹಲವು ಮಗ್ಗಲುಗಳಿಂದ ಕಂಡು, ಅನುಭವದ ದ್ರವ್ಯದಲ್ಲಿ ಅದ್ದಿ ಸಾಹಿತ್ಯ ಸೃಷ್ಠಿ ಮಾಡಬೇಕಾಗುತ್ತದೆ, ಈ ರೀತಿಯ ಸತ್ವಯುತ ಬರಹದಲ್ಲಿಯೇ ಸಾಹಿತಿ ಬದುಕನ್ನು ಬಿಂಬಿಸುವ ಕಾರ್ಯದಲ್ಲಿ ತೊಡಗುತ್ತಾ ಜೀವನ ಕಳೆಯುತ್ತಾನೆ ಎಂದ ಅವರು ಗ್ರಾಮೀಣ ಸೊಗಡಿನ ಜಾನಪದ, ಪಟ್ಟಣಗಳ ಶಿಷ್ಟ ಮಾತು ಹಾಗೂ ಸಂಸ್ಕೃತದ ಒಡನಟ ಹಾಗೂ ಪ್ರಭಾವ ಹಳಗನ್ನಡದ ಸಿರಿನುಡಿ, ಹೊಸಗನ್ನಡದ ಚೆಲುವು, ಕನ್ನಡ ಭಾಷೆಯಲ್ಲಿ ನುಡಿ ಸಂವಹನ ಹಾಗೂ ಬರಹ ಸಂವಹನ ಸೂಕ್ತ ರೀತಿಯಲ್ಲಿ ಸಜ್ಜುಗೊಳಿಸಿದ್ದು ಅದೇ ರೀತಿಯಲ್ಲಿ ನಮ್ಮ ಚಿಂತನಾ ಕ್ರಮ ಮತ್ತು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವ ಬಗೆಯೂ ಹೊಸತನ ಕಂಡುಕೊಂಡಿದೆ. ತಾಲ್ಲೂಕಿನಲ್ಲಿ ಕೈಮಗ್ಗ ನೇಕಾರಿಕೆ ಹಾಗೂ ಉಣ್ಣೆ ಕಂಬಳಿಯ ಉದ್ಯಮದ ಪ್ರಾಧನ್ಯತೆಯು ನಿರುದ್ಯೋಗ ಪ್ರಪಾತದಲ್ಲಿ ಸಿಲುಕಿ ನೇಕಾರಿಕೆ ಹಾಗೂ ಕಂಬಳಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಇದರಿಂದ ಆಥರ್ಿಕ ಪರಿಸ್ಥಿತಿಯನ್ನು ತಂದುಕೊಡಲು ಸಾಧ್ಯವಾಗದೆ ರಾಜಕಾರಣ ಮಾತ್ರ ಪಲ್ಲವದ ಚೈತ್ರದಂತೆ ಜನಮನವನ್ನು ಸಂಪೂರ್ಣ ತಟ್ಟಿದೆ ಎಂದರು.
ತಾಲ್ಲೂಕಿನ ಗಣಿ ಉದ್ಯಮ ಎರಡು ದಶಕಗಳಿಗೂ ಹೆಚ್ಚು ಕಾಲ ಇಲ್ಲಿನ ಗುಡ್ಡಗಳನ್ನು ಕಬಳಿಸಿ ಭೂ ಸಂಪತ್ತನ್ನು ಬರಿದುಮಾಡುವ ಮಟ್ಟಕ್ಕೂ ನಡೆದಿದೆ, ಗಣಿಗಾರಿಕೆಯ ಕಾರಣದಿಂದ ಉತ್ತಮ ರಸ್ತೆ ಮಾಡಲ್ಪಟ್ಟರೂ, ಧೂಳಿನ ಪರಿಸರ ಊರಿನ ಜನತೆಗೆ ದುಷ್ಪರಿಣಾಮವನ್ನು ಉಂಟುಮಾಡಿ ತಾಲ್ಲೂಕಿನ ನೈಸಗರ್ಿಕ ಸಂಪತ್ತನ್ನು ಹಾಳುಮಾಡುತ್ತಿದ್ದು ಪ್ರಜ್ಞಾವಂತರಾದ ಎಲ್ಲಾ ರಂಗದ ಧುರೀಣರು ಒಗ್ಗೂಡಿ ಗಣಿಗಾರಿಕೆಯ ಉತ್ಪನ್ನವನ್ನು ಸೂಕ್ತ ವಹಿವಾಟಿನ ಮೂಲಕ ಮಾರಾಟ ಯೋಜನೆಗೆ ಸೀಮಿತಗೊಳಿಸಲು ಸರಕಾರಕ್ಕೆ ನೆರವಾಗಬೇಕು ಎಂದರು.

ಚಿಕ್ಕನಾಯಕನಹಳ್ಳಿ, ಅನುಭವದ ಅಭಿವ್ಯಕ್ತಿಯೇ ಸಾಹಿತ್ಯವಾಗಿದ್ದು, ಸಾಹಿತ್ಯ ಎನ್ನುವುದು ಅನುಭವದ ಸಾರ ಆಗಿರಬೇಕು ಎಂದು ನಾಡಿನ ಪ್ರಸಿದ್ದ ಕವಿ ಡಾ.ಸಾ.ಶಿ.ಮರುಳಯ್ಯ ನುಡಿದರು.
ಅವರು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿನ ಅನುಭವವು ಸಾಹಿತ್ಯ ರಚಿಸುವ ಅಂಶ ಒಳಗೊಂಡಿದೆ, ಪ್ರತಿಯೊಬ್ಬರ ಅನುಭವದ ಬಗ್ಗೆ ಕುರಿತು ರಚಿಸುವವ ಸಾಹಿತ್ಯವು ಇನ್ನೊಬ್ಬರಿಗೆ ಆನಂದವನ್ನುಂಟು ಮಾಡುತ್ತದೆ. ಸಾಹಿತ್ಯವು ಸರ್ವರ ಸ್ವತ್ತಾಗಬೇಕಾಗಿದೆಯೇ ಹೊರತು ಯಾರೊಬ್ಬರ ಸ್ವತ್ತಾಗಬಾರದು ಎಂದರು. ಸ್ತ್ರೀಯರು ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಉನ್ನತ ಸಾಧನೆ ಮಾಡುತ್ತಲೇ ಬಂದಿದ್ದಾರೆ ಅವರಿಗೆ ಈಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುವವರಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ ಅಂತಹವರಿಗೆ ಸಾಹಿತ್ಯ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದ ಅವರು ನಮ್ಮ ಹೊಟ್ಟೆಯ ಮುಂದೆ ಯಾವ ಫಿಲಾಸಪಿಯೂ ಫಲ ಕೊಡುವುದಿಲ್ಲ, ಆದ್ದರಿಂದ ನಮ್ಮ ಹೊಟ್ಟೆಗೆ ಅನ್ನ ಕೊಡುವ ಕೃಷಿಕರನ್ನು ನೆನೆಯಬೇಕಿದೆ ಅವರ ಬಗ್ಗೆ ಮಾತನಾಡಬೇಕಿದೆ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಬಿಟ್ಟು ವಲಸೆ ಹೋಗುತ್ತಿದ್ದಾರೆ ನಿರುದ್ಯೋಗ ಸಮಸ್ಯೆಯೂ ಸ್ಥಷ್ಠಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ.ಪು. ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಇಂದು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪರಿಷತ್ತಿನ ಪಧಾಧಿಕಾರಿಳಿಗೆ ಮಾತ್ರ ಸೀಮಿತವಾಗಿರಬಾರದು ಅದು ಪ್ರತಿಯೊಬ್ಬ ಕನ್ನಡಿಗರೂ ಮುಂದೆ ಬಂದು ಸಾಹಿತ್ಯ ಚಟುವಟಿಕೆಗಳಿಗೆ ಮುಂದಾಗಿ ಕನ್ನಡ ಸಾಹಿತ್ಯವನ್ನು ಉಳಿಸವಂತಾಗುವುದು ಎಂದ ಅವರು ಈಗಿನ ಜಾಗತಿಕ ವೇದಿಕೆಯಲ್ಲಿ ಸಂಸ್ಕೃತಿಯನ್ನು ಯುವಕರೇ ಹಾಳುಮಾಡುತ್ತಿದ್ದಾರೆ, ಕಲಿಯಬಾರದ ವ್ಯಸನಗಳನ್ನೆಲ್ಲಾ ಕಲಿತು ತಮ್ಮ ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ಊರುಗಳಿಗೆ ಗುಳೇ ಹೋಗುತ್ತಾ ಅಲ್ಲಿನ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ಸಾಹಿತ್ಯ ಸಂಸ್ಕೃತಿಳನ್ನು ಮರೆಯುತ್ತಿದ್ದಾರೆ, ಇದರಿಂದಲೇ ಸಾಹಿತ್ಯವು ಈಗಿನ ಯುವಕರಲ್ಲಿ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದ್ದ ಕನ್ನಡ ಭಾಷೆಯು ಕಾನ್ವೆಂಟ್ ಶಾಲೆಗಳಿಂದ ಆಂಗ್ಲ ಭಾಷೆಗೆ ಮಾರುಹೋಗಿ ಕನ್ನಡ ಸಂಸ್ಕೃತಿ ನಾಶವಾಗುತ್ತಿದೆ, ಇದರಿಂದ ಸಾಹಿತ್ಯಾಸಕ್ತಿಯು ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಪೂರ್ಣಕುಂಭ, ದೊಳ್ಳುಕುಣಿತ, ನಾಸಿಕ್ಡೋಲ, ನಂದಿಧ್ವಜ, ಸೋಮನಕುಣಿತ, ತಮಟೆವಾಧ್ಯ, ಸೇರಿದಂತೆ ಅನೇಕ ಜನಪದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳಾದ ಲೋಹಿತಾಬಾಯಿ, ಸಿ.ಎಸ್.ನಟರಾಜು, ಸಿ.ಎಲ್.ದೊಡ್ಡಯ್ಯ, ಸಿ.ಟಿ.ಗುರುಮೂತರ್ಿ, ಸಿ.ಬಿ.ರೇಣುಕಸ್ವಾಮಿ, ಸೀಮೆಎಣ್ಣೆಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಎಂ.ಎನ್.ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಇ.ಒ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಪತ್ರಕರ್ತರಾದ ಜಿ.ಇಂದ್ರಕುಮಾರ್, ಚಿ.ನಿ,ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹಲವರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಉಪನ್ಯಾಸಕ ಕಣ್ಣಯ್ಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಇನ್ನರ್ವೀಲ್ ಕ್ಲಬ್ ಸದಸ್ಯರು ಕ್ನನಡಗೀತೆ ಹಾಡಿದರು. ಅಣ್ಣಪ್ಪರಾವ್ ವಂದಿಸಿದರು. ವೀಣಾಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿದರು.






ಚಿಕ್ಕನಾಯಕನಹಳ್ಳಿ,ಸೆ.19 : ನಮ್ಮ ಮಕ್ಕಳು ದೇಶದ ಪ್ರಜೆಯಾದರೆ ಸಾಲದು, ದೇಶ ರಕ್ಷಿಸುವಂತಹ ದೇಶಪ್ರೇಮಿಗಳಾಗಬೇಕು ಎಂದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಹೇಳಿದರು.
ಪಟ್ಟಣದ ಕಾಳಮ್ಮನ ಗುಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಡಿ,ಎಂ.ಸಿ ಮತ್ತು ಸಿ, ಎ, ಸಿ ,ಸದಸ್ಯರಿಗೆ ಸನಿವಾಸ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಉತ್ತಮ ವಿದ್ಯಾಭ್ಯಾಸ ಕಲಿತು ದೇಶದ ರಕ್ಷಣೆಯಂತಹ ಕಾರ್ಯಗಳಲ್ಲಿ ಭಾಗವಹಿಸಿಬೇಕು, ಹಲವಾರು ಸಂಘ ಸಂಸ್ಥೆಗಳು ದೇಶಪ್ರೇಮದ ಬಗ್ಗೆ ಉತ್ತಮ ತರಬೇತಿ ನೀಡುತ್ತಿದ್ದು ಮಕ್ಕಳು ಇದರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಉತ್ತಮ ವಿದ್ಯಾಭ್ಯಾಸದ ಬಗ್ಗೆ ಜವಾಬ್ದಾರಿ ವಹಿಸಿ ದೇಶ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳೆಂದು ಭಾವಿಸಿ ಅವರ ಭವಿಷ್ಯದ ಕಡೆ ಯೋಚಿಸಿ ಯಾವ ಮಗುವೂ ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಂಡು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗುವಂತೆ ಪ್ರೋತ್ಸಾಹಿಸಬೇಕು. ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ ಮಾಡಬೇಕು. ಶಾಲಾ ಮಕ್ಕಳ ಕಲಿಕೆ ಕುರಿತಂತೆ ಅಧ್ಯಾಪಕರೊಂದಿಗೆ ಚಚರ್ಿಸಿ ಉತ್ತಮಪಡಿಸಲು ಪ್ರಯತ್ನಿಸಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶಿಕ್ಷಣ ಸಂಯೋಜಕ ಮರುಳಾನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಯ್ಯ ಮಾತನಾಡಿದರು.
ಸಮಾರಂಭದಲ್ಲಿ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿ, ಮು.ಶಿ ಶಂಕರಪ್ಪ ವಂದಿಸಿದರು.



ಚಿಕ್ಕನಾಯಕನಹಳ್ಳಿ,ಸೆ.19 : ಲಂಬಾಣಿ ಸಮಾಜದ ತಮ್ಮದೇ ಆದ ಗುರುಪರಂಪರೆ ಸಂಸ್ಕೃತಿ ಇದ್ದು ಸಮಾಜ ಅಭಿವೃದ್ದಿ ಹೊಂದಲು ಶಿಕ್ಷಣ, ಸಂಸ್ಕಾರ, ಸ್ವಾಭಿಮಾನದಿಂದ ಬಾಳಬೇಕಾಗಿದೆ ಎಂದು ಚಿತ್ರದುರ್ಗದ ಸೇವಾಲಾಲ್ ಮಠದ ಸರದಾರ್ ಸೇವಾಲಾಲ್ ಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ಆಲದಕಟ್ಟೆ ತಾಂಡ್ಯದ ನೂತನ ಸೇವಲಾಲ್ ಪರಿಶಿಷ್ಠ ಜಾತಿ(ಲಂಬಾಣಿ) ವಿವಿದ್ದೋದ್ದೇಶ ಸಹಕಾರ ಸಂಘದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಪಾಲಿಸುವುದು ಲಂಬಾಣಿ ಜನಾಂಗದಲ್ಲಿ ಹೆಚ್ಚು, ನಮ್ಮಲ್ಲಿ ವ್ಯವಸಾಯ ವೃತ್ತಿ ಮಾಡುವವರೇ ಹೆಚ್ಚು, ದುಡಿದ ಹಣವನ್ನು ದುಶ್ಚಟಗಳಿಗೆ ವ್ಯಯಮಾಡದೆ ಸ್ವಲ್ಪ ಹಣ ಉಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ ಎಂದರು. ಜನಾಂಗದ ಮಹಿಳೆಯರು ಸಂಸ್ಕೃತವಂತರಾಗಿ ಅಡುಗೆ ಜೊತೆಯಲ್ಲಿ ಸಮಾಜ ಸೇವೆ ಮಾಡುವಂತೆ ಸಲಹೆ ನೀಡಿದರು. ನಮ್ಮ ಜನಾಂಗದ ವಿದ್ಯಾವಂತರು ಹಾಗೂ ಸಕರ್ಾರಿ ನೌಕರರು ತಮ್ಮ ತಾಂಡ್ಯಗಳಿಗೆ ಭೇಟಿ ನೀಡಿ ಅನಕ್ಷರಸ್ಥರಿಗೆ ತಿಳುವಳಿಕೆ ನೀಡಲು ಸಲಹೆ ನೀಡಿದರು.
ಜಿ.ಪಂ.ಸದಸ್ಯ ಲೋಹಿತಾಬಾಯಿ ಮಾತನಾಡಿ ಸಹಕಾರ ಮನೋಭಾವವನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಂಡು ದ್ವೇಶ, ಅಸೂಹೆಗಳಿಂದ ದೂರವಿದ್ದರೆ ಮಾತ್ರ ಸಮಾಜ ಉದ್ದಾರವಾಗಲಿದೆ, ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ನಮ್ಮ ಜನಾಂಗವನ್ನು ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಅಲ್ಪಸ್ವಲ್ಪ ಆಮಿಶ ಒಡ್ಡಿ ಮತ ಪಡದು ಕೈಬಿಡುತ್ತಾರೆ ಎಂದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ,ಸಹಕಾರ ಸಂಘಗಳು ನಮ್ಮದು ಎನ್ನುವ ಭಾವನೆ ಬಂದಾಗ ಮಾತ್ರ ಸಂಘಗಳು ಉಳಿಯಲು ಸಾಧ್ಯ ಎಂದರಲ್ಲದೆ, ್ನ ತೆಗೆದುಕೊಂಡ ಸಾಲವನ್ನು ಸರಿಯಾಗಿ ಪಾವತಿಸಿ ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸವುಂತೆ ತಿಳಿಸಿದರು.
ಸಮಾರಂಭದಲ್ಲಿ ಬಿ.ವೆಂಕಟೇಶ್ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಕೈಗಾರಿಕೋದ್ಯಮಿ ಟಿ.ಜಿ.ತಿಮ್ಮಯ್ಯ, ಆಲದಕಟ್ಟೆ ಶ್ರೀರಂಗನಾಯಕ, ಮಾಜಿ ತಾ.ಪಂ.ಉಪಾಧ್ಯಕ್ಷ ಕಮಲಾನಾಯಕ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರುಗಳಾದ ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಗ್ರಾ.ಪಂ.ಸದಸ್ಯರಾದ ನಾಗರಾಜನಾಯ್ಕ, ರಂಗಮ್ಮ ವೆಂಕಟೇಶ್, ವಿನೋದಬಾಯಿ ರಾಜಾನಾಯಕ, ಕರಿಯಮ್ಮರಾಮಚಂದ್ರನಾಯಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಮಲಾನಾಯಕ ಸ್ವಾಗತಿಸಿದರು. ರಾಮಚಂದ್ರನಾಯಕ ನಿರೂಪಿಸಿದರು.


ರಾಜ್ಯ ವೀರಶೈವ ವೇದಿಕೆಯ ಸೆ.26ರಂದು ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಸೆ.19 : ವೀರಶೈವ ಸಮಾಜದ ಸಂಘಟನೆಯನ್ನು ಮನೆ ಮನೆ ಹಾಗೂ ಹಳ್ಳಿಗಳಿಂದ ಸಂಘಟನೆ ಮಾಡಲು ಕನರ್ಾಟಕ ರಾಜ್ಯ ವೀರಶೈವ ವೇದಿಕೆ ತೀಮರ್ಾನಿಸಿದೆ ಎಂದು ರಾಜ್ಯಧ್ಯಾಕ್ಷ ಶಿವಮಹದೇವಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪ ಉಚಿತ ವಿದ್ಯಾಥರ್ಿನಿಲಯಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಬಡವಿದ್ಯಾಥರ್ಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುವುದು, ಬಸವ ಜಯಂತಿ ಹಾಗೂ ಶರಣರ ಜಯಂತಿ ಸೇರಿದಂತೆ ಶಾಲಾ ಮಕ್ಕಳಿಗೆ ಚಚರ್ಾ ಸ್ಪಧರ್ೆ, ಪ್ರಭಂದ ಸ್ಪಧರ್ೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳನ್ನು ನಡೆಸಲಾಗುವುದು ಹಾಗೂ ಸ್ಮಧರ್ಾತ್ಮಕ ಪರೀಕ್ಷೆ, ಉದ್ಯೋಗಕ್ಕೆ ಸಲಹೆ, ಗಾಂಧೀ ಜಯಂತಿ, ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದರು. ಈ ಸಂಘಟನೆಯ ರೂಪರೇಷೆ ಹಾಗೂ ಸಂಘದ ಸಂಘಟೆನಯ ಬಗ್ಗೆ ಚಚರ್ಿಸಲು ಇದೇ 26ರಂದು ಪಟ್ಟಣದ ಎಸ್.ಎಂ.ಎಸ್. ಶಾಲೆಯ ಆವರಣಲದಲ್ಲಿ ಬೆಳಗ್ಗೆ 10.30ಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿಯವರ ಸಾನಿಧ್ಯದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಗಂಗಾಧರ, ತೋಟರಾಧ್ಯ ಉಪಸ್ಥಿತರಿದ್ದರು.

Wednesday, September 14, 2011

ಪದವೀಧರ ಸಹಕಾರ ಸಂಘಕ್ಕೆ ಚಾಲನೆ :ಕ್ಯಾಪ್ಟನ್ ಸೋಮಶೇಖರ್ಚಿಕ್ಕನಾಯಕನಹಳ್ಳಿ,ಸೆ.14 : ತಾಲ್ಲೂಕು ಪಧವೀದರರ ಪತ್ತಿನ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತರಲು ಯೋಜಿಸಲಾಗುತ್ತಿದೆ ಎಂದು ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ. ಪಟ್ಟಣದ ರೋಟರಿ ಬಾಲಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಉದ್ದೇಶಿತ ಸಹಕಾರ ಸಂಘಕ್ಕೆ 500ರಿಂದ 600 ಜನ ಷೇರುದಾರರನ್ನು ಹೊಂದುವ ಉದ್ದೇಶವಿದ್ದು ಪ್ರತಿ ಷೇರಿಗೆ 1200 ರೂ ಷೇರು ಧನವಾಗಿ ಸಂಗ್ರಹಿಸಲಾಗುವುದು ಎಂದರಲ್ಲದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೊತೆಗೆ ಬಿಳಿಗೆರೆ ಹಾಗೂ ಬುಕ್ಕಾಪಟ್ಟಣವನ್ನು ನಮ್ಮ ಷೇರುದಾರರ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುವುದು ಎಂದರು.ನಮ್ಮ ಈ ಸಹಕಾರ ಸಂಘದಲ್ಲಿ 10ಜನ ಪ್ರಮೋಟರ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು. ಹೆಚ್ಚಿನ ವಿವರಗಳಿಗೆ ಕ್ಯಾಪ್ಟನ್ ಸೋಮಶೇಖರ್ ರವರನ್ನು 9448175389 ಇಲ್ಲಿ ಸಂಪಕರ್ಿಸಲು ಕೋರಲಾಗಿದೆ.

Tuesday, September 13, 2011



ಸಮ್ಮೇಳನದಲ್ಲಿ ವಿವಿದ ಗೋಷ್ಠಿ, ಉಪನ್ಯಾಸಗಳುಚಿಕ್ಕನಾಯಕನಹಳ್ಳಿ,ಸೆ.13: ತಾಲ್ಲೂಕಿನಲ್ಲಿ ಇದೇ 17ರಂದು ನಡೆಯುವ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 12.45ಕ್ಕೆ ವಿಶೇಷ ಉಪನ್ಯಾಸ -ಗೋಷ್ಠಿ 1, ತಾಲ್ಲೂಕಿನ ಮರೆಯಲಾರದ ಮಹಾನುಭಾವರು ವಿಷಯದಡಿ ಹಿರಿಯ ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ, ಹರಿದಾಸ ಸಾಹಿತ್ಯದ ಅಗ್ರಗಣ್ಯ ಚಿ.ನಾ.ಹಳ್ಳಿಯ ವೆಂಕಟದಾಸರು ಬಗ್ಗೆ ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕಲಾತಪಸ್ವಿ ಬಿ.ಕೆ.ಈಶ್ವರಪ್ಪನವರ ಬಗ್ಗೆ ತಾ. ಎರಡನೇ ಕಸಾಪ ಸಮ್ಮೇಳನಾಧ್ಯಕ್ಷ ಆರ್.ಬಸವರಾಜು ಮಾತನಾಡಲಿದ್ದು , ವಿಶೇಷ ಆಹ್ವಾನಿತರಾಗಿ ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ದಲಿತ ಮುಖಂಡ ಚನ್ನಬಸವಯ್ಯ ಬೇವಿನಹಳ್ಳಿ ಉಪಸ್ಥಿತರಿರುವರು. ಇದೇ ಸಮಯದಲ್ಲಿ ಪ್ರೊ.ಲಿಂಗದೇವರು ಹಳೆಮನೆ ಒಂದು ನೆನಪು ಕಾರ್ಯಕ್ರಮವನ್ನು ಪ್ರೊ.ಕೃಷ್ಣಮೂತರ್ಿ ಬಿಳಿಗೆರೆ ನಡೆಸಿಕೊಡುವರು. ಮಧ್ಯಾಹ್ನ 2.45ಕ್ಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ದರ್ಶನ-ಗೋಷ್ಠಿ2 ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕೃಷಿ ಪರಿಸರದ ಬಗ್ಗೆ ಕೃಷಿ ತಜ್ಞ ಪ್ರೊ.ಜಿ.ಶಿವನಂಜಯ್ಯ ಬಾಳೆಕಾಯಿ ಮಾತನಾಡಲಿದ್ದು ಪ್ರೊ.ಕೆ.ಸಿ.ಬಸಪ್ಪ ಪ್ರಚಲಿತ ಪೇಟೆ ವ್ಯವಸ್ಥೆಯಲ್ಲಿ ಚಿ.ನಾ.ಹಳ್ಳಿ ತಾಲ್ಲೂಕನ್ನು ಸಜ್ಜುಗೊಳಿಸುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಮಾತನಾಡುವರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ತಾಲ್ಲೂಕಿನ ಜೀವವೈವಿಧ್ಯಗಳು ಬಗ್ಗೆ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆಯ ಸಾ.ಚಿ.ರಾಜಕುಮಾರ್ ತಾಲ್ಲೂಕಿನ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಮಾತನಾಡುವರು.ವಿಶೇಷ ಆಹ್ವಾನಿತರಾಗಿ ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಎಂ.ಬಿ.ಶಿವಕುಮಾರ್, ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್ ಉಪಸ್ಥಿತರಿರುವರು. ಸಂಜೆ 5ಕ್ಕೆ ಕವಿ ಮಿಲನ ಗೋಷ್ಠಿ-3 ಕಾರ್ಯಕ್ರಮವಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಪ್ರಸೂತಿ ತಜ್ಞ ಡಾ.ರಮೇಶ್ ಸಿಂಗಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕ.ಸಾ.ಪ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮರಿದೇವರು ಟಿ.ಎಲ್.ರಂಗನಾಥಶೆಟ್ಟಿರವರ ಕಾವ್ಯಶ್ರೀ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಮು.ಸಂಘದ ಅಧ್ಯಕ್ಷ ಕೃಷ್ಣಯ್ಯ, ರಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಶಿ.ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ತಾ.ಶಿ.ಶಿ.ಸಂಘದ ಬಿ.ಎಲ್.ಬಸವರಾಜು ಹಾಗೂ ಹಲವರು ಕವಿಗಳು ಭಾಗವಹಿಸುವರು.

Friday, September 9, 2011

ಶಾಲೆಗೊಂದು ವನ ಕಾರ್ಯಕ್ರಮದ ಅನುಷ್ಠಾನ ತೃಪ್ತಿದಾಯಕವಾಗಿಲ್ಲಚಿಕ್ಕನಾಯಕನಹಳ್ಳಿ,ಸೆ.09 : ಸಕರ್ಾರ ಜಾರಿಗೆ ತಂದಿರುವ ಶಾಲೆಗೊಂದು ವನ ಕಾರ್ಯಕ್ರಮ ಯಶಸ್ವಿಯಾಗದ ಬಗ್ಗೆ ಆಕ್ಷೇಪಿಸಿದ ಅವರು ಶಾಲೆಗಳಲ್ಲಿ ಸಣ್ಣದೊಂದು ಉದ್ಯಾನವನದಂತೆ ಸಸಿಗಳನ್ನು ನೆಟ್ಟು ಯಶಸ್ವಿಗೊಳಿಸಲು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಸೂಚಿಸಿದರು. ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾ.ಪಂ.ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಪಶು ಇಲಾಖೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪ್ರತಿಬಾರಿ ಆಕ್ಷೇಪಣೆಗಳು ಕೇಳಿಬರುತ್ತಿದ್ದು ಇದರ ಬಗ್ಗೆ ಗಮನ ಹರಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಕರ್ಾರಿ ಕಾರ್ಯಕ್ರಮಗಳು, ಉದ್ಘಾಟನೆಗೊಳ್ಳುವ ಹಲವು ಸಮಾರಂಭಗಳನ್ನು ಏರ್ಪಡಿಸುವ ಮುನ್ನ ತಹಶೀಲ್ದಾರ್, ತಾ.ಪಂ.ಅಧ್ಯಕ್ಷರು, ಆ ಕ್ಷೇತ್ರಕ್ಕೆ ಸಂಭಂದಪಟ್ಟ ಜನಪ್ರತಿನಿಧಿಗಳಿಗೆ ಖಡ್ಡಾಯವಾಗಿ ತಿಳಿಸಿ ಆನಂತರ ಕಾರ್ಯಕ್ರಮ ಏರ್ಪಡಿಸಬೇಕೆಂದು ತಾಲ್ಲೂಕು ಇಲಾಖಾಧಿಕಾರಿಗಳಿಗೆ ಇ.ಓ.ಎನ್.ಎಂ.ದಯಾನಂದ್ ಸೂಚಿಸಿದರು.ತಾಲ್ಲೂಕಿನ ಇಲಾಖಾಧಿಕಾರಿಗಳು ತಮಗೆ ಬೇಕಾದಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳಿಗೆ, ತಮ್ಮ ಮೇಲಾಧಿಕಾರಿಗೆ ಕಾರ್ಯಕ್ರಮಗಳ ಬಗ್ಗೆ ತಿಳಿಸದೆ ಇಲಾಖಾ ಸಮಾರಂಭಗಳನ್ನು ಏರ್ಪಡಿಸಿ ಸಮಾರಂಭ ಕೆಲವು ದಿನಗಳಿವೆ ಎಂದಾಗ ತಿಳಿಸಲು ಬರುತ್ತಾರೆ ಎಂದು ಆರೋಪಿಸಿದ ಅವರು, ಈ ರೀತಿಯ ಕಾರ್ಯಗಳು ನಡೆಯಬೇಕಾದರೆ ಮುಂಚಿತವಾಗಿ ತಹಶೀಲ್ದಾರ್ರವರಿಂದ ಮೊದಲು ಅನುಮತಿ ಪಡೆದು ನಂತರ ಶಾಸಕರಿಂದ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಿ, ಸಮಾರಂಭ ನಡೆಯುವ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಆನಂತರ ಸಮಾರಂಭವನ್ನು ಏರ್ಪಡಿಸಿ ಶಿಷ್ಠಾಚಾರ ಪಾಲಿಸಬೇಕು ಎಂದು ತಿಳಿಸಿದರು.ತೋಟಗಾರಿಕೆಯ ವ್ಯಾಪ್ತಿಯಲ್ಲಿ ಕೆಂಪುಮೂತಿ ಹುಳುವಿನಿಂದ ತೆಂಗಿನ ಬೆಳೆಗೆ ಹಾನಿಯುಂಟಾಗುತ್ತಿದ್ದು ತಾಲ್ಲೂಕಿನಲ್ಲಿ ಈಗಾಗಲೇ ಹಳ್ಳಿಕೆರೆಪುರ, ಸೊಂಡೇನಹಳ್ಳಿ ಗ್ರಾಮಗಳಲ್ಲಿ 25ಎಕರೆಯಷ್ಟು ಬೆಳೆಯು ಹುಳುವಿನಿಂದ ನಾಶವಾಗಿದ್ದು ಇದರ ಬಗ್ಗೆ ಜನಜಾಗೃತಿಯನ್ನು ಹಮ್ಮಿಕೊಳ್ಳುವುದಾಗಿ ಹಾಗೂ ಕೆಂಪುಮೂತಿ ಹುಳುವಿನಿಂದ ಬೆಳೆಯಲ್ಲಿ ಏರುಪೇರು ಉಂಟಾದರೆ ಹೋಬಳಿ ಮಟ್ಟದಲ್ಲಿ ಸಹಾಯಕ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರೆ ಇದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ತೋಟಗಾರಿಕಾ ಇಲಾಖಾಧಿಕಾರಿ ತಿಳಿಸಿದರು.ಸಮಾರಂಭದಲ್ಲಿ ತಾ.ಪಂ.ಅದ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್ ಹಾಗೂ ತಾಲ್ಲೂಕು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Thursday, September 8, 2011







ಸೆ.17 ರಂದು ಚಿ.ನಾ.ಹಳ್ಳಿ ನಾಲ್ಕನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಸೆ.08 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಇದೇ 17ರ ಶನಿವಾರ ಬೆಳಗ್ಗೆ 08.15 ಆರಂಭಗೊಳಲಿದೆ, ಸಮ್ಮೇಳನಾಧ್ಯಕರಾದ ಪ್ರೊ.ನಾ.ದಯಾನಂದರವರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವೈವಿಧ್ಯಮ ಗೋಷ್ಠಿಗಳು, ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8.15ಕ್ಕೆ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅರಳೇಪೇಟೆ, ನೆಹರು ಸರ್ಕಲ್, ತಾತಯ್ಯನ ಗೋರಿ ಮಾರ್ಗವಾಗಿ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಅವರನ್ನು ಮೆರವಣಿಗೆಯಲ್ಲಿ ಬಯಲು ರಂಗಮಂದಿರಕ್ಕೆ ಕರೆತರಲಾಗುವುದು. ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಬಸವರಾಜಪ್ಪ ನೆರವೇರಿಸುವರು ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಪುರಸಭಾ ಸದಸ್ಯರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಹಾಜರಿರುವರು. . ಬೆಳಗ್ಗೆ 10.45ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಕವಿ ಡಾ.ಸಾ.ಶಿ.ಮರುಳಯ್ಯ ಸಮ್ಮೇಳನವನ್ನು ಉದ್ಘಾಟಿಸುವರು. ತಾಲ್ಲೂಕಿನ 3ನೇ ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಂ.ವಿ.ನಾಗರಾಜ್ರಾವ್ ನಿಕಟಪೂರ್ವ ಅಧ್ಯಕ್ಷರ ನುಡಿಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವರು.ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪ-ಸಿ.ಡಿ ಬಿಡುಗಡೆ ಮಾಡಲಿದ್ದು ಹಿರಿಯ ಸಾಹಿತಿ ಡಾ.ಅಬ್ದುಲ್ ಹಮೀದ್ ಪುಸ್ತಕ ಮಳಿಗೆಗಳ ಉದ್ಗಾಟನೆ ನೆರವೇರಿಸಲಿದ್ದು ಕವಿ ಹಾಗೂ ಲೇಖಕ ಪ್ರೊ.ನಾ.ದಯಾನಂದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರತ್ನರಾವ್, ಜಯಮ್ಮ, ಭಾರತಿ ನಟರಾಜ್, ಸರಸ್ವತಮ್ಮ, ಪದ್ಮವರದರಾಜು, ಸುಲೋಚನಮ್ಮ, ಜಯಮ್ಮ ವೇದಮೂತರ್ಿ, ನಾಗರಾಜು, ಲಕ್ಕಮ್ಮ, ಬೆನಕನಕಟ್ಟೆ ಬಿ.ಪಿ.ಚನ್ನಪ್ಪ, ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಜೋಡಿಕಲ್ಲೇನಹಳ್ಳಿಶಿವಪ್ಪ, ಅನ್ಸರ್ಪಾಷ, ಕೆ.ಎನ್.ಶಂಕರಲಿಂಗಯ್ಯ, ಬಿ.ಎಲ್.ಪಂಕಜ ಚಂದ್ರಶೇಖರ್, ರಂಗಪ್ಪ ಇವರುಗಳನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಗ್ರಾಮೀಣ ವಿಭಾಗದ ಅಧ್ಯಕ್ಷ ಜಿ.ಇಂದ್ರಕುಮಾರ್ ಹಾಗೂ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ.ಲಲಿತ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್.ಬಸವರಾಜ್ರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು, ಎಂ.ವಿ.ನಾಗರಾಜರಾವ್ರವರ ಸಾವಿರಾರು ನುಡಿಮುತ್ತುಗಳು, ಸೂಕ್ತಿಕೋಶ, ಪ್ರೊ. ನಾ.ದಯಾನಂದರವರ ಜಂಗಮ ಮಂಡೆವಿಶೇಷ ಆಹ್ವಾನಿತರಾಗಿ ತಾ.ಪಂ.ಇಓ ಎನ್.ಎಂ.ದಯಾನಂದ್, ಟಿ.ಸಿ.ಕಾಂತರಾಜು, ಬಿಇಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ಬೆಂಗಳೂರಿನ ಹೇಮಂತ ಸಾಹಿತ್ಯದ ವೆಂಕಟೇಶ್, ಕೈಗಾರಿಕೋದ್ಯಮಿ ಎನ್.ಎಂ.ಶಿವಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಪಾಲ್ಗೊಳ್ಳುವರು.
ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರವನ್ನಾಗಿಸಿಕೊಂಡಿದ್ದವರು, ಈಗ ಎ.ಟಿ.ಎಂ.ನ್ನಾಗಿಸಿಕೊಂಡಿದ್ದಾರೆ.ಚಿಕ್ಕನಾಯಕನಹಳ್ಳಿ,ಸೆ.8 : ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿಸಿಕೊಂಡಿದ್ದ ಕೆಲವು ಗಂಡಸರು, ಈಗ ಸ್ತ್ರೀಶಕ್ತಿ ಸಂಘದಿಂದ ಹಣವನ್ನು ತಂದುಕೊಡುವ ಎ.ಟಿ.ಎಂ.ಗಳನ್ನಾಗಿಸಿಕೊಂಡಿರುವ ಬಗ್ಗೆ ಮಹಿಳೆಯರು ಜಾಗೃತಿವಹಿಸಬೇಕೆಂದು ಪುರಸಭಾ ಸದಸ್ಯೆ ಸಿ.ಎಂ.ರೇಣುಕಮ್ಮ ಹೇಳಿದರು.ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಸ್ಥಳೀಯ ಗ್ರಾಮಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊಟಮ್ಮನವರು ಅಂದು ಸ್ಥಾಪಿಸಿದ ಸ್ತ್ರೀಶಕ್ತಿ ಸಂಘಗಳಿಂದ ಇಂದು ಕೆಲವು ಜನ ಗಂಡಸರು ಸಂಘದಿಂದ ತರುವ ಹಣವನ್ನು ಉಪಯೋಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ, ಇನ್ನೂ ಕೆಲವು ದಂಪತಿಗಳು ಕಷ್ಟದ ದುಡಿಮೆಯಿಂದ ಹಾಗೂ ಬುದ್ದಿವಂತಿಕೆಯಿಂದ ಬದುಕು ನಡೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಇಂದಿನ ಯುಗಕ್ಕೆ ತಕ್ಕಂತೆ ಬದುಕುತ್ತಿರುವದನ್ನು ಸಹಿಸದ ಕೆಲವು ಕುಹಿಕಿಗಳು ಟೀ ಅಂಗಡಿ ಮುಂದೆ ಕುಳಿತು ಒಳ್ಳೆ ಬಟ್ಟೆಯನ್ನು ಹಾಕಿಕೊಂಡು ಹೋಗುವವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿಕೊಂಡು ಅವಹೇಳನ ಮಾಡುವುದು ತರವಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ಪುರುಷರು ಮತ್ತು ಮಹಿಳೆಯರು ಪ್ರತಿ ಒಂದು ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ನೆರವಾದರೆ ಸಮಾಜ ಮುಂದೆ ಬರುತ್ತದೆ, ಒಬ್ಬ ಪುರುಷನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯರ ಯಶಸ್ಸಿನ ಹಿಂದೆ ಪುರುಷನು ಇರುತ್ತಾರೆ ಎಂದು ಹೇಳಿದರು. ಗಂಡು ಹೆಣ್ಣು ಸಮಾನವಾಗಿ ಯೋಚಿಸುವ ಕುಟುಂಬಗಳು ಸುಖವಾಗಿವೆ, ಅಂತಹ ಕುಟುಂಬದ ಮಕ್ಕಳು ಒಳ್ಳೆಯ ಬದುಕನ್ನು ರೂಢಿಸಿಕೊಳ್ಳುತ್ತಾರೆ. ಇಲ್ಲಿ ಯಾರು ಮೇಲಲ್ಲ, ಯಾರೂ ಕೀಳು ಅಲ್ಲ ಸಮರಸವೇ ಜೀವನವೆಂಬುದನ್ನು ಅರಿತು ಬಾಳಬೇಕೆಂದರು. ಜ್ಞಾನನಿಧಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಜಿ ರಾಜ್ ಮಾತನಾಡಿ ಮಹಿಳೆಯರು ಸಂಘಗಳಿಗೆ ಸೇರಿ ಉಳಿತಾಯದ ಮನೋಭಾವನೆಯನ್ನು ಅರಿತುಕೊಂಡವರ ಜೀವನ ಸುಧಾರಿಸುತ್ತಿದ್ದಾರೆ ಎಂದರು. ಮಹಿಳೆಯರು ಒಗ್ಗಟ್ಟಾಗಿ ತಮ್ಮ ಸಂಘದ ಬಗ್ಗೆ ಇರುವ ಸಮಸ್ಯೆಯನ್ನು ಕೂತು ಪರಿಹರಿಸಿಕೊಳ್ಳಬೇಕೆಂದರಲ್ಲದೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಾಟೆ ಮಾಡಿಕೊಳ್ಳಬೇಡಿ, ತಮ್ಮ ಸಂಘದಿಂದ ಸಾಲವನ್ನು ಪಡೆದು ಸಣ್ಣ ಪುಟ್ಟ ವ್ಯಾಪಾರ ಮಾಡಿ ಆಥರ್ಿಕವಾಗಿ ಸದೃಡವಾಗಿ ಎಂದು ಹೇಳಿದ ಅವರು, ಹಿಂದೆ ಗಂಡಸರು ದುಡಿಮೆ ಮಾಡಿಕೊಂಡು ಬಂದರೆ ಜೀವನ ನಡೆಯುತ್ತಿತ್ತು ಇಲ್ಲವಾದರೆ ತುತ್ತು ಅನ್ನಕ್ಕೂ ಬಡತನವಿತ್ತು ಆದರೆ ಈಗ ಮಹಿಳೆಯರು ಸಂಸಾರದ ಜವಾಬ್ದಾರಿ ಹೊತ್ತು ವ್ಯವಹಾರದೊಂದಿಗೆ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದಾರೆ ಎಂದರು. ಧರ್ಮಸ್ಥಳ ಕ್ಷೇಮಾಭಿವೃದ್ದಿ ಯೋಜನಾಧಿಕಾರಿ ಲೋಹಿತಾಶ್ವ ಮಾತನಾಡಿ ಮಹಿಳೆಯರಿಗೆ ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇದ್ದರೆ ನಮ್ಮ ಸ್ವಯಂಸೇವಕರು ಪ್ರತಿ ಸಂಘದಲ್ಲೂ ಇರುತ್ತಾರೆ ಅವರ ಬಳಿ ಮಾಹಿತಿ ಪಡೆದು ಯೋಜನೆಯ ಉಪಯೋಗ ಪಡೆದುಕೊಳ್ಳಿ ಎಂದ ಅವರು ಸ್ವಸಹಾಯ ಸಂಘಗಳು ಒಂದುಗೂಡಿ ಯೋಜನೆಯ ಬಗ್ಗೆ ಇತರರಿಗೆ ತಿಳಿಸುತ್ತಾ ತಾವು ಅಭಿವೃದ್ದಿ ಹೊಂದಲು ಕರೆ ನೀಡಿದರು.ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ರುಕ್ಮಿಣಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ರವಿಕುಮಾರ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಮಾಳಿಗೆಮನೆಯಿಂದ ಮಾನಸಗಂಗೋತ್ರಿಯವರಿಗೆ ಏರಿಬಂದವರು ಡಾ.ರಾಧಾಕೃಷ್ಣನ್ಚಿಕ್ಕನಾಯಕನಹಳ್ಳಿ,ಸೆ.08 : ನಮ್ಮ ದೇಶ ಗುರುಪರಂಪರೆಯಿಂದ ಕೂಡಿದ್ದು ಆ ಪರಂಪರೆಯ ಶಿಕ್ಷಣವೆಂಬ ಸೌರವ್ಯೂಹದಲ್ಲಿ ತಿರುಗುವ ಮಿನುಗುತಾರೆ ಶಿಕ್ಷಕ, ಅವನು ವ್ಯಕ್ತಿಯ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತಾ ತನ್ನ ಕಾರ್ಯ ಮುಂದುವರಿಸುತ್ತಾನೆ ಎಂದು ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ರಾಜಕುಮಾರ್ ಹೇಳಿದರು.ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಡಾಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಷಯ ಜ್ಞಾನವನ್ನು ಪಡೆದವನು ಶಿಕ್ಷಕ, ಮಾಳಿಗೆಯ ಮನೆಯಿಂದ ಮಾನಸಗಂಗೋತ್ರಿಯವರೆಗೆ ಏರಿ ಬಂದವರು ರಾಧಾಕೃಷ್ಣನ್, ಯುವ ಶಕ್ತಿಯನ್ನು ಒಗ್ಗೂಡಿಸಿ ರಾಷ್ಟ್ರ ಕಟ್ಟಿದವರಾಗಿ, ಶಿಕ್ಷಕರಾಗಿ ಉಪಕುಲಪತಿಯಾಗಿ ದೇಶದ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ, ದೇಶವಿದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಪಸರಿಸಿದ ದಷ್ಟಾರಾಗಿ ಎತ್ತರಕ್ಕೆ ಏರಿದವರು ಡಾ ಎಸ್.ರಾಧಾಕೃಷ್ಣನ್. ವಿದ್ಯಾಥರ್ಿಗಳು ಸಮುದಾಯದ ಎಲ್ಲರೊಂದಿಗೆ ಬೆರೆಯುವಂತಾಗಬೇಕು ಮಾನವ ಜನಾಂಗವನ್ನು ಕಟ್ಟುವ ಕೆಲಸ ಶಿಕ್ಷಕರಿಂದ ಆಗಬೇಕೆಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕೆ.ಸಿ. ಬಸಪ್ಪನವರು ಮಾತನಾಡಿ ಜಗತ್ತಿಗೆ ಕನಸುಗಳನ್ನು ಮಾರಾಟ ಮಾಡುವವನೆ ಶಿಕ್ಷಕ, ಶಿಕ್ಷಕ ಕಲಾಕೃತಿಯಾಗಿ ಉಳಿಯಬೇಕು, ನಿಷ್ಠೆ ಸ್ವಯಂಸಿದ್ದತೆ ತಾನು ತಿಳಿದದ್ದನ್ನೆಲ್ಲಾ ವಿದ್ಯಾಥರ್ಿಗಳಿಗೆ ತಿಳಿಸುವನಾಗಬೇಕು. ಅನ್ವಯತೆಯನ್ನು ಚಲನಶೀಲವನ್ನಾಗಿಸಿಕೊಳವುದೇ ಶಿಕ್ಷಕ ಸಮುದಾಯ ಎಂದು ನುಡಿದ ಅವರು ಜಗತ್ತಿನ ಯಾವ ಶಕ್ತಿಯು ಶಿಕ್ಷಕ ಶಕ್ತಿಗೆ ಸಮನಾಗಲಾರದು. ಶಿಕ್ಷಕ ಏನು? ಎಲ್ಲಿದೆ? ಎಂಬ ಪ್ರಶ್ನೆಗಳ ಮೂಲಕ ಒಬ್ಬ ವ್ಯಕ್ತಿಯನ್ನು ಬೆಳಸುವವನು. ಶಿಕ್ಷಕ ಅನುಮಾನಗಳನ್ನು ಪರಿಹರಿಸುವವನಾಗಬೇಕು ಶಿಕ್ಷಕ ಹಣದ ದಾಹವನ್ನು ಬಿಟ್ಟು ಜ್ಞಾನ ನೀಡುವವನಾಗುವ ಜೊತೆಗೆ ನಿರಂತರವಾದ ಅಧ್ಯಯನಶೀಲನಾಗಿ ವಿಷಯಗಳನ್ನು ಅನ್ವಯಶೀಲಗೊಳಿಸಬೇಕು. ವಿದ್ಯಾಥರ್ಿಗಳು ನಿರಂತರವಾಗಿ ಜ್ಞಾನದಾಹಿಗಳಾಗಬೇಕು ಆಗ ಮಾತ್ರ ಈ ಆಚರಣೆ ಅರ್ಥ ಪೂರ್ಣ ಎಂದರು. ಉಪನ್ಯಾಸಕ ಪ್ರೊ.ಆರ್.ಎಂ. ಶೇಖರಯ್ಯ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿ ಡಾಎಸ್. ರಾಧಾಕೃಷ್ಣನ್ ಅವರ ಆದರ್ಶಗಳು ಬದುಕಿಗೆ ಇಂಬು ನೀಡಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಪ್ರೊ. ಬಿ.ಎಸ್. ಬಸವಲಿಂಗಯ್ಯ ಉಪಸ್ಥಿತರಿದ್ದರು.

Monday, September 5, 2011







ಮೌಢ್ಯತೆಯಿಂದ ದೂರವಾಗಿ, ಶಿಕ್ಷಣ ಪಡೆಯುವುದರೊಂದಿಗೆ ಮುಖ್ಯವಾಹಿನಿಗೆ ಬನ್ನಿ
ಚಿಕ್ಕನಾಯಕನಹಳ್ಳಿ,ಸೆ.05 : ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವ ಮೂಲಕ ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ಸಮಾಜದ ಮಕ್ಕಳನ್ನು ಅಣಿಗೊಳಿಸುವ ಮೂಲಕ ಭವಿಷ್ಯದ ಯಾದವ ಸಮಾಜವನ್ನು ಕಟ್ಟಲು ಮುಂದಾಗಿರಿ ಎಂದು ಚಿತ್ರದುರ್ಗ ಕೃಷ್ಣ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣಯಾದವಾನಂದಸ್ವಾಮಿ ಹೇಳಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಯಾದವ ವಿದ್ಯಾಥರ್ಿ ನಿಲಯದ ಶಂಕುಸ್ಥಾಪನೆ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಮೌಢ್ಯತೆ ಆವರಿಸಿಕೊಂಡಿರುವ ಈ ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುವ ಜೊತೆಗೆ ಶಿಕ್ಷಣದಿಂದ ಅಭಿವೃದ್ದಿ ಹೊಂದಿರುವ ಯುವಕ ಪಡೆಯನ್ನು ಮಾದರಿಯಾಗಿಟ್ಟುಕೊಂಡು ಸಮಾಜವನ್ನು ಕಟ್ಟಲು ಅಣಿಯಾಗುವುದಾಗಿ ತಿಳಿಸಿದ ಅವರು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗುವ ಮೂಲಕ ಸಂಘ ಶಕ್ತಿಯನ್ನು ಪ್ರದಶರ್ಿಸುವ ಕಾಲ ಬಂದೊದಗಿದೆ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಸಮಾಜವನ್ನು ಕಟ್ಟಲು ಶ್ತಮಿಸುತ್ತೇನೆ ಎಂದರು. ಹಾಸ್ಟಲ್ ಕಟ್ಟಲು ಶಾಸಕರಾದ ಸಿ.ಬಿ.ಸುರೇಶ್ ಬಾಬು ಮೂರು ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದ್ದು ಅವರ ಸಕರ್ಾರಿ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಕೊಡುವಂತೆ ಕೋರಲಾಗುವುದು ಎಂದರು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎರಡು ಲಕ್ಷ ರೂಗಳನ್ನು ಕೊಡುವುದಾಗಿ ವಾಗ್ದಾನವನ್ನು ನೀಡಿದ್ದಾರೆ ಇಲ್ಲಿನ ಸಮಾಜದ ಮುಖಂಡರು ಘೋಷಿಸಿರುವ ಹಣವನ್ನು ಸಂಗ್ರಹಿಸುವ ಜೊತೆಗೆ ಅದನ್ನು ಯೋಗ್ಯ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಹೋಗಬೇಕು ಎಂದರಲ್ಲದೆ ಪಾದಯಾತ್ರೆ ಮೂಲಕ ಇನ್ನಷ್ಟು ಹಣ ಸಂಗ್ರಹಿಸಲಾಗುವುದು ಎಂದರು. ಮಾಜಿ ಸಚಿವ ಎ.ಕೃಷ್ಣಪ್ಪ ಮಾತನಾಡಿ ಪ್ರತಿಯೊಂದು ಸಮಾಜ ಬೆಳೆಯಲು ಶಿಕ್ಷಣ ಅತ್ಯಗತ್ಯವಾಗಿದ್ದು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಪ್ರತಿಯೊಬ್ಬರು ಮುಂದಾಗಬೇಕಾಗಿದೆ, ನಮ್ಮ ಜನಾಂಗದವರಿಗೆ ಶಿಕ್ಷಣಕ್ಕಾಗಿ ಕೇವಲ ಭಾರತದಾದ್ಯಂತ 16ರಷ್ಟು ಹಾಸ್ಟಲ್ಗಳಿವೆ ಎಂದರಲ್ಲದೆ, ಜಿಲ್ಲಾ ಮಟ್ಟದಲ್ಲಿ ಸಮಾಜದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ ಒಂದು ಲಕ್ಷರೂ ತಾಲ್ಲೂಕು ಮಟ್ಟದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ 50ಸಾವಿರ ರೂ ನೀಡಲಿದ್ದು ಈಗ ರೂಪುಗೊಳ್ಳುತ್ತಿರುವ ಹಾಸ್ಟಲ್ಗೆ ತಾನು ಒಂದು ಲಕ್ಷ ಹಣ ನೀಡುವುದಾಗಿ ಆ ಹಣವನ್ನು ಹಾಸ್ಟಲ್ ಕಾಮಗಾರಿಯ ಅಭಿವೃದ್ದಿ ನೋಡಿ ನೀಡುತ್ತೇನೆ ಎಂದರು. ಕನರ್ಾಟಕ ರಾಜ್ಯದಲ್ಲಿ ಮಠಗಳು ನೀಡುತ್ತಿರುವ ಶಿಕ್ಷಣಾಸಕ್ತಿಯಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಮಠ ಮಾನ್ಯಗಳು ಈ ರೀತಿಯಲ್ಲಿ ಮಾಡುತ್ತಿರುವ ಸೇವೆಯನ್ನು ನಾವು ಪ್ರಶಂಸಿಸಲೇ ಬೇಕಾಗಿದೆ ಎಂದರಲ್ಲದೆ ಭಾರತದಾದ್ಯಂತ ಯಾದವ ಸಮಾಜ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದು ಇವರೆಲ್ಲಾ ಒಗ್ಗೂಡಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದರು.ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಯಾದವ ಸಮಾಜದಲ್ಲಿ ಗುರಿ ಮತ್ತು ಗುರು ಒಟ್ಟಿಗೆ ದೊರಕಿರುವುದು ಉತ್ತಮ ಸಂಗತಿ, ಸಮಾಜವನ್ನು ಬೆಳಸಬೇಕಾದರೆ ಸ್ವಾಮೀಜಿಯ ಮಾರ್ಗದರ್ಶನದಂತೆ ಮುನ್ನೆಡೆಯಬೇಕಾಗಿದ್ದು ಜನಾಂಗದಲ್ಲಿರುವ ಮೂಲಭೂತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಗ್ಗಟ್ಟಾಗಬೇಕು ಎಂದರು. ಯಾದವ ಸಮಾಜದ ಬಗ್ಗೆ ಮೈಸೂರು ವಿಶ್ವವಿದ್ಯಾಲಯ ಕುಲ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದು, ಸಕರ್ಾರಕ್ಕೆ ಈ ವರದಿ ಬಂದನಂತರ ಸದನದಲ್ಲಿ ಚಚರ್ಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಅರಿವನ್ನು ಮೂಡಿಸುವವರೇ ನಮ್ಮ ಗುರು ಅವರ ಮಾರ್ಗದರ್ಶನದಂತೆ ಸಂಘಟನೆಯನ್ನು ಬೆಳೆಸಿದಾಗ ಸಮಾಜದ ಛಾಪನ್ನು ಮೂಡಿಸಬಹುದಾಗಿದೆ, ಹಲವು ವರ್ಷಗಳ ಹಿಂದೆಯೇ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿದ್ದು ಈಗಲಾದರೂ ನಾವೆಲ್ಲರೂ ಶಿಕ್ಷಣ ಕ್ರಾಂತಿಯನ್ನು ಮೊಳಗಿಸೋಣ ಎಂದರು.ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಹಾಸ್ಟಲ್ ಸೌಲಭ್ಯಕ್ಕೆ ಈಗ ದೊರಕಿರುವ ಸಹಾಯ ಧನವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.. ಸಮಾರಂಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಅಕ್ಕಲಪ್ಪಯಾದವ್, ಜಿ.ಪಂ.ಸದಸ್ಯರಾದ ಹೆಚ್. ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮ ರಾಮಯ್ಯ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಾ.ಪಂ.ಸಸ್ಯರುಗಳಾದ ಜಗದೀಶ್, ಲತಾಕೇಶವಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಡಿ.ಸಿ.ಸಿ. ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸತೀಶ್ಸಾಸಲು, ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಗೋವಿಂದಯ್ಯ ಸ್ವಾಗತಿಸಿದರು.

ಶಿಕ್ಷಕ ಎಸ್.ಕೆ.ವಿಜಯ ಕುಮಾರ್ ನಿರೂಪಿಸಿದರು.ದೇಶದ ಭವಿಷ್ಯವನ್ನು ಶಾಲಾ ಕೊಠಡಿಯಲ್ಲಿ ಯೋಜಿಸುವವನೆ ಶಿಕ್ಷಕ: ಎನ್.ಎನ್.

ಚಿಕ್ಕನಾಯಕನಹಳಳಿ,ಸೆ.05: ಶಿಕ್ಷಕರು ಶಾಲೆಗಳಲ್ಲಿ ಬೋಧನೆ ಜೊತೆಗೆ ಮಕ್ಕಳ ಮನಸ್ಸನ್ನು ಕಟ್ಟಲು ಮುಂದಾದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬಹುದು ಎಂದು ಚಿಕ್ಕನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ನಾಗಪ್ಪ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಪಟ್ಟಣದ ಸಕರ್ಾರಿ ಪ್ರೌಡಾಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ನನ್ರವರ 123ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚಾರಣೆಯಲ್ಲಿ ಮಾತನಾಡಿ 5,6 ನೇ ವರ್ಷದ ಮಕ್ಕಳಲ್ಲಿ ಅಗಾದವಾದ ಜ್ಞಾಪನಾಶಕ್ತಿ ಇದ್ದು 2000 ಪದಗಳನ್ನು ಸಂಗ್ರಹಿಸುವ ಶಕ್ತಿ ಇರುತ್ತದೆ. ಇಂತಹ ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿಯಾದ ಜಾನಪದ ಕಲೆಗಳು, ನೃತ್ಯ, ಕೋಲಾಟ ಸುಗ್ಗಿ ಕುಣಿತ ಇವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ, ಟಿ.ವಿ. ಮಾಧ್ಯಮಗಳು ನಮ್ಮ ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಿನಿಮಾ ಹಾಗೂ ಟಿವಿ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳನ್ನು ಪ್ರತಿಭೆಯ ಹೆಸರಿನಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದ್ದರೂ ಇದನ್ನು ಪ್ರತಿಭಟಿಸುವ ಶಕ್ತಿ ನಮ್ಮ ಹೆಣ್ಣು ಮಕ್ಕಳಲ್ಲಿ ಕಡಿಮೆಯಾಗಿದೆ ಎಂದು ವಿಷಾಧಿಸಿದ ಅವರು ಮನುಷ್ಯ ಮನುಷ್ಯರಲ್ಲಿರುವ ಸಂಬಂಧಗಳು ಕಡಿಮೆಯಾಗುತ್ತಿವೆ, ಶಿಕ್ಷಕರು ಪ್ರತಿ ದಿನ ಪ್ರತಿ ಕ್ಷಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆ ಆತ್ಮ ವಿಮಷರ್ೆ ಮಾಡುವಂತಹವರು ಮಾತ್ರ ಶಿಕ್ಷಕ ವೃತ್ತಿಗೆ ಅರ್ಹರು ಎಂದ ಅವರು, ಶಿಕ್ಷರು ತಾವು ಮಕ್ಕಳಿಗೆ ಪಾಠ ಹೇಳುವ ಮುನ್ನ ಪುಸ್ತಕಗಳನ್ನು ಅಭ್ಯಸಿಸಿದ ನಂತರ ಭೋದಿಸಿ, ದುಶ್ಚಟಗಳಿಂದ ದೂರವಿದ್ದು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಕಲಿಸುವ ಕಡೆ ಗಮನ ಹರಿಸಬೇಕಾಗಿದೆ. ರಾಧಾಕೃಷ್ಣನ್ರವರನ್ನು ಅವರ ಜಯಂತಿ ದಿನದಂದು ಮಾತ್ರ ಸ್ಮರಿಸುವುದಲ್ಲ ಶಿಕ್ಷಕರಾದವರು ಪ್ರತಿಕ್ಷಣ ನೆನಪಿಸಿಕೊಳ್ಳುವುದು ಶಿಕ್ಷಕನ ಕರ್ತವ್ಯ, ಶಿಕ್ಷಕ ಸದಾ ಅಧ್ಯಯನ ಶೀಲರಾಗಬೇಕು, ಸಭೆ ಸಮಾರಂಭಗಳು ಹೂವಿನ ಹಾರದ ಬದಲು ಡಾ.ರಾಧಕೃಷ್ಣರವರ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡಿ ಎಂದು ಸಲಹೆ ನೀಡಿದರು. ಸಮಾಜ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಕೃಕಜ್ಞತೆಯಿಂದ ಸ್ಮರಿಸಬೇಕು, ಅವರೆ ಅಕ್ಷರವನ್ನು ಕಲಿಸುವವರು ಶಿಕ್ಷಕರು ವಿದ್ಯಾಥರ್ಿಗಳು ಕೇಳುವ ಪ್ರಶ್ನೆಗೆ ಉತ್ತರ ತಿಳಿಯದಿದ್ದಲ್ಲಿ ಗದರಿಸದೆ ತಿಳಿದು ಹೇಳಬೇಕು. ಸಮಾರಂಭದಲಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಿದರು. ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣಗೊಳಿಸಿದರು. ತಾ.ಪಂ.ಉಪಾಧ್ಯಕ್ಷ ಬಿ.ಬಿ.ಪಾತೀಮ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರೌಡಶಾಲಾ ಹಾಗೂ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದರು. ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮ, ನಿಂಗಮ್ಮ, ಮಂಜುಳ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ದಯಾನಂದ್, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಬಿ.ಇ.ಓ ಸಾ.ಚಿ.ನಾಗೇಶ್ ಉಪಸ್ಥಿತರಿದ್ದರು.

Sunday, September 4, 2011









. ಹೊಂಗೆ ಬೆಳೆದು ಬಂಗಾರದ ಬೆಲೆ ಪಡೆಯಿರಿ್ಡ ಹೊಂಗೆಬೀಜದ ಎಣ್ಣೆ ಉತ್ಪಾದನಾ ಘಟಕದಲ್ಲಿ ತಜ್ಞರ ಅಭಿಮತ್ಡ ಸ್ವಾವಲಂಭನೆಗಾಗಿ ಜೈವಿಕ ಇಂಧನಕ್ಕೆ ಮೊರೆ ಹೊಗಲು ಕರೆ್ಡ ಪೆಟ್ರೋಲಿಯಂ ಉತ್ಪನ್ನಗಳಿಗೆ ಪಯರ್ಾಯವಾಗಿ ಜೈವಿಕ ಇಂಧನಚಿಕ್ಕನಾಯಕನಹಳ್ಳಿ,ಸೆ.3 : ಹೊಂಗೆಬೀಜವನ್ನು ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕೇವಲ 8ರೂಗಳಿಗೆ ಮಾರುವ ಬದಲು ಬೀಜದಿಂದ ಎಣ್ಣೆ ತೆಗೆಯುವ ಮೂಲಕ ಜೈವಿಕ ಇಂಧನವಾಗಿ ಪರಿವತರ್ಿಸಿ ಮಾರಾಟ ಮಾಡಿದರೆ ಅತಿಹೆಚ್ಚು ಲಾಭವನ್ನು ಪಡೆದು ಆಥರ್ಿಕವಾಗಿ ಸದೃಡರಾಗಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶ್ಯಾಮಸುಂದರ ಜೋಶಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹಾಲುಗೊಣ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಜೈವಿನ ಇಂದನ ಉದ್ಯಾನ ಹಾಗೂ ಭಾರತೀಯ ಜೈವಿಕ ತಂತ್ರಜ್ಞಾನ ಸಂಸ್ಥೆ ವತಿಯಿಂದ ನಡೆದ ಜೈವಿನ ಎಣ್ಣೆ ಉತ್ಪಾದನಾ ಘಟಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನೈಸಗರ್ಿಕ ವಸ್ತು ಹೊಂಗೆಬೀಜದಿಂದ ಹೆಚ್ಚು ಲಾಭ ಪಡೆಯುವುದು ಕಷ್ಠವಿದೆ, ಕಚ್ಚಾ ಬೀಜನವನ್ನು ಯಂತ್ರದ ಬಳಸಿ ಎಣ್ಣೆ ತೆಗೆದರೆ ಅಷ್ಠೇ ಲಾಭವನ್ನು ಇನ್ನು ಮುಂದೆ ರೈತರು ಪಡೆಯಬಹುದು, ತಾವು ಉತ್ಪಾದಿಸಿದ ಹೊಂಗೆಬೀಜವನ್ನು ಈ ರೀತಿ ತಯಾರಿಸಿದ ಎಣ್ಣೆಯನ್ನು ವಿದ್ಯುತ್ ಬಳಕೆಯಲ್ಲಿ, ವಾಹನ ಚಲಿಸಲು ಇನ್ನಿತರ ಇಂಧನ ವಸ್ತುವಾಗಿ ಬಳಸಬಹುದಾಗಿದ್ದು ತಮಗೆ ಬೇಕಾದಷ್ಟು ಇಂಧನ ಶಕ್ತಿಯನ್ನು ಉಪಯೋಗಿಸಬಹುದು ಎಂದರು. ಈ ಶಕ್ತಿಯ ಉಪಯೋಗಕ್ಕಾಗಿ ಇನ್ನು 5 ವರ್ಷದಲ್ಲಿ ಸುಮಾರು 15ಟನ್ ಹೆಚ್ಚು ಹೊಂಗೆಬೀಜ ಉತ್ಪಾದನೆಯನ್ನು ಮಾಡಿದರೆ ದೇಶದಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲದಂತಾಗಲಿದೆ, ಅಲ್ಲದೆ ಬೇರೆ ಬೇರೆ ದೇಶಗಳಿಂದ ತರುವ ಪೆಟ್ರೋಲಿಯಂ ವಸ್ತುಗಳ ಬೆಲೆಯೂ ಸಹ ಕಡಿಮೆಯಾಗಲಿದೆ ಎಂದರು. ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜಿ.ಚಂದ್ರಕಾಂತ್ ಮಾತನಾಡಿ ಈ ಯಂತ್ರದ ಮೂಲಕ ಜೈವಿನ ಇಂಧನವು ದೈನಿಕ ಇಂಧನವಾಗಬೇಕು ಆಗ ಪ್ರತಿಯೊಬ್ಬರಿಗೂ ಇಂಧನ ಕೊರತೆ ಉಂಟಾಗದೆ ದೇಶ ಆಥರ್ಿಕವಾಗಿ ಮುಂದುವರಿಯಲಿದೆ ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು. ತು.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಮಾತನಾಡಿ ಇತ್ತೀಚಿಗೆ ಕಲೆಬೆರಕೆ ವಸ್ತುಗಳು ಹೆಚ್ಚಾದರೂ ಅವುಗಳಿಗೆ ಬೆಲೆ ಹೆಚ್ಚುತ್ತಿದೆ ಇದರಿಂದ ಬಡವರು ತೀರಾ ಸಂಕಷ್ಠಕ್ಕೆ ದೂಡಲ್ಪಡುತ್ತಿದ್ದಾರೆ ಇಂತಹವುಗಳನ್ನು ಹೋಗಲಾಡಿಸಬೇಕಾದರೆ ಗ್ರಾಮಸ್ಥರು ಒಗ್ಗಟ್ಟಾಗಿ ಕೈಜೋಡಿಸಿ ತಮ್ಮಲ್ಲಿರುವ ಬೆಳೆಯ ಉತ್ಪಾದನೆಯನ್ನು ಹೆಚ್ಚಾಗಿ ತಯಾರಿಸಿ ತಮ್ಮ ಸಮಸ್ಯೆಗಳನ್ನು ಯಾರ ಹಂಗಿಲ್ಲದೆ ತಾವೇ ಪರಿಹರಿಸಿಕೊಂಡರೆ ತಮ್ಮ ಗ್ರಾಮವೇ ದೇಶಕ್ಕೆ ಮಾದರಿಯಾಗುತ್ತದೆ ಎಂದರಲ್ಲದೆ, ತುಮಕೂರು ಹಾಲು ಒಕ್ಕೂಟವು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿದ್ದು ಅದರಿಂದಲೇ ಇಂದು 4ಲಕ್ಷಕ್ಕೂ ಹೆಚ್ಚು ಹಾಲು ಜಿಲ್ಲೆಯಲ್ಲಿ ಸರಬರಾಜಾಗುತ್ತಿದ್ದು 5ಕೋಟಿಯಷ್ಠು ಬಡವಾಡಿ ನೀಡುತ್ತಾ 400 ಕೋಟಿ ವ್ಯವಹಾರ ನಡೆಯುತ್ತಿದ್ದು ಇದನ್ನು ಇನ್ನು ಹೆಚ್ಚಿಸುವ ಗುರಿ ಹೊಂದಿದೆ ಒಕ್ಕೂಟ ಎಂದರು.ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಉದ್ಘಾಟನೆಗೊಂಡಿರುವ ಯಂತ್ರಗಳನ್ನು ರೈತರು ಒಳ್ಳೆಯ ನಿಟ್ಟಿನಲ್ಲಿ ಉಪಯೋಗಿಸಿದರೆ ಯಾರನ್ನು ಅವಲಂಬಿಸದೆ ತಮಗೆ ತಾವೇ ಸ್ವಾವಲಂಬಿಗಳಾಗುತ್ತೇವೆ, ಇದಕ್ಕಾಗಿ ಸಹಕಾರಿ ಸಂಘಗಳು ಮುಂದೆ ಬಂದು ಇಂತಹ ಯಂತ್ರಗಳನ್ನು ಒಗ್ಗಟ್ಟಿನಿಂದ ಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮದಲ್ಲಿರುವ ತೊಳಲಾಟಗಳನ್ನು ಗ್ರಾಮಸ್ಥರೇ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಂಡರೆ ತಾವು ಗ್ರಾಮದ ಅಭಿವೃದ್ದಿಗೆ

ಮುಂದಾಗುತ್ತೇವೆ ಎಂದರು. ಸಮಾರಂಭದಲ್ಲಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರಾಜಣ್ಣ, ಶಿವನಂಜಪ್ಪ ಮುಂತಾದವರಿದ್ದರು.

ಚಿ.ನಾ.ಹಳ್ಳಿ.ಯಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಚಿಕ್ಕನಾಯಕನಹಳ್ಳಿ,ಸೆ.3 : ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 124ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಇದೇ 5ರ ಸೋಮವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಸಮಾರಂಭವನ್ನು ಕೆ.ಎಂ.ಹೆಚ್.ಪಿ.ಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ. ರಾಧಕೃಷ್ಣರವರ ಭಾವಚಿತ್ರವನ್ನು ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಪ್ರಾಂಶುಪಾಲ ಎನ್.ನಾಗಪ್ಪ ಸಮಾರಂಭ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್ ಉತ್ತಮ ಶಿಕ್ಷಕ ಪ್ರಶಸ್ತಿ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಶಾಸಕರುಗಳು, ಜಿ.ಪಂ.ಸದಸ್ಯರುಗಳು ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿರುವರು.

ಜಾನುವಾರುಗಳ ಮೇವಿಗೂ ತತ್ವಾರಚಿಕ್ಕನಾಯಕನಹಳ್ಳಿ,ಸೆ.3 ; ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ರೈತರು ಕಂಗಾಲಾಗಿದ್ದಾರೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ತೊಂದರೆ ಪಡುತ್ತಿದ್ದು ಸತತ ಬರಗಾಲದಿಂದ ಪರಿತಪಿಸುತ್ತಿದ್ದಾರೆ ಜಾನುವಾರುಗಳಿಗೆ ಮೇವಿಲ್ಲದೆ ಅವುಗಳು ಕಟುಕರ ಪಾಲಾಗಿದ್ದು ತಾಲ್ಲೂಕಿನ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಆದ್ದರಿಂದ ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಗ್ರಾ.ಪಂ.ಸದಸ್ಯೆ ಶಶಿಕಲಾ ಆಗ್ರಹಿಸಿದ್ದಾರೆ.

Wednesday, August 31, 2011



ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ತಮ್ಮ ಬದುಕಿಗಾಗಿ ಅಳವಡಿಸಿಕೊಳ್ಳಿ : ಕೆ.ಎನ್.ರಂಗನಾಥ್ಚಿಕ್ಕನಾಯಕನಹಳ್ಳಿ,ಆ.31 ; ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ಅದನ್ನು ಕೇವಲ ವೃತ್ತಿಗಾಗಿ ಅವಲಂಬಿಸದೆ ತಮ್ಮ ಜೀವನದ ಬದುಕಿಗಾಗಿ ಅಳವಡಿಸಿಕೊಳ್ಳಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಆರ್.ರಂಗನಾಥ್ ಹೇಳಿದರು. ತಾಲ್ಲೂಕಿನ ಕಾತ್ರಿಕೆಹಾಳ್ ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ ಹಾಗೂ ಇಕೋಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಗೆ ವಿದ್ಯಾಥರ್ಿಗಳೇ ದೇವರು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದೇ ನಿಜವಾದ ಸೇವೆಯಾಗಿದೆ, ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳು ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು, ಈ ದಿನಗಳಲ್ಲಿ ಹಳ್ಳಿಗಾಡಿನ ವಿದ್ಯಾಥರ್ಿಗಳೇ ಹೆಚ್ಚಿನ ಪ್ರಗತಿ ಸಾಧಿಸುತ್ತಿರುವುದು. ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆ ಅತ್ಯಂತ ಮುಖ್ಯವಾಗಿದ್ದು ಅದರ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪರಿಸರವನ್ನು ಹಾಳುಮಾಡಬೇಡಿ, ಸಂರಕ್ಷಿಸಿ ಎಂದು ಕರೆ ನೀಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ಮಾತನಾಡಿ ಮರಗಳನ್ನು ಕಡಿದರೆ ನಮ್ಮ ಉಸಿರೇ ನಿಂತು ಹೋದಂತೆ. ಗಾಳಿಗಾಗಿ, ಮಳೆಗಾಗಿ, ಬದುಕಿಗಾಗಿ ಕಾಡುಗಳು ಬೇಕು. ಇಲ್ಲಿನ ಬೆಟ್ಟಗುಡ್ಡಗಳು ಅಮೂಲ್ಯ ಖನಿಜ ಸಂಪತ್ತಿನ ಗಣಿಗಳು ಇವುಗಳ ರಕ್ಷಣೆಯ ಜವಾಬ್ದಾರಿ ನಮ್ಮದು, ಪರಿಸರವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳೋಣ ಎಂದರು. ಮಾಜಿ ಪುರಸಭಾ ಸದಸ್ಯ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪರಿಸರ ಕುರಿತು ಇಡೀ ಜಗತ್ತೇ ಚಿಂತಿಸುವ ಕಾಲ ಬಂದಿದೆ, ಗಣಿಗಾರಿಕೆ ಸ್ಥಗಿತಕ್ಕೆ ಸುಪ್ರೀಂ ಕೋಟರ್್ ಆದೇಶಿಸಿರುವುದು ಸಮಾಧಾನಕರ ವಿಷಯ ಎಂದರಲ್ಲದೆ ಸ್ಥಳೀಯ ಪರಿಸರ ಅಭಿವೃದ್ದಿಗೆ ಕೂಡಿ ಶ್ರಮಿಸೋಣ ಎಂದರು. ತೀರ್ಥಪುರ ಪಂಚಾಯ್ತಿಯ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕಾಲೇಜಿನ ಕೆಲಸಗಳಿಗೆ ನಾವು ಎಂದೆಂದಿಗೂ ಸಹಕರಿಸುತ್ತೇವೆ ಎಂದರು. ಸಮಾರಂಭದಲ್ಲಿ ಪಂಚಾಯ್ತಿಯ ಉಪಾಧ್ಯಕ್ಷ ಗೋವಿಂದರಾಜು, ಪ್ರಾಚಾರ್ಯರಾದ ಎನ್.ಇಂದಿರಮ್ಮ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪನ್ಯಾಸಕ ಲಕ್ಷ್ಮಯ್ಯ ಸ್ವಾಗತಿಸಿದರೆ ಮೇ.ನಾ.ತರಂಗಿಣಿ ನಿರೂಪಿಸಿ, ನಾಗಮ್ಮ ವಂದಿಸಿದರು.

Tuesday, August 30, 2011



ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.30 : ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ. ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ನರಸಿಂಹಮೂತರ್ಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.
ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಿಚಿಕ್ಕನಾಯಕನಹಳ್ಳಿ,ಆ.30 : ಸಾರ್ವಜನಿಕರು ನೈಸಗರ್ಿಕ ಬಣ್ಣಗಳಿಂದ ಕೂಡಿದ ಚಿಕ್ಕ ಗಣೇಶ ಮೂತರ್ಿಗಳನ್ನು ಪೂಜಿಸಿ ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಬೇಕೆಂದು ಪುರಸಭಾ ಕಾಯರ್ಾಲಯ ಪ್ರಕಟಣೆಯಲ್ಲಿ ಕೋರಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಪುರಸಭಾ ಕಾಯರ್ಾಲಯ ಕೆಲವು ಮಾರ್ಗಸೂಚಿಗಳನ್ನು ತಿಳಿಸಿದ್ದು ಪ್ಲಾಷ್ಪರ್ ಆಫ್ ಪ್ಯಾರೀಸ್ನಿಂದ ನಿಮರ್ಾಣಗೊಂಡ ಗಣೇಶ ಮೂತರ್ಿಗಳನ್ನು ಬಳಕೆ ಮಾಡದೆ ಜೇಡಿ ಮಣ್ಣಿಿನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸುವುದು, ಗಣೇಶ ಮೂತರ್ಿಗಳನ್ನು ವಿಸಜರ್ಿಸುವ ಮುನ್ನ ಹೂವು, ವಸ್ತ್ರ ಮುಂತಾದ ಪೂಜಾ ಸಾಮಗ್ರಿಗಳನ್ನು ಮತ್ತು ಅಲಂಕಾರಿಕ ವಸ್ತುಗಳು( ಕಾಗದ ಮತ್ತು ಪ್ಲಾಸ್ಟಿಕ್) ಮುಂತಾದವುಗಳನ್ನು ತೆಗೆಯಬೇಕು, ಜೈವಿಕ ಕ್ರಿಯೆಗೆ ಒಳಪಡುವ ವಸ್ತುಗಳನ್ನು ಪ್ರತ್ಯೇಕಿಸಬೇಕು, ಗಣೇಶ ವಿಗ್ರಹಕ್ಕೆ ಬಳಸಿರುವ ರಾಸಾಯನಿಕ ಬಣ್ಣಗಳಲ್ಲಿ ಕ್ರೋಮಿಯಂ, ಸೀಸ, ಸತು ಮತ್ತು ತಾಮ್ರದ ಅಂಶಗಳಿದ್ದು ಗಣೇಶ ಮೂತರ್ಿಗಳನ್ನು ಕರೆ ಬಾವಿ, ಜಲಮೂಲಗಳಿಗೆ ಹಾಕಿದರೆ ನೀರಿನ ಗುಣ ಮಟ್ಟ ಕಲುಷಿತಗೊಳ್ಳುತ್ತದೆ, ನೀರಿನ ಮಾಲಿನ್ಯ ಉಂಟಾಗಿ ನೀರಿನ ಜಲಚರ ಜೀವಿಗಳಿಗೆ ತೊಂದರೆ ಉಂಟಾಗಲಿದ್ದು ಆದ್ದರಿಂದ ಚಿಕ್ಕನಾಯಕನಹಳ್ಳಿ ಕೆರೆಯ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿರುವುದರಿಂದ ಗಣೇಶ ವಿಸರ್ಜನೆಯನ್ನು ಕೆರೆಯಲ್ಲಿ ಮಾಡಬಾರದೆಂದು ಕೋರಿದ್ದಾರೆ.

Monday, August 29, 2011



ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಕೊಳ್ಳಿ : ತಹಶೀಲ್ದಾರ್ ಉಮೇಶ್ಚಂದ್ರ
ಚಿಕ್ಕನಾಯಕನಹಳ್ಳಿ,ಆ.29 : ಗ್ರಾಮೀಣ ಪ್ರದೇಶಗಳ ಪಡಿತರ ಚೀಟಿಗಳನ್ನು ಪಂಚಾಯ್ತಿಗಳಲ್ಲಿನ ಪಂಚತಂತ್ರ ವ್ಯವಸ್ಥೆಯಲ್ಲಿ, ಮನೆ ಸಂಖ್ಯೆಗೆ ಪಡಿತರ ಚೀಟಿ ಹೊಂದಾಣಿಕೆ ಮಾಡುವ ಕಾರ್ಯ ನಡೆಯುತ್ತಿದ್ದು ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗೆ ಈ ವ್ಯವಸ್ಥೆ ಹೊಂದಾಣಿಕೆ ಮಾಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಉಮೇಶ್ಚಂದ್ರ ತಿಳಿಸಿದ್ದಾರೆ. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಅಂತಹ ಪಡಿತರ ಚೀಟಿಗಳಿಗೆ ಸೆಪ್ಟಂಬರ್ 2011ರ ಮಾಹೆಯಿಂದ ಪಡಿತರ ಹಾಗೂ ಸೀಮೆಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗುತ್ತದೆ ಆದ್ದರಿಂದ ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಮನೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Sunday, August 28, 2011



ಜೈ ಹೋ, ಅಣ್ಣಾ ಜೈ ಹೋ

ಮಹಾತ್ಮ ಗಾಂಧೀಜಿಯಂತಾದ ಅಣ್ಣಾ ಹಜಾರೆ
ಪಾಂಡುರಂಗ.ಜೆ

ಚಿಕ್ಕನಾಯಕನಹಳ್ಳಿ :ಭಾರತಕ್ಕೆ ದೊರಕಿದ ಎರಡನೇ ಮಹಾತ್ಮ ಗಾಂಧೀ, ಎರಡನೇ ಸ್ವತಂತ್ರ ಸಂಗ್ರಾಮ ಸೃಷ್ಠಿಸಿದ ಕತೃ ಅಣ್ಣಾ ಹಜಾರೆರವರಿಗೆ ಜೈ ಹೋ, ಜೈ ಹೋ ಎಂಬ ಕೂಗು ದೇಶದಲ್ಲೆಲ್ಲಾ ಮೊಳಗುತ್ತಿದೆ.ಗಾಂಧೀಜಿಯವರ ತತ್ವಗಳಂತೆ ಶಾಂತಿ, ಅಹಿಂಸೆಯನ್ನು ಪಾಲಿಸಿ ಭ್ರಷ್ಠಾಚಾರ ನಿಮರ್ೂಲನೆಗಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರಲು ಉಪವಾಸ ಸತ್ಯಾಗ್ರಹ ನಡೆಸಿ ಗಾಂಧೀಯವರಂತೆ ಉತ್ತಮ ನಾಯಕತ್ವದೊಂದಿಗೆ ಭ್ರಷ್ಠಾಚಾರದ ವಿರುದ್ದ ಸಮಾಜವನ್ನು ಕಟ್ಟಿ ಜನಸಮಾನ್ಯರ ಮುಂದಿನ ದಿನಗಳ ಭವಿಷ್ಯಕ್ಕೆ ದಿಕ್ಕು ತೋರಿಸಿದ ಗಾಂದಿವಾಧಿ ಹಜಾರೆರವರ ಜೀವನವನ್ನು ಅವಲೋಕಿಸಿ ಅವರಂತೆ ನಾಯಕತ್ವದ ಗುಣಗಳನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯ. ಕಿಶನ್ ಬಾಬರೋ ಹಜಾರೆರವರು ಮಹಾರಾಷ್ಟ್ರ ರಾಜ್ಯ ಅಹಮದ್ನಗರದ ಬಿನ್ಗಾರ್ನಲ್ಲಿ ಜನವರಿ 15 1940ರಂದು ಜನಿಸಿದರು. ಅವರು 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಭಾರತೀಯ ಸೇನೆಯ ಟ್ರಕ್ ಚಾಲಕನಾಗಿ ಕಾರ್ಯ ನಿರ್ವಹಿಸಿದರು. ಸೇನೆಯಲ್ಲಿದ್ದಾಗಲೇ ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಆಚಾರ್ಯ ವಿನೊಬಾಬಾವೆರವರ ಲೇಖನ, ಪುಸ್ತಕಗಳನ್ನು ಓದಿ ಸ್ಪೂತರ್ಿಗೊಂಡು 1975ರಲ್ಲಿ ಸೇನೆಕಾರ್ಯಕ್ಕೆ ಸ್ವಯಂ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿದರು. ಗ್ರಾಮಕ್ಕೆ ಮರಳಿದ ಅವರು ಗ್ರಾಮದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮುಂದಾದರು, ಅಲ್ಲಿನ ಗ್ರಾಮಸ್ಥರನ್ನು ಒಗ್ಗೂಡಿಸಿ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸತ್ಯಾಗ್ರಹ ಆರಂಭಿಸಿದರು, ಇಲ್ಲಿಂದ ಹಜಾರೆರವರು ಸತ್ಯಾಗ್ರಹ ಆರಂಭಿಸಿ ಆ ಗ್ರಾಮದಲ್ಲಿ ಮಧ್ಯಪಾನ, ಧೂಮಪಾನ ನಿಷೇಧಿಸಿ ಗ್ರಾಮಗಳಿಗೆ ಮಾದರಿಯದರು, ಈ ಮೂಲಕ ಸತ್ಯಾಗ್ರಹ ಆರಂಭಿಸಿದ ಅವರು ದೇಶದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ತೊಲಗಿಸಲು ಕೇಂದ್ರ ಸಕರ್ಾರದ ವಿರುದ್ದ ನಿಂತು ಭ್ರಷ್ಠಾಚಾರವನ್ನು ಹೋಗಲಾಡಿಸಲು ಮೊದಲ ಬಾರಿ ಸತ್ಯಾಗ್ರಹ ನಡೆಸಿದರು ಈ ಸಂದರ್ಭದಲ್ಲಿ ಅಣ್ಣಾರವರಿಗೆ ಲಕ್ಷಗಟ್ಟಲೆ ಬೆಂಬಲ ಸೂಚಿಸಿದರೂ ಕೇಂದ್ರ ಸಕರ್ಾರಕ್ಕೆ ಆಗಷ್ಟ್ 15ನೇ ತಾರೀಖಿನೊಳಗೆ ಜನಲೋಕಪಾಲ ಮಸೂದೆ ಜಾರಿಗೆ ತರಬೇಕೆಂದು ಕಾಲವಕಾಶ ನೀಡಿದ್ದರು. ಅಣ್ಣಾರವರು ನೀಡಿದ್ದ ಕಾಲವಕಾಶ ಮುಗಿದರೂ ಸಕರ್ಾರ ಮಸೂದೆಯನ್ನು ಅಂಗೀಕರಿಸದಿದ್ದಾಗ ಹಜಾರೆರವರು ಶಾಂತಿಯುತವಾಗಿ 13 ದಿನ 288 ಗಂಟೆಯ ವರೆಗೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಕಿರಣ್ಬೇಡಿ, ಸಂತೋಷ್ಹೆಗಡೆ ಇನ್ನಿತರರ ಅಣ್ಣಾ ಬೆಂಬಲಿಗರು ದೇಶದಲ್ಲೆಲ್ಲ ಹಜಾರೆರವರ ನಾಯಕತ್ವದೊಂದಿಗೆ ಬೆಂಬಲಿಸಿ ಸಕರ್ಾರಕ್ಕೆ ನಡುಕ ಹುಟ್ಟಿಸಿ ಮಸೂದೆ ಅಂಗೀಕಾರವನ್ನು ಜಾರಿಗೆ ತರಲು ಒತ್ತಾಯಿಸಿ ಅದರಲ್ಲಿ ವಿಜಯಶಾಲಿಯಾದರು. ಇವುಗಳನ್ನೆಲ್ಲ ಗಮನಿಸಿದರೆ ಗಾಂಧಿ ತತ್ವಗಳ ಅಹಿಂಸೆ, ಶಾಂತಿ ಮಂತ್ರ ಹಾಗೂ ಜನಶಕ್ತಿಯಿಂದ ಯಾವುದೇ ಅನ್ಯಾಯದ ವಿರುದ್ದ ಹೋರಾಡಿದರೆ ಗೆಲುವು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಹಜಾರೆರವರು ಸಾಬೀತುಪಡಿಸಿದ್ದಾರೆ, ಏನಾದರೂ ಸರಿ ಮಹಾತ್ಮ ಗಾಂಧಿಜಿಯಂತೆ, ಎರಡನೇ ಗಾಂಧಿಯಾಗಿ ಪ್ರಬಲ ಅಣ್ವಸ್ತ್ರದಂತೆ ಅಣ್ಣಾ ಹಜಾರೆರವರ ನಾಯಕತ್ವ ದೇಶದ ಜನತೆಗೆ ದೊರಕಿ ಭ್ರಷ್ಟಚಾರಿಗಳಿಗೆ ನಡುಕ ಹುಟ್ಟಿಸಿರುವ ಅಣ್ಣಾರವರಿಗೆ ಇದುವೇ ನಮ್ಮ ಜೈ ಹೋ.

Saturday, August 27, 2011



ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟಬೇಕು ಚಿಕ್ಕನಾಯಕನಹಳ್ಳಿ,ಆ.26: ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟುವ ಹೊಣೆ ಹೊತ್ತಿರುವ ನಾವು, ಶಿಕ್ಷಣವನ್ನು ನೀಡುವ ಜೊತೆಗೆ ಮಕ್ಕಳ ಭವಿಷ್ಯದ ಬದುಕಿಗೆ ಅಗತ್ಯವಿರುವ ಉದ್ಯೋಗದ ಭದ್ರತೆಯನ್ನು ನೀಡುವುದು ಅವಶ್ಯವೆಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಮೇಲನಹಳ್ಳಿ ಮೊರಾಜರ್ಿ ದೇಸಾಯಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಇಲಾಖೆಯ ಮೊರಾಜರ್ಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.94 ರಷ್ಟು ಬಂದಿರುವುದು ಸಕರ್ಾರಿ ವಸತಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಿದೆ ಎಂದರಲ್ಲದೆ, ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವಲ್ಲಿ ಸಕರ್ಾರ ಸಾಕಷ್ಟು ಶ್ರಮಿಸುತ್ತಿದೆ ಎಂದರು. ಈ ಶಾಲೆಗಳಿಗೆ ಅಗತ್ಯವಿರುವ ಒಳಾಂಗಣ ಕ್ರೀಡಾಂಗಣ ಹಾಗೂ ಸುಸಜ್ಜಿತ ಗ್ರಂಥಾಲಯವನ್ನು ಮಂಜೂರು ಮಾಡುವುದಾಗಿ ತಿಳಿಸಿದರು.ನಾವು ಓದುವ ಕಾಲದಲ್ಲಿ ಶಾಲೆಗಳಲ್ಲಿ ಇಷ್ಟೋಂದು ಸವಲತ್ತುಗಳಿರಲಿಲ್ಲ, ಶಾಲೆಗಳಲ್ಲಿ ಕುಳಿತುಕೊಳ್ಳಲು ಮಣಿಗಳಾಗಲಿ, ಶಿಕ್ಷಕರಿಗೆ ಖುಚರ್ಿಗಳಿಗೂ ತತ್ವಾರವಿತ್ತು. ಈಗ ಆಗಿಲ್ಲ ಸರ್ವಶಿಕ್ಷಣ ಯೋಜನೆಯಿಂದಾಗಿ ಎಲ್ಲಾ ಸಕರ್ಾರಿ ಶಾಲೆಗಳು ಉತ್ತಮವಾಗಿವೆ ಎಂದರಲ್ಲದೆ, ಸಕರ್ಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಇಷ್ಟೇಲ್ಲಾ ಸೌಲಭ್ಯ ನೀಡುತ್ತಿದೆ ಎಂದರು, ಅಬ್ದುಲ್ ಕಲಾಂರವರು ತಮ್ಮ ಶಿಕ್ಷಣ ಸಂದರ್ಭದಲ್ಲಿ ಮನೆಗಳಿಗೆ ಪತ್ರಿಕೆಯನ್ನು ಸರಬರಾಜು ಮಾಡುವ ಮೂಲಕ ಅದರಲ್ಲಿ ಬಂದ ಹಣದಲ್ಲಿ ತಮ್ಮ ಶಿಕ್ಷಣವನ್ನು ನಡೆಸುತ್ತಿದ್ದರು ಎಂದರಲ್ಲದೆ, ಇಂದಿನ ಮಕ್ಕಳು ಮುಂದಿನ ದಿನಗಳಲ್ಲಿ ಅಬ್ದುಲ್ ಕಲಾಂರಂತಹ ವ್ಯಕ್ತಿತ್ವ ಉಳ್ಳವರಾಗಬೇಕೆಂದರು,ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಈ ಶಾಲೆಯ ವಾತಾವರಣ ಸುಂದರವಾಗಿದೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಪಟ್ಟಣದ ಹೊರವಲಯದಲ್ಲಿರುವುದು ಮತ್ತು ಕೆರೆ ಪಕ್ಕದಲ್ಲಿರುವುದರಿಂದ ಮಕ್ಕಳ ಭದ್ರತೆಗೂ ಹೆಚ್ಚು ಒತ್ತು ನೀಡಬೇಕೆಂದರು. ಚಿಕ್ಕನಾಯಕನಹಳ್ಳಿಗೆ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಪ್ರಾರಂಭಿಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಇದಕ್ಕೆ ಸಚಿವರು ಅನುಮತಿ ನೀಡಬೇಕೆಂದರಲ್ಲದೆ, ಹಂದನಕೆರೆ, ಕಾತ್ರಿಕೆಹಾಳ್ ಮತ್ತು ಶೆಟ್ಟೀಕೆರೆಗಳಿಗೆ ವಿದ್ಯಾಥರ್ಿ ನಿಲಯವನ್ನು ಆರಂಭಿಸಲು ಸಚಿವರು ಒಪ್ಪಿಗೆ ನೀಡಬೇಕೆಂದರು.ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬರುವ ಹೆಚ್ಚಿನ ಸವಲತ್ತುಗಳನ್ನು ನೀಡಬೇಕೆಂದರು.ಕಾರ್ಯಕ್ರಮದಲ್ಲಿ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರುಗಳಾದ ಜಿ. ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ತಾ.ಪಂ. ಉಪಾಧ್ಯಕ್ಷೆ ಬಿಬಿ ಫಾತಿಮಾ, ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಎಚ್.ಆರ್.ಶಶಿಧರ್, ಎಂ.ಎಂ.ಜಗಧೀಶ್, ನಿರಂಜನಮೂತರ್ಿ, ಹೊನ್ನೆಬಾಗಿ ಅಧ್ಯಕ್ಷರಾದ ಕಲ್ಪನಾ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಶರತ್ಕುಮಾರ್, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಸ್ವಾಗತಿಸಿದರೆ, ಶ್ಯಾಮ್ ಸುಂದರ್ ವಂದಿಸಿದರು.

Friday, August 26, 2011


ಇಂದು ಮೊರಾಜರ್ಿ ದೇಸಾಯಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ
  • ನಾಲ್ಕುವರೆ ಎಕರೆ ಪ್ರದೇಶದಲ್ಲಿ 4.60 ಕೋಟಿ ರೂಗಳ ಕಟ್ಟಡ
  • ಶೌಚಾಲಯದ ನೀರು ಪುನರ್ ಬಳಕೆಯ ತಂತ್ರಜ್ಞಾನ
  • ಸಮಾಜ ಕಲ್ಯಾಣ ಇಲಾಖೆಯ ಸಚಿವರಿಂದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಆ.26 : ಆರರಿಂದ ಎಸ್.ಎಸ್.ಎಲ್.ಸಿ ವರೆಗಿನ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಸತಿ ಸಹಿತ ಶಾಲೆಯಾಗಿ ರೂಪುಗೊಂಡಿರುವ ಮೊರಾಜರ್ಿ ದೇಸಾಯಿ ವಸತಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೊಸ ಭರವಸೆಯನ್ನು ಮೂಡಿಸುತ್ತಿದೆ
ಈ ನಿಟ್ಟಿನಲ್ಲಿ ಸಕರ್ಾರ ತಾಲ್ಲೂಕಿಗೆ ಒಂದರಂತೆ ಇಂತಹ ಶಾಲೆಗಳನ್ನು ಆರಂಭಿಸಿದೆ, ಈ ಪೈಕಿ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಮೇಲನಹಳ್ಳಿ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿಮರ್ಿಸಿರುವ ಮೊರಾಜರ್ಿದೇಸಾಯಿ ವಸತಿ ಶಾಲೆ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ.
ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಈ ಕಟ್ಟಡವನ್ನು ಇದೇ 27ರಂದು (ಇಂದು) ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಸುಮಾರು 250 ವಿದ್ಯಾಥರ್ಿಗಳ ವಾಸ್ತವ್ಯಕ್ಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿಮರ್ಿಸಿರುವ ಸುಸಜ್ಜಿತ ಈ ಕಟ್ಟಡ ನಾಲ್ಕುವರೆ ಎಕರ ಪ್ರದೇಶದಲ್ಲಿ ಹರಡಿಕೊಂಡಿದೆ. ಒಂದುವರೆ ಎಕರೆ ಪ್ರದೇಶದಲ್ಲಿ 6 ಬ್ಲಾಕ್ಗಳಲ್ಲಿ ಕಟ್ಟಡ ರೂಪುಗೊಂಡಿದ್ದರೆ 3 ಎಕರೆ ಪ್ರದೇಶದಲ್ಲಿ ಆಟದ ಮೈದಾನ ಸಿದ್ದವಾಗಿದೆ.
ನಾಲ್ಕು ಕೋಟಿ ಅರವತ್ತು ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಿರುವ ಈ ಶಾಲೆ ಆರು ಬ್ಲಾಕ್ಗಳನ್ನು ಹೊಂದಿದೆ. ಶಾಲಾ ಸಂಕಿರ್ಣ, ಬಾಲಕರ ವಸತಿ ಗೃಹ, ಅಡುಗೆ ಮತ್ತು ಭೋಜನ ಶಾಲೆ, ಬಾಲಕಿಯರ ಗೃಹ, ಬೋಧಕ ವಸತಿ ಗೃಹ, ಬೋಧಕೇತರ ವಸತಿ ಗೃಹಗಳೆಂದು ವಿಂಗಡಿಸಲಾಗಿದೆ.
ಶಾಲಾ ಸಂಕಿರ್ಣವು ಒಂದು ನೂರು ಚದುರದ ವಿಶಾಲ ಕಟ್ಟಡದಲ್ಲಿ ಹರಡಿಕೊಂಡಿದ್ದು 12 ವಿಶಾಲ ಕೊಠಡಿಗಳಿವೆ. 4 ದೊಡ್ಡ ಕ್ಲಾಸ್ ರೂಂಗಳಿವೆ ಒಂದು ಪ್ರಯೋಗಾಲಯ, ಒಂದು ಗ್ರಂಥಾಲಯ ಒಂದು ಕಂಪ್ಯೂಟರ್ ಹಾಲ್, ಒಂದು ಯೋಗ ಕೊಠಡಿ, ಪ್ರಿನ್ಸಿ ಆಫೀಸ್, ಸ್ಟಾಪ್ ರೂಂ, ಸ್ಟೋರ್ ರೂಂಗಳನ್ನು ಒಳಗೊಂಡಿದೆ.
ಬಾಲಕರ ವಸತಿ ಗೃಹವು 80 ಚದುರ ಕಟ್ಟಡವೊಂದಿದ್ದು 12 ರೂಂಗಳನ್ನು ಹೊಂದಿದೆ, ಬಾಲಕರು ಓದಲು ಹಾಗೂ ಮಲಗಲು ವಿಶಾಲವಾದ ಪ್ರದೇಶ ಇದಾಗಿದೆ. ಅಡುಗೆ ತಯಾರಿಸಲು ಹಾಗೂ ಊಟ ಮಾಡಲು 35 ಚದುರದಲ್ಲಿ ಕಟ್ಟಲಾಗಿರುವ ಈ ಕಟ್ಟಡದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಕುಳಿತು, ಊಟ ಮಾಡುವ ವ್ವವಸ್ಥೆ ಇದೆ.
ಬಾಲಕಿಯರ ವಸತಿ ಗೃಹವು 80 ಚದುರ ಇದ್ದು 12 ಕೊಠಡಿಗಳಿವೆ, ಇದರ ಪಕ್ಕ ಬೋಧಕರ ವಸತಿ ಗೃಹಗಳಿವೆ ಡಬಲ್ ಬೆಡ್ ರೂಂನ 4 ಮನೆಗಳ 28 ಚದುರ ವಿಶಾಲತೆಯನ್ನು ಹೊಂದಿದೆ. ಬೋಧಕೇತರರ ವಸತಿಗಾಗಿ ಸಿಂಗಲ್ ಬೆಡ್ರೂಂನ 4 ಮನೆಗಳು 15 ಚದುರದಲ್ಲಿದೆ.
ಶೌಚದ ನೀರು ಪುನರ್ ಬಳಕೆ : ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಶೌಚಾಲಯಕ್ಕೆ ಬಳಸುವ ನೀರನ್ನು ಪುನ: ಬಳಸಲು ಯೋಗ್ಯವಾಗುವಂತೆ ಮಾಡುವ ಡಿವ್ಯಾಟ್ ತಂತ್ರಜ್ಞಾನವನ್ನು ಬಳಸಿದ್ದು ಈ ತಂತ್ರಜ್ಞಾನವನ್ನು ಅಳವಡಿಸಲು ನ್ಯೂಜಿಲೆಂಡ್ನ ಇಂಜನಿಯರ್ರವರನ್ನು ಇಲ್ಲಿಗೆ ಕರೆಯಿಸಿ ಈ ವ್ಯವಸ್ಥೆಯನ್ನು ಅಳವಡಿಸಿರುವುದು ಈ ಕಟ್ಟಡದ ವಿಶೇಷವಾಗಿದೆ. ಮೊರಾಜರ್ಿ ಶಾಲೆಗಳ ಕಟ್ಟಡಗಳ ಪೈಕಿ ರಾಜ್ಯದ ಯಾವುದೇ ಭಾಗದಲ್ಲಿ ಈ ತರಹದ ತಂತ್ರಜ್ಞಾನವನ್ನು ಅಳವಡಿಸಿಲ್ಲ, ಇದೇ ಮೊದಲು ಮೇಲನಹಳ್ಳಿ ಶಾಲೆಗೆ ಅಳವಡಿಸಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿಮುದ್ದುಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಜಲ ಮರು ಪೂರ್ಣ, ಸೋಲಾರ್ ಅಳವಡಿಕೆಯಂತಹ ಪರಿಸರ ಸ್ನೇಹಿ ಕ್ರಮಗಳನ್ನು ಈ ಕಟ್ಟಡ ಹೊಂದಿದೆ.
ಇಷ್ಟು ಚೆಂದದ ಕಟ್ಟಡವನ್ನು ಇದೇ 27ರಂದು ಮಧ್ಯಾಹ್ನ 3ಕ್ಕೆ ಮಕ್ಕಳ ಉಪಯೋಗಕ್ಕೆ ಸಚಿವ ಎ.ನಾರಾಯಣಸ್ವಾಮಿ ವಿನಿಯೋಗಿಸಲು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಜಿ.ಪಂ.ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜಯ್ಯ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರುಗಳು ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿಧಿಗಳು ಈ ಶಾಲೆಗೆ ಸಂಬಂಧಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Thursday, August 25, 2011

ಕಂಬಳಿ ನೇಯ್ಗೆಯಲ್ಲಿ ತಾಲ್ಲೂಕಿಗೆ ಉತ್ತಮ ಹೆಸರಿದೆ ಚಿಕ್ಕನಾಯಕನಹಳ್ಳಿ,ಆ.25 :

ರಾಜ್ಯಕ್ಕೆ ತಾಲ್ಲೂಕಿನ ಕಂಬಳಿ ನೇಯ್ಗೆಯ ನೇಕಾರರು ಉತ್ತಮ ಕೊಡುಗೆ ನೀಡಿದ್ದು ಅದನ್ನು ಉಳಿಸಲು ನೇಕಾರರು ತರಬೇತಿ ಮೂಲಕ ಇತರರಿಗೆ ನೇಕಾರಿಕೆಯ ಬಗ್ಗೆ ತಿಳಿಸಿ ನೇಕಾರಿಕೆಯನ್ನು ಉಳಿಸಬೇಕು ಎಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಹೇಳಿದರು. ಪಟ್ಟಣದ ಕಂಬಳಿ ಸೊಸೈಟಿಯಲ್ಲಿ ನಡೆದ ಕ್ಲಸ್ಟರ್ ಯೋಜನೆಯ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನೇಕಾರಿಕೆ ಉಳಿಯಬೇಕೆಂದರೆ ನೇಕಾರರು ಇತರರಿಗೆ ನೇಯ್ಗೆಯ ಬಗ್ಗೆ ತರಬೇತಿ ನೀಡಿ ಜವಳಿ ಉದ್ಯಮವನ್ನು ಉಳಿಸಿ ಮುಂದಿನ ಪೀಳಿಗೆಗೆ ನೇಯ್ಗೆಯ ಬಗ್ಗೆ ತಿಳುವಳಿಕೆ ನೀಡಬೇಕು ಎಂದ ಅವರು ನೇಕಾರರಿಗೆ ಸಕರ್ಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ತಿಳಿಸಬೇಕು ಎಂದರು. ಜವಳಿ ಇಲಾಖೆಯ ಉಪನಿದರ್ೇಶಕ ಸುನಿಲ್ಕುಮಾರ್ ಮಾತನಾಡಿ ಇಲಾಖೆಯವರು ಜಿಲ್ಲಾದ್ಯಂತ ನೇಕಾರರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ, ಆದ್ದರಿಂದ ನೇಕಾರರು ಈ ಸೌಲಭ್ಯದ ಬಗ್ಗೆ ಗಮನಿಸಿ ಆಥರ್ಿಕವಾಗಿ ಸದೃಡರಾಗಬೇಕು ಆಗ ಮಾತ್ರ ಯೋಜನೆಗೆ ಬೆಲೆ ಬರುತ್ತದೆ ಎಂದರು. ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮುಂದಿನ ದಿನಗಳಲ್ಲಿ ಗುಡಿ ಕೈಗಾರಿಕೆಗಳು ನಂಬಿರುವ ಕುಟುಂಬಗಳಿಗೆ ಆಥರ್ಿಕ ಭದ್ರತೆ ಒದಗಿಸುವಂತಹ ಕಾರ್ಯಕ್ರಮಗಳನ್ನು ಸಕರ್ಾರ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು ಸಕರ್ಾರಿ ಸೌಲಭ್ಯ ಪಡೆಯುವುದು ಈ ಸಮಾಜದ ಪ್ರತಿಯೊಬ್ಬರ ಹಕ್ಕು ಎಂದರು. ಸಮಾರಂಭದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಲೋಕೇಶ್, ಬನಶಂಕರಿ ಸೊಸೈಟಿ ಅಧ್ಯಕ್ಷ ಕಿರಣ್ಕುಮಾರ್ ಕಂಬಳಿ ಸೊಸೈಟಿ ನಿದರ್ೇಶಕರುಗಳಾದ ಗೋವಿಂದಪ್ಪ, ಅಳವೀರಪ್ಪ, ಬೀರಪ್ಪ ಮುಂತಾದವರಿದ್ದರು.
ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 26ಸಾವಿರ ಸಂಘ ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಚಿಕ್ಕನಾಯಕನಹಳ್ಳಿ,ಆ.25 : ಕೇವಲ ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ 26ಸಾವಿರ ಸಂಘ ಸ್ಥಾಪಿಸಿ ಹಲವಾರು ಜನರಿಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿದರ್ೇಶಕ ಪುರುಷೋತ್ತಮ್ ಹೇಳಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆದ ಗ್ರಾಮ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 1500 ಸಂಘ ಸ್ಥಾಪಿಸಿ ಪಟ್ಟಣದಲ್ಲಿ 180 ಸಂಘವನ್ನು ಸ್ಥಾಪಿಸಿ ಸಂಘದ ಸದಸ್ಯರಿಗೆ ಸಾಲ ಹಾಗೂ ಅವರಿಗೆ ಆಥರ್ಿಕ ಸಹಾಯವನ್ನು ಯೋಜನೆಯ ವತಿಯಿಂದ ಮಾಡಲಾಗಿದೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸವಿದ್ದು ಸವಧರ್ಮ ಸಮಾನತೆಯಿಂದ ಚತರ್ುದಾನವನ್ನು ಕ್ಷೇತ್ರದಲ್ಲಿ ನೀಡಲಾಗುತ್ತಿದೆ ಎಂದರು.ಪುರಸಭಾ ಸದಸ್ಯೆ ಶಾರದ ಶಂಕರ್ಬಾಬು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಡಾ.ವೀರೇಂದ್ರಹೆಗ್ಗಡೆರವರು ತಂದಿರುವ ಈ ಯೋಜನೆಯ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದ ಅವರು ಸಂಘಟನೆಯ ಪ್ರತಿಯೊಬ್ಬರು ಸಂಘದ ಅಭಿವೃದ್ದಿಗಾಗಿ ಸಂಘದ ಒಗ್ಗಟ್ಟಾಗಿ ಸಂಘದ ಬೆಳವಣಿಗೆಯನ್ನು ಮುಂದುವರಿಸಲು ತಿಳಿಸಿದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಸಹಕಾರ್ಯದಶರ್ಿ ಸಿ.ಬಿ.ಲೋಕೇಶ್, ಮೇಲ್ವಿಚಾರಕರಾದ ರವಿಕುಮಾರ್, ಸೇವಾ ಪ್ರತಿನಿಧಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.




















Wednesday, August 24, 2011

ಅರಸುರವರು ತಂದ ಮೀಸಲಾತಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ದಿ : ಸಿ.ಟಿ.ಮುದ್ದುಕುಮಾರ್ಚಿಕ್ಕನಾಯಕನಹಳ್ಳಿಆ.24: ದೇವಾರಾಜ್ ಅರಸರವರು ಅಂದು ಹಿಂದುಳಿದ ವರ್ಗಗಳ ಪರವಾಗಿ ನಿಂತು ಮೀಸಲಾತಿ ತರದೇ ಹೋಗಿದ್ದರೆ ಈಗಿರುವ ನೌಕರರ ಪೈಕಿ ಶೇ.10 ರಷ್ಟು ಹಿಂದುಳಿದ ಜನಾಂಗದವರು ಸಕರ್ಾರಿ ನೌಕರಿಯನ್ನು ಕಾಣಲಾಗುತ್ತಿರಲಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ. ಮುದ್ದುಕುಮಾರ್ ವಿಶ್ಲೇಷಿಸಿದರು. ಪಟ್ಟಣದ ಹಳ್ಳಿಕಾರ ಬೀದಿ ಸಕರ್ಾರಿ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಿ.ಬಿ. ಎಸ್. ಅಭಿಮಾನಿ ಬಳಗ ಹಾಗೂ ತಾಲ್ಲೂಕು ಪತ್ರಕರ್ತರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಸಕರ್ಾರಿ ಸವಲತ್ತುಗಳು ಸಿಗಬೇಕೆಂಬ ಆಶಯ ಅರಸುರವದಾಗಿತ್ತು ಎಂದರು. ಇಂದು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳು ಸಿಗುತ್ತಿದೆ, ದೇವರಾಜ್ ಅರಸ್ ನಿಗಮವು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಗಮನದಲ್ಲಿಟ್ಟು ಕೊಂಡು ಅವರಿಗೆ ಹೆಚ್ಚಿನ ಒತ್ತು ನೀಡಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು ಈ ಬಗ್ಗೆ ಹೆಚಿನ ಮಾಹಿತಿ ಪಡೆಯಲು ದೇವರಾಜ್ ಅರಸ್ ಅಭಿವೃದ್ಧಿ ನಿಗಮವನ್ನು ಸಂಪಕರ್ಿಸಲು ಕೋರಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಕಣ್ಣಯ್ಯ ಮಾತನಾಡಿ ಅರಸು ರವರು ತಮ್ಮ ಮಂತ್ರಿ ಮಂಡಲದಲ್ಲಿ ಮಾಜಿ ಶಾಸಕ ದಿ ಎನ್. ಬಸವಯ್ಯನವರನ್ನು ಕರೆದು ಮಂತ್ರಿ ಪದವಿಯನ್ನು ನೀಡಿದ್ದರು. ಅರಸುರವರು ಅಂದು ಬಸವಯ್ಯನರಿಗೆ ಮಂತ್ರಿ ಪದವಿ ಕೊಡದೆ ಇದಿದ್ದರೆ ಸ್ವತಂತ್ರಾ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಂತ್ರಿಗಿರಿ ಈ ತಾಲ್ಲೂಕಿಗೆ ಇಂದಿನ ವರೆಗೆ ದೊರಕದೆ ಗಗನ ಕುಸುಮವಾಗಿ ಉಳಿದಿರುವುದು ಎಂದರು. ದಿಬಸವಯ್ಯನವರೂ ಅರಸುರವರ ಮೇಲೆ ಅಷ್ಠೇ ನಿಷ್ಠೆಯನ್ನು ಇಟ್ಟಿದ್ದರು ಎಂದರು. ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ. ರೇಣುಕಸ್ವಾಮಿ ಮಾತನಾಡಿ ದೇವರಾಜ್ ಅರಸ್ ರವರನ್ನು ಚಿ.ನಾ.ಹಳ್ಳಿಗೆ ಕರೆಸಿದ್ದ ನಮ್ಮ ಸಂಘ, ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ ಅವಕಾಶ ನಮ್ಮ ಸಂಘಕ್ಕೆ ದೊರೆತಿತ್ತು ಎಂದು ಸ್ಮರಿಸಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷ ಸಿ ಎಲ್. ದೊಡ್ಡಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಿ.ಬಿ.ಎಸ್. ಅಭಿಮಾನಿ ಬಳಗದ ಸಂಚಾಲಕ ಸಿ.ಎಸ್.ನಟರಾಜ್ ಕ.ರ. ವೇ. ಅಧ್ಯಕ್ಷ ಸಿ.ಟಿ. ಗುರುಮೂತರ್ಿ ತಾ ಪತ್ರಕರ್ತರ ಸಂಘದ ಕಾರ್ಯದಶರ್ಿ ಸಿ ಹೆಚ್ ಚಿದಾನಂದ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಲೆಯ ಬಡ ವಿದ್ಯಾಥರ್ಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.ಶಾಲೆಯ ಮು.ಶಿ. ಜಯಲಕ್ಷ್ಮಮ್ಮ ಸ್ವಾಗತಿಸಿದರೆ ಶಶಿಕಲಾ ನಿರೂಪಿಸಿ ಶಂಷದ್ ಉನ್ನೀಸ್ ವಂದಿಸಿದರು.

ಕೇಂದ್ರ ಸಕರ್ಾರವು ಮಸೂದೆ ಜಾರಿಗೆ ತರುವುದು ಅನಿವಾರ್ಯ : ಎಂ.ವಿ.ನಾಗರಾಜ್ರಾವ್ ಚಿಕ್ನಾಯಕನಹಳ್ಳಿ,ಆ.24: ಜನಲೋಕಪಾಲ್ ಮಸೂಸೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಇಟೀ ಭಾರತದ ಒಂದು ನೂರು ಕೋಟಿ ಜನ ಬೆಂಬಲಿಸಿರುವುದನ್ನು ಕೇಂದ್ರ ಸಕರ್ಾರ ಅರಿತು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು. ಪಟ್ಟಣದ ನೆಹರು ವೃತ್ತದಲ್ಲಿ ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ ಸಂಯುಕ್ತವಾಗಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಚಿತ್ರ ಬಿಡಿಸುವ ಮೂಲಕ ಧರಣಿ ಸತ್ಯಾತಗ್ರಹವನ್ನು ಏರ್ಪಡಿಸಿತ್ತು. ದೇಶದಲೆಲ್ಲಾ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ವೃತ್ತಿ ನಿರತರೂ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು ವಿದ್ಯಾಥರ್ಿಗಳ ಭಾಗವಹಿಸುವಿಕೆ ಉತ್ತಮವಾಗಿದೆ, ನಮ್ಮ ತಾಲ್ಲೂಕಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ನವರು ಭ್ರಷ್ಠಾಚಾರತೆಯನ್ನು ಖಂಡಿಸಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಬರೆದಿರುವ ಚಿತ್ರಗಳು ಮನೋಜ್ಞಾವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರದಿಂದ ಅನುಕೂಲ ಪಡೆಯುವ ಎಲ್ಲರನ್ನೂ ಈ ಕಾಯಿದೆ ಅಡಿ ಸೇರಿಸಬೇಕೆಂದರಲ್ಲದೆ ಇತ್ತೀಚಿಗೆ ಸಕರ್ಾರದಿಂದ ಮಠಗಳು ಪ್ರಯೋಜನ ಪಡೆಯುತ್ತಿದ್ದು ಮಠಾಧೀಶರನ್ನು ಈ ವ್ಯಾಪ್ತಿಗೆ ಒಳಪಡಿಸಬೇಕೆಂದರು. ಕಲಾವಿದ ಸಿದ್ದು ಜಿ.ಕೆರೆ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದ ಮನೆ ಮಾತನಾಡಿದರು.
ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯಂತೆ ಅಧಿಕಾರಿಗಳು ಕೆಲಸ ನಿರ್ವಹಿಸಿ
ಚಿಕ್ಕನಾಯಕನಹಳ್ಳಿ,ಆ.24 : ಅಧಿಕಾರಿಗಳು ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಿ ಎಂದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಸಲಹೆ ನೀಡಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾ.ವೀರಶೈವ ಸಮಾಜ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸಾಸಲು ಗ್ರಾಮದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿ.ಸೌಮ್ಯ ಸುಧಾಕರ್ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ನೊಂದು, ಬೆಂದವರಿಗೆ ಧ್ವನಿಯಾಗಿ ಬದುಕಿ , ವ್ಯಕ್ತಿಗಳಿಗೆ ನಂಬಿಕೆ, ಕರ್ತವ್ಯ ಆತ್ಮವಿಶ್ವಾಸ ಸಮಯ ಪಾಲನೆ, ಪ್ರಾಮಾಣಿಕ ನಿಷ್ಠೆ ಆದರ್ಶಗಳ ಮೂಲಕ ಬಡವರಿಗೆ ತಮ್ಮ ಅಧಿಕಾರದಿಂದ ನೆರವಾದವರು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅಧಿಕಾರ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದ ಅವರು ಗ್ರಾಮೀಣ ಪ್ರದೇಶದಿಂದ ಉನ್ನತದಜರ್ೆಗೆ ಏರಿದ ಸೌಮ್ಯರವರ ಪೋಷಕರು ಹಾಗೂ ಪತಿಯವರ ಪ್ರೋತ್ಸಾಹ ಮೆಚ್ಚುವಂತಹದು, ಶಕ್ತಿ ಇಲ್ಲದ ಹಿಂದುಳಿದವರ ಪೋಷಕರಿಗೆ ರಕ್ಚಣೆ ನೀಡಿದರೆ ಭಗವಂತನ ಸೇವೆ ಮಾಡಿದಂತೆ ಕಷ್ಠ ಇರುವವರು ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ತಮ್ಮ ಬಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಪ್ರಾಮಾಣಿಕತೆ ತೋರ್ಪಡಿಸಬೇಕು ಎಂದರು.

Tuesday, August 23, 2011












ಆಥರ್ಿಕವಾಗಿ ಹಿಂದುಳಿದವರಿಗೆ ನೆರವಾಗಲು ಸಿದ್ದವಾಗಿರುವ ಡಿಸಿಸಿ ಬ್ಯಾಂಕ್ಚಿಕ್ಕನಾಯಕನಹಳ್ಳಿ,ಆ.23 :

ಆಥರ್ಿಕವಾಗಿ ಹಿಂದುಳಿದು ಬೇರೆಯವರ ಮನೆಯಲ್ಲಿ ಜೀತಕ್ಕಿರುವ ಬಡವರ್ಗದವರಿಗೆ ಬಡ್ಡಿರಹಿತ ಸಾಲನೀಡುವುದಾಗಿ ಕೆ.ಎನ್.ರಾಜಣ್ಣನವರು ತಿಳಿಸಿರುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು. ಪಟ್ಟಣದ ಮಾರುತಿ ನಗರದಲ್ಲಿ ನಡೆದ ದಿ.ದೇವರಾಜ ಅರಸು ನೆನಪು ದಿನದ ಹಾಗೂ ಸಾಲಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಅರಸುರವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ದಾರ್ಶನಿಕರು ಅವರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಿಂದುಳಿದ ವರ್ಗವಾದ ದಕ್ಕಲಿಗರು, ಸುಡುಗಾಡು ಸಿದ್ದರು ಇಂತಹ ಜನಾಂಗದ ಅಭಿವೃದ್ದಿಗಾಗಿ ಜಿಲ್ಲಾ ಬ್ಯಾಂಕ್ ಶ್ರಮಿಸುತ್ತಿದೆ ಅಲ್ಲದೆ ಈ ಜನಾಂಗಗಳಿಗೆ ಸಂಘಗಳನ್ನು ರಚಿಸಿ ಸಾಲಸೌಲಭ್ಯ ನೀಡುವ ಮೂಲಕ ಈ ಜನಾಂಗದ ಸಂಘಟನೆಗೆ ಶ್ರಮಿಸುತ್ತಿರುವುದಾಗಿ ಹಾಗೂ ಈ ಜನಾಂಗದಲ್ಲಿ 24 ಕುಟುಂಬಗಳಿದ್ದು 2 ಸಂಘ ರಚಿಸಿ ಕುಟುಂಬಕ್ಕೆ ತಲಾ ಹತ್ತುಸಾವಿರದಂತೆ ನೀಡಿ ಅವರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವದಾಗಿ ತಿಳಿಸಿದ ಅವರು ತಾಲ್ಲೂಕಿನಾದ್ಯಂತ ಸುಮಾರು 6 ಕೋಟಿರೂಗಳಷ್ಠು ಸ್ವಸಹಾಯ ಸಂಘಗಳಿಗೆ ಜಿಲ್ಲಾ ಬ್ಯಾಂಕಿನಿಂದ ಸಾಲ ಕೊಡಿಸಿರುವುದಾಗಿ ತಿಳಿಸಿದರು. ಅಲೆಮಾರಿ ಜನಾಂಗದ ಮುಖಂಡ ಡಾ.ರಘುಪತಿ ಮಾತನಾಡಿ ಭಾರತ ದೇಶದಲೆಲ್ಲಾ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ದೇವರಾಜು ಅರಸುರವರು ಧ್ವನಿ ಇಲ್ಲದ, ಹಿಂದುಳಿದ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದವರು ಎಂದ ಅವರು ಜಿಲ್ಲಾ ಬ್ಯಾಂಕ್ ಅಲೆಮಾರಿ ಮಹಿಳೆಯರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವುದು ಈ ಸಮಾಜದ ಸಂಘಟನೆಯ ಬಲವರ್ಧನೆಗೆ ಮೆಟ್ಟಿಲಾಗಿದ್ದು ಸಂಘಟನೆಯವರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿ ಜ್ಞಾನಾರ್ಜನೆ ಮಾಡುವ ಮೂಲಕ ಸಂಘಟಿಸಬೇಕು ಎಂದರು. ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅಲೆಮಾರಿ ಜನಾಂಗಕ್ಕೆ ಶಾಸಕರು 40 ಮನೆ ನಿಮರ್ಿಸಲು ತಿಳಿಸಿದ್ದು ಮುಂದಿನ ದಿನಗಳಲ್ಲಿ ಅಲೆಮಾರಿ ನಿವೇಶನದ ಮನೆಗಳ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ, ಪುರಸಭಾ ಸದಸ್ಯ ರಾಜು, ಗೋ.ನಿ.ವಸಂತ್ಕುಮಾರ್, ಕೇಶವಮೂತರ್ಿ, ಶಾಮ್ ಮುಂತಾದವರಿದ್ದರು.

Monday, August 22, 2011















ತುತರ್ು ಪರಿಸ್ಥಿತಿ ಬೇಡ, ಜನ ಲೋಕ ಪಾಲ್ ಜಾರಿಯಾಗಲಿ: ಕೆ.ಎಸ್.ಕೆ.ಚಿಕ್ಕನಾಯಕನಹಳ್ಳಿ,ಆ.22 : ಪ್ರತಿಭಟನೆ, ಧರಣಿಗಳನ್ನು ತನ್ನ ಸ್ವತ್ತು ಎನಿಸಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷಕ್ಕೆ ಅಣ್ಣಾ ರವರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಪಕ್ಷದ ದಯಾನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು. ಪಟ್ಟಣದ ನೆಹರು ಸರ್ಕಲ್ನಲ್ಲಿ ಭಾಜಪ ತನ್ನ ಪ್ರತಿಭಟನೆಯನ್ನು ಭಜನೆ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುತರ್ು ಪರಿಸ್ಥಿತಿ ಜಾರಿಗೆ ಬರುವುದು ಬೇಡ, ಜನಲೋಕಪಾಲ ಮಸೂದೆ ಜಾರಿಗೆ ಬರಲಿ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿತ್ತಿದೆ ಎಂದರು. ಕೇಂದ್ರ ಸಕರ್ಾರದ ದ್ವಿಮುಖ ನೀತಿಯಿಂದ ಭ್ರಷ್ಠಾಚಾರ ನೀತಿ ಹೆಚ್ಚುತ್ತಿದೆ, ಬಾಬಾರಾಮ್ದೇವ್ರವರು ರಾಮಲೀಲ ಮೈದಾನದಲ್ಲಿ ಭ್ರಷ್ಠಾಚಾರ ನೀತಿ ವಿರೋಧಿಸಿ ಸತ್ಯಾಗ್ರಹ ನಡೆಸಿದಾಗ ಕೇಂದ್ರ ಸಕರ್ಾರ ಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತಂದಿದ್ದು, ಅಣ್ಣಾ ಹಜಾರೆ ರವರು ಭ್ರಷ್ಠಾಚಾರ ವಿರೋಧಿಸಲು ಪ್ರತಿಭಟನಾಕಾರರಿಗೆ ಕರೆ ನೀಡಿದ ತಕ್ಷಣ ಕೇಂದ್ರ ಸಕರ್ಾರ ಬಂಧಿಸಿದ್ದು, ದೇಶದಲ್ಲಿ ಅನ್ಯಾಯದ ಕ್ರಾಂತಿ ಮೊಳಗುತ್ತಿದೆ ಎಂದ ಅವರು ಮಸೂದೆ ಜಾರಿಯಾಗುವ ಮೂಲಕ ಪ್ರದಾನಿ, ಪ್ರದಾನಿಯವರ ಕಾಯರ್ಾಲಯಮ, ನ್ಯಾಯಮೂತರ್ಿಗಳು ಸೇರಿದಂತೆ ಪ್ರತಿಯೊಬ್ಬರನ್ನೂ ಕಾನೂನಿನ ಕಾಯ್ದೆ ಒಳಗೆ ಬರುವಂತೆ ಒತ್ತಾಯಿಸುತ್ತಿದ್ದೇವೆ ಈ ಮೂಲಕ ಕೇಂದ್ರ ಸಕರ್ಾರ ಮಸೂದೆ ಜಾರಿಯಾಗಲು ಸ್ಪಂದಿಸಬೇಕು ಇಲ್ಲವಾದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸತ್ಯಾಗ್ರಹದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮ್ಯಯ, ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಕಾರ್ಯದಶರ್ಿ ಹಳೆಮನೆ ಸುರೇಶ್, ಪಕ್ಷದ ಕಾರ್ಯಕರ್ತರಾದ ಮೈಸೂರಪ್ಪ, ವಿ.ಆರ್.ಮೇರುನಾಥ್, ಶ್ರೀನಿವಾಸಮೂತರ್ಿ, ಶರತ್ ಕುಮಾರ್ ಲಕ್ಷ್ಮಯ್ಯ, ಈಶ್ವರ್ಭಾಗವತ್, ಹನುಮಂತಪ್ಪ, ವಸಂತಯ್ಯ, ಮಮತ ಮುಂತಾದವರಿದ್ದರು.
ಅಂದು ಅರಸು ತೆಗೆದುಕೊಂಡ ನಿಧರ್ಾರಗಳಿಂದ ಇಂದಿಗೂ ಅವರು ಅಜರಾಮರಚಿಕ್ಕನಾಯಕನಹಳ್ಳಿ,ಆ.22: ಇಂದಿರಾ ಗಾಂಧಿಯವರ 20 ಅಂಶಗಳ ಯಶಸ್ವಿ ಅನುಷ್ಠಾನ, ಭಾಗ್ಯಜ್ಯೋತಿ, ಮಲ ಹೊರುವ ಪದ್ದತಿ ರದ್ದು ಸೇರಿದಂತೆ ಬಡವರ ಏಳಿಗೆಗೆ, ತುಳಿತಕ್ಕೆ ಒಳಗಾದ ಜನರಿಗೆ ನೇರವಾಗಿ ನೆರವಾದ ಧೀಮಂತ ನಾಯಕ ದೇವರಾಜ್ ಅರಸು ರವರು ಅಜರಾಮರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಹಂದನಕೆರೆ ಹೋಬಳಿ ಸೈಯದ್ ಸಾಬ್ ಪಾಳ್ಯದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ್ ಅರಸ್ ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸು ರವರು ಉಳ್ಳವರ ಹಾಗೂ ಮೇಲ್ವರ್ಗಗಳ ವಿರೋಧ ಕಟ್ಟಿಕೊಂಡರು ಅಂಜದೇ ಅಂದು ತೆಗೆದುಕೊಂಡ ನಿಧರ್ಾರಗಳಿಂದಾಗಿ ಇಂದು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶತಮಾನಗಳಿಂದ ಸಮಾಜದಿಂದ ತುಳಿತಕ್ಕೆ ಒಳಗಾದ ಜನರು ಇಂದು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರಲ್ಲದೆ, ಇಂದಿರಾಗಾಂಧಿಯವರು ಘೋಷಿಸಿದ 20 ಅಂಶಗಳ ಕಾರ್ಯಕ್ರಮವನ್ನು ಅರಸು ರವರು ಯಶಸ್ವಿಯಾಗಿ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು ಎಂದರು. ಇಂತಹ ನಾಯಕನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ನಮ್ಮ ವೇದಿಕೆ 1988 ರಿಂದಲೂ ಅರಸು ರವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ, ಅವರ ಹೆಸರಿನಲ್ಲಿ ಕಳೆದ 23 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು. ಅರಸು ರವರಿಗೆ ನುಡಿ ನಮನ ಸಲ್ಲಿಸಿದ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಅರಸು ರವರು ತಮ್ಮ 21ನೇ ವರ್ಷದಲ್ಲಿ ಎಂ.ಎಲ್.ಎ ಆಗಿದ್ದಲ್ಲದೆ, ಒಮ್ಮೆ ವಿಧಾನ ಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ತನ್ನ ಜನಪ್ರಿಯತೆಯನ್ನು ಇಡೀ ದೇಶಕ್ಕೆ ತಿಳಿಸಿದರು ಎಂದರು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಅವರು ಬಹುದೊಡ್ಡ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ರಾಜಕೀಯದ ಕನಸನ್ನು ಕಾಣದ ಹಲವು ಜನಪರ ವ್ಯಕ್ತಿಗಳನ್ನು ಅಧಿಕಾರಕ್ಕೆ ತರುವ ಮೂಲಕ ತನ್ನ ಪ್ರಭಾವವನ್ನು ಬೆಳಿಸಿಕೊಂಡಿದ್ದಲ್ಲದೆ, ಯುವ ಸಮೂಹವನ್ನು ಮುಖ್ಯವಾಹಿನಿಗೆ ತಂದರು ಅವರು ಅಂದು ಬೆಳೆಸಿದ ಕುಡಿಗಳು ಇಂದಿಗೂ ಸಂಸತ್ತು, ವಿಧಾನ ಸಭೆಗಳಲ್ಲಿ ದೊಡ್ಡ ಶಕ್ತಿಯಾಗಿ ಕಾಣಸಿಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಹಂದನಕೆರೆ ಜಿ.ಪಂ.ಸದಸ್ಯ ಜಾನಮ್ಮ ರಾಮಚಂದ್ರಯ್ಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು, ತಾ.ಪಂ.ಸದಸ್ಯ ನಿರಂಜನಮೂತರ್ಿ, ತಾಲೂಕು ಅರಸು ಸಮಾಜದ ಅಧ್ಯಕ್ಷ ನಾಗರಾಜ್ ಅರಸ್, ಮತ್ತಿಘಟ್ಟ ಗ್ರಾ.ಪ. ಅಧ್ಯಕ್ಷ ಎಂ.ಎಸ್.ಉಮೇಶ್, ಗ್ರಾ.ಪಂ.ಸದಸ್ಯ ಸಿದ್ದರಾಮಯ್ಯ, ಉಪನ್ಯಾಸಕ ಸದಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ಲಿಗೆರೆ ಗ್ರಾ.ಪಂ. ಸದಸ್ಯ ತಾತಯ್ಯ, ಶಿವಲಿಂಗಯ್ಯ, ಮಹಬೂಬ್ ಸಾಬ್, ನಿಂಗರಾಜ್, ಲಕ್ಷ್ಮಣ್, ಮನ್ಸೂರ್ ಪಾಷ, ರಾಮಚಂದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶಿವಮ್ಮ ಪ್ರಾಥರ್ಿಸಿದರೆ, ಗಾಂಧಿನಗರ ಅನಂತು ಸ್ವಾಗತಿಸಿ, ಶಿಕ್ಷಕ ಎ.ಸೋಮಶೇಖರ್ ನಿರೂಪಿಸಿ ಶಿಕ್ಷಕ ನಾಗರಾಜ್ ವಂದಿಸಿದರು.