Wednesday, June 5, 2013



ಶಿಲ್ಪಕಲೆಯ ಮೂಲಕ  ಜಿಲ್ಲಾ ಸಮ್ಮೇಳನಕ್ಕೆ ಮೆರಗು: ಸೋ.ಮು.ಭಾಸ್ಕರಾಚಾರ್ 

ಚಿಕ್ಕನಾಯಕನಹಳ್ಳಿ,ಜೂ.05 : ಕಲೆ, ಶಿಲ್ಪಕಲೆಯ ಬಗ್ಗೆ ಯುವಜನತೆ ಆಸಕ್ತಿ ಮೂಡಿಸಲು ಏರ್ಪಡಿಸಿರುವ ಚಿತ್ರಕಲಾ ಶಿಬಿರವು ಕಲಾವಿದರನ್ನು ಪ್ರೋತ್ಸಾಹಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್  ಎಂದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕಿನಲ್ಲಿ ನಡೆಯುವ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕುಂಚಾಂಕುರ ಕಲಾ ಸಂಘ, ಹೊಯ್ಸಳ ಶಿಲ್ಪ ಕೇಂದ್ರ, ಜಕಣಾ ಶಿಲ್ಪ ಗುರು ಕುಲಾ ಹಾಗೂ ವಾಣಿ ಚಿತ್ರಕಲಾ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 5ರಿಂದ 15ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಚಿತ್ರಕಲಾ ಹಾಗೂ ಶಿಲ್ಪಕಲಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾರತ ಶಿಲ್ಪಕಲೆ, ಸಂಸ್ಕೃತಿಗಾಗಿ ವಿಶೇಷ ಉತ್ತೇಜನ ನೀಡುತ್ತಿದೆ, ಅನಾದಿಕಾಲದಿಂದಲೂ ನಮ್ಮ ರಾಜ ಮಹರಾಜರು ಶಿಲ್ಪಕಲೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಫಲವಾಗಿ ಬೇಲೂರು, ಹಳೆಬೀಡು, ಅಜಂತ, ಎಲ್ಲೋರ, ಪಟ್ಟದಕಲ್ಲು, ಐಹೊಳೆಯು ಜಗದ್ ವಿಖ್ಯಾತವಾಗಿವೆ. ನಮ್ಮ ಪೂರ್ವಜರು ಅತ್ಯಂತ ಬುದ್ದಿವಂತರು ಎಂಬುದಕ್ಕೆ ಈ ನಿದರ್ಶನಗಳೇ ಸಾಕ್ಷಿಯಾಗಿದೆ, ಕಲೆ ನಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ, ಕಲೆಯನ್ನು ಸೃಷ್ಠಿ ಮಾಡುವ ಕಲಾವಿದ ಸರ್ವ ಶ್ರೇಷ್ಠವಾದವನು ಕಲಾವಿದರು ಜಾತ್ಯಾತೀತ ಪಕ್ಷಾತೀತವಾಗಿ ಬೆಳೆಯುತ್ತಿದ್ದಾರೆ, ಶಿಲ್ಪಕಲೆ ಮಾನವನ ಬದುಕಿನ ಸಾರ್ಥಕತೆಗೆ ದಾರಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತಾಲ್ಲೂಕಿನಲ್ಲಿ ನಡೆಯುವ 9ನೇ ಜಿಲ್ಲಾ ಕನ್ನಡ ಸಮ್ಮೇಳನದ ಯಶಸ್ವಿಗೆ ಎಲ್ಲರೂ ದುಡಿಯಬೇಕು, ನಮ್ಮಲ್ಲಿನ ಯುವ ಪ್ರತಿಭೆಗಳು ಧಾಮರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಡಿನ ಉತ್ತಮ ಸಂದೇಶ ನೀಡುವಂತಾಗಬೇಕಿದೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜಾನಪದ ಕಲಾ ತಂಡಗಳು ಸಂಘ ಸಂಸ್ಥೆಗಳು ತೊಡಿಸಿಕೊಂಡಾಗ ಮಾತ್ರ ತಾಲ್ಲೂಕಿನಲ್ಲಿ ಸಮ್ಮೇಳನ ಯಶಸ್ವಿಯಾಗಲು ಸಾಧ್ಯ ಇದಕ್ಕೆ ನಾನು ತಮ್ಮ ಜೊತೆಯಲ್ಲಿದ್ದು ಸಮ್ಮೇಳನದ ಯಶಸ್ವಿಗಾಗಿ ದುಡಿಯುವುದಾಗಿ ತಿಳಿಸಿದರು. 
 ಮೂರು ದಿನ ನಡೆಯುವ ಸಮ್ಮೇಳನದ ಗೋಷ್ಠಿಗಳು ಯುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಸಮ್ಮೇಳನದಲ್ಲಿ ನಡಯುವ ಗೋಷ್ಠಿಗಳು ನಾಡಿಗೆ ಉತ್ತಮ ಸಂದೇಶ ನೀಡುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಪುರಸಭಾ ಸದಸ್ಯರಾದ ರಂಗಸ್ವಾಮಯ್ಯ, ಅಶೋಕ್, ಬಿ.ಇ.ಓ ಸಾ.ಚಿ.ನಾಗೇಶ್, ಸಿಡಿಪಿಓ ಅನೀಸ್ಖೈಸರ್, ತಾ.ಕಸಾಪ ಅಧ್ಯಕ್ಷ ರವಿಕುಮಾರ್,  ಪರಶಿವಮೂತರ್ಿ, ರಾಜಶೇಖರ್, ಸಿದ್ದು ಜಿ.ಕೆರೆ, ಸಿ.ಹೆಚ್.ಗಂಗಾಧರ್, ಶಿಲ್ಪಿವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನೆ



ಚಿಕ್ಕನಾಯಕನಹಳ್ಳಿ,ಜೂ.05 : ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ರಾಜಗೋಪುರ, ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಸಮಾರಂಭವು ಜೂನ್ 19ರಿಂದ 21ರವರೆಗೆ ನಡೆಯಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜೀಣರ್ೋದ್ದಾರ ಸಮಿತಿಯ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಂಜನೇಯಸ್ವಾಮಿ ದೇವಾಲಯದ ರಾಜೋಗೋಪುರಕ್ಕೆ 45ಲಕ್ಷರೂಗಳ ವೆಚ್ಚದಲ್ಲಿ ನಿಮರ್ಿಸಲಾಗಿದೆ. ಜೂನ್ 19ರಂದು ಮಹಾಗಣಪತಿ ಪೂಜೆ, ಯಾಗಶಾಲಾ ಪ್ರವೇಶ, 20ರಂದು ದೀಪಾರಾಧನೆ, ವೇದಪಾರಾಯಣ, ಗೋಪುರಶುದ್ದಿ, ಕಳಸಸ್ಥಾಪನೆ, ಮಹಾಗಣಪತಿ ಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ ನಡೆಯಲಿವೆ.  21ರಂದು ಗೋಪುರ ದೇವತಾಪೂಜೆ, ಪ್ರಾಣಪ್ರತಿಷ್ಠೆ, ಮಹಾಪೂಜೆ, ಕಳಸದರ್ಶನ ಹಾಗೂ 8ಗಂಟೆಗೆ ವೇದಪಾರಾಯಣ, ಪ್ರತಿಷ್ಠಾಂಗ ಹೋಮಾದಿಗಳು, ಮಹಾಪೂಣರ್ಾಹುತಿ, ಗೋಪೂಜೆ ನಡೆಯಲಿದ್ದು ಮಧ್ಯಾಹ್ನ 12ಗಂಟೆಗೆ ಕಳಸ ಪ್ರತಿಷ್ಠಾ ಮಹಾ ಕುಂಭಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಲಿದೆ ಎಂದು ತಿಳಿಸಿದರು.
ಈ ಸಮಾರಂಭಕ್ಕೆ ತುಮಕೂರು ರಾಮಕೃಷ್ಣ ಮಠದ ಶ್ರೀ ವೀರೇಶಾನಂದಸ್ವಾಮಿಜಿ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಜಿ.ಪಂ.ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ, ಮಾಜಿ ಶಾಸಕರುಗಳಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್ ಸೇರಿದಂತೆ ತಾಲ್ಲೂಕಿನ ವಿವಿಧ ಮಠಾಧೀಶರು,  ಜಿ.ಪಂ. ತಾ.ಪಂ, ಪುರಸಭಾ ಸದಸ್ಯರು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ದೇವಾಲಯದ ಕನ್ವಿನರ್ ಚಂದ್ರಶೇಖರ್ಶೆಟ್ಟರು, ಸಾಹಿತಿ ಎಂ.ವಿ.ನಾಗರಾಜ್ರಾವ್, ಪ್ರಚಾರ ಸಮಿತಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಡಿವಿಪಿ ವಿದ್ಯಾಸಂಸ್ಥೆಯ ಕಾರ್ಯದಶರ್ಿ ಸಿ.ಎಸ್.ನಟರಾಜು, ಪುರಸಭಾ ಸದಸ್ಯರದ ರಂಗಸ್ವಾಮಯ್ಯ, ಅಶೋಕ್, ಸಿ.ಆರ್.ತಿಮ್ಮಪ್ಪ, ರವಿಚಂದ್ರ, ಸಿ.ಕೆ.ಕೃಷ್ಣಮೂತರ್ಿ, ಮಾಳಿಗೆಹಳ್ಳಿ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ತಾ.ಪ.ಅಧ್ಯಕ್ಷರಾಗಿ ಕೆ.ಜೆ.ಪಿ.ಯ ಶಶಿಧರ್, ಉಪಾಧ್ಯಕ್ಷರಾಗಿ ಬಿ.ಜೆ.ಪಿ.ಯ ಎ.ಬಿ.ರಮೇಶ್ಕುಮಾರ್ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ,ಜೂ.05 : ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಚ್.ಆರ್. ಶಶಿಧರ್ ಹೊನ್ನೆಬಾಗಿ ಹಾಗೂ ಉಪಾಧ್ಯಕ್ಷರಾಗಿ ಎ.ಬಿ.ರಮೇಶ್ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 19 ಸ್ಥಾನಗಳಿದ್ದು ಜೆಡಿಎಸ್7 ಸದಸ್ಯರು, ಜೆ.ಡಿ.ಯುನಿಂದ ಗೆದ್ದಿದ್ದ ಸದಸ್ಯರೆಲ್ಲಾ ಒಟ್ಟಿಗೆ ಕೆ.ಜೆ.ಪಿ.ಸೇರಿದ್ದರಿಂದ 6ಜನ ಸದಸ್ಯರು ಈಗ ಕೆ.ಜೆ.ಪಿಯಲ್ಲಿದ್ದಾರೆ,  ಬಿಜೆಪಿಯಿಂದ  6ಸದಸ್ಯರು ಗೆದ್ದಿದ್ದರು. 
ಕೆಜೆಪಿ ಮತ್ತು ಬಿಜೆಪಿ ಪಕ್ಷಗಳ ಒಪ್ಪಂದದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ, ಒಪ್ಪಂದಂತೆ ಬಿ.ಜೆ.ಪಿ. ಉಪಾಧ್ಯಕ್ಷ ಪದವಿಯನ್ನು ಸ್ವೀಕರಿಸಿ, ಕೆ.ಜೆ.ಪಿ.ಗೆ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಟ್ಟಿದೆ. 
ನೂತನ ತಾ.ಪಂ.ಅಧ್ಯಕ್ಷ ಶಶಿಧರ್ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಆಡಳಿತದ ಮೊದಲ ಆದ್ಯತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿದ್ದು,  ತಾಲ್ಲೂಕಿನಲ್ಲಿ ಪಡಿತರ ಚೀಟಿಯ ಸಮಸ್ಯೆಯನ್ನು  ಸರಿಪಡಿಸಲು ಗ್ರಾಮ ಪಂಚಾಯ್ತಿಗಳ ಪಿಡಿಓ, ಕಾರ್ಯದಶರ್ಿಗಳ ಸಭೆ ಕರೆದು ಸಾರ್ವಜನರಿಗೆ ಪಡಿತರ ಚೀಟಿ ಪಡೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ, ಅಲ್ಲದೆ ತಾಲ್ಲೂಕು ಕಛೇರಿಯಲ್ಲಿ ಸಾಮಾನ್ಯ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ದಿನನಿತ್ಯ ಪರದಾಡುತ್ತಿದ್ದಾರೆ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ನಿಂದ ಆಗುತ್ತಿರುವ ತೊಂದರೆಯೂ ಸೇರಿದಂತೆ  ತಾಲೂಕಿನ ಸಮಸ್ಯೆಗಳನ್ನೆಲ್ಲ ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕು ಪಂಚಾಯಿತಿ ಆಡಳಿತ ನಡೆಸುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷ ರಮೇಶ್ಕುಮಾರ್ ಮಾತನಾಡಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರೆಲ್ಲರಿಗೂ ಅಭಿನಂದನೆ ತಿಳಿಸಿದ ಅವರು ನಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತೇವೆ, ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಉತ್ತಮ ಆಡಳಿತ ನಡೆಸುತ್ತೇವೆ ಎಂದರು. 
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ್, ಕೆಂಕೆರೆ ನವೀನ್, ವಸಂತಕುಮಾರ್, ಹೊಸಳ್ಳಿ ಜಯಣ್ಣ ಸೇರಿದಂತೆ ತಾ.ಪಂ.ಸದಸ್ಯರು ಹಾಜರಿದ್ದರು.

Tuesday, June 4, 2013


ಗ್ರಾಮಸ್ಥರು, ಶಿಕ್ಷಕಿಯ ನಡುವೆ ತಲೆದೋರಿದ್ದ ಸಮಸ್ಯೆ ಬಗೆಹರಿಸಿದ ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಜೂ.04 : ತಾಲೂಕಿನ ಸಾಲಕಟ್ಟೆ ಕಾಲೋನಿಯ ಗ್ರಾಮಸ್ಥರಿಗೂ ಹಾಗೂ ಸ್ಥಳೀಯ ಸಕರ್ಾರಿ ಶಾಲೆಯ ಮುಖ್ಯ ಶಿಕ್ಷಕಿಗೂ ತಲೆದೋರಿದ್ದ ಭಿನ್ನಾಭಿಪ್ರಾಯದಿಂದ ಶಾಲೆಗೆ ಬೀಗ ಹಾಕಿದ್ದು ಬಿ.ಇ.ಓ. ಸಾ.ಚಿ.ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಶಾಲಾ ಮುಖ್ಯಶಿಕ್ಷಕಿಯು ಶಾಲಾ ಅಭಿವೃದ್ದಿಗಾಗಿ ಬಂದಂತಹ ಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರ ಗಮನಕ್ಕೆ ಬಾರದೆ ಹಣ ಬಳಸಿಕೊಂಡಿದ್ದಾರೆ  ಎಂದು ಆರೋಪಿಸಿ ಸಾಲ್ಕಟ್ಟೆ ಕಾಲೋನಿಯ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಬೀಗ ಹಾಕಿ ಗ್ರಾಮಸ್ಥರು ಧರಣಿ ನಡೆಸಿರುವ ಘಟನೆ ನಡೆದಿತ್ತು.
ಶಾಲೆಗೆ ಬಂದಂತಹ ಶಾಲಾ ಅನುದಾನ, ಶಿಕ್ಷಕರ ಅನುದಾನವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಮುಖ್ಯಶಿಕ್ಷಕಿ ಬಳಸಿಕೊಂಡಿರುವ  ಹಣವನ್ನು ಪೂತರ್ಿ ಕಟ್ಟಬೇಕು ಜೊತೆಗೆ ಶಿಕ್ಷಕಿಯನ್ನು ಬೇರೆ ಕಡೆ ವಗರ್ಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು.
ಈ ಸಂಬಂಧ  ಸಾಲ್ಕಟ್ಟೆ ಶ್ರೀನಿವಾಸ್ ಮಾತನಾಡಿ ಶಾಲೆಯಲ್ಲಿ ಈ ರೀತಿಯ ದುರುಪಯೋಗ ನಡೆದಿರುವ ಬಗ್ಗೆ ಶಿಕ್ಷಕಿಯನ್ನು ಗ್ರಾಮಸ್ಥರು ಕೇಳಿದಾಗ ನನ್ನದು ತಪ್ಪಾಗಿದೆ ಆ ಹಣವನ್ನು ಕಟ್ಟುತ್ತೇನೆಂದು ಗ್ರಾಮಸ್ಥರ ಮುಂದೆ ಒಪ್ಪಿಕೊಂಡಿದ್ದರು, ಇದಾದ ಮೂರು ದಿನಗಳ ನಂತರವೂ ಹಣ ಕಟ್ಟಿರುವುದಿಲ್ಲ ಎಂದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜಯ್ಯ ಮಾತನಾಡಿ ನಾವು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು ನಮ್ಮ ಹಿಂದಿನ ಅವಧಿಯಲ್ಲಿ ಹಣ ದುರುಪಯೋಗವಾಗಿದೆ ಎಂದರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿ.ಇ.ಓ ಸಾ.ಚಿ.ನಾಗೇಶ್ ಘಟನೆ ಕುರಿತಂತೆ ಮಾತನಾಡಿ ಎಷ್ಟು ಹಣ ದುರುಪಯೋಗವಾಗಿದೆ ಅಷ್ಟು ಹಣವನ್ನು ಈಗಲೇ ಶಿಕ್ಷಕಿಯಿಂದ ಕಟ್ಟಿಸಿ, ಶಾಲೆಯನ್ನು ಪ್ರಾರಂಭಿಸುತ್ತೇವೆ,  ಗ್ರಾಮಸ್ಥರ ಬೇಡಿಕೆಯಂತೆ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜಿಸಲಾಗುವುದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗರಾಜಯ್ಯ, ಬಸವರಾಜು, ಈಶ್ವರ್, ಶ್ರೀರಂಗಯ್ಯ, ನಾಗೇಶಯ್ಯ, ಚಂದ್ರಯ್ಯ, ಕೃಷ್ಣಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
6ನೇ ವಾಡರ್್ನ ನಾಗರೀಕರಿಂದ ಪುರಸಭಾ ಕಛೇರಿಗೆ ಮುತ್ತಿಗೆ 
ಚಿಕ್ಕನಾಯಕನಹಳ್ಳಿ,ಜೂ.04 : ನಮಗೆ ಸಮರ್ಪಕವಾಗಿ ನೀರು ಕೊಡಿ, ರಸ್ತೆ ಸರಿಪಡಿಸಿ, ವಿದ್ಯುತ್ ನೀಡಿ ಇಲ್ಲಾವಾದರೆ ಪುರಸಭೆಯಲ್ಲಿರುವ ನಮ್ಮ ವಾಡರ್್ನ್ನು ಮಂಡಲ್ ಪಂಚಾಯಿತಿಗೆ ವಗರ್ಾಯಿಸಿಬಿಡಿ ಎಂದು ಪುರಸಭಾ ಕಛೇರಿಗೆ ಪಟ್ಟಣದ ಕೇದಿಗೆಹಳ್ಳಿ ವಾಡರ್್ಗೆ ಸೇರಿದ ಹೊಸೂರು ಗ್ರಾಮದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ನೀರು ಬೇಕು ನೀರು, ನೀರಿಗಾಗಿ ಈ ಹೋರಾಟ ಎಂಬ ಕೂಗಿನ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ಹೊಸೂರಿನ ನಾಗರೀಕರು ನಮಗೆ ಈಗ ಸಿಗುತ್ತಿರುವ ನೀರು ಸಾಲುತ್ತಿಲ್ಲ, ನಮ್ಮ ವಾಡರ್್ನಲ್ಲಿರುವ ಅಕ್ಕಪಕ್ಕದ ಜನ ನೀರಿಗಾಗಿ ಪ್ರತಿದಿನ ಜಗಳವಾಡುತ್ತಿದ್ದಾರೆ, ನಮ್ಮ ವಾಡರ್್ನ್ನು ಪುರಸಭೆಗೆ ತಗೆದುಕೊಂಡು ಹದಿನೈದು ವರ್ಷವಾದರೂ ಮೂಲಭೂತ ಸೌಕರ್ಯ ಸಿಗುತ್ತಿಲ್ಲ, ಅಲ್ಲಿನ ಕಸದ ಸಮಸ್ಯೆಯನ್ನು ಸ್ವಚ್ಛತೆಗೊಳಿಸಲು ಯಾರೂ ಬರುತ್ತಿಲ್ಲ,  ಎಂದು ದೂರಿದರು.
ಕೇದಿಗೆಹಳ್ಳಿ ವಾಡರ್್ನ ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ನಮ್ಮ ವಾಡರ್್ಗೆ ಪುರಸಭೆ ಯಾವುದೇ ಮೂಲ ಸೌಕರ್ಯ ನೀಡಿಲ್ಲ, ಮೂರು ತಿಂಗಳಿನಿಂದಲೂ ನಮಗೆ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ, ಎಲ್ಲಾ ವಾಡರ್್ನಲ್ಲೂ ಬೋರ್ಕೊರೆಸಿದ್ದಾರೆ ನಮ್ಮ ವಾಡರ್್ನಲ್ಲಿ ಯಾವುದೇ ಬೋರ್ ಕೊರೆಸಿಲ್ಲ, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀಡಿದಂತೆ ಪುರಸಭೆ ಮಾಡುತ್ತಿದ್ದು ಈ ಬಗ್ಗೆ ನಮ್ಮ ವಾಡರ್್ನ ನಾಗರೀಕರು ಆಕ್ರೋಶಿತರಾಗಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಸೇರಿದಂತೆ ಆ ವಾಡರ್ಿನ ನಾಗರೀಕರು ಹಾಜರಿದ್ದರು.
ಸಾಹಿತ್ಯ ಸಮ್ಮೇಳನಕ್ಕೆ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಜೂ.04 :  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕಿನ ಚಿತ್ರಕಲೆ ಮತ್ತು ಶಿಲ್ಪಕಲೆ ವತಿಯಿಂದ ವಿಶೇಷವಾದ ಪ್ರದರ್ಶನವನ್ನು ಅನೇಕ ಕಲಾವಿದರೊಂದಿಗೆ ನಿಮರ್ಾಣ ಮಾಡಿ ಕನ್ನಡ ನೆಲ, ಜಲ, ಸಾಹಿತ್ಯವನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಲು ತೀಮರ್ಾನಿಸಲಾಗಿದೆ ಎಂದು ಕಲಾವಿದ ಸಿದ್ದು ಜಿ.ಕೆರೆ ತಿಳಿಸಿದರು.
ಪಟ್ಟಣದ ಗಂಗು ಆಟ್ಸ್ನ ಕಛೇರಿಯಲ್ಲಿ  ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿತ್ರಕಲಾ ಪ್ರದರ್ಶನ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ಏರ್ಪಡಿಸಿದ್ದು ತುಮಕೂರು ಜಿಲ್ಲೆಯ ಐತಿಹಾಸಿಕ, ಧಾಮರ್ಿಕ, ಶೈಕ್ಷಣಿಕ, ಪ್ರಾಕೃತಿಕ ಹಾಗೂ ರಂಗಭೂಮಿ  ಕಲಾವಿದರಿಂದ ಮತ್ತು ತಾಲ್ಲೂಕು ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ಆಯ್ಕೆ ಮಾಡಿದಂತಹ ಚಿತ್ರಗಳನ್ನು ಜಿಲ್ಲಾ ಸಮ್ಮೇಳನದಲ್ಲಿ ಪ್ರದಶರ್ಿಸಲು ತಯಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿ.ಹೆಚ್.ಗಂಗಾಧರ್ ಮಾತನಾಡಿ ಕುಂಚಾಂಕುರ ಕಲಾ ಸಂಘದಿಂದ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪಧರ್ೆ ಏರ್ಪಡಿಸಿದ್ದು ಚಿತ್ರಕಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಾಗೂ ಕಲೆಯನ್ನೇ ಶಿಕ್ಷಣವನ್ನಾಗಿ ಪಡದು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗಲೆಂದು ಈ ರೀತಿಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ, ಶಿಲ್ಪ ವೈಭವದ ಬಗ್ಗೆ  ಹಾಗೂ ನಶಿಸುತ್ತಿರುವ ಗ್ರಾಮೀಣ ಕುಲ ಕಸುಬು ಹಾಗೂ ಗ್ರಾಮೀಣ ವಿಭಾಗದಲ್ಲಿ ಮಾಧ್ಯಮಗಳ ಪಾತ್ರವನ್ನು ಸ್ಪಧರ್ೆಯಲ್ಲಿ ಇಟ್ಟಿದ್ದು, ಸ್ಪಧರ್ೆಯಲ್ಲಿ ಪ್ರಥಮ ಬಹುಮಾನವಾಗಿ 3ಸಾವಿರ, ದ್ವಿತೀಯ 2ಸಾವಿರ,ತೃತಿಯ 1ಸಾವಿರ ಮತ್ತು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ನಮ್ಮ ಕಲಾ ಚೌಕಟ್ಟಿನಲ್ಲಿ ಕನ್ನಡ ಸಂಘದ ವೇದಿಕೆಯಲ್ಲಿ ದಿನಾಂಕ 5ರಿಂದ ಬೆಳಗ್ಗೆ 10ರಿಂದ 5ರವರಗೆ ಶಿಲ್ಪಕಲಾ ಮತ್ತು ಚಿತ್ರಕಲಾ ಕಾರ್ಯಗಾರ ಮಾಡುತ್ತಿದ್ದು ಆಸಕ್ತ ಎಲ್ಲರೂ ಭಾಗವಹಿಸಬಹುದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸಿ.ಹೆಚ್.ಗಂಗಾಧರ್ 9845007131, ವಿಶ್ವನಾಥ್ 9845279517, ಸಿ.ಎ.ನಿರೂಪ್ರಾವತ್ 9902159412, ಸಿ.ಪಿ.ಗಿರೀಶ್ 9141092238ಗೆ ಸಂಪಕರ್ಿಸಲು ಹಾಗೂ ಕಲಾಸಕ್ತರು ತಮ್ಮ ಜೊತೆ ಕೈಜೋಡಿಸಲು ಕೋರಿದರು.
ಶಿಲ್ಪಿ ವಿಶ್ವನಾಥ್ ಮಾತನಾಡಿ ಸಮ್ಮೇಳನಕ್ಕಾಗಿ ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ ಏರ್ಪಡಿಸಿದ್ದು ಜಕಣಾಚಾರಿರವರು ಮಾಡಿದ ಮಾದರಿ ಶಿಲ್ಪದಂತೆ ಹಾಗೂ ಕನ್ನಡ ತಾಯಿ ಭುವನೇಶ್ವರಿಯ ರಚನೆ ಮಾಡಲು ಇದನ್ನು 15ದಿನಗಳ ಅವಧಿಯಲ್ಲಿ ಮಾಡಲು ತೀಮರ್ಾನಿಸಿದ್ದು ಈ ಕಾರ್ಯಕ್ರಮಕ್ಕೆ ಆಸಕ್ತರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

 ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ
ಚಿಕ್ಕನಾಯಕನಹಳ್ಳಿ,ಜೂ.04 : ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ ಹಾಗೂ ಸಿ.ಬಿ.ಸುರೇಶ್ಬಾಬುರವರಿಗೆ ಅಭಿನಂದನಾ ಸಮಾರಂಭವನ್ನು ಇದೇ 9ರ ಭಾನುವಾರ ಏರ್ಪಡಿಸಲಾಗಿದೆ ಎಂದು ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿ ತಿಳಿಸಿದರು.
ಪಟ್ಟಣ ಕಲ್ಲತ್ತಿಗಿರಿ ವೀರಭದ್ರಶ್ವೇರ ದೇವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜು.9ರ  ಬೆಳಗ್ಗೆ 7ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಬೆಲಗೂರು ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯದ ಬಿಂದುಮಾದವಶರ್ಮ ನೆರವೇರಿಸಲಿದ್ದಾರೆ. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಲಿಂಗಶಿವಾಚಾರ್ಯಸ್ವಾಮಿ, ಕರಿಸಿದ್ದೇಶ್ವರಸ್ವಾಮಿ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮಿ, ಷಡಕ್ಷರಮಠದ ರುದ್ರಮುನಿಸ್ವಾಮಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರಶಿವಾಚಾರ್ಯಸ್ವಾಮಿ, ಬೀರೂರುಮಠದ ರುದ್ರಮುನಿಶಿವಾಚಾರ್ಯಸ್ವಾಮಿ ಆಗಮಿಸಲಿದ್ದು ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಈ ಸಂದರ್ಭದಲ್ಲಿ ನೂತನ ಶಾಸಕ ಸಿ.ಬಿ.ಸುರೇಶ್ಬಾಬು, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಬೆಂಗಳೂರು ಶಾಸಕ ಪ್ರಿಯಾಕೃಷ್ಣ ಉಪಸ್ಥಿತರಿರುವರು.  

Monday, June 3, 2013


ಗಣಿ ಧೂಳಿನಿಂದ ಉಂಟಾದ ಬೆಳೆ ನಷ್ಠಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ 
 
ಚಿಕ್ಕನಾಯಕನಹಳ್ಳಿ,ಜೂ.03 : ಗಣಿ ಧೂಳಿನಿಂದ ಈಿ ಭಾಗದ ಜಮೀನುಗಳಲ್ಲಿನ ಬೆಳೆನಾಶದಿಂದ ಉಂಟಾದ ನಷ್ಠವನ್ನು ನೀಡುವಂತೆ ಹಾಗೂ ಗಣಿಭಾಗದ  ಸ್ಥಳೀಯ ನಿರುದ್ಯೋಗಿ ಯುವಕರಿಗೆ  ಉದ್ಯೋಗಕ್ಕಾಗಿ ಒತ್ತಾಯಿಸಿ ಸೊಂಡೇನಹಳ್ಳಿ ಹಾಗೂ ಸುತ್ತಮುತ್ತಲಿನ ನೂರಾರು ರೈತರು ಸೋಮವಾರ ಪ್ರತಿಭಟನೆ ಹಾಗೂ ಧರಣಿ ನಡೆಸಿದರು.
ತಾಲ್ಲೂಕಿನ ಗಣಿ ಭಾಗದ ಪ್ರದೇಶದ ಸುತ್ತಲೂ ಈಗಾಗಲೇ ಗಣಿಧೂಳಿನಿಂದ ತೆಂಗು, ಅಡಿಕೆ, ಬಾಳೆ, ರಾಗಿ ಬೆಳೆನಾಶದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಗಣಿಗಳಲ್ಲಿ ಕಬ್ಬಿಣದ ಅದಿರು ತೆಗೆಯಲು ಸ್ಪೋಟಕಗಳನ್ನು ಬಳಸಿದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ, ತುಂಬಾ ತೊಂದರೆಯಾಗಿದೆ, ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಗಣಿಗಾರಿಕೆಯಲ್ಲಿ ಟಾಸ್ಕ್ಪೋಸರ್್ ರಚಿಸಿದ್ದು ಇದರ ನಡವಳಿಕೆಯನ್ನು ಅಧಿಕಾರಿಗಳು ಇದುವರೆಗೂ ಜಾರಿಗೆ ತಂದಿಲ್ಲ, ಮೈನ್ಸ್ಲಾರಿಗಳು ಗ್ರಾಮದ ಒಳಗಡೆ ಹೋಗುವುದರಿಂದ ಗ್ರಾಮಗಳ ಮನೆಗಳಲ್ಲಿ ಧೂಳಿನಿಂದ ಆವೃತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು ಇದರಿಂದ ಉಬ್ಬಸದಂತಹ ಕಾಯಿಲೆಗಳು ಹರಡುತ್ತಿವೆ. ಈಗಾಗಲೇ ಗಣಿಗಾರಿಕೆ ಭಾಗದಲ್ಲಿ ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಕಾಂಕ್ರಿಟ್ರಸ್ತೆ ನಿಮರ್ಿಸಲು ಹಣ ಬಿಡುಗಡೆಯಾಗಿದ್ದರೂ ಇದುವರೆಗೂ ಸಮರ್ಪಕವಾದ ಅಭಿವೃದ್ದಿ ಕಾಮಗಾರಿಗಳು ನಡೆದಿಲ್ಲ.
ಲಾರಿಗಳಲ್ಲಿ ಕಬ್ಬಿಣದ ಅಧಿರನ್ನು ಸಾಗಿಸುವಾಗ ರಸ್ತೆ, ಗುಂಡಿಗಳು ಬಿದ್ದಿದ್ದು, ಲಾರಿಗಳು ಚಲಿಸುವಾಗ ಹೆಚ್ಚನ ಧೂಳು ಆವೃತವಾಗುವುದನ್ನು ತಡೆಗಟ್ಟಲು ನೀರನ್ನು ಸಿಂಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ. ಮೈನ್ಸ್ ಮಾಲೀಕರು ಮಧ್ಯವತರ್ಿಗಳಿಗೆ ಪ್ರತಿ ಲಾರಿಗೆ 350ರೂ ಹಣ ನೀಡುತ್ತಾರೆ ಎಂದು ದೂರಿದರಲ್ಲದೆ ಗಣಿ ವಿಷಯದ ಬಗ್ಗೆ ಚಚರ್ಿಸಿದರೆ ಮೈನ್ಸ್ ಮಾಲೀಕರು ಸುಳ್ಳು ಮೊಕ್ಕದ್ದಮೆ ದಾಖಲಿಸುತ್ತೇವೆಂದು ರೈತರಿಗೆ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದಾಗಿ, ಮೈನ್ಸ್ ಮಾಲೀಕರನ್ನು ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಹಾಗೂ ಪರಿಸರ ಇಲಾಖಾ ಅಧಿಕಾರಿಗಳನ್ನು ಕರೆಸಿ ಚಚರ್ಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಗ್ರಾ.ಪಂ.ಸದಸ್ಯ ತಮ್ಮೇಗೌಡ ಮಾತನಾಡಿ ಸುಪ್ರಿಂಕೋಟ್ ಆದೇಶಿಸಿದಂತೆ ಸ್ಥಳೀಯರಿಗೆ ಉದ್ಯೋಗ ಹಾಗೂ ನಾಸರ್ಿಹಳ್ಳಿಯಲ್ಲಿ ಭಾಗದಲ್ಲಿ ಸಿಮೆಂಟ್ ರಸ್ತೆ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ  ಯಾವುದೇ ಕಾನೂನು ಜಾರಿಗೆ ಬಂದಿಲ್ಲ, ಸ್ಥಳೀಯವಾಗಿ ಸಿಸಿರೋಡ್ ಆಗಬೇಕು, ಈ ಭಾಗದಲ್ಲಿರುವ ಜಮೀನು ಇರುವವರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
ಗುಬ್ಬಿ ತಾಲ್ಲೂಕಿನ ಸಾಮಾಜಿಕ ಪರಿವರ್ತನ ಸಂಸ್ಥೆಯ ನಾಗರತ್ನಮ್ಮ ಮಾತನಾಡಿ  ತಾಲ್ಲೂಕಿನಲ್ಲಿ ಮೈನ್ಸ್ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದಿಸಿಲ್ಲ, ಮೈನ್ಸ್ನಿಂದ ಅಂತಃರ್ಜಲ ಕುಸಿಯುತ್ತಿದೆ, ಜನಸಾಮಾನ್ಯರಿಗೆ ಇದರಿಂದ ಬಹಳ ಸಮಸ್ಯೆ ಉಂಟಾಗುತ್ತಿದ್ದು ಯಾವುದೇ ರೀತಿಯ ಅನುಕೂಲವಾಗುತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗುಬ್ಬಿ ತಾಲ್ಲೂಕಿನ ನಂಜುಂಡಪ್ಪ, ವಸಂತಕುಮಾರ್, ಯೋಗಿ, ಪ್ರಕಾಶ್, ಹನುಮಂತಯ್ಯ, ಲಕ್ಷಯ್ಯ ಗೋಡೆಕೆರೆ ಶಿವಲಿಂಗಮೂತರ್ಿ, ಸೊಂಡೇನಹಳ್ಳಿ ಪಾಲಣ್ಣ, ಧರ್ಮಪಾಲ್, ಬಸವರಾಜು, ನರಸಿಂಹಮೂತರ್ಿ, ಚಿದಾನಂದಮೂತರ್ಿ, ಚಿಕ್ಕಣ್ಣ, ಕುಮಾರ್, ಕೆಂಪಯ್ಯ, ತಿಮ್ಮೇಗೌಡ, ಎಸ್.ಎನ್.ಬಸವರಾಜು, ನರಸಿಂಹಯ್ಯ, ತಮ್ಮಯ್ಯ ಸೇರಿದಂತೆ ಗಣಿ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಾ.ಎಸ್.ಜಿ.ಪರಮೇಶ್ವರಪ್ಪ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ,ಜು.3: ನೂತನವಾಗಿ ತಾಲೂಕು ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಅಧ್ಯಕ್ಷರಾಗಿ ನೀರಾವರಿ ಹೋರಾಟಗಾರ, ಖ್ಯಾತ ವೈದ್ಯ ಡಾ.ಎಸ್.ಜಿ.ಪರಮೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ವಕೀಲ ಜಿ.ಶ್ರೀನಿವಾಸಮೂತರ್ಿ, ಕಾರ್ಯದಶರ್ಿಯಾಗಿ ಬಿ.ಜಿ.ರಾಜಣ್ಣ, ಉಪಾಧ್ಯಕ್ಷರಾಗಿ ಎಚ್.ಬಿ.ಪ್ರಕಾಶ್, ಕುಮಾರಸ್ವಾಮಿ(ನಿಶಾನಿ), ಸತ್ಯನಾರಾಯಣ ದಬ್ಬಗುಂಟೆ, ಸಹ ಕಾರ್ಯದಶರ್ಿಯಾಗಿ ವಕೀಲ ಬಿ.ಕೆ.ಸದಶಿವಾ, ಖಜಾಂಚಿಯಾಗಿ ಪುರಸಭಾ ಸದಸ್ಯ ರಾಜಶೇಖರ್, ಸಂಘಟನಾ ಕಾರ್ಯದಶರ್ಿಗಳಾಗಿ  ಎಸ್.ಸತೀಶ್ ಸಿದ್ದನಕಟ್ಟೆ, ಬಿ.ಎನ್.ಲೋಕೇಶ್, ಕಾಂತರಾಜ್ ಬೋರವೆಲ್ ಆಯ್ಕೆಯಾಗಿದ್ದಾರೆ.
ಸಂಘದ ನಿದರ್ೇಶಕರುಗಳಾಗಿ ರಾಮಚಂದ್ರಣ್ಣ, ರಂಗನಾಥಪ್ಪ, ಎಂ.ರಾಮಯ್ಯ, ಬಿ.ಹೆಚ್.ದಯಾನಂದ್, ಗಂಗಾಧರಯ್ಯ, ಕೆ.ನಾರಾಯಣ ಕಂಟಲಗೆರೆ, ನಿರಂಜನಮೂತರ್ಿ.ಎಸ್.ಕೆ, ಕೃಷ್ಣೆಗೌಡ, ತಿಮ್ಮರಾಯಪ್ಪ, ಗೋಪಿನಾಥ, ರಂಗಪ್ಪ, ರಮೇಶ್ ಹಾಗೂ ಸಂಚಾಲಕರಾಗಿ ಸತೀಶ್, ರಮೇಶ್ ಬೆನಕನಕಟ್ಟೆ ಆಯ್ಕೆಯಾಗಿದ್ದಾರೆ. 


ನಿಷೇಧ ನಡುವೆಯೂ ಕಾಳಸಂತೆಯಲ್ಲಿ ಮಾರಟವಾಗುತ್ತಿರುವ ಗುಟ್ಕಾ
ಚಿಕ್ಕನಾಯಕನಹಳ್ಳಿ,ಜೂ.03 : ಸುಪ್ರೀಂಕೋಟರ್್ ಗುಟ್ಕಾ ಮೇಲೆ ನಿಷೇದ ಜಾರಿ ಮಾಡಿದರೂ ರಾಜ್ಯ ಸಕರ್ಾರ ಗುಟ್ಕಾ ನಿಷೇದ ಅನುಷ್ಠಾನಕ್ಕೆ ತಂದ ಪರಿಣಾಮ ಈಗಾಗಲೇ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದ ಅಂಗಡಿ ಮಾಲೀಕರು ಇದರ ಲಾಭ ಪಡೆಯಲು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.
 2ರೂಗೆ ಮಾರಬೇಕಾದ ಗುಟ್ಕಾವನ್ನು 10ರೂಗೆ, 6ರೂಗೆ ಇದ್ದ ಬೆಲೆ 15ರೂಗೆ ಮಾರಾಟವಾಗುತ್ತಿದ್ದು ಗುಟ್ಕಾ ಗ್ರಾಹಕರು ದುಬಾರಿ ಬೆಲೆಯ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 

Saturday, June 1, 2013



ವಿದ್ಯುತ್ ಅವಗಡ ಒಂದು ಸಾವು: ಶಾಸಕರ ಸಾಂತ್ವಾನ
ಚಿಕ್ಕನಾಯಕನಹಳ್ಳಿ,ಜೂ.01 : ಟಿ.ವಿ.ಗೆ ಕೇಬಲ್ವೈರನ್ನು ಅಳವಡಿಸುವ ಸಮಯದಲ್ಲಿ ಸಂಭವಸಿದ ವಿದ್ಯುತ್ಶಾಖ್ನಿಂದ ವ್ಯಕ್ತಿಯೊಬ್ಬ ಅಸುನೀಗಿರುವ ಘಟನೆ ತಾಲ್ಲೂಕಿನ ಕ್ಯಾತನಾಯಕನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ಮಾಳಿಗೆಹಳ್ಳಿ ಸಮೀಪದಲ್ಲಿರುವ ಕ್ಯಾತನಾಯಕನಹಳ್ಳಿಯ ಉಮೇಶ್(28) ಎಂಬ ವ್ಯಕ್ತಿ ಈ ಘಟನೆಯಿಂದ ಸಾವನ್ನಪ್ಪಿರುವ ದುದರ್ೈವಿಯಾಗಿದ್ದು ಉಮೇಶ್ ತಾಯಿ, ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆ ವಿವರ : ಶುಕ್ರವಾರ ಸಂಜೆ ಮಳೆಗಾಳಿ ಬೀಸುತ್ತಿದ್ದರಿಂದ ಕೇಬಲ್ವೈರನ್ನು ಟಿವಿಯಿಂದ ತೆಗೆದು ನಂತರ ಮಳೆ ನಿಂತಮೇಲೆ, ಕೇಬಲ್ವೈರನ್ನು ಟಿವಿಗೆ ಅಳವಡಿಸಲು ಹೋಗಿದ್ದಾನೆ, ಈ ಸಮಯದಲ್ಲಿ ವಿದ್ಯುತ್ವೈರ್ ಜೊತೆ ಕೇಬಲ್ವೈರ್ ಸುತ್ತಿಕೊಂಡಿದ್ದರಿಂದ ವಿದ್ಯುತ್ನ ಪವರ್ ಕೇಬಲ್ಗೂ ತಾಕಿ ಉಮೇಶ್ ಬಲಿಯಾಗಿದ್ದಾನೆ.
ಗ್ರಾಮಸ್ಥರ ಆಕ್ರೋಶ : ಗ್ರಾಮದಲ್ಲಿ ವಿದ್ಯುತ್ವೈರ್ನ ಜೊತೆ ಕೇಬಲ್ವೈರನ್ನು ಕೇಬಲ್ ಮಾಲೀಕರು ಅಳವಡಿಸಿದ್ದಾರೆ, ಇದರಿಂದ ಕೇಬಲ್ಗೆ ವಿದ್ಯುತ್ ಹರಿಯುತ್ತಿದೆ, ಇಗ ಸಂಭವಿಸಿರುವ ಘಟನೆ ರೀತಿ ಗ್ರಾಮದಲ್ಲಿ ಹಲವು ಬಾರಿ ಆಗಿದೆ, ಆದರೆ ಈ ಘಟನೆ ಸಾವಿನವರೆಗೆ ಕರೆದೊಯ್ಯುತ್ತದೆ ಎಂದುಕೊಂಡಿರಲಿಲ್ಲ, ಕೇಬಲ್ವೈರನ್ನು ವಿದ್ಯುತ್ ವೈರ್ ಜೊತೆ ಹೊಂದಿಕೊಂಡಿರುವುದನ್ನು ತೆಗೆದು ಬೇರೆ ಮಾರ್ಗದ ಮೂಲಕ ವೈರ್ ಎಳೆಯಿರಿ ಎಂದು ಕೇಬಲ್ ಮಾಲೀಕರಿಗೆ ತಿಳಿಸಿದರೂ ಅವರು ನಮ್ಮ ಮಾತಿಗೆ ಸ್ಪಂದಿಸುತ್ತಲೇ ಇಲ್ಲ ಇಗ ಸಂಭವಿಸಿರುವ ಘಟನೆಗೆ ಕೇಬಲ್ ಮಾಲೀಕರೆ ಹೊಣೆ ಎಂದು ಗ್ರಾಮಸ್ಥರು ದೂರಿದರು.
ಶಾಸಕರ ಸಾಂತ್ವಾನ : ಘಟನೆ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತದೊಂದಿಗೆ ಆಗಮಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಘಟನೆ ಕುರಿತು ತಾಲ್ಲೂಕಿನಾದ್ಯಂತ ವಿದ್ಯುತ್ವೈರ್ಗೆ ಅಳವಡಿಸಿರುವ ಕೇಬಲ್ವೈರನ್ನು ತೆಗೆಸಲು ಬೆಸ್ಕಾಂ ಎಇಇ ರಾಜಶೇಖರ್ರವರಿಗೆ ಸೂಚಿಸಿದರು. ಮೃತಪಟ್ಟ ಕುಟುಂಬದವರಿಗೆ ಸಾಂತ್ವಾನ ನೀಡಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕಾಗಿ ಹಣಸಹಾಯ ನೀಡಿದರು. 
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಾಮಾಕ್ಷಮ್ಮ, ಸಿ.ಪಿ.ಐ ಕೆ.ಪ್ರಭಾಕರ್ ಹಾಗೂ ಬೆಸ್ಕಾಂ ಇಲಾಖೆಯ ಎಇಇ ರಾಜಶೇಖರ್ ಆಗಮಿಸಿದ್ದರು.
ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ವಿರೋಧ
ಚಿಕ್ಕನಾಯಕನಹಳ್ಳಿ,ಜೂ.1: ಜಿಲ್ಲೆಯ ಹಾಗೂ ತಾಲೂಕಿನ ಮೌಲ್ಯಯುತ ಕೊಡುಗೆಗಳನ್ನು ಕಡೆಗಣಿಸಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನಕ್ಕೆ ಪ್ರೊ.ಸಿ.ಎಚ್.ಮರಿದೇವರುರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವ ಮೌಲ್ಯಕ್ಕೆ ವಿರೋಧವಾಗಿದೆ ಎಂದು ಪ್ರಗತಿಪರ ಚಿಂತಕ ಸಿ.ಆರ್.ನಾಗಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ತಾಲೂಕು ಬಯಲು ಸೀಮೆಯ ಬಿರು ಬಿಸಿಲಿಗೆ ತುತ್ತಾಗಿದ್ದರೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ನೆಲದಲ್ಲಿ ಹತ್ತು ಹಲವು ಸಾಹಿತಿಗಳು, ಚಿಂತಕರು ಹಾಘೂ ರಂಗಕಮರ್ಿಗಳು ಇದ್ದರೂ ಅವರನ್ನು ಕಡೆಗಣಿಸಿ ಪ್ರೊ.ಮರಿದೇವರು ಅವರನ್ನು ಆಯ್ಕೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಪ್ರಗತಿಪರ ಚಿಂತಕರು, ಸಾಹಿತಿಗಳು ಮತ್ತು ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತರುಗಳಾದ ಶಿವನಂಜಯ್ಯ ಬಾಳೆಕಾಯಿ, ಕೃಷ್ಣಮೂತರ್ಿ ಬಿಳಿಗೆರೆ, ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಡಾ.ನವೀನ್ ಹಳೆಮನೆ, ಡಾ.ಸಿ.ಜಿ.ಮಲ್ಲಿಕಾರ್ಜನಯ್ಯ, ಎಸ್.ಗಂಗಾಧರಯ್ಯ, ಅಣೆಕಟ್ಟೆ ವಿಶ್ವನಾಥ್, ಎನ್.ಇಂದಿರಮ್ಮ, ಡಾ.ರಘಪತಿ, ಸಂಚಲನದ ನಾಸಿರ್ ಹುಸೇನ್, ಸಿ.ಪಿ.ಗಿರೀಶ್, ಸಿ.ಎಸ್.ಸುಬ್ರಹ್ಮಣ್ಯ, ಇಬ್ರಾಹಿಂ, ಕೆ.ಪ್ರಹ್ಲಾದ್, ಕಂಟಲಗೆರೆ ಗುರುಪ್ರಸಾದ್ ಸೇರಿದಂತೆ ಹಲವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.


Friday, May 31, 2013


ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಜಾಗೃತರಾಗಿ
ಚಿಕ್ಕನಾಯಕನಹಳ್ಳಿ,ಮೇ.31 : ಸಕರ್ಾರದ ಯಾವುದೇ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಜಾಗೃತರಾಗಿದ್ದಷ್ಟೂ ಕಾಮಗಾರಿಯ ಕಾರ್ಯದಕ್ಷತೆ ಹಚ್ಚಲಿದೆ ಎಂದು ಶಾಸಕ ಸಿ.ಬಿ. ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ನವಿಲೆ ಗ್ರಾಮದ ಹೆಬ್ಬಾಗಿಲಿನಿಂದ ಕೋಟೆಯವರೆಗೂ ಕಾಂಕ್ರೀಟ್ ರಸ್ತೆ ನಿಮರ್ಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಕರ್ಾರ ಗ್ರಾಮಾಭಿವೃದ್ದಿಗಾಗಿ ಹೆಚ್ಚಿನ ಅನುದಾನ ನೀಡುತ್ತಿದೆ ಆದರೆ ಕಾಮಗಾರಿ ಗುಣಮಟ್ಟದ ದೋಶದಿಂದ ಕಾ


ಮಗಾರಿಗಳ ಕಾರ್ಯಕ್ಷಮತೆ ಕುಂಟಿತಗೊಳ್ಳುತ್ತಿವೆ. ಸಕರ್ಾರಿ ಅನುದಾನಗಳ ಸದ್ಭಳಕೆಯಾಗುವಂತೆ ಮಾಡುವುದು ಆಯಾವ್ಯಾಪ್ತಿಯ ಜನರ ಮೇಲಿನ ಜವಾಬ್ದಾರಿಯಾಗಿದೆ ಎಂದರು.
 ಗ್ರಾಮದ ಯಾವುದೇ ಕಾಮಗಾರಿಗಳ ಬಗ್ಗೆ ಆಯಾ ಗ್ರಾಮದ ಸ್ಥಳೀಯರು ನಮ್ಮ ಸ್ವಂತ ಕೆಲಸವೆಂಬಂತೆ ಗುಣಮಟ್ಟ ವೀಕ್ಷಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಲೋಪಕಂಡು ಬಂದರೆ ಸಂಬಂಧಿಸಿದ ಕಂಟ್ರಾಕ್ಟರ್ ಹಾಗೂ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಸರಿಯಾಗುವವರೆಗೂ ಧೃಡತೆಯಿಂದ ನಿಲ್ಲಬೇಕೆಂದರು. ಇದರ ಜೊತೆಗೆ ಸಿಮೆಂಟ್ ಕಾಮಗಾರಿಗಳಲ್ಲಿ ಕ್ಯೂರಿಂಗ್ ಮಾಡುವಲ್ಲಿ ಮತ್ತು ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡುವ ಸಂದರ್ಭದಲ್ಲಿ ಒತ್ತುವರಿಗಳು ಮತ್ತು ಇನ್ನಿತರ ಅಡಚಣೆಗಳನ್ನು ನಿವಾರಿಸುವಲ್ಲಿ ಸಹಕರಿಸಬೇಕೆಂದರು. 
ಈ ಸಂದರ್ಭದಲ್ಲಿ ಇಂಜಿನಿಯರ್ ಪುರುಷೋತಮ್, ಮುಖಂಡರಾದ ಚನ್ನಿಗಪ್ಪ, ಮಧುಸೂಧನ್, ಲೋಕೇಶ್ ಮುಂತಾದವರಿದ್ದರು.

                                             

Thursday, May 30, 2013


ಚರಂಡಿಯ ಸೇತುವೆಯಲ್ಲಿ ಗುಂಡಿ : ಸಾರ್ವಜನಿಕರಿಗೆ
ತೊಂದರೆ  

ಚಿಕ್ಕನಾಯಕನಹಳ್ಳಿ : ಪಟ್ಟಣದ ದೇಶೀಯ ವಿದ್ಯಾಪೀಠ ಶಾಲೆಯ ಬಳಿ ಇರುವ ಚರಂಡಿಯ ಸೇತುವೆಗೆ ಗುಂಡಿ ಬಿದ್ದಿದ್ದು, ಶಾಲೆಗೆ ಹೋಗುವ ಮಕ್ಕಳಿಗೆ ಇದರಿಂದ ತೀವ್ರ ತೊಂದರೆಯಾಗಿದೆ.
ನಿತ್ಯ ನೂರಾರು ಮಕ್ಕಳು ಶಾಲೆಗೆ ಸೈಕಲ್ ಮೇಲೆ ಹಾಗೂ ನಡೆದುಕೊಂಡು ಈ ದಾರಿಯಲ್ಲಿ ಹೋಗುತ್ತಾರೆ ಅಲ್ಲದೆ ಡಿವಿಪಿ ಶಾಲಾ ಮೈದಾನಕ್ಕೆ ಬೆಳಗಿನ ಜಾವ ಹಾಗೂ ಸಂಜೆ ನಿವೃತ್ತ ನೌಕರರು, ವಯೋವೃದ್ದರು ಸೇರಿದಂತೆ ನೂರಾರು ಜನ ವಾಯು ವಿಹಾರಕ್ಕೆ ತೆರಳುತ್ತಾರೆ, ಆಕಸ್ಮಿಕವಾಗಿ ಗುಂಡಿಗೆ ಬಿದ್ದರೆ ಶಾಲಾ ಮಕ್ಕಳು ಹಾಗೂ ವೃದ್ದರ ಕೈ ಕಾಲು ಮುರಿಯುವ ಭೀತಿಯಿರುವುದರಿಂದ ಕೂಡಲೇ ಅಧಿಕಾರಿಗಳು ಸೇತುವೆಯನ್ನು ರಿಪೇರಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿದ್ಯುತ್ ಕಂಬದಲ್ಲಿ ಬಿರುಕು 

ಚಿಕ್ಕನಾಯಕನಹಳ್ಳಿ : ಪಟ್ಟಣದ ದಶಾವತಾರ ದೇವಾಲಯದ ಮುಂಭಾಗದ ರಸ್ತೆಯಲ್ಲಿರುವ ಅತ್ಯಂತ ಹಳೆಯದಾದ ಸಿಮೆಂಟಿನ ವಿದ್ಯುತ್ ಕಂಬ ಬಿರುಕುಬಿಟ್ಟಿದೆ.
 ಕಂಬದ ತಳಭಾಗ ಕಬ್ಬಿಣದ ಸಲಾಕೆಗಳ ಮೇಲೆ ನಿಂತಿದ್ದು ಮಳೆಗಾಲವಾದ್ದರಿಂದ ಮಳೆ ಬಿರುಗಾಳಿಗೆ ಕಂಬ ಮುರಿದು ಬೀಳುವ ಸಂಭವವಿದ್ದು ಈ ಭಾಗದಲ್ಲಿ ನಿತ್ಯ ನೂರಾರು ಜನರು ತಮ್ಮ ಮನೆಗಳಿಗೆ ಹೋಗುವಾಗ ಹಾಗೂ ಸುತ್ತಮುತ್ತಲು ವಾಸದ ಮನೆಗಳಿರುವುದರಿಂದ ಆಕಸ್ಮಿಕವಾಗಿ ವಿದ್ಯುತ್ ಕಂಬ ಮುರಿದು ಬಿದ್ದರೆ ಪ್ರಾಣ ಹಾನಿ ಸಂಭವಿಸುವ ಮುನ್ನ ವಿದ್ಯುತ್ ಕಂಬವನ್ನು ತೆಗೆದು ಹೊಸ ವಿದ್ಯುತ್ ಕಂಬವನ್ನು ನೆಡುವಂತೆ ಕೆಪಿಟಿಎಸ್ಎಲ್ ಅಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಿಪ್ಪೆಗುಂಡಿಯಾಗಿ ಮಾರ್ಪಟ್ಟ ಮತಿಘಟ್ಟ ಗ್ರಾಮ

ಚಿಕ್ಕನಾಯಕನಹಳ್ಳಿ,ಮೇ.30: ಸುಮಾರು 650 ಮನೆಗಳನ್ನು ಹೊಂದಿರುವ ಮತಿಘಟ್ಟ ಗ್ರಾಮದ ಊರಿನ ಒಳಭಾಗದಲ್ಲಿ ಹೆಚ್ಚಿನ ತಿಪ್ಪೆಗುಂಡಿಗಳ ಸೃಷ್ಠಿಯಿಂದ ಸೊಳ್ಳೆಗಳ ವಾಸಸ್ಥಾನವಾಗಿ ಡೆಂಗ್ಯೂ, ಮಲೇರಿಯದಂತಹ ರೋಗಗಳನ್ನು ತರಲಿವೆ ಎಂದು ಮತಿಘಟ್ಟ ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಮತಿಘಟ್ಟ ಗ್ರಾಮ ಸುಮಾರು 650 ಮನೆಗಳನ್ನು ಹೊಂದಿದೆ, ಈಗಾಗಲೇ ಹಂದನಕೆರೆ ಹೋಬಳಿಯ ಸುತ್ತಮುತ್ತಲಿನಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ, ಮತಿಘಟ್ಟ ಗ್ರಾಮದಲ್ಲಿರುವ ತಿಪ್ಪೆಗುಂಡಿಗಳಿಂದಾಗಿ ಈ ಭಾಗದಲ್ಲಿ ಸೊಳ್ಳೆಗಳ ತಾಣ ಹೆಚ್ಚಾಗಿವೆ. ತಿಪ್ಪೆಗಳ ವಾಸನೆಯಿಂದ ಜನತೆ ವಾಸಿಸಲೂ ಆಗದಂತಾಗಿದೆ ಎಂದು ದೂರಿರುವ ಮತಿಘಟ್ಟ ಗ್ರಾಮಸ್ಥರು ಇದರಿಂದ ಈ ಭಾಗದಲ್ಲಿ ವಾಸಿಸುವುದೇ ಕಷ್ಟವಾಗಿದ್ದು, ಮಲೇರಿಯ ಡೆಂಗ್ಯೂನಂತಹ ಕಾಯಿಲೆಗೆ ತುತ್ತಾಗುವ ಮುನ್ನ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಿ ಗ್ರಾಮದ ನೈರ್ಮಲ್ಯವನ್ನು ಕಾಪಾಡುವಂತೆ ಒತ್ತಾಯಿಸಿದ್ದಾರೆ. 

ಕುಪ್ಪೂರು ಭಾಗಕ್ಕೆ ಸಕರ್ಾರಿ ಬಸ್ ಬಿಡಲು ಆಗ್ರಹ

ಚಿಕ್ಕನಾಯಕನಹಳ್ಳಿ,ಮೇ.30 : ತಾಲ್ಲೂಕಿನ ಕುಪ್ಪೂರು ಸುತ್ತಮುತ್ತಲಿನಿಂದ ಚಿಕ್ಕನಾಯಕನಹಳ್ಳಿ, ತಿಪಟೂರು, ತುಮಕೂರಿಗೆ ಸಂಚರಿಸುವ ವಿದ್ಯಾಥರ್ಿಗಳು, ಉದ್ಯೋಗಿಗಳು ಸಾರ್ವಜನಿಕರು ಪ್ರತಿದಿನವೂ ಕೆಎಸ್ಆರ್ಟಿಸಿ ಇಲಾಖೆಗೆ ಬೈಗುಳದ ಮಳೆಯನ್ನೇ ಹರಿಸುತ್ತಿದ್ದು ಈ ಭಾಗಕ್ಕೆ ಸಕರ್ಾರಿ ಬಸ್ ಬಿಡಲು ಒತ್ತಾಯಿಸಿದ್ದಾರೆ.
  ತಾಲ್ಲೂಕಿನಿಂದ ಕುಪ್ಪೂರು ಮತ್ತು ಈ ಭಾಗದ ಸುತ್ತಮುತ್ತಲಿನ ಗ್ರಾಮಕ್ಕೆ ತೆರಳಲು ಹಾಗೂ ಗ್ರಾಮದಿಂದ ಪಟ್ಟಣಕ್ಕೆ ಬರಲು ಅಲ್ಲಿನ ಗ್ರಾಮಸ್ಥರು ಪ್ರತಿದಿನ ಆಟೋರಿಕ್ಷಕ್ಕಾಗಿ ಮತ್ತು  ಆಗೊಮ್ಮೆ, ಈಗೊಮ್ಮೆ ಇರುವ ಖಾಸಗಿ ಬಸ್ಗಳಿಗೆ ಪರದಾಡುವಂತಾಗಿದೆ.
 ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರಿಗೆ ಹೋಗುವ ಭಾಗದಲ್ಲಿ ಸುಮಾರು 16ಗ್ರಾಮಗಳಿದ್ದು ಈ ಭಾಗದ ಜನರು ಪ್ರತಿದಿನ ಸಂಚರಿಸಲು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ ಈ ಭಾಗದಲ್ಲಿ ಬರುವ ಖಾಸಗಿ ಬಸ್ಗಳ ಸಂಖ್ಯೆ ಕಡಿಮೆಯಿದ್ದು,  ಕೆಎಸ್ಆರ್ಟಿಸಿ ಬಸ್ ಬಿಡಲು ಒತ್ತಯಿಸಿದ್ದಾರೆ.
ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ಹಲವು ಬಾರಿ ತಿಪಟೂರು ಕೆಎಸ್ಆರ್ಟಿಸ ಡಿಪೋ, ಮೇನೇಜರ್ ರವರಿಗೆ ಸಮಸ್ಯೆ ನಿವಾರಿಸುವಂತೆ ಅಜರ್ಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ದೂರುತ್ತಾರೆ.  ಇಲ್ಲಿಯವರೆಗೆ ಬಂದಂತಹ ಯಾವ ಶಾಸಕರು ಹಾಗೂ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನ ಪಡಲೇ ಇಲ್ಲ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ. 

Wednesday, May 29, 2013


ಚಿ.ನಾ.ಹಳ್ಳಿ ತಾ.ಪಂ: ಅಧ್ಯಕ್ಷ, ಉಪಾಧ್ಯಕ್ಷರ ರಾಜಿನಾಮೆ, ಪ್ರಭಾರ ಅಧ್ಯಕ್ಷರಾಗಿ ಸ್ಥಾಯಿ ಸಮಿತಿ ಅಧ್ಯಕ್ಷ
ಚಿಕ್ಕನಾಯಕನಹಳ್ಳಿ,ಮೇ.29 : ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಎಂ.ಎಂ.ಜಗದೀಶ್ ಹಾಗೂ ಉಪಾಧ್ಯಕ್ಷೆ ಎಂ.ಇ.ಲತಾರವರು ತಮ್ಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಎಂ.ಎಂ.ಜಗದೀಶ್ ಮೇ 10ರಂದು ಹಾಗೂ ಉಪಾಧ್ಯಕ್ಷೆ ಲತಾ ಮೇ 4ರಂದು ರಾಜೀನಾಮೆ ಸಲ್ಲಿಸಿದ್ದು ಮೇ 20ರಂದು ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಕನರ್ಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಸೆಕ್ಷನ್ 140(1)ರಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ ದಿನಾಂಕದಿಂದ 15ದಿನಗಳೊಳಗೆ ರಾಜೀನಾಮೆಯನ್ನು ವಾಪಸ್ ಪಡೆಯಲು ಅವಕಾಶವಿದ್ದು, ಮೇ 10ರಂದು ರಾಜೀನಾಮೆ ಸಲ್ಲಿಸಿದ್ದು ಮೇ 24ಕ್ಕೆ 15ದಿನಗಳು ಮುಗಿದಿರುತ್ತದೆ, ಈ ಅವಧಿಯಲ್ಲಿ ಅಧ್ಯಕ್ಷರು ರಾಜೀನಾಮೆಯನ್ನು ಹಿಂದಕ್ಕೆ ಪಡೆದಿರುವುದಿಲ್ಲ. ಕನರ್ಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಸೆಕ್ಷನ್ 140(1)ರಡಿ ಎಂ.ಎಂ.ಜಗದೀಶ್ ತಾ.ಪಂ.ಅಧ್ಯಕ್ಷರ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಲಾಗಿದ್ದು, ಮೇ 25ರಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ತೆರವಾಗಿದೆ ಎಂದು ತುಮಕೂರು ಪ್ರಭಾರ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಘೋಷಿಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ ತಾ.ಪಂ.ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬಿದಿರುಕೊಂತಮ್ಮ ದೇವಿಯ 6ನೇ ವರ್ಷದ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಮೇ.29 : ಪಟ್ಟಣದ ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವಿ ಹಾಗೂ ಮಾಸ್ತಮ್ಮ ದೇವಿಯವರ 6ನೇ ವರ್ಷದ ವಾಷರ್ಿಕೋತ್ಸವವು ಇದೇ 30 ಹಾಗೂ 31ರಂದು ನಡೆಯಲಿದೆ.
ಶ್ರೀ ಬನಶಂಕರಿ ಅಮ್ಮನವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು 30ರ ಗುರುವಾರ ಸಂಜೆ 6.30ಕ್ಕೆ ಅನುಘ್ನೆ, ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹಪೂಜೆ, ಮೃತ್ಯುಂಜಯಪೂಜೆ, ಕಳಶಸ್ಥಾಪನೆ, ಆರಾಧನೆ, ಗಣಪತಿಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ, ಹಾಗೂ 31ರ ಶುಕ್ರವಾರ ಪ್ರಾತಃಕಾಲ ಸುಪ್ರಭಾತ, ಪ್ರಧಾನ ಕುಂಭಾರಾಧನೆ, ಅಷ್ಟಲಕ್ಷ್ಮಿ ಹೋಮ, ಪ್ರಾಯಶ್ಚಿತ್ತ ಹೋಮ, ಮಧ್ಯಾಹ್ನ 12.05ಕ್ಕೆ ಪೂಣರ್ಾಹುತಿ, ಬಲಿ ಪ್ರಧಾನ, ಕಳಸಾಭಿಷೇಕ, ಅಲಂಕಾರ, 1.15ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗಿಸಲಾಗುವುದು.
ಮತಿಘಟ್ಟ ಗ್ರಾ.ಪಂ.ಸಾಮಾನ್ಯ ಸಭೆ
ಚಿಕ್ಕನಾಯಕನಹಳ್ಳಿ,ಮೇ.29 : 13ನೇ ಹಣಕಾಸು ಯೋಜನೆಯಲ್ಲಿ ಲಭ್ಯವಿರುವ ಆರು ಲಕ್ಷದ ಅರವತ್ತನಾಲ್ಕು ಸಾವಿರ ರೂ.ಗಳನ್ನು ವಿವಿಧ ಕಾಮಗಾರಿ ನೀಮರ್ಾಣಕ್ಕೆ ಹಾಗೂ ಶೌಚಾಲಯ ನಿಮರ್ಾಣಕ್ಕೆ ಹಣವನ್ನು ಮೀಸಲಿಡಲು ತಾಲ್ಲೂಕಿನ ಮತಿಘಟ್ಟ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀಮರ್ಾನಿಸಲಾಯಿತು.
  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷರಾದ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ನಡೆಯಿತು, ಈಗಾಗಲೆ 240 ಶೌಚಾಲಯಗಳನ್ನು ನಿಮರ್ಾಣ ಮಾಡಲಾಗಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹದಿನೈದು ಸಾವಿರ ರೂಗಳನ್ನು  ರೂಪಾಯಿಗಳನ್ನು ನಿಗಧಿಪಡಿಸಲಾಯಿತು.
ಎನ್ಆರ್ಇಜಿಗೆ ಸಂಬಂಧಿಸಿದಂತೆ 64ಲಕ್ಷರೂಗಳಿಗೆ ಕ್ರಿಯಾಯೋಜನೆ ಮಾಡಿದ್ದು ತೋಟಗಾರಿಕೆ, ಜಲಾನಯನ, ಶೌಚಾಲಯ ಮುಂತಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ಪೂರೈಸಲಾಗಿದೆ. ಇಂದಿರಾ ಆವಾಜ್ ಯೋಜನೆಯಲ್ಲಿ 26ಮನೆ, ಅಂಬೇಡ್ಕರ್ ಆವಾಸ್ ಯೋಜನೆಯಲ್ಲಿ 15 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕಾರ್ಯದಶರ್ಿ ಗಂಗಾಧರಯ್ಯ ತಿಳಿಸಿದರು.
ಉಪಾಧ್ಯಕ್ಷರಾದ ನಾಗಮ್ಮ ಹಾಗೂ ಸದಸ್ಯರು ಮತ್ತು ಕಾರ್ಯದಶರ್ಿ ಹೆಚ್.ಗಂಗಾಧರಯ್ಯನವರು ಸಭೆಯಲ್ಲಿ ಪಾಲ್ಗೊಂಡಿದ್ದರು. 
 ಡೆಂಗ್ಯೂ ಪ್ರಕರಣ ಪತ್ತೆ: ತಾಲೂಕಿನಾದ್ಯಂತ ಕ್ರಿಮಿನಾಶಕ ಸಿಂಪಡಿಸಲು ಶಾಸಕರಿಂದ ಅಧಿಕಾರಿಗಳಿಗೆ ತಾಕೀತು.
ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಾದ್ಯಂತ  ಕ್ರಿಮಿನಾಶಕ ಸಿಂಪಡಿಸಬೇಕು, ಈ ಕಾರ್ಯಕ್ಕೆ ಒಂದು ದಿನ ನಿಗಧಿಪಡಿಸಿ ಆ ದಿನವೇ ಎಲ್ಲಾ ಪಂಚಾಯಿತಿಗಳಲ್ಲಿನ ಗ್ರಾಮಗಳಿಗೆ, ಪುರಸಭೆಯ ವಾಡರ್್ಗಳಿಗೆ ಅಬೇಕ್ ಕ್ರಿಮಿನಾಶಕ ಸಿಂಪಡಿಸಿ ಒಂದು ದಿನಕ್ಕೆ ಪೂರ್ಣಗೊಳದಿದ್ದರೆ ಎರಡು ದಿನ ಬಳಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು. 
ತಾ.ಪಂ. ಸಭಾಂಗಣದಲ್ಲಿ ನಡೆದ  ಸಭೆಯಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ನ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಕಾರ್ಯ ತುತರ್ಾಗಿ ಆಗಬೇಕು ಎಂದರು. 
ತಾಲೂಕಿನ ವೈದ್ಯರು ಸಮರ್ಪಕವಾಗಿ ಕೆಲಸ ಮಾಡಬೇಕು, ಹುಳಿಯಾರಿಗೆ ಈಗಿರುವ ವೈದ್ಯರ ಜೊತೆಗೆ ಇನ್ನೊಬ್ಬರು ಸಮರ್ಥ ವೈದ್ಯರನ್ನು ನೇಮಿಸಿ ಅಲ್ಲಿಗೆ ಹಳ್ಳಿ ಜನರು  ಆರೋಗ್ಯ ತಪಾಸಣೆಗೆ ಹೆಚ್ಚು ಬರುತ್ತಾರೆ,  ಈ ಬಗ್ಗೆ ಹೆಚ್ಚು  ಕಾಳಜಿವಹಿಸಬೇಕೆಂದು ಎಂದರು. ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ  ತಾಲೂಕು ವೈದ್ಯಾಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಾಲೂಕಿನಲ್ಲಿ ಏಳು ಡೆಂಗ್ಯೂ ಪ್ರಕರಣಗಳಿವೆ ಎಂದು ಶಂಕಿಸಲಾಗಿದ್ದು ಇದರಲ್ಲಿ, ಒಬ್ಬ ಬಾಲಕಿ ಸಾವನ್ನಪ್ಪಿದ್ದು ಮೂವರು ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾತ್ರಿಕೆಹಾಳ್, ಕಂಪನಹಳ್ಳಿ, ಸೋರಲಮಾವು ಗ್ರಾಮದಲ್ಲಿನ ಮೂವರು ಚೇತರಿಸಿಕೊಂಡಿದ್ದು, ಹುಳಿಯಾರು, ಚಿ.ನಾ.ಹಳ್ಳಿಯಲ್ಲಿನ ಡೆಂಗ್ಯೂ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
 ಸಭೆಯಲ್ಲಿದ್ದ ತಾ.ಪಂ.ಸದಸ್ಯೆ ಸವಿತಾ ಮಾತನಾಡಿ, ನಮ್ಮ ಭಾಗದ ಗ್ರಾ.ಪಂ.ಗಳಲ್ಲಿ ವರ್ಷವಾದರೂ ನೀರಿನ ಸಿಸ್ಟನ್ಗಳನ್ನು ಸ್ವಚ್ಚಗೊಳಿಸುವುದಿಲ್ಲ, ಮೂರು ವರ್ಷವಾದರೂ ಚರಂಡಿಗಳನ್ನು ತಿರುಗಿ ನೋಡುವುದಿಲ್ಲ ಈಗಾದರೆ ರೋಗಗಳು ಬರುವುದಿಲ್ಲವೇ ಎಂದರು. ಈ ಮಾತಿಗೆ ಜಿ.ಪಂ. ಸದಸ್ಯೆ ಮಂಜುಳಾ ಗವಿರಂಗಯ್ಯ ಧ್ವನಿಗೂಡಿಸಿ ಇಡೀ ಹೋಬಳಿಯಲ್ಲಿ ಈ ಸಮಸ್ಯೆ ಇದೆ ಎಂದರು. 
ಈ ಸಮಸ್ಯೆಗೆ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರತಿಕ್ರಿಯಿಸಿ ಸಭೆಯಲ್ಲಿದ್ದ ಇ.ಓ.ರವರಿಗೆ ಶೀಘ್ರವೇ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಇ.ಓ. ತಿಮ್ಮಯ್ಯ ಮಾತನಾಡಿ ಇದೇ 29ರಂದು ಗ್ರಾ.ಪಂ. ಅಧ್ಯಕ್ಷರು, ಪಿ.ಡಿ.ಓ. ಹಾಗೂ ಕಾರ್ಯದಶರ್ಿಗಳ ಸಭೆ ಕರೆದು ಈ ಬಗ್ಗೆ ಕೂಲಂಕುಶವಾಗಿ ನಿದರ್ೇಶನ ನೀಡುವುದಾಗಿ ತಿಳಿಸಿದರು.   (ಪೋಟೊ ಇದೆ)
ಸುದ್ದಿ:2
ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಾಲೂಕು ಆಡಳಿತದ ಸಹಕಾರವಿದೆ: ಶಾಸಕ ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.27 : ಜೂನ್ ತಿಂಗಳ 28,29,30ರಂದು ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ, ವಿಜೃಂಭಣೆಯಿಂದ ನಡೆಸಲು ಅಗತ್ಯವಾದ  ಎಲ್ಲಾ ಜವಬ್ದಾರಿಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾಹಿತ್ಯ ಪರಿಷತ್ನ ಪದಾಧಿಕಾರಿಗಳನ್ನು ಒಳಗೊಂಡಂತೆ ಇರುವ ವಿವಿಧ ಸಮಿತಿಗಳು ಜವಬ್ದಾರಿಯುತವಾಗಿ  ಕೆಲಸ ನಿರ್ವಹಿಸುವಂತೆ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. 
  ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಗವಾಗಿ ಶಾಸಕ ಸಿ.ಬಿ.ಸುರೇಶ್ಬಾಬುರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಸಾಹಿತ್ಯಾಭಿಮಾನಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಮ್ಮೇಳನಕ್ಕೆ ವಿವಿಧ ತಾಲ್ಲೂಕುಗಳಿಂದ ಆಗಮಿಸುವವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಹಾಸ್ಟಲ್ಗಳು, ಶಾಲೆ ಹಾಗೂ ಕಾಲೇಜು ಬಳಸಿಕೊಳ್ಳಲು ಹಾಗೂ ಸಮ್ಮೇಳನದ ವಿವಿಧ ಖಚರ್ಿನ ಮೊತ್ತಕ್ಕೆ ಬೇಕಾಗುವ ಹಣಕ್ಕಾಗಿ ದೇಣಿಗೆ ಸಂಗ್ರಹಿಸುವ ಬಗ್ಗೆ ತೀಮರ್ಾನಿಸಲಾಯಿತು.
ಸಮ್ಮೇಳನದಲ್ಲಿ ಶಿಕ್ಷಣ, ಮಾಧ್ಯಮ, ಸಾಮಾಜಿಕ, ಕಲೆ, ಕೃಷಿ, ವಿಜ್ಞಾನ ಕ್ಷೇತ್ರಗಳಲ್ಲಿ  ಸೇವೆ ಸಲ್ಲಿಸಿರುವ ಪ್ರಮುಖರಿಗೆ ಸನ್ಮಾನಿಸಲು ಸೂಚಿಸಿದರಲ್ಲದೆ ಸಮ್ಮೇಳನಕ್ಕಾಗಿ ವೈಯಕ್ತಿಕವಾಗಿ 1ಲಕ್ಷರೂಗಳನ್ನು ದೇಣಿಗೆಯಾಗಿ ನೀಡುವ ಜೊತೆಗೆ ಸಾಂಸ್ಕೃತಿಕ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ತಿಳಿಸಿದರು.
ಸಮ್ಮೇಳನದ ದಿನದಂದು 7.45ಕ್ಕೆ ಧ್ವಜಾರೋಹಣ ನೆರವೇರಲಿದ್ದು ನಂತರ ಮೂರು ದಿನಗಳ ಕಾಲ ಎರಡು ವೇದಿಕೆಯಲ್ಲಿ ವಿಸ್ಕೃತವಾದ ಕವಿಗೋಷ್ಠಿಗಳು, ವಿಶೇಷಗೋಷ್ಠಿ, ಕಥಾಸಮಯ, ಕವಿಸಮಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಿತ್ರಕಲಾ ಪ್ರದರ್ಶನಗಳು, ಕೃಷಿ ಬಗ್ಗೆ ಉತ್ತೇಜನ ನೀಡುವ ಪ್ರದರ್ಶನಗಳು ನಿಮರ್ಾಣವಾಗಲಿದ್ದು, 8.30ಕ್ಕೆ ಆರಂಭಗೊಳ್ಳುವ ಮೆರವಣಿಗೆಯಲ್ಲಿ ಕಂಸಾಳೆ, ಜಾನಪದ ತಂಡ ಹಾಗೂ ತಾಲ್ಲೂಕನ್ನು ಪ್ರತಿಬಿಂಬಿಸುವ ವಿವಿಧ ಪ್ರದರ್ಶನಗಳ ಮೆರವಣಿಗೆ ನಡೆಯಲಿದೆ.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ತಿಮ್ಮಯ್ಯ, ಬಿ.ಇ.ಓ.ಸಾ.ಚಿ.ನಾಗೇಶ್, ಕಸಾಪ ಅಧ್ಯಕ್ಷ ರವಿಕುಮಾರ್,  ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿ: 3
ಜನ ಮನ್ನಣೆಯಿಂದ ಮುಖಂಡರಾಗುತ್ತಾರೆ ಹೊರತು, ಮುಖಂಡರಂತೆ ವತರ್ಿಸಿದರೆ  ಜನ ಮನ್ನಣೆ ಸಿಗುವುದಿಲ್ಲ
ಚಿಕ್ಕನಾಯಕನಹಳ್ಳಿ,ಮೇ.27 : ಸಾರ್ವಜನಿಕ ಜೀವನಕ್ಕೆ ಇಳಿದ ಮೇಲೆ ಸಮಾಜಸೇವೆ ನಮ್ಮ ಗುರಿಯಾಗಿರಬೇಕು, ಆಗ ಸೇವೆ ಮಾಡುವ ವ್ಯಕ್ತಿ ಜನರಿಂದ ಮನ್ನಣೆ ಪಡೆಯುತ್ತಾನೆ ನಂತರ ಮುಖಂಡನಾಗುತ್ತಾನೆಯೇ ಹೊರತು, ಮುಖಂಡರಾಗಿ ಜನರ ವಿಶ್ವಾಸಗಳಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸಿ.ಬಿ.ಸುರೇಶ್ಬಾಬುರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ವಿವಿದ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಂದು ಭಾವಿಸಿದ್ದೆವು, ಆದರೆ ಕಾಂಗ್ರೆಸ್ ಸಕರ್ಾರಕ್ಕೆ ಅಧಿಕಾರಕ್ಕೆ ಬಂದಿದ್ದರಿಂದ ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಆದರೂ ಸಿದ್ದರಾಮ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಅಭಿವೃದ್ದಿಗಾಗಿ ಶ್ರಮಪಡುವೆ ಎಂದರಲ್ಲದೆ ಎಲ್ಲಾ ಜನತೆಯನ್ನು ಪ್ರೀತಿ, ವಿಶ್ವಾಸದಿಂದ ಅವರ ಭಾವನೆಗಳಿಗೆ ಸ್ಪಂದಿಸುತ್ತಿರುವುದರಿಂದಲೇ ತಾಲ್ಲೂಕಿನ ಜನತೆ ನನ್ನನ್ನು ಶಾಸಕನಾಗಿ ಮರು ಆಯ್ಕೆ ಮಾಡಿದ್ದಾರೆ, ತಾಲ್ಲೂಕಿನ ಹೇಮಾವತಿ ನೀರಿನ ಸಮಸ್ಯೆ, ತಾಲ್ಲೂಕಿನ ವಿದ್ಯಾಥರ್ಿಗಳಿಗೆ ಬೇಕಾಗಿರುವ ಪಾಲಿಟೆಕ್ನಿಕ್ ಕಾಲೇಜು, ನಿರುದ್ಯೋಗಿಗಳ ಉದ್ಯೋಗ ಸಮಸ್ಯೆ ನಿವಾರಿಸಲು ಈಗಾಗಲೇ ಶ್ರಮಿಸುತ್ತಿದ್ದೇನೆ, ಎಂದರಲ್ಲದೆ ತೀನಂಶ್ರೀ ಭವನದ ಕಾಮಗಾರಿ ಶೀಘ್ರ ಮುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ದರ್ಪದಿಂದ ಎಂದೂ ವತರ್ಿಸದ ಸುರೇಶ್ಬಾಬು ತಮ್ಮ ವಿರೋಧಿಯನ್ನು ಆತ್ಮೀಯವಾಗಿ ಕಾಣವ ಗುಣದಿಂದಲೇ ಈಗಿನ ಚುನಾವಣೆಯಲ್ಲಿ ಮರುಆಯ್ಕೆಯಾಗಿದ್ದಾರೆ, 42ವರ್ಷದ ಯುವಕರಾಗಿರುವ ಸುರೇಶ್ಬಾಬು ಶಾಸಕರಾಗಿ ಉತ್ತಮ ಆಡಳಿತ ನೀಡಲಿದ್ದು, ಅವರು ತಾಲ್ಲೂಕಿಗೆ ಅಗತ್ಯವಾಗಿ ಬೇಕಾಗಿರುವ ನೀರಾವರಿಗೆ ಆದ್ಯತೆ ನೀಡುವುದು, ನಶಿಸುತ್ತಿರುವ ನೇಕಾರಿಕೆಗೆ ಜೀವ ತುಂಬುವುದು, ತೀ.ನಂ.ಶ್ರೀ ಸಭಾ ಭವನವನ್ನು  ಪೂರ್ಣಗೊಳಿಸುವುದು, ತೀ.ನಂ.ಶ್ರೀ ಕಾಲೇಜನ್ನು ಆಚಾರ್ಯ ತೀ.ನಂ.ಶ್ರೀ ಕಾಲೇಜು ಎಂದು ಮರುಹೆಸರಿಡುವುದು, ಚಿಕ್ಕದಾಗಿರುವ ತೀ.ನಂ.ಶ್ರೀ ಗ್ರಂಥಾಲಯ ವಿಸ್ತರಿಸುವ ಬಗ್ಗೆ ತಿಳಿಸಿದರು.
ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದಶರ್ಿ ರಮೇಶ್ಬಾಬು ಮಾತನಾಡಿ 1972ರಲ್ಲಿ ಎನ್.ಬಸವಯ್ಯನವರು ಒಮ್ಮೆ ಗೆದ್ದು, ಮತ್ತೆ ಎದುರಾದ ಚುನಾವಣೆಯಲ್ಲಿ ಶಾಸಕನಾಗಿ ಮರು ಆಯ್ಕೆಗೊಂಡು ಸಚಿವರಾಗಿದ್ದು, ಅದೇ ರೀತಿ ಅವರ ಮಗ ಸುರೇಶ್ಬಾಬು ವಿಧಾನಸಭೆಗೆ ಮರು ಆಯ್ಕೆಗೊಂಡಿದ್ದು ಮುಂದೆ ಸಚಿವರಾಗುವ ಮುನ್ಸೂಚನೆ ನೀಡಿದ್ದಾರೆ, ಈಗ ಸುರೇಶ್ಬಾಬುರವರಿಗೆ ನಡೆಸುತ್ತಿರುವ ಅಭಿನಂದನೆ ಅವರಿಗೆ ಮುಂದೆ ಅನೇಕ ಜವಬ್ದಾರಿಗಳಿವೆ ಎಂಬ ಸೂಚನೆ ನೀಡಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿರವರಿಗೆ ಇವರ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದರಲ್ಲದೆ ಎಲ್ಲರೊಂದಿಗೆ ಗೌರವವಾಗಿ ನಡೆಸಿಕೊಳ್ಳುವುದರಿಂದಲೇ ಸುರೇಶ್ಬಾಬುರವರ ಬಗ್ಗೆ ತಾಲ್ಲೂಕಿನ ಜನತೆಯಲ್ಲಿ ಉತ್ತಮ ಅಭಿಪ್ರಾಯವಿದೆ ಎಂದರು.
ಚಲನಚಿತ್ರ ನಟ ಹನುಮಂತೇಗೌಡ ಮಾತನಾಡಿ ಎನ್.ಬಸವಯ್ಯನವರು ಅಕಾಲ ಮರಣವನ್ನಪ್ಪಿದಾಗ ಸುರೇಶ್ಬಾಬುರವರು ವಿಧಾನಸಭೆ ಚುನಾವಣೆಗೆ ಸ್ಪಧರ್ಿಸಿದ್ದರು ಆಗ ಅವರ ವಿರೋಧಿಗಳು ಆಡೋ ಹುಡುಗನನ್ನು ಕರೆತಂದು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂಬ ಹುಡುಗಾಟ ಮಾತುಗಳು ಬರುತ್ತಿದ್ದವು, ಅದೇ ಆಡೋ ಹುಡುಗ ಈಗ ತಾಲ್ಲೂಕಿನಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ ತಂದೆಯಂತೆ ಮಗನೂ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ ಎಂದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಧುಸೂಧನ್, ಪೂಜಾ.ಕೆ, ದರ್ಶನ್.ಕೆ.ಎಸ್, ಚಂದನ್.ಬಿ.ಎಸ್.ರವರಿಗೆ ಸನ್ಮಾನಿಸಲಾಯಿತು. 
ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ,  ತಾ.ಪಂ.ಸದಸ್ಯರಾದ ಲತಾ, ಚೇತನ, ಕವಿತ, ಹೇಮಾವತಿ ವಕೀಲ ಎಂ.ಬಿ.ನಾಗರಾಜು, ಜೆಡಿಎಸ್ ಮುಖಂಡ ಆಲದಕಟ್ಟೆ ತಿಮ್ಮಯ್ಯ, ಜೆಡಿಎಸ್ ವಕ್ತಾರ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್, ಸಿ.ಆರ್.ತಿಮ್ಮಪ್ಪ, ರವಿ, ದಯಾನಂದ್, ಮಲ್ಲೇಶ್, ಅಶೋಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹೆಸರಳ್ಳಿ ರಾಜ್ಕುಮಾರ್ ಪ್ರಾಥರ್ಿಸಿದರೆ, ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿ, ಎಸ್.ಕೆ.ವಿಜಯಕುಮಾರ್ ನಿರೂಪಿಸಿದರು. (ಪೊಟೋ ಇದೆ)
ಸುದ್ದಿ:4
ಪಡಿತರ ಚೀಟಿ ನೊಂದಣಿ ಮಾಡಲು ನಿಗಧಿಗಿಂತ ಹೆಚ್ಚು ಹಣ ವಸೂಲಿ: ಆರೋಪ
ಚಿಕ್ಕನಾಯಕನಹಳ್ಳಿ,ಮೇ.27: ತಾಲ್ಲೂಕ ಹಂದನಕೆರೆ ಗ್ರಾ.ಪಂ.ಯಲ್ಲಿ ಪಡಿತರ ಚೀಟಿ ನೊಂದಾಯಿಸಲು ಸಕರ್ಾರ ನಿಗಧಿ ಮಾಡಿರುವುದಕ್ಕಿಂತ ಹೆಚ್ಚಿನ ಹಣಕ್ಕೆ ಗ್ರಾ.ಪಂ.ಯವರು ಒತ್ತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
 ಒಂದು ಪಡಿತರ ಚೀಟಿಯನ್ನು ನೊಂದಣಿ ಮಾಡಲು 100ರೂಪಾಯಿಗಳನ್ನು ಪಡೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಈ ಬಗ್ಗೆ ಪಂಚಾಯಿತಿ ಕಾರ್ಯದಶರ್ಿಯವರನ್ನು ವಿಚಾರಿಸಿದರೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ, ನೀವು ಕಂಪ್ಯೂಟರ್ ಆಪರೇಟರ್ ರವರನ್ನೇ ವಿಚಾರಿಸಿ ಎಂದರು. ಅಲ್ಲಿನ ಕಂಪ್ಯೂಟರ್ ಆಪರೇಟರ್ ರವರನ್ನು ವಿಚಾರಿಸಿದರೆ, 100ರೂ ಪಡೆಯತ್ತಿರುವುದು ಸತ್ಯವೆಂದು ಓಪ್ಪಿಕೊಂಡಿದ್ದಾರೆ.
ಗ್ರಾಮಸ್ಥರು  ಪಂಚಾಯತಿಯವರು ನಮಗೆ ಪಡಿತರ ಚೀಟಿಯ ಬಗ್ಗೆ ನೊಂದಣಿಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುತ್ತಿಲ್ಲ ನಾವು ಎಲ್ಲಾ ಕೆಲಸ ಕಾರ್ಯಗಳನ್ನು ತೊರೆದು ಬಂದಾಗ ನಮಗೆ ಪಡಿತರ ಚೀಟಿ ನೊಂದಣಿಯನ್ನು ಮಾಡುವುದಿಲ್ಲ ಹಾಗಾಗಿ ಸ್ಥಳಿಯ ಆಡಳಿತ ಜನರ ಸಮಸ್ಯೆಯನ್ನು ಕೊಡಲೆ ಬಗೆಹರಿಸ ಬೇಕು ಇಲ್ಲವಾದರೆ ಪ್ರತಿಭಟನೆ ಮಾಡುತ್ತೆವೆಂದು ಆಗ್ರಹಿಸಿದರು. ಈ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸುವಂತೆ  ಆಗ್ರಹಿಸಿದ್ದಾರೆ.
ಸುದ್ದಿ:4
ಕನರ್ಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭ
   ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನ ಸಕರ್ಾರಿ ಶಾಲೆಯಲ್ಲಿ 6 ನೇ ತರಗತಿಯಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ, ಗ್ರಾಮೀಣ ಪ್ರದೇಶದ ಆಥರ್ಿಕವಾಗಿ ಹಿಂದುಳಿದ, ಹಾಗೂ ಶಾಲೆ ಬಿಟ್ಟ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳ ಬಾಲಕಿಯರ ವಸತಿ ನಿಲಯಕ್ಕೆ ದಾಖಾಲಾತಿ ಆರಂಭವಾಗಿದೆ ಎಂದು ಬಿ.ಇ.ಓ ಸಾ.ಚಿ. ನಾಗೇಶ್ ತಿಳಿಸಿದ್ದಾರೆ. 
ಈ  ವಸತಿ ನಿಲಯವು ಪಟ್ಟಣದ ಗುರುಭವನದಲ್ಲಿ ನಡೆಯುತ್ತಿದ್ದು, 100 ವಿದ್ಯಾಥರ್ಿನಿಯರಿಗೆ ಮಾತ್ರ ಅವಕಾಶವಿದ್ದು ಈ ಕೊಡಲೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಹದು ಈ ವಸತಿ ನಿಲಯದಲ್ಲಿನ ಮಕ್ಕಳಿಗೆ ಉಚಿತ ತಿಂಡಿ, ಊಟ, ಹಾಸಿಗೆ, ಹೊದಿಕೆ, ಸಮವಸ್ರ, ವ್ಯೆದ್ಯಕೀಯ ಚಿಕಿತ್ಸೆ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
         ಹೆಚ್ಚಿನ ಮಾಹಿತಿಗಾಗಿ ಮುಖ್ಯಶಿಕ್ಷಕರು  ಸಕರ್ಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ ಹಾಗೂ ಶಿಕ್ಷಣ ಸಂಯೋಜಕರು, ಹಂದನಕೆರೆ ಇವರನ್ನು ಸಂಪಕರ್ಿಸಲು ಕೋರಿದೆ, ಹೆಚ್ಚಿನ ವಿವರಗಳಿಗೆ    08133-267267, 943713086, 9535467764  ಇಲ್ಲಿ ಸಂಪರ್ಕಇಸಲು ಕೋರಿದೆ.  

Saturday, May 25, 2013

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಬರಹಗಳ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.25: 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಈ ಸಂಚಿಕೆಗೆ ಜಿಲ್ಲೆಯ ಸಂಸ್ಕೃತಿ, ಸಾಹಿತ್ಯವನ್ನು ಬಿಂಬಿಸುವಂತಹ ಲೇಖನ, ಕವನ, ಪ್ರಬಂಧ, ವಿಡಂಬನೆ, ಶಿಶು ಸಾಹಿತ್ಯ ಒಳಗೊಂಡಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಹೊತ್ತಿಗೆಯನ್ನು ತರ ಬಯಸಿದ್ದು ಆಸಕ್ತರು ತಮ್ಮ ಬರಹಗಳನ್ನು ಜೂನ್ 15ರೊಳಗೆ ತಲುಪಿಸುವಂತೆ ಸ್ಮರಣ ಸಂಚಿಕೆ ಸಮಿತಿ ಕೋರಿದೆ.
ಜೂನ್ 28,29 ಮತ್ತು 30ರಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುವ ಈ ಜಿಲ್ಲಾ ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಿದ್ದು ಆಸಕ್ತರು ತಮ್ಮ ಬರಹದ ಜೊತೆಗೆ ಇತ್ತೀಚಿನ ಭಾವಚಿತ್ರ, ದೂರವಾಣಿ ಸಂಖ್ಯೆ, ಅಂಚೆ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸುವುದು, ಆಯ್ಕೆಯಾಗದ ಬರಹಗಳನ್ನು ವಾಪಸ್ ಕಳುಹಿಸಲಾಗುವುದಿಲ್ಲ. ತಮ್ಮ ಬರಹಗಳನ್ನು ಸೋ.ಮು.ಭಾಸ್ಕರಾಚಾರ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಅಥವಾ ಸಿ.ಗುರುಮೂತರ್ಿ ಕೊಟಿಗೆಮನೆ ಕಾರ್ಯನಿವರ್ಾಹಕ ಸಂಪಾದಕರು ಸ್ಮರಣ ಸಂಚಿಕೆ ವಿಭಾಗ ಸುವರ್ಣಮುಖಿ ಮಾಧ್ಯಮ ಕೇಂದ್ರ, ಕೆನರಾ ಬ್ಯಾಂಕ್ ಎದರು, ಬಿ.ಎಚ್.ರಸ್ತೆ ಚಿಕ್ಕನಾಯಕನಹಳ್ಳಿ ಇಲ್ಲಿಗೆ ಕಳುಹಿಸಲು ಕೋರಿದೆ.  ಹೆಚ್ಚಿನ ವಿವರಗಳಿಗೆ 9844483844 ಅಥವಾ 9448659573 ಸಂಪಕರ್ಿಸಲು ಕೋರಿದೆ.
ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಡಕು.
ಆಂತರಿಕ ಕಿತ್ತಾಟದಿಂದ ಕಟ್ಟಡದ ಉಧ್ಘಾಟನೆಗೆ  ತಡೆ.
                             
ಚಿಕ್ಕನಾಯಕನಹಳ್ಳಿ,ಮೇ25 : ಸಾಮಾನ್ಯ ಸಭೆಯಲ್ಲಿ ರೈತರ ಉತ್ಪಾದಕರ ಸಮಸ್ಯೆಗಳನ್ನು ಚಚರ್ಿಸುತ್ತಿದ್ದ ಸಂದರ್ಭದಲ್ಲಿ ಅಮಾನತ್ತುಗೊಂಡ ಸಂಘದ ಅಧ್ಯಕ್ಷೆ ಭಾಗ್ಯಮ್ಮ ಏಕಾಎಕಿ ಸಭೆಗೆ ನುಗ್ಗಿ ಜಗಳವಾಡಿ ಸಂಘದ ಎಲ್ಲಾ ನಿದರ್ೇಶಕಿಯರನ್ನು ಅವಾಚ್ಯಾವಾಗಿ ಬೈದು ಅವಮಾನ ಮಾಡಿ ಸಂಘದ ರೆಸಲ್ಯೂಷನ್ ಪುಸ್ತಕವನ್ನು ಹರಿದಿರುವುದಲ್ಲದೆ ಹೊರಗಡೆಯಿದ್ದ ಹಾಲು ಉತ್ಪಾದಕರನ್ನೂ ಅವಾಚ್ಯವಾಗಿ ಬೈದು ಅವಾಂತರವೆಬ್ಬಿಸಿದ್ದಾರೆ ಎಂದು ಸಂಘದ ನಿದರ್ೇಶಕಿಯರು, ಸದಸ್ಯರುಗಳು ಹಾಗೂ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಾಲ್ಲೂಕಿನ ಕುಪ್ಪೂರು ಗ್ರಾಮದ ತಮ್ಮಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಘಟನೆ ಸಂಭವಿಸಿದೆ. ಸಂಘದ ಅಧ್ಯಕ್ಷೆ ಭಾಗ್ಯಮ್ಮ ಕಟ್ಟಡ ನಿಮರ್ಾಣದ ಸಂದರ್ಭದಲ್ಲಿ ಅಕ್ರಮವೆಸಗಿರುವುದು ಅಸಿಸ್ಟೇಂಟ್ ರಿಜೀಸ್ಟರ್ ಕಾಂತರಾಜುರವರ ಮುಂದೆ ಸಾಭೀತಾಗಿದ್ದು ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಹಾಗೂ ಅಸಿಸ್ಟೇಂಟ್ ರಿಜೀಸ್ಟರ್ ಕಾಂತರಾಜುರವರ ಅನುಮತಿ ಪಡೆಯದೆ ಕಟ್ಟಡ ನಿಮರ್ಾಣಕ್ಕೆ ಮುಂದಾಗಿದ್ದಾರೆ ಹಾಗೂ ಕಟ್ಟಡ ನಿಮರ್ಾಣಕ್ಕೆ ಹಣವನ್ನು ಬಿಡುಗಡೆ ಮಾಡುವಲ್ಲಿ ಯಾವುದೇ ರೆಸಲ್ಯéೂಷನ್ ಪಾಸ್ ಮಾಡದೆ, ಸರಿಯಾದ ಧಾಖಲೆಯನ್ನು ನೀಡದೆ ಉತ್ಪಾದಕರ ಹಣವನ್ನು ದುರೂಪಯೋಗ ಪಡಿಸಿಕೊಂಡಿರುವುದು ಹಾಗೂ ಜಮಾ ಖಚರ್ಿನಲ್ಲಿ 150000 ರೂ ಹಣ ವ್ಯತ್ಯಸ ಬಂದಿದೆ. ಈ ಅಂಶಗಳು ಸಾಬೀತಾದೆ.
ಇದರಿಂದ ಎ.ಆರ್.ಕಾಂತರಾಜುರವರು ಭಾಗ್ಯಮ್ಮನವರನ್ನು  ಇದೇ 14 ರಂದು ಅದಿನಿಯಮ 106(3)ರಅಡಿ ಅಮಾನತು ಮಾಡಿದ್ದರು. ಇದರಿಂದ ಉತ್ಪಾದಕರು ಹಾಲಿನ ಪೇಮೆಂಟ್ಗಾಗಿ ಪರದಾಡುವಂತಾಗಿದೆ. ಸಂಘದಿಂದ  ಉತ್ಪಾದಕರಿಗೆ 3 ವರ್ಷದಿಂದ ಬೋನಸ್ ನೀಡದೆ ಸತಾಯಿಸಲಾಗಿದೆ. 2013 ಜನವರಿಯಿಂದ 2 ರೂ ಸಬ್ಸಿಡಿಯ ಹಣವನ್ನು ಒಕ್ಕೂಟ ಬೀಡುಗಡೆ ಮಾಡಿಲ್ಲ. ಉತ್ಪಾದಕರು ಆಡಳಿತ ಮಂಡಳಿ ಹಾಗೂ ಒಕ್ಕೂಟದ ನಡುವಿನ ಸಂಘರ್ಷದಲ್ಲಿ ಸಿಲುಕಿ  'ಗಂಡ ಹೆಂಡತಿಯ ಜಗಳದಲ್ಲಿ ಕುಸು ಬಡವಾದ' ಹಾಗೆ ಆಗಿದೆ. ಅಧ್ಯಕ್ಷರಾದ ಭಾಗ್ಯಮ್ಮನವರ ಸವರ್ಾಧಿಕಾರಿ ವರ್ತನೆಯು ಉಳಿದೆಲ್ಲ ನಿದರ್ೇಶಕಿಯರುಗಳಿಗೆ ಅಸಮಧಾನವನ್ನು ಉಂಟುಮಾಡಿದೆ ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರು ನಮ್ಮ ಡೈರಿ ಹಾಳಾಗಲು ಕಾರಣ ಎಂದು ಹಾಲು ಉತ್ಪಾದಕರು ಪತ್ರಿಕೆಗೆ ತಿಳಿಸಿದರು.
ತಮ್ಮಡಿಹಳ್ಳಿ ಸುಮಾರು 150 ಮನೆಗಳ ಗ್ರಾಮವಾಗಿದ್ದು ತುಮಕೂರು ಹಾಲು ಒಕ್ಕೂಟದ ಸಹಕಾರದಿಂದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ತೆರೆಯಲಾಗಿದೆ, ಸರಿ ಸುಮಾರು 200 ಸೀಮೆ ಹಸುಗಳಿದ್ದು ಪ್ರತಿದಿನ ಬೆಳಿಗ್ಗೆ ಸಂಜೆಯಿಂದ 400 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಉತ್ತಮ ಲಾಭವನ್ನುಗಳಿಸಿ 200000 ರೂ ಲಾಭದಲ್ಲಿದ್ದ ಡೈರಿ, ಇಂದು ನಷ್ಟದಲ್ಲಿ ಸಿಲುಕಿದೆ. 
ಸಂಘದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಎಲ್ಲರನ್ನು ಬೈದು ರೆಸಲ್ಯೂಷನ್ ಪುಸ್ತಕವನ್ನು ಹರಿದು ಹಾಕಿ ದಾಂದಲೆ ಮಾಡಿದ್ದಾರೆ ಎಂದು ಕಾರ್ಯದಶರ್ಿಯಾದ ನೀಲಮ್ಮ, ನಿಧರ್ೇಶಕಿಯರಾದ ವಸಂತಕುಮಾರಿ, ಮಂಜುಳ, ನಿಂಗರಾಜಮ್ಮ, ಮಂಜುಳ.ಬಿ, ಬಸಮ್ಮ, ಪ್ರಮೀಳ  ರವರು ಎಆರ್. ಕಾಂತರಾಜುರವರ ಮಾರ್ಗದರ್ಶನದಲ್ಲಿ ನಿದರ್ೇಶಕಿಯರು ಹಾಗೂ ಉತ್ಪಾದಕರು ಗ್ರಾಮಸ್ಥರು ದೂರಿದ್ದಾರೆ. ಇಂತಹ ಅದ್ಯಕ್ಷೆಗೆ ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರು ಕುಮ್ಮಕು ನೀಡಿರುವುದರಿಂದ ನಮ್ಮೂರಿನ ಡೈರಿ ಹಾಳಾಗುತ್ತಿದೆ. ಆದ್ದರಿಂದ ಆಡಳಿತ ಮಂಡಳಿ ಹಾಗೂ ಒಕ್ಕೂಟ ಎಲ್ಲಾ ಹಳೇ ವೈಷಮ್ಯವನ್ನು ಮರೆತು ನಿಮರ್ಾಣವಾದ ಕಟ್ಟಡವನ್ನು ಉದ್ಘಾಟಿಸಲಿ ಮತ್ತು ಉತ್ಪಾದಕರಿಗೆ ಸರಿಯಾಗಿ ಪೆಮೆಂಟ್ ಮಾಡಲಿ, ಒಕ್ಕೂಟ ಸರಿಯಾಗಿ ಸಹಾಯದನ ನೀಡಿ ಹೈನುಗಾರಿಕೆ ಪ್ರಗತಿ ಕಾಣಲಿ ಇವುಗಳನ್ನು ಬಗೆಹರಿಸುವಲ್ಲಿ ಒಕ್ಕೂಟದ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಸಂಘದ ನಿದರ್ೇಶಕರು, ಉತ್ಪಾದಕರು, ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನೇಕಾರರಿಗಿರುವ ಸಕರ್ಾರಿ ಸವಲತ್ತುಗಳನ್ನು
ಬಳಸಿಕೊಳ್ಳುವಂತೆ ಕರೆ
ಚಿಕ್ಕನಾಯಕನಹಳ್ಳಿ,ಮೇ.25 : ನೇಕಾರರಿಗೆ ಸಕರ್ಾರದಿಂದ ಆರೋಗ್ಯ ವಿಮೆ, ಅಂತ್ಯಸಂಸ್ಕಾರದ ಸಹಾಯಧನ, ವಸತಿ ಸೌಕರ್ಯ, ವಿದ್ಯಾಥರ್ಿ ವೇತನದ ಜೊತೆಗೆ ಇನ್ನಿತರ ಸವಲತ್ತುಗಳು ಸಕರ್ಾರದಿಂದ ಸಿಗಲಿದ್ದು ಈ ಸೌಲಭ್ಯಗಳನ್ನು ನೇಕಾರರು ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿದರ್ೇಶಕ ಗಂಗಯ್ಯ ತಿಳಿಸಿದರು.
ಪಟ್ಟಣದ ರೇವಣಸಿದ್ದೇಶ್ವರ ಉಣ್ಣೆ ಸಹಕಾರ ಸಂಘದಲ್ಲಿ ನೇಕಾರರ ಸೇವಾ ಕೇಂದ್ರದ ವತಿಯಿಂದ ನಡೆದ ಸಮಗ್ರ ಕೌಶಲ್ಯ ಅಭಿವೃದ್ದಿ ಯೋಜನೆಯಲ್ಲಿ ವಾರ್ಪರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತರಬೇತಿ ಕಾರ್ಯಕ್ರಮವು 30ದಿನಗಳು ನಡೆಯಲಿದ್ದು 20ಮಂದಿ ನೇಕಾರರಿಗೆ ತರಬೇತಿ ನೀಡಲಾಗುವುದು ಹಾಗೂ ತರಬೇತಿಯಲ್ಲಿ ಪಾಲ್ಗೊಂಡವರಿಗೆ 3ಸಾವಿರ ರೂಪಾಯಿಗಳ ಶಿಷ್ಯ ವೇತನ ನೀಡಲಾಗುವುದು ಹಾಗೂ ವಾರ್ಪಾರ್ ತರಬೇತಿಯಲ್ಲಿ ಉತ್ತಮವಾಗಿ ತರಬೇತಿ ಪಡೆಯಿರಿ ಎಂದು ತಿಳಿಸಿದರು.
ನೇಕಾರರ ಸೇವಾಕೇಂದ್ರದ ಉಪನಿದರ್ೇಶಕ ವಿ.ಕೆ.ಹರಿಪ್ರಸಾದ್ ಮಾತನಾಡಿ ನೇಕಾರರಿಗೆ ಉತ್ತಮ ನೇಕಾರಿಕೆಗಾಗಿ ನಡೆಯುವ ಈ ತರಬೇತಿಯನ್ನು ನೇಕಾರರು ಸದುಪಯೋಗ ಪಡಿಸಿಕೊಳ್ಳಿ, ಕೇಂದ್ರ ಸಕರ್ಾರಿದಂದ ಈ ಯೋಜನೆ ನಡೆಯುತ್ತಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಿರಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ನೆಲಮೂಲ ಪಾರಂಪರಿಕ ಉದ್ಯೋಗವನ್ನು ಉಳಿಸಿ, ಬೆಳಸುತ್ತಿರುವ ಕಂಬಳಿ ನೇಕಾರರು ಇಂದು ಕಣ್ಮರೆಯಾಗುತ್ತಿದ್ದಾರೆ, ಈ ನೇಕಾರಿಕೆಯನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸಕರ್ಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ, ನೇಕಾರರು ಇವುಗಳನ್ನು ಬಳಸಿಕೊಂಡು ತಮ್ಮ ಆಥರ್ಿಕತೆ ಸುಬದ್ರ ಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ರೇವಣಸಿದ್ದೇಶ್ವರ ಉಣ್ಣೆ ಸಹಕಾರ ಸಂಘದ ನಿದರ್ೇಶಕರುಗಳಾದ ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಲೋಕೇಶ್, ಸಿ.ಹೆಚ್.ಅಳವೀರಯ್ಯ, ಗೋವಿಂದಯ್ಯ ಉಪಸ್ಥಿತರಿದ್ದರು, ಸಮಾರಂಭದಲ್ಲಿ ಸೊಸೈಟಿ ಕಾರ್ಯದಶರ್ಿ ಕೋದಂಡಯ್ಯ ಸ್ವಾಗತಿಸಿ, ನಿರೂಪಿಸಿದರು.
ಕುಪ್ಪೂರು ಪಶು ಆಸ್ಪತ್ರೆಯಲ್ಲಿ  ವೀರ್ಯನಳಿಕೆಗಳ ಅಭಾವದಿಂದ ಮಾತಿನ ಚಕಮಕಿ.
ಚಿಕ್ಕನಾಯಕನಹಳ್ಳಿ,ಮೇ.25: ತಾಲ್ಲೂಕು ಶೆಟ್ಟೇಕೆರೆ ಹೋಬಳಿಯ ಕುಪ್ಪೂರು ಪಶು ಆಸ್ಪತ್ರೆಯಲ್ಲಿ ಇಂದು ಹಸುಗಳಿಗೆ ಗರ್ಭದಾರಣೆ ಮಾಡಿಸಲು ಬಂದಾಗ ವೀರ್ಯನಳಿಕೆಯ ಅಭಾವದಿಂದ ಗರ್ಭದಾರಣೆ ಸಾಧ್ಯವಾಗದ ಕಾರಣ ರೈತರು ಮತ್ತು ಪಶು ವೈದ್ಯಾಧಿಕಾರಿ ಶಾಂತಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಡಾ.ಶಾಂತಕುಮಾರ್ ರವರು ಹಳ್ಳೀಕಾರ್ ವೀರ್ಯನಳಿಕೆ ಹಾಗೂ ಅಮೃತ್ ಮಹಲ್ ವೀರ್ಯನಳಿಕೆ ಈ ತಿಂಗಳಲ್ಲಿ ನಮ್ಮ ಆಸ್ಪತ್ರೆಗೆ ಸರಬರಾಜು ಆಗದೆ ಇರುವುದರಿಂದ  ನಮ್ಮಲ್ಲಿ  ಹಳ್ಳೀಕಾರ್ ವೀರ್ಯದ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ಕೇಂದ್ರದ ವ್ಯಾಪ್ತಿಯಲ್ಲಿನ 25 ಗ್ರಾಮಗಳ ಹಸುಗಳಿಗೆ ಈ ಸೌಲಭ್ಯಸಿಗುತ್ತಿಲ್ಲವೆಂದರು. ಈ ಭಾಗದಲ್ಲಿ ಮಿಶ್ರತಳಿ ಹಸುಗಳು 1287 ಇದ್ದು, ನಾಟಿ ಹಸುಗಳು 1762 ಇವೆ ಈ ವೀರ್ಯದ ಅಭಾವದಿಂದ ಇಲ್ಲಿನ ಹಸುಗಳಿಗೆ ಗರ್ಭಧಾರಣಾ ಸೌಲಭ್ಯ ದೊರೆಯುತ್ತಿಲ್ಲ ಹಾಗಾಗಿ ರೈತರು ನಮ್ಮ ಕೇಂದ್ರದಲ್ಲಿ ರೈತರು ನಮ್ಮೊಂದಿಗೆ ಮಾತಿನ ಚಕಮಕಿಗೆ ಮುಂದಾದರು ಎಂದು ಸ್ಪಷ್ಟಪಡಿಸಿದರು.
ಪಶು ಆಸ್ಪತ್ರೆಗಳಲ್ಲಿ ಹಸುಗಳಿಗೆ ಗರ್ಭಧಾರಣಾ ಸೌಲಭ್ಯ ಕೇವಲ 5 ರೂಗಳಲ್ಲಿ ದೊರೆಯುತಿತ್ತು, ಇದೇ ಕಾರ್ಯಕ್ಕೆ ರೈತರು ಹೊರಗಡೆ ಹೋರಿ ಕೊಡಿಸಲು ಹೋದರೆ 100ರೂಗಳು ತೆರಬೇಕಾಗಿರುವುದರಿಂದ ಇದು ರೈತರಿಗೆ ಹೊರೆಯಾಗುತ್ತಿದೆ ಆದ್ದರಿಂದ ಪಶು ಆಸ್ಪತ್ರೆಗಳಿಗೆ ಶೀಘ್ರವೇ ಹಳ್ಳೀಕಾರ್ ಮತ್ತು ಅಮೃತ್ ಮಹಲ್ ವೀರ್ಯನಳಿಕೆಯನ್ನು ಸರಬರಾಜು ಮಾಡುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

Friday, May 24, 2013



ಮನಸ್ಸು ವಿಕಾಸಗೊಳ್ಳಲು ಬೇಸಿಗೆಶಿಬಿರ ಸಹಕಾರಿ.
ಚಿಕ್ಕನಾಯಕನಹಳ್ಳಿ,ಮೇ24: ಸಕರ್ಾರದ ಯೋಜನೆಯ ಸದ್ಬಳಕೆಯಿಂದ ಹಚ್ಚಿನ ಅನುಕೂಲವಾಗಲಿದೆ ಎಂದು ಪುರಸಭಾ ಸದಸ್ಯೆ ರೇಣುಕಮ್ಮ ತಿಳಿಸಿದರು.
ಅವರು ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ 10 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳ ಜ್ಞಾನವಿಕಾಸಕ್ಕೆ ಇಂತಹ ಶಿಬಿರಗಳು ಹೆಚ್ಚಿನ ಅನುಕೂಲವಾಗಲಿದೆ. ನಮ್ಮಲ್ಲಿನ ವೈವಿದ್ಯಮಯ ಸಂಸ್ಕೃತಿಗಳ ಪರಿಚಯ ಹಾಗೂ ವಿನಿಮಯಗಳಿಂದ  ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಿ ಭವಿಷ್ಯದಲ್ಲಿ ಸುಶಿಕ್ಷಿತ ಸಮಾಜ ನಿಮರ್ಾಣಕ್ಕೆ ದಾರಿಯಾಗಲಿದ್ದು ಈ ಶಿಬಿರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರಚಾರ ನೀಡಬೇಕಾಗಿತ್ತೆಂದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಈರಣ್ಣ ಮಾತನಾಡಿ ಇಂದು ಮಕ್ಕಳಿಗೆ ಶಾಲೆಯ ಪುಸ್ತಕಗಳು ಹೆಚ್ಚು ಹೊರೆಯಾಗಿದ್ದು ಅವರ ಮನೋವಿಕಾಸ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ.  ಈ ಶಿಬಿರದಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕುವ ಮೂಲಕ ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ ರಜಾದಿನಗಳಲ್ಲಿ ಮಕ್ಕಳು ಪರ ಊರುಗಳಿಗೆ ತೆರಳುವುದರಿಂದ ವಿವಿಧ ರೋಗ ರುಜಿನಗಳ ಬಾದೆಗೆ ತುತ್ತಾಗಲಿದ್ದಾರೆ. ಇಂತಹ ಶಿಬಿರಗಲ್ಲಿ ಮಕ್ಕಳು ತಮ್ಮ ಬೇಸಿಗೆ ರಜಾದಿನಗಳನ್ನು ಕರಕುಶಲ ಕಲೆ, ನೃತ್ಯ, ಪೇಪರ್ ಕಟಿಂಗ್ ಮುಂತಾದ ಮನೋವಿಕಾಸ ಚಟುವಟಿಕೆಯಿಂದ ಮನಸ್ಸು ಅರಳಲಿದೆ ಎಂದರು.
ಸಮಾರಂಭದಲ್ಲಿ ಸಂಪನ್ಮೂಲವ್ಯಕ್ತಿಗಳಾದ ಸಿ.ಎನ್. ಕೃಷ್ಣಾಚಾರ್, ಕುಮಾರಯ್ಯ, ಮಾಜಿ ಪುರಸಭಾ ಸದಸ್ಯೆ ರಾಜಲಕ್ಷ್ಮಿ, ನಾಗರತ್ನಮ್ಮ, ಶಶಿಕಲಾ ಹಾಗೂ ಎಸಿಡಿಪಿಒ ಪರಮೇಶ್ವರಪ್ಪ ಉಪಸ್ಥಿತರಿದ್ದರು. ಕುಮಾರ್ನಿರೂಪಿಸಿದರು. 
(ಪೊಟೋ ಇದೆ)
ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಮೇ.24: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಮಾಡುವಂತೆ ಕೇಳಿದವರ ಮೇಲೆ ಅನೈತಿಕ ಸಂಬಂಧ ಹುಟ್ಟುಹಾಕಿ ಸಾವಿಗೆ ಕಾರಣವಾಗಿದ್ದವರನ್ನು ಪೊಲೀಸರು ಈವರೆಗೂ ಬಂದಿಸಿಲ್ಲ ಎಂದು ದೂರುದಾರರಾದ ಅನುಸೂಯಮ್ಮ ಆರೋಪಿಸಿದ್ದಾರೆ.
ಅವರು ತಾಲ್ಲೂಕಿನ ಹಂದನಕೆರೆವಾಸಿ ಜಗದೀಶನ ಪತ್ನಿ ಶಶಿಕಲಾ ಎಂಬುವರು ತನ್ನ ತಾಯಿ ಅನುಸೂಯಮ್ಮನ ಕಡೆಯಿಂದ ತರಕಾರಿ ಗಂಗಮ್ಮ ಎಂಬುವರ ಅಳಿಯನಾದ ಚಲುವರಾಜುಗೆ ಹತ್ತು ಸಾವಿರ ಹಣವನ್ನು ಸಾಲವಾಗಿ ಕೊಡಿಸಿದ್ದರು ಎನ್ನಲಾಗಿದ್ದು,  ಸಾಲ ಪಡೆದ ಚಲುವರಾಜು ತಿಂಗಳುಗಳು ಕಳೆದರೂ ಹಣ ವಾಪಸ್ಮಾಡದ ಕಾರಣ ಚಲುವರಾಜು ಹಾಗೂ ಶಶಿಕಲಾ ನಡುವೆ ವಾಗ್ವಾದ ನಡೆದು ಚಲುವರಾಜು ಕೊರಳಲ್ಲಿದ್ದ ಚಿನ್ನದ ಸರವನ್ನು ಶಶಿಕಲ ಪಡೆದು ಹಣ ಪಡೆದ ನಂತರ ಸರ ನೀಡಲಾಗುವುದು ಎಂದು ಹೇಳಿದ ಹಿನ್ನಲೆಯಲ್ಲಿ ಅದೇ ಗ್ರಾಮದ ಪಂಚಾಯಿತಿದಾರರ ಸಮ್ಮುಖದಲ್ಲಿ ಬಡ್ಡಿ ಇಲ್ಲದೆ ಅಸಲು ಹತ್ತು ಸಾವಿರ ಹಣವನ್ನು ಚಲುವರಾಜು ರವರಿಗೆ  ಶಶಿಕಲಾ ಸಾಲದ ರೂಪದಲ್ಲಿ ಕೊಡಿಸಿದ್ದ ಹಣವನ್ನು ವಾಪಸ್ ಮಾಡಿ ಚಿನ್ನದ ಸರವನ್ನು ಮೇ 14 ರಂದು ವಾಪಸ್ ಪಡೆದಿದ್ದರು. ಈ ಎಲ್ಲಾ ವಿಚಾರವನ್ನು ಮನದಲ್ಲಿಟ್ಟುಕೊಂಡಿದ್ದ ಚಲುವರಾಜು, ಪತ್ನಿ ಸವಿತಾ ಹಾಗೂ ಅತ್ತೆ ತರಕಾರಿ ಗಂಗಮ್ಮ ಈ ಮೂವರು ಸಾರ್ವಜನಿಕರೆದರು ಶಶಿಕಲಾ ಮೇಲೆ ದ್ವೇಷದಿಂದ ಸವಿತಾಳು ತನ್ನ ಗಂಡನ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಿಯ ಎಂದು ಬೀದಿಯಲ್ಲಿ ಎಳೆದಾಡಿದ ಪರಿಣಾಮ ಅವಮಾನ ತಾಳಲಾರದೆ ಶಶಿಕಲಾ ಹಂದನಕೆರೆಯ ತೋಟದ ಮನೆಯಲ್ಲಿ ಮೇ.19ರಂದು  ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 
ಈ ಪ್ರಕರಣದ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಅನುಸೂಯಮ್ಮ 505/306 ಪ್ರಕರಣ ದಾಖಲಿಸಿದ್ದರು. ಈ ದೂರಿನ ಮೇಲೆ ತರಕಾರಿ ಗಂಗಮ್ಮನನ್ನು ಬಂದಿಸಲಾಗಿದೆ. ಆದರೆ ಚಲುವರಾಜು ಮತ್ತು ಸವಿತಾ ಎಂಬುವರಿರುವ ಸ್ಥಳದ ಮಾಹಿತಿಯನ್ನು ನೀಡಿದರೂ ಅವರನ್ನು ಬಂಧಿಸುವಲ್ಲಿ ಪೊಲೀಸರು ನಿಲ್ರ್ಯಕ್ಷ ತೋರಿದ್ದಾರೆ ಎಂದು ಅನುಸೂಯಮ್ಮ ಆರೋಪಿಸಿದ್ದಾರೆ.

ಕಾಲೇಜ್ ದಿನಗಳನ್ನು ಸ್ಮರಿಸಿಕೊಳ್ಳಲು 12 ವರ್ಷಗಳ ನಂತರ ಒಂದಾದ ಸ್ನೇಹಿತರು.
ಚಿಕ್ಕನಾಯಕನಹಳ್ಳಿ,ಮೇ.24: ಕಾಲೇಜ್ ದಿನಗಳನ್ನು ನೆನಪಿಸಿಕೊಳ್ಳುವ, ಬದುಕಿನ ಜಂಜಾಟದಿಂದ ಕೆಲ ಕಾಲ ಸ್ನೇಹಿತರೊಂದಿಗೆ ತಮ್ಮ ಯಶೋಗಾಧೆಗಳನ್ನು ಹೇಳಿಕೊಳ್ಳುವ ಹಾಗೂ ಸ್ನೇಹಿತೆಯರಿಗೆ ಬಾಗಿಣ ನೀಡುವ ಹೊಸ ಕಲ್ಪನೆಗೆ ನಾಂದಿ ಹಾಡಿದ್ದು, ತಮ್ಮ ಹೆಂಡತಿ, ಮಕ್ಕಳಿಗೆಲ್ಲಾ ತನ್ನ ಕಾಲೇಜ್ ದಿನಗಳ  ಸ್ನೇಹತರನ್ನು ಪರಸ್ಪರ ಪರಿಚಯಿಸಿಕೊಳ್ಳುವ ಮೂಲಕ  ಮರೆತೇನೆಂದರೆ ಮರೆಯಲಿ ಹ್ಯಾಂಗ. . . . ! ಎಂಬ ವಿಶೇಷ ಕಾರ್ಯಕ್ರಮ ಅಭೂತ ಪೂರ್ವವಾಗಿ ನಡೆದಿದೆ.
2001ರಲ್ಲಿ ಪಿ.ಯು.ಸಿ.ಓದುತ್ತಿದ್ದ ವಿದ್ಯಾಥರ್ಿಗಳು ಹನ್ನೆರಡು ವರ್ಷಗಳ ಬಳಿಕ ತಾವು ಒಂದೆಡೆ ಕಲೆಯುವ ಮೂಲಕ ತಾವು ಓದುತ್ತಿದ್ದ ಕುಪ್ಪಾಳಿನ ಶ್ರೀ ಮಲ್ಲಿಕಾರ್ಜನ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ಆವರಣದಲ್ಲಿ ಬೆರೆತು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಈ ರೀತಿಯ ಆಲೋಚನೆ ಮಾಡಿದ್ದು ಕಲಾವಿದ ಗೋಪಾಲನಹಳ್ಳಿ ಆತ್ಮಾನಂದ, ತನ್ನ ಜೊತೆಯ 80 ವಿದ್ಯಾಥರ್ಿಗಳ ವಿಳಾಸ, ಪೋನ್ ನಂಬರ್ಗಳನ್ನು ಸಂಗ್ರಹಿಸಿ ಅವರಿಗೆಲ್ಲಾ ವಿಷಯ ತಿಳಿಸಿ ಕಾಲೇಜ್ಗೆ ಬರಮಾಡಿಕೊಂಡು ವೈಭವದ ಕಾರ್ಯಕ್ರಮವನ್ನು ಗೆಳೆಯರ ಸಹಾಯದಿಂದ ಆಯೋಜಿಸಿದ್ದರು. 
ಸಮಾರಂಭದಲ್ಲಿ ಸ್ನೇಹಿತರೆಲ್ಲಾ ತಮ್ಮ ವೃತ್ತಿ ಜೀವನ, ಸಿಹಿ ಕಹಿ ಘಟನೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಿವೃತ್ತ ಪ್ರಾಂಶುಪಾಲರಾದ ಕೆ.ಸಿ.ಮಲ್ಲಿಕಾಜರ್ುನಯ್ಯ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಬಾಲರಾವ್ರವರನ್ನು ಸನ್ಮಾನಿಸಲಾಯಿತು.  ಸ್ನೇಹಿತ ಶಿವಕುಮಾರ್ ಆಕಸ್ಮಿಕ ಮರಣಹೊಂದಿದ್ದು ಅವರ ಸ್ಮರಣೆಯ ಪ್ರಯುಕ್ತ ಮೌನ ಆಚರಿಸಿದರು.
 ಮುಂದಿನ ದಿನಗಳಲ್ಲಿ ಸ್ನೇಹಿತರು ಪರಸ್ಪರ ಕಷ್ಟ ಸುಖಗಳನ್ನು ಭಾಗಿಯಾಗಬೇಕೆಂದು ದೃಢ ತೀಮರ್ಾನ ತೆಗೆದುಕೊಂರು, ಸಮಾರಂಭದ ನಂತರ ಎಲ್ಲಾ ಸ್ನೇಹಿತರು ತಮ್ಮೊಂದಿಗೆ ಕಲಿತಿದ್ದ ಸ್ನೇಹಿತೆಯರಿಗೆ ಬಾಗಣ ನೀಡಿ ಆತ್ಮೀಯವಾಗಿ ಗೌರವಿಸಿ ಕಳುಹಿಸಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ನಾಗರಾಜು ವಹಿಸಿದ್ದರು, ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.



(ಸಿ.ಗುರುಮೂತರ್ಿ ಕೊಟಿಗೆಮನೆ)
ಮುತ್ಸದ್ದಿ ರಾಜಕಾರಣಿ   ಜೆ.ಸಿ.ಮಾಧುಸ್ವಾಮಿ ನಿವೃತ್ತರಾಗುತ್ತಾರೆಯೇ. . . . . ?!


ಚಿಕ್ಕನಾಯಕನಹಳ್ಳಿ,ಮೇ.22: ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಕೆ.ಎಂ.ಎಫ್ ಅಧ್ಯಕ್ಷರಾಗಿ, ಜೆ.ಡಿ.ಯು.ನಿಂದ  ಸದನದ ನಾಯಕರಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ, ಸದನ ಶೂರ ಎನಿಸಿಕೊಂಡಿದ್ದ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಕೆ.ಜೆ.ಪಿ. ಪಕ್ಷದಿಂದ ಸೋಲುಂಡ ಮುತ್ಸದ್ದಿ ರಾಜಕಾರಣಿ ಜೆ.ಸಿ.ಮಾಧುಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿರುವುದು  ಕ್ಷೇತ್ರದ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚಚರ್ೆಯಾಗುತ್ತಿದೆ.
ಈ ರೀತಿಯ ಚಚರ್ೆಯನ್ನು ಆರಂಭಿಸಿರುವವರು ಸ್ವತಃ ಜೆ.ಸಿ.ಮಾಧುಸ್ವಾಮಿಯವರೇ, ತಮ್ಮ ಬಳಿ ಬರುವ ತಮ್ಮ ಅಭಿಮಾನಿಗಳ ಬಳಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸುತ್ತಿರುವುದು ಗುಟ್ಟಾಗಿ ಉಳಿದಿರುವ ವಿಷಯವಲ್ಲ. ಅವರ  ಈಗಲೂ ಯಾರೇ ಕೆಲಸ ಕೇಳಿಕೊಂಡು ಹೋದವರಿಗೆ ರಾಜಕೀಯದಿಂದ ದೂರ ಉಳಿಯಬೇಕೆಂದಿದ್ದೇನೆ ಯಾಕೆ ನಮ್ಮ ಬಳಿ ಬರುತ್ತೀರ ಎನ್ನುತ್ತಲೇ ಬಂದವರ ಕೆಲಸದ ಬಗ್ಗೆ  ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿ ಕೆಲಸ ಮಾಡಿಸುತ್ತಾರೆ. ಅಭಿಮಾನಿಗಳು, ಕಾರ್ಯಕರ್ತರು ಮುಂದೆ ಏನು ಮಾಡುವುದು ಎಂದು ಕೇಳಿದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂಬ ಮಾತುಗಳಾಡುತ್ತಾರೆ ಎಂದು ಅವರ ಆಪ್ತರು ಹೇಳುತ್ತಾರೆ.
ಕಳೆದ ಎರಡು ಬಾರಿಯಿಂದ ಸೋಲು ಅನುಭವಿಸಿರುವ ನೇರ ನಿಷ್ಠುರ ಮಾತುಗಾರ ಜೆ.ಸಿ.ಎಂ. ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆಯೂ ಅಷ್ಟೇ ದಿಟ್ಟವಾಗಿ ನೇರವಾಗಿ ಮಾತನಾಡುತ್ತಿದ್ದಾರೆ ಎಂಬುದು ಅವರ ಆಪ್ತರ ಅಭಿಪ್ರಾಯ. ಈ ಬಾರಿಯ ಚುನಾವಣೆಯಲ್ಲಿ ಗೆದ್ದೇತೀರಬೇಕೆಂದು ತಂತ್ರಗಾರಿಕೆಯ ಜೊತಗೆ ಎಲ್ಲಾ ರೀತಿಯಲ್ಲೂ ಬಹಳಷ್ಟು ಶ್ರಮ ಹಾಕಿದ್ದ ಜೆ.ಸಿ.ಎಂ. ತಮ್ಮ ಸೋಲಿನಿಂದ ವಿಚಲಿತರಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ರಾಜಕೀಯ ನಡೆಯ ಬಗ್ಗೆಯೂ ಅಸ್ಪಷ್ಟ ಚಿತ್ರಣದಿಂದಾಗಿ ಗೊಂದಲಕ್ಕೀಡಾಗಿದ್ದಾರೆ.
ಹಿನ್ನೆಡೆಗೆ ಕಾರಣಗಳೇನು...?: ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಪುನರ್ ವಿಂಗಡಣೆಯಿಂದ ಇವರ ಓಟ್ ಬ್ಯಾಂಕ್ ಬದಲಾಗಿರುವುದಷ್ಟೇ ಅಲ್ಲ, ಯಾವ ಪಕ್ಷದ ಚಿಹ್ನೆ ಅಡಿಯಲ್ಲಿ ನಿಲ್ಲಬೇಕೆಂಬ ಗೊಂದಲದಿಂದ  ಶುರುವಾದ ಇವರ ಚುನಾವಣಾ ಪರ್ವ ಕೆ.ಜೆ.ಪಿ.ಗೆ ಸೇರುವ ವರೆಗೆ ಅನಿಶ್ಚಿತವಾಗಿಯೇ ನಡೆಯಿತು. ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಸೇರಬೇಕೊ ಅಥವಾ ಕೆ.ಜೆ.ಪಿ.ಗೆ ಸೇರಬೇಕೊ ಎಂಬ ಗೊಂದಲವೇ ಇವರನ್ನು ಬಹಳಷ್ಟು ತಿಂಗಳು ಕಾಡಿತು, ಈ ಮಧ್ಯೆ ಜೆ.ಸಿ.ಎಂ. ಕೆ.ಜೆ.ಪಿ.ಸೇರದಿದ್ದರೆ ಆ ಪಕ್ಷದಿಂದ ಮತ್ತೊಬ್ಬ ಲಿಂಗಾಯಿತ ಹೊಸ ಅಭ್ಯಾಥರ್ಿ ಹುಟ್ಟುವ ಲಕ್ಷಣಗಳು ಕಂಡಿದ್ದರಿಂದ ಹಾಗೂ 2008ರ ಚುನಾವಣೆಯಲ್ಲಿ ತನ್ನ ಸೋಲಿಗೆ ಯಡಿಯೂರಪ್ಪನವರ ಅಲೆಯೇ ಕಾರಣ ಎಂಬ ಅಭಿಪ್ರಾಯವಿದದ್ದರಿಂದ ಕೊನೆಗೆ ಕೆ.ಜೆ.ಪಿ.ಗೆ ಸೇರ್ಪಡೆಗೊಂಡು ಆ ಪಕ್ಷದಿಂದ ಸ್ಪಧರ್ಿಸಿದ್ದರು.
ಚುನಾವಣೆ ಇನ್ನೂ ಆರು ತಿಂಗಳು ಇರುವಾಗಲೇ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಅಲ್ಲಿ ಅವರ ಕಾರ್ಯಕರ್ತರು, ಅಭಿಮಾನಿಗಳನ್ನೆಲ್ಲಾ ಭೇಟಿ ಮಾಡಿ ತಮ್ಮ ಮುಂದಿನ ಆಲೋಚನೆಗಳನ್ನೇಲ್ಲಾ ಹಂಚಿಕೊಂಡು ತಮ್ಮ ಪರವಾದ ಪಡೆಯನ್ನೇ ಕಟ್ಟುತ್ತಿದ್ದರು.  ಹುಳಿಯಾರು, ಬುಕ್ಕಾಪಟ್ಟಣ ಹೋಬಳಿಗಳಿಗೂ ಅಷ್ಟೇ ಮಹತ್ವವನ್ನು ಕೊಟ್ಟಿದ್ದರೂ, ಇಷ್ಟೆಲ್ಲಾ ಪ್ರಯತ್ನ ಪಟ್ಟರು ಹೀಗಾಯಿತಲ್ಲಾವೆಂಬುದು ಒಂದಡೆಯಾದರೆ, ಮುಂದೇನು ಎಂಬ ವಿಚಾರ ಅವರನ್ನು ಸಾಕಷ್ಟು ಚಿಂತನೆಗೆ ಈಡುಮಾಡಿದೆ.
ಮುಂದಿನ ಅವಕಾಶಗಳು: ಇನ್ನೂ ಒಂದುವರ್ಷವಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದ ಕಸರತ್ತು ಶುರು ಮಾಡುತ್ತಾರೆಂಬ ಒಂದು ಲಹರಿ ಇದೆ, ತುಮಕೂರು ಎಂ.ಪಿ.ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪಧರ್ಿಸುವ ಈರಾದೆ ಇದೆ, ಆದರೆ ಅಲ್ಲಿಗಾಗಲೇ ಈಗಿರುವ ಎಂ.ಪಿ.ಯವರು ಕಾಂಗ್ರೆಸ್ಗೆ ಹೋಗುತ್ತಾರೆ, ಆ ಪಕ್ಷದಿಂದ ಸ್ಪಧರ್ಿಸುತ್ತಾರೆ ಎಂಬು ಕೂಗು ಕೇಳಿಬರುತ್ತಿರುವುದು ಇವರ ದಾರಿಗೆ ತೊಂದರೆಯಾಗಿದೆ. 
ಇನ್ನೂ ಕ್ಷೇತ್ರ ಬದಲಾಯಿಸುವ ಬಗ್ಗೆ ಯೋಚಿಸುವ ಆಲೋಚನೆಯ ಬಗ್ಗೆ ವಿಚಾರ ಬಂದರೂ ಕಳೆದ ಬಾರಿ ಸೋತ ಸಂದರ್ಭದಲ್ಲೇ ಅವರು ಒಂದು ಮಾತು ಹೇಳಿದ್ದರು, ಏನೇ ಆದರೂ ಸೋತ ಕ್ಷೇತ್ರದಲ್ಲಿ ಗೆದ್ದನಂತರವೇ  ಬದಲಾವಣೆಯ ಆಲೋಚನೆಯೇ ಹೊರತು ಅಲ್ಲಿಯವರೆಗೆ ನಾನು ಕ್ಷೇತ್ರ ಬದಲಾವಣೆಯ ಮಾತನಾಡುವುದಿಲ್ಲವೆಂದಿದ್ದರು. ಹಾಗಾಗಿ ಈ ಅವಕಾಶಗಳೂ ಕಡಿಮೆ ಈ ಎಲ್ಲಾ ಲೆಕ್ಕಾಚಾರಗಳ ತಾಳೆ ನೋಡಿದರೆ, ಅವರು ರಾಜಕೀಯ ನಿವೃತ್ತಿಯ ಮಾತನಾಡುತ್ತಿರುವುದು ಸಹಜವೇ ಎನಿಸುತ್ತಿದೆ ಆದರೆ ಅವರು ಮಾತ್ರ ಅಧಿಕೃತವಾಗಿ ಏನನ್ನು ಹೇಳಿಲ್ಲಾ, ಎಲ್ಲವನ್ನು ಕಾದು ನೋಡುವ ತಂತ್ರದ ಜೊತೆಗೆ ಮುಂದಿನ ಅವಕಾಶಗಳ ತೆರೆದಿಟ್ಟುಕೊಂಡಿದ್ದಾರೆ.
ರಾಜಕೀಯ ವಲಯದಲ್ಲಿನ ಅಭಿಪ್ರಾಯಗಳು: ಇನ್ನೂ ಅವರ ರಾಜಕೀಯ ವಲಯದಲ್ಲಿ ಗುತರ್ಿಸಿಕೊಂಡವರ ಪ್ರಕಾರ, ಅವರು ಮಾತುಗಳು ಬಹಳ ಮಾಮರ್ಿಕವಾಗಿರುತ್ತವೆ, ಅದನ್ನು ಹೇಗೆ ಸ್ವೀಕರಿಸಬೇಕೆಂಬುದು ಇಷ್ಟು ಹತ್ತಿರದಲ್ಲಿರುವ ನಮಗೆ ತಿಳಿದಿರುವುದಿಲ್ಲ, ಅವರ ಪ್ರತಿ ನಡೆಯೂ ಒಂದು ರೀತಿ ನಿಗೂಢ, ಏನೇ ಆಗಲಿ ಅಂತಹ ಮುತ್ಸದ್ದಿ ರಾಜಕಾರಣಿಯೊಬ್ಬರು ಸೋಲು ಗೆಲವನ್ನು ಸಮಾನವಾಗಿ ತೆಗೆದುಕೊಳ್ಳಬೇಕು, ಆಟಕ್ಕೆ ಬಂದವರೆಲ್ಲಾ ಗೆಲ್ಲಲಾಗುವುದಿಲ್ಲ ಹಾಗಂತ ರಾಜಕೀಯ ನಿವೃತ್ತಿಯಂತಹ  ನಿಧರ್ಾರ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಅವರ ಅಭಿಮಾನಿ ಧನಂಜಯ.
ಇನ್ನೂ ಮಾಧುಸ್ವಾಮಿಯವರು ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು, ಬಿರುನುಡಿಗಳನ್ನು ಬಿಡಬೇಕು, ಬಡವರ, ದೀನ ದಲಿತರ ಬಗ್ಗೆ  ಮೃದುಧೋರಣೆ ಇರಬೇಕು, ಯಾವ ರಾಜಕಾರಣಿಯೂ ಸತ್ಯಸಂದನಲ್ಲ ಕೆಲವೊಂದನ್ನಾದರೂ ಅನುಸರಿಸಿಕೊಂಡು ಹೋಗುವ ಗುಣ ಬೆಳಸಿಕೊಳ್ಳಬೇಕು ಜನ ಸಾಮಾನ್ಯರೊಂದಿಗೆ ಬೆರಯುವ ಗುಣ ಬೆಳಸಿಕೊಂಡರೆ ಭರವಸೆಯ ನಾಯಕರಾಗಬಲ್ಲ  ಎಂದು ಹೇಳುತ್ತಲೇ ಆಕಾಶದ ಕಡೆ ಮುಗ ಮಾಡುತ್ತಾನೆ ಹೆಸರು ಬಹಿರಂಗ ಪಡಿಸಲಿಚ್ಚಸದ ಅವರ ನಿಕಟವತರ್ಿ. 

 ಜನರ ಪ್ರೀತಿ,ವಿಶ್ವಾಸದ ಜೊತೆಗೆ ಕ್ಷೇತ್ರದ ಅಭಿವೃದ್ದಿಯೇ ನನ್ನ ಆದ್ಯತೆ: ಶಾಸಕ ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಮೇ.23 : ಕ್ಷೇತ್ರದ ಎಲ್ಲಾ ವರ್ಗದ ಜನತೆಯ ಆಶೀವರ್ಾದದಿಂದ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ನನ್ನ 42ವರ್ಷ ಜೀವನದಲ್ಲಿ ಐದು ಬಾರಿ ಚುನಾವಣೆ ಎದುರಿಸಿ 3ಬಾರಿ ಗೆಲುವು ಹಾಗೂ 2ಬಾರಿ ಸೋಲನ್ನು ಕಂಡಿರುವೆ, ಶಾಸಕನಾಗಿ ಅಧಿಕಾರವಿದೆ ಎಂದು ನಾನೂ ಎಂದಿಗೂ ದರ್ಪದಿಂದ ವತರ್ಿಸದೆ ಜನರ ಪ್ರೀತಿ, ವಿಶ್ವಾಸಗಳಿಸಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿರುವೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಅಧಿಕಾರಾವಧಿಯಲ್ಲಿ ತಾಲ್ಲೂಕಿನಲ್ಲಿ ಒಂದು ಸುಸಜ್ಜಿತವಾದ ತೀ.ನಂ.ಶ್ರೀ ಭವನ ನಿಮರ್ಾಣ, ಹೇಮಾವತಿ ಕುಡಿಯುವ ನೀರನ್ನು ತಾಲ್ಲೂಕಿನ ಜನತೆಗೆ ಸಿಗುವಂತೆ ಮಾಡುವುದು, ತಾಲ್ಲೂಕಿನಲ್ಲಿ ವಿದ್ಯಾಥರ್ಿಗಳಿಗಾಗಿ ಒಂದು ಸಕರ್ಾರಿ ಅಥವಾ ಖಾಸಗಿ ಪಾಲಿಟೆಕ್ನಿಕ್ ಕಾಲೇಜು ತರುವುದಾಗಿ ತಿಳಸಿದರು.
ತಾಲ್ಲೂಕಿನಲ್ಲಿ ಆರಂಭಿಸಲು ಉದ್ದೇಶಿಸಿರುವ  ಗಾಮರ್ೆಂಟ್ಸ್ಗೆ ಈಗಾಗಲೇ ನಾಲ್ಕೈದು ಪ್ರತಿಷ್ಠಿತ ಗಾಮರ್ೆಂಟ್ಸ್ ಕಂಪನಿಗಳಲ್ಲಿ ಚಚರ್ಿಸಿದ್ದು ಅವರು ತಾಲ್ಲೂಕಿನಲ್ಲಿ ಗಾಮರ್ೆಂಟ್ಸ್ ಆರಂಭಿಸಲು ಮುಂದಾಗಿದ್ದಾರೆ ಎಂದರಲ್ಲದೆ, ಈ ಮೂಲಕ ತಾಲ್ಲೂಕಿನ ನಿರುದ್ಯೋಗ ಯುವಕ, ಯುವತಿಯರು ಗುಳೇ ಹೋಗದೇ ತಮ್ಮ ಸ್ಥಳದಲ್ಲೇ ಉತ್ತಮ ಸಂಬಳ ಪಡೆದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಈ ಕಾರ್ಯಕ್ಕೆ ಎಲ್ಲಾ ಸಂಘ-ಸಂಸ್ಥೆಗಳ ನೆರವು ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದರಲ್ಲದೆ ಜನತೆಯಲ್ಲಿ ಮನೆ ಮಾಡಿರುವ ಜಾತಿ ವ್ಯವಸ್ಥೆ ಹಾಗೂ ಭೇದ-ಭಾವ ತೊಲಗಿಸಲು ಕರೆ ನೀಡಿದರು.
ಸಾರ್ವಜನಿಕ ಸೇವೆಗೆ ಹೆಚ್ಚಿನ ಒತ್ತು ನೀಡಿ ಅವರ ಅಭಿವೃದ್ದಿ ಮೂಲಕ ತಮ್ಮ ಸಂಸ್ಥೆಯ ಏಳಿಗೆಯನ್ನು ಕಾಣುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ಸಂಸ್ಥೆಯ ಶಿಸ್ತಿನ ಆದರ್ಶದ ಸೇವೆ ಇನ್ನಷ್ಟು ಹೆಚ್ಚಲಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆಶಿಸಿದರು.
ರೋಟರಿಯ ಜಿಲ್ಲಾ 3190ರ ಗವರ್ನರ್ ರೊ.ಆರ್.ಬದರಿಪ್ರಸಾದ್ ಮಾತನಾಡಿ ರೋಟರಿ ಅಧ್ಯಕ್ಷ ಹಾಗೂ ಕಾರ್ಯದಶರ್ಿ ಹುದ್ದೆ ಜವಬ್ದಾರಿಯುತವಾದ ಅಧಿಕಾರ, ಇಲ್ಲಿ ಸಾರ್ವಜನಿಕರ ಸೇವೆಗೆ ತಮ್ಮ ಸಮಯವನ್ನು ಮುಡಿಪಾಗಿಡಬೇಕು, ರೋಟರಿ ಸಂಸ್ಥೆ ಸಾರ್ವಜನಿಕರಿಗಾಗಿ ಹಲವು ಸೇವೆ ನೀಡಿದ್ದು ತಾಲ್ಲೂಕಿನಲ್ಲಿ ಪುರಸಭೆ ಜಾಗ ನೀಡಿದ್ದರೆ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿಮರ್ಿಸಲು ಮುಂದಾಗಿದ್ದೆವು ಆದರೆ ಜಮೀನಿನ ಸಮಸ್ಯೆಯಿಂದ ಕೆಲಸವಾಗಲಿಲ್ಲ ಮುಂದೆ ಪುರಸಭೆ ಹಾಗೂ ಶಾಸಕರು ಸಂಸ್ಥೆಯೊಂದಿಗೆ ಕೈ ಜೋಡಿಸಿದರೆ  ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.
ರೊಟರಿಯ ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಮಾತನಾಡಿ ಒಂದು ತಿಂಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ರೋಟರಿ ಅಧ್ಯಕ್ಷ, ಕಾರ್ಯದಶರ್ಿಗಳ ಅಧಿಕಾರಾವಧಿಯು  ಮುಗಿಯಲಿದ್ದು ಮುಂದೆ ಅಧಿಕಾರ ವಹಿಸಿಕೊಳ್ಳಲಿರುವ ಅಧ್ಯಕ್ಷರು, ಎಂ.ವಿ.ನಾಗರಾಜ್ರಾವ್ರವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಉತ್ತಮ ಕಾರ್ಯಕ್ರಮಗಳನ್ನು ನಡೆಸಿರಿ ಎಂದು ತಿಳಿಸಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ ರೋಟರಿ ಸಂಸ್ಥೆ ಪೋಲಿಯೋ ನಿಮರ್ೂಲನಾ ರಾಷ್ಟ್ರ ಮಾಡುವಲ್ಲಿ ಯಶಸ್ವಿಯೂ ಆಗಿದೆ, ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ 50ಮನೆಗನ್ನು ನಿಮರ್ಾಣ ಮಾಡಿಕೊಡುವ ಕಾರ್ಯ ಉತ್ತಮವಾಗಿದ್ದು ಈ ಕಾರ್ಯಕ್ಕೆ ಪುರಸಭೆ ಸ್ಪಂದಿಸುತ್ತದೆ ಎಂದರಲ್ಲದೆ ತಾಲ್ಲೂಕನ್ನು ಕಸಮುಕ್ತ ನಗರವಾಗಲು ಪುರಸಭೆ ತೀಮರ್ಾನಿಸಿದ್ದು ಇದಕ್ಕೆ ರೋಟರಿ ಸಂಸ್ಥೆ ನಮ್ಮೊಂದಿಗೆ ಕೈ ಜೋಡಿಸುವಂತೆ ಕೋರಿದರು. 
ಸಮಾರಂಭದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಿಸಲಾಯಿತು. ಹಾಗೂ ತಾಲ್ಲೂಕಿನ 30 ಶಾಲೆಗಳಿಗೆ ಉಚಿತ ವಾಟರ್ ಪಿಲ್ಟರ್ನ್ನು ನೀಡಲಾಯಿತು. 
ಸಮಾರಂಭದಲ್ಲಿ  ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಇನ್ನರ್ವೀಲ್ ಅಧ್ಯಕ್ಷೆ ಭವಾನಿಜಯರಾಂ, ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.

ಬೇಸಿಗೆಯ ರಂಗತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಮೇ.23: ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಬೇಸಿಗೆಯ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ಎಸ್.ಗಂಗಾಧರ್ ತಿಳಿಸಿದ್ದಾರೆ.
ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ26 ಭಾನುವಾರ ಬೆಳಿಗ್ಗೆ 10ಗಂಟೆಗೆ ಬೇಸಿಗೆಯ ರಂಗತರಬೇತಿ ಶಿಬಿರ ಪ್ರಾರಂಭವಾಗುವುದು. ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜಿನ ವಿಧ್ಯಾಥರ್ಿಗಳಿಗೆ ಚಿ.ನಾ.ಹಳ್ಳಿಯ ಸ್ವರಗಂಗಾ ಸ್ಕೂಲ್ ಆಫ್ ಅಕಾಡಮಿ ವತಿಯಿಂದ ವಚನಗಳು, ಶ್ಲೋಕಗಳು, ಸುಗಮ ಸಂಗೀತ, ಭಕ್ತಿಗೀತೆಗಳು, ಚಲನಚಿತ್ರ ಗೀತೆಗಳಿಗೆ ತರಬೇತಿ ಮತ್ತು ರಂಗ ಅಭಿನಯವನ್ನು ಹೇಳಿಕೊಡಲಾಗುವುದು. ಗಾನವಿಶಾರದ ಸಂಗೀತ ವಾದ್ಯವೈವಿದ್ಯ ನಾಟ್ಯ ಸಂಘದ ಜೂ.ಪಿ.ಬಿ.ಶ್ರೀನಿವಾಸ್ ಎಂ.ಸಿ.ಕಲ್ಲೇಶ್ ಮತ್ತು ತಾಲ್ಲೂಕು ರಂಗಕಲಾವಿದರ ಸಂಘ ಇವರ ಸಹಕಾರದಲ್ಲಿ ವಿಶೇಷವಾಗಿ ಶಿಬಿರದಲ್ಲಿ ತರಬೇತಿಯಾದ ಉತ್ತಮ ಕಲಾಪ್ರತಿಭೆಗಳನ್ನು ಗುರುತಿಸಿ ದೂರದರ್ಶನ(ಚಂದನ ವಾಹಿನಿ)ಹಾಗು ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿ ಕೊಡುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9538431494.
ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿ
ಚಿಕ್ಕನಾಯಕನಹಳ್ಳಿ,ಮೇ.23 :ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿಯಾಗಿದ್ದು ಪಾರದರ್ಶಕ ತನಿಖೆ ನಡೆಸಿ ಬೇಜವ್ದಾರಿ ತೋರಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು.
 ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಶೆಟ್ಟಿಕೆರೆ ಹೋಬಳಿ ದಿಬ್ಬದಹಳ್ಳಿಯಲ್ಲಿ ಬುಧವಾರ ಸಂಜೆ 7.30ರ ಸುಮಾರಿನಲ್ಲಿ ಹೈ ಓಲ್ಟೇಜ್ ವಿದ್ಯತ್ ಪ್ರವಹಿಸಿದ್ದರ ಪರಿಣಾಮ ಶಿವಕುಮಾರ್ ಅವರ ಪುತ್ರ ಸುಮಾರು 3 ವರ್ಷದ ಪ್ರಜ್ವಲ್ ಎಂಬ ಬಾಲಕ ಟಿ.ವಿ.ಸ್ಟಾಂಡ್ ಮುಟ್ಟುತ್ತಲೇ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದು ಸಂತ್ರಸ್ತ ಕುಟುಂಬಕ್ಕೆ ಗುರುವಾರ ಬೆಸ್ಕಾಂನಿಂದ ಕೊಡಮಾಡಿದ 2ಲಕ್ಷ ಮೊತ್ತದ ಚಕ್ ವಿತರಿಸಿ ಮಾತನಾಡುತ್ತಿದ್ದರು
   ಈ ಗ್ರಾಮದಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ಏರುಪೇರಾಗುತ್ತಿತ್ತು. 220 ವೋಲ್ಟೇಜ್ ಬದಲಿಗೆ 440 ವೋಲ್ಟೇಜ್ ವಿದ್ಯುತ್ ಹರಿಯುತ್ತಿತ್ತು. ಗೋಡೆಗಳಿಗೆ ಗ್ರೌಂಡ್ ಆಗಿ ಹಲವರಿಗೆ ಸಣ್ಣ ಪುಟ್ಟ ಶಾಕ್ಗಳೂ ಆಗಿದ್ದು ಈ ಬಗ್ಗೆ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ಎಇಇ ಅವರಿಗೆ ತಿಳಿಸಿದ್ದರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಆದ್ದರಿಂದ ಗ್ರಾಮಸ್ತರೇ ವಿದ್ಯತ್ ಸಂಪರ್ಕವನ್ನು ತೆಗೆದಿದ್ದರು ಎಂದು ಗ್ರಾಮಸ್ತರು ದೂರಿದರಲ್ಲದೆ. ಬುಧವಾರ ಗ್ರಾಮಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯತ್ ಪರಿವರ್ತಕಕ್ಕೆ ಸಂಪರ್ಕ ಕಲ್ಪಿಸಿ ಪರಿಶೀಲಿಸದೆ ಮರಳಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ತರು ದೂರಿದರು
 ತನಿಕೆ ಕೈಗೋಂಡಿರುವ ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್ ತನಿಕೆ ಪೂರ್ಣಗೊಂಡ ನಂತರ ಘಟನೆಯ ಪೂರ್ಣವಿವರ ನೀಡಲಾಗುವುದು ಎಂದು ತಿಳಿಸಿದರು.
 ಸ್ಥಳಕ್ಕೆ ತಹಶಿಲ್ದಾರ್ ಕಾಮಾಕ್ಷಮ್ಮ,ಸಿಡಿಪಿಒ ಅನೀಸ್ ಖೈಸರ್,ಡೆಪ್ಯೂಟಿ ಎಲೆಕ್ತ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್,ವೈತ್ತ ನಿರೀಕ್ಷಕ ಪ್ರಭಾಕರ್,ಎಎಸೈ ನರಸಿಂಹಯ್ಯ ಮುಂತಾದವರು ಬೇಟಿ ನೀಡಿದ್ದರು.
ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿ
ಚಿಕ್ಕನಾಯಕನಹಳ್ಳಿ,ಮೇ.23 : ತಾಲ್ಲೂಕು ಸಮಾಜಕಲ್ಯಾಣ ಇಲಾಖಾ ವ್ಯಾಪ್ತಿಯ ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ 2013-14ನೇ ಸಾಲಿಗೆ ಸೇರ ಬಯಸುವ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಠ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಂದ ಅಜರ್ಿಯನ್ನು ಆಹ್ವಾನಿಸಿದ್ದು ಜೂನ್ 2013ರ 10ನೇ ತಾರೀಖು ಅಜರ್ಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಬೆಳಗುಲಿ, ಬರಕನಹಾಳ್, ಹುಳಿಯಾರು, ದಸೂಡಿ, ಗುರುವಾಪುರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು ಈ ನಿಲಯಗಳಲ್ಲಿ ಅಜರ್ಿ ಸಲ್ಲಿಸಬಹುದು. ಸಂಬಂಧಿಸಿದ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಉಚಿತವಾಗಿ ಪಡೆಯಬಹುದು ಮತ್ತು ಕಛೇರಿ ವೇಳೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಅಜರ್ಿಗಳನ್ನು ಪಡೆಯಬಹುದು.
ಅಜರ್ಿಯೊಂದಿಗೆ ಇತ್ತೀಚಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ ಲಗತ್ತಿಸಿ ಸಲ್ಲಿಸಲು ಕೋರಿದೆ. ಹಾಗೂ ಈ ವಸತಿ ನಿಲಯಗಳಲ್ಲಿ ಉಚಿತವಾಗಿ ಊಟ, ತಿಂಡಿ, ಸಮವಸ್ತ್ರ, ಸ್ಟೇಷನರಿ, ಸಂಕೀರ್ಣ ವಸ್ತುಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Monday, May 20, 2013



ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿ
ಚಿಕ್ಕನಾಯಕನಹಳ್ಳಿ,ಮೇ.20 : ಪ್ರತಿ ಹೋಬಳಿಯಲ್ಲಿ ಎರಡು ಕುಚ್ಚಗ್ರಾಮಗಳನ್ನು ರಚಿಸಿ, ಆ ಗ್ರಾಮಗಳಿಗೆ ನವಣೆ ಮತ್ತು ತೊಗರಿಬೇಳೆ ಬೆಳಸಿ ಕೃಷಿ ಪ್ರಾತ್ಯಕ್ಷಿಕೆ ತರಬೇತಿ ಕ್ಷೇತ್ರೋತ್ಸವ ಪ್ರವಾಸವನ್ನು ವ್ಯವಸ್ಥಿತವಾಗಿ ನಡೆಸುವಂತೆ  ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿಯಲ್ಲಿ ರೈತರಿಗೆ ತಿಳಿಸಲಾಯಿತು.
ಕೃಷಿ ಇಲಾಖೆ ವತಿಯಿಂದ ಸೋಮವಾರದಂದು ನಡೆದ ಆತ್ಮಯೋಜನೆಯ ತಾಂತ್ರಿಕ ಸಭೆ, ತಾಲ್ಲೂಕು ರೈತರ ಸಲಹಾ ಸಮಿತಿಯಲ್ಲಿ ರೈತರು ಕೃಷಿಯಲ್ಲಿ ಬೆಳೆಗಳನ್ನು ಯಾವ ರೀತಿ ಬೆಳೆಯಬೇಕು ಅದಕ್ಕೆ ಅಳವಡಿಸಿಕೊಳ್ಳಬಹುದಾದ ವಿಧಾನದ ಬಗ್ಗೆ ತಿಳಿಸಲಾಯಿತು.
ತಾಂತ್ರಿಕ ಸಭೆಯಲ್ಲಿ ತಾಲ್ಲೂಕಿನ ಕೃಷಿ ಅಭಿವೃದ್ದಿ ಅಧಿಕಾರಿಗಳಾದ ಹೆಚ್.ಎನ್.ಕೃಷ್ಣಪ್ಪ, ಕೆವಿಕೆಯ ಕಾರ್ಯಕ್ರಮ ಸಂಯೋಜಕ ಸುಜಿತ್ ಜಿ.ಎಮ್, ಮತ್ತು ಕೃಷಿ ವಿಸ್ತರಣೆ ವಿಷಯ ತಜ್ಞರಾದ ಎಮ್.ಎಮ್.ಶಂಕರ್ ಭಾಗವಹಿಸಿ ರೈತರ ಸಲಹಾ ಸಮಿತಿಯ ಸದಸ್ಯರುಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಗೋಪಾಲನಹಳ್ಳಿ, ಕುಪ್ಪೂರು ಇತರೆ ಹಳ್ಳಿಗಳ ರೈತ ಸಲಹಾ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಅಧಿಕಾರಿಗಳಾದ ಕಾಂತರಾಜು ಕಾರ್ಯಕ್ರಮ ನಿರೂಪಿಸಿದರು.


ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಳ್ಳಿ
ಚಿಕ್ಕನಾಯಕನಹಳ್ಳಿ,ಮೇ.20 : ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಂಡು ಪರಿಹಾರ ಕಂಡುಕೊಳ್ಳುವುದರಿಂದ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನ ತಪ್ಪಿಸಬಹುದು ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಲಹೆ ನೀಡಿದರು.
   ಪಟ್ಟಣದ ರೋಟರಿ ಭವನದಲ್ಲಿ ತಾಲ್ಲೂಕ್ ಡಾಕ್ಟರ್ಸ್ ಅಸೋಸಿಯೇಷನ್, ರೋಟರಿ ಕ್ಲಬ್ ಮತ್ತು ಸಕರ್ಾರಿ ಸಾರ್ವಜನಿಕ ಆಸ್ಪತ್ರೆ, ವಾಸನ್ ಐ ಕೇರ್ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಸಂಸ್ಥೆ ಈ ರೀತಿಯ ಸಮಾಜ ಸೇವಾ ಕಾರ್ಯಗಳಿಗೆ ಯಾವಾಗಲೂ ಮುಂದಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಕರೆ ನೀಡಿದರು.
  ಶಿಬಿರದಲ್ಲಿ ಕಿವಿ,ಗಂಟಲು,ಮೂಗು ಹಾಗು ನೇತ್ರ ದೋಷ ತಪಾಸಣೆಯನ್ನು ಮಾಡಲಾಯಿತು. ಶಿಬಿರದ ಮೇಲ್ವಿಚಾರಣೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಎನ್.ಎಂ.ಶಿವಕುಮಾರ್, ತಾ.ವೈದ್ಯಾಧಿಕಾರಿ ಡಾ.ಕೆ.ಎಂ.ಶಿವಕುಮಾರ್ ನಡೆಸಿದರೆ ರೊಟೇರಿಯನ್ಗಳಾದ ಸಿ.ಎನ್.ಪ್ರದೀಪ್ ಕುಮಾರ್, ಎಸ್.ಜಿ.ಸುರೇಶ್ ಮತ್ತು ಇಬ್ರಾಹಿಂಸಾಬ್ ಶಿಬಿರಾಧಿಪತ್ಯವನ್ನು ನೋಡಿಕೊಂಡರು. ಡಾಕ್ಟರ್ಸ್ ಅಸೋಷಿಯನ್ನ ಅಧ್ಯಕ್ಷ ಸಿ.ಜಿ.ಜಗದೀಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಮತ್ತು ಕಾರ್ಯದಶರ್ಿ ಡಾ.ಜಿ.ಪ್ರಶಾಂತ್ ಕುಮಾರ್ ಶೆಟ್ಟಿ ಉಸ್ತುವಾರಿ ವಹಿಸಿದ್ದರು. ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನಮ್ಮ ಉಪಸ್ತಿತರಿದ್ದರು. ನೂರಾರು ಜನ ಶಿಬಿರದ ಸದುಪಯೊಗ ಪಡೆದುಕೊಂಡರು.


Saturday, May 18, 2013


ತಾಲೂಕಿನ ಸಕರ್ಾರಿ ಆಸ್ಪತ್ರೆಗಳಲ್ಲಿ ಶೇ.45ರಷ್ಟು ಸಿಬ್ಬಂದಿಗಳ ಕೊರತೆ
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ಆಸ್ಪತ್ರೆಗಳಲ್ಲಿ ಶೇ.45 ಸಿಬ್ಬಂದಿಗಳ ಕೊರತೆ ಇದ್ದು, ಜನಸಂಖ್ಯೆಗೆ ಅನುಗಣವಾಗಿ ಆಸ್ಪತ್ರೆಗಳಲ್ಲಿ ಮೂಲಭೂತ ಅಗತ್ಯಗಳಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ನಡೆದ ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ  ಮೂಲಭೂತ ಸೌಕರ್ಯಗಳಿಲ್ಲದೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ ಎಂದರಲ್ಲದೆ, ಈ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜನರೇ ಇರುವುದಿಲ್ಲವೆಂದ ಅವರು, ಅದೇ ಹಣ ಹಂಚುವ ಕಾರ್ಯಕ್ರಮ ಹಮ್ಮಿಕೊಂಡರೆ ನಾ ಮುಂದು, ತಾ ಮುಂದು ಎಂದು ಒಬ್ಬರ ಮೇಲೊಬ್ಬರು ಬರುತ್ತರೆ, ಶಿಕ್ಷಣ ನೀಡುತ್ತವೆಂದರೆ ಬೆರಳೆಣಿಕೆಯಷ್ಟು ಜನರು ಇರುವುದಿಲ್ಲವೆಂದರು. ಆನರು ಆಸ್ಪತ್ರೆಯಿಂದ ಹೇಗೆ ತಮ್ಮ ಕಾಯಿಲೆ ನಿವಾರಣೆಗೆ ಸ್ಪಂದಿಸಬೇಕೆಂದು ಅಪೇಕ್ಷಿಸುತ್ತಾರೋ ಅದೇರೀತಿ ಇಲಾಖೆಯು ಸಮುದಾಯದಿಂದ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಬೇಕೆಂಬ ಹಂಬಲವನ್ನು ಹೊಂದಿರುತ್ತದೆ ಎಂದರು.
ತಾ.ಪಂ.ಸದಸ್ಯ ರಮೇಶ್ ಕುಮಾರ್ ಮಾತನಾಡಿ,ಇಲ್ಲಿನ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು, ಇಲ್ಲಿನ ನಸರ್್ಗಳು ಹೆರಿಗೆ ಮಾಡಿ ಅವರ ಕಡೆಯಿಂದ ಹಣವನ್ನು ವಸೂಲಿ ಮಾಡಿ ಹಂಚಿಕೊಳ್ಳಲು ಕಿತ್ತಾಟಮಾಡುತ್ತಾರೆ, ಒಂದಿಬ್ಬರು ನಸರ್್ಗಳು ರೋಗಿಗಳ ಜೊತೆ ಅಸಭ್ಯವಾಗಿ ವತರ್ಿಸುತ್ತಾರೆ ಎಂದರಲ್ಲದೆ, ನಾನು ಈ ರೀತಿ ನೇರವಾಗಿ ಮಾತನಾಡುವುದು ಹಾಗೂ ಈ ಸಭೆಗೆ ಬಂದಿರುವುದೇ ಅವರಿಗೆ ಅಪಥ್ಯವಾಗಿದೆ ಎಂದರು.
ಗ್ರಾಮಸ್ವರಾಜ್ಯ ಚಿಂತಕ ರಘು ಗೋಪಾಲನಹಳ್ಳಿ ಮಾತನಾಡಿ, ರಕ್ತದಾನ, ಮರಣದ ನಂತರ ನೇತ್ರದಾನ ಹಾಗೂ ವೈದ್ಯಕೀಯ ಕಾಲೇಜ್ಗಳಿಗೆ ದೇಹದಾನ ಮಾಡುವುದರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಜೊತೆಗೆ ದಾನದ ಮಹತ್ವವನ್ನು ಮುಂದಿನ ಪೀಳಿಗೆಗೆ  ಒಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಗಣೇಶ್, ನೂತನ ವೈದ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಡಾ.ರಾಧಿಕ ಉಪಸ್ಥಿತರಿದ್ದರು.
ಫಾರ್ಮಸಿಸ್ಟ್ ರಘುನಾಥ್ ಸ್ವಾಗತಿಸಿ ನಿರೂಪಿಸಿದರೆ, ಆರೋಗ್ಯ ಸಹಾಯಕ ನರೇಂದ್ರ ವಂದಿಸಿದರು.
13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣವನ್ನು ಕುಡಿಯುವ ನೀರಿಗೆ ಮೀಸಲಿಡಿ
           

ಚಿಕ್ಕನಾಯಕನಹಳ್ಳಿ,ಮೇ.18 : 13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣದಲ್ಲಿ ಶೇ.90ರಷ್ಟು ಕಟ್ಟಡಗಳ ಅಭಿವೃದ್ದಿ ಕಾರ್ಯಗಳಿಗೆ ಕಾಯ್ದಿರಿಸಿ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿದ ತಾ.ಪಂ.ಸದಸ್ಯರು ಕುಡಿಯುವ ನೀರಿನ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ಸಕರ್ಾರ ಕ್ರಮ ಕೈಗೊಳ್ಳುವಂತೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಜಿಲ್ಲೆಯಲ್ಲಿ ಮಳೆ ಇಲ್ಲದೆ ಕುಡಿಯುವ ನೀರಿಗಾಗಿ ಹಳ್ಳಿಗಳಲ್ಲಿ ತೀವ್ರ ನೀರಿನ ಕೊರತೆಯಿಂದ ಜನ ತತ್ತರಿಸುವ ಸಂದರ್ಭದಲಿ ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗೆ ನೀರಿಲ್ಲದೆ ಮರಗಳು ಒಣಗುತ್ತಿವೆ, ತೆಂಗು ಅಡಿಕೆ ಬೆಳೆಗಾರರ ನೆರವಿಗೆ ಬರಬೇಕಾದ ಸಕರ್ಾರ ಕುಡಿಯುವ ನೀರಿಗೆ ಆದ್ಯತೆ ನೀಡದೇ, ಕಟ್ಟಡಗಳಿಗೆ ಆದ್ಯತೆ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ತಾ.ಪಂ.ಸದಸ್ಯರು ಸಕರ್ಾರವನ್ನು ಒತ್ತಾಯಿಸಿದ್ದಾರೆ. ಅದ್ದೂರಿಯಾಗಿ ಆಚರಿಸಬೇಕಾದ ಬಸವಜಯಂತಿ ಕಾರ್ಯಕ್ರಮಕ್ಕೆ ಕೆಲವು ತಾ.ಪಂ.ಸದಸ್ಯರಿಗೆ ತಿಳಿಸದೆ ತಾಲ್ಲೂಕು ಆಡಳಿತ ಅವಮಾನಿಸಿದೆ ಎಂದು ಸದಸ್ಯ ಶಶಿಧರ್ ಆರೋಪಿಸಿದರು.
ಜಿಲ್ಲಾ ಪಂಚಾಯತ್ನಲ್ಲಿ ತಾಲ್ಲೂಕಿನ ಯಾವುದೇ ಅಭಿವೃದ್ದಿಗೆ ಅನುದಾನವನ್ನು ಪಡೆಯಬೇಕಾದರೆ ಪ್ರತಿಯೊಂದು ಹಂತದಲ್ಲೂ ಶೇ.35ರಷ್ಟು ಕಮಿಷನ್ಗೆ ಹಣ ಹೋಗುತ್ತದೆ, ಕಳಪೆ ಕಾಮಗಾರಿ ಮಾಡಿದರೆ ಜನ ನಮ್ಮನ್ನು ದೂರುತ್ತಾರೆ, ಆಕ್ಷನ್ ಪ್ಲಾನ್ ಮಾಡಿ ಅನುಮೋದನೆಗೆ ಕಳಿಸಿದರೆ ಎರಡು ತಿಂಗಳಾದರೂ ಮಂಜೂರಾತಿ ನೀಡುವುದಿಲ್ಲ, ಆಕ್ಷನ್ ಪ್ಲಾನ್ ಬದಲಾಯಿಸಿಲು ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ಮಂಜೂರಾತಿ ನೀಡುತ್ತಾರೆ ಎಂದರಲ್ಲದೆ ಟ್ರಜರಿಯಲ್ಲಿ ಬಿಲ್ ತೆಗೆದುಕೊಳ್ಳಬೇಕಾದರೆ ಶೇ.1ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಆಕ್ಷೇಪಿಸಿ ಟ್ರಜರಿ ಕ್ಲಕರ್್ನ್ನು ಸಭೆಗೆ ಕರೆಸಿ ಛೀಮಾರಿ ಹಾಕಿದ ಪ್ರಸಂಗ ನಡೆಯಿತು.
ತಾಲ್ಲೂಕಿನಲ್ಲಿ ಎನ್.ಬಿ.ಎ ಹಾಗೂ ಎನ್.ಆರ್.ಇ.ಜಿ.ಇ ಯೋಜನೆ ಅಡಿಯಲ್ಲಿ ನಿಮರ್ಿಸಿದ ಶೌಚಾಲಯಕ್ಕೆ ಒಟ್ಟು 1,36,22,400 ರೂ ಬಿಡುಗಡೆಯಾಗಿದ್ದು ಇದರಲ್ಲಿ 67,84,300ರೂ ಖಚರ್ಾಗಿದೆ, ತಾಲ್ಲೂಕಿನಲ್ಲಿ 4800 ಶೌಚಾಲಯ ನಿಮರ್ಿಸಲು ನಿಗದಿಪಡಿಸಲಾಗಿತ್ತು 5039 ಶೌಚಾಲಯಗಳನ್ನು ನಿಮರ್ಿಸಲಾಗಿದೆ, ಜಿಲ್ಲೆಯಲ್ಲಿ ನಾವು ಪ್ರಥಮಸ್ಥಾನದಲ್ಲಿದ್ದೇವೆ ಎಂದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ತಿಳಿಸಿದರು.
ಕನ್ನಡ ಸಂಘದ ವೇದಿಕೆ ಬಳಿ ಕಳೆದ 5ವರ್ಷಗಳ ಹಿಂದೆ 5ಮಳಿಗೆಯನ್ನು  ತಾ.ಪಂ.ವತಿಯಿಂದ ನಿಮರ್ಿಸಿದ್ದು ಅದನ್ನು ಇದುವರೆಗೆ ಬಾಡಿಗೆಗೆ ನೀಡದೇ ಇರುವುದರಿಂದ ಸಕರ್ಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾ.ಪಂ.ಸದಸ್ಯ ಶಶಿಧರ್ ಒತ್ತಾಯಿಸಿದರು.
ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿಗಳನ್ನು ಕೊರೆಸಿ ಎಂದು ಶಶಿಧರ್ ಆಗ್ರಹಿಸಿದರು. ಸಮಾಜ ಕಲ್ಯಾಣಿ ಇಲಾಖೆ ಅಧಿಕಾರಿಗಳು ಯಾವಾಗಲೂ ಕಛೇರಿಯಲ್ಲಿ ಇರುವುದಿಲ್ಲ ಎಂದು ತಾ.ಪಂ.ಸದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ತಿಪಟೂರಿನಿಂದ ಸಮಾಜ ಕಲ್ಯಾಣಾಧಿಕಾರಿಯನ್ನು ನಿಯೋಜಿಸಲಾಗಿದೆ ಆದರೂ ಇದುವರೆಗೂ ಅವರು ರಿಪೋಟ್ ಮಾಡಿಕೊಂಡಿಲ್ಲ ಆದ್ದರಿಂದ ಇವರಿಗೆ ನೋಟಿಸ್ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗೆ ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ. ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ, ಲತಾ, ಸೀತಾರಾಮಯ್ಯ, ನವೀನ್, ರಮೇಶ್ಕುಮಾರ್, ಜಯಣ್ಣ  ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕದಿಂದ ಸಾವನ್ನಪ್ಪಿದ ನಾಗರತ್ನಮ್ಮ ಕುಟುಂಬದವರಿಗೆ ಸಕರ್ಾರದಿಂದ ಪರಿಹಾರ: ಶಾಸಕ ಸಿ.ಬಿ.ಎಸ್.
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ದೊಡ್ಡೇಣ್ಣೆಗೆರೆ ಗ್ರಾಮದಲ್ಲಿ ಇತ್ತೀಚೆಗೆ ಅಗ್ನಿ ದುರಂತ ನಡೆದು ಮೂರು ಮನೆ ಸುಟ್ಟು ಹೋಗಿದ್ದು, ನಾಗರತ್ನಮ್ಮ ಎಂಬುವರು ಅಸುನೀಗಿದ್ದು ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ಸಾಂತ್ವಾನ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದರಲ್ಲದೆ, ಪರಿಹಾರದ ವಿಷಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಕರ್ಾರದಿಂದ ಹೆಚ್ಚಿನ ಪರಿಹಾರವನ್ನು ನೀಡುವಂತೆ ಒತ್ತಾಯಿಸದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಘಟನೆ ನಡೆದ 24 ಗಂಟೆ ಒಳಗೆ ನಾಗರತ್ನಮ್ಮ ಕುಟುಂಬದವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಒಂದುವರೆ ಲಕ್ಷ ರೂಗಳ ಚೆಕ್ನ್ನು ನೀಡುವಂತೆ ತಹಶೀಲ್ದಾರ್ ರವರಿಗೆ ನೀಡಿದ ಆದೇಶದ ಮೇರೆಗೆ ತಹಶೀಲ್ದಾರ್ ಕಾಮಾಕ್ಷಮ್ಮ ಶಾಸಕರ ನೇತೃತ್ವದಲ್ಲಿ ನಾಗರತ್ನಮ್ಮ ಕುಟುಂಬದವರಿಗೆ ಚೆಕ್ ವಿತರಿಸಿದರು.
 ಬೆಂಕಿ ಅವಘಡದಿಂದಾದ ನಷ್ಟ: ಬಸಮ್ಮ ಎಂಬವರ ಮನೆಯಲ್ಲಿದ್ದ ಒಂದು ಜೊತೆ ಬಂಗಾರದ  ಓಲೆ, 50 ಸಾವಿರ ರೂ ಬೆಲೆ ಬಾಳುವ ವಸ್ತುಗಳು ಹಾಗೂ ವರದಯ್ಯನವರ ಮನೆ ಮತ್ತು ಅದರಲ್ಲಿದ್ದ ಒಂದುವರೆ ಲಕ್ಷ ರೂಗಳಷ್ಟು ವಸ್ತುಗಳ ನಾಶವಾಗಿವೆ ಹಾಗೂ ಮಕ್ಕಳ ಎಸ್.ಎಸ್.ಎಲ್.ಸಿ.ಯ ಅಂಕಪಟ್ಟಿ ಸೇರಿದಂತೆ ಶಾಲಾ ದಾಖಲಾತಿಗಳು ನಾಶವಾಗಿವೆ.
ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ದೊಡ್ಡಬಿದರೆ ಪಂಚಾಯಿತಿಯ ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಕರೆಯಲಾಗಿದೆ ಎಂದು ಸಿ.ಡಿ.ಪಿ.ಓ. ಅನೀಸ್ ಖೈಸರ್ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರ ವ್ಯಾಪ್ತಿಯ ಸಾಮಾನ್ಯ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿ ಸಭೆ

ಚಿಕ್ಕನಾಯಕನಹಳ್ಳಿ,ಮೇ.18: ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಶಾಸಕ ಸಿ.ಬಿ.ಸುರೇಶ್ಬಾಬು ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಇದೇ 20ರ ಸೋಮವಾರ ಮಧ್ಯಾಹ್ನ 3ಗಂಟೆಗೆ ತಾಲೂಕು ಕಛೇರಿಯಲ್ಲಿ ಕರೆಯಲಾಗಿದೆ ಎಂದು ಕಾರ್ಯದಶರ್ಿ ಮಂಜುನಾಥರಾಜ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಲೋಕಾಯುಕ್ತ ನಿರೀಕ್ಷಕರ ಜನ ಸಂಪರ್ಕ ಸಭೆ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇದೇ 21ರಂದು ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆಯವರೆಗೆ ತುಮಕೂರು ಲೋಕಾಯುಕ್ತ ಪೋಲಿಸ್ ನಿರೀಕ್ಷಕರು ಜನಸಂಪರ್ಕ ಸಭೆಯನ್ನು ನಡೆಸಲಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಹಶೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.