Friday, December 16, 2011





ಆದರೂ  ರೈತರಿಗೆ ಹಾಲಿನ ದರದಲ್ಲಿ ಕಡಿಮೆ ಮಾಡಿರುವುದಿಲ್ಲ : ಹಳೆಮನೆ ಶಿವನಂಜಪ್ಪ
ಚಿಕ್ಕನಾಯಕನಹಳ್ಳಿ,ಡಿ. 16 : ಜಿಲ್ಲೆಯಿಂದ ತುಮಕೂರು ಹಾಲು ಒಕ್ಕೂಟ ಮಹಮಂಡಳಿಗೆ ದಿನಕ್ಕೆ 4 ಲಕ್ಷ ಲೀಟರ್ನಷ್ಟು ಹಾಲು ಸರಬರಾಜಾದರೂ 2ಲಕ್ಷ ಲೀಟರ್ ಮಾರಾಟವಾಗಿ 2 ಲಕ್ಷ ಲೀಟರ್ಹಾಲು ಉಳಿಯುತ್ತಿದೆ, ಆದರೂ  ರೈತರಿಗೆ ಹಾಲಿನ ದರದಲ್ಲಿ ಕಡಿಮೆ ಮಾಡಿರುವುದಿಲ್ಲ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ನಡೆದ ನಂದಿನಿ ಪ್ರತಿಭಾನ್ವೇಷಣೆ ಸ್ಪಧರ್ೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಜನತೆಗೆ ತಿಳಿಸಲು ಇಂತಹ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ  ಹಮ್ಮಿಕೊಳ್ಳಲಾಗಿದೆ ಎಂದ ಅವರು ನಾನು ಅಧ್ಯಕ್ಷನಾದ ಮೇಲೆ ತಾಲ್ಲೂಕಿನಲ್ಲಿ ನಂದಿನಿ ಹಾಲು ಒಕ್ಕೂಟದಲ್ಲಿ 92 ಸಂಘ ಹಾಗೂ 22 ಉಪಕೇಂದ್ರಗಳನ್ನಾಗಿ ಹೆಚ್ಚಿಸಿದ್ದೇನೆ ಎಂದರು.
ನಂದಿನಿ ಹಾಲು ಒಕ್ಕೂಟವು 67 ತರಹದ ವ್ಯವಸ್ಥೆ ಹೊಂದಿದ್ದು ಐ.ಎಸ್.ಐ ಗುರುತನ್ನು ಪಡೆದಿದೆ. ನಂದಿನಿಯ ಹಾಲು ಶೇ.100ರಷ್ಟು ಶುದ್ದವಾಗಿದೆ, ಹಾಲನ್ನು ರೈತರುಗಳು ಯಾವುದೇ ಖಾಸಗಿಯವರಿಗೆ ನೀಡದೆ ಒಕ್ಕೂಟಕ್ಕೆ ನೀಡಿ ಹೆಚ್ಚಿನ ಲಾಭ ಪಡೆಯಲು ತಿಳಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ನಂದಿನಿ ಹಾಲು, ತುಪ್ಪ, ಪೇಡ ಬಹಳ ಉತ್ಕೃಷ್ಠ ಹಾಗೂ ಶುದ್ದವಾಗಿರುವುದಲ್ಲದೆ ಗುಣಮಟ್ಟದಲ್ಲಿ ನಂ.1ಸ್ಥಾನ ಪಡೆದಿದೆ, ಈ ಹಾಲಿನ ಬಗ್ಗೆ ಹಳ್ಳಿ, ಹಳ್ಳಿಗೂ ಪ್ರಚಾರವಾಗಬೇಕಿದೆ ಎಂದ ಅವರು ರೈತರುಗಳು ಹಸುಗಳನ್ನು ಸಾಕಿ ಹಾಲಿನ ಉತ್ಪಾದನೆಯಿಂದ ಲಾಭ ಪಡೆದುಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ ಉಪಸ್ಥಿತರಿದ್ದರು.


Thursday, December 15, 2011



ತಾಲ್ಲೂಕಿಗೆ ಸಕರ್ಾರಿ ಇಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳನ್ನು ಮಂಜೂರು ಮಾಡಲು ಒತ್ತಾಯಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಡಿ.15 : ತಾಲ್ಲೂಕಿಗೆ ಸಕರ್ಾರಿ ಇಂಜನಿಯರಿಂಗ್ ಹಾಗೂ ಡಿಪ್ಲೊಮೊ ಕಾಲೇಜುಗಳನ್ನು ಸಕರ್ಾರ ಶೀಘ್ರವೇ ಮಂಜೂರು ಮಾಡಬೇಕೆಂದು ಒತ್ತಾಯಿಸಿ  ಅಭಾವಿಪ ರಸ್ತೆ ತಡೆ ನೆಡಸಿ ಪ್ರತಿಭಟಿಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ವಿದ್ಯಾಥರ್ಿಗಳು ಹಾಗೂ ಅಭಾವಿಪ ಕಾರ್ಯಕರ್ತರು ಕಾಲೇಜು ಮಂಜೂರು ಬಗ್ಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲ್ಲೂಕು ಪ್ರಮುಕ್ ಚೇತನ್ಪ್ರಸಾದ್, ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಹಳ್ಳಿ ಎಂದೇ ಬಿಂಬಿಸುತ್ತಾ ಬಂದಿರುವ ಸಕರ್ಾರ ಹಾಗೂ ಜನಪ್ರತಿನಿಧಿಗಳು ತಾಲ್ಲೂಕಿನ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿದ್ದಾರೆ, ಇಲ್ಲಿನ ಸಾವಿರಾರು ವಿದ್ಯಾಥರ್ಿಗಳು ದೂರದ ಊರುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಸಕರ್ಾರ ತಾಲ್ಲೂಕಿಗೆ ಇಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಇಲ್ಲವಾದರೆ ಈ ಹೋರಾಟವನ್ನು ಅಭಾವಿಪ ಕೈಗೆತ್ತುಕೊಂಡು ಹಂತ ಹಂತವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಭಾವಿಪ ಸಹ ಕಾರ್ಯದಶರ್ಿ ದಿಲೀಪ್ ಮಾತನಾಡಿ ತಾಲ್ಲೂಕು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದೆಯಾದ್ದರಿಂದ ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ತೋರಿಸಿ ತಾಲ್ಲೂಕಿಗೆ ತಾಂತ್ರಿಕ ಕಾಲೇಜನ್ನು ತರಲು ಮುಂದಾಗಬೇಕೆಂದು ಒತ್ತಾಯಿಸಿದರು.
  ಪ್ರತಿಭಟನೆಯಲ್ಲಿ ಅಭಾವಿಪ ಕಾರ್ಯಕರ್ತರಾದ ರವಿ, ಗುರು, ನಂದ, ಜಯರಾಜ್, ದರ್ಶನ್, ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.

Tuesday, December 13, 2011




ಮತ್ತೆ ಈ ರಾಜ್ಯದ ಜನತೆಯ ಸೇವೆ ಮಾಡುವ ವಿಶ್ವಾಸಿವಿದೆ: ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಡಿ.11 : ರಾಜ್ಯದ ಜನತೆಯ ಆಶೀವರ್ಾದ, ಜಗದ್ಗುರು ಕೃಪಾಶರ್ಿವಾದ ಇದ್ದರೆ ಮತ್ತೆ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಧರ್ಮಜಾಗೃತಿ ಧಾಮರ್ಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುವುದನ್ನು ಸಹಿಸದ ಅನೇಕ ರಾಜಕಾರಣಿಗಳು ಷಡ್ಯಂತ್ರಮಾಡಿ ನನ್ನನ್ನು ಕಾರಾಗೃಹಕ್ಕೆ ದೂಡಿದರು, ನಾನು ಯಾವುದೇ ಸಂದರ್ಭದಲ್ಲೂ ಬೆನ್ನು ತೋರಿಸಿ ಬೆಳದವನಲ್ಲ , ಪ್ರತಿಯೊಂದು ಸಂದರ್ಭದಲ್ಲೂ ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ಜಾರಿಗೆ ತಂದವನು ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಕಾರಾಗೃಹದಲ್ಲಿದ್ದಾಗ ಅಲ್ಲಿ ಸುಮಾರು ಒಂದು ಸಾವಿರ ಕಾರಾಗೃಹ ವಾಸಿಗಳು ನನ್ನನ್ನು ಸನ್ಮಾನಿಸಿದರು, ಆ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ನನ್ನ ಮನ ಕಲಕಿದವು.
ನನ್ನ ಮೂರುವರೆ ವರ್ಷದ ಮುಖ್ಯಮಂತ್ರಿ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ, ಭಾಗ್ಯಲಕ್ಷ್ಮೀ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದೇನೆ,  ಸಾಮಾಜಿಕ ನ್ಯಾಯದಡಿಯಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗಳಿಸಿದ್ದೇನೆ ಎಂದ ಅವರು ನಾನು ಕಾರಾಗೃಹಕ್ಕೆ ಹೋದ ಸಂದರ್ಭದಲ್ಲಿ ನನ್ನ 40 ವರ್ಷಗಳ ಜೀವನದ ಬಗ್ಗೆ 24 ದಿನಗಳ ಕಾಲ ಡೈರಿಯನ್ನು ಬರೆದಿದ್ದೇನೆ ಎಂದರು.
ನಾನು ಅಟಲ್ ಬಿಹಾರಿ ವಾಜ್ಪೇಯಿಯವರ ಗರಡಿಯಲ್ಲಿ ಬೆಳದವನು ನಾನು ಮಾಡಿದ ರಾಜ್ಯದ ಯೋಜೆನೆಗಳ ಯಶಸ್ವಿಯನ್ನು ಬೇರೆಯವರು ಸಾಧಿಸದಿದ್ದರಿಂದ ನನಗೆ ಹಲವಾರು ತೊಂದರೆಗಳು ಎದುರಾಯಿತು. ನಾನು ಇಷ್ಟು ಎತ್ತರಕ್ಕೆ ಬೆಳದದ್ದೇ ನನಗೆ ಮುಳುವಾಯಿತು ಎಂದರು ಸಮಾರಂಭದಲ್ಲಿ  ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರಸ್ವಾಮಿ, ಚನ್ನಸಿದ್ದರಾಮ ಪಂಡಿತಾರಾಧ್ಯ ರಾಜದೇಶಿಕೇಂದ್ರಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ತಿಪಟೂರು ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ತೋಂಟದಾರ್ಯಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಸಚಿವ ವಿ.ಸೋಮಣ್ಣ, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ ಮುಂತಾದವರಿದ್ದರು.
ದರೋಡೆಕೋರರ ಉಪಟಳದಿಂದ ಇಲ್ಲಿನ ಎಸ್.ಬಿ.ಎಂ.ನ ಎ.ಟಿ.ಎಂ.ಬಂದ್
ಚಿಕ್ಕನಾಯಕನಹಳ್ಳಿ,ಡಿ.12: ದರೋಡಿಕೋರರ ಉಪಟಳದಿಂದ ಇಲ್ಲಿನ ಎಸ್.ಬಿ.ಎಂ.ನ ಎ.ಟಿ.ಎಂ. ಬಂದ್ ಆಗಿದೆ.
ಪಟ್ಟಣದ ಶೆಟ್ಟೀಕೆರೆ ಗೇಟ್ ಬಳಿ ಇರುವ ಎ.ಟಿ.ಎಂ. ಕೇಂದಕ್ಕೆ ಹೊಸದುರ್ಗ ಕಡೆಯಿಂದ ಬಂದ ಏಳ ಜನರಿರುವ ದರೋಡಿಕೋರರ ಗುಂಪೊಂದು ಇಲ್ಲಿನ ಎ.ಟಿ.ಎಂ.ಗೆ ಸೋಮವಾರ ಬೆಳಗಿನ ಜಾವದ ಸುಮಾರಿಗೆ ನುಗ್ಗಿ ಮಧು ಎಂಬುವರ ಎ.ಟಿ.ಎಂ.ಕಾಡರ್್ನಿಂದ 20 ಸಾವಿರಕ್ಕೂ ಹೆಚ್ಚಿನ ಹಣವನ್ನು ದೋಚಿಕೊಂಡು ಹೋಗಿದೆ.
  ಹೊಸದುರ್ಗ ತಾಲೂಕಿನ ಹೊನ್ನೆಕೆರೆಯ ಮಧು ಭಾನುವಾರ(11) ರಾತ್ರಿ 12ರ ಸುಮಾರಿಗೆ ಹೊಸದುರ್ಗ ಪಟ್ಟಣದಲ್ಲಿ  ಸಿನಿಮಾ ಮಂದಿರದಲ್ಲಿ ರಾತ್ರಿ ಎರಡನೇ ಪ್ರದರ್ಶನ ನೋಡಿಕೊಂಡು ತನ್ನ ಊರು ಹೊನ್ನೆಕೆರೆಗೆ ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮಾರುತಿ ವ್ಯಾನೊಂದು ಮಧು ಬೈಕ್ನಿಲ್ಲಿಸಿ ಪಾವಗಡಕ್ಕೆ ಹೋಗುವ ದಾರಿ ಕೇಳಿದ್ದಾರೆ ಈ ಸಂದರ್ಭದಲ್ಲಿ ದಾರಿ ತೋರಿಸಲು ಬೈಕ್ನಿಲ್ಲಿಸಿದ ಮಧು ಮತ್ತು ಆತನ ಸ್ನೇಹಿತರಿಗೆ ಮಾರುತಿ ವ್ಯಾನನಲ್ಲಿದ್ದ ದರೋಡೆಕೋರರ ಗುಂಪು ಲಾಂಗ್, ಮಚ್ ತೋರಿಸಿ ಬೆದರಿಸಿ ಅವರ ಬಳಿ ಇರುವ ಚಿನ್ನದ ಆಭರಣಗಳನ್ನು ಕಿತ್ತುಕೊಂಡಿದೆ.
 ಈ ಸಂದರ್ಭದಲ್ಲಿ ಮಧು ಜೊತೆಇದ್ದ ಸ್ನೇಹಿತರು ದರೋಡೆಕೋರರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ, ಇದರಿಂದ ಮತ್ತೂ ರೊಚ್ಚಿಗೆದ್ದ ತಂಡ ಮಧುವನ್ನು ತನ್ನ ವ್ಯಾನಿಗೆ ಎತ್ತಾಕಿಕೊಂಡು ಅವನಿಗೆ ಹಣಕ್ಕಾಗಿ ಹಿಂಸೆ ನೀಡಿದೆ,  ಆ ಸಂದರ್ಭದಲ್ಲಿ ಮಧು ತನ್ನ ಬಳಿಇದ್ದ ಎ.ಟಿ.ಎಂ.ಕಾಡರ್್ಕೊಟ್ಟಿದ್ದಾನೆ, ಈ ಕಾಡರ್್ ತೆಗೆದುಕೊಂಡ ದರೋಡೆಕೋರರು ಚಿಕ್ಕನಾನಯಕನಹಳ್ಳಿಯ ಎ.ಟಿ.ಎಂ.ಕೇಂದ್ರಕ್ಕೆ ಬಂದು ಆತನ ಖಾತೆಯಿಂದ ಮೂರು ಬಾರಿ ಹಣ ತೆಗೆದುಕೊಂಡಿದ್ದಾರೆ. ನಂತರ ಮಧುವನ್ನು ಪಟ್ಟಣದ ಬಳಿಯ ತರಬೇನಹಳ್ಳಿಯ ಬಳಿ ಇಳಿಸಿ ದರೋಡೆಕೋರರು ಮುಂದೆ ಸಂಚರಿಸಿದ್ದಾರೆ.




ದರೋಡೆಗೊಳಗಾದ ಮಧು ತರಬೇನಹಳ್ಳಿಯಿಂದ ಆ ಸರಿ ರಾತ್ರಿಯಲ್ಲಿ ಬಸ್ ಹಿಡಿದು  ಮತ್ತೆ ಹೊಸದುರ್ಗಕ್ಕೆ ತೆರಳಿ ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಪಿ.ರವಿಪ್ರಸಾದ್ ಬಳಿ ನಡೆದ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೊಸದುರ್ಗದ ಸಿ.ಪಿ.ಐ. ರವಿಪ್ರಸಾದ್ ಚಿ.ನಾ.ಹಳ್ಳಿಯ ಎಸ್.ಬಿ.ಎಂ.ಗೆ ಬಂದು ಎ.ಟಿ.ಎಂ.ನ ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿರುವ ದರೋಡೆಕೋರರ ಛಾಯಾ ಚಿತ್ರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಾಗಿ ಇಲ್ಲಿನ ಎ.ಟಿ.ಎಂ.ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಬ್ಯಾಂಕ್ನ ಉನ್ನತಾಧಿಕಾರಗಳ ಬರುವಿಕೆಗಾಗಿ ಇಲ್ಲಿನ ಬ್ಯಾಂಕ್ನ ಅಧಿಕಾರಿಗಳು ಕಾಯುತ್ತಿದ್ದಾರೆ. ಮಧುವನ್ನು ಕರೆತಂದಿರುವ ಸಿ.ಪಿ.ಐ.ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಠಗಳು ಸಮಾಜದಲ್ಲಿ   ಸಾಮರಸ್ಯ ಮತ್ತು ಸಾತ್ವಿಕತೆಯನ್ನು ನಿಮರ್ಾಣ ಮಾಡಬೇಕು.
ಚಿಕ್ಕನಾಯಕನಹಳ್ಳಿ,ಡಿ.12 : ಪಂಚಪೀಠಗಳು ಸಮಾಜದ ಸಾಮರಸ್ಯಕ್ಕೆ ಸ್ಪೂತರ್ಿ ಹಾಗೂ ಸಾತ್ವಿಕ ಸಮಾಜದ ನಿಮರ್ಾಣ ಮಾಡುತ್ತಾ ಧರ್ಮದ ಉಳಿಸುವಿಕೆಯ ಕಾರ್ಯ ನಿರ್ವಹಿಸುತ್ತಿವೆ ಎಂದು ರಂಭಾಪುರಿ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮಿ ಹೇಳಿದರು. 
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಧಾಮರ್ಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮರಂಗವನ್ನು ಬಿಟ್ಟು ಉಳಿದೆಲ್ಲ ರಂಗಗಳು ಕಲುಷಿತಗೊಂಡಿದೆ, ಸಜ್ಜನರಿಗಿಂತ ದುರ್ಜನರು ಹೆಚ್ಚಾಗುತ್ತಿದ್ದಾರೆ. ಇವುಗಳನ್ನು ಸರಿಪಡಿಸುವ ಜವಬ್ದಾರಿ  ಮಠಾಧೀಶರ ಹಾಗೂ ಸಮಾಜದ ಚಿಂತಕರ ಮೇಲಿದೆ. ಪ್ರತಿಯೊಬ್ಬರಲ್ಲೂ ಧರ್ಮದ ವಿಚಾರದಲ್ಲಿ ಸ್ವಾಭಿಮಾನ ಹುಟ್ಟಬೇಕು ಎಂದ ಅವರು, ಧರ್ಮ ಮತ್ತು ಜಾತಿಯ ಸಂಘರ್ಷಗಳು ನಡೆಯುತ್ತಿದೆ, ರಾಷ್ಟ್ರ ಪ್ರೇಮ, ಕರ್ತವ್ಯ ನಿಷ್ಠೆ ಎಲ್ಲರಲ್ಲೂ ಬೆಳೆಯಲಿ ಎಂದರು.
 ಮರುಳಸಿದ್ದೇಶ್ವರ ಕ್ಷೇತ್ರವು ಸಮಾಜಕ್ಕೆ ಒಳ್ಳೆಯ ಧಾಮರ್ಿಕ ಕೊಡುಗೆ ನೀಡುತ್ತಿದೆ ಎಂದರು. ಕಳೆದ ಅಕ್ಟೋಬರ್ ತಿಂಗಳಿಲ್ಲಿ ಉಜೈನಿ ಹಾಗೂ ಶ್ರೀ ಶೈಲ ಪೀಠಗಳ ಜಗದ್ಗುರುಗಳ ನಿಧನದಿಂದ ತುಂಬ ನೋವಾಗಿದೆ ಎಂದು ತಿಳಿಸಿದರು.
ಉಜೈನಿ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರಸ್ವಾಮಿ ಮಾತನಾಡಿ, ಭಾರತ ದೇಶದ ಪರಂಪರೆ ಭಕ್ತಿ ಶ್ರದ್ದೆಗಳನ್ನು ಮಠಗಳಲ್ಲಿ ಕಾಣಬಹುದು, ಒಳ್ಳೆಯ ತನವನ್ನು ಬೆಳೆಸುವುದರ ಜೊತೆಗೆ ಧರ್ಮ, ಬ್ರಾತೃತ್ವ ಮತ್ತು  ಸ್ನೇಹತ್ವಗಳನ್ನು  ಆಚರಣೆಗೆ ತರುವುದು ಎಂದರು.
ಶ್ರೀ ಶೈಲ ಶ್ರೀ ಚನ್ನಸಿದ್ದರಾಮ ಪಂಡಿತರಾದ್ಯ ರಾಜದೇಶೀಕೇಂದ್ರ ಸ್ವಾಮಿ ಮಾತನಾಡಿ ಧರ್ಮ ಮನುಷ್ಯನಿಗೆ ಉತ್ತಮ ವಿಚಾರಗಳನ್ನು ತಿಳಿಸುತ್ತವೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ, ತಿಪಟೂರು ಷಡಕ್ಷರಮಠದ ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಶಾಸಕ ಸಿ.ಬಿ.ಸುರೇಶ್ಬಾಬು  ಮುಂತಾದವರಿದ್ದರು
ಸಮಾರಂಭದಲ್ಲಿ ದಯಾನಂದಶಾಸ್ತ್ರಿ ಪ್ರಾಥರ್ಿಸಿದರೆ, ಸವಿತ ಶಿವಕುಮಾರ್ ನಿರೂಪಸಿದರು, ದಯಾಶಂಕರ್ ವಂದಿಸಿದರು.

Friday, December 9, 2011

Thursday, December 8, 2011



ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಕುಪ್ಪೂರು ಶ್ರೀರಕ್ಷೆಯಡಿಯಲ್ಲಿ ಆಶೀವರ್ಾದ
ಚಿಕ್ಕನಾಯಕನಹಳ್ಳಿ,ಡಿ.08: ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದಲ್ಲಿ ಕುಪ್ಪೂರು ಮರುಳಸಿದ್ದಶ್ರೀ ಪ್ರಶಸ್ತಿ ಹಾಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಕುಪ್ಪೂರು ಶ್ರೀರಕ್ಷೆಯಡಿಯಲ್ಲಿ ಆಶೀವರ್ಾದಿಸಲಾಗುವುದು  ಎಂದು ಕುಪ್ಪೂರುಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ತಿಳಿಸಿದರು.
ಡಿಸಂಬರ್ 10 ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಮತ್ತು 11ರಂದು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವವನ್ನು ಹಮ್ಮಿಕೊಳ್ಳಲಾಗುವುದು,  ಜಾತ್ರೆಯಲ್ಲಿ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿಗಳ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಬೃಹತ್ ಬ್ರಹ್ಮಾಂಡ ಖ್ಯಾತಿಯ ವೇದಬ್ರಹ್ಮ ನರೇಂದ್ರಬಾಬುಶರ್ಮ ಗುರೂಜಿರವರಿಗೆ ವಿಶೇಷ ಸನ್ಮಾನಿಸಲಾಗುವುದು.
11ರ ಭಾನುವಾರದಂದು ಬೆಳಗ್ಗೆ 10.30ಕ್ಕೆ ಉಜೈನಿಯ ಶ್ರೀಮದ್ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವ ನಡೆಯುತ್ತದೆ ನಂತರ ಧರ್ಮಜಾಗೃತಿ ಧಾಮರ್ಿಕ ಸಮಾರಂಭ ನಡೆಯಲಿದೆ.
ಈ ಜಾತ್ರಾಮಹೋತ್ಸವವನ್ನು ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಕ್ಷೇತ್ರವು  ದಾಸೋಹದ ಮಠ ಎಂದು ಪ್ರಖ್ಯಾತ ಹೊಂದಿದ್ದು ಜಾತ್ರಾಮಹೊತ್ಸವಕ್ಕೆ  ಸುಮಾರು 35 ರಿಂದ 40ಸಾವಿರ ಭಕ್ತರು ಆಗಮಿಸಲಿದ್ದು ಅವರಿಗೆಲ್ಲ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ.
ನಂದೀಶ್ವರರ ಉತ್ಸವ ಹಾಗೂ ಮರುಳಸಿದ್ದೇಶ್ವರ ಅಡ್ಡಪಲ್ಲಕ್ಕಿಯೊಂದಿಗೆ ಬಸವೇಶ್ವರರು ಅನ್ನದ ರಾಶಿಗೆ ಪಾದವನ್ನು ಸ್ಪರ್ಶ ಮಾಡುವಂತಹ ಕಾರ್ಯಕ್ರಮ ಇದೇ 10ರ ಶನಿವಾರ ನಡೆಯಲಿದೆ. 11ರ ಭಾನುವಾರದಂದು ಶ್ರೀ ಮಠದ ಭಕ್ತರು ಉಳಿದುಕೊಳ್ಳುವ ಸಲುವಾಗಿ  ಯಾತ್ರಿ ನಿವಾಸದ ಅಡಿಗಲ್ಲು ಸ್ಥಾಪನೆಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ. 
ಈ ಸಮಾರಂಭದಲ್ಲಿ ಶ್ರೀಮದ್ ಉಜ್ಜೈನಿ ಸದ್ದರ್ಮ ಸಿಂಹಾಸನಾಧೀಶ್ವರ  ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ, ಶ್ರೀ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ,  ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ರಾಜದೇಶೀಕೇಂದ್ರರವರು ದಿವ್ಯ ಸಾನಿದ್ಯ ವಹಿಸಲಿದ್ದು ಷಡಕ್ಷರಮಠದ ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಮಾಡಾಳು ಕುಮಾರಾಶ್ರಮ ಮಠದ ತೋಂಟದಾರ್ಯ ಸ್ವಾಮಿ, ಖ್ಯಾತ ಸಾಹಿತಿ ಷಣ್ಮುಖಯ್ಯ ಅಕ್ಕೂರ್ ಮಠ್ರವರಿಗೆ 'ಕುಪ್ಪೂರು ಮರುಳಸಿದ್ದಶ್ರೀ' ಪ್ರಶಸ್ತಿ, ತಮ್ಮಡಿಹಳ್ಳಿ ಮಠದ  ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ನೇತೃತ್ವ ವಹಿಸುವರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾತ್ರಿ ನಿವಾಸ ಶಂಕು ಸ್ಥಾಪನೆ ನೆರವೇರಿಸಲಿದ್ದು ಸಂಸದ ಜಿ.ಎಸ್.ಬಸವರಾಜು  ಉದ್ಘಾಟನೆ ನೆರವೇರಿಸಲಿದ್ದು ವಿಭೂತಿಪುರ ಮಠ ಡಾ.ಮಹಾಂತಲಿಂಗ ಶಿವಾಚಾರ್ಯಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.

Wednesday, December 7, 2011


ಹನುಮಜಯಂತಿ ಪ್ರಯುಕ್ತ ವಿಶೇಷ ಅಲಂಕಾರ 
ಚಿಕ್ಕನಾಯಕನಹಳ್ಳಿ,ಡಿ.07  : ಹನುಮಜಯಂತಿ ಪ್ರಯುಕ್ತ  ಪಟ್ಟಣದ ಶ್ರೀ ಬಲಮುರಿ ಗಣಪತಿ, ಶ್ರೀ ಯೋಗಾಂಜನೇಯಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರವನ್ನು ಇದೇ 8ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8ಕ್ಕೆ ಸ್ವಾಮಿಯವರಿಗೆ ಅಭಿಷೇಕ, ಹಾಗೂ ಮದ್ಯಾಹ್ನ 12ಕ್ಕೆ ಸ್ವಾಮಿಯವರಿಗೆ ಬೆಳ್ಳಿ ಕಿರೀಟ ಧಾರಣೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯೋಗಾಂಜನೇಯ ಸಮಿತಿ ತಿಳಿಸಿದೆ.
ಶ್ಯಾವಿಗೆಹಳ್ಳಿಯಲ್ಲಿ ಹನುಮಜಯಂತಿ :  ಕಸಾಬಾ ಹೋಬಳಿ ಶ್ಯಾವಿಗೆಹಳ್ಳಿಯಲ್ಲೂ ಸಹ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿ.ಜಿ.ತಿಮ್ಮಯ್ಯ ತಿಳಿಸಿದ್ದಾರೆ.


Tuesday, December 6, 2011

Monday, December 5, 2011


ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು
ಚಿಕ್ಕನಾಯಕನಹಳ್ಳಿ,ಡಿ.05 : 2011-12ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಇದೇ 8ರ ಗುರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಜಿ.ಪಂ.ಸದಸ್ಯರಾದ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾಬಾಯಿರಂಗಸ್ವಾಮಿ, ನಿಂಗಮ್ಮರಾಮಯ್ಯ, ಹೆಚ್.ಬಿ.ಪಂಚಾಕ್ಷರಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತೀಮ ಆಗಮಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

ಪದವಿ ಪೂರ್ವ ಕಾಲೇಜುಗಳಲ್ಲಿ ಅನಿಧರ್ಿಷ್ಟಕಾಲ ತರಗತಿ ಬಹಿಷ್ಕಾರ ಚಳುವಳಿಗೆ ತಾಲ್ಲೂಕು ಉಪನ್ಯಾಸಕರ ಸಂಘ ಬೆಂಬಲ



ಚಿಕ್ಕನಾಯಕನಹಳ್ಳಿ,ಡಿ.05 : ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಇದೇ 8ರಿಂದ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಅನಿಧರ್ಿಷ್ಟಕಾಲ ತರಗತಿ ಬಹಿಷ್ಕಾರ ಚಳುವಳಿಗೆ ತಾಲ್ಲೂಕು ಉಪನ್ಯಾಸಕರ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಎಸ್.ಲೋಕೇಶ್ ತಿಳಿಸಿದ್ದಾರೆ.

ಮಡಿವಾಳ ಸಮಾಜದವರು ಜಾತಿಕಾಲಂನಲ್ಲಿ ಮಡಿವಾಳ ಎಂದು ನಮೂದಿಸುವಂತೆ
ಚಿಕ್ಕನಾಯಕನಹಳ್ಳಿ,ಡಿ.05 : ಮಡಿವಾಳ ಜನಾಂಗದವರು ತಮ್ಮ ಉಪಜಾತಿಗಳನ್ನು ನಮೂದಿಸದೆ ಎಲ್ಲರೂ ಜಾತಿಕಾಲಂನಲ್ಲಿ ಮಡಿವಾಳ ಎಂದು ನಮೂದಿಸುವಂತೆ ಮಡಿವಾಳ ಸಮಾಜದ ಮುಖಂಡ ಸಿ.ಎಸ್.ನಟರಾಜ್ ತಿಳಿಸಿದ್ದಾರೆ.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರ ಸೂಚನೆಯಂತೆ ಸಮಾಜದ ಎಲ್ಲಾ ಭಾಂದವರು ಜಾತಿಗಣತಿಯ ಸಂದರ್ಭದಲ್ಲಿ ಸ್ಪಷ್ಟವಾಗಿ ಮಡಿವಾಳ ಎಂದೇ ನಮೂದಿಸುವಂತೆ ಕೋರಲಾಗಿದೆ.

Sunday, December 4, 2011


ಅಂಗವಿಕಲರು ಮುಂದೆ ಬರಲು ರಾಜಕೀಯ ಕ್ಷೇತ್ರ ಮುಖ್ಯ
ಚಿಕ್ಕನಾಯಕನಹಳ್ಳಿ,ನ.03 : ರಾಜಕೀಯ ಕ್ಷೇತ್ರದಲ್ಲಿ  ಅಂಗವಿಕಲರಿಗೆ ಸ್ಥಾನ ನೀಡಿದರೆ  ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಬಂದು ಅಂಗವಿಕಲರು ಅಭಿವೃದ್ದಿ ಹೊಂದುತ್ತಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಸಿ.ಗಂಗರಾಜು ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ವಿಶ್ವ ವಿಕಲ ಚೇತನರ(ಅಂಗವಿಕಲರ) ದಿನಾಚಾರಣೆ ಹಾಗೂ ತಾಲ್ಲೂಕು ವಿಕಲಚೇತನರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಕಲಚೇತನರ ಜೀವನ ಬಹಳ ದುಸ್ಥಿತಿಯಲ್ಲಿದೆ, ಅಂಗವಿಕಲತೆ ಎನ್ನುವುದು ಶಾಪವಲ್ಲ, ಅದೊಂದು ವರ ವಿಕಲಾಂಗರಿಗೆ ಯಾವುದೇ ಅನುಕಂಪ ಬೇಡ ಅವರಿಗೆ ಅವಕಾಶ ಬೇಕಾಗಿದೆ  ಮುಖ್ಯವಾಗಿ ಎಂದ ಅವರು ಅವರಿಗೆ ನೀಡುತ್ತಿರುವ ಮಾಸಾಶನವನ್ನು ಸಾವಿರ ರೂಗಳಿಗೆ ಹೆಚ್ಚಿಸಬೇಕು ಮತ್ತು ಅವರಿಗಾಗಿ ಜನಸ್ಪಂದನ ಸಭೆಗಳನ್ನು ಮಾಡಬೇಕು ಎಂದ ಅವರು ದಲಿತ ಸಮುದಾಯಗಳ ಸಮಸ್ಯೆಗಳಿಗಿಂತ  ಅಂಗವಿಕಲರ ಸಮಸ್ಯೆಗಳು ವಿಭಿನ್ನವಾಗಿದೆ, ದಲಿತರು ಅನುಭವಿಸಿರುವಂತಹ ಸಾಮಾಜಿಕ ನೋವುಗಳಿಗಿಂತ ಅಂಗವಿಕಲರ ಆಥರ್ಿಕ ಹಿಂಸೆ ದೊಡ್ಡದಾಗಿದೆ ಇದು ಬದಲಾಗಬೇಕಾದರೆ ಅಂಗವಿಕಲರ ಸಂಘಟನೆ ಬಲವಾಗಬೇಕಿದೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ತಾನು ಯಾವುದೇ ಸಂದರ್ಭದಲ್ಲಿದ್ದರೂ ಅಂಗವಿಕಲರಿಗೆ ಮೊದಲ ಆಧ್ಯತೆ ನಂತರ ವೃದ್ದರಿಗೆ, ಆನಂತರ ಇತರರಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು ಅಂಗವಿಕಲ ವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸಕ್ಕೆ ಪಂಚಾಯ್ತಿಗಳಿಂದ ಸಹಾಯ ನೀಡಲಿದ್ದು ಅಂಗವಿಕಲರ ಜೀವನ ನಿರ್ವಹಣೆಗಾಗಿ  ವಿಶೇಷ ಮಾನ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ಅಂಗವಿಕಲ ಹೋರಾಟ ಸಮಿತಿಯ ಬೆನಕನಕಟ್ಟೆ ರಮೇಶ್ ಮಾತನಾಡಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿಗಳಲ್ಲಿ ಅಂಗವಿಕಲರನ್ನು ಸದಸ್ಯರಾಗಿ ನೇಮಿಸಬೇಕು, ಅಂಗವಿಕಲರಿಗೆ ದೃಡೀಕರಣ ಪತ್ರ ಕಡ್ಡಾಯವಾಗಿ ತೆಗೆದುಹಾಕಬೇಕು,  ತಾಲ್ಲೂಕಿನಲ್ಲಿ ಅಂಗವಿಕಲರ ಭವನ ನಿಮರ್ಾಣ ಮಾಡಬೇಕು, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಇಲಾಖೆಗಳ ಕಂಪ್ಯೂಟರ್ ಕೇಂದ್ರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೊದಲ ಆಧ್ಯತೆ ನೀಡಬೇಕು, ಅಂಗವಿಕಲರ ಅನುದಾನ ಶೇಕಡ 3ರಷ್ಟು ಸಮರ್ಪಕವಾಗಿ ಖಚರ್ು ಮಾಡಬೇಕು, ಅಂಗವಿಕಲರಿಗೆ ನಿರುದ್ಯೋಗ ಭತ್ಯೆ ನೀಡಬೇಕು,  ಎನ್ನುವ ಇನ್ನಿತರ ಅಂಗವಿಕಲರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವಿಕಲಚೇತನ ಚಂದ್ರಯ್ಯ ಮಾತನಾಡಿ ವಿಕಲಚೇತನರು ಸಕರ್ಾರದ ಹಣ ಬರುವುದನ್ನೇ ಕಾಯಬಾರದು ನಮ್ಮ  ಜೀವನವನ್ನು ಸುಧಾರಿಸುವಂತಹ ಕಾರ್ಯದಿಂದ ಜೀವನ ಸಾಗಿಸಬೇಕು ಹಾಗೂ ಇರುವವರು ಇಲ್ಲದವರಿಗೆ ಆಥರ್ಿಕವಾಗಿ ಸಹಕರಿಸಬೇಕು ಎಂದ ಅವರು ಅಂಗವಿಕಲರ ಕಲ್ಯಾಣ ನಿಧಿ ಸ್ಥಾಪನೆ ಮಾಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿರಂಗಸ್ವಾಮಿ, ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿಪಾತೀಮ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್ ಇ.ಓ ಎನ್.ಎಂ.ದಯಾನಂದ್, ಸಿಡಿಪಿಓ ಅನೀಸ್ಖೈಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Thursday, December 1, 2011


: ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಡಿ.01 : ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಹಾಗೂ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿಗಳ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಕಾಯಕಯೋಗಿಗಳಿಗೆ ಕುಪ್ಪೂರು ಶ್ರೀರಕ್ಷೆ ಸುಕ್ಷೇತ್ರ ಕಾರ್ಯಕ್ರಮವನ್ನು ಇದೇ 10ರ ಶನಿವಾರ ಮತ್ತು 11ರ ಭಾನುವಾರ ನಡೆಯಲಿದೆ.
ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಕಾರ್ಯಕ್ರಮವಿದ್ದು 10ರ ಸಂಜೆ 4.30ಕ್ಕೆ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಹಮ್ಮಿಕೊಂಡಿದ್ದು ಸಿದ್ದಸಂಸ್ಥಾನ ಮಠದ ಜಗದ್ಗುರು ಶಿವಲಿಂಗಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯಸ್ವಾಮಿ, ದೊಡ್ಡಗುಣಿಮಠದ ರೇವಣಸಿದ್ದೇಶ್ವರಶಿವಾಚಾರ್ಯಸ್ವಾಮಿ, ಶಿವಗಂಗೆ ಕ್ಷೇತ್ರದ ಮಲಯಶಾಂತಮುನಿ ಶಿವಾಚಾರ್ಯಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಆಯುರಾಶ್ರಮದ ಡಾ.ಸಂತೋಷ ಗುರೂಜಿ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಮಾಜಿ ಶಾಸಕರಾದ ಎಸ್.ಪಿ.ಗಂಗಾಧರಪ್ಪ, ಜೆ.ಸಿ.ಮಾಧುಸ್ವಾಮಿ, ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಲೋಕೇಶ್, ಪ್ರಭಾಕರ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕಾಯಕಯೋಗಿಗಳಾದ  ಅರಳೆ ಗುರುಸಿದ್ದಪ್ಪ, ಬಿ.ಎಸ್.ನಾಗರಾಜು, ವೈ.ಜಗದೀಶ್ದರೇದಾರ, ಎಸ್.ಜಿ.ಜಗದೀಶ್, ಬಿ.ನಿರಂಜನ್ ಇವರಿಗೆ ಕುಪ್ಪೂರು ಶ್ರೀರಕ್ಷೆ ನೀಡಲಾಗುವುದು.
11ರಂದು ಬೆಳಗ್ಗೆ 10.30ಕ್ಕೆ ಧರ್ಮಜಾಗೃತಿ ಧಾಮರ್ಿಕ ಸಮಾರಂಭ ನಡೆಯಲಿದ್ದು ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ  ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಸಮ್ಮುಖದಲ್ಲಿ ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದು ವಿಭೂತಿಪುರ ಮಠದ ಡಾ.ಮಹಾಂತಲಿಂಗಶಿವಾಚಾರ್ಯ ಗುರೂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಬ್ರಹ್ಮಾಂಡ ಖ್ಯಾತಿಯ ವೇದಬ್ರಹ್ಮ ನರೇಂದ್ರಬಾಬುಶರ್ಮ ಗುರೂಜಿಗೆ ವಿಶೇಷ ಸನ್ಮಾನ ನಡೆಯಲಿದ್ದು ಖ್ಯಾತ ಸಾಹಿತಿ ಷಣ್ಮುಖಯ್ಯ ಅಕ್ಕೂರ್ ಮಠ್ರವರಿಗೆ ಕುಪ್ಪೂರು ಮರಳಸಿದ್ದಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು.



ವರ್ತಕರ ಸಂಘದಿಂದ ಪ್ರತಿಭಟನೆ  
ಚಿಕ್ಕನಾಯಕನಹಳ್ಳಿ,ಡಿ.01 : ದೇಶದ ಚಿಲ್ಲರೆ ವ್ಯಾಪರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸಕರ್ಾರ ಅನುಮತಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಪಟ್ಟಣದ ದಿನಸಿ ವರ್ತಕರ ಸಂಘ, ಚಿನ್ನಬೆಳ್ಳಿ ವರ್ತಕರ ಸಂಘ, ಜವಳಿ ವರ್ತಕರ ಸಂಘ, ಫ್ಯಾನ್ಸಿ ವರ್ತಕರ ಸಂಘ, ಎಲೆಕ್ಟ್ರಿಕಲ್ ವರ್ತಕರ ಸಂಘ, ಮೊಬೈಲ್ ವರ್ತಕರ ಸಂಘ ಹಾಗೂ ಎಲ್ಲಾ ವರ್ತಕರ ಸಂಘದವರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಈಶ್ವರ್ಭಾಗವತ್, ಚಂದ್ರಶೇಖರ್ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Wednesday, November 30, 2011



ಮೀಸಲಾತಿ ಹಾಗೂ ಸಮಾನ ಹಕ್ಕುಗಳನ್ನು ಪಡೆದಾಗ ಮಾತ್ರ ಕನಕದಾಸರ ಆಶಯಗಳು ಸಾರ್ಥಕ
ಚಿಕ್ಕನಾಯಕನಹಳ್ಳಿ,ನ.30 : ಹಿಂದುಳಿದ ಹಾಗೂ ಕೆಳ ವರ್ಗದ ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಅಗತ್ಯವಾದ ಮೀಸಲಾತಿ ಹಾಗೂ ಸಮಾನ ಹಕ್ಕುಗಳನ್ನು ಪಡೆದಾಗ ಮಾತ್ರ ಕನಕದಾಸರ ಆಶಯಗಳು ಸಾರ್ಥಕವಾಗುವುದು ಎಂದು ಕನಕ ಗುರುಪೀಠದ ಹೊಸದುರ್ಗ ಶಾಖೆಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಂದನಕೆರೆ ಹೋಬಳಿ ಪಾಪನಕೊಣ ಗ್ರಾಮದಲ್ಲಿ ನಡೆದ ಕನಕದಾಸರ ಜಯಂತ್ಯೋತ್ಸವ ಸಮಾರಂಭದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.
ಕೆಳವರ್ಗದ ಸಮುದಾಯದ ಮಠಮಾನ್ಯಗಳಿಗೆ ಸಕರ್ಾರಿ ಹಣಕಾಸಿನ ನೆರವು ನೀಡದಿರುವುದರಿಂದ ಆ ಸಮುದಾಯದ ವರ್ಗದ ಮಠಗಳು  ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ, ಈ ವರ್ಗದವರು ಮುಂದುವರಿಯಬೇಕು ಅದಕ್ಕಾಗಿ ಸಮುದಾಯದವರು ಸಕರ್ಾರ  ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಆ ಶಕ್ತಿ ನಮ್ಮ ಸುಮುದಾಯಗಳಿಗಿವೆ ಅದನ್ನು ಮಾಡಿ ತೋರಿಸಿ ಎಂದು ಕರೆ ನೀಡಿದರು.  ಹಿಂದುಳಿದ ವರ್ಗಗಳ ಪರವಾಗಿ ಜನಪ್ರತಿನಿಧಿಗಳು ಕೆಲಸ ನಿರ್ವಹಿಸಬೇಕಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಕನಕದಾಸರು ಕೆಳವರ್ಗದ ಹಾಗೂ ಹಿಂದುಳಿದ ವರ್ಗದ ಜನರ ಧ್ವನಿಯಾಗಿ ನಿಂತವರು, ಅವರು ತಮ್ಮ ಕೀರ್ತನೆಗಳಿಂದ ಕನ್ನಡ ನಾಡಿನ ಸಾಹಿತ್ಯವನ್ನು ಬೆಳಗಿದವರು ಅವರ  ಕನಕದಾಸರ ಜಯಂತ್ಯೋತ್ಸವವನ್ನು ಎಲ್ಲಾ ಸಮುದಾಯದವರು ಆಚರಿಸಬೇಕಾಗಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ದಾಸರ ಕೀರ್ತನೆಗಳು ಈಗಿನ ವಾಸ್ತವಿಕತೆಗೆ, ನೈಜಕತೆಗೆ ಹತ್ತಿರವಾದವು ಅಲ್ಲದೆ ಕೀರ್ತನೆಗಳನ್ನು ಯುವಕರು ಅರಿತುಕೊಂಡು ಬಾಳಬೇಕು ಎಂದರು.
ಸಮಾರಂಭಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದೊಂದಿಗೆ, ಕನಕವೇಷಾಧಾರಿ, ತಮಟೆವಾದ್ಯ, ಹುಲಿವೇಷ ಕುಣಿತ, ಮಕ್ಕಳ ವೀರಗಾಸೆ ಕುಣಿತ ನಡೆದವು. ಈ ಸಂದರ್ಭದಲ್ಲಿ ಕನಕ ಗ್ರಾಮೀಣ ಸಂಘದ ಗೌರವಾಧ್ಯಕ್ಷ ಪಿ.ಆರ್.ಗಂಗಾಧರ್, ಸಂಘದ ಖಜಾಂಚಿ ರಾಮು, ಪ್ರಕಾಶ್,  ಈಶ್ವರ್ ಹಾಗೂ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


ಸಮಾರಂಭದಲ್ಲಿ ಜಿ.ಪಂ.ಯೋಜನಾ ನಿದರ್ೇಶಕ ಆಂಜನಪ್ಪ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್,  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ವಕೀಲ ಸಾದರಹಳ್ಳಿ ಮಲ್ಲಿಕಾಜರ್ುನಯ್ಯ, ಬರಗೂರು ಬಸವರಾಜು, ಹೆಚ್.ಎಂ.ಸುರೇಶ್,  ನಿಂಗರಾಜು, ಇ.ಓ.ಎನ್.ಎಂ.ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳಸುವಲ್ಲಿ ವಿಜ್ಞಾನ ಪ್ರದರ್ಶನಗಳಂತಹ ಚಟುವಟಿಕೆಗಳನ್ನು ಉಪಯುಕ್ತವಾಗಿವೆ
ಚಿಕ್ಕನಾಯಕನಹಳ್ಳಿ,ನ.30 : ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಮಕ್ಕಳು ತನ್ನದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ ಅದನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳಸುವಲ್ಲಿ ವಿಜ್ಞಾನ ಪ್ರದರ್ಶನಗಳಂತಹ ಚಟುವಟಿಕೆಗಳನ್ನು ಉಪಯುಕ್ತವಾಗಿವೆ ಎಂದು ಡಿ.ಡಿ.ಪಿ.ಐ ಮೋಹನ್ಕುಮಾರ್ ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪಧರ್ೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಮಕ್ಕಳ ಭಾಗವಹಿಸುವ ಸಮಯಕ್ಕೂ ಮುನ್ನ ವೈಜ್ಞಾನಿಕ ರೀತಿಯಲ್ಲಿ ತಯಾರಾಗಿರಬೇಕು ಅದಕ್ಕೆ ಶಿಕ್ಷಕರು, ಪೋಷಕರು ಸಹಕರಿಸಬೇಕಾಗಿದೆ, ಸಕರ್ಾರ ಇಂತಹ ಕಾರ್ಯಕ್ರಮಗಳಿಗೆ ಹಲವು ರೀತಿಯಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ, ಈಗಾಗಲೇ 75ಲಕ್ಷರೂಗಳನ್ನು ವಿಜ್ಞಾನ ಉಪಕರಣ ಹಾಗೂ  ಗ್ರಂಥಾಲಯದಂತ ಜ್ಞಾನಾರ್ಜನೆಯನ್ನು ಉದ್ದೀಪನಗೊಳಿಸುವ ಕಾರ್ಯಗಳಿಗೆ  ಬಿಡುಗಡೆ ಮಾಡಿದೆ.
 ಜಿಲ್ಲೆಯ ಎಲ್ಲಾ ಮಕ್ಕಳು ಈ ಸ್ಪಧರ್ೆಯಲ್ಲಿ ಭಾಗವಹಿಸುವುದು ಅವರ ಮುಂದಿನ ಭವಿಷ್ಯಕ್ಕೆ ಸೂಕ್ತ.   ಮಕ್ಕಳ ಪ್ರತಿಭೆ ಹೊರಹೊಮ್ಮಲು ಸ್ಪಧರ್ೆಗಳು ಬಹುಮುಖ್ಯ ಅದರಲ್ಲಿ ಪ್ರತಿಭಾವಂತರನ್ನು ತೀಪರ್ುಗಾರರು ಗುರುತಿಸಬೇಕು. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮಾಡಲು ತುಮಕೂರು ಜಿಲ್ಲೆಗೆ ಸೂಚನೆ ಬಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿಯೊಬ್ಬರು ಸಹಕರಿಸಬೇಕು ಅದಕ್ಕಾಗಿ ನಾನು ನಿರೀಕ್ಷೆ ಮೀರಿ ಸಹಕರಿಸುತ್ತೇನೆ, ಈ ಕಾರ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯಬೇಕೆಂದರು.  ಈಗಿನ ಮಕ್ಕಳು ತಮ್ಮ ಊಹೆಗೂ  ನಿಲುಕದಂತಹ ಪ್ರತಿಭಾವಂತರು,  ಅವರಿಗೆ  ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಆ ಕಡೆ ನಡೆಯಲು ನಾವು ಅವರಿಗೆ ಮಾರ್ಗತೋರಿಸಬೇಕು  ಎಂದರು ಜಿಲ್ಲೆಯಿಂದ 223 ಶಾಲೆಗಳ ಮಕ್ಕಳು ಈ ವಸ್ತು ಪ್ರದರ್ಶನಕ್ಕೆ ಆಗಮಿಸಿದ್ದು ಸ್ಪಧರ್ಿಗಳಿಗೆ ಶುಭಾಷಯ ಕೋರಿದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ಮಕ್ಕಳಿಗೆ ಚಿಕ್ಕಂದಿನಿಂದಲೇ ಅವರ ಪ್ರತಿಭೆ ಗುರುತಿಸಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪೋಷಕರ ಹಾಗೂ ಶಿಕ್ಷಕರಲ್ಲಿರುತ್ತದೆ, ಮಕ್ಕಳು ಅವಕಾಶಗಳು ಬಂದಾಗ ತಿರಸ್ಕರಿಸದೆ ಬಳಸಿಕೊಂಡು ತಮ್ಮ ಪ್ರತಿಭೆ ಪ್ರದಶರ್ಿಸಬೇಕು ಎಂದರಲ್ಲದೆ, ಅದಕ್ಕಾಗಿ ಗೆಲ್ಲುವ ಛಲ ಹಾಗೂ ಹಠ ಮುಖ್ಯವಾಗಿರುತ್ತದೆ ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ  ಬಿ.ಜೆ.ಪ್ರಭುಸ್ವಾಮಿ, ನಂಜಯ್ಯ, ಕಾಮಾಕ್ಷಮ್ಮ   ಬಿ.ಇ.ಓಗಳಾದ ಸಾ.ಚಿ.ನಾಗೇಶ್, ಪಿ.ಬಿ.ಬಸವರಾಜು, ರಂಗಧಾಮಯ್ಯ, ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ರಾ.ಸ.ನೌ.ಸಂಘದ ತಾಲೂಕು ಅಧ್ಯಕ್ಷ ಅರ್.ಪರಶಿವಮೂತರ್ಿ ಮುಂತಾದವರು ಉಪಸ್ಥಿತರಿದ್ದರು.

Tuesday, November 29, 2011


ಚಿ.ನಾ.ಹಳ್ಳಿ 108 ಆಂಬ್ಯುಲೆನ್ಸ್ ಸಿಬ್ಬಂದಿಯ ಮೋಜು ಮಸ್ತಿ.
ಚಿಕ್ಕನಾಯಕನಹಳ್ಳಿ,ನ.29  : ಪಟ್ಟಣದ ಸಕರ್ಾರಿ ಆಸ್ಪತ್ರೆಯ ಆವರಣದಲ್ಲಿ ಬೀಡುಬಿಟ್ಟಿರುವ  108 ಆಬ್ಯೂಲೆನ್ಸ್ ವಾಹನದ ಸಿಬ್ಬಂದಿಯ ಮೋಜು ಮಸ್ತಿ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ,  ಇದು ಆಸ್ಪತ್ರೆ ಆವರಣ ಎಂಬುದನ್ನು ತಿಳಿಯದಷ್ಟು ಅರೆ ಪ್ರಜ್ಞಾವಸ್ಥೆ ತಲುಪಿದ್ದಾರೆ.
ಧೂಮಪಾನ ಮಾಡಬಾರದು, ಮಧ್ಯಪಾನ ಆರೋಗ್ಯಕ್ಕೆ ಹಾನಿಕರ, ಆಸ್ಪತ್ರೆಯ ಕಸದಿಂದ ರೋಗಗಳು ಹರಡುತ್ತವೆ ಎಂಬ ನಾಮಫಲಕ ಇರುವ ಆಸ್ಪತ್ರೆಯ ಆವರಣದಲ್ಲೇ ಮಧ್ಯಪಾನದ ಬಾಟಲುಗಳು, ಮಧ್ಯಪಾನದ ಸ್ಯಾಚೆಟ್ಗಳು, ಸೇರಿದಂತೆ ಹಲವು ರೀತಿಯ ಉದ್ದೀಪನ ಔಷಧಿಗಳ ಕುರುಹುಗಳು ಸಿಗುತ್ತಿರುವುದು ಸಾರ್ವಜನಿಕರಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.    
ಆಸ್ಪತ್ರೆಯ ಹಿಂಭಾಗದಲ್ಲಿರುವ 108ರ ವಾಹನ ಸಿಬ್ಬಂದಿಯ ಕೊಠಡಿಯ ಸುತ್ತಾಮುತ್ತಾ ಮಧ್ಯದಬಾಟಲ್ಗಳು, ಧೂಮಪಾನದ ಪಾಕೆಟ್ಗಳು ರಾಶಿರಾಶಿ ಬಿದ್ದಿವೆ, ಕೊಠಡಿಯಲ್ಲಿ ಸಿಬ್ಬಂದಿ ಕುಡಿದ ಅಮಲಿನಲ್ಲಿ ನಾವೆಲ್ಲಿ ಮಲಗಿದ್ದೇವೆಂಬ ಪರಿಜ್ಞಾನವಿಲ್ಲದೆ ಆರಾಮಾಗಿ ಕುಂಭಕರಣ ನಿದ್ದೆ ಮಾಡುತ್ತ ತಾವು ಎಸೆದಿರುವ ಬಾಟಲಿಗಳ ಬಗ್ಗೆ  ಮೈಮರೆತಿದ್ದಾರೆ. 
  108ರ ವಾಹನ ಹಾಗೂ ವಾಹನದ ಸಿಬ್ಬಂದಿಗಳನ್ನು ರೋಗಿಗಳ  ತುತರ್ುವ್ಯವಸ್ಥೆಗಾಗಿ ಸಕರ್ಾರ ನಿಯೋಜಿಸಿದೆ, ಆದರೆ ವಾಹನ ಸಿಬ್ಬಂದಿ ತಮ್ಮ ಕೊಠಡಿಯಲ್ಲಿ ಗಾಡನಿದ್ರೆ ಮಾಡುತ್ತಿದ್ದಾರೆ. ರೋಗಿಗಳಿಗೆ ಯಾವ ರೀತಿಯಲ್ಲಿ ತುತರ್ು ವ್ಯವಸ್ಥೆಯ ಔಷದೋಪಚಾರ ಮಾಡುತ್ತಾರೆ ಎಂಬುದು ಪ್ರತ್ಯಕ್ಷದಶರ್ಿಗಳ ಪ್ರಶ್ನೆ,  ಇವರ ಜವಬ್ದಾರಿಯನ್ನು ಹೊತ್ತಿರುವ ಕಂಪನಿ  ಇವರನ್ನು ಸುಮ್ಮನೆ ಮಲಗಲು ಸಂಬಳ ನೀಡುತ್ತಿದೆಯೇ ಎಂಬದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುತ್ತಿದೆ.
ಇಷ್ಟೇ ಅಲ್ಲದೆ 108ರ ವಾಹನವನ್ನು ಸಕರ್ಾರಿ ಕೆಲಸಕ್ಕೆ ಹೆಚ್ಚಾಗಿ ಬಳಸಿಕೊಳ್ಳದೆ ಆಸ್ಪತ್ರೆಯ ಸಿಬ್ಬಂದಿ ತಮ್ಮ ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. 
ಆಸ್ಪತ್ರೆಯ ಕಸದಿಂದ ರೋಗಗಳು ಹರಡುತ್ತವೆ ಎಂಬ ಫಲಕಗಳನ್ನು ಆಸ್ಪತ್ರೆಯಲ್ಲಿ ಹಾಕಿದ್ದರೂ ಆಸ್ಪತ್ರೆಯ ಆವರಣದಲ್ಲೇ ಹೆಚ್ಚಾಗಿ ಮಧ್ಯಬಾಟಲ್, ಧೂಮಪಾನದ ಪ್ಟಾಕೆಟ್ ಹಾಗೂ ಇನ್ನಿತರ ಕಸದ ರಾಶಿಯಿಂದ ಆಸ್ಪತ್ರೆಯ ಆವರಣ ದುವರ್ಾಸನೆಯಿಂದ ಕೂಡಿ ರೋಗಿಗಳಿಗೆ ಇನ್ನಷ್ಟು ಆರೋಗ್ಯ ಹದೆಗಡುತ್ತಿದೆ.  ಆಸ್ಪತ್ರೆಯ ಆವರಣದಲ್ಲಿ ಕಸವನ್ನು ತೆಗೆದು ಹಾಕಿ  ಶುಚಿ ಮಾಡುತ್ತಾರೋ ಇಲ್ಲವೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಇದರ ಬಗ್ಗೆ ವೈದ್ಯಾಧಿಕಾರಿಗಳು  ಸುಮ್ಮನಿರುವುದು ಸಕರ್ಾರಿ ಆಡಳಿತದ ವಿಪಯರ್ಾಸವೇ ಸರಿ. ಇದರ ಮೇಲುಸ್ತುವಾರಿ ವಹಿಸಿರುವ ಎನ್.ಜಿ.ಓ. ಅವರು ಸೂಕ್ತ ನಿದರ್ೇಶನ ನೀಡದಿದ್ದರೆ ಇದೊಂದು ಬಾರ್ ಅಂಡ್ ರೆಸ್ಟೋರೆಂಟ್  ಆಗಿ ಪರಿವರ್ತನೆಗೊಳ್ಳುವ ಕಾಲ ದೂರವಿಲ್ಲ.



ಇಲಾಖೆಯಲ್ಲಿ  ಅನುದಾನವಿಲ್ಲದೆ ಅನಾಥವಾಗಿರುವ ಉದ್ಯಾನವನ.
ಚಿಕ್ಕನಾಯಕನಹಳ್ಳಿ,ನ.29 : ನಾಮಫಲಕದಲ್ಲಿ ಮಾತ್ರ ಸಸ್ಯಕ್ಷೇತ್ರ, ಪ್ರಕೃತಿ ಉದ್ಯಾನವನ, ಆದರೆ ಒಳಗಡೆ ಹೋದರೆ ಕಾಣುವುದು ಸಕರ್ಾರದ ನಿರ್ಲಕ್ಷತೆಯಿಂದ ಸೊರಗಿದ ಅದ್ಯಾನವನ. ಈ ರೀತಿ ಆಗಿರುವುದು ತಾಲ್ಲೂಕಿನರುವ ತರಬೇನಹಳ್ಳಿಯ ಉದ್ಯಾನವನ.
1998-99ನೇ ಇಸವಿಯಲ್ಲಿ ಸುಂದರ ಪ್ರವಾಸಿ ತಾಣವಾಗಿ ಸ್ಥಾಪನೆಗೊಂಡ ಈ ಉದ್ಯಾನವನವು ಇಂದು ಯಾವುದೇ ಅನುದಾನಗಳಿಲ್ಲದೇ ಸೊರಗುತ್ತಾ ಹೆಸರಿಗಷ್ಟೇ ಉದ್ಯಾನವನವಾಗಿದೆ.
ಸಸ್ಯ ಪ್ರೇಮಿಗಳು, ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯಲು, ಮನಸ್ಸಿನ ಶಾಂತಿಗಾಗಿ ಉದ್ಯಾನವನಗಳಿಗೆ ಆಗಮಿಸಿ ಸೌಂದರ್ಯವನ್ನು ಹೊಗಳುವುದು ಸವರ್ೆ ಸಾಮಾನ್ಯ ಆದರೆ ತರಬೇನಹಳ್ಳಿ ಉದ್ಯಾನವನಕ್ಕೆ ಆಗಮಿಸಿದವರು ಇಲ್ಲಿನ ವ್ಯವಸ್ಥೆಯನ್ನು ಗಮನಿಸಿ ಉಗುಳುವುದು ಸಾಮಾನ್ಯವಾಗಿದೆ.
ಉದ್ಯಾನವನವು ಒಟ್ಟು 14 ಎಕರೆ ಇದ್ದು 30 ಗುಂಟೆ ರಸ್ತೆಯಾಗಿದೆ, ಉಳಿದ ಪ್ರದೇಶ ಉದ್ಯಾನವನಕ್ಕೆ ಸೀಮಿತವಾಗಿದೆ, ಇಲ್ಲಿ ಬಿದಿರು, ಅಕೇಶಿಯಾ, ನೀಲಗಿರಿ, ಬಸವನಪಾದ, ನೇರಳೆ, ಹೆಬಲ್ಸ್, ಹೂವಿನಗಿಡ ಹಾಗೂ ವಿವಿಧ ಜಾತಿಯ ಹಲವಾರು ಮರಗಿಡಗಳು ಇದ್ದರೂ ಅವುಗಳೆಲ್ಲಾ ನೀರಿಲ್ಲದೆ ಒಣಗುತ್ತಿವೆ,  ಇರುವ ಈ ಉದ್ಯಾನವನದಲ್ಲಿ  ಅವ್ಯವಸ್ಥೆಯಿಂದ ಕೂಡಿದ್ದು ಪ್ರಕೃತಿ ಸೌಂದರ್ಯ ಹಾಗೂ ಸಸ್ಯಕಾಶಿಯು ಬರಡಾಗುತ್ತಿದೆ. ಬೋರ್ವೆಲ್ಗಳಲ್ಲಿ ನೀರು ಇಲ್ಲ,  ತಂತಿಬೇಲಿಗಳು ಹಾಳಾಗಿವೆ, ಆಸನಗಳು ಮುರಿದು ಮೂಲೆ ಸೇರಿವೆ, ಮಕ್ಕಳ ಆಟಿಕೆಗಳ ಅವ್ಯವಸ್ಥೆ ಅಲ್ಲದೆ ಇಲ್ಲಿರುವ  ಮೇಲ್ಛಾವಣಿಗಳ ಸಹಾಯಕ್ಕೆ ಹಾಕಿರುವ ತೆಂಗಿನ ಗರಿಗಳು ಮುರಿದು ಬಿದ್ದು ಅಲ್ಲಿಯೇ ಕಸದ ತೊಟ್ಟಿಯಂತಾದರೂ ಯಾರೂ ಗಮನ ಹರಿಸದಿರುವುದು ನೋಡಿದರೆ ಉದ್ಯಾನವನ ಅದ್ಯಾನವನ ಆಗಿರುವುದಕ್ಕೆ ಸಾಕ್ಷಿಯಾಗಿದೆ. ಇದು ಈಗೆ ಮುಂದುವರೆದು ಅಭಿವೃದ್ದಿ ಕಾಣದೇ ಇದ್ದರೆ ಮುಂದಿನ ಯುವಪೀಳಿಗೆ ತಾಲ್ಲೂಕಿನಲ್ಲಿ ಉದ್ಯಾನವನವಿತ್ತು ಎಂಬುದನ್ನು ಹಲವರ ಬಳಿ ಪ್ರಶ್ನಿಸಬೇಕಾಗುತ್ತದೆ.
ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಉದ್ಯಾನವನ ಅಭಿವೃದ್ದಿ ಪಡಿಸಲು ಮುಂದಾಗಬೇಕಿದೆ, ಅದಕ್ಕಾಗಿ ಉದ್ಯಾನವನದಲ್ಲಿ ನೀರಿನ ವ್ಯವಸ್ಥೆ, ನೀರಿನ ಟ್ಯಾಂಕ್, ಪರಗೋಲುಗಳ, ಆಟಿಕೆ, ವಾಚ್ಟವರ್ ತಂತಿಬೇಲಿ ವ್ಯವಸ್ಥೆಗಳನ್ನು ದುರಸ್ತಿ ಮಾಡಿಸಬೇಕಾಗಿದೆ ಇದಲ್ಲದೆ ಪ್ರಕೃತಿ ಉದ್ಯಾನವನದಲ್ಲಿ ಭೂಮಿ ಸಮತಟ್ಟು ಮಾಡಿ ರಸ್ತೆ ನಿಮರ್ಾಣ, ಬಂದ ಪ್ರವಾಸಿಗರಿಗೆ ವಿಶ್ರಾಂತಿಸಲು ಸಿಮೆಂಟ್ ಆಸನ ಹಾಗೂ ಹಳೆ ಗಿಡಗಳ ಜೊತೆ ಹೊಸ ಗಿಡಗಳನ್ನು ನೆಡುವುದು  ಅಲ್ಲದೆ ಹಳೆ ಕೊಠಡಿಯನ್ನು ದುರಸ್ತಿಗೊಳಿಸಿ ಕಾವಲುಗಾರನಿಗೆ ಕೊಠಡಿ ನಿಮರ್ಿಸಿಕೊಡುವುದನ್ನು ಮಾಡಿದರೆ ಉದ್ಯಾನವನ ಅಭಿವೃದ್ದಿಯತ್ತ ಮುಂದಾಗಿ ಜನಗಳ ಪ್ರಶಂಸನೀಯಗಳಿಸುತ್ತದೆ. ಈ ಬಗ್ಗೆ ಸಾಮಾಜಿಕ ಅರಣ್ಯ ಇಲಾಖೆಯವರನ್ನು ಬಗ್ಗೆ ಕೇಳಿದರೆ 1998-99ರಲ್ಲಿ 3 ವರ್ಷಕ್ಕೆ ಅನುಗುಣವಾಗುವಂತೆ ಬಿಡುಗಡೆಯಾಗಿತ್ತು. ಆಗ ಬಿಡುಗಡೆಯಾಗಿದ್ದು ಬಿಟ್ಟರೆ ಇಲ್ಲಿಯವರೆಗೂ ನಯಾ ಪೈಸೆಯೂ  ಬಿಡುಗಡೆಯಾಗಿಲ್ಲ ಇನ್ನೆಲ್ಲಿಂದ ನಾವು ಅಭಿವೃದ್ದಿ ಪಡಿಸಲಿ ಎನ್ನುತ್ತಾರೆ.
 ಈ ಉದ್ಯಾನವನವು ಜಿಲ್ಲಾ ಪಂಚಾಯತ್ ಇಲಾಖೆಗೆ ಒಳಪಡಲಿದ್ದು ತಾಲ್ಲೂಕಿನ ಜಿಲ್ಲಾ ಪಂಚಾಯತ್ ಸದಸ್ಯರು ಈ ಉದ್ಯಾನವನದ ಬಗ್ಗೆ ಜಿಲ್ಲಾಡಳಿತದಲ್ಲಿ ಗಮನ ಹರಿಸಿ, ತಾಲ್ಲೂಕಿನಲ್ಲಿ ಹೆಸರಿಗೆ ಹೇಳಲು ಇರವ ಉದ್ಯಾನವನ್ನು  ಅಭಿವೃದ್ದಿ ಪಡಿಸಿ ಮಾದರಿ ಉದ್ಯಾನವನ್ನಾಗಿ ಮಾಡುತ್ತಾರೋ, ಇಲ್ಲವೋ ಎಂದು ಕಾದುನೋಡಬೇಕಿದೆ ...!?.


Monday, November 28, 2011



ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ವೈಜ್ಞಾನಿಕ ತಿಳುವಳಿಕೆ ಮೂಡಿಸುವುದು ಮೆಟ್ರಿಕ್ ಮೇಳದ ಉದ್ದೇಶ

ಚಿಕ್ಕನಾಯಕನಹಳ್ಳಿ,ನ,28 : ಮಕ್ಕಳಿಗೆ ಬುದ್ದಿಶಕ್ತಿ ಹೆಚ್ಚಿಸಲು ಚಿಕ್ಕ ವಯಸ್ಸಿನಲ್ಲೇ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು  ಮೆಟ್ರಿಕ್ ಮೇಳಗಳಂತಹ ಕಾರ್ಯಕ್ರಮಗಳು ಉತ್ತೇಜನಕಾರಿ  ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ  ಮಕ್ಕಳು ಸಂತೆಗೆ ತಂದಿದ್ದ ವಸ್ತುಗಳನ್ನು ಕೊಳ್ಳುವ ಮೂಲಕ ಮೇಳಕ್ಕೆ ಬಿ.ಇ.ಓ.ಚಾಲನೆ ನೀಡಿದರು.
ಮಕ್ಕಳ ವ್ಯಾಪಾರದ ಜ್ಞಾನ ಬುದ್ದಿಶಕ್ತಿ ಹೆಚ್ಚಿಸಲು ಇಲಾಖೆ ಮೆಟ್ರಿಕ್ ಮೇಳಗಳಂತಹವುಗಳನ್ನು ಹಮ್ಮಿಕೊಂಡಿದ್ದು ತೀಪರ್ುಗಾರರು ಮಕ್ಕಳ ಮೇಲೆ ಯಾವುದೇ ವಿರೋಧ ಏರದೆ ಪ್ರತಿಭೆ ಇರುವಂತಹ ಮಕ್ಕಳಿಗೆ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮೆಟ್ರಿಕ್ಮೇಳಗಳಂತಹವುಗಳಲ್ಲಿ ಮಕ್ಕಳ ವೈಜ್ಞಾನಿಕ ಪ್ರತಿಭೆ ಹೊರಹೊಮ್ಮುವುದಲ್ಲದೆ ಅವರ ಜ್ಞಾನ ಹೆಚ್ಚುತ್ತದೆ ಎಂದರು.
ಸಮಾರಂಭದಲ್ಲಿ ಇ.ಓ. ಎನ್.ಎಂ.ದಯಾನಂದ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿದರು. ಪಾಂಡುರಂಗ್ಯಯ ನಿರೂಪಿಸಿದರು.


ಬಾಳಠಾಕ್ರೆಯ ನಾಲಿಗೆಯನ್ನು ತುಂಡರಿಸಿಚ: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ನ.28 : ಕನ್ನಡದ ವ್ಯಕ್ತಿತ್ವಗಳ ಬಗ್ಗೆ ಹಾಗೂ  ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡುವವರ ನಾಲಿಗೆಯನ್ನು ತುಂಡು ತುಂಡಾಗಿ ಕತ್ತರಿಸಬೇಕು, ಅಲ್ಲದೆ ಕನ್ನಡ ಸಾಹಿತಿ ಡಾ.ಚಂದ್ರಶೇಖರ ಕಂಬಾರರವರ ವಿರುದ್ದ ಮಾತನಾಡಿದ ಬಾಳಠಾಕ್ರೆಯನ್ನು ರಾಜ್ಯಕ್ಕೆ ಕರೆತಂದು ನೇಣುಹಾಕಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳು,  ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರ ವಿರುದ್ದ ಅವಹೇಳನಕಾರಿ ಮಾತುಗಳನ್ನಾಡಿರುವ ಮಹಾರಾಷ್ಟ್ರದ ಬಾಳಠಾಕ್ರೆಯ ವಿರುದ್ದ ಘೋಷಣೆಗಳು ಕೂಗಿದದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ವಿ.ನಾಗರಾಜ್ ರಾವ್,  ಬಾಳಠಾಕ್ರೆಗೆ ಕನ್ನಡಕ್ಕೆ ಬಂದಿರುವ 8ಜ್ಞಾನಪೀಠ ಪ್ರಶಸ್ತಿ ಬಗ್ಗೆ ಹೊಟ್ಟೆಕಿಚ್ಚಿದೆ, ಮಹಾರಾಷ್ಟ್ರದಲ್ಲಿ 8ಕೋಟಿ ಜನರಿದ್ದರೂ ಅವರಿಗೆ ಬಂದಿರುವುದು 2 ಜ್ಞಾನಪೀಠ ಪ್ರಶಸ್ತಿ ಮಾತ್ರ,  ಆದರೆ ಕನ್ನಡಿಗರಿಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂಬ ಹೊಟ್ಟೆಕಿಚ್ಚಿನಿಂದಲೇ  ಕಂಬಾರರ ವಿರುದ್ದ ಮಾತನಾಡಿರುವುದು. ಠಾಕ್ರೆ ಒಬ್ಬ ಬೊಗಳುವ ನಾಯಿಯೇ ಹೊರತು ಕಚ್ಚುವ ನಾಯಿಯಲ್ಲ, ಅವನು ಬೇರೆಯವರನ್ನು ಬಿಟ್ಟು ಆಟ ಆಡುತ್ತಾನೆ, ತಾನು ಮುಂದೆ ಬರುವುದಿಲ್ಲ ಎಂದ ಅವರು ಬೆಳಗಾವಿ ನಗರಪಾಲಿಕೆಯವರು ಕನ್ನಡ ನಾಡಿನ ನೀರು, ಆಹಾರ ಸೇವಿಸುವ ಆ ಜನ ಇಲ್ಲಿಯ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿದ್ದಾರೆ,  ಆ ಪಾಲಿಕೆಯನ್ನು ವಜಾ ಮಾಡಿ ಅಲ್ಲಿಯ ಪೌರನನ್ನು ಜೈಲಿಗೆ ಕಳುಹಿಸಬೇಕು ಎಂದು  ಆಗ್ರಹಿಸಿದರು.
ಸಾಹಿತಿ ಆರ್.ಬಸವರಾಜು ಮಾತನಾಡಿ  ಕನ್ನಡಿಗರು ವಿನಯ ಶೀಲತೆಗೆ ಹೆಸರುವಾಸಿ ಅವರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಂತಹ ಕಂಬಾರರ ವಿರುದ್ದ ಈ ರೀತಿ ಅವಹೇಳನಕಾರಿ ಹೇಳಿಕೆಗೆ ಕನ್ನಡನಾಡಿನ ಜನತೆ ವಿರೋಧಿಸುತ್ತದೆ ಎಂದ ಅವರು, ಠಾಕ್ರೆಗೆ ಕನ್ನಡ ಸಾಹಿತ್ಯದ ಬಗ್ಗೆಯಾಗಲಿ, ಇಲ್ಲಿನ ಸಾಹಿತಿಗಳ  ಬಗ್ಗೆಯಾಗಲಿ  ತಿಳುವಳಿಕೆಯೂ ಇಲ್ಲದಿರುವ ಠಾಕ್ರೆಗೆ ಸಾಹಿತಿ ಕಂಬಾರರ ವಿರುದ್ದ ಮಾತಿನಾಡುವ ಯಾವ ಹಕ್ಕೂಇಲ್ಲ ಎಂದು ಖಂಡಿಸಿದರು.
ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ನವಂಬರ್ 1ರಂದು ಈಡೀ ರಾಜ್ಯ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಬೆಳಗಾವಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಕರಾಳ ದಿನಾಚಾರಣೆ ಆಚರಿಸಿ ಕನ್ನಡತನಕ್ಕೆ ದ್ರೋಹವೆಸಗಿದ್ದಾರೆ, ಕನ್ನಡ ನೆಲ, ಜಲವನ್ನು ಅನುಕರಿಸಿ ಕನ್ನಡತನದ ವಿರುದ್ದ ತಿರುಗಿರುವುದು ಖಂಡನೀಯ, ಇದರ ಬಗ್ಗೆ ಸಕರ್ಾರ ತೀವ್ರ ನಿಗಾವಹಿಸಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ರವರನ್ನು ವಜಾ ಮಾಡಬೇಕೆಂದರು,  ಕನ್ನ್ನಡ ನೆಲ  ಸಾಹಿತಿಗಳಿಗೆ ಹೆಸರುವಾಸಿ ಅಂತಹ ನೆಲದ ಸಾಹಿತಿ ಕಂಬಾರರ ಸೊಂಟ ಮುರಿಯಬೇಕು ಎಂಬ ಅವಹೇಳನಕಾರಿ ತನದ ಮಾತನ್ನು  ನಾಡಿನ 6ಕೋಟಿ ಕನ್ನಡಿಗರೂ ವಿರೋಧಿಸುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ದಲಿತ ಸಂಘದ ಮುಖಂಡ ಲಿಂಗದೇವರು, ಕಲಾ ಕುಂಚಾಂಕರ ಸಂಘದ ಸಿ.ಎಚ್.ಗಂಗಾಧರ್, ಕೆ.ಜಿ.ಕೃಷ್ಣೆಗೌಡ, ಕರವೇಯ ವಾಸು, ನವೀನ್, ಉಮೇಶ್,  ನಾಗರಾಜು ಪ್ರಸಾದ್, ಭಾಸ್ಕರ್, ಮನ್ಸೂರ್ಪಾಷ ಮುಂತಾದವರಿದ್ದರು. 

Saturday, November 26, 2011



ತಾಲ್ಲೂಕಿನ ಸಾಹಿತಿಗಳ ನೇತೃತ್ವದಲ್ಲಿ ಬಾಳಠಾಕ್ರೆರ ಅವಹೇಳನಕಾರಿ ಹೇಳಿಕೆಯ ವಿರುದ್ದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ನ.26 : ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರಕಂಬಾರರ ವಿರುದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕ ಬಾಳಠಾಕ್ರೆ ನೀಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ದ ಹಾಗೂ ಬೆಳಗಾವಿ ಮಹಾನಗರಪಾಲಿಕೆಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಕನ್ನಡಭಿಮಾನಿಗಳಿಂದ ಸೋಮವಾರ 28ರಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಯು ಕನ್ನಡ ಸಂಘ ವೇದಿಕೆಯಿಂದ ಮದ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್, ಆರ್.ಬಸವರಾಜು, ಕನರ್ಾಟಕ ರಕ್ಷಣಾ ವೇದಿಕೆ, ಕನ್ನಡ ಸಂಘ, ವಿದ್ಯಾಥರ್ಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನವಂಬರ್ ಒಂದರಂದು ಕನ್ನಡ ನಾಡಿನ ಆರುಕೋಟಿ ಕನ್ನಡಿಗರು ಅತ್ಯಂತ ವೈಭವಯುತವಾಗಿ ಕನರ್ಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದರೆ ನಮ್ಮ ನಾಡಿನ ಭಾಗವೇ ಆದ ಬೆಳಗಾವಿ ನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ರವರು ಕರಾಳದಿನವನ್ನು ಆಚರಿಸಿ ಕನ್ನಡಾಂಬೆಗೆ ದ್ರೋಹವೆಸಗಿದ್ದು ಇವುಗಳನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.



ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಗಣನೀಯವಾದುದು 
ಚಿಕ್ಕನಾಯಕನಹಳ್ಳಿ,ನ.26 : .ಹಿಂದಿನ ಕಾಲದಿಂದಲೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಗೌರವಿಸಲಾಗುತ್ತಿದೆ. ಮಹಿಳೆಯರು, ಮಾತೆಯರು ಜನನಿಯಿದ್ದಂತೆ, ಕುಟುಂಬದ ನಿರ್ವಹಣೆಯಲ್ಲಿ ಅವರ ಪಾತ್ರ  ಗಣನೀಯವಾದುದು ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ಹೇಳಿದರು.
ಪಟ್ಟಣದ ಸಮಗ್ರ ಶಿಶು ಅಭಿವೃದ್ದಿ ಯೋಜನಾ ಕಛೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ಮಹಿಳಾ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು ಮಹಿಳಾ ದಿನವನ್ನು ಪ್ರತಿ ವರ್ಷ ನವಂಬರ್ 19ರಿಂದ 25ರವರಗೆ ಆಚರಿಸಲಾಗುತ್ತಿದೆ.  ಮಹಿಳೆಯರು  ಎಲ್ಲಾ ರಂಗಗಳಲ್ಲಿ ಮುಂದೆ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಒಬ್ಬ ಪುರುಷನಿಗೆ ಒಬ್ಬ ಮಹಿಳೆಯು ಹೃದಯವಿದ್ದಂತೆ ಹೆಣ್ಣು ಮಕ್ಕಳು ಮೃದು ಸ್ವಭಾವ ಹೊಂದಿದ್ದು. ಕುಟುಂಬ ನಿರ್ವಹಣೆಯಲ್ಲಿ ಅತಿ ಪ್ರಾಮುಖ್ಯತೆ ಹೊಂದಿರುತ್ತಾರೆ. ಲಂಡನ್ನಿನ ಒಬ್ಬ ಮಹಿಳೆಯ ಮೇಲೆ ಜನರು ಕಲ್ಲು ಎಸೆದ ದಿನದಂದು ಮಹಿಳೆಯರು ಹೋರಾಟ ಮಾಡಿದ ದಿನ ಮಾಚರ್್ 08.ಅಂದಿನ ಹೋರಾಟದ ಫಲವಾಗಿ ಮಾಚರ್್08 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರ ಕಷ್ಟ ಕಾರ್ಪಣ್ಯಗಳನ್ನು ಅರಿತು ಅವರ ನೋವುಗಳನ್ನು ನಿವಾರಣೆ ಮಾಡಿ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುದೇ ಮಹಿಳಾ ದಿನವನ್ನಾಗಿ ಆಚರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಸಮಾಜದಲ್ಲಿ ಮಹಿಳೆ ಮತ್ತು ಪುರುಷರು ಎಂಬ ಕೀಳರಿಮೆ ಇಲ್ಲದೇ ಎಲ್ಲರೂ ಒಗ್ಗಟ್ಟಾಗಿ ದುಡಿದು ನೆಮ್ಮದಿಯಿಂದ ಸುಖ ಬಾಳ್ವೆ ನಡೆಸುವಂತೆ ಕರೆ ನೀಡಿದರು. 
ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ತ್ರೀಶಕ್ತಿ ಮಹಿಳಾ ಸಂಘಗಳು ಉತ್ತಮವಾದ ರೀತಿಯಲ್ಲಿ ನಡೆಯುತ್ತಿದ್ದು ಬ್ಯಾಂಕಿನಿಂದ ಸಾಲಸೌಲಭ್ಯಗಳನ್ನು ಪಡೆದು ಆದಾಯೋತ್ಪನ್ನ ಚಟುಚಟಿಕೆಯಿಂದ ಆಥರ್ಿಕವಾಗಿ ಸಬಲರಾಗುತ್ತಿರುವುದನ್ನು ಕಂಡು ಸಂತೋಷವೆನಿಸುತ್ತಿದೆ. ಸಮಾಜ ನಿಮರ್ಾಣ ಮಾಡುವುದರಲ್ಲಿ ಮಹಿಳೆಯರ ಪಾತ್ರ ಮಹತ್ವವಾದುದು. 
ಗುಡಿ ಕೈಗಾರಿಕೆಗಳಂತಹ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸಿಕೊಂಡು ನಿಮರ್ಾಣ ಆಗಿರುವ ಸ್ತ್ರೀಶಕ್ತಿ ಭವನದಲ್ಲಿ ಇಟ್ಟು ಮಾರಾಟ ಮಾಡಿಲಾಭ ಗಳಿಸುವಂತೆ ತಿಳಿಸಿದ ಅವರು ಹೆಣ್ಣು ಬ್ರೂಣಹತ್ಯೆಯಿಂದ ಇಂದಿನ ಸಮಾಜದಲ್ಲಿ ಸಾವಿರ ಪುರುಷರಿಗೆ 968 ಮಹಿಳೆಯರಿದ್ದು ಇದನ್ನು ತಪ್ಪಿಸಲು ಹೆಣ್ಣು ಬ್ರೂಣಹತ್ಯೆ ತಡೆಗಟ್ಟುವಂತೆ ತಿಳಿಸಿದರು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಬಹುದಾಗಿದೆ. ಗಂಡು-ಹೆಣ್ಣು ಎಂಬ ಬೇದಭಾವ ಇಲ್ಲದೇ ನಾವೆಲ್ಲರೂ ಸರಿ ಸಮಾನರು ಅನ್ಯೂನ್ಯತೆಯಿಂದ ಸಹಬಾಳ್ವೆ ನಡೆಸುವಂತೆ ಕರೆ ನೀಡಿದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಮಹಿಳೆಯರು ಎಲ್ಲಾ ಕ್ರೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಕುಟುಂಬದ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾವಂತರಾಗಿ ನಗರ ಪ್ರದೇಶಗಳಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಇಂದು ಸಕರ್ಾರವು ನಿಗಧಿಪಡಿಸಿರುವ ಮೀಸಲಾತಿಯ ಸೌಲಭ್ಯವನ್ನು ಪಡೆದು ಮಹಿಳೆಯರು ಮುಂದೆ ಬಂದು ಕ್ರಿಯಾಶೀಲರಾಗಿ ಬಾಳುವಂತೆ ಕರೆ ನೀಡಿದರು.
ತಾ.ಪಂ.ಸದಸ್ಯ ಜಿ.ಆರ್. ಸೀತಾರಾಮಯ್ಯನವರು ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ, ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸೌಲಭ್ಯವನ್ನು ಪಡೆದು ಮಹಿಳೆಯರು ಪ್ರಗತಿ ಪಥದಲ್ಲಿ ನಡೆಯುವಂತೆ ಕರೆ ನೀಡಿದರು.
ಸಮಾರಂಭದಲ್ಲಿ 60 ವರ್ಷ ತುಂಬಿದ ಅಂಗನವಾಡಿ ಸಹಾಯಕಿಯರು ಗೌರವ ಸೇವೆಯಿಂದ ನಿವೃತ್ತಿ ಹೊಂದಿದ್ದು, ಸಕರ್ಾರದಿಂದ ನೀಡಿರುವ  ತಲಾ ರೂ.30 ಸಾವಿರ ರೂಗಳ ಹಿಡಿಗಂಟು ಮೊತ್ತದ ಚೆಕ್ಕುಗಳನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ವಿತರಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಿ, ಮಂಜುಳ  ತಾ.ಪಂ.ಸದಸ್ಯ ರಮೇಶ್ಕುಮಾರ್ ಮುಂತಾದವರಿದ್ದರು.
ಸಮಾರಂಭದಲ್ಲಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ವಂದಿಸಿದರು.
ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
ಚಿಕ್ಕನಾಯಕನಹಳ್ಳಿ,ನ.26 : ಪ್ರೌಡಶಾಲಾ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪಧರ್ೆಯ ಸಮಾರಂಭವನ್ನು ಇದೇ 30ರ ಬುಧವಾರ ಹಾಗೂ ನವಂಬರ್ 1ರಂದು ಏರ್ಪಡಿಸಲಾಗಿದೆ.
30ರಂದು ನಡೆಯುವ ಉದ್ಘಾಟನಾ  ಸಮಾರಂಭವನ್ನು ದೇಶೀಯ ವಿದ್ಯಾಪೀಠ ಬಾಲಕರ ಮತ್ತು ಬಾಲಕಿಯರ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾ ವಸ್ತುವಾರಿ ಸಚಿವ ಆರ್.ಮುರುಗೇಶ್ನಿರಾಣಿ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 
ವಿಶ್ವವಿಕಲ ಚೇತನರ(ಅಂಗವಿಕಲರ) ದಿನಾಚರಣೆ
ಚಿಕ್ಕನಾಯಕನಹಳ್ಳಿ,ನ.26 : ವಿಶ್ವವಿಕಲ ಚೇತನರ(ಅಂಗವಿಕಲರ) ದಿನಾಚರಣೆ ಮತ್ತು ತಾಲ್ಲೂಕು ವಿಕಲಚೇತನರ ಸಮಾವೇಶವನ್ನು ಇದೇ ಡಿಸಂಬರ್ 3ರ ಶನಿವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಲಿರುವರು.

Friday, November 25, 2011







ಪಡಿತರ ಅಜರ್ಿ ಸಲ್ಲಿಸುವವರಿಗೆ ಸಲಹೆ: ಆಹಾರ ಶಿರಸ್ತೆದಾರ್
ಚಿಕ್ಕನಾಯಕನಹಳ್ಳಿ,ನ.25 : ಗ್ರಾಮೀಣ ಪ್ರದೇಶದಲ್ಲಿ ಪಡಿತರ ಚೀಟಿ ಬಯಸುವವರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಆನ್ಲೈನ್ ಮೂಲಕ ಅಗತ್ಯ ಮಾಹಿತಿಯನ್ನು ನೀಡಿ ಅಜರ್ಿ ಪಡೆದು ಪಡಿತರ ಚೀಟಿಗೆ ನೊಂದಣಿಯಾಗಬೇಕು ಎಂದು ಆಹಾರ ಶಿರಸ್ತೆದಾರ್ ಮಂಜುನಾಥ್ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಮಾಹಿತಿಯನ್ನು ಪಂಚತಂತ್ರ ಕಂಪ್ಯೂಟರ್ ವ್ಯವಸ್ಥೆ ಮೂಲಕ ಸಂಸ್ಕರಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಪಂಚಾಯಿತಿಗಳಿಗೆ ವಹಿಸಿದ್ದು ಪ್ರತಿ ಪಂಚಾಯಿತಿಗೆ ತನ್ನದೇ ಆದ ಲಾಗಿನ್ ಐಡಿ ನೀಡಲಾಗಿದೆ. ಪಟ್ಟಣದವರು ಖಾಸಗಿ ಇಂಟರ್ನೆಟ್ ಸೆಂಟರ್ಗಳಲ್ಲಿ ಅಜರ್ಿಗಳನ್ನು ಸಲ್ಲಿಸಬಹುದಾಗಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ, ನಿಖರತೆ, ಸಾಮಾಜಿಕ ನ್ಯಾಯಗಳು ಮುಖ್ಯವಾಗಿ ಅರ್ಹ ಕುಟುಂಬಗಳು, ಪಡಿತರ ಚೀಟಿ ಪಡೆಯುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಬಹುದಾಗಿದೆ.
ಗ್ರಾಮೀಣ ಭಾಗದ ಅಜರ್ಿದಾರರು ಪಡಿತರ ಚೀಟಿಯ ಅಜರ್ಿ ದಾಖಲಿಸಲು ತಮಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಯಲ್ಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದಶರ್ಿಯನ್ನು ವಿನಂತಿಸಬೇಕು, ಈ ಬಗ್ಗೆ ಪಂಚತಂತ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಪಡಿತರ ಚೀಟಿ ಅಜರ್ಿಗಳನ್ನು ದಾಖಲಿಸುವವರು ಕುಟುಂಬದ ಸದಸ್ಯರ ಮಾಹಿತಿಗಳನ್ನು ಪಂಚತಂತ್ರಕ್ಕೆ ದಾಖಲಿಸುವುದು, ಗ್ರಾಮೀಣ ಪ್ರದೇಶಗಳ ಕುಟುಂಬಗಳ ಆಥರ್ಿಕ ಸ್ಥಿತಿಯನ್ನು ನಿರ್ಧರಿಸಿ ಅಂತ್ಯೋದಯ ಅನ್ನ ಯೋಜನೆ (ಎಎವೈ), ಬಿಪಿಎಲ್ ಮತ್ತು ಎಪಿಎಲ್ ವಗರ್ೀಕರಣವನ್ನು ಕಂಪ್ಯೂಟರ್ಗೆ ದಾಖಲಿಸುವುದು. ಅನರ್ಹ ಪಡಿತರ ಚೀಟಿ ಗುರುತಿಸುವುದು. ಪಡಿತರ ಚೀಟಿ ಹೊಂದಿದವರ ಕೃಷಿ ಜಮೀನು ಹಿಡುವಳಿಯ ಮಾಹಿತಿ ದಾಖಲಿಸುವುದು ಮತ್ತು ಫಲಾನುಭವಿಗಳ ಕುಟುಂಬದ ಸದಸ್ಯರ ಹೆಸರು ಇತ್ಯಾದಿ ಸೇರಿಸುವುದು/ಕಡಿಮೆ ಮಾಡಬಹುದಾಗಿದೆ.
 ಅಜರ್ಿದಾರರ ಹೆಸರನ್ನು ಕಂಪ್ಯೂಟರ್ನಲ್ಲಿ ನೊಂದಾಯಿಸಿದ ನಂತರ ಅಧಿಕಾರಿಗಳು ಅಜರ್ಿದಾರರ ಮನೆ ಬಾಗಿಲಿಗೆ ಹೋಗಿ ಅಜರ್ಿದಾರರ ಮುಖ್ಯಸ್ಥರ ಸಹಿಯನ್ನು ಅದರ ಮೇಲೆ ಪಡೆದು, ತನಿಖೆ ಮಾಡಿ ತಮ್ಮ ವರದಿಯನ್ನು ಕಂಪ್ಯೂಟರ್ಗೆ ದಾಖಲಿಸುತ್ತಾರೆ ಎಂದು ತಿಳಿಸಿದ್ದಾರೆ.
ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ ದಸೂಡಿ, ಹೊಯ್ಸಳಕಟ್ಟೆ, ಕೆಂಕೆರೆ, ಯಳನಡು, ಕೊರಗೆರೆ, ದೊಡ್ಡ ಎಣ್ಣೆಗೆರೆ, ಚೌಳಕಟ್ಟೆ, ತಿಮ್ಲಾಪುರ, ದೊಡ್ಡಬಿದರೆ, ಬರಕನಹಾಳು, ರಾಮನಹಳ್ಳಿ, ಬರಗೂರು ಮತಿಘಟ್ಟ, ಮಲ್ಲಿಗೆರೆ, ದುಗಡಿಹಳ್ಳಿ, ಜೆ.ಸಿ.ಪುರ ಗ್ರಾಮ ಪಂಚಾಯಿತಿಗಳಲ್ಲಿಗಳನ್ನು ಬಿಟ್ಟು ಉಳಿದ ಪಂಚಾಯ್ತಿಗಳಲ್ಲಿ ಅಜರ್ಿಗಳು ನೊಂದಾವಣಿಯಾಗಿದ್ದು ಈಗಾಗಲೇ ಪಟ್ಟಣದಲ್ಲಿ 100 ಹಾಗೂ ಗ್ರಾ.ಪಂಗಳಲ್ಲಿ 23 ಅಜರ್ಿಗಳು ನೊಂದಾಯಿತವಾಗಿವೆ ಎಂದು ಆಹಾರ ಶಿರಸ್ತೆದಾರ್ ಮಂಜುನಾಥ್ ತಿಳಿಸಿದ್ದಾರೆ.

29ರಂದು ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ನ.25 : 2011-12ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪಧರ್ೆಯನ್ನು ಇದೇ 29ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಸ್ಪಧರ್ೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಭಾಗವಹಿಸಲು ಇಚ್ಚಿಸುವ ಆಸಕ್ತ ಶಿಕ್ಷಕರು ನಿಗಧಿತ ದಿನಾಂಕದಂದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳು ತಿಳಿಸಿದ್ದು ಸ್ಪಧರ್ೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ನಡೆಸಲಿದ್ದು ಗಾಯನ ಸ್ಪಧರ್ೆ, ಆಶುಭಾಷಣ ಸ್ಪಧರ್ೆ, ಪ್ರಬಂಧ ಸ್ಪಧರ್ೆ, ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ(ಟಿಎಲ್ಎಮ್), ಸ್ಥಳದಲ್ಲೇ ಚಿತ್ರ ಬರೆಯುವ ಸ್ಪಧರ್ೆಗಳಿದ್ದು ಒಬ್ಬ ಶಿಕ್ಷಕರು  ಯಾವುದಾದರೂ ಒಂದು ಸ್ಪಧರ್ೆಯಲ್ಲಿ ಮಾತ್ರ ಭಾಗವಹಿಸಲು ಅರ್ಹರಾಗಿದ್ದು ಹೆಚ್ಚಿನ ಮಾಹಿತಿಗಾಗಿ ಆಯಾ ವಲಯ ವ್ಯಾಪ್ತಿಯ ಶಿಕ್ಷಣ ಸಂಯೋಜಕರನ್ನು ಸಂಪಕರ್ಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


Thursday, November 24, 2011



ಅಧಿಕಾರಿಗಳ ವೈಫಲ್ಯದಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ ಕೆ.ಡಿ.ಪಿ.ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ
ಚಿಕ್ಕನಾಯಕನಹಳ್ಳಿ,ನ.24 :  2005-06ನೇ ಸಾಲಿನಿಂದ 2010-11ನೇ ಸಾಲಿನ ವರೆಗೆ ಒಟ್ಟು ನಾಲ್ಕು ವರ್ಷಗಳ  ತಾಲ್ಲೂಕಿನ ಬಸವ ಇಂದಿರಾ ಯೋಜನೆಯ ಮಾಹಿತಿ ನೀಡುವಲ್ಲಿ ಹಾಗೂ ಫಲಾನುಭವಿಗಳ ಆಯ್ಕೆಯ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಡಿಸೆಂಬರ್ 2ರೊಳಗೆ ನೀಡಬೇಕು ಎಂದು ಇ.ಓ.ರವರಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಸೂಚಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲತೆ ಕಂಡಿರುವುದನ್ನು ಪ್ರಶ್ನಿಸಿ ಅಧಿಕಾರಿಗಳ ಮೇಲೆ ಕಿಡಿಕಾರಿದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕಾರ್ಯದಶರ್ಿ ಹಾಗೂ ಪಿಡಿಓಗಳು  ಯೋಜೆನಗಳ ಪೂರ್ಣ ಮಾಹಿತಿಯನ್ನು ಸಿದ್ದಪಡಿಸಿ  ಡಿಸಂಬರ್ 2ರಂದು ನಡೆಯುವ ಸಭೆಗೆ ಅಧಿಕಾರಿಗಳು ಬರುವಾಗ ಪ್ರತಿ ಪಂಚಾಯ್ತಿಯಿಂದ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ತರುವುದು ಈ ಎಲ್ಲಾ ಫಲಾನುಭವಿಗಳು ಅರ್ಹರಾಗಿರಬೇಕು, ಅನರ್ಹರ ಪಟ್ಟಿ ತರುವ ಅಧಿಕಾರಿಗಳ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದ ಅವರು,  ಈ ಬಗ್ಗೆ  ನಮಗೆ ನಿಖರ ಮಾಹಿತಿ ನೀಡಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡದೆ ಕುಳಿತಲ್ಲೇ ಮಾಹಿತಿ ಪಡೆದು ವರದಿ ನೀಡುತ್ತಿರುವುದರಿಂದ ತಾಲ್ಲೂಕಿನ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ, ಫಲಾನುಭವಿಗಳ ಆಯ್ಕೆಯಲ್ಲಿ ವಸತಿ ಇರುವವರಿಗೆ ಮತ್ತೊಮ್ಮೆ ಆಯ್ಕೆ ಮಾಡುತ್ತಿದ್ದಾರೆ ಎಂದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳಿಗೆ ಜನಪ್ರತಿನಿಧಿಗಳನ್ನು  ಆಹ್ವಾನಿಸದೇ ತಮಗೆ ಇಷ್ಟ ಬಂದಂತೆ ಸಭೆಗಳನ್ನು ನಡೆಸುತ್ತಿದ್ದಾರೆ ಅಲ್ಲದೆ ಇದರ ಬಗ್ಗೆ ಗ್ರಾಮದ ಜನರಿಗೂ ತಿಳಿಯುತ್ತಿಲ್ಲ  ಇದರಿಂದಲೇ ತಾಲ್ಲೂಕಿಗೆ ಕಡಿಮೆ ಅನುದಾನ ದೊರಕುತ್ತಿದೆ ಎಂದರು.
ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ನಾವು ಇಲ್ಲಿ ಕಾಫಿ, ಟೀ ಕುಡಿಯಲು ಬರುವುದಿಲ್ಲ ಗ್ರಾಮಗಳ ಅಭಿವೃದ್ದಿ ಬಗ್ಗೆ ಮಾಹಿತಿ ಪಡೆಯಲು ಬಂದರೆ ಇಲ್ಲಸಲ್ಲದನ್ನು ನೀಡುತ್ತೀರ, ಅರ್ಹ ಫಲಾನುಭವಿಗಳನ್ನು  ಆಯ್ಕೆಮಾಡದೆ ಅನರ್ಹರನ್ನು ಆಯ್ಕೆ ಮಾಡಿರುವ  ಬಗ್ಗೆ ದೂರು ತೆಗೆದುಕೊಂಡು ಬಡವರು ನಮ್ಮ ಮನೆಬಾಗಿಲಿಗೆ ಬರುತ್ತಾರೆ ಇದು ಅಧಿಕಾರಿಗಳ  ಕರ್ತವ್ಯದ ವೈಪಲ್ಯ ಎಂದರು.
ಸಭೆಯಲ್ಲಿ ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷರಾದ ಸಿತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ. ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನ ಗಂಗಾಧರ್, ತಾಲ್ಲೂಕು ದಂಡಾಧಿಕಾರಿಗಳಾದ ಉಮೇಶ್ಚಂದ್ರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಇ.ಓ.ಎನ್.ಎಂ ದಯಾನಂದ, ಟಿ.ಎ.ಪಿ.ಸಿ.ಎಂ.ಎಸ್ನ ಅಧ್ಯಕ್ಷ ಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತಿರಿದ್ದರು.

Wednesday, November 23, 2011



ಜಾತಿ ಗಣತಿಯಲ್ಲಿ  ನೈಜ, ಪೂರ್ಣ ಹಾಗೂ ನಿಖರ ಮಾಹಿತಿಗೆ ಒತ್ತು ನೀಡಿ: ಸಿ.ಟಿ.ಎಂ.

ಚಿಕ್ಕನಾಯಕನಹಳ್ಳಿ,ನ.23 : ಸಕರ್ಾರಿ ಸೌಲಭ್ಯ ವಂಚಿತ ಫಲಾನುಭವಿಗಳಿಗೆ, ಸೌಲಭ್ಯವನ್ನು ದೊರಕಿಸಿಕೊಡಲು ಕೇಂದ್ರ ಸಕರ್ಾರ ಚಿಂತಿಸಿ ಜಾತಿಗಣತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗಣತಿ ಕಾರ್ಯ ನೆರವೇರಿಸುವವರು ಜನಸಾಮಾನ್ಯರಲ್ಲಿ ನೇರವಾಗಿ ಸಂಪರ್ಕ ಬೆಳೆಸಿಕೊಂಡು ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ ಎಂದು ತಾಲೂಕು ನೋಡಲ್ ಅಧಿಕಾರಿ  ಸಿ.ಟಿ.ಮುದ್ದುಕುಮಾರ್ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಸಾಮಾಜಿಕ ಆಥರ್ಿಕ ಮತ್ತು ಜಾತಿಗಣತಿ 2011 ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ ಬಂದ 10 ವರ್ಷಗಳ ನಂತರ ಜನಗಣತಿ ಕಾರ್ಯಕ್ರಮ ಆರಂಭವಾಗಿ ದೇಶದ ಜನತೆಯ ಗಣತಿ ದೊರಕಿತು,  ಅದೇ ರೀತಿಯ ದೇಶದಲ್ಲೇ ಪ್ರಥಮ ಬಾರಿಗೆ ಜಾತಿಗಣತಿ ಕಾರ್ಯ ಆರಂಭವಾಗಿದ್ದು ಅತಿ ಜಾಗರೂಕತೆಯಿಂದ  ಗಣತಿ ಕಾರ್ಯವನ್ನು ಆರಂಭಿಸಿ ಉತ್ತಮವಾಗಿ ಗಣತಿ ಮಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.
 ಈ ಮೊದಲು  ಜನಗಣತಿ ಕಾರ್ಯವನ್ನು ಶಿಕ್ಷಕರಿಗೆ ವಹಿಸಲಾಗಿತ್ತು, ಈಗ ಜಾತಿಗಣತಿ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತರಿಗೆ ವಹಿಸಿದ್ದು ಈಗ ನಡೆಯುತ್ತಿರುವ 3 ದಿನಗಳ ತರಬೇತಿಗೆ ಆಗಮಿಸಿ ಅಲ್ಲಿ ತಿಳಿಸುವ ಮಾಹಿತಿಯೊಂದಿಗೆ ಜನಸಾಮಾನ್ಯರಲ್ಲಿ ವಿನಯದಿಂದ ಚಚರ್ೆಗೆ ಅವಕಾಶ ನೀಡದೆ ಗಣತಿಕಾರ್ಯ ಯಶಸ್ವಿಗೊಳಿಸಿ ಎಂದು ಹೇಳಿದರು.
ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮಾತನಾಡಿ ಗಣತಿಕಾರ್ಯದ ತರಬೇತಿ ಪಡೆದವರಿಗೆ,  ಅವರು ಕೆಲಸ ನಿರ್ವಹಿಸುವ ಭಾಗದಲ್ಲೇ  ಗಣತಿಕಾರ್ಯ ನಡೆಸಲು ಸೂಚಿಸಲಾಗುವುದು, ಇದಕ್ಕಾಗಿ ಸೂಪರ್ವೈಸರ್ಗಳನ್ನು ನೇಮಿಸಲಾಗುವುದು ಕಾರ್ಯ ನಡೆಸುವಾಗ ಸಂಶಯಗಳು ಎದುರಾದಲ್ಲಿ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು, ಸೆಕ್ರೆಟರಿಗಳನ್ನು ಸಂಪಕರ್ಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಪೂರ್ಣಮಾಹಿತಿ ಪಡೆಯದೇ ಗಣತಿಕಾರ್ಯ ಮುಂದುವರೆಸಬೇಡಿ ಎಂದರು. ಗಣತಿ ಕಾರ್ಯವನ್ನು ನಿಗದಿತ ದಿನಾಂಕದೊಳಗೆ ಪೂರ್ಣಗೊಳಿಸಿ ಎಂದರು.
ತುಮಕೂರು ತಾ.ಪಂ. ಇ.ಓ ವೆಂಕಟೇಶಯ್ಯ ಮಾತನಾಡಿ ಗಣತಿಕಾರ್ಯ ಆರಂಭಿಸಿದಾಗ ಸಾರ್ವಜನಿಕರ ವಿರುದ್ದವಾಗಿ ನಡೆದುಕೊಳ್ಳದೆ ಅವರು ಕೊಡುವ ಮಾಹಿತಿ ಪಡೆದು ಗಣತಿಕಾರ್ಯವನ್ನು ಯಶಸ್ವಿಗೊಳಿಸಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಗಣತಿಕಾರ್ಯದ ಮೇಲ್ವಿಚಾರಕ ಗುರುಸಿದ್ದಪ್ಪ, ವೇಣುಗೋಪಾಲ್, ಚಂದ್ರಶೇಖರ್ ಜಯಣ್ಣ ಮುಂತಾದವರಿದ್ದರು.

Tuesday, November 22, 2011





ತಾಲ್ಲೂಕಿನ ಅಭಿವೃದ್ದಿಗಾಗಿ ನಮ್ಮಗಳ ಸಹಕಾರ ಇದ್ದೇ ಇರುತ್ತದೆ : ಸಿ.ಬಿ.ಎಸ್ 
ಚಿಕ್ಕನಾಯಕನಹಳ್ಳಿ,ನ.22 : ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡುತ್ತೇವೆ ಹೊರತು,  ತಾಲ್ಲೂಕಿನ ಕೀತರ್ಿ ಹೆಚ್ಚುವಂತಹ ಯಾವುದೇ ಕೆಲಸಕ್ಕೆ ಪ್ರೋತ್ಸಾಹ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ಇದ್ದೇ ಇರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಲಕ್ಷ ದೀಪೋಪತ್ಸವದ ಅಂಗವಾಗಿ ಶ್ರೀ ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ  ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,  ಇಂತಹ ಟೂನರ್ಿಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ, ಆಗಲೇ ಟೂನರ್ಿಗಳು ಯಶಸ್ವಿಯಾಗುವುದು. ಕ್ರೀಡೆಯಿಂದ ದೈಹಿಕವಾಗಿ ಶಕ್ತಿ ತುಂಬುತ್ತದಲ್ಲದೆ ಕ್ರೀಡಾಸ್ಫಧರ್ಿಯ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಶ್ರೀ ಮೃತ್ಯುಂಜಯದೇಶಿಕೇಂದ್ರ ಶ್ರೀಗಳು ಮಾತನಾಡಿ ಕ್ರೀಡೆಯು ಮುಂದುವರಿದಂತೆ ಕ್ರೀಡಾಭಿಮಾನಿಗಳು ಹೆಚ್ಚಬೇಕು ಆಗಲೇ ಕ್ರೀಡೆಗೆ ಪ್ರೋತ್ಸಾಹ ಹೆಚ್ಚಿದಂತೆ, ಆಂಗ್ಲರ ಕ್ರಿಕೆಟ್ಟಿನಿಂದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಇವುಗಳ ಬೆಳೆಸಬೇಕಾದರೆ ಪ್ರೋತ್ಸಾಹಕರೊಂದಿಗೆ ಇದರ ಅಭಿಮಾನಿಗಳು ಹೆಚ್ಚಬೇಕು ಎಂದರು.
ಬೆಂಗಳೂರು ವಲಯದ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಮಾತನಾಡಿ ಕ್ರೀಡೆಗೆ ಜಾತಿ, ಮತ, ಅಂತಸ್ಥು ಇಲ್ಲದೆ ಗುರುತಿಸುವಂತಹದು ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಭವಿಷ್ಯಕ್ಕೂ ದಾರಿ ಮಾಡಿಕೊಳ್ಳಿ ಎಂದ ಅವರು ಕಬಡ್ಡಿ, ಖೋ-ಖೋ ಇಂತಹ ಗ್ರಾಮೀಣ ಆಟಗಳು ಹೆಚ್ಚಿಗೆ ಖಚರ್ಿಲ್ಲದೆ ನಡೆಯುವಂತಹ ಆಟಗಳು ಇವುಗಳನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.
  ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಮಾತನಾಡಿ ರಾಜ್ಯಮಟ್ಟದ ಕ್ರೀಡೆಯು ನಡೆಯುತ್ತಿದ್ದು  ಮುಂದಿನ ಬಾರಿ  ರಾಷ್ಟ್ರಮಟ್ಟದ ಕ್ರೀಡೆ ನಡೆಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಲಾ.ಬ.ಶಾ.ಕ್ರೀ.ಸಂಘದ ಗೌರವಾಧ್ಯಕ್ಷ ಆದರ್ಶಕುಮಾರ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಸುರೇಶ್ಹಳೇಮನೆ, ಸಿ.ಡಿ.ಪಿ.ಓ ಅನೀಸ್ ಖೈಸರ್ ಉಪಸ್ಥಿತರಿದ್ದರು.


ಬಡತನ ರೇಖೆಗಳಿಗಿಂತ ಕೆಳೆಗಿರುವ ಹೆಣ್ಣುಮಕ್ಕಳಿಗೆ ಉಚಿತ ಟೈಲರಿಂಗ್ ತರಬೇತಿ 
ಚಿಕ್ಕನಾಯಕನಹಳ್ಳಿ,ನ.22 : ಬಡತನ ರೇಖೆಗಳಿಗಿಂತ ಕೆಳೆಗಿರುವ ಹೆಣ್ಣುಮಕ್ಕಳಿಗೆ ತರಬೇತಿ ಶಿಕ್ಷಣ ನೀಡಿ ಅವರಿಗೆ ದೊಡ್ಡ-ದೊಡ್ಡ ಗಾಮರ್ೆಂಟ್ಸ್ಗಳಲ್ಲಿ ಕೆಲಸ ನೀಡವ ಉದ್ದೇಶವನ್ನು ಅಹೆಡ್ ಸಂಸ್ಥೆ ಹೊಂದಿದೆ ಎಂದು ಪ್ರೊಸಲ್ಯೂಷನ್ಸ್ ನಿದರ್ೇಶಕ ಜಿ.ಎಚ್.ಸೋಮಶೇಖರ್ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಅಮ್ರಿತ್ ಸಿದ್ದ ಉಡುಪುಗಳ ಹೊಲಿಗೆ ತರಬೇತಿ ಶಿಕ್ಷಣ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೆಣ್ಣುಮಕ್ಕಳು ತಮ್ಮ ಜೀವನದ ಆಥರ್ಿಕತೆಯನ್ನು ಸುಧಾರಿಸಲು ಉದ್ಯೋಗದ ಅವಶ್ಯಕತೆ ಇದೆ, ಅವರಿಗಾಗಿ ಸಂಸ್ಥೆಯು 30 ದಿನಗಳ ಉಚಿತ ತರಬೇತಿ ಹಾಗೂ ಊಟದ ಸೌಲಭ್ಯವನ್ನು ಕೂಡ ಒದಗಿಸುತ್ತದೆ ಎಂದ ಅವರು ರಾಜ್ಯದ 25 ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಸಂಸ್ಥೆಯು ಪ್ರತಿ ಕೇಂದ್ರದಲ್ಲೂ ಒಂದು ಸಾವಿರ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸುವ ಗುರಿ ಹೊಂದಿದೆ. ಈ ಸೌಲಭ್ಯವು ಹೆಂಗಸರಿಗೆ ಮಾತ್ರವಲ್ಲದೆ ಗಂಡಸರಿಗೂ ತರಬೇತಿ ನೀಡಲಿದೆ ಆದರೆ ಹೆಂಗಸರಿಗೆ ಹೆಚ್ಚಿನ ಆಧ್ಯತೆ ಇದೆ, ಅವರಿಗೆ ತರಬೇತಿ ನೀಡಿ ಬೆಂಗಳೂರು, ತುಮಕೂರು ಇನ್ನಿತರ ಸ್ಥಳಗಳಲ್ಲಿ ಉದ್ಯೋಗ ಕೊಡಿಸುವ ವಿಶ್ವಾಸ ವ್ಯಕ್ತಪಡಿಸದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತರಬೇತಿ ಪಡೆದವರು ಉದ್ಯೋಗ ಪಡೆದ ಮೇಲೆ ದುಡಿಯುತ್ತೇನೆಂಬ ಅಹಃನಿಂದ  ಬೀಗಬಾರದು, ಪ್ರತಿಯೊಬ್ಬರು ಇನ್ನಬ್ಬರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು ಎಂದ ಅವರು ಈ ತರಬೇತಿಯಿಂದಾಗಿ ತಾಲ್ಲೂಕಿನ ಹಲವರಿಗೆ ಉದ್ಯೋಗ ದೊರಕುವ ಭರವಸೆ ಇದೆ ಎಂದರು.
ಸಮಾರಂಭದಲ್ಲಿ ಪ್ರಸೊಲ್ಯೂಷನ್ ನಿದರ್ೇಶಕ ಚಂದ್ರಶೇಖರ್, ಪುರಸಭಾ ಸದಸ್ಯರಾದ ರವಿ(ಮೈನ್ಸ್), ರಾಜಣ್ಣ, ಎಂ.ಎನ್.ಸುರೇಶ್, ಸಿ.ಪಿ.ಚಂದ್ರಶೇಖರಶೆಟ್ಟರು, ಸಿ.ಡಿ.ಪಿ.ಓ ಅನೀಸ್ಖೈಸರ್  ಮುಂತಾದವರು ಉಪಸ್ಥಿತರಿದ್ದರು.




ದಾಸಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ 
ಚಿಕ್ಕನಾಯಕನಹಳ್ಳಿ,ನ.22 : ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 29ರ ಮಂಗಳವಾರ ಬೆಳಗ್ಗೆ 9ಕ್ಕೆ ತಾಲ್ಲೂಕಿನ ಹಂದನಕೆರೆ ಹೋಬಳಿಯ ಪಾಪನಕೊಣ ಗ್ರಾಮದಲ್ಲಿ  ಏರ್ಪಡಿಸಲಾಗಿದೆ ಎಂದು ಕನಕ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಪಿ.ಆರ್.ಗಂಗಾಧರಯ್ಯ ತಿಳಿಸಿದ್ದಾರೆ.
ಶ್ರೀ ಕನಕ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಶ್ರೀ ಈಶ್ವರಾನಂದಪುರಿಸ್ವಾಮಿಗಳು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಗ್ರಾ.ಸಂಘದ ಗೌರವಾಧ್ಯಕ್ಷ ಪಿ.ಆರ್.ಗಂಗಾಧರ್, ಜಿಲ್ಲಾ ಜಿ.ಪಂ.ಯೋಜನಾ ನಿದರ್ೇಶಕ ಆಂಜನಪ್ಪ, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರಾದ ಎನ್.ಜಿ.ಮಂಜುಳ, ಕುರುಬ ಜನಾಂಗದ ರಾಜ್ಯ ಸಮಿತಿ ಉಪಾಧ್ಯಕ್ಷೆ ಮಂಜುಳ ನಾಗರಾಜು, ಮಹಾನಗರಪಾಲಿಕೆ ನಾಗರಾಜು, ಎಂ.ಶಿವರಾಜು, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತುರುವೇಕೆರೆ ಕು.ಸಂಘದ ಹೆಚ್.ಕೆ.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಜಿ.ಪಂ.ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ, ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುರುಬರ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಕೊಟಿಗೆಮನೆ ನ್ಯೂಸ್ನೆಟ್ನ ಸಿ.ಗುರುಮೂತರ್ಿ ಜೆ.ಡಿ.ಎಸ್.ಮುಖಂಡ ಎನ್.ಜಿ.ಶಿವಣ್ಣ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಹಶೀಲ್ದಾರ್ಗಳಾದ  ಎನ್.ಆರ್.ಉಮೇಶ್ಚಂದ್ರ, ವಿಜಯ್ಕುಮಾರ್, ನಿವೃತ್ತ ಸಹಕಾರ ಸಂಘದ ಎಸ್.ಡಿ.ಜಯಕುಮಾರ್, ಸಿ.ಪಿ.ಐ ಕೆ.ಪ್ರಭಾಕರ್ ಮುಂತಾದವರು ಉಪಸ್ಥಿತರಿರುವರು.

ುರಸಭಾ ಮುಖ್ಯಾಧಿಕಾರಿಯಾಗಿ ಟಿ.ಆರ್.ವೆಂಕಟೇಶಶೆಟ್ಟಿ
ಚಿಕ್ಕನಾಯಕನಹಳ್ಳಿ,ನ.22 : ಪಟ್ಟಣದ ಪುರಸಭಾ ಮುಖ್ಯಾಧಿಕಾರಿಯಾಗಿ ಟಿ.ಆರ್.ವೆಂಕಟೇಶಶೆಟ್ಟಿ ಅಧಿಕಾರ ವಹಿಸಿದ್ದಾರೆ.
ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪರವರು ವಗರ್ಾವಣೆಗೊಂಡಿದ್ದು ಅವರ ಸ್ಥಾನಕ್ಕೆ ಟಿ.ಆರ್.ವೆಂಕಟೇಶಶೆಟ್ಟಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ, ಇವರು ಈ ಹಿಂದೆ ತುರುವೇಕೆರೆ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ವೇದಿಕೆ ಧೈರ್ಯ ತುಂಬಿದರೆ ಉತ್ತಮ : ಸಿ.ಬಿ.ಎಲ್ 
ಚಿಕ್ಕನಾಯಕನಹಳ್ಳಿ,ನ.22 :  ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವೇದಿಕೆಯ ಧೈರ್ಯ ತುಂಬಿದರೆ ಮುಂದೆ ಉನ್ನತ ಸ್ಥಾನಗಳನ್ನು ಏರಿದಾಗ ಅವರಿಗೆ ಈ ವೇದಿಕೆ ಉತ್ತಮ ದಾರಿಯಾಗಿ ರೂಪುಗೊಳ್ಳುತ್ತದೆ ಎಂದು ಪತ್ರಕರ್ತ ಸಿ.ಬಿ.ಲೋಕೇಶ್ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳು  ದೇಶದ ಆಸ್ತಿ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸಬೇಕು. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದ ಅವರು ತಾಲ್ಲೂಕು ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟಕ್ಕೆ ಸ್ಪಧರ್ೆಸಿ ತಾಲ್ಲೂಕಿಗೆ ಕೀತರ್ಿ ತರಲೇಂದು ಆಶಿಸಿದರು.
ಪುರಸಭಾ ಅಧ್ಯಕ್ಷರಾದ ದೊರೆಮುದ್ದಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ  ಪ್ರತಿಭೆಯು ಮಕ್ಕಳ ವಿಕಾಸಕ್ಕೆ ಪೂರಕವಾದ ವೇದಿಕೆಯಾಗಿದೆ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಉಜ್ವಲವಾಗಿ ಬೆಳೆಯಲಿ ಎಂದು ಹೇಳಿದರು. 
  ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್ ಮಾತನಾಡಿ  ಸಕರ್ಾರ ಶಿಕ್ಷಣಕ್ಕಾಗಿ ಅನೇಕಾನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಕಾರ್ಯಕ್ರಮಗಳು ಪ್ರಯೋಜನವಾಗುತ್ತಿಲ್ಲ, ಮಕ್ಕಳು ಇಂತಹ ಪ್ರತಿಭಾ ಕಾರಂಜಿಯ ಮೂಲಕ ಪಠ್ಯವನ್ನು ಆಧರಿಸಿಕೊಂಡು ಕಲಾತ್ಮಕತೆಯನ್ನು ಬೆಳೆಸಿಕೊಳ್ಳಲು ಹಾಗೂ ಅವರ ಪ್ರತಿಭೆಯ ಹೊರಹೊಮ್ಮಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
 ವೇದಿಕೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ,  ಸಿ.ಆರ್.ಪಿ.ದುರ್ಗಯ್ಯ ಶಾಲಾ ಮುಖ್ಯೋಪಾಧ್ಯಾಯಿನಿ  ಚೇತನ, ಮುಂತಾದವರು ಉಪಸ್ಥಿತರದ್ದರು.
ಸಮಾರಂಭದಲ್ಲಿ  ಮಲ್ಲಿಕಾಜರ್ುನ್ ಪ್ರಾಥರ್ಿಸಿ, ದುರ್ಗಯ್ಯ ಸ್ವಾಗತಿಸಿದರೆ ವಿಜಯ್ಕುಮಾರ್ ನಿರೂಪಿಸಿ ಪಾಂಡುರಂಗಯ್ಯ ವಂದಿಸಿದರು.  


Friday, November 18, 2011




ಕನಕ ಏಕಶಿಲಾ ವಿಗ್ರಹ, ಶ್ರೀ ಲಕ್ಷ್ಮೀದೇವಾಲಯ ನೂತನ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಶಂಕಸ್ಥಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ನ.18 : ಶ್ರೀ ಕನಕ ಏಕಶಿಲಾ ವಿಗ್ರಹ, ಶ್ರೀ ಲಕ್ಷ್ಮೀದೇವಾಲಯ ನೂತನ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಶಂಕಸ್ಥಾಪನಾ ಮಹೋತ್ಸವ ಸಮಾರಂಭವನ್ನು ಇದೇ 21ರ ಸೋಮವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ ಎಂದು ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿಸ್ವಾಮೀ ಹೇಳಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲೇ ಅತ್ಯಂತ ಎತ್ತರವಾದ ಹಾಗೂ ಇದೇ ಮೊದಲ ಬಾರಿಗೆ ಕನಕದಾಸರ ಏಕಶಿಲಾ ಮೂತರ್ಿಯ ಕೆತ್ತನೆ ನಡೆಯುತ್ತಿದ್ದು 30ಜನ ಶಿಲ್ಪಿಗಳು ಕೆತ್ತನೆಯಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಕೆತ್ತನೆಯ ಶೇ.75ರಷ್ಟು ಕೆಲಸ ಮುಗಿದಿದೆ. ಏಕಶಿಲಾ ವಿಗ್ರಹವು 35ಅಡಿ ಎತ್ತರ ಇದ್ದು, 8ಅಡಿ ದಪ್ಪ, 14 ಅಡಿ ಅಗಲ ಇದೆ, 15 ಅಡಿ ಕಲ್ಲಿನ ಮೇಲೆ 35 ಅಡಿ ಎತ್ತರದಶಿಲೆ, 15 ಅಡಿ ಕೆಳಗೆ ವಿಶೇಷ ಪೀಠ ಜ್ಞಾನ ಇರುವುದು. ಈ ಏಕಶಿಲಾ ವಿಗ್ರಹಕ್ಕೆ 8ರಿಂದ 10ಕೋಟಿಯಷ್ಟು ವೆಚ್ಚ, ಲಕ್ಷ್ಮೀ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಶಾಲಾ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ.
ಸಮಾರಂಭದಲ್ಲಿ ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿಸ್ವಾಮಿ, ಶಾಖಾಮಠದ ಶಿವಾನಂದಪುರಿಸ್ವಾಮಿ, ತಿಂಥಣಿ ಶಾಖಾಮಠದ ಸಿದ್ದರಾಮಾನಂದಪುರಿಸ್ವಾಮಿ,  ರಾಮಾನುಜ ಮಠದ ರಾಮಾಜುಜಜೀಯರ್ ಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಾಕ್ಷ  ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ,  ಹೆಚ್.ಎಂ.ರೇವಣ್ಣ, ಸಚಿವ ವತರ್ೂರು ಪ್ರಕಾಶ್, ಎಂ.ಎಲ್.ಸಿ ಜಿ.ಎಚ್.ತಿಪ್ಪಾರೆಡ್ಡಿ, ಸಂಸದರಾದ ಜನಾರ್ದನಸ್ವಾಮಿ, ಎಚ್.ವಿಶ್ವನಾಥ್, ಶಾಸಕ ಸಿ.ಬಿ.ಸುರೇಶ್ಬಾಬು, ವಿಧಾನ ಪರಿಷತ್ ಸದಸ್ಯರಾದ ಗಾಯಿತ್ರಿ ಶಾಂತೇಗೌಡ,  ಡಾ.ಹುಲಿನಾಯ್ಕರ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ರಘುನಾಥರಾವ್ ಮಲ್ಕಾಪುರ, ಕಾರ್ಯದಶರ್ಿ ರಾಮಚಂದ್ರಪ್ಪ  ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕನಕ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಉದಯಶಂಕರ್ ಒಡೆಯರ್, ಕೃಷಿ ಬ್ಯಾಂಕ್ನ ಕೆ.ಜಗದೀಶ ಒಡೆಯರ್ ಉಪಸ್ಥಿತರಿದ್ದರು.

Thursday, November 17, 2011




ಗ್ರಾ.ಪಂ ಇಲಾಖಾ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳು 
ಚಿಕ್ಕನಾಯಕನಹಳ್ಳಿ,ನ.17 : ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷರನ್ನಾಗಿ ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯದಶರ್ಿ ಅಡವೀಶ್ಕುಮಾರ್ರವರನ್ನು ಆಯ್ಕೆಮಾಡಲಾಗಿದೆ.
ಸಂಘದ ನೂತನ ಕಾರ್ಯದಶರ್ಿಯನ್ನಾಗಿ ಹೊಯ್ಸಳಕಟ್ಟೆ ಗ್ರಾ.ಪಂ.ಕಾರ್ಯದಶರ್ಿ ನೀಲಕಂಠಯ್ಯರವರನ್ನು, ಹಾಗೂ ಖಜಾಂಚಿಯಾಗಿ ಗೋಡೆಕೆರೆ ಕಾರ್ಯದಶರ್ಿ ಸೀತಾರಾಮುರವರನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗ್ರಾ.ಪಂ ಪಿ.ಡಿ.ಓ ಮತ್ತು ಕಾರ್ಯದಶರ್ಿಗಳು ಹಾಜರಿದ್ದರು.

ರೈತರ ಜಮೀನು ರಕ್ಷಿಸಲು ರಸ್ತೆಗಿಳಿಯಲಿರುವ ಮಠಾಧೀಶರು
ಚಿಕ್ಕನಾಯಕನಹಳ್ಳಿ,ನ.17 : ತಾಲ್ಲೂಕಿನ ಸೋಮಲಾಪುರದಿಂದ ದುಗಡಿಹಳ್ಳಿಯವರೆಗೆ ರೈತರ ಜಮೀನುಗಳಲ್ಲಿ ಹಾದುಹೋಗುವಂತೆ ಸವರ್ೆ ಕಾರ್ಯ ಮಾಡಿರುವುದನ್ನು ಖಂಡಿಸಿ ರಸ್ತೆ ತಡೆ ಚಳುವಳಿಯನ್ನು ಇದೇ 21ರ ಸೋಮವಾರ ಬೆಳಗ್ಗೆ 9 ಗಂಟೆಗೆ ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆಯಲಿದೆ.
ರಾಜ್ಯ ರೈತ ಸಂಘ , ಹಸಿರು ಸೇನೆ, ರೈತ ಹೋರಾಟ ಸಮಿತಿ ವತಿಯಿಂದ ಚಳುವಳಿ ಹಮ್ಮಿಕೊಂಡಿದ್ದು ಕಾಗಿನೆಲೆ ಗುರುಪೀಠಶಾಖಾ ಮಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ, ಬಾಚೀಹಳ್ಳಿ ಇಂಜನಿಯರ್ ವೇದಾನಂದಮೂತರ್ಿ ಉಪಸ್ಥಿತರಿರುವರು.

Wednesday, November 16, 2011

Tuesday, November 15, 2011



ಪ್ರತಿಭೆಗಳನ್ನು ಗುರುತಿಸಿದರೆ ದೇಶದ ಪ್ರತಿಭಾವಂತ ಮಕ್ಕಳಾಗುತ್ತಾರೆ 
ಚಿಕ್ಕನಾಯಕನಹಳ್ಳಿ,ನ.15 : ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಆ ಪ್ರತಿಭೆಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸಿಬೇಕೆಂದು ಎಂದು ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ಕೆ.ಎಂ.ಪಿ.ಜಿ.ಎಸ್ ಶಾಲೆಯಲ್ಲಿ ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಹಾಗೂ ಕನಕದಾಸ ಜಯಂತಿ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭೆಗಳನ್ನು ಗುರುತಿಸಿದರೆ ಮುಂದೆ ಆ ಮಕ್ಕಳು ಪ್ರತಿಭಾವಂತ ಮಕ್ಕಳಾಗಿ ದೇಶದ ಉನ್ನತಿಗೆ ಮುಂದಾಗುವರು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಮ್ಮರವರು ಮಾತನಾಡಿ ಮಕ್ಕಳು ನೆಹರೂರವರ ಗುಣಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ವಿಜೇತರಾದ ಮಕ್ಕಳಿಗೆ ಪುರಸಭಾ ಸದಸ್ಯರಾದ ಸಿ.ಎಲ್.ಕೃಷ್ಣಮೂತರ್ಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ನಾಗರತ್ನ ಸ್ವಾಗತಿಸಿದರೆ ತುಳಸಿ ನಿರೂಪಿಸಿ ಪುಟ್ಟಮ್ಮ ವಂದಿಸಿದರು.

Monday, November 14, 2011




.ನಾನು ಎಂಬ ಅಹಂಕಾರ ಬಿಟ್ಟಾಗಲೇ ಜೀವನ ಸಾಮರಸ್ಯದಿಂದ ಕೂಡಿರುವುದು  ಸಿ.ಬಿ.ಎಸ್ 
ಚಿಕ್ಕನಾಯಕನಹಳ್ಳಿ,ನ.14: ಕನಕದಾಸರ ನುಡಿಮುತ್ತಿನಂತೆ ನಾನು ಎಂಬ ಅಹಂಕಾರ ಬಿಟ್ಟು ನಾವು ಎಂಬ ಭಾವನೆ ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಜೀವಿಸುವವರು ಸಾಮರಸ್ಯ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಕನಕ ಯುವಕ ಸಂಘದ ವತಿಯಿಂದ ನಡೆದ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು  ಮಹಾನ್ ವ್ಯಕ್ತಿಗಳ ಜಯಂತ್ಯೋತ್ಸವನ್ನು ನಾವುಗಳು  ಆಚರಿಸದರೆ ಸಾಲದು ಅವರ ಆದರ್ಶ, ಮಾರ್ಗದರ್ಶನ ಅರಿತು ಎಲ್ಲಾ ಸಮಾಜದವರು ಒಂದಾಗಿ ಬಾಳಬೇಕು ಆಗಲೇ ಜೀವನವು ಉತ್ತಮವಾಗಿರುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಡಾ.ಡಿ.ಎನ್.ಯೋಗಿಶ್ ಕನಕದಾಸರು ಕವಿ, ಕಲಿಯೂ, ಸಂತರೂ, ಕೀರ್ತನಾಕಾರರೂ ಹಾಗೂ ಯೋಧ ಪುರುಷರಾಗಿದ್ದರು ಅವರು ಯಾವ ಮತಕ್ಕೂ ಅಂಟಿಕೊಳ್ಳದ ಮಧ್ಯಕಾಲದ ಕನ್ನಡ ಸಾಹಿತ್ಯ ಲೋಕದ ಮೇರುಕವಿಯಾಗಿದ್ದರು. ಶೂದ್ರ ಪಂಗಡದಲ್ಲಿ ಜನಿಸಿದ್ದರೂ ಸಾಮಾಜಿಕ ಪ್ರತಿರೋಧ ಮೆಟ್ಟಿ ನಿಂತರು, 12ನೇ ಶತಮಾನದ ವಚನಕಾರರು ವಚನ ಸಾಹಿತ್ಯವನ್ನು ಆಯ್ಕೆಮಾಡಿಕೊಂಡರೆ ದಾಸರು  ಭಕ್ತಿ, ಸಂಗೀತ, ಸಾಹಿತ್ಯವನ್ನು ಕೀರ್ತನೆಗಳ ಮೂಲಕ ಜಗತ್ತಿಗೆ ಸಾರಿ ಭಕ್ತಕನಕದಾಸರಾದರು.  ಗುರು ಧೀಕ್ಷೆ ದೊರೆಯದ ಕನಕರು ಸರಳವಾದ ಭಕ್ತಿಶರಣಾಗತಿ ಮಾರ್ಗ ಅನುಸರಿಸಿದ ಅವರ ಕಿರ್ತನೆಗಳಲ್ಲಿ, ಶರಣಾಗತಿ ಧರ್ಮ ಅಡಗಿದ್ದು ಕೀರ್ತನೆಗಳು ಸರಳ ಜನಪದ ಶೈಲಿಯಲ್ಲಿವೆ ಎಂದರು.
ಸನ್ಮಾನ ಸ್ವೀಕರಿಸಿ ಸಾಹಿತಿ ಅಬ್ದುಲ್  ಹಮೀದ್ ಮಾತನಾಡಿ ದಾಸರ ಬಗ್ಗೆ ದಂತ ಕಥೆಗಳಿವೆ, ಇವರ ಬಗ್ಗೆ ಸರಿಯಾದ ಮಾಹಿತಿ ನೀಡುವವರಿಲ್ಲ, ದಾಸ ಸಾಹಿತ್ಯದಲ್ಲಿ ಮಾನವ ಕುಲ ಒಂದೇ ಎಂದು ಸಾರಿದವರು ಕನಕರು. ಅವರ ಕೀರ್ತನೆಗಳನ್ನು ಇತರ ಭಾಷೆಗಳಿಗೆ ಅನುವಾದಿಸಲು ಸಾಹಿತ್ಯಾ ಪ್ರೋತ್ಸಾಹಕರು ಸಹಕರಿಸಬೇಕು ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ 16ನೇ ಶತಮಾನದ ಮಧ್ಯಭಾಗದಲ್ಲೇ ಸಮಾಜದ ಬದಲಾವಣೆಗೆ ಪ್ರಯತ್ನಿಸಿದವರು ಕನಕದಾಸರು, ಇವರ ಜಯಂತ್ಯೋತ್ಸವವನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿಸಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮುಂತಾದವರು ಮಾತನಾಡಿದರು.
ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದೊಂದಿಗೆ ವೀರಗಾಸೆ, ಡೊಳ್ಳುಕುಣಿತ, ಪಾಳೆಗಾರರ, ಕನಕದಾಸರ, ಸಂಗೊಳ್ಳಿರಾಯಣ್ಣರ ಛದ್ಮವೇಷಗಳ ಹಾಗೂ   ಜಾನಪದ ಕಲಾ ತಂಡಗಳೊಂದಿಗೆ ತಾಲ್ಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ವಿವಿಧ ಸಂಘಗಳ ಸದಸ್ಯರು, ಸಾರ್ವಜನಿಕರು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರುಗಳಾದ ಲೋಹಿತಾಬಾಯಿ, ಜಾನಮ್ಮರಾಮಚಂದ್ರಯ್ಯ, ಪಂಚಾಕ್ಷರಯ್ಯ, ಎನ್.ಜಿ.ಮಂಜುಳ,  ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಮುಂತಾದವರಿದ್ದರು.
ಸಮಾರಂಭದಲ್ಲಿ ಬರಸಿಡ್ಲಹಳ್ಳಿ ಪ್ರೌಡಶಾಲಾ ಮಕ್ಕಳು ರೈತಗೀತೆ ಹಾಡಿದರು. ಸುಮುಖ ಮಹಿಳಾ ತಂಡ ಪ್ರಾಥರ್ಿಸಿ,  ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರೆ, ಬಸವರಾಜು ನಿರೂಪಿಸಿ, ಸುರೇಶ್ ವಂದಿಸಿದರು.